David Miller : ಸೋಲಿನ ಬೇಸರದಲ್ಲಿ ವಿದಾಯ ಹೇಳಿದರೇ ಮಿಲ್ಲರ್​​; ದಕ್ಷಿಣ ಆಫ್ರಿಕಾ ಆಟಗಾರನ ಪ್ರತಿಕ್ರಿಯೆ ಏನು? - Vistara News

ಪ್ರಮುಖ ಸುದ್ದಿ

David Miller : ಸೋಲಿನ ಬೇಸರದಲ್ಲಿ ವಿದಾಯ ಹೇಳಿದರೇ ಮಿಲ್ಲರ್​​; ದಕ್ಷಿಣ ಆಫ್ರಿಕಾ ಆಟಗಾರನ ಪ್ರತಿಕ್ರಿಯೆ ಏನು?

David Miller : ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಭರವಸೆ ಭಗ್ನಗೊಂಡಿತ್ತು. ದಕ್ಷಿಣ ಆಫ್ರಿಕಾ ಫೈನಲ್​​ನಲ್ಲಿ ಭಾರತದ ವಿರುದ್ಧ 7 ರನ್​ಗಳ ಸೋಲು ಅನುಭವಿಸಿತ್ತು. ಪಂದ್ಯದ ಅಂತಿಮ ಕ್ಷಣಗಳಲ್ಲಿ ದಕ್ಷಿಣ ಆಫ್ರಿಕಾ ಕೈಚೆಲ್ಲಿತ್ತು. ಅದರಲ್ಲೂ ಡೇವಿಡ್ ಮಿಲ್ಲರ್​​ ಕೊನೇ ಓವರ್​​ನ ಮೊದಲ ಎಸೆತಕ್ಕೆ ಔಟಾಗಿದ್ದರು. ಇದು ಅವರಿಗೆ ಬೇಸರ ಮೂಡಿಸಿತ್ತು.

VISTARANEWS.COM


on

David Miller :
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರ ಫೈನಲ್​​ನಲ್ಲಿ ಆಘಾತಕಾರಿ ಸೋಲಿನ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಡೇವಿಡ್ ಮಿಲ್ಲರ್ ಟಿ 20ಯಿಂದ ನಿವೃತ್ತರಾಗುವ ವದಂತಿಗಳು ಬಂದಿದ್ದವು. ಅದಕ್ಕವರು ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಭರವಸೆ ಭಗ್ನಗೊಂಡಿತ್ತು. ದಕ್ಷಿಣ ಆಫ್ರಿಕಾ ಫೈನಲ್​​ನಲ್ಲಿ ಭಾರತದ ವಿರುದ್ಧ 7 ರನ್​ಗಳ ಸೋಲು ಅನುಭವಿಸಿತ್ತು. ಪಂದ್ಯದ ಅಂತಿಮ ಕ್ಷಣಗಳಲ್ಲಿ ದಕ್ಷಿಣ ಆಫ್ರಿಕಾ ಕೈಚೆಲ್ಲಿತ್ತು. ಅದರಲ್ಲೂ ಡೇವಿಡ್ ಮಿಲ್ಲರ್​​ ಕೊನೇ ಓವರ್​​ನ ಮೊದಲ ಎಸೆತಕ್ಕೆ ಔಟಾಗಿದ್ದರು. ಇದು ಅವರಿಗೆ ಬೇಸರ ಮೂಡಿಸಿತ್ತು.

15ನೇ ಓವರ್​ನಲ್ಲಿ ಅಕ್ಷರ್ ಪಟೇಲ್ ಓವರ್​ಗೆ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಬಾರಿಸುವ ಮೂಲಕ ಹೆನ್ರಿಚ್​ ಕ್ಲಾಸೆನ್​ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವಿನ ಅವಕಾಶ ತಂದುಕೊಟ್ಟಿದ್ದರು. 16ನೇ ಓವರ್ ಮುಗಿದಾಗ ದಕ್ಷಿಣ ಆಫ್ರಿಕಾಕ್ಕೆ ಅಂತಿಮ ನಾಲ್ಕು ಓವರ್​ಗಳಲ್ಲಿ ಕೇವಲ 26 ರನ್​ಗಳನ್ನು ಬಾರಿಸಬೇಕಿತ್ತು.

ಇದನ್ನೂ ಓದಿ: IPL 2025 : ಐಪಿಎಲ್​ ತಂಡಗಳಲ್ಲಿ ಉಳಿಸಿಕೊಳ್ಳುವ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ

ಕ್ಲಾಸೆನ್ 17 ನೇ ಓವರ್​ನ ಮೊದಲ ಎಸೆತದಲ್ಲೇ ಔಟಾದರು. ಈ ವೇಳೆ ತಂಡವನ್ನು ಗುರಿ ಮುಟ್ಟಿಸುವ ಕೆಲಸ ಡೇವಿಡ್ ಮಿಲ್ಲರ್ ಅವರ ಹೆಗಲ ಮೇಲಿತ್ತು. ಅಂತಿಮವಾಗಿ ಅಂತಿಮ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಎದುರಿಸಿದ ಅನುಭವಿ ಬ್ಯಾಟರ್​​ 16 ರನ್​​ಗಳಿಗೆ ಔಟಾದರು. 20ನೇ ಓವರ್​ನ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಪಾಂಡ್ಯ ಅವರ ಲೋ ಫುಲ್ ಟಾಸ್ ಅನ್ನು ನೇರವಾಗಿ ಹೊಡೆದರು. ಸೂರ್ಯಕುಮಾರ್ ಯಾದವ್ ರೋಚಕ ಕ್ಯಾಚ್ ಅನ್ನು ಹಿಡಿದು ಮಿಲ್ಲರ್ ಅವರನ್ನು ಹಿಂದಕ್ಕೆ ಕಳುಹಿಸಿದರು. ಭಾರತವು ಪಂದ್ಯವನ್ನು 7 ರನ್​ಗಳಿಂದ ಗೆದ್ದಿತು. ಒಂದು ಹಂತದಲ್ಲಿ ಗೆಲುವು ದಕ್ಷಿಣ ಆಫ್ರಿಕಾಗೆ ಎಂದು ತೋರುತ್ತಿತ್ತು. ಅಂತಿಮವಾಗಿ ಭಾರತದ ಪರವಾಯಿತು.

ನಿವೃತ್ತಿ ವದಂತಿಗಳ ಬಗ್ಗೆ ಡೇವಿಡ್ ಮಿಲ್ಲರ್ ಹೇಳಿಕೆಯೇನು?

ದಕ್ಷಿಣ ಆಫ್ರಿಕಾ ಸೋಲಿನ ಬಳಿಕ ಡೇವಿಡ್ ಮಿಲ್ಲರ್ ಟಿ20 ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎಂಬ ವದಂತಿಗಳು ಹರಿದಾಡಿದವು. 35 ವರ್ಷದ ಆಟಗಾರ ಕ್ರಿಕೆಟ್​​ನ ಕಿರು ಸ್ವರೂಪದಿಂದ ನಿವೃತ್ತರಾಗಿದ್ದಾರೆ ಎಂದು ವದಂತಿಗಳು ತಿಳಿಸಿವೆ. ಆದಾಗ್ಯೂ, ಡೇವಿಡ್ ಮಿಲ್ಲರ್ ಮಂಗಳವಾರ (ಜುಲೈ 2) ಆ ವದಂತಿಗಳನ್ನು ತಳ್ಳಿಹಾಕಿದರು ಮತ್ತು ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಟಿ 20 ಪಂದ್ಯಗಳನ್ನು ಆಡಲು ಲಭ್ಯವಿರುವುದಾಗಿ ಹೇಳಿದರು.

ಕೆಲವು ವರದಿಗಳ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ. ನಾನು ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿಲ್ಲ. ನಾನು ದಕ್ಷಿಣ ಆಫ್ರಿಕಾ ಪರ ಆಡಲು ಲಭ್ಯವಿದ್ದೇನೆ. ಅತ್ಯುತ್ತಮ ಫಲಿತಾಂಶ ಇನ್ನೂ ಬರಬೇಕಿದೆ ಎಂದು ಡೇವಿಡ್ ಮಿಲ್ಲರ್ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ZIM vs IND : ಭಾರತ ತಂಡಕ್ಕೆ 100 ರನ್​ ಭರ್ಜರಿ ಜಯ, ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ 1-1 ಸಮಬಲ ಸಾಧನೆ

VISTARANEWS.COM


on

ZIM vs IND
Koo

ಹರಾರೆ: ಬ್ಯಾಟಿಂಗ್​ನಲ್ಲಿ ಅಭಿಷೇಕ್​ ಶರ್ಮಾ (100 ರನ್​, 47 ಎಸೆತ, 7 ಫೋರ್, 8 ಸಿಕ್ಸರ್​) ಬಾರಿಸಿದ ಅಮೋಘ ಶತಕ ಹಾಗೂ ಬೌಲಿಂಗ್​ನಲ್ಲಿ ಮುಕೇಶ್​ ಕುಮಾರ್ ಹಾಗೂ ಅವೇಶ್​ ಖಾನ್​ ಅವರ ತಲಾ 3 ವಿಕೆಟ್​ ಸಾಧನೆಯಿಂದ ಮಿಂಚಿದ ಭಾರತ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ (ZIM vs IND) ಎರಡನೇ ಪಂದ್ಯದಲ್ಲಿ 100 ರನ್​ ಭರ್ಜರಿ ವಿಜಯ ದಾಖಲಿಸಿದೆ. ಈ ಮೂಲಕ ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧನೆ ಮಾಡಿದೆ. ಮೊದಲ ಪಂದ್ಯದಲ್ಲಿ 13 ರನ್​ಗಳ ಹೀನಾಯ ಸೋಲಿಗೆ ಒಳಗಾಗಿ ಅವಮಾನಕ್ಕೆ ಈಡಾಗಿದ್ದ ವಿಶ್ವ ಚಾಂಪಿಯನ್​ ಮೆನ್​ ಇನ್ ಬ್ಲ್ಯೂ ಬಳಗ ಎರಡನೇ ಪಂದ್ಯದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು.

ಇಲ್ಲಿನ ಹರಾರೆ ಸ್ಪೋರ್ಟ್ಸ್​​ ಕ್ಲಬ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 234 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಆತಿಥೇಯ ಜಿಂಬಾಬ್ವೆ ಬಳಗ 18. 4 ಓವರ್​ಗಳಲ್ಲಿ 134 ರನ್​ಗಳಿಗೆ ಆಲ್​ಔಟ್ ಆಯಿತು.

ಮಾರಕ ಬೌಲಿಂಗ್​

ಭಾರತದ ಬ್ಯಾಟರ್​ಗಳು ದೊಡ್ಡ ಮೊತ್ತವನ್ನು ಪೇರಿಸಿದ್ದ ಕಾರಣ ಬೌಲರ್​ಗಳಿಗೆ ತಮ್ಮ ಪ್ರತಾಪ ತೋರಿಸಲು ಅನುಕೂಲವಾಯಿತು. ಆರಂಭದಿಂದಲೇ ಆತಿಥೇಯ ತಂಡದ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಇನ್ನೋಸೆಂಟ್​ ಕೈಯಾ 4 ರನ್ ಬಾರಿಸಿ ಮುಕೇಶ್ ಎಸೆತಕ್ಕೆ ಔಟಾದರು. ಆದರೆ, ಅ ಬಳಿಕ ವೆಸ್ಲಿ ಮಧೆವೆರೆ (43 ರನ್​) ಹಾಗೂ ಬ್ರಿಯಾನ್ ಬೆನೆಟ್ (26 ರನ್​) ಭಾರತದ ಬೌಲರ್​ಗಳನ್ನು ಸ್ವಲ್ಪ ಹೊತ್ತು ಕಾಡಿದರು. ಆದರೆ, ಬ್ರಿಯಾನ್ ಮುಕೇಶ್ ಎಸೆತಕ್ಕೆ ಔಟಾದ ಬಳಿಕ ಡಿಯಾನ್ ಮೈರ್ಸ್​ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಾಯಕ ಸಿಕಂದರ್​ ರಾಜಾ 4 ರನ್​ಗೆ ಔಟಾದರು. ಇವರಿಬ್ಬರೂ ಆವೇಶ್​ ಖಾನ್​ ಬೌಲಿಂಗ್​ಗೆ ಬಲಿಯಾದರು. ಇದಾದ ಬಳಿಕ ಜಿಂಬಾಬ್ವೆ ಆಟಗಾರರ ಪ್ರತಾಪ ಕಡಿಮೆಯಾಯಿತು. ಕ್ಯಾಂಪ್​ಬೆಲ್​ 10 ರನ್​, ಮಂಡಂಡೆ ಶೂನ್ಯಕ್ಕೆ ಹಾಗೂ ಮಸಕಡ್ಸಾ 1 ರನ್​ಗೆ ಔಟಾಗುವ ಮೂಲಕ ಭಾರತ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು. ಲ್ಯೂಕ್​ ಲ್ಯಾಂಗ್​ವೇ ಕೊನೆಯಲ್ಲಿ 33 ರನ್ ಬಾರಿಸಿದರೂ ಭಾರತದ ರನ್​ ಮೊತ್ತವನ್ನು ಸಮೀಪಿಸಲೂ ಅವರಿಗೆ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Rahul Dravid : ರಾಹುಲ್ ದ್ರಾವಿಡ್​ಗೆ ಭಾರತ ರತ್ನ ಕೊಡಿ; ಕೇಂದ್ರ ಸರ್ಕಾರಕ್ಕೆ ಗವಾಸ್ಕರ್ ಮನವಿ

ಅಭಿಷೇಕ್​ ಅಬ್ಬರ

ಮೊದಲು ಬ್ಯಾಟ್ ಮಾಡಿದ ಭಾರತ ಪರ ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಶುಭ್​ಮನ್ ಗಿಲ್​ 2 ರನ್​ಗೆ ಔಟಾದ ಹೊರತಾಗಿಯೂ ಅವರು ತಮ್ಮ ಹೊಡೆಬಡಿಯ ಬ್ಯಾಟಿಂಗ್ ಪ್ರದರ್ಶನ ನಿಲ್ಲಿಸಲಿಲ್ಲ. ತಾವೆದರುಸಿದ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿ ರನ್ ಕದಿಯಲು ಆರಂಭಿಸಿದ ಅವರು 34 ಎಸೆತಕ್ಕೆ ಅರ್ಧ ಶತಕ ಹಾಗೂ ನಂತರ 13 ಎಸೆತಗಳಲ್ಲಿ 50 ರನ್ ಬಾರಿಸಿ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿದರು. ಆದರೆ, ನಂತರದ ಎಸೆತದಲ್ಲಿಯೇ ಔಟಾದರು. ಅದಕ್ಕಿಂತ ಮೊದಲು ಅವರು ಎರಡನೇ ವಿಕೆಟ್​ಗೆ ಋತುರಾಜ್ ಗಾಯಕ್ವಾಡ್ ಜತೆಗೆ 137ರನ್​ಗಳ ಜತೆಯಾಟ ಆಡಿದರು. ಶರ್ಮಾ ಔಟಾದ ಬಳಿಕ ಆಡಲು ಬಂದ ರಿಂಕು ಸಿಂಗ್​ ಇನ್ನಷ್ಟು ಅಬ್ಬರಿಸಿದರು. ಅವರು 22 ಎಸೆತಕ್ಕೆ 48 ರನ್ ಬಾರಿಸಿ ಮಿಂಚಿದರು. ಅದಕ್ಕಿಂತ ಮೊದಲು ಸಾವಧಾನವಾಗಿ ಇನಿಂಗ್ಸ್ ಕಟ್ಟಿದ ಋತುರಾಜ್ ಗಾಯಕ್ವಾಡ್​ 47 ಎಸೆತಕ್ಕೆ 77 ರನ್ ಹೊಡೆದರು. ಅವರ ಇನಿಂಗ್ಸ್​​ನಲ್ಲಿ 11 ಫೋರ್ ಹಾಗೂ 1 ಸಿಕ್ಸರ್ ಇತ್ತು.

ಸರಣಿಯ ಮೂರನೇ ಪಂದ್ಯ ಬುಧವಾರ (ಜುಲೈ 10ರಂದು) ನಡೆಯಲಿದೆ.

Continue Reading

ದೇಶ

Mobile Tariffs: ಜಿಯೋ, ಏರ್‌ಟೆಲ್‌, VI ರಿಚಾರ್ಜ್‌ ಶುಲ್ಕ ಕಡಿಮೆ ಮಾಡಲಿದ್ದಾರಾ ಮೋದಿ? ಇಲ್ಲಿದೆ ಕೇಂದ್ರದ ಸ್ಪಷ್ಟನೆ

Mobile Tariffs: ಭಾರತದಲ್ಲಿ ಸುಮಾರು 45 ಕೋಟಿಗೂ ಅಧಿಕ ಜನ ರಿಲಯನ್ಸ್‌ ಜಿಯೋ ಬಳಸುತ್ತಾರೆ. ಹಾಗಾಗಿ, ಇದು ದೇಶದಲ್ಲೇ ಬೃಹತ್‌ ಟೆಲಿಕಾಮ್‌ ಕಂಪನಿ ಎನಿಸಿದೆ. ಈಗ ರಿಲಯನ್ಸ್‌ ಜಿಯೋ ಪ್ಲಾನ್‌ಗಳ ಬೆಲೆಯನ್ನು ಶೇ.20ರಷ್ಟು ಏರಿಕೆ ಮಾಡಿದ್ದು, ಕೋಟ್ಯಂತರ ಗ್ರಾಹಕರಿಗೆ ಹೊರೆಯಾಗುತ್ತಿದೆ. ಏರ್‌ಟೆಲ್‌, ವೋಡಾಫೋನ್-ಐಡಿಯಾ ಸಂಸ್ಥೆಗಳು ಕೂಡ ಬೆಲೆಯೇರಿಕೆ ಮಾಡಿವೆ.

VISTARANEWS.COM


on

Mobile Tariffs
Koo

ನವದೆಹಲಿ: ದೇಶದ ಟೆಲಿಕಾಂ ಕಂಪನಿಗಳು ಕಳೆದ ಕೆಲ ದಿನಗಳಿಂದ ಗ್ರಾಹಕರಿಗೆ ಬೆಲೆಯೇರಿಕೆಯ ಬಿಸಿ ಮುಟ್ಟಿಸಿವೆ. ರಿಲಯನ್ಸ್‌ ಜಿಯೋ (Reliance Jio) ಹಾಗೂ ಏರ್‌ಟೆಲ್‌ (Airtel) ಕಂಪನಿಗಳು ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ ಪೇಯ್ಡ್‌ ಬೆಲೆಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ ವೋಡಾಫೋನ್‌ ಐಡಿಯಾ (Vodafone Idea) ಸಂಸ್ಥೆಯೂ ಬೆಲೆಯೇರಿಕೆ ಮಾಡಿದೆ. ಹಾಗಾಗಿ, ಕೇಂದ್ರ ಸರ್ಕಾರವು (Central Government) ಮಧ್ಯಪ್ರವೇಶಿಸಿ, ರಿಚಾರ್ಜ್‌ ಶುಲ್ಕವನ್ನು ಕಡಿಮೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಮಹತ್ವದ ಸ್ಪಷ್ಟನೆ ನೀಡಿದೆ. ಯಾವುದೇ ಕಾರಣಕ್ಕೂ ಖಾಸಗಿ ಟೆಲಿಕಾಂ ಕಂಪನಿಗಳ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ.

“ಖಾಸಗಿ ಕಂಪನಿಗಳ ಬೆಲೆಯೇರಿಕೆ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಲು ಆಗುವುದಿಲ್ಲ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ನಿಯಮಗಳ ಅನ್ವಯವೇ ಖಾಸಗಿ ಟೆಲಿಕಾಂ ಕಂಪನಿಗಳು ಬೆಲೆಯೇರಿಕೆ ಸೇರಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಹಾಗಾಗಿ, ಇಂತಹ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಲು ಆಗುವುದಿಲ್ಲ” ಎಂದು ಕೇಂದ್ರ ಸರ್ಕಾರವು ಪ್ರಕಟಣೆ ತಿಳಿಸಿದೆ. ಮೂರೂ ಟೆಲಿಕಾಂ ಕಂಪನಿಗಳು ಬೆಲೆಯೇರಿಕೆ ಮಾಡಿದ ಕಾರಣ ಸರ್ಕಾರವು ಬೆಲೆ ಇಳಿಸಬೇಕು ಎಂಬುದಾಗಿ ಜನ ಆಗ್ರಹಿಸಿದ್ದರು.

ತಿಂಗಳ ಪ್ಲಾನ್‌ಗೆ ಇಷ್ಟಾಗಲಿದೆ ಹೊರೆ

28 ದಿನಗಳವರೆಗೆ 2 ಜಿಬಿ ಡೇಟಾ (ಪ್ರತಿದಿನ ಅಲ್ಲ), ಅನ್‌ಲಿಮಿಟೆಡ್‌ ಕರೆಗಳು ಇರುವ 155 ಪ್ಲಾನ್‌ಗೆ ಇನ್ನು 189 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, ಪ್ರತಿದಿನ 1 ಜಿಬಿ ಇಂಟರ್‌ನೆಟ್‌ ಪ್ಲಾನ್‌ಗೆ 28 ದಿನಗಳಿಗೆ 209 ರೂ. ಬದಲು 249 ರೂ., ನಿತ್ಯ 1.5 ಜಿಬಿ ಪ್ಲಾನ್‌ಗೆ 239 ರೂ. ಬದಲು 299 ರೂ., 2 ಜಿಬಿ ಪ್ಲಾನ್‌ಗೆ 299 ರೂ. ಬದಲು 349 ರೂ., 2.5 ಜಿಬಿಗೆ 349 ರೂ. ಬದಲು 399 ರೂ., 3 ಜಿಬಿಗೆ 399 ರೂ. ಬದಲು 449 ರೂ. ಪಾವತಿಸಬೇಕಾಗುತ್ತದೆ.

2 ಹಾಗೂ 3 ತಿಂಗಳ ಪ್ಲಾನ್‌

ಎರಡು ಹಾಗೂ ಮೂರು ತಿಂಗಳ ಪ್ಲಾನ್‌ಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಪ್ರತಿ ದಿನ 1.5 ಜಿಬಿ ಇಂಟರ್‌ನೆಟ್‌, ಅನ್‌ಲಿಮಿಟೆಡ್‌ ಕರೆಗಳಿಗೆ ಇನ್ನು 479 ರೂ. ಬದಲು 579 ರೂ., 2 ಜಿಬಿಗೆ 533 ರೂ. ಬದಲು 629, 3 ತಿಂಗಳು ಅನ್‌ಲಿಮಿಟೆಡ್‌ ಕರೆ, 6 ಜಿಬಿ ಇಂಟರ್‌ನೆಟ್‌ (ಪ್ರತಿದಿನ ಅಲ್ಲ) ಪ್ಲಾನ್‌ಗೆ 395 ರೂ. ಬದಲಾಗಿ 479 ರೂ. ಪಾವತಿಸಬೇಕಾಗುತ್ತದೆ. ಮೂರು ತಿಂಗಳು ಪ್ರತಿ ದಿನ 1.5 ಜಿಬಿ ಅಂತರ್ಜಾಲ, ಅನ್‌ಲಿಮಿಟೆಡ್‌ ಕಾಲ್ಸ್‌ ಪ್ಲಾನ್‌ಗೆ 666 ರೂ. ಬದಲಾಗಿ 799 ರೂ. 2 ಜಿಬಿಗೆ 719 ರೂ. ಬದಲು 859 ರೂ., 3 ಜಿಬಿಗೆ 999 ರೂ. ಬದಲಾಗಿ 1,199 ರೂ. ತೆರಬೇಕಾಗಿದೆ.

ವಾರ್ಷಿಕ ಹಾಗೂ ಡೇಟಾ ಆ್ಯಡ್‌ ಆನ್‌ಗೆ ಎಷ್ಟು ಏರಿಕೆ

336 ದಿನಗಳವರೆಗೆ ಅನ್‌ಲಿಮಿಟೆಡ್‌ ಕರೆಗಳು, 24 ಜಿಬಿ ಡೇಟಾ (ಪ್ರತಿದಿನ ಅಲ್ಲ) ಪ್ಲಾನ್‌ಗೆ 1,559 ರೂ. ಬದಲು 1,899 ರೂ., ಒಂದು ವರ್ಷಕ್ಕೆ ನಿತ್ಯ 2.5 ಜಿಬಿ ಪ್ಲಾನ್‌ಗೆ 2,999 ರೂ. ಬದಲು 3,599 ರೂ. ಪಾವತಿಸಬೇಕಾಗುತ್ತದೆ. ಡೇಟಾ ಆ್ಯಡ್‌ ಆನ್‌ ಪ್ಲಾನ್‌ಗಳನ್ನೂ ಬಿಟ್ಟಿಲ್ಲ. 1 ಜಿಬಿ ಡೇಟಾಗೆ 15 ರೂ.ನಿಂದ 19 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು 2 ಜಿಬಿ ಡೇಟಾಗೆ 25 ರೂ.ನಿಂದ 29 ರೂ., 6 ಜಿಬಿ ಡೇಟಾಗೆ 61 ರೂ.ನಿಂದ 69 ರೂ.ಗೆ ಹೆಚ್ಚಳ ಮಾಡಲಾಗಿದೆ. ಭಾರತದಲ್ಲಿ ಸುಮಾರು 45 ಕೋಟಿಗೂ ಅಧಿಕ ಜನ ರಿಲಯನ್ಸ್‌ ಜಿಯೋ ಬಳಸುತ್ತಾರೆ. ಹಾಗಾಗಿ, ಇದು ದೇಶದಲ್ಲೇ ಬೃಹತ್‌ ಟೆಲಿಕಾಮ್‌ ಕಂಪನಿ ಎನಿಸಿದೆ.

ಏರ್‌ಟೆಲ್‌ ಮೊಬೈಲ್‌ ರಿಚಾರ್ಜ್‌ ದರಪಟ್ಟಿ ಇಲ್ಲಿದೆ

ಡೇಟಾ
ಅವಧಿ ಹಿಂದಿನ ದರ ಹೊಸ ದರ
ವಾಯಿಸ್‌ ಕಾಲ್‌ ಪ್ಲಾನ್‌
2 GB
28179199
8 GB 84455509
ಡೈಲಿ ಡೇಟಾ ಪ್ಲಾನ್‌
1.5 ಜಿಬಿ28299349
2.5 ಜಿಬಿ, 28, 359, 409
3 ಜಿಬಿ, 28, 399, 449
Add- On ಪ್ಲಾನ್‌
111922
212933

ವೋಡಾಫೋನ್-ಐಡಿಯಾ ಬೆಲೆ ಇಷ್ಟಿದೆ

ಜುಲೈ 4ರಿಂದ ವೋಡಾಫೋನ್‌ ಐಡಿಯಾ ಶುಲ್ಕಗಳನ್ನು ಶೇ. 10ರಷ್ಟು ಹಾಗೂ ಶೇ.23ರಷ್ಟು ಏರಿಕೆ ಮಾಡಿದೆ. 28 ದಿನಗಳ ಪ್ಲಾನ್‌ಗೆ 179 ರೂ. ಬದಲಾಗಿ 199 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, 84 ದಿನಗಳವರೆಗೆ 1.5 ಜಿಬಿ ಪ್ಲಾನ್‌ಗೆ 719ರ ಬದಲಾಗಿ 859 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, ವಾರ್ಷಿಕ ಯೋಜನೆಯ ಮೊತ್ತವನ್ನು 2,899 ರೂ.ನಿಂದ 3,499 ರೂ.ಗೆ ಏರಿಕೆ ಮಾಡಿದೆ. ಆದರೆ, 365 ದಿನಗಳವರೆಗೆ ಅನ್‌ಲಿಮಿಟೆಡ್‌ ಕರೆಗಳು ಹಾಗೂ 24 ಜಿಬಿ (ಪ್ರತಿದಿನ ಅಲ್ಲ) ಇಂಟರ್‌ನೆಟ್‌ ಪ್ಲಾನ್‌ ಬೆಲೆಯೇರಿಕೆ ಮಾಡಿಲ್ಲ. ಅದು ಮೊದಲಿನಂತೆ ಶೇ.1,799 ರೂ. ಇರಲಿದೆ.

ಇದನ್ನೂ ಓದಿ: Vodafone Idea: ಜಿಯೋ, ಏರ್‌ಟೆಲ್‌ ಬೆನ್ನಲ್ಲೇ ವೋಡಾಫೋನ್‌ ಐಡಿಯಾ ಪ್ಲಾನ್‌ ಬೆಲೆ ಏರಿಕೆ; ಹೀಗಿದೆ ವಿವರ

Continue Reading

ಪ್ರಮುಖ ಸುದ್ದಿ

Rahul Dravid : ರಾಹುಲ್ ದ್ರಾವಿಡ್​ಗೆ ಭಾರತ ರತ್ನ ಕೊಡಿ; ಕೇಂದ್ರ ಸರ್ಕಾರಕ್ಕೆ ಗವಾಸ್ಕರ್ ಮನವಿ

Rahul Dravid : ದ್ರಾವಿಡ್​ 2021 ರಲ್ಲಿ ಭಾರತ ರಾಷ್ಟ್ರೀಯ ತಂಡಕ್ಕೆ ಕೋಚ್​ ಆಗಿ ಬಂದರು. ಅಂದಿನಿಂದ, ಭಾರತವು 2022 ರ ಟಿ 20 ವಿಶ್ವಕಪ್​​ನ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಏಕದಿನ ವಿಶ್ವಕಪ್​ ಫೈನಲ್​​ನಲ್ಲಿ ಸೋತಿತು. ಕೊನೆಯದಾಗಿ ಅವರ ಕೋಚಿಂಗ್ ಅಡಿಯಲ್ಲಿ, ಮೆನ್ ಇನ್ ಬ್ಲೂ 2024 ರಲ್ಲಿ ಟಿ 20 ವಿಶ್ವಕಪ್ ಅನ್ನು ಎತ್ತಿಹಿಡಿದಿದ್ದರಿಂದ ಅವರು ಖುಷಿಯಿಂದ ನಿರ್ಗಮಿಸಿದರು.

VISTARANEWS.COM


on

Rahul Dravid
Koo

ಬೆಂಗಳೂರು: ರಾಹುಲ್ ದ್ರಾವಿಡ್ (Rahul Dravid) ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಸೋಲು ಹಾಗೂ ಅವಮಾನಗಳನ್ನು ಎದುರಿಸಿದ್ದಾರೆ. ಒಬ್ಬ ಆಟಗಾರನಾಗಿ, ಬಳಿಕ ಎನ್​​ಸಿಎ ಮುಖ್ಯಸ್ಥ ಹಾಗೂ ಕೋಚ್​ ಆಗಿ 51 ವರ್ಷದ ಕ್ರಿಕೆಟಿಗ ಹಲವು ಬಾರಿ ನೋವುಗಳನ್ನು ಉಂಡಿದ್ದಾರೆ. 2003 ರ ಏಕದಿನ ವಿಶ್ವಕಪ್​​ನ ಫೈನಲ್​​ನಲ್ಲಿ ಸೋತರು ಮತ್ತು ನಂತರ 2007 ರ ಆವೃತ್ತಿಯಲ್ಲಿ ಗುಂಪು ಹಂತದ ನಿರ್ಗಮನದ ದುಃಖ ಅನುಭವಿಸಿದರು. ಇದರಲ್ಲಿ ಅವರು ತಂಡವನ್ನು ಮುನ್ನಡೆಸಿದರು. 2011 ರ ಏಕದಿನ ವಿಶ್ವಕಪ್ನಲ್ಲಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಲಿಲ್ಲ ಮತ್ತು ಆಟಗಾರ ಮತ್ತು ತರಬೇತುದಾರರಾಗಿ ಐಪಿಎಲ್ ಗೆಲ್ಲಲು ವಿಫಲರಾದರು.

ದ್ರಾವಿಡ್​ 2021 ರಲ್ಲಿ ಭಾರತ ರಾಷ್ಟ್ರೀಯ ತಂಡಕ್ಕೆ ಕೋಚ್​ ಆಗಿ ಬಂದರು. ಅಂದಿನಿಂದ, ಭಾರತವು 2022 ರ ಟಿ 20 ವಿಶ್ವಕಪ್​​ನ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಏಕದಿನ ವಿಶ್ವಕಪ್​ ಫೈನಲ್​​ನಲ್ಲಿ ಸೋತಿತು. ಕೊನೆಯದಾಗಿ ಅವರ ಕೋಚಿಂಗ್ ಅಡಿಯಲ್ಲಿ, ಮೆನ್ ಇನ್ ಬ್ಲೂ 2024 ರಲ್ಲಿ ಟಿ 20 ವಿಶ್ವಕಪ್ ಅನ್ನು ಎತ್ತಿಹಿಡಿದಿದ್ದರಿಂದ ಅವರು ಖುಷಿಯಿಂದ ನಿರ್ಗಮಿಸಿದರು.

ಒಬ್ಬ ಆಟಗಾರನಾಗಿ ದ್ರಾವಿಡ್ ಸಾಕಷ್ಟು ರನ್ ಗಳಿಸಿದ್ದಾರೆ. ಭಾರತ ತಂಡವನ್ನು ಪ್ರತಿ ಬಾರಿಯೂ ದೊಡ್ಡ ಎತ್ತರಕ್ಕೆ ಕೊಂಡೊಯ್ದರು. ದ್ರಾವಿಡ್ ಅವರ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭಾರತ ಸರ್ಕಾರ ಅವರಿಗೆ ಭಾರತ ರತ್ನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ವಿಶೇಷವೆಂದರೆ, ಇದು ಭಾರತ ಗಣರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ದ್ರಾವಿಡ್ ಈ ಗೌರವಕ್ಕೆ ಪಾತ್ರರಾಗುವಷ್ಟು ಸಾಧನೆ ಮಾಡಿದ್ದಾರೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಸರ್ಕಾರವು ಅವರಿಗೆ ಭಾರತ ರತ್ನವನ್ನು ನೀಡಿ ಗೌರವಿಸುವುದು ಸೂಕ್ತವಾಗಿದೆ, ಏಕೆಂದರೆ ಅವರು ನಿಜವಾಗಿಯೂ ಅದಕ್ಕೆ ಅರ್ಹರಾಗಿದ್ದಾರೆ. ವೆಸ್ಟ್ ಇಂಡೀಸ್​​ನಲ್ಲಿ ವಿಶ್ವ ಕಪ್​ ಗೆಲ್ಲುವುದರ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಅವರು ವಿದೇಶಿ ನೆಲದಲ್ಲಿ ಅತ್ಯುತ್ತಮ ಬ್ಯಾಟರ್​ ಆಗಿದ್ದರು. ಇಂಗ್ಲೆಂಡ್​​ನಲ್ಲಿ ಗೆಲುವು ಅಲ್ಲಿ ಟೆಸ್ಟ್ ಪಂದ್ಯ ಸರಣಿಯನ್ನು ಗೆದ್ದ ಮೂವರು ಭಾರತೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತು ನಂತರ ಹಿರಿಯ ತಂಡದ ತರಬೇತುದಾರರಾಗಿ ಅದ್ಭುತ ಪ್ರತಿಭೆಗಳನ್ನು ಬೆಳೆಸಿದ್ದರು ಎಂದು ಗವಾಸ್ಕರ್​ ಹೇಳಿದ್ದಾರೆ.

ಇದನ್ನೂ ಓದಿ: Abhishek Sharma : ಜಿಂಬಾಬ್ವೆ ವಿರುದ್ಧ ಶತಕ ಬಾರಿಸಿ ಅಪರೂಪದ ದಾಖಲೆ ಬರೆದ ಅಭಿಷೇಕ್ ಶರ್ಮಾ

ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ದ್ರಾವಿಡ್ ಅವರ ಸಾಧನೆಗಳು ಎಲ್ಲಾ ಪಕ್ಷಗಳು, ಜಾತಿ, ಮತ ಮತ್ತು ಸಮುದಾಯಗಳನ್ನು ಮೀರಿವೆ. ಇಡೀ ದೇಶಕ್ಕೆ ಹೇಳಲಾಗದ ಸಂತೋಷವನ್ನು ಕೊಟ್ಟಿದ್ದಾರೆ. ಅದಕ್ಕಾಗಿಯೇ ಅವರನ್ನು ಪರಿಗಣಿಸಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Abhishek Sharma : ಜಿಂಬಾಬ್ವೆ ವಿರುದ್ಧ ಶತಕ ಬಾರಿಸಿ ಅಪರೂಪದ ದಾಖಲೆ ಬರೆದ ಅಭಿಷೇಕ್ ಶರ್ಮಾ

Abhishek Sharma: ಬ್ರಿಯಾನ್ ಬೆನೆಟ್ ಅವರ ಓವರ್​​ನಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ಅವರು ಸಿಕ್ಸರ್ ಬಾರಿಸಿದರು. ಸ್ಕ್ವೇರ್​ ಲೆಗ್ ಕಡೆಗೆ ಗರಿಷ್ಠ ಮಟ್ಟಕ್ಕೆ ಸಿಕ್ಸರ್ ಬಾರಿಸಿದರು. ಅಂದ ಹಾಗೆ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ನಂತರ ಟಿ 20 ಪಂದ್ಯಗಳಲ್ಲಿ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೂರ್ಯಕುಮಾರ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಸಿಕ್ಸರ್ ಬಾರಿಸಿದರೆ, ತಿಲಕ್ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಮೊದಲ ಎಸೆತಕ್ಕೆ ಸಿಕ್ಸರ್ ಹೊಡೆದಿದ್ದರು.

VISTARANEWS.COM


on

Abhishek Sharma
Koo

ಬೆಂಗಳೂರು: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ ಸಿಕ್ಸರ್ ಬಾರಿಸಿದ ಅಪರೂಪದ ದಾಖಲೆಯ ಪಟ್ಟಿಗೆ ಅಭಿಷೇಕ್ ಶರ್ಮಾ (Abhishek Sharma) ಸೇರ್ಪಡೆಯಾಗಿದ್ದಾರೆ. ಐಪಿಎಲ್ 2024 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಪರ ತಮ್ಮ ಪವರ್ ಹಿಟ್ಟಿಂಗ್ ಮತ್ತು ನಿರ್ಭೀತ ಆಟದ ಮೂಲಕ ಕಾಣಿಸಿಕೊಂಡ ಅಭಿಷೇಕ್ ಜುಲೈ 6 ರಂದು ಜಿಂಬಾಬ್ವೆ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಆದರೆ ಬ್ಯಾಟರ್​​ ಡಕ್ ಔಟ್ ಆಗಿ ಬೇಸರ ಮೂಡಿಸಿದರು. ಆದರೆ ಜುಲೈ 7 ರಂದು ನಡೆದ ಎರಡನೇ ಟಿ 20 ಅವರು ಅತ್ಯುತ್ತಮ ಪ್ರದರ್ಶನ ನೀಡಿ ಶತಕ ಬಾರಿಸಿದರು.

ಬ್ರಿಯಾನ್ ಬೆನೆಟ್ ಅವರ ಓವರ್​​ನಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ಅವರು ಸಿಕ್ಸರ್ ಬಾರಿಸಿದರು. ಸ್ಕ್ವೇರ್​ ಲೆಗ್ ಕಡೆಗೆ ಗರಿಷ್ಠ ಮಟ್ಟಕ್ಕೆ ಸಿಕ್ಸರ್ ಬಾರಿಸಿದರು. ಅಂದ ಹಾಗೆ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ನಂತರ ಟಿ 20 ಪಂದ್ಯಗಳಲ್ಲಿ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೂರ್ಯಕುಮಾರ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಸಿಕ್ಸರ್ ಬಾರಿಸಿದರೆ, ತಿಲಕ್ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಮೊದಲ ಎಸೆತಕ್ಕೆ ಸಿಕ್ಸರ್ ಹೊಡೆದಿದ್ದರು.

ಇದನ್ನೂ ಓದಿ: Sanath Jayasuriya : ಬ್ಯಾಟಿಂಗ್​ ದಿಗ್ಗಜ ಸನತ್​ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್​ ತಂಡದ ನೂತನ ಕೋಚ್​

ನಾಯಕ ಶುಬ್ಮನ್ ಗಿಲ್ ಎರಡನೇ ಓವರ್ನಲ್ಲಿ ನಿರ್ಗಮಿಸಿದ ನಂತರ ಅಭಿಷೇಕ್ ತಮ್ಮ ಬ್ಯಾಟಿಂಗ್​ ದಾಳಿಯನ್ನು ಮುಂದುವರಿಸಿದರು. ಋತುರಾಜ್ ಗಾಯಕ್ವಾಡ್ ಉತ್ತಮ ಬೆಂಬಲ ನೀಡಿ ಭಾರತವನ್ನು 11 ಓವರ್ ಗಳಲ್ಲಿ ಮೂರಂಕಿಯ ಸ್ಕೋರ್​ ಕಡೆ ಮುನ್ನಡೆಸಿದರು. ಆರಂಭಿಕ ಆಟಗಾರ ತನ್ನ ಮೊದಲ ಅರ್ಧಶತಕವನ್ನು ಕೇವಲ 33 ಎಸೆತಗಳಲ್ಲಿ ಮುಗಿಸಿದರು. ಮುಂದಿನ 13 ಎಸೆತಗಳಲ್ಲಿ ಅವರ ಶತಕ ಬಾರಿಸಿದರು.

ಪಂಜಾಬ್ ಬ್ಯಾಟರ್​ ಅಭಿಷೇಕ್ ಅವರನ್ನು ಟಿ 20 ಕ್ರಿಕೆಟ್​ನ ದೈತ್ಯ ಎಂದು ಏಕೆ ಕರೆಯಲಾಗುತ್ತದೆ ಎಂಬುದನ್ನು ತೋರಿಸಿದರು. ಬಳಿಕ ಬ್ಯಾಟಿಂಗ್​ ವೇಗವನ್ನು ಹೆಚ್ಚಿಸಿದರು. ಕೇವಲ 47 ಎಸೆತಗಳಲ್ಲಿ ತಮ್ಮ ಮೊದಲ ಶತಕ ಗಳಿಸಿದರು. ಅವರು 47 ಎಸೆತಗಳಲ್ಲಿ 100 ರನ್​ ಬಾರಿಸಿ ನಿರ್ಗಮಿಸಿದರು. ಅಂತಾರಾಷ್ಟ್ರಿಯ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಬಾರಿಸಿ ನಿರ್ಗಮಿಸಿದರು. ಕೇವಲ 13 ಎಸೆತಗಳನ್ನು ತೆಗೆದುಕೊಂಡರು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 23ರ ವರ್ಷದ ಆಟಗಾರ 7 ಬೌಂಡರಿ ಹಾಗೂ 8 ಸಿಕ್ಸರ್ ಬಾರಿಸಿದ್ದರು.

Continue Reading
Advertisement
Press Club of Bangalore
ಬೆಂಗಳೂರು8 mins ago

Press Club of Bangalore: ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷರಾಗಿ ಆರ್. ಶ್ರೀಧರ್ ಮರು ಆಯ್ಕೆ; ನೂತನ ಪದಾಧಿಕಾರಿಗಳ ಪಟ್ಟಿ ಇಲ್ಲಿದೆ

Foods For Hormone Balance
ಆರೋಗ್ಯ10 mins ago

Foods For Hormone Balance: ಮಹಿಳೆಯರೇ, ಹಾರ್ಮೋನಿನ ಸಮತೋಲನಕ್ಕಾಗಿ ಈ ಆಹಾರಗಳನ್ನು ಮರೆಯದೇ ಸೇವಿಸಿ

ZIM vs IND
ಪ್ರಮುಖ ಸುದ್ದಿ12 mins ago

ZIM vs IND : ಭಾರತ ತಂಡಕ್ಕೆ 100 ರನ್​ ಭರ್ಜರಿ ಜಯ, ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ 1-1 ಸಮಬಲ ಸಾಧನೆ

Viral Video
ವೈರಲ್ ನ್ಯೂಸ್19 mins ago

Viral Video: ಮನೆಗೆ ನುಗ್ಗಿ ಯುವಕನಿಂದ ಬಾಲಕಿ ಮೇಲೆ ಅಮಾನುಷ ಹಲ್ಲೆ; ವಿಡಿಯೊ ನೋಡಿ ಜನಾಕ್ರೋಶ

Mobile Tariffs
ದೇಶ25 mins ago

Mobile Tariffs: ಜಿಯೋ, ಏರ್‌ಟೆಲ್‌, VI ರಿಚಾರ್ಜ್‌ ಶುಲ್ಕ ಕಡಿಮೆ ಮಾಡಲಿದ್ದಾರಾ ಮೋದಿ? ಇಲ್ಲಿದೆ ಕೇಂದ್ರದ ಸ್ಪಷ್ಟನೆ

karnataka weather Forecast
ಮಳೆ26 mins ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Puri Jagannath Yatra
ದೇಶ39 mins ago

Puri Jagannath Yatra: ಪುರಿ ಜಗನ್ನಾಥನ ಅದ್ದೂರಿ ರಥಯಾತ್ರೆ; ರಾಷ್ಟ್ರಪತಿ ಮುರ್ಮು ಉಪಸ್ಥಿತಿ

Rahul Dravid
ಪ್ರಮುಖ ಸುದ್ದಿ44 mins ago

Rahul Dravid : ರಾಹುಲ್ ದ್ರಾವಿಡ್​ಗೆ ಭಾರತ ರತ್ನ ಕೊಡಿ; ಕೇಂದ್ರ ಸರ್ಕಾರಕ್ಕೆ ಗವಾಸ್ಕರ್ ಮನವಿ

Abhishek Sharma
ಪ್ರಮುಖ ಸುದ್ದಿ1 hour ago

Abhishek Sharma : ಜಿಂಬಾಬ್ವೆ ವಿರುದ್ಧ ಶತಕ ಬಾರಿಸಿ ಅಪರೂಪದ ದಾಖಲೆ ಬರೆದ ಅಭಿಷೇಕ್ ಶರ್ಮಾ

Bengaluru's Second Airport
ಕರ್ನಾಟಕ1 hour ago

Bengaluru’s Second Airport: ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ? ಸಚಿವ ಎಂ.ಬಿ. ಪಾಟೀಲ್ ಸುಳಿವು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ26 mins ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ3 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ4 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ14 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ1 day ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ1 day ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌