Sandalwood theft : ಶ್ರೀಗಂಧ ಕದಿಯಲು ಬಂದವನಿಗೆ ಗುಂಡೇಟು;‌ ಮತ್ತೊಬ್ಬ ಗಾಯಾಳು ಸೇರಿ ಹಲವರು ಪರಾರಿ - Vistara News

ಕ್ರೈಂ

Sandalwood theft : ಶ್ರೀಗಂಧ ಕದಿಯಲು ಬಂದವನಿಗೆ ಗುಂಡೇಟು;‌ ಮತ್ತೊಬ್ಬ ಗಾಯಾಳು ಸೇರಿ ಹಲವರು ಪರಾರಿ

Sandalwood theft : ಕೋಲಾರದಲ್ಲಿ ಅರಣ್ಯಾಧಿಕಾರಿಗಳ ಕಣ್ತಪ್ಪಿಸಿ ಗಂಧ ಕದಿಯಲು ಬಂದ ಚೋರನಿಗೆ ಗುಂಡು ಹಾರಿಸಲಾಗಿದೆ. ನಾಲ್ಕೈದು ಮಂದಿ ಕಾಲ್ಕಿತ್ತಿದ್ದು, ಗುಂಡೇಟು ತಿಂದವನು ಸಿಕ್ಕಿಬಿದ್ದಿದ್ದಾನೆ. ಇತ್ತ ಕಲಬುರಗಿಯಲ್ಲಿ ಕಿಡಿಗೇಡಿಗಳು ಕೋರ್ಟ್‌ ಆವರಣದಲ್ಲೇ ತಳವಾರ್‌ ಹಿಡಿದು ದಾಳಿ ಮಾಡಿದ್ದಾರೆ.

VISTARANEWS.COM


on

sandalwood theft
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲಾರ : ಅರಣ್ಯ ಪ್ರದೇಶದಲ್ಲಿ ಶ್ರೀಗಂಧವನ್ನು ಕದಿಯಲು (Sandalwood theft) ಬಂದವನು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗುಂಡೇಟು ತಿಂದಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಾಶಿಪುರ ಅರಣ್ಯ ಪ್ರದೇಶದಲ್ಲಿ (Kashipura Forest) ಘಟನೆ ನಡೆದಿದೆ.

ತಾಯಲೂರು ಗ್ರಾಮದ ಭತ್ಯಪ್ಪ ಎಂಬಾತ ಕಾಲಿಗೆ ಗುಂಡು ತಗುಲಿದೆ. ಅರಣ್ಯ ಇಲಾಖೆ ರಕ್ಷಕ ಅನಿಲ್ ಗುಂಡು ಹಾರಿಸಿದ್ದಾರೆ. ಶ್ರೀಗಂಧ ಕಳ್ಳತನಕ್ಕೆ ಆಂಧ್ರಪ್ರದೇಶದ ಐದಾರು ಮಂದಿ ಜತೆಗೆ ಭತ್ಯಪ್ಪ ಬಂದಿದ್ದ. ಈ ವೇಳೆ ರಕ್ಷಕ ಅನಿಲ್ ಮೇಲೆ ಹಲ್ಲೆಗೆ ಮುಂದಾಗಿದ್ದ.

ರಕ್ಷಣೆಗಾಗಿ ಭತ್ಯಪ್ಪ ಹಾಗೂ ಮತ್ತೋರ್ವನಿಗೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಭತ್ಯಪ್ಪ ಸಿಕ್ಕಿಬಿದ್ದರೆ ಉಳಿದವರು ಕಾಲ್ಕಿತ್ತಿದ್ದಾರೆ. ಗಾಯಾಳು ಭತ್ಯಪ್ಪಗೆ ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Drowned In water : ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಈಜಲು ಹೋಗಿ ಕೊಚ್ಚಿ ಹೋದ ಮಾಜಿ ಸೈನಿಕ

ಕೋರ್ಟ್‌ ಆವರಣದಲ್ಲೇ ಡೆಡ್ಲಿ ಅಟ್ಯಾಕ್‌

ಕಲಬುರಗಿ ಕೋರ್ಟ್ ಆವರಣದಲ್ಲಿ ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯ ಬೆನ್ನತ್ತಿ ದುಷ್ಕರ್ಮಿಗಳು ತಲವಾರ್‌ನಿಂದ ದಾಳಿ ನಡೆಸಿದ್ದಾರೆ. ಧೀರಜ್ ಎಂಬಾತನ ಮೇಲೆ ತಲವಾರ್‌‌ನಿಂದ ದಾಳಿ ನಡೆಸಿದ್ದಾರೆ.

ತಲವಾರ್ ದಾಳಿಯಿಂದ ಧೀರಜ್‌ ಎಂಬಾತ ಗಾಯಗೊಂಡಿದ್ದು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇತ್ತ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ದುಷ್ಕರ್ಮಿಗಳನ್ನು ಸಾರ್ವಜನಿಕರು ಹಾಗೂ ವಕೀಲರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಸಂಬಂಧ ಪ್ರಶಾಂತ್ ಪಾಟೀಲ್ (20), ವಿರೇಶ್ ಪಾಟೀಲ್ (19), ರಾಮು ಪಾಟೀಲ್ (38) ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕಲಬುರಗಿ ನಗರದ ಬಾಪುನಗರ ಬಡಾವಣೆಯ ನಿವಾಸಿಗಳು ಎನ್ನಲಾಗಿದೆ. ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

CBI Arrest: ರೈಲ್ವೇ ಟೆಂಡರ್‌ನಲ್ಲಿ ಭಾರೀ ಗೋಲ್‌ಮಾಲ್;‌ ಸರ್ಕಾರಿ ಅಧಿಕಾರಿಗಳು ಸಿಬಿಐ ಬಲೆಗೆ

CBI Arrest: ರೈಲ್ವೇ ಟೆಂಡರ್‌ಗೆ ಸಂಬಂಧಿಸಿದಂತೆ ಬರೋಬ್ಬರಿ 11ಲಕ್ಷ ರೂ. ಹಣ ಮತ್ತು ಚಿನ್ನವನ್ನು ಲಂಚವಾಗಿ ಪಡೆದ ಆರೋಪದಲ್ಲಿ ಏಳು ಮಂದಿ ವಿರುದ್ಧ ಕೇಸ್‌ ದಾಖಲಾಗಿತ್ತು. ಇದೀಗ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ ಏಳು ಮಂದಿಯನ್ನು ಅರೆಸ್ಟ್‌ ಮಾಡಿದೆ.

VISTARANEWS.COM


on

CBI Arrest
Koo

ಹೊಸಿದಿಲ್ಲಿ: ರೈಲ್ವೇ ಟೆಂಡರ್‌ನಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಐವರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಬರೋಬ್ಬರಿ ಏಳು ಮಂದಿಯನ್ನು ಕೇಂದ್ರೀಯ ತನಿಖಾ ಸಂಸ್ಥೆ(CBI Arrest) ಅರೆಸ್ಟ್‌ ಮಾಡಿದೆ. ವಿಭಾಗೀಯ ರೈಲ್ವೆ ಮ್ಯಾನೇಜರ್ (DRM), ವಿಭಾಗೀಯ ಹಣಕಾಸು ವ್ಯವಸ್ಥಾಪಕ (Sr. DFM), ನಿವೃತ ಹಿರಿಯ. ವಿಭಾಗೀಯ ಎಂಜಿನಿಯರ್ (Sr. DEN) ಸಮನ್ವಯ, ಕಛೇರಿ ಸೂಪರಿಂಟೆಂಡೆಂಟ್, ದಕ್ಷಿಣ ಮಧ್ಯ ರೈಲ್ವೆಯ ಖಾತೆ ಸಹಾಯಕ, ಗುಂತಕಲ್ ವಿಭಾಗ (ಆಂಧ್ರ ಪ್ರದೇಶ) ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳು ಅವುಗಳೆಂದರೆ ಬೆಂಗಳೂರು ಮೂಲದ ಸಂಸ್ಥೆಯ ನಿರ್ದೇಶಕ (ಖಾಸಗಿ ವ್ಯಕ್ತಿ) ಮತ್ತು ಇನ್ನೊಬ್ಬ ಖಾಸಗಿ ವ್ಯಕ್ತಿಯನ್ನು ಸಿಬಿಐ ಅರೆಸ್ಟ್‌ ಮಾಡಿದೆ.

ರೈಲ್ವೇ ಟೆಂಡರ್‌ಗೆ ಸಂಬಂಧಿಸಿದಂತೆ ಬರೋಬ್ಬರಿ 11ಲಕ್ಷ ರೂ. ಹಣ ಮತ್ತು ಚಿನ್ನವನ್ನು ಲಂಚವಾಗಿ ಪಡೆದ ಆರೋಪದಲ್ಲಿ ಏಳು ಮಂದಿ ವಿರುದ್ಧ ಕೇಸ್‌ ದಾಖಲಾಗಿತ್ತು. ಇದೀಗ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ ಏಳು ಮಂದಿಯನ್ನು ಅರೆಸ್ಟ್‌ ಮಾಡಿದೆ.

ಮತ್ತೊಂದು ಪ್ರಕರಣದಲ್ಲಿ, ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಇನ್ಸ್‌ಪೆಕ್ಟರ್ ಒಬ್ಬರನ್ನು ಗುರುವಾರ ಗುಜರಾತ್‌ನ ರಾಜ್‌ಕೋಟ್‌ನಲ್ಲಿ 2.5 ಲಕ್ಷ ರೂಪಾಯಿ ಲಂಚ ಕೇಳಿ ಸ್ವೀಕರಿಸಿದ ಆರೋಪದ ಮೇಲೆ ಸಿಬಿಐ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನವೀನ್ ಧಂಕರ್ ಅವರು ಕಾನೂನು ಪ್ರಕಾರ ವ್ಯವಹಾರ ನಡೆಸುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯ ಸಂಸ್ಥೆಯಿಂದ ಲಂಚ ಕೇಳಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

“ದಾಖಲೆಗಳಲ್ಲಿ ನಮೂದಿಸಿರುವಂತೆ ಯಾವುದೇ ಸರಕುಗಳನ್ನು ಸಂಸ್ಥೆಯಿಂದ ಹೊರಕ್ಕೆ ಸಾಗಿಸಲಾಗುತ್ತಿಲ್ಲ ಎಂದು ಅವರು ಹೇಳಿದರು. ನಂತರ ಅವರು 2.5 ಲಕ್ಷ ರೂಪಾಯಿ ಲಂಚವನ್ನು ಕೇಳಿದರು ಮತ್ತು ಸಂಸ್ಥೆಯ ಜಿಎಸ್ಟಿ ಸಂಖ್ಯೆಯನ್ನು ರದ್ದುಗೊಳಿಸುವಂತೆ ಬೆದರಿಕೆ ಹಾಕಿದರು” ಎಂದು ಕೇಂದ್ರ ತನಿಖಾ ದಳದ ಪ್ರಕಟಣೆ ತಿಳಿಸಿದೆ.

ದೂರು ಪಡೆದ ನಂತರ ಸಿಬಿಐ ಬಲೆ ಬೀಸಿತ್ತು. ಆ ವೇಳೆ ಧಂಕರ್‌ ಸಿಬಿಐ ಬಲೆಗೆ ಬಿದ್ದಿದರು. ತನಿಖೆಯ ಭಾಗವಾಗಿ ಆರೋಪಿಗಳಿಗೆ ಸಂಪರ್ಕವಿರುವ ರಾಜ್‌ಕೋಟ್‌ನಲ್ಲಿರುವ ಆವರಣವನ್ನು ಶೋಧಿಸಲಾಗುತ್ತಿದೆ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ.

ಕೆಲವು ವಾರಗಳ ಹಿಂದೆ ಸಿಬಿಐ, ಕಸ್ಟಮ್ಸ್, ಮಾದಕ ದ್ರವ್ಯ ಮತ್ತು ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸುತ್ತಿದ್ದ ಗ್ಯಾಂಗ್‌ವೊಂದು ಬಹುರಾಷ್ಟ್ರೀಯ ಕಂಪನಿಯ ನಿವೃತ್ತ ಹಿರಿಯ ಅಧಿಕಾರಿಯೊಬ್ಬರಿಗೆ 85 ಲಕ್ಷ ರೂ. ವಂಚಿಸಿರುವ ಕುರಿತು ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ದೆಹಲಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಣವನ್ನು ಚೆಕ್ ಮೂಲಕ ಪಡೆದ ಗ್ಯಾಂಗ್ ದೆಹಲಿಯ ಉತ್ತಮ್ ನಗರದಲ್ಲಿ ಹೆಚ್‌ಡಿಎಫ್‌ಸಿ ಖಾತೆಯನ್ನು ನಿರ್ವಹಿಸುತ್ತಿದ್ದ ‘ರಾಣಾ ಗಾರ್ಮೆಂಟ್ಸ್’ ಎಂಬ ಕಂಪನಿಗೆ ವರ್ಗಾಯಿಸಿದೆ. ವಿಶಾಖಪಟ್ಟಣಂನಲ್ಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಗ್ಯಾಂಗ್ ‘ರಾಣಾ ಗಾರ್ಮೆಂಟ್ಸ್’ ನಡೆಸುತ್ತಿದ್ದ ಎಚ್‌ಡಿಎಫ್‌ಸಿ ಖಾತೆಯಿಂದ ಭಾರತದಾದ್ಯಂತ 105 ಖಾತೆಗಳಿಗೆ ಈ ಹಣವನ್ನು ವರ್ಗಾಯಿಸಿದೆ. ಈ ಕುರಿತು ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಉತ್ತಮ್ ನಗರ ಶಾಖೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:Project Zorawar: ಚೀನಾಗೆ ಪೆಟ್ಟು ಕೊಡಲು ದೇಶೀಯವಾಗಿ ಯುದ್ಧ ಟ್ಯಾಂಕ್‌ ಉತ್ಪಾದನೆ; ಏನಿವುಗಳ ವಿಶೇಷ?

Continue Reading

ಕ್ರೈಂ

Actor Darshan: ಪವಿತ್ರಾಗೌಡ ಮುನಿಸು ಶಮನ‌‌ ಮಾಡೋದೇ ಚಾಲೆಂಜ್‌ ಆಗಿತ್ತು ದರ್ಶನ್‌ಗೆ!

Actor Darshan: ಪೊಲೀಸ್‌ ತನಿಖೆ ವೇಳೆ ಆರೋಪಿಗಳು ಬೇರೊಬ್ಬರ ಸಿಮ್ ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಮಾಹಿತಿ ಸಂಗ್ರಹಿಸಿ ಪರಿಶೀಲನೆ ವೇಳೆ ಸಿಮ್ ಕಾರ್ಡ್ ರಹಸ್ಯ ಬಯಲಾಗಿದೆ. ಹೇಮಂತ್ ಹೆಸರಿನಲ್ಲಿರುವ ಸಿಮ್‌ವನ್ನು ದರ್ಶನ್‌ ಬಳಸುತ್ತಿದ್ದರೆ, ಪವಿತ್ರಗೌಡ ಅವರು ಮನೋಜ್ ಹೆಸರಿನಲ್ಲಿದ್ದ ಸಿಮ್ ಬಳಸುತ್ತಿದ್ದರು.

VISTARANEWS.COM


on

Pavithra Gowda was a challenge for Darshan
Koo

ಬೆಂಗಳೂರು: ದರ್ಶನ್‌ (Actor Darshan) ಹಾಗೂ ಪವಿತ್ರಾ (Pavithra Gowda) ನ್ಯಾಯಾಂಗ ಬಂಧನಲ್ಲಿದ್ದಾರೆ. ಈ ಕೊಲೆ ಪ್ರಕರಣಕ್ಕೂ ಮುಂಚೆ ದರ್ಶನ್‌ಗೆ ಪವಿತ್ರಾ ಗೌಡಳ ಮುನಿಸು ಹಲವು ಬಾರಿ ಆಪತ್ತು ತಂದು ಒಡ್ಡಿದೆ. ಪವಿತ್ರಾಗೌಡ ಮುನಿಸು ಶಮನ‌‌ ಮಾಡೋದೇ ಒಂದು ಚಾಲೇಂಜ್‌ ಆಗಿತ್ತು ದರ್ಶನ್‌ಗೆ. ಒಂದೊಂದು ಬಾರಿ ಕೋಪಿಸಿಕೊಂಡಾಗಲೂ ಒಂದೊಂದು ರೀತಿಯ ಪರಿಹಾರ ಕೊಡಬೇಕಿತ್ತು. ಲಕ್ಷ ,ಕೋಟಿ ಬೆಲೆ ಬಾಳುವ ವಸ್ತುಗಳೇ ಪವಿತ್ರಗೌಡ ಕೋಪ ಕಡಿಮೆಯಾಗಲು ಬೇಕಿತ್ತು.

ಕೆಲವೇ ದಿನಗಳ ಹಿಂದೆ ಒಂದು ಕಾರ್ ಕೂಡ ದರ್ಶನ್‌ ಅವರು ಪವಿತ್ರಾಗೆ ಗಿಫ್ಟ್‌ ಕೊಟ್ಟಿದ್ದರು ಎನ್ನಲಾಗಿದೆ. ಅನಂತರ‌ ಮತ್ತೊಂದು ಕಾರ್ ಗಿಫ್ಟ್ ಕೂಡ ಪವಿತ್ರಾ ಕೇಳಿದ್ದರಂತೆ. ದರ್ಶನ್ ದುಬೈ ಟ್ರಿಪ್ ಮುಗಿಸಿ ಬರುತ್ತಿದ್ದಂತೆ ಕೋಟಿ ಬೆಲೆಯ ಕಾರಿಗೆ ತೀವ್ರವಾದ ಬೇಡಿಕೆ ಇಟ್ಟಿದ್ದರು. ಕಾರು ಕೊಟ್ಟ ಬಳಿಕ ಇದೀಗ ಒಂದು ಪ್ರಾಣವೇ ಗಿಫ್ಟ್ ಕೊಟ್ಟಂತಾಗಿದೆ.

ದರ್ಶನ್‌ ಪವಿತ್ರಾ ಮುನಿಸು ಶಮನಕ್ಕೆ‌ ರೇಣುಕಾಸ್ವಾಮಿ ಕಿಡ್ನಾಪ್ ಅಸ್ತ್ರವಾಗಿತ್ತು ಎನ್ನಲಾಗಿದೆ. ಆರಂಭದಲ್ಲಿ‌ ಕಾರು ಕೊಡಿಸೋದಕ್ಕೆ ನಟ‌ ದರ್ಶನ್ ನಿರಾಕರಿಸಿದ್ದರು ಎಂಬ ಮಾಹಿಯೂ ಇದೆ. ಅಷ್ಟು ದೊಡ್ಡ ಮಟ್ಟದ ಹಣ ಸದ್ಯ ಇಲ್ಲವೆಂಬ ಕಾರಣ‌ ನೀಡಿ ಕಾರು ಕೊಡಿಸಲು ಬ್ರೇಕ್ ಕೂಡ ಹಾಕಕಿದ್ದರು. ಇದರಿಂದಾಗಿ ಕೋಪಗೊಂಡ ಪವಿತ್ರಾ ಬಹುತೇಕ ಒಂದು ತಿಂಗಳ ಕಾಲ ದರ್ಶನ್ ಬಳಿ ಮಾತು ಬಿಟ್ಟಿದ್ದಳು.

ಈ ಸಮಯದಲ್ಲಿಯೇ ರೇಣುಕಾಸ್ವಾಮಿ‌‌ ಮೆಸೇಜ್ ಅತಿರೇಕವಾಗಿತ್ತು. ಮಾತು ಬಿಟ್ಟಿದ್ದ ಕಾರಣ ದರ್ಶನ್‌‌ಗೆ ವಿಷಯ ತಿಳಿಸದ ಪವಿತ್ರಾ ಗೌಡ, ಈ ವಿಚಾರವನ್ನು ಪವನ್ ಬಳಿ ತಿಳಿಸಿದ್ದಳು. ಆದರೆ ಪವನ್‌ ಈ ವಿಚಾರವನ್ನು ದರ್ಶನ್‌ ಬಳಿ ನೇರವಾಗಿ ಹೇಳಿದ್ದ. ಆ ನಂತರ ನಡೆದದ್ದೇ ರೇಣುಕಾಸ್ವಾಮಿ ಕಿಡ್ನಾಪ್ ಮತ್ತು ಕೊಲೆ‌ ಪ್ರಕರಣ.

ಇದನ್ನೂ ಓದಿ: Actor Darshan: ದರ್ಶನ್‌ಗಾಗಿ ವಿಶೇಷ ಪೂಜೆ ಮಾಡಿಸಿದ್ರಾ ವಿಜಯಲಕ್ಷ್ಮಿ? ಅಸಲಿ ಕಥೆ ಬೇರೆಯೇ ಇದೆ!

ಇದನ್ನೂ ಓದಿ: Dolly Dhananjay: ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ‘ಡಾಲಿ’ ಧನಂಜಯ ಹೀರೊ!

ದರ್ಶನ್ ಬಳಸುತ್ತಿದ್ದ ಸಿಮ್ ಸೀಕ್ರೆಟ್‌ ರಿವೀಲ್

ಪೊಲೀಸ್‌ ತನಿಖೆ ವೇಳೆ ಆರೋಪಿಗಳು ಬೇರೊಬ್ಬರ ಸಿಮ್ ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಮಾಹಿತಿ ಸಂಗ್ರಹಿಸಿ ಪರಿಶೀಲನೆ ವೇಳೆ ಸಿಮ್ ಕಾರ್ಡ್ ರಹಸ್ಯ ಬಯಲಾಗಿದೆ. ಹೇಮಂತ್ ಹೆಸರಿನಲ್ಲಿರುವ ಸಿಮ್‌ವನ್ನು ದರ್ಶನ್‌ ಬಳಸುತ್ತಿದ್ದರೆ, ಪವಿತ್ರಗೌಡ ಅವರು ಮನೋಜ್ ಹೆಸರಿನಲ್ಲಿದ್ದ ಸಿಮ್ ಬಳಸುತ್ತಿದ್ದರು. ಆರೋಪಿ ನಂದೀಶ್ ಅವರು ಹೇಮಂತ್ ಹೆಸರಿನಲ್ಲಿ, ಆರೋಪಿ ಪ್ರದ್ಯೂಷ್ ಖಾಸಗಿ ಕಂಪನಿ ಸೀನಿಯರ್ ಮ್ಯಾನೇಜರ್ ಹೆಸರಿನಲ್ಲಿ, ಆರೋಪಿ ಕಾರ್ತಿಕ್ ಅವರು ವೇಲು ಎಂಬಾತನ ಹೆಸರಲ್ಲಿ, ಕೇಶವಮೂರ್ತಿ ಅರು ಪ್ರಜ್ಞಾ ಎಂ ಹೆಸರಲ್ಲಿ, ನಿಖಿಲ್ ನಾಯಕ್ ಅವರು ಗೀತಾ ಹೆಸರಲ್ಲಿ ಸಿಮ್‌ ಬಳಕೆ ಮಾಡುತ್ತಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.

Continue Reading

ಬೆಂಗಳೂರು

Road Accident: ರಾಜಕಾಲುವೆಗೆ ಬಿದ್ದ ಬೈಕ್‌ ಸವಾರನ ಮೃತದೇಹ ಪತ್ತೆ

Road Accident: ರಾಜಕಾಲುವೆಗೆ ಬಿದ್ದ ಬೈಕ್‌ ಸವಾರನ ಮೃತದೇಹ ಮೂರು ದಿನಗಳ ಬಳಿಕ ಪತ್ತೆಯಾಗಿದೆ. ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಹೇಮಂತ ಕುಮಾರ್ (27) ಜ್ಞಾನ ಭಾರತಿ ಮೆಟ್ರೋ ಸ್ಟೆಷನ್ ಬಳಿ ರಾಜಕಾಲುವೆಗೆ ಬಿದ್ದಿದ್ದರು. ಶುಕ್ರವಾರದಿಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹೇಮಂತ ಕುಮಾರ್‌ಗಾಗಿ ಸತತವಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಬಿದ್ದ ಸ್ಥಳದಲ್ಲಿಯೇ ಯುವಕನ ಮೃತದೇಹ ಪತ್ತೆಯಾಗಿದೆ.

VISTARANEWS.COM


on

Road Accident
Koo

ಬೆಂಗಳೂರು: ರಾಜಕಾಲುವೆ (Rajakaluve)ಗೆ ಬಿದ್ದ ಬೈಕ್‌ ಸವಾರನ ಮೃತದೇಹ ಮೂರು ದಿನಗಳ ಬಳಿಕ ಪತ್ತೆಯಾಗಿದೆ. ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಹೇಮಂತ ಕುಮಾರ್ (27) ಜ್ಞಾನ ಭಾರತಿ ಮೆಟ್ರೋ ಸ್ಟೆಷನ್ ಬಳಿ ರಾಜಕಾಲುವೆಗೆ ಬಿದ್ದಿದ್ದರು. ಡಿವೈಡರ್‌ಗೆ ಗುದ್ದಿದ ಪರಿಣಾಮ ಹೇಮಂತ ಕುಮಾರ್ ಚಿಮ್ಮಿ ವೃಷಭಾವತಿ ನದಿ‌ ರಾಜಕಾಲುವೆ ಒಳಗೆ ಬಿದ್ದಿದ್ದರು. ವೇಗವಾಗಿ ಬೈಕ್‌ ಚಲಾಯಿಸಿದ್ದರಿಂದ, ಬೈಕ್‌ ಡಿವೈಡರ್‌ಗೆ ಗುದ್ದಿದ ಪರಿಣಾಮ ಅವರು ಚಿಮ್ಮಿ ರಾಜಕಾಲುವೆ ಒಳಗೆ ಬಿದ್ದಿದ್ದಾರೆ ಎಂದು ಊಹಿಸಲಾಗಿದೆ. ಸಣ್ಣದಾಗಿ ಮಳೆ ಬರುತ್ತಿದ್ದುದರಿಂದ ಡಿವೈಡರ್‌ ಗುರುತಿಸಲು ಸಾಧ್ಯವಾಗದೆ ಈ ಅವಘಡ ಸಂಭವಿಸಿದೆ. ಆದರೆ ಮೂರು ದಿನಗಳಿಂದ ಅವರು ಪತ್ತೆಯಾಗಿರಲಿಲ್ಲ. ಇದೀಗ ಮೃತದೇಹ ಕಂಡು ಬಂದಿದೆ (Road Accident).

ಸತತ ಶೋಧ ಕಾರ್ಯ

ಶುಕ್ರವಾರದಿಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹೇಮಂತ ಕುಮಾರ್‌ಗಾಗಿ ಸತತವಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಬಿದ್ದ ಸ್ಥಳದಲ್ಲಿಯೇ ಯುವಕನ ಮೃತದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಮೃತದೇಹವನ್ನು ಮೇಲಕ್ಕೆ ಎತ್ತಿ ಅಂಬ್ಯುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

ಯಾದಗಿರಿ: ಬಾವಿಗೆ ಎಸೆದು ಹಸುಗೂಸನ್ನು ಕೊಲೆ (Murder case) ಮಾಡಲಾಗಿದೆ. ಯಾದಗಿರಿ ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಮೀನಾಕ್ಷಿ (2 ತಿಂಗಳು) ಮೃತ ದುರ್ದೈವಿ. ನಾಗೇಶ್ ಹಾಗೂ ಚಿಟ್ಟೆಮ್ಮ ದಂಪತಿಯ ಮಗು ಮೀನಾಕ್ಷಿಯನ್ನು ಕೊಲೆ ಯಾರು ಮಾಡಿದ್ದಾರೆ? ಯಾಕೆ‌‌ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಬಡಾವಣೆಯ ಹೊರ ಭಾಗದ ನಿರ್ಜನ ಪ್ರದೇಶದಲ್ಲಿರುವ ಬಾವಿಗೆ ಬಿಸಾಡಿ ಹೋಗಿದ್ದಾರೆ.

ಹೆಣ್ಣು ಮಗು ಎಂಬ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಮಗುವಿನ ಪೋಷಕರು ಕಣ್ಣೀರು ಹಾಕುತ್ತಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಯಾದಗಿರಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಲ್ಲಿದ್ದ ಮೃತದೇಹವನ್ನು ಮೇಲೆ ಎತ್ತಿದ್ದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಯಾದಗಿರಿ ನಗರ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಬನ್ನೇರುಘಟ್ಟ ಸಫಾರಿ ವೇಳೆ ಸಿಬ್ಬಂದಿ ಮೇಲೆ ಕರಡಿ ದಾಳಿ

ಬೆಂಗಳೂರು ಗ್ರಾಮಾಂತರ: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ ವೇಳೆ ಕರಡಿಯೊಂದು (Bear Attack) ಸಿಬ್ಬಂದಿ ಮೇಲೆ ದಾಳಿ (Wild Animal Attack) ಮಾಡಿದೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಘಟನೆ ನಡೆದಿದೆ.ಬೆಟ್ಟಪ್ಪ (54) ಕರಡಿ ದಾಳಿಗೊಳಗಾದವರು. ಬೆಟ್ಟಪ್ಪ ಕಳೆದ ಇಪ್ಪತ್ತು ವರ್ಷಗಳಿಂದ ಬನ್ನೇರುಘಟ್ಟದಲ್ಲಿ ಸಫಾರಿಯ ಗೇಟ್‌ ಆಪರೇಟರ್‌ ಕೆಲಸ ಮಾಡುತ್ತಿದ್ದಾರೆ. ಶನಿವಾರ ಸಫಾರಿಯಲ್ಲಿ ಗೇಟ್ ಆಪರೇಟ್ ಮಾಡುವಾಗ ಏಕಾಏಕಿ ಕರಡಿ ದಾಳಿ ಮಾಡಿದೆ. ಬೆಟ್ಟಪ್ಪ ಗಂಭೀರ ಗಾಯಗೊಂಡಿದ್ದು. ಅಪೋಲೋ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಾವು ಬದುಕಿನ ನಡುವೆ ಬೆಟ್ಟಪ್ಪ ಹೋರಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ | Viral News: ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಆ ʼಅಂಗʼಕ್ಕೆ ಕತ್ತರಿ ಹಾಕಿದ ಪ್ರಿಯತಮೆ

Continue Reading

ಕ್ರೈಂ

Road Accident: ಲಾರಿಗೆ ಬೈಕ್‌ ಡಿಕ್ಕಿ ಹೊಡೆದು ಪತ್ರಕರ್ತ ಸಾವು: ಇಬ್ಬರನ್ನು ಬಲಿ ಪಡೆದ ಅಪರಿಚಿತ ಕಾರು

Road Accident: ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮಂಡ್ಯದಲ್ಲಿ ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿ ಹೊಡೆದು ಸ್ಥಳದಲ್ಲೇ ಪ್ರತಕರ್ತರೊಬ್ಬರು ಅಸುನೀಗಿದರೆ ಚಾಮರಾಜನಗರದಲ್ಲಿ ಹಿಟ್ ಆ್ಯಂಡ್ ರನ್‌ಗೆ ಎರಡು ಜೀವಗಳು ಬಲಿಯಾಗಿವೆ. ಮೃತ ಪತ್ರಕರ್ತರನ್ನು ಬಿ.ಎ.ಮಧು ಕುಮಾರ್ ಎಮದು ಗುರುತಿಸಲಾಗಿದೆ.

VISTARANEWS.COM


on

Road Accident
Koo

ಮಂಡ್ಯ / ಚಾಮರಾಜನಗರ: ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮಂಡ್ಯದಲ್ಲಿ ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿ ಹೊಡೆದು ಸ್ಥಳದಲ್ಲೇ ಪ್ರತಕರ್ತರೊಬ್ಬರು ಅಸುನೀಗಿದರೆ ಚಾಮರಾಜನಗರದಲ್ಲಿ ಹಿಟ್ ಆ್ಯಂಡ್ ರನ್‌ಗೆ ಎರಡು ಜೀವಗಳು ಬಲಿಯಾಗಿವೆ (Road Accident)

ಮಂಡ್ಯ: ಪತ್ರಕರ್ತ ಸಾವು

ಶನಿವಾರ ರಾತ್ರಿ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಟಿ.ಬಿ.ವೃತ್ತದಲ್ಲಿ ನಿಂತಿದ್ದ ಲಾರಿಯ ಹಿಂಬದಿಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಪತ್ರಕರ್ತ ಬಿ.ಎ.ಮಧು ಕುಮಾರ್ (34) ಮೃತಪಟ್ಟಿದ್ದಾರೆ. ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ವಾಸವಿದ್ದ ಮೃತ ಮಧು ಕುಮಾರ್ ಅವರು ಪ್ರಾದೇಶಿಕ ದಿನಪತ್ರಿಕೆ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ಮದ್ದೂರು ಟಿ.ಬಿ. ವೃತ್ತದ ಬಳಿ ನಿಂತಿದ್ದ ಲಾರಿಯ ಹಿಂಬದಿಗೆ ಮಧು ಕುಮಾರ್‌ ಚಲಾಯಿಸುತ್ತಿದ್ದ ಬೈಕ್‌ ಡಿಕ್ಕಿಯಾಗಿ ಈ ಅನಾಹುತ ಸಂಭವಿಸಿತ್ತು. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ: ಹಿಟ್ ಆ್ಯಂಡ್ ರನ್

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಹಿಟ್ ಆ್ಯಂಡ್ ರನ್ ಕೇಸ್‌ಗೆ ಎರಡು ಜೀವಗಳು ಬಲಿಯಾಗಿವೆ. ಬೈಕ್‌ಗೆ ಅಪರಿಚಿತ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಸೋಮಹಳ್ಳಿ ಗ್ರಾಮದ ಮಹಾದೇವಸ್ವಾಮಿ, ನಾಗೇಂದ್ರ ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಬಳಿಕ ಕಾರನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದ. ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳು ಗುಂಡ್ಲುಪೇಟೆ ಆಸ್ಪತ್ರೆಗೆ ರವಾನಿಸಲಾಗಿದೆ.

ಬೆಂಗಳೂರು: ಬೈಕ್ ಸವಾರನಿಗಾಗಿ ಶೋಧ ಕಾರ್ಯ

ಬೆಂಗಳೂರು: ಡಿವೈಡರ್‌ಗೆ ಡಿಕ್ಕಿ ಹೊಡೆದು ರಾಜಕಾಲುಗೆ ಬಿದ್ದ ಬೈಕ್ ಸವಾರನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಮೈಸೂರು ರಸ್ತೆ ಯೂನಿವರ್ಸಿಟಿ ಗೇಟ್‌ನಿಂದ ಕೆಂಗೇರಿ ಮಾರ್ಗದಲ್ಲಿ ಶೋಧ ನಡೆಸಲಾಗುತ್ತಿದೆ. ಶುಕ್ರವಾರ ರಾತ್ರಿ ಬೈಕ್ ಸವಾರ ಹೇಮಂತ್ ರಾಜಕಾಲುವೆಗೆ ಬಿದ್ದಿದ್ದರು. ಬೈಕ್ ಸವಾರ ಹೇಮಂತ್‌ಗಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸುಮಾರು 25 ಗಂಟೆಗೂ ಹೆಚ್ಚು ಸಮಯದಿಂದ ಶೋಧ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ವೃಷಭಾವತಿ ಕಾಲುವೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಶುಕ್ರವಾರ ರಾತ್ರಿ 10.30 ಸುಮಾರಿಗೆ ಹೇಮಂತ್‌ ರಾಜಕಾಲುಗೆ ಬಿದ್ದಿದ್ದರು.

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ರಾತ್ರಿ ಸುಮಾರು 10:30ಕ್ಕೆ ಈ ದುರ್ಘಟನೆ ನಡೆದಿದೆ. ಜ್ಞಾನ ಭಾರತಿ ಮೆಟ್ರೋ ಸ್ಟೆಷನ್ ಬಳಿ ವೇಗವಾಗಿ ಬೈಕ್‌ ಚಲಾಯಿಸಿದ್ದರಿಂದ, ಬೈಕ್‌ ಡಿವೈಡರ್‌ಗೆ ಗುದ್ದಿದ ಪರಿಣಾಮ ಸವಾರ ಚಿಮ್ಮಿ ರಾಜಕಾಲುವೆ ಒಳಗೆ ಬಿದ್ದಿದ್ದಾರೆ. ಸಣ್ಣದಾಗಿ ಮಳೆ ಬರುತ್ತಿದ್ದುದರಿಂದ ಡಿವೈಡರ್‌ ಗುರುತಿಸಲು ಸಾಧ್ಯವಾಗಿರಲಿಕ್ಕಿಲ್ಲ. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿಯನ್ನು ಕರೆಸಿ ಕಾರ್ಯಾಚರಣೆ ನಡೆಸಲಾಯಿತಾದರೂ, ಸವಾರನ ಪತ್ತೆಯಾಗಲಿಲ್ಲ. ರಾಜಕಾಲುವೆಯಲ್ಲಿ ಸುಮಾರು 4 ಅಡಿ ನೀರು ತುಂಬಿದ್ದು, ಈ ನೀರಿನಲ್ಲಿ ವ್ಯಕ್ತಿ ಕೊಚ್ಚಿ ಹೋಗಲು ಸಾಧ್ಯವೇ ಎಂಬ ಅನುಮಾನವೂ ಮೂಡಿದೆ.

ಇದನ್ನೂ ಓದಿ: Road Accident : ಶಿವಮೊಗ್ಗದಲ್ಲಿ ಕಾರುಗಳ ನಡುವೆ ಭೀಕರ ಅಪಘಾತ; ಮೂವರು ಸಾವು, ಮತ್ತಿಬ್ಬರು ಗಂಭೀರ

Continue Reading
Advertisement
Gautam Gambhir
ಕ್ರೀಡೆ17 mins ago

Gautam Gambhir: ಕೆಕೆಆರ್ ತಂಡದ ಮೆಂಟರ್​ ಸ್ಥಾನಕ್ಕೆ ಗಂಭೀರ್​ ರಾಜೀನಾಮೆ?; ಕೋಚ್​ ಆಗುವುದು ಖಚಿತ

Wild Animals Attack
ವಿಜಯನಗರ22 mins ago

Wild Animals Attack: ವಿಜಯನಗರ: ನಾಡಿಗೆ ನುಗ್ಗಿದ ಕರಡಿಯನ್ನು ರಾತ್ರೋರಾತ್ರಿ ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

Actor Darshan case Fingerprint match of accused in Renukaswamy case
ಸ್ಯಾಂಡಲ್ ವುಡ್29 mins ago

Actor Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚ್; ಸ್ಫೋಟಕ ಮಾಹಿತಿ ಬಹಿರಂಗ!

Gold Rate Today
ಕರ್ನಾಟಕ31 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಸ್ವರ್ಣ ಪ್ರಿಯರಿಗೆ ಕೊಂಚ ನಿರಾಳ

Short Circuit
ಕರ್ನಾಟಕ46 mins ago

Short Circuit: ಮೈಸೂರು ವಿವಿ ಸಂಶೋಧಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌

IND vs ZIM
ಕ್ರೀಡೆ1 hour ago

IND vs ZIM: ಗೆಲುವಿನ ಹಾದಿಗೆ ಮರಳುವುದೇ ಶುಭಮನ್​ ಗಿಲ್​ ಪಡೆ?; ಇಂದು ದ್ವಿತೀಯ ಟಿ20

Raj Tarun’s Heroine Malvi Malhotra Files Complaint
ಟಾಲಿವುಡ್1 hour ago

Raj Tarun: ಯುವ ನಟ ರಾಜ್ ತರುಣ್ ಮಾಜಿ ಪ್ರೇಯಸಿ ವಿರುದ್ಧ ದೂರು ದಾಖಲಿಸಿದ ನಟಿ!

CBI Arrest
ದೇಶ2 hours ago

CBI Arrest: ರೈಲ್ವೇ ಟೆಂಡರ್‌ನಲ್ಲಿ ಭಾರೀ ಗೋಲ್‌ಮಾಲ್;‌ ಸರ್ಕಾರಿ ಅಧಿಕಾರಿಗಳು ಸಿಬಿಐ ಬಲೆಗೆ

Rain News
ಮಳೆ2 hours ago

Rain News: ಕರಾವಳಿಯಲ್ಲಿ ಮುಂದುವರಿದ ವರುಣನ ಅಬ್ಬರ; ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ

ಕ್ರೀಡೆ2 hours ago

John Cena: ‘ನೆವರ್‌ ಗೀವ್‌ ಅಪ್‌’ ಎಂದಿದ್ದ ಜಾನ್ ಸೀನ ರಸ್ಲಿಂಗ್ ವೃತ್ತಿಜೀವನಕ್ಕೆ ದಿಢೀರ್​ ವಿದಾಯ ಘೋಷಣೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ6 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ18 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ21 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ22 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ2 days ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 days ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಟ್ರೆಂಡಿಂಗ್‌