Viral News: 1 ರೂಪಾಯಿಯ ತೆರಿಗೆ ವಿವಾದ ಬಗೆಹರಿಸಲು 50,000 ರೂ. ಪಡೆದ ಚಾರ್ಟರ್ಡ್ ಅಕೌಂಟೆಂಟ್‌‌! - Vistara News

ವೈರಲ್ ನ್ಯೂಸ್

Viral News: 1 ರೂಪಾಯಿಯ ತೆರಿಗೆ ವಿವಾದ ಬಗೆಹರಿಸಲು 50,000 ರೂ. ಪಡೆದ ಚಾರ್ಟರ್ಡ್ ಅಕೌಂಟೆಂಟ್‌‌!

ದೆಹಲಿಯ ವ್ಯಕ್ತಿಯೊಬ್ಬರು ಕೇವಲ 1 ರೂಪಾಯಿ ಮೌಲ್ಯದ ತೆರಿಗೆ ವಿವಾದವನ್ನು ಇತ್ಯರ್ಥಪಡಿಸಲು ಚಾರ್ಟರ್ಡ್ ಅಕೌಂಟೆಂಟ್ ಗೆ (ಸಿಎ)ಗೆ 50,000 ರೂಪಾಯಿ ಪಾವತಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ (Viral News) ಆಗಿರುವುದು ಮಾತ್ರವಲ್ಲ ಚರ್ಚೆಯನ್ನೂ ಹುಟ್ಟು ಹಾಕಿದೆ. ಇದೇನು ವಿಷಯ? ಈ ಸುದ್ದಿ ಓದಿ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೇವಲ 1 ರೂಪಾಯಿ ಮೌಲ್ಯದ ತೆರಿಗೆ ವಿವಾದವನ್ನು (Tax Dispute) ಇತ್ಯರ್ಥಪಡಿಸಲು ಚಾರ್ಟರ್ಡ್ ಅಕೌಂಟೆಂಟ್ ಗೆ (CA)ಗೆ 50,000 ರೂಪಾಯಿ ಪಾವತಿಸಿದ್ದೇನೆ ಎಂದು ದೆಹಲಿಯ (Delhi) ಅಪೂರ್ವ್ ಜೈನ್ ಸಾಮಾಜಿಕ ಜಾಲತಾಣದಲ್ಲಿ (social media) ಹೇಳಿಕೊಂಡಿದ್ದು, ಇದು ಬಾರಿ ವೈರಲ್ (Viral News) ಆಗಿರುವುದು ಮಾತ್ರವಲ್ಲ ಚರ್ಚೆಯನ್ನೂ ಹುಟ್ಟು ಹಾಕಿದೆ.

ಆದಾಯ ತೆರಿಗೆ ನೊಟೀಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿರುವ ಅಪೂರ್ವ ಜೈನ್, ನಾನು ಇತ್ತೀಚೆಗೆ ಸ್ವೀಕರಿಸಿದ ಆದಾಯ ತೆರಿಗೆ ನೊಟೀಸ್ ಹಿನ್ನೆಲೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗೆ 50,000 ರೂ. ಶುಲ್ಕವನ್ನು ಪಾವತಿಸಿದ್ದೇನೆ. ಅದರಲ್ಲಿ ಅಂತಿಮ ವಿವಾದಿತ ಮೌಲ್ಯವು ಕೇವಲ 1 ರೂ. ಆಗಿತ್ತು. ನಾನು ತಮಾಷೆ ಮಾಡುತ್ತಿಲ್ಲ ಎಂದು ಸೇರಿಸುವ ಮೂಲಕ ಅವರು ತಮ್ಮ ಗಂಭೀರತೆ ವಿಷಯವನ್ನು ಹೇಳಿದರು.

ಈ ಘಟನೆಯು ಭಾರತದಲ್ಲಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಸಾಮಾನ್ಯ ಜನರಿಗೆ ಎದುರಾಗುವ ಕಷ್ಟಗಳನ್ನು ಎತ್ತಿ ತೋರಿಸಿದೆ. ಕೆಲವೊಮ್ಮೆ ಸಣ್ಣ ಸಮಸ್ಯೆಗಳು ಗಮನಾರ್ಹದ ವೃತ್ತಿಪರ ಶುಲ್ಕಗಳಿಗೆ ಕಾರಣವಾಗಬಹುದು.
ಜೈನ್ ಅವರ ಈ ಪ್ರಕರಣವು ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿದೆ. ಕೆಲವು ಬಳಕೆದಾರರು ತೆರಿಗೆ ಇಲಾಖೆಯ ಅಸಮರ್ಥತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇತರರು ಸಿಎ ಅವರ ಶುಲ್ಕ ರಚನೆಯನ್ನು ಪ್ರಶ್ನಿಸಿದ್ದಾರೆ.

ತೆರಿಗೆ ಇಲಾಖೆಯ ಸ್ಥಿತಿಯ ಮುಂದೆ ಯಾವುದೂ ತಮಾಷೆಯಂತೆ ಕಾಣುತ್ತಿಲ್ಲ ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಶ್ರೀಮಂತ ರೈತರಿಗೆ ಆದಾಯ ತೆರಿಗೆ ನೊಟೀಸ್ ಕಳುಹಿಸುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.


50,000 ರೂ. ಶುಲ್ಕಗಳು ತುಂಬಾ ಹೆಚ್ಚು; ಸಿಎಗಳು ಈ ದಿನಗಳಲ್ಲಿ ಮನಸ್ಸಿಗೆ ಇಚ್ಛೆ ಬಂದಂತೆ ಶುಲ್ಕಗಳನ್ನು ವಿಧಿಸುತ್ತಿದ್ದಾರೆ ಎಂದು ಮೂರನೇ ಬಳಕೆದಾರರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಅಮೆರಿಕಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ವೀಕ್ಷಕರ ಮನಗೆದ್ದ ಭಾರತೀಯ ಮೂಲದ ಬಾಲಕಿ

ಈ ನಡುವೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಕಠಿಣ ಸಲಹೆಯನ್ನು ನೀಡಿದೆ. ವಿನಾಯಿತಿ ಮತ್ತು ಕಡಿತಗಳಿಗೆ ಸುಳ್ಳು ,ಮಾಹಿತಿ ನೀಡುವವರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರ ವಿರುದ್ಧ ಎಚ್ಚರಿಕೆಯನ್ನು ನೀಡಿದೆ. ಇಂತಹ ಕ್ರಮಗಳ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದು ಗಣನೀಯ ದಂಡ ಮತ್ತು ಜೈಲು ಶಿಕ್ಷೆಗೆ ಕಾರಣವಾಗಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral News: ಬಾಸ್‌ ಜತೆ ಚಕ್ಕಂದವಾಡುತ್ತಿದ್ದ ಕಿಲಾಡಿ ಪತ್ನಿ; ಡ್ರೋನ್‌ ಬಳಸಿ ಪತ್ತೆ ಹಚ್ಚಿದ ಚಾಲಾಕಿ ಗಂಡ!

Viral News: ಗಂಡನಿಗೆ ಹೆಂಡತಿಯ ಮೇಲೆ ಅನುಮಾನ, ಹೆಂಡತಿಗೆ ಗಂಡನ ಮೇಲೆ ಅನುಮಾನ ಇದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಚೀನಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿ ತನ್ನನ್ನು ನಿರ್ಲಕ್ಷಿಸುತ್ತಿರುವುದು ತಿಳಿದುಬಂದಿದೆ. ಇದರಿಂದ ಆತನಿಗೆ ತನ್ನ ಪತ್ನಿಯ ಮೇಲೆ ಅನುಮಾನ ಶುರುವಾಗಿದೆ. ಹಾಗಾಗಿ ಆತ ತನ್ನ ಹೆಂಡತಿಯ ಚಲನವಲನಗಳನ್ನು ಪತ್ತೆಹಚ್ಚಲು ಡ್ರೋನ್ ಅನ್ನು ಬಳಸಲು ಆತ ನಿರ್ಧರಿಸಿದ. ಕೊನೆಗೂ ಆತನ ಪತ್ನಿ ಬಾಸ್‌ ಜತೆ ಸರಸವಾಡುತ್ತಿರುವುದು ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ

VISTARANEWS.COM


on

Viral News
Koo

ಅಕ್ರಮ ಸಂಬಂಧದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳಿಬರುತ್ತಿದೆ. ಪತಿ ಪತ್ನಿಯರು ಒಬ್ಬರು, ಇನ್ನೊಬ್ಬರಿಗೆ ತಿಳಿಯದಂತೆ ತಮ್ಮ ಕಚೇರಿಗಳಲ್ಲಿ, ಅಥವಾ ಇನ್ನಿತರ ಸ್ಥಳಗಳಲ್ಲಿ ಬೇರೆಯವರೊಡನೆ ಅಕ್ರಮ ಸಂಬಂಧವನ್ನು ಹೊಂದುವ ಪ್ರಕರಣಗಳು ಬಯಲಾಗುತ್ತಿವೆ. ಇದು ಈಗ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಆದರೆ ಇದೀಗ ಮಹಿಳೆಯೊಬ್ಬಳು ತಮ್ಮ ಬಾಸ್ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದು, ಇದರಿಂದ ಅನುಮಾನಗೊಂಡಿದ್ದ ಪತಿ ತನ್ನ ಹೆಂಡತಿಯ ರಹಸ್ಯ ಸಂಬಂಧವನ್ನು ಕಂಡುಹಿಡಿಯಲು ಡ್ರೋನ್ ಬಳಸಿ ಯಶಸ್ವಿಯಾಗಿದ್ದಾನೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News )ಆಗಿದೆ.

Viral News

ಮಧ್ಯ ಹುಬೈ ಪ್ರಾಂತ್ಯದ ಶಿಯಾನ್‍ನಲ್ಲಿ ವಾಸಿಸುವ 33 ವರ್ಷದ ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿ ತನ್ನನ್ನು ನಿರ್ಲಕ್ಷಿಸುತ್ತಿರುವುದು ತಿಳಿದುಬಂದಿದೆ. ಇದರಿಂದ ಆತನಿಗೆ ತನ್ನ ಪತ್ನಿಯ ಮೇಲೆ ಅನುಮಾನ ಶುರುವಾಗಿದೆ. ಅಲ್ಲದೇ ಆತನ ಪತ್ನಿಗೆ ಕೆಲಸದಲ್ಲಿ ಪ್ರಮೋಷನ್ ಸಿಕ್ಕಿದ್ದು, ತನ್ನ ಹೆತ್ತವರನ್ನು ಆಗಾಗ ಭೇಟಿ ಮಾಡಲು ಹೋಗುವುದು ಆತನಲ್ಲಿ ಅನುಮಾನವನ್ನುಂಟುಮಾಡಿದೆ. ಹಾಗಾಗಿ ಆತ ತನ್ನ ಹೆಂಡತಿಯ ಚಲನವಲನಗಳನ್ನು ಪತ್ತೆಹಚ್ಚಲು ಡ್ರೋನ್ ಅನ್ನು ಬಳಸಲು ನಿರ್ಧರಿಸಿದನು. ಪತ್ನಿಯ ಹಿಂದೆ ಡ್ರೋನ್ ಅನ್ನು ಕಳುಹಿಸಿದ ಆತ ಆಕೆ ಕಾರೊಂದರಲ್ಲಿ ದೂರದ ಪರ್ವತ ಪ್ರದೇಶಕ್ಕೆ ಹೋಗುವುದು ಕಂಡುಬಂದಿದೆ. ನಂತರ ಅಲ್ಲಿ ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಕೈ ಕೈ ಹಿಡಿದು ನಡೆದು ಪಾಳುಬಿದ್ದ ಮಣ್ಣಿನ ಗೋಡೆಯ ಮನೆಯೊಳಗೆ ಹೋಗುತ್ತಿರುವುದು ಕಂಡಿದೆ. ಸುಮಾರು 20 ನಿಮಿಷಗಳ ನಂತರ, ಅವರು ಕಟ್ಟಡದಿಂದ ಹೊರಬಂದು ನಂತರ ಅವಳು ತನ್ನ ಕೆಲಸ ಮಾಡುವ ಕಾರ್ಖಾನೆಗೆ ಹಿಂತಿರುಗಿದ್ದಾಳೆ. ಆಗ ಪತಿಗೆ ಆಕೆಗೆ ಅಕ್ರಮ ಸಂಬಂಧವಿರುವುದು ತಿಳಿದು ಬಂದಿದೆ.

ಹಾಗಾಗಿ ಡ್ರೋನ್‍ನಿಂದ ಸಂಗ್ರಹಿಸಿದ ಪುರಾವೆಗಳಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾನೆ ಎನ್ನಲಾಗಿದೆ. ಹಾಗೇ ಅವಳಿಗೆ ತನ್ನ ಬಾಸ್ ಜೊತೆ ಅಕ್ರಮ ಸಂಬಂಧವಿದ್ದು, ಕಾರ್ಖಾನೆಯಲ್ಲಿ ಅವರಿಗೆ ಸಂಬಂಧ ಹೊಂದಲು ಸಮಸ್ಯೆಯಾಗುತ್ತದೆ ಎಂದು ದೂರದ ಕಾಡಿನಲ್ಲಿ ಈ ಕೆಲಸ ಮಾಡಲು ಮುಂದಾಗಿರುವುದಾಗಿ ಪತಿ ತಿಳಿಸಿದ್ದಾನೆ. ಈ ವಿಚಾರವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಪತ್ನಿಯ ಮೋಸವನ್ನು ಡ್ರೋನ್ ಮೂಲಕ ಬಯಲು ಮಾಡಿರುವ ಬಗ್ಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕೆಲವರು ಡ್ರೋನ್ ತಂತ್ರಜ್ಞಾನದಿಂದ ಆತನ ಪತ್ನಿಯ ಮೋಸ ಬಯಲಾಗಿದೆ ಎಂದು ಹೊಗಳಿದ್ದಾರೆ. ಹಾಗೇ ಡ್ರೋನ್‍ನಂತಹ ತಂತ್ರಜ್ಞಾನ ಇರುವ ಈ ಕಾಲದಲ್ಲಿ ಇಂತಹ ಮೋಸ ನಡೆಯುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ

ಡ್ರೋನ್ ತಂತ್ರಜ್ಞಾನ ಇತೀಚಿನ ದಿನಗಳಲ್ಲಿ ಹೆಚ್ಚಿನ ಕೆಲಸಕ್ಕೆ ಬಳಸಲಾಗುತ್ತಿದೆ. ಏಪ್ರಿಲ್ 2022ರಲ್ಲಿ ಶಾಂಘೈನಲ್ಲಿ ಕಟ್ಟುನಿಟ್ಟಾದ ಕೋವಿಡ್ -19 ಲಾಕ್‍ಡೌನ್ ಇದ್ದಾಗ, ವ್ಯಕ್ತಿಯೊಬ್ಬರು ಎತ್ತರದ ಕಟ್ಟಡದಲ್ಲಿ ವಾಸಿಸುತ್ತಿದ್ದ ನೆರೆಹೊರೆಯವರಿಗೆ ಮೀನು ಮತ್ತು ತರಕಾರಿಗಳಂತಹ ದೈನಂದಿನ ಅಗತ್ಯ ವಸ್ತುಗಳನ್ನು ಡ್ರೋನ್‍ನಲ್ಲಿ ವಿತರಿಸಿ ಗಮನ ಸೆಳೆದಿದ್ದರು.

Continue Reading

ಕ್ರಿಕೆಟ್

Rishabh Pant: ಸಹ ಆಟಗಾರ ಖಲೀಲ್​ ಅಹ್ಮದ್​ರನ್ನು ಸ್ವಿಮ್ಮಿಂಗ್ ಪೂಲ್‌​ಗೆ ತಳ್ಳಿ ಹಾಕಿದ ಪಂತ್​; ವಿಡಿಯೊ ವೈರಲ್​

Rishabh Pant: ಪಂತ್​, ಅಕ್ಷರ್ ಪಟೇಲ್​​ ಮತ್ತು ಖಲೀಲ್​ ಉತ್ತಮ ಸ್ನೇಹಿತರಾಗಿದ್ದಾರೆ. ಜತೆಗೆ ಐಪಿಎಲ್​ನಲ್ಲಿಯೂ ಈ ಮೂರು ಆಟಗಾರರು ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡುತ್ತಿದ್ದಾರೆ.

VISTARANEWS.COM


on

Rishabh Pant
Koo

ಮುಂಬಯಿ: ಟಿ20 ವಿಶ್ವಕಪ್​ ಗೆದ್ದ ಬಳಿಕ ಟೀಮ್​ ಇಂಡಿಯಾದ ಆಟಗಾರರು ತಮ್ಮ ಗೆಳೆಯರ, ಕುಟುಂಬದ ಜತೆ ದೇಶ-ವಿದೇಶಕ್ಕೆ ಪ್ರವಾಸ ಕೈಗೊಳ್ಳುತ್ತಾ ಎಂಜಾಯ್​ ಮಾಡುತ್ತಿದ್ದಾರೆ. ವಿಶ್ವಕಪ್​ ತಂಡದ ಭಾಗವಾಗಿದ್ದ, ಆತ್ಮೀಯ ಗೆಳೆಯರು ಆಗಿರುವ ರಿಷಭ್​ ಪಂತ್(Rishabh Pant)​, ಅಕ್ಷರ್​ ಪಟೇಲ್​ ಮತ್ತು ಖಲೀಲ್​ ಅಹ್ಮದ್​(Khaleel Ahmed) ಕೂಡ ಪ್ರವಾಸ ಹೋಗಿದ್ದಾರೆ. ಈ ವೇಳೆ ಪಂತ್​ ಖಲೀಲ್ ಅವರನ್ನು ಸ್ವಿಮ್ಮಿಂಗ್ ಪೂಲ್‌​ಗೆ(Khaleel Ahmed in a swimming pool) ತಳ್ಳಿ ಹಾಕಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಮೂರು ಆಟಗಾರರು ವಿದೇಶ ಪ್ರವಾಸದಲ್ಲಿ ಎಂಜಾಯ್​ ಮಾಡುತ್ತಿದ್ದು, ಹೊಟೇಲ್​ನಿಂದ ಬೀಚ್​ಗೆ ನಡೆದುಕೊಂಡು ಹೋಗುವಾಗ ಪಂತ್​ ಅವರು ಖಲೀಲ್​ ಅವರನ್ನು ಮಾತನಾಡಿಸುವಂತೆ ಹತ್ತಿರಕ್ಕೆ ಬಂದು ಸ್ವಿಮ್ಮಿಂಗ್ ಪೂಲ್‌​ಗೆ ದೂಡಿ ಹಾಕಿದ್ದಾರೆ. ನೀರಿಗೆ ಬೀಳುವ ಮುನ್ನವೇ ಖಲೀಲ್​ ತಮ್ಮ ಕೈಯಲ್ಲಿದ್ದ ಮೊಬೈಲ್​ ಮೇಲಕ್ಕೆ ಎಸೆದು ಮೊಬೈಲ್​ ನೀರಿಗೆ ಬೀಳದಂತೆ ನೋಡಿಕೊಂಡಿದ್ದಾರೆ. ನೀರಿಗೆ ಬಿದ್ದ ಖಲೀಲ್​ ಕಂಡು ಪಂತ್​ ಮತ್ತು ಇಲ್ಲಿ ನೆರೆದಿದ್ದ ಇತರ ಪ್ರವಾಸಿಗರು ಜೋರಾಗಿ ನಕ್ಕಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಿಂದ ಮೇಲೆದ್ದು ಬಂದ ಬಳಿಕ ಪಂತ್​ ಖಲೀಲ್​ ಅವರನ್ನು ತಬ್ಬಿಕೊಂಡಿದ್ದಾರೆ.

ಪಂತ್​, ಅಕ್ಷರ್​ ಮತ್ತು ಖಲೀಲ್​ ಉತ್ತಮ ಸ್ನೇಹಿತರಾಗಿದ್ದಾರೆ. ಐಪಿಎಲ್​ನಲ್ಲಿಯೂ ಈ ಮೂರು ಆಟಗಾರರು ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡುತ್ತಾರೆ. ಪಂತ್​ ತಮಾಷೆಗೆಂದೇ ಖಲೀಲ್​ ಅವರನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಿದ್ದು. ಸದ್ಯ ಗೆಳೆಯರ ಈ ಚೇಷ್ಟೆಯ ವಿಡಿಯೊ ವೈರಲ್​ ಆಗಿದ್ದು ನೆಟ್ಟಿಗರು ಈ ವಿಡಿಯೊಗೆ ದೇಕೊ ಪಂತ್​ನೇ ಏ ಕ್ಯಾ ಕಿಯಾ(ನೋಡಿ ಪಂತ್​ ಏನು ಮಾಡಿದ್ದಾರೆ) ಎಂದು ಕಮೆಂಟ್ ಮಾಡಿದ್ದಾರೆ.​

ಮುಂದಿನ ವರ್ಷ ಪಂತ್​ ಅವರು ಡೆಲ್ಲಿ ತಂಡ ತೊರೆದು ಬೇರೆ ಫ್ರಾಂಷೈಸಿ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಪಂತ್​ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮಹೇಂದ್ರ ಸಿಂಗ್​ ಧೋನಿ ಮುಂದಿನ ವರ್ಷ ಐಪಿಎಲ್​ ಆಡುವುದು ಖಚಿತತೆ ಇಲ್ಲ. ಇಂಪ್ಯಾಕ್ಟ್​ ನಿಯಮ ಇದ್ದರೆ ಆಡುವುದಾಗಿ ಫ್ರಾಂಚೈಸಿ ಮೂಲಗಳು ಈಗಾಗಲೇ ಮಾಹಿತಿ ನೀಡಿದೆ. ಈ ಬಾರಿಯೇ ಧೋನಿ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು. ಧೋನಿ ಸ್ಥಾನಕ್ಕೆ ಪಂತ್​ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯೊಂದು ಕಂಡುಬಂದಿದೆ.

ಇದನ್ನೂ ಓದಿ Rishabh Pant: ಡೆಲ್ಲಿ ತೊರೆದು ಮುಂದಿನ ಐಪಿಎಲ್​ನಲ್ಲಿ ಈ ಫ್ರಾಂಚೈಸಿ ಪರ ಆಡಲಿದ್ದಾರೆ ರಿಷಭ್​ ಪಂತ್​

ಧೋನಿ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ, ರಿಷಭ್​ ಪಂತ್​ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಣ್ಣನ ಸ್ಥಾನದಲ್ಲಿ ನಿಂತು ಧೋನಿ ಅವರು ಪಂತ್​ಗೆ ಸಲಹೆ ನೀಡುತ್ತಾರೆ. ಪಂತ್​ ಕೂಡ ಧೋನಿ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಧೋನಿಯೇ ಪಂತ್​ ಅವರನ್ನು ಸಿಎಸ್​ಕೆ ತಂಡಕ್ಕೆ ಆಹ್ವಾನಿಸಬಹುದು. ಪಂತ್​ ಚೆನ್ನೈ ಸೇರಿದರೆ ಕೀಪಿಂಗ್​ ನಡೆಸಬಹುದು. ಧೋನಿ ಇಂಪ್ಯಾಕ್ಟ್​ ಆಟಗಾರನಾಗಿ ಬ್ಯಾಟಿಂಗ್​ ಮಾತ್ರ ನಡೆಸುವ ಸಾಧ್ಯತೆ ಇದೆ.

Continue Reading

Latest

Viral Video: ಸ್ಟ್ರೆಚರ್‌ ಇಲ್ಲದ ಸರ್ಕಾರಿ ಆಸ್ಪತ್ರೆ; ಪತಿಯನ್ನು ಬೆನ್ನ ಮೇಲೆ ಹೊತ್ತು ನಡೆದ ಪತ್ನಿ! ಮನಮಿಡಿಯುವ ವಿಡಿಯೊ

Viral Video: ಕಾಲಿನ ಮೂಳೆ ಮುರಿತಕ್ಕೊಳಗಾದ ಪತಿಗೆ ಚಿಕಿತ್ಸೆ ನೀಡಲು ಪತ್ನಿ ಭಿಂಡ್ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಳು. ಆದರೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಸಾಗಿಸಲು ಸ್ಟ್ರೆಚರ್ ಲಭ್ಯವಿರಲಿಲ್ಲ. ತನ್ನ ಗಂಡನನ್ನು ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಕರೆದುಕೊಂಡು ಹೋಗುವುದು ಅನಿವಾರ್ಯವಾದ ಕಾರಣ ಅವಳು ಅವನನ್ನು ಆಸ್ಪತ್ರೆಯ ಮೂಲಕ ಸುಮಾರು 50 ಮೀಟರ್ ದೂರ ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ನಡೆದಿದ್ದಾಳೆ. ಈ ವಿಡಿಯೊ ನಮ್ಮ ಆಡಳಿತ ವ್ಯವಸ್ಥೆಯ ಮೇಲಿನ ಆಕ್ರೋಶಕ್ಕೆ ಕಾರಣವಾಗಿದೆ.

VISTARANEWS.COM


on

Viral Video
Koo


ಸರ್ಕಾರಿ ಆಸ್ಪತ್ರೆಗಳು ಬಡವರಿಗಾಗಿ ಇದ್ದರೂ ಅವು ಬಡವರಿಗೆ ಸರಿಯಾಗಿ ಸೇವೆಗಳನ್ನು ಒದಗಿಸುತ್ತಿಲ್ಲ. ಬದಲಾಗಿ ಬಡವರ ಜೊತೆ ಅಲ್ಲಿನ ಸಿಬ್ಬಂದಿಗಳು ತುಂಬಾ ಕ್ರೂರವಾಗಿ ವರ್ತಿಸುತ್ತಾರೆ. ಅಂತಹದೊಂದು ಘಟನೆ ಇದೀಗ ಮಧ್ಯಪ್ರದೇಶದಲ್ಲಿ ಜಿಲ್ಲಾ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಮಹಿಳೆಯೊಬ್ಬರು ಗಾಯಗೊಂಡ ಪತಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದರು. ಆದರೆ ಅಲ್ಲಿ ಅವರಿಗಾದ ಗತಿ ನೋಡಿದರೆ ಸರ್ಕಾರಿ ಆಸ್ಪತ್ರೆಗಳ ಬೇಜವಾಬ್ದಾರಿತನ ಬಯಲಿಗೆ ಬರುತ್ತದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಟೀಕೆಗೆ ಕಾರಣವಾಗಿದೆ.

ಪತಿ ಕಾಲಿನ ಮೂಳೆ ಮುರಿತಕ್ಕೊಳಗಾದ ಹಿನ್ನೆಲೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲು ಪತ್ನಿ ಭಿಂಡ್ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾಳೆ. ಆದರೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಸಾಗಿಸಲು ಸ್ಟ್ರೆಚರ್ ಲಭ್ಯವಿರಲಿಲ್ಲ. ತನ್ನ ಗಂಡನನ್ನು ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಕರೆದುಕೊಂಡು ಹೋಗುವುದು ಅನಿವಾರ್ಯವಾದ ಕಾರಣ ಅವಳು ಅವನನ್ನು ಆಸ್ಪತ್ರೆಯ ಮೂಲಕ ಸುಮಾರು 50 ಮೀಟರ್ ದೂರ ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ನಡೆದಿದ್ದಾಳೆ. ಇದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. ಇದು ಸಾರ್ವಜನಿಕರ ಆಕ್ರೋಶ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳಿಗೆ ಕಾರಣವಾಗಿದೆ. ಹಾಗಾಗಿ ಆಸ್ಪತ್ರೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎನ್ನಲಾಗಿದೆ.

ಈ ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಟೀಕೆ ಮತ್ತು ಟ್ರೋಲ್‌ಗಳನ್ನು ಹುಟ್ಟುಹಾಕಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಜೀವ್ ಶ್ರೀವಾಸ್ತವ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಸಿವಿಲ್ ಸರ್ಜನ್ ಉಸ್ತುವಾರಿ ಡಾ.ಜೆ.ಎಸ್.ಯಾದವ್ ನಿರಾಕರಿಸಿದ್ದಾರೆ. ಸ್ಟ್ರೆಚರ್ ಅಲಭ್ಯತೆಯ ಹಿಂದಿನ ಕಾರಣಗಳನ್ನು ವಿವರಿಸಲು ಸಹಾಯಕ ವ್ಯವಸ್ಥಾಪಕ ಸಾಕೇತ್ ಚೌರಾಸಿಯಾ ಅವರಿಗೆ ನೋಟಿಸ್ ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ರೈಲ್ವೆ ಸೇತುವೆ ಮೇಲೆ ಫೋಟೊಶೂಟ್‌; ರೈಲು ಬಂದಾಗ 90 ಅಡಿ ಆಳಕ್ಕೆ ಜಿಗಿದ ದಂಪತಿ!

ಈ ಘಟನೆಯು ಭಿಂಡ್ ಜಿಲ್ಲಾ ಆಸ್ಪತ್ರೆಯ ಸೌಲಭ್ಯಗಳು ಮತ್ತು ಸೇವೆಗಳ ಸ್ಥಿತಿಯ ಬಗ್ಗೆ ಜನರಲ್ಲಿ ಕಳವಳವನ್ನು ಹೆಚ್ಚಿಸಿದೆ, ಸ್ಥಳೀಯರು ರೋಗಿಗಳ ಆರೈಕೆ ಮತ್ತು ಮೂಲಸೌಕರ್ಯಗಳಲ್ಲಿ ಸುಧಾರಣೆಗಳನ್ನು ತರುವಂತೆ ಒತ್ತಾಯಿಸಲಾಗಿದೆ. ಈ ಮಹಿಳೆಯಯನ್ನು ನೋಡಿದರೆ ಪುರಾಣದ ಸತಿ ಸಾವಿತ್ರಿ ನೆನಪಾಗುತ್ತಿದ್ದಾಳೆ.

Continue Reading

ಕ್ರೀಡೆ

Rohit Sharma: ‘ಎಲಾ ಉನ್ನಾರು?’; ತೆಲುಗಿನಲ್ಲಿ ಮಾತನಾಡಿದ ರೋಹಿತ್ ಶರ್ಮ; ವಿಡಿಯೊ ವೈರಲ್​

Rohit Sharma: ಮುಂಬೈಕರ್​​ ಅಂತಲೇ ಫೇಮಸ್​ ಆಗಿರುವ ರೋಹಿತ್​ ಶರ್ಮ ಅವರಿಗೆ ಹೈದರಾಬಾದ್​ ನಂಟು ಕೂಡ ಇದೆ. ಅಚ್ಚರಿ ಎಂದರೆ ಅವರ ಮಾತೃ ಭಾಷೆ ಕೂಡ ತೆಲುಗು. ಹೌದು, ರೋಹಿತ್​ ಮೂಲತಃ ಆಂಧ್ರ ಪ್ರದೇಶದವರು.

VISTARANEWS.COM


on

Rohit Sharma
Koo

ಹೈದರಾಬಾದ್​: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರು ವೇದಿಕೆಯೊಂದರಲ್ಲಿ ತೆಲುಗು ಮಾತನಾಡಿದ ವಿಡಿಯೊ ವೈರಲ್​ ಆಗಿದೆ. ಅಭಿಮಾನಿಗಳಿಗೆ ರೋಹಿತ್​, ಎಲಾ ಉನ್ನಾರು?(ಹೇಗಿದ್ದೀರಾ) ಎಂದು ಕೇಳಿದ್ದಾರೆ. ರೋಹಿತ್​ ತೆಲುಗು ಮಾತನಾಡುತ್ತಿದ್ದಂತೆ ನೆರದಿದ್ದ ಅಭಿಮಾನಿಗಳು ಖಷಿಯಿಂದ ಜೋರಾಗಿ ಕಿರುಚಾಡಿದರು.

ಮುಂಬೈಕರ್​​ ಅಂತಲೇ ಫೇಮಸ್​ ಆಗಿರುವ ರೋಹಿತ್​ ಶರ್ಮ ಅವರಿಗೆ ಹೈದರಾಬಾದ್​ ನಂಟು ಕೂಡ ಇದೆ. ಅಚ್ಚರಿ ಎಂದರೆ ಅವರ ಮಾತೃ ಭಾಷೆ ಕೂಡ ತೆಲುಗು. ಹೌದು, ರೋಹಿತ್​ ಮೂಲತಃ ಆಂಧ್ರ ಪ್ರದೇಶದವರು. ಈ ವಿಚಾರವನ್ನು ಅವರು ಹಿಂದೊಮ್ಮೆ ಸಂದರ್ಶನದಲ್ಲಿಯೂ ಹೇಳಿದ್ದರು. ತಾಯಿಯ ಜತೆ ಮನೆಯಲ್ಲಿ ತೆಲುಗು ಭಾಷೆಯನ್ನೇ ಮಾತನಾಡುತ್ತೇನೆ ಎಂದಿದ್ದರು. ರೋಹಿತ್​ ತಾಯಿ ವೈಜಾಗ್​ನವರು.

ಹೈದರಾಬಾದ್​ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ರೋಹಿತ್​ ನೆರದಿದ್ದ ಅಭಿಮಾನಿಗಳ ಬಳಿ ಎಲಾ ಉನ್ನಾರು?(ಹೇಗಿದ್ದೀರಾ), ಬನ್ನಿ ಉಪ್ಪಳ(ಹೈದರಾಬಾದ್​) ಸ್ಟ್ರೇಡಿಯಂಗೆ ಹೋಗೋಣ ಎಂದು ತೆಲುಗಿನಲ್ಲೇ ಹೇಳಿದ್ದಾರೆ. ಸದ್ಯ ಈ ವಿಡಿಯೊವನ್ನು ಹೈದರಾಬಾದ್​ನ ರೋಹಿತ್​ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶೇರ್ ಮಾಡುತ್ತಿದ್ದಾರೆ.

​ಇದೇ ಕಾರ್ಯಕ್ರಮದಲ್ಲಿ ರೋಹಿತ್(rohit sharma retirement)​ ತಮ್ಮ ನಿವೃತ್ತಿಯ ವಿಚಾರದಲ್ಲಿ ಹರಿದಾಡುತ್ತಿದ್ದ ಎಲ್ಲ ಉಹಾಪೋಹಕ್ಕೆ ಸ್ಪಷ್ಟನೆ ನೀಡಿದ್ದರು.  “ನಾನು ನಿವೃತ್ತಿಯ ಬಗ್ಗೆ ಈಗಲೇ ಏನೂ ಯೋಚನೆ ಮಾಡಿಲ್ಲ. ಜೀವನವು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಪ್ರಸ್ತುತ ನಾನು ಚೆನ್ನಾಗಿ ಆಡುತ್ತಿದ್ದು, ಮುಂದಿನ ಕೆಲ ವರ್ಷಗಳ ಕಾಲ ಭಾರತ ಪರ ಟೆಸ್ಟ್​ ಮತ್ತು ಏಕದಿನ ಆಡುವ ಯೋಜನೆಯಲ್ಲಿದ್ದೇನೆ ಎಂದು ಹೇಳುವ ತಮ್ಮ ನಿವೃತ್ತಿ ಕುರಿತ ಊಹಾಪೋಹಕ್ಕೆ ತೆರೆ ಎಳೆದಿದ್ದರು.

ಇದನ್ನೂ ಓದಿ Rohit Sharma: ಕ್ರಿಕೆಟ್​ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ರೋಹಿತ್​ ಶರ್ಮ

ಸದ್ಯ ರೋಹಿತ್​ ವಿಶ್ರಾಂತಿಯಲ್ಲಿದ್ದು ಶ್ರೀಲಂಕಾ ವಿರುದ್ಧದ ಸರಣಿಗೂ ಗೈರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ರೋಹಿತ್ ನಾಯಕತ್ವದಲ್ಲಿ, ಜೂನ್​ 29ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.

ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮ(Rohit Sharma) ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(BCCI secretary Jay Shah) ಈಗಾಗಲೇ ಹೇಳಿಕೆ ನೀಡಿದ್ದಾರೆ. ಜತೆಗೆ ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ(Champions Trophy) ಟೂರ್ನಿಯಲ್ಲಿಯೂ ರೋಹಿತ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

Continue Reading
Advertisement
Viral News
Latest7 mins ago

Viral News: ಬಾಸ್‌ ಜತೆ ಚಕ್ಕಂದವಾಡುತ್ತಿದ್ದ ಕಿಲಾಡಿ ಪತ್ನಿ; ಡ್ರೋನ್‌ ಬಳಸಿ ಪತ್ತೆ ಹಚ್ಚಿದ ಚಾಲಾಕಿ ಗಂಡ!

Rishabh Pant
ಕ್ರಿಕೆಟ್10 mins ago

Rishabh Pant: ಸಹ ಆಟಗಾರ ಖಲೀಲ್​ ಅಹ್ಮದ್​ರನ್ನು ಸ್ವಿಮ್ಮಿಂಗ್ ಪೂಲ್‌​ಗೆ ತಳ್ಳಿ ಹಾಕಿದ ಪಂತ್​; ವಿಡಿಯೊ ವೈರಲ್​

Karnataka Rain
ಮಳೆ11 mins ago

Karnataka Rain : ಭಾರಿ ಮಳೆ ಎಫೆಕ್ಟ್‌-ಮಲಗಿದ್ದ‌ ವ್ಯಕ್ತಿ ಮೇಲೆ ಬಿದ್ದ ಗೋಡೆ; ಮರ ಬಿದ್ದು ಕಾರು ಜಖಂ, ಚಾಲಕ ಜಸ್ಟ್‌ ಮಿಸ್‌

2nd Puc Result
ಪ್ರಮುಖ ಸುದ್ದಿ16 mins ago

‌2nd PUC Exam Result: ದ್ವಿತೀಯ ಪಿಯುಸಿ ಪರೀಕ್ಷೆ- 3 ಫಲಿತಾಂಶ ಪ್ರಕಟ, 23.73% ವಿದ್ಯಾರ್ಥಿಗಳು ಪಾಸ್

Stuck in Lift
Latest22 mins ago

Stuck in Lift: ಫ್ಯಾನಿಲ್ಲ, ಲೈಟಿಲ್ಲ, ಆಹಾರವಿಲ್ಲ; 2 ದಿನ ಲಿಫ್ಟ್‌ನಲ್ಲಿ ಸಿಲುಕಿದ್ದವನ ಸ್ಥಿತಿ ಹೇಗಿರಬಹುದು ಊಹಿಸಿ!

7th Pay Commission
ಕರ್ನಾಟಕ37 mins ago

7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿ 58% ಹೆಚ್ಚಳ; ಸಂಪೂರ್ಣ ಲೆಕ್ಕ ಕೊಟ್ಟ ಸಿದ್ದರಾಮಯ್ಯ

Viral Video
Latest41 mins ago

Viral Video: ಸ್ಟ್ರೆಚರ್‌ ಇಲ್ಲದ ಸರ್ಕಾರಿ ಆಸ್ಪತ್ರೆ; ಪತಿಯನ್ನು ಬೆನ್ನ ಮೇಲೆ ಹೊತ್ತು ನಡೆದ ಪತ್ನಿ! ಮನಮಿಡಿಯುವ ವಿಡಿಯೊ

7th Pay Commission
ಕರ್ನಾಟಕ51 mins ago

7th Pay Commission: ಆ.1ರಿಂದ ನೌಕರರ ವೇತನ ಹೆಚ್ಚಳ; ಸರ್ಕಾರಕ್ಕೆ ವಾರ್ಷಿಕ 20,208 ಕೋಟಿ ಹೆಚ್ಚುವರಿ ಹೊರೆ ಎಂದ ಸಿಎಂ

Sexual Abuse
Latest53 mins ago

Sexual Abuse: ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ

MAX Teaser
ಸ್ಯಾಂಡಲ್ ವುಡ್59 mins ago

MAX Teaser: ಬಹುನಿರೀಕ್ಷಿತ ʼಮ್ಯಾಕ್ಸ್ʼ ಚಿತ್ರದ ಟೀಸರ್‌ ಔಟ್‌; ರೌಡಿಗಳ ಅಡ್ಡದಲ್ಲಿ ನಿಂತು ಲಾಂಗ್‌ ಬೀಸಿದ ಸುದೀಪ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ22 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌