Sairaj Bahutule : ಭಾರತ ತಂಡದ ಮಧ್ಯಂತರ ಬೌಲಿಂಗ್​ ಕೋಚ್ ಆಗಿ ಸಾಯಿರಾಜ್ ಬಹುತುಲೆ ನೇಮಕ? - Vistara News

ಕ್ರೀಡೆ

Sairaj Bahutule : ಭಾರತ ತಂಡದ ಮಧ್ಯಂತರ ಬೌಲಿಂಗ್​ ಕೋಚ್ ಆಗಿ ಸಾಯಿರಾಜ್ ಬಹುತುಲೆ ನೇಮಕ?

Sairaj Bahutule : ಏತನ್ಮಧ್ಯೆ, 58 ವರ್ಷದ ಟ್ರಾಯ್ ಕೂಲಿ ಎನ್ಸಿಎ ಭಾಗವಾಗಿರುವುದರಿಂದ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸುವ ಆಯ್ಕೆಯನ್ನು ಬಿಸಿಸಿಐ ಹೊಂದಿತ್ತು. ಆದಾಗ್ಯೂ, ಶ್ರೀಲಂಕಾದಲ್ಲಿ ಸ್ಪಿನ್ನರ್​ಗಳು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ, ದೇಶಕ್ಕಾಗಿ ಎರಡು ಟೆಸ್ಟ್ ಪಂದ್ಯಗಳು ಮತ್ತು ಎಂಟು ಏಕದಿನ ಪಂದ್ಯಗಳನ್ನು ಆಡಿದ ಮತ್ತು ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್​​ಗಳನ್ನು ಪಡೆದ ಬಹತುಲೆ ಅವರನ್ನು ಅಧಿಕಾರಿಗಳು ಆಯ್ಕೆ ಮಾಡಿಕೊಂಡಿದ್ದಾರೆ.

VISTARANEWS.COM


on

Sairaj Bahutule :
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಸಾಯಿರಾಜ್ ಬಹುತುಲೆ (Sairaj Bahutule) ಅವರನ್ನು ಮಧ್ಯಂತರ ಬೌಲಿಂಗ್ ಕೋಚ್ ಆಗಿ ಘೋಷಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಜ್ಜಾಗಿದೆ. ಅಧಿಕಾರಿಗಳು ಮಾರ್ನೆ ಮಾರ್ಕೆಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಬಾಂಗ್ಲಾದೇಶ ವಿರುದ್ಧದ ತವರು ಸರಣಿಯಲ್ಲಿ ಅವರು ಪೂರ್ಣ ಸಮಯದ ಆಧಾರದ ಮೇಲೆ ಸೇರುವ ಏತನ್ಮಧ್ಯೆ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯೊಂದಿಗೆ ಸಂಬಂಧ ಹೊಂದಿರುವ ಬಹುತುಲೆ ಪುರುಷರ ತಂಡಕ್ಕೆ ಸೇವೆ ಸಲ್ಲಿಸಲಿದ್ದಾರೆ.

ಅವರು ಜುಲೈ 22ರಂದು ಭಾರತ ತಂಡ ಮತ್ತು ಇತರ ಕೋಚಿಂಗ್ ಗುಂಪಿನೊಂದಿಗೆ ಪ್ರಯಾಣಿಸಲಿದ್ದಾರೆ. ಏತನ್ಮಧ್ಯೆ, ಕ್ರಿಕ್​ಬಜ್​ ಪ್ರಕಾರ, ಅಭಿಷೇಕ್ ನಾಯರ್, ರಯಾನ್ ಟೆನ್ ಡೊಸ್ಚಾಟ್ ಮತ್ತು ಟಿ ದಿಲೀಪ್ ಅವರ ನೇಮಕವನ್ನು ಸಹ ಅಂತಿಮಗೊಳಿಸಲಾಗಿದೆ. ಪ್ರಯಾಣದ ದಿನದಂದು ನಿಗದಿಯಾಗಿರುವ ಪತ್ರಿಕಾಗೋಷ್ಠಿಯಲ್ಲಿ ಘೋಷಣೆಯಾಗಲಿದೆ. ಈ ವೇಳೆ ಗೌತಮ್ ಗಂಭೀರ್ ಅವರು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಏತನ್ಮಧ್ಯೆ, 58 ವರ್ಷದ ಟ್ರಾಯ್ ಕೂಲಿ ಎನ್ಸಿಎ ಭಾಗವಾಗಿರುವುದರಿಂದ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸುವ ಆಯ್ಕೆಯನ್ನು ಬಿಸಿಸಿಐ ಹೊಂದಿತ್ತು. ಆದಾಗ್ಯೂ, ಶ್ರೀಲಂಕಾದಲ್ಲಿ ಸ್ಪಿನ್ನರ್​ಗಳು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ, ದೇಶಕ್ಕಾಗಿ ಎರಡು ಟೆಸ್ಟ್ ಪಂದ್ಯಗಳು ಮತ್ತು ಎಂಟು ಏಕದಿನ ಪಂದ್ಯಗಳನ್ನು ಆಡಿದ ಮತ್ತು ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್​​ಗಳನ್ನು ಪಡೆದ ಬಹತುಲೆ ಅವರನ್ನು ಅಧಿಕಾರಿಗಳು ಆಯ್ಕೆ ಮಾಡಿಕೊಂಡಿದ್ದಾರೆ.

ಮಾರ್ಕೆಲ್ ಅನಾರೋಗ್ಯದಿಂದ ಬಳಲುತ್ತಿರುವ ತಂದೆಯನ್ನು ನೋಡಿಕೊಳ್ಳಲು ಪ್ರಿಟೋರಿಯಾಗೆ ಪ್ರಯಾಣಿಸಿದ್ದಾರೆ. ಬೌಲಿಂಗ್ ಕೋಚ್ ಆಗಿ ಮುಖ್ಯ ಕೋಚ್ ಗಂಭೀರ್ ಅವರ ಮೊದಲ ಆಯ್ಕೆಯಾಗಿದ್ದರಿಂದ ಅವರೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸಲು ಬಿಸಿಸಿಐಗೆ ಒಂದೆರಡು ತಿಂಗಳುಗಳ ಅವಕಾಶವಿದೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಲಕ್ನೋ ಸೂಪರ್ ಜೈಂಟ್ಸ್​ನಲ್ಲಿ ಗಂಭಿರ್ ಜತೆ ಮಾರ್ಕೆಲ್​ ಕೆಲಸ ಮಾಡಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್​ ತಮಡದಲ್ಲಿ ಗಂಭೀರ್​ ನಾಯಕತ್ವದಲ್ಲಿ ಆಡಿದ್ದಾರೆ.

ಗಂಭೀರ್ ಅವರು ಕ್ರಮವಾಗಿ ನಯನ್ ಮತ್ತು ಟೆನ್ ಡೊಸ್ಚಾಟ್ ಅವರನ್ನು ಸಹಾಯಕ ತರಬೇತುದಾರರನ್ನಾಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಐಪಿಎಲ್​ನಲ್ಲಿ ಇವರಿಬ್ಬರೊಂದಿಗೆ ಸಮಯ ಕಳೆದಿದ್ದಾರೆ.

ಇದನ್ನೂ ಓದಿ: Harmanpreet Kaur : ಟಿ20 ಐ ರನ್​ ಗಳಿಕೆಯಲ್ಲಿ ಸ್ಮೃತಿ ಮಂಧಾನಾ ಹಿಂದಿಕ್ಕಿದ ಹರ್ಮನ್​ಪ್ರೀತ್ ಕೌರ್​

ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ. ಸಿರಾಜ್ .

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷ್ದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Harmanpreet Kaur : ಟಿ20 ಐ ರನ್​ ಗಳಿಕೆಯಲ್ಲಿ ಸ್ಮೃತಿ ಮಂಧಾನಾ ಹಿಂದಿಕ್ಕಿದ ಹರ್ಮನ್​ಪ್ರೀತ್ ಕೌರ್​

Harmanpreet Kaur : ಸ್ಮೃತಿ ಅವರ 3,378 ರನ್​​ಗಳ ದಾಖಲೆಯನ್ನು ಮುರಿಯಲು ಹರ್ಮನ್​ಪ್ರೀರ್​ಗೆ ಕೇವಲ 30 ರನ್​ಗಳ ಅವಶ್ಯಕತೆಯಿತ್ತು. 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ ಕೌರ್​ 66 ರನ್ ಬಾರಿಸಿದರು. ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಅವರೊಂದಿಗೆ ಅರ್ಧಶತಕದ ಜೊತೆಯಾಟ ಆಡಿದರು. ಪಂಜಾಬ್ ಬ್ಯಾಟರ್​ ಅಂತಿಮವಾಗಿ ಅಂತಿಮ ಓವರ್​ನಲ್ಲಿ ರನ್ ಔಟ್ ಆದರು.

VISTARANEWS.COM


on

Harmanpreet Kaur
Koo

ಬೆಂಗಳೂರು ; ಮಹಿಳಾ ಟಿ20 ಕ್ರಿಕೆಟ್​​ನಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಹರ್ಮನ್​​ಪ್ರೀತ್​ ಕೌರ್ (Harmanpreet Kaur) ಪಾತ್ರರಾಗಿದ್ದಾರೆ. ಜುಲೈ 21 ರಂದು ಡಂಬುಲ್ಲಾದಲ್ಲಿ ನಡೆದ ಏಷ್ಯಾ ಕಪ್​ ಟೂರ್ನಿಯ ಲೀಗ್ ಹಂತದ ಯುಎಇ ವಿರುದ್ಧ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಟಾಸ್ ಗೆದ್ದ ಯುಎಇ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸ್ಮೃತಿ ಮಂಧಾನಾ 13 ರನ್ ಗಳಿಸಿ ಔಟಾದರು. ಬಳಿಕ ಶೆಫಾಲಿ ವರ್ಮಾ 18 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು. ಸ್ಮೃತಿ ಅವರ 3,378 ರನ್​​ಗಳ ದಾಖಲೆಯನ್ನು ಮುರಿಯಲು ಹರ್ಮನ್​ಪ್ರೀರ್​ಗೆ ಕೇವಲ 30 ರನ್​ಗಳ ಅವಶ್ಯಕತೆಯಿತ್ತು. 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ ಕೌರ್​ 66 ರನ್ ಬಾರಿಸಿದರು. ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಅವರೊಂದಿಗೆ ಅರ್ಧಶತಕದ ಜೊತೆಯಾಟ ಆಡಿದರು. ಪಂಜಾಬ್ ಬ್ಯಾಟರ್​ ಅಂತಿಮವಾಗಿ ಅಂತಿಮ ಓವರ್​ನಲ್ಲಿ ರನ್ ಔಟ್ ಆದರು.

171 ಟಿ20 ಪಂದ್ಯಗಳನ್ನಾಡಿರುವ ಹರ್ಮನ್​ಪ್ರೀತ್​​ 107.35ರ ಸ್ಟ್ರೈಕ್ ರೇಟ್ನಲ್ಲಿ 28.22ರ ಸರಾಸರಿಯಲ್ಲಿ 3,415 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು ತಮ್ಮ ಉಪನಾಯಕಿಗಿಂತ 37 ರನ್ ಗಳ ಮುನ್ನಡೆ ಹೊಂದಿದ್ದಾರೆ.

ದಾಖಲೆ ಬರೆದ ರಿಚಾ ಘೋಷ್​, ಇತಿಹಾಸ ಸೃಷ್ಟಿಸಿದ ಭಾರತ ತಂಡ

ಡಂಬುಲ್ಲಾ: ಮಹಿಳೆಯರ ಏಷ್ಯಾಕಪ್ 2024ರಲ್ಲಿ (Women’s Asia Cup 2024) ಭಾರತ ತಂಡ ವಿನೂತನ ಸಾಧನೆ ಮಾಡಿದೆ. ಯುಎಇ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿ 200 ರನ್ ದಾಖಲಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ದೊಡ್ಡ ಮೊತ್ತವನ್ನು ಪೇರಿಸಿದೆ. ಈ ಹಿಂದೆ ಭಾರತ ಇಂಗ್ಲೆಂಡ್ ವಿರುದ್ಧ 198 ರನ್​ ಬಾರಿಸಿತ್ತು. ಇದೇ ವೇಳೆ ಭಾರತದ ವಿಕೆಟ್​ ಕೀಪರ್ ರಿಚಾ ಘೋಷ್​ ಕೂಡ ವಿನೂತನ ಸಾಧನೆ ಮಾಡಿದ್ದಾರೆ. ಅವರು ಮಹಿಳಾ ಏಷ್ಯಾಕಪ್​​ನಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ರಿಚಾ ಪಾತ್ರರಾಗಿದ್ದಾರೆ.

ಇದನ್ನೂ ಓದಿ: Joe Root : ವೆಸ್ಟ್​ ಇಂಡೀಸ್ ವಿರುದ್ಧ ಶತಕ ಬಾರಿಸಿ ಸ್ಟೀವ್​ ವಾ ದಾಖಲೆ ಸರಿಗಟ್ಟಿದ ಜೋ ರೂಟ್​

ಭಾರತ ತಂಡ ಸೆಮೀಸ್​ಗೆ

ಡಂಬುಲ್ಲಾ: ಭಾರತದ ಮಹಿಳೆಯರ ಕ್ರಿಕೆಟ್ ತಂಡ ಏಷ್ಯಾ ಕಪ್​ನಲ್ಲಿ (Women’s Asia Cup) ತನ್ನ ಎರಡನೇ ಗೆಲುವು ಸಾಧಿಸಿದೆ. ಈ ಮೂಲಕ ಸೆಮೀಸ್​ ಪ್ರವೇಶವನ್ನು ಸುಲಭಗೊಳಿಸಿದೆ. ಯುಎಇ (UAE Women’s Cricket Team) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ 78 ರನ್​ ಗೆಲುವು ಸಾಧಿಸಿ ಗುಂಪು ಹಂತದಲ್ಲಿ ಒಟ್ಟು 4 ಅಂಕಗಳನ್ನು ಗಳಿಸಿದೆ. ಭಾರತ ತಂಡದ ಆಟಗಾರರು ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಪಾರಮ್ಯ ಸಾಧಿಸಿ ತನ್ನ ಅಜೇಯ ಓಟ ಮುಂದುವರಿಸಿದೆ. ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಮತ್ತೊಂದು ಸ್ಮರಣೀಯ ವಿಜಯವನ್ನು ತನ್ನದಾಗಿಸಿಕೊಂಡಿತು.

Continue Reading

ಪ್ರಮುಖ ಸುದ್ದಿ

Joe Root : ವೆಸ್ಟ್​ ಇಂಡೀಸ್ ವಿರುದ್ಧ ಶತಕ ಬಾರಿಸಿ ಸ್ಟೀವ್​ ವಾ ದಾಖಲೆ ಸರಿಗಟ್ಟಿದ ಜೋ ರೂಟ್​

Joe Root : ಸ್ಟೀವ್ ವಾ ಅವರಲ್ಲದೆ, ಹಾಲಿ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಅವರೊಂದಿಗೆ ರೂಟ್ ಸಾರ್ವಕಾಲಿಕ ಶತಕಗಳ ಪಟ್ಟಿಯಲ್ಲಿ ಸರಿಗಟ್ಟಿದರು. ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ಅಲಸ್ಟೇರ್ ಕುಕ್ (33 ಶತಕಗಳು) ಅವರಿಗಿಂತ ಹಿಂದಿದ್ದಾರೆ. ಅಗ್ರಸ್ಥಾನಕ್ಕೆ ಏರಿಸಲು 33 ವರ್ಷದ ಅವರಿಗೆ ಒಂದು ಶತಕ ಬೇಕಾಗಿದೆ.

VISTARANEWS.COM


on

Joe Root
Koo

ಬೆಂಗಳೂರು: ಇಂಗ್ಲೆಂಡ್​​ನ ನಾಟಿಂಗ್ಹಮ್​ ಟ್ರೆಂಟ್ ಬ್ರಿಜ್​​ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಇಂಗ್ಲೆಂಡ್​​ನ ಸ್ಟಾರ್ ಬ್ಯಾಟರ್​ ಜೋ ರೂಟ್ (Joe Root ) ತಮ್ಮ 32 ನೇ ಟೆಸ್ಟ್ ಶತಕ ದಾಖಲಿಸಿದ್ದಾರೆ. ಇಂಗ್ಲೆಂಡ್​​ನ ಮಾಜಿ ನಾಯಕ ದಿನದ ಎರಡನೇ ಸೆಷನ್​​ನಲ್ಲಿ ಅವರು ಶತಕ ದಾಖಲಿಸಿದರು. ಈ ಮೂಲಕ ಅವರು ಆಸ್ಟ್ರೇಲಿಯಾದ ಕ್ರಿಕೆಟ್​ ದಿಗ್ಗಜ ಸ್ಟೀವ್​ ವಾ ಅವರ 32ಟೆಸ್ಟ್​ ಶತಕದ ದಾಖಲೆ ಮುರಿದರು.

ಸ್ಟೀವ್ ವಾ ಅವರಲ್ಲದೆ, ಹಾಲಿ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಅವರೊಂದಿಗೆ ರೂಟ್ ಸಾರ್ವಕಾಲಿಕ ಶತಕಗಳ ಪಟ್ಟಿಯಲ್ಲಿ ಸರಿಗಟ್ಟಿದರು. ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ಅಲಸ್ಟೇರ್ ಕುಕ್ (33 ಶತಕಗಳು) ಅವರಿಗಿಂತ ಹಿಂದಿದ್ದಾರೆ. ಅಗ್ರಸ್ಥಾನಕ್ಕೆ ಏರಿಸಲು 33 ವರ್ಷದ ಅವರಿಗೆ ಒಂದು ಶತಕ ಬೇಕಾಗಿದೆ.

ಮೂರನೇ ದಿನ ಇಂಗ್ಲೆಂಡ್ 127 ರನ್​​ ಗಳಿಸುವಷ್ಟರಲ್ಲಿ ಒಲಿ ಪೋಪ್ (51 ರನ್​) ಅವರನ್ನು ಕಳೆದುಕೊಂಡ ನಂತರ ಅವರು ಕ್ರೀಸ್​ಗೆ ಬಂದ ರೂಟ್​​ , ಹ್ಯಾರಿ ಬ್ರೂಕ್ ಅವರೊಂದಿಗೆ ನಿರ್ಣಾಯಕ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಜೇಡನ್ ಸೀಲ್ಸ್ ಅವರ ಆರನೇ ಎಸೆತದಲ್ಲಿ ಬೌಂಡರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದರು. ನಂತರ ಅವರು ಸ್ಟ್ರೈಕ್ ಅನ್ನು ಬದಲಾಯಿಸುವುದನ್ನು ಮುಂದುವರೆಸಿದರು. ಹ್ಯಾರಿ ಬ್ರೂಕ್ ಅವರೊಂದಿಗೆ ಇಂಗ್ಲೆಂಡ್ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಇವರಿಬ್ಬರು ಯಾವುದೇ ವಿಕೆಟ್ ಕಳೆದುಕೊಳ್ಳದೆ ದಿನದ ಅಂತ್ಯದ ತನಕ ಆಡಿದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ ಸ್ಪರ್ಧೆಗೆ ಹೊರಟಿರುವ ಅಥ್ಲೀಟ್​ಗೆ 8.5 ಕೋಟಿ ರೂ. ಪ್ರೋತ್ಸಾಹಧನ ನೀಡಿದ ಬಿಸಿಸಿಐ

4 ನೇ ದಿನದಂದು, ಅವರು 37 ರನ್​ಗಳಿಂದ ತಮ್ಮ ಇನ್ನಿಂಗ್ಸ್ ಅನ್ನು ಮುಂದುವರಿಸಿದರು. ಅವರು ಮೊದಲ ಸೆಷನ್​ನಲ್ಲಿ 91 ಎಸೆತಗಳಲ್ಲಿ 63 ನೇ ಅರ್ಧಶತಕವನ್ನು ಗಳಿಸಿದರು, ಸಚಿನ್ ತೆಂಡೂಲ್ಕರ್ (68) ಮತ್ತು ಶಿವನಾರಾಯಣ್ ಚಂದ್ರಪಾಲ್ (66) ನಂತರ ಟೆಸ್ಟ್​​ನಲ್ಲಿ ಅತಿ ಹೆಚ್ಚು ಅರ್ಧಶತಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದರು.

ಟೆಸ್ಟ್ ಕ್ರಿಕೆಟ್​​ನಲ್ಲಿ 5ನೇ ಶತಕ ಸಿಡಿಸಿದ ಹ್ಯಾರಿ ಬ್ರೂಕ್

ಟೆಸ್ಟ್ ಕ್ರಿಕೆಟ್​್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಚಂದ್ರಪಾಲ್ (11,867 ರನ್) ಅವರನ್ನು ಹಿಂದಿಕ್ಕಿದ್ದಾರೆ. ಕುಕ್, ಆಂಡ್ರ್ಯೂ ಸ್ಟ್ರಾಸ್, ಅಲನ್ ಲ್ಯಾಂಬ್ ಮತ್ತು ಕಾಲಿನ್ ಕೌಡ್ರಿ ಅಗ್ರಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಅವರು ತಮ್ಮ ಆರನೇ ಟೆಸ್ಟ್ ಶತಕ ದಾಖಲಿಸಿದ್ದಾರೆ. ಟ್ರೆಂಟ್ ಬ್ರಿಜ್​​ನಲ್ಲಿ ಮೈಕ್ ಅಥರ್ಟನ್ ಮತ್ತು ಡೆನಿಸ್ ಕಾಂಪ್ಟನ್ ಅವರೊಂದಿಗೆ ಸಮಬಲ ಸಾಧಿಸಿದ ಸ್ಟಾರ್ ಬ್ಯಾಟರ್​​ ಇದು ಐದನೇ ಟೆಸ್ಟ್ ಶತಕ ಇದಾಗಿದೆ.

ರೂಟ್ ಐದನೇ ವಿಕೆಟ್​ಗೆ ಹ್ಯಾರಿ ಬ್ರೂಕ್ ಅವರೊಂದಿಗೆ 189 ರನ್​​ಗಳನ್ನು ಸೇರಿಸಿದರು. ಅವರು ತಮ್ಮ ಐದನೇ ಟೆಸ್ಟ್ ಶತಕ ಬಾರಿಸಿದರು. ಅವರಿಬ್ಬರ ಬೃಹತ್ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ ನಾಲ್ಕನೇ ಇನ್ನಿಂಗ್ಸ್​​ನಲ್ಲಿ 350 ರನ್​ಗಳ ಮುನ್ನಡೆ ಪಡೆದಿದೆ.

Continue Reading

ಕ್ರೀಡೆ

Paris Olympics 2024 : ಒಲಿಂಪಿಕ್ಸ್​ ಸ್ಪರ್ಧೆಗೆ ಹೊರಟಿರುವ ಅಥ್ಲೀಟ್​ಗೆ 8.5 ಕೋಟಿ ರೂ. ಪ್ರೋತ್ಸಾಹಧನ ನೀಡಿದ ಬಿಸಿಸಿಐ

Paris Olympics 2024 : ಒಟ್ಟು 47 ಮಹಿಳಾ ಮತ್ತು 70 ಪುರುಷ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಭಾಗವಾಗಲಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್​ಗಳು 29 ಕ್ರೀಡಾಪಟುಗಳೊಂದಿಗೆ ಅತಿದೊಡ್ಡ ಪ್ರಾತಿನಿಧ್ಯ ಹೊಂದಿದ್ದರೆ, ಶೂಟರ್​ಗಳು 21 ಕ್ರೀಡಾಪಟುಗಳೊಂದಿಗೆ ಎರಡನೇ ಸ್ಥಾನ ಪಡೆಯುತ್ತಾರೆ. ವೇಟ್​​ಲಿಫ್ಟಿಂಗ್​ನಲ್ಲಿ 2021 ರ ಟೋಕಿಯೊ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಮಾತ್ರ ಈ ವಿಭಾಗದಲ್ಲಿ ಪ್ರತಿನಿಧಿಸಲಿದ್ದಾರೆ. ಈಕ್ವೆಸ್ಟ್ರಿಯನ್, ಜೂಡೋ ಮತ್ತು ರೋಯಿಂಗ್ ಸಹ ಒಬ್ಬ ಕ್ರೀಡಾಪಟುವನ್ನು ಮಾತ್ರ ಹೊಂದಿರುತ್ತದೆ.

VISTARANEWS.COM


on

Paris Olympics 2024 :
Koo

ನವದೆಹಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್ ಗಾಗಿ (Paris Olympics 2024) ಭಾರತದ ಅಥ್ಲೀಟ್​ಗಳು ಸಜ್ಜಾಗುತ್ತಿರುವ ನಡುವೆ ಅವರೆಲ್ಲರಿಗೂ ಶುಭ ಸುದ್ದಿಯೊಂದನ್ನು ಬಿಸಿಸಿಐ ನೀಡಿದೆ. ಭಾರತೀಯ ಒಲಿಂಪಿಕ್ ಸಂಸ್ಥೆಗೆ (IOA) ಮೂಲಕ ಬಿಸಿಸಿಐ 8.5 ಕೋಟಿ ರೂ. ಪ್ರೋತ್ಸಾಹ ಧನವನ್ನು ಅಥ್ಲೀಟ್​ಗಳಿಗಾಗಿ ನೀಡಿದೆ. ಭಾನುವಾರ ಬಿಸಿಸಿಐ ಅಧ್ಯಕ್ಷ ಜಯ್ ಶಾ (Jay Shah) ಆರ್ಥಿಕ ನೆರವು ಘೋಷಿಸಿದ್ದಾರೆ. ಭಾರತೀಯ ತಂಡವು ದೇಶಕ್ಕೆ ಒಲಿಂಪಿಕ್ ವೈಭವ ತರಲು ನೋಡುತ್ತಿರುವ ನಡುವೆ ಬಿಸಿಸಿಐ ಐಒಎಗೆ ತಮ್ಮ ಬೆಂಬಲವನ್ನು ನೀಡಿದೆ. ಅಂತೆಯೇ 2024ರ ಒಲಿಂಪಿಕ್ಸ್​​ನಲ್ಲಿ ಪಾಲ್ಗೊಳ್ಳಲು 117 ಸದಸ್ಯರ ಭಾರತೀಯ ತಂಡ ಪ್ಯಾರಿಸ್​ಗೆ ತೆರಳಲಿದೆ.

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸುವ ನಮ್ಮ ಅದ್ಭುತ ಕ್ರೀಡಾಪಟುಗಳಿಗೆ ಬಿಸಿಸಿಐ ಬೆಂಬಲ ನೀಡಲಿದೆ ಎಂದು ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಅಭಿಯಾನಕ್ಕಾಗಿ ನಾವು ಐಒಎಗೆ 8.5 ಕೋಟಿ ರೂ.ಗಳನ್ನು ಒದಗಿಸುತ್ತಿದ್ದೇವೆ. ನಮ್ಮ ಇಡೀ ತಂಡಕ್ಕೆ, ನಾವು ನಿಮಗೆ ಶುಭ ಹಾರೈಸುತ್ತೇವೆ. ಭಾರತ ಹೆಮ್ಮೆ ಪಡುವಂತೆ ಮಾಡಿ! ಜೈ ಹಿಂದ್! ” ಎಂದು ಜಯ್ ಶಾ ‘ಎಕ್ಸ್’ ನಲ್ಲಿ ಬರೆದಿದ್ದಾರೆ. ಭಾರತೀಯ ಕ್ರೀಡಾಪಟುಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಲು ಶುಭಾಶಯಗಳನ್ನು ಕೋರಿದ್ದಾರೆ.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ಈ ಅಥ್ಲೀಟ್​ಗೆ ಕೇವಲ 11 ವರ್ಷ! ಇಲ್ಲಿದೆ ಆಕೆಯ ವಿವರ

ಒಟ್ಟು 47 ಮಹಿಳಾ ಮತ್ತು 70 ಪುರುಷ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಭಾಗವಾಗಲಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್​ಗಳು 29 ಕ್ರೀಡಾಪಟುಗಳೊಂದಿಗೆ ಅತಿದೊಡ್ಡ ಪ್ರಾತಿನಿಧ್ಯ ಹೊಂದಿದ್ದರೆ, ಶೂಟರ್​ಗಳು 21 ಕ್ರೀಡಾಪಟುಗಳೊಂದಿಗೆ ಎರಡನೇ ಸ್ಥಾನ ಪಡೆಯುತ್ತಾರೆ. ವೇಟ್​​ಲಿಫ್ಟಿಂಗ್​ನಲ್ಲಿ 2021 ರ ಟೋಕಿಯೊ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಮಾತ್ರ ಈ ವಿಭಾಗದಲ್ಲಿ ಪ್ರತಿನಿಧಿಸಲಿದ್ದಾರೆ. ಈಕ್ವೆಸ್ಟ್ರಿಯನ್, ಜೂಡೋ ಮತ್ತು ರೋಯಿಂಗ್ ಸಹ ಒಬ್ಬ ಕ್ರೀಡಾಪಟುವನ್ನು ಮಾತ್ರ ಹೊಂದಿರುತ್ತದೆ.

ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ, ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿಯ ವಿಷಯಕ್ಕೆ ಬಂದಾಗ ಭಾರತವು ಸುಮಾರು 1:1 ಅನುಪಾತ ಹೊಂದಿದೆ. ಒಟ್ಟು 67 ತರಬೇತುದಾರರು ಮತ್ತು 72 ಇತರ ಸಹಾಯಕ ಸಿಬ್ಬಂದಿ ಪ್ಯಾರಿಸ್ ಒಲಿಂಪಿಕ್ಸ್​​ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ.

Continue Reading

ಕ್ರಿಕೆಟ್

Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ಈ ಅಥ್ಲೀಟ್​ಗೆ ಕೇವಲ 11 ವರ್ಷ! ಇಲ್ಲಿದೆ ಆಕೆಯ ವಿವರ

Paris Olympics 2024 : ಬುಡಾಪೆಸ್ಟ್ ಮತ್ತು ಶಾಂಘೈನಲ್ಲಿ ನಡೆದ ಅರ್ಹತಾ ಸರಣಿಯ ನಂತರ ಜೆಂಗ್ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ. 11 ವರ್ಷದ ಜೆಂಗ್ ಒಲಿಂಪಿಕ್​ನಲ್ಲಿ ಅಮೆರಿಕದ ಕ್ವಿನ್ಸಿ ವಿಲ್ಸನ್ ಮತ್ತು ಹೆಜ್ಲಿ ರಿವೇರಾ, ಗ್ರೇಟ್ ಬ್ರಿಟನ್​​​ ಲೋಲಾ ಟ್ಯಾಂಬ್ಲಿಂಗ್ ಮತ್ತು ಸ್ಕೈ ಬ್ರೌನ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಅವರೆಲ್ಲರೂ 16 ವರ್ಷದವರು. ಈ ಮೂಲಕ ಈ ಸ್ಪರ್ಧೆಯಲ್ಲಿ ಇನ್ನಷ್ಟು ಬಾಲಕಿಯರು ಇದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​​ 2024 (Paris Olympics 2024) ಆರಂಭಕ್ಕೆ ಇನ್ನು ಕೆಲವೇ ದಿನಗಳ ಬಾಕಿ ಉಳಿದಿವೆ. ಯಾರೆಲ್ಲ ಪದಕ ಗೆಲ್ಲಬಹುದು, ಯಾರೆಲ್ಲ ಚಾಂಪಿಯನ್​ ಆಗಬಹುದು ಎಂಬೆಲ್ಲ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ಎಲ್ಲದರ ನಡುವೆ ಕ್ರೀಡಾಕೂಟದಲ್ಲಿರುವ ಸ್ಟಾರ್​ ಅಥ್ಲೀಟ್​ಗಳ ಸಾಧನೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಆದಾಗ್ಯೂ ಈ ಬಾರಿ ಸ್ಪರ್ಧೆಯಲ್ಲಿರುವ ಚೀನಾದ ಮಹಿಳಾ ಸ್ಕೇಟ್​ ಬೋರ್ಡರ್​​ ಹೆಚ್ಚು ಚರ್ಚೆಗೆ ಕಾರಣರಾಗಿದ್ದಾರೆ. ಅವರೇ ​ ಜೆಂಗ್ ಹಾವೊಹಾವೊ. ಯಾಕೆಂದರೆ ವಿಶ್ವದ ಅತ್ಯುನ್ನತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಈ ಸ್ಪರ್ಧಿಯ ವಯಸ್ಸು ಕೇವಲ 11 ವರ್ಷ. ಈಕೆ ತನ್ನ ದೇಶದ ಅತ್ಯಂತ ಕಿರಿಯ ಒಲಿಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದಾಗ್ಯೂ ಸಾರ್ವಕಾಲಿಕ ದಾಖಲೆ ಅವರ ಹೆಸರಿಲ್ಲ. ಯಾಕೆಂದರೆ 1896 ರಲ್ಲಿ 10 ವರ್ಷ ಮತ್ತು 218 ದಿನಗಳ ಡಿಮಿಟ್ರಿಯೋಸ್ ಲೌಂಡ್ರಾಸ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಬುಡಾಪೆಸ್ಟ್ ಮತ್ತು ಶಾಂಘೈನಲ್ಲಿ ನಡೆದ ಅರ್ಹತಾ ಸರಣಿಯ ನಂತರ ಜೆಂಗ್ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ. 11 ವರ್ಷದ ಜೆಂಗ್ ಒಲಿಂಪಿಕ್​ನಲ್ಲಿ ಅಮೆರಿಕದ ಕ್ವಿನ್ಸಿ ವಿಲ್ಸನ್ ಮತ್ತು ಹೆಜ್ಲಿ ರಿವೇರಾ, ಗ್ರೇಟ್ ಬ್ರಿಟನ್​​​ ಲೋಲಾ ಟ್ಯಾಂಬ್ಲಿಂಗ್ ಮತ್ತು ಸ್ಕೈ ಬ್ರೌನ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಅವರೆಲ್ಲರೂ 16 ವರ್ಷದವರು. ಈ ಮೂಲಕ ಈ ಸ್ಪರ್ಧೆಯಲ್ಲಿ ಇನ್ನಷ್ಟು ಬಾಲಕಿಯರು ಇದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ.

ಈ ಮಧ್ಯೆ, ಜೆಂಗ್ ದೊಡ್ಡ ದಾಖಲೆಯ ಅವಕಾಶ ಹೊಂದಿದ್ದಾರೆ. 86 ವರ್ಷಗಳ ಹಿಂದಿನ ಸಾಧನೆ ಮುರಿಯುವ ಮೂಲಕ ಅತ್ಯಂತ ಕಿರಿಯ ಒಲಿಂಪಿಕ್ ಚಾಂಪಿಯನ್ ಆಗುವ ಭಾರಿ ಅವಕಾಶ ಅವರ ಮುಂದಿದೆ. 1938ರಲ್ಲಿ ಡೆನ್ಮಾರ್ಕ್​​ನ ಇಂಗೆ ಸೊರೆನ್ಸೆನ್ 200 ಮೀಟರ್ ಬ್ರೆಸ್ಟ್​ಸ್ಟ್ರೋಕ್​ ಈಜಿನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆಗ ಅವರಿಗೆ 12 ವರ್ಷ 24 ದಿನಗಳು.

ಜೆಂಗ್ ತನ್ನ ಏಳನೇ ವಯಸ್ಸಿನಲ್ಲಿ ಸ್ಕೇಟ್​ಬೋರ್ಡಿಂಗ್​​ ಪ್ರಾರಂಭಿಸಿದನು. ಏಷ್ಯನ್ ಗೇಮ್ಸ್ ಚಾಂಪಿಯನ್ ಚೆನ್ ಯೆ ಅವರ ತಂದೆ ಚೆನ್ ವಾಂಕಿನ್ ನಡೆಸುತ್ತಿರುವ ಕ್ಲಬ್​​ನಲ್ಲಿ ಅವರು ಅಭ್ಯಾಸ ಮಾಡಲು ಪ್ರಾರಂಭಿಸಿದ್ದರು. ಜೆಂಗ್ ಅವರ ಮಾಜಿ ತರಬೇತುದಾರ ವೀ ನೈಜಾಂಗ್ ಮೂಲಕ ಸ್ಕೇಟ್ ಬೋರ್ಡಿಂಗ್ ಕಲಿತಿದ್ದರು.

“ಅವಳು ಮಗುವಾಗಿದ್ದಾಗಲೇ ಸ್ಕೇಟ್​ಬೋರ್ಡಿಂಗ್​​ ಮೇಲೆ ಹೆಚ್ಚು ಗಮನ ಹರಿಸಿದ್ದಳು. ಆಕೆಗೆ ಸಮಸ್ಯೆ ಆದರೆ ತಕ್ಷಣ ಸಮಸ್ಯೆ ಗುರುತಿಸಿ ಅದನ್ನು ತ್ವರಿತವಾಗಿ ಸರಿಪಡಿಸುತ್ತಿದ್ದಳು” ಎಂದು ವೀ ಹೇಳಿದ್ದಾರೆ.

ಬುಡಾಪೆಸ್ಟ್ ಒಲಿಂಪಿಕ್ ಕ್ವಾಲಿಫೈಯರ್ ಸರಣಿಯಲ್ಲಿ ಜೆಂಗ್ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲಿ ಅವರು 72.6 ಅಂಕಗಳೊಂದಿಗೆ ಸ್ಪರ್ಧೆ ಮುಗಿಸಿದ್ದರು. ಈ ಮೂಲಕ ಅಂತಿಮ ಸುತ್ತಿನಲ್ಲಿ ಕನಿಷ್ಠ ಅರ್ಹತಾ ಅಂಕವಾದ 67.34 ಅಂಕಗಳನ್ನು ದಾಟಿದ್ದರು.

ಹವ್ಯಾಸವೇ ಇತಿಹಾಸ

ಜೆಂಗ್ ಕೇವಲ ‘ಮೋಜಿಗಾಗಿ’ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಾಕೆ. ಸ್ಕೇಟ್ಬೋರ್ಡಿಂಗ್ ಮೋಜು ಎಂದು ಯಾರೋ ನನಗೆ ಹೇಳಿದರು ಮತ್ತು ನಾನೂ ಒಂದು ಖರೀದಿಸಿದೆ. ಇದು ನಿಜಕ್ಕೂ ಮೋಜಿನ ಸಂಗತಿಯಾಗಿದೆ” ಎಂದು ಜೆಂಗ್ ಹೇಳಿದ್ದಾಳೆ. ಒಂಬತ್ತು ವರ್ಷದವಳಿದ್ದಾಗ ಆಕೆ 2021 ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗುವಾಂಗ್ಡಾಂಗ್ ಅನ್ನು ಪ್ರತಿನಿಧಿಸಿ 14 ನೇ ಸ್ಥಾನ ಪಡೆದಿದ್ದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ಅತಿ ಹೆಚ್ಚು ಪದಕಗಳನ್ನು ಪಡೆದ ಅಥ್ಲೀಟ್​ ಯಾರು? ಇಲ್ಲಿದೆ ಈ ಶ್ರೇಷ್ಠ ಕ್ರೀಡಾಪಟುವಿನ ವಿವರ

2022 ರಲ್ಲಿ, ಜೆಂಗ್ ಗುವಾಂಗ್ಡಾಂಗ್ ಪ್ರಾಂತೀಯ ಕ್ರೀಡಾಕೂಟದಲ್ಲಿ ಮಹಿಳಾ ಪಾರ್ಕ್ ಸ್ಕೇಟ್​ಬೋರ್ಡಿಂಗ್​ ಸ್ಪರ್ಧೆಯಲ್ಲಿ ಅವರು ಗೆದ್ದಿದ್ದರು. ದೊಡ್ಡ ಹುಡುಗಿಯರು ಮಾಡಬೇಕಾದ ಕೌಶಲಗಳನ್ನು ಆಕೆ ಮಾಡಿರುವುದು ಗಮನಿಸಬೇಕಾದ ಸಂಗತಿಯಾಗಿದೆ ಎಂದು ಆಕೆಯ ಕೋಚ್ ಹೇಳಿದ್ದಾರೆ.

Continue Reading
Advertisement
Kamala Harris
ಪ್ರಮುಖ ಸುದ್ದಿ3 hours ago

Kamala Harris: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಕಮಲಾ ಹ್ಯಾರಿಸ್‌ ಹೆಸರು ಸೂಚಿಸಿದ ಜೋ ಬೈಡೆನ್!

Joe Biden
ವಿದೇಶ3 hours ago

Joe Biden: ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಜೋ ಬೈಡೆನ್;‌ ಕಮಲಾ ಹ್ಯಾರಿಸ್‌ಗೆ ಚಾನ್ಸ್?

Hubballi News
ಕರ್ನಾಟಕ3 hours ago

Hubballi News: ಹುಬ್ಬಳ್ಳಿಯಲ್ಲಿ ಮತ್ತೆ ಹರಿಯಿತು ನೆತ್ತರು; ಚಾಕು ಇರಿದು ದೇಗುಲದ ಪೂಜಾರಿಯ ಕೊಲೆ

Bescom
ಕರ್ನಾಟಕ4 hours ago

ವಿದ್ಯುತ್ ಬಿಲ್‌ನಲ್ಲಿರುವ ಹೆಚ್ಚುವರಿ ಭದ್ರತಾ ಠೇವಣಿ ಕುರಿತು ಗೊಂದಲ; ಗ್ರಾಹಕರ ಪ್ರಶ್ನೆಗಳಿಗೆ ಇಲ್ಲಿದೆ ಬೆಸ್ಕಾಂ ಉತ್ತರ

Sairaj Bahutule :
ಕ್ರೀಡೆ5 hours ago

Sairaj Bahutule : ಭಾರತ ತಂಡದ ಮಧ್ಯಂತರ ಬೌಲಿಂಗ್​ ಕೋಚ್ ಆಗಿ ಸಾಯಿರಾಜ್ ಬಹುತುಲೆ ನೇಮಕ?

Harmanpreet Kaur
ಕ್ರೀಡೆ5 hours ago

Harmanpreet Kaur : ಟಿ20 ಐ ರನ್​ ಗಳಿಕೆಯಲ್ಲಿ ಸ್ಮೃತಿ ಮಂಧಾನಾ ಹಿಂದಿಕ್ಕಿದ ಹರ್ಮನ್​ಪ್ರೀತ್ ಕೌರ್​

Sameer Nigam
ಕರ್ನಾಟಕ5 hours ago

Sameer Nigam: ಕನ್ನಡಿಗರ ಕ್ಷಮೆಯಾಚಿಸಿದ PhonePe ಸಿಇಒ ಸಮೀರ್‌ ನಿಗಮ್‌; ಬಾಯ್ಕಾಟ್‌ ಪೆಟ್ಟಿಗೆ ಥಂಡಾ

Ankola landslide
ಕರ್ನಾಟಕ6 hours ago

Ankola landslide: ಉತ್ತರ ಕನ್ನಡದ ರಾ. ಹೆದ್ದಾರಿ; ಕಾಮಗಾರಿ ಮುಗಿಸದೆ ಟೋಲ್ ಸಂಗ್ರಹ ಏಕೆ? ಗುತ್ತಿಗೆದಾರ ಕಂಪನಿಗೆ ಸಿಎಂ ತರಾಟೆ

Mamata Banerjee
ದೇಶ6 hours ago

Mamata Banerjee: ‘ನಾನು ಕಾಫಿರ್‌ ಅಲ್ಲ’ ಎಂದ ಮಮತಾ ಬ್ಯಾನರ್ಜಿಗೆ ಬಿಜೆಪಿ ತಿರುಗೇಟು; ಏನಿದು ವಿವಾದ?

Joe Root
ಪ್ರಮುಖ ಸುದ್ದಿ6 hours ago

Joe Root : ವೆಸ್ಟ್​ ಇಂಡೀಸ್ ವಿರುದ್ಧ ಶತಕ ಬಾರಿಸಿ ಸ್ಟೀವ್​ ವಾ ದಾಖಲೆ ಸರಿಗಟ್ಟಿದ ಜೋ ರೂಟ್​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ2 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ3 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ6 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ7 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌