Yezdi Roadster : ಯೆಜ್ಡಿ ರೋಡ್‌ಸ್ಟರ್ ಜತೆಗೆ ಈ ಹಲವು ಆ್ಯಕ್ಸೆಸರಿಗಳಿರುವ ಟ್ರಯಲ್ ಪ್ಯಾಕ್ ಉಚಿತ - Vistara News

ಆಟೋಮೊಬೈಲ್

Yezdi Roadster : ಯೆಜ್ಡಿ ರೋಡ್‌ಸ್ಟರ್ ಜತೆಗೆ ಈ ಹಲವು ಆ್ಯಕ್ಸೆಸರಿಗಳಿರುವ ಟ್ರಯಲ್ ಪ್ಯಾಕ್ ಉಚಿತ

Yezdi Roadster: ಶಕ್ತಿಶಾಲಿಯಾದ ಆಲ್ಫಾ 2 334ಸಿಸಿ ಎಂಜಿನ್‌ ಹೊಂದಿರುವ ಯೆಜ್ಡಿ ರೋಡ್‌ಸ್ಟರ್, ಆಕ್ಸಲರೇಷನ್ ನಲ್ಲಿ ಹೆಚ್ಚು ವೇಗವಾಗಿದೆ. 29.40ಎನ್ಎಂ ಟಾರ್ಕ್ ಅನ್ನು ಒದಗಿಸುವ ಮೂಲಕ ಸುಗಮ ರೈಡಿಂಗ್ ಮಾಡಲು ಅನುವು ಮಾಡಿ ಕೊಡುತ್ತದೆ. ಈ ಬೈಕ್ 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಅಸಿಸ್ಟ್ ಮತ್ತು ಸ್ಲಿಪ್ ತಂತ್ರಜ್ಞಾನ ಹೊಂದಿದ್ದು, ಬಹಳ ಸುಲಭವಾಗಿ ರೈಡ್ ಮಾಡಬಹುದು.

VISTARANEWS.COM


on

Yezdi Roadster
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜಾವಾ ಯೆಜ್ಡಿ ಮೋಟಾರ್‌ ಸೈಕಲ್ಸ್ ಕಂಪನಿಯು ಇದೀಗ ಯೆಜ್ಡಿ ರೋಡ್ ಸ್ಟರ್ (Yezdi Roadster) ಜೊತೆಗೆ ಅತ್ಯಾಕರ್ಷಕ ಕೊಡುಗೆಯೊಂದನ್ನು ಘೋಷಿಸಿದೆ. ಅದ್ಭುತ ಸಾಮರ್ಥ್ಯ ಮತ್ತು ಧಕ್ಷತೆ ಮೂಲಕ ಮೋಟಾರ್ ಸೈಕಲ್ ಪ್ರಿಯರ ಮನಸ್ಸು ಗೆದ್ದಿರುವ ಯೆಜ್ಡಿ ರೋಡ್‌ಸ್ಟರ್ ಜೊತೆಗೆ ಈಗ ಟ್ರಯಲ್ ಪ್ಯಾಕ್‌ ಕೂಡ ದೊರೆಯಲಿದೆ. ಸೀಮಿತ ಅವಧಿಗೆ ಮಾತ್ರ ದೊರೆಯಲಿರುವ ರೂ. 16,000 ಮೌಲ್ಯದ ಉಚಿತವಾಗಿದೆ. ಈ ಸ್ಟಾಂಡರ್ಡ್ ಆಕ್ಸೆಸರಿ ಮೋಟಾರ್ ಸೈಕಲ್ ಪ್ರಿಯರ ರೈಡಿಂಗ್ ಅನುಭವ ಹೆಚ್ಚಿಸುವ ಜತೆಗೆ ಬೈಕ್ ನ ಆಕರ್ಷಣೆ ಜಾಸ್ತಿ ಮಾಡಲಿದೆ.

ಭಾರತದಲ್ಲಿ ಪ್ರತಿಯೊಂದು ಸೀಸನ್ ಕೂಡ ರೈಡಿಂಗ್ ಸೀಸಸ್​ ಆಗಿರುತ್ತದೆ. ಹಾಗಾಗಿ ರೈಡರ್ ಗಳು ಈ ಬೈಕ್ ಮತ್ತು ಆಕ್ಸೆಸರಿಗಳೊಂದಿಗೆ ಪ್ರಯಾಣ ಮಾಡಬಹುದು. ಹೊಸ ದಾರಿಗಳಲ್ಲಿ ಸಾಗಲು, ಅಡ್ವೆಂಚರ್ ಮಾಡಲು ಇದು ಸೂಕ್ತ ವಾಗಿದೆ. 16,000 ರೂಪಾಯಿ ಮೌಲ್ಯದ ಟ್ರಯಲ್ ಪ್ಯಾಕ್ ಅನ್ನು ಈಗ ಯೆಜ್ಡಿ ರೋಡ್‌ಸ್ಟರ್‌ ಜತೆಗೆ ಹೆಚ್ಚುವರಿ ವೆಚ್ಚವಿಲ್ಲದೆಯೇ ಪಡೆಯಬಹುದಾಗಿದೆ. ಈ ಟ್ರಯಲ್ ಪ್ಯಾಕ್ ಅನ್ನು ಯೆಜ್ಡಿ ರೋಡ್‌ಸ್ಟರ್‌ನ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯ ಹೆಚ್ಚಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಇದು ಪ್ರಯಾಣವನ್ನು ಆರಾಮದಾಯಕ ಮತ್ತು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತದೆ. ನಗರ ಪ್ರದೇಶದಲ್ಲಿ , ಹೆದ್ದಾರಿಗಳಲ್ಲಿ ಅಥವಾ ಆಫ್-ರೋಡ್‌ನಲ್ಲಿ ಅಡ್ವೆಂಚರ್ ಪ್ರಯಾಣ ಮಾಡುವಾಗಲೂ ಯೆಜ್ಡಿ ರೋಡ್ ನ ಟ್ರಯಲ್ ಪ್ಯಾಕ್ ನೆರವಾಗಲಿದೆ.

ಟ್ರಯಲ್ ಪ್ಯಾಕ್ ಈ ಕೆಳಗಿನ ಆ್ಯಕ್ಸೆಸರಿ ಹೊಂದಿದೆ

  • ಸ್ಯಾಡಲ್ ಬ್ಯಾಗ್‌ಗಳು: ದೀರ್ಘ ಅಥವಾ ಸಣ್ಣ ಪ್ರವಾಸ ಹೀಗೆ ಯಾವುದೇ ರೀತಿಯ ಪ್ರವಾಸ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸಲು ಈ ಬ್ಯಾಗ್ ಗಳು ಪರಿಪೂರ್ಣವಾಗಿವೆ.
  • ರೋಡ್‌ಸ್ಟರ್ ವೈಸರ್ ಕಿಟ್: ರೈಡಿಂಗ್ ಅನ್ನು ಆರಾಮದಾಯಕಗೊಳಿಸುವ ಸಲುವಾಗಿ ಎದುರಿನಿಂದ ಬೀಸುವ ಜೋರಾದ ಗಾಳಿಯಿಂದ ರಕ್ಷಣೆ ಪಡೆಯಬಹುದು .
  • ಹೆಡ್‌ಲ್ಯಾಂಪ್ ಗ್ರಿಲ್: ಕಸಕಡ್ಡಿ ಕಲ್ಲು ಶಿಲೆ ಮಂಜು ಇತ್ಯಾದಿಗಳಿಂದ ಹೆಡ್‌ಲ್ಯಾಂಪ್ ಅನ್ನು ಈ ಗ್ರಿಲ್ ರಕ್ಷಿಸುತ್ತದೆ. ಆಫ್-ರೋಡ್ ಅಡ್ವೆಂಚರ್ ರೈಡ್ ಗಳಿಗೆ ಇದು ಅವಶ್ಯಕ.
  • ಪಿಲಿಯನ್ ಬ್ಯಾಕ್‌ರೆಸ್ಟ್: ದೀರ್ಘ ಪ್ರಯಾಣ ಹೋಗುವಾಗ ಪಿಲಿಯನ್ ರೈಡರ್ ಗಳ ಪ್ರಯಾಣವನ್ನು ಸುಖಕರವನ್ನಾಗಿಸುತ್ತದೆ.
  • ಕ್ರ್ಯಾಶ್ ಗಾರ್ಡ್: ರೈಡರ್ ಮತ್ತು ಬೈಕ್ ಇಬ್ಬರಿಗೂ ಹೆಚ್ಚುವರಿ ರಕ್ಷಣೆ ಒದಗಿಸುವ ಗಾರ್ಡ್.
  • ಬೈಕ್ ಕವರ್: ಬೈಕ್ ಬಳಕೆ ಮಾಡದೇ ಇರುವಾಗ ಮೋಟಾರ್‌ಸೈಕಲ್​ ಗೆ ಬಾಹ್ಯ ವಸ್ತುಗಳಿಂದ ಹಾನಿಯಾಗದಂತೆ ತಡೆಯಬಹುದು.

334 ಸಿಸಿ ಎಂಜಿನ್​

ಶಕ್ತಿಶಾಲಿಯಾದ ಆಲ್ಫಾ 2 334ಸಿಸಿ ಎಂಜಿನ್‌ ಹೊಂದಿರುವ ಯೆಜ್ಡಿ ರೋಡ್‌ಸ್ಟರ್, ಆಕ್ಸಲರೇಷನ್ ನಲ್ಲಿ ಹೆಚ್ಚು ವೇಗವಾಗಿದೆ. 29.40ಎನ್ಎಂ ಟಾರ್ಕ್ ಅನ್ನು ಒದಗಿಸುವ ಮೂಲಕ ಸುಗಮ ರೈಡಿಂಗ್ ಮಾಡಲು ಅನುವು ಮಾಡಿ ಕೊಡುತ್ತದೆ. ಈ ಬೈಕ್ 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಅಸಿಸ್ಟ್ ಮತ್ತು ಸ್ಲಿಪ್ ತಂತ್ರಜ್ಞಾನ ಹೊಂದಿದ್ದು, ಬಹಳ ಸುಲಭವಾಗಿ ರೈಡ್ ಮಾಡಬಹುದು. ಇದು ದೀರ್ಘ ಪ್ರಯಾಣಗಳಿಗೆ ಸೂಕ್ತವಾಗಿದೆ. 194 ಕೆಜಿ ಕರ್ಬ್ ವೇಯ್ಟ್ ಹೊಂದಿರುವ ಈ ಬೈಕ್ 12.5-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಇದನ್ನೂ ಓದಿ: Tauba Tauba : ಲಂಡನ್‌ ಬೀದಿಯಲ್ಲಿ ‘ತೌಬಾ ತೌಬಾ’ ಹಾಡಿಗೆ ಸಖತ್‌ ಆಗಿ ಸ್ಟೆಪ್ಸ್‌ ಹಾಕಿದ ಬೆಡಗಿಯರು; ವಿಡಿಯೊ ವೈರಲ್

ಈ ಬೈಕ್ ಅನ್ನು ರಸ್ತೆಯಲ್ಲಿ ದೃಢವಾಗಿ ಸಾಗುವಂತೆ ಮತ್ತು ಎಲ್ಲಾ ಪರಿಸ್ಥಿತಿಗೂ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸೀಟ್ ಎತ್ತರ 790 ಎಂಎಂ ಇದ್ದು ಆರಾಮದಾಯಕವಾಗಿದೆ ಮತ್ತು ಫಾರ್ವರ್ಡ್-ಸೆಟ್ ಫೂಟ್ ಪೆಗ್‌ಗಳು ಯೆಜ್ಡಿ ರೋಡ್‌ಸ್ಟರ್ ಅನ್ನು ಉತ್ತಮ ಸವಾರಿ ಬೈಕ್ ಆಗಿ ಪರಿವರ್ತಿಸಿದೆ. ಮುಂದುಗಡೆಯ ಫೂಟ್ ಪೆಗ್ ಗಳು ಯೆಜ್ಡಿ ರೋಡ್ ಸ್ಟರ್ ರೈಡಿಂಗ್ ಅನ್ನು ಆಕರ್ಷಕಗೊಳಿಸಿವೆ.

ಬೆಲೆ ಎಷ್ಟು?

ಟ್ರಯಲ್ ಪ್ಯಾಕ್‌ ಜೊತೆಗೆ ಸಂಪೂರ್ಣವಾಗಿ ಲೋಡ್ ಆಗಿರುವ ಯೆಜ್ಡಿ ರೋಡ್‌ಸ್ಟರ್ ಬೆಲೆ ರೂ. 2.09 ಲಕ್ಷ (ಎಕ್ಸ್ ಶೋ ರೂಂ). ಈ ರೋಡ್‌ಸ್ಟರ್ ಬೈಕ್ ತನ್ನ ವಿಶಿಷ್ಟವಾದ ಫೀಚರ್ ಗಳು ಮತ್ತು ಸೊಗಸಾದ ವಿನ್ಯಾಸದ ಮೂಲಕ ರೈಡಿಂಗ್ ನ ಥ್ರಿಲ್ ಅನ್ನು ಮತ್ತಷ್ಟು ತೀವ್ರಗೊಳಿಸಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Tata Motors: ಟಾಟಾ ಮೋಟರ್ಸ್‌ನಿಂದ ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್’ ಮೂಲಕ 4000 ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ

Tata Motors: ಟಾಟಾ ಮೋಟಾರ್ಸ್ ಕಂಪನಿಯು ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್) ಸಹಯೋಗದ ಮೂಲಕ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (ಜೆಎನ್‌ವಿ) ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್’ ಸ್ಥಾಪಿಸಿದೆ. ಇಲ್ಲಿಯವರೆಗೂ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಆಯ್ದ ಜೆಎನ್‌ವಿಗಳಲ್ಲಿ ಅಗತ್ಯ ಉಪಕರಣಗಳಿಂದ ಸುಸಜ್ಜಿತಗೊಂಡ 25 ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದ್ದು, ಈ ವಿಶಿಷ್ಟವಾದ ಔದ್ಯಮಿಕ- ಶೈಕ್ಷಣಿಕ ಜಂಟಿ ಉಪಕ್ರಮದ ಮೂಲಕ ವರ್ಷದಲ್ಲಿ ಸುಮಾರು 4000 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಆಟೋಮೋಟಿವ್ ಕೌಶಲ್ಯಗಳನ್ನು ಕಲಿಸುವ ಮೂಲಕ ಆಟೋಮೋಟಿವ್ ಕ್ಷೇತ್ರಕ್ಕೆ ಬೇಕಾದ ಉದ್ಯೋಗಿಗಳನ್ನಾಗಿ ಸಜ್ಜುಗೊಳಿಸಲಾಗುತ್ತದೆ.

VISTARANEWS.COM


on

Automotive skill training for 4000 students through Automotive Skill Labs by Tata Motors
Koo

ಬೆಂಗಳೂರು: ಯುವ ಪ್ರತಿಭೆಗಳನ್ನು ಬೆಳೆಸುವ ಮತ್ತು ಆಟೋಮೋಟಿವ್ ಉದ್ಯಮಕ್ಕೆ ಬೇಕಾಗುವ ನುರಿತ ಉದ್ಯೋಗಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು (Tata Motors) ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್) ಸಹಯೋಗದ ಮೂಲಕ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (ಜೆಎನ್‌ವಿ) ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್’ ಸ್ಥಾಪಿಸಿದೆ.

ಇಲ್ಲಿಯವರೆಗೂ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಆಯ್ದ ಜೆಎನ್‌ವಿಗಳಲ್ಲಿ ಅಗತ್ಯ ಉಪಕರಣಗಳಿಂದ ಸುಸಜ್ಜಿತಗೊಂಡ 25 ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ಈ ವಿಶಿಷ್ಟವಾದ ಔದ್ಯಮಿಕ- ಶೈಕ್ಷಣಿಕ ಜಂಟಿ ಉಪಕ್ರಮದ ಮೂಲಕ ವರ್ಷದಲ್ಲಿ ಸುಮಾರು 4000 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಆಟೋಮೋಟಿವ್ ಕೌಶಲ್ಯಗಳನ್ನು ಕಲಿಸುವ ಮೂಲಕ ಆಟೋಮೋಟಿವ್ ಕ್ಷೇತ್ರಕ್ಕೆ ಬೇಕಾದ ಉದ್ಯೋಗಿಗಳನ್ನಾಗಿ ಸಜ್ಜುಗೊಳಿಸಲಾಗುತ್ತದೆ. ಅಷ್ಟು ಮಂದಿಯಲ್ಲಿ 30% ಮಂದಿ ಹುಡುಗಿಯರಾಗಿರುತ್ತಾರೆ ಎನ್ನುವುದು ವಿಶೇಷ.

‘ರಾಷ್ಟ್ರೀಯ ಶಿಕ್ಷಣ ನೀತಿ 2020’ ರಲ್ಲಿ ಪರಿಕಲ್ಪಿಸಲಾದ ವೃತ್ತಿಪರ ಕೋರ್ಸ್‌ಗಳ ಸಾಲಿನಲ್ಲಿ ನಿಲ್ಲುವ ಟಾಟಾ ಮೋಟಾರ್ಸ್‌ನ ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್,’ 9 ರಿಂದ 12 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿಯೇ ಅವರಿಗೆ ಅಗತ್ಯವಾಗಿ ಬೇಕಾಗುವ ವಿಷಯ ಜ್ಞಾನ, ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಯುವುದರ ಕಡೆಗೆ ಮತ್ತು ಅವರಿಗೆ ಉತ್ತಮವಾದ ಔದ್ಯಮಿಕ ಕ್ಷೇತ್ರದ ಅರಿವು ನೀಡುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ.

ಇದನ್ನೂ ಓದಿ: Healthy Heart Tips: ನಿಮ್ಮ ಹೃದಯ ಆರೋಗ್ಯವಾಗಿರಬೇಕೆ? ಮಳೆಗಾಲದಲ್ಲಿ ಈ ಏಳು ಆಹಾರಗಳಿಂದ ದೂರವಿರಿ!

ಜತೆಗೆ ವಿದ್ಯಾರ್ಥಿಗಳು ಟಾಟಾ ಮೋಟಾರ್ಸ್‌ನ ಘಟಕಗಳಿಗೆ ಭೇಟಿ ನೀಡಬಹುದು. ಸರ್ವೀಸ್ ಮತ್ತು ಡೀಲರ್‌ಶಿಪ್ ವೃತ್ತಿಪರರ ಜತೆ ಸಂವಹನ ನಡೆಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಉದ್ಯಮ ತಜ್ಞರ ಉಪನ್ಯಾಸ ಕಾರ್ಯಕ್ರದಲ್ಲಿ ಭಾಗಿಯಾಗಿ ಹೆಚ್ಚು ಜ್ಞಾನ ಪಡೆಯುವ ಮತ್ತು ಉತ್ತಮ ಅನುಭವ ಹೊಂದುವ ಅವಕಾಶ ಪಡೆಯಲಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ಲ್ಯಾಬ್‌ಗಳಲ್ಲಿ ಬೋಧನೆ ಮಾಡುವ ಬೋಧಕರು ಕಂಪನಿಯ ಪ್ಲಾಂಟ್‌ಗಳಿರುವ ಸ್ಥಳಗಳಲ್ಲಿ ಅಗತ್ಯ ತರಬೇತಿಯನ್ನು ಪಡೆಯುತ್ತಾರೆ. ಪುಣೆಯ ಸ್ಕಿಲ್ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳು ರಚಿಸಿರುವ ಇ-ರಿಕ್ಷಾ ಈ ವಿಶಿಷ್ಟವಾದ ಕಲಿಕಾ ಉಪಕ್ರಮದ ಯಶಸ್ಸಿಗೆ ಒಂದು ಶ್ರೇಷ್ಠ ಪುರಾವೆಯಾಗಿದೆ.

ಈ ಕಲಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ವಿದ್ಯಾರ್ಥಿಗಳು ಟಾಟಾ ಮೋಟಾರ್ಸ್ ಮತ್ತು ಎನ್‌ವಿಎಸ್ ನಿಂದ ಜಂಟಿ ಪ್ರಮಾಣಪತ್ರ ಸ್ವೀಕರಿಸುತ್ತಾರೆ. ತಮ್ಮ ಶಿಕ್ಷಣದ ಬಳಿಕ ವಿದ್ಯಾರ್ಥಿಗಳು ಡಿಪ್ಲೊಮಾ ಇನ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿಗೆ ಸೇರಿಕೊಳ್ಳಬಹುದು. ಸೇರಿಕೊಳ್ಳುವವರಿಗೆ ಪೂರ್ತಿ ಸ್ಟೈಫಂಡ್ ನೀಡಲಾಗುತ್ತದೆ ಮತ್ತು ಟಾಟಾ ಮೋಟಾರ್ಸ್‌ನ ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ತರಬೇತಿಯನ್ನೂ ಪಡೆಯಬಹುದಾಗಿದೆ. ಜತೆಗೆ ಟಾಟಾ ಮೋಟಾರ್ಸ್‌ನಲ್ಲಿ ಮುಂದುವರಿಯಲು ಆಸಕ್ತಿಯುಳ್ಳವರು ಆಯ್ದ ಎಂಜಿನಿಯರಿಂಗ್ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸುವ 3.5 ವರ್ಷಗಳ ವಿಶೇಷ ಶಿಕ್ಷಣ ಕಾರ್ಯಕ್ರಮವಾದ ಬಿಟೆಕ್ ಇನ್ ಎಂಜಿನಿಯರಿಂಗ್‌ ಪದವಿಗೆ ಸೇರಿಕೊಳ್ಳಬಹುದು. ಹಾಗೆ ಮಾಡಿದರೆ ಐದು ವರ್ಷಗಳ ನಂತರ ಟಾಟಾ ಮೋಟಾರ್ಸ್‌ನಲ್ಲಿ ಪರ್ಮನೆಂಟ್ ಉದ್ಯೋಗಕ್ಕೆ ಸೇರಿಕೊಳ್ಳಬಹುದು.

ಈ ಕುರಿತು ಟಾಟಾ ಮೋಟಾರ್ಸ್‌ನ ಸಿಎಸ್‌ಆರ್ ಮುಖ್ಯಸ್ಥ ವಿನೋದ್ ಕುಲಕರ್ಣಿ ಮಾತನಾಡಿ, “ನಮ್ಮ ಆಟೋಮೋಟಿವ್ ಸ್ಕಿಲ್ ಲ್ಯಾಬ್‌ಗಳು ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳ ಯುವಜನತೆಗೆ ಬೆಳೆಯುತ್ತಿರುವ ಆಟೋಮೋಟಿವ್‌ ಕ್ಷೇತ್ರದ ಉದ್ಯೋಗ ಗಳಿಸಲು ಬೇಕಾಗುವ ಸೂಕ್ತವಾದ ಕೌಶಲ್ಯಗಳನ್ನು ಕಲಿಸಿ ಅವರನ್ನು ಸಶಕ್ತಗೊಳಿಸುತ್ತವೆ. ಈ ಲ್ಯಾಬ್ ಗಳು 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ಉದ್ಯೋಗಾವಕಾಶಗಳನ್ನು ಹೊಂದಲು ದಾರಿಗಳನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: One Nation One Rate: ಚಿನ್ನಕ್ಕೆ ದೇಶಾದ್ಯಂತ ಒಂದೇ ದರ! ಹೊಸ ನಿಯಮ ಶೀಘ್ರ ಜಾರಿ ಸಾಧ್ಯತೆ

‘ಸ್ಕಿಲ್ ಇಂಡಿಯಾ ಮಿಷನ್ʼಗೆ ಕೊಡುಗೆ ನೀಡುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನವೀನ ಚಿಂತನೆ, ಉದ್ಯಮಶೀಲತಾ ಮನೋಭಾವ, ವಿಶ್ಲೇಷಣಾತ್ಮಕ ಮನಸ್ಥಿತಿ ಮತ್ತು ವಿಮರ್ಶಾತ್ಮಕ ಸಂವಹನ ಇತ್ಯಾದಿ ಕೌಶಲಗಳನ್ನು ಬೆಳೆಸುತ್ತದೆ. ಈ ಉಪಕ್ರಮಕ್ಕೆ ವಿದ್ಯಾರ್ಥಿಯರು ಕೂಡ ಉತ್ತಮವಾಗಿ ಸ್ಪಂದಿಸಿದ್ದು, ಆ ಮೂಲಕ ವಿಕಸಿತ ಭಾರತ @2047 ಪರಿಕಲ್ಪನೆಗೆ ಪೂರಕವಾಗಿ ಭವಿಷ್ಯದ ನಾಯಕರನ್ನು ಸಜ್ಜುಗೊಳಿಸುವ ನಮ್ಮ ಬದ್ಧತೆಗೆ ಬಲ ದೊರೆತಿದೆ” ಎಂದು ತಿಳಿಸಿದ್ದಾರೆ.

Continue Reading

ಆಟೋಮೊಬೈಲ್

Bajaj CNG Bike: ಬಜಾಜ್‌‌ನ ವಿಶ್ವದ ಮೊದಲ ಸಿಎನ್‌‌ಜಿ ಬೈಕ್ ಬೆಲೆ ‌ಕಡಿತ ಸಾಧ್ಯತೆ; ನಿತೀನ್ ಗಡ್ಕರಿ ಸೂಚನೆ

ಪುಣೆಯಲ್ಲಿ ನಡೆದ ಬಜಾಜ್ ಫ್ರೀಡಂ 125 (Bajaj CNG Bike) ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು, ವಾಹನದ ಬೆಲೆಯನ್ನು 1 ಲಕ್ಷ ರೂ. ಗಿಂತ ಕಡಿಮೆ ಮಾಡಲು ಬಜಾಜ್ ಕಂಪನಿಯ ಸಿಇಒ ರಾಜೀವ್ ಜಿ. ಅವರಲ್ಲಿ ಹೇಳಿದ್ದರು. ಈ ಸಲಹೆಯನ್ನು ಬಜಾಜ್ ಕಂಪನಿ ಗಂಭೀರವಾಗಿ ಪರಿಶೀಲಿಸುತ್ತಿದೆ.

VISTARANEWS.COM


on

By

Bajaj CNG Bike
Koo

ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ (Bajaj CNG Bike) ಬಜಾಜ್ ಫ್ರೀಡಂ 125 (Bajaj Freedom 125) ಬೆಲೆ ಇಳಿಯುವ ನಿರೀಕ್ಷೆಗಳಿವೆ. ಯಾಕೆಂದರೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ (Union Minister) ನಿತಿನ್ ಗಡ್ಕರಿ (Nitin Gadkari) ಅವರು ಬಜಾಜ್ ಆಟೋ ಸಿಇಒ ರಜಿಬ್ ಬಜಾಜ್ ಅವರ ಬಳಿ ವಾಹನದ ಬೆಲೆಯನ್ನು 1 ಲಕ್ಷ ರೂ. ಗಿಂತ ಕಡಿಮೆ ಮಾಡಲು ಒತ್ತಾಯಿಸಿದ್ದಾರೆ.

ಬಜಾಜ್ ಫ್ರೀಡಂ 125 ಬಿಡುಗಡೆಯೊಂದಿಗೆ ಸಾಂಪ್ರದಾಯಿಕ ಪೆಟ್ರೋಲ್ ಬೈಕ್ ಗಳಿಗಿಂತ ಅಗ್ಗವಾಗಿ ಮತ್ತು ಪರಿಸರ ಸ್ನೇಹಿ ವಾಹನವಾಗಿ ದ್ವಿಚಕ್ರ ವಾಹನ ಉದ್ಯಮವು ಬೃಹತ್ ಕ್ರಾಂತಿಯನ್ನು ಕಂಡಿದೆ. ಇದೇ ರೀತಿಯ ಐಸಿಇ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಹೊಸ ಬೈಕ್ ನಿರ್ವಹಣಾ ವೆಚ್ಚವನ್ನು ಶೇ. 50ರಷ್ಟು ಕಡಿಮೆ ಮಾಡುತ್ತದೆ.

ಪುಣೆಯಲ್ಲಿ ಜುಲೈ 5ರಂದು ನಡೆದ ಬಜಾಜ್ ಫ್ರೀಡಂ 125 ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ವಾಹನದ ಬೆಲೆಯನ್ನು 1 ಲಕ್ಷ ರೂ. ಗಿಂತ ಕಡಿಮೆ ಮಾಡಲು ರಾಜೀವ್ ಜಿ. ಅವರಲ್ಲಿ ವಿನಂತಿಸುವುದಾಗಿ ಹೇಳಿದ್ದರು.


ಬಜಾಜ್ ಫ್ರೀಡಂ 125 ದೇಶದಲ್ಲಿ ಹೆಚ್ಚು ಜನಪ್ರಿಯವಾಗಲಿದೆ ಮತ್ತು ಕಡಿಮೆ ಬೆಲೆಗೆ ಜನರಿಗೆ ಸಿಗಲಿದೆ. ಸರಾಸರಿಗೆ ಹೋಲಿಸಿದರೆ ಒಂದು ವರ್ಷದೊಳಗೆ ಗ್ರಾಹಕರಿಗೆ ಅವರ ಹಣವನ್ನು ಹಿಂತಿರುಗಿಸುತ್ತದೆ ಮತ್ತು ಇದರ ವಿನ್ಯಾಸ ಅತ್ಯಂತ ಸುಂದರವಾಗಿದೆ ಎಂದು ಹೇಳಿ ಕೇಂದ್ರ ಸಚಿವರು ಬಜಾಜ್ ಫ್ರೀಡಂ 125 ರ ಗುಣಮಟ್ಟವನ್ನು ಶ್ಲಾಘಿಸಿದರು.

ಗುಣಮಟ್ಟದ ಬಗ್ಗೆ ಯಾವುದೇ ಸಂದೇಹವಿಲ್ಲ. ಪ್ರಾಮಾಣಿಕತೆ, ಗುಣಮಟ್ಟ ಮತ್ತು ಸ್ಪಷ್ಟತೆ 21 ನೇ ಶತಮಾನದ ಅತಿದೊಡ್ಡ ಬಂಡವಾಳವಾಗಿದೆ. ಗುಣಮಟ್ಟವು ತುಂಬಾ ಸುಧಾರಣೆಯಾಗಿದೆ ಎಂದು ನಾನು ನಿಜವಾಗಿಯೂ ಸಂತೋಷಪಡುತ್ತೇನೆ. ಹೊಸ ಮೋಟಾರ್‌ಸೈಕಲ್‌ನ ಗುಣಮಟ್ಟ ತುಂಬಾ ಚೆನ್ನಾಗಿದೆ ಎಂದು ತಿಳಿಸಿದರು.

ಬಜಾಜ್ ಫ್ರೀಡಂ 125 ಮಾರುಕಟ್ಟೆಯನ್ನು ಆಕರ್ಷಿಸಲಿದೆ ಎಂದು ಹೇಳಿರುವ ಗಡ್ಕರಿ, ಈ ಹೊಸ ಉಪಕ್ರಮ ಉತ್ತಮ ಗುಣಮಟ್ಟ ಮತ್ತು ವಿನ್ಯಾಸದಿಂದಾಗಿ 100 ಪ್ರತಿಶತದಷ್ಟು ಪ್ರಪಂಚದಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಪಡೆಯುತ್ತದೆ. ಇದು ಬಜಾಜ್ ಆಟೋಗೆ ಯಶಸ್ಸಿನ ಕಥೆಯಾಗಿದೆ ಎಂದರು.

ಇದನ್ನೂ ಓದಿ: Car price Discounts: ರಿನೊ ಕೈಗರ್, ಕ್ವಿಡ್, ಟ್ರೈಬರ್ ಕಾರುಗಳಿಗೆ 40,000 ರೂ. ತನಕ ರಿಯಾಯಿತಿ

ಬಜಾಜ್ ಫ್ರೀಡಂ 125

ಬಜಾಜ್ ಫ್ರೀಡಂ 125 ಮೂರು ಆವೃತ್ತಿಗಳಲ್ಲಿ ಬರಲಿದೆ. ಫ್ರೀಡಮ್ 125 ಎನ್ ಜಿ04 ಡಿಸ್ಕ್ ಎಲ್ ಇಡಿ, ಫ್ರೀಡಮ್ 125 ಎನ್ ಜಿ04 ಡ್ರಮ್ ಎಲ್ ಇಡಿ ಮತ್ತು ಫ್ರೀಡಮ್ 125 ಎನ್ ಜಿ04 ಡ್ರಮ್. ದೆಹಲಿಯಲ್ಲಿನ ಈ ಮೂರು ಆವೃತ್ತಿಗಳ ಎಕ್ಸ್ ಶೋ ರೂಂ ಬೆಲೆ 95,000 ರೂ., 1,05,000 ರೂ. ಮತ್ತು 1,10,000 ರೂ. ಆಗಿದೆ.

ಬಜಾಜ್ ಫ್ರೀಡಮ್ ಸಿಎನ್‌ಜಿ ಪ್ರತಿ ಕೆ.ಜಿ. ಸಿಎನ್‌ಜಿಗೆ 102 ಕಿ.ಮೀ. ಓಡುತ್ತದೆ. ಅಂದರೆ ಇದು ಸಿಎನ್‌ಜಿಯ ಒಂದು ಪೂರ್ಣ ಟ್ಯಾಂಕ್‌ನಲ್ಲಿ ಸುಮಾರು 200 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ. ಸಿಎನ್ ಜಿ ಟ್ಯಾಂಕ್ ಅನ್ನು ಸೀಟಿನ ಕೆಳಗೆ ಇರಿಸಲಾಗುವುದು ಮತ್ತು ಎರಡು ಕಿಲೋಗ್ರಾಂಗಳಷ್ಟು ಸಾಮರ್ಥ್ಯ ಹೊಂದಿದೆ. ಇದು ಎರಡು ಲೀಟರ್ ಪೆಟ್ರೋಲ್ ಟ್ಯಾಂಕ್‌ನೊಂದಿಗೆ ಜೋಡಿಸಲ್ಪಟ್ಟಿರುತ್ತದೆ ಮತ್ತು 330 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ಕಂಪೆನಿ ಹೇಳಿದೆ.

Continue Reading

ಆಟೋಮೊಬೈಲ್

Mercedes Electric Car: 35 ನಿಮಿಷಗಳಲ್ಲಿ ಶೇ. 80ರಷ್ಟು ಚಾರ್ಜ್! ಮರ್ಸಿಡಿಸ್ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ

7 ಗಂಟೆ 15 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುವ ಮರ್ಸಿಡಿಸ್ ಎಲೆಕ್ಟ್ರಿಕ್ ಕಾರು (Mercedes Electric Car) ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು 100ಕೆಡಬ್ಲ್ಯೂ ಡಿಸಿ ವೇಗದ ಚಾರ್ಜರ್‌ನ ಬೆಂಬಲವನ್ನು ಹೊಂದಿದೆ. ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಇದು ಕಾರು ಪ್ರಿಯರನ್ನು ಸೆಳೆಯುವಲ್ಲಿ ಸಂದೇಹವಿಲ್ಲ. ಈ ಕಾರಿನ ವಿಶೇಷಗಳ ಚಿತ್ರಣ ಇಲ್ಲಿದೆ.

VISTARANEWS.COM


on

By

Mercedes Electric Car
Koo

ಜರ್ಮನ್ ನ (German) ಐಷಾರಾಮಿ ಕಾರು ತಯಾರಕ ಕಂಪೆನಿ ಮರ್ಸಿಡಿಸ್ ಬೆನ್ಜ್ (Mercedes Electric Car) ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಎಸ್ ಯುವಿ- ಮರ್ಸಿಡಿಸ್ ಬೆನ್ಜ್ ಇಕ್ಯೂಎ ( electric SUV- Mercedes-Benz EQA) ಅನ್ನು ಭಾರತದಲ್ಲಿ (India) ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋ ರೂಮ್ ಬೆಲೆ 66 ಲಕ್ಷ ರೂ.ಗಳಾಗಿದೆ.

70.ಕೆಡಬ್ಲ್ಯೂಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಇದು ಹೊಂದಿದ್ದು ಒಂದೇ ಚಾರ್ಜ್‌ನಲ್ಲಿ 560 ಕಿ.ಮೀ. ದೂರ ಕ್ರಮಿಸುತ್ತದೆ. ಇಕ್ಯೂಎ 250+ ಫ್ರಂಟ್ ವೀಲ್ ಡ್ರೈವ್ ಕಾರ್ ಆಗಿದ್ದು, ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಇದರ ಎಲೆಕ್ಟ್ರಿಕ್ ಮೋಟಾರ್ 188bhp ಮತ್ತು 385Nm ಸಾಮರ್ಥ್ಯವನ್ನು ನೀಡಲು ಸಶಕ್ತವಾಗಿದೆ.

ಚಾರ್ಜಿಂಗ್ ಸಮಯ

ಸಾಮಾನ್ಯ 11kW AC ಚಾರ್ಜರ್‌ನೊಂದಿಗೆ ಇದು ಬರಲಿದ್ದು, ಬ್ಯಾಟರಿಯನ್ನು 0 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಲು 7 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದು 100ಕೆಡಬ್ಲ್ಯೂ ಡಿಸಿ ವೇಗದ ಚಾರ್ಜರ್‌ನ ಬೆಂಬಲವನ್ನು ಹೊಂದಿದ್ದು ಕೇವಲ 35 ನಿಮಿಷಗಳಲ್ಲಿ 10ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.
ಮರ್ಸಿಡಿಸ್ ಇಕ್ಯೂಎ ಕಂಪೆನಿಯ ಪೋರ್ಟ್‌ಫೋಲಿಯೊದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಎಸ್ ಯುವಿ ಆಗಿದ್ದು, 8.6 ಸೆಕೆಂಡುಗಳಲ್ಲಿ 0 ರಿಂದ 100 km/h ವೇಗವನ್ನು ಪಡೆಯಬಹುದು. ಇದು ಗಂಟೆಗೆ 160 ಕಿಮೀ ವೇಗವನ್ನು ನೀಡುತ್ತದೆ. ಇದು ಕಂಫರ್ಟ್, ಇಕೋ, ಸ್ಪೋರ್ಟ್ ಮತ್ತು ಇಂಡಿವಿಜುವಲ್ ಎಂಬ ನಾಲ್ಕು ಡ್ರೈವ್ ಮೋಡ್‌ಗಳನ್ನು ಹೊಂದಿದೆ.


ಬಣ್ಣದ ಆಯ್ಕೆಗಳು

ಇಕ್ಯೂಬಿ ಮತ್ತು ಜಿಎಲ್ ಎನೊಂದಿಗೆ ಹಲವಾರು ವಿನ್ಯಾಸ ಅಂಶಗಳನ್ನು ಹಂಚಿಕೊಳ್ಳುವ ಮೂಲಕ ಇಕ್ಯೂಎ ಅನ್ನು ಏಳು ಬಣ್ಣದ ಆಯ್ಕೆಗಳಲ್ಲಿ ನೀಡಲಾಗಿದೆ. ಮೌಂಟೇನ್ ಗ್ರೇ, ಪೋಲಾರ್ ವೈಟ್, ಹೈಟೆಕ್ ಸಿಲ್ವರ್, ಮೌಂಟೇನ್ ಗ್ರೇ ಮ್ಯಾಗ್ನೋ, ಕಾಸ್ಮೊಸ್ ಬ್ಲಾಕ್, ಪ್ಯಾಟಗೋನಿಯಾ ರೆಡ್ ಮತ್ತು ಸ್ಪೆಕ್ಟ್ರಲ್ ಬ್ಲೂ.

ಇದನ್ನೂ ಓದಿ: Maruti Brezza Urbano : ಬ್ರೆಜಾ ಎಸ್​​ಯುವಿಯಲ್ಲಿ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ


ವೈಶಿಷ್ಟ್ಯಗಳು ಏನೇನು?

ಇದರ ಪ್ರಮುಖ ವೈಶಿಷ್ಟ್ಯಗಳಲ್ಲಿ ಡ್ಯುಯಲ್ 10.25 ಇಂಚಿನ ಸ್ಕ್ರೀನ್ ಸೆಟಪ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಹೆಚ್ ಯುಡಿ, ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, ಆಗ್ಮೆಂಟೆಡ್ ರಿಯಾಲಿಟಿಯೊಂದಿಗೆ ಇನ್‌ಬಿಲ್ಟ್‌ ಆದ ನ್ಯಾವಿಗೇಷನ್, ವಿಹಂಗಮ ಸನ್‌ರೂಫ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಫ್ರಂಟ್ ಸೀಟುಗಳನ್ನು ಒಳಗೊಂಡಿದೆ.

ಬಾಹ್ಯ ವಿನ್ಯಾಸದಲ್ಲಿ ಬ್ಲಾಂಕ್ಡ್-ಆಫ್ ಪಿಯಾನೋ-ಬ್ಲ್ಯಾಕ್ ಗ್ರಿಲ್, ಎಲ್ಇಡಿ ಲೈಟ್ ಬಾರ್ ಮೂಲಕ ಸಂಪರ್ಕಿಸಲಾದ ಹೆಡ್‌ಲ್ಯಾಂಪ್‌ಗಳು, 19 ಇಂಚಿನ ಏರೋ ವೀಲ್‌ಗಳು, ಸ್ಕ್ವೇಡರ್ ವೀಲ್ ಆರ್ಚ್‌ಗಳು, ಕ್ರೋಮ್ ಟ್ರೀಟ್‌ಮೆಂಟ್‌ನೊಂದಿಗೆ ಹೊಸ ಹಿಂಬದಿಯ ಬಂಪರ್, ಸಂಪರ್ಕಿತ ಟೈಲ್‌ಲ್ಯಾಂಪ್‌ಗಳು ಮತ್ತು ಕೂಪ್ ತರಹದ ಇಳಿಜಾರು ಚಾವಣಿಯನ್ನು ಒಳಗೊಂಡಿದೆ.

Continue Reading

ಪ್ರಮುಖ ಸುದ್ದಿ

Car price Discounts: ರಿನೊ ಕೈಗರ್, ಕ್ವಿಡ್, ಟ್ರೈಬರ್ ಕಾರುಗಳಿಗೆ 40,000 ರೂ. ತನಕ ರಿಯಾಯಿತಿ

Car price Discounts: ಈ ತಿಂಗಳು ಹೊಸ ರಿನೊ ಎಸ್ ಯುವಿ ಅಥವಾ ಕಾರಿನಲ್ಲಿ ನೀವು ಎಷ್ಟು ಉಳಿಸಬಹುದು ಎಂಬುದನ್ನು ತಿಳಿಯಲು ಈ ಕೆಳಗಿನ ಲೇಖನಗಳನ್ನು ಓದಿ. ಎಲ್ಲಾ ಮೂರು ಮಾದರಿಗಳಲ್ಲಿ ಎಂಟ್ರಿ ಲೆವೆಲ್ ಆಎಕ್ಸ್​ಇ ವೇರಿಯೆಂಟ್​ಗಳು ಲಾಯಲ್ಟಿ ಬೋನಸ್ ಅನ್ನು ಮಾತ್ರ ಪಡೆಯುತ್ತವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

VISTARANEWS.COM


on

Car price Discounts
Koo

ಬೆಂಗಳೂರು: ರಿನೊ ಇಂಡಿಯಾ ಕಂಪನಿಯು ಈ ತಿಂಗಳು ಕೈಗರ್ ಕಾಂಪ್ಯಾಕ್ಟ್ ಎಸ್ ಯುವಿ ಕೈಗರ್​ (Renault Kiger) , ಕ್ವಿಡ್ ಹ್ಯಾಚ್ ಬ್ಯಾಕ್ (Renault Kwid) ಮತ್ತು ಟ್ರೈಬರ್ 7 (Renault Triber) ಸೀಟರ್​ ಸೇರಿದಂತೆ ತನ್ನ ಎಲ್ಲಾ ಶ್ರೇಣಿಯ ಕಾರುಗಳ ಮೇಲೆ ರಿಯಾಯಿತಿ (Car price Discounts: ) ಘೋಷಿಸಿದೆ. ನಗದು ರಿಯಾಯಿತಿಗಳು, ಎಕ್ಸ್​ಚೇಂಜ್​ ಪ್ರಯೋಜನಗಳು ಮತ್ತು ಲಾಯಲ್ಟಿ ಬೋನಸ್ ಗಳ ಜೊತೆಗೆ, ಆಯ್ದ ಖರೀದಿದಾರರು ಹೆಚ್ಚುವರಿ ರೆಫರಲ್, ಕಾರ್ಪೊರೇಟ್ ಮತ್ತು ಲಾಯಲ್ಟಿ ರಿಯಾಯಿತಿಗಳನ್ನೂ ಪಡೆಯಬಹುದು. ಹೆಚ್ಚುವರಿಯಾಗಿ, ಬ್ರಾಂಡ್ ನ ವಾಹನ ಸ್ಕ್ರ್ಯಾಪೇಜ್ ಯೋಜನೆಯನ್ನು ಆರಿಸಿಕೊಳ್ಳುವ ಗ್ರಾಹಕರಿಗೆ ಕಂಪನಿಯು ಹೆಚ್ಚುವರಿ ವಿನಿಮಯ ರಿಯಾಯಿತಿ ಒದಗಿಸುತ್ತಿದೆ.

ಈ ತಿಂಗಳು ಹೊಸ ರಿನೊ ಎಸ್ ಯುವಿ ಅಥವಾ ಕಾರಿನಲ್ಲಿ ನೀವು ಎಷ್ಟು ಉಳಿಸಬಹುದು ಎಂಬುದನ್ನು ತಿಳಿಯಲು ಈ ಕೆಳಗಿನ ಲೇಖನಗಳನ್ನು ಓದಿ. ಎಲ್ಲಾ ಮೂರು ಮಾದರಿಗಳಲ್ಲಿ ಎಂಟ್ರಿ ಲೆವೆಲ್ ಆಎಕ್ಸ್​ಇ ವೇರಿಯೆಂಟ್​ಗಳು ಲಾಯಲ್ಟಿ ಬೋನಸ್ ಅನ್ನು ಮಾತ್ರ ಪಡೆಯುತ್ತವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ರಿನೊ ಕೈಗರ್​ ಕಾರಿಗೆ ಸಿಗುವ ರಿಯಾಯಿತಿಗಳು

ಕೈಗರ್ ಕಾರಿನಲ್ಲಿ 40,000 ರೂ.ಗಳವರೆಗೆ ಪ್ರಯೋಜನ ಸಿಗುತ್ತದೆ. ಇದರಲ್ಲಿ 15,000 ರೂ.ಗಳ ನಗದು ರಿಯಾಯಿತಿ, 15,000 ರೂ.ಗಳ ಎಕ್ಸ್​ಚೇಂಜ್ ಬೋನಸ್​ ಮತ್ತು 10,000 ರೂ.ಗಳ ಲಾಯಲ್ಟಿ ಬೋನಸ್ ಸೇರಿಕೊಂಡಿವೆ. ಇದರ ಬೆಲೆಯು ರೂ.6.00 ಲಕ್ಷದಿಂದ ರೂ.11.23 ಲಕ್ಷ ರೂಪಾಯಿ. ನಾಲ್ಕು ಸಿಲಿಂಡರ್​ ಎಂಜಿನ್ ಮತ್ತು ಗೇರ್ ಬಾಕ್ಸ್ ಸಂಯೋಜನೆಗಳನ್ನು ಇ ಕಾರು ಹೊಂದಿದೆ. 1.0-ಲೀಟರ್ ಪೆಟ್ರೋಲ್ ಎಂಜಿನ್​ 72 ಬಿಹೆಚ್ ಪಿ ಪವರ್​ ಅನ್ನು ಮ್ಯಾನುವಲ್ ಮತ್ತು ಎಎಂಟಿ ವೇರಿಯೆಂಟ್​ನಲ್ಲಿ ಬಿಡುಗಡೆ ಮಾಡುತ್ತದೆ. ಟರ್ಬೊ 1.0 ಪೆಟ್ರೊಲ್​ ಎಂಜಿನ್​ 100 ಬಿಹೆಚ್ ಪಿ ಪವರ್ ಬಿಡಗಡೆ ಮಾಡುತ್ತದೆ. ಇದರಲ್ಲಿ ಸಿವಿಟಿ ಆಯ್ಕೆಯೂ ಇದೆ.

ಇದನ್ನೂ ಓದಿ: Maruti Brezza Urbano : ಬ್ರೆಜಾ ಎಸ್​​ಯುವಿಯಲ್ಲಿ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ರಿನೊ ಟ್ರೈಬರ್ ಡಿಸ್ಕೌಂಟ್​ಗಳು

ರಿನೊ ಟ್ರೈಬರ್ ಏಳು ಸೀಟ್​ಗಳ ಕಾರಾಗಿದ್ದು 40,000 ರೂ.ಗಳವರೆಗೆ ರಿಯಾಯಿತಿ ಇದೆ. ಇದು ನಗದು ರಿಯಾಯಿತಿ, ವಿನಿಮಯ ಪ್ರಯೋಜನಗಳು ಮತ್ತು ಕೈಗರ್​ನಂತೆಯೇ ಲಾಯಲ್ಟಿ ಬೋನಸ್ ಕೂಡ ಪಡೆಯುತ್ತದೆ. ಇದರ ಬೆಲೆ 6.00 ಲಕ್ಷ ರೂಪಾಯಿಯಿಂದ ಆರಂಭಗೊಂಡು ರೂ.8.98 ಲಕ್ಷ ರೂಪಾಯಿ ತನಕ ಇದೆ. ಅದೇ 72 ಬಿಹೆಚ್ ಪಿ, 1.0-ಲೀಟರ್ ಪೆಟ್ರೋಲ್ ಎಂಜಿನ್​ ಮ್ಯಾನುವಲ್ ಮತ್ತು ಎಎಂಟಿ ಆಯ್ಕೆಗಳೊಂದಿಗೆ ಬರುತ್ತದೆ.

ರೆನಾಲ್ಟ್ ಕ್ವಿಡ್ ಕಾರಿಗೆ ಸಿಗುವ ರಿಯಾಯಿತಿಗಳು

ಕ್ವಿಡ್ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಅನ್ನು ಜುಲೈನಲ್ಲಿ ಕೈಗರ್​ ಮತ್ತು ಟ್ರೈಬರ್ ನಂತೆಯೇ ರಿಯಾಯಿತಿ ಹೊಂದಿದೆ. 4.70 ಲಕ್ಷ ರೂ.ಗಳಿಂದ 6.45 ಲಕ್ಷ ರೂ.ಗಳ ನಡುವೆ ಬೆಲೆಯನ್ನು ಹೊಂದಿರುವ ಇದು ಮಾರುತಿ ಸುಜುಕಿ ಆಲ್ಟೋ ಕೆ 10 ಗೆ ಪೈಪೋಟಿ ನೀಡುತ್ತದೆ. ಇದು 68 ಬಿಹೆಚ್ ಪಿ, 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದು ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಎಎಂಟಿ ಆಯ್ಕೆಯೊಂದಿಗೆ ಬರುತ್ತದೆ.

Continue Reading
Advertisement
Walking Benefits
ಆರೋಗ್ಯ6 mins ago

Walking Benefits: ಊಟದ ಬಳಿಕ ಕಿರು ನಡಿಗೆಯಿಂದ ಸಿಗುವ ಆರೋಗ್ಯ ಲಾಭಗಳು ಏನೇನು?

Natasa Stankovic
ಕ್ರಿಕೆಟ್23 mins ago

Natasa Stankovic : ಹಾರ್ದಿಕ್​ ಪಾಂಡ್ಯಗೆ ಕೈಕೊಟ್ಟು ಸರ್ಬಿಯಾದಲ್ಲಿ ಜಾಲಿ ಟ್ರಿಪ್ ಹೊರಟ ನತಾಶಾ

Mattress Buying Guide
ಲೈಫ್‌ಸ್ಟೈಲ್46 mins ago

Mattress Buying Guide: ಹಾಸಿಗೆಗಳಲ್ಲಿ ಎಷ್ಟೊಂದು ವಿಧ? ಯಾವುದು ಸೂಕ್ತ ಆಯ್ಕೆ ಮಾಡಿಕೊಳ್ಳಿ

Karnataka Jobs Reservation
ಪ್ರಮುಖ ಸುದ್ದಿ56 mins ago

Karnataka Jobs Reservation : ಕನ್ನಡಿಗರಿಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮೀಸಲಾತಿ ಮಸೂದೆಗೆ ತಾತ್ಕಾಲಿಕ ತಡೆ; ಉದ್ಯಮಿಗಳ ಒತ್ತಡ?

Kapil Dev
ಕ್ರೀಡೆ1 hour ago

Kapil Dev : ಟಿ20 ವಿಶ್ವ ಕಪ್ ಚಾಂಪಿಯನ್ಸ್​ ಕೊಹ್ಲಿ, ರೋಹಿತ್ ಶ್ಲಾಘಿಸಿದ 1983ರ ವಿಶ್ವ ಕಪ್ ವಿಜೇತ ಕಪಿಲ್​ ದೇವ್​​

Hand Painted lehenga Fashion
ಫ್ಯಾಷನ್1 hour ago

Hand Painted lehenga Fashion: ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿದ ರಾಧಿಕಾ ಮರ್ಚೆಂಟ್‌ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ!

Karnataka Jobs Reservation
ರಾಜಕೀಯ1 hour ago

Karnataka Jobs Reservation: ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲು ಸಾಧ್ಯವೆ? ತೊಡಕುಗಳು ಏನೇನು?

UP CM DCM
ದೇಶ1 hour ago

UP CM v/s DCM: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ; ಯೋಗಿ ತಲೆದಂಡ ಪಕ್ಕಾನಾ?

ಕ್ರೀಡೆ2 hours ago

KL Rahul : ಆಮಿರ್​ ಖಾನ್ ಮನೆ ಪಕ್ಕದಲ್ಲೇ 20 ಕೋಟಿ ಫ್ಲ್ಯಾಟ್ ಖರೀದಿಸಿದ ರಾಹುಲ್, ಅಥಿಯಾ ದಂಪತಿ

Raj B Shetty starrer roopanthara is releasing on July 26
ಕರ್ನಾಟಕ2 hours ago

Kannada New Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದ ರಾಜ್ ಬಿ ಶೆಟ್ಟಿ ನಟನೆಯ ‘ರೂಪಾಂತರ’ ಚಿತ್ರ ಜು.26ಕ್ಕೆ ರಿಲೀಸ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌