Mohammed Shami: ಪಾಕ್​ ಮಾಜಿ ನಾಯಕ ಇಂಜಮಾಮ್ ಬೆಂಡೆತ್ತಿದ ಮೊಹಮ್ಮದ್​ ಶಮಿ - Vistara News

ಕ್ರೀಡೆ

Mohammed Shami: ಪಾಕ್​ ಮಾಜಿ ನಾಯಕ ಇಂಜಮಾಮ್ ಬೆಂಡೆತ್ತಿದ ಮೊಹಮ್ಮದ್​ ಶಮಿ

Mohammed Shami: ನೀವೊಬ್ಬ ಮಾಜಿ ಆಟಗಾರರಾಗಿಯೂ ಪದೇಪದೆ ಈ ರೀತಿಯ ಸುಳ್ಳು ಆರೋಪ ಮಾಡುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ ಎಂದು ಮೊಹಮ್ಮದ್​ ಶಮಿ(Mohammed Shami) ಇಂಜಮಾಮ್ ಉಲ್ ಹಕ್(Inzamam Ul Haq)ಗೆ ತಿರುಗೇಟು ಕೊಟ್ಟಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯ ವೇಳೆ ಭಾರತ ತಂಡದ ವೇಗಿ ಅರ್ಶ್‌ದೀಪ್ ಸಿಂಗ್(Arshdeep Singh) ಅವರ ರಿವರ್ಸ್ ಸ್ವಿಂಗ್ ಎಸೆತವನ್ನು ಪ್ರಶ್ನೆ ಮಾಡಿ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದ ಪಾಕಿಸ್ತಾನ ತಂಡದ ಮಾಜಿ ಆಟಗಾರ ಹಾಗೂ ನಾಯಕ ಇಂಜಮಾಮ್ ಉಲ್ ಹಕ್(Inzamam Ul Haq)ಗೆ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಶಮಿ(Mohammed Shami) ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ವಿಶ್ಲೇಷಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಇಂಜಮಾಮ್, ಅರ್ಶ್​ದೀಪ್ ರಿವರ್ಸ್ ಸ್ವಿಂಗ್ ಬಗ್ಗೆ ಅನುಮಾನವಿದೆ. 15ನೇ ಓವರ್​ನಲ್ಲಿ ಅವರು ಬೌಲಿಂಗ್​ ನಡೆಸುವ ವೇಳೆ ಚೆಂಡು ಹೆಚ್ಚು ಸ್ವಿಂಗ್​ ಆಗುತ್ತಿತ್ತು. ನಾನು ಗಮನಿಸಿದ ಹಾಗೆ ಈ ರೀತಿ ಚೆಂಡು ಏಕಾಏಕಿ ಸ್ವಿಂಗ್​ ಆಗಲು ಸಾಧ್ಯವಿಲ್ಲ. ನನ್ನ ಪ್ರಕಾರ ಭಾರತೀಯ ಆಟಗಾರರು 12 ಅಥವಾ 13ನೇ ಓವರ್​ನಲ್ಲಿ ಚೆಂಡಿಗೆ ಶೈನಿಂಗ್​ ಹಚ್ಚಿದಂತೆ ಕಾಣುತ್ತಿದೆ. ಅಂಪೈರ್​ಗಳು ಇದನ್ನು ಸೂಕ್ಷವಾಗಿ ಪರಿಗಣಿಸಬೇಕು. ಇಲ್ಲಿ ಯಾವುದೋ ಮೋಸದಾಟ ನಡೆದಂತಿದೆ” ಎಂದು ಆರೋಪಿಸಿದ್ದರು.

“ಇಂಜಮಾಮ್ ಬಗ್ಗೆ ನನಗೆ ಗೌರವವಿದೆ. ಆದರೆ ಅವರು ಜನರನ್ನು ಮೂರ್ಖರನ್ನಾಗಿಸಲು ನೀಡುವ ಹೇಳಿಕೆ ಬಗ್ಗೆ ನನ್ನ ವಿರೋದವಿದೆ. ಕಳೆದ ಏಕದಿನ ವಿಶ್ವಕಪ್​ನಲ್ಲಿಯೂ ಅವರು ಇದೇ ರೀತಿಯ ಹೇಳಿಕೆ ನೀಡಿದಕ್ಕೆ ನಾನು ತಕ್ಕ ಉತ್ತರ ನೀಡಿದ್ದೇನೆ. ನಾನು ಒಂದೇ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಪಾಕಿಸ್ತಾನ ಬೌಲರ್​ಗಳು ಸ್ವಿಂಗ್​ ಮಾಡಿದರೆ ಅದು ಬಾಲ್ ಟ್ಯಾಂಪರಿಂಗ್ ಅಲ್ಲವೇ?, ಭಾರತ ಮತ್ತು ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳಾಗಿವೆ. ಹಾಗಂತ ಸುಮ್ಮಸುಮ್ಮನೆ ಆರೋಪ ಮಾಡುವುದು ಸರಿಯಲ್ಲ” ಎಂದು ಮೊಹಮ್ಮದ್ ಶಮಿ ತಿರುಗೇಟು ನೀಡಿದರು.

ಇದನ್ನೂ ಓದಿ Shami-Sania Mirza: ಸಾನಿಯಾ ಮಿರ್ಜಾ ಜತೆ ಮದುವೆ?; ಮೊದಲ ಬಾರಿಗೆ ಸ್ಪಷ್ಟನೆ ಕೊಟ್ಟ ಶಮಿ

“ನೀವೊಬ್ಬ ಮಾಜಿ ಆಟಗಾರರಾಗಿಯೂ ಪದೇಪದೆ ಈ ರೀತಿಯ ಸುಳ್ಳು ಆರೋಪ ಮಾಡುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ” ಎಂದು ಶಮಿ ಕುಟುಕಿದ್ದಾರೆ. ರೋಹಿತ್ ಶರ್ಮಾ (Rohit Sharma) ಕೂಡ ಇಂಜಮಾಮ್ ಹೇಳಿಕೆಗೆ ಅಂದು ತಿರುಗೇಟು ನೀಡಿದ್ದರು. ‘ನಾನು ಇದಕ್ಕೆ ಏನು ಉತ್ತರ ಕೊಡಲಿ? ಬಿಸಿಲಿನಲ್ಲಿ ಆಡುತ್ತಿದ್ದರೆ ಮತ್ತು ಪಿಚ್​ ಒಣಗಿದ್ದರೆ ಚೆಂಡು ರಿವರ್ಸ್​ ಸ್ವಿಂಗ್ ಆಗುತ್ತಿದೆ. ಚೆಂಡು ಎಲ್ಲಾ ತಂಡಗಳಿಗೂ ಅದೇ ರೀತಿ ವರ್ತಿಸುತ್ತದೆ. ನಮಗೆ ಮಾತ್ರ ಅನುಕೂಲವಾಗಿಲ್ಲ. ಕೆಲವೊಮ್ಮೆ, ನಿಮ್ಮ ತಲೆಯನ್ನು ತೆರೆದು ಮೆದುಳನ್ನು ಬಳಸಿ ಮಾತನಾಡಬೇಕಾಗುತ್ತದೆ” ಎಂದು ಹೇಳಿದ್ದರು. 

ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಶಮಿ  ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ)ಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Mohammed Shami : ರೋಹಿತ್​ ಶರ್ಮಾಗೆ ನನ್ನ ಬೌಲಿಂಗ್​ ಎಂದರೆ ಭಯ; ಮೊಹಮ್ಮದ್ ಶಮಿ

Mohammed Shami :

VISTARANEWS.COM


on

Mohammed Shami
Koo

ನವದೆಹಲಿ: ಭಾರತದ ನಾಯಕ ರೋಹಿತ್ ಶರ್ಮಾ ಅವರನ್ನು ನೆಟ್ಸ್​ನಲ್ಲಿ ನನ್ನ ಬೌಲಿಂಗ್​ ಎದುರಿಸಲು ಇಷ್ಟಪಡುವುದಿಲ್ಲ ಎಂದು ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಭಾರತ ತಂಡದ ಆಂತರಿಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಅವರು ರೋಹಿತ್​ ತಮ್ಮ ಬೌಲಿಂಗ್​ ನಿರಾಕರಿಸುತ್ತಿದ್ದ ಬಗ್ಗೆ ತಿಳಿಸಿದ್ದಾರೆ. ಪಾದದ ಗಾಯದಿಂದಾಗಿ ಶಮಿ 2023 ರ ಏಕದಿನ ವಿಶ್ವಕಪ್​ ಬಳಿಕ ಕ್ರಿಕೆಟ್ ಚಟುವಟಿಕೆಯಿಂದ ಹೊರಗುಳಿದಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಫಿಟ್ನೆಸ್ ಮರಳಿ ಪಡೆಯಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ.

ಶುಭಂಕರ್ ಮಿಶ್ರಾ 33 ವರ್ಷದ ಬೌಲರ್​​ ಜತೆ ಸಂದರ್ಶನದಲ್ಲಿ ಮಾತನಾಡಿ, ಭಾರತದ ಸ್ಟಾರ್ ಬ್ಯಾಟರ್​​ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗಿನ ಸ್ನೇಹದ ಬಗ್ಗೆ ಮಾತನಾಡಿದರು. ಈ ವೇಳೆ ಅವರು, ಭಾರತದ ನಾಯಕ ನೆಟ್ಸ್​​ನಲ್ಲಿ ಎದುರಿಸಲು ಇಷ್ಟಪಡುತ್ತಿರಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಶಮಿ, ವಿರಾಟ್ ಕೊಹ್ಲಿ ಅವರೊಂದಿಗಿನ ತಮ್ಮ ಮೋಜಿನ ಸಮರವನ್ನು ಬಹಿರಂಗಪಡಿಸಿದ್ದಾರೆ. ಅಲ್ಲಿ ಅವರಿಬ್ಬರೂ ಪರಸ್ಪರ ಸವಾಲು ಹಾಕಲು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: SL vs IND : ಲಂಕಾ ಪ್ರವಾಸಕ್ಕೆಅಭಿಷೇಕ್​ ನಾಯರ್​​ ಬ್ಯಾಟಿಂಗ್ ಕೋಚ್​​

ನೆಟ್ಸ್​ನಲ್ಲಿ ವಿರಾಟ್ ಜತೆ ಮೋಜಿನ ಜಗಳವಾಡಲು ಇಷ್ಟ. ನಾವು ಪರಸ್ಪರ ಸವಾಲು ಹಾಕುತ್ತಿರುತ್ತೇವೆ. ಅವರು ಉತ್ತಮ ಶಾಟ್ ಗಳನ್ನು ಹೊಡೆಯಲು ಇಷ್ಟಪಡುತ್ತಾರೆ. ನಾನು ಅವರನ್ನು ಔಟ್ ಮಾಡಲು ಇಷ್ಟಪಡುತ್ತೇನೆ. ನಮ್ಮ ಸ್ನೇಹ ಅದರಲ್ಲಿ ಪ್ರತಿಬಿಂಬಿಸುತ್ತದೆ ಎಂದು ಶಮಿ ಹೇಳಿದ್ದಾರೆ.

ಪಾಕ್​ ಮಾಜಿ ನಾಯಕ ಇಂಜಮಾಮ್ ಬೆಂಡೆತ್ತಿದ ಮೊಹಮ್ಮದ್​ ಶಮಿ


ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯ ವೇಳೆ ಭಾರತ ತಂಡದ ವೇಗಿ ಅರ್ಶ್‌ದೀಪ್ ಸಿಂಗ್(Arshdeep Singh) ಅವರ ರಿವರ್ಸ್ ಸ್ವಿಂಗ್ ಎಸೆತವನ್ನು ಪ್ರಶ್ನೆ ಮಾಡಿ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದ ಪಾಕಿಸ್ತಾನ ತಂಡದ ಮಾಜಿ ಆಟಗಾರ ಹಾಗೂ ನಾಯಕ ಇಂಜಮಾಮ್ ಉಲ್ ಹಕ್(Inzamam Ul Haq)ಗೆ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಶಮಿ(Mohammed Shami) ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ವಿಶ್ಲೇಷಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಇಂಜಮಾಮ್, ಅರ್ಶ್​ದೀಪ್ ರಿವರ್ಸ್ ಸ್ವಿಂಗ್ ಬಗ್ಗೆ ಅನುಮಾನವಿದೆ. 15ನೇ ಓವರ್​ನಲ್ಲಿ ಅವರು ಬೌಲಿಂಗ್​ ನಡೆಸುವ ವೇಳೆ ಚೆಂಡು ಹೆಚ್ಚು ಸ್ವಿಂಗ್​ ಆಗುತ್ತಿತ್ತು. ನಾನು ಗಮನಿಸಿದ ಹಾಗೆ ಈ ರೀತಿ ಚೆಂಡು ಏಕಾಏಕಿ ಸ್ವಿಂಗ್​ ಆಗಲು ಸಾಧ್ಯವಿಲ್ಲ. ನನ್ನ ಪ್ರಕಾರ ಭಾರತೀಯ ಆಟಗಾರರು 12 ಅಥವಾ 13ನೇ ಓವರ್​ನಲ್ಲಿ ಚೆಂಡಿಗೆ ಶೈನಿಂಗ್​ ಹಚ್ಚಿದಂತೆ ಕಾಣುತ್ತಿದೆ. ಅಂಪೈರ್​ಗಳು ಇದನ್ನು ಸೂಕ್ಷವಾಗಿ ಪರಿಗಣಿಸಬೇಕು. ಇಲ್ಲಿ ಯಾವುದೋ ಮೋಸದಾಟ ನಡೆದಂತಿದೆ” ಎಂದು ಆರೋಪಿಸಿದ್ದರು.

Continue Reading

ಕ್ರೀಡೆ

SL vs IND : ಲಂಕಾ ಪ್ರವಾಸಕ್ಕೆಅಭಿಷೇಕ್​ ನಾಯರ್​​ ಬ್ಯಾಟಿಂಗ್ ಕೋಚ್​​

SL vs IND: ನಾಯರ್ ಅವರೊಂದಿಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೊಬ್ಬ ಮಾಜಿ ಕೆಕೆಆರ್ ಆಟಗಾರ – ಪ್ರಸ್ತುತ ಅಮೇರಿಕಾದಲ್ಲಿ ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಎಲ್ಎಕೆಆರ್ ಫ್ರಾಂಚೈಸಿಯಲ್ಲಿ ಸಹಾಯಕ ತರಬೇತುದಾರರಾಗಿ ಕೆಲಸ ಮಾಡುತ್ತಿರುವ ರಿಯಾನ್ ಟೆನ್ ಡೊಸ್ಚಾಟ್ ಅವರನ್ನು ಸೇರಿಸಿಕೊಳ್ಳುವ ನಿರೀಕ್ಷೆಯಿದೆ.

VISTARANEWS.COM


on

SL vs IND
Koo

ಬೆಂಗಳೂರು: ಐಪಿಎಲ್​ ಫ್ರಾಂಚೈಸಿ ಕೆಕೆಆರ್ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ಭಾರತ ತಂಡದ ಸಹಾಯಕ ಸಿಬ್ಬಂದಿಗಳಲ್ಲಿ ಒಬ್ಬರನ್ನಾಗಿ ನೇಮಿಸುವ ಸಾಧ್ಯತೆಯಿದೆ. ಶ್ರೀಲಂಕಾ ಪ್ರವಾಸದಲ್ಲಿ (SL vs IND) ನಾಯರ್ ಭಾರತ ತಂಡ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ತಂಡದ ಮುಖ್ಯ ತರಬೇತುದಾರರಾಗಿ ಗೌತಮ್ ಗಂಭೀರ್ ಅವರ ಮೊದಲ ನೇಮಕವಾಗಿದೆ. ಆರು ವರ್ಷಗಳಿಂದ ಕೆಕೆಆರ್​​ ತಂಡದ ಬ್ಯಾಟಿಂಗ್​ ಕೋಚ್ ಆಗಿದ್ದ ನಾಯರ್ ಅದಕ್ಕಿಂತ ಮೊದಲು ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ಸುಧಾರಣೆಗಾಗಿ ಶ್ರಮಿಸಿದ್ದರು.

ನಾಯರ್ ಅವರೊಂದಿಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೊಬ್ಬ ಮಾಜಿ ಕೆಕೆಆರ್ ಆಟಗಾರ – ಪ್ರಸ್ತುತ ಅಮೇರಿಕಾದಲ್ಲಿ ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಎಲ್ಎಕೆಆರ್ ಫ್ರಾಂಚೈಸಿಯಲ್ಲಿ ಸಹಾಯಕ ತರಬೇತುದಾರರಾಗಿ ಕೆಲಸ ಮಾಡುತ್ತಿರುವ ರಿಯಾನ್ ಟೆನ್ ಡೊಸ್ಚಾಟ್ ಅವರನ್ನು ಸೇರಿಸಿಕೊಳ್ಳುವ ನಿರೀಕ್ಷೆಯಿದೆ.

ನಾಯರ್ ಮತ್ತು ದೋಸ್ಚಾಟ್ ಇಬ್ಬರೂ ಬೇರೆಬೇರೆ ಅವಧಿಯಲ್ಲಿ ಕೆಕೆಆರ್ ವ್ಯವಸ್ಥೆಯಲ್ಲಿದ್ದರು. ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ರಿಂಕು ಸಿಂಗ್ ಮತ್ತು ಇತರರಿಗೆ ಕಠಿಣ ಸಮಯದಲ್ಲಿ ಸಹಾಯ ಮಾಡಿದ ಇತಿಹಾಸವನ್ನು ನಾಯರ್ ಹೊಂದಿದ್ದಾರೆ. ಐಪಿಎಲ್​ 2024 ರ ಋತುವಿನಲ್ಲಿ ಕಠಿಣ ಸೋಲಿನ ನಂತರ ನಾಯರ್ ಡ್ರೆಸ್ಸಿಂಗ್ ರೂಮ್​ನಲ್ಲಿ ಪ್ರೇರಣೆ ಕೊಟ್ಟಿರುವ ವಿಷಯವನ್ನೂ ಆಟಗಾರ ವರುಣ್​ ಚಕ್ರವರ್ತಿ ಆ ಬಳಿಕ ಹೇಳಿಕೊಂಡಿದ್ದರು.

“ಕಳೆದ ಪಂದ್ಯದಲ್ಲಿ, ಹೆಚ್ಚು ರನ್ ಬಿಟ್ಟುಕೊಟ್ಟ ನಂತರ ಆ ಆವೃತ್ತಿ ನನಗೆ ನುಂಗಲಾರದ ತುತ್ತಾಗಿತ್ತು. ಆದರೆ ಇಡೀ ತಂಡವು ನಮ್ಮನ್ನು ಪ್ರೇರೇಪಿಸಿತು. ಅಭಿಷೇಕ್ ನಾಯರ್ ಮತ್ತು ಶಾರುಖ್ ಖಾನ್ ಕೂಡ ಬಂದು ನನ್ನೊಂದಿಗೆ ಮಾತನಾಡಿದರು. ನನ್ನನ್ನು ಪ್ರೇರೇಪಿಸಿದರು”ಎಂದು ಚಕ್ರವರ್ತಿ ಐಪಿಎಲ್ ಸಮಯದಲ್ಲಿ ಟ್ವಿಟರ್ ಹೇಳಿದ್ದರು.

ಇದನ್ನೂ ಓದಿ: Paris Olympic 2024 : ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್​ ಕರ್ಣಂ ಮಲ್ಲೇಶ್ವರಿ ಸಾಧನೆಯ ವಿವರ ಇಲ್ಲಿದೆ

ಪರಾಸ್ ಮಾಂಬ್ರೆ (ಬೌಲಿಂಗ್ ಕೋಚ್), ಟಿ ದಿಲೀಪ್ (ಫೀಲ್ಡಿಂಗ್ ಕೋಚ್) ಮತ್ತು ವಿಕ್ರಮ್ ರಾಥೋರ್ (ಬ್ಯಾಟಿಂಗ್ ಕೋಚ್) ಸೇರಿದಂತೆ ಭಾರತೀಯ ಪುರುಷರ ತಂಡದ ಸಹಾಯಕ ಸಿಬ್ಬಂದಿಗಳಾಗಿ ಮುಂದುವರಿಯುವುದಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜುಲೈ 9 ರ ಮಂಗಳವಾರ ಪತ್ರಿಕಾ ಪ್ರಕಟಣೆಯ ಮೂಲಕ ಈ ನಿರ್ಧಾರ ಪ್ರಕಟಿಸಿತ್ತು. ಅಲ್ಲಿ ಭಾರತೀಯ ತಂಡದೊಂದಿಗೆ ಅವರ ಅಧಿಕಾರವಧಿಯನ್ನು ಬಣ್ಣಿಸಲಾಗಿತ್ತು.

Continue Reading

ಕ್ರೀಡೆ

Paris Olympic 2024 : ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್​ ಕರ್ಣಂ ಮಲ್ಲೇಶ್ವರಿ ಸಾಧನೆಯ ವಿವರ ಇಲ್ಲಿದೆ

Paris Olympic 2024 : ಚಂಡೀಗಢದಲ್ಲಿ ಜನಿಸಿದ ಮಲ್ಲೇಶ್ವರಿ ಅವರು ಕೇವಲ 12 ವರ್ಷದವರಿದ್ದಾಗ ವೇಟ್ ಲಿಫ್ಟಿಂಗ್ ಪ್ರಯಾಣ ಆರಂಭಿಸಿದ್ದರು. 1990ರ ಏಷ್ಯನ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ನಡೆದ ರಾಷ್ಟ್ರೀಯ ಶಿಬಿರದಲ್ಲಿ ವಿಶ್ವ ಚಾಂಪಿಯನ್ ಲಿಯೋನಿಡ್ ತರನೆಂಕೊ ಅವರ ಪ್ರತಿಭೆಯನ್ನು ಗುರುತಿಸಿದ್ದರು. ಶಿಬಿರದಲ್ಲಿ ಅವರ ಸಹೋದರಿ ಕೃಷ್ಣ ಕುಮಾರಿ ಕೂಡ ಇದ್ದರು.

VISTARANEWS.COM


on

Paris Olympic 2024:
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್ 2024 ((Paris Olympic 2024) ) ​ ಕಳೆಗಟ್ಟುತ್ತಿದೆ. ಭಾರತದ ಒಲಿಂಪಿಕ್ಸ್​​ ಸಾಧನೆ ಸೀಮಿತ. ಅದಕ್ಕೆ ನೂರಾರು ಕಾರಣಗಳಿವೆ. ಇವೆಲ್ಲದರ ನಡುವೆ ವೇಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿ (karnam malleswari) ವೇಟ್​ಲಿಫ್ಟಿಂಗ್​ನಲ್ಲಿ ಕಂಚಿನ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಡೆದವರು. 2000ನೇ ಇಸವಿಯ ಸಿಡ್ನಿ ಒಲಿಂಪಿಕ್ಸ್​​ನಲ್ಲಿ ಅವರು ಈ ದಾಖಲೆ ಮಾಡಿದ್ದರು. ಅವರ ಭಾರತೀಯ ಕ್ರೀಡೆಯಲ್ಲಿ ಮಹತ್ವದ ಮೈಲಿಗಲ್ಲು ರೂಪಿಸಿದ್ದರು. ಮಾತ್ರವಲ್ಲದೆ ಮುಂದಿನ ಪೀಳಿಗೆಯ ಮಹಿಳಾ ಕ್ರೀಡಾಪಟುಗಳಿಗೆ ಪ್ರೇರಣೆಯಾದರು.

ಚಂಡೀಗಢದಲ್ಲಿ ಜನಿಸಿದ ಮಲ್ಲೇಶ್ವರಿ ಅವರು ಕೇವಲ 12 ವರ್ಷದವರಿದ್ದಾಗ ವೇಟ್ ಲಿಫ್ಟಿಂಗ್ ಪ್ರಯಾಣ ಆರಂಭಿಸಿದ್ದರು. 1990ರ ಏಷ್ಯನ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ನಡೆದ ರಾಷ್ಟ್ರೀಯ ಶಿಬಿರದಲ್ಲಿ ವಿಶ್ವ ಚಾಂಪಿಯನ್ ಲಿಯೋನಿಡ್ ತರನೆಂಕೊ ಅವರ ಪ್ರತಿಭೆಯನ್ನು ಗುರುತಿಸಿದ್ದರು. ಶಿಬಿರದಲ್ಲಿ ಅವರ ಸಹೋದರಿ ಕೃಷ್ಣ ಕುಮಾರಿ ಕೂಡ ಇದ್ದರು.

ಕರ್ಣಂ ಅವರ ಸಾಮರ್ಥ್ಯದಿಂದ ಪ್ರೇರಿತರಾಗಿದ್ದ ತರನೆಂಕೊ, ಬೆಂಗಳೂರಿಗೆ ತರಬೇತಿಗೆ ಕಳುಹಿಸಿದ್ದರು. ಮಲ್ಲೇಶ್ವರಿಯ ಆರಂಭಿಕ ಯಶಸ್ಸು ಗಮನಾರ್ಹವಾಗಿತ್ತು. 1990ರಲ್ಲಿ ತನ್ನ ಮೊದಲ ಜೂನಿಯರ್ ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ, ಅವರು 52 ಕೆಜಿ ವಿಭಾಗದಲ್ಲಿ ಒಂಬತ್ತು ರಾಷ್ಟ್ರೀಯ ದಾಖಲೆಗಳನ್ನು ಮುರಿದಿದ್ದರು. ಮುಂದಿನ ವರ್ಷ, ಅವರು ತಮ್ಮ ಮೊದಲ ಹಿರಿಯ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದಿದ್ದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ಗೆ ತೆರಳಿರುವ ಭಾರತದ ಹಿರಿಯ ಮತ್ತು ಕಿರಿಯ ಸ್ಪರ್ಧಿಗಳು ಯಾರು ಗೊತ್ತೇ? ಇಲ್ಲಿದೆ ಅವರ ವಿವರ

1993 ರ ವಿಶ್ವ ಚಾಂಪಿಯನ್​​ಷಿಪ್​ನಲ್ಲಿ ಅವರು 54 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದರು. ಮತ್ತು 1994 ರಲ್ಲಿ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ವೇಟ್​ಲಿಫ್ಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಯ ನಂತರ 1995 ರಲ್ಲಿ ಮತ್ತೊಂದು ಚಿನ್ನ ಮತ್ತು 1996 ರಲ್ಲಿ ಕಂಚು ಗೆದ್ದರು.

ಐರನ್ ಲೇಡಿ ಖ್ಯಾತಿ


ಮಲ್ಲೇಶ್ವರಿಯ ಯಶಸ್ಸು ವಿಶ್ವ ಚಾಂಪಿಯನ್ ಶಿಪ್ ಗಳನ್ನು ಮೀರಿ ವಿಸ್ತರಿಸಿತ್ತು ಅವರು 1994 ಮತ್ತು 1998 ರ ಏಷ್ಯನ್ ಕ್ರೀಡಾಕೂಟಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಪರಾಕ್ರಮವನ್ನು ಮತ್ತಷ್ಟು ಪ್ರದರ್ಶಿಸಿದರು. ಸಾಧನೆಗಳಿಗಾಗಿ ಅವರು 1994 ರಲ್ಲಿ ಅರ್ಜುನ ಪ್ರಶಸ್ತಿ, 1999 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅದೇ ವರ್ಷದಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾದರು.

ಸಿಡ್ನಿ ಒಲಿಂಪಿಕ್ಸ್​​ನಲ್ಲಿ ಮೊದಲ ಬಾರಿಗೆ ಮಹಿಳಾ ವೇಟ್ಲಿಫ್ಟಿಂಗ್ ಸ್ಪರ್ಧೆಗಳ ಪಟ್ಟಿಗೆ ಸೇರಿಸಲಾಗಿತ್ತು. 1996 ರಿಂದ ವಿಶ್ವ ಚಾಂಪಿಯನ್​ಷಿಪ್​​ ಪದಕವನ್ನು ಗೆದ್ದಿರಲಿಲ್ಲ. ಜತೆಗೆ 69 ಕೆ.ಜಿ ವಿಭಾಗಕ್ಕೆ ಏರಿದ್ದರು. ಆದಾಗ್ಯೂ ಅವರು ಸ್ನ್ಯಾಚ್​ನಲ್ಲಿ 110 ಕೆ.ಜಿ ಮತ್ತು ಕ್ಲೀನ್ ಆ್ಯಂಡ್​ ಜರ್ಕ್ ವಿಭಾಗಗಳಲ್ಲಿ 130 ಕೆ.ಜಿ ಭಾರ ಎತ್ತುವ ಮೂಲಕ ನಿರೀಕ್ಷೆಗಳನ್ನು ಮೀರಿ ಕಂಚಿನ ಪದಕ ಗೆದ್ದರು. ಐತಿಹಾಸಿಕ ಸಾಧನೆಯು ಅವಳನ್ನು ತಕ್ಷಣದ ಮನೆಮಾತಾಗಿಸಿತ್ತು. ಅವರಿಗೆ “ಉಕ್ಕಿನ ಮಹಿಳೆ ” ಎಂಬ ಹೆಸರು ಬಂತು.

ಮಲ್ಲೇಶ್ವರಿ ಸ್ಫೂರ್ತಿದಾಯಕ

ಮಲ್ಲೇಶ್ವರಿ ಅವರ ಒಲಿಂಪಿಕ್ ಪದಕವು ಭಾರತೀಯ ಕ್ರೀಡೆಯ ಮೇಲೆ ಆಳವಾದ ಪ್ರಭಾವ ಬೀರಿತು. ಇದು 2012 ರ ಲಂಡನ್ ಒಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್​ನಲ್ಲಿ ಭಾರತದ ಮೊದಲ ಒಲಿಂಪಿಕ್ ಪದಕ ಗೆದ್ದ ಸೈನಾ ನೆಹ್ವಾಲ್ ಮತ್ತು 2016 ರ ರಿಯೋ ಒಲಿಂಪಿಕ್ಸ್​ ಬ್ಯಾಡ್ಮಿಂಟರ್​ನಲ್ಲಿ ಬೆಳ್ಳಿ ಗೆದ್ದ ಪಿ.ವಿ.ಸಿಂಧು ಸೇರಿದಂತೆ ಹೊಸ ತಲೆಮಾರಿನ ಭಾರತೀಯ ಮಹಿಳೆಯರಿಗೆ ಸ್ಫೂರ್ತಿ ನೀಡಿತು.

ಮಲ್ಲೇಶ್ವರಿ ಅವರ ಪರಂಪರೆಯು ಅವರ ಸ್ವಂತ ಸಾಧನೆಗಳನ್ನು ಮೀರಿ ವಿಸ್ತರಿಸಿದೆ ಏಕೆಂದರೆ ಅವರು ಅಸಂಖ್ಯಾತ ಯುವ ಭಾರತೀಯ ಕ್ರೀಡಾಪಟುಗಳಿಗೆ ಭರವಸೆ ಮತ್ತು ಸ್ಫೂರ್ತಿಯ ಸಂಕೇತವಾಗಿದ್ದಾರೆ. ಅವರು 2002ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧೆಗಳಿಗೆ ಮರಳಲು ಯೋಜಿಸಿದ್ದರು. ಆದರೆ ಅವರ ತಂದೆ ನಿಧನರಾದ ನಂತರ ಹಿಂದೆ ಸರಿದಿದ್ದರು. 2004ರ ಒಲಿಂಪಿಕ್ಸ್ ನಲ್ಲಿ ಪ್ರದರ್ಶನ ನೀಡಲು ವಿಫಲವಾದ ನಂತರ ಅವರು ವೇಟ್ ಲಿಫ್ಟಿಂಗ್ ನಿಂದ ನಿವೃತ್ತರಾದರು.

ಮಲ್ಲೇಶ್ವರಿ ಭಾರತೀಯ ಕ್ರೀಡೆಗೆ ಕೊಡುಗೆ ನೀಡುವುದನ್ನು ಮುಂದುವರಿಸಿದ್ದಾರೆ. ಜೂನ್ 2021 ರಲ್ಲಿ ದೆಹಲಿ ಸರ್ಕಾರ ಸ್ಥಾಪಿಸಿದ ಕ್ರೀಡಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಅವರನ್ನು ನೇಮಿಸಲಾಗಿತ್ತು. ಕರ್ಣಂ ಮಲ್ಲೇಶ್ವರಿ ಫೌಂಡೇಶನ್, ಭಾರತದಲ್ಲಿ ವೇಟ್ ಲಿಫ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಕ್ಷೇತ್ರವನ್ನು ಉತ್ತೇಜಿಸುವ ಗುರಿ ಹೊಂದಿದೆ. ಅವರ ಪರಂಪರೆಯು ಭವಿಷ್ಯದ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿ.

Continue Reading

ಕ್ರೀಡೆ

Harbhajan Singh: ಧೋನಿ-ರಿಜ್ವಾನ್ ನಡುವೆ ಹೋಲಿಕೆ ಮಾಡಿದ ಪಾಕ್ ಪತ್ರಕರ್ತನಿಗೆ ಚಳಿ ಬಿಡಿಸಿದ ಹರ್ಭಜನ್

Harbhajan Singh: ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಮತ್ತು ಪಾಕ್​(IND vs PAK) ಪಂದ್ಯದ ವೇಳೆ ಸಿಕ್ಖ್ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಜನಾಂಗೀಯ ನಿಂದನೆ ಮಾಡಿದ್ದ ಕಮ್ರಾನ್​ ಅಕ್ಮಲ್(Kamran Akmal)ಗೆ ಹರ್ಭಜನ್​ ಸಿಂಗ್(Harbhajan Singh) ನಿನೋಬ್ಬ ನಾಲಾಯಕ್(Nalaayak)​ ಎಂದು ಹೇಳಿದ್ದರು.

VISTARANEWS.COM


on

Harbhajan Singh
Koo

ಮುಂಬಯಿ: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಹರ್ಭಜನ್​ ಸಿಂಗ್(Harbhajan Singh)​ ಅವರು ಪಾಕಿಸ್ತಾನದ ವಿರುದ್ಧ ಆಗಾಗ ಕಿಡಿಕಾರುತ್ತಲೇ ಇರುತ್ತಾರೆ. ಸುಮ್ಮ ಸುಮ್ಮನೆ ಭಾರತೀಯ ಕ್ರಿಕೆಟ್​ ಮತ್ತು ಆಟಗಾರರ ವಿರುದ್ಧ ಆರೋಪ ಮಾಡಿದಾಗ ಪಾಕ್​ಗೆ ತಕ್ಕ ತಿರುಗೇಟು ನೀಡುವವರ ಸಾಲಿನಲ್ಲಿ ಹರ್ಭಜನ್​ ಮುಂಚೂಣಿಯಲ್ಲಿರುತ್ತಾರೆ. ಇದೀಗ ಧೋನಿ(MS Dhoni) ವಿಚಾರದಲ್ಲಿ ಪಾಕ್​ ಪತ್ರಕರ್ತನ(Pakistan Journalist) ಬೆಂಡೆತ್ತಿದ್ದಾರೆ.

ಪಾಕಿಸ್ತಾನ ಪತ್ರಕರ್ತ ಫರೀದ್ ಖಾನ್(Pakistan Journalist Farid Khan) ತನ್ನ ಟ್ವೀಟರ್​ ಎಕ್ಸ್​ ಖಾತೆಯಲ್ಲಿ ಎಂ.ಎಸ್.ಧೋನಿ ಮತ್ತು ಮೊಹಮ್ಮದ್ ರಿಜ್ವಾನ್(Mohammad Rizwan) ಇಬ್ಬರಲ್ಲಿ ಯಾರು ಬೆಸ್ಟ್​? ಈ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡಿ ಎಂದು ಪ್ರಶ್ನೆ ಮಾಡಿದ್ದರು. ಈ ಪೋಸ್ಟ್ ನೋಡಿದ್ದೇ ತಡ ಹರ್ಭಜನ್​ ಪಿತ್ತ ನೆತ್ತಿಗೇರಿದ್ದು ಇದೆಂತಾ ಸಿಲ್ಲಿ ಪ್ರಶ್ನೆ ಎಂದು ಪ್ರತಿಕ್ರಿಯಿಸಿದ್ದಾರೆ. “ನೀವು ಇತ್ತೀಚಿನ ದಿನಗಳಲ್ಲಿ ಏನು ಸೇದುತ್ತೀರ? ಇದೆಂತಾ ಸಿಲ್ಲಿ ಪ್ರಶ್ನೆ. ಧೋನಿಯಂತ ದಿಗ್ಗಜ ಆಟಗಾರನೊಂದಿಗೆ ಈಗ ತಾನೆ ಕ್ರಿಕೆಟ್​ನಲ್ಲಿ ಬೆಳೆಯುತ್ತಿರುವ ರಿಜ್ವಾನ್​ ಅವರನ್ನು ಹೋಲಿಕೆ ಮಾಡುವುದು ಎಷ್ಟು ಸರಿ. ನೀವು ರಿಜ್ವಾನ್‌ಗೆ ಈ ಪ್ರಶ್ನೆ ಕೇಳಿದರೂ ಅವರು ನಿಮಗೆ ಇದೇ ಉತ್ತರ ಕೊಡುತ್ತಾರೆ” ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.

ಇದನ್ನೂ ಓದಿ Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

“ನಾನು ರಿಜ್ವಾನ್‌ ಅವರನ್ನು ಇಲ್ಲಿ ಅವಮಾನ ಮಾಡುತ್ತಿಲ್ಲ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರು ಯಾವಾಗಲೂ ತುಂಬಾ ಪಾಸಿಟಿವ್ ಆಗಿ ಆಡುತ್ತಾರೆ. ಕ್ರಿಕೆಟ್​ನಲ್ಲಿ ಅವರು ಇನ್ನೂ ಉತ್ತಮ ಸಾಧನೆ ಮಾಡುವಂತಾಗಿ. ಆದರೆ, ಧೋನಿ ಜತೆ ಹೋಲಿಕೆ ಮಾಡುವುದು ತಪ್ಪು. ಧೋನಿ ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದರೂ ಕೂಡ ಈಗಲೂ ಅವರು ವಿಶ್ವ ಕ್ರಿಕೆಟ್​ನಲ್ಲಿ ನಂಬರ್ 1 ಕೀಪರ್​ ಎನ್ನುವ ಖ್ಯಾತಿ ಹೊಂದಿದ್ದಾರೆ. ಹೀಗಾಗಿ ಮೊದಲು ಈ ಮೂರ್ಖತನದ ಪ್ರಶ್ನೆಯನ್ನು ಕೇಳುವುದು ನಿಲ್ಲಿಸಿ ಎಂದು ಪತ್ರಕರ್ತ ಫರೀದ್ ಖಾನ್​ಗೆ ಟರ್ಬನೇಟರ್ ಖ್ಯಾತಿಯ ಭಜ್ಜಿ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಮತ್ತು ಪಾಕ್​(IND vs PAK) ಪಂದ್ಯದ ವೇಳೆ ಸಿಕ್ಖ್ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಜನಾಂಗೀಯ ನಿಂದನೆ ಮಾಡಿದ್ದ ಕಮ್ರಾನ್​ ಅಕ್ಮಲ್(Kamran Akmal)ಗೆ ಹರ್ಭಜನ್​ ಸಿಂಗ್(Harbhajan Singh) ನಿನೋಬ್ಬ ನಾಲಾಯಕ್(Nalaayak)​ ಎಂದು ಹೇಳಿದ್ದರು.

ಎಎನ್​ಐ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ಹರ್ಭಜನ್​ ಸಿಂಗ್ ಅವರು ಕಮ್ರಾನ್​ ಅಕ್ಮಲ್​ ಒಬ್ಬ ನಾಲಾಯಕ್​, ಈತನಿಂದ ಮಾತ್ರ ಈ ರೀತಿಯ ಹೇಳಿಕೆ ನೀಡಲು ಸಾಧ್ಯ ಎಂದು ತೀಕ್ಷ್ಣ ಮಾತುಗಳಿಂದ ಜಾಡಿಸಿದ್ದರು. ನಿಮ್ಮ ಕೊಳಕು ಬಾಯಿ ತೆರೆಯುವ ಮೊದಲು ನೀವು ಸಿಖ್ಖರ ಇತಿಹಾಸವನ್ನು ಮೊದಲು ತಿಳಿದುಕೊಳ್ಳಬೇಕು. ನಾವು ಸಿಖ್ಖರು ನಿಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಆಕ್ರಮಣಕಾರರು ಅಪಹರಿಸಿದಾಗ ಅವರನ್ನು ರಕ್ಷಿಸಿದ್ದೇವೆ. ನಿಮಗೆ ನಾಚಿಕೆಯಾಗಬೇಕು… ಸ್ವಲ್ಪ ಕೃತಜ್ಞತೆ ಇರಲಿ” ಎಂದು ಬರೆದುಕೊಂಡಿದ್ದರು.

Continue Reading
Advertisement
CM Siddaramaiah
ಕರ್ನಾಟಕ2 mins ago

CM Siddaramaiah: ಬಿಜೆಪಿ ತನ್ನ ಅವಧಿಯ ಹಗರಣಗಳನ್ನು ಮುಚ್ಚಿ ಹಾಕಿದೆ: ಸಿಎಂ ಸಿದ್ದರಾಮಯ್ಯ

Viral video
ವೈರಲ್ ನ್ಯೂಸ್6 mins ago

Viral Video: ಏಳು ತಿಂಗಳ ಮಗುವಿನ ಮೇಲೆ ಗುಂಡು ಹಾರಿಸಿದ ಕ್ರೂರ ಮಹಿಳೆ!

Honor Released Honor 200 Pro 5G and Honor 200 5G Smartphones
ಬೆಂಗಳೂರು10 mins ago

Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

Self Harming
Latest12 mins ago

Self Harming: ಹೆಂಡತಿಗೆ ಹೆದರಿಸಲು ಹೋಗಿ ಜೀವ ಕಳೆದುಕೊಂಡ ಲೋಕೋ ಪೈಲಟ್‍!

Health Tips Kannada
ಆರೋಗ್ಯ14 mins ago

Health Tips Kannada: ಮಳೆಗಾಲದಲ್ಲಿ ಹಾಗಲಕಾಯಿ ತಿಂದರೆ ಪ್ರಯೋಜನಗಳು ಎಷ್ಟೊಂದು!

Movie ticket price hike
ಕರ್ನಾಟಕ28 mins ago

Movie ticket price hike: ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ; ಸಿನಿಮಾ ಟಿಕೆಟ್‌, OTT ಸಬ್‌ಸ್ಕ್ರಿಪ್ಶನ್ ಶುಲ್ಕ ಭಾರಿ ಏರಿಕೆ?

US Teacher
ವೈರಲ್ ನ್ಯೂಸ್32 mins ago

School Teacher: 14 ವರ್ಷದ ವಿದ್ಯಾರ್ಥಿಗೆ ತನ್ನ ಬೆತ್ತಲೆ ಫೋಟೊ ಕಳುಹಿಸಿದ ಶಿಕ್ಷಕಿ; ಈಗ ಜೈಲಿನ ಅತಿಥಿ

Mohammed Shami
ಕ್ರೀಡೆ40 mins ago

Mohammed Shami : ರೋಹಿತ್​ ಶರ್ಮಾಗೆ ನನ್ನ ಬೌಲಿಂಗ್​ ಎಂದರೆ ಭಯ; ಮೊಹಮ್ಮದ್ ಶಮಿ

Heavy rain in Chandragutti village and other places of Soraba taluk
ಶಿವಮೊಗ್ಗ43 mins ago

Karnataka Rain: ಸೊರಬ ತಾಲೂಕಿನ ವಿವಿಧೆಡೆ ಮಳೆ ಆರ್ಭಟ; ವರದಾ ನದಿ ತೀರದ ವ್ಯಾಪ್ತಿಯ ಕೃಷಿ ಭೂಮಿ ಜಲಾವೃತ

Sexual Abuse
Latest45 mins ago

Sexual Abuse: ವಿದ್ಯಾರ್ಥಿನಿಯನ್ನು ಅಪಹರಿಸಿ 12 ದಿನ ಅತ್ಯಾಚಾರ ಎಸಗಿ ಪೊಲೀಸ್‌ ಠಾಣೆ ಮುಂದೆಯೇ ಬಿಟ್ಟು ಹೋದರು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ8 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ1 day ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 day ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌