Pakistan Crisis: ಲೀಟರ್‌ ಪೆಟ್ರೋಲ್‌ಗೆ 275 ರೂ., ಸಾಲ 79 ಲಕ್ಷ ಕೋಟಿ ರೂ.; ಪಾಕ್‌ ಸಂಪೂರ್ಣ ದಿವಾಳಿ - Vistara News

ವಿದೇಶ

Pakistan Crisis: ಲೀಟರ್‌ ಪೆಟ್ರೋಲ್‌ಗೆ 275 ರೂ., ಸಾಲ 79 ಲಕ್ಷ ಕೋಟಿ ರೂ.; ಪಾಕ್‌ ಸಂಪೂರ್ಣ ದಿವಾಳಿ

Pakistan Crisis: ಪಾಕಿಸ್ತಾನವು ಮೂರು ವರ್ಷಗಳಿಗಾಗಿ ಆರ್ಥಿಕ ನೀತಿಗಳನ್ನು ರೂಪಿಸಿದ್ದು, ಬಜೆಟ್‌ನಲ್ಲಿ ಪ್ರಾಂತ್ಯಗಳ ಪಾಲನ್ನು ಶೇ.39.4ರಿಂದ ಶೇ.48.7ಕ್ಕೆ ಏರಿಕೆ ಮಾಡಲು ಚಿಂತನೆ ನಡೆಸಿದೆ. ಇದರಿಂದಾಗಿ ಪಾಕಿಸ್ತಾನದ ಆಂತರಿಕ ಹಾಗೂ ವಿದೇಶಿ ಸಾಲದ ಮೊತ್ತವು ಗಣನೀಯವಾಗಿ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Pakistan Crisis
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಸ್ಲಾಮಾಬಾದ್: ಉಗ್ರರ ಪೋಷಣೆ, ಉಗ್ರರಿಗೆ ಹಣಕಾಸು ನೆರವು, ಚೀನಾದ ಯೋಜನೆಗಳಿಗೆ ಹಣ ಸುರಿಯುವುದು, ಅಸಮರ್ಥ ನಾಯಕತ್ವ, ದೂರದೃಷ್ಟಿಯೇ ಇಲ್ಲದ ಆರ್ಥಿಕ ನೀತಿಗಳಿಂದಾಗಿ ಪಾಕಿಸ್ತಾನವು (Pakistan) ಸಂಪೂರ್ಣವಾಗಿ ದಿವಾಳಿ ಅಂಚಿಗೆ ಬಂದುನಿಂತಿದೆ. ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೇರಿದ್ದು, ಬಡವರು ನಿತ್ಯ ಪರದಾಡುತ್ತಿದ್ದಾರೆ. ಜಾಗತಿಕವಾಗಿಯೂ ಪಾಕಿಸ್ತಾನಕ್ಕೆ (Pakistan Crisis) ಹಣಕಾಸು ನೆರವು ಸಿಗುತ್ತಿಲ್ಲ. ಹೆಚ್ಚಿನ ಸಾಲವೂ ಸಿಗುತ್ತಿಲ್ಲ. ಇದರ ಬೆನ್ನಲ್ಲೇ, ಪಾಕಿಸ್ತಾನದ ಸಾಲದ ಪ್ರಮಾಣವು 2025ರ ವೇಳೆಗೆ 79 ಲಕ್ಷ ಕೋಟಿ ರೂ. (ಪಾಕಿಸ್ತಾನದ ಕರೆನ್ಸಿ) (Pakistan Debt) ಆಗಲಿದೆ ಎಂದು ವರದಿಯೊಂದು ತಿಳಿಸಿದೆ.

ಹೌದು, ಪಾಕಿಸ್ತಾನವು ಮೂರು ವರ್ಷಗಳಿಗಾಗಿ ಆರ್ಥಿಕ ನೀತಿಗಳನ್ನು ರೂಪಿಸಿದ್ದು, ಬಜೆಟ್‌ನಲ್ಲಿ ಪ್ರಾಂತ್ಯಗಳ ಪಾಲನ್ನು ಶೇ.39.4ರಿಂದ ಶೇ.48.7ಕ್ಕೆ ಏರಿಕೆ ಮಾಡಲು ಚಿಂತನೆ ನಡೆಸಿದೆ. ಇದರಿಂದಾಗಿ ಪಾಕಿಸ್ತಾನದ ಆಂತರಿಕ ಹಾಗೂ ವಿದೇಶಿ ಸಾಲದ ಮೊತ್ತವು ಗಣನೀಯವಾಗಿ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನವು ಸದ್ಯ 73 ಲಕ್ಷ ಕೋಟಿ ರೂ. ಸಾಲ ಹೊಂದಿದೆ. 2022-23ರಲ್ಲಿ 71 ಲಕ್ಷ ಕೋಟಿ ರೂ. ಸಾಲ ಹೊಂದಿತ್ತು. ಈಗ ಮತ್ತೆ ಸಾಲ ಮಾಡುವ ಮೂಲಕ ಪಾಕಿಸ್ತಾನವು ಅಪಾಯದ ಅಂಚಿಗೆ ಹೋಗುತ್ತಿದೆ ಎಂದೇ ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಲೀಟರ್‌ ಪೆಟ್ರೋಲ್‌ಗೆ 275 ರೂ.

ಪಾಕಿಸ್ತಾನದಲ್ಲಿ ಒಂದು ಲೀಟರ್‌ ಹಾಲಿನ ಬೆಲೆ 220 ರೂ. ಇದೆ. ಒಂದು ಲೀಟರ್‌ ಪೆಟ್ರೋಲ್‌ಗೆ 275 ರೂ., ಲೀಟರ್‌ ಡೀಸೆಲ್‌ಗೆ 83 ರೂ., ಮೊಟ್ಟೆಗೆ 66 ರೂ., ಲೀಟರ್‌ ಅಡಗೆ ಎಣ್ಣೆಗೆ 560 ರೂ., ಒಂದು ರೊಟ್ಟಿಗೆ 30 ರೂ. ಆಗಿದೆ. ಪ್ರತಿಯೊಂದು ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಇದರಿಂದ ಬಡವರು ಮೂರು ಹೊತ್ತು ಹೊಟ್ಟೆ ತುಂಬಿಸಿಕೊಳ್ಳಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದ ಹಣಕಾಸು ನೀತಿಗಳ ವಿರುದ್ಧ ಬಲೂಚಿಸ್ತಾನ ಸೇರಿ ಹಲವು ಪ್ರಾಂತ್ಯಗಳಲ್ಲಿ ದಂಗೆ, ಪ್ರತಿಭಟನೆ, ಹಿಂಸಾಚಾರಗಳು ಭುಗಿಲೆದ್ದಿವೆ.

ಸರ್ಕಾರಿ ಸಂಸ್ಥೆಗಳ ಮಾರಾಟಕ್ಕೆ ತೀರ್ಮಾನ

ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಆಗದ ಕಾರಣ ಪಾಕಿಸ್ತಾನವು ಕಾರ್ಯತಂತ್ರದ ಘಟಕಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ. ಶೆಹಬಾಜ್ ಷರೀಫ್ ನೇತೃತ್ವದಲ್ಲಿ ನಡೆದ ಸರ್ಕಾರಿ ಉದ್ಯಮಗಳ (SOEs) ಖಾಸಗೀಕರಣ ಪ್ರಕ್ರಿಯೆಯ ಪರಿಶೀಲನಾ ಸಭೆಯ ನಂತರ ಈ ನಿರ್ಧಾರ ಪ್ರಕಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದು 2024ರಿಂದ 29ರವರೆಗೆ ಹಂತ ಹಂತವಾಗಿ ನಡೆಯಲಿರುವ ಖಾಸಗೀಕರಣದ ಮಾರ್ಗಸೂಚಿಯನ್ನು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಇದನ್ನೂ ಓದಿ: Doda Encounter: ಜಮ್ಮು ದಾಳಿ ಹಿಂದೆ ಇದ್ಯಾ ಪಾಕ್‌ ಮಾಜಿ ಸೈನಿಕರ ಕೈವಾಡ? ಉಗ್ರರಿಗಿದ್ಯಾ ಸೇನಾ ತರಬೇತಿ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಏಳು ತಿಂಗಳ ಮಗುವಿನ ಮೇಲೆ ಗುಂಡು ಹಾರಿಸಿದ ಕ್ರೂರ ಮಹಿಳೆ!

ಅಮೆರಿಕದ ಫಿಲಡೆಲ್ಫಿಯಾ ನಗರದ ಈಶಾನ್ಯ ಭಾಗದಲ್ಲಿ ಏಳು ತಿಂಗಳ ಗಂಡು ಮಗುವನ್ನು ಸ್ಟ್ರೋಲರ್ ನಲ್ಲಿ ಮಲಗಿಸಿ ಸುತ್ತಾಡಿ ಬರಲು ಕರೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ದರೋಡೆಕೋರ ಮಹಿಳೆ ಗುಂಡಿನ ದಾಳಿ ನಡೆಸಿದ್ದಾಳೆ. ಗುಂಡು ಮಗುವಿನ ಕಾಲಿಗೆ ತಾಗಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral video
Koo

ಮಗುವಿನೊಂದಿಗೆ ಸುತ್ತಾಡಿ ಬರಲು ಹೋಗುತ್ತಿದ್ದ ತಾಯಿಯ ಮೇಲೆ ಮಹಿಳೆಯೊಬ್ಬಳು ಗುಂಡಿನ ದಾಳಿ ನಡೆಸಿದ್ದು, ಗುಂಡು ಮಗುವಿನ ಕಾಲಿಗೆ (Shoots Baby) ತಾಗಿದೆ. ಅಮೆರಿಕದ ಫಿಲಿಡೆಲ್ಫಿಯಾದಲ್ಲಿ (Philadelphia) ನಡೆದ ಈ ಘಟನೆಯ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಏಳು ತಿಂಗಳ ಗಂಡು ಮಗುವನ್ನು ಸ್ಟ್ರೋಲರ್ ನಲ್ಲಿ ಮಲಗಿಸಿ ಸುತ್ತಾಡಿ ಬರಲು ಕರೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ದರೋಡೆಕೋರ ಮಹಿಳೆ ಗುಂಡಿನ ದಾಳಿ ನಡೆಸಿದ್ದಾಳೆ. ಗುಂಡು ಮಗುವಿನ ಕಾಲಿಗೆ ತಾಗಿದೆ. ಇದೀಗ ಮಗುವಿನ ಅರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ಫಿಲಡೆಲ್ಫಿಯಾ ನಗರದ ಈಶಾನ್ಯ ಭಾಗದಲ್ಲಿ ಈ ಘಟನೆ ನಡೆದಿದ್ದು, ಗುಂಡು ಹಾರಿಸಿದ ದರೋಡೆಕೋರ ಮಹಿಳೆಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಮಗುವಿನ ಮೇಲೆ ಗುಂಡು ಹಾರಿಸಿರುವ ಭಯಾನಕ ದೃಶ್ಯ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. ಮಗು ಮತ್ತು ಪೋಷಕ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಮಹಿಳೆಯೊಬ್ಬಳು ಏಕಾಏಕಿ ಬಂದು ಅವರ ಮೇಲೆ ಗುಂಡಿನ ದಾಳಿ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದರೋಡೆಕೋರ ಮಹಿಳೆಯು ಹಲವು ಬಾರಿ ಗುಂಡು ಹಾರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.


ಪೊಲೀಸರು ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಹೀಗೆ ಬರೆದಿದ್ದರೆ. 2024ರ ಜುಲೈ 18ರಂದು ಮೆರಿಡಿಯನ್ ಸ್ಟ್ರೀಟ್‌ನ 4000 ಬ್ಲಾಕ್‌ನಲ್ಲಿ ಏಳು ತಿಂಗಳ ಮಗುವಿನ ಕಾಲಿನ ಮೇಲೆ ಮಹಿಳೆಯೊಬ್ಬಳು ಗುಂಡು ಹರಿಸಿದ್ದಾಳೆ. ಗುಂಡಿನ ದಾಳಿಯಲ್ಲಿ ಬೇರೆ ಯಾರಿಗೂ ಗಾಯವಾಗಿಲ್ಲ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಮಗುವಿನ ಆರೋಗ್ಯ ಸ್ಥಿರವಾಗಿದೆ.

ಇದನ್ನೂ ಓದಿ: Udupi News : ಸತ್ತ ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ಅಸಾಮಿ!

ಪೊಲೀಸರು ಆಗಮಿಸಿದಾಗ ಮಗುವಿನ ಪೋಷಕರು ಘಟನಾ ಸ್ಥಳದಲ್ಲಿ ಇರಲಿಲ್ಲ.ಗುಂಡಿನ ದಾಳಿ ನಡೆಸಿದ ಮಹಿಳೆ ತಾನು ಮಾಡಿದ್ದಕ್ಕೆ ಪಶ್ಚಾತ್ತಾಪ ಪಡದೆ ಸುಮ್ಮನೆ ಅಲ್ಲಿಂದ ಹೊರನಡೆದಳು. ಇದು ತುಂಬಾ ಭಯಾನಕವಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

Continue Reading

ವೈರಲ್ ನ್ಯೂಸ್

School Teacher: 14 ವರ್ಷದ ವಿದ್ಯಾರ್ಥಿಗೆ ತನ್ನ ಬೆತ್ತಲೆ ಫೋಟೊ ಕಳುಹಿಸಿದ ಶಿಕ್ಷಕಿ; ಈಗ ಜೈಲಿನ ಅತಿಥಿ

School Teacher: ವಿದ್ಯಾರ್ಥಿಗೆ ಬೆತ್ತಲೆ ಫೋಟೊ ಕಳುಹಿಸಿದ ಶಿಕ್ಷಕಿಯ ವಿರುದ್ಧ ಮಗುವಿಗೆ ಲೈಂಗಿಕ ಪ್ರಚೋದನೆ ನೀಡುವುದು, ಮಗುವಿನ ಯೋಗಕ್ಷೇಮಕ್ಕೆ ಧಕ್ಕೆ ತರುವುದು ಹಾಗೂ ಅಸಭ್ಯವಾಗಿ ವರ್ತಿಸುವುದು ಸೇರಿ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಆಕೆಯನ್ನು ವಿಚಾರಣೆ ನಡೆಸಿದ ಬಳಿಕ ನ್ಯೂ ಕ್ಯಾಸಲ್‌ ಕೌಂಟಿ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ.

VISTARANEWS.COM


on

US Teacher
Koo

ವಾಷಿಂಗ್ಟನ್‌: ಶಿಕ್ಷಕರಾದವರು ಹೇಗಿರಬೇಕು? ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಬೇಕು. ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿದಾಗ ಗದರಿ, ಅವರಿಗೆ ತಿಳಿಹೇಳಿ, ಪಠ್ಯದ ಜತೆಗೆ ಮೌಲ್ಯಗಳನ್ನು ತುಂಬಿ ಅವರು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು. ಆದರೆ, ಅಮೆರಿಕದಲ್ಲಿ (America) ಮಾಜಿ ಶಿಕ್ಷಕಿಯೊಬ್ಬರು (US Teacher) ತನ್ನ ಮಾಜಿ ವಿದ್ಯಾರ್ಥಿಗೆ ಬೆತ್ತಲೆ ಫೋಟೊ ಕಳುಹಿಸುವ ಮೂಲಕ ಶಿಕ್ಷಕ-ಶಿಕ್ಷಕಿಯರ ವೃತ್ತಿಗೆ ಕಳಂಕ ತಂದಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ.

ಡೆಲಾವೇರ್‌ನ ವಿಲ್ಮಿಂಗ್ಟನ್‌ನಲ್ಲಿರುವ ಸೇಂಟ್‌ ಮೇರಿ ಮ್ಯಾಗ್‌ಡಾಲೆನ್‌ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ 24 ವರ್ಷದ ಅಲಾನಿಸ್‌ ಪಿನಿಯನ್‌, ಶಾಲೆಯನ್ನು ತೊರೆದ ಬಳಿಕವೂ ವಿದ್ಯಾರ್ಥಿಗಳ ಜತೆ ಸ್ನ್ಯಾಪ್‌ಚಾಟ್‌ನಲ್ಲಿ ಸಂಪರ್ಕದಲ್ಲಿದ್ದಾಳೆ. ಮಕ್ಕಳು ಕೂಡ ನಮ್ಮ ಟೀಚರ್‌ ಎಂದು ಆಕೆಯ ಜತೆ ಚಾಟ್‌ ಮಾಡಿದ್ದಾರೆ. ಹಲವು ವಿದ್ಯಾರ್ಥಿಗಳು ಈಕೆಯ ಜತೆ ಸಂಪರ್ಕದಲ್ಲಿದ್ದಾರೆ. ಆದರೆ, ಒಬ್ಬ ವಿದ್ಯಾರ್ಥಿಗೆ ಅಲಾನಿಸ್‌ ಪಿನಿಯನ್‌ ಬೆತ್ತಲೆ ಫೋಟೊ ಕಳುಹಿಸಿದ್ದಾಳೆ. ಪ್ರಕರಣ ಬಯಲಾಗುತ್ತಲೇ ಆಕೆಯನ್ನು ಜೈಲಿಗೆ ಕಳುಹಿಸಲಾಗಿದೆ.

ಮಗುವಿಗೆ ಲೈಂಗಿಕ ಪ್ರಚೋದನೆ ನೀಡುವುದು, ಮಗುವಿನ ಯೋಗಕ್ಷೇಮಕ್ಕೆ ಧಕ್ಕೆ ತರುವುದು ಹಾಗೂ ಅಸಭ್ಯವಾಗಿ ವರ್ತಿಸುವುದು ಸೇರಿ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಆಕೆಯನ್ನು ವಿಚಾರಣೆ ನಡೆಸಿದ ಬಳಿಕ ನ್ಯೂ ಕ್ಯಾಸಲ್‌ ಕೌಂಟಿ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ. “ಶಾಲೆಯಲ್ಲಿ ಅವರು ತುಂಬ ದಿನಗಳವರೆಗೆ ಶಿಕ್ಷಕಿಯಾಗಿರಲಿಲ್ಲ. ಕೆಲ ದಿನಗಳ ಮಟ್ಟಿಗೆ ಆಕೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು. ಈಗ ಶಾಲೆಗೂ, ಆಕೆಗೂ ಸಂಬಂಧವಿಲ್ಲ” ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಮಗುವಿಗೆ ಶಿಕ್ಷಕಿಯು ಅಶ್ಲೀಲ ಫೋಟೊ ಕಳುಹಿಸಿದ ವಿಷಯವು ಶಾಲೆಯ ಆಡಳಿತ ಮಂಡಳಿಗೆ ಗೊತ್ತಾಗಿದೆ. ಇದಾದ ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಷಕರಿಗೂ ಈ ಕುರಿತು ಮಾಹಿತಿ ಒದಗಿಸಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. 24 ವರ್ಷದ ಶಿಕ್ಷಕಿಗೆ ಮದುವೆಯಾಗಿಲ್ಲ. ಮಕ್ಕಳ ಜತೆ ಚಾಟ್‌ ಮಾಡುವ ನೆಪದಲ್ಲಿ ಆಕೆಯು ಅವರನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಳ್ಳಲು ಹೀಗೆ ಮಾಡಿದ್ದಾಳೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Vishal Punjabi: ಮದುವೆಯಾದ 2 ತಿಂಗಳಿಗೆ ಪತ್ನಿಗೆ ಮೋಸ ಮಾಡಿ, ಇನ್ನೊಬ್ಬಳ ಜತೆ ಈ ನಟ ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದನಂತೆ!

Continue Reading

ವಿದೇಶ

Bangladesh Protests: ಬಾಂಗ್ಲಾದಲ್ಲಿ ನಿಲ್ಲದ ಹಿಂಸಾಚಾರ; 1000 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್‌; ಸಾವಿನ ಸಂಖ್ಯೆ 115ಕ್ಕೆ ಏರಿಕೆ

Bangladesh Protests: ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆಯುತ್ತಿದೆ. ಸುಮಾರು 15,000 ಭಾರತೀಯ ಪ್ರಜೆಗಳು ಬಾಂಗ್ಲಾದಲ್ಲಿದ್ದು, ಅವರೆಲ್ಲ ಕ್ಷೇಮವಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಆದರೆ ಸುಮಾರು 1000ರಷ್ಟು ಆತಂಕಿತ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ. 778ಭಾರತೀಯರು ಭೂಮಾರ್ಗದಲ್ಲಿ ತಾಯ್ನೆಲಕ್ಕೆ ಬಂದು ಸೇರಿದ್ದು, 200ಕ್ಕೂ ಅಧಿಕ ವಿದ್ಯಾರ್ಥಿಗಳು ವಿಮಾನದಲ್ಲಿ ಮರಳಿದ್ದಾರೆ.

VISTARANEWS.COM


on

Bangladesh protests
Koo

ಢಾಕಾ: ಕಳೆದ ಕೆಲದಿನಗಳಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ (Bangladesh Protests) ಪ್ರತಿಭಟನೆ ಹಾಗೂ ಹಿಂಸಾಚಾರ (Bangladesh Violence) ದಿನೇ ದಿನೇ ಉಲ್ಬಣಿಸಿದ್ದು, ಅಲ್ಲಿರುವ 1000ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು (Indian Students) ಸ್ವದೇಶಕ್ಕೆ ಮರಳಿದ್ದಾರೆ. ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 115ಕ್ಕೆ ಏರಿಕೆ ಆಗಿದೆ. ಇನ್ನು ಇಡೀ ದೇಶದಲ್ಲಿ ಕರ್ಫ್ಯೂ ಹೇರಲಾಗಿದೆ.

ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆಯುತ್ತಿದೆ. ಸುಮಾರು 15,000 ಭಾರತೀಯ ಪ್ರಜೆಗಳು ಬಾಂಗ್ಲಾದಲ್ಲಿದ್ದು, ಅವರೆಲ್ಲ ಕ್ಷೇಮವಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಆದರೆ ಸುಮಾರು 1000ರಷ್ಟು ಆತಂಕಿತ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ. 778ಭಾರತೀಯರು ಭೂಮಾರ್ಗದಲ್ಲಿ ತಾಯ್ನೆಲಕ್ಕೆ ಬಂದು ಸೇರಿದ್ದು, 200ಕ್ಕೂ ಅಧಿಕ ವಿದ್ಯಾರ್ಥಿಗಳು ವಿಮಾನದಲ್ಲಿ ಮರಳಿದ್ದಾರೆ.

ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಹಲವಾರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿದ್ದು, ಸಾವುನೋವಿಗೆ ಕಾರಣವಾಗಿದೆ. ಶುಕ್ರವಾರ ಕೂಡ ಬಾಂಗ್ಲಾದೇಶದಲ್ಲಿ ಘರ್ಷಣೆಗಳು ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದಿವೆ. ಪ್ರತಿಭಟನಾ ನಿರತರು ನರಸಿಂಗಡಿ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ ನೂರಾರು ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ. ನಂತರ ಜೈಲಿಗೆ ಬೆಂಕಿ ಹಚ್ಚಿದ್ದಾರೆ. ಗಲಭೆಯ ಬಿಸಿ ಸಾಮಾನ್ಯ ಜನರ ಬದುಕಿಗೂ ತಟ್ಟಿದೆ.

ದೇಶಾದ್ಯಂತ ಹರಡಿರುವ ಅಶಾಂತಿಯನ್ನು ತಡೆಯಲು ಪೊಲೀಸರು ಕೂಡ ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಶುಕ್ರವಾರ ಕರ್ಫ್ಯೂ ಮತ್ತು ಮಿಲಿಟರಿ ಪಡೆಗಳ ನಿಯೋಜನೆಯನ್ನು ಘೋಷಿಸಿದೆ. ಆಸ್ಪತ್ರೆಗಳು ನೀಡಿದ ವರದಿಗಳನ್ನು ಉಲ್ಲೇಖಿಸಿ ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಈ ವಾರದ ಘರ್ಷಣೆಯಲ್ಲಿ ಕನಿಷ್ಠ 105 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. 15 ವರ್ಷಗಳ ಅಧಿಕಾರದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಶೇಖ್ ಹಸೀನಾ ಸರ್ಕಾರ ದೊಡ್ಡ ಸವಾಲನ್ನು ಎದುರಿಸಿದೆ.

ಪ್ರತಿಭಟನೆಗಳು ಪ್ರಾರಂಭವಾದ ನಂತರ ಮೊದಲ ಬಾರಿಗೆ ಹೆಚ್ಚಿನ ಹಿಂಸಾಚಾರವನ್ನು ತಡೆಯುವ ಪ್ರಯತ್ನದಲ್ಲಿ ರಾಜಧಾನಿ ಢಾಕಾದಲ್ಲಿ ಪೊಲೀಸರು ಮೊದಲ ದಿನ ಎಲ್ಲಾ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದ್ದಾರೆ. ‘ನಾವು ಇಂದು ಢಾಕಾದಲ್ಲಿ ಎಲ್ಲಾ ರ್ಯಾಲಿಗಳು, ಮೆರವಣಿಗೆಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದ್ದೇವೆ’ ಎಂದು ಪೊಲೀಸ್ ಮುಖ್ಯಸ್ಥ ಹಬೀಬುರ್ ರೆಹಮಾನ್ ತಿಳಿಸಿದ್ದಾರೆ.

ರ್ಯಾಲಿಗಳನ್ನು ವಿಫಲಗೊಳಿಸಲು ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ. ಆದರೆ ನಗರದಲ್ಲಿ ಜನರ ಬೃಹತ್ ಗುಂಪುಗಳು ಜಮಾಯಿಸಿವೆ. ಇದು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾರಣಾಂತಿಕ ಘರ್ಷಣೆಗೆ ಕಾರಣವಾಯಿತು. ‘ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ’ ಎಂದು ರಾಜಧಾನಿಯಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದವರು ಘೋಷಿಸಿದ್ದಾರೆ. ‘ಈ ಹತ್ಯೆಗಳಿಗೆ ಸರ್ಕಾರವೇ ಹೊಣೆಯಾಗಿರುವುದರಿಂದ ಶೇಖ್ ಹಸೀನಾ ಅವರು ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

1971ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಸಂಬಂಧಿಕರಿಗೆ ಕೆಲವು ಸಾರ್ವಜನಿಕ ವಲಯದ ಉದ್ಯೋಗಗಳನ್ನು ಮೀಸಲಿಡುವ ವ್ಯವಸ್ಥೆಯ ವಿರುದ್ಧ ಢಾಕಾ ಮತ್ತು ಇತರ ನಗರಗಳಲ್ಲಿ ಹಲವಾರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.

ಇದನ್ನೂ ಓದಿ: Bangla Agitation Explainer: ಬಾಂಗ್ಲಾದೇಶ ಏಕೆ ಹೊತ್ತಿ ಉರಿಯುತ್ತಿದೆ? ವಿದ್ಯಾರ್ಥಿಗಳು ಏಕೆ ಹಿಂಸಾಚಾರಕ್ಕಿಳಿದಿದ್ದಾರೆ?

Continue Reading

ವಿದೇಶ

Bangla Agitation Explainer: ಬಾಂಗ್ಲಾದೇಶ ಏಕೆ ಹೊತ್ತಿ ಉರಿಯುತ್ತಿದೆ? ವಿದ್ಯಾರ್ಥಿಗಳು ಏಕೆ ಹಿಂಸಾಚಾರಕ್ಕಿಳಿದಿದ್ದಾರೆ?

ಉದ್ಯೋಗ ಮೀಸಲಾತಿ ವಿಚಾರವಾಗಿ ಬಾಂಗ್ಲಾದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆಗೆ (Bangladesh Violence) ಇಳಿದಿದ್ದು, ಈಗಾಗಲೇ ಇದು ಹಿಂಸಾಚಾರ ರೂಪ ತಳೆದಿದೆ. ಕನಿಷ್ಠ 40 ಮಂದಿ ಸಾವನ್ನಪ್ಪಿದ್ದು, 2,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪ್ರತಿಭಟನೆ ಯಾವಾಗ ಏಕೆ ಪ್ರಾರಂಭವಾಯಿತು? ಇಲ್ಲಿನ ವಿದ್ಯಾರ್ಥಿಗಳ ಬೇಡಿಕೆಗಳೇನು? ಇದರ ಹಿಂದಿನ ರಾಜಕೀಯ ಏನು ಎಂಬುದರ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Bangla Agitation Explainer
Koo

1971ರಲ್ಲಿ ನಡೆದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ (Bangla Agitation Explainer) ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.30 ಮೀಸಲಾತಿ (Job Reservation) ವ್ಯವಸ್ಥೆಯನ್ನು ವಿರೋಧಿಸಿ ಬಾಂಗ್ಲಾದೇಶದಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆಗೆ (Bangladesh Violence) ಇಳಿದಿದ್ದಾರೆ. ಪ್ರತಿಭಟನೆಯು ಹಿಂಸೆಯ ರೂಪ ತಳೆದು 40 ಮಂದಿ ಸಾವನ್ನಪ್ಪಿದ್ದು, 2,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹೆಚ್ಚುತ್ತಿರುವ ಘರ್ಷಣೆಯನ್ನು ಶಾಂತಗೊಳಿಸಲು ಪ್ರಧಾನಿ ಶೇಖ್ ಹಸೀನಾ (PM Sheikh Hasina ) ಅವರು ಮಾಧ್ಯಮದಲ್ಲಿ ಕಾಣಿಸಿಕೊಂಡ ಬಳಿಕ ಪ್ರತಿಭಟನಾಕಾರರು ಪ್ರಮುಖ ಟಿವಿ ಕಚೇರಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಹಲವು ವಾರಗಳಿಂದ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯು ಉಗ್ರ ಸ್ವರೂಪ ಪಡೆಯಲು ಹಲವು ಕಾರಣಗಳಿವೆ.

ಪ್ರತಿಭಟನೆ ಯಾವಾಗ ಪ್ರಾರಂಭ?

1971ರಲ್ಲಿ ಪಾಕಿಸ್ತಾನದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರು ಮತ್ತು ಹೋರಾಟಗಾರರ ಸಂಬಂಧಿಕರಿಗೆ ಉದ್ಯೋಗಗಳಲ್ಲಿ ಶೇ.30ರಷ್ಟು ಮೀಸಲಾತಿ ಘೋಷಣೆಯಾದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು. ರಾಜಧಾನಿ ಢಾಕಾ ಮತ್ತು ಇತರ ನಗರಗಳಲ್ಲಿ ನೂರಾರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ತಿಂಗಳಿನಿಂದ ರ‍್ಯಾಲಿಗಳನ್ನು ಪ್ರಾರಂಭಿಸಿದರು. ಶಾಂತವಾಗಿಯೇ ನಡೆಯುತ್ತಿದ್ದ ಪ್ರತಿಭಟನೆಕಾರರ ಮೇಲೆ ಪ್ರಧಾನಿ ಶೇಖ್‌ ಹಸೀನಾ ಅವರ ಆಡಳಿತರೂಢ ಅವಾಮಿ ಲೀಗ್‌ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದರು. ಆ ಬಳಿಕ ಪ್ರತಿಭಟನೆ ಹಿಂಸೆಯ ರೂಪ ತಾಳಿತು.

Bangladesh Violence


ಪ್ರತಿಭಟನೆಗೆ ಕಾರಣ?

1971ರ ಪಾಕಿಸ್ತಾನದಿಂದ ದೇಶದ ಸ್ವಾತಂತ್ರ್ಯದ ಯುದ್ಧದಲ್ಲಿ ಹೋರಾಡಿದವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30 ಮೀಸಲಾತಿ ವ್ಯವಸ್ಥೆಯನ್ನು ಬಾಂಗ್ಲಾದೇಶದ ಹೈಕೋರ್ಟ್‌ ಕಳೆದ ಜೂನ್ 5ರಂದು ಮತ್ತೆ ಜಾರಿಗೆ ತಂದ ಬಳಿಕ ಪ್ರತಿಭಟನೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನೇತೃತ್ವದ ಬೃಹತ್ ಹೋರಾಟದ ಬಳಿಕ 2018ರಲ್ಲಿ ಈ ಮೀಸಲು ವ್ಯವಸ್ಥೆಯನ್ನು ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಸರ್ಕಾರವು ರದ್ದುಗೊಳಿಸಿತ್ತು. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಈ ಮೀಸಲನ್ನು ಮರು ಜಾರಿಗೆ ಆದೇಶಿಸಿತ್ತು. ಬಾಂಗ್ಲಾ ಸರ್ಕಾರ ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಇದೀಗ ಸುಪ್ರೀಂ ಕೋರ್ಟ್‌ ಮೀಸಲು ಜಾರಿ ಕುರಿತ ಹೈಕೋರ್ಟ್‌ ತೀರ್ಪಿಗೆ ತಡೆ ನೀಡಿದೆ. ಆದರೆ ವಿದ್ಯಾರ್ಥಿಗಳ ಮುಷ್ಕರ ಮುಂದುವರಿದಿದೆ.

ಪ್ರತಿಭಟನೆ ವೇಳೆ ಮೀಸಲಾತಿ ವಿರೋಧಿ ಸಾವಿರಾರು ಪ್ರತಿಭಟನಾಕಾರರು ಮತ್ತು ಶೇಖ್‌ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ವಿಭಾಗದ ಸದಸ್ಯರ ನಡುವೆ ಘರ್ಷಣೆ ನಡೆಯುತ್ತಲೇ ಇದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ರಬ್ಬರ್ ಬುಲೆಟ್‌ಗಳು, ಅಶ್ರುವಾಯು ಮತ್ತು ಗ್ರೆನೇಡ್‌ಗಳನ್ನು ಬಳಸುತ್ತಿದ್ದಾರೆ. ಆದರೂ ಹಿಂಸಾಚಾರ ನಿಯಂತ್ರಣಕ್ಕೆ ಬರುತ್ತಿಲ್ಲ. ಹಿಂಸಾಚಾರ ತೀವ್ರವಾಗಿದ್ದರಿಂದ ಢಾಕಾಕ್ಕೆ ಮತ್ತು ಅಲ್ಲಿಂದ ಬರುವ ರೈಲ್ವೆ ಸೇವೆಗಳ ಜೊತೆಗೆ ರಾಜಧಾನಿಯೊಳಗೆ ಮೆಟ್ರೋ ರೈಲನ್ನು ಮುಚ್ಚಲಾಗಿದೆ. ದೇಶದ ಹಲವಾರು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ನೆಟ್‌ವರ್ಕ್‌ಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ. ಹೆಚ್ಚುತ್ತಿರುವ ಪ್ರತಿಭಟನೆಗಳ ಮಧ್ಯೆ ಬಾಂಗ್ಲಾದೇಶ ಸರ್ಕಾರವು ಶಾಲೆ ಮತ್ತು ವಿಶ್ವವಿದ್ಯಾಲಯಗಳನ್ನು ಅನಿರ್ದಿಷ್ಟವಾಗಿ ಮುಚ್ಚಿದೆ.

ವಿದ್ಯಾರ್ಥಿಗಳ ಬೇಡಿಕೆ ಏನು?

ಪಾಕಿಸ್ತಾನದ ವಿರುದ್ಧ 1971ರ ದೇಶದ ಸ್ವಾತಂತ್ರ್ಯದ ಸಂದರ್ಭದಲ್ಲಿ ಹೋರಾಡಿದ ಕುಟುಂಬದವರಿಗೆ ಶೇ. 30ರಷ್ಟು ಮೀಸಲನ್ನು ಉದ್ಯೋಗ ನೇಮಕಾತಿಯಲ್ಲಿ ನೀಡಬಾರದು. ಈ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂಬುದು ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದೆ. ಹೋರಾಟಗಾರರಿಗೆ ಗೌರವ ನೀಡೋಣ. ಆದರೆ ಮೂರನೆ ತಲೆಮಾರಿನ ಮೊಮ್ಮಕ್ಕಳಿಗೆ ಮೀಸಲು ಸೌಕರ್ಯ ಏಕೆ ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.


ಮೀಸಲಾತಿ ಪರಿಣಾಮ ಏನು?

ಬಾಂಗ್ಲಾದೇಶದ ಮೀಸಲಾತಿ ವ್ಯವಸ್ಥೆಯನ್ನು 1972ರಲ್ಲಿ ಪರಿಚಯಿಸಲಾಗಿತ್ತು. ಅಂದಿನಿಂದ ದೇಶಾದ್ಯಂತ ಹಲವಾರು ಬದಲಾವಣೆಗಳಿಗೆ ಕಾರಣವಾಯಿತು. ಈ ವ್ಯವಸ್ಥೆಯು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನ ದೊರೆಯಿತು. ಮಹಿಳೆಯರು ಮತ್ತು ಹಿಂದುಳಿದ ವರ್ಗದವರಿಗೆ ತಲಾ ಶೇ. 10ರಷ್ಟು, ಸ್ಥಳೀಯ ಸಮುದಾಯಗಳಿಗೆ ಶೇ. 5 ಮತ್ತು ಅಂಗವಿಕಲರಿಗೆ ಶೇ. 1ರಷ್ಟು ಮೀಸಲಾತಿಯನ್ನು ನಿಗದಿಪಡಿಸಿತ್ತು. ಹೀಗಾಗಿ ಶೇ.44ರಷ್ಟು ಉದ್ಯೋಗ ಮಾತ್ರ ಮೆರಿಟ್‌ ಆಧರಿಸಿ ನೀಡಲಾಗುತ್ತಿತ್ತು. ಇದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ, ಸ್ಯಾತಂತ್ರ್ಯ ಹೋರಾಟದ ಹೆಸರಿನಲ್ಲಿ ಅವರ ಮೊಮ್ಮಕ್ಕಳು ಉದ್ಯೋಗ ಗಿಟ್ಟಿಸುತ್ತಿದ್ದಾರೆ ಎನ್ನುವುದು ವಿದ್ಯಾರ್ಥಿಗಳ ಆಕ್ಷೇಪವಾಗಿದೆ.

ಇದನ್ನೂ ಓದಿ: Air India Flight: 225 ಪ್ರಯಾಣಿಕರನ್ನು ಹೊತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ; ರಷ್ಯಾದಲ್ಲಿ ಲ್ಯಾಂಡಿಂಗ್‌

ಸರ್ಕಾರ ಹೇಳುವುದೇನು?

ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದ ಅನಂತರ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲು ಬಾಂಗ್ಲಾದೇಶದ ಕಾನೂನು ಸಚಿವ ಅನಿಸುಲ್ ಹಕ್ ಇಚ್ಛೆ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರು ಒಪ್ಪಿದಾಗ ನಾವು ಮಾತುಕತೆಗೆ ಕುಳಿತುಕೊಳ್ಳುತ್ತೇವೆ. ಈ ಬಗ್ಗೆ ಮಾತುಕತೆ ನಡೆಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ. ಈ ನಡುವೆ ಹಸೀನಾ ಅವರು ಪ್ರತಿಭಟನೆಯಿಂದ ಆಗಿರುವ ಜೀವಹಾನಿಯನ್ನು ಖಂಡಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೆ ತಾಳ್ಮೆಯಿಂದಿರಿ ಎಂದು ಕರೆ ನೀಡಿದ್ದಾರೆ. ಆದರೆ ಈ ಪ್ರತಿಭಟನೆಯ ಹಿಂದೆ ರಾಜಕೀಯದ ಛಾಯೆಯೂ ಇದೆ. 1971ರ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದುದು ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಅವಾಮಿ ಲೀಗ್‌ ಪಕ್ಷ. ಈಗ ಪ್ರಧಾನಿ ಆಗಿರುವ ಶೇಖ್‌ ಹಸೀನಾ ಇವರ ಮಗಳು. ಹಾಗಾಗಿ ಅವಾಮಿ ಲೀಗ್‌ನ ಬೆಂಬಲಿಗರಿಗೆ ಮಾತ್ರ ಈ ಮೀಸಲಾತಿಯಿಂದ ಲಾಭ ಆಗುತ್ತದೆ ಎನ್ನುವುದು ಪ್ರತಿಪಕ್ಷಗಳ ಆಪಾದನೆಯಾಗಿದೆ. ಪ್ರತಿಪಕ್ಷಗಳು ಈ ವಿದ್ಯಾರ್ಥಿ ಚಳವಳಿಗೆ ಬೆಂಬಲ ನೀಡುತ್ತಿದ್ದಾರೆ.

Continue Reading
Advertisement
Samsung Launches Galaxy Watch 7 Galaxy Watch Ultra Buds 3 Series
ವಾಣಿಜ್ಯ27 mins ago

Samsung Galaxy: ಸ್ಯಾಮ್‌ಸಂಗ್‌ನಿಂದ ಗ್ಯಾಲಕ್ಸಿ ವಾಚ್7, ಗ್ಯಾಲಕ್ಸಿ ವಾಚ್ ಅಲ್ಟ್ರಾ, ಬಡ್ಸ್ 3 ಸರಣಿ ಬಿಡುಗಡೆ

Smriti Mandhana
ಕ್ರೀಡೆ44 mins ago

Smriti Mandhana : ಶ್ರೀಲಂಕಾದ ಅಂಗವಿಕಲ ಕ್ರಿಕೆಟ್​ ಅಭಿಮಾನಿಗೆ ಮೊಬೈಲ್ ಕೊಟ್ಟ ಸ್ಮೃತಿ ಮಂದಾನಾ

One Day Information Programme on Banking Examination at Shivamogga
ಶಿವಮೊಗ್ಗ50 mins ago

Shivamogga News: ಬ್ಯಾಂಕುಗಳಲ್ಲಿ ಕನ್ನಡಿಗರ ಸಂಖ್ಯೆ ಗಣನೀಯವಾಗಿ ಕ್ಷೀಣ: ಎಂ.ಎನ್. ನಾಗರಾಜ್ ಆತಂಕ

Paris Olympics 2024
ಕ್ರೀಡೆ1 hour ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ

Union Minister Pralhad Joshi slams the state Congress government
ಕರ್ನಾಟಕ1 hour ago

Pralhad joshi: ಕಾಂಗ್ರೆಸಿಗರಿಗೆ ರಾಮನ ಹೆಸರೆಂದರೆ ಅಲರ್ಜಿ; ಪ್ರಲ್ಹಾದ್‌ ಜೋಶಿ ವಾಗ್ದಾಳಿ

Talent is not the property of any caste community says CM Siddaramaiah
ಕರ್ನಾಟಕ1 hour ago

CM Siddaramaiah: ಪ್ರತಿಭೆ ಯಾವುದೇ ಒಂದು ಜಾತಿ-ಸಮುದಾಯದ ಸ್ವತ್ತಲ್ಲ: ಸಿಎಂ ಸಿದ್ದರಾಮಯ್ಯ

250 Anganwadis selected to start pre primary school says Minister Lakshmi Hebbalkar
ಕರ್ನಾಟಕ1 hour ago

Lakshmi Hebbalkar: ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು 250 ಅಂಗನವಾಡಿ ಆಯ್ಕೆ; ಜು.22ಕ್ಕೆ ಚಾಲನೆ

NEET UG 2024
ದೇಶ1 hour ago

NEET UG 2024: ನೀಟ್‌ ಪ್ರಶ್ನೆಪತ್ರಿಕೆ ಟ್ರಂಕ್‌ ಕದ್ದ ಮತ್ತೊಬ್ಬ ಕಿಂಗ್‌ಪಿನ್‌ ಸೇರಿ ಮೂವರನ್ನು ಬಂಧಿಸಿದ ಸಿಬಿಐ!

Cauvery Dispute
ಕರ್ನಾಟಕ2 hours ago

Cauvery Dispute: 2-3 ದಿನದಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿ; ಕೆರೆಗಳನ್ನು ತುಂಬಿಸಲು ಕ್ರಮ ಎಂದ ಡಿಕೆಶಿ

Royal Enfield Guerrilla 450
ಆಟೋಮೊಬೈಲ್2 hours ago

Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ9 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ10 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ1 day ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 day ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌