Anchor Aparna: ಅಪರ್ಣಾ ಕೊನೆ ಆಸೆ ಏನಾಗಿತ್ತು? ಕನಸು ಈಡೇರುವ ಮುನ್ನವೇ ಕಣ್ಮುಚ್ಚಿದ ನಟಿ! - Vistara News

ಕಿರುತೆರೆ

Anchor Aparna: ಅಪರ್ಣಾ ಕೊನೆ ಆಸೆ ಏನಾಗಿತ್ತು? ಕನಸು ಈಡೇರುವ ಮುನ್ನವೇ ಕಣ್ಮುಚ್ಚಿದ ನಟಿ!

Anchor Aparna: ಸಾಲು ಸಾಲು ಸಿನಿಮಾಗಳು, ಕಿರುತೆರೆ, ವೇದಿಕೆಗಳಲ್ಲಿ ಮನೋಜ್ಞ ನಿರೂಪಣೆ ಮೂಲಕವೇ ಅವರು ಮನೆಮಾತಾಗಿದ್ದರು. 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಅಪರ್ಣಾ ಅವರ ಧ್ವನಿಯನ್ನು ಮೆಟ್ರೋದಲ್ಲಿ ಮೊಳಗುವುದಕ್ಕೆ ಆರಂಭ ಆದ ಮೇಲೆ ಕನ್ನಡಿಗರು ಖುಷಿಯನ್ನು ವ್ಯಕ್ತಪಡಿಸಿದ್ದರು.

VISTARANEWS.COM


on

Anchor Aparna‌ last wish before her dream came true
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅಪರ್ಣಾ (Anchor Aparna) ಅವರು ಮೃತರಾಗಿದ್ದಾರೆ. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅವರು ಜುಲೈ 11ರಂದು ನಿಧನರಾಗಿದ್ದಾರೆ. ಅಪರ್ಣಾ ನಿಧನಕ್ಕೆ ಇಡಿ ಸ್ಯಾಂಡಲ್‌ವುಡ್‌ ಸಂತಾಪ ಸೂಚಿಸಿದೆ. 2015ರ ನಂತರದಲ್ಲಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ʻಮಜಾ ಟಾಕೀಸ್ʼ​​ನಲ್ಲಿ ವರಲಕ್ಷ್ಮೀಯಾಗಿ ಮನೆ ಮಾತಾದರು. ಅಪರ್ಣಾ ಅವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಅಪರ್ಣಾ ಅವರಿಗೆ ಜೀವನದಲ್ಲಿ ಒಂದು ಮಹತ್ತರ ಆಸೆಯಿತ್ತು. ಅದುವೇ ನಿರೂಪಣೆ ಶಾಲೆ ತೆರೆಯಬೇಕೆಂಬ ಆಸೆ. ಆದರೆ ಇದು ಸಾಧ್ಯವಾಗಲಿಲ್ಲ.

ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಬಿಟ್ಟು ಅಪರ್ಣಾ ಅವರು ಇಹಲೋಕ ತ್ಯಜಿಸಿದ್ದಾರೆ. ಅಪರ್ಣಾ ಅವರಿಗೆ ಒಂದು ನಿರೂಪಣೆ ಶಾಲೆಯನ್ನು ಮಾಡಬೇಕೆಂಬ ಆಸೆ ತುಂಬಾ ಇತ್ತಂತೆ. ಅದರ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದರಂತೆ. ಆದರೆ ಅದು ಕೊನೆಗೂ ಈಡೇರಲೇ ಇಲ್ಲ. ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಅಪರ್ಣಾ ಅವರು ಹಿಂದಿರುಗಿ ನೋಡಲಿಲ್ಲ. ಸಾಲು ಸಾಲು ಸಿನಿಮಾಗಳು, ಕಿರುತೆರೆ, ವೇದಿಕೆಗಳಲ್ಲಿ ಮನೋಜ್ಞ ನಿರೂಪಣೆ ಮೂಲಕವೇ ಅವರು ಮನೆಮಾತಾಗಿದ್ದರು. 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಹಾಗೇ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ‘ಮಜಾ ಟಾಕೀಸ್‌’ನಲ್ಲಿ ನಟಿಸಿ, ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಇದರಲ್ಲಿ ವರಲಕ್ಷ್ಮಿ ಉರ್ಫ್ ವರು ಪಾತ್ರದಲ್ಲಿ ಮಿಂಚಿದ್ದರು. ಇವರು ಧ್ವನಿಯನ್ನು ಬಸ್ ನಿಲ್ದಾಣ ಹಾಗೂ ಮೆಟ್ರೋ ಆರಂಭದ ದಿನಗಳಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲು ಬಳಸಿಕೊಳ್ಳಲಾಗಿತ್ತು.

ಅಪರ್ಣಾ ಅವರ ಧ್ವನಿಯನ್ನು ಮೆಟ್ರೋದಲ್ಲಿ ಮೊಳಗುವುದಕ್ಕೆ ಆರಂಭ ಆದ ಮೇಲೆ ಕನ್ನಡಿಗರು ಖುಷಿಯನ್ನು ವ್ಯಕ್ತಪಡಿಸಿದ್ದರು. ಸ್ವತ: ಅಪರ್ಣಾ ಅವರು ಮೆಟ್ರೋದಲ್ಲಿ ತಮ್ಮದೇ ಧ್ವನಿಯನ್ನು ಕೇಳುವುದಕ್ಕೆ ಹೋಗಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: Shiva Rajkumar: ನಾಳೆ ಶಿವ ರಾಜ್​ಕುಮಾರ್​​ ಬರ್ತ್​ಡೇ: ‘45’ ಸಿನಿಮಾದಿಂದ ಫ್ಯಾನ್ಸ್‌ಗೆ ಬಿಗ್‌ ಸರ್ಪ್ರೈಸ್

ʻನನಗೂ ಮೆಟ್ರೋಗೂ ಅದ್ಯಾವ ರೀತಿಯ ಸಂಬಂಧ ಅಂದರೆ, ತುಂಬ ಹೆಮ್ಮೆ ಎನಿಸುತ್ತೆ. ಒಂದು ದಿನ ನನಗೆ ಕರೆ ಬಂತು. 12 ವರ್ಷದ ಹಿಂದೆನೇ ಆಗಿರಬಹುದು. ನಿಮ್ಮದೊಂದು ವಾಯ್ಸ್‌ ನಮ್ಮ ಮೆಟ್ರೋಗೆ ಬೇಕು ಹೇಳಿದರು. ಆ ಮೇಲೆ ಏನಿದು ಅಂತ ಕೇಳಿದಾಗ, ನಿಮ್ಮದೊಂದು ವಾಯ್ಸ್ ಸ್ಯಾಂಪಲ್ ಕೊಡಿ ಎಂದು ಹೇಳಿದ್ದರು. ಆದರೆ ಅಪರ್ಣಾಗೆ ಹೇಗೆ ಧ್ವನಿ ಕೊಡಬೇಕು ಎಂದು ಗೊತ್ತಿರಲಿಲ್ಲ. ಬಳಿಕ ನ್ಯೂಸ್‌ ಪೇಪರ್‌ ಇಟ್ಟಕೊಂಡು ಧ್ವನಿ ನೀಡಿದ್ದರು. ಚೆನ್ನೈನಲ್ಲಿ ಈ ಎಲ್ಲ ನಿರ್ಧಾರಗಳನ್ನು ತೆಗದುಕೊಳ್ಳುತ್ತಿದ್ದರು. ಜಯನಗರ, ಈಗ ಏನೇನು ಬರುತ್ತೆ ಬಾಗಿಲನ್ನು ತೆರೆದು ಅಂತೆಲ್ಲ. ಇದೆಲ್ಲ ಯಾಕೆ? ಅವರನ್ನು ಕೇಳಿದೆ. ನನಗೆ ಐಡಿಯಾ ಇಲ್ಲ. ಇದೆಲ್ಲ ಹೆಂಗೆ ಬರುತ್ತೆ ಅಂತ ಆಗ ಅವರು ವಿವರಣೆ ಕೊಟ್ಟರು” ಎಂದು ಅಪರ್ಣಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Anchor Shalini: ಅವತ್ತಿನ ಕಾಲಕ್ಕೆ ‘ಪಾಪ ಪಾಂಡು’ ಖ್ಯಾತಿಯ ಶಾಲಿನಿ ಪಡೆಯುತ್ತಿದ್ದ ಸಂಭಾವನೆ ಏಷ್ಟು?

Anchor Shalini: ಸತತ 5 ವರ್ಷಗಳ ಕಾಲ ಈ ಧಾರಾವಾಹಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಹೆಂಡತಿ ಅಂದ್ರೆ ಹೆದರುವ ಪುಕ್ಕಲು ಪಾಂಡು ಹಾಗೂ ಖಡಕ್ ಪತ್ನಿ ಶ್ರೀಮತಿ ನಡುವೆ ದಿನಕ್ಕೊಂದು ಕಥೆ ಹೇಳಿ ಧಾರವಾಹಿ ವೀಕ್ಷಕರನ್ನು ರಂಜಿಸಿತ್ತು. ಬಳಿಕ ಇದೇ ತರಹದ ಪಾತ್ರಗಳಿಗೆ ಬ್ರ್ಯಾಂಡ್ ಆಗಿಬಿಟ್ಟರು ಶಾಲಿನಿ. ಆ ಬಗ್ಗೆ ತಮಗೆ ಇನ್ನು ಬೇಸರವಿದೆ ಎಂದು ಶಾಲಿನಿ ಹೇಳಿಕೊಂಡಿದ್ದಾರೆ.

VISTARANEWS.COM


on

Anchor Shalini reveals her paycheck per day for paapa pandu tv serial
Koo

ಬೆಂಗಳೂರು: ಸುವರ್ಣ ಸೂಪರ್ ಸ್ಟಾರ್ (suvarna superstar) ಕಾರ್ಯಕ್ರಮವನ್ನು ಶಾಲಿನಿ (Super Star Shalini) ನಡೆಸಿಕೊಡುತ್ತಿದ್ದಾರೆ. ಈ ಶೋ ನೋಡುವ ಬಹುತೇಕ ಮಹಿಳೆಯರಿಗೆ, ಶಾಲಿನಿ ಇವತ್ತು ಯಾವ ರೀತಿಯ ಬ್ಲೌಸ್‌ ಧರಿಸುತ್ತಾರೆ ಎಂಬುದೇ ಕುತೂಹಲ. ಆ ಕಾರ್ಯಕ್ರಮ ಮಹಿಳೆಯರದ್ದೇ ಆದರೂ ಕೂಡ ಶಾಲಿನಿ ಅವರ ಬ್ಲೌಸ್‌ (suvarna superstar shalini) ಪ್ರಮುಖ ಹೈಲೈಟ್‌. ಇದೀಗ ಶಾಲಿನಿ ಅವರು ಸಂದರ್ಶನವೊಂದರಲ್ಲಿ ತಮ್ಮ ಹಳೆಯ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ. 23 ವರ್ಷಗಳ ಹಿಂದೆ ‘ಪಾಪ ಪಾಂಡು’ (Anchor Shalini) ಧಾರಾವಾಹಿಯ ಪಾತ್ರದಿಂದ ಮೋಡಿ (papa pandu old serial) ಮಾಡಿದ್ದರು. ಸಿಹಿಕಹಿ ಚಂದ್ರು ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಧಾರಾವಾಹಿ ಅವತ್ತಿನ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು.

ಸತತ 5 ವರ್ಷಗಳ ಕಾಲ ಈ ಧಾರಾವಾಹಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಹೆಂಡತಿ ಅಂದ್ರೆ ಹೆದರುವ ಪುಕ್ಕಲು ಪಾಂಡು ಹಾಗೂ ಖಡಕ್ ಪತ್ನಿ ಶ್ರೀಮತಿ ನಡುವೆ ದಿನಕ್ಕೊಂದು ಕಥೆ ಹೇಳಿ ಧಾರವಾಹಿ ವೀಕ್ಷಕರನ್ನು ರಂಜಿಸಿತ್ತು. ಬಳಿಕ ಇದೇ ತರಹದ ಪಾತ್ರಗಳಿಗೆ ಬ್ರ್ಯಾಂಡ್ ಆಗಿಬಿಟ್ಟರು ಶಾಲಿನಿ. ಆ ಬಗ್ಗೆ ತಮಗೆ ಇನ್ನು ಬೇಸರವಿದೆ ಎಂದು ಶಾಲಿನಿ ಹೇಳಿಕೊಂಡಿದ್ದಾರೆ.

ಶಾಲಿನಿ ಮಾತನಾಡಿ ʻʻಶಿಖರ ಎನ್ನುವ ಧಾರಾವಾಹಿಯಲ್ಲಿ ನಾನು ಮತ್ತು ಸಿಹಿ ಕಹಿ ಚಂದ್ರು ಅವರು ಅಪ್ಪ ಮಗಳ ರೋಲ್‌ ಮಾಡುತ್ತಿದ್ದೇವು. ನಾನು ಮತ್ತು ಸಿಹಿ ಕಹಿ ಚಂದ್ರು ಅವರು ತುಂಬ ಪುಸ್ತಕಗಳನ್ನು ಓದುತ್ತಿದ್ದೆವು. ಅದರ ಬಗ್ಗೆ ಮಾತನಾಡುತ್ತಿದ್ದೆವು. ಒಂದು ದಿನ ಕಾಲ್‌ ಮಾಡಿ, ಒಂದು ಸೀರಿಯಲ್‌ ಮಾಡುತ್ತ ಇದ್ದೀನಿ. ಬರ್ತೀಯಾ ಎಂದು ಕೇಳಿದರು. ಆಮೇಲೆ ಹೋದೆ. ನಾನು ಹೋದಾಗ ಇದು ಕಾಮಿಡಿ ಸೀರಿಯಲ್ ಅಂದ್ರು. ನನಗೆ ಶಾಕ್ ಆಯಿತು. ಅಲ್ಲಿಯವರೆಗೂ ನಾನು ಗಂಭೀರ ಪಾತ್ರಗಳಲ್ಲೇ ಹೆಚ್ಚು ನಟಿಸಿದ್ದೆ. ನನಗೆ ಕಾಮಿಡಿ ಬರಲ್ಲ ಎಂದೆ. ನಿನಗೆ ಬರುತ್ತೆ ಮಾಡು ಎಂದರು. ಆಡಿಷನ್ ಬಳಿಕ ನೀನು ಸೆಲೆಕ್ಟ್ ಆಗಿದ್ದೀಯಾ. ನೀನೇ ಲೀಡ್ ರೋಲ್, ಶ್ರೀಮತಿ ಅಂತ ಪಾಂಡು ಹೆಂಡಿತಿ ಪಾತ್ರ ಎಂದುಬಿಟ್ಟರುʼʼಎಂದರು.

ಇದನ್ನೂ ಓದಿ: Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌; ಸೋನು ಗೌಡ ನಾಯಕಿ!

ʻʻಪಾಪ ಪಾಂಡು ದಿನ ಬರುತ್ತೇ ಎಂದರು. ಗಂಡನ ಬಳಿ ಬಂದು ಹೇಳಿದೆ. ಪಾಪ ಪಾಂಡು ಹೆಸರು ಕೇಳಿ ಬೇಡ ಅಂದರು. 25 ದಿನ ಕೆಲಸ ಅಂದೆ. 2000 ಅಲ್ಲಿ ಆಫೀಸ್‌ ಕೆಲಸಕ್ಕೆ ಹೋಗೊ ತರ ಹೋಗ್ತಿದ್ದೆ. ಒಳ್ಳೆಯ ಸಂಬಳ ಕೂಡ ಇತ್ತು. ಸಿದ್ಲಿಂಗು ಡೈರೆಕ್ಟರ್ ವಿಜಯಪ್ರಸಾದ್ ಆಗ ಧಾರಾವಾಹಿ ನಿರ್ದೇಶಿಸುತ್ತಿದ್ದರು. ದಿನಕ್ಕೆ 1000 ರೂಪಾಯಿಯಿಂದ ಆರಂಭಿಸಿ ಮುಂದೆ ಹೋಗ್ತಾ 1700 ರೂಪಾಯಿವರೆಗೆ ಸಂಭಾವನೆ ಪಡೆಯುತ್ತಿದ್ದೆ. ಬರೋಬ್ಬರಿ 1000ಕ್ಕೂ ಅಧಿಕ ಎಪಿಸೋಡ್‌ಗಳಲ್ಲಿ ಧಾರಾವಾಹಿ ಪ್ರಸಾರವಾಯಿತು.5 ವರ್ಷಗಳ ಕಾಲ ಕಾಮಿಡಿ ಪಾತ್ರದಲ್ಲಿ ನೋಡಿದವರು ಬಳಿಕ ಗಂಭೀರ ಪಾತ್ರದಲ್ಲಿ ನೋಡಲು ಇಷ್ಟಪಡಲಿಲ್ಲ. ಆ ರೀತಿ ಸಂಪೂರ್ಣವಾಗಿ ನನ್ನನ್ನು ಹಾಸ್ಯಪಾತ್ರಕ್ಕೆ ಸೀಮಿತವಾಗಿ ಬಿಟ್ಟೆʼʼಎಂದರು.

Continue Reading

ಕಿರುತೆರೆ

Kannada Serials TRP: ಟಾಪ್‌ 5ನಲ್ಲಿ ‘ಭಾಗ್ಯಲಕ್ಷ್ಮೀ’; ‘ಪುಟ್ಟಕ್ಕನ ಮಕ್ಕಳು’ ನಂಬರ್‌ 1!

Kannada Serials TRP: ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ದೇ ಆಗಸ್ಟ್ 12ರಿಂದ ಆರಂಭ ಆಗಲಿದೆ. ಈ ಧಾರಾವಾಹಿ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ. ಇದೇ ಸಮಯದಲ್ಲಿ ಈಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಹೀಗಾಗಿ, ಈ ಧಾರಾವಾಹಿಯ ಸಮಯ ಬದಲಾಗಲಿದೆ.

VISTARANEWS.COM


on

Kannada Serials TRP TOP 5 bhagyalakshmi puttakkana makkalu number 1
Koo

ಬೆಂಗಳೂರು: 30ನೇ ವಾರದ ಟಿಆರ್​ಪಿ ಹೊರ ಬಿದ್ದಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಬಂದಿದೆ. ಈ ಮೊದಲಿಗಿಂತಲೂ ‘ಸೀತಾ ರಾಮ’ ಧಾರಾವಾಹಿಗೆ ಹೆಚ್ಚಿನ ಟಿಆರ್​ಪಿ ಸಿಕ್ಕಿದೆ ಎನ್ನುವುದು ವಿಶೇಷ.ಈ ಧಾರಾವಾಹಿಯ ಸಮಯದಲ್ಲಿ ಬದಲಾವಣೆ ಆಗೋ ಸಾಧ್ಯತೆ ಇದೆ.

‘ಪುಟ್ಟಕ್ಕನ ಮಕ್ಕಳು’

ಈ ವಾರ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಉಮಾಶ್ರೀ, ಸಂಜನಾ ಬುರ್ಲಿ ಮೊದಲಾದವರ ನಟನೆ ಗಮನ ಸೆಳೆದಿದೆ. ಹೀಗಾಗಿ ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡಂಕಿಯ ಟಿಆರ್​ಪಿ ಪಡೆದಿತ್ತು. ಈಗಲೂ ಧಾರಾವಾಹಿಗೆ ಮತ್ತೆ ಅದೇ ರೀತಿಯ ಬೇಡಿಕೆ ಸೃಷ್ಟಿ ಆಗಿದೆ. ಈ ಧಾರಾವಾಹಿಗೆ ಹಲವು ಟ್ವಿಸ್ಟ್​ಗಳು ಸಿಕ್ಕಿರುವುದರಿಂದ ಧಾರಾವಾಹಿಯನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ದೇ ಆಗಸ್ಟ್ 12ರಿಂದ ಆರಂಭ ಆಗಲಿದೆ. ಈ ಧಾರಾವಾಹಿ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ. ಇದೇ ಸಮಯದಲ್ಲಿ ಈಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಹೀಗಾಗಿ, ಈ ಧಾರಾವಾಹಿಯ ಸಮಯ ಬದಲಾಗಲಿದೆ.

ಇದನ್ನೂ ಓದಿ: Kannada Serials TRP: ಟಾಪ್‌ 3ಯಲ್ಲಿ ʻಲಕ್ಷ್ಮೀ ನಿವಾಸʼ: ಐದನೇ ಸ್ಥಾನದಲ್ಲಿ ʻಲಕ್ಷ್ಮೀ ಬಾರಮ್ಮʻ ಧಾರಾವಾಹಿ

‘ಲಕ್ಷ್ಮೀ ನಿವಾಸ’

ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಜನ ಮೆಚ್ಚುಗೆ ಪಡೆದಿದೆ. ವಿಶೇಷ ಎಂದರೆ ನಗರ ಭಾಗದ ಟಿಆರ್​ಪಿಯಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್​ಪಿಯನ್ನು ಹಿಂದಿಕ್ಕಿದೆ. ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿ ಪಡೆಯುತ್ತಿದೆ.

ಶ್ರಾವಣಿ ಸುಬ್ರಮಣ್ಯ

ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಎರಡನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಸೀತಾ ರಾಮ ಧಾರಾವಾಹಿ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಈ ಮೊದಲು ಪ್ರಸಾರ ಕಾಣುತ್ತಿದ್ದ ಬೇಡಿಕೆಯ ಧಾರಾವಾಹಿಗಳ ಟಿಆರ್​ಪಿಯನ್ನು ಈ ಧಾರಾವಾಹಿ ಹಿಂದಿಕ್ಕಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

‘ಸೀತಾ ರಾಮ’ ಧಾರಾವಾಹಿ

ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈಗಾಗಲೇ ಸೀತಾ ಹಾಗೂ ರಾಮ್ ಮದುವೆ ನೆರವೇರಿದೆ. ಈ ಕಾರಣಕ್ಕೆ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದು ಮುನ್ನುಗ್ಗುತ್ತಿದೆ. ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ನಟಿಸಿದ್ದಾರೆ.

ʻಭಾಗ್ಯಲಕ್ಷ್ಮೀ’

ಐದನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಇದೆ. ಕಲರ್ಸ್ ಕನ್ನಡದ ಧಾರಾವಾಹಿಗಳ ಪೈಕಿ ಸ್ಥಾನ ಪಡೆದ ಏಕೈಕ ಧಾರಾವಾಹಿ ಇದಾಗಿದೆ.

Continue Reading

ಸಿನಿಮಾ

Actor Jaggesh: ಕನ್ನಡ ಚಿತ್ರರಂಗದ ಈಗಿನ ಸ್ಥಿತಿಗತಿ ಕಂಡು ಕಣ್ಣೀರಿಟ್ಟ ನವರಸ ನಾಯಕ ಜಗ್ಗೇಶ್‌!

Actor Jaggesh: ಇದೀಗ ನಟ ಜಗ್ಗೇಶ್ ಅವರು ಕನ್ನಡ ಚಿತ್ರರಂಗದ ಪ್ರಸ್ತುತ ದಿನಗಳ ಬಗ್ಗೆ ಕಣ್ಣೀರು ಹಾಕಿದ್ದಾರೆ. ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಜಡ್ಜ್ ಆಗಿರುವ ಜಗ್ಗೇಶ್, ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಈಗಿನ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಲೇ ಕಣ್ಣೀರಿಟ್ಟರು.

VISTARANEWS.COM


on

Actor Jaggesh tears after seeing the current state of Kannada film industry
Koo

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ (Actor Jaggesh) `ರಂಗನಾಯಕ’ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳಿದ್ದವು ಆದರೆ ಸಿನಿಮಾ ಉತ್ತಮ ಪ್ರದರ್ಶನ ಕಾಣಲಿಲ್ಲ. ಬಳಿಕ ನಟ ಜಗ್ಗೇಶ್, ಸಿನಿಮಾ ಬಗ್ಗೆ ಕ್ಷಮೆ ಸಹ ಕೇಳಿದ್ದರು. ಇದೀಗ ನಟ ಜಗ್ಗೇಶ್ ಅವರು ಕನ್ನಡ ಚಿತ್ರರಂಗದ ಪ್ರಸ್ತುತ ದಿನಗಳ ಬಗ್ಗೆ ಕಣ್ಣೀರು ಹಾಕಿದ್ದಾರೆ. ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಜಡ್ಜ್ ಆಗಿರುವ ಜಗ್ಗೇಶ್, ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಈಗಿನ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಲೇ ಕಣ್ಣೀರಿಟ್ಟರು.

ʻʻಎಲ್ಲರೂ ಒಳ್ಳೆಯ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಯಾರೂ ಕೆಟ್ಟ ಸಿನಿಮಾ ಮಾಡಬೇಕು ಎಂದುಕೊಂಡು ಬರುವುದಿಲ್ಲ. ಪೇಪರ್‌ಗೆ ಒಂದು ಜಾಹೀರಾತು ನೀಡುತ್ತಾರೆ. ಎಲ್ಲ ಮಾಡುತ್ತಾರೆ. ಆದರೆ ಚಿತ್ರಮಂದಿರಗಳಲ್ಲಿ ಜನರೇ ಇಲ್ಲ ಅಂದಾಗ ಕನ್ನಡ ಚಿತ್ರರಂಗವೇ ಹೀಗಾ? ಎಂದರೆ ಖಂಡಿತ ಇಲ್ಲ. ಏನಾಗುತ್ತಿದೆ ಚಿತ್ರರಂಗಕ್ಕೆ ಅರ್ಥವಾಗುತ್ತಿಲ್ಲ. ಹೀಗೆ ಆದರೆ ಹೇಗೆ ಸಿನಿಮಾ ಮಾಡಬೇಕು ಅರ್ಥವಾಗುತ್ತಿಲ್ಲ’ ಎಂದಿದ್ದಾರೆ.

ʻʻಅಕ್ಷಯ್‌ ಕುಮಾರ್‌ ಕೋಟ್ಯಂತರ ಹಣವನ್ನು ಹಾಕುತ್ತಿದ್ದಾರೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಅವರಂತೂ ಡಿಸಾಸ್ಟರ್ ಆಗಿಬಿಟ್ಟಿದ್ದಾರೆ. ಇಡೀ ಭಾರತದಲ್ಲಿ ಸಿನಿಮಾ ಎಂಬುದು ಸತ್ತು ಹೋಗುತ್ತಿದೆ. ಈಗೆಲ್ಲ ಹೇಗೆ ಆಗಿಬಿಟ್ಟಿದೆಯೆಂದರೆ ಯಾರು 200 ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡುತ್ತಾರೋ ಅದಷ್ಟೆ ಸಿನಿಮಾ ಎಂಬಂತೆ ಆಗಿಬಿಟ್ಟಿದೆ. ಯಾರು ಒಂದೊಳ್ಳೆ ಕತೆ ಮಾಡಿ, ಸಣ್ಣ ಸಿನಿಮಾ ಮಾಡುತ್ತಾರೋ ಅದು ಸಿನಿಮಾ ಅಲ್ಲ ಎಂಬಂತೆ ಆಗಿಬಿಟ್ಟಿದೆ ಪರಿಸ್ಥಿತಿ. ಹೀಗಾದರೆ ಉಳಿದವರು ಬದುಕುವುದು ಹೇಗೆ’ ಎಂದು ಜಗ್ಗೇಶ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?

ʻʻನನ್ನ ಅಣ್ಣತಮ್ಮಂದಿರು, ಒಡಹುಟ್ಟಿದ್ದವರು ಸಿನಿಮಾ ರಿಲೀಸ್‌ ಆಗುವಾಗ ಇದು ದರಿದ್ರು ಸಿನಿಮಾ, ವೇಸ್ಟ್‌ ಎಂದು ಶ್ರಮ ಹಾಕಿ ಇನ್ನೊಬ್ಬರ ಶ್ರಮವನ್ನು ಹಾಳು ಮಾಡುತ್ತಾರೆ. ಅದನ್ನ ನೋಡಿ ಜನರು ಬರುವರಿದ್ದಾರೆ. ಎಲ್ಲರೂ ಚೆನ್ನಾಗಿರಲಿ. ಯಾರಿಗೂ ಕೆಟ್ಟದ್ದನ್ನು ಬಯಸೋದು ಬೇಡ. ಬೇಜಾರಾಗಿ ಸಮಯವೇ ಹೋಗುತ್ತಿಲ್ಲ ಎಂದು ಯುಟ್ಯೂಬ್‌ನಲ್ಲಿ ಒಂದು ಸೀನ್‌ ನೋಡಿದರೂ ಅದುವೇ ಸಿನಿಮಾ. ನಾನು ಭಾವುಕನಾದೆ ಯಾಕೆ ಅಂದರೆ ನನ್ನ ಅಣು, ನನ್ನ ಬದುಕು, ನನ್ನ ಕನಸು, ನನ್ನ ಬಟ್ಟೆ, ಊಟ ಸಿನಿಮಾ ಕೊಟ್ಟಿದೆ. ಹಾಗಾಗಿ ನಾನು ಸಿನಿಮಾವನ್ನು ತಾಯಿ ತರ ಪ್ರೀತಿಸುತ್ತೇನೆʼʼಎಂದು ಕಣ್ಣೀರಿಟ್ಟರು.

Continue Reading

ಕಿರುತೆರೆ

Sathya serial kannada: ಶೀಘ್ರದಲ್ಲೇ ಅಂತ್ಯ ಹಾಡಲಿದೆಯಂತೆ ʻಸತ್ಯʼ ಧಾರಾವಾಹಿ; ಬರ್ತಿದೆ ಹೊಸ ಸೀರಿಯಲ್‌!

Sathya serial kannada: ಸತ್ಯ ಧಾರಾವಾಹಿಯಲ್ಲಿ  ಸತ್ಯ ಪೊಲೀಸ್ ಅಧಿಕಾರಿಯಾಗಿ ಒಂದಲ್ಲ ಒಂದು ಕೇಸ್‌ಗಳನ್ನು ಪರಿಹಾರ ಮಾಡುತ್ತಾಳೆ. , ಕಾರ್ತಿಕ್‌ನನ್ನು ಮದುವೆಯಾಗಬೇಕಿದ್ದ ಸತ್ಯಾಳ ಅಕ್ಕ ದಿವ್ಯಾ ಮದುವೆ ದಿನ ಬೇರೊಬ್ಬನ ಜತೆ ಓಡಿ ಹೋದ ಕಾರಣ, ತಾನೇ ಮದುವೆಯಾಗುವಂತಹ ಸ್ಥಿತಿ ನಿರ್ಮಾಣ ಆಗಿ, ಕೊನೆಗೆ ಮದುವೆಯಾಗಿ, ಗಂಡ, ಅತ್ತೆ ಹಾಗೂ ಮನೆಯವರೆಲ್ಲರ ತಾತ್ಸಾರಕ್ಕೆ ಗುರಿಯಾಗಿ ಎಲ್ಲವನ್ನೂ ಎದುರಿಸಿ, ಒಳ್ಳೆಯ ಗೃಹಿಣಿಯಾಗಿ ಬಾಳುತ್ತಾಳೆ. ಇದೀಗ ಸತ್ಯ ಗರ್ಭಿಣಿ.

VISTARANEWS.COM


on

Sathya serial kannada end soon A new serial has arrived
Koo

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸತ್ಯ ಧಾರಾವಾಹಿ ಇನ್ನೇನು ಕೊನೆಯಾಗಲಿದೆ ಎನ್ನುವ ಸುದ್ದಿ ಬಂದಿದೆ.

ಈಗಾಗಲೇ ‘ಅಣ್ಣಯ್ಯ’ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಲಿದ್ದು, ಆದಷ್ಟು ಬೇಗ ಹೊಸ ಧಾರಾವಾಹಿ ಪ್ರಸಾರ ಆಗಲಿದೆ. ‘ಸತ್ಯ’ ಧಾರಾವಾಹಿಯು ಅಂತ್ಯ ಆಗಲಿದೆ ಎನ್ನಲಾಗಿದೆ.

2020 ಡಿಸೆಂಬರ್‌ನಿಂದ ಈ ಧಾರಾವಾಹಿ ಪ್ರಸಾರ ಆಗುತ್ತಿದ್ದು, ಆರಂಭದ ವಾರಗಳಲ್ಲಿ ಈ ಧಾರಾವಾಹಿ ಟಾಪ್ 5 ಸ್ಥಾನದಲ್ಲಿತ್ತು. ಇತ್ತೀಚೆಗೆ ಈ ಧಾರಾವಾಹಿಯ ಟಿಆರ್‌ಪಿ ಕಡಿಮೆ ಆಗಿತ್ತು.

ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು

 ಗೌತಮಿ ಜಾದವ್ ಅಥವಾ ಸಾಗರ್ ಬಿಳಿ ಗೌಡ ಬಿಗ್‌ಬಾಸ್‌ಗೆ ತೆರಳಲಿದ್ದಾರೆ ಹಾಗಾಗಿ ಸೀರಿಯಲ್ ಕಥೆ ಮುಗಿಸಲಿದ್ದಾರೆ ಎಂದು ಸಹ ಹೇಳಿದ್ದಾರೆ. ಆದರೆ ಯಾವುದೂ ಅಧಿಕೃತವಾಗಿ ಹೇಳಿಕೆ ಬಂದಿಲ್ಲ. 

ಸತ್ಯ ಧಾರಾವಾಹಿಯಲ್ಲಿ  ಸತ್ಯ ಪೊಲೀಸ್ ಅಧಿಕಾರಿಯಾಗಿ ಒಂದಲ್ಲ ಒಂದು ಕೇಸ್‌ಗಳನ್ನು ಪರಿಹಾರ ಮಾಡುತ್ತಾಳೆ. , ಕಾರ್ತಿಕ್‌ನನ್ನು ಮದುವೆಯಾಗಬೇಕಿದ್ದ ಸತ್ಯಾಳ ಅಕ್ಕ ದಿವ್ಯಾ ಮದುವೆ ದಿನ ಬೇರೊಬ್ಬನ ಜತೆ ಓಡಿ ಹೋದ ಕಾರಣ, ತಾನೇ ಮದುವೆಯಾಗುವಂತಹ ಸ್ಥಿತಿ ನಿರ್ಮಾಣ ಆಗಿ, ಕೊನೆಗೆ ಮದುವೆಯಾಗಿ, ಗಂಡ, ಅತ್ತೆ ಹಾಗೂ ಮನೆಯವರೆಲ್ಲರ ತಾತ್ಸಾರಕ್ಕೆ ಗುರಿಯಾಗಿ ಎಲ್ಲವನ್ನೂ ಎದುರಿಸಿ, ಒಳ್ಳೆಯ ಗೃಹಿಣಿಯಾಗಿ ಬಾಳುತ್ತಾಳೆ. ಇದೀಗ ಸತ್ಯ ಗರ್ಭಿಣಿ.

 ‘ಸಿಂಧುರಾ’ ಧಾರಾವಾಹಿಯ ಅಧಿಕೃತ ರಿಮೇಕ್ ಇದಾಗಿದೆ. ಇನ್ನು ಈ ಧಾರಾವಾಹಿಯು ಆ ನಂತರದಲ್ಲಿ 6 ಭಾಷೆಗಳಲ್ಲಿ ರಿಮೇಕ್ ಆಗಿದೆ. 

ಗೌತಮಿ ಜಾಧವ್, ಸಾಗರ್ ಬಿಳಿಗೌಡ, ರಶ್ಮಿ, ಶಾಲಿನಿ, ಮಾಲತಿ ಸರ್‌ದೇಶಪಾಂಡೆ, ಪ್ರಿಯಾಂಕಾ ಶಿವಣ್ಣ, ಗಿರಿಜಾ ಲೋಕೇಶ್, ಶ್ರೀನಿವಾಸ್ ಪ್ರಭು ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಸ್ವಪ್ನಾ ಕೃಷ್ಣ ಅವರು ಈ ಧಾರಾವಾಹಿಯ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ.  ಸತ್ಯಾಗೆ ಮಗುವಾಗುವ ಮೂಲಕ ಸೀರಿಯಲ್‌ಗೆ ಹ್ಯಾಪಿ ಎಂಡಿಂಗ್ ಕೊಡುತ್ತಾರೆ ಎಂದು ವರದಿಯಾಗಿದೆ.

Continue Reading
Advertisement
Uttar Pradesh
ದೇಶ2 hours ago

ಪತ್ನಿ ಇದ್ದರೂ ಮಹಿಳಾ ಇನ್ಸ್‌ಪೆಕ್ಟರ್‌ ಜತೆ ವ್ಯಕ್ತಿ ಸರಸ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತ್ನಿ ಮಾಡಿದ್ದೇನು? Video ಇದೆ

Wasim Jaffer
ಕ್ರೀಡೆ2 hours ago

Wasim Jaffer : ಪಂಜಾಬ್ ತಂಡದ ಕೋಚ್​ ಆಗಿ ಮಾಜಿ ಬ್ಯಾಟರ್​ ವಾಸಿಮ್​ ಜಾಫರ್ ನೇಮಕ

Ayodhya
ದೇಶ2 hours ago

Ayodhya: ಅಯೋಧ್ಯೆಗೆ ವಿಮಾನ ತಲುಪುತ್ತಲೇ ಭೂಮಿಗೆ ನಮಸ್ಕರಿಸಿದ ಗಗನಸಖಿ; ಭುಗಿಲೆದ್ದಿತು ವಿವಾದ!

Wayanad Landslide
ಕರ್ನಾಟಕ3 hours ago

Wayanad Landslide: ವಯನಾಡು ಸಂತ್ರಸ್ತರಿಗೆ ಮಿಡಿದ ಕರುನಾಡು; ಸರ್ಕಾರದ ಜತೆಗೆ ಜನರಿಂದಲೂ ನೆರವು!

Kavya Maran
ಕ್ರಿಕೆಟ್4 hours ago

Kavya Maran : ಐಪಿಎಲ್​ ಆಟಗಾರರ ಹರಾಜಿನ ನಿಯಮಗಳ ಬಗ್ಗೆ ಕಾವ್ಯಾ ಮಾರನ್ ಇಟ್ಟಿರುವ ಬೇಡಿಕೆಗಳು ಇವು…

Champions Trophy 2025
ಪ್ರಮುಖ ಸುದ್ದಿ4 hours ago

Champions Trophy 2025 : ಚಾಂಪಿಯನ್ಸ್​ ಟ್ರೋಫಿಗಾಗಿ 544 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಐಸಿಸಿ

Viral Video
ವೈರಲ್ ನ್ಯೂಸ್4 hours ago

Viral Video: ಪ್ರವಾಹದಲ್ಲಿ ಸಿಲುಕಿದ ನಾಯಿಗಳಿಗೆ ಡ್ರೋನ್‌ ಮೂಲಕ ಬಿರಿಯಾನಿ ರವಾನೆ; ಮಾನವೀಯತೆ ಅಂದ್ರೆ ಇದು!

Best Teacher Award
ಕರ್ನಾಟಕ4 hours ago

Best Teacher Award: ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

Union Minister Pralhad Joshi latest statement at Mysore Chalo Padayatra
ಕರ್ನಾಟಕ5 hours ago

BJP-JDS Padayatra: ವಾಲ್ಮೀಕಿ ನಿಗಮ, ಮುಡಾ ಹಗರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಶೇರ್ ಹೋಲ್ಡರ್: ಪ್ರಲ್ಹಾದ್‌ ಜೋಶಿ ಆರೋಪ

Farmer dies after falling under power tiller wheel in Moralli village
ಉತ್ತರ ಕನ್ನಡ5 hours ago

Farmer Death: ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ರೈತ ದಾರುಣ ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ13 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ6 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌