Rahul Dravid: ನಾನು ನಿರುದ್ಯೋಗಿ, ಎಲ್ಲಾದರೂ ಕೆಲಸ ಇದ್ದರೆ ಹೇಳಿ ಎಂದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​ - Vistara News

ಕ್ರೀಡೆ

Rahul Dravid: ನಾನು ನಿರುದ್ಯೋಗಿ, ಎಲ್ಲಾದರೂ ಕೆಲಸ ಇದ್ದರೆ ಹೇಳಿ ಎಂದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

Rahul Dravid: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದ ರಾಹುಲ್ ದ್ರಾವಿಡ್ ಅವರಿಗೆ ಸಂದರ್ಶಕರೊಬ್ಬರು ಮುಂದಿನ ನಡೆಯ ಬಗ್ಗೆ ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್​, ಈ ಗೆಲುವಿನಿಂದ ನಾನು ಶೀಘ್ರದಲ್ಲೇ ಹೊರಬರುತ್ತೇನೆ. ಏಕೆಂದರೆ ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ. ಹೊಸ ಕೆಲಸ ಇದ್ದರೆ ಹೇಳಿ ಎಂದು ದ್ರಾವಿಡ್ ಹಾಸ್ಯ ಚಟಾಕಿ ಹಾರಿಸಿದರು.

VISTARANEWS.COM


on

Rahul Dravid
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾರ್ಬಡೋಸ್​: ಟಿ20 ವಿಶ್ವಕಪ್​ ಟೂರ್ನಿಯ ಮುಕ್ತಾಯದೊಂದಿಗೆ ರಾಹುಲ್​ ದ್ರಾವಿಡ್​(Rahul Dravid) ಅವರ ಕೋಚಿಂಗ್​ ಕೂಡ ಮುಕ್ತಾಯಗೊಂಡಿದೆ. ಮುಂದಿನ ನಡೆ ಏನೆಂದು ಕೇಳಿದ ಪ್ರಶ್ನೆಗೆ ಹಾಸ್ಯಾಸ್ಪದವಾಗಿ(Rahul Dravid jokes) ಉತ್ತರಿಸಿದ ದ್ರಾವಿಡ್​, ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ(Rahul Dravid jokes unemployed from next week) ಎಲ್ಲಾದರೂ ಕೆಲಸ ಇದ್ದರೆ ಹೇಳಿ ಎಂದರು. ಈ ವಿಡಿಯೊ ವೈರಲ್​ ಆಗಿದೆ.

2021ರಲ್ಲಿ ಟಿ20 ವಿಶ್ವಕಪ್‌ ಬಳಿಕ, ಕೋಚ್‌ ಆಗಿದ್ದ ರವಿಶಾಸ್ತ್ರಿ ನಿರ್ಗಮನದಿಂದ ತೆರವಾದ ಸ್ಥಾನವನ್ನು ದ್ರಾವಿಡ್‌ ವಹಿಸಿದ್ದರು. ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕಳೆದ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಅಂತ್ಯಗೊಂಡಿತ್ತು. ಆ ಬಳಿಕ, ದ್ರಾವಿಡ್​ಗೆ ಕೋಚ್​ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಕೂಡ ಇರಲಿಲ್ಲ. ಆದರೂ ಕೂಡ ದ್ರಾವಿಡ್​ ಮತ್ತು ಇತರ ತರಬೇತಿ ಸಿಬ್ಬಂದಿಯನ್ನು ಟಿ20 ವಿಶ್ವಕಪ್​ ತನಕ ಮುಂದುವರಿಸಲಾಗಿತ್ತು. ತಮ್ಮ ಕೊನೆಯ ಮಾರ್ಗದರ್ಶದಲ್ಲಿ ಭಾರತ ಟಿ20 ವಿಶ್ವಕಪ್​ ಗೆದ್ದಿರುವುದು ಅವರಿಗೂ ಸಂತಸ ತಂದಿದೆ.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದ ರಾಹುಲ್ ದ್ರಾವಿಡ್ ಅವರಿಗೆ ಸಂದರ್ಶಕರೊಬ್ಬರು ಮುಂದಿನ ನಡೆಯ ಬಗ್ಗೆ ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್​, ಈ ಗೆಲುವಿನಿಂದ ನಾನು ಶೀಘ್ರದಲ್ಲೇ ಹೊರಬರುತ್ತೇನೆ. ಏಕೆಂದರೆ ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ. ಹೊಸ ಕೆಲಸ ಇದ್ದರೆ ಹೇಳಿ ಎಂದು ದ್ರಾವಿಡ್ ಹಾಸ್ಯ ಚಟಾಕಿ ಹಾರಿಸಿದ್ದಾರೆ” ಈ ವಿಡಿಯೊ ವೈರಲ್​ ಆಗಿದೆ. ಕಳೆದ ವರ್ಷವೇ ದ್ರಾವಿಡ್​ ಅವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಮತ್ತೊಮ್ಮೆ ಕೋಚ್​ ಹುದ್ದೆಯಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂದು ಹೇಳಿದ್ದರು. ದ್ರಾವಿಡ್​ ಅವರ ಇಬ್ಬರು ಮಕ್ಕಳು ಕೂಡ ಕ್ರಿಕೆಟರ್​ ಆಗಿರುವ ಕಾರಣ ಇವರ ಕ್ರಿಕೆಟ್​ ಭವಿಷ್ಯ ರೂಪಿಸುವಲ್ಲಿ ದ್ರಾವಿಡ್​ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬಹುದು.

ಇದನ್ನೂ ಓದಿ Team India stuck in Barbados: ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ

ನಾಯಕನಾಗಿ ಗೆಲ್ಲಲಾಗದ ವಿಶ್ವಕಪ್(T20 World Cup 2024)​ ಟ್ರೋಫಿಯನ್ನು ರಾಹುಲ್​ ದ್ರಾವಿಡ್‌(Rahul Dravid) ಕೊನೆಗೂ ಭಾರತ ತಂಡದ ತರಬೇತುದಾರಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ.

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್‌ ದ್ರಾವಿಡ್‌ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಎನ್ನುವುದು ಅವರಿಗೆ ಕನಸಾಗಿತ್ತು. ಈ ಕೊರಗು ಕೂಡ ಅವರಲ್ಲಿತ್ತು. ಇದೀಗ ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್‌ ಅನ್ನು ತರಬೇತುದಾರನಾಗಿ ಗಳಿಸಿಕೊಂಡಿದ್ದಾರೆ.

2007ರಲ್ಲಿ ವೆಸ್ಟ್​ ಇಂಡೀಸ್​ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ರಾಹುಲ್​ ದ್ರಾವಿಡ್​ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಲೀಗ್​ ಹಂತದಿಂದಲೇ ನಿರ್ಗಮಿಸಿತ್ತು. ದುರ್ಬಲ ಬಾಂಗ್ಲಾದೇಶ ವಿರುದ್ದವೂ ಕೂಡ ಗೆಲುವು ಸಾಧಿಸಲು ಸಾಧ್ಯವಾಗ ಅವಮಾನಕ್ಕೆ ಸಿಲುಕಿತ್ತು. ಅಂದು ಅವಮಾನ ಎದುರಿಸಿದ ವಿಂಡೀಸ್​ ನೆಲದಲ್ಲೇ ಇದೀಗ ದ್ರಾವಿಡ್​ ತರಬೇತುದಾರನಾಗಿ ಕಪ್​ ಗೆದ್ದು ಸಂಭ್ರಮಿಸಿ ತಮ್ಮ ಎಲ್ಲ ಹಿಂದಿನ ನೋವನ್ನು ಮರೆತರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

John Cena: ‘ನೆವರ್‌ ಗೀವ್‌ ಅಪ್‌’ ಎಂದಿದ್ದ ಜಾನ್ ಸೀನ ರಸ್ಲಿಂಗ್ ವೃತ್ತಿಜೀವನಕ್ಕೆ ದಿಢೀರ್​ ವಿದಾಯ ಘೋಷಣೆ

John Cena: ಅಂತಾರಾಷ್ಟ್ರೀಯ ರೆಸ್ಲಿಂಗ್ ಫೆಡರೇಶನ್ (WWF) ಜೊತೆ ಒಪ್ಪಂದ ಮಾಡಿಕೊಂಡ ನಂತರ ಸೀನಾ ವೃತ್ತಿಪರ ರೆಸ್ಲರ್ ಆಗಿ ಬದಲಾದನು. ಆತನ ಅತ್ಯಂತ ಬಲಯುತ ಪಂಚ್‌ಗಳು, ಚಿರತೆಯ ವೇಗದ ಚಲನೆ, ಎಂತಹ ಬಲಿಷ್ಠ ಪಟುಗಳನ್ನು ಕೂಡ ಕೆಡವಿ ಸಿಂಹನಾದ ಮಾಡುವ ತಾಕತ್ತು, ಶಕ್ತಿಯುತ ಪಟ್ಟುಗಳು………..ಹೀಗೆ ಜಾನ್ ಸೀನಾ ಕೆಲವೇ ತಿಂಗಳಲ್ಲಿ ರೆಸ್ಲಿಂಗ್ ಬಾದಷಾ ಆಗಿ ಬದಲಾದ.

VISTARANEWS.COM


on

Koo

ನ್ಯೂಯಾರ್ಕ್​: ‘ನೆವರ್‌ ಗೀವ್‌ ಅಪ್‌’ ಎಂಬ ಘೋಷವಾಕ್ಯದೊಂದಿಗೆ ಡಬ್ಲ್ಯೂ ಡಬ್ಲ್ಯೂಇ(WWE) ಬಾಕ್ಸಿಂಗ್​ ರಿಂಗ್​ನಲ್ಲಿ 16 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಖ್ಯಾತ ರಸ್ಲರ್​ ಜಾನ್​ ಸೀನ(John Cena) ಅವರು ತಮ್ಮ ಬಾಕ್ಸಿಂಗ್​ ವೇತ್ತಿ ಜೀವನಕ್ಕೆ ತೆರೆ ಎಳೆಯಲು ಸಿದ್ಧರಾಗಿದ್ದಾರೆ. ಟೊರೊಂಟಒದಲ್ಲಿ ನಡೆದ ಮನಿ​ ಇನ್​ ದಿ ಬ್ಯಾಂಕ್​ ಟೂರ್ನಿಯಲ್ಲಿ ತನ್ನ ನಿವೃತ್ತಿ ಪ್ರಕಟಿಸಿದ್ದಾರೆ. ಜಾನ್​ ಸೀನ ನಮ್ಮಲ್ಲಿ ಹಲವರ ಬಾಲ್ಯದ ಹೀರೋ ಆಗಿರುವುದು ಕೂಡ ರೋಮಾಂಚಕ ಸಾಧನೆಯೇ ಸರಿ!

‘ದಿ ಲಾಸ್ಟ್ ಟೈಮ್ ಈಸ್ ನೌ” ಎಂದು ಬರೆದ ಟಿ-ಶರ್ಟ್​ ಧರಿಸಿ ಸೀನಾ ತನ್ನ ನಿವೃತ್ತಿಯನ್ನು ಪ್ರಕಟಿಸಿದರು. ಈ ವರ್ಷ ನಡೆಯುವ 2024ರ ರಾಯಲ್ ರಂಬಲ್, ಎಲಿಮಿನೇಶನ್ ಚೇಂಬರ್ ಮತ್ತು ರಸಲ್ ಮೇನಿಯಾ 41ರಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ನಿವೃತ್ತಿಯಾಗಲಿದ್ದಾರೆ. 2002ರಲ್ಲಿ ಡಬ್ಲ್ಯೂ ಡಬ್ಲ್ಯೂಇ ಕಂಪನಿಗೆ ಸೇರಿದ ಜಾನ್ ಸೀನ 13 ಬಾರಿ ಡಬ್ಲ್ಯೂ ಡಬ್ಲ್ಯೂಇ ಟೈಟಲ್, ಮೂರು ಬಾರಿ ಹೆವಿವೈಟ್ ಚಾಂಪಿಯನ್ ಶಿಪ್ ಮತ್ತು ಎರಡು ಬಾರಿ ರಾಯಲ್ ರಂಬಲ್ ಗೆಲುವು ಸಾಧಿಸಿದ್ದಾರೆ.

ಆತ ಹುಟ್ಟು ಹೋರಾಟಗಾರ!

1977 ಏಪ್ರಿಲ್ 23ರಂದು ಅಮೆರಿಕದಲ್ಲಿ ಜನಿಸಿದ ಜಾನ್ ಸೀನಾ ರೆಸ್ಲರ್ ಆಗುವ ಕನಸು ಕೂಡ ಕಂಡವರಲ್ಲ! ಅವರ ಕನಸು ಏನಿದ್ದರೂ ಬಾಡಿ ಬಿಲ್ಡಿಂಗ್ ಮತ್ತು ಸಿನಿಮಾದಲ್ಲಿ ನಟನೆ ಮಾತ್ರ ಆಗಿತ್ತು. ಆರು ಅಡಿ ಒಂದು ಇಂಚು ಎತ್ತರದ ಮತ್ತು 114 ಕಿಲೋಗ್ರಾಂ ತೂಕ ಇದ್ದ ಜಾನ್ ಸೀನಾ ಜಿಮ್ ತರಬೇತಿಯ ಮೂಲಕ ಕಟ್ಟುಮಸ್ತಾದ ಮತ್ತು ಹುರಿಮಾಡಿದ ಬಾಡಿ ಬಿಲ್ಡಿಂಗ್ ಮಾಡಿಕೊಂಡಿದ್ದ.

ಇದನ್ನೂ ಓದಿ MS Dhoni Birthday: ಧೋನಿ ನಾಯಕರಾಗಿದ್ದಾಗ ಬಳಸಿದ ಮಹತ್ವದ ಗೆಲುವಿನ ತಂತ್ರಗಳು ಇಲ್ಲಿವೆ

ಮೊದಲ ಪಂದ್ಯದಲ್ಲಿ ಭಾರೀ ಸೋಲು!

ಎಂದಿಗೂ ಸೋಲನ್ನು ಒಪ್ಪಿಕೊಳ್ಳದೆ ಇರುವ ಸ್ಟ್ರಾಂಗ್ ಮೈಂಡ್ ಸೆಟ್ ಹೊಂದಿರುವ ಆತ ರೆಸ್ಲಿಂಗ್ ರಿಂಗ್ ಪ್ರವೇಶ ಮಾಡಿದ್ದು ಆಕಸ್ಮಿಕ! 1999ರ ನವೆಂಬರ್ ತಿಂಗಳ ಹೊತ್ತಿಗೆ ಯಾರದ್ದೋ ಸವಾಲನ್ನು ಸ್ವೀಕಾರ ಮಾಡಿ ರೆಸ್ಲಿಂಗ್ ಬೆಲ್ಟ್ ಧರಿಸಿದ ಜಾನ್ ಸೀನಾ ಮೊದಲ ಪಂದ್ಯದಲ್ಲಿಯೇ ಸೋತು ಸುಣ್ಣ ಆಗಿದ್ದ! ಸೋತದ್ದು ಮಾತ್ರವಲ್ಲ ತನ್ನ ಎರಡೂ ದವಡೆಗಳನ್ನು ಮುರಿದುಕೊಂಡಿದ್ದ.

ಆಗ ಅವನಿಗೆ ತನ್ನ ತಪ್ಪುಗಳ ಅರಿವಾಯಿತು. ಮುಂದೆ ಎರಡು ವರ್ಷ ಕಠಿಣ ಪರಿಶ್ರಮ ಪಟ್ಟು ಬೆವರು ಹರಿಸಿದ. ಕೋಚ್ ಹೇಳಿದ ಎಲ್ಲವನ್ನೂ ಕರಾರುವಾಕ್ಕಾಗಿ ಪಾಲಿಸಿದ. ಮಾನಸಿಕ ಮತ್ತು ದೈಹಿಕವಾಗಿ ಮುಂದಿನ ಪಂದ್ಯಗಳಿಗೆ ಸಿದ್ಧನಾದ!

ಮುಂದೆ ಸತತ ಗೆಲುವಿನ ಹಸಿವು! ಸೋಲುಗಳನ್ನು ಮೆಟ್ಟಿ ನಿಂತ ದೃಢತೆ!

ಅಂತಾರಾಷ್ಟ್ರೀಯ ರೆಸ್ಲಿಂಗ್ ಫೆಡರೇಶನ್ (WWF) ಜೊತೆ ಒಪ್ಪಂದ ಮಾಡಿಕೊಂಡ ನಂತರ ಸೀನಾ ವೃತ್ತಿಪರ ರೆಸ್ಲರ್ ಆಗಿ ಬದಲಾದನು. ಆತನ ಅತ್ಯಂತ ಬಲಯುತ ಪಂಚ್‌ಗಳು, ಚಿರತೆಯ ವೇಗದ ಚಲನೆ, ಎಂತಹ ಬಲಿಷ್ಠ ಪಟುಗಳನ್ನು ಕೂಡ ಕೆಡವಿ ಸಿಂಹನಾದ ಮಾಡುವ ತಾಕತ್ತು, ಶಕ್ತಿಯುತ ಪಟ್ಟುಗಳು………..ಹೀಗೆ ಜಾನ್ ಸೀನಾ ಕೆಲವೇ ತಿಂಗಳಲ್ಲಿ ರೆಸ್ಲಿಂಗ್ ಬಾದಷಾ ಆಗಿ ಬದಲಾದ. ಅತಿರಥ ಮಹಾರಥ ಪಟುಗಳನ್ನು ಸೋಲಿಸಿ ದಾಖಲೆಯ ಮೇಲೆ ದಾಖಲೆಯನ್ನು ಬರೆದ.

ರೆಸ್ಲಿಂಗ್ ಬಾದಷಾ ಎಂಬ ಕೀರ್ತಿ!

ಬ್ರೂಕ್ ಲೆಸ್ನಾರ್, ರಾಂಡಿ ಆರ್ಟನ್, ಶಾನ್ ಮೈಕೆಲ್, ಬಟಿಸ್ಟಾ, ಅಂಡರ್ ಟೇಕರ್, ಬಿಗ್ ಶಾ ಇವರೆಲ್ಲ ಸೀನಾ ಕೈಯ್ಯಲ್ಲಿ ಒಂದಲ್ಲ ಒಂದು ಬಾರಿ ಸೋಲು ಉಂಡವರೆ ಆಗಿದ್ದಾರೆ! ಬೇರೆಯವರ ಆಟಕ್ಕಿಂತ ಸೀನಾ ಆಟ ತುಂಬಾ ಭಿನ್ನ ಆಗಿರುತ್ತದೆ. ಆತನು ಆರಂಭದಲ್ಲಿ ಆಕ್ರಮಣವನ್ನು ಮಾಡುವುದಿಲ್ಲ. ಆದರೆ ಆಟ ಕುದುರಿದ ಹಾಗೆ ಅವನು ಹೆಚ್ಚು ಆಕ್ರಮಣಕ್ಕೆ ಇಳಿಯುತ್ತಾನೆ. ಎಷ್ಟು ಬಾರಿ ಕೆಳಗೆ ಬಿದ್ದರೂ ಅರ್ಧ ಕ್ಷಣದಲ್ಲಿ ಮತ್ತೆ ಎದ್ದುಬರುವುದು ಆತನ ಶಕ್ತಿ!

ಹೆಚ್ಚು ಸ್ಪರ್ಧಾತ್ಮಕ ಆದ ಮತ್ತು ಅಪಾಯಕಾರಿಯೆ ಆದ ‘ರೆಸ್ಟಲ್ ಮೇನಿಯಾ’ ಎಂಬ ವಾರ್ಷಿಕ ಇವೆಂಟಿನಲ್ಲಿ ಸೀನಾ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸೋತಿರುವ ಉದಾಹರಣೆ ಹೆಚ್ಚು ದೊರೆಯುವುದಿಲ್ಲ. ಆತನ ನಗು ಮತ್ತು ಆಟಿಟ್ಯುಡ್ ಯಾರ ಮನಸ್ಸನ್ನಾದರೂ ಸೆಳೆಯದೆ ಇರಲು ಸಾಧ್ಯವಿಲ್ಲ!

Continue Reading

ಕ್ರೀಡೆ

Vinesh Phogat: ಕೊನೆಯ ಕ್ಷಣದಲ್ಲಿ ವೀಸಾ ಪಡೆದು ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಟೂರ್ನಿಯಲ್ಲಿ ಚಿನ್ನ ಗೆದ್ದ ವಿನೇಶ್ ಫೋಗಟ್

Vinesh Phogat: ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಎದುರಾಳಿ ಮರೀರಾ ತ್ಯುಮೆರ್ಕೋವಾ ವಿರುದ್ಧ 10-5 ಅಂಕಗಳ ಭರ್ಜರಿ ಗೆಲುವು ಸಾಧಿಸಿ ಚಿನ್ನಕ್ಕೆ ಕೊಳರೊಡ್ಡಿದರು. ಇದೇ ತಿಂಗಳು 26ರಿಂದ ಆರಂಭಗೊಳ್ಳಲಿರುವ ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಟಕ್ಕೆ ಮುನ್ನ ನೀಡಿದ ಉತ್ತಮ ಪ್ರದರ್ಶನವಾಗಿದೆ.

VISTARANEWS.COM


on

Vinesh Phogat
Koo

ನವದೆಹಲಿ: ಕೊನೆಯ ಕ್ಷಣದಲ್ಲಿ ವೀಸಾ ಪಡೆದು ಮ್ಯಾಡ್ರಿಡ್​ನಲ್ಲಿ ನಡೆದ ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್(Grand Prix) ಕುಸ್ತಿ ಟೂರ್ನಿಯಲ್ಲಿ ಭಾರತದ ಒಲಿಂಪಿಯನ್​ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) 50 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಎದುರಾಳಿ ಮರೀರಾ ತ್ಯುಮೆರ್ಕೋವಾ ವಿರುದ್ಧ 10-5 ಅಂಕಗಳ ಭರ್ಜರಿ ಗೆಲುವು ಸಾಧಿಸಿ ಚಿನ್ನಕ್ಕೆ ಕೊಳರೊಡ್ಡಿದರು. ಇದೇ ತಿಂಗಳು 26ರಿಂದ ಆರಂಭಗೊಳ್ಳಲಿರುವ ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಟಕ್ಕೆ ಮುನ್ನ ನೀಡಿದ ಉತ್ತಮ ಪ್ರದರ್ಶನವಾಗಿದೆ.

ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ತೊಡೆತಟ್ಟಿ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು ಅರ್ಜುನ್ ಪ್ರಶಸ್ತಿಯನ್ನು ಹಿಂದಿರುಗಿಸಿದ ವಿಚಾರದಲ್ಲಿ ವಿನೇಶ್ ಫೋಗಟ್ ದೊಡ್ಡ ಸುದ್ದಿಯಾಗಿದ್ದರು. ಈ ಹಿಂದೆ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ಈಗ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.

29 ವರ್ಷದ ವಿನೇಶ್​ ಸೆಮಿಫೈನಲ್​ ಪಂದ್ಯದಲ್ಲಿ ಕೆನಡಾದ ಕೇಟಿ ಡುಚಾಕ್ ಅವರನ್ನು 9-4 ಅಂಕಗಳಿಂದ ಸೋಲಿಸಿ ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಫೈನಲ್​ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಪ್ಯಾರಿಸ್​ ಒಲಿಂಪಿಕ್ಸ್​ಗೆ ತಯಾರಿ ನಡೆಸುವ ಸಲುವಾಗಿ ವಿನೇಶ್​ ಫ್ರಾನ್ಸ್​ಗೆ ತೆರಳಲಿದ್ದಾರೆ. 20 ದಿನಗಳ ಕಾಲ ಅವರು ಇಲ್ಲಿ ಅಭ್ಯಾಸ ನಡೆಸಲಿದ್ದಾರೆ.

ಇದನ್ನೂ ಓದಿ Vinesh Phogat: ಖೇಲ್ ರತ್ನ ಪ್ರಶಸ್ತಿಯನ್ನು ಪಾದಚಾರಿ ಮಾರ್ಗದಲ್ಲಿ ತೊರೆದಿದ್ದ ವಿನೇಶ್ ಫೋಗಟ್​ಗೆ ಒಲಿದ ಒಲಿಂಪಿಕ್ಸ್​ ಟಿಕೆಟ್​

ಇತ್ತೀಚೆಗೆ ವಿನೇಶ್ ಫೋಗಟ್(Vinesh Phogat) ಸೀನಿಯರ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. 55 ಕೆಜಿ ವಿಭಾಗದಲ್ಲಿ ವಿನೇಶ್​ ಅವರು ಮಧ್ಯಪ್ರದೇಶದ ಜ್ಯೋತಿ ಅವರನ್ನು 4-0 ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಆರ್‌ಎಸ್‌ಪಿಬಿ) ತಂಡದ ಪರ 29 ವರ್ಷದ ವಿನೇಶ್​ ಕಣಕ್ಕಿಳಿದಿದ್ದರು.

ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಉನ್ನತ ಕುಸ್ತಿಪಟುಗಳು ಆರೋಪಿಸಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು. ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಕಳೆದ ವರ್ಷ ಜನವರಿಯಲ್ಲಿ ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದರು. ಈ ಪ್ರತಿಭಟನೆಯ ಪ್ರಮುಖ ರುವಾರಿ ಕೂಡ ವಿನೇಶ್​ ಅವರೇ ಆಗಿದ್ದರು.

Continue Reading

ಕ್ರೀಡೆ

MS Dhoni Birthday: ಧೋನಿ ನಾಯಕರಾಗಿದ್ದಾಗ ಬಳಸಿದ ಮಹತ್ವದ ಗೆಲುವಿನ ತಂತ್ರಗಳು ಇಲ್ಲಿವೆ

MS Dhoni Birthday: ಕ್ರಿಕೆಟ್‌ ಮೈದಾನದಲ್ಲಿ ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(MS Dhoni) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ ಕ್ಯಾಪ್ಟನ್‌ ಕೂಲ್‌’ ಎಂಬ ಹೆಸರು ಕೂಡ ಇದೆ.

VISTARANEWS.COM


on

MS Dhoni Birthday
Koo

ಬೆಂಗಳೂರು ಭಾರತಕ್ಕೆ 2 ವಿಶ್ವಕಪ್(ಟಿ20, ಏಕದಿನ) ಗೆದ್ದ ಕೊಟ್ಟ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ(MS Dhoni Birthday) 43ನೇ ಜನುಮದಿನದ ಸಂಭ್ರಮ. ಕ್ರಿಕೆಟ್‌ ಮೈದಾನದಲ್ಲಿ ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(MS Dhoni) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ ಕ್ಯಾಪ್ಟನ್‌ ಕೂಲ್‌’ ಎಂಬ ಹೆಸರು ಕೂಡ ಇದೆ. ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್‌. ನಾಯಕನಾಗಿ ಧೋನಿ ತೆಗೆದುಕೊಂಡ ಕೆಲವು ನಿರ್ಧಾರಗಳು ಭಾರತ ತಂಡಕ್ಕೆ ಹೇಗೆ ಹೇಗೆ ನೆರವಾಯಿತು ಎಂಬುದರ ಕುತೂಹಲಕಾರಿ ಸಂಗತಿ ಹೀಗಿದೆ

ಜೋಗಿಂದರ್ ಶರ್ಮಾಗೆ ಕೊನೆ ಓವರ್​ ನೀಡಿದ್ದು!

2007ರಲ್ಲಿ ನಡೆದ ಚೊಚ್ಚಲ ಟಿ 20 ವಿಶ್ವಕಪ್ ಫೈನಲ್​ನಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿತ್ತು. ಸಾಧಾರಣ ಗುರಿ ಬೆನ್ನತ್ತಿದ್ದ ಪಾಕ್​ ಓಂದೆಡೆ ವಿಕೆಟ್ ಬೀಳುತ್ತಿದ್ದರೂ ಮಿಸ್ಬಾ ಉಲ್ ಹಕ್ ನಿಂತು ಆಡುತ್ತಿದ್ದರು. ಕೊನೆಯ ಓವರ್ ನಲ್ಲಿ 13 ರನ್ ಬೇಕಾಗಿತ್ತು. ಕೈಯಲ್ಲಿ ಇದ್ದಿದ್ದು ಒಂದು ವಿಕೆಟ್. ಜೋಗಿಂದರ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಮಿಸ್ಬಾ ಮೂರನೇ ಎಸೆತವನ್ನು ಫೈನ್ ಲೆಗ್​ಗೆ ಸ್ಕೂಪ್ ಮಾಡಿದ್ದರು. ಆದರೆ ಚೆಂಡು ಶ್ರೀಶಾಂತ್ ಕೈ ಸೇರಿತ್ತು. ಪಾಕಿಸ್ತಾನ ಆಲ್​ಔಟ್​ ಆಯಿತು. ಭಾರತ ಕೇವಲ 5 ರನ್​ ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಇಲ್ಲಿಂದ ಧೋನಿ ಯುಗ ಕೂಡ ಆರಂಭವಾಯಿತು. ಅನಾನುಭವಿ ಜೋಗಿಂದರ್ ಶರ್ಮಾ ಕೈಗೆ ಧೋನಿ ಚೆಂಡು ಕೊಟ್ಟ ನಿರ್ಧಾರ ಪಂದ್ಯದ ಗತಿಯನ್ನೇ ಬದಲಿಸಿತು. ಪಂದ್ಯದ ನಂತರ ಧೋನಿ, ಮಧ್ಯಮ ವೇಗದ ಬೌಲರ್ ಜೋಗಿಂದರ್​ ಮೇಲೆ ನನಗೆ ನಂಬಿಕೆ ಇತ್ತು. ಹಾಗಾಗಿ ಇದು ಸುಲಭ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿದ್ದರು.

ಚಾಂಪಿಯನ್ಸ್ ಟ್ರೋಫಿಯಲ್ಲಿ ಇಶಾಂತ್ ಶರ್ಮಾಗೆ ಬೌಲಿಂಗ್​ ಕೊಟ್ಟದ್ದು

2013ರಲ್ಲಿ ನಡೆದಿದ್ದ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್​ ಮುಖಾಮುಖಿಯಾಗಿತ್ತು. ನಿಧಾನಗತಿಯ ಎಡ್ಜ್ ಬಾಸ್ಟನ್ ಪಿಚ್​ನಲ್ಲಿ ಇಂಗ್ಲೆಂಡ್ 130 ರನ್ ಗಳ ಗುರಿ ಬೆನ್ನಟ್ಟುತ್ತಿತ್ತು. ಈ ಅವಧಿಯಲ್ಲಿ ಮಳೆಯ ಅವಕೃಪೆಯೂ ಎದುರಾಯಿತು. ಈ ವೇಳೆ ಧೋನಿಗೆ ಬೌಲಿಂಗ್​ಗೆ ಇಳಿಸುವ ಸವಾಲು ಎದುರಾಯಿತು. ವಿಶ್ವಾಸಾರ್ಹ ಸ್ಪಿನ್ ಜೋಡಿ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಅವರನ್ನು ಬಳಸಿಕೊಂಡು ಇಂಗ್ಲೆಂಡ್ ಬ್ಯಾಟರ್​ಗಳನ್ನು ಕಟ್ಟಿ ಹಾಕಿದರು. ಆದರೂ ಆತಿಥೇಯ ಆಂಗ್ಲರ ಪಡೆಗೆ ಕೊನೇ 18 ಎಸೆತಗಳಲ್ಲಿ ಕೇವಲ 28 ರನ್​ ಬೇಕಾಗಿತ್ತು. ಈ ವೇಳೆ ಧೋನಿ ಇಶಾಂತ್ ಶರ್ಮಾ ಕೈಗೆ ಚೆಂಡನ್ನು ನೀಡಿದರು.

ಇದನ್ನೂ ಓದಿ MS Dhoni Birthday: ಸಲ್ಮಾನ್​ ಖಾನ್​ ಜತೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಧೋನಿ

ಅವರ ಎಸೆತಕ್ಕೆ ಇಯಾನ್ ಮಾರ್ಗನ್ ಸಿಕ್ಸರ್ ಭಾರಿಸಿದ ಜತೆಗೆ ಶರ್ಮಾ ಎರಡು ವೈಡ್​ ನೀಡಿದ ಬಳಿಕ ಧೋನಿಯ ನಿರ್ಧಾರ ತಲೆಕೆಳಗಾದಂತೆ ಕಂಡಿತು. ಆದರೆ, ನಂತರ ನಡೆದಿದ್ದೇ ಬೇರೆ. ಇಶಾಂತ್ ನಿಧಾನಗತಿಯ ಚೆಂಡನ್ನು ಸಿಕ್ಸರ್ ಕಡೆಗೆ ಕಳುಹಿಸಲು ಹೋದ ಮಾರ್ಗನ್​ ಔಟಾದರು. ಮುಂದಿನ ಎಸೆತದಲ್ಲಿ ರವಿ ಬೋಪಾರಾ ವಿಕೆಟ್ ಪಡೆದರು. ಪಿಚ್​​ನಲ್ಲಿ ತಳವೂರಿದ್ದ ಬ್ಯಾಟರ್​​ಗಳನ್ನು ಪೆವಿಲಿಯನ್​ಗೆ ಕಳುಹಿಸಿ ಭಾರತದ ಜಯಕ್ಕೆ ಹಾದಿ ಮಾಡಿಕೊಟ್ಟರು ಇಶಾಂತ್​. ಅಲ್ಲಿಗೆ ಧೋನಿಯ ತಂತ್ರಗಾರಿಕೆ ಮತ್ತೆ ಫಲಕೊಟ್ಟಂತಾಯಿತು.

2011 ರ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಬ್ಯಾಟಿಂಗ್​ ಮುಂಬಡ್ತಿ


ನಾಯಕನಾಗಿ ಧೋನಿ ಅವರ ಅತ್ಯಂತ ಪ್ರಸಿದ್ಧ ಮತ್ತು ಕ್ಷಿಪ್ರ ನಿರ್ಧಾರದಲ್ಲಿ 2011ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್ ಕೂಡ ಒಂದು. ಶ್ರೀಲಂಕಾ ವಿರುದ್ಧದ 2011 ರ ವಿಶ್ವಕಪ್ ಫೈನಲ್​​ನಲ್ಲಿ ತಾವೇ ಸ್ವತಃ ಯುವರಾಜ್ ಸಿಂಗ್ ಅವರಿಗಿಂತ ಮುಂಚಿತವಾಗಿ ಬ್ಯಾಟ್​ ಮಾಡಲು ಇಳಿದಿರುವುದು. ತಂಡದ ಮೂರನೇ ವಿಕೆಟ್ ಪತನದ ನಂತರ ಅವರು ತಾವೇ ಬ್ಯಾಟ್​ ಹಿಡಿದು ಆಡಲು ಮುಂದಾದರು. ಗೌತಮ್​ ಗಂಭೀರ್​ ಜತೆ ಅಮೂಲ್ಯ ಜತೆಯಾಟ ನೀಡುವ ಜತೆಗೆ ಲಂಕಾದ ಸ್ಪಿನ್ ಬೌಲರ್​ಗಳ ತಂತ್ರವನ್ನು ಅವರಿಬ್ಬರು ವಿಫಲಗೊಳಿಸಿದರು. ಅಲ್ಲದೇ ತಾವು ಕೊನೇ ತನಕ ಉಳಿದು 97 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದು ಭಾರತ ಕ್ರಿಕೆಟ್ ತಂಡದ ಪಾಲಿಗೆ ಐತಿಹಾಸಿಕ ನಿರ್ಧಾರವೇ ಸರಿ.

ಲಾರ್ಡ್ಸ್​ನಲ್ಲಿ ಇಶಾಂತ್ ಶರ್ಮಾ ಬೌನ್ಸರ್ ದಾಳಿ


ಭಾರತವು 2014ರ ಇಂಗ್ಲೆಂಡ್​ ಪ್ರವಾಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಹೆಣಗಾಡಿತ್ತು. ಆದರೆ ಪ್ರವಾಸದ ಎರಡನೇ ಟೆಸ್ಟ್​​ನಲ್ಲಿ ಅದು ಬದಲಾಯಿತು. ಅಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ ಭಾರತ ತಂಡ ಪುಟಿದೆದ್ದಿತು. ಆ ಪಂದ್ಯದಲ್ಲಿ ಇಂಗ್ಲೆಂಡ್​ ತಂಡಕ್ಕೆ 6 ವಿಕೆಟ್​ಗಳು ಕೈಯಲ್ಲಿರುವಾಗ 140 ರನ್​ಗಳ ಅಗತ್ಯವಿತ್ತು . ಹೀಗಾಗಿ ಗೆಲುವು ಇಂಗ್ಲೆಂಡ್​ ತಂಡದ್ದು ಎಂದು ಭಾವಿಸಲಾಗಿತ್ತು. ಧೋನಿ ತಂತ್ರಗಾರಿಕೆ ಬಳಸಿದರು. ಇಶಾಂತ್​ ಶರ್ಮಾಗೆ ಚೆಂಡು ಕೊಟ್ಟು ಶಾರ್ಟ್ ಪಿಚ್ ದಾಳಿ ಮಾಡಲು ಹೇಳಿದರು. ಶರ್ಮಾ ಮಿಂಚಿದರು. ಜೀವನ ಶ್ರೇಷ್ಠ 7 ವಿಕೆಟ್​ ಪಡೆದರು. ಕೇವಲ 74 ರನ್ ನೀಡಿ ಈ ಸಾಧನೆ ಮಾಡಿದರು. ಭಾರತಕ್ಕೆ 95 ರನ್​ಗಳ ಗೆಲುವು ಲಭಿಸಿತು. ಇಶಾಂತ್​ ಅವರ ಶಾರ್ಟ್​​ ಪಿಚ್ ಹಾಗೂ ಬೌನ್ಸರ್​ಗಳು ಕೆಲಸ ಮಾಡಿದವು. ಧೋನಿಯ ತಂತ್ರಗಾರಿಕೆ ಮೇಲುಗೈ ಸಾಧಿಸಿತ್ತು.

ಪೊಲಾರ್ಡ್ ವಿರುದ್ಧ ಸ್ಟ್ರೈಟ್-ಆನ್ ಫೀಲ್ಡಿಂಗ್​ ತಂತ್ರ


ಎಂಎಸ್ ಧೋನಿ ನಾಯಕತ್ವದಲ್ಲಿ ಫೀಲ್ಡಿಂಗ್ ಸೆಟ್ಟಿಂಗ್​ ಕೂಡ ಅದ್ಭುತವಾಗಿತ್ತು. 2010ರ ಐಪಿಎಲ್ ಫೈನಲ್​ನಲ್ಲಿ ಇದಕ್ಕೊಂದು ತಾಜಾ ಉದಾಹರಣೆಯಿದೆ. ಸಿಎಸ್​ಕೆ ಮತ್ತು ಮುಂಬಯಿ ನಡುವಿನ ಫೈನಲ್​ ಹಣಾಹಣಿಯದರು. ವಿಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಚೆನ್ನೈ ಕೈಯಿಂದ ಜಯ ಕಸಿಯುವ ಪ್ರಯತ್ನ ಮಾಡುತ್ತಿದ್ದರು. 9 ಎಸೆತಗಳಲ್ಲಿ 27 ರನ್ ಗಳಿಸಿದ್ದರು ಪೊಲಾರ್ಡ್​. ಇದನ್ನು ಗ್ರಹಿಸಿದ ಧೋನಿ ಮ್ಯಾಥ್ಯೂ ಹೇಡನ್ ಅವರನ್ನು ಮ್ಯಾಥ್ಯೂ ಹೇಡನ್ ಅವರನ್ನು ಸ್ಟ್ರೈನ್ ಆನ್​ ಬಳಿ ಫೀಲ್ಡಿಂಗ್ ನಿಲ್ಲಿಸಿದರು. ಪೊಲಾರ್ಡ್​ ಕ್ಯಾಚ್​ ನೀಡಿ ನಿರ್ಗಮಿಸಿದರು. ಧೋನಿ 2017 ರ ಫೈನಲ್​ನಲ್ಲಿ ರೈಸಿಂಗ್ ಪುಣೆ ಸೂಪರ್​ಜೈಂಟ್ಸ್​ ತಂಡ ಪರವಾಗಿ ಅದೇ ತಂತ್ರ ಬಳಸಿ ಪೊಲಾರ್ಡ್ ಅವರನ್ನು ಔಟ್​ ಮಾಡಿಸಿದರು. 2022ರಲ್ಲಿ ಪೊಲಾರ್ಡ್ ಅವರ ಅಂತಿಮ ಐಪಿಎಲ್​ ಋತುವಿನಲ್ಲೂ ಅವರನ್ನು ಅದೇ ರೀತಿ ಔಟ್​ ಮಾಡಿಸಿದ್ದರು ಧೋನಿ.

Continue Reading

ಕ್ರಿಕೆಟ್

MS Dhoni Birthday: ಸಲ್ಮಾನ್​ ಖಾನ್​ ಜತೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಧೋನಿ

MS Dhoni Birthday: ವಿಕೆಟ್‌ ಕೀಪಿಂಗ್‌ನಲ್ಲಿ ಧೋನಿ ವಿಶ್ವದಾಖಲೆ ಹೊಂದಿದ್ದಾರೆ. 2018ರಲ್ಲಿ ಕೇವಲ 0.08 ಸೆಕೆಂಡ್‌ನಲ್ಲಿ ಸ್ಟಂಪ್‌ಔಟ್‌ ಮಾಡುವ ಮೂಲಕ ವೆಸ್ಟ್‌ ಇಂಡೀಸ್‌ನ ಕೀಮೊ ಪೌಲ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು. ಕುಲದೀಪ್‌ ಯಾದವ್‌ ಆಗ ಬೌಲಿಂಗ್‌ ಮಾಡಿದ್ದರು. ಇದು ವಿಶ್ವದಲ್ಲೇ ವೇಗದ ಸ್ಟಂಪಿಂಗ್‌ ಎನಿಸಿದೆ.

VISTARANEWS.COM


on

MS Dhoni Birthday
Koo

ನವದೆಹಲಿ: ಎಂ.ಎಸ್.ಧೋನಿ, ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಇಂದು (July 7) 43ನೇ ವಸಂತಕ್ಕೆ (MS Dhoni Birthday) ಕಾಲಿಟ್ಟಿದ್ದಾರೆ. ಭಾರತಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ತಂದುಕೊಟ್ಟ, ಕೂಲ್‌ ಆಗಿದ್ದೇ ‘ಹಾಟ್‌’ ಫೇವರಿಟ್‌ ತಂಡವನ್ನು ಕಟ್ಟಿದ, ಕ್ರಿಕೆಟ್‌ನ ಆಚೆಗೂ ವ್ಯಕ್ತಿತ್ವದಿಂದ, ತನ್ನ ವಿಶೇಷ ಹವ್ಯಾಸಗಳಿಂದ, ಕೈಂಡ್‌ನೆಸ್‌ ವರ್ತನೆಯಿಂದ ಮನ ಸೆಳೆದ ಧೋನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಬಾರಿ ಧೋನಿ ತಮ್ಮ ಹುಟ್ಟುಹಬ್ಬವನ್ನು ಬಾಲಿವುಡ್​ ಸ್ಟಾರ್​ ಸಲ್ಮಾನ್​ ಖಾನ್​(Salman Khan) ಜತೆ ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಶನಿವಾರ ಮುಂಬೈನಲ್ಲಿ ಮುಕೇಶ್‌ ಅಂಬಾನಿ(Mukesh Ambani) ಪುತ್ರ ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ (Radhika Merchant) ಅವರ ವಿವಾಹಪೂರ್ವವಾಗಿ(Anant Ambani wedding) ನಡೆದ ಸಂಗೀತ ಕಾರ್ಯಕ್ರಮದಲ್ಲಿ(Anant-Radhika sangeet ceremony) ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್​ ಪಾಲ್ಗೊಂಡಿದ್ದರು. ಬಾಲಿವುಡ್​ನ ಹಲವು ಸ್ಟಾರ್​ ನಟ ಮತ್ತು ನಟಿಯರು ಕೂಡ ಈ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಸಲ್ಮಾನ್​ ಖಾನ್​ ಅವರು ಸರ್​ಪ್ರೈಸ್​ ಆಗಿ ಧೋನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಧೋನಿ ಅವರು ಸಲ್ಮಾನ್​ ಜತೆ ಕೇಕ್​ ಕತ್ತರಿಸಿ ತಮ್ಮ ಹುಟ್ಟು ಹಬ್ಬ ಆಚರಿಸಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ ಅವರು ಟೀಮ್​ ಇಂಡಿಯಾದ ಬ್ಲೂ ಜೆರ್ಸಿಯಲ್ಲಿ ಬ್ಯಾಟ್​ ಹಿಡಿದು ಬರುತ್ತಿರುವ ಬರೋಬ್ಬರಿ 52 ಅಡಿ ಎತ್ತರದ ಕಟೌಟ್​ ನಿರ್ಮಿಸಿದ್ದಾರೆ. ಸದ್ಯ ಧೋನಿಯ ಈ ಕಟೌಟ್​ ಫೋಟೋವನ್ನು ಅಂತರ್ಜಾಲದಲ್ಲಿ ಕೊಟ್ಯಂತರ ಅಭಿಮಾನಿಗಳು ಶೇರ್​ ಮತ್ತು ಲೈಕ್ ಮಾಡಿ ಶುಭಾಶಯ ಕೋರಿದ್ದಾರೆ. ಕಳೆದ ಬಾರಿಯೂ ಕೂಡ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ಅಭಿಮಾನಿಗಳು ಧೋನಿಯ 43ನೇ ಜನ್ಮದಿನದ ಗೌರವಾರ್ಥವಾಗಿ 43 ಅಡಿ ಎತ್ತರದ ಕಟೌಟ್​ ನಿರ್ಮಿಸಿದ್ದರು. ಕೇರಳದಲ್ಲಿಯೂ 2018 ರಲ್ಲಿ 35 ಅಡಿ ಎತ್ತರದ ಕಟೌಟ್​ ನಿರ್ಮಿಸಿದ್ದರು.

ಇದನ್ನೂ ಓದಿ MS Dhoni Birthday: 43ನೇ ವಸಂತಕ್ಕೆ ಕಾಲಿಟ್ಟ ಮಹೇಂದ್ರ ಸಿಂಗ್‌ ಧೋನಿ

ಧೋನಿ ಕುರಿತ ಕೆಲವು ಇಂಟರೆಸ್ಟಿಂಗ್‌ ಅಂಶಗಳು


1. ವಿಕೆಟ್‌ ಕೀಪಿಂಗ್‌ನಲ್ಲಿ ಧೋನಿ ವಿಶ್ವದಾಖಲೆ ಹೊಂದಿದ್ದಾರೆ. 2018ರಲ್ಲಿ ಕೇವಲ 0.08 ಸೆಕೆಂಡ್‌ನಲ್ಲಿ ಸ್ಟಂಪ್‌ಔಟ್‌ ಮಾಡುವ ಮೂಲಕ ವೆಸ್ಟ್‌ ಇಂಡೀಸ್‌ನ ಕೀಮೊ ಪೌಲ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು. ಕುಲದೀಪ್‌ ಯಾದವ್‌ ಆಗ ಬೌಲಿಂಗ್‌ ಮಾಡಿದ್ದರು. ಇದು ವಿಶ್ವದಲ್ಲೇ ವೇಗದ ಸ್ಟಂಪಿಂಗ್‌ ಎನಿಸಿದೆ.

2. ಧೋನಿಗೆ ಪೆಟ್ಸ್‌ ಎಂದರೆ ತುಂಬ ಇಷ್ಟ. ಸ್ಯಾಮ್‌, ಲಿಲ್ಲಿ, ಗಬ್ಬರ್‌ ಹಾಗೂ ಜೋಯಾ ಎಂಬ ನಾಲ್ಕು ಶ್ವಾನಗಳನ್ನು ಸಾಕಿದ್ದಾರೆ. ಅಷ್ಟೇ ಅಲ್ಲ, ರಾಂಚಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ Honey ಎಂಬ ಗಿಳಿ, ಚೇತಕ್‌ ಎಂಬ ಕುದುರೆ ಸಾಕಿದ್ದಾರೆ.

3. ಧೋನಿ ಕ್ರಿಕೆಟ್‌ಗೆ ಕಾಲಿಡುವ ಮೊದಲು ಫುಟ್ಬಾಲ್‌ ಆಡುತ್ತಿದ್ದರು. ಬ್ಯಾಡ್ಮಿಂಟನ್‌ ಕೂಡ ಅವರ ನೆಚ್ಚಿನ ಆಟವಾಗಿತ್ತು. ಆದರೆ, ಅವರು ಕ್ರಿಕೆಟ್‌ನಲ್ಲಿ ವೃತ್ತಿಜೀವನ ಆರಂಭಿಸಿದರು. ಮುಂದೆ ಆಗಿದ್ದೆಲ್ಲ ಈಗ ಇತಿಹಾಸ.

4. ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಬೈಕ್‌ಗಳೆಂದರೆ ಪಂಚಪ್ರಾಣ. ಅವರ ಬಳಿ ಒಂದು ಶೋರೂಮ್‌ನಲ್ಲಿರುವಷ್ಟು ಅಂದರೆ, 70 ದುಬಾರಿ ಬೈಕ್‌ಗಳಿವೆ. ಹಾರ್ಲೆ ಡೇವಿಡ್‌ಸನ್‌ನಿಂದ ಹಿಡಿದು ಸುಜುಕಿ ಹಯಬುಸವರೆಗೆ ದುಬಾರಿ ಬೈಕ್‌ಗಳು ಅವರ ಬಳಿ ಇವೆ. ಹಲವು ಐಷಾರಾಮಿ ಕಾರುಗಳನ್ನೂ ಧೋನಿ ಹೊಂದಿದ್ದಾರೆ.

5. ಧೋನಿ ಹೆಚ್ಚಾಗಿ ಮೊಬೈಲ್‌ ಬಳಸುವುದಿಲ್ಲ. ಇನ್ನು ಸಾಮಾಜಿಕ ಜಾಲತಾಣಗಳಿಂದ ಅವರು ಅಂತರ ಕಾಯ್ದುಕೊಳ್ಳುತ್ತಾರೆ. ಟ್ವಿಟರ್‌ನಲ್ಲಿ 80 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಅವರು ಕೊನೆಯ ಬಾರಿ ಟ್ವೀಟ್‌ ಮಾಡಿದ್ದು 2021ರಲ್ಲಿ. ಇನ್‌ಸ್ಟಾಗ್ರಾಂನಲ್ಲಿ 4.38 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ತಾಲಾ, ಫೆಬ್ರವರಿಯಿಂದ ಯಾವುದೇ ವಿಡಿಯೊ ಪೋಸ್ಟ್‌ ಮಾಡಿಲ್ಲ.

Continue Reading
Advertisement
Rain News
ಮಳೆ2 mins ago

Rain News: ಕರಾವಳಿಯಲ್ಲಿ ಮುಂದುವರಿದ ವರುಣನ ಅಬ್ಬರ; ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ

ಕ್ರೀಡೆ5 mins ago

John Cena: ‘ನೆವರ್‌ ಗೀವ್‌ ಅಪ್‌’ ಎಂದಿದ್ದ ಜಾನ್ ಸೀನ ರಸ್ಲಿಂಗ್ ವೃತ್ತಿಜೀವನಕ್ಕೆ ದಿಢೀರ್​ ವಿದಾಯ ಘೋಷಣೆ

Urfi Javed Drunk Struggles To Walk
ಬಾಲಿವುಡ್23 mins ago

Urfi Javed: ಉರ್ಫಿ ಜಾವೇದ್‌ ಫುಲ್‌ ಟೈಟ್‌; ಸ್ನೇಹಿತೆ ಪಟ್ಟ ಹರಸಾಹಸ ಅಷ್ಟಿಷ್ಟಲ್ಲ!

Pavithra Gowda was a challenge for Darshan
ಕ್ರೈಂ55 mins ago

Actor Darshan: ಪವಿತ್ರಾಗೌಡ ಮುನಿಸು ಶಮನ‌‌ ಮಾಡೋದೇ ಚಾಲೆಂಜ್‌ ಆಗಿತ್ತು ದರ್ಶನ್‌ಗೆ!

Vinesh Phogat
ಕ್ರೀಡೆ1 hour ago

Vinesh Phogat: ಕೊನೆಯ ಕ್ಷಣದಲ್ಲಿ ವೀಸಾ ಪಡೆದು ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಟೂರ್ನಿಯಲ್ಲಿ ಚಿನ್ನ ಗೆದ್ದ ವಿನೇಶ್ ಫೋಗಟ್

Road Accident
ಬೆಂಗಳೂರು1 hour ago

Road Accident: ರಾಜಕಾಲುವೆಗೆ ಬಿದ್ದ ಬೈಕ್‌ ಸವಾರನ ಮೃತದೇಹ ಪತ್ತೆ

MS Dhoni Birthday
ಕ್ರೀಡೆ2 hours ago

MS Dhoni Birthday: ಧೋನಿ ನಾಯಕರಾಗಿದ್ದಾಗ ಬಳಸಿದ ಮಹತ್ವದ ಗೆಲುವಿನ ತಂತ್ರಗಳು ಇಲ್ಲಿವೆ

Road Accident
ಕ್ರೈಂ2 hours ago

Road Accident: ಲಾರಿಗೆ ಬೈಕ್‌ ಡಿಕ್ಕಿ ಹೊಡೆದು ಪತ್ರಕರ್ತ ಸಾವು: ಇಬ್ಬರನ್ನು ಬಲಿ ಪಡೆದ ಅಪರಿಚಿತ ಕಾರು

actor darshan wife vijayalakshmi conducted a special pooja at bande mahakali last year goes viral
ಸ್ಯಾಂಡಲ್ ವುಡ್2 hours ago

Actor Darshan: ದರ್ಶನ್‌ಗಾಗಿ ವಿಶೇಷ ಪೂಜೆ ಮಾಡಿಸಿದ್ರಾ ವಿಜಯಲಕ್ಷ್ಮಿ? ಅಸಲಿ ಕಥೆ ಬೇರೆಯೇ ಇದೆ!

MS Dhoni Birthday
ಕ್ರಿಕೆಟ್2 hours ago

MS Dhoni Birthday: ಸಲ್ಮಾನ್​ ಖಾನ್​ ಜತೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಧೋನಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ5 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ16 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ19 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ20 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು22 hours ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ2 days ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 days ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಟ್ರೆಂಡಿಂಗ್‌