Urfi Javed: ಮತ್ತೆ ಕುಡಿದು ತೇಲಾಡಿದ ಉರ್ಫಿ ಜಾವೇದ್; ವಿಡಿಯೊ ವೈರಲ್‌! - Vistara News

ವೈರಲ್ ನ್ಯೂಸ್

Urfi Javed: ಮತ್ತೆ ಕುಡಿದು ತೇಲಾಡಿದ ಉರ್ಫಿ ಜಾವೇದ್; ವಿಡಿಯೊ ವೈರಲ್‌!

Urfi Javed: ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು.

VISTARANEWS.COM


on

Urfi Javed Steps Out Drunk For Third Time In A Month
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟಿ ಉರ್ಫಿ ಜಾವೇದ್ (Urfi Javed) ಮತ್ತೆ ಕುಡಿದು ತೇಲಾಡಿರುವ ವಿಡಿಯೊ ವೈರಲ್‌ ಆಗಿದೆ. ಮೂರನೇ ಬಾರಿಗೆ ಉರ್ಫಿ ಈ ರೀತಿ ಕಂಡು ಬಂದಿದ್ದಾರೆ. ಕಾರಿನ ಬಳಿ ಹೋಗಲಾರದೇ ಸ್ನೇಹಿತರ ಸಹಾಯದಿಂದ ನಟಿ ಹೋಗುವುದು ಕಂಡು ಬಂತು. ಹಳದಿ ಬಣ್ಣದ ಮಿನಿ ಡ್ರೆಸ್ ಧರಿಸಿದ್ದರು ಉರ್ಫಿ.

ಪಬ್‌ನಿಂದ ಹೊರಬಂದ ತಕ್ಷಣ, ಪಾಪರಾಜಿಗಳು ಮತ್ತು ಸ್ಥಳೀಯರು ಉರ್ಫಿಯನ್ನು ಗುಂಪುಗೂಡಿದರು. ಕಾರಿನವರೆಗೆ ನಡೆಯಲು ಪ್ರಯಾಸಪಡುತ್ತಿದ್ದಾಗ, ಅವರ ಸಹೋದರಿ ಉರ್ಫಿಯನ್ನು ಬಿಗಿಯಾಗಿ ಹಿಡಿದುಕೊಂಡು ಜನರಿಗೆ ದಾರಿ ಮಾಡಿಕೊಡುವಂತೆ ಕೇಳುತ್ತಿದ್ದರು. ʻತುಂಬ ಕುಡಿದ್ದಿದ್ದೇನೆʼʼಎಂದು ಉರ್ಫಿ ಕೂಡ ಹೋಗಲು ದಾರಿ ಮಾಡಿಕೊಂಡಿ ಎಂದು ವಿನಂತಿಸಿದ್ದಾರೆ.

ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇಂಟರ್‌ನೆಟ್‌ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿತ್ತು.

Urfi Javed: ಉರ್ಫಿ ಜಾವೇದ್‌ ಫುಲ್‌ ಟೈಟ್‌; ಸ್ನೇಹಿತೆ ಪಟ್ಟ ಹರಸಾಹಸ ಅಷ್ಟಿಷ್ಟಲ್ಲ!ಇದನ್ನೂ ಓದಿ:

ಬಾಲಿವುಡ್‌ ಕಲಾವಿದರಾದ ತುಷಾರ್ ಕಪೂರ್ ಮತ್ತು ಮೌನಿ ರಾಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಎಂದರೆ ಇದು ಉರ್ಫಿ ಜಾವೇದ್‌ ಅಭಿನಯದ ಮೊದಲ ಬಾಲಿವುಡ್‌ ಚಿತ್ರ. ಬಿಗ್‌ಬಾಸ್‌ ರಿಯಾಲಿಟಿ ಶೋದ ಮೂಲಕ ಗಮನ ಸೆಳೆದಿದ್ದ ಅವರು ಸಿನಿಮಾದಲ್ಲಿ ಯಾವ ರೀತಿ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಮೂಡಿತ್ತು. ಮಾತ್ರವಲ್ಲ ಅವರು ಸ್ಪ್ಲಿಟ್‌ವಿಲ್ಲಾ ಎಕ್ಸ್ 5 (Splitsvilla X5) ಶೋದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ನೋಡ ನೋಡ್ತಿದ್ದಂತೆ ಮೂರನೇ ಮಹಡಿಯಿಂದ ಬಿದ್ದ ಮಹಿಳೆ; ಶಾಕಿಂಗ್‌ ವಿಡಿಯೋ ವೈರಲ್‌

Viral Video: ವಿಕಾಸ್‌ ನಾಕಾ ಪ್ರದೇಶದಲ್ಲಿರುವ ಗ್ಲೋಬ್‌ ಸ್ಟೇಟ್‌ ಎಂಬ ಕಟ್ಟಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಕಟ್ಟಡದಲ್ಲಿರುವ ಆಫೀಸ್‌ವೊಂದರಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುವ ಗುಡಿಯಾ ದೇವಿ, ಮೂರನೇ ಮಹಡಿಯಲ್ಲಿ ಬಾಲ್ಕನಿಯ ಬಡಿಯಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದಳು. ಆಗ ಅಲ್ಲಿಗೆ ಬಂದ ಆಕೆ ಸಹೋದ್ಯೋಗಿ ಬಂಟಿ ಆಕೆಯ ಜೊತೆ ಮಸ್ತಿ ಮಾಡುತ್ತಿದ್ದ. ತಕ್ಷಣ ಆತ ತನ್ನ ತೋಳನ್ನು ಆಕೆಯ ಭುಜದ ಮೇಲೆ ಇಟ್ಟಿದ್ದಾನೆ. ಇದರಿಂದ ಆಯ ತಪ್ಪಿದ ಗುಡಿಯಾ ಮೇಲಿನಿಂದ ಬಿದ್ದಿದ್ದಾಳೆ. ಇದೇ ವೇಳೆ ಬಂಟಿ ಕೂಡ ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬೀಳುತ್ತಿದ್ದ. ಆದರೆ ಅದೃಷ್ಟವಶಾತ್‌ ಆತ ಪಾರಾಗಿದ್ದಾನೆ.

VISTARANEWS.COM


on

Viral Video
Koo

ಮುಂಬೈ: ಸ್ನೇಹಿತರೊಂದಿಗೆ ಮೋಜಿನಲ್ಲಿ ತೊಡಗಿದ್ದ ಮಹಿಳೆಯೊಬ್ಬಳು ಅಚಾನಕ್ಕಾಗಿ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರ(Maharashtra)ದಲ್ಲಿ ನಡೆದಿದೆ. ಮುಂಬೈಯ ದೋಂಬಿವಿಲ್‌ನ ವಿಕಾಸ್‌ ನಾಕಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತ ದುರ್ದೈವಿಯನ್ನು ಗುಡಿಯಾ ದೇವಿ ಎಂದು ಗುರುತಿಸಲಾಗಿದೆ. ಆಕೆಯ ಜೊತೆಗಿದ್ದ ವ್ಯಕ್ತಿಯೂ ಬೀಳಲಿದ್ದ. ಆದರೆ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಇನ್ನು ಘಟನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದೆ.

ವಿಕಾಸ್‌ ನಾಕಾ ಪ್ರದೇಶದಲ್ಲಿರುವ ಗ್ಲೋಬ್‌ ಸ್ಟೇಟ್‌ ಎಂಬ ಕಟ್ಟಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಕಟ್ಟಡದಲ್ಲಿರುವ ಆಫೀಸ್‌ವೊಂದರಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುವ ಗುಡಿಯಾ ದೇವಿ, ಮೂರನೇ ಮಹಡಿಯಲ್ಲಿ ಬಾಲ್ಕನಿಯ ಬಡಿಯಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದಳು. ಆಗ ಅಲ್ಲಿಗೆ ಬಂದ ಆಕೆ ಸಹೋದ್ಯೋಗಿ ಬಂಟಿ ಆಕೆಯ ಜೊತೆ ಮಸ್ತಿ ಮಾಡುತ್ತಿದ್ದ. ತಕ್ಷಣ ಆತ ತನ್ನ ತೋಳನ್ನು ಆಕೆಯ ಭುಜದ ಮೇಲೆ ಇಟ್ಟಿದ್ದಾನೆ. ಇದರಿಂದ ಆಯ ತಪ್ಪಿದ ಗುಡಿಯಾ ಮೇಲಿನಿಂದ ಬಿದ್ದಿದ್ದಾಳೆ. ಇದೇ ವೇಳೆ ಬಂಟಿ ಕೂಡ ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬೀಳುತ್ತಿದ್ದ. ಆದರೆ ಅದೃಷ್ಟವಶಾತ್‌ ಆತ ಪಾರಾಗಿದ್ದಾನೆ.

ಇನ್ನು ನೆಲಕ್ಕೆ ಬೀಳುತ್ತಿದ್ದಂತೆ ಗುಡಿಯಾ ತಲೆಗೆ ಗಂಭೀರವಾದ ಏಟು ಬಿದ್ದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಸ್ಥಳಕ್ಕೆ ಮನ್ಪದಾ ಪೊಲೀಸರು ದೌಡಾಯಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇಂತಹದ್ದೇ ಒಂದು ಘಟನೆ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು. ಮನೆಯೊಳಗಿದ್ದ ಕಿಟಕಿಯನ್ನು ಕ್ಲೀನ್‌ ಮಾಡುವಾಗ ಮಹಿಳೆಯೊಬ್ಬರ ಕಾಲು ಜಾರಿದ್ದು ಆಯತಪ್ಪಿ 5ನೇ ಮಹಡಿಯಿಂದ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಖುಷ್ಬು ಅಶೀಷ್ ತ್ರಿವೇದಿ (31) ಎಂಬಾಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಡುಗೋಡಿ ಸಮೀಪದ ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟ್‌ಮೆಂಟ್‌ನಲ್ಲಿ ಈ ದುರ್ಘಟನೆ ಸಂಭವಿಸಿತ್ತು.

ಖುಷ್ಬು ಅವರು ಮನೆಯೊಳಗಿದ್ದ ಟೇಬಲ್‌ ಮೇಲೆ ನಿಂತು ಕಿಟಕಿ ಬಳಿಯಿದ್ದ ಧೂಳನ್ನು ಸ್ವಚ್ಛಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಒಮ್ಮೆ ಕಾಲು ಜಾರಿದೆ ಅಷ್ಟೇ ಅದೇ ಕಿಟಕಿಯಿಂದ ಕೆಳಗೆ ಬಿದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ಆದರೆ ಆದಾಗಲೇ ಖಷ್ಬು ಮೃತಪಟ್ಟಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಘಟನೆಗೆ ಕಿಟಕಿಗೆ ಗ್ರಿಲ್ ಅಳವಡಿಸದೇ ಇರುವುದೇ ಕಾರಣ ಎಂದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನು ಈ ಸಂಬಂಧ ಸಾಮಾಜಿಕ ಹೋರಾಟಗಾರ ಸುಭಾಷ್‌ ಎಂಬುವವರು ದೂರು ದಾಖಲಿಸಿದ್ದಾರೆ. ಕಾಡುಗೋಡಿ ದೊಡ್ಡಬನಹಳ್ಳಿ ರಸ್ತೆಯಲ್ಲಿರುವ ಬಿ.ಡಿ.ಎ ವಿಧ್ಯಾಗಿರಿ ವಸತಿ ಸಮುಚ್ಚಯದಲ್ಲಿ 18 ಮಹಡಿಗಳಲ್ಲಿ ಸುಮಾರು 750 ಪ್ಲಾಟ್‌ಗಳನ್ನು ಹೊಂದಿದೆ. ಆದರೆ ಈ ಅಪಾರ್ಟ್‌ಮೆಂಟ್‌ನಲ್ಲಿ ತುರ್ತು ನಿರ್ಗಮನ, ಪ್ರಥಮ ಚಿಕಿತ್ಸೆ, ಫೈರ್ ಸೇಫ್ಟಿ, ಸೇಫ್ಟಿ ಮೇಸ್ ಇತ್ಯಾದಿ ಯಾವುದೇ ಸುರಕ್ಷತಾ ಕ್ರಮಗಳು ಇಲ್ಲದೇ ಇದ್ದರೂ, ಸಾರ್ವಜನಿಕರಿಗೆ ವಾಸ ಮಾಡಲು ಹಂಚಿಕೆ ಮಾಡಿದ್ದಾರೆ.

ಇತ್ತೀಚೆಗೆ ನವ ವಿವಾಹಿತೆ ಖುಷ್ಬು ಎಂಬುವವರು 5 ನೇ ಮಹಡಿಯಿಂದ ಬಿದ್ದು ಮೃತ ಪಟ್ಟಿದ್ದಾರೆ. ಇದಕ್ಕೆಲ್ಲಾ ವಿಧ್ಯಾಗಿರಿ ವಸತಿ ಸಮುಚ್ಚಯದ ಅಸೋಶಿಯೇಟ್ ನಾರಾಯಣಸ್ವಾಮಿ, ಅಧಿಕಾರಿಗಳಾದ ಎ.ಇ.ಇ ಉದಯ ಕುಮಾರ್, ಇ.ಇಮೋಹನ್, ಎ.ಇ ಸುನೀಲ್‌ ನೇರ ಹೊಣೆ ಆಗಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ:Urfi Javed: ಮತ್ತೆ ಕುಡಿದು ತೇಲಾಡಿದ ಉರ್ಫಿ ಜಾವೇದ್; ವಿಡಿಯೊ ವೈರಲ್‌!

Continue Reading

ಪ್ರಮುಖ ಸುದ್ದಿ

Viral News : ಕುವೈಟ್​ನಲ್ಲಿ ಈ ಚಪ್ಪಲಿಗೆ 1 ಲಕ್ಷ ರೂಪಾಯಿಯಂತೆ; ನಮ್ಮಲ್ಲಿ ಇದು ಬಾತ್​ರೂಮ್​ಗೆ ಹೋಗುವ ಚಪ್ಪಲಿ ಎಂದ ನೆಟ್ಟಿಗರು!

Viral News ಕೆಲವರು ಉಡುಪಿಗೆ ತಕ್ಕ ಹಾಗೇ ಚಪ್ಪಲಿ ಹಾಕುತ್ತಾರೆ. ಇನ್ನು ಕೆಲವರು ತಮ್ಮ ಇಡೀ ಜೀವಮಾನವನ್ನು ಹರಿದ ಚಪ್ಪಲಿಯಲ್ಲಿಯೇ ಕಳೆಯುತ್ತಾರೆ.ಆದರೆ ಕುವೈಟ್‌ನ ಸ್ಟೋರ್‌ ಒಂದರಲ್ಲಿ ಸುಮಾರು 4,500 ರಿಯಾಲ್ (1 ಲಕ್ಷ ರೂ.) ಗೆ ಚಪ್ಪಲಿಗಳನ್ನು ಮಾರಾಟ ಮಾಡುತ್ತಿರುವ ಸುದ್ದಿಯೊಂದು ವೈರಲ್ ಆಗಿದೆ.”4500 ರಿಯಾಲ್ ಬೆಲೆಗೆ ಇತ್ತೀಚಿನ ಫ್ಯಾಷನ್ ಜನೌಬಾ” ಎಂದು ಶೀರ್ಷಿಕೆ ನೀಡಲಾಗಿದೆ. ಜನರು ಸೋಶಿಯಲ್ ಮೀಡಿಯಾದಲ್ಲಿ ಇದರ ಬೆಲೆಯ ಬಗ್ಗೆ ಟೀಕಿಸಿದ್ದಾರೆ.

VISTARANEWS.COM


on

Viral News
Koo

ಕುವೈಟ್ : ದಿನ ಬಳಕೆಯ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಇದರಿಂದ ಇಂದಿನ ಕಾಲದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಜೀವನ ನಡೆಸುವುದೇ ಒಂದು ಸವಾಲಿನ ಕೆಲಸವಾಗಿದೆ. ಕೆಲವರು ವರ್ಷಗಳ ಹಿಂದೆ 100 ರೂಪಾಯಿ ಇದ್ದ ಸಾಮಾನ್ಯವಾಗಿ ಚಪ್ಪಲೆಯ ಬೆಲೆಯೂ 300ರಿಂದ400 ಇರುತ್ತದೆ. ಇನ್ನು ಫಂಕ್ಷನ್‌ಗಳಿಗೆ ಬಳಸುವಂತಹ ಚಪ್ಪಲಿಗಳ ಬೆಲೆ ಕೇಳುವ ಹಾಗಿಲ್ಲ. ಅದೇನೇ ಇದ್ದರೂ ಒಂದು ಚಪ್ಪಲಿಯ ಬೆಲೆ ಒಂದು ಲಕ್ಷ ರೂಪಾಯಿ ಇರಲು ಸಾಧ್ಯವೇ. ಅದೂ ದಶಕಗಳ ಹಿಂದೆ ಜನರು ಧರಿಸುತ್ತಿದ್ದ ಹವಾಯಿ ರೀತಿಯ ಚಪ್ಪಲಿಗೆ ಒಂದು ಲಕ್ಷ ರೂಪಾಯಿ ಇರಬಹುದೇ? ಖಂಡಿತಾ ಇದೆ. ಆದರೆ ಅದು ನಮ್ಮ ದೇಶದಲ್ಲಿ ಅಲ್ಲ. ಕುವೈಟ್‌ನಲ್ಲಿ. ಆದರೆ, ಚಪ್ಪಲಿಯ ಬೆಲೆ ವೈರಲ್ (Viral News) ಆಗುತ್ತಿದ್ದಂತೆ ಅದರ ಕುರಿತು ಬಗೆಬಗೆಯ ಕಾಮೆಂಟ್​ಗಳೂ ಶೇರ್ ಆಗುತ್ತಿವೆ. ಬಾತ್​ರೂಮ್​ಗೆ ಹಾಕುವಂಥ ಚಪ್ಪಲಿಗೆ ಇಷ್ಟೊಂದು ರೇಟಾ ಎಂಬುದೇ ಜನರ ಮೊದಲ ಪ್ರಶ್ನೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್‌ನಲ್ಲಿ ಕುವೈಟ್‌ನ ಸ್ಟೋರ್ ಒಂದರಲ್ಲಿ ಸುಮಾರು 4,500 ರಿಯಾಲ್ (1 ಲಕ್ಷ ರೂ.) ಗೆ ಚಪ್ಪಲಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಹಾಗೇ ಇದಕ್ಕೆ “4500 ರಿಯಾಲ್ ಬೆಲೆಗೆ ಇತ್ತೀಚಿನ ಫ್ಯಾಷನ್ ಜನೌಬಾ” ಎಂದು ಶೀರ್ಷಿಕೆ ನೀಡಲಾಗಿದೆ. ಇದು ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡಿದೆ. ಹಾಗಾಗಿ ಜನರು ಸೋಶಿಯಲ್‌ ಮೀಡಿಯಾದಲ್ಲಿ ಇದರ ಬೆಲೆಯ ಬಗ್ಗೆ ಬಗೆಬಗೆಯ ಕಾಮೆಂಟ್​ಗಳನ್ನು ಹಾಕಿದ್ದಾರೆ.

ಒಬ್ಬರು ಇದು ಶ್ರೀಮಂತರಿಗಾಗಿ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರೆ, ಇನ್ನೊಬ್ಬರು “4500 ರಿಯಾಲ್ ಚಪ್ಪಲಿಗಳನ್ನು ಒಮ್ಮೆ ಖರೀದಿಸಿದರೆ ಇಡೀ ಜೀವನದುದ್ದಕ್ಕೂ ಶೌಚಾಲಯಕ್ಕೆ ಹೋಗಲು ಅದನ್ನೇ ಬಳಸಬೇಕಾಗುತ್ತದೆ ಎಂದು ಬರೆದಿದ್ದಾರೆ. ಹಾಗೇ ಮತ್ತೊಬ್ಬರು “ಇದು ನಮ್ಮ ಕುಟುಂಬದಲ್ಲಿ ಬಾತ್‍ರೂಮ್‍ಗೆ ಹೋಗಲು ಬಳಸುವ ಚಪ್ಪಲಿಗಳು” ಎಂದು ಬರೆದಿದ್ದಾರೆ. ಭಾರತದಲ್ಲಿ ನಿಮಗೆ ಈ ಚಪ್ಪಲಿಗಳು 60 ರೂಪಾಯಿಗೆ ಸಿಗುತ್ತದೆ ” ಎಂದು ನಾಲ್ಕನೇ ಬಳಕೆದಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಚಾಕೋಲೇಟ್ ತಿನ್ನುವ ಆಸೆಯಾಗಿ ಅಂಗಡಿಗೆ ಹೋಗಿದ್ದ ಬಾಲಕ ಶವವಾಗಿ ಮನೆಗೆ ಬಂದ; ಆಗಿದ್ದೇನು? ವಿಡಿಯೊ ನೋಡಿ

ಇನ್ನೊಬ್ಬರು “ಭಾರತದಲ್ಲಿ ನಾವು ಇದನ್ನು ಹೆಚ್ಚಾಗಿ ಶೌಚಾಲಯಕ್ಕೆ ಹೋಗಲು ಬಳಸುತ್ತೇವೆ” ಎಂದು ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ “ಇದು ನಿಜವಾಗಿಯೂ ತಾಯಂದಿರ ದಿನದ ಅತ್ಯುತ್ತಮ ಉಡುಗೊರೆಯಾಗಿದೆ. ಯಾಕೆಂದರೆ ಎಲ್ಲಾ ತಾಯಂದಿರಿಗೆ ಚಪ್ಪಲಿ ಅತ್ಯುತ್ತಮ ಆಯುಧ” ಎಂದ ಬರೆದುಕೊಂಡಿದ್ದಾರೆ “ಭಾರತದ ಕೆಲವು ಸ್ಥಳಗಳಲ್ಲಿ ಈ ಚಪ್ಪಲಿಗಳು ಕೇವಲ ₹ 30 ಕ್ಕೆ ಪಡೆಯಬಹುದು” ಎಂದು ಒಬ್ಬರು ಹೇಳಿದರೆ, ಈ ಚಪ್ಪಲಿಗಳಿಗೆ ಹವಾಯಿ ಚಪ್ಪಲಿಗಳೆಂದು ಕರೆಯುತ್ತಾರೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

Continue Reading

ಕ್ರೀಡೆ

Mohammed Shami: ಎನ್​ಸಿಎಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ ಶಮಿ

Mohammed Shami: ವಿಶ್ವಕಪ್​ ಬಳಿಕ ಶಮಿ ಇದುವರೆಗೂ ಯಾವುದೇ ಕ್ರಿಕೆಟ್​ ಪಂದ್ಯ ಆಡಿಲ್ಲ. ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ಶಮಿ ಈಗಾಗಲೇ ಬೌಲಿಂಗ್​ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಶೀಘ್ರದಲ್ಲೇ ಅವರು ಭಾರತ ತಂಡ ಸೇರುವಂತಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

VISTARANEWS.COM


on

Mohammed Shami
Koo

ಲಕ್ನೋ: ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಭಾರತ ಕ್ರಿಕೆಟ್​ ತಂಡದ ಪ್ರಧಾನ​ ವೇಗಿ ಮೊಹಮ್ಮದ್ ಶಮಿ(Mohammed Shami) ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ)ಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ್ದು, ಈ ವಿಡಿಯೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಎನ್​ಸಿಎಯಲ್ಲಿ(NCA) ಕಠಿಣ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಶಮಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಶಮಿ ಬೌಲಿಂಗ್​ ನಡೆಸುತ್ತಿರುವ ಮತ್ತು ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ವಿಕೆಟ್​ ಉರುಳಿಸಿದ ವಿಡಿಯೊವನ್ನು ಕೂಡ ಎಡಿಟ್​ ಮಾಡಿ ಹಾಕಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಶಮಿ ಇದೇ ತಿಂಗಳು ಲಂಕಾ ವಿರುದ್ಧ ಆಡಲಿರುವ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆಯಾಗುತ್ತಾರೆ ಎನ್ನಲಾಗಿತ್ತು. ಆದರೆ ಶಮಿ ಇನ್ನೂ ಫಿಟ್​ನೆಸ್​ ಕ್ಲೀಯರೆನ್ಸ್​ ಪಡೆದಿಲ್ಲ. ಹೀಗಾಗಿ ಅವರು ಲಂಕಾ ಸರಣಿಗೆ ಆಯ್ಕೆಯಾಗುವುದು ಅನುಮಾನ.

ಬಾಂಗ್ಲಾ ಸರಣಿಯಲ್ಲಿ ಕಣಕ್ಕೆ?

ಚೇತರಿಕೆಯ ಹಾದಿಯಲ್ಲಿರುವ ಶಮಿ  ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

ವಿಶ್ವಕಪ್​ ಬಳಿಕ ಶಮಿ ಇದುವರೆಗೂ ಯಾವುದೇ ಕ್ರಿಕೆಟ್​ ಪಂದ್ಯ ಆಡಿಲ್ಲ. ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ಶಮಿ ಈಗಾಗಲೇ ಬೌಲಿಂಗ್​ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಶೀಘ್ರದಲ್ಲೇ ಅವರು ಭಾರತ ತಂಡ ಸೇರುವಂತಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಇದನ್ನೂ ಓದಿ IND vs SL: ಲಂಕಾ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಆಯ್ಕೆ ಸಾಧ್ಯತೆ

ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

Continue Reading

Latest

Viral Video: 600 ಲೋಡರ್‌ ಹುದ್ದೆಗಳಿಗೆ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು! ಕಾಲ್ತುಳಿತದ ಸನ್ನಿವೇಶ

Viral Video: ಏರ್ ಇಂಡಿಯಾ ಏರ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್ ಕಂಪನಿಯು 600 ಲೋಡರ್‌ ಹುದ್ದೆಗಳಿಗೆ ಜಾಹೀರಾತು ನೀಡಿತ್ತು. ಆದರೆ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು ಸಂದರ್ಶನಕ್ಕೆ ಆಗಮಿಸಿದ್ದರು. ನೇಮಕಾತಿ ಕಚೇರಿಯ ಹೊರಗೆ ಅನಿಯಂತ್ರಿತ ಪರಿಸ್ಥಿತಿ ಉಂಟಾಗಿತ್ತು.

VISTARANEWS.COM


on

Viral Video
Koo

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟರಮಟ್ಟಿಗೆ ಇದೆ ಎಂದರೆ ಅದಕ್ಕೆ ನಿದರ್ಶನ ಎಂಬಂತೆ ಮುಂಬಯಿಯಲ್ಲಿ ನಡೆದ ಈ ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ. ಏರ್ ಇಂಡಿಯಾ ಏರ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್ ಆಯೋಜಿಸಿದ್ದ ವಾಕ್-ಇನ್ ಸಂದರ್ಶನಕ್ಕಾಗಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಮಂಗಳವಾರ ಮುಂಬೈನ ಕಲಿನಾ ಪ್ರದೇಶದಲ್ಲಿ ಜಮಾಯಿಸಿದಾಗ ಗೊಂದಲದ ಪರಿಸ್ಥಿತಿ ಉಂಟಾಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವಿವಿಧ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ಒಳಗೊಂಡ ‘ಹ್ಯಾಂಡಿಮ್ಯಾನ್’ ಉದ್ಯೋಗಕ್ಕಾಗಿ ಏರ್ ಇಂಡಿಯಾ ಏರ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್ ಕಂಪನಿಯು ಲೋಡರ್‌ ಮತ್ತು ರಿಪೇರಿ ಕೆಲಸ ಮಾಡುವ ಹುದ್ದೆಗಳಿಗೆ ಜಾಹೀರಾತು ನೀಡಿತ್ತು. ಅವರು ತಿಳಿಸಿದ ಖಾಲಿ ಹುದ್ದೆಗಳ ಹೊರತಾಗಿಯೂ, ಹೆಚ್ಚಿನ ಸಂಖ್ಯೆಯ ಅರ್ಜಿದಾರರು ಈ ಸಂದರ್ಶನದಲ್ಲಿ ಭಾಗವಹಿಸಿದ್ದರು. ಕೇವಲ 600 ಲೋಡರ್ ಹುದ್ದೆಗಳಿಗೆ ಸ್ಪರ್ಧಿಸಲು 25,000ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದಿದ್ದರಿಂದ ನೇಮಕಾತಿ ಕಚೇರಿಯ ಹೊರಗೆ ಅನಿಯಂತ್ರಿತ ಪರಿಸ್ಥಿತಿ ಉಂಟಾಗಿತ್ತು. ಈ ಜನಸಮೂಹವನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ ಸಂಘಟಕರು ಅರ್ಜಿದಾರರಿಗೆ ತಮ್ಮ ಸ್ವವಿವರಗಳನ್ನು ಸಲ್ಲಿಸಿ ಇಲ್ಲಿಂದ ಕೂಡಲೇ ಹೊರಗೆ ಹೋಗುವಂತೆ ವಿನಂತಿಸಿಕೊಳ್ಳಬೇಕಾಯಿತು.

ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ರಾಷ್ಟ್ರದ ನಿರುದ್ಯೋಗ ಸಮಸ್ಯೆಗಳ ಸ್ಪಷ್ಟ ಚಿತ್ರಣವೆಂದು ಅನೇಕರು ಟೀಕಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ದೇಶದಲ್ಲಿ ಉದ್ಯೋಗ ಮತ್ತು ಆರ್ಥಿಕ ನೀತಿಗಳನ್ನು ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರ ಹೇಗೆ ನಿರ್ವಹಿಸುತ್ತಿದೆ ಎಂಬುದನ್ನು ಟೀಕಿಸಲು ಈ ಘಟನೆಯನ್ನು ಬಳಸಿಕೊಂಡಿವೆ ಎನ್ನಲಾಗಿದೆ.

ಏರ್ ಇಂಡಿಯಾದ ಅಧಿಕೃತ ಅಧಿಸೂಚನೆಯಲ್ಲಿ ಜುಲೈ 12ರಿಂದ ಜುಲೈ 16ರವರೆಗೆ ವಿವಿಧ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನಗಳನ್ನು ಘೋಷಿಸಿತ್ತು. ಹಾಗೇ ಅವರು ಮತ್ತೊಂದು ಅಧಿಸೂಚನೆ ಹೊರಡಿಸಿದ್ದು, ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಗಡುವನ್ನು ಜುಲೈ 14ರವರೆಗೆ ವಿಸ್ತರಿಸಿತ್ತು. ನೇಮಕಾತಿಯಲ್ಲಿ ಹಿರಿಯ ಗ್ರಾಹಕ ಸೇವಾ ಕಾರ್ಯನಿರ್ವಾಹಕ ಸ್ಥಾನ ಮತ್ತು ಗ್ರಾಹಕ ಸೇವಾ ಕಾರ್ಯನಿರ್ವಾಹಕ ಸ್ಥಾನಗಳನ್ನು ಒಳಗೊಂಡಿದ್ದು, ಕ್ರಮವಾಗಿ 343 ಮತ್ತು 706 ಹುದ್ದೆಗಳು ಖಾಲಿ ಇವೆ. ಒಬಿಸಿ, ಎಸ್‍ಸಿ ಮತ್ತು ಎಸ್‍ಟಿ ಅಭ್ಯರ್ಥಿಗಳಿಗೆ ನಿರ್ದಿಷ್ಟ ಮೀಸಲಾತಿಗಳೊಂದಿಗೆ ಹಿರಿಯ ಹುದ್ದೆಗಳಿಗೆ ಗರಿಷ್ಠ 33 ಮತ್ತು ಸಾಮಾನ್ಯ ಹುದ್ದೆಗಳಿಗೆ 28 ವರ್ಷ ವಯೋಮಿತಿ ಇರುತ್ತದೆ ಎಂಬುದಾಗಿ ತಿಳಿಸಿತ್ತು.

ಇದನ್ನೂ ಓದಿ: ಚಾಕೋಲೇಟ್ ತಿನ್ನುವ ಆಸೆಯಾಗಿ ಅಂಗಡಿಗೆ ಹೋಗಿದ್ದ ಬಾಲಕ ಶವವಾಗಿ ಮನೆಗೆ ಬಂದ; ಆಗಿದ್ದೇನು? ವಿಡಿಯೊ ನೋಡಿ

ಈ ಘಟನೆಯೊಂದೇ ಅಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟು ಕಾಡುತ್ತಿದೆ ಎಂಬುದಕ್ಕೆ ಇತ್ತೀಚೆಗೆ, ಗುಜರಾತ್‍ನ ಭರೂಚ್‍ನಲ್ಲಿ ನಡೆದ ಘಟನೆಯು ಸಾಕ್ಷಿಯಾಗಿದೆ. ಇಲ್ಲಿ ಕೇವಲ 10 ಹೋಟೆಲ್ ಉದ್ಯೋಗ ಸ್ಥಾನಗಳಿಗೆ 1,800 ಅರ್ಜಿದಾರರು ಆಗಮಿಸುತ್ತಿರುವುದನ್ನು ವೀಡಿಯೊಯೊಂದರಲ್ಲಿ ತೋರಿಸಲಾಗಿದೆ. ಒಟ್ಟಾರೆ ಈ ಘಟನೆಗಳನ್ನು ಕಮಡಾಗ ನಿರುದ್ಯೋಗ ಸಮಸ್ಯೆ ದೇಶದಲ್ಲಿ ಜನರನ್ನು ತುಂಬಾ ಕಾಡುತ್ತಿದೆ ಎನ್ನಬಹುದು.

Continue Reading
Advertisement
Amitabh Bachchan holds umbrella for Jaya Bachchan
ಬಾಲಿವುಡ್19 seconds ago

Amitabh Bachchan: ಅಮಿತಾಭ್ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದರೂ ಮುಖ ಊದಿಸಿಕೊಂಡೇ ಇದ್ದ ಜಯಾ ಬಚ್ಚನ್!

Viral Video
ವೈರಲ್ ನ್ಯೂಸ್40 mins ago

Viral Video: ನೋಡ ನೋಡ್ತಿದ್ದಂತೆ ಮೂರನೇ ಮಹಡಿಯಿಂದ ಬಿದ್ದ ಮಹಿಳೆ; ಶಾಕಿಂಗ್‌ ವಿಡಿಯೋ ವೈರಲ್‌

Tauba Tauba
Latest46 mins ago

Tauba Tauba : ಲಂಡನ್‌ ಬೀದಿಯಲ್ಲಿ ‘ತೌಬಾ ತೌಬಾ’ ಹಾಡಿಗೆ ಸಖತ್‌ ಆಗಿ ಸ್ಟೆಪ್ಸ್‌ ಹಾಕಿದ ಬೆಡಗಿಯರು; ವಿಡಿಯೊ ವೈರಲ್

CM Siddaramaiah karnataka jobs reservation
ಪ್ರಮುಖ ಸುದ್ದಿ53 mins ago

Karnataka Jobs Reservation: ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ.75 ಮೀಸಲಾತಿ ಮಾತ್ರ; ಆಡಳಿತ ಹುದ್ದೆಗಳಲ್ಲಿ ಶೇ.50; ಉದ್ಯಮಿಗಳಿಗೆ ಬೆಚ್ಚಿತೇ ಸರ್ಕಾರ?

Kannada New Movie Baila Baila Video Song Hiranya out
ಸ್ಯಾಂಡಲ್ ವುಡ್1 hour ago

Kannada New Movie: ರಾಜವರ್ಧನ್ ‘ಹಿರಣ್ಯ’ ಸಿನಿಮಾದಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್‌ ಮಾಡಿದ ದಿವ್ಯಾ ಸುರೇಶ್!

Usha Chilukuri Vance
ವಿದೇಶ1 hour ago

Usha Chilukuri Vance: ಟ್ರಂಪ್ ಅವರ ಉಪಾಧ್ಯಕ್ಷ ಅಭ್ಯರ್ಥಿಯ ಪತ್ನಿ ಭಾರತೀಯ ಸಂಸ್ಕೃತಿಯ ಪ್ರತಿಪಾದಕಿ!

Viral News
ಪ್ರಮುಖ ಸುದ್ದಿ1 hour ago

Viral News : ಕುವೈಟ್​ನಲ್ಲಿ ಈ ಚಪ್ಪಲಿಗೆ 1 ಲಕ್ಷ ರೂಪಾಯಿಯಂತೆ; ನಮ್ಮಲ್ಲಿ ಇದು ಬಾತ್​ರೂಮ್​ಗೆ ಹೋಗುವ ಚಪ್ಪಲಿ ಎಂದ ನೆಟ್ಟಿಗರು!

Food Poisoning
ದೇಶ1 hour ago

Food Poisoning: ಮೊಹರಂ ಮೆರವಣಿಗೆ ವೇಳೆ ಷರಬತ್ತು ಸೇವಿಸಿ 400 ಮಂದಿ ಅಸ್ವಸ್ಥ

Mohammed Shami
ಕ್ರೀಡೆ1 hour ago

Mohammed Shami: ಎನ್​ಸಿಎಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ ಶಮಿ

gt world mall 3
ಪ್ರಮುಖ ಸುದ್ದಿ1 hour ago

GT World Mall: ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ಸಚಿವರು ಗರಂ; ʼಪಂಚೆ ಧರಿಸಿಯೇ ಸಿದ್ದರಾಮಯ್ಯ 7 ವರ್ಷ ರಾಜ್ಯ ಆಳ್ಲಿಲ್ವಾ?ʼ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌