King Cobra Rescue: 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಹಿಡಿದದ್ದು ಹೇಗೆ? ವಿಡಿಯೊ ನೋಡಿ - Vistara News

ವೈರಲ್ ನ್ಯೂಸ್

King Cobra Rescue: 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಹಿಡಿದದ್ದು ಹೇಗೆ? ವಿಡಿಯೊ ನೋಡಿ

King Cobra Rescue: ಆಗುಂಬೆಯಲ್ಲಿ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ವನ್ಯಜೀವಿ ಅಧಿಕಾರಿಗಳು ರಕ್ಷಿಸಿ ಇತ್ತೀಚೆಗೆ ಕಾಡಿಗೆ ಬಿಟ್ಟಿದ್ದರು. ಆಗುಂಬೆ ರೈನ್ ಫಾರೆಸ್ಟ್ ಸಂಶೋಧನಾ ಕೇಂದ್ರದ (ಎಆರ್‌ಆರ್‌ಎಸ್‌) ಕ್ಷೇತ್ರ ನಿರ್ದೇಶಕ ಅಜಯ್ ಗಿರಿ ಅವರು ಅದರ ವಿಡಿಯೊ ಮಾಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ನೀವೂ ಈ ವಿಡಿಯೊ ನೋಡಿ.

VISTARANEWS.COM


on

King Cobra Rescue
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಾಳಿಂಗ ಸರ್ಪ ಬಹಳ ಅಪರೂಪವಾಗಿ ಕಂಡುಬರುವಂತಹ ಹಾವು. ಇದು ಬಹಳ ಅಪಾಯಕಾರಿ ಕೂಡ. ಇವು ಹೆಚ್ಚಾಗಿ ದಟ್ಟ ಕಾಡಿನ ಪೊದೆಗಳಲ್ಲಿ ಕಂಡು ಬರುತ್ತದೆ. ಆಗುಂಬೆಯ ಸಮೀಪ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ(King Cobra Rescue)ವೊಂದು ಪ್ರತ್ಯಕ್ಷವಾಗಿ ಆತಂಕ ಮೂಡಿಸಿತ್ತು. ಅದನ್ನು ರಕ್ಷಣೆ ಮಾಡಿರುವ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆಗುಂಬೆಯಲ್ಲಿ 12 ಅಡಿ ಉದ್ದದ ಈ ಬೃಹತ್ ಕಾಳಿಂಗ ಸರ್ಪವನ್ನು ವನ್ಯಜೀವಿ ಅಧಿಕಾರಿಗಳು ರಕ್ಷಿಸಿ ಕಾಡಿಗೆ ಬಿಟ್ಟಿದ್ದರು. ಆಗುಂಬೆ ರೈನ್ ಫಾರೆಸ್ಟ್ ಸಂಶೋಧನಾ ಕೇಂದ್ರದ (ಎಆರ್‌ಆರ್‌ಎಸ್‌) ಕ್ಷೇತ್ರ ನಿರ್ದೇಶಕ ಅಜಯ್ ಗಿರಿ ಅವರು ಅದರ ವಿಡಿಯೊ ಮಾಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಆಗಿದೆ.

ಕಾಳಿಂಗ ಸರ್ಪ ರಸ್ತೆ ದಾಟುತ್ತಿರುವುದನ್ನು ಗ್ರಾಮಸ್ಥರು ನೋಡಿದ್ದರು. ಆದರೆ ನಂತರ ಅದು ಮನೆಯೊಂದರ ಕಾಂಪೌಂಡ್‍ನಲ್ಲಿರುವ ಪೊದೆಯಲ್ಲಿ ವಾಸವಾಗಿದ್ದು, ಇದನ್ನು ನೋಡಿದ ಮನೆಯ ಮಾಲೀಕರು ಕೂಡಲೇ ಅರಣ್ಯ ಇಲಾಖೆ ಮತ್ತು ಎಆರ್‌ಆರ್‌ಎಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಿರ್ದೇಶಕ ಅಜಯ್ ಗಿರಿ ಅವರು ಸರ್ಪದ ಬಳಿ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ನಂತರ ಗಿರಿ ಮತ್ತು ಅವರ ತಂಡ ಸ್ಥಳಕ್ಕೆ ಬಂದು ರಾಡ್ ಸಹಾಯದಿಂದ ಮರವೇರಿದ ಸರ್ಪವನ್ನು ಕೆಳಗಿಳಿಸಿದರು. ನಂತರ, ಅದನ್ನು ಚೀಲದಲ್ಲಿ ಹಾಕಿ ಶೀಘ್ರದಲ್ಲೇ ಕಾಡಿಗೆ ಬಿಡಲಾಯಿತು.

ಘಟನೆಯನ್ನು ವಿವರಿಸಿದ ಗಿರಿ ತಮ್ಮ ಪೋಸ್ಟ್ ನಲ್ಲಿ, “ಪರಿಸ್ಥಿತಿಯ ಬಗ್ಗೆ ಎಆರ್‌ಆರ್‌ಎಸ್‍ಗೆ ಮಾಹಿತಿ ನೀಡಲಾಯಿತು. ಕರೆ ಮಾಡಿದಾಗ ನಾವು ಸ್ಥಳೀಯರಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ಸೂಚನೆ ನೀಡಿದೆವು. ನಂತರ ಸ್ಥಳಕ್ಕೆ ಧಾವಿಸಿದ್ದೇವೆ. ತಪಾಸಣೆಯ ನಂತರ ನಾವು ಹಾವನ್ನು ಚೀಲದೊಳಗೆ ಹಾಕಿ ರಕ್ಷಿಸಿದೆವು. ನಾವು ಸ್ಥಳೀಯರಿಗೆ ಸರ್ಪದ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ನೀಡಿದೆವು. ಸರ್ಪವನ್ನು ಹಿಡಿಯಲು ಅದಕ್ಕೆ ಬೇಕಾದ ಸಾಮಗ್ರಿಗಳನ್ನೂ ಕೊಟ್ಟಿದ್ದೇವೆ. ನಂತರ ಸ್ಥಳೀಯರು ಮತ್ತು ಉಸ್ತುವಾರಿ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಮಗಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗುಪ್ತಾಂಗ ತೋರಿಸಿದ ವಿಕೃತ ಕಾಮಿ!

ಇನ್ಸ್ಟಾಗ್ರಾಂನಲ್ಲಿ ಸುಮಾರು 13,000 ಫಾಲೋವರ್ಸ್‌ಗಳನ್ನು ಹೊಂದಿರುವ ಅಜಯ್ ಗಿರಿ, ಆಗಾಗ ಹಾವುಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಕಾಳಿಂಗ ಸರ್ಪದ ಈ ವಿಡಿಯೊಗೆ ಸಂಬಂಧಿಸಿದಂತೆ, ಸುಸಂತ ನಂದ ಅವರು ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಜಯ್ ಗಿರಿ ಮತ್ತು ಅವರ ತಂಡವನ್ನು ಶ್ಲಾಘಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವೈರಲ್ ನ್ಯೂಸ್

Viral Video: ಏಳು ತಿಂಗಳ ಮಗುವಿನ ಮೇಲೆ ಗುಂಡು ಹಾರಿಸಿದ ಕ್ರೂರ ಮಹಿಳೆ!

ಅಮೆರಿಕದ ಫಿಲಡೆಲ್ಫಿಯಾ ನಗರದ ಈಶಾನ್ಯ ಭಾಗದಲ್ಲಿ ಏಳು ತಿಂಗಳ ಗಂಡು ಮಗುವನ್ನು ಸ್ಟ್ರೋಲರ್ ನಲ್ಲಿ ಮಲಗಿಸಿ ಸುತ್ತಾಡಿ ಬರಲು ಕರೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ದರೋಡೆಕೋರ ಮಹಿಳೆ ಗುಂಡಿನ ದಾಳಿ ನಡೆಸಿದ್ದಾಳೆ. ಗುಂಡು ಮಗುವಿನ ಕಾಲಿಗೆ ತಾಗಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral video
Koo

ಮಗುವಿನೊಂದಿಗೆ ಸುತ್ತಾಡಿ ಬರಲು ಹೋಗುತ್ತಿದ್ದ ತಾಯಿಯ ಮೇಲೆ ಮಹಿಳೆಯೊಬ್ಬಳು ಗುಂಡಿನ ದಾಳಿ ನಡೆಸಿದ್ದು, ಗುಂಡು ಮಗುವಿನ ಕಾಲಿಗೆ (Shoots Baby) ತಾಗಿದೆ. ಅಮೆರಿಕದ ಫಿಲಿಡೆಲ್ಫಿಯಾದಲ್ಲಿ (Philadelphia) ನಡೆದ ಈ ಘಟನೆಯ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಏಳು ತಿಂಗಳ ಗಂಡು ಮಗುವನ್ನು ಸ್ಟ್ರೋಲರ್ ನಲ್ಲಿ ಮಲಗಿಸಿ ಸುತ್ತಾಡಿ ಬರಲು ಕರೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ದರೋಡೆಕೋರ ಮಹಿಳೆ ಗುಂಡಿನ ದಾಳಿ ನಡೆಸಿದ್ದಾಳೆ. ಗುಂಡು ಮಗುವಿನ ಕಾಲಿಗೆ ತಾಗಿದೆ. ಇದೀಗ ಮಗುವಿನ ಅರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ಫಿಲಡೆಲ್ಫಿಯಾ ನಗರದ ಈಶಾನ್ಯ ಭಾಗದಲ್ಲಿ ಈ ಘಟನೆ ನಡೆದಿದ್ದು, ಗುಂಡು ಹಾರಿಸಿದ ದರೋಡೆಕೋರ ಮಹಿಳೆಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಮಗುವಿನ ಮೇಲೆ ಗುಂಡು ಹಾರಿಸಿರುವ ಭಯಾನಕ ದೃಶ್ಯ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. ಮಗು ಮತ್ತು ಪೋಷಕ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಮಹಿಳೆಯೊಬ್ಬಳು ಏಕಾಏಕಿ ಬಂದು ಅವರ ಮೇಲೆ ಗುಂಡಿನ ದಾಳಿ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದರೋಡೆಕೋರ ಮಹಿಳೆಯು ಹಲವು ಬಾರಿ ಗುಂಡು ಹಾರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.


ಪೊಲೀಸರು ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಹೀಗೆ ಬರೆದಿದ್ದರೆ. 2024ರ ಜುಲೈ 18ರಂದು ಮೆರಿಡಿಯನ್ ಸ್ಟ್ರೀಟ್‌ನ 4000 ಬ್ಲಾಕ್‌ನಲ್ಲಿ ಏಳು ತಿಂಗಳ ಮಗುವಿನ ಕಾಲಿನ ಮೇಲೆ ಮಹಿಳೆಯೊಬ್ಬಳು ಗುಂಡು ಹರಿಸಿದ್ದಾಳೆ. ಗುಂಡಿನ ದಾಳಿಯಲ್ಲಿ ಬೇರೆ ಯಾರಿಗೂ ಗಾಯವಾಗಿಲ್ಲ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಮಗುವಿನ ಆರೋಗ್ಯ ಸ್ಥಿರವಾಗಿದೆ.

ಇದನ್ನೂ ಓದಿ: Udupi News : ಸತ್ತ ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ಅಸಾಮಿ!

ಪೊಲೀಸರು ಆಗಮಿಸಿದಾಗ ಮಗುವಿನ ಪೋಷಕರು ಘಟನಾ ಸ್ಥಳದಲ್ಲಿ ಇರಲಿಲ್ಲ.ಗುಂಡಿನ ದಾಳಿ ನಡೆಸಿದ ಮಹಿಳೆ ತಾನು ಮಾಡಿದ್ದಕ್ಕೆ ಪಶ್ಚಾತ್ತಾಪ ಪಡದೆ ಸುಮ್ಮನೆ ಅಲ್ಲಿಂದ ಹೊರನಡೆದಳು. ಇದು ತುಂಬಾ ಭಯಾನಕವಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

Continue Reading

Latest

Self Harming: ಹೆಂಡತಿಗೆ ಹೆದರಿಸಲು ಹೋಗಿ ಜೀವ ಕಳೆದುಕೊಂಡ ಲೋಕೋ ಪೈಲಟ್‍!

Self Harming: ಕೆಲವೊಮ್ಮೆ ಅಣಕಿಸಲು ಮಾಡುವ ಕೆಲಸವೇ ಜೀವಕ್ಕೆ ಕುತ್ತು ತರುತ್ತದೆಯಂತೆ. ಹೀಗೆ ಸುಮ್ಮನೆ ಹೆಂಡತಿಗೆ ಹೆದರಿಸಲು ಹೋಗಿ ವ್ಯಕ್ತಿಯೊಬ್ಬ ಜೀವ ಕಳೆದುಕೊಂಡಿದ್ದಾನೆ. ಮಕ್ಕಳು ತುಂಬಾ ಹಟ ಮಾಡುತ್ತಿದ್ದರಿಂದ ಗಂಡ-ಹೆಂಡತಿಯ ನಡುವೆ ಆಗಾಗ ಜಗಳವಾಗುತ್ತಿತಂತೆ. ಹೆಂಡತಿಯು ಮಕ್ಕಳ ಪರ ವಹಿಸಿದ್ದಕ್ಕೆ ಕೋಪಗೊಂಡ ಗಂಡ ಕುಟುಂಬದವರನ್ನು ಹೆದರಿಸಲು ತನ್ನ ಕುತ್ತಿಗೆಗೆ ಸೀರೆಯನ್ನು ಕಟ್ಟಿ, ಇನ್ನೊಂದು ತುದಿಯನ್ನು ಸೀಲಿಂಗ್ ಫ್ಯಾನ್ ಹುಕ್‌ಗೆ ಕಟ್ಟಿದ್ದ. ಆದರೆ ಪ್ರಾಣವೇ ಹೋಯಿತು.

VISTARANEWS.COM


on

Self Harming
Koo


ಕೆಲವರು ತಮ್ಮವರನ್ನು ಹೆದರಿಸುವ ಸಲುವಾಗಿ ಆಗಾಗ ಸಾಯುವುದಾಗಿ ತಮಾಷೆ ಮಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಈ ತಮಾಷೆಯೇ ಘೋರವಾಗಿ ಬಿಟ್ಟಿದೆ. ಬಿಹಾರದ 33 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಬೆದರಿಸುವ ಪ್ರಯತ್ನದಲ್ಲಿ ನೇಣು ಬಿಗಿದು ಆತ್ಮಹತ್ಯೆ(Self Harming) ಮಾಡಿಕೊಳ್ಳುವಂತೆ ನಟಿಸಲು ಹೋಗಿ ದುರಂತವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ಗೋಪಾಲಪಟ್ಟಣಂನ ಕೊಟ್ಟಪಲೆಂ ಪ್ರದೇಶದಲ್ಲಿರುವ ಗಣೇಶ್ ನಗರದಲ್ಲಿ ನಡೆದಿದೆ.

ಬಿಹಾರದ 33 ವರ್ಷದ ಸಹಾಯಕ ಲೋಕೋ ಪೈಲಟ್ ಚಂದನ್ ಕುಮಾರ್ ದುರಂತವಾಗಿ ಪ್ರಾಣ ಕಳೆದುಕೊಂಡ ವ್ಯಕ್ತಿ. ಕಳೆದ ಐದು ವರ್ಷಗಳಿಂದ ಕುಟುಂಬದ ಜೊತೆ ವಾಸಿಸುತ್ತಿದ್ದ ಚಂದನ್ ಅವರು ಪತ್ನಿ ಲಾಲ್ ಮುನ್ನಿ ಕುಮಾರಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಪೊಲೀಸ್ ವರದಿ ಪ್ರಕಾರ, ಚಂದನ್ ಅವರ ಮಕ್ಕಳು ತುಂಬಾ ಗಲಾಟೆ ಮಾಡುತ್ತಿದ್ದ ಕಾರಣ ಈ ವಿಚಾರಕ್ಕೆ ಅವರ ಮತ್ತು ಅವರ ಹೆಂಡತಿಯ ನಡುವೆ ವಾಗ್ವಾದ ಉಂಟಾಯಿತು. ಆರಂಭದಲ್ಲಿ, ಮುನ್ನಿ ಕುಮಾರಿ ಮಕ್ಕಳ ಪರವಾಗಿ ನಿಂತರು. ಇದರಿಂದ ಕೋಪಗೊಂಡ ಚಂದನ್ ಆಕೆಗೆ ಪಾಠ ಕಲಿಸಲು ಮತ್ತು ಕುಟುಂಬದವರನ್ನು ಹೆದರಿಸಲು, ತನ್ನ ಕುತ್ತಿಗೆಗೆ ಸೀರೆಯನ್ನು ಕಟ್ಟಿ, ಇನ್ನೊಂದು ತುದಿಯನ್ನು ಸೀಲಿಂಗ್ ಫ್ಯಾನ್ ಹುಕ್‍ಗೆ ಕಟ್ಟಿದರು. ದುರದೃಷ್ಟವಶಾತ್, ಸೀರೆ ಆಕಸ್ಮಿಕವಾಗಿ ಬಿಗಿಯಾಗಿ ಇದು ಚಂದನ್ ಸಾವಿಗೆ ಕಾರಣವಾಯಿತು.

ತುಂಬಾ ಸಮಯವಾದರೂ ಆತನ ಮಲಗುವ ಕೋಣೆಯ ಬಾಗಿಲು ತೆರೆಯದ ಕಾರಣ ಮುನ್ನಿ ಕುಮಾರಿ, ನೆರೆಹೊರೆಯವರ ಸಹಾಯದಿಂದ ಅದನ್ನು ಬಲವಂತವಾಗಿ ತೆರೆಸಿದಳು, ಆದರೆ ಅಲ್ಲಿ ಚಂದನ್ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ಪರೀಕ್ಷಿಸಿದಾಗ ಆತ ಈಗಾಗಲೇ ಮೃತಪಟ್ಟಿರುವುದಾಗಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಹಿಡಿದದ್ದು ಹೇಗೆ? ವಿಡಿಯೊ ನೋಡಿ

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ದುರಂತ ಘಟನೆಯು ಕುಟುಂಬವನ್ನು ತೀವ್ರ ಆಘಾತ ಮತ್ತು ದುಃಖದಲ್ಲಿ ಮುಳುಗಿಸಿದೆ. ಪತ್ನಿಯೊಂದಿಗೆ ಜಗಳವಾಡಿದ ನಂತರ ಚಂದನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಣ್ಣೆಪು ನರಸಿಂಹ ಮೂರ್ತಿ ತಿಳಿಸಿದ್ದಾರೆ.

Continue Reading

ವೈರಲ್ ನ್ಯೂಸ್

School Teacher: 14 ವರ್ಷದ ವಿದ್ಯಾರ್ಥಿಗೆ ತನ್ನ ಬೆತ್ತಲೆ ಫೋಟೊ ಕಳುಹಿಸಿದ ಶಿಕ್ಷಕಿ; ಈಗ ಜೈಲಿನ ಅತಿಥಿ

School Teacher: ವಿದ್ಯಾರ್ಥಿಗೆ ಬೆತ್ತಲೆ ಫೋಟೊ ಕಳುಹಿಸಿದ ಶಿಕ್ಷಕಿಯ ವಿರುದ್ಧ ಮಗುವಿಗೆ ಲೈಂಗಿಕ ಪ್ರಚೋದನೆ ನೀಡುವುದು, ಮಗುವಿನ ಯೋಗಕ್ಷೇಮಕ್ಕೆ ಧಕ್ಕೆ ತರುವುದು ಹಾಗೂ ಅಸಭ್ಯವಾಗಿ ವರ್ತಿಸುವುದು ಸೇರಿ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಆಕೆಯನ್ನು ವಿಚಾರಣೆ ನಡೆಸಿದ ಬಳಿಕ ನ್ಯೂ ಕ್ಯಾಸಲ್‌ ಕೌಂಟಿ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ.

VISTARANEWS.COM


on

US Teacher
Koo

ವಾಷಿಂಗ್ಟನ್‌: ಶಿಕ್ಷಕರಾದವರು ಹೇಗಿರಬೇಕು? ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಬೇಕು. ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿದಾಗ ಗದರಿ, ಅವರಿಗೆ ತಿಳಿಹೇಳಿ, ಪಠ್ಯದ ಜತೆಗೆ ಮೌಲ್ಯಗಳನ್ನು ತುಂಬಿ ಅವರು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು. ಆದರೆ, ಅಮೆರಿಕದಲ್ಲಿ (America) ಮಾಜಿ ಶಿಕ್ಷಕಿಯೊಬ್ಬರು (US Teacher) ತನ್ನ ಮಾಜಿ ವಿದ್ಯಾರ್ಥಿಗೆ ಬೆತ್ತಲೆ ಫೋಟೊ ಕಳುಹಿಸುವ ಮೂಲಕ ಶಿಕ್ಷಕ-ಶಿಕ್ಷಕಿಯರ ವೃತ್ತಿಗೆ ಕಳಂಕ ತಂದಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ.

ಡೆಲಾವೇರ್‌ನ ವಿಲ್ಮಿಂಗ್ಟನ್‌ನಲ್ಲಿರುವ ಸೇಂಟ್‌ ಮೇರಿ ಮ್ಯಾಗ್‌ಡಾಲೆನ್‌ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ 24 ವರ್ಷದ ಅಲಾನಿಸ್‌ ಪಿನಿಯನ್‌, ಶಾಲೆಯನ್ನು ತೊರೆದ ಬಳಿಕವೂ ವಿದ್ಯಾರ್ಥಿಗಳ ಜತೆ ಸ್ನ್ಯಾಪ್‌ಚಾಟ್‌ನಲ್ಲಿ ಸಂಪರ್ಕದಲ್ಲಿದ್ದಾಳೆ. ಮಕ್ಕಳು ಕೂಡ ನಮ್ಮ ಟೀಚರ್‌ ಎಂದು ಆಕೆಯ ಜತೆ ಚಾಟ್‌ ಮಾಡಿದ್ದಾರೆ. ಹಲವು ವಿದ್ಯಾರ್ಥಿಗಳು ಈಕೆಯ ಜತೆ ಸಂಪರ್ಕದಲ್ಲಿದ್ದಾರೆ. ಆದರೆ, ಒಬ್ಬ ವಿದ್ಯಾರ್ಥಿಗೆ ಅಲಾನಿಸ್‌ ಪಿನಿಯನ್‌ ಬೆತ್ತಲೆ ಫೋಟೊ ಕಳುಹಿಸಿದ್ದಾಳೆ. ಪ್ರಕರಣ ಬಯಲಾಗುತ್ತಲೇ ಆಕೆಯನ್ನು ಜೈಲಿಗೆ ಕಳುಹಿಸಲಾಗಿದೆ.

ಮಗುವಿಗೆ ಲೈಂಗಿಕ ಪ್ರಚೋದನೆ ನೀಡುವುದು, ಮಗುವಿನ ಯೋಗಕ್ಷೇಮಕ್ಕೆ ಧಕ್ಕೆ ತರುವುದು ಹಾಗೂ ಅಸಭ್ಯವಾಗಿ ವರ್ತಿಸುವುದು ಸೇರಿ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಆಕೆಯನ್ನು ವಿಚಾರಣೆ ನಡೆಸಿದ ಬಳಿಕ ನ್ಯೂ ಕ್ಯಾಸಲ್‌ ಕೌಂಟಿ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ. “ಶಾಲೆಯಲ್ಲಿ ಅವರು ತುಂಬ ದಿನಗಳವರೆಗೆ ಶಿಕ್ಷಕಿಯಾಗಿರಲಿಲ್ಲ. ಕೆಲ ದಿನಗಳ ಮಟ್ಟಿಗೆ ಆಕೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು. ಈಗ ಶಾಲೆಗೂ, ಆಕೆಗೂ ಸಂಬಂಧವಿಲ್ಲ” ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಮಗುವಿಗೆ ಶಿಕ್ಷಕಿಯು ಅಶ್ಲೀಲ ಫೋಟೊ ಕಳುಹಿಸಿದ ವಿಷಯವು ಶಾಲೆಯ ಆಡಳಿತ ಮಂಡಳಿಗೆ ಗೊತ್ತಾಗಿದೆ. ಇದಾದ ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಷಕರಿಗೂ ಈ ಕುರಿತು ಮಾಹಿತಿ ಒದಗಿಸಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. 24 ವರ್ಷದ ಶಿಕ್ಷಕಿಗೆ ಮದುವೆಯಾಗಿಲ್ಲ. ಮಕ್ಕಳ ಜತೆ ಚಾಟ್‌ ಮಾಡುವ ನೆಪದಲ್ಲಿ ಆಕೆಯು ಅವರನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಳ್ಳಲು ಹೀಗೆ ಮಾಡಿದ್ದಾಳೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Vishal Punjabi: ಮದುವೆಯಾದ 2 ತಿಂಗಳಿಗೆ ಪತ್ನಿಗೆ ಮೋಸ ಮಾಡಿ, ಇನ್ನೊಬ್ಬಳ ಜತೆ ಈ ನಟ ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದನಂತೆ!

Continue Reading

ವೈರಲ್ ನ್ಯೂಸ್

Viral News: ವಾಷಿಂಗ್ ಮೆಷಿನ್‌ನಿಂದ ಬಟ್ಟೆ ಎಂದು ಎಳೆದಾಗ ಬಂದಿದ್ದು ನಾಗರ ಹಾವು!

ಹಾವುಗಳು ಎಲ್ಲಿ ಅವಿತಿರುತ್ತದೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ಮನೆಯೊಳಗೆ ಬಂದು ಮನೆ ಮಂದಿಯೆಲ್ಲ ಆತಂಕಗೊಳ್ಳುವಂತೆ ಮಾಡುತ್ತವೆ. ಹಾವುಗಳ ಕಡಿತ ಅಪಾಯಕಾರಿ ಆಗಿರುವುದರಿಂದ ಈ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸುವುದು ಉತ್ತಮ. ತಿಳಿಯದಂತೆ ಮನೆಯೊಳಗೆ ಬರುವ ಹಾವುಗಳು ತಮಗೆ ಸುರಕ್ಷಿತವೆನಿಸುವ ಜಾಗದಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇವು ಕೆಲವೊಮ್ಮೆ ಅಪಾಯ ತಂದೊಡ್ಡಬಹುದು. ಕೇರಳದ ಕಣ್ಣೂರಿನಲ್ಲಿ ಇಂತಹ ಒಂದು ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

VISTARANEWS.COM


on

By

Viral News
Koo

ಕಣ್ಣೂರು: ವಾಷಿಂಗ್ ಮೆಷಿನ್ (cobra in washing machine) ಒಳಗೆ ಬಟ್ಟೆ ತುಂಡು ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸಿ ಅದನ್ನು ತೆಗೆಯಲು ಹೋದವನಿಗೆ ಅದರಲ್ಲಿ ಇರುವುದು ಬಟ್ಟೆ ತುಂಡಲ್ಲ ನಾಗರ ಹಾವಿನ ಮರಿ (baby cobra) ಎಂದು ತಿಳಿದು ಶಾಕ್ ಆಗಿದೆ. ಕೂಡಲೇ ವಾಷಿಂಗ್ ಮೆಷಿನ್ ಒಳಗೆ ಹಾಕಿದ್ದ ತನ್ನ ಕೈ ಹಿಂದಕ್ಕೆ ತೆಗೆದು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

ಹಾವುಗಳು ಎಲ್ಲಿ ಅವಿತಿರುತ್ತದೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ಮನೆಯೊಳಗೆ ಬಂದು ಮನೆ ಮಂದಿಯೆಲ್ಲ ಆತಂಕಗೊಳ್ಳುವಂತೆ ಮಾಡುತ್ತವೆ. ಹಾವುಗಳ ಕಡಿತ ಅಪಾಯಕಾರಿ ಆಗಿರುವುದರಿಂದ ಈ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸುವುದು ಉತ್ತಮ. ನಮಗೆ ತಿಳಿಯದಂತೆ ಮನೆಯೊಳಗೆ ಬರುವ ಹಾವುಗಳು ತಮಗೆ ಸುರಕ್ಷಿತವೆನಿಸುವ ಜಾಗದಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇವು ಕೆಲವೊಮ್ಮೆ ಅಪಾಯ ತಂದೊಡ್ಡಬಹುದು.

ಕೇರಳದ ಕಣ್ಣೂರಿನಲ್ಲಿ (kerala kannur) ಈಗ ಇಂತಹ ಒಂದು ಘಟನೆ ನಡೆದಿದೆ. ವಾಷಿಂಗ್ ಮೆಷಿನ್ ನೊಳಗೆ ಅವಿತಿದ್ದ ನಾಗರಹಾವೊಂದು ಮನೆ ಮಂದಿಯೆಲ್ಲ ಬೆಚ್ಚಿ ಬೀಳುವಂತೆ ಮಾಡಿದೆ.

Viral News


ಕೇರಳದ ಕಣ್ಣೂರಿನಲ್ಲಿ ವಾಷಿಂಗ್ ಮೆಷಿನ್ ರಿಪೇರಿ ಮಾಡುತ್ತಿದ್ದ ತಂತ್ರಜ್ಞ ಜನಾರ್ದನನ್ ಕಡಂಬೇರಿ ಅವರು ಬಹುತೇಕ ದುರಸ್ತಿ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ರಿಪೇರಿ ಬಳಿಕ ವಾಷಿಂಗ್ ಮೆಷಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೋ ಎಂದು ನೋಡಲು ವಾಷಿಂಗ್ ಮೆಷಿನ್ ಒಳಗೆ ಇಣುಕಿ ನೋಡಿದ್ದಾರೆ. ಅದರೊಳಗೆ ಬಟ್ಟೆಯ ತುಂಡಿನಂತೆ ಇರುವುದನ್ನು ಗಮನಿಸಿ ಅದನ್ನು ಹೊರತೆಗೆಯಲು ಯಂತ್ರದೊಳಗೆ ಕೈ ಹಾಕಿದರು. ಆದರೆ ಅದು ಬಟ್ಟೆಯ ತುಂಡಲ್ಲ ನಾಗರ ಹಾವಿನ ಮರಿ ಎಂದು ತಿಳಿದು ಕಡಂಬೇರಿಯವರು ಯಂತ್ರದಿಂದ ತನ್ನ ಕೈಯನ್ನು ಬೇಗನೆ ಹೊರತೆಗೆದರು. ಇದರಿಂದಾಗಿ ಹಾವು ಕಡಿತದಿಂದ ಸ್ವಲ್ಪದರಲ್ಲೇ ಪಾರಾದರು. ಅನಂತರ ಅವರು ಇನ್ನೊಬ್ಬ ವ್ಯಕ್ತಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Viral Video: ಅತೀ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ; ಮೇಲೆ ಹಾರಿ ನೆಲಕ್ಕೆ ಅಪ್ಪಳಿಸಿದ ದಂಪತಿ

ಕೆಲವು ದಿನಗಳಿಂದ ಮಷಿನ್ ಕೆಲಸ ಮಾಡುತ್ತಿಲ್ಲ, ಮುಚ್ಚಳವನ್ನು ಮುಚ್ಚಿ ದಿನಗಟ್ಟಲೆ ಇಡಲಾಗಿದೆ. ಹಾವು ಯಂತ್ರದೊಳಗೆ ಹೇಗೆ ಪ್ರವೇಶಿಸಿತು ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.

Continue Reading
Advertisement
CM Siddaramaiah
ಕರ್ನಾಟಕ4 mins ago

CM Siddaramaiah: ಬಿಜೆಪಿ ತನ್ನ ಅವಧಿಯ ಹಗರಣಗಳನ್ನು ಮುಚ್ಚಿ ಹಾಕಿದೆ: ಸಿಎಂ ಸಿದ್ದರಾಮಯ್ಯ

Viral video
ವೈರಲ್ ನ್ಯೂಸ್9 mins ago

Viral Video: ಏಳು ತಿಂಗಳ ಮಗುವಿನ ಮೇಲೆ ಗುಂಡು ಹಾರಿಸಿದ ಕ್ರೂರ ಮಹಿಳೆ!

Honor Released Honor 200 Pro 5G and Honor 200 5G Smartphones
ಬೆಂಗಳೂರು12 mins ago

Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

Self Harming
Latest15 mins ago

Self Harming: ಹೆಂಡತಿಗೆ ಹೆದರಿಸಲು ಹೋಗಿ ಜೀವ ಕಳೆದುಕೊಂಡ ಲೋಕೋ ಪೈಲಟ್‍!

Health Tips Kannada
ಆರೋಗ್ಯ16 mins ago

Health Tips Kannada: ಮಳೆಗಾಲದಲ್ಲಿ ಹಾಗಲಕಾಯಿ ತಿಂದರೆ ಪ್ರಯೋಜನಗಳು ಎಷ್ಟೊಂದು!

Movie ticket price hike
ಕರ್ನಾಟಕ30 mins ago

Movie ticket price hike: ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ; ಸಿನಿಮಾ ಟಿಕೆಟ್‌, OTT ಸಬ್‌ಸ್ಕ್ರಿಪ್ಶನ್ ಶುಲ್ಕ ಭಾರಿ ಏರಿಕೆ?

US Teacher
ವೈರಲ್ ನ್ಯೂಸ್34 mins ago

School Teacher: 14 ವರ್ಷದ ವಿದ್ಯಾರ್ಥಿಗೆ ತನ್ನ ಬೆತ್ತಲೆ ಫೋಟೊ ಕಳುಹಿಸಿದ ಶಿಕ್ಷಕಿ; ಈಗ ಜೈಲಿನ ಅತಿಥಿ

Mohammed Shami
ಕ್ರೀಡೆ43 mins ago

Mohammed Shami : ರೋಹಿತ್​ ಶರ್ಮಾಗೆ ನನ್ನ ಬೌಲಿಂಗ್​ ಎಂದರೆ ಭಯ; ಮೊಹಮ್ಮದ್ ಶಮಿ

Heavy rain in Chandragutti village and other places of Soraba taluk
ಶಿವಮೊಗ್ಗ45 mins ago

Karnataka Rain: ಸೊರಬ ತಾಲೂಕಿನ ವಿವಿಧೆಡೆ ಮಳೆ ಆರ್ಭಟ; ವರದಾ ನದಿ ತೀರದ ವ್ಯಾಪ್ತಿಯ ಕೃಷಿ ಭೂಮಿ ಜಲಾವೃತ

Sexual Abuse
Latest48 mins ago

Sexual Abuse: ವಿದ್ಯಾರ್ಥಿನಿಯನ್ನು ಅಪಹರಿಸಿ 12 ದಿನ ಅತ್ಯಾಚಾರ ಎಸಗಿ ಪೊಲೀಸ್‌ ಠಾಣೆ ಮುಂದೆಯೇ ಬಿಟ್ಟು ಹೋದರು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ9 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ1 day ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 day ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌