Health Tips Kannada: ಹೊಟ್ಟೆಯುಬ್ಬರಕ್ಕೆ ಇವೆ ಸರಳ ಮನೆಮದ್ದುಗಳು - Vistara News

ಆರೋಗ್ಯ

Health Tips Kannada: ಹೊಟ್ಟೆಯುಬ್ಬರಕ್ಕೆ ಇವೆ ಸರಳ ಮನೆಮದ್ದುಗಳು

Health Tips Kannada: ಬೀನ್ಸ್‌, ಕಾಳುಗಳು, ಎಲೆಕೋಸು, ಬ್ರೊಕೊಲಿ, ತೀರಾ ಉಪ್ಪಿನ ತಿನಿಸುಗಳು ಹೊಟ್ಟೆಯಲ್ಲಿ ವಾಯುವಿನ ಉಪಟಳವನ್ನು ಹೆಚ್ಚಿಸುತ್ತವೆ. ಕೆಲವರಿಗೆ ಗೋದಿ ಸೇವಿಸಿದರೆ ಅಥವಾ ಹಾಲು ಕುಡಿದಾಗಲೂ ಹೊಟ್ಟೆ ಊದಿಕೊಂಡು ಪುಗ್ಗಿಯಂತಾಗುತ್ತದೆ. ಇಂಥ ಹೊಟ್ಟೆಯುಬ್ಬರಕ್ಕೆ ಕೆಲವು ಸರಳವಾದ ಮನೆಮದ್ದುಗಳು ಪರಿಣಾಮಕಾರಿ ಉಪಶಮನ ನೀಡಬಲ್ಲವು. ಇಲ್ಲಿದೆ ಹೆಚ್ಚಿನ ಮಾಹಿತಿ.

VISTARANEWS.COM


on

Stomach Ache. Women Have Abdominal Pain, Indigestion, Gastritis,
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಟ್ಟೆ ಉಬ್ಬರಿಸುವುದು (Health Tips Kannada) ಎಲ್ಲರಿಗೂ ಎಂದಾದರೂ ಇದ್ದಿದ್ದೇ. ಊಟ ಮಾಡಿದ್ದಕ್ಕಿಂತಲೂ ಹೆಚ್ಚು ಹೊಟ್ಟೆ ಭಾರ ಎನಿಸುವುದು, ಹೊಟ್ಟೆಯೇ ಊದಿಕೊಂಡ ಅನುಭವ, ಒಂದೇ ಸಮನೆ ತೇಗು, ವಾಯುವಿನ ಉಪದ್ರದಿಂದ ಬರುವ ಹೊಟ್ಟೆನೋವು- ಇವೆಲ್ಲ ಜೀರ್ಣಾಂಗಗಳಲ್ಲಿ ಏನೋ ಸರಿ ಇಲ್ಲ ಎಂಬುದನ್ನು ಸೂಚಿಸುತ್ತವೆ. ಹೀಗಾಗುವುದಕ್ಕೆ ಕಾರಣಗಳು ಇಲ್ಲದಿಲ್ಲ. ಸರಿಯಾಗಿ ಅಗಿಯದೆ ಗಬಗಬ ತಿನ್ನುವುದು, ನೀರು ಕುಡಿಯುವಾಗ ಒಂದಿಷ್ಟು ಗಾಳಿಯನ್ನೂ ಕುಡಿಯುವುದು, ಸಿಕ್ಕಾಪಟ್ಟೆ ತಿನ್ನುವುದು, ಅಜೀರ್ಣ, ಮಲಬದ್ಧತೆ, ಯಕೃತ್‌ನ ತೊಂದರೆಗಳು, ಗರ್ಭಾವಸ್ಥೆಯೇ ಮುಂತಾದ ಹಲವು ಕಾರಣಗಳಿರಬಹುದು ಹೊಟ್ಟೆ ಉಬ್ಬರಿಸುವುದಕ್ಕೆ. ಕೆಲವು ಆಹಾರಗಳು ಹೊಟ್ಟೆಯಲ್ಲಿ ವಾಯುವಿನ ಉಪಟಳವನ್ನು ಉಂಟುಮಾಡುತ್ತವೆ. ಬೀನ್ಸ್‌, ಕಾಳುಗಳು, ಎಲೆಕೋಸು, ಬ್ರೊಕೊಲಿ, ತೀರಾ ಉಪ್ಪಿನ ತಿನಿಸುಗಳು ಈ ಸಾಲಿಗೆ ಸೇರಿವೆ. ಕೆಲವರಿಗೆ ಗೋದಿ ಸೇವಿಸಿದರೆ ಅಥವಾ ಹಾಲು ಕುಡಿದಾಗಲೂ ಹೊಟ್ಟೆ ಊದಿಕೊಂಡು ಪುಗ್ಗಿಯಂತಾಗುತ್ತದೆ. ಹೀಗೆ ಪದೇಪದೆ ಆಗುತ್ತಿದ್ದರೆ ಜೀರ್ಣಾಂಗಗಳ ಸ್ಥಿತಿಗತಿಯನ್ನೊಮ್ಮೆ ವೈದ್ಯರಿಂದ ಪರಿಶೀಲಿಸಿಕೊಳ್ಳುವುದು ಸೂಕ್ತ. ಇರಿಟಬಲ್‌ ಬವೆಲ್‌ ಸಿಂಡ್ರೋಮ್‌, ಜಿಇಆರ್‌ಡಿ ಮುಂತಾದ ತೊಂದರೆಗಳು ಜೀರ್ಣಾಂಗಗಳ ಆರೋಗ್ಯವನ್ನು ಬುಡಮೇಲು ಮಾಡುತ್ತಿದ್ದರೆ, ಅದಕ್ಕೆ ಚಿಕಿತ್ಸೆ ಅಗತ್ಯ. ತಿನ್ನುವ ಆಹಾರದಲ್ಲಿ ಯಾವುದು ಹೊಟ್ಟೆಗೆ ಒಗ್ಗುತ್ತದೆ ಎಂಬ ಬಗ್ಗೆಯೂ ಗಮನ ಬೇಕು. ಜೊತೆಗೆ, ಕಾಳುಗಳನ್ನು ದೀರ್ಘಕಾಲ ನೆನೆಸುವುದು, ನಡುವೆ ಒಂದೆರಡು ಸಾರಿ ನೀರು ಬದಲಾಯಿಸುವುದರಿಂದ ಅದರಲ್ಲಿರುವ ಹೊಟ್ಟೆ ಊದಿಸುವ ರಾಸಾಯನಿಕದ ಅಂಶವನ್ನು ಕಡಿಮೆ ಮಾಡಬಹುದು. ಸೋಡಾದಂಥ ಕಾರ್ಬನ್‌ಯುಕ್ತ ಪೇಯಗಳು ಪರಿಸ್ಥಿತಿಯನ್ನು ಬಿಗಡಾಯಿಸುತ್ತವೆ. ಈ ಅವ‍ಸ್ಥೆಯ ಉಪಶಮನಕ್ಕೆ ಕೆಲವು ಸರಳ ಮನೆಮದ್ದುಗಳು ಅಥವಾ ಚಹ/ಕಷಾಯಗಳು ಇಲ್ಲಿವೆ.

Peppermint tea for Hot Flashes During Period

ಪುದೀನಾ ಚಹ

ಇದರಲ್ಲಿರುವ ಮೆಂಥಾಲ್‌ ಅಂಶವು ಸ್ನಾಯುಗಳ ಸಂಕೋಚವನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗಗಳ ಸ್ನಾಯುಗಳನ್ನು ಸಡಿಲ ಮಾಡಿ, ಬಿಗಿದ ಹೊಟ್ಟೆಗೆ ಆರಾಮ ನೀಡುತ್ತದೆ. ಒಂದು ಲೋಟ ನೀರಿಗೆ ಅರ್ಧ ಹಿಡಿ ಪುದೀನಾ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ, ಬೆಚ್ಚಗಿರುವಾಗಲೇ ಕುಡಿದರೆ ಹೊಟ್ಟೆಯುಬ್ಬರ, ಗ್ಯಾಸ್‌ ಕಡಿಮೆಯಾಗುತ್ತದೆ.

Ginger tea

ಶುಂಠಿ ಚಹ

ಈ ಬೇರು ವಾಯುಹರವೆಂದೇ ಪ್ರಸಿದ್ಧಿ ಪಡೆದಿದೆ. ಹೊಟ್ಟೆಯೊಳಗಿನ ಉರಿಯೂತವನ್ನು ಶಮನ ಮಾಡಿ, ಜೀರ್ಣಾಂಗಗಳ ಆರೋಗ್ಯವನ್ನು ಸುಧಾರಿಸುತ್ತದೆ. ಇದರಿಂದಾಗಿ ಅಜೀರ್ಣ, ಹೊಟ್ಟೆನೋವು ಕಡಿಮೆಯಾಗುತ್ತದೆ. ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಕೊಂಚ ಬಿಸಿ ಇರುವಾಗಲೇ ಕುಡಿದು ಆರಾಮ ಪಡೆಯಿರಿ.

ಸೋಂಪಿನ ಚಹ

ಜೀರ್ಣಾಂಗಗಳ ಸಾಮರ್ಥ್ಯ ಸುಧಾರಿಸುವುದಕ್ಕೆ ಮತ್ತು ವಾಯುಪ್ರಕೋಪ ಕಡಿಮೆ ಮಾಡುವುದಕ್ಕೆ ಇದು ಅತ್ಯಂತ ಉಪಯುಕ್ತವಾದ ಪೇಯ. ಇದು ಕರುಳಿನ ಬಾಧೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಜೀರ್ಣಕ್ರಿಯೆಯನ್ನು ಪ್ರಚೋದಿಸಿ ಇನ್ನೂ ಹೆಚ್ಚಿನ ವಾಯುಬಾಧೆ ಆಗದಂತೆ ತಡೆಯುತ್ತದೆ. ಇದನ್ನು ಬಾಯಿಗೆ ಹಾಕಿ ಜಗಿದು ತಿನ್ನಲೂಬಹುದು, ಚಹಾ/ಕಷಾಯಗಳನ್ನೇ ಸೇವಿಸಬೇಕೆಂದಿಲ್ಲ.

Cumin water or decoction is also helpful in this regard Tips For Reduce Flatulence

ಜೀರಿಗೆ ಕಷಾಯ

ಎಂಥ ಹಠಮಾರಿ ಹೊಟ್ಟೆಯುಬ್ಬರವನ್ನಾದರೂ ಓಡಿಸಬಲ್ಲ ಸಾಮರ್ಥ್ಯ ಜೀರಿಗೆಯದ್ದು. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಜೀರ್ಣಾಂಗಗಳ ಆರೋಗ್ಯವನ್ನು ಸುಧಾರಿಸಿ, ಪಚನಕ್ರಿಯೆಯನ್ನೂ ಉತ್ತಮಗೊಳಿಸಬಹುದು. ಆಸಿಡಿಟಿಯಂಥ ತೊಂದರೆಯಿದ್ದು, ತೇಗು ಬರುತ್ತಿದ್ದರೆ ಇದು ಒಳ್ಳೆಯ ಔಷಧಿ.

Coriander infusion

ಕೊತ್ತಂಬರಿ ಕಷಾಯ

ಧನಿಯಾ ಬೀಜಗಳ ಸದ್ಗುಣಗಳು ಒಂದೆರಡೇ ಅಲ್ಲ. ಜೀರ್ಣಾಂಗಗಳ ಉರಿಯೂತವನ್ನು ಕಡಿಮೆ ಮಾಡಿ, ಅವುಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ. ಜೊತೆಗೆ ಹೊಟ್ಟೆಯಲ್ಲಿನ ಕಚ್ಚುವ-ಚುಚ್ಚುವ ನೋವನ್ನು ಕಡಿಮೆ ಮಾಡಿ, ಬಿಡುಗಡೆಯ ಭಾವ ಮೂಡಿಸುತ್ತದೆ.

ಇದನ್ನೂ ಓದಿ: Seedling Potatoes: ಮೊಳಕೆ ಬಂದ ಆಲೂಗಡ್ಡೆಯನ್ನು ತಿನ್ನೋದು ಒಳ್ಳೆಯದಲ್ಲ, ಯಾಕೆ ಗೊತ್ತೇ?

ದಾಲ್ಚಿನ್ನಿ ಚಹ

ಸಿನ್ನಮನ್‌ ಚಹ ಹಲವು ದೇಶಗಳಲ್ಲಿ ಪ್ರಸಿದ್ಧ. ಗಾಢವಾದ ಸುವಾಸನೆಯಿಂದಲೇ ಸೆಳೆಯುವ ಈ ಚಹ ತನ್ನ ಪರಿಮಳಕ್ಕೆ ಮಾತ್ರವಲ್ಲ, ಜೀರ್ಣಕಾರಿ ಗುಣಗಳಿಗೂ ಹೆಸರುವಾಸಿ. ತಿಂದಿದ್ದು ಪಚನವಾಗುವಂತೆ ಮಾಡಿ, ಅಜೀರ್ಣದಿಂದ ಹೊಟ್ಟೆಯುಬ್ಬರಿಸುವುದನ್ನು ಕಡಿಮೆ ಮಾಡುತ್ತದೆ. ಮನಸ್ಸಿಗೂ ಆರಾಮ ನೀಡಿ, ಒತ್ತಡ ಕಡಿಮೆ ಮಾಡುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Fortis Hospital: 111 ಕೆಜಿ ತೂಕವಿದ್ದ ಬಾಲಕನಿಗೆ ಪಾರ್ಶ್ವವಾಯು ತಪ್ಪಿಸಿದ ʼಬೆನ್ನೆಲುಬಿನ ಡಿಸ್ಕ್ʼ ಶಸ್ತ್ರಚಿಕಿತ್ಸೆ

Fortis Hospital: ಬೆನ್ನುಮೂಳೆಯ ಡಿಸ್ಕ್‌ಲೊಕೇಟ್ ಆಗಿದ್ದ ಪರಿಣಾಮ, ಪಾರ್ಶ್ವವಾಯುಗೆ ಒಳಗಾಗುವ ಸಾಧ್ಯತೆ ಇದ್ದ 111 ಕೆ.ಜಿ. ತೂಕದ 15 ವರ್ಷದ ಬಾಲಕನಿಗೆ, ‘ಮೈಕ್ರೋ-ಲುಂಬಾರ್ ಡಿಸ್ಸೆಕ್ಟಮಿ’ ಎಂಬ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯನ್ನು ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಮಾಡಿದೆ.

VISTARANEWS.COM


on

A 15 year old boy weighing 111 kg underwent successful spinal disc surgery that avoided potential paralysis
Koo

ಬೆಂಗಳೂರು: ಬೆನ್ನುಮೂಳೆಯ ಡಿಸ್‌ಲೋಕೇಟ್ ಆಗಿದ್ದ ಪರಿಣಾಮ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಇದ್ದ 111 ಕೆ.ಜಿ. ತೂಕದ 15 ವರ್ಷದ ಬಾಲಕನಿಗೆ, ‘ಮೈಕ್ರೋ-ಲುಂಬಾರ್ ಡಿಸ್ಸೆಕ್ಟಮಿ’ ಎಂಬ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯನ್ನು ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿಯಾಗಿ ಮಾಡಿದೆ.

ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಸಲಹೆಗಾರ ಡಾ. ಗಣೇಶ್ ವಿ. ನೇತೃತ್ವದ ತಂಡ ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಕುರಿತು ಮಾತನಾಡಿದ ಅವರು, 111 ಕೆ.ಜಿ. ತೂಕದ ಹೊಂದಿದ್ದ 15 ವರ್ಷದ ಸೈಯದ್ ಸಲಾಹುದೀನ್ ಕ್ವಾದ್ರಿ ಎಂಬ ಬಾಲಕನಿಗೆ ಕಾರಣಾಂತರಗಳಿಂದ ಬೆನ್ನಿನ ಮೂಳೆಯ ಡಿಸ್‌ಲೊಕೇಟ್‌ ನಿಂದ ಅಸಾಧ್ಯ ನೋವು ಕಾಣಿಸಿಕೊಂಡಿತ್ತು. ಈ ನೋವು ಕ್ರಮೇಣ ಬೆನ್ನಿನಿಂದ ಕಣಕಾಲುವರೆಗೂ ಹಬ್ಬಿತ್ತು.

ಇದನ್ನೂ ಓದಿ: Assembly Session: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ; ಏನೆಲ್ಲ ಅರ್ಹತೆ ಇರಬೇಕು?

ನಾಲ್ಕು ತಿಂಗಳುಗಳ ಕಾಲ ಈ ನೋವನ್ನು ಹಾಗೇ ನಿರ್ಲಕ್ಷಿಸಿದ್ದಾರೆ. ಪರಿಣಾಮ ಈ ಬಾಲಕ ನಡೆಯಲು, ಕೂರಲು ಸಹ ಆಗದಷ್ಟು ಅಗಾಧ ನೋವಿಗೆ ಒಳಗಾಗಿದ್ದ. ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಎಂಆರ್‌ಐ ಸ್ಕ್ಯಾನ್‌ ಮಾಡುವ ಮೂಲಕ ಅವರ ಬೆನ್ನುಮೂಳೆಯ L3-L4 ಮಟ್ಟದಲ್ಲಿ ತೀವ್ರವಾದ ಪೋಸ್ಟರೊಸೆಂಟ್ರಲ್ ಡಿಸ್ಕ್ ಎಕ್ಸ್‌ಟ್ರಶನ್ ಆಗಿರುವುದು ಬಹಿರಂಗವಾಯಿತು. ಹೀಗಾಗಿ ಬಾಲಕನ ಕಣಕಾಲಿನವರೆಗೂ ಡಿಸ್‌ಲೊಕೇಟ್‌ನ ಪರಿಣಾಮ ಸಂಭವಿಸಿತ್ತು.

ಈ ನೋವನ್ನು ಹೀಗೆ ನಿರ್ಲಕ್ಷ್ಯ ಮಾಡಿದ್ದರೆ ಮುಂದೊಂದು ದಿನ ಆ ಕಾಲು ಪಾರ್ಶ್ವವಾಯು ಆಗುವ ಸಾಧ್ಯತೆ ತುಂಬಾ ಇತ್ತು. ಬಾಲಕನ ಆರೋಗ್ಯದ ಗಂಭೀರತೆಯನ್ನು ಪರಿಗಣಿಸಿ ಆತನಿಗೆ ಮೈಕ್ರೊ-ಲುಂಬರ್ ಡಿಸೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಿದೆವು, ಇದು ನರಗಳ ಮೇಲಿನ ಒತ್ತಡವನ್ನು ನಿವಾರಿಸಲು ಡಿಸ್‌ಲೊಕೇಟ್‌ ಆಗಿರುವ ಡಿಸ್ಕ್ ಅನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸಾ ವಿಧಾನವಾಗಿದೆ.

ಇದನ್ನೂ ಓದಿ: Assembly Session: ಕಾರ್ಮಿಕ ಇಲಾಖೆಯಿಂದ ಸಿನಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್!

ಬಾಲಕನ ತೂಕ ಅಧಿಕವಾಗಿದ್ದರಿಂದ ಈ ಶಸ್ತ್ರಚಕಿತ್ಸೆ ಸಾಕಷ್ಟು ಸವಾಲಾಗಿತ್ತು, ಆದರೂ ನಮ್ಮ ತಂಡ ಕಾರ್ಯಕ್ಷಮತೆಯಿಂದ ಸುರಕ್ಷತೆಯಾಗಿ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಶಸ್ತ್ರಚಿಕಿತ್ಸೆಯ ನಂತರ ಬಾಲಕನ ನೋವು ಸಂಪೂರ್ಣ ನಿವಾರಣೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Continue Reading

ಆರೋಗ್ಯ

Children Mobile Addiction: ನಮ್ಮ ಮಕ್ಕಳು ಎಷ್ಟು ಹೊತ್ತು ಮೊಬೈಲ್‌ ನೋಡಬಹುದು?

Children Mobile Addiction: ಮಕ್ಕಳಿಗೆ ದಿನದ ಸ್ಕ್ರೀನ್‌ ಸಮಯ ಎಷ್ಟಿರಬೇಕು? ಚಿಣ್ಣರು ಕೇಳುವಷ್ಟು ಹೊತ್ತೇ? ಹೆತ್ತವರಿಗೆ ಅನುಕೂಲ ಅಥವಾ ಪುರುಸೊತ್ತು ಆಗುವಲ್ಲಿಯವರೆಗೇ? ದಿನಕ್ಕಿಷ್ಟು ಹೊತ್ತು ಎಂದು ನಿಗದಿ ಮಾಡುವುದು ಸೂಕ್ತವೇ? ಹೆಚ್ಚು ಸಮಯ ಪರದೆಗೆ ಅಂಟಿಕೊಂಡಿದ್ದರೆ ಸಮಸ್ಯೆಯೇನು? ಇಂಥ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಮಕ್ಕಳ ಕೈಯಲ್ಲಿ ಸದಾ ಗೆಜೆಟ್‌ ಇದ್ದರೆ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಸುವ ಮಾಹಿತಿ ಇಲ್ಲಿದೆ.

VISTARANEWS.COM


on

By

Children Mobile Addiction
Koo

ಮಕ್ಕಳೆಂದರೆ ಹಾರಾಡುವ (Children Mobile Addiction) ಬಣ್ಣದ ಚಿಟ್ಟೆಗಳೆಂಬ (butterfly) ಭಾವ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಕೂತಲ್ಲೇ ಅಂಟಿಕೊಂಡು, ಕರೆದರೂ ಕೇಳದ ಸ್ಥಿತಿಯಲ್ಲಿ, ಮಾತು ಬಾರದವರಂತೆ, ಎದುರಿನವರ ಪರಿಚಯವೂ ಇಲ್ಲದಂತೆ, ಹಸಿವೆ-ನೀರಡಿಕೆಗಳ ಪರಿವೆಯಿಲ್ಲದಂತೆ ಕೂತಿರುತ್ತಾರೆ… ಕೈಯಲ್ಲೊಂದು ಮೊಬೈಲು (mobile) ಹಿಡಿದು.

ಅದನ್ನು ಅವರ ಕೈಯಿಂದ ಕಿತ್ತರೆ ಟ್ಯಾಬ್‌ ಹಿಡಿಯುತ್ತಾರೆ, ಅದನ್ನೂ ಕಸಿದುಕೊಂಡರೆ ಎಲ್ಲಿ ಲ್ಯಾಪ್‌ಟಾಪ್‌ ಸಿಗುವಂತಿದೆ ನೋಡುತ್ತಾರೆ, ಕಡೆಗೆ ಟಿವಿಯಾದರೂ ಬೇಕು. ಅಂತೂ ಕೈಯಲ್ಲೊಂದು ಸ್ಕ್ರೀನ್‌ ಇಲ್ಲದಿದ್ದರೆ ಮಕ್ಕಳು ತಾವಾಗಿರುವುದಿಲ್ಲ ಎಂಬಂತೆ ಭಾಸವಾಗುತ್ತದೆ. ಅವರನ್ನೇ ಬಿಟ್ಟರೆ ಎಚ್ಚರ ಇದ್ದಷ್ಟೂ ಹೊತ್ತು ಕೈಯಲ್ಲಿ ಗೆಜೆಟ್‌ ಹಿಡಿದೇ ಇರುತ್ತಾರೆ. ಆದರೆ ಚಿಕ್ಕ ಮಕ್ಕಳು, ಅಂದರೆ ನಾಲ್ಕು-ಐದು ವರ್ಷದ ಒಳಗಿನ ಮಕ್ಕಳು ದಿನಕ್ಕೆ ಎಷ್ಟು ಹೊತ್ತು ಸ್ಕ್ರೀನ್‌ ನೋಡಬಹುದು?

ಜಾರಿಕೊಳ್ಳುತ್ತಿದ್ದಾರೆ ಹೆತ್ತವರು

ಹೆತ್ತವರ ವಿಷಯಕ್ಕೆ ಬಂದರೆ, ಬಹಳ ಮಂದಿಗೆ ಮಕ್ಕಳು ತಮ್ಮಷ್ಟಕ್ಕೆ ತಾವಿರುವುದು ಅನುಕೂಲವೇ. ಅವರು ಏನಾದರೂ ಮಾಡಿಕೊಳ್ಳಲಿ, ತಮ್ಮ ತಂಟೆಗೆ ಬಾರದಿದ್ದರೆ ಸಾಕು ಎಂಬ ಮನಸ್ಥಿತಿ ಹೆಚ್ಚಿವರದ್ದು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.

ದಿನವಿಡೀ ದುಡಿದು ಹೈರಾಣಾಗಿ ಬಂದ ದೊಡ್ಡವರಿಗೂ ತಮ್ಮದೇ ಆದ ಸಮಯ ಬೇಕು. ಮನೆಯದ್ದೇ ಆದ ನಿತ್ಯದ ಕೆಲಸಗಳನ್ನು ನಿಭಾಯಿಸಬೇಕು. ಮಾರನೇ ದಿನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದಿಷ್ಟರ ನಡುವೆ ಮಕ್ಕಳನ್ನೂ ಸುಧಾರಿಸಬೇಕೆಂದರೆ…? ಹಾಗಾಗಿ ಸುಲಭದ ಉಪಾಯವೆಂಬಂತೆ ಅವರ ಕೈಗೊಂದು ಗೆಜೆಟ್‌ ಕೊಟ್ಟರೆ ಮುಗಿಯಿತು ಸಮಸ್ಯೆ. ಆದರಿದು ಸಾಧುವೇ? ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗಳ ಗತಿಯೇನು?ಮನೆಯಲ್ಲಿ ದೊಡ್ಡವರೂ ಕೈಯಲ್ಲಿರುವ ಮೊಬೈಲ್‌ ಗೀರುವುದನ್ನೇ ಮಕ್ಕಳು ಸದಾ ಕಾಣುವಾಗ ಅದನ್ನು ತಪ್ಪು ಎಂದು ಹೇಳುವುದು ಹೇಗೆ? ಅದು ಒಳ್ಳೆಯದಲ್ಲ ಎಂದು ಅರ್ಥ ಮಾಡಿಸುವುದು ಹೇಗೆ?

Children Mobile Addiction


ಏನಾಗುತ್ತದೆ?

ಮಕ್ಕಳ ಕೈಯಲ್ಲಿ ಸದಾ ಗೆಜೆಟ್‌ ಇದ್ದರೆ ಏನಾಗುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ದಿನಕ್ಕೆ ಮಿತಿಮೀರಿದ ಸ್ಕ್ರೀನ್‌ ಸಮಯದಿಂದಾಗಿ ಮಕ್ಕಳಲ್ಲಿ ಏಕಾಗ್ರತೆಯ ತೀವ್ರ ಸಮಸ್ಯೆ ಉಂಟಾಗುತ್ತದೆ. ಸಾಮಾಜಿಕ ಸಂಬಂಧಗಳು ಕಳಚಿ ಒಂಟಿತನದ ಭಾವನೆ ಎಳವೆಯಿಂದಲೇ ಬರುತ್ತದೆ. ಗಮನ ಸೆಳೆಯುವುದಕ್ಕಾಗಿ ರಚ್ಚೆ ಹಿಡಿಯುವ, ಅತಿಯಾದ ಚಂಚಲತೆಯನ್ನು ತೋರಿಸುತ್ತಾರೆ.

ಗಮನ ಕೊರತೆಯ ಅಸ್ವಸ್ಥತೆ (hyperactivity and attention deficit disorder) ಎಂದು ಕರೆಯಲಾಗುವ ಈ ಸಮಸ್ಯೆಯು ಮೆದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಈ ಎಲ್ಲವುಗಳ ಫಲವಾಗಿ, ಈ ಮಕ್ಕಳಲ್ಲಿ ಋಣಾತ್ಮಕ ವರ್ತನೆಗಳು ಕಂಡುಬರುತ್ತವೆ. ಶಿಸ್ತಿಲ್ಲದ, ಯಾವ ನಿಬಂಧನೆಗಳಿಗೂ ಒಳಪಡದ, ನಂಟುಗಳನ್ನೂ ಹಚ್ಚಿಕೊಳ್ಳದ ಬೀಡುಬೀಸಾದ ವರ್ತನೆ ಚಿಕ್ಕಂದಿನಲ್ಲೇ ಕಾಣಿಸಿಕೊಳ್ಳುತ್ತದೆ.

ದೃಷ್ಟಿದೋಷ

ಕೈಯಲ್ಲಿ ಹಿಡಿದು ನೋಡುವಂಥ ಗೆಜೆಟ್‌ಗಳನ್ನು ಸಾಮಾನ್ಯವಾಗಿ 2 ಅಡಿಗಿಂತ ಕಡಿಮೆ ಅಂತರಲ್ಲಿ ಇರಿಸಿಕೊಂಡು ವಾಚಿಸುತ್ತಾರೆ ಮಕ್ಕಳು. ಇದರಿಂದ ದೃಷ್ಟಿದೋಷವೂ ಹೆಚ್ಚುತ್ತದೆ. ಮೊದಲಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಾಲವಾಡಿಯ ಮಕ್ಕಳ ಕಣ್ಣಿಗೆ ಕನ್ನಡಕಗಳು ಬಂದಿರುವುದನ್ನು ಕಾಣಬಹುದು.

ದೈಹಿಕ ಆರೋಗ್ಯ

ಕೂತಲ್ಲೇ ಕೂತು ಕಳೆಯುವುದಾದರೆ ದೇಹ ಸ್ವಾಸ್ಥ್ಯ ಹಾಳಾಗುವುದೇ ತಾನೇ? ಮಕ್ಕಳೆಂದರೆ ಚಟುವಟಿಕೆಯ ಚಿಲುಮೆಗಳಂತೆ ಇರಬೇಕಾದವರು. ಓಡುವವರನ್ನು ಹಿಡಿದು ಕೂರಿಸುವುದು ಹೇಗೆ ಎಂದು ಹೆತ್ತವರು ಚಿಂತಿಸಬೇಕು. ಆದರೆ ಈಗಿನ ದಿನಗಳಲ್ಲಿ ಕೂತವರನ್ನು ಎಬ್ಬಿಸಿ ಆಡುವುದಕ್ಕೆ ಹೊರಗೆ ಕಳಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಸಹ.

Children Mobile Addiction


ಮಿತಿ ಎಷ್ಟು?

ದೊಡ್ಡ ಮಕ್ಕಳಿಗೆ ಶಾಲೆಯಿಂದ ಬರುವ ಹೋಮ್ ವರ್ಕ್‌ ಸಲುವಾಗಿ ಒಂದಿಷ್ಟು ಹೊತ್ತು ಪರದೆಯ ಮುಂದೆ ಕೂರುವುದು ಅನಿವಾರ್ಯವಾಗಬಹುದು. ಅದರ ಹೊರತಾಗಿ ಎಷ್ಟು ಹೊತ್ತು ಪರದೆಗೆ ಅಂಟಿಕೊಂಡಿರುತ್ತಾರೆ ಎಂಬುದನ್ನು ಗಮನಿಸಿ.

ಇದನ್ನೂ ಓದಿ: Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ

ಶಾಲೆಯ ದಿನಗಳಲ್ಲಿ ಅನಗತ್ಯ ಸ್ಕ್ರೀನ್‌ ಸಮಯ ಇಲ್ಲದಿದ್ದರೇ ಒಳಿತು. ರಜೆಯ ದಿನಗಳಲ್ಲಿ ಪರದೆಯ ಪರಿಮಿತಿಯನ್ನು ಒಂದು ತಾಸಿಗೆ ನಿಗದಿಗೊಳಿಸಿ. ಬಾಲವಾಡಿ ಅಥವಾ ಅದಕ್ಕಿಂತ ಚಿಕ್ಕ ಮಕ್ಕಳಿಗೆ ದಿನಕ್ಕೆ ಒಂದು ತಾಸಿನ ಸ್ಕ್ರೀನ್‌ ಸಮಯ ಸಾಕಾಗುತ್ತದೆ. ಉಳಿದ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುವುದು ಹೇಗೆ ಎಂಬುದನ್ನು ಹೆತ್ತವರೇ ನಿರ್ಧರಿಸಬೇಕಾಗುತ್ತದೆ.

Continue Reading

ಆರೋಗ್ಯ

Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

Mosquito Repellent Plants: ಸೊಳ್ಳೆಗಳನ್ನು ದೂರ ಮಾಡಲು ಎಂಥಾ ಸರ್ಕಸ್‌ ಮಾಡಿದರೂ ನಷ್ಟವಿಲ್ಲ ಎಂಬಂತಾಗಿದೆ ಈ ಮಳೆಗಾಲದಲ್ಲಿ. ನೈಸರ್ಗಿಕ ಪರಿಮಳದ ತೈಲಗಳು ಅಥವಾ ರಿಪೆಲ್ಲೆಂಟ್‌ಗಳನ್ನು ಹಚ್ಚಿಕೊಂಡರೆ, ಸೊಳ್ಳೆಗಳನ್ನು ಓಡಿಸಬಹುದು. ಜೊತೆಗೆ, ಮನೆಯ ಒಳ-ಹೊರಗೆ ಕೆಲವು ಬಗೆಯ ಗಿಡಗಳನ್ನು ಬೆಳೆಸುವುದು ಸಹ ಈ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತದೆ.

VISTARANEWS.COM


on

Mosquito Repellent Plants
Koo

ಮಳೆಗಾಲವೆಂದರೆ ಸೊಳ್ಳೆಗಳ (Mosquito Repellent Plants) ಕಾಲವೆಂಬ ಭಾವನೆ ಬಂದರೆ ಅಚ್ಚರಿಯಿಲ್ಲ. ಬರೀ ಸೊಳ್ಳೆ ಕಚ್ಚುವುದು ಸಮಸ್ಯೆಯಲ್ಲ, ಅದರೊಂದಿಗೆ ಬರುವ ಮಲೇರಿಯ, ಡೆಂಗ್ಯೂ, ಜೀಕಾ ಮುಂತಾದ ವೈರಸ್‌ಗಳು ಭೀತಿ ಮೂಡಿಸುತ್ತಿವೆ. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿದರೂ, ಮನೆಯೆದುರಿನ ರಸ್ತೆಯಲ್ಲೋ ಚರಂಡಿಯಲ್ಲೋ ನೀರು ನಿಲ್ಲುತ್ತಿದ್ದರೆ ಎಷ್ಟೆಂದು ಒದ್ದಾಡುವುದಕ್ಕೆ ಸಾಧ್ಯ? ಕಿಟಕಿಗಳಿಗೆಲ್ಲ ಸೊಳ್ಳೆ ಪರದೆ ಹಾಕಿದ್ದಾಗಿದೆ, ಆದರೂ ಬಾಗಿಲು ತೆರೆದಾಗ ನಮಗಿಂತ ಮೊದಲು ಸೊಳ್ಳೆಗಳು ನುಗ್ಗುತ್ತವೆ. ರಾತ್ರಿ ಮಲಗುವಾಗಲೂ ಪರದೆಯೊಳಗೇ ಮಲಗುತ್ತೇವೆ, ಹಗಲೆಲ್ಲ ಸೊಳ್ಳೆ ಪರದೆ ಸುತ್ತಿಕೊಂಡು ಓಡಾಡಲು ಸಾಧ್ಯವೇ?
ಈ ಕ್ರಮಗಳೆಲ್ಲ ಒಳ್ಳೆಯದೇ. ಅಗತ್ಯವಾಗಿ ಬೇಕಾಗಿದ್ದು ಸಹ ಹೌದು. ಜೊತೆಗೆ ಕೆಲವು ನೈಸರ್ಗಿಕ ಪರಿಮಳದ ತೈಲಗಳು ಅಥವಾ ರಿಪೆಲ್ಲೆಂಟ್‌ಗಳನ್ನು ಹಚ್ಚಿಕೊಂಡರೆ, ಸೊಳ್ಳೆಗಳು ಹತ್ತಿರ ಬಾರದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ, ಮನೆಯ ಸುತ್ತಮುತ್ತ ಕೆಲವು ಒಳಾಂಗಣ/ಹೊರಾಂಗಣದ ಗಿಡಗಳನ್ನು ಬೆಳೆಸುವುದು ಸಹ ಈ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತದೆ. ಸೊಳ್ಳೆಗಳನ್ನು ದೂರ ಓಡಿಸುವಂಥ ಗುಣವನ್ನುಳ್ಳ ಐದು ಗಿಡಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

citronella

ಸಿಟ್ರೋನೆಲ್ಲ

ಲೆಮೆನ್‌ಗ್ರಾಸ್‌, ನಿಂಬೆ ಹುಲ್ಲು ಎಂದೆಲ್ಲಾ ಈ ಗಿಡವನ್ನು/ಹುಲ್ಲನ್ನು ಕರೆಯಲಾಗುತ್ತದೆ. ಸೊಳ್ಳೆಯನ್ನು ದೂರ ಅಟ್ಟುವ ವಿಷಯದಲ್ಲಿ ವಿಶೇಷ ಪರಿಣತಿ ಹೊಂದಿರುವ ಈ ಗಿಡದ ಸಾರವನ್ನು ಸ್ಪ್ರೇ, ಕ್ರೀಮ್‌, ಲೋಶನ್‌, ತೈಲ, ಮೋಂಬತ್ತಿಗಳು ಮುಂತಾದ ಹಲವು ರೀತಿಯ ಉತ್ಪನ್ನಗಳಲ್ಲಿ ಉಪಯೋಗಿಸಲಾಗುತ್ತದೆ. ಇದಕ್ಕಿರುವ ನಿಂಬೆಯ ಗಾಢವಾದ ಸುಗಂಧವೇ ಸೊಳ್ಳೆಯನ್ನು ದೂರ ಇರಿಸುತ್ತದೆ. ಮನೆಯ ಸುತ್ತಮುತ್ತಲಿನ ಭಾಗದಲ್ಲಿ ಅಥವಾ ಬಾಲ್ಕನಿಯ ಕುಂಡಗಳಲ್ಲಾದರೂ ಸರಿ, ಬೆಳೆಸಿ. ಇದು ಹಲವು ಔಷಧೀಯ ಉಪಯೋಗಗಳನ್ನೂ ಹೊಂದಿದ್ದು, ಸೊಳ್ಳೆ ಬಾರದಂತೆ ತಡೆಯಲೂ ನೆರವಾಗುತ್ತದೆ. ಆದರೆ ಈ ಹುಲ್ಲಿನ ಅಂಚು ಹರಿತವಾಗಿರುವುದರಿಂದ, ನೇರವಾಗಿ ಕೈ-ಕಾಲುಗಳ ಮೇಲೆ ಉಜ್ಜಿಕೊಳ್ಳಲು ಯತ್ನಿಸಬೇಡಿ, ಗಾಯವಾದೀತು.

Lavender Fragrant Flowers

ಲಾವೆಂಡರ್

ಇದರ ಹೂವುಗಳು ನಿಮ್ಮ ಬಾಲ್ಕನಿ ಮತ್ತು ಮನೆಯೊಳಗಿನ ಜಾಗವನ್ನು ಸುಂದರಗೊಳಿಸುವುದು ಮಾತ್ರವಲ್ಲ, ಆಹ್ಲಾದಕರ ಪರಿಮಳವು ಸೊಳ್ಳೆಗಳನ್ನು ದೂರ ಓಡಿಸುತ್ತದೆ. ಇದರ ಘಮ ಮನುಷ್ಯರಿಗೆ ಆಪ್ಯಾಯಮಾನವೇ ಹೊರತು ಸೊಳ್ಳೆ ಅಥವಾ ಇತರ ಕೀಟಗಳಿಗಲ್ಲ. ಬಿಸಿಲು ಬರುವಂಥ ಜಾಗದಲ್ಲಿ ಇದನ್ನು ಕುಂಡಗಳಲ್ಲಿ ಬೆಳೆಯಬಹುದು. ಈ ಹೂವನ್ನು ಒಣಗಿಸಿ ಅದನ್ನು ಪುಟ್ಟ ಸ್ಯಾಶೆಗಳಲ್ಲಿ ತುಂಬಿ ಮನೆಯಲ್ಲೆಲ್ಲಾ ಇರಿಸಿಕೊಳ್ಳಬಹುದು. ಲ್ಯಾವೆಂಡರ್‌ ತೈಲವನ್ನೂ ಇತರ ಎಣ್ಣೆಯೊಂದಿಗೆ ಸೇರಿಸಿ ಚರ್ಮಕ್ಕೆ ಲೇಪಿಸಿಕೊಳ್ಳಬಹುದು. ಇದನ್ನು ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ಹಲವು ರೀತಿಯಲ್ಲಿ ಅನುಕೂಲಗಳಿವೆ.

Marigold

ಮಾರಿಗೋಲ್ಡ್‌

ಚೆಂಡು ಹೂವು ಎಂದೇ ಇವು ಪ್ರಸಿದ್ಧ. ಮಳೆಗಾಲದ ಈ ಹೊತ್ತಿನಲ್ಲಿ ಮೇಲೇಳುವ ಚೆಂಡು ಹೂವಿನ ಗಿಡಗಳು, ನವರಾತ್ರಿ-ದೀಪಾವಳಿಯ ಆಸುಪಾಸಿನಲ್ಲಿ ಇಡೀ ಗಿಡ ತುಂಬುವಷ್ಟು ಹೂ ಬಿಡುತ್ತವೆ. ಇವೂ ಸಹ ಸೊಳ್ಳೆ ಓಡಿಸುವಲ್ಲಿ ಸಹಕಾರ ನೀಡುವಂಥವು. ಬಾಲ್ಕನಿಯಲ್ಲಿ, ಬಾಗಿಲು-ಕಿಟಕಿಗಳ ಬಳಿ, ಅಂದರೆ ಸೊಳ್ಳೆ ಒಳ ಪ್ರದೇಶ ಮಾಡುವ ಜಾಗಗಳಲ್ಲಿ ಇದನ್ನು ಕುಂಡದಲ್ಲಿ ಇರಿಸಿಕೊಳ್ಳುವುದು ಒಳ್ಳೆಯ ಉಪಾಯ. ಇದರ ಹೂವುಗಳನ್ನು ಗೊಂಚಲು ಮಾಡಿ, ಹೂದಾನಿಗಳಲ್ಲಿ ಮನೆಯೊಳಗೆ ಇರಿಸಿಕೊಳ್ಳಬಹುದು. ಹೂವನ್ನು ಒಣಗಿಸಿಟ್ಟುಕೊಂಡರೆ ಸೊಳ್ಳೆ ಓಡಿಸುವಲ್ಲಿ ಇನ್ನಷ್ಟು ನೆರವು ದೊರೆಯುತ್ತದೆ.

Basil

ಬೆಸಿಲ್

ಇದು ಕೇವಲ ಸೊಳ್ಳೆ ಓಡಿಸುವುದಕ್ಕೆ ಮಾತ್ರವಲ್ಲ, ರುಚಿಕಟ್ಟಾದ ಅಡುಗೆಗೂ ಉಪಯೋಗವಾಗುತ್ತದೆ. ಇದರ ತೀಕ್ಷ್ಣವಾದ ಪರಿಮಳವು ಸೊಳ್ಳೆಗಳನ್ನು ಹತ್ತಿರ ಸುಳಿಯಗೊಡುವುದಿಲ್ಲ. ಹಾಗಾಗಿ ಸೊಳ್ಳೆ ಓಡಿಸುವ ಉಪಾಯಗಳಲ್ಲಿ ಇದನ್ನು ಸಹ ಅಳವಡಿಸಿಕೊಳ್ಳಬಹುದು. ಸಾಕಷ್ಟು ಗಾಳಿ-ಬೆಳಕು ಇರುವಂಥ ಜಾಗದಲ್ಲಿ ಇದನ್ನು ಕುಂಡಗಳಲ್ಲಿ ಬೆಳೆಸಬಹುದು. ಇದರ ಎಲೆಗಳನ್ನು ಕಿವುಚಿ ಮೈ-ಕೈಗೆಲ್ಲ ರಸ ಲೇಪಿಸಿಕೊಂಡರೂ ಸೊಳ್ಳೆ ಹತ್ತಿರ ಸುಳಿಯುವುದಿಲ್ಲ. ಇದರ ಕುಂಡಗಳನ್ನು ಸೊಳ್ಳೆಯ ಪ್ರವೇಶ ದ್ವಾರಗಳಲ್ಲಿ ಇರಿಸಿಕೊಂಡರೆ, ಸೊಳ್ಳೆಯ ಉಪಟಳಕ್ಕೆ ಬಾಗಿಲು ತೆರೆಯಲೂ ಅಳುಕುವ ಸ್ಥಿತಿ ತೊಲಗುತ್ತದೆ.

Lemon balm

ಲೆಮೆನ್‌ ಬಾಮ್‌

ಪುದೀನಾ ಜಾತಿಗೆ ಸೇರಿದ ಸಸ್ಯವಿದು. ಇದರ ಕಟುವಾದ ಘಮ ಸೊಳ್ಳೆ ಓಡಿಸುವಲ್ಲಿ ನೆರವಾಗುತ್ತದೆ. ಯಾವುದೇ ಕೈತೋಟ ಅಥವಾ ಬಾಲ್ಕನಿಗಳಲ್ಲಿ ಇವುಗಳನ್ನು ಸುಲಭವಾಗಿ ಬೆಳೆಯಬಹುದು. ಇದರ ಗಾಢವಾದ ನಿಂಬೆಯಂಥ ಪರಿಮಳ ನಮಗೆ ಹಿತವೆನಿಸಿದರೂ ಸೊಳ್ಳೆಗಳಿಗೆ ಆಗದು. ಮನಸ್ಸನ್ನು ಶಾಂತಗೊಳಿಸುವ ಗುಣಗಳು ಇದಕ್ಕಿರುವುದರಿಂದ, ಈ ಮೂಲಿಕೆಯ ಎಲೆಗಳನ್ನು ಚಹಾ ಮಾಡಿ ಕುಡಿಯುವವರಿದ್ದಾರೆ.

ಇದನ್ನೂ ಓದಿ: Head Massage Tips: ತಲೆಯ ಮಸಾಜ್‌ನಿಂದ ಮಾನಸಿಕ ಒತ್ತಡ ನಿವಾರಿಸಲು ಸಾಧ್ಯ! ಹಾಗಂತ ಬೇಕಾಬಿಟ್ಟಿ ಮಸಾಜ್‌ ಮಾಡಬೇಡಿ

Continue Reading

ಆರೋಗ್ಯ

Head Massage Tips: ತಲೆಯ ಮಸಾಜ್‌ನಿಂದ ಮಾನಸಿಕ ಒತ್ತಡ ನಿವಾರಿಸಲು ಸಾಧ್ಯ! ಹಾಗಂತ ಬೇಕಾಬಿಟ್ಟಿ ಮಸಾಜ್‌ ಮಾಡಬೇಡಿ

Head Massage Tips: ತಲೆಗೆ ಎಣ್ಣೆ ಮಸಾಜ್‌ ಮಾಡುತ್ತೀರಾ? ಮನಸ್ಸಿನ ಒತ್ತಡ ನಿರ್ವಹಣೆಗೆ ಇದು ಅತ್ಯಂತ ಒಳ್ಳೆಯ ಮಾರ್ಗ ಎಂಬುದನ್ನು ಹೆಚ್ಚಿನ ತಕರಾರಿಲ್ಲದೇ ಒಪ್ಪಿಕೊಳ್ಳಬಹುದು. ಇದರಿಂದ ಲಾಭವೇನು, ಹೇಗೆ ಮಾಡಿದರೆ ಸೂಕ್ತ ಎಂಬಿತ್ಯಾದಿ ವಿವರಗಳು ಇಲ್ಲಿವೆ. ತಲೆಯ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚಿಸಿ, ಆಮ್ಲಜನಕದ ಪೂರೈಕೆಯನ್ನು ವೃದ್ಧಿಸಿ, ಮನಸ್ಸನ್ನು ಶಾಂತಗೊಳಿಸುವ ಈ ಅಭ್ಯಾಸದಿಂದ ಇನ್ನೂ ಏನೇನು ಲಾಭಗಳಿವೆ ಎಂಬುದನ್ನು ನೋಡೋಣ.

VISTARANEWS.COM


on

Head Massage Tips
Koo

ಬದುಕಿನಲ್ಲಿ ಕಡೆಯವರೆಗೆ ನಮ್ಮ ಜೊತೆಗಿರುವುದು ನಮ್ಮ ಆತಂಕ, ಒತ್ತಡಗಳು ಮಾತ್ರ ಎಂಬುದು ಆಧುನಿಕ ಕಾಲದ ಗಾದೆ. ಇವುಗಳಿಂದ ಬಿಡಿಸಿಕೊಳ್ಳಲು ಮಾಡದ ಸರ್ಕಸ್‌ ಯಾವುದಿದೆ? ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುವುದರಿಂದ ಹಿಡಿದು, ಲೋಕದ ಸಹವಾಸವೇ ಸಾಕೆಂದು ಆಶ್ರಮ ಸೇರಿ ಸನ್ಯಾಸ ತೆಗೆದುಕೊಂಡವರೂ ಇದ್ದಾರೆ. ಇದೆಲ್ಲ ಬಿಡಿ, ನಮ್ಮ-ನಿಮ್ಮ ಮಟ್ಟವನ್ನು ಮೀರಿದ್ದು. ಈಗ ಸಾಮಾನ್ಯರಿಗೆ ಆಗುವಂಥ ಸರಳವಾದ ವಿಷಯಕ್ಕೆ ಬರೋಣ. ಸರಳವಾದ ತಲೆಯ ಮಸಾಜ್‌ (Head Massage Tips) ಒತ್ತಡ ಕಡಿಮೆ ಮಾಡುವಲ್ಲಿ ಎಷ್ಟೊಂದು ಪರಿಣಾಮಕಾರಿ ಎನ್ನುವುದು ಗೊತ್ತೇ? ಆಯುರ್ವೇದವನ್ನು ಶತಶತಮಾನಗಳಿಂದ ಬದುಕಿನ ರೀತಿಯಂತೆ ಆಚರಿಸುತ್ತಾ ಬಂದಿರುವ ಭಾರತದಲ್ಲಿ ತಲೆಗೆ ಎಣ್ಣೆ ಮಸಾಜ್‌ ಮಾಡುವ ಬಗ್ಗೆ ಹೆಚ್ಚು ಹೇಳುವುದು ಬೇಕಿಲ್ಲ- ಎಂದು ತಿಳಿದಿದ್ದರೆ, ತಪ್ಪು! ತಲೆ ಕೂದಲಿಗೆ ಎಣ್ಣೆ ಹಚ್ಚುವುದಕ್ಕೂ ಜಾಹೀರಾತುಗಳನ್ನು ಕೊಡಬೇಕಾಗಿರುವ ಈ ಕಾಲದಲ್ಲಿ ಎಲ್ಲರೂ ಹಳೆಯ ಕಾಲದವರಂತೆ ಎಣ್ಣೆ ಮಸಾಜ್‌ ಮಾಡಿಕೊಳ್ಳುತ್ತಾರೆ ಎಂಬ ಭಾವಿಸುವುದಾದರೂ ಹೇಗೆ? ಹೀಗೆನ್ನುತ್ತಿದ್ದಂತೆ ತಲೆಯ ಕೂದಲೆಲ್ಲ ಕಿತ್ತು ಬರುವಂತೆ ಉಗ್ರವಾಗಿ ಮಸಾಜ್‌ ಮಾಡುವ ಚಿತ್ರವನ್ನು ಕಣ್ಣಿಗೆ ತಂದುಕೊಳ್ಳಬೇಡಿ. ಲಘುವಾದ ಆದರೆ ಸ್ಥಿರವಾದ ಲಯದಲ್ಲಿನ ಮಸಾಜ್‌ ಇದು. ತಲೆಯ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚಿಸಿ, ಆಮ್ಲಜನಕದ ಪೂರೈಕೆಯನ್ನು ವೃದ್ಧಿಸಿ, ಮನಸ್ಸನ್ನು ಶಾಂತಗೊಳಿಸುವ ಈ ಅಭ್ಯಾಸದಿಂದ ಇನ್ನೂ ಏನೇನು ಲಾಭಗಳಿವೆ (Head Massage Tips) ಎಂಬುದನ್ನು ನೋಡೋಣ.

Lady Sitting on the Couch Gives Herself a Scalp Massage Gooseberry Benefits

ಸೆರೋಟೋನಿನ್‌ ಹೆಚ್ಚಳ

ಒತ್ತಡ ನಿವಾರಿಸುವಲ್ಲಿ ನಮ್ಮ ದೇಹದ ಹ್ಯಾಪಿ ಹಾರ್ಮೋನುಗಳ ಭೂಮಿಕೆ ಮಹತ್ವದ್ದು. ತಲೆಗೆ ಲಘುವಾದ ಎಣ್ಣೆ ಅಥವಾ ಜೆಲ್‌ ಮಸಾಜ್‌ ಮಾಡುವುದು ಸೆರೋಟೋನಿನ್‌ ಚೋದಕದ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ಆತಂಕ ನಿವಾರಣೆ ಮತ್ತು ಒತ್ತಡ ಪರಿಹಾರ ಸಾಧ್ಯವಿದೆ. ಇದು ನಮ್ಮ ಮೂಡ್‌ ಸರಿಪಡಿಸಿ, ಆಹ್ಲಾದದ ಭಾವವನ್ನು ಹೆಚ್ಚಿಸುತ್ತದೆ. ಹಣೆಯ ನರಗಳನ್ನು ಸಡಿಲಿಸಿ, ಕಣ್ಣಿನ ಒತ್ತಡ ಕಡಿಮೆ ಮಾಡಿ, ಮನಸ್ಸಿನ ಸಮಾಧಾನ ಹೆಚ್ಚಿಸುತ್ತದೆ.

ಕಾರ್ಟಿಸೋಲ್‌ ಕಡಿಮೆ

ನಮ್ಮ ದೇಹದಲ್ಲಿ ಒತ್ತಡ ಹೆಚ್ಚುತ್ತಿದ್ದಂತೆ ಕಾರ್ಟಿಸೋಲ್‌ ಪ್ರಮಾಣವೂ ಹೆಚ್ಚುತ್ತದೆ. ಒತ್ತಡಕ್ಕೆ ಪ್ರತಿಯಾಗಿ ಬಿಡುಗಡೆಯಾಗುವ ಹಾರ್ಮೋನು ಎಂದು ತಿಳಿಯಬಹುದು ಇದನ್ನು. ಈ ಚೋದಕದ ಪ್ರಮಾಣ ದೇಹದಲ್ಲಿ ಹೆಚ್ಚಿದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಮುತ್ತಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ, ಕಾರ್ಟಿಸೋಲ್‌ ಪ್ರಮಾಣ ಹೆಚ್ಚದಂತೆ ನಿಭಾಯಿಸುವುದು ಅತಿ ಮುಖ್ಯ.

ಇದನ್ನೂ ಓದಿ: Early Symptoms Of Menopause: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಋತುಚಕ್ರ ಸದ್ಯದಲ್ಲೇ ನಿಲ್ಲುತ್ತದೆ ಎಂದರ್ಥ

ಮಾಡುವುದು ಹೇಗೆ?

ನಮಗೆ ನಾವೇ ಮಸಾಜ್‌ ಮಾಡಿಕೊಳ್ಳುವುದು ಅಸಾಧ್ಯವಲ್ಲ, ಆದರೆ ಪರಿಣಾಮಕಾರಿ ಆಗದೆಯೇ ಹೋಗಬಹುದು. ಹಾಗಾಗಿ ಒಬ್ಬರಿಗೊಬ್ಬರು ತಲೆಗೆ ಎಣ್ಣೆ ಮಸಾಜ್‌ ಮಾಡುವ ಕ್ರಮ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ತಲೆಯ ಮಸಾಜ್‌ಗೆ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆಯಂಥ ಯಾವುದನ್ನಾದರೂ ಬಳಸಬಹುದು. ಇವುಗಳ ಜೊತೆಗೆ ಕೆಲವು ಹನಿಗಳಷ್ಟು ಯಾವುದಾದರೂ ಸಾರಭೂತ ತೈಲವನ್ನು ಸೇರಿಸಿಕೊಂಡರೆ ಒತ್ತಡ ನಿವಾರಣೆಗೆ ಹೆಚ್ಚಿನ ಅನುಕೂಲವಾಗುತ್ತದೆ. ಮಸಾಜ್‌ ಮಾಡುವಾಗ ಇಡೀ ಅಂಗೈ ಹಾಕಿ ತಲೆಯನ್ನು ಉಜ್ಜುವ ಬದಲು, ಬೆರಳುಗಳ ತುದಿಯನ್ನು ಹೆಚ್ಚು ಬಳಸಿ. ತಲೆಯನ್ನು ತಿಕ್ಕಿ, ತೀಡಿ, ಲಘುವಾಗಿ ತಟ್ಟಬಹುದು. ಸಣ್ಣ ವೃತ್ತಾಕಾರದಲ್ಲಿ ತಿಕ್ಕುವುದು ಸರಿಯಾದ ಕ್ರಮ. ಹಣೆಯಿಂದ ಪ್ರಾರಂಭಿಸಿ, ತಲೆಯ ಹಿಂಭಾಗದತ್ತ ಮುಂದುವರಿಯಿರಿ. ಯಾವುದಾದರೂ ಭಾಗದಲ್ಲಿ ಹೆಚ್ಚಿನ ಒತ್ತಡವಿದೆ ಎನಿಸಿದರೆ, ಆ ಭಾಗಕ್ಕೆ ಹೆಚ್ಚು ಹೊತ್ತು ಮಸಾಜ್‌ ಮಾಡಿ. ಮುಖ್ಯವಾಗಿ ಹುಬ್ಬಿನ ಪಕ್ಕದ ಭಾಗ, ಮೂರನೇ ಕಣ್ಣಿನ ಭಾಗ, ನೆತ್ತಿ, ಕುತ್ತಿಗೆಯ ಹಿಂಭಾಗ- ಇಲ್ಲೆಲ್ಲ ಮಸಾಜ್‌ ಮಾಡಿದರೆ ಬೇಗ ಆರಾಮ ದೊರೆಯುತ್ತದೆ. ಕಣ್ಣಿನ ಸುತ್ತ ವೃತ್ತಾಕಾರದಲ್ಲೂ ಹಗುರವಾಗಿ ತಿಕ್ಕಬಹುದು. ಆದರೆ ಈ ಭಾಗಕ್ಕೆ ಹೆಚ್ಚಿನ ತೈಲ ಬಳಸುವುದು ಬೇಡ. ಕಣ್ಣಿಗೆ ಎಣ್ಣೆ ತಾಗಿದರೆ ವಿಪರೀತ ಉರಿಯಾಗುತ್ತದೆ. ಇದನ್ನು ವಾರಕ್ಕೊಮ್ಮೆ ನಿಶ್ಚಿತವಾಗಿ ಮಾಡಬಹುದು. ಹೆಚ್ಚು ಬಾರಿ ಮಾಡಿದರೆ, ಅನುಕೂಲ ಹೆಚ್ಚು. ಸಾಧಾರಣವಾಗಿ 10-15 ನಿಮಿಷಗಳ ಲಘುವಾದ ಮಸಾಜ್‌ ಒತ್ತಡ ನಿರ್ವಹಣೆಯಲ್ಲಿ ಹೆಚ್ಚಿನ ಪರಿಣಾಮ ನೀಡುತ್ತದೆ. ರಾತ್ರಿ ಮಲಗುವ ಮುನ್ನ ಇದನ್ನು ಮಾಡಿದರೆ, ಆರಾಮದಾಯಕ ನಿದ್ರೆ ನಿಮ್ಮದಾಗುತ್ತದೆ.

Continue Reading
Advertisement
Assembly Session
ಕರ್ನಾಟಕ10 mins ago

Assembly Session: ಅಧಿಕಾರಿಗಳು ಮಾಡಿದ ಅಕ್ರಮಕ್ಕೆ ಸಚಿವರ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದ ಡಿಕೆಶಿ!

A 15 year old boy weighing 111 kg underwent successful spinal disc surgery that avoided potential paralysis
ಕರ್ನಾಟಕ18 mins ago

Fortis Hospital: 111 ಕೆಜಿ ತೂಕವಿದ್ದ ಬಾಲಕನಿಗೆ ಪಾರ್ಶ್ವವಾಯು ತಪ್ಪಿಸಿದ ʼಬೆನ್ನೆಲುಬಿನ ಡಿಸ್ಕ್ʼ ಶಸ್ತ್ರಚಿಕಿತ್ಸೆ

Pooja Khedkar
ದೇಶ22 mins ago

Pooja Khedkar: ಪೂಜಾ ಖೇಡ್ಕರ್‌ ಪುಣೆ ಜಿಲ್ಲಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

Larva survey Show the old photo without GPS and get crores of rupees to the government Cheating Alleged by MLC TA Sharavana
ಕರ್ನಾಟಕ23 mins ago

Assembly Session: ಲಾರ್ವಾ ಸರ್ವೇ; ಜಿಪಿಎಸ್ ಇಲ್ಲದ ಹಳೆ ಫೋಟೋ ತೋರಿಸಿ ಕೋಟ್ಯಂತರ ರೂ. ಮೋಸ; ಶರವಣ ಆರೋಪ

A permanent solution to artificial flood on national highways says MP Vishweshwar Hegde Kageri
ಉತ್ತರ ಕನ್ನಡ26 mins ago

Uttara Kannada News: ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ನೆರೆ ತಡೆಗೆ ಶಾಶ್ವತ ಪರಿಹಾರ; ಕಾಗೇರಿ

ಕರ್ನಾಟಕ27 mins ago

Dengue Fever: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ತೀವ್ರ ಏರಿಕೆ; ಮಂಗಳವಾರ 487 ಕೇಸ್‌ ಪತ್ತೆ!

Chennai Super King
ಕ್ರೀಡೆ36 mins ago

Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​

Anushka Sharma
ಪ್ರಮುಖ ಸುದ್ದಿ1 hour ago

Anushka Sharma : ಪತ್ನಿ ಅನುಷ್ಕಾ ಬರ್ತ್​​ಡೇಗೆ ಕೊಹ್ಲಿ ಕೇಕ್​ ಆರ್ಡರ್​ ಮಾಡಿದ್ದು ಬೆಂಗಳೂರಿನಿಂದ; ತಿಂಗಳುಗಳ ಬಳಿಕ ಮಾಹಿತಿ ಬಹಿರಂಗ

Muscat Terrorist Attack
ವಿದೇಶ1 hour ago

Muscat Terrorist Attack: ಮಸ್ಕತ್‌ನಲ್ಲಿ ಉಗ್ರರ ಅಟ್ಟಹಾಸ; ಭಾರತೀಯ ಸೇರಿ 9ಮಂದಿ ಸಾವು

Manikanta Rathod
ಕರ್ನಾಟಕ1 hour ago

Manikanta Rathod: ಅನ್ನ ಭಾಗ್ಯ ಅಕ್ಕಿ ಕಳವು ಕೇಸ್‌ನಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಬಂಧನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ9 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ11 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 day ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌