India T20I schedule: 2026ರ ಟಿ20 ವಿಶ್ವಕಪ್​ಗೂ ಮುನ್ನ ಭಾರತ ಆಡಲಿದೆ 34 ಟಿ20 ಪಂದ್ಯ - Vistara News

ಕ್ರೀಡೆ

India T20I schedule: 2026ರ ಟಿ20 ವಿಶ್ವಕಪ್​ಗೂ ಮುನ್ನ ಭಾರತ ಆಡಲಿದೆ 34 ಟಿ20 ಪಂದ್ಯ

India T20I schedule: ಮುಂದಿನ ಟಿ20 ವಿಶ್ವಕಪ್​ಗೂ ಮುನ್ನ ಮುಂದಿನ 2 ವರ್ಷಗಳ ಭಾರತದ ಟಿ20 ಸರಣಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. 2026ರಲ್ಲಿ ನಡೆಯುವ ಟಿ20 ವಿಶ್ವಕಪ್​ ಟೂರ್ನಿ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

VISTARANEWS.COM


on

India T20I schedule
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: 2026ರಲ್ಲಿ ನಡೆಯುವ ಟಿ20 ವಿಶ್ವಕಪ್(t20 world cup 2026)​ ಟೂರ್ನಿಗೂ ಮುನ್ನ ಹಾಲಿ ಚಾಂಪಿಯನ್​ ಭಾರತ ತಂಡ(Team India) ಬರೋಬ್ಬರಿ 34 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು(team india upcoming t20 series) ಆಡಲಿದೆ. ಇದರಲ್ಲಿ ಒಟ್ಟು 8 ಸರಣಿಗಳು(India T20I schedule) ಸೇರಿವೆ. ತಲಾ ನಾಲ್ಕು ಸರಣಿಗಳು ವಿದೇಶದಲ್ಲಿ ಮತ್ತು ತವರಿನಲ್ಲಿ ಆಡಲಿದೆ.

ಕಳೆದ ಶನಿವಾರ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್​ ಅಂತರದಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಫೈನಲ್​ ನಡೆದು ಒಂದು ವಾರ ಆಗುವ ಮುನ್ನವೇ ಮುಂದಿನ ಟಿ20 ವಿಶ್ವಕಪ್​ಗೂ ಮುನ್ನ ಮುಂದಿನ 2 ವರ್ಷಗಳ ಭಾರತದ ಟಿ20 ಸರಣಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. 2026ರಲ್ಲಿ ನಡೆಯುವ ಟಿ20 ವಿಶ್ವಕಪ್​ ಟೂರ್ನಿ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ಜುಲೈ 6ರಿಂದ ಆರಂಭಗೊಳ್ಳಲಿರುವ ಜಿಂಬಾಬ್ವೆ ವಿರುದ್ಧದ ಸರಣಿಯ ಮೂಲಕ ಭಾರತದ ನೂತನ ಟಿ20 ಋತು ಪ್ರಾರಂಭಗೊಳ್ಳಲಿದೆ. ಇದು 5 ಪಂದ್ಯಗಳ ಸರಣಿಯಾಗಿದ್ದು, ಈ ತಂಡ ಯುವ ಆಟಗಾರರನ್ನೇ ನೆಚ್ಚಿಕೊಂಡಿದೆ. ರೋಹಿತ್​, ಜಡೇಜಾ ಮತ್ತು ವಿರಾಟ್​ ಕೊಹ್ಲಿ ಟಿ20ಗೆ ವಿದಾಯ ಹೇಳಿರುವ ಕಾರಣ ಈ ಸ್ಥಾನಕ್ಕೆ ಯುವ ಆಟಗಾರರನ್ನು ಸಿದ್ಧಪಡಿಸುವ ಜವಾಬ್ದಾರಿ ನೂತನ ಕೋಚ್​ ಆಗಲಿರುವವರ ಹೆಗಲೇರಲಿದೆ.

ಇದನ್ನೂ ಓದಿ Team India stuck in Barbados: ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ

2025ರಲ್ಲಿ ಭಾರತ 4 ಸರಣಿಗಳನ್ನು ಆಡಲಿದೆ. ಪ್ರವಾಸಿ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯದಲ್ಲಿ ಕ್ರಮವಾಗಿ 3 ಮತ್ತು 5 ಪಂದ್ಯಗಳ ಸರಣಿ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ತವರಲ್ಲಿ 5 ಪಂದ್ಯಗಳ ಸರಣಿಯನ್ನಾಡಲಿದೆ. 2026ರಲ್ಲಿ ಕಿವೀಸ್​ ವಿರುದ್ಧ ತವರಿನಲ್ಲಿ 5 ಪಂದ್ಯಗಳ ಸರಣಿ ಆಡಲಿದೆ. ಈ ಸರಣಿ ಬಳಿಕ ಟಿ20 ವಿಶ್ವಕಪ್​ ಟೂರ್ನಿಯನ್ನು ಆಡಲಿದೆ.

2024-25ನೇ ಸಾಲಿನ ತವರಿನ ಕ್ರಿಕೆಟ್​ ಸರಣಿಯ ವೇಳಾಪಟ್ಟಿಯ ಮಾಹಿತಿ ಇಂತಿದೆ.

ಬಾಂಗ್ಲಾ ಸರಣಿಯ ವೇಳಾಪಟ್ಟಿ

ಸೆಪ್ಟೆಂಬರ್​-19 ಮೊದಲ ಟೆಸ್ಟ್​ ಪಂದ್ಯ. ತಾಣ: ಚೆನ್ನೈ

ಸೆಪ್ಟೆಂಬರ್​​-27 ದ್ವಿತೀಯ ಟೆಸ್ಟ್​. ತಾಣ; ಕಾನ್ಪುರಅಕ್ಟೋಬರ್​-6 ಮೊದಲ ಟಿ20. ತಾಣ: ಧರ್ಮಶಾಲಾ

ಅಕ್ಟೋಬರ್​-9 ದ್ವಿತೀಯ ಟಿ20. ತಾಣ: ದೆಹಲಿಅಕ್ಟೋಬರ್​-12 ಮೂರನೇ ಟಿ20. ತಾಣ: ಹೈದರಾಬಾದ್​

ನ್ಯೂಜಿಲ್ಯಾಂಡ್​ ಸರಣಿಯ ವೇಳಾಪಟ್ಟಿ


ಅಕ್ಟೋಬರ್​-16 ಮೊದಲ ಟಿ20. ತಾಣ: ಬೆಂಗಳೂರು

ಅಕ್ಟೋಬರ್-24 ದ್ವಿತೀಯ ಟಿ20. ತಾಣ: ಪುಣೆ

ನವೆಂಬರ್​-1 ಮೂರನೇ ಟಿ20. ತಾಣ: ಮುಂಬಯಿ

ಇಂಗ್ಲೆಂಡ್​ ವಿರುದ್ಧದ ಸರಣಿಯ ವೇಳಾಪಟ್ಟಿ


ಜನವರಿ-22 ಮೊದಲ ಟಿ20. ತಾಣ:ಚೆನ್ನೈ

ಜನವರಿ-25 ದ್ವಿತೀಯ ಟಿ20. ತಾಣ: ಕೋಲ್ಕತ್ತಾ

ಜನವರಿ-28 ಮೂರನೇ ಟಿ20. ತಾಣ: ರಾಜ್​ಕೋಟ್​

ಜನವರಿ-31 ನಾಲ್ಕನೇ ಟಿ20. ತಾಣ:ಪುಣೆ

ಫೆಬ್ರವರಿ-2 ಐದನೇ ಟಿ20. ತಾಣ: ಮುಂಬಯಿ

ಫೆಬ್ರವರಿ-6 ಮೊದಲ ಏಕದಿನ. ತಾಣ:ನಾಗ್ಪುರ

ಫೆಬ್ರವರಿ-9 ದ್ವಿತೀಯ ಏಕದಿನ. ತಾಣ: ಕಟಕ್​

ಫೆಬ್ರವರಿ-12 ಮೂರನೇ ಏಕದಿನ. ತಾಣ: ಅಹಮದಾಬಾದ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Gautam Gambhir : ಗಂಭೀರ್ ಕೆಕೆಆರ್ ತೊರೆಯುವುದು ನಿಶ್ಚಿತ​; ಈಡನ್​ ಗಾರ್ಡನ್ಸ್​​ನಲ್ಲಿ ವಿದಾಯದ ಶೂಟಿಂಗ್

Gautam Gambhir : ಗೌತಮ್ ಗಂಭೀರ್ ಮುಂದಿನ ಉಸ್ತುವಾರಿ ವಹಿಸಲಿದ್ದಾರೆ ಎಂದು ಹಲವಾರು ಮಾಧ್ಯಮಗಳ ವರದಿಗಳು ಹೇಳಿವೆ. ಆದರೆ, ಮಾಜಿ ಕ್ರಿಕೆಟಿಗ ಈ ಬಗ್ಗೆ ಮೌನವಾಗಿದ್ದಾರೆ. ಇನ್ನೂ ದಿನಗಳು ದೂರ ಇವೆ ಎಂದು ಹೇಳಿದ್ದಾರೆ. ಗಂಭೀರ್ ಅಥವಾ ಬಿಸಿಸಿಐ ಯಾವುದೇ ಅಧಿಕೃತ ಘೋಷಣೆ ಮಾಡುವ ಮೊದಲು, ಕೆಕೆಆರ್ ಮಾರ್ಗದರ್ಶಕ ಫ್ರಾಂಚೈಸಿಗೆ ವಿದಾಯ ಹೇಳಿದ್ದಾರೆ ಎಂದು ವರದಿಗಳು ಸೂಚಿಸಿವೆ.

VISTARANEWS.COM


on

Gautam Gambhir
Koo

ಬೆಂಗಳೂರು: ಐಪಿಎಲ್​ನ ಕೋಲ್ಕತಾ ನೈಟ್ ರೈಡರ್ಸ್ (KKR) ಹೆಡ್​ ಕೋಚ್​​ ಗೌತಮ್ ಗಂಭೀರ್ (Gautam Gambhir) ಅವರು ಕೋಲ್ಕತ್ತಾದ ಈಡನ್ ಗಾರ್ಡರ್ಸ್​ನಲ್ಲಿ ವಿದಾಯ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿ ಟೀಮ್ ಇಂಡಿಯಾ ಕೋಚ್ ಯಾರೆಂಬುದನ್ನು ಬಿಸಿಸಿಐ ಶೀಘ್ರದಲ್ಲೇ ಘೋಷಿಸಲಿದೆ. ಬಹುತೇಕ ಅದು ಗೌತಮ್ ಗಂಭೀರ್. ಹೀಗಾಗಿ ಅವರು ವಿದಾಯದ ಶೂಟಿಂಗ್ ಮಾಡಿದ್ದಾರೆ. ಕಪ್​ ಗೆದ್ದು ಕೊಟ್ಟಿರುವ ಐಪಿಎಲ್ ಫ್ರಾಂಚೈಸಿಯಿಂದ ಅವರು ನಿರ್ಗಮಿಸಲಿದ್ದಾರೆ ಎಂಬುದಾಗಿ ವರದಿಯಾಗಿದೆ.

ಗೌತಮ್ ಗಂಭೀರ್ ಮುಂದಿನ ಉಸ್ತುವಾರಿ ವಹಿಸಲಿದ್ದಾರೆ ಎಂದು ಹಲವಾರು ಮಾಧ್ಯಮಗಳ ವರದಿಗಳು ಹೇಳಿವೆ. ಆದರೆ, ಮಾಜಿ ಕ್ರಿಕೆಟಿಗ ಈ ಬಗ್ಗೆ ಮೌನವಾಗಿದ್ದಾರೆ. ಇನ್ನೂ ದಿನಗಳು ದೂರ ಇವೆ ಎಂದು ಹೇಳಿದ್ದಾರೆ. ಗಂಭೀರ್ ಅಥವಾ ಬಿಸಿಸಿಐ ಯಾವುದೇ ಅಧಿಕೃತ ಘೋಷಣೆ ಮಾಡುವ ಮೊದಲು, ಕೆಕೆಆರ್ ಮಾರ್ಗದರ್ಶಕ ಫ್ರಾಂಚೈಸಿಗೆ ವಿದಾಯ ಹೇಳಿದ್ದಾರೆ ಎಂದು ವರದಿಗಳು ಸೂಚಿಸಿವೆ.

ಟೈಮ್ಸ್ ನೌ ವರದಿಯ ಪ್ರಕಾರ, ಎರಡು ಬಾರಿ ಐಪಿಎಲ್ ವಿಜೇತ ಕೆಕೆಆರ್ ನಾಯಕ ಗಂಭೀರ್ ಶುಕ್ರವಾರ ಈಡನ್ ಗಾರ್ಡನ್​ಗೆ ಭೇಟಿ ನೀಡಿ ಫ್ರಾಂಚೈಸಿ ಮತ್ತು ಅಭಿಮಾನಿಗಳಿಗೆ ವಿದಾಯ ಹೇಳುವ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಈ ವೀಡಿಯೊ ಕೆಕೆಆರ್ ಫ್ರಾಂಚೈಸಿಯೊಂದಿಗೆ ಗಂಭೀರ್ ಅವರ ಪ್ರಯಾಣದ ಕೊನೆ ಎಂದು ಹೇಳಲಾಗುತ್ತದೆ.

ಜುಲೈ 5 ರಂದು ಈಡನ್ ಗಾರ್ಡನ್ಸ್​ನಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರನ ಉಪಸ್ಥಿತಿ ಇದ್ದರು ಎಂಬುದನ್ನು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ದೃಢ ಪಡಿಸಿದ್ದಾರೆ. “ಇದು ಕಡಿಮೆ ಪ್ರಾಮುಖ್ಯತೆಯ ವಿಷಯ. ಆದರೆ ಗಂಭೀರ್ ತಮ್ಮ ಅಭಿಮಾನಿಗಳಿಗೆ ಸಂದೇಶದೊಂದಿಗೆ ವಿದಾಯ ಹೇಳಲು ಬಯಸಿದ್ದರು ಮತ್ತು ಅದಕ್ಕಾಗಿಯೇ ಅವರು ಈಡನ್​​ನಲ್ಲಿ ವೀಡಿಯೊವನ್ನು ಚಿತ್ರೀಕರಿಸಿದರು” ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Virat Kohli : ಇನ್​ಸ್ಟಾಗ್ರಾಮ್ ಪೋಸ್ಟ್​ ಮೂಲಕ ಬಿಟಿಎಸ್​ ಬ್ಯಾಂಡ್​ನ ದಾಖಲೆ ಮುರಿದ ವಿರಾಟ್​ ಕೊಹ್ಲಿ

ಗಂಭೀರ್ 2012 ಮತ್ತು 2014ರಲ್ಲಿ ಕೆಕೆಆರ್ ತಂಡದಲ್ಲಿ ನಾಯಕರಾಗಿ ಐಪಿಎಲ್ ಗೆದ್ದಿದ್ದರು. ನಂತರ ಅವರು 2024 ರಲ್ಲಿ ಮಾರ್ಗದರ್ಶಕರಾಗಿ ಫ್ರಾಂಚೈಸಿಗೆ ಮರಳಿದ್ದರು. ಮೊದಲ ಪ್ರಯತ್ನದಲ್ಲೇ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಮೂರನೇ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದ್ದರು.

ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾದಲ್ಲಿ ಪ್ರವಾಸದಲ್ಲಿ ನಡೆಯಲಿರುವ ಸೀಮಿತ ಓವರ್​ನಲ್ಲಿ ಸರಣಿಯಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೋಮವಾರ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Virat Kohli : ಇನ್​ಸ್ಟಾಗ್ರಾಮ್ ಪೋಸ್ಟ್​ ಮೂಲಕ ಬಿಟಿಎಸ್​ ಬ್ಯಾಂಡ್​ನ ದಾಖಲೆ ಮುರಿದ ವಿರಾಟ್​ ಕೊಹ್ಲಿ

Virat Kohli: “ಇದಕ್ಕಿಂತ ಉತ್ತಮ ದಿನವನ್ನು ಊಹಿಸಲು ಸಾಧ್ಯವಿಲ್ಲ. ದೇವರು ದೊಡ್ಡವನು ಮತ್ತು ನಾನು ಋಣಿಯಾಗಿ ತಲೆ ಬಾಗುತ್ತೇನೆ. ನಾವು ಅಂತಿಮವಾಗಿ ಮಾಡಿ ತೋರಿಸಿದ್ದೇವೆ. ಜೈ ಹಿಂದ್ ಎಂದು ಕೊಹ್ಲಿ ಬರೆದುಕೊಂಡಿದ್ದರು. ಭಾರತವು ಟಿ 20 ವಿಶ್ವಕಪ್ 2024 ಗೆದ್ದ ಮರುದಿನ ಜೂನ್ 30 ರಂದು ಪೋಸ್ಟ್ ಮಾಡಿದ ಕೊಹ್ಲಿಯ ಭಾವನಾತ್ಮಕ ಸಂದೇಶವು ವಿಶ್ವದಾದ್ಯಂತದ ಅಭಿಮಾನಿಗಳ ಮನ ಸೆಳೆದಿದೆ.

VISTARANEWS.COM


on

Virat kohli
Koo

ನವದೆಹಲಿ: ಭಾರತದ ತಂಡದ ಟಿ20 ವಿಶ್ವಕಪ್ 2024 ರ ವಿಜಯವನ್ನು ಆಚರಿಸುವುದರ ಬಗ್ಗೆ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli ) ಹಾಕಿರುವ ಇನ್​​ಸ್ಟಾಗ್ರಾಮ್​ (instagram) ಪೋಸ್ಟ್​​ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಅವರ ಆ ಪೋಸ್ಟ್​​ ಇನ್ಸ್ಟಾಗ್ರಾಮ್ ಪೋಸ್ಟ್ ದಾಖಲೆಗಳನ್ನು ಮುರಿದಿದೆ, ಏಷ್ಯಾದಲ್ಲಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಎಂಬ ದಾಖಲೆ ಸೃಷ್ಟಿಸಿದೆ. ಜನಪ್ರಿಯ ಮ್ಯೂಸಿಕ್ ಬ್ಯಾಂಟ್​​ ಬಿಟಿಎಸ್​​ನ ಸದಸ್ಯ ವಿ (ಕಿಮ್ ಟೇಹ್ಯುಂಗ್) ಅವರ ಹಿಂದಿನ ದಾಖಲೆಯನ್ನೂ ಮೀರಿಸಿದೆ.

2.1 ಕೋಟಿಗೂ ಹೆಚ್ಚು ಲೈಕ್​ಗಳನ್ನು ಗಳಿಸಿದ ಕೊಹ್ಲಿಯ ಪೋಸ್ಟ್ ಈ ಹಿಂದಿನ ಎಲ್ಲ ದಾಖಲೆಗಳನ್ನು ಉಡಾಯಿಸಿದೆ. ಟೀಮ್ ಇಂಡಿಯಾ ತನ್ನ ವಿಜಯೋತ್ಸವವನ್ನು ಆಚರಿಸುವ ಕೊಲಾಜ್ ಮತ್ತು ಹೃತ್ಪೂರ್ವಕ ಶೀರ್ಷಿಕೆಯನ್ನು ಈ ಪೋಸ್ಟ್​ಗೆ ನೀಡಲಾಗಿದೆ. “ಇದಕ್ಕಿಂತ ಉತ್ತಮ ದಿನವನ್ನು ಊಹಿಸಲು ಸಾಧ್ಯವಿಲ್ಲ. ದೇವರು ದೊಡ್ಡವನು ಮತ್ತು ನಾನು ಋಣಿಯಾಗಿ ತಲೆ ಬಾಗುತ್ತೇನೆ. ನಾವು ಅಂತಿಮವಾಗಿ ಮಾಡಿ ತೋರಿಸಿದ್ದೇವೆ. ಜೈ ಹಿಂದ್ ಎಂದು ಕೊಹ್ಲಿ ಬರೆದುಕೊಂಡಿದ್ದರು. ಭಾರತವು ಟಿ 20 ವಿಶ್ವಕಪ್ 2024 ಗೆದ್ದ ಮರುದಿನ ಜೂನ್ 30 ರಂದು ಪೋಸ್ಟ್ ಮಾಡಿದ ಕೊಹ್ಲಿಯ ಭಾವನಾತ್ಮಕ ಸಂದೇಶವು ವಿಶ್ವದಾದ್ಯಂತದ ಅಭಿಮಾನಿಗಳ ಮನ ಸೆಳೆದಿದೆ.

ಈ ಗಮನಾರ್ಹ ಸಾಧನೆಯು ವಿರಾಟ್ ಕೊಹ್ಲಿಯನ್ನು ಎಲ್ಲಾ ವಿಭಾಗಗಳಲ್ಲಿ ಬಿಟಿಎಸ್​​ನ 2 ಕೋಟಿ ಲೈಕ್​ಗಳ ದಾಖಲೆಯನ್ನು ಮೀರಿಸಿದ ಏಷ್ಯಾದ ಮೊದಲ ವ್ಯಕ್ತಿ ಎಂಬ ದಾಖಲೆಗೆ ಅರ್ಹರನ್ನಾಗಿದೆ. ಕೊಹ್ಲಿ ಅವರ ಪೋಸ್ಟ್ ಬಾಲಿವುಡ್ ದಂಪತಿಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹ ಘೋಷಣೆಯ ಹಿಂದಿನ ದಾಖಲೆಯನ್ನು ಮುರಿದಿದೆ.

ಏಷ್ಯಾದ ದಾಖಲೆ ಮುರಿದ ಕೊಹ್ಲಿ

ಕೊಹ್ಲಿಯ ಪೋಸ್ಟ್ ಏಷ್ಯಾದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ ಮಾತ್ರವಲ್ಲ, 2 ಕೋಟಿ ಲೈಕ್​ಗಳ ಮೈಲಿಗಲ್ಲನ್ನು ತಲುಪಿದ ಏಷ್ಯಾದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಯು ಕೊಹ್ಲಿಯನ್ನು ವಿಶ್ವಾದ್ಯಂತ ಕ್ರೀಡಾಪಟುಗಳು ಹೆಚ್ಚು ಲೈಕ್ ಮಾಡಿದ ಮೊದಲ ಐದು ಪೋಸ್ಟ್​ಗಳಲ್ಲಿ ಒಂದಾಗಿದೆ. ಇದು ಅವರ ಅಪಾರ ಜಾಗತಿಕ ಅಭಿಮಾನಿ ಬಳಗವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: Smriti Mandhana : ಬಾಯ್​ಫ್ರೆಂಡ್​ ಜತೆಗಿನ ಐದು ವರ್ಷಗಳ ಬಾಂಧವ್ಯವನ್ನು ಕೇಕ್​ ಕಟ್​ ಮಾಡುವ ಮೂಲಕ ಸಂಭ್ರಮಿಸಿದ ಸ್ಮೃತಿ ಮಂದಾನಾ

ಈ ಐತಿಹಾಸಿಕ ಗೆಲುವಿನ ನಂತರ, ವಿರಾಟ್ ಕೊಹ್ಲಿ ಟಿ 20 ಅಂತರರಾಷ್ಟ್ರೀಯ ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ವಿರಾಟ್ ಕೊಹ್ಲಿ ಪ್ರಸ್ತುತ ಪತ್ನಿ ಅನುಷ್ಕಾ ಶರ್ಮಾ ಮತ್ತು ಅವರ ಮಕ್ಕಳೊಂದಿಗೆ ಲಂಡನ್​​ನಲ್ಲಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಬಳಿಕ ಲಂಡನ್​ನಲ್ಲಿ ವಾಸ ಮಾಡುತ್ತಾರೆ ಎಂಬುದಾಗಿಯೂ ಸುದ್ದಿಯಾಗಿದೆ. ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಯುಕೆ ಮೂಲದ ಸಂಸ್ಥೆಯೊಂದರ ನಿರ್ದೇಶಕರಾಗಿದ್ದಾರೆ. ಎರಡನೇ ಮಗು ಅಕಾಯ್​ಗೆ ಅನುಷ್ಕಾ ಲಂಡನ್​ನಲ್ಲಿಯೇ ಜನ್ಮ ನೀಡಿದ್ದರು. ಅಲ್ಲಿಂದ ಬಳಿಕ ಅವರು ಅಲ್ಲಿಯೇ ವಾಸವಾಗಿದ್ದಾರೆ. ಮೊದಲ ಮಗು ವಾಮಿಕಾ ಕೂಡ ತಾಯಿಯೊಂದಿಗೆ ಇದ್ದಾಳೆ.

ವಿರಾಟ್​ ಕೊಹ್ಲಿ ವಿಶ್ವ ಕಪ್​ ತಂಡ ಸೇರುವ ಮೊದಲು ಕೂಡ ಲಂಡನ್​ನಿಂದಲೇ ಪ್ರಯಾಣ ಆರಂಭಿಸಿದ್ದರು. ಅವರು ಐಪಿಎಲ್​ನ ಮುಗಿಸಿದ ತಕ್ಷಣ ಭಾರತವನ್ನು ಬಿಟ್ಟು ಲಂಡನ್ ಸೇರಿಕೊಂಡಿದ್ದರು. ಅವರು ಮೊದಲ ಹಂತದಲ್ಲಿ ಭಾರತ ತಂಡದ ಜತೆ ಅಮೆರಿಕಕ್ಕೆ ಪ್ರಯಾಣ ಮಾಡಿರಲಿಲ್ಲ. ತಂಡವಾಗಿ ತಂಡ ಸೇರಿಕೊಂಡಿದ್ದರು.

Continue Reading

ಕ್ರಿಕೆಟ್

Smriti Mandhana : ಬಾಯ್​ಫ್ರೆಂಡ್​ ಜತೆಗಿನ ಐದು ವರ್ಷಗಳ ಬಾಂಧವ್ಯವನ್ನು ಕೇಕ್​ ಕಟ್​ ಮಾಡುವ ಮೂಲಕ ಸಂಭ್ರಮಿಸಿದ ಸ್ಮೃತಿ ಮಂದಾನಾ

Smriti Mandhana : ನಟರಾದ ರುಬಿನಾ ದಿಲೈಕ್, ಅವಿಕಾ ಗೋರ್ ಮತ್ತಿರರರು ಈ ಪೋಸ್ಟ್​​ಗೆ ಹೃದಯದ ಎಮೋಜಿಳನ್ನು ಹಾಕಿ ಪ್ರತಿಕ್ರಿಯಿಸಿದ್ದಾರೆ. ರುಬಿನಾ ದಿಲೈಕ್ “ನೀವಿಬ್ಬರೂ” ಎಂದು ಬರೆದಿದ್ದರೆ, ನಟ ಪಾರ್ಥ್ ಸಮಥಾನ್ ಮತ್ತು ಅವಿಕಾ ಗೋರ್ ಕೂಡ ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

VISTARANEWS.COM


on

Smriti Mandhana
Koo

ಬೆಂಗಳೂರು ಖ್ಯಾತ ಕ್ರಿಕೆಟ್ ಆಟಗಾರ್ತಿ ಹಾಗೂ ಭಾರತ ತಂಡದ ಆರಂಭಿಕ ಬ್ಯಾಟರ್​ ಸ್ಮೃತಿ ಮಂದಾನ (Smriti Mandhana ) ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚಲ್ ಇತ್ತೀಚೆಗೆ ಐದು ವರ್ಷಗಳ ಬಾಂಧವ್ಯವನ್ನು ಒಟ್ಟಾಗಿ ಸಂಭ್ರಮಿಸಿದ್ದಾರೆ. ಈ ಜೋಡಿ ಕೇಕ್ ಕತ್ತರಿಸಿ ಫೋಟೋಗಳಿಗೆ ಪೋಸ್ ನೀಡುವ ಮೂಲಕ ಖುಷಿ ಪಟ್ಟಿದ್ದಾರೆ. ಪಲಾಶ್ ತನ್ನ ಇನ್​ಸ್ಟಾಗ್ರಅಮ್​ ಹ್ಯಾಂಡಲ್​ನಲ್ಲಿ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಲಾಶ್ ಅವರು ಅದಕ್ಕೆ ಸರಳ ಶೀರ್ಷಿಕೆ ಕೊಟ್ಟಿದ್ದು, ಕೇವಲ ‘ಐದು’ ಎಂದು ಬರೆದಿದ್ದಾರೆ. ಅವರು ಕ್ರೀಡಾಪಟುವಿನೊಂದಿಗೆ ಅವರು ಎಷ್ಟು ವರ್ಷಗಳ ಸಂಬಂಧ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ನಟರಾದ ರುಬಿನಾ ದಿಲೈಕ್, ಅವಿಕಾ ಗೋರ್ ಮತ್ತಿರರರು ಈ ಪೋಸ್ಟ್​​ಗೆ ಹೃದಯದ ಎಮೋಜಿಳನ್ನು ಹಾಕಿ ಪ್ರತಿಕ್ರಿಯಿಸಿದ್ದಾರೆ. ರುಬಿನಾ ದಿಲೈಕ್ “ನೀವಿಬ್ಬರೂ” ಎಂದು ಬರೆದಿದ್ದರೆ, ನಟ ಪಾರ್ಥ್ ಸಮಥಾನ್ ಮತ್ತು ಅವಿಕಾ ಗೋರ್ ಕೂಡ ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

ಅಭಿಮಾನಿಗಳು ಸಹ ಯುವ ಜೋಡಿಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದಾರೆ. . “5 ವರ್ಷಗಳು ಪೂರ್ಣಗೊಂಡಿವೆ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬರು “ಸ್ಮೃತಿ ಮಂದಾನಗೆ ಗೌರವ ತೋರಿದ್ದಾರೆ. “ಅಭಿನಂದನೆಗಳು, ಸುಂದರ ಜೋಡಿ , ಮತ್ತೊಂದು ಪಾಲುದಾರಿಕೆಗಾಗಿ” ಎಂದೆಲ್ಲ ಕಾಮೆಂಟ್​ಗಳು ಬಂದಿವೆ.

ಇದನ್ನೂ ಓದಿ: Yuzvendra Chahal : ಪತ್ನಿ ಧನಶ್ರೀ ವರ್ಮಾಗೆ ವಿಶ್ವ ಕಪ್​ ಪದಕ ಅರ್ಪಿಸಿದ ಯಜ್ವೇಂದ್ರ ಚಹಲ್​

ಸಂಗೀತ ಸಂಯೋಜಕ ಪಲಾಶ್ ಮುಚಲ್ ಇತ್ತೀಚೆಗೆ ರಾಜ್ಪಾಲ್ ಯಾದವ್ ಅಭಿನಯದ ಅರ್ಧ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರು ‘ಡಿಶ್ಕಿಯೂನ್’ ಮತ್ತು ‘ಸ್ವೀಟಿ ವೆಡ್ಸ್ ಎನ್ಆರ್​ಐ ‘ ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ಮೃತಿ ಮಂದಾನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಎಡಗೈ ಆರಂಭಿಕ ಬ್ಯಾಟ್ಸ್ಮನ್. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕ ದಿನ ಸರಣಿಯ ವೇಳೆ ಸತತ ಎರಡು ಶತಕ ಹಾಗೂ ಒಂದು ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ.

ಸ್ಮೃತಿ ಮಂದಾನ ಅವರು ಭಾರತ ಕ್ರಿಕೆಟ್ ತಂಡದ ಅತ್ಯಂತ ನೆಚ್ಚಿನ ಆಟಗಾರ್ತಿಯಾಗಿದ್ದಾರೆ. ಮಹಿಳೆಯ ಕ್ರಿಕೆಟ್ ತಂಡದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಬ್ಯಾಟಿಂಗ್ ಪ್ರದರ್ಶನವೂ ಅದಕ್ಕೆ ಪೂರಕವಾಗಿದೆ. 2024ರ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್​ನಲ್ಲಿ ಅವರು ಆರ್​ಸಿಬಿ ತಂಡವನ್ನು ಪ್ರಶಸ್ತಿಯ ಕಡೆಗೆ ಮುನ್ನಡೆಸಿದ್ದು ಅವರು ದೊಡ್ಡ ಸಾಧನೆಯಾಗಿದೆ.

ಮಂಧಾನ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲೂ ಶತಕ ಬಾರಿಸಿದ್ದಾರೆ. ಇದೀಗ ನಡೆಯುತ್ತಿರುವ ಟಿ20 ಸರಣಿಯ ಪಂದ್ಯದಲ್ಲೂ ಆಡುತ್ತಿದ್ದಾರೆ.

Continue Reading

ಕ್ರಿಕೆಟ್

Yuzvendra Chahal : ಪತ್ನಿ ಧನಶ್ರೀ ವರ್ಮಾಗೆ ವಿಶ್ವ ಕಪ್​ ಪದಕ ಅರ್ಪಿಸಿದ ಯಜ್ವೇಂದ್ರ ಚಹಲ್​

Yuzvendra Chahal : ತವರಿಗೆ ಮರಳಿದ ನಂತರ, ಯಜುವೇಂದ್ರ ಚಾಹಲ್ ಈಗ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಗೆ ಗೆಲುವಿನ ಪದಕವನ್ನು ಅರ್ಪಿಸಿದ್ದಾರೆ. ಟೀಮ್ ಇಂಡಿಯಾ ಪರ ಟ್ರೋಫಿ ಗೆಲ್ಲವಲು ‘ಲೇಡಿ ಲಕ್’ ತಂದಿರುವುದು ಪತ್ನಿ ಧನಶ್ರೀ ಎಂಬರ್ಥದಲ್ಲಿ ಹೇಳಿದ್ದಾರೆ. ಯಜ್ವೇಂದ್ರ ಹಾಗೂ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಪ್ರೀತಿಸಿ ಮದುವೆಯಾಗಿದ್ದು ಕ್ರಿಕೆಟ್​ನ ಸ್ಟಾರ್ ದಂಪತಿ ಎನಿಸಿಕೊಂಡಿದ್ದಾರೆ. ಆದಾಗ್ಯೂ ಅವರ ಸಂಬಂಧಗಳ ಬಗ್ಗೆ ಆಗಾಗ ಅನಗತ್ಯ ಮಾತುಗಳು ಕೇಳಿ ಬರುತ್ತಿರುತ್ತವೆ. ಆದರೆ ಚಹಲ್ ತಮ್ಮಿಬ್ಬರ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ.

VISTARANEWS.COM


on

Yuzvendra Chahal
Koo

ಬೆಂಗಳೂರು: ಜುಲೈ 4 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತದ 2024 ರ ಟಿ 20 ವಿಶ್ವಕಪ್ ವಿಜಯೋತ್ಸವದಲ್ಲಿ ಯುಜ್ವೇಂದ್ರ ಚಹಲ್ (Yuzvendra Chahal ತಮ್ಮ ಇತರ ಸಹ ಆಟಗಾರರೊಂದಿಗೆ ಭಾಗವಹಿಸಿದ್ದರು. ಅವರು ಟೂರ್ನಿಯಲ್ಲಿ ಆಡಲು ಅವಕಾಶ ಪಡೆಯದ ಹೊರತಾಗಿಯೂ ಪ್ರಭಾವ ಬೀರಬಲ್ಲ ಆಟಗಾರರಾಗಿದ್ದರು. ಆದಾಗ್ಯೂ ಗೆಲುವಿನ ಶ್ರೇಯಸ್ಸು ಅವರಿಗೂ ದೊರೆಯಬೇಕಾಗಿದೆ. ಅಂತೆಯೇ ಜೂನ್ 29 ರಂದು ಬಾರ್ಬಡೋಸ್​ನಲ್ಲಿ ನಡೆದ ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟಿ 20 ವಿಶ್ವ ಪ್ರಶಸ್ತಿ ಗೆದ್ದ ವಿಜೇತ ಭಾರತೀಯ ಗುಂಪಿನ ಭಾಗವಾಗಿದ್ದು ಅವರಿಗೆ ಹೆಮ್ಮೆಯ ಸಂಗತಿ.

ತವರಿಗೆ ಮರಳಿದ ನಂತರ, ಯಜುವೇಂದ್ರ ಚಹಲ್ (Yuzvendra Chahal) ಈಗ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಗೆ ಗೆಲುವಿನ ಪದಕವನ್ನು ಅರ್ಪಿಸಿದ್ದಾರೆ. ಟೀಮ್ ಇಂಡಿಯಾ ಪರ ಟ್ರೋಫಿ ಗೆಲ್ಲವಲು ‘ಲೇಡಿ ಲಕ್’ ತಂದಿರುವುದು ಪತ್ನಿ ಧನಶ್ರೀ ಎಂಬರ್ಥದಲ್ಲಿ ಹೇಳಿದ್ದಾರೆ. ಯಜ್ವೇಂದ್ರ ಹಾಗೂ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಪ್ರೀತಿಸಿ ಮದುವೆಯಾಗಿದ್ದು ಕ್ರಿಕೆಟ್​ನ ಸ್ಟಾರ್ ದಂಪತಿ ಎನಿಸಿಕೊಂಡಿದ್ದಾರೆ. ಆದಾಗ್ಯೂ ಅವರ ಸಂಬಂಧಗಳ ಬಗ್ಗೆ ಆಗಾಗ ಅನಗತ್ಯ ಮಾತುಗಳು ಕೇಳಿ ಬರುತ್ತಿರುತ್ತವೆ. ಆದರೆ ಚಹಲ್ ತಮ್ಮಿಬ್ಬರ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ.


ಯಜುವೇಂದ್ರ ಚಹಲ್ ಜುಲೈ 6 ರಂದು ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ತಮ್ಮ ಪತ್ನಿ ಧನಶ್ರೀ ಚಾಹಲ್ ಅವರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕ್ರಿಕೆಟಿಗ 2024 ರ ಟಿ 20 ವಿಶ್ವಕಪ್ ವಿಜೇತ ಪದಕವನ್ನು ಸಹ ಹಿಂದಿನಿಂದ ಹಿಡಿದುಕೊಂಡಿದ್ದರು. ಇದೇ ವೇಳೆ ಅವರು “ಲೇಡಿ ಲಕ್” ಎಂದು ಶೀರ್ಷಿಕೆಯಲ್ಲಿ ಕೊಟ್ಟಿದ್ದಾರೆ.

ಯಜುವೇಂದ್ರ ಚಾಹಲ್ ಜೂನ್​​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆದ 2024 ರ ಟಿ 20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರೂ, ಲೆಗ್ ಸ್ಪಿನ್ನರ್ ಪಂದ್ಯಾವಳಿಯುದ್ದಕ್ಕೂ ಪ್ಲೇಯಿಂಗ್ ಇಲೆವೆನ್​​ನಲ್ಲಿ ಒಂದೇ ಒಂದು ಅವಕಾಶ ಪಡೆಯಲಿಲ್ಲ. ಚಾಹಲ್ ಅವರು ಟೀಮ್ ಇಂಡಿಯಾಕ್ಕಾಗಿ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಗಸ್ಟ್ 2023 ರಲ್ಲಿ ಲಾಡರ್​ಹಿಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಆಡಿದ್ದರು.

ಇದನ್ನೂ ಓದಿ: Abhishek Sharma : ಅಭಿಷೇಕ್ ಶರ್ಮಾ ದಾಖಲೆಯ ಶತಕ ಬಾರಿಸಿದ್ದು ಶುಭ್​​ಮನ್ ಗಿಲ್​ ಬ್ಯಾಟ್​ನಲ್ಲಿ!

72 ಏಕದಿನ ಮತ್ತು 80 ಟಿ 20 ಐ ಪಂದ್ಯಗಳನ್ನು ಆಡಿದ ಅನುಭವಿ 34 ವರ್ಷದ ಸ್ಪಿನ್ನರ್​ ಇಲ್ಲಿಯವರೆಗೆ ಎರಡೂ ಸ್ವರೂಪಗಳಲ್ಲಿ ಒಟ್ಟು 217 ಅಂತರರಾಷ್ಟ್ರೀಯ ವಿಕೆಟ್​ಗಳನ್ನು ಪಡೆದಿದ್ದಾರೆ.

ಇತ್ತೀಚೆಗೆ, ಅವರು ಈ ವರ್ಷದ ಐಪಿಎಲ್ 2024 ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದರು.

ಈಗಿನಂತೆ, ಯಜುವೇಂದ್ರ ಚಾಹಲ್ ಸೀಮಿತ ಓವರ್ಗಳ ನಿಯೋಜನೆಗಾಗಿ ಭಾರತೀಯ ತಂಡಕ್ಕೆ ಮತ್ತೊಂದು ಕರೆಯನ್ನು ಯಾವಾಗ ಪಡೆಯುತ್ತಾರೆ ಎಂಬುದನ್ನು ನೋಡಬೇಕಾಗಿದೆ.

Continue Reading
Advertisement
ರಾಹುಲ್‌ ಗಾಂಧಿ rahul gandhi ippb account 2 pm narendra modi
ಪ್ರಮುಖ ಸುದ್ದಿ3 mins ago

PM Narendra Modi: ಟಕಾಟಕ್‌ ಆಯ್ತು, ಈಗ ಮೋದಿ 3 ಸಾವಿರಕ್ಕಾಗಿ ಪೋಸ್ಟ್‌ ಆಫೀಸ್‌ ಮುಂದೆ ಮಹಿಳೆಯರ ಕ್ಯೂ!

Gautam Gambhir
ಪ್ರಮುಖ ಸುದ್ದಿ29 mins ago

Gautam Gambhir : ಗಂಭೀರ್ ಕೆಕೆಆರ್ ತೊರೆಯುವುದು ನಿಶ್ಚಿತ​; ಈಡನ್​ ಗಾರ್ಡನ್ಸ್​​ನಲ್ಲಿ ವಿದಾಯದ ಶೂಟಿಂಗ್

Actor Darshan Lost KG In 25 Days
ಕ್ರೈಂ41 mins ago

Actor Darshan: 25 ದಿನಕ್ಕೆ ದರ್ಶನ್‌ ತೂಕ ಕಳೆದುಕೊಂಡಿದ್ದು ಇಷ್ಟೊಂದಾ?

road accident vijayapura
ವಿಜಯಪುರ51 mins ago

Road Accident: ಬಸ್‌ ಹರಿದು ವ್ಯಕ್ತಿ ಸಾವು; ಮರಳೇಕಾಯಿ ತಿಂದು 8 ಮಕ್ಕಳು ಅಸ್ವಸ್ಥ

Virat kohli
ಪ್ರಮುಖ ಸುದ್ದಿ54 mins ago

Virat Kohli : ಇನ್​ಸ್ಟಾಗ್ರಾಮ್ ಪೋಸ್ಟ್​ ಮೂಲಕ ಬಿಟಿಎಸ್​ ಬ್ಯಾಂಡ್​ನ ದಾಖಲೆ ಮುರಿದ ವಿರಾಟ್​ ಕೊಹ್ಲಿ

Period Insomnia
ಆರೋಗ್ಯ1 hour ago

Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

Kundapura Kannada This time Kundapura Kannada Festival at the palace grounds Here is the list of program
ಉಡುಪಿ1 hour ago

Kundapura Kannada:  ಅರಮನೆ ಮೈದಾನದಲ್ಲಿ ಈ ಬಾರಿ `ವಿಶ್ವ ಕುಂದಾಪುರ ಕನ್ನಡ ಹಬ್ಬ’; ಕಾರ್ಯಕ್ರಮದ ವಿವರ ಪಟ್ಟಿ ಇಲ್ಲಿದೆ!

swamiji death kalaburagi viraktha math
ಕಲಬುರಗಿ1 hour ago

Swamiji Death: ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ ವಿಧಿವಶ

Smriti Mandhana
ಕ್ರಿಕೆಟ್1 hour ago

Smriti Mandhana : ಬಾಯ್​ಫ್ರೆಂಡ್​ ಜತೆಗಿನ ಐದು ವರ್ಷಗಳ ಬಾಂಧವ್ಯವನ್ನು ಕೇಕ್​ ಕಟ್​ ಮಾಡುವ ಮೂಲಕ ಸಂಭ್ರಮಿಸಿದ ಸ್ಮೃತಿ ಮಂದಾನಾ

child abandon
ಕ್ರೈಂ1 hour ago

Child Abandon: ಮೂರು ತಿಂಗಳ ಮಗು ಬಿಟ್ಟು ತಾಯಿ ಪರಾರಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ14 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ17 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ18 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌