Self Harming : ಪತಿ ಅಗಲಿಕೆಯ ನೋವು; ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ - Vistara News

ಬೆಂಗಳೂರು

Self Harming : ಪತಿ ಅಗಲಿಕೆಯ ನೋವು; ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ

Self Harming : ಮನೆ ಯಜಮಾನನ ಸಾವಿನಿಂದ ಕಂಗಲಾದ ತಾಯಿ-ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

VISTARANEWS.COM


on

Self Harming
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನ ಯಲಹಂಕದ ಆರ್‌ಎನ್‌ಜೆಡ್ ಅಪಾರ್ಟ್‌ಮೆಂಟ್‌ನಲ್ಲಿ ತಾಯಿ ಮತ್ತು ಮಗ ಇಬ್ಬರು ಆತ್ಮಹತ್ಯೆ (Self Harming)ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಭಾರ್ಗವ್ ಪುಲಿವರ್ತ (13), ತಾಯಿ ರಮ್ಯಾ (40) ಮೃತ ದುರ್ದೈವಿಗಳು.

ಮೂಲತಃ ಆಂಧ್ರ ಪ್ರದೇಶದ ರಮ್ಯಾ ಶ್ರೀಧರ್ ಎಂಬುವವರನ್ನು ಪ್ರೀತಿಸಿ, ಅಂತರ್ಜಾತಿ ವಿವಾಹವಾಗಿದ್ದರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಶ್ರೀಧರ್ ಪುಲಿವರ್ತ ಮೂರು ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಫ್ಲ್ಯಾಟ್ ಬಾಡಿಗೆ 45 ಸಾವಿರ, ಮಕ್ಕಳಿಬ್ಬರ ಶಾಲೆ ಫೀಸ್, ಮನೆ ನಿರ್ವಹಣೆ ಖರ್ಚು ಅಂತ ತಿಂಗಳಿಗೆ ಲಕ್ಷ ಲಕ್ಷ ಹಣ ಬೇಕಿತ್ತು. ಇತ್ತ ಹಣ ಹೊಂದಿಸುವುದು ರಮ್ಯಾಳಿಗೆ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಖಿನ್ನತೆಗೊಳಗಾಗಿದ್ದರು. ಪತಿ ಸತ್ತ ನಂತರ ತಾವು ಸಾಯೋದಾಗಿ ರಮ್ಯಾ ಹಾಗೂ ಮಗ ಭಾರ್ಗವ್ ಹೇಳಿ ಕೊಂಡಿದ್ದರಂತೆ.

ರಮ್ಯಾಳಿಗೆ 19 ವರ್ಷದ ಮಗಳು ಇದ್ದು, ಆಕೆ ಪಿಜಿಯಲ್ಲಿದ್ದುಕೊಂಡು ಓದುತ್ತಿದ್ದಾಳೆ. ಕಳೆದ 9ರ ರಾತ್ರಿ ಮಗಳ ಜತೆಗೆ ಮಾತನಾಡಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಸಾವಿನ ನಂತರ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಟುಂಬವು ಕುಗ್ಗಿ ಹೋಗಿತ್ತು.

ಇದನ್ನೂ ಓದಿ: Murder case : ಪ್ರೀತಿ ವಿಷ್ಯಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಂದವರ ವಿರುದ್ಧ ಚಾಜ್೯ ಶೀಟ್ ಸಲ್ಲಿಕೆ

ಮೊದಲು ಮಗ ಆತ್ಮಹತ್ಯೆ ಮಾಡಿಕೊಂಡ ಬಳಿಕ ರಮ್ಯಾ ನೇಣಿನ ಕುಣಿಕೆಯಿಂದ ಬಿಡಿಸಿ ಬೆಡ್ ಮೇಲೆ ಮಲಗಿಸಿದ್ದಾರೆ. ನಂತರ ತಾವು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸತ್ತು ನಾಲ್ಕು ದಿನದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಪೊಲೀಸ್‌, ಡಾಕ್ಟರ್‌ ಮತ್ತು ಮಗಳಿಗೆ ಪತ್ರ ಬರೆದು ನೇಣಿಗೆ ಶರಣಾಗಿದ್ದಾರೆ.

ಎರಡ್ಮೂರು ದಿನದಿಂದ ಮನೆಯಿಂದ ಫೋನ್‌ ಬಾರದ ಹಿನ್ನೆಲೆಯಲ್ಲಿ ನಿನ್ನೆ ಶುಕ್ರವಾರ ಮಗಳು ಪಿಜಿಯಿಂದ ಮನೆಗೆ ಬಂದಿದ್ದಾಳೆ. ಮನೆ ಬಾಗಿಲು ಎಷ್ಟೇ ತಟ್ಟಿದ್ದರು ತೆರೆಯದೇ ಇದ್ದಾಗ, ತನ್ನ ಬಳಿ ಇದ್ದ ಇನ್ನೊಂದು ಕೀಯಿಂದ ಮನೆಯ ಬಾಗಿಲು ತೆಗೆದಿದ್ದಾಳೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

Karnataka Rain: ಉತ್ತರ ಕನ್ನಡದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಸಾವು-ನೋವಿಗೆ ಕಾರಣವಾಗುತ್ತಿದೆ. ಶಿರೂರಿನಲ್ಲಿ ಗುಡ್ಡ ಕುಸಿತ ಉಂಟಾಗಿದ್ದರೆ, ಇತ್ತ ಕಿನ್ನರ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಬಿದ್ದು, ಗೋಡೆ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

VISTARANEWS.COM


on

By

Karnataka Rain
Koo

ಉತ್ತರಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಭಾರಿ ಮಳೆಗೆ (Karnataka Rain) ಮನೆ ಮೇಲೆ ಗುಡ್ಡ ಬಿದ್ದ ಪರಿಣಾಮ ಗೋಡೆ ಕುಸಿದಿದೆ. ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ತಿಕರ್ಸ್ ಗುರವ (60) ಮೃತ ದುರ್ದೈವಿ.

ಮನೆಯ ಮೇಲೆ ಏಕಾಏಕಿ ಗುಡ್ಡ ಕುಸಿದ ಪರಿಣಾಮ ಗೋಡೆಯಡಿ ಸಿಲುಕಿದ ತಿಕರ್ಸ್‌ ತಲೆಗೆ ಗಂಭೀರ ಪೆಟ್ಟಾಗಿತ್ತು. ಏಕಾಏಕಿ ಮನೆ ಗೋಡೆ ಕುಸಿದ ಪರಿಣಾಮ ಹೊರ ಬರಲು ಆಗದೆ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಸುಮಾರು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ. ಸ್ಥಳದಲ್ಲಿ ತಹಶಿಲ್ದಾರ್, ಕಾರವಾರ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಅಧಿಕಾರಿಗಳು ದೌಡು

ಇನ್ನೂ ಉತ್ತರ ಕನ್ನಡದ ಅಂಕೋಲಾ ಗುಡ್ಡ ಕುಸಿತ ಪ್ರದೇಶಕ್ಕೆ ಕುಮಟಾ ಎಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣಿನಡಿ 10ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ಇದ್ದು, ಒಂದೇ ಕುಟುಂಬದ ಐವರು ಸೇರಿ ಹತ್ತಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ. ಗುಡ್ಡ ಕುಸಿದ ರಭಸಕ್ಕೆ ನದಿಗೆ 2 ಗ್ಯಾಸ್ ಟ್ಯಾಂಕರ್‌ಗಳು ಕೊಚ್ಚಿ ಹೋಗಿದೆ. ಗುಡ್ಡದ ಕೆಳಗಿದ್ದ ಲಾರಿ, ಮತ್ತೊಂದು ಟ್ಯಾಂಕರ್‌ ಹಾಗೂ ಚಾಲಕರು ಪಾರಾಗಿದ್ದಾರೆ.

ಅಂಕೋಲಾ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ. ಅವಘಡದಲ್ಲಿ 7 ಮಂದಿ ಸಾವನ್ನಪ್ಪಿರಬಹುದೆಂದು ಮಾಹಿತಿ ಲಭ್ಯವಾಗಿದೆ. ಇನ್ನೂ ಕೂಡಾ ಖಚಿತ ಮಾಹಿತಿ ಬರಬೇಕಿದೆ. ಸದ್ಯ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಎಷ್ಟು ಸಾವಾಗಿದೆ ಹೇಳುವುದು ಸಾಧ್ಯವಿಲ್ಲ. ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳು ಸಾಕಾಗುತ್ತಿಲ್ಲ. ಹೀಗಾಗಿ ಕುಮಟಾ ಹಾಗೂ ಅಂಕೋಲಾ ಎರಡೂ ಕಡೆಯಿಂದ ಕಾರ್ಯಾಚರಣೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಜೆಸಿಬಿ, ಹಿಟಾಚಿ ಮತ್ತಿತರ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು ಎಂದರು.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

ಶಿವಮೊಗ್ಗದಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ

ಶಿವಮೊಗ್ಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ ಮನೆಗೆ ಹಾನಿಯಾಗಿದೆ. ಮನೆ ಮೇಲೆ ಮರ ಬಿದ್ದು, ಚಾವಣಿ ಕುಸಿದು ಬಿದ್ದಿದೆ. ಜತೆಗೆ ನೀರು ನುಗ್ಗಿ, ಮನೆಯಲ್ಲಿರುವ ಗೃಹೋಪಯೋಗಿ ವಸ್ತುಗಳು ನೀರುಪಾಲಾಗಿದೆ. ನಿಂಗಮ್ಮ ಎಂಬುವರಿಗೆ ಸೇರಿದ ಮನೆಯು ಹಾನಿಯಾಗಿದ್ದು, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.

ಹಾಸನದಲ್ಲಿ ಕರೆಂಟ್‌ ಕಟ್‌

ಹಾಸನ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಅಪಾರ ಪ್ರಮಾಣದ ಹಾನಿಯಾಗಿದೆ. ಸಕಲೇಶಪುರ ತಾಲೂಕಿನ ಮಾವಿನೂರು, ಕಾಗಿನೆರೆ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಸಕಲೇಶಪುರ ತಾಲೂಕಿನ ಗಡಿ ಗ್ರಾಮ ತಂಬಲಗೇರಿಯಲ್ಲಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದೆ. ಪುಟ್ಟೇಗೌಡ ಎಂಬುವವರ ಸೇರಿದ ಮನೆಯು ಹಾನಿಯಾಗಿದೆ. ಜತೆಗೆ ಗದ್ದೆಗಳಿಗೆ ಮಣ್ಣು ಕುಸಿದು, ಭತ್ತ ಸಸಿಗಳು ಮಣ್ಣಿನಡಿ ಸಿಲುಕಿದೆ. ತಂಬಲಗೇರಿ ಗ್ರಾಮದ ಲೋಕೇಶ್ ಹಾಗೂ ಇತರೆ ಗ್ರಾಮಸ್ಥರಿಗೆ ಸೇರಿದ ಭತ್ತದ ಗದ್ದೆಗಳು ಕೆರೆಯಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಚಿಕ್ಕಮಗಳೂರು, ಹಾಸನದಲ್ಲಿ ಭಾರಿ ಮಳೆಗೆ ಮನೆಗಳು ನೆಲಸಮ

Karnataka Rain : ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಜನರು ಅಕ್ಷರಶಃ ಕಂಗಲಾಗಿದ್ದಾರೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮನೆಗಳು ನೆಲಸಮವಾಗಿವೆ. ಕೆಲವೆಡೆ ಸೇತುವೆಗಳು ಮುಳುಗಡೆಯಾಗಿದೆ.

VISTARANEWS.COM


on

By

karnataka rain
Koo

ಚಿಕ್ಕಮಗಳೂರು/ಹಾಸನ: ಭಾರಿ ಮಳೆಗೆ (Karnataka Rain) ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಕಬ್ಬಿನಗದ್ದೆ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಕಮಲ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ವಿಶೇಷ ಚೇತನ ಹಾಗೂ ಮಾತು ಬಾರದ ಕಮಲ ತಾಯಿಯೊಂದಿಗೆ ವಾಸವಿದ್ದರು. ಸದ್ಯ ಮನೆ ಕಳೆದುಕೊಂಡು ಕಮಲ ಕುಟುಂಬಸ್ಥರು ಕಂಗಲಾಗಿದ್ದಾರೆ.

ಇತ್ತ ಚಿಕ್ಕಮಗಳೂರಿನಲ್ಲೂ ಮಳೆಯ ಅವಾಂತರಕ್ಕೆ ಮನೆಯೊಂದು ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಪೀಠೋಪಕರಣ, ದವಸ, ಧಾನ್ಯ ನಾಶವಾಗಿವೆ. ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದಲ್ಲಿ ಘಟನೆ ನಡೆದಿದೆ. ಬಣಕಲ್‌ನ ತಾಹಿರಾ ಎಂಬವರಿಗೆ ಸೇರಿದ ಮನೆ ನೆಲಸಮವಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಯ ಆರ್ಭಟಕ್ಕೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕುಂಚೂರು ಘಾಟಿ ಬಳಿ ಘಟನೆ ನಡೆದಿದೆ. ಹೀಗಾಗಿ ಸ್ಥಳೀಯರು ರಸ್ತೆಗೆ ಕಲ್ಲು ಇಟ್ಟು ಎಚ್ಚರಿಕೆ ನೀಡಿದ್ದಾರೆ. ಭೂಮಿ ಮತ್ತಷ್ಟು ಕುಸಿದು ಬೀಳುತ್ತಿರುವ ಆತಂಕ ಎದುರಾಗಿದೆ.

karnataka Rain

ಚಿಕ್ಕಮಗಳೂರಲ್ಲಿ ರಸ್ತೆ ಅಡ್ಡಲಾಗಿ ಬಿದ್ದ ಬೃಹತ್‌ ಮರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರಗಳು ಬಿದ್ದಿದೆ. ಬಾಳೆಹೊನ್ನೂರು ಮೆಲ್ವಾಲ್ ರಸ್ತೆಯಲ್ಲಿ ಭಾರೀ ಗಾತ್ರದ ಮರ ಬಿದ್ದು, ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದೆ. ಕೆಲಕಾಲ ರಸ್ತೆ ಸಂಪರ್ಕ ಕಡಿತಗೊಂಡು ಸವಾರರು ಪರದಾಡಬೇಕಾಯಿತು.

ಚಿಕ್ಕಮಗಳೂರಿನ ಕುದುರೆಮುಖ ವ್ಯಾಪ್ತಿಯ ಘಟ್ಟ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು, ಭದ್ರಾ ನದಿ ಅಪಾಯದ ಮಟ್ಟ ಮೀರಿದೆ. ಕಳಸ ತಾಲೂಕಿನ ಹೊರನಾಡು ಬಳಿಯ ಹೆಬ್ಬಾಳೆ ಸೇತುವೆಯಾಗಿದ್ದು, ಹೊರನಾಡು-ಕಳಸ ಸಂಪರ್ಕ ಕಡಿತಗೊಂಡಿದೆ. ಕಳೆದ ರಾತ್ರಿಯಿಂದಲೂ ಸೇತುವೆಯ ಮೇಲೆ ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಮುನ್ನೆಚ್ಚರಿ ಕಾರ್ಯಕ್ರಮವಾಗಿ ಸೇತುವೆಯ ಎರಡು ಕಡೆ ಬ್ಯಾರಿಕೇಡ್‌ ಹಾಕಲಾಗಿದೆ. ಹೆಬ್ಬಾಳೆ ಸೇತುವೆಯ ಮೇಲೆ ವಾಹನಗಳ ಸಂಚಾರ ನಿಷೇಧ ಮಾಡಲಾಗಿದ್ದು, ಸೇತುವೆ ಬಳಿ ಕಳಸ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

Karnataka Rain

ಕೊಡಗಿನ ಶಾಲೆ ಮೇಲೆ ಬಿದ್ದ ಭಾರಿ ಗಾತ್ರದ ಗುಡ್ಡ

ಕೊಡಗಿನಲ್ಲಿ ಪುನರ್ವಸು ಮಳೆ ಅಬ್ಬರ ಜೋರಾಗಿದ್ದು, ಗುಡ್ಡದ ಮಣ್ಣು ಕುಸಿಯಲು ಆರಂಭವಾಗಿದೆ. ಕೊಡಗು ಜಿಲ್ಲೆ ಸಂಪಾಜೆ ಸಮೀಪ ಕೊಯನಾಡಿನಲ್ಲಿ ಸರ್ಕಾರಿ ಶಾಲಾ ಕಟ್ಟಡ ಮೇಲೆ ಭಾರಿ ಗಾತ್ರದ ಗುಡ್ಡ ಬಿದ್ದಿದೆ. ಕಳೆದ ಒಂದು ತಿಂಗಳ ಹಿಂದೆ ಕೂಡ ಮಣ್ಣು ಬಿದ್ದು ಹಾನಿಯಾಗಿತ್ತು. ಮತ್ತೆ ಗುಡ್ಡಕುಸಿತವಾಗಿ ಶಾಲಾ ಕಟ್ಟಡ ಹಿಂಭಾಗಕ್ಕೆ ಪೂರ್ತಿ ಹಾಳಾಗಿದೆ. ಭಾರಿ ಪ್ರಮಾಣದಲ್ಲಿ ಮಣ್ಣು ಬಿದ್ದು ಶಾಲಾ ಕಟ್ಟಡ ಸಂಪೂರ್ಣ ಹಾನಿಯಾಗಿದೆ. ಶಾಲೆಯಲ್ಲಿದ್ದ ದಾಖಲೆಗಳು ಪೀಟೋಪಕರಣಗಳು ಜಖಂ ಆಗಿದ್ದು, ವಿಚಾರ ತಿಳಿದು ಅಳುತ್ತಲೆ ಶಿಕ್ಷಕಿ ಶಾಲೆಗೆ ಓಡೋಡಿ ಬಂದಿದ್ದಾರೆ.

karnataka Rain

ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಉತ್ತರಕನ್ನಡ ಜಿಲ್ಲೆಯ ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ತಡರಾತ್ರಿ ಗುಡ್ಡ ಕುಸಿದು ಸಂಚಾರ ಸಂಪೂರ್ಣ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 766EEಯ ರಾಗಿಹೊಸಳ್ಳಿ ಬಳಿ ಘಟನೆ ನಡೆದಿದೆ. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಇತ್ತ ಧಾರಾಕಾರ ಮಳೆಗೆ ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗಿದೆ. ಹೊನ್ನಾವರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ವರ್ನಕೇರಿ ಬಳಿ ಘಟನೆ ನಡೆದಿದೆ. ಹೆದ್ದಾರಿಗೆ ಬೃಹತ್ ಗಾತ್ರದ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಹೀಗಾಗಿ ಹೊನ್ನಾವರ-ಗೇರುಸೊಪ್ಪ-ಸಾಗರ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಗುಡ್ಡ ಕುಸಿತದಿಂದ ರಸ್ತೆಯಲ್ಲೇ ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಂಗಳೂರಿನಿಂದ ಹೊನ್ನಾವರದತ್ತ ಆಗಮಿಸುತ್ತಿದ್ದ ಪ್ರಯಾಣಿಕರು ಬಸ್‌ಗಳಲ್ಲೇ ಲಾಕ್ ಆಗಿದ್ದರು. ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲಿ ಇದು ನಾಲ್ಕನೇ ಬಾರಿಗೆ ಗುಡ್ಡ ಕುಸಿತ ಉಂಟಾಗಿದೆ.

ಇನ್ನೂ ಕಾರವಾರ ತಾಲೂಕಿನಲ್ಲಿ ಹಲವು ರಸ್ತೆಗಳು, ಗ್ರಾಮಗಳು ಜಲಾವೃತಗೊಂಡಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಅರಗಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ‌ ನೀರು ನಿಂತಿದೆ. ಹೀಗಾಗಿ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದ್ದು, ಗೋವಾ-ಮಂಗಳೂರು ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಕಾರವಾರ ನಗರದ ಹಬ್ಬುವಾಡ ರಸ್ತೆ ಜಲಾವೃತಗೊಂಡಿದ್ದು, ಮಳೆ‌ ನೀರು ಹರಿದು ಹೋಗಲಾಗದೇ ರಸ್ತೆಯು ಹೊಳೆಯಂತಾಗಿದೆ. ಕೆಎಸ್ಆರ್‌ಟಿಸಿ ಡಿಪೋದಲ್ಲೂ ನೀರು ತುಂಬಿಕೊಂಡಿದೆ.

ಕಲಬುರಗಿಯಲ್ಲಿ ದೇವಸ್ಥಾನಕ್ಕೆ ಜಲದಿಗ್ಬಂಧನ

ಕಲಬುರಗಿ ಜಿಲ್ಲೆಯಲ್ಲಿ ಅಫಜಲಪುರ, ಚಿಂಚೊಳ್ಳಿ ಸೇರಿ ಹಲವೆಡೆ ಭಾರಿ ‌ಮಳೆಯಾಗುತ್ತಿದ್ದು, ದತ್ತಾತ್ರೇಯ ದೇವಸ್ಥಾನಕ್ಕೆ ನೀರು ನುಗ್ಗಿದೆ. ಅಫಜಲಪುರ ತಾಲೂಕಿನ‌ ಸುಕ್ಷೇತ್ರ ಗಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನಕ್ಕೆ ಜಲದಿಗ್ಬಂಧನ ಹಾಕಲಾಗಿದೆ.

ಕೆಳ ಹಂತದ ಸೇತುವೆಗಳು ಜಲಾವೃತ

ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಮಳೆ ಚುರುಕಾಗಿದ್ದು, ದೂದಗಂಗಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ದೂದಗಂಗಾ ನದಿಗೆ ಅಡ್ಡಲಾಗಿರುವ 2 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ದತ್ತವಾಡ – ಮಲ್ಲಿಕವಾಡ ಸೇತುವೆ ಹಾಗೂ ನಿಪ್ಪಾಣಿ ತಾಲೂಕಿನ ಭೋಜ – ಕಾರದಗಾ ಸೇತುವೆ ಜಲಾವೃತಗೊಂಡಿದೆ. ಕೆಳ ಹಂತದ ಸೇತುವೆ ಜಲಾವೃತ ಹಿನ್ನೆಲೆ ಪರ್ಯಾಯ ಮಾರ್ಗದ ಮೂಲಕ ಜನರು ಸಂಚಾರಿಸುತ್ತಿದ್ದಾರೆ. ನದಿಗಳ‌ ನೀರಿನ ಮಟ್ಟ ಏರಿಕೆ ಹಿನ್ನೆಲೆ ನದಿಗಳಲ್ಲಿ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಿದೆ.

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಮಾಲತಿ ನದಿ

ಪ್ರವಾಹ ರೀತಿಯಲ್ಲಿ ಮಾಲತಿ ನದಿ ಉಕ್ಕಿ ಹರಿಯುತ್ತಿದೆ. ಅಪಾಯ ಮಟ್ಟ ಮೀರಿ ರಸ್ತೆ ಮೇಲೆ ಉಕ್ಕಿ ಹರಿಯುತ್ತಿದೆ. ಶಿವಮೊಗ್ಗದ ಗುಡ್ಡಕೇರಿಯಿಂದ ಹೊನ್ನೆತಾಳು ಮಾರ್ಗವಾಗಿ ಬಿದರಗೋಡು ಸಂಪರ್ಕಿಸುವ ರಸ್ತೆ ಸ್ಥಗಿತಗೊಂಡಿದೆ. ನಾಬಳ ಬಳಿ ಮಾಲತಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ ಆಗಿದೆ. ಅಕ್ಕಪಕ್ಕದ ತೋಟಕ್ಕೂ ನೀರು ನುಗ್ಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Karnataka Assembly Live: ಡಿಸಿಎಂ ಡಿಕೆ ಶಿವಕುಮಾರ್-‌ ಅಶ್ವಥ್‌ ನಾರಾಯಣ್‌ ವಾಗ್ಯುದ್ಧ; ಗದ್ದಲ

Karnataka Assembly Live: ವಾಲ್ಮೀಕಿ ನಿಗಮದ ಹಗರಣದ ಕುರಿತು ವಿಪಕ್ಷ ನಾಯಕ ಆರ್.‌ ಅಶೋಕ್‌ ಇಂದು ಚರ್ಚೆಯನ್ನು ಮುಂದುವರಿಸಿದರು. ಆದರೆ ಈ ಚರ್ಚೆಯ ವೇಳೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಗೈರುಹಾಜರಾಗಿದ್ದರು. ಇದಕ್ಕೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು.

VISTARANEWS.COM


on

Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ (Valmiki Corporation Scam) ಕುರಿತು ನಡೆಯುತ್ತಿರುವ ಚರ್ಚೆಯ ವೇಳೆ ವಿಧಾನಸಭೆ ಕಲಾಪ (Karnataka Assembly Live) ಗದ್ದಲದ ಗೂಡಾಯಿತು. ಸಿಎಂ ಸಿದ್ದರಾಮಯ್ಯ (CM Siddaramaiah) ಗೈರುಹಾಜರಿಯನ್ನು ಬಿಜೆಪಿ ಶಾಸಕ ಅಶ್ವಥ್‌ ನಾರಾಯಣ್‌ (Ashwath narayan) ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಅವರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ನಡುವೆ ಮಾತಿನ ಚಕಮಕಿ ನಡೆದು ಗೊಂದಲ ಸೃಷ್ಟಿಯಾಯಿತು. ಸ್ಪೀಕರ್‌ ಯು.ಟಿ ಖಾದರ್‌ (Speaker UT Khader) ಸದನವನ್ನು ಮುಂದೂಡಿದರು.

ವಾಲ್ಮೀಕಿ ನಿಗಮದ ಹಗರಣದ ಕುರಿತು ವಿಪಕ್ಷ ನಾಯಕ ಆರ್.‌ ಅಶೋಕ್‌ ಇಂದು ಚರ್ಚೆಯನ್ನು ಮುಂದುವರಿಸಿದರು. ಆದರೆ ಈ ಚರ್ಚೆಯ ವೇಳೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಗೈರುಹಾಜರಾಗಿದ್ದರು. ಇದಕ್ಕೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು. ʼನೇರವಾಗಿ ಇದು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರʼ ಎಂದ ಅಶ್ವಥ್ ನಾರಾಯಣ್, ಕೂಡಲೇ ಅವರನ್ನು ಕರೆಸಿ ಎಂದು ಆಗ್ರಹಿಸಿದರು.

ಈ ವೇಳೆ ಸದನದಲ್ಲಿ ಎದ್ದು ನಿಂತ ಡಿಸಿಎಂ ಡಿಕೆ ಶಿವಕುಮಾರ್‌, ಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದರು. ಸಚಿವ ಜಮೀರ್ ಅಹ್ಮದ್ ಖಾನ್, ಕೆಜೆ ಜಾರ್ಜ್ ಕೂಡ ಅವರಿಗೆ ಸಾಥ್‌ ನೀಡಿದರು. ʼಸಿಎಂಗೆ ಗೌರವ ಕೊಡೋದನ್ನು ಕಲಿಯಿರಿʼ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್‌ ಹಾಗೂ ಅಶ್ವಥ್‌ ನಾರಾಯಣ್‌ ನಡುವೆ ಮಾತಿಕ ಚಕಮಕಿ ನಡೆಯಿತು. ರೊಚ್ಚಿಗೆದ್ದ ಬಿಜೆಪಿ ಶಾಸಕರು ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ, ವಿಪಕ್ಷ ಶಾಸಕರ ನಡುವೆ ವಾಗ್ವಾದ ಹೆಚ್ಚಿ ಗೊಂದಲ ಮೂಡಿದ ಕಾರಣ ವಿಧಾ‌ನಸಭೆ ಕಲಾಪವನ್ನು ಸ್ಪೀಕರ್ ಹತ್ತು ನಿಮಿಷ ಮುಂದೂಡಿದರು.

ದದ್ದಲ್‌ ಜೊತೆಗೆ ಸ್ಪೀಕರ್‌ ಸಭೆ

ವಿಧಾನಸಭೆಯ ಸ್ಪೀಕರ್ ಕಚೇರಿಯಲ್ಲಿ ಇಂದು ಶಾಸಕ, ವಾಲ್ಮೀಕಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್‌ ಅವರು ಸಿಎಂ ಸಿದ್ದರಾಮಯ್ಯ, ಸಭಾಧ್ಯಕ್ಷ ಯುಟಿ ಖಾದರ್‌‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಿಎಂ‌ ಕಾನೂನು ಸಲಹೆಗಾರ ಪೊನ್ನಣ್ಣ ಕೂಡ ಜೊತೆಗಿದ್ದರು. ಇದಕ್ಕೂ ಮುನ್ನ ದದ್ದಲ್‌, ಗೃಹ ಸಚಿವ ಪರಮೇಶ್ವರ್‌ ಜೊತೆಗೆ ಮಾತುಕತೆ ನಡೆಸಿದರು. ಇಂದು ಮುಂಜಾನೆ ದದ್ದಲ್‌ ಅವರಿಗೆ ಇಡಿ ವಿಚಾರಣೆಗೆ ಹಾಜರಾಗಲು ನೋಟೀಸ್‌ ನೀಡಿದೆ ಎನ್ನಲಾಗಿದ್ದು, ತನಗೆ ಯಾವುದೇ ನೋಟೀಸ್‌ ಬಂದಿಲ್ಲ ಎಂದು ದದ್ದಲ್‌ ಹೇಳಿದ್ದಾರೆ. ಇದೀಗ ಸ್ಪೀಕರ್, ಸಿಎಂ ಜೊತೆಗಿನ ಅವರ ಮಾತುಕತೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Karnataka Assembly Live: ವಿಧಾನಸಭೆ ಕಲಾಪಕ್ಕೆ ಹಾಜರಾಗಿ ಸೇಫ್‌ ಆದ ಬಸವನಗೌಡ ದದ್ದಲ್‌! ವಿಧಾನ ಮಂಡಲ ಕಲಾಪ ಲೈವ್‌ ಇಲ್ಲಿದೆ

Continue Reading

ಕ್ರೈಂ

Gauri Lankesh Murder: ಗೌರಿ ಲಂಕೇಶ್‌ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ಜಾಮೀನು

Gauri Lankesh Murder: ಇವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕಲಬುರ್ಗಿ ಪೀಠದ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಕಳೆದ 6 ವರ್ಷಗಳಿಂದ ಆರೋಪಿಗಳು ಜೈಲಿನಲ್ಲಿದ್ದಾರೆ. ವಿಚಾರಣೆ ಮುಗಿಯದೇ ದೀರ್ಘ ಕಾಲ‌ ಜೈಲಿನಲ್ಲಿಡುವಂತಿಲ್ಲವೆಂದು ತೀರ್ಪು ಇದೆ.

VISTARANEWS.COM


on

Gauri Lankesh murder
Koo

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ (Journalist Gauri Lankesh) ಪ್ರಕರಣದ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ (Karnataka High Court) ಮಂಗಳವಾರ ಜಾಮೀನು (Bail) ಮಂಜೂರು ಮಾಡಿದೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಅಮಿತ್‌ ದಿಗ್ವೇಕರ್‌ ಅಲಿಯಾಸ್‌ ಅಮಿತ್‌ ಅಲಿಯಾಸ್‌ ಪ್ರದೀಪ್‌ ಮಹಾಜನ್‌, ಏಳನೇ ಆರೋಪಿ ಸುರೇಶ್‌ ಎಚ್‌.ಎಲ್‌ ಅಲಿಯಾಸ್‌ ಟೀಚರ್‌ ಮತ್ತು 17ನೇ ಆರೋಪಿ ಕೆ.ಟಿ ನವೀನ್‌ ಕುಮಾರ್‌ ಅಲಿಯಾಸ್‌ ನವೀನ್‌ಗೆ ಜಾಮೀನು ದೊರೆತಿದೆ.

ಇವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕಲಬುರ್ಗಿ ಪೀಠದ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಕಳೆದ 6 ವರ್ಷಗಳಿಂದ ಆರೋಪಿಗಳು ಜೈಲಿನಲ್ಲಿದ್ದಾರೆ. ವಿಚಾರಣೆ ಮುಗಿಯದೇ ದೀರ್ಘ ಕಾಲ‌ ಜೈಲಿನಲ್ಲಿಡುವಂತಿಲ್ಲವೆಂದು ತೀರ್ಪು ಇದೆ. ಹೀಗಾಗಿ ಷರತ್ತುಬದ್ಧ ಜಾಮೀನು ನೀಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಆರೋಪಿಗಳ ಪರ ನ್ಯಾಯವಾದಿಗಳಾದ ಅರುಣ್ ಶ್ಯಾಮ್, ಮಧುಕರ್ ದೇಶಪಾಂಡೆ, ಬಸವರಾಜ ಸಪ್ಪಣ್ಣವರ್ ವಾದಿಸಿದ್ದರು.

11ನೇ ಆರೋಪಿ ಮೋಹನ್‌ ನಾಯಕ್‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ತಮಗೂ ಜಾಮೀನು ಮಂಜೂರು ಮಾಡಬೇಕು ಎಂಬುದು ಎಲ್ಲಾ ಅರ್ಜಿದಾರರ ವಾದವಾಗಿತ್ತು. ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಪ್ರಾಸಿಕ್ಯೂಷನ್‌ “ಮೋಹನ್‌ ನಾಯಕ್‌ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನ ಬೇರೊಂದು ಪೀಠವು ತಿರಸ್ಕರಿಸಿದ್ದು, ಕೊಲೆ, ಪಿತೂರಿಯಂಥ ಗಂಭೀರ ಆರೋಪಗಳಿರುವಾಗ ಜಾಮೀನು ನೀಡಲಾಗದು ಎಂದಿದೆ. ಇಡೀ ಪ್ರಕರಣದಲ್ಲಿ ಜಾಮೀನು ಪಡೆದಿರುವ ಏಕೈಕ ಮತ್ತು ಮೊದಲ ಆರೋಪಿ ಮೋಹನ್‌ ನಾಯಕ್‌. ಆತನ ಜಾಮೀನು ಆದೇಶವನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅದು ವಿಚಾರಣೆಗೆ ಬಾಕಿಯಿದೆ” ಎಂದಿತ್ತು.

ಸಂಚಲನ ಮೂಡಿಸಿದ್ದ ಗೌರಿ ಕೊಲೆ

ಲಂಕೇಶ್‌ ಪತ್ರಿಕೆಯ ಸಂಪಾದಕರಾಗಿದ್ದ ಗೌರಿ ಲಂಕೇಶ್‌ ಅವರನ್ನು 2017ರ ಸೆಪ್ಟೆಂಬರ್‌ 5ರಂದು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೆ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪ ಗಣೇಶ್ ಮಿಸ್ಕಿನ್ ಮೇಲೆ ಇದೆ.

ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್‌ ಪಾಟೀಲ್‌, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಮತ್ತು ಹೃಶಿಕೇಶ್ ದಿಯೋದಿಕರ್‌ ಪ್ರಕರಣದ ಆರೋಪಿಗಳಾಗಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯಿದೆಯ ಸೆಕ್ಷನ್‌ಗಳಾದ 25(1), 25(1B), 27(1) ಮತ್ತು ಕೋಕಾ ಕಾಯಿದೆಯ ಸೆಕ್ಷನ್‌ಗಳಾದ 3(1)(I), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Kalaburagi News : ಕಲಬುರಗಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ನದಿಗೆ ಹಾರಿ ಯುವಕ-ಯುವತಿ ಆತ್ಮಹತ್ಯೆ

Continue Reading
Advertisement
Karnataka Rain
ಮಳೆ15 mins ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

Actor Mithra
ಸ್ಯಾಂಡಲ್ ವುಡ್16 mins ago

Actor Mithra: ಖಡಕ್‌ ವಿಲನ್‌ ಆಗಿ ʼಕರಾವಳಿʼಯಲ್ಲಿ ಅಬ್ಬರಿಸಲಿದ್ದಾರೆ ಕಾಮಿಡಿ ಸ್ಟಾರ್ ಮಿತ್ರ; ಕಾಲಿವುಡ್‌ಗೂ ಎಂಟ್ರಿ

Rohit Sharma
ಕ್ರೀಡೆ31 mins ago

Rohit Sharma: ‘ಎಲಾ ಉನ್ನಾರು?’; ತೆಲುಗಿನಲ್ಲಿ ಮಾತನಾಡಿದ ರೋಹಿತ್ ಶರ್ಮ; ವಿಡಿಯೊ ವೈರಲ್​

karnataka rain
ಮಳೆ47 mins ago

Karnataka Rain : ಚಿಕ್ಕಮಗಳೂರು, ಹಾಸನದಲ್ಲಿ ಭಾರಿ ಮಳೆಗೆ ಮನೆಗಳು ನೆಲಸಮ

ಪ್ರಮುಖ ಸುದ್ದಿ54 mins ago

Karnataka Assembly Live: ಡಿಸಿಎಂ ಡಿಕೆ ಶಿವಕುಮಾರ್-‌ ಅಶ್ವಥ್‌ ನಾರಾಯಣ್‌ ವಾಗ್ಯುದ್ಧ; ಗದ್ದಲ

Alcohol Delivery
ದೇಶ57 mins ago

Alcohol Delivery: ಎಣ್ಣೆ ಪ್ರಿಯರಿಗೆ ಗುಡ್‌ ನ್ಯೂಸ್;‌ ಇನ್ನು ಸ್ವಿಗ್ಗಿಯಲ್ಲಿ ಮನೆ ಬಾಗಿಲಿಗೆ ಬರಲಿದೆ ಆಲ್ಕೋಹಾಲ್!

Doda Encounter
ದೇಶ60 mins ago

Doda Encounter: ಜಮ್ಮು- ಕಾಶ್ಮೀರದಲ್ಲಿ ಉಗ್ರರ ದಾಳಿ; ಬಿಜೆಪಿಯ ತಪ್ಪು ನೀತಿಯೇ ಕಾರಣ ಎಂದ ರಾಹುಲ್‌ ಗಾಂಧಿ

7th Pay Commission
ಕರ್ನಾಟಕ1 hour ago

7th Pay Commission: ರಜೆ, ಪಿಂಚಣಿ, ಬಡ್ತಿ; 7ನೇ ವೇತನ ಆಯೋಗದ ಜಾರಿ ಬಳಿಕ ಸಂಬಳದ ಜತೆ ಏನೆಲ್ಲ ಸೌಲಭ್ಯ ಸಿಗಲಿವೆ? ಇಲ್ಲಿದೆ ಮಾಹಿತಿ

IND vs SL
ಕ್ರಿಕೆಟ್1 hour ago

IND vs SL: ಶ್ರೀಲಂಕಾ ಪ್ರವಾಸಕ್ಕೆ ಇಂದು ಭಾರತ ತಂಡ ಪ್ರಕಟ ಸಾಧ್ಯತೆ: ಯಾರಿಗೆಲ್ಲ ಸಿಗಲಿದೆ ಅವಕಾಶ?

Gauri Lankesh murder
ಕ್ರೈಂ2 hours ago

Gauri Lankesh Murder: ಗೌರಿ ಲಂಕೇಶ್‌ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ಜಾಮೀನು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ15 mins ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ20 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌