SSLC Exam 3: SSLC ಫೇಲಾದವರಿಗೆ ಮತ್ತೊಂದು ಚಾನ್ಸ್;‌ 3ನೇ ಪರೀಕ್ಷೆಯ ನೋಂದಣಿ, ಪರೀಕ್ಷೆ ದಿನಾಂಕ ಘೋಷಣೆ - Vistara News

ಕರ್ನಾಟಕ

SSLC Exam 3: SSLC ಫೇಲಾದವರಿಗೆ ಮತ್ತೊಂದು ಚಾನ್ಸ್;‌ 3ನೇ ಪರೀಕ್ಷೆಯ ನೋಂದಣಿ, ಪರೀಕ್ಷೆ ದಿನಾಂಕ ಘೋಷಣೆ

SSLC Exam 3: 2022-23ನೇ ಸಾಲಿನಲ್ಲಿಯೂ ಅನುತ್ತೀರ್ಣರಾದ, 2023-24ನೇ ಸಾಲಿನ ಮೊದಲ ಹಾಗೂ ದ್ವಿತೀಯ ಪರೀಕ್ಷೆಗೆ ಗೈರಾದವರು, ತೇರ್ಗಡೆ ಹೊಂದಲು ಸಾಧ್ಯವಾಗದವರು ಕೂಡ ಮೂರನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

VISTARANEWS.COM


on

SSLC Exam 3
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗದವರು, ಪ್ರಸಕ್ತ ಸಾಲಿನ ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ (SSLC Exam 3) ಅನುತ್ತೀರ್ಣರಾದವರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEEB) ಮೂರನೇ ಅವಕಾಶ ನೀಡಿದ್ದು, ಎಸ್‌ಎಸ್‌ಎಲ್‌ಸಿ ಮೂರನೇ ಪರೀಕ್ಷೆಯ ನೋಂದಣಿಗೆ (SSLC Exam 3 Registration) ಅವಕಾಶ ನೀಡಿದೆ. ಅದರಂತೆ, ಅಭ್ಯರ್ಥಿಗಳು 2024ರ ಜುಲೈ 17ರೊಳಗಾಗಿ ಮೂರನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಆಗಸ್ಟ್‌ 2ರಿಂದ 9ರವರೆಗೆ ಎಸ್‌ಎಸ್‌ಎಲ್‌ಸಿ ಮೂರನೇ ಪರೀಕ್ಷೆಯು ನಡೆಯಲಿದೆ. ಹಾಗಾಗಿ, ಜುಲೈ 10ರಿಂದಲೇ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜುಲೈ 17ರವರೆಗೆ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. 2022-23ನೇ ಸಾಲಿನಲ್ಲಿಯೂ ಅನುತ್ತೀರ್ಣರಾದ, 2023-24ನೇ ಸಾಲಿನ ಮೊದಲ ಹಾಗೂ ದ್ವಿತೀಯ ಪರೀಕ್ಷೆಗೆ ಗೈರಾದವರು, ತೇರ್ಗಡೆ ಹೊಂದಲು ಸಾಧ್ಯವಾಗದವರು ಕೂಡ ಮೂರನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇನ್ನು, ಕಳೆದ ಪರೀಕ್ಷೆಗಳಲ್ಲಿ ಪಡೆದ ಅಂಕಗಳಿಂದ ಸಮಾಧಾನಗೊಳ್ಳದವರು, ಇನ್ನೂ ಹೆಚ್ಚಿನ ಅಂಕ ಪಡೆಯಬೇಕು ಎನ್ನುವವರು ಕೂಡ ಮೂರನೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ನೋಂದಣಿ ಮಾಡಿಕೊಳ್ಳುವುದು ಹೇಗೆ?

ಪರೀಕ್ಷೆ ಬರೆಯಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರು https://kseab.karnataka.gov.in ಪರೀಕ್ಷೆ-3ಕ್ಕೆ ನೋಂದಣಿ ಮಾಡಬೇಕು. ಶಾಲಾ ಲಾಗಿನ್‌ ನಲ್ಲಿ Registration for 2024 Exam-3ನ್ನು ಕ್ಲಿಕ್‌ ಮಾಡಿದಾಗ ENTER REGISTER NUMBER ಎನ್ನುವ ಆಯ್ಕೆ ದೊರಕುತ್ತದೆ. ಈ ಆಯ್ಕೆಯಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ನಮೂದು ಮಾಡಲು ಅವಕಾಶ ನೀಡಲಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಯ ನೋಂದಣೆ ಸಂಖ್ಯೆಯನ್ನು ನಮೂದು ಮಾಡಿ Submit ಕೊಟ್ಟಾಗ ಆ ವಿದ್ಯಾರ್ಥಿಯ ವಿವರಗಳು, ವಿದ್ಯಾರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಮಾಧ್ಯಮ, ದೈಹಿಕ ಸ್ಥಿತಿ, ಜನ್ಮ ದಿನಾಂಕ, ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿಷಯಗಳು ತೆರೆದುಕೊಳ್ಳುತ್ತವೆ. ಇವುಗಳಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.

ಶುಲ್ಕದ ವಿವರ ಹೀಗಿದೆ

2021-2022 ಮತ್ತು 2022-23 ಸಾಲಿನಲ್ಲಿ ಪರೀಕ್ಷೆ ಬರೆದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಹಾಗೂ ಮಾರ್ಚ್/ಏಪ್ರಿಲ್ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಮತ್ತು 2 ಕ್ಕೆ ನೋಂದಾಯಿಸಿಕೊಂಡು ಪೂರ್ಣಗೊಳಿಸಲಾಗಿಲ್ಲದ ವಿದ್ಯಾರ್ಥಿಗಳ ಭಾವಚಿತ್ರ ಮತ್ತು ಸಹಿಗಳು ಮಂಡಳಿಯಲ್ಲಿ ಲಭ್ಯವಿದ್ದು, ಸದರಿ ಅಭ್ಯರ್ಥಿಗಳು ಈ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಲ್ಲಿ ಪುನ: ಇವರು ಭಾವಚಿತ್ರ ಮತ್ತು ಸಹಿಗಳನ್ನು ಅಪ್‌ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ.

ಶುಲ್ಕ ಪಾವತಿಸಲು ನಿಗದಿಪಡಿಸಿದ ದಿನಾಂಕ

ಇದನ್ನೂ ಓದಿ: NEET UG: ನೀಟ್‌ ಅಕ್ರಮ: ಪರೀಕ್ಷೆಯನ್ನು ರದ್ದುಗೊಳಿಸುವುದು ಸಮಂಜಸವಲ್ಲ ಎಂದ ಕೇಂದ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Rain Effect : ಭಾರಿ ಮಳೆಗೆ ಶಿರೂರು ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿದ್ದ ಮಹಿಳೆ ಮೃತದೇಹ ಪತ್ತೆ

Rain Effect : ಉತ್ತರಕನ್ನಡದಲ್ಲಿ ಭಾರಿ ಮಳೆಗೆ (Karnataka Rain Effect) ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಭಾರೀ ಗುಡ್ಡಕುಸಿತ (Karnataka Rain) ಉಂಟಾಗಿದ್ದು, ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.

VISTARANEWS.COM


on

By

Rain Effect.. karnataka Rain Effect
Koo

ಉತ್ತರಕನ್ನಡ: ಉತ್ತರಕನ್ನಡದಲ್ಲಿ ಭಾರಿ ಮಳೆಗೆ (Karnataka Rain Effect) ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಭಾರೀ ಗುಡ್ಡಕುಸಿತ (Karnataka Rain) ಉಂಟಾಗಿತ್ತು. ಧಾರಾಕಾರ ಮಳೆಯಿಂದಾಗಿ ಹೆದ್ದಾರಿ ಪಕ್ಕದ ಗುಡ್ಡ ಸಡಿಲಗೊಂಡು, ಅಂಕೋಲಾ ತಾಲೂಕಿನ ಶಿರೂರು ಬಳಿ ಅಂಗಡಿಯೊಂದರ ಮೇಲೆ ಬಿದ್ದಿತ್ತು. ಇದೀಗ ಮಣ್ಣಿನಡಿ ಸಿಲುಕಿ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹ (Rain Effect) ಪತ್ತೆಯಾಗಿದೆ.

ಉತ್ತರ ಕನ್ನಡದ ಅಂಕೋಲಾ ಗುಡ್ಡ ಕುಸಿತ ಪ್ರದೇಶಕ್ಕೆ ಕುಮಟಾ ಎಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣಿನಡಿ 10ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ಇದ್ದು, ಒಂದೇ ಕುಟುಂಬದ ಐವರು ಸೇರಿ ಹತ್ತಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ. ಗುಡ್ಡ ಕುಸಿದ ರಭಸಕ್ಕೆ ನದಿಗೆ 2 ಗ್ಯಾಸ್ ಟ್ಯಾಂಕರ್‌ಗಳು ಕೊಚ್ಚಿ ಹೋಗಿದೆ. ಗುಡ್ಡದ ಕೆಳಗಿದ್ದ ಲಾರಿ, ಮತ್ತೊಂದು ಟ್ಯಾಂಕರ್‌ ಹಾಗೂ ಚಾಲಕರು ಪಾರಾಗಿದ್ದಾರೆ.

ಅಂಕೋಲಾ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ. ಅವಘಡದಲ್ಲಿ 7 ಮಂದಿ ಸಾವನ್ನಪ್ಪಿರಬಹುದು, ಆದರೆ ಇನ್ನೂ ಕೂಡಾ ಖಚಿತ ಮಾಹಿತಿ ಬರಬೇಕಿದೆ ಎಂದಿದ್ದಾರೆ. ಸದ್ಯ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಎಷ್ಟು ಸಾವಾಗಿದೆ ಹೇಳುವುದು ಸಾಧ್ಯವಿಲ್ಲ. ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳು ಸಾಕಾಗುತ್ತಿಲ್ಲ. ಹೀಗಾಗಿ ಕುಮಟಾ ಹಾಗೂ ಅಂಕೋಲಾ ಎರಡೂ ಕಡೆಯಿಂದ ಕಾರ್ಯಾಚರಣೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಜೆಸಿಬಿ, ಹಿಟಾಚಿ ಮತ್ತಿತರ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು ಎಂದರು.

ಇದನ್ನೂ ಓದಿ: Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

ಭಾರಿ ಮಳೆಗೆ ವರ್ಷದ ಹಿಂದೆ ನಿರ್ಮಿಸಿದ ಸೇತುವೆ ಕುಸಿತ

ಉಡುಪಿಯ ಕುಂದಾಪುರ ತಾಲೂಕು ಹಾಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭರಣಕೊಳ್ಕಿಯಲ್ಲಿ ವರ್ಷದ ಹಿಂದೆ ನಿರ್ಮಿಸಿದ ಸೇತುವೆ ಭಾರಿ ಮಳೆಗೆ ಕುಸಿದಿದೆ. ಹಾಲಾಡಿಯಿಂದ ಜೋರಾಡಿ ಮುದ್ದೂರು ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಇದೆ ಸೇತುವೆಯನ್ನೇ ಬಳಸಬೇಕಿತ್ತು. ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಸೇತುವೆ ಕುಸಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸೇತುವೆ ವರ್ಷದ ಒಳಗೆ ನೀರುಪಾಲಾಗಿದೆ.

ಚಿಕ್ಕಮಗಳೂರಲ್ಲಿ ಮರ ಬಿದ್ದು ಮನೆಗಳು ಜಖಂ

ಪುನರ್ವಸು ಮಳೆ ಅಬ್ಬರಕ್ಕೆ ಚಿಕ್ಕಮಗಳೂರು ತತ್ತರಿಸಿ ಹೋಗಿದೆ. ಭಾರೀ ಗಾಳಿ-ಮಳೆಗೆ ಮರಗಳು ಧರೆಗುರುಳುತ್ತಿವೆ. ಮೂಡಿಗೆರೆ ತಾಲೂಕಿನ ಬಾಳೂರು ಗುಡ್ಡಟ್ಟಿ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದಿದೆ. ನವೀನ್, ಶೇಷಪ್ಪ ಎಂಬುವರಿಗೆ ಸೇರಿದ ಮನೆಗಳು ಜಖಂಗೊಂಡಿವೆ. ಮನೆಯಲ್ಲಿದ್ದ ಗೃಹ ಉಪಯೋಗಿ ವಸ್ತುಗಳು ನಾಶವಾಗಿವೆ. ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದ ಮೂಲೆಮನೆ ಎಸ್ಟೇಟ್‌ನಲ್ಲಿ ಭಾರಿ ಗಾಳಿ, ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿತ್ತು. ಪರಿಣಾಮ ಮನೆಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ. ಮನೆಯಲ್ಲಿದ್ದ ಪೂರ್ಣಿಮಾ, ಪ್ರಣಬ್ ಎಂಬುವವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಭಾರೀ ಮಳೆಯಿಂದ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ಹುಟ್ಟುವ ಹೇಮಾವತಿ ನದಿ ಗೊರೂರು ಡ್ಯಾಂ ಮೂಲಕ ಕೆ.ಆರ್.ಎಸ್. ಡ್ಯಾಂ ಸೇರಲಿದೆ.

ತುಂಗಾ ನದಿಯಲ್ಲಿ ಮುಳುಗಿದ ಮಂಟಪ

ಮಲೆನಾಡು ಭಾಗದಲ್ಲಿ ನಿರಂತರ ವರ್ಷಧಾರೆ ಹಿನ್ನೆಲೆಯಲ್ಲಿ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಮಂಟಪ ಮುಳುಗಿದೆ. ಶಿವಮೊಗ್ಗ ನಗರ ಮಧ್ಯೆ ಸಾಗುವ ತುಂಗಾ ನದಿಗೆ ತಾಗಿಕೊಂಡಿರುವ ಮಂಟಪ ಮುಳುಗಿದೆ. ಶಿವಮೊಗ್ಗ ನಗರದ ಕೋರ್ಪಲಯ್ಯನ ಛತ್ರದ ಬಳಿಯಿರುವ ಮಂಟಪ ಸಂಪೂರ್ಣವಾಗಿ ಮುಳುಗಿದೆ. ನದಿ ಪಾತ್ರದಲ್ಲಿ ಹೆಚ್ಚು ಜನರು ಓಡಾಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಎಸ್‌ಪಿ ಮಿಥುನ್ ಕುಮಾರ್ ನದಿ ಪಾತ್ರದಲ್ಲಿ ಪೊಲೀಸರ ಬೀಟ್ ವ್ಯವಸ್ಥೆ ಮಾಡಿದ್ದಾರೆ.

ದತ್ತ ಮಂದಿರಕ್ಕೆ ಸುತ್ತುವರಿದ ಕೃಷ್ಣೆ

ಮಹಾರಾಷ್ಟ್ರದ ಪ್ರಸಿದ್ಧ ದೇವಸ್ಥಾನ ದತ್ತ ಮಂದಿರಕ್ಕೆ ಕೃಷ್ಣೆ ನದಿ ಸುತ್ತುವರಿದಿದೆ. ಕೊಲ್ಹಾಪುರ ಜಿಲ್ಲೆಯ ಶಿಳೋಳ‌ ತಾಲೂಕಿನ‌ ನರಸಿಂಹವಾಡಿಯಲ್ಲಿರುವ ದತ್ತ ಮಂದಿರ ಜಲಾವೃತಗೊಂಡಿದೆ. ನರಸಿಂಹವಾಡಿ ಕೃಷ್ಣಾ ಹಾಗೂ ಪಂಚಗಂಗಾ ನದಿಗಳ ಸಂಗಮಸ್ಥಾನವಾಗಿದೆ. ಜಲಾವೃತವಾಗಿದ್ದರೂ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬಂಧಿದೆ. ನಡು ಮಟ್ಟದ ನೀರಲ್ಲಿಯೇ ಪ್ರದಕ್ಷಿಣೆ ಹಾಕುತ್ತಿದ್ದಾರೆ.

ಕೋಟ ಸಾಹೇಬ್ರಕಟ್ಟೆ ರಾಜ್ಯ ಹೆದ್ದಾರಿ ಸಂಪರ್ಕ ಬಂದ್

ಉಡುಪಿಯ ಕೋಟ ಸಾಹೇಬ್ರಕಟ್ಟೆ ರಾಜ್ಯ ಹೆದ್ದಾರಿ ಸಂಪರ್ಕ ಬಂದ್ ಆಗಿದೆ. ಕೋಟ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಬನ್ನಾಡಿಹೊಳೆ ತುಂಬಿ ಹರಿದಿದೆ. ರಾಜ್ಯ ಹೆದ್ದಾರಿ ಬನ್ನಾಡಿ ಭಾಗದಲ್ಲಿ ಪ್ರತಿ ವರ್ಷವೂ ಕಾಣಿಸಿಕೊಳ್ಳುವ ನೆರೆಹಾವಳಿಯಿಂದಾಗಿ ಸಂಚಾರ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಬಂದ್ ಮಾಡಲಾಗಿದೆ. ಸ್ಥಳಕ್ಕೆ ಕುಂದಾಪುರ ಎಸಿ ರಶ್ಮಿ ಭೇಟಿ ನೀರಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಕುಂದಾಪುರ ವಾರಾಹಿ ಸೌಪರ್ಣಿಕ ನದಿ ಭರ್ತಿಯಾಗಿದೆ. ಕುಂದಾಪುರದ ನದಿ ಸಾಲಿನಲ್ಲಿ ನೆರೆಯ ವಾತಾವರಣ ನಿರ್ಮಾಣವಾಗಿದೆ. ಬೇಳೂರು ದೇಲಟ್ಟು ಭಾಗದಿಂದ ಜನರ ಸ್ಥಳಾಂತರ ಮಾಡಲಾಗಿದೆ. ಕುಂದಾಪುರ ಅಗ್ನಿಶಾಮಕ ದಳದ ಕಾರ್ಯಾಚರಣೆ ನಡೆಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Karnataka Assembly Live: ವಾಲ್ಮೀಕಿ ಹಗರಣ ಚರ್ಚೆಯ ನಡುವೆ ಗದ್ದಲ ಸೃಷ್ಟಿಸಿದ ರೇವಣ್ಣ ಪ್ರಕರಣ; ರೊಚ್ಚಿಗೆದ್ದ ರೇವಣ್ಣ

Karnataka Assembly Session: ವಾಲ್ಮೀಕಿ ನಿಗಮ ಚರ್ಚೆಯ ಸಂದರ್ಭದಲ್ಲಿ ಆರೋಪಿತರ ಜಾಮೀನು ವಿಷಯವನ್ನು ವಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಉಲ್ಲೇಖಿಸಿದರು. ʼವಾಲ್ಮೀಕಿ ಹಗರಣದ ಪ್ರಮುಖ ಆರೋಪಿಗಳು ಇನ್ನು ಆರಾಮಾಗಿ ಓಡಾಡಿಕೊಂಡಿದ್ದಾರೆ. ಆದರೆ ರೇವಣ್ಣ ಅವರ ಪ್ರಕರಣದಲ್ಲಿ ಜಾಮೀನಿಗಾಗಿ ಅವರು ಎಷ್ಟೊಂದು ಒದ್ದಾಡಬೇಕಾಯಿತುʼ ಎಂದು ಹೇಳಿದರು.

VISTARANEWS.COM


on

Karnataka assembly live hd revanna
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ (Valmiki Corporation Scam) ಸಂಬಂಧಿಸಿ ವಿಧಾನಸಭೆಯಲ್ಲಿ (Karnataka Assembly Live) ನಡೆದಿರುವ ಚರ್ಚೆಯ ನಡುವೆ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna Case) ಪ್ರಕರಣ ಉಲ್ಲೇಖಗೊಂಡು ಕೆಲ ಕಾಲ ಗದ್ದಲ ಎಬ್ಬಿಸಿತು. ಆಡಳಿತ ಪಕ್ಷದ ಶಾಸಕರ ಮಾತಿನಿಂದ ರೊಚ್ಚಿಗೆದ್ದ ರೇವಣ್ಣ ಅವರು, ಪ್ರಕರಣ ದಾಖಲಿಸಿಕೊಂಡ ಡಿಜಿ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ವಾಲ್ಮೀಕಿ ನಿಗಮ ಚರ್ಚೆಯ ಸಂದರ್ಭದಲ್ಲಿ ಆರೋಪಿತರ ಜಾಮೀನು ವಿಷಯವನ್ನು ವಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಉಲ್ಲೇಖಿಸಿದರು. ʼವಾಲ್ಮೀಕಿ ಹಗರಣದ ಪ್ರಮುಖ ಆರೋಪಿಗಳು ಇನ್ನು ಆರಾಮಾಗಿ ಓಡಾಡಿಕೊಂಡಿದ್ದಾರೆ. ಆದರೆ ರೇವಣ್ಣ ಅವರ ಪ್ರಕರಣದಲ್ಲಿ ಜಾಮೀನಿಗಾಗಿ ಅವರು ಎಷ್ಟೊಂದು ಒದ್ದಾಡಬೇಕಾಯಿತುʼ ಎಂದು ಹೇಳಿದರು.

ಆಗ ಮಧ್ಯಪ್ರವೇಶ ಮಾಡಿದ ಶಾಸಕ ರಿಜ್ವಾನ್, ʼರೇವಣ್ಣ ಹಾಗೂ ವಾಲ್ಮೀಕಿ ನಿಗಮದ ಪ್ರಕರಣ ತುಲನೆ ಮಾಡೋದು ಸರಿಯಲ್ಲ. ರೇವಣ್ಣ ಪ್ರಕರಣದಲ್ಲಿ ರಾಜ್ಯದ ಹೆಣ್ಣು ಮಕ್ಕಳ ಮಾನಹರಣವಾಗಿದೆ. ಹೆಣ್ಣು ಮಕ್ಕಳು ತಲೆ ತಗ್ಗಿಸುವಂತಾಗಿದೆ. ಹಣ ವಾಪಸ್‌ ಬರಬಹುದು, ಆದರೆ ಮಾನ ಮರಳಿ ಬರುವುದಿಲ್ಲʼ ಎಂದು ರಿಜ್ವಾನ್ ಟೀಕಿಸಿದರು.

ಈ ವೇಳೆ ಎದ್ದು ನಿಂತ ಶಾಸಕ ರೇವಣ್ಣ, ʼನನ್ನ ಹೆಸರು ಹೇಳಿದ್ದಾರೆ. ಆದ್ದರಿಂದ ನಾನು ಮಾತಾಡಬೇಕು. ನಾನು ತಪ್ಪು ಮಾಡಿದ್ರೆ ನನ್ನ ಗಲ್ಲಿಗೆ ಹಾಕಲಿ. ನನ್ನ ಮಗ ತಪ್ಪು ಮಾಡಿದ್ದರೆ ಅವನನ್ನು ಗಲ್ಲಿಗೆ ಹಾಕಲಿ. ಆದರೆ ನಾನು 40 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಯಾವುದೋ ಹೆಣ್ಣುಮಗಳನ್ನು ಕರೆತಂದು ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ಸ್ವತಃ ಡಿಜಿ ಮುಂದೆ ಕುಳಿತುಕೊಂಡು ಕೇಸ್ ಬರೆದುಕೊಳ್ಳುತ್ತಾನೆ. ಡಿಜಿ ಆಗಲು ಆತ ನಾಲಾಯಕ್‌ʼ ಎಂದು ಕಿಡಿ ಕಾರಿದರು. ಈ ಹಂತದಲ್ಲಿ ರೇವಣ್ಣ ಭಾವುಕರಾದರು.

ನಂತರ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್‌, ʼರೇವಣ್ಣ ಅಧಿಕಾರಿಗಳ ಮೇಲೆ ಆರೋಪ ಮಾಡಿದ್ದಾರೆ. ಅವರಿಗೆ ಅನ್ಯಾಯ ಆಗಿದ್ರೆ ನೋಟೀಸ್ ಕೊಟ್ಟು ಚರ್ಚೆ ಮಾಡಲಿʼ ಎಂದು ಹೇಳಿದರು. ಇದಕ್ಕೆ ರೇವಣ್ಣ ಸಮ್ಮತಿಸಿದರು.

ಡಿಸಿಎಂ- ಅಶ್ವಥ್‌ ನಾರಾಯಣ ಚಕಮಕಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ನಡೆಯುತ್ತಿರುವ ಚರ್ಚೆಯ ವೇಳೆ ವಿಧಾನಸಭೆ ಗದ್ದಲದ ಗೂಡಾಯಿತು. ಸಿಎಂ ಗೈರುಹಾಜರಿಯನ್ನು ಬಿಜೆಪಿ ಶಾಸಕ ಅಶ್ವಥ್‌ ನಾರಾಯಣ್‌ ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಅವರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ನಡುವೆ ಮಾತಿನ ಚಕಮಕಿ ನಡೆದು ಗೊಂದಲ ಸೃಷ್ಟಿಯಾಯಿತು. ಸ್ಪೀಕರ್‌ ಯು.ಟಿ ಖಾದರ್‌ ಸದನವನ್ನು ಮುಂದೂಡಿದರು.

ವಾಲ್ಮೀಕಿ ನಿಗಮದ ಹಗರಣದ ಕುರಿತು ವಿಪಕ್ಷ ನಾಯಕ ಆರ್.‌ ಅಶೋಕ್‌ ಇಂದು ಚರ್ಚೆಯನ್ನು ಮುಂದುವರಿಸಿದರು. ಆದರೆ ಈ ಚರ್ಚೆಯ ವೇಳೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಗೈರುಹಾಜರಾಗಿದ್ದರು. ಇದಕ್ಕೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು. ʼನೇರವಾಗಿ ಇದು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರ. ಹಣಕಾಸು ಸಚಿವರಾಗಿರೋ ಸಿಎಂ ಅವರ ಮೇಲೆ ಇದರಲ್ಲಿ ನೇರವಾಗಿ ಗಂಭೀರ ಆರೋಪ ಇದೆʼ ಎಂದ ಅಶ್ವಥ್ ನಾರಾಯಣ್, ಕೂಡಲೇ ಅವರನ್ನು ಕರೆಸಿ ಎಂದು ಆಗ್ರಹಿಸಿದರು.

ಈ ವೇಳೆ ಸದನದಲ್ಲಿ ಎದ್ದು ನಿಂತ ಡಿಸಿಎಂ ಡಿಕೆ ಶಿವಕುಮಾರ್‌, ಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದರು. ಸಚಿವ ಜಮೀರ್ ಅಹ್ಮದ್ ಖಾನ್, ಕೆಜೆ ಜಾರ್ಜ್ ಕೂಡ ಅವರಿಗೆ ಸಾಥ್‌ ನೀಡಿದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಶಾಸಕರು ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲರೂ ಎದ್ದು ನಿಂತು ʼನೀವೇನು ಎಲ್ಲರಿಗೂ ಗೊತ್ತಿದೆʼ ಎಂದು ಕಿಡಿಕಾರಿದರು. ಆಡಳಿತ, ವಿಪಕ್ಷ ಶಾಸಕರ ನಡುವೆ ವಾಗ್ವಾದ ಹೆಚ್ಚಿ ಗೊಂದಲ ಮೂಡಿದ ಕಾರಣ ವಿಧಾ‌ನಸಭೆ ಕಲಾಪವನ್ನು ಸ್ಪೀಕರ್ ಹತ್ತು ನಿಮಿಷ ಮುಂದೂಡಿದರು.

ಇದನ್ನೂ ಓದಿ: Karnataka Assembly Live: ಸದನದಲ್ಲಿ ಇಂದು ಕಿಡಿಯೆಬ್ಬಿಸಲಿರುವ ವಾಲ್ಮೀಕಿ ಹಗರಣ; ಉತ್ತರ ನೀಡಲು ಸಿಎಂ ಸಜ್ಜು; ಇಲ್ಲಿದೆ ಕ್ಷಣಕ್ಷಣದ ಲೈವ್‌

Continue Reading

ಕರ್ನಾಟಕ

Assembly Session 2024: ಮೈಸೂರು ಪೇಪರ್ ಮಿಲ್ಸ್‌ ಪುನರಾರಂಭಕ್ಕೆ ಸರ್ಕಾರ ಚಿಂತನೆ: ಸಚಿವ ಎಂ.ಬಿ. ಪಾಟೀಲ್

Assembly Session 2024: ಹಣಕಾಸಿನ ಸಮಸ್ಯೆಯಿಂದ ಮೈಸೂರು ಪೇಪರ್ ಮಿಲ್ಸ್‌ ಅನ್ನು 2015ರಲ್ಲಿ ಸ್ಥಗಿತ ಮಾಡಲಾಗಿತ್ತು. ಈ ಕಾರ್ಖಾನೆಯ ಪುನರಾರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

VISTARANEWS.COM


on

Assembly Session 2024
Koo

ಬೆಂಗಳೂರು: ಹಣಕಾಸಿನ ಸಮಸ್ಯೆಯಿಂದ 2015ರಲ್ಲಿ ಸ್ಥಗಿತ ಮಾಡಲಾಗಿದ್ದ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಪುನರಾರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಖಾಸಗಿ ಸಹಭಾಗಿತ್ವದಲ್ಲಿ ಮೈಸೂರು ಪೇಪರ್ ಮಿಲ್ಸ್‌ (Assembly Session 2024) ಪುನಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಂಗಳವಾರ ಕಾಂಗ್ರೆಸ್ ಸದಸ್ಯೆ ಬಿಲ್ಕಿಸ್ ಬಾನು ಅವರು ಕೇಳಿದ ಪ್ರಶ್ನೆಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಉತ್ತರ ನೀಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಅಧಿವೇಶನ ಸಮಯದಲ್ಲೂ ಮೈಸೂರು ಕಾಗದ ಕಾರ್ಖಾನೆ ಪುನರಾರಂಭದ ಬಗ್ಗೆ ಸಚಿವರು ಮಾತನಾಡಿದ್ದರು. ಹಣಕಾಸಿನ ಸಮಸ್ಯೆಯಿಂದ ಮೈಸೂರು ಪೇಪರ್ ಮಿಲ್ಸ್‌ ಅನ್ನು 2015ರಲ್ಲಿ ಸ್ಥಗಿತ ಮಾಡಲಾಗಿತ್ತು. ಜೂನ್ 2023ರ ಅಂತ್ಯಕ್ಕೆ 1,482 ಕೋಟಿ ಸಂಚಿತ ನಷ್ಟ ಆಗಿತ್ತು. ಖಾಸಗಿ ಅವರು ಕಂಪನಿ ಅವರಿಗೂ 3 ಬಾರಿ ಆಹ್ವಾನ ಮಾಡಿದ್ದೇವೆ. ಆದರೂ ಯಾರೂ ಕಾರ್ಖಾನೆ ಪ್ರಾರಂಭಕ್ಕೆ ಮುಂದೆ ಬರಲಿಲ್ಲ ಎಂದು ಮಾಹಿತಿ ನೀಡಿದ್ದರು, ಇದೀಗ ಮತ್ತೊಮ್ಮೆ ಮೈಸೂರು ಪೇಪರ್ ಮಿಲ್ಸ್‌ ಪುನರಾರಂಭ ಮಾಡುವುದಾಗಿ ಕಲಾಪದಲ್ಲಿ ತಿಳಿಸಿದ್ದಾರೆ.

ಕಾಗದ ಕಾರ್ಖಾನೆಗೆ ನೀಲಗಿರಿ ಅವಶ್ಯಕತೆ ಇದೆ. ಆದರೆ ನಮ್ಮಲ್ಲಿ ನೀಲಗಿರಿ ಬೆಳೆಯಲು ನಿಷೇಧ ಇದೆ. ಹೀಗಾಗಿ ಖಾಸಗಿ ಅವರು ಮುಂದೆ ಬರುತ್ತಿಲ್ಲ. ನಾವು ಕೂಡ ಮೈಸೂರು ಕಾಗದ ಕಾರ್ಖಾನೆ ಪ್ರಾರಂಭ ಮಾಡಲು ಉತ್ಸುಕರಾಗಿದ್ದೇವೆ. ಅರಣ್ಯ ಇಲಾಖೆಯ ತಜ್ಞರ ಸಮಿತಿಯು ನೀಲಗಿರಿ ಬೆಳೆಯಲು ಕಾರ್ಗಾನೆಗೆ ವಿನಾಯಿತಿ ನೀಡುವ ಸಂಬಂಧ ಪರಿಶೀಲಿಸಿ ವರದಿ ನೀಡಬೇಕಿದೆ. ಕಂಪನಿಯ ಸಾಲ, ಬಾಕಿ ಕುರಿತು ಆರ್ಥಿಕ ಇಲಾಖೆ ಜೊತೆ ಸಮಾಲೋಚನೆ ಮಾಡಲಾಗುತ್ತಿದೆ. ಇವೆರಡೂ ವಿಷಯಗಳ ಬಗ್ಗೆ ನಿರ್ಧಾರ ಆದ ಮೇಲೆ ಕಾರ್ಖಾನೆ ಪ್ರಾರಂಭದ ಬಗ್ಗೆ ಕ್ರಮವಹಿಸುತ್ತೇವೆ ಎಂದು ಈ ಹಿಂದೆ ಸಚಿವರು ಭರವಸೆ ನೀಡಿದ್ದರು.

ಸರ್ಕಾರದಿಂದ ಯಾವುದೇ ಬೃಹತ್ ಕೈಗಾರಿಕೆ ಪ್ರಾರಂಭಿಸುವುದಿಲ್ಲ

ರಾಜ್ಯದಲ್ಲಿ ಹೊಸ ಕೈಗಾರಿಕೆ, ಉದ್ಯೋಗ ಸೃಷ್ಟಿ ಕುರಿತು ಪ್ರಕಾಶ್ ರಾಥೋಡ್ ಪ್ರಶ್ನೆಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಉತ್ತರಿಸಿ, ಸರ್ಕಾರದಿಂದ ಯಾವುದೇ ಬೃಹತ್ ಕೈಗಾರಿಕೆ ಪ್ರಾರಂಭಿಸುವುದಿಲ್ಲ. ಕಳೆದ ಸಾಲಿನಲ್ಲಿ 591 ಕೋಟಿ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ 1,56,989 ಉದ್ಯೋಗ ಸೃಷ್ಟಿಯಾಗಲಿದೆ. ಈ ಯೋಜನೆಗಳ ಅನುಷ್ಠಾನಕ್ಕೆ 3-4 ವರ್ಷ ಬೇಕಾಗುತ್ತದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕಕ್ಕೆ ಯಾವುದೇ ಕೈಗಾರಿಕೆಗಳನ್ನ ತರುತ್ತಿಲ್ಲ ಎಂಬ ರಾಥೋಡ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹಲವರು ಹೇಳುತ್ತಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಬೇಕು, ಅದು ಸುಲಭ ಇಲ್ಲ. ಕೇಂದ್ರ ಸರ್ಕಾರ ಏನಾದರೂ ಸಹಕಾರ ನೀಡಿದರೆ ಕೈಗಾರಿಕೆಗಳು ತರಬಹುದು. ಸಿ.ಟಿ. ರವಿಯವರು ಸಹಕಾರ ಕೊಟ್ಟರೆ ಮಾಡಬಹುದು. ಕುಮಾರ ಸ್ವಾಮಿಯವರು ಕೇಂದ್ರ ಮಂತ್ರಿಯಾಗಿದ್ದಾರೆ. ಅವರಿಗೆ ಮನವಿ ಮಾಡಿದ್ದೇವೆ ಎಂದರು.

ಇದನ್ನೂ ಓದಿ | Karnataka Assembly Live: ಡಿಸಿಎಂ ಡಿಕೆ ಶಿವಕುಮಾರ್-‌ ಅಶ್ವಥ್‌ ನಾರಾಯಣ್‌ ವಾಗ್ಯುದ್ಧ; ಗದ್ದಲ

ತುಮಕೂರು- ಚಿತ್ರದುರ್ಗ ನಡುವೆ ಹೊಸ ಏರ್‌ಪೋರ್ಟ್ ಕುರಿತು ಬಿಜೆಪಿಯ ನವೀನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಯಾವುದೇ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.

Continue Reading

ಮಳೆ

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

Karnataka Rain: ಉತ್ತರ ಕನ್ನಡದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಸಾವು-ನೋವಿಗೆ ಕಾರಣವಾಗುತ್ತಿದೆ. ಶಿರೂರಿನಲ್ಲಿ ಗುಡ್ಡ ಕುಸಿತ ಉಂಟಾಗಿದ್ದರೆ, ಇತ್ತ ಕಿನ್ನರ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಬಿದ್ದು, ಗೋಡೆ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

VISTARANEWS.COM


on

By

Karnataka Rain
Koo

ಉತ್ತರಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಭಾರಿ ಮಳೆಗೆ (Karnataka Rain) ಮನೆ ಮೇಲೆ ಗುಡ್ಡ ಬಿದ್ದ ಪರಿಣಾಮ ಗೋಡೆ ಕುಸಿದಿದೆ. ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ತಿಕರ್ಸ್ ಗುರವ (60) ಮೃತ ದುರ್ದೈವಿ.

ಮನೆಯ ಮೇಲೆ ಏಕಾಏಕಿ ಗುಡ್ಡ ಕುಸಿದ ಪರಿಣಾಮ ಗೋಡೆಯಡಿ ಸಿಲುಕಿದ ತಿಕರ್ಸ್‌ ತಲೆಗೆ ಗಂಭೀರ ಪೆಟ್ಟಾಗಿತ್ತು. ಏಕಾಏಕಿ ಮನೆ ಗೋಡೆ ಕುಸಿದ ಪರಿಣಾಮ ಹೊರ ಬರಲು ಆಗದೆ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಸುಮಾರು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ. ಸ್ಥಳದಲ್ಲಿ ತಹಶಿಲ್ದಾರ್, ಕಾರವಾರ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಅಧಿಕಾರಿಗಳು ದೌಡು

ಇನ್ನೂ ಉತ್ತರ ಕನ್ನಡದ ಅಂಕೋಲಾ ಗುಡ್ಡ ಕುಸಿತ ಪ್ರದೇಶಕ್ಕೆ ಕುಮಟಾ ಎಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣಿನಡಿ 10ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ಇದ್ದು, ಒಂದೇ ಕುಟುಂಬದ ಐವರು ಸೇರಿ ಹತ್ತಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ. ಗುಡ್ಡ ಕುಸಿದ ರಭಸಕ್ಕೆ ನದಿಗೆ 2 ಗ್ಯಾಸ್ ಟ್ಯಾಂಕರ್‌ಗಳು ಕೊಚ್ಚಿ ಹೋಗಿದೆ. ಗುಡ್ಡದ ಕೆಳಗಿದ್ದ ಲಾರಿ, ಮತ್ತೊಂದು ಟ್ಯಾಂಕರ್‌ ಹಾಗೂ ಚಾಲಕರು ಪಾರಾಗಿದ್ದಾರೆ.

ಅಂಕೋಲಾ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ. ಅವಘಡದಲ್ಲಿ 7 ಮಂದಿ ಸಾವನ್ನಪ್ಪಿರಬಹುದೆಂದು ಮಾಹಿತಿ ಲಭ್ಯವಾಗಿದೆ. ಇನ್ನೂ ಕೂಡಾ ಖಚಿತ ಮಾಹಿತಿ ಬರಬೇಕಿದೆ. ಸದ್ಯ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಎಷ್ಟು ಸಾವಾಗಿದೆ ಹೇಳುವುದು ಸಾಧ್ಯವಿಲ್ಲ. ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳು ಸಾಕಾಗುತ್ತಿಲ್ಲ. ಹೀಗಾಗಿ ಕುಮಟಾ ಹಾಗೂ ಅಂಕೋಲಾ ಎರಡೂ ಕಡೆಯಿಂದ ಕಾರ್ಯಾಚರಣೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಜೆಸಿಬಿ, ಹಿಟಾಚಿ ಮತ್ತಿತರ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು ಎಂದರು.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

ಶಿವಮೊಗ್ಗದಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ

ಶಿವಮೊಗ್ಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ ಮನೆಗೆ ಹಾನಿಯಾಗಿದೆ. ಮನೆ ಮೇಲೆ ಮರ ಬಿದ್ದು, ಚಾವಣಿ ಕುಸಿದು ಬಿದ್ದಿದೆ. ಜತೆಗೆ ನೀರು ನುಗ್ಗಿ, ಮನೆಯಲ್ಲಿರುವ ಗೃಹೋಪಯೋಗಿ ವಸ್ತುಗಳು ನೀರುಪಾಲಾಗಿದೆ. ನಿಂಗಮ್ಮ ಎಂಬುವರಿಗೆ ಸೇರಿದ ಮನೆಯು ಹಾನಿಯಾಗಿದ್ದು, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.

ಹಾಸನದಲ್ಲಿ ಕರೆಂಟ್‌ ಕಟ್‌

ಹಾಸನ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಅಪಾರ ಪ್ರಮಾಣದ ಹಾನಿಯಾಗಿದೆ. ಸಕಲೇಶಪುರ ತಾಲೂಕಿನ ಮಾವಿನೂರು, ಕಾಗಿನೆರೆ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಸಕಲೇಶಪುರ ತಾಲೂಕಿನ ಗಡಿ ಗ್ರಾಮ ತಂಬಲಗೇರಿಯಲ್ಲಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದೆ. ಪುಟ್ಟೇಗೌಡ ಎಂಬುವವರ ಸೇರಿದ ಮನೆಯು ಹಾನಿಯಾಗಿದೆ. ಜತೆಗೆ ಗದ್ದೆಗಳಿಗೆ ಮಣ್ಣು ಕುಸಿದು, ಭತ್ತ ಸಸಿಗಳು ಮಣ್ಣಿನಡಿ ಸಿಲುಕಿದೆ. ತಂಬಲಗೇರಿ ಗ್ರಾಮದ ಲೋಕೇಶ್ ಹಾಗೂ ಇತರೆ ಗ್ರಾಮಸ್ಥರಿಗೆ ಸೇರಿದ ಭತ್ತದ ಗದ್ದೆಗಳು ಕೆರೆಯಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
7th Pay Commission
ಕರ್ನಾಟಕ1 second ago

7th Pay Commission: ಆ.1ರಿಂದ ನೌಕರರ ವೇತನ ಹೆಚ್ಚಳ; ಸರ್ಕಾರಕ್ಕೆ ವಾರ್ಷಿಕ 20,208 ಕೋಟಿ ಹೆಚ್ಚುವರಿ ಹೊರೆ ಎಂದ ಸಿಎಂ

Sexual Abuse
Latest2 mins ago

Sexual Abuse: ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ

MAX Teaser
ಸ್ಯಾಂಡಲ್ ವುಡ್7 mins ago

MAX Teaser: ಬಹುನಿರೀಕ್ಷಿತ ʼಮ್ಯಾಕ್ಸ್ʼ ಚಿತ್ರದ ಟೀಸರ್‌ ಔಟ್‌; ರೌಡಿಗಳ ಅಡ್ಡದಲ್ಲಿ ನಿಂತು ಲಾಂಗ್‌ ಬೀಸಿದ ಸುದೀಪ್‌

Soldier 2
ಸಿನಿಮಾ10 mins ago

Soldier 2: ಮುಂದಿನ ವರ್ಷ ‘ಸೋಲ್ಜರ್ 2’ ಶೂಟಿಂಗ್; ಮತ್ತೆ ಒಂದಾಗಲಿದ್ದಾರೆಯೇ ಬಾಬಿ ಡಿಯೋಲ್-ಪ್ರೀತಿ ಜಿಂಟಾ?

Rain Effect.. karnataka Rain Effect
ಮಳೆ27 mins ago

Rain Effect : ಭಾರಿ ಮಳೆಗೆ ಶಿರೂರು ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿದ್ದ ಮಹಿಳೆ ಮೃತದೇಹ ಪತ್ತೆ

RCB
ಕ್ರೀಡೆ42 mins ago

RCB: ಆರ್​ಸಿಬಿ ಕಪ್​ ಗೆಲ್ಲದಿರಲು ನೈಜ ಕಾರಣ ತಿಳಿಸಿದ ತಂಡದ ಮಾಜಿ ಆಟಗಾರ

Gold Rate Today
ಚಿನ್ನದ ದರ47 mins ago

Gold Rate Today: ಮತ್ತೆ ಏರಿಕೆಯಾದ ಚಿನ್ನದ ಬೆಲೆ; ಆಭರಣ ಕೊಂಡುಕೊಳ್ಳುವ ಮುನ್ನ ದರ ಗಮನಿಸಿ

Karnataka assembly live hd revanna
ಪ್ರಮುಖ ಸುದ್ದಿ55 mins ago

Karnataka Assembly Live: ವಾಲ್ಮೀಕಿ ಹಗರಣ ಚರ್ಚೆಯ ನಡುವೆ ಗದ್ದಲ ಸೃಷ್ಟಿಸಿದ ರೇವಣ್ಣ ಪ್ರಕರಣ; ರೊಚ್ಚಿಗೆದ್ದ ರೇವಣ್ಣ

Assembly Session 2024
ಕರ್ನಾಟಕ1 hour ago

Assembly Session 2024: ಮೈಸೂರು ಪೇಪರ್ ಮಿಲ್ಸ್‌ ಪುನರಾರಂಭಕ್ಕೆ ಸರ್ಕಾರ ಚಿಂತನೆ: ಸಚಿವ ಎಂ.ಬಿ. ಪಾಟೀಲ್

Donald Trump
ವಿದೇಶ1 hour ago

Donald Trump: ಬೆದರಿಕೆಗೆ ಬಗ್ಗದ ಡೊನಾಲ್ಡ್‌ ಟ್ರಂಪ್;‌ ಕಿವಿಗೆ ಬ್ಯಾಂಡೇಜ್‌ ಕಟ್ಟಿಕೊಂಡು ಜನರೆದುರು ಪ್ರತ್ಯಕ್ಷ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ21 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌