Babar Azam: 18 ವರ್ಷದ ನೆಟ್​ ಬೌಲರ್​ ಮುಂದೆ ಪರದಾಡಿದ ಪಾಕ್​ ನಾಯಕ ಬಾಬರ್​ ಅಜಂ; ವಿಡಿಯೊ ವೈರಲ್​ - Vistara News

ಕ್ರೀಡೆ

Babar Azam: 18 ವರ್ಷದ ನೆಟ್​ ಬೌಲರ್​ ಮುಂದೆ ಪರದಾಡಿದ ಪಾಕ್​ ನಾಯಕ ಬಾಬರ್​ ಅಜಂ; ವಿಡಿಯೊ ವೈರಲ್​

Babar Azam: ಬಾಬರ್​ ಅಜಂ ಮತ್ತು ಪಾಕ್​ನ ಕೆಲ ಬ್ಯಾಟರ್​ಗಳು ಈ 18 ವರ್ಷದ ನೆಟ್​ ಬೌಲರ್​ನ ಎಸೆತವನ್ನು ಡಿಫೆನ್ಸ್​ ಮಾಡಲು ಕೂಡ ಪರದಾಟ ನಡೆಸಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

VISTARANEWS.COM


on

Babar Azam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕರಾಚಿ: ಪಾಕಿಸ್ತಾನ ತಂಡ ಮುಂದಿನ ತಿಂಗಳು ಟೆಸ್ಟ್​ ಸರಣಿಯನ್ನಾಡಲು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೆ ಈಗಿಂದಲೇ ಪಾಕ್​ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಪಾಕ್​ ನಾಯಕ ಬಾಬರ್​ ಅಜಂ(Babar Azam) ಅವರು ನೆಟ್ಸ್​ನಲ್ಲಿ 18 ವರ್ಷದ ವೇಗಿಯ ಎಸೆತವನ್ನು ಎದುರಿಸಲು ಪರದಾಟ ನಡೆಸಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

ಬಾಬರ್​ ಅಜಂ ಮತ್ತು ಪಾಕ್​ನ ಕೆಲ ಬ್ಯಾಟರ್​ಗಳು ಈ 18 ವರ್ಷದ ನೆಟ್​ ಬೌಲರ್​ನ ಎಸೆತವನ್ನು ಡಿಫೆನ್ಸ್​ ಮಾಡಲು ಕೂಡ ಪರದಾಟ ನಡೆಸಿದ್ದಾರೆ. ಮಾಜಿ ವೇಗಿ ಅಖ್ತರ್​ ಅವರಂತೆ ಬೆಂಕಿ ಚೆಂಡೆಸೆಯುವ ಈ 18 ವರ್ಷದ ವೇಗಿ ಪಾಕ್​ ತಂಡದ ವೇಗಿ ನಸೀಮ್ ಶಾ ಅವರ ಕಿರಿಯ ಸಹೋದರ. ಇವರ ಹೆಸರು ಉಬೈದ್ ಶಾ(Ubaid Shah). ನಸೀಮ್​ ಕೂಡ ಘಾತಕ ಬೌಲಿಂಗ್​ಗೆ ಹೆಸರುವಾಸಿಯಾಗಿದ್ದು, ಇದೀಗ ತಮ್ಮ ಕೂಡ ಅಣ್ಣನಂತೆ ಬೌಲಿಂಗ್​ ನಡೆಸಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಪಾಕ್​ ತಂಡಕ್ಕೆ ಸೇರ್ಪಡೆಯಾದರೂ ಅಚ್ಚರಿಯಿಲ್ಲ.

ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧವೂ ಸೋಲಿನ ಅಪಮಾನ ಎದುರಿಸಿತ್ತು. ಲೀಗ್​ ಹಂತದಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಪಾಕ್​ ತಂಡದ ಹೀನಾಯ ಪ್ರದರ್ಶನಕ್ಕೆ ಮಾಜಿ ನಾಯಕ ಶಾಹಿದ್ ಅಫ್ರಿದಿ ಬಾಬರ್ ಅವರನ್ನು ತೀವ್ರವಾಗಿ ಟೀಕಿಸಿದ್ದರು.

“ಪಾಕಿಸ್ತಾನವನ್ನು ಮುನ್ನಡೆಸಲು ಬಾಬರ್‌ಗೆ ಸಂಪೂರ್ಣವಾಗಿ ಮುಕ್ತ ಅವಕಾಶ ಸಿಕ್ಕಿದ್ದರೂ ಕೂಡ ಇದನ್ನು ಅವರು ಉಪಯೋಗ ಮಾಡಿಕೊಂಡಿಲ್ಲ. ಅವರು ಫೀಲ್ಡ್​ನಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಗೊಂದಲಮಯವಾಗಿದೆ” ಎಂದು ಅಫ್ರಿದಿ ಹೇಳಿದ್ದರು.

ಇದನ್ನೂ ಓದಿ Babar Azam: ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದವನ ಮೇಲೆ 1 ಕೋಟಿ ರೂ. ಮಾನನಷ್ಠ ಮೊಕದ್ದಮೆ ಹೂಡಿದ ಬಾಬರ್ ಅಜಮ್​

ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಾಬರ್ ಕೆಳಗಿಳಿದ ಬಳಿಕ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಹಿಂದೆಂದು ಕಾಣದ ವೈಫಲ್ಯ ಕಂಡಿತ್ತು. ಆಡಿದ ಹಲವು ಸರಣಿಗಳಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಅಫ್ರೀದಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮತ್ತೆ ಬಾಬರ್​ಗೆ ನಾಯಕತ್ವದ ಪಟ್ಟ ನೀಡಲಾಗಿತ್ತು. ಆದರೆ ಇವರ ನಾಯಕತ್ವದಲ್ಲಿಯೂ ಪಾಕ್​ ಕಳಪೆ ಪ್ರದರ್ಶನ ತೋರಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

International Cricket Council : ಟಿ20 ವಿಶ್ವಕಪ್ ಆಯೋಜನೆಯಲ್ಲಿ ಐಸಿಸಿಗೆ 167 ಕೋಟಿ ರೂಪಾಯಿ ನಷ್ಟ

ಅಮೆರಿಕದಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಅತಿ ಹೆಚ್ಚು ಪಂದ್ಯಗಳು ನ್ಯೂಯಾರ್ಕ್ ನಲ್ಲಿ ನಡೆದಿದ್ದು, ಒಟ್ಟು 8 ಪಂದ್ಯಗಳು, ಫ್ಲೋರಿಡಾ ಮತ್ತು ಟೆಕ್ಸಾಸ್ ತಲಾ 4 ಪಂದ್ಯಗಳು ನಡೆದಿವೆ. ಇದರಲ್ಲಿ ಜೂನ್ 9 ರಂದು ನ್ಯೂಯಾರ್ಕ್ ನಲ್ಲಿ ಆಯೋಜಿಸಿದ್ದ ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಬಳಿಕ 20 ಮಿಲಿಯನ್ ಡಾಲರ್ ನಷ್ಟವಾಗಿದೆ ಎನ್ನಲಾಗಿದೆ. ಈ ಕುರಿತು ಕೊಲಂಬೊದಲ್ಲಿ ಜುಲೈ 19 ರಿಂದ ಪ್ರಾರಂಭವಾಗುವ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನ (International Cricket Council) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಲಿದೆ.

VISTARANEWS.COM


on

By

International Cricket Council
Koo

ಬೆಂಗಳೂರು : ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ (United States America) 2024ರ ಟಿ20 ವಿಶ್ವಕಪ್ ನ (T20 World cup 2024) ಹಲವಾರು ಪಂದ್ಯಗಳನ್ನು ಆಯೋಜಿಸಿದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (International Cricket Council) 167 ಕೋಟಿ ರೂ. ನಷ್ಟ ಅನುಭವಿಸಿದೆ. ಜೂನ್ 9 ರಂದು ನ್ಯೂಯಾರ್ಕ್​ನಲ್ಲಿ (New York) ಆಯೋಜಿಸಿದ್ದ ಭಾರತ ಮತ್ತು ಪಾಕಿಸ್ತಾನದ (INDvsPAK) ಪಂದ್ಯದ ಬಳಿಕ 20 ಮಿಲಿಯನ್ ಡಾಲರ್ ನಷ್ಟವಾಗಿದೆ ಎನ್ನಲಾಗಿದೆ.

ಯುಎಸ್ಎ ಒಟ್ಟು 16 ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಿದೆ ಮೊದಲ ಬಾರಿಗೆ ಅಮೆರಿಕದಲ್ಲಿ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಅತಿ ಹೆಚ್ಚು ಪಂದ್ಯಗಳು ನ್ಯೂಯಾರ್ಕ್​​ನಲ್ಲಿ ನಡೆದಿದೆ. ಒಟ್ಟು 8 ಪಂದ್ಯಗಳು, ಫ್ಲೋರಿಡಾ ಮತ್ತು ಟೆಕ್ಸಾಸ್ ತಲಾ 4 ಪಂದ್ಯಗಳು ನಡೆದಿವೆ. ಆದರೆ, ಇದಕ್ಕೆ ವಿನಿಯೋಗ ಮಾಡಿರುವ ದುಡ್ಡು ವಿಶ್ವ ಕಪ್​ ಬಜೆಟ್​ಗಿಂತಲೂ ಹೆಚ್ಚಾಗಿದೆ. ಪ್ರಮುಖವಾಗಿ ತಾತ್ಕಾಲಿಕ ಮೈದಾನ ತಯಾರಿ, ಕ್ರಿಕೆಟ್ ಪಿಚ್ ಇಲ್ಲದ ನ್ಯೂಯಾರ್ಕ್​ನಲ್ಲಿ ಆಯೋಜನೆ ನಷ್ಟಕ್ಕೆ ಕಾರಣವಾಗಿದೆ. ಆಟಗಾರರ ಲಾಜಿಸ್ಟಿಕ್ ವ್ಯವಸ್ಥೆ (ಪ್ರಯಾಣ ಹಾಗೂ ವಸತಿ) ಮೂಲಕವೂ ಹೆಚ್ಚುವರಿ ಹೊರೆಯಾಗಿದೆ ಎನ್ನಲಾಗಿದೆ.

ಕೊಲಂಬೊದಲ್ಲಿ ಜುಲೈ 19ರಿಂದ ಪ್ರಾರಂಭವಾಗುವ ಐಸಿಸಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ನಷ್ಟದ ವಿಚಾರವೇ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ವಾರ್ಷಿಕ ಸಾಮಾನ್ಯ ಸಭೆಯ ಒಂಬತ್ತು ಅಂಶಗಳ ಕಾರ್ಯಸೂಚಿಯಲ್ಲಿ ನಷ್ಟದ ವಿವರ ಇಲ್ಲ. ಆದರೆ, ಅದನ್ನೂ ಚರ್ಚಿಸಲಾಗುವುದು ಎನ್ನಲಾಗಿದೆ.

ಐಸಿಸಿಯ ಹೊಸ ಲೆಕ್ಕಪರಿಶೋಧಕರ ನೇಮಕಾತಿಯು ಐಸಿಸಿ ಸದಸ್ಯತ್ವ, ಅಸೋಸಿಯೇಟ್ ಸದಸ್ಯರ ಸಭೆಯ ವರದಿಗಳು ಮತ್ತು ಐಸಿಸಿ ಅಭಿವೃದ್ಧಿ ಪ್ರಶಸ್ತಿಗಳ ಪ್ರಸ್ತುತಿಯ ಚರ್ಚೆಗಳೊಂದಿಗೆ ಕಾರ್ಯಸೂಚಿಯಲ್ಲಿದೆ. ಇನ್ನೊಂದು ಪ್ರಮುಖ ಅಂಶವೆಂದರೆ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸದಿರುವ ಬಗ್ಗೆಯೂ ಐಸಿಸಿ ಚರ್ಚೆ ನಡೆಯಲಿದೆ.

International Cricket Council


ಜಯ್ ಶಾ ಅಧ್ಯಕ್ಷರಾಗುತ್ತಾರೆಯೇ?

ಶ್ರೀಲಂಕಾದಲ್ಲಿ ಐಸಿಸಿ ವಾರ್ಷಿಕ ಸಮ್ಮೇಳನ ನಡೆಯುತ್ತಿರುವುದರಿಂದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ನ್ಯೂಜಿಲೆಂಡ್ ನ ಗ್ರೆಗ್ ಬಾರ್ಕ್ಲೇ ಬದಲಿಗೆ ಜಯ್ ಶಾ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವಾಗ ಏರುತ್ತಾರೆ ಎಂಬುದರ ಕುರಿತು ಊಹಾಪೋಹಗಳು ಎದ್ದಿವೆ.

ಜಯ್ ಶಾ ಅವರ ಭವಿಷ್ಯ ನಿರ್ಣಯ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉನ್ನತ ಹುದ್ದೆಗೆ ಶಾ ಅವರ ಆಯ್ಕೆ ವಿಚಾರ ಸಮ್ಮೇಳನದಲ್ಲಿ ನಿರ್ಣಾಯಕ ವಿಷಯವಾಗಿದೆ ಎಂದು ಐಸಿಸಿ ಸದಸ್ಯರೇ ತಿಳಿಸಿದ್ದಾರೆ. ಮಂಡಳಿಯ ನಿಯಮಗಳ ಪ್ರಕಾರ ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಅವರಿಗೆ ಇನ್ನೂ ಒಂದು ವರ್ಷ ಉಳಿದಿದೆ. ಕಡ್ಡಾಯ ಕೂಲಿಂಗ್-ಆಫ್ ಅವಧಿ ಪ್ರಾರಂಭವಾಗುವ ಮೊದಲು ಅವರ ಅಧಿಕಾರಾವಧಿ 2025ರಲ್ಲಿ ಕೊನೆಗೊಳ್ಳುತ್ತದೆ. ಆದರೂ ಅಮಿತ್​ ಶಾ ಅವರು 2025ರಲ್ಲಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಬಾರ್ಕ್ಲೇ ಅವರ ಎರಡು ವರ್ಷಗಳ ಅವಧಿ ಈ ವರ್ಷ ಕೊನೆಗೊಳ್ಳಲಿದೆ. ಅವರು ಮತ್ತೆ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.

ಅಧಿಕಾರಾವಧಿ ಬದಲಾಣೆ

ಐಸಿಸಿ ತನ್ನ ಅಧ್ಯಕ್ಷರ ಅಧಿಕಾರಾವಧಿಯನ್ನು ಸರಿಹೊಂದಿಸಬಹುದು ಎನ್ನುವ ಊಹೆಯೂ ಇದೆ. ಪ್ರಸ್ತುತ, ತಲಾ ಎರಡು ವರ್ಷಗಳ ಮೂರು ಅವಧಿಗಳಾಗಿ ರಚಿಸಲಾಗಿದೆ. ಇದನ್ನು ಪ್ರತಿ ಮೂರು ವರ್ಷಗಳ ಎರಡು ಅವಧಿಗಳಿಗೆ ಬದಲಾಯಿಸಲು ಪರಿಗಣಿಸಬಹುದು.

ಇದನ್ನೂ ಓದಿ: India Squad Announcement: ಶ್ರೀಲಂಕಾ ಸರಣಿಗೆ ಮರಳಿದ ಹಿಟ್​ಮ್ಯಾನ್​ ರೋಹಿತ್​!

ಅಧಿಕಾರಾವಧಿ ಬದಲಾವಣೆಯ ಪರಿಣಾಮ

ಬಾರ್ಕ್ಲೇ ಅವರ ಪ್ರಸ್ತುತ ಅವಧಿಯನ್ನು ಮೂರು ವರ್ಷಗಳಿಗೆ ಮಾರ್ಪಡಿಸಿದರೆ ಐಸಿಸಿಯ ಅಧಿಕಾರ ವಹಿಸುವ ಮುನ್ನ ಶಾ ಅವರು ಬಿಸಿಸಿಐ ಕಾರ್ಯದರ್ಶಿಯಾಗಿ ತಮ್ಮ ಅವಧಿಯನ್ನು ಮುಗಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಈ ಸಂದರ್ಭದಲ್ಲಿ ಶಾ ಅವರು 2025 ರಲ್ಲಿ ಐಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬಹುದು. ಇದು ಬಿಸಿಸಿಐನಿಂದ ಅವರ ಕೂಲಿಂಗ್-ಆಫ್ ಅವಧಿಗೆ ಹೊಂದಿಕೆಯಾಗುತ್ತದೆ. 2028 ರ ವೇಳೆಗೆ ಶಾ ಅವರು ಮತ್ತೆ ಬಿಸಿಸಿಐ ಅಧ್ಯಕ್ಷರಾಗಲು ಮರಳಬಹುದು.

Continue Reading

ಪ್ರಮುಖ ಸುದ್ದಿ

Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

Team India Srilanka Tour : ಮುಂಬರುವ ಪ್ರವಾಸವು ನೂತನ ಕೋಚ್​ ಗೌತಮ್ ಗಂಭೀರ್ ಅವರಿಗೆ ಮೊದಲ ಸವಾಲಾಗಿದೆ. ಈ ಸರಣಿಯೊಂದಿಗೆ ತಮ್ಮ ತರಬೇತಿಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಟಿ 20 ತಂಡಕ್ಕೆ ಶುಭ್​ಮನ್ ಗಿಲ್ ಉಪನಾಯಕರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಸರಣಿಗೆ ಲಭ್ಯರಾಗಿದ್ದಾರೆ. ವಾಷಿಂಗ್ಟನ್ ಸುಂದರ್​, ಖಲೀಲ್​ ಅಹಮದ್​ ಅವಕಾಶ ಪಡೆದಿದ್ದಾರೆ. ರಿಷಭ್ ಪಂತ್ ಜತೆ ಸಂಜು ಸ್ಯಾಮ್ಸನ್ ವಿಕೆಟ್​ ಕೀಪರ್ ಆಗಿ ಅವಕಾಶ ಪಡೆದಿದ್ದಾರೆ.

VISTARANEWS.COM


on

Team India Srilanka Tour
Koo

ಬೆಂಗಳೂರು: ಜುಲೈ 27ರಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸಕ್ಕೆ (Team India Srilanka Tour) ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದೆ. ಈ ಪ್ರವಾಸವು ಮೂರು ಪಂದ್ಯಗಳ ಟಿ 20 ಐ ಸರಣಿಯನ್ನು ಒಳಗೊಂಡಿರುತ್ತದೆ ಮತ್ತು ನಂತರ ಮೂರು ಪಂದ್ಯಗಳ ಏಕದಿನ ಸರಣಿಯೂ ಆಯೋಜನೆಗೊಂಡಿದೆ. ಟಿ20 ತಂಡಕ್ಕೆ ಸೂರ್ಯಕುಮಾರ್​ ಯಾದವ್​​ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಸಮಿತಿ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್​ಗೆ ಪಟ್ಟಕಟ್ಟಿದ್ದಾರೆ. ಇದೇ ವೇಳೆ ಏಕ ದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿಸಿದ್ದಾರೆ.

ಮುಂಬರುವ ಪ್ರವಾಸವು ನೂತನ ಕೋಚ್​ ಗೌತಮ್ ಗಂಭೀರ್ ಅವರಿಗೆ ಮೊದಲ ಸವಾಲಾಗಿದೆ. ಈ ಸರಣಿಯೊಂದಿಗೆ ತಮ್ಮ ತರಬೇತಿಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಟಿ 20 ತಂಡಕ್ಕೆ ಶುಭ್​ಮನ್ ಗಿಲ್ ಉಪನಾಯಕರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಸರಣಿಗೆ ಲಭ್ಯರಾಗಿದ್ದಾರೆ. ವಾಷಿಂಗ್ಟನ್ ಸುಂದರ್​, ಖಲೀಲ್​ ಅಹಮದ್​ ಅವಕಾಶ ಪಡೆದಿದ್ದಾರೆ. ರಿಷಭ್ ಪಂತ್ ಜತೆ ಸಂಜು ಸ್ಯಾಮ್ಸನ್ ವಿಕೆಟ್​ ಕೀಪರ್ ಆಗಿ ಅವಕಾಶ ಪಡೆದಿದ್ದಾರೆ.

ಏಕ ದಿನ ತಂಡಕ್ಕೆ ವಿರಾಟ್ ಕೊಹ್ಲಿ ಮರಳಿದ್ದಾರೆ. ಕೆ. ಎಲ್ ರಾಹುಲ್ ಇಲ್ಲಿ ವಿಕೆಟ್ ಕೀಪರ್ ಕೋಟಾದಲ್ಲಿ ಅವಕಾಶ ಪಡೆದಿದ್ದಾರೆ. ವಾಷಿಂಗ್ಟನ್ ಸುಂದರ್​, ಖಲೀಲ್ ಅಹಮದ್​​ , ಹರ್ಷಿತ್​ ರಾಣಾ ಬೌಲಿಂಗ್​​ನಲ್ಲಿ ಅವಕಾಶ ಪಡೆದಿದ್ದಾರೆ. ರಿಯಾನ್ ಪರಾಗ್​ ಏಕ ದಿನ ಮಾದರಿಯಲ್ಲಿ ತಂಡ ಸೇರಿದ್ದಾರೆ. ಎರಡೂ ತಂಡಗಳಿಗೆ ಜಸ್​ಪ್ರಿತ್ ಬುಮ್ರಾ ಅಲಭ್ಯರಾಗಿದ್ದಾರೆ.

ಇದನ್ನೂ ಓದಿ: International Cricket Council: ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್ ನಿಂದ ಐಸಿಸಿಗೆ 167 ಕೋಟಿ ರೂ. ನಷ್ಟ

ತಂಡ ಈ ಕೆಳಗಿನಂತಿದೆ

ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ. ಸಿರಾಜ್ .

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷ್ದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

ಸರಣಿಯ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ: ಜುಲೈ 27, 2024 – ಸಂಜೆ 7 ಗಂಟೆಗೆ – ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
  • 2ನೇ ಟಿ20 ಪಂದ್ಯ- ಜುಲೈ 28, 2024 – ಸಂಜೆ 7 ಗಂಟೆಗೆ – ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
  • 3ನೇ ಟಿ20 ಪಂದ್ಯ- ಜುಲೈ 30, 2024 – ಸಂಜೆ 7 ಗಂಟೆಗೆ – ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
  • ಮೊದಲ ಏಕದಿನ ಪಂದ್ಯ- ಆಗಸ್ಟ್ 2, 2024 – ಮಧ್ಯಾಹ್ನ 2:30 – ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಕೊಲಂಬೊ
  • 2ನೇ ಏಕದಿನ ಪಂದ್ಯ- ಆಗಸ್ಟ್ 4, 2024 – ಮಧ್ಯಾಹ್ನ 2:30 – ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಕೊಲಂಬೊ
  • 3ನೇ ಏಕದಿನ ಪಂದ್ಯ- ಆಗಸ್ಟ್ 7, 2024 – ಮಧ್ಯಾಹ್ನ 2:30 – ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಕೊಲಂಬೊ
Continue Reading

ಪ್ರಮುಖ ಸುದ್ದಿ

KL Rahul : ಕೊರಗಜ್ಜನ ಆದಿ ಸ್ಥಾನಕ್ಕೆಭೇಟಿ ನೀಡಿದ ಕೆ. ಎಲ್​ ರಾಹುಲ್​, ಅಥಿಯಾ ಶೆಟ್ಟಿ ದಂಪತಿ, ವಿಡಿಯೊ ವೈರಲ್

ಕೊರಗಜ್ಜ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಅಪಾರ ಭಕ್ತರನ್ನು ಹೊಂದಿರುವ ದೈವ. ಇದೀಗ ಆ ದೈವದ ಕಾರಣಿಕ ಜಿಲ್ಲೆಯ ಗಡಿದಾಡಿದೆ. ದೇಶಾದ್ಯಂತ ನಾನಾ ಭಕ್ತರು ಅಭಯ ಕೋರಿಕೊಂಡು ಕೊರಗ್ಗಜನ ದೈವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅಂತೆಯೇ KL
KL Rahul:ಕರ್ನಾಟಕದ ನಾನಾ ಕಡೆಗೆ ಪ್ರವಾಸ ಹೊರಟಿರುವ ಕೆ. ಎಲ್​ ರಾಹುಲ್ ಅವರು ಪತ್ನಿ ಹಾಗೂ ಬಾಮೈದ ಅಹಾನ್​ ಶೆಟ್ಟಿ ಅವರೊಂದಿಗೆ ಕೊರಗಜ್ಜನ ಆದಿಸ್ಥಾನಕ್ಕೆ ಭೇಟಿ ನೀಡಿದ್ದಾರೆ.

VISTARANEWS.COM


on

KL Rahul
Koo

ಬೆಂಗಳೂರು: ಭಾರತ ತಂಡದ ಸ್ಟಾರ್ ಬ್ಯಾಟರ್​ ಕೆ. ಎಲ್​ ರಾಹುಲ್ (KL Rahul)​ ರಾಜ್ಯದ ವಿವಿಧ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಅಂತೆಯೇ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೊರಗಜ್ಜ ದೈವದ ಆದಿ ಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಜಿಲ್ಲೆಯ ಕುತ್ತಾರಿನ ದೆಕ್ಕಾಡು ಎಂಬಲ್ಲಿರುವ ಆದಿಸ್ಥಾನಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಮುಖ್ಯಸ್ಥರ ಆಶೀರ್ವಾದ ಪಡೆಕೊಂಡಿದ್ದಾರೆ. ಅವರ ಭೇಟಿ ನೀಡಿರುವ ವಿಡಿಯೊ ಇದೀಗ ವೈರಲ್ ಆಗಿದೆ.

ಕೊರಗಜ್ಜ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಅಪಾರ ಭಕ್ತರನ್ನು ಹೊಂದಿರುವ ದೈವ. ಇದೀಗ ಆ ದೈವದ ಕಾರಣಿಕ ಜಿಲ್ಲೆಯ ಗಡಿದಾಡಿದೆ. ದೇಶಾದ್ಯಂತ ನಾನಾ ಭಕ್ತರು ಅಭಯ ಕೋರಿಕೊಂಡು ಕೊರಗ್ಗಜನ ದೈವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅಂತೆಯೇ ಕರ್ನಾಟಕದ ನಾನಾ ಕಡೆಗೆ ಪ್ರವಾಸ ಹೊರಟಿರುವ ಕೆ. ಎಲ್​ ರಾಹುಲ್ ಅವರು ಪತ್ನಿ ಹಾಗೂ ಬಾಮೈದ ಅಹಾನ್​ ಶೆಟ್ಟಿ ಅವರೊಂದಿಗೆ ಕೊರಗಜ್ಜನ ಆದಿಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: Virat Kohli : ವಿರಾಟ್​ ಕೊಹ್ಲಿಯನ್ನು ಅವಮಾನಿಸಿದ ಅಮಿತ್​ ಮಿಶ್ರಾ ಬೆಂಡೆತ್ತಿದ ಯಶ್​ ದಯಾಳ್​

ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲಕ್ಕೆ ಕ್ರಿಕೆಟಿಗ ಕೆ. ಎಲ್​ ರಾಹುಲ್​ ದಂಪತಿ ಭೇಟಿ

ಮಂಗಳೂರು: ಭಾರತ ತಂಡದ ಬಲಗೈ ಬ್ಯಾಟರ್ ಹಾಗೂ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ (KL Rahul) ಇಲ್ಲಿನ ಐತಿಹಾಸಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ್ದಾರೆ. ಪತ್ನಿ ಅತಿಯಾ ಶೆಟ್ಟಿ ಅವರ ಜತೆ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಬಪ್ಪನಾಡು ಕ್ಷೇತ್ರವು ಮಂಗಳೂರು ನಗರದ ಹೊರವಲಯದ ಮುಲ್ಕಿ ಸಮೀಪ ಇದೆ. ದೇಗುಲಕ್ಕೆ ಭೇಟಿ ನೀಡಿದ ದಂಪತಿಗೆ ದೇವಾಲಯದ ವತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು.

ವಿಶ್ವ ಕಪ್​ ತಂಡದಲ್ಲಿ ಅವಕಾಶ ಪಡೆಯದೇ ಕೆ. ಎಲ್ ರಾಹುಲ್​ ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಸೇರುವ ನಿರೀಕ್ಷೆಯಿದೆ. ಆದರೆ ಅದಿನ್ನೂ ಸ್ಪಷ್ಟವಾಗಿಲ್ಲ. ತಂಡವೂ ಪ್ರಕಟಗೊಂಡಿಲ್ಲ. ಅವಕಾಶದ ನಿರೀಕ್ಷೆಯಲ್ಲಿರುವ ಅವರೀಗ ಅಮೂಲ್ಯ ಸಮಯವನ್ನು ಕುಟುಂಬದ ಜತೆ ಕಳೆಯುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅನಂತ್​ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಂಪತಿ ಜತೆಯಾಗಿ ಭಾಗಿಯಾಗಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಕಾಣಿಸಿಕೊಂಡಿದ್ದವು.

ಶ್ರೀಲಂಕಾ ಪ್ರವಾಸದ ಏಕ ದಿನ ತಂಡಕ್ಕೆ ಕೆ. ಎಲ್ ರಾಹುಲ್ ನಾಯಕ?
ಜಿಂಬಾಬ್ವೆ ಪ್ರವಾಸದ ಬಳಿಕ ಟೀಮ್ ಇಂಡಿಯಾ ತನ್ನ ಮುಂದಿನ ಕಾರ್ಯಯೋಜನೆಗೆ ಸಜ್ಜಾಗಬೇಕಾಗಿದೆ ವೈಟ್-ಬಾಲ್ ಸರಣಿಗಾಗಿ ಭಾರತ ಬಳಗ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಹೊಸ ಕೋಚ್​ ಗೌತಮ್ ಗಂಭೀರ್ ಅಡಿಯಲ್ಲಿ ಈ ತಂಡ ದ್ವೀಪ ರಾಷ್ಟ್ರಕ್ಕೆ ಹೋಗಲಿದೆ. ಈ ಸರಣಿಯಲ್ಲಿ ಯಾರೆಲ್ಲ ಇರುತ್ತಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಆದರೆ, ವರದಿಗಳ ಪ್ರಕಾರ, ಸ್ಟಾರ್ ಬ್ಯಾಟರ್​ ಹಾಗೂ ಕನ್ನಡಿಗ ಕೆಎಲ್ ರಾಹುಲ್ (KL Rahul) ತಂಡಕ್ಕೆ ಮರಳಲಿದ್ದು ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ.

Continue Reading

ಕ್ರೀಡೆ

Virat Kohli: ಮೊದಲ ಬಾರಿಗೆ ಮಗ ಅಕಾಯ್ ಜತೆ ಕಾಣಿಸಿಕೊಂಡ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Virat Kohli: ಈ ಹಿಂದೆ ಮಗಳು ವಮಿಕಾಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದಕ್ಕೆ ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮ ತೀವ್ರ ಅಸಮಾಧಾನಗೊಂಡಿದ್ದರು. ದಯವಿಟ್ಟು ಮಗಳ ಫೋಟೊ ವೈರಲ್‌ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

VISTARANEWS.COM


on

Virat Kohli
Koo

ಲಂಡನ್​: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಲಂಡನ್‌ನ(London) ಬೀದಿಯೊಂದರಲ್ಲಿ ಮಗ ಅಕಾಯ್(Akaay) ಜತೆ ಕಾಣಿಸಿಕೊಂಡಿರುವ ವಿಡಿಯೊವೊಂದು ವೈರಲ್​ ಆಗಿದೆ. ಹೂವಿನ ಮಾರ್ಕೆಟ್​ ಒಂದರಲ್ಲಿ ಕೊಹ್ಲಿ ಅಕಾಯ್​ನನ್ನು ಎತ್ತಿಕೊಂಡು ಹೂವನ್ನು ತೋರಿಸುತ್ತಿರುವುದನ್ನು ಈ ವಿಡಿಯೊದಲ್ಲಿ ನೋಡಬಹುದಾಗಿದೆ. ಪತ್ನಿ ಅನುಷ್ಕಾ ಶರ್ಮ(Anushka Sharma) ಕೂಡ ಈ ವೇಳೆ ಜತೆಗಿದ್ದರು.

​ಕೊಹ್ಲಿ ತಮ್ಮ ಮಗನೊಂದಿಗೆ ಇರುವ ವಿಡಿಯೊವನ್ನು ವಿರಾಟ್​ ಕೊಹ್ಲಿ ಫ್ಯಾನ್ಸ್​ ಕ್ಲಬ್​ ತನ್ನ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ಈ ವಿಡಿಯೊ ವೈರಲ್​ ಆಗಿದೆ. ಅಕಾಯ್ ಜನಿಸಿದ 6 ತಿಂಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು.

ಈ ಹಿಂದೆ ಮಗಳು ವಮಿಕಾಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದಕ್ಕೆ ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮ ತೀವ್ರ ಅಸಮಾಧಾನಗೊಂಡಿದ್ದರು. ದಯವಿಟ್ಟು ಮಗಳ ಫೋಟೊ ವೈರಲ್‌ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಇದೀಗ ಮಗನ ಜತೆಗಿನ ವಿಡಿಯೊ ಹಂಚಿಕೊಂಡಿರುವ ವಿಚಾರ ಕೊಹ್ಲಿಗೆ ತಿಳಿದರೆ ಮತ್ತೆ ಸಿಟ್ಟಿಗೇಳುವುದು ಖಚಿತ.

ಲಂಡನ್​ಗೆ ಶಿಫ್ಟ್​ ಆಗಲಿದ್ದಾರಾ ಕೊಹ್ಲಿ?


ವಿರಾಟ್​ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಭಾರತ ತೊರೆದು ಕುಟುಂಬ ಸಮೇತರಾಗಿ ಲಂಡನ್​ನಲ್ಲಿ ನೆಲೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಟಿ20 ವಿಶ್ವಕಪ್​ ಗೆದ್ದು ಭಾರತಕ್ಕೆ ಬಂದ ದಿನವೇ ಕೊಹ್ಲಿ ಮುಂಬೈನಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಮುಗಿಸಿ ರಾತ್ರೋರಾತ್ರಿ ಲಂಡನ್​ಗೆ ವಿಮಾನ ಏರಿದ್ದರು. ಹೀಗಾಗಿ ಕೆಲ ನೆಟ್ಟಿಗರುವ ಕೊಹ್ಲಿ ಇನ್ನು ಮುಂದೆ ಲಂಡನ್​ನಲ್ಲಿಯೇ ವಾಸಿಸುವ ಸಾಧ್ಯತೆ ಇದೆ ಎಂದಿದ್ದರು. ಬಾಲಿವುಡ್ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಿಂದಲೂ ಅನುಷ್ಕಾ ಶರ್ಮಾ ದೂರ ಉಳಿದಿರುವುದು ಕೂಡ ಊಹಾಪೋಹಗಳಿಗೆ ಕಾರಣವಾಗಿದೆ.

ಇದನ್ನೂ ಓದಿ Virat Kohli : ವಿರಾಟ್​ ಕೊಹ್ಲಿಯನ್ನು ಅವಮಾನಿಸಿದ ಅಮಿತ್​ ಮಿಶ್ರಾ ಬೆಂಡೆತ್ತಿದ ಯಶ್​ ದಯಾಳ್​

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಅನುಷ್ಕಾ ಮತ್ತು ವಿರಾಟ್ ಯುಕೆ ಮೂಲದ ಕಂಪನಿಯ ನಿರ್ದೇಶಕರಾಗಿದ್ದಾರೆ. ಯುಕೆ ಸರ್ಕಾರದ ಫೈಂಡ್ ಅಂಡ್ ಅಪ್ಡೇಟ್ ಕಂಪನಿಯ ಮಾಹಿತಿ ಸೇವೆಯ ಪ್ರಕಾರ, ದಂಪತಿಗಳು ಮ್ಯಾಜಿಕ್ ಲ್ಯಾಂಪ್​​ನ ಮೂವರು ನಿರ್ದೇಶಕರಲ್ಲಿ ಇಬ್ಬರು. ಇದು ಆಗಸ್ಟ್ 1, 2022 ರಂದು ಆರಂಭಗೊಂಡ ಸಲಹಾ ಸಂಸ್ಥೆಯಾಗಿದೆ. ಕಂಪನಿಯ ಅಧಿಕೃತ ಕಚೇರಿ ವಿಳಾಸವು ಯುಕೆಯ ವೆಸ್ಟ್ ಯಾರ್ಕ್​ಶೈರ್​ನಲ್ಲಿದೆ.

ವಿರಾಟ್​ ಕೊಹ್ಲಿ ಅವರು ಟಿ20 ವಿಶ್ವಕಪ್​ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಫೈನಲ್​ ಪಂದ್ಯದಲ್ಲಿ 76 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದಿದ್ದರು. ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದರು.

Continue Reading
Advertisement
Israel Palestine War
ವಿದೇಶ1 min ago

Israel Palestine War: 50 ಕಿ.ಮೀ ದೂರದಿಂದಲೇ ಪ್ಯಾಲೆಸ್ತಿನ್‌ ಕಮಾಂಡರ್‌ನನ್ನು ಕೊಂದ ಇಸ್ರೇಲ್‌! ವಿಡಿಯೊ ನೋಡಿ

Viral Video
ವೈರಲ್ ನ್ಯೂಸ್7 mins ago

Viral Video: ಮೂರು ಅಡಿಯ ಕುಳ್ಳನಿಗೆ ಏಳಡಿ ಎತ್ತರದ ಗರ್ಲ್ ಫ್ರೆಂಡ್! ಇವರ ಪ್ರಣಯದ ವಿಡಿಯೊ ನೋಡಿ!

Rain News;
ಪ್ರಮುಖ ಸುದ್ದಿ23 mins ago

Rain News : ಪ್ರಯಾಣಿಕರೇ ಗಮನಿಸಿ; ಗುಡ್ಡ ಕುಸಿತದ ಭೀತಿ, ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್​​

Sexual Assault case
ಕ್ರೈಂ35 mins ago

Sexual Assualt Case: ಅಶ್ಲೀಲ ವಿಡಿಯೊ ವೀಕ್ಷಿಸಿ ಉದ್ರೇಕಗೊಂಡ ಮೂವರು ಶಾಲಾ ಬಾಲಕರಿಂದ ಬಾಲಕಿಯ ಅತ್ಯಾಚಾರ, ಕೊಲೆ

International Cricket Council
ಕ್ರಿಕೆಟ್50 mins ago

International Cricket Council : ಟಿ20 ವಿಶ್ವಕಪ್ ಆಯೋಜನೆಯಲ್ಲಿ ಐಸಿಸಿಗೆ 167 ಕೋಟಿ ರೂಪಾಯಿ ನಷ್ಟ

Team India Srilanka Tour
ಪ್ರಮುಖ ಸುದ್ದಿ60 mins ago

Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

Viral Video
Latest1 hour ago

Viral Video: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

Train Accident
ದೇಶ1 hour ago

Train Derail: ಹಳಿ ತಪ್ಪಿದ ರೈಲು; ಅಪಘಾತದ ಹಿಂದೆ ಇದ್ಯಾ ವಿಧ್ವಂಸಕ ಕೃತ್ಯ?

Crime News
ಪ್ರಮುಖ ಸುದ್ದಿ2 hours ago

Bangalore News : ಬೆಂಗಳೂರಲ್ಲಿ ಆಘಾತಕಾರಿ ಘಟನೆ; ಗಾಂಜಾ ನಶೆಯಲ್ಲಿ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಬಾಲಕಿಯರನ್ನು ಬೆದರಿಸಿದ ಪುಂಡರು

Lady Police Officer
Latest2 hours ago

Lady Police Officer: ಗೂಂಡಾಗಿರಿ ಮಾಡಿದರೆ ಹುಷಾರ್‌! ಪುಂಡರಿಗೆ ಲೇಡಿ ಪೊಲೀಸ್ ವಾರ್ನಿಂಗ್‌; ವಿಡಿಯೊ ವೈರಲ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌