Viral Video: ಇನ್‌ಸ್ಟಾಗ್ರಾಂನಲ್ಲಿಯೇ ಗಂಡನಿಗೆ ಡಿವೋರ್ಸ್‌‌ ನೀಡಿದ ದುಬೈ ರಾಜಕುಮಾರಿ! ಏನು ಬರೆದಿದ್ದಾಳೆ ನೋಡಿ! - Vistara News

ಪ್ರಮುಖ ಸುದ್ದಿ

Viral Video: ಇನ್‌ಸ್ಟಾಗ್ರಾಂನಲ್ಲಿಯೇ ಗಂಡನಿಗೆ ಡಿವೋರ್ಸ್‌‌ ನೀಡಿದ ದುಬೈ ರಾಜಕುಮಾರಿ! ಏನು ಬರೆದಿದ್ದಾಳೆ ನೋಡಿ!

Viral Video: ಮದುವೆ ಅನ್ನುವ ಮೂರು ಅಕ್ಷರಕ್ಕೆ ಈಗ ಬೆಲೆಯೇ ಇಲ್ಲದ ಹಾಗೇ ಆಗಿದೆ. ಇನ್ಸ್ಟಾಗ್ರಾಂನಲ್ಲಿ ರೀಲ್ಸ್, ಫೋಟೊ ಅಪ್ಲೋಡ್ ಆಗುತ್ತಿತ್ತು. ಈಗ ಡಿವೋರ್ಸ್ ಕೂಡ ಇನ್ಸ್ಟಾಗ್ರಾಂನಲ್ಲಿಯೇ ನೀಡುವಂತಹ ಪರಿಸ್ಥಿತಿ ಬಂದಿದೆ. ದುಬೈ ರಾಜಕುಮಾರಿ ಶೇಖಾ ಮಹ್ರಾ ಕಳೆದ ವರ್ಷ ಮೇ ತಿಂಗಳಲ್ಲಿ ಶೇಖ್ ಮಾನಾ ಅವರನ್ನು ವಿವಾಹವಾದರು. ಇದೀಗ ರಾಜಕುಮಾರಿ ಶೇಖಾ ಮಹ್ರಾ ಇನ್ಸ್ಟಾಗ್ರಾಂನಲ್ಲಿ ಆಘಾತಕಾರಿ ಪೋಸ್ಟ್ ಹಾಕಿದ್ದು, ಅದರಲ್ಲಿ ತಮ್ಮ ಪತಿಗೆ ಡಿವೋರ್ಸ್ ನೀಡುವುದಾಗಿ ಘೋಷಿಸಿದ್ದಾರೆ. ಶೇಖಾ ಮಹ್ರಾ ಮತ್ತು ಅವರ ಪತಿ ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡು ತಿಂಗಳ ನಂತರ ಪತಿಯಿಂದ ಡಿವೋರ್ಸ್ ಕೇಳಿದ್ದು, ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ : ಸೋಶಿಯಲ್ ಮೀಡಿಯಾಗಳನ್ನು ನಾವು ಹೆಚ್ಚಾಗಿ ಮನೋರಂಜನೆಗಾಗಿ, ಪ್ರತಿದಿನ ನಡೆಯುವ ಸುದ್ದಿಗಳನ್ನು ತಿಳಿದುಕೊಳ್ಳಲು ಬಳಸುತ್ತೇವೆ. ಪ್ರಪಂಚದ ಹಲವೆಡೆ ನಡೆಯುವಂತಹ ಘಟನೆಗಳನ್ನು ನಾವು ಸೋಶಿಯಲ್ ಮೀಡಿಯಾಗಳ ಸಹಾಯದಿಂದ ಮನೆಯಲ್ಲೇ ಕುಳಿತು ತಿಳಿಯಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳನ್ನು ಪತಿ ಪತ್ನಿಯರು ಡಿವೋರ್ಸ್ ನೀಡಲು ಬಳಸುತ್ತಿದ್ದಾರೆ ಎಂದು ಕೇಳಿದರೆ ಎಲ್ಲರಿಗೂ ಆಶ್ವರ್ಯವಾಗುವುದಂತು ಖಂಡಿತ. ಅಂತಹದೊಂದು ಘಟನೆ ಇದೀಗ ದುಬೈನಲ್ಲಿ ನಡೆದಿದೆ. ದುಬೈ ರಾಜಕುಮಾರಿ ಶೇಖಾ ಮಹ್ರಾ ಅವರು ತಮ್ಮ ಪತಿಗೆ ಇನ್‍ಸ್ಟಾಗ್ರಾಂನಲ್ಲಿ ಡಿವೋರ್ಸ್ ನೀಡಿದ್ದು, ಇದು ಸಖತ್ ವೈರಲ್ (Viral Video) ಆಗಿದೆ.

ದುಬೈ ಆಡಳಿತಗಾರನ ಮಗಳಾದ ದುಬೈ ರಾಜಕುಮಾರಿ ಶೇಖಾ ಮಹ್ರಾ ಕಳೆದ ವರ್ಷ ಮೇ ತಿಂಗಳಲ್ಲಿ ಶೇಖ್ ಮಾನಾ ಅವರನ್ನು ವಿವಾಹವಾದರು. ಇದೀಗ ರಾಜಕುಮಾರಿ ಶೇಖಾ ಮಹ್ರಾ ಇನ್‍ಸ್ಟಾಗ್ರಾಂನಲ್ಲಿ ಆಘಾತಕಾರಿ ಪೋಸ್ಟ್ ಹಾಕಿದ್ದು, ಅದರಲ್ಲಿ ತಮ್ಮ ಪತಿಗೆ ಡಿವೋರ್ಸ್ ನೀಡುವುದಾಗಿ ಘೋಷಿಸಿದ್ದಾರೆ. ಶೇಖಾ ಮಹ್ರಾ ಮತ್ತು ಅವರ ಪತಿ ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡು ತಿಂಗಳ ನಂತರ ಪತಿಯಿಂದ ಡಿವೋರ್ಸ್ ಕೇಳಿದ್ದು, ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ, ತಮ್ಮ ಪತಿ ಬೇರೆ ಸಂಗಾತಿಯೊಂದಿಗೆ ಸಂಬಂಧ ಹೊಂದಿರುವ ಕಾರಣ ಪತಿಗೆ ಡಿವೋರ್ಸ್ ನೀಡುತ್ತಿರುವುದಾಗಿ ತಿಳಿಸಿ “ನಾನು ನಿಮಗೆ ವಿಚ್ಛೇದನ ನೀಡುತ್ತೇನೆ” ಎಂದು ಮೂರು ಬಾರಿ ಬರೆದು ಮಂಗಳವಾರ ಪೋಸ್ಟ್ ಮಾಡಿದ್ದಾರೆ. ಹಾಗೇ ಅವರು ತಮ್ಮ ಪತಿಯೊಂದಿಗಿನ ಫೋಟೋಗಳನ್ನು ಇನ್‍ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದಾರೆ.

ಶೇಖಾ ಮಹ್ರಾ ಕಳೆದ ವರ್ಷ ಮೇ ತಿಂಗಳಲ್ಲಿ ಎಮಿರೇಟ್ಸ್ ಉದ್ಯಮಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮಾನಾ ಅಲ್ ಮಕ್ತೌಮ್ ಅವರನ್ನು ವಿವಾಹವಾದರು. ಒಂದು ವರ್ಷದ ನಂತರ, ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 20ರ ಹರೆಯದ ಶೇಖ್ ಮಾನಾ ಅನೇಕ ಬ್ಯುಸಿನೆಸ್‍ಗಳನ್ನು ಹೊಂದಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ, ದುಬೈ ರಾಜಕುಮಾರಿ ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಿಂದ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ತಮ್ಮ ಮಗಳನ್ನು ಜಗತ್ತಿಗೆ ಕರೆತಂದ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದರು.

ಹಾಗೇ ತನ್ನ ಪತಿ ಹಾಗೂ ಮಗಳ ಜೊತೆಗಿನ ಪೋಟೊವನ್ನು ಪೋಸ್ಟ್ ಮಾಡಿದ್ದರು. ಈ ಹಿಂದೆ ಅವರು ಗರ್ಭಿಣಿಯಾಗಿದ್ದಾಗ “ನಾವು ಮೂವರು” ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಜೂನ್‍ನಲ್ಲಿ ಅವರು ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪತಿಯಿಲ್ಲದೆ ತಮ್ಮ ಮಗುವಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ “ನಾವಿಬ್ಬರೇ” ಎಂದು ಶೇಖಾ ಮಹ್ರಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕಿಮೋಥೆರಪಿ ಅನುಭವ ಹಂಚಿಕೊಂಡಿದ್ದಾರೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಬಾಲಿವುಡ್‌ ನಟಿ

ಶೇಖಾ ಮಹ್ರಾ ಅವರ ತಂದೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಯುಎಇಯ ಉಪಾಧ್ಯಕ್ಷ, ಪ್ರಧಾನಿ ಮತ್ತು ರಕ್ಷಣಾ ಸಚಿವರಾಗಿದ್ದಾರೆ. ಇವರಿಗೆ 26 ಮಂದಿ ಮಕ್ಕಳಿದ್ದು, ಅವರಲ್ಲಿ ಶೇಖಾ ಮಹ್ರಾ ಕೂಡ ಒಬ್ಬರು. ಆಕೆಯ ತಾಯಿ ಜೊಯಿ ಗ್ರಿಗೊರಾಕೋಸ್ ಗ್ರೀಸ್ ಮೂಲದವರಾಗಿದ್ದಾರೆ. ಆದರೆ ಶೇಖಾ ಮಹ್ರಾ ತಂದೆ, ಆಕೆಯ ತಾಯಿಗೆ ವಿಚ್ಛೇದನ ನೀಡಿದ್ದರು..

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Karnataka Jobs Reservation: ಕನ್ನಡಿಗರಿಗೆ ಮೀಸಲು ಕಡ್ಡಾಯ ಮಾಡಲು ಕಾನೂನು ಸಮಸ್ಯೆ: ಖರ್ಗೆ

Karnataka jobs Reservation: ʼಕನ್ನಡಿಗರ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧವಿದೆ. ನಮ್ಮ ಮಾನವ‌ ಸಂಪನ್ಮೂಲಕ್ಕೆ ಖಾಸಗಿ ವಲಯದಲ್ಲಿ ಸಾಕಷ್ಟು ಡಿಮ್ಯಾಂಡ್ ಇದೆ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕವನ್ನು ಕಾನೂನಾತ್ಮಕವಾಗಿ ನೋಡಬೇಕಾಗುತ್ತೆ. ಹರ್ಯಾಣ, ಆಂಧ್ರಪ್ರದೇಶದಲ್ಲಿ ಈ ಬಿಲ್‌ಗೆ ಹೈಕೋರ್ಟ್ ತಡೆಯಾಜ್ಞೆಯನ್ನು ನೀಡಿದೆ ಹೀಗಾಗಿ ಜಾರಿಗೆ ಮುನ್ನ ಸಾಕಷ್ಟು ಚರ್ಚೆ ಮಾಡಬೇಕಾಗಿದೆʼ ಎಂದು ಖರ್ಗೆ ತಿಳಿಸಿದರು.

VISTARANEWS.COM


on

Priyank Kharge karnataka jobs reservation
Koo

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಉದ್ಯಮಗಳಲ್ಲಿ ಮೀಸಲು (Karnataka Jobs Reservation) ಕಡ್ಡಾಯ ಮಾಡುವ ಕುರಿತು ರಾಜ್ಯ ಸರ್ಕಾರದ (Karnataka Government) ನಿಲುವಿನಿಂದಾಗಿ ಸೃಷ್ಟಿಯಾದ ಗೊಂದಲದ ನಡುವೆ, ನಾಲ್ವರು ಸಚಿವರು ಇಂದು ವಿಧಾನಸಭೆಯಲ್ಲಿ (Vidhan sabha) ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. ಈ ವಿಚಾರದಲ್ಲಿ ಕಾನೂನಾತ್ಮಕ ಸಮಸ್ಯೆ ಇದ್ದು, ಇದರ ಬಗ್ಗೆ ಇನ್ನಷ್ಟು ಚರ್ಚೆ ನಡೆಯಬೇಕಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹೇಳಿದ್ದಾರೆ.

ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಮಂಗಳವಾರ (ಜು.16) ಅನುಮೋದನೆ ನೀಡಿತ್ತು. ಇದಕ್ಕೆ ಉದ್ಯಮಿ ಕಿರಣ್‌ ಮಜುಂದಾರ್‌ ಶಾ, ಮೋಹನ್​ ದಾಸ್​ ಪೈ ಸೇರಿದಂತೆ ಇನ್ನೂ ಅನೇಕ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಮಸೂದೆಗೆ ಉದ್ಯಮಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಮುಜುಗರಕ್ಕೆ ಒಳಗಾದ ಸರಕಾರ, ವಿಧೇಯಕ ಜಾರಿಗೆ ಹಿಂದೇಟು ಹಾಕಿದೆ. ಈ ಹಿನ್ನೆಲೆಯಲ್ಲಿ ಇಂದು (ಜು.18) ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಾಲ್ವರು ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸಚಿವರಾದ ದಿನೇಶ್‌ ಗುಂಡೂರಾವ್​, ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್‌ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು.

ʼಕನ್ನಡಿಗರ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧವಿದೆ. ನಮ್ಮ ಮಾನವ‌ ಸಂಪನ್ಮೂಲಕ್ಕೆ ಖಾಸಗಿ ವಲಯದಲ್ಲಿ ಸಾಕಷ್ಟು ಡಿಮ್ಯಾಂಡ್ ಇದೆ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕವನ್ನು ಕಾನೂನಾತ್ಮಕವಾಗಿ ನೋಡಬೇಕಾಗುತ್ತೆ. ಹರ್ಯಾಣ, ಆಂಧ್ರಪ್ರದೇಶದಲ್ಲಿ ಈ ಬಿಲ್‌ಗೆ ಹೈಕೋರ್ಟ್ ತಡೆಯಾಜ್ಞೆಯನ್ನು ನೀಡಿದೆ ಹೀಗಾಗಿ ಜಾರಿಗೆ ಮುನ್ನ ಸಾಕಷ್ಟು ಚರ್ಚೆ ಮಾಡಬೇಕಾಗಿದೆʼ ಎಂದು ಖರ್ಗೆ ತಿಳಿಸಿದರು.

ಕರಡು ವಿಧೇಯಕ ಸಚಿವ ಸಂಪುಟದ ಮುಂದೆ ಇದೆ. ವಿಧೇಯಕ ಅನುಷ್ಠಾನಕ್ಕೆ ಸಾಕಷ್ಟು ಪ್ರಕ್ರಿಯೆಗಳಿವೆ. ಈ ಬಿಲ್ ವಿಚಾರವಾಗಿ ಇನ್ನಷ್ಟು ಚರ್ಚೆ ಮಾಡಬೇಕಿದೆ. ಆಂಧ್ರಪ್ರದೇಶದವರೂ ಅದೇ ಬಿಲ್ ಮಾಡಿ ಕೈ ಸುಟ್ಟುಕೊಂಡರು. ಇದೀಗ ಅಲ್ಲಿನ ಸಚಿವ ನಾರಾ ಲೋಕೇಶ್ ಅವರು ಐಟಿ ಕಂಪನಿಗಳಿಗೆ ಆಹ್ವಾನ ನೀಡಿ ಟ್ವೀಟ್ ಮಾಡಿದ್ದಾರೆ. ಮಾಡಲಿ. ಆದರೆ ಇಲ್ಲಿ ಬಂಡವಾಳ ಸೃಷ್ಟಿ, ಉದ್ಯೋಗ ಸೃಷ್ಟಿ ಮಾಡುವ ಅವಕಾಶವನ್ನು ಕರ್ನಾಟಕ ಕಳೆದುಕೊಳ್ಳುವುದಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದರು.

ನಾರಾ ಲೋಕೇಶ್‌ ಟ್ವೀಟ್‌

ಈ ಗೊಂದಲದ ನಡುವೆ, ʼಉರಿಯುವ ಮನೆಯಲ್ಲಿ ಗಳ ಹಿರಿದರುʼ ಎಂಬಂತೆ ಲಾಭ ಮಾಡಿಕೊಳ್ಳಲು ಆಂಧ್ರಪ್ರದೇಶ (Andhra Pradesh) ಮುಂದಾಗಿದೆ. ಕರ್ನಾಟಕ ಸರಕಾರದ ನಿಲುವಿನ ಕುರಿತು ಆಕ್ರೋಶ ವ್ಯಕ್ತಪಡಿಸಿದ ನಾಸ್ಕಾಂ ಸಂಘಟನೆಯ ಟ್ವೀಟ್‌ ಅನ್ನು ಶೇರ್‌ ಮಾಡಿರುವ ಆಂಧ್ರಪ್ರದೇಶ ಮಾನವ ಸಂಪನ್ಮೂಲ ಇಲಾಖೆ ಸಚಿವ ಲೋಕೇಶ್‌ ನಾರಾ, ʼನಮ್ಮಲ್ಲಿಗೆ ಬನ್ನಿʼ ಎಂದು ಖಾಸಗಿ ಕಂಪನಿಗಳಿಗೆ ಕರೆ ನೀಡಿದ್ದಾರೆ.

“ನಿಮ್ಮ ನಿರಾಶೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ವೈಜಾಗ್‌ನಲ್ಲಿರುವ ನಮ್ಮ IT, IT ಸೇವೆಗಳು, AI ಮತ್ತು ಡೇಟಾ ಸೆಂಟರ್ ಕ್ಲಸ್ಟರ್‌ಗೆ ನಿಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅಥವಾ ಸ್ಥಳಾಂತರಿಸಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ನಾವು ನಿಮಗೆ ಅತ್ಯುತ್ತಮ ದರ್ಜೆಯ ಸೌಲಭ್ಯಗಳು, ತಡೆರಹಿತ ವಿದ್ಯುತ್, ಮೂಲಸೌಕರ್ಯ ಮತ್ತು ನಿಮ್ಮ ಐಟಿ ಉದ್ಯಮಕ್ಕೆ ಸರ್ಕಾರದಿಂದ ಯಾವುದೇ ನಿರ್ಬಂಧಗಳಿಲ್ಲದೆ ಅತ್ಯಂತ ಸೂಕ್ತವಾದ ಕೌಶಲ್ಯಭರಿತ ಪ್ರತಿಭೆಗಳನ್ನು ನೀಡುತ್ತೇವೆ. ಆಂಧ್ರಪ್ರದೇಶ ನಿಮ್ಮನ್ನು ಸ್ವಾಗತಿಸಲು ಸಿದ್ಧವಾಗಿದೆ. ದಯವಿಟ್ಟು ಸಂಪರ್ಕದಲ್ಲಿರಿ!” ಎಂದು ನಾರಾ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Karnataka Jobs Reservation: ಉದ್ಯೋಗ ವಿಚಾರದಲ್ಲಿ ಕನ್ನಡಿಗರೊಂದಿಗೆ ಸರ್ಕಾರ ಚೆಲ್ಲಾಟ: ವಿಜಯೇಂದ್ರ ಆಕ್ರೋಶ

Continue Reading

Latest

Viral Video: 8 ವರ್ಷದ ಮಗನ ತಲೆ ನೆಲಕ್ಕೆ ಅಪ್ಪಳಿಸಿ, ಮೈಕೈಯೆಲ್ಲ ಕಚ್ಚಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

Viral Video: ತಾಯಿಯನ್ನು ಕರುಣಾಮೂರ್ತಿ, ಸಹನಾಮೂರ್ತಿ ಎಂದು ಕರೆಯುತ್ತಾರೆ. ತನ್ನ ಕರುಳು ಕುಡಿಗಾಗಿ ಎಂತಹ ತ್ಯಾಗ ಬೇಕಾದರೂ ಮಾಡುತ್ತಾಳೆ. ಆದರೆ ಇಲ್ಲೊಬ್ಬಳು ದುಷ್ಟ ತಾಯಿ ತನ್ನ ಮಗನನ್ನು ಹಿಂಸಿಸಿದ ಪರಿ ನೋಡಿದರೆ ತಾಯಿಯಾದವಳ ಕರುಳು ಕಿತ್ತು ಬರುತ್ತದೆ. ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿ ಪ್ರದೇಶದ ಜಬ್ರೆಡಾ ಗ್ರಾಮದಲ್ಲಿ, ಮಹಿಳೆಯೊಬ್ಬಳು ತನ್ನ 8 ವರ್ಷದ ಮಗನ ಮೇಲೆ ಕುಳಿತು, ನಿರ್ದಯವಾಗಿ ಥಳಿಸಿ, ಕಚ್ಚಿದ ಆಘಾತಕಾರಿ ಘಟನೆ ನಡೆದಿದೆ. ಆಕೆ ತನ್ನ ಮಗನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

VISTARANEWS.COM


on

Viral Video
Koo

ಹರಿದ್ವಾರ: ತಾಯಿಯನ್ನು ದೇವರು ಎಂದು ಕರೆಯುತ್ತಾರೆ. ಯಾಕೆಂದರೆ ಆಕೆಯಿಂದ ಸಿಗುವ ಪ್ರೀತಿ, ವಾತ್ಸಲ್ಯ ಮತ್ತೆ ಜಗತ್ತಿನಲ್ಲಿ ಬೇರೆ ಯಾರಿಂದಲೂ ಸಿಗಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳು ತಾಯಿ ಎಷ್ಟೇ ಹೊಡೆದರೂ, ಬೈದರೂ ಅವಳ ಹಿಂದೆಯೇ ಓಡುತ್ತಾರೆ. ಆದರೆ ಇಲ್ಲೊಬ್ಬ ತಾಯಿ ದೇವರಲ್ಲ ದೆವ್ವದಂತೆ ವರ್ತಿಸಿದ್ದಾಳೆ. ತನ್ನ ಮಗನನ್ನು ಹೊಡಿದು ಬಡಿದು ಚಿತ್ರಹಿಂಸೆ ನೀಡುತ್ತಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ತಾಯಿಗೆ ತನ್ನ ಮಕ್ಕಳು ತಪ್ಪು ಮಾಡಿದರೆ ದಂಡಿಸುವ ಹಕ್ಕಿದೆ ನಿಜ. ಅಂದಮಾತ್ರಕ್ಕೆ ಅವರಿಗೆ ದಂಡಿಸುವ ನೆಪದಲ್ಲಿ ಚಿತ್ರಹಿಂಸೆ ನೀಡಬಾರದು. ಈ ವಿಡಿಯೊ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿ ಪ್ರದೇಶದ ಜಬ್ರೆಡಾ ಗ್ರಾಮದಲ್ಲಿ, ಮಹಿಳೆಯೊಬ್ಬಳು ತನ್ನ 8 ವರ್ಷದ ಮಗನ ಮೇಲೆ ಕುಳಿತು, ನಿರ್ದಯವಾಗಿ ಥಳಿಸಿ, ಕಚ್ಚಿದ ಆಘಾತಕಾರಿ ಘಟನೆ ನಡೆದಿದೆ. ಆಕೆ ತನ್ನ ಮಗನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಈ ದುಷ್ಕೃತ್ಯವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಆತಂಕಕಾರಿ ವೀಡಿಯೊ ತುಣುಕಿನಲ್ಲಿ ಮಹಿಳೆ ತನ್ನ ಮಗನ ಮೇಲೆ ಕುಳಿತು, ಪದೇ ಪದೇ ಆತನ ಬಾಯಿಗೆ, ಕೆನ್ನೆಗೆ ಹೊಡೆಯುವುದು, ಕಚ್ಚುವುದು ಮತ್ತು ಉಸಿರುಗಟ್ಟಿಸುವುದನ್ನು ತೋರಿಸುತ್ತದೆ. ಈ ಸಮಯದಲ್ಲಿ ಆಕೆ ಕೋಪದಿಂದ ತನ್ನ ಮಗನ ತಲೆಯನ್ನು ನೆಲಕ್ಕೆ ಅಪ್ಪಳಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ನೋಡಿದವರಿಗೆ ಕರುಳು ಚುರುಕ್ ಅನ್ನುವುದಂತು ಸಹಜ. ಮಹಿಳೆಯ ಈ ಕೃತ್ಯ ವೈರಲ್ ಆದ ಹಿನ್ನಲೆಯಲ್ಲಿ ಮಾಹಿತಿ ಪಡೆದ ಅಧಿಕಾರಿಗಳು ಮಧ್ಯಪ್ರವೇಶಿಸಿ ಮಹಿಳೆಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮತ್ತು ತನಿಖೆ ಮುಂದುವರೆದಿರುವುದರಿಂದ ಮಹಿಳೆ ಈಗ ಪೊಲೀಸ್ ವಶದಲ್ಲಿದ್ದಾಳೆ ಎನ್ನಲಾಗಿದೆ.

ತಾಯಿ ತನ್ನ ಮಕ್ಕಳ ಮೇಲೆ ಹಲ್ಲೆ ಮಾಡುವಂತಹ ಘಟನೆ ಇದೆ ಮೊದಲಲ್ಲಾ. ಇದಕ್ಕೂ ಮೊದಲು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನ ಗಿರಿನಗರದ ವೀರಭದ್ರೇಶ್ವರ ನಗರದಲ್ಲಿ ಪತಿಯಿಂದ ದೂರವಿದ್ದು ತನ್ನ ಗೆಳೆಯನ ಜೊತೆ ಜೀವನ ನಡೆಸುತ್ತಿದ್ದ ಮಹಿಳೆಯೊಬ್ಬಳು ತನ್ನ 3 ವರ್ಷ ವಯಸ್ಸಿನ ಗಂಡು ಮಗುವಿಗೆ ನಿತ್ಯ ದೈಹಿಕ ಕಿರುಕುಳ ನೀಡುತ್ತಿದ್ದಳು. ಆಕೆಯ ಕುರಿತು ಅನುಮಾನಗೊಂಡ ಸ್ಥಳೀಯರು ಮನೆ ಬಳಿ ಹೋಗಿ ನೋಡಿದಾಗ ಮಗುವಿನ ಅಸಹಾಯಕ ಸ್ಥಿತಿ ಕಂಡುಬಂದಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಂನಲ್ಲಿಯೇ ಗಂಡನಿಗೆ ಡಿವೋರ್ಸ್‌‌ ನೀಡಿದ ದುಬೈ ರಾಜಕುಮಾರಿ! ಏನು ಬರೆದಿದ್ದಾಳೆ ನೋಡಿ!

ತಾಯಿ ಹಾಗೂ ಆಕೆಯ ಸ್ನೇಹಿತ ನೀಡುವ ಕಿರುಕುಳವನ್ನು ಅಕ್ಕಪಕ್ಕದವರ ಬಳಿ ಆ ಮಗು ಹೇಳಿಕೊಂಡಿದೆ. ಆಗ ಸಿಟ್ಟಿಗೆದ್ದ ಜನರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಮಹಿಳೆಯನ್ನು ಠಾಣೆಗೆ ಕರೆಸಿ ಪೊಲೀಸರು ಬುದ್ಧಿವಾದ ಹೇಳಿದ್ದರು. ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿರುವ ಮಕ್ಕಳ ಆಯೋಗ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.

Continue Reading

ಪ್ರಮುಖ ಸುದ್ದಿ

Karnataka Assembly Live: ಅನ್ನದಾತನಿಗೆ ಅವಮಾನ ಮಾಡಿದ ಜಿಟಿ ಮಾಲ್‌ 7 ದಿನ ಬಂದ್: ವಿಧಾನಸಭೆಯಲ್ಲಿ ಘೋಷಣೆ, ವಿಸ್ತಾರ್‌ ನ್ಯೂಸ್‌ ಬಿಗ್‌ ಇಂಪ್ಯಾಕ್ಟ್

Karnataka Assembly Live: ವಿಧಾನಸಭೆ ಕಲಾಪದ ಆರಂಭದ ಹೊತ್ತಿಗೆ ಸ್ವತಃ ಸ್ಪೀಕರ್‌ ಯು.ಟಿ ಖಾದರ್‌ ಅವರು ಈ ವಿಚಾರ ಎತ್ತಿದರು. ಈ ಬಗ್ಗೆ ಸರ್ಕಾರದ ನಿಲುವನ್ನು ತಿಳಿಸುವಂತೆ ಸೂಚಿಸಿದರು. ಸದಸ್ಯರು ಪಕ್ಷಾತೀತವಾಗಿ ಮಾಲ್‌ ನಡೆಯನ್ನು ತೀವ್ರವಾಗಿ ಖಂಡಿಸಿದರು.

VISTARANEWS.COM


on

gt world mall karnataka assembly live
Koo

ಬೆಂಗಳೂರು: ಪಂಚೆ ಧರಿಸಿ ಬಂದ ಹಾವೇರಿಯ ರೈತರಿಗೆ ಒಳಬಿಡದ ರಾಜಧಾನಿಯ ಜಿಟಿ ವರ್ಲ್ಡ್‌ ಮಾಲ್‌ (GT World Mall) ಮೇಲೆ ಶಿಸ್ತು ಕ್ರಮವಾಗಿ ಮಾಲ್‌ ಅನ್ನು 7 ದಿನಗಳ ಕಾಲ ಮುಚ್ಚಲು ಸೂಚನೆ ನೀಡುವುದಾಗಿ ವಿಧಾನಸಭೆ‌ ಕಲಾಪದಲ್ಲಿ (Karnataka Assembly Live) ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ (Byrathi Suresh) ಘೋಷಿಸಿದ್ದಾರೆ.

ಇಂದು ಆರಂಭವಾದ ಮೂರನೇ ದಿನದ ವಿಧಾನಸಭೆ ಕಲಾಪ (Karnataka Assembly Live) ಆರಂಭದಲ್ಲೇ ಈ ವಿಷಯ ಪ್ರಸ್ತಾಪವಾಯಿತು. ಹಲವರು ಸದಸ್ಯರು ರೈತರಿಗೆ ಅವಮಾನ ಆದ ವಿಷಯವನ್ನು ಪ್ರಸ್ತಾಪಿಸಿದರು. ವಿಸ್ತಾರ ನ್ಯೂಸ್‌ ನಿನ್ನೆ ಇಡೀ ದಿನ ಈ ಘಟನೆಯನ್ನು ಪ್ರಸಾರ ಮಾಡಿದ್ದಲ್ಲದೆ, ರೈತರನ್ನು ಮರಳಿ ಜಿಟಿ ಮಾಲ್‌ಗೆ ಕರೆದೊಯ್ದು ಪ್ರವೇಶ ಕೊಡಿಸಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡ ಹಾಗೂ ರೈತಪರ ಸಂಘಟನೆಗಳು ಈ ವಿಚಾರದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಕೈಜೋಡಿಸಿದ್ದವು. ನಂತರ ಸಚಿವ ಸಂತೋಷ್‌ ಲಾಡ್‌ ಕೂಡ ಈ ವಿಚಾರದಲ್ಲಿ ಮಾಲ್‌ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ವಿಧಾನಸಭೆ ಕಲಾಪದ ಆರಂಭದ ಹೊತ್ತಿಗೆ ಸ್ವತಃ ಸ್ಪೀಕರ್‌ ಯು.ಟಿ ಖಾದರ್‌ ಅವರು ಈ ವಿಚಾರ ಎತ್ತಿದರು. ಈ ಬಗ್ಗೆ ಸರ್ಕಾರದ ನಿಲುವನ್ನು ತಿಳಿಸುವಂತೆ ಸೂಚಿಸಿದರು. ಸದಸ್ಯರು ಪಕ್ಷಾತೀತವಾಗಿ ಮಾಲ್‌ ನಡೆಯನ್ನು ತೀವ್ರವಾಗಿ ಖಂಡಿಸಿದರು. ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ. 7 ದಿನಗಳ ವರೆಗೆ ಬಂದ್‌ ಮಾಡಿಸಬಹುದು. ಎಚ್ಚರಿಕೆ ನೀಡಿ ಏಳು ದಿನಗಳ ಕಾಲ ಮಾಲ್ ಬಂದ್ ಮಾಡಿಸಲಾಗುವುದು ಎಂದು ತಿಳಿಸಿದರು.

ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೇಳಿಕೆ ನೀಡಿ, ಬೆಂಗಳೂರಿನ ಕ್ಲಬ್‌ಗಳ ಒಳಗೆ ಕೂಡ ಸಾಕಷ್ಟು ಷರತ್ತುಗಳಿವೆ ಎಂದು ಪ್ರಸ್ತಾವಿಸಿದರು. ಬೌರಿಂಗ್ ಕ್ಲಬ್, ಸೆಂಚುರಿ ಕ್ಲಬ್‌ನಲ್ಲಿ ಚಪ್ಪಲಿ ಹಾಕಿಕೊಂಡು ಹೋಗುವ ಹಾಗಿಲ್ಲ. ಟೀ ಶರ್ಟ್ ಕೂಡ ಹಾಕಿಕೊಂಡು ಹೋಗುವ ಹಾಗಿಲ್ಲ. ಅವರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು. ಅಂತಹ ಕ್ಲಬ್‌ಗೆ ನೀವು ಯಾಕೆ ಹೋಗ್ತೀರಾ ಅಂತ ಸುರೇಶ್‌ ಕುಮಾರ್‌ ಅವರು ಅಶೋಕ್ ಪಟ್ಟಣ್‌ ಕಾಲೆಳೆದರು.

ಏನಿದು ಪ್ರಕರಣ?

ಮಂಗಳವಾರ ಸಂಜೆ ಘಟನೆ ನಡೆದಿತ್ತು. ಹಾವೇರಿಯ ರೈತ ಫಕೀರಪ್ಪ ಅವರು ಪಂಚೆ ಧರಿಸಿ, ಮಗನ ಸಮೇತ ಸಿನಿಮಾ ನೋಡಲು ಬಂದಿದ್ದರು. ʼಪಂಚೆ ಧರಿಸಿ ಮಾಲ್ ಒಳಗೆ ಬರುವಂತಿಲ್ಲʼ ಎಂದು ಸೆಕ್ಯುರಿಟಿ ತಡೆದಿದ್ದರು. ಇದನ್ನು ರೈತರ ಮಗ ಪ್ರಶ್ನಿಸಿದ್ದರು. ನಂತರ ʼವಿಸ್ತಾರ ನ್ಯೂಸ್‌ʼ ಈ ವಿಚಾರವನ್ನು ಎತ್ತಿಕೊಂಡು ನಿನ್ನೆ ಇಡೀ ದಿನ ಕವರೇಜ್‌ ಮಾಡಿತ್ತು. ಪಂಚೆಯ ಹೆಸರಿನಲ್ಲಿ ರೈತರಿಗೆ ಆಗುತ್ತಿರುವ ಅವಮಾನದ ವಿರುದ್ಧ ಸಿಡಿದೆದ್ದು ಪ್ರಶ್ನೆ ಮಾಡಿತ್ತು.

ಬಳಿಕ ಇದನ್ನು ಕನ್ನಡ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಕೈಗೆತ್ತಿಕೊಂಡಿದ್ದವು. ಮಾಲ್‌ ಮುಂದೆ ತೀವ್ರ ಹೋರಾಟ ಹಾಗೂ ಪ್ರತಿಭಟನೆ ನಡೆದಿತ್ತು. ʼವಿಸ್ತಾರ ನ್ಯೂಸ್‌ʼ ಈ ಬಗ್ಗೆ ಕಾರ್ಯಕ್ರಮ ಮಾಡಿದ್ದಲ್ಲದೆ, ಅದೇ ರೈತರನ್ನು ಕರೆದೊಯ್ದು ಮಾಲ್‌ಗೆ ಪ್ರವೇಶ ಕೊಡಿಸಿತ್ತು. ಈ ಸಂದರ್ಭದಲ್ಲಿ ಮಾಲ್‌ನ ಮುಖ್ಯಸ್ಥರು ಸ್ಥಳದಲ್ಲಿ ಹಾಜರಿದ್ದು, ತಮ್ಮ ಸಿಬ್ಬಂದಿಯಿಂದ ಆದ ಅವಮಾನಕ್ಕೆ ಕ್ಷಮೆ ಕೇಳಿದ್ದರು. ರೈತ ಫಕೀರಪ್ಪಗೆ ಹಾರ ಹಾಕಿ ಸನ್ಮಾನ ಮಾಡಿದ್ದರು. ರೈತ- ಕನ್ನಡ ಸಂಘಟನೆಗಳ ಕಾರ್ಯಕರ್ತರು ಪಂಚೆ ಧರಿಸಿ ಮಾಲ್‌ಗೆ ಪ್ರವೇಶಿಸಿದ್ದರು.

ರೈತರಿಗೆ ಪ್ರವೇಶ ನಿರಾಕರಣೆ ಮಾಡಿದ ಜಿ‌ಟಿ ಮಾಲ್ ಕ್ರಮವನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಖಂಡಿಸಿದ್ದು, ಈ ವಿಚಾರದಲ್ಲಿ ಸೂಕ್ತ ನಿಯಮ ರೂಪಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ. ʼನಾವು ಇದನ್ನ ಖಂಡಿಸುತ್ತೇವೆ. ಕೆಲ ವರ್ಷಗಳ ಹಿಂದೆ ಪಂಚೆ ಕಟ್ಟಿಕೊಂಡು ಹೋದರೆ ಕ್ಲಬ್‌ಗಳಲ್ಲಿ ಬಿಡುತ್ತಿರಲಿಲ್ಲ. ಶೂ ಇಲ್ಲದೇ ಪಂಚೆ ಹಾಕಿಕೊಂಡು ಕ್ಲಬ್‌ಗೆ ಹೋಗಬಹುದು ಅಂತ ನಮ್ಮ ಸರ್ಕಾರ ನಿರ್ಧಾರ ಮಾಡಿತ್ತು. ಇದನ್ನು ನಾವು ಅಂದು ಅಧಿವೇಶನದಲ್ಲಿ ಚರ್ಚೆ ಮಾಡಿದ್ದೆವು. ಈಗಲೂ ಇದಕ್ಕೆ ಸರ್ಕಾರ ನಿಯಮ ತರಬೇಕುʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: GT World Mall: ಅನ್ನದಾತನಿಗೆ ಅವಮಾನ ಮಾಡಿದ ಜಿಟಿ ಮಾಲ್‌ ಮುಂದೆ ಪಂಚೆ ಉಟ್ಟು ಪ್ರತಿಭಟನೆ, ಕ್ಷಮೆ ಕೇಳಿದ ಮಾಲೀಕ

Continue Reading

ಕ್ರೀಡೆ

Olympic Medals: ಒಲಿಂಪಿಕ್ಸ್​ ವಿಜೇತರಿಗೆ ನೀಡುವ ಚಿನ್ನದ ಪದಕ ಚಿನ್ನದ್ದಲ್ಲ!

Olympic Medals: ಒಲಿಂಪಿಕ್ ಚಾಂಪಿಯನ್‌ಗಳು ತಮ್ಮ ಬಾಯಿಯಲ್ಲಿ ಚಿನ್ನದ ಪದಕವನ್ನು ಕಚ್ಚುವುದು ಈಗ ಶುದ್ಧತೆಯನ್ನು ಪರಿಶೀಲಿಸುವುದಕ್ಕಾಗಿ ಅಲ್ಲ. ಯಾಕೆಂದರೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) 1912 ರಲ್ಲಿ ಶುದ್ಧ ಚಿನ್ನದ ಪದಕಗಳನ್ನು ನೀಡುವುದನ್ನು ನಿಲ್ಲಿಸಿತ್ತು. ಆದರೆ ಅದರ ಅಭ್ಯಾಸ ಕ್ರಮ ಇನ್ನೂ ಮುಂದುವರಿದಿದೆ.

VISTARANEWS.COM


on

Olympic Medals
Koo

ಬೆಂಗಳೂರು: ಇದುವರೆಗಿನ ಒಲಿಂಪಿಕ್ಸ್(Olympic)​ ಇತಿಹಾಸದಲ್ಲೇ(olympic history) ಅಮೆರಿಕದ ಖ್ಯಾತ ಈಜು ದಂತಕಥೆ ಮೈಕೆಲ್ ಫೆಲ್ಪ್ಸ್ ಅತ್ಯಧಿಕ ಪದಕ ಗೆದ್ದ ಸಾಧಕ. ‘ಚಿನ್ನದ ಮೀನು’ ಎಂದೇ ಖ್ಯಾತಿಗಳಿಸಿರುವ ಇವರು ಸರ್ವಾಧಿಕ 23 ಚಿನ್ನದ ಪದಕ ಗೆದ್ದಿದ್ದಾರೆ. ಅಚ್ಚರಿ ಎಂದರೆ ಇವರು ಗೆದ್ದಿರುವ ಪದಕಗಳು ಚಿನ್ನದ್ದಲ್ಲ. ಹಾಗಿದ್ದರೆ ಚಿನ್ನ ಗೆದ್ದ(Olympic Medals) ಸಾಧಕರಿಗೆ ಯಾವ ಪದಕ ನೀಡಲಾಗುತ್ತದೆ ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಹೌದು, ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಸಾಧಕರಿಗೆ ನಿಜವಾದ ಚಿನ್ನದ ಪದಕ ನೀಡಲಾಗುವುದಿಲ್ಲ. ಲೇಪನ ಮಾಡಿದ ಪದಕವನ್ನಷ್ಟೇ ನೀಡಲಾಗುತ್ತದೆ. ಪೂರ್ತಿ ಚಿನ್ನದಿಂದಲೇ ತಯಾರಿಸಿದ ಪದಕಗಳನ್ನು 1912ರ ಸ್ವೀಡನ್‌ನ ಸ್ಟಾಕ್‌ಹೊಮ್ಲಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ನೀಡಲಾಗಿತ್ತು. ಆ ಬಳಿಕ ಬಂಗಾರದ ಪದಕಗಳು ಚಿನ್ನದ ಲೇಪನವನ್ನಷ್ಟೆ (ಕನಿಷ್ಠ 6 ಗ್ರಾಂ) ಹೊಂದಿರುತ್ತವೆ ಮತ್ತು ಶೇಕಡ 93 ಬೆಳ್ಳಿಯೇ ತುಂಬಿರುತ್ತದೆ. ಹೀಗಾಗಿ ಒಲಿಂಪಿಕ್ಸ್‌ನ ಚಿನ್ನ ಮತ್ತು ಬೆಳ್ಳಿ ಪದಕಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ.

ಇದನ್ನೂ ಓದಿ Paris Olympics: ಪ್ಯಾರಿಸ್‌ ಒಲಿಂಪಿಕ್ಸ್​ ಭದ್ರತಾ ಕಾರ್ಯದಲ್ಲಿ ಭಾರತದ ಶ್ವಾನದಳ; ಬೆಂಗಳೂರಿನಲ್ಲಿ ತರಬೇತಿ

ಬೆಳ್ಳಿ ಪದಕ ನೀಡಲಾಗಿತ್ತು


1896ರ ಮೊದಲ ಒಲಿಂಪಿಕ್ಸ್​ನಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬೆಳ್ಳಿ ಪದಕವನ್ನೇ ನೀಡಲಾಗಿತ್ತು. 2ನೇ ಸ್ಥಾನ ಪಡೆದವರು ಕಂಚಿನ ಪದಕ ಗಳಿಸಿದ್ದರು. 1900ರ ಒಲಿಂಪಿಕ್ಸ್‌ ವಿಜೇತರಿಗೆ ಪದಕಗಳ ಬದಲಾಗಿ ಟ್ರೋಫಿಗಳನ್ನು ನೀಡಲಾಗಿತ್ತು. 1904ರ ಒಲಿಂಪಿಕ್ಸ್‌ನಿಂದ ಚಿನ್ನ, ಬೆಳ್ಳಿ, ಕಂಚಿನ ಪದಕ ನೀಡುವ ಸಂಪ್ರದಾಯ ಹುಟ್ಟಿಕೊಂಡಿತು. ಪ್ರತಿ ಪದಕ ಕನಿಷ್ಠ 7.7 ಎಂ.ಎಂ. ದಪ್ಪ ಮತ್ತು 85 ಎಂ.ಎಂ. ಸುತ್ತಳತೆ ಹೊಂದಿರಬೇಕೆಂದು ಐಒಸಿ ನಿಯಮ.


ಕ್ರೀಡಾಪಟುಗಳು ಪದಕ ಕಚ್ಚುವುದು ಏಕೆ?


ಒಲಂಪಿಕ್ಸ್‌ನಲ್ಲಿ (Olympic) ಪದಕ ವಿಜೇತ ( winners ) ಕ್ರೀಡಾಪಟುಗಳು ಪದಕವನ್ನು ಕಚ್ಚಿ (Medal Biting) ಫೋಟೋಗೆ ಪೋಸ್ ಕೊಡುವುದನ್ನು ನೋಡಿರುತ್ತೇವೆ. ಇವರು ಯಾಕೆ ಹೀಗೆ ಮಾಡುತ್ತಾರೆ ಎನ್ನುವ ಪ್ರಶ್ನೆಯಂತೂ ಒಂದಲ್ಲಾ ಒಂದು ಬಾರಿ ನಮ್ಮ ಮನದಲ್ಲಿ ಮೂಡಿರುತ್ತದೆ. ಒಲಿಂಪಿಕ್ ಪದಕ ವಿಜೇತರು ಪದಕ ಕಚ್ಚಲು ಕಾರಣವಿದೆ ಮಾತ್ರವಲ್ಲ ಇದಕ್ಕೆ ದೊಡ್ಡ ಇತಿಹಾಸವೇ ಇದೆ.

ಇದನ್ನೂ ಓದಿ The Olympic Games: 72ರ ಇಳಿ ವಯಸ್ಸಿನಲ್ಲೂ ಒಲಿಂಪಿಕ್ಸ್​ ಪದಕ ಗೆದ್ದಿದ್ದ ಶೂಟರ್‌; ಯಾರಿವರು?


ಒಲಿಂಪಿಕ್ಸ್ ನ ಆರಂಭಿಕ ದಿನಗಳು. ಬೆಲೆಬಾಳುವ ಚಿನ್ನವನ್ನು ಕರೆನ್ಸಿಯ ರೂಪದಲ್ಲಿ ಬಳಸಲು ಪ್ರಾರಂಭಿಸಲಾಯಿತು. ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಲು ವ್ಯಾಪಾರಿಗಳು ಚಿನ್ನದ ನಾಣ್ಯಗಳನ್ನು ಕಚ್ಚಿ ನೋಡುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಚಿನ್ನವು ಮೃದುವಾದ ಲೋಹವಾಗಿದೆ. ಇದರ ಮೇಲೆ ಸ್ವಲ್ಪ ಒತ್ತಡ ಬಿದ್ದರೂ ಗುರುತು ಬೀಳುತ್ತದೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಕ್ರೀಡಾಪಟುಗಳು ತಮಗೆ ಸಿಗುವ ಚಿನ್ನದ ಪದಕವನ್ನು ಪರಿಶೀಲಿಸಲು ಹೀಗೆ ಮಾಡುತ್ತಿದ್ದರು. ಕ್ರಮೇಣ ಇದೊಂದು ಅಭ್ಯಾಸದ ಭಾಗವಾಯಿತು.

ಇದನ್ನೂ ಓದಿ Olympic Games History: ಒಲಿಂಪಿಕ್ಸ್​ನಲ್ಲಿ ಗ್ರೀಸ್​ ದೇಶಕ್ಕೆ ವಿಶೇಷ ಮಾನ್ಯತೆ ನೀಡುವುದೇಕೆ?

ಒಲಿಂಪಿಕ್ ಚಾಂಪಿಯನ್‌ಗಳು ತಮ್ಮ ಬಾಯಿಯಲ್ಲಿ ಚಿನ್ನದ ಪದಕವನ್ನು ಕಚ್ಚುವುದು ಈಗ ಶುದ್ಧತೆಯನ್ನು ಪರಿಶೀಲಿಸುವುದಕ್ಕಾಗಿ ಅಲ್ಲ. ಯಾಕೆಂದರೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) 1912 ರಲ್ಲಿ ಶುದ್ಧ ಚಿನ್ನದ ಪದಕಗಳನ್ನು ನೀಡುವುದನ್ನು ನಿಲ್ಲಿಸಿತ್ತು. ಆದರೆ ಅದರ ಅಭ್ಯಾಸ ಕ್ರಮ ಇನ್ನೂ ಮುಂದುವರಿದಿದೆ.

Continue Reading
Advertisement
Priyank Kharge karnataka jobs reservation
ಪ್ರಮುಖ ಸುದ್ದಿ31 seconds ago

Karnataka Jobs Reservation: ಕನ್ನಡಿಗರಿಗೆ ಮೀಸಲು ಕಡ್ಡಾಯ ಮಾಡಲು ಕಾನೂನು ಸಮಸ್ಯೆ: ಖರ್ಗೆ

Re-NEET
ದೇಶ10 mins ago

Re-NEET: ನೀಟ್-ಯುಜಿ 2024 ವಿವಾದ; ಇಡೀ ಪರೀಕ್ಷೆಯ ಪಾವಿತ್ರ್ಯತೆಯ ಮೇಲೆ ಪರಿಣಾಮ ಬೀರಿದ್ದರೆ ಮಾತ್ರ ರಿಟೆಸ್ಟ್‌ ಎಂದ ಸುಪ್ರೀಂ ಕೋರ್ಟ್‌

Star Suvarna Akhand Deepa at Sigandur Sri Chaudeshwari Temple Shri Devi Mahatme serial team contribution
ಕಿರುತೆರೆ24 mins ago

Star Suvarna: ಸಿಗಂದೂರು ದೇವಸ್ಥಾನದಲ್ಲಿ ‘ಸುವರ್ಣ ಅಖಂಡ ದೀಪ’ಕ್ಕೆ ಚಾಲನೆ; `ಶ್ರೀ ದೇವೀ ಮಹಾತ್ಮೆ’ ಧಾರಾವಾಹಿ ತಂಡದ ಕೊಡುಗೆ

karnataka Rain
ಮಳೆ33 mins ago

Karnataka Rain : ಹಾಸನದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿತ; ಬೆಳಗಾವಿಯಲ್ಲಿ ರಸ್ತೆಗೆ ಉರುಳಿದ ಬೃಹತ್‌ ಬಂಡೆಗಲ್ಲು

The Birthday Boy Director Whisky Real Life Story
ಟಾಲಿವುಡ್41 mins ago

The Birthday Boy: ಹೆಸರು ಬದಲಾಯಿಸಿ ಕದ್ದು ಮುಚ್ಚಿ ಸಿನಿಮಾ ಮಾಡಿ, ಮಾಸ್ಕ್‌ ಧರಿಸಿ ಬಂದ ನಿರ್ದೇಶಕ! ಏನು ಕಥೆ?

Viral Video
Latest51 mins ago

Viral Video: 8 ವರ್ಷದ ಮಗನ ತಲೆ ನೆಲಕ್ಕೆ ಅಪ್ಪಳಿಸಿ, ಮೈಕೈಯೆಲ್ಲ ಕಚ್ಚಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

India Squad Announcement
ಕ್ರೀಡೆ51 mins ago

India Squad Announcement: ಶ್ರೀಲಂಕಾ ಸರಣಿಗೆ ಮರಳಿದ ಹಿಟ್​ಮ್ಯಾನ್​ ರೋಹಿತ್​!

Gold Rate Today
ಚಿನ್ನದ ದರ1 hour ago

Gold Rate Today: ಚಿನ್ನದ ಬೆಲೆಯಲ್ಲಿ ತುಸು ಇಳಿಕೆ; ಇಂದಿನ ದರ ಚೆಕ್‌ ಮಾಡಿ

Kannada New Movie prakarana tanikha hantadalli ide
ಸ್ಯಾಂಡಲ್ ವುಡ್1 hour ago

Kannada New Movie: ‘ಪ್ರಕರಣ ತನಿಖಾ ಹಂತದಲ್ಲಿದೆ’ ಮೋಷನ್ ಪೋಸ್ಟರ್ ಬಿಡುಗಡೆ

gt world mall karnataka assembly live
ಪ್ರಮುಖ ಸುದ್ದಿ2 hours ago

Karnataka Assembly Live: ಅನ್ನದಾತನಿಗೆ ಅವಮಾನ ಮಾಡಿದ ಜಿಟಿ ಮಾಲ್‌ 7 ದಿನ ಬಂದ್: ವಿಧಾನಸಭೆಯಲ್ಲಿ ಘೋಷಣೆ, ವಿಸ್ತಾರ್‌ ನ್ಯೂಸ್‌ ಬಿಗ್‌ ಇಂಪ್ಯಾಕ್ಟ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ5 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌