Drugs Seized : ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 30 ಕೋಟಿ ರೂ. ಮೌಲ್ಯದ ಕೊಕೇನ್‌; ಸೆರೆ ಸಿಕ್ಕ ಸ್ಮಗ್ಲರ್ - Vistara News

ಕ್ರೈಂ

Drugs Seized : ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 30 ಕೋಟಿ ರೂ. ಮೌಲ್ಯದ ಕೊಕೇನ್‌; ಸೆರೆ ಸಿಕ್ಕ ಸ್ಮಗ್ಲರ್

Drugs Seized : ಬೆಂಗಳೂರಿನಲ್ಲಿ ನಶೆಯೇರಿಸಲು ತಂದಿದ್ದ 30 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜತೆಗೆ ಸ್ಮಗ್ಲರ್‌ನನ್ನು ವಶಕ್ಕೆ ಪಡೆಯಲಾಗಿದೆ. ಕಲಬುರಗಿಯಲ್ಲಿ ಚಲಾಕಿ ಕಳ್ಳರನ್ನು ಬಂಧಿಸಲಾಗಿದೆ. ತುಮಕೂರಿನ ಬಾರ್‌ವೊಂದರಲ್ಲಿ ಕಳ್ಳರ ಗ್ಯಾಂಗ್‌ವೊಂದು ಕುಡುಕನ ಮೊಬೈಲ್‌ ಎಗರಿಸಿ ಪರಾರಿ ಆಗಿದ್ದಾರೆ.

VISTARANEWS.COM


on

Drugs seized
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೇವನಹಳ್ಳಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ತಂದಿದ್ದ ಕೋಟಿ ಕೋಟಿ ಮೌಲ್ಯದ ಕೊಕೇನ್‌ ಅನ್ನು ವಶಕ್ಕೆ (Drugs Seized) ಪಡೆಯಲಾಗಿದೆ. ಕಸ್ಟಮ್ಸ್‌ ತಂಡದ ಕಾರ್ಯಾಚರಣೆ ವೇಳೆ ವಿದೇಶದಿಂದ ತಂದಿದ್ದ ಮೂವತ್ತು ಕೋಟಿ ಮೌಲ್ಯದ ಮೂರು ಕೆಜಿ ಕೊಕೇನ್ ವಶಕ್ಕೆ ಪಡೆಯಲಾಗಿದೆ.

ದೋಹಾದಿಂದ ಬೆಂಗಳೂರಿಗೆ ಇಂಡಿಗೋ 6E1302 ವಿಮಾನದಲ್ಲಿ ಸ್ಮಗ್ಲರ್ ಬಂದಿದ್ದ. ಲಗೇಜ್ ಬ್ಯಾಗ್‌ನಲ್ಲಿ3 ಕೆಜಿ ಕೊಕೇನ್ ಅಡಗಿಸಿಟ್ಟುಕೊಂಡು ಬಂದಿದ್ದ. ಆದರೆ ಲಗೇಜ್ ಬ್ಯಾಗ್ ಚೆಕ್ಕಿಂಗ್‌ ವೇಳೆ ಕೊಕೇನ್ ಇರುವುದು ಪತ್ತೆಯಾಗಿದೆ. ಸದ್ಯ ಕೊಕೇನ್ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.

ಕಲಬುರಗಿಯಲ್ಲಿ ಚಲಾಕಿ ಕಳ್ಳರ ಬಂಧನ

ಕಲಬುರಗಿ ಜಿಲ್ಲೆಯ ನಿಂಬರ್ಗಾ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ವಿವಿಧ ಪ್ರಕರಣಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳ ಜಪ್ತಿ ಮಾಡಿದ್ದಾರೆ. 10 ಬೈಕ್, ಟ್ರ್ಯಾಕ್ಟರ್‌ ಟ್ರಾಲಿ, ಟ್ರ್ಯಾಕ್ಟರ್‌ ಇಂಜಿನ್ ಸೇರಿದಂತೆ 14 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಎರಡು ತಿಂಗಳ ಹಿಂದೆ ಬೈಕ್ ಕಳ್ಳತನ ಪ್ರಕರಣ ಭೇದಿಸಲು ಹೋದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಖತರ್ನಾಕ್‌ ಟೀಂ ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬನ ಬೈಕ್ ಕದ್ದಿದ್ದರು. ಪ್ರಥ್ವಿ ಬಿಳಗಿ, ಮಹಿಬೂಬ್, ರಾಹುಲ್ ಕ್ಷೇತ್ರಿ, ಮುನ್ನಾ ಜೈನೋದ್ದಿನ್ಣ ಕರೀಂ ಬಾಗವಾನ್, ಅಮಿನ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು. ಬೈಕ್ ಮತ್ತು ಟ್ರ್ಯಾಕ್ಟರ್‌ ಇಂಜಿನ್ ಮತ್ತು ಟ್ರಾಲಿಗಳನ್ನ ಕದಿಯುತ್ತಿದ್ದರು. ಈ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: KSRTC Ticket Price Hike: ಸಾರಿಗೆ ಬಸ್‌ ಪ್ರಯಾಣಿಕರಿಗೆ ಶಾಕ್‌; ಟಿಕೆಟ್ ದರ ಏರಿಕೆ ಸುಳಿವು ನೀಡಿದ KSRTC ಅಧ್ಯಕ್ಷ!

ಬಾರ್‌ನಲ್ಲಿ ಕುಡುಕನ ಮೊಬೈಲ್‌ ಎಗರಿಸಿದ ಕಳ್ಳ

ಬಾರ್‌ವೊಂದರಲ್ಲಿ ಖದೀಮರು ಕೈಚಳಕ ತೋರಿದ್ದಾರೆ. ತುಮಕೂರಿನ ಜೆ.ಸಿ ರಸ್ತೆಯಲ್ಲಿರುವ ರೇಣುಕಾ ವೈನ್ಸ್‌ನಲ್ಲಿ ಮದ್ಯ ಸೇವಿಸುವ ಸೋಗಿನಲ್ಲಿ ಗ್ಯಾಂಗ್‌ವೊಂದು ಎಂಟ್ರಿ ಕೊಟ್ಟಿತ್ತು. ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದ. ಇತ್ತ ಕಳ್ಳರ ಗ್ಯಾಂಗ್‌ ಅತ್ತಿಂದಿತ್ತ ಓಡಾಡಿ, ಮಾತಾಡಿಸುವ ನೆಪದಲ್ಲಿ ಹತ್ತಿರ ಹೋಗಿ ಕ್ಷಣಾರ್ಧದಲ್ಲಿ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಇದೇ ತಿಂಗಳ 8ರಂದು ಸಂಜೆ 5 ಗಂಟೆಯಲ್ಲಿ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಖದೀಮರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

BMTC staff : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ

Bengaluru News : ಬೆಂಗಳೂರಿನ ಬಿಎಂಟಿಸಿ ಕೇಂದ್ರ ಕಚೇರಿಯೊಳಗೆ ಸಿಬ್ಬಂದಿಯೊಬ್ಬ (BMTC staff) ನೇಣು ಬಿಗಿದುಕೊಂಡು (Self Harming) ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

VISTARANEWS.COM


on

By

BMTC staff commits suicide at headquarters
Koo

ಬೆಂಗಳೂರು: ಬೆಂಗಳೂರಿನ ಶಾಂತಿನಗರದ ಇಡಿ ಕಚೇರಿಯ ಪಕ್ಕದಲ್ಲಿರುವ ಬಿಎಂಟಿಸಿ ಕಚೇರಿಯೊಳಗೆ ಬಿಎಂಟಿಸಿ ಸಿಬ್ಬಂದಿ (BMTC staff) ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಅಥಣಿ ಮೂಲದ ಮಹೇಶ್ ಆತ್ಮಹತ್ಯೆ ಮಾಡಿಕೊಂಡವರು.

ಡಿಪೋ ನಂಬರ್ 12ರಲ್ಲಿ ಮಹೇಶ್‌ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ. ನಿನ್ನೆ ಸೋಮವಾರ ಬೆಳಗ್ಗೆ ರೆಕಾರ್ಡ್ ರೂಂ ಕೀ ಕೇಳಿದ್ದ. ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ನಿನ್ನೆ ಸಂಜೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನಿನ್ನೆ ಸೆಕ್ಯೂರಿಟಿ ಗಾರ್ಡ್ ಬಳಿ ಮಹೇಶ್ ರೆಕಾರ್ಡ್ ಸೆಕ್ಷನ್ ಕೀ ಪಡೆದು, ಬೆಳಗ್ಗೆಯಿಂದಲ್ಲೂ ರೂಮಿನೊಳಗೆ ಓಡಾಟ ನಡೆಸಿದ್ದ. ಸಂಜೆ ಯಾರು ಇಲ್ಲದ ವೇಳೆ ವೈರ್ ಬಳಸಿ ಫ್ಯಾನ್‌ಗೆ ವೈರ್ ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ. ಮುಂಜಾನೆ ಸಿಬ್ಬಂದಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Karnataka Rain : ಭಾರಿ ಮಳೆ ಎಫೆಕ್ಟ್‌-ಮಲಗಿದ್ದ‌ ವ್ಯಕ್ತಿ ಮೇಲೆ ಬಿದ್ದ ಗೋಡೆ; ಮರ ಬಿದ್ದು ಕಾರು ಜಖಂ, ಚಾಲಕ ಜಸ್ಟ್‌ ಮಿಸ್‌

ಗದಗದಲ್ಲಿ ನದಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ

ಸೇತುವೆ ಮೇಲಿಂದ ನದಿಗೆ ಜಿಗಿದು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ತುಂಗಭದ್ರಾ ನದಿಯಲ್ಲಿ ಘಟನೆ ನಡೆದಿದೆ. ಗದಗ ಹಾಗೂ ಬಳ್ಳಾರಿ ಜಿಲ್ಲೆ‌ಗಳ‌ ಮಧ್ಯ ಸಂಪರ್ಕಿಸುವ ಸೇತುವೆ ಇದಾಗಿದ್ದು, ತುಂಗಭದ್ರಾ ನದಿಗೆ‌ ಅಡ್ಡಲಾಗಿ ನಿರ್ಮಿಸಿರುವ ಸೇತುವೆ‌ ಮೇಲಿಂದ ನದಿಗೆ ಹಾರಿದ್ದಾನೆ. ಕರಿಬಸಪ್ಪ (30) ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದವನು. ಕರಿಬಸಪ್ಪ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೀರಾಕೊರಳಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಕರಿಬಸಪ್ಪ ನದಿಗೆ ಹಾರಿದ್ದನ್ನು ಗಮನಿಸಿದ ಕೊರ್ಲಹಳ್ಳಿ ಗ್ರಾಮದ ಪುನೀತ್, ಕೃಷ್ಣ, ಹನುಮಂತ ಎಂಬುವವರು ಕೂಡಲೇ ರಕ್ಷಣೆ ಮಾಡಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Latest

Model Arrest: ತನ್ನ ಫಾಲೋವರ್ಸ್‌ಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಖ್ಯಾತ ಮಾಡೆಲ್‌ಗೆ ಜೈಲು ಶಿಕ್ಷೆ!

Model Arrest: ಬ್ರೆಜಿಲ್‌ನ ಮಾಜಿ ರೂಪದರ್ಶಿ ಕ್ಯಾಟ್ ಟೊರೆಸ್ ಅನ್ನು ಮಾನವ ಕಳ್ಳಸಾಗಣೆ ಮತ್ತು ಮಹಿಳೆಯರ ಗುಲಾಮಗಿರಿಗಾಗಿ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವಳೊಂದಿಗೆ ವಾಸವಾಗಿದ್ದ ಇಬ್ಬರು ಮಹಿಳೆಯರು 2022ರಲ್ಲಿ ಕಾಣೆಯಾಗಿದ್ದರು. ಈ ಬಗ್ಗೆ ಎಫ್ಐಆರ್ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಕೆ ತನ್ನ ಫಾಲೋವರ್ಸ್‌ಗಳನ್ನು ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸಿ ಅವರನ್ನು ತನ್ನ ಗುಲಾಮರಂತೆ ಇರಿಸಿಕೊಳ್ಳುತ್ತಿದ್ದಳು ಎಂಬುದಾಗಿ ತಿಳಿದು ಬಂದಿದೆ.

VISTARANEWS.COM


on

Model Arrest
Koo

ಬ್ರೆಜಿಲ್‌ನ ಮಾಜಿ ರೂಪದರ್ಶಿ ಮತ್ತು ಅಮೆರಿಕ ಮೂಲದ ವೆಲ್ನೆಸ್ ಇನ್ಫ್ಲುಯೆನ್ಸರ್ ಕ್ಯಾಟ್ ಟೊರೆಸ್‌ ಎಂಬುವಳನ್ನು ಮಾನವ ಕಳ್ಳಸಾಗಣೆ ಮತ್ತು ಮಹಿಳೆಯರ ಗುಲಾಮಗಿರಿಗಾಗಿ ಎಂಟು ವರ್ಷಗಳ ಜೈಲು ಶಿಕ್ಷೆ (Model Arrest) ವಿಧಿಸಲಾಗಿದೆ. ಅವಳೊಂದಿಗೆ ವಾಸವಾಗಿದ್ದ ಇಬ್ಬರು ಮಹಿಳೆಯರು 2022ರಲ್ಲಿ ಕಾಣೆಯಾಗಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಕೆ ತನ್ನ ಫಾಲೋವರ್ಸ್‌ಗಳನ್ನು ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸಿ ಅವರನ್ನು ತನ್ನ ಗುಲಾಮರಂತೆ ಇರಿಸಿಕೊಳ್ಳುತ್ತಿದ್ದಳು ಎಂಬುದಾಗಿ ತಿಳಿದುಬಂದಿದೆ.

ಆಕೆಯಿಂದ ಗುಲಾಮಗಿರಿಗೆ ಒಳಗಾದ ಆ ಮಹಿಳೆಯರು ಆಕೆಯೊಂದಿಗೆ ವಾಸವಿದ್ದಾಗ ಅನುಭವಿಸಿದ ಭಯಾನಕ ಘಟನೆಗಳ ಬಗ್ಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಂತ್ರಸ್ತ ಮಹಿಳೆಯರು, ಆಕೆ ಮರುಳು ಮಾಡುವಂತೆ ಮಾತನಾಡುತ್ತಿದ್ದಳು. ಅವಳು ಹೇಳುವ ಮಾತನ್ನು ಕೇಳಿ ಆಕರ್ಷಿತರಾದೆವು. ನಟ ಲಿಯೊನಾರ್ಡೊ ಡಿಕಾಪ್ರಿಯೊ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂದು ಒಂದು ಕಾಲದಲ್ಲಿ ವದಂತಿಗಳಿದ್ದ ಟೊರೆಸ್, ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಬಳಸಿಕೊಂಡು ಭವಿಷ್ಯ ನುಡಿಯಬಹುದು ಎಂದು ಪ್ರಸಿದ್ಧ ಬ್ರೆಜಿಲಿಯನ್ ಟಿವಿ ಕಾರ್ಯಕ್ರಮಗಳಲ್ಲಿ ಹೇಳಿದ್ದಳು. ಅಲ್ಲದೇ ಅವಳು ಮ್ಯಾಗಜೀನ್‌ಗಳ ಮುಖಪುಟಗಳಲ್ಲಿ ಕಾಣಿಸಿಕೊಂಡಿದ್ದಳು. ಹಾಲಿವುಡ್‌ ನಟ ಲಿಯೊನಾರ್ಡೊ ಡಿಕಾಪ್ರಿಯೊ ಅವರಂತಹ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಕಾಣಿಸಿಕೊಂಡಳು. ಹಾಗಾಗಿ ಆಕೆ ಹೇಳುವುದನ್ನು ತಾವು ನಂಬಿರುವುದಾಗಿ ಮಹಿಳೆಯರು ತಿಳಿಸಿದ್ದಾರೆ.

Model Arrest

ಆಕೆ ವೆಲ್‍ನೆಸ್ ವೆಬ್‍ಸೈಟ್‍ ಮತ್ತು ಚಂದಾದಾರಿಕೆ ಸೇವೆಯನ್ನು ಅಭಿವೃದ್ಧಿಪಡಿಸಿ ಅದರಲ್ಲಿ ಸಂಬಂಧಗಳು, ಯೋಗಕ್ಷೇಮ, ಸಂಮೋಹನ, ಧ್ಯಾನ ಮತ್ತು ವ್ಯಾಯಾಮ ಕಾರ್ಯಕ್ರಮಗಳು ಸೇರಿದಂತೆ ವ್ಯವಹಾರ ಯಶಸ್ಸಿನ ಬಗ್ಗೆ ಸಲಹೆ ನೀಡುವ ಸ್ವ-ಸಹಾಯ ವೀಡಿಯೊಗಳನ್ನು ಸಹ ಮಾಡುತ್ತಿದ್ದಳು. ಹಾಗೇ ವಿಡಿಯೋ ಸಮಾಲೋಚನೆಗಳ ಮೂಲಕ ಮುಖಾಮುಖಿ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಳು.

ಹಾಗಾಗಿ ಆ ಮಹಿಳೆಯರು 2019ರಲ್ಲಿ ಟೊರೆಸ್ ಅವರ ಲೈವ್-ಇನ್ ಸಹಾಯಕರಾಗಿ ಕೆಲಸ ಮಾಡಲು ನ್ಯೂಯಾಕ್‌ಗೆ ತೆರಳಿದರು. ಅಲ್ಲಿ ಅವಳ ಮನೆಕೆಲಸ ಹಾಗೂ ಪ್ರಾಣಿಗಳನ್ನು ನೋಡಿಕೊಳ್ಳುವ ಕೆಲಸದಲ್ಲಿ ನಿರತಳಾಗಿದ್ದರು. ಆದರೆ ಆಕೆ ಸಂಬಳ ಸರಿಯಾಗಿ ನೀಡುತ್ತಿರಲಿಲ್ಲ. ನಂತರ ಸ್ಥಳೀಯ ಸ್ಟ್ರಿಪ್ ಕ್ಲಬ್‍ನಲ್ಲಿ ಕೆಲಸ ಮಾಡುವಂತೆ ಅವರ ಮೇಲೆ ಒತ್ತಡ ಹೇರಿದ್ದಳು. ಇದಕ್ಕೆ ಅವರು ಒಪ್ಪದಿದ್ದಾಗ ಅವರನ್ನು ಯಾಮಾರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಮಾಡಿದ್ದಳು.

ಇದನ್ನೂ ಓದಿ: ತರಕಾರಿ ಮಾರುವವಳ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ನಂತರ ಇಬ್ಬರು ಮಹಿಳೆಯರ ಸ್ನೇಹಿತರು ಮತ್ತು ಕುಟುಂಬವು ಅವರನ್ನು ಹುಡುಕಲು ಸಾಮಾಜಿಕ ಮಾಧ್ಯಮ ಅಭಿಯಾನಗಳನ್ನು ಪ್ರಾರಂಭಿಸಿತು. ಮಾಧ್ಯಮಗಳ ಗಮನದಿಂದ ತಪ್ಪಿಸಿಕೊಳ್ಳಲು, ಟೊರೆಸ್ ಆ ಮಹಿಳೆಯರಿಗೆ ತಾವು ಆರಾಮವಾಗಿ ಇದ್ದೀವಿ ಎಂದು ವಿಡಿಯೊ ಪೋಸ್ಟ್ ಮಾಡುವಂತೆ ಒತ್ತಾಯಿಸಿದ್ದಳು. ಈ ರೀತಿ ಆಕೆ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. 20 ಕ್ಕೂ ಹೆಚ್ಚು ಮಹಿಳೆಯರು ಟೊರೆಸ್‌ನಿಂದ ವಂಚನೆಗೊಳಗಾದ ಅಥವಾ ಶೋಷಣೆಗೊಳಗಾದ ಬಗ್ಗೆ ತಿಳಿಸಿದ್ದಾರೆ. ಅವರು ಅನುಭವಿಸಿದ ಮತ್ತು ಅನುಭವದಿಂದ ಚೇತರಿಸಿಕೊಳ್ಳಲು ಅವರು ಇನ್ನೂ ಮನೋವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

Continue Reading

Latest

Sexual Abuse: ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ

Sexual Abuse: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪ್ರತಿಷ್ಠಿತ ಶಾಲಾ ಆವರಣದಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ಅದೇ ಶಾಲೆಯ ಕಿರಿಯ ತರಗತಿಯಲ್ಲಿ ಓದುತ್ತಿದ್ದ 12 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಅನಾರೋಗ್ಯದ ಕಾರಣ ಶಾಲೆಯ ಆರೋಗ್ಯ ಕೇಂದ್ರಕ್ಕೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದರು. ಆರೋಪಿ ವಿದ್ಯಾರ್ಥಿ, ವಿದ್ಯಾರ್ಥಿನಿಯನ್ನು ಶೌಚಾಲಯಕ್ಕೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನಂತೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Sexual Abuse
Koo

ಶಾಲಾ ಕಾಲೇಜುಗಳೆಂದರೆ ವಿದ್ಯಾ ದೇಗಲವಿದ್ದಂತೆ. ಅಲ್ಲಿಗೆ ಬರುವ (Sexual Abuse) ಮಕ್ಕಳು ವಿದ್ಯೆ ಕಲಿತು ತಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲು ಪ್ರಯತ್ನಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದೆ. ಶಾಲಾ ಶಿಕ್ಷಕರಿಂದ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರುವುದು ಮಾತ್ರವಲ್ಲ ತಮ್ಮ ಸಹಪಾಠಿಗಳಿಂದಲೂ ಅತ್ಯಾಚಾರಕ್ಕೆ (Rape Case) ಒಳಗಾಗುತ್ತಿದ್ದಾರೆ. ಅಂತಹದೊಂದು ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

ಜುಲೈ 13ರ ಶನಿವಾರ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪ್ರತಿಷ್ಠಿತ ಶಾಲಾ ಆವರಣದಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ಅದೇ ಶಾಲೆಯ ಕಿರಿಯ ತರಗತಿಯಲ್ಲಿ ಓದುತ್ತಿದ್ದ 12 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ನಂತರ ಈ ಘಟನೆಯ ಬಗ್ಗೆ ತಿಳಿದ ಶಾಲೆಯ ಪ್ರಾಂಶುಪಾಲರು ಬಹೋದಾಪುರ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.

Rape Case

ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಅಪ್ರಾಪ್ತ ವಯಸ್ಸಿನವರಾದ ಕಾರಣ ವಿಶೇಷ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಗ್ವಾಲಿಯರ್ ಎಎಸ್‍ಪಿ ನಿರಂಜನ್ ಶರ್ಮಾ, “ಗ್ವಾಲಿಯರ್ನ ಪ್ರತಿಷ್ಠಿತ ಶಾಲೆಯೊಂದರ ಪ್ರಾಂಶುಪಾಲರ ಗಮನಕ್ಕೆ ಬಂದಿದ್ದು, ಶಾಲೆಯ ವಿದ್ಯಾರ್ಥಿಯೊಬ್ಬ ಶಾಲೆಯ ಆವರಣದಲ್ಲಿ ಕಿರಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಶಾಲಾ ಪ್ರಾಂಶುಪಾಲರು ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ” ಎಂದು ತಿಳಿಸಿದ್ದಾರೆ.

ವರದಿ ಪ್ರಕಾರ, ಘಟನೆ ನಡೆದ ದಿನ, ಜುಲೈ 13ರಂದು ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಅನಾರೋಗ್ಯದ ಕಾರಣ ಶಾಲೆಯ ಆರೋಗ್ಯ ಕೇಂದ್ರಕ್ಕೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದರು. ಇದರ ನಂತರ ಆರೋಪಿ ವಿದ್ಯಾರ್ಥಿ, ವಿದ್ಯಾರ್ಥಿನಿಯನ್ನು ಶೌಚಾಲಯಕ್ಕೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ, ಸಂತ್ರಸ್ತೆ ಘಟನೆಯ ಬಗ್ಗೆ ಅಲ್ಲಿದ್ದ ನರ್ಸ್‍ಗೆ ಮಾಹಿತಿ ನೀಡಿದಳು. ಬಳಿಕ ಈ ವಿಷಯವು ಶಾಲಾ ಅಧಿಕಾರಿಗಳ ಗಮನಕ್ಕೆ ತಂದ ಕಾರಣ , ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Continue Reading

ಕ್ರೈಂ

Gauri Lankesh Murder: ಗೌರಿ ಲಂಕೇಶ್‌ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ಜಾಮೀನು

Gauri Lankesh Murder: ಇವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕಲಬುರ್ಗಿ ಪೀಠದ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಕಳೆದ 6 ವರ್ಷಗಳಿಂದ ಆರೋಪಿಗಳು ಜೈಲಿನಲ್ಲಿದ್ದಾರೆ. ವಿಚಾರಣೆ ಮುಗಿಯದೇ ದೀರ್ಘ ಕಾಲ‌ ಜೈಲಿನಲ್ಲಿಡುವಂತಿಲ್ಲವೆಂದು ತೀರ್ಪು ಇದೆ.

VISTARANEWS.COM


on

Gauri Lankesh murder
Koo

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ (Journalist Gauri Lankesh) ಪ್ರಕರಣದ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ (Karnataka High Court) ಮಂಗಳವಾರ ಜಾಮೀನು (Bail) ಮಂಜೂರು ಮಾಡಿದೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಅಮಿತ್‌ ದಿಗ್ವೇಕರ್‌ ಅಲಿಯಾಸ್‌ ಅಮಿತ್‌ ಅಲಿಯಾಸ್‌ ಪ್ರದೀಪ್‌ ಮಹಾಜನ್‌, ಏಳನೇ ಆರೋಪಿ ಸುರೇಶ್‌ ಎಚ್‌.ಎಲ್‌ ಅಲಿಯಾಸ್‌ ಟೀಚರ್‌ ಮತ್ತು 17ನೇ ಆರೋಪಿ ಕೆ.ಟಿ ನವೀನ್‌ ಕುಮಾರ್‌ ಅಲಿಯಾಸ್‌ ನವೀನ್‌ಗೆ ಜಾಮೀನು ದೊರೆತಿದೆ.

ಇವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕಲಬುರ್ಗಿ ಪೀಠದ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಕಳೆದ 6 ವರ್ಷಗಳಿಂದ ಆರೋಪಿಗಳು ಜೈಲಿನಲ್ಲಿದ್ದಾರೆ. ವಿಚಾರಣೆ ಮುಗಿಯದೇ ದೀರ್ಘ ಕಾಲ‌ ಜೈಲಿನಲ್ಲಿಡುವಂತಿಲ್ಲವೆಂದು ತೀರ್ಪು ಇದೆ. ಹೀಗಾಗಿ ಷರತ್ತುಬದ್ಧ ಜಾಮೀನು ನೀಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಆರೋಪಿಗಳ ಪರ ನ್ಯಾಯವಾದಿಗಳಾದ ಅರುಣ್ ಶ್ಯಾಮ್, ಮಧುಕರ್ ದೇಶಪಾಂಡೆ, ಬಸವರಾಜ ಸಪ್ಪಣ್ಣವರ್ ವಾದಿಸಿದ್ದರು.

11ನೇ ಆರೋಪಿ ಮೋಹನ್‌ ನಾಯಕ್‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ತಮಗೂ ಜಾಮೀನು ಮಂಜೂರು ಮಾಡಬೇಕು ಎಂಬುದು ಎಲ್ಲಾ ಅರ್ಜಿದಾರರ ವಾದವಾಗಿತ್ತು. ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಪ್ರಾಸಿಕ್ಯೂಷನ್‌ “ಮೋಹನ್‌ ನಾಯಕ್‌ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನ ಬೇರೊಂದು ಪೀಠವು ತಿರಸ್ಕರಿಸಿದ್ದು, ಕೊಲೆ, ಪಿತೂರಿಯಂಥ ಗಂಭೀರ ಆರೋಪಗಳಿರುವಾಗ ಜಾಮೀನು ನೀಡಲಾಗದು ಎಂದಿದೆ. ಇಡೀ ಪ್ರಕರಣದಲ್ಲಿ ಜಾಮೀನು ಪಡೆದಿರುವ ಏಕೈಕ ಮತ್ತು ಮೊದಲ ಆರೋಪಿ ಮೋಹನ್‌ ನಾಯಕ್‌. ಆತನ ಜಾಮೀನು ಆದೇಶವನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅದು ವಿಚಾರಣೆಗೆ ಬಾಕಿಯಿದೆ” ಎಂದಿತ್ತು.

ಸಂಚಲನ ಮೂಡಿಸಿದ್ದ ಗೌರಿ ಕೊಲೆ

ಲಂಕೇಶ್‌ ಪತ್ರಿಕೆಯ ಸಂಪಾದಕರಾಗಿದ್ದ ಗೌರಿ ಲಂಕೇಶ್‌ ಅವರನ್ನು 2017ರ ಸೆಪ್ಟೆಂಬರ್‌ 5ರಂದು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೆ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪ ಗಣೇಶ್ ಮಿಸ್ಕಿನ್ ಮೇಲೆ ಇದೆ.

ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್‌ ಪಾಟೀಲ್‌, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಮತ್ತು ಹೃಶಿಕೇಶ್ ದಿಯೋದಿಕರ್‌ ಪ್ರಕರಣದ ಆರೋಪಿಗಳಾಗಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯಿದೆಯ ಸೆಕ್ಷನ್‌ಗಳಾದ 25(1), 25(1B), 27(1) ಮತ್ತು ಕೋಕಾ ಕಾಯಿದೆಯ ಸೆಕ್ಷನ್‌ಗಳಾದ 3(1)(I), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Kalaburagi News : ಕಲಬುರಗಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ನದಿಗೆ ಹಾರಿ ಯುವಕ-ಯುವತಿ ಆತ್ಮಹತ್ಯೆ

Continue Reading
Advertisement
BMTC staff commits suicide at headquarters
ಬೆಂಗಳೂರು16 mins ago

BMTC staff : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ

ಪ್ರಮುಖ ಸುದ್ದಿ22 mins ago

Uttara Kannada Rain: ಭಾರಿ ಮಳೆಗೆ ತತ್ತರಿಸಿದ ಉತ್ತರ ಕನ್ನಡ; ಭೂಕುಸಿತಕ್ಕೆ 11 ಸಾವು, ರಸ್ತೆಗಳೇ ಮಾಯ, ತೋಟ ಗದ್ದೆ ಮುಳುಗಡೆ

Pooja Khedkar
ಪ್ರಮುಖ ಸುದ್ದಿ22 mins ago

Pooja Khedkar: ಐಎಎಸ್‌ಗಾಗಿ ನಕಲಿ ಜಾತಿ, ಕಡಿಮೆ ವಯಸ್ಸು, ದರ್ಪ; ಪೂಜಾ ಖೇಡ್ಕರ್‌ ಕಳ್ಳಾಟ ಒಂದೆರಡಲ್ಲ!

Viral Video
Latest28 mins ago

Viral Video : ಡ್ಯಾನ್ಸ್‌ ಆಯ್ತು, ಹೊಡೆದಾಟವಾಯ್ತು, ಈಗ ಹುಡುಗಿಯರ ಮೇಕಪ್‌ಗೂ ಸಾಕ್ಷಿಯಾಯ್ತು ದೆಹಲಿ ಮೆಟ್ರೊ! ವಿಡಿಯೊ ನೋಡಿ

Rajnath Singh
ದೇಶ32 mins ago

Kashmir Encounter: ಸೇನಾ ಮುಖ್ಯಸ್ಥರ ಜೊತೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಮಾತುಕತೆ; ಸೇನೆಗೆ ಸಂಪೂರ್ಣ ಅಧಿಕಾರ

Model Arrest
Latest38 mins ago

Model Arrest: ತನ್ನ ಫಾಲೋವರ್ಸ್‌ಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಖ್ಯಾತ ಮಾಡೆಲ್‌ಗೆ ಜೈಲು ಶಿಕ್ಷೆ!

Manorathangal Trailer
ಸಿನಿಮಾ44 mins ago

Manorathangal Trailer: ಗಮನ ಸೆಳೆದ ʼಮನೋರಥಂಗಳ್‌ʼ ಟ್ರೈಲರ್‌; 8 ನಿರ್ದೇಶಕರ 9 ಎಪಿಸೋಡ್‌ನಲ್ಲಿ ಸ್ಟಾರ್‌ಗಳ ಸಮಾಗಮ

CM Siddaramaiah
ಕರ್ನಾಟಕ50 mins ago

CM Siddaramaiah: ಆಸ್ತಿ ಬಗ್ಗೆ ತಪ್ಪು ಮಾಹಿತಿ; ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಮತ್ತೆರಡು ದೂರು

Viral News
Latest1 hour ago

Viral News: ಬಾಸ್‌ ಜತೆ ಚಕ್ಕಂದವಾಡುತ್ತಿದ್ದ ಕಿಲಾಡಿ ಪತ್ನಿ; ಡ್ರೋನ್‌ ಬಳಸಿ ಪತ್ತೆ ಹಚ್ಚಿದ ಚಾಲಾಕಿ ಗಂಡ!

Rishabh Pant
ಕ್ರಿಕೆಟ್1 hour ago

Rishabh Pant: ಸಹ ಆಟಗಾರ ಖಲೀಲ್​ ಅಹ್ಮದ್​ರನ್ನು ಸ್ವಿಮ್ಮಿಂಗ್ ಪೂಲ್‌​ಗೆ ತಳ್ಳಿ ಹಾಕಿದ ಪಂತ್​; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ5 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ23 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌