Olympics 2024 : ತಮ್ಮ ಲಗೇಜ್​ಗಳನ್ನೇ ಮರೆತು ಪ್ಯಾರಿಸ್ ತಲುಪಿದ ಆಸ್ಟ್ರೇಲಿಯಾದ ಮಹಿಳೆಯರ ಫುಟ್ಬಾಲ್​ ತಂಡ - Vistara News

ಕ್ರೀಡೆ

Olympics 2024 : ತಮ್ಮ ಲಗೇಜ್​ಗಳನ್ನೇ ಮರೆತು ಪ್ಯಾರಿಸ್ ತಲುಪಿದ ಆಸ್ಟ್ರೇಲಿಯಾದ ಮಹಿಳೆಯರ ಫುಟ್ಬಾಲ್​ ತಂಡ

Olympics 2024: ಮಾರ್ಸಿಲೆಯಲ್ಲಿ ಜರ್ಮನಿ ವಿರುದ್ಧದ ಮೊದಲ ಗ್ರೂಪ್ ಪಂದ್ಯಕ್ಕೆ ಕೇವಲ ನಾಲ್ಕು ದಿನಗಳು ಬಾಕಿ ಇದೆ. ಅದಕ್ಕಾಗಿ ತಯಾರಿ ನಡೆಸುತ್ತಿದೆ. ತಂಡದ ಮ್ಯಾನೇಜ್ಮೆಂಟ್​ ತಮ್ಮ ಉಳಿದ ಸಾಮಾಗ್ರಿಗಳು ಹಾಗೂ ಕಾಣೆಯಾದ ಕೆಲವು ಉಪಕರಣಗಳನ್ನು ಸ್ಥಳೀಯವಾಗಿ ಜೋಡಿಸಿಕೊಳ್ಳಲು ಹೆಣಗಾಡುತ್ತಿದೆ.

VISTARANEWS.COM


on

Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆಸ್ಟ್ರೇಲಿಯಾದ ಮಹಿಳಾ ಫುಟ್ಬಾಲ್ ತಂಡ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲು ಪ್ಯಾರಿಸ್ ಹೊರಡಿದೆ. ಆದರೆ, ಬರುವಾಗ ತಮ್ಮ ಪ್ರಮುಖ ಲಗೇಜುಗಳು ಹಾಗೂ ಸಾಮಾಗ್ರಿಗಳನ್ನು ಮರೆತು ಬಂದಿದ್ದಾರೆ! ಅವರ ಬ್ಯಾಗ್​ ಸ್ಪೇನ್​ನಲ್ಲಿ ಉಳಿದಿದೆ ಎನ್ನಲಾಗಿದೆ. ನಿರ್ಣಾಯಕ ವೈದ್ಯಕೀಯ ಸಾಮಗ್ರಿಗಳು ಸೇರಿದಂತೆ ಕೆಲವು ವಸ್ತುಗಳೇ ಇಲ್ಲದೆ ಪ್ಯಾರಿಸ್​್ಗೆ ಆಗಮಿಸಿದೆ ಎಂದು ತಂಡದ ಮುಖ್ಯಸ್ಥೆ ಅನ್ನಾ ಮೀರೆಸ್ ಭಾನುವಾರ ತಿಳಿಸಿದ್ದಾರೆ.

ಮಾರ್ಸಿಲೆಯಲ್ಲಿ ಜರ್ಮನಿ ವಿರುದ್ಧದ ಮೊದಲ ಗ್ರೂಪ್ ಪಂದ್ಯಕ್ಕೆ ಕೇವಲ ನಾಲ್ಕು ದಿನಗಳು ಬಾಕಿ ಇದೆ. ಅದಕ್ಕಾಗಿ ತಯಾರಿ ನಡೆಸುತ್ತಿದೆ. ತಂಡದ ಮ್ಯಾನೇಜ್ಮೆಂಟ್​ ತಮ್ಮ ಉಳಿದ ಸಾಮಾಗ್ರಿಗಳು ಹಾಗೂ ಕಾಣೆಯಾದ ಕೆಲವು ಉಪಕರಣಗಳನ್ನು ಸ್ಥಳೀಯವಾಗಿ ಜೋಡಿಸಿಕೊಳ್ಳಲು ಹೆಣಗಾಡುತ್ತಿದೆ.

ಲಗೇಜ್ ಪ್ರಸ್ತುತ ಸ್ಪೇನ್ ನಲ್ಲಿದೆ. ಸಮಸ್ಯೆ ಪರಿಹರಿಸಲು ಆಸ್ಟ್ರೇಲಿಯಾ ಫುಟ್ಬಾಲ್ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಮೀರೆಸ್ ಹೇಳಿದರು. ತರಬೇತಿ ಕಿಟ್ ತಮ್ಮ ಬಳಿ ಇರುವುದರಿಂದ ತರಬೇತಿ ಮತ್ತು ತಯಾರಿ ನಡೆಸಲು ಸಾಧ್ಯವಾಗುತ್ತದೆ. ಆದರೆ ಕೆಲವು ವೈಯಕ್ತಿಕ ವಸ್ತುಗಳು ಮತ್ತು ವೈದ್ಯಕೀಯ ಉಪಕರಣಗಳು ಇನ್ನೂ ಬಂದಿಲ್ಲ ಎಂದು ತಂಡದ ಮುಖ್ಯಸ್ಥರು ಹೇಳಿದರು.

ವಸ್ತುಗಳು ಪ್ರಸ್ತುತ ಸ್ಪೇನ್​​ನಲ್ಲಿವೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಫುಟ್ಬಾಲ್ ಆಸ್ಟ್ರೇಲಿಯಾದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಮೀರೆಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಂಡದ ಅಧಿಕಾರಿಗಳು ಈಗಾಗಲೇ ಫ್ರಾನ್ಸ್​ನ ಮಾರ್ಸಿಲೆಯಲ್ಲಿ ಟೇಪ್ ಸ್ಟ್ರ್ಯಾಪಿಂಗ್, ಕತ್ತರಿ ಮತ್ತು ಪುನಶ್ಚೇತನ ಕಿಟ್​ಗಳಂಥ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ನಾವು ಪ್ಯಾರಿಸ್ ತಲುಪುವ ಮೊದಲು ಉಪಕರಣಗಳು ಶನಿವಾರ ವಿಮಾನಗಳ ಮೂಲಕ ಬರಬೇಕಾಗಿತ್ತು. ಆದರೆ ಏನೋ ತಪ್ಪಾಗಿದೆ ಎಂದು ತಂಡದ ಮೂಲಗಳು ಹೇಳಿವೆ.

ಆಸ್ಟ್ರೇಲಿಯಾ ತಂಡಕ್ಕೆ ಇಂಥದ್ದು ಮೊದಲ ಅನುಭವ ಅಲ್ಲ.ಇದಕ್ಕೂ ಮುನ್ನ ಜುಲೈನಲ್ಲಿ ಟೀಮ್ ಆಸ್ಟ್ರೇಲಿಯಾದ ಎಲ್ಲಾ ಸಮವಸ್ತ್ರಗಳನ್ನು ಹೊತ್ತ ಕಂಟೈನರ್ ಹಡಗು ಜಿಬ್ರಾಲ್ಟರ್ ಬಳಿ ಮತ್ತೊಂದು ಹಡಗಿಗೆ ಡಿಕ್ಕಿ ಹೊಡೆದಿತ್ತು. ಹೀಗಾಗಿ ಅವರ ವಸ್ತುಗಳು ಸೂಕ್ತ ಸಂದರ್ಭದಲ್ಲಿ ದೊರಕಿರಲಿಲ್ಲ.

ಅಪಾಯಕಾರಿ ರಾಸಾಯನಿಕ ಪತ್ತೆ; ಪ್ಯಾರಿಸ್​ ಒಲಿಂಪಿಕ್ಸ್​​ ಬ್ರಾಂಡ್​​ನ ಬಾಟಲ್​​ಗಳಿಗೆ ನಿಷೇಧ

ಪ್ಯಾರಿಸ್: ಒಲಿಂಪಿಕ್ಸ್ (Paris Olympics 2024) ಆರಂಭಕ್ಕೆ ಇನ್ನೊಂದು ವಾರ ಬಾಕಿ ಇರುವ ನಡುವೆ ಫ್ರೆಂಚ್ ಅಧಿಕಾರಿಗಳು ಪ್ಯಾರಿಸ್ 2024-ಬ್ರಾಂಡೆಡ್ ಲೋಹದ ನೀರಿನ ಬಾಟಲಿಗಳನ್ನು ನಿಷೇಧ ಮಾಡಿದ್ದಾರೆ. ಇದರಿಂದ ಆಯೋಜಕರಿಗೆ ಮತ್ತು ಅಲ್ಲಿಗೆ ಪ್ರವಾಸ ಬರುವರಿಗೆ ಬಾರಿ ಸಮಸ್ಯೆ ಎದುರಾಗಲಿದೆ. ಯಾಕೆಂದರೆ ಒಲಿಂಪಿಕ್ಸ್ ಬ್ರಾಂಡ್​ ಹೊಂದಿರುವ ಬಾಟಲ್​ಗಳನ್ನು ಟೂರ್ನಿಯ ಅವಧಿಯಲ್ಲಿ ಬಳಸುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ, ಡಿಸ್ಟ್ರಪ್ಟರ್ ಬಿಸ್ಫೆನಾಲ್ ಎ ರಾಸಾನಿಕ ಹೆಚ್ಚಿರುವ ಕಾರಣ ಅಧಿಕಾರಿಗಳು ನಿಷೇಧ ಹೇರಿದ್ದಾರೆ.

ಇದನ್ನೂ ಓದಿ: Joe Root : ವೆಸ್ಟ್​ ಇಂಡೀಸ್ ವಿರುದ್ಧ ಶತಕ ಬಾರಿಸಿ ಸ್ಟೀವ್​ ವಾ ದಾಖಲೆ ಸರಿಗಟ್ಟಿದ ಜೋ ರೂಟ್​

ಫ್ರೆಂಚ್ ಕಂಪನಿ ವಿಲಾಕ್ ತಯಾರಿಸಿದ ಬಾಟಲಿಗಳು “ನಿಯಮಗಳಿಗೆ ಅನುಸಾರವಾಗಿಲ್ಲ” ರಾಸಾಯನಿಕದ ಮಟ್ಟವನ್ನು ಹೊಂದಿವೆ ಎಂದು ಸರ್ಕಾರಿ ವೆಬ್​ಸೈಟ್​ ರಾಪೆಲ್ ಕಾನ್ಸೊದಲ್ಲಿ ಬರೆಯಲಾಗಿದೆ. ಆಗಸ್ಟ್ 2023 ರ ಅಂತ್ಯದಿಂದ ಜೂನ್ ಆರಂಭದವರೆಗೆ ಫ್ಯಾನ್ಸ್​ನಲ್ಲಿ ಮಾರಾಟವಾದ ಬಾಟಲಿಗಳು ಇನ್ನು ಮುಂದೆ ವಿಲಾಕ್ ಆನ್ಲೈನ್ ಅಂಗಡಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಯಮ ಅನುಸರಣೆಯ ಕಾರಣಗಳನ್ನು ಪತ್ತೆ ಹಚ್ಚಲು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಲೈಸೆನ್ಸ್ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಪ್ಯಾರಿಸ್ 2024 ಸಂಘಟಕರು ರಾಯಿಟರ್ಸ್​​ಗೆ ತಿಳಿಸಿದ್ದಾರೆ. ಸ್ತನ ಕ್ಯಾನ್ಸರ್ ಮತ್ತು ಬಂಜೆತನ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂಬ ಕಾರಣಕ್ಕೆ ಬಿಸ್ಫೆನಾಲ್ ಎ ಅನ್ನು 2015 ರಿಂದ ಫ್ರಾನ್ಸ್​​ನಲ್ಲಿ ನಿಷೇಧಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Chamari Athapaththu : ಏಷ್ಯಾ ಕಪ್​ನಲ್ಲಿ ಶತಕ ಬಾರಿಸಿ ವಿಶ್ವ ದಾಖಲೆ ಬರೆದ ಲಂಕಾದ ಮಹಿಳಾ ಕ್ರಿಕೆಟರ್​​

Chamari Athapaththu : 18ನೇ ಓವರ್​ ಬಳಿಕ ಚಾಮರಿ ಸ್ಫೋಟಕ ಬ್ಯಾಟಿಂಗ್ ಮಾಡಿದರು 19 ನೇ ಓವರ್ ಅನ್ನು ಬೌಂಡರಿಯೊಂದಿಗೆ ಪ್ರಾರಂಭಿಸಿದರು. ಶ್ರೀಲಂಕಾ ಇನಿಂಗ್ಸ್​​ನ ಕೊನೆಯ ಓವರ್​ಗೆ ಮೊದಲು ಅಟ್ಟಪಟ್ಟು 63 ಎಸೆತಗಳಲ್ಲಿ ಶತಕ ಪೂರ್ಣಗೊಳಿದರು. ವಿನ್ಫ್ರೈಡ್ ದುರೈಸಿಂಗಂ ಓವರ್​​ನ ಮೂರನೇ ಎಸೆತದಲ್ಲಿ, ಸಿಕ್ಸರ್ ಬಾರಿಸಿ ಪಂದ್ಯಾವಳಿಯ ಇತಿಹಾಸದಲ್ಲಿ ಇತಿಹಾಸ ನಿರ್ಮಿಸಿದರು.

VISTARANEWS.COM


on

Chamari Athapaththu
Koo

ಬೆಂಗಳೂರು: ಶ್ರೀಲಂಕಾದ ಬ್ಯಾಟರ್​ ಚಾಮರಿ ಅಟ್ಟಪಟ್ಟು (Chamari Athapaththu) ಏಷ್ಯಾಕಪ್ ಇತಿಹಾಸದಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜುಲೈ 22ರಂದು ಶ್ರೀಲಂಕಾದ ರಣಗಿರಿ ಡಂಬುಲ್ಲಾ ಅಂತಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಲಂಕಾ ನಾಯಕಿ ಈ ಸಾಧನೆ ಮಾಡಿದ್ದಾರೆ. ಮೊದಲು ಬ್ಯಾಟ್ ಮಾಡಿದ ಲಂಕಾ ಪರ 69 ಎಸೆತಗಳಲ್ಲಿ 14 ಬೌಂಡರಿ ಮತ್ತು ಏಳು ಸಿಕ್ಸರ್​​ಗಳ ಸಮೇತ 119 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ಮಹಿಳೆಯರ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಇತಿಹಾಸ ಬರೆದರು.

ವಿಶ್ಮಿ ಗುಣರತ್ನೆ ಅವರ ಆರಂಭಿಕ ವಿಕೆಟ್ ಕಳೆದುಕೊಂಡ ನಂತರ, ಚಾಮರಿ ಹರ್ಷಿತಾ ಸಮರವಿಕ್ರಮ ಅವರೊಂದಿಗೆ ಎರಡನೇ ವಿಕೆಟ್​​ಗೆ 64 ರನ್​​ಗಳ ಜೊತೆಯಾಟ ನೀಡಿದರು. ಚಾಮರಿ ಮತ್ತು ಅನುಷ್ಕಾ ಸಂಜೀವಿನಿ ಮೂರನೇ ವಿಕೆಟ್​​ಗೆ 115 ರನ್​ಗಳ ಜೊತೆಯಾಟವಾಡಿದರು. ಅನುಭವಿ ಆಟಗಾರ್ತಿ 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಚಾಮರಿ ವಿಸ್ಫೋಟಕ ಆಟ

18ನೇ ಓವರ್​ ಬಳಿಕ ಚಾಮರಿ ಸ್ಫೋಟಕ ಬ್ಯಾಟಿಂಗ್ ಮಾಡಿದರು 19 ನೇ ಓವರ್ ಅನ್ನು ಬೌಂಡರಿಯೊಂದಿಗೆ ಪ್ರಾರಂಭಿಸಿದರು. ಶ್ರೀಲಂಕಾ ಇನಿಂಗ್ಸ್​​ನ ಕೊನೆಯ ಓವರ್​ಗೆ ಮೊದಲು ಅಟ್ಟಪಟ್ಟು 63 ಎಸೆತಗಳಲ್ಲಿ ಶತಕ ಪೂರ್ಣಗೊಳಿದರು. ವಿನ್ಫ್ರೈಡ್ ದುರೈಸಿಂಗಂ ಓವರ್​​ನ ಮೂರನೇ ಎಸೆತದಲ್ಲಿ, ಸಿಕ್ಸರ್ ಬಾರಿಸಿ ಪಂದ್ಯಾವಳಿಯ ಇತಿಹಾಸದಲ್ಲಿ ಇತಿಹಾಸ ನಿರ್ಮಿಸಿದರು.

ಇದನ್ನೂ ಓದಿ: Raghu Dixit : ಪ್ಯಾರಿಸ್​ ಒಲಿಂಪಿಕ್ಸ್​ಗೆ ಕನ್ನಡ ಹಾಡುಗಳ ಮೆರುಗು ; ರಘು ದೀಕ್ಷಿತ್ ತಂಡದಿಂದ ವಿಶೇಷ ಕಾರ್ಯಕ್ರಮ

ಅಂತಿಮವಾಗಿ ಶ್ರೀಲಂಕಾ 20 ಓವರ್​ಗೆ 4 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. 136 ಪಂದ್ಯಗಳಿಂದ 24.44ರ ಸರಾಸರಿಯಲ್ಲಿ 3153 ರನ್ ಗಳಿಸಿರುವ ಚಾಮರಿ ಟಿ20ಐನಲ್ಲಿ ಮೂರು ಶತಕ ಬಾರಿಸಿದ್ದಾರೆ. ಅವರ ಇತರ ಎರಡು ಶತಕಗಳು ಆಸ್ಟ್ರೇಲಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಬಂದಿವೆ.

ಸುಜಿ ಬೇಟ್ಸ್, ಹರ್ಮನ್ಪ್ರೀತ್ ಕೌರ್, ಮೆಗ್ ಲ್ಯಾನಿಂಗ್, ಸ್ಮೃತಿ ಮಂದಾನ, ಸ್ಟೆಫಾನಿ ಟೇಲರ್ ಮತ್ತು ಸೋಫಿ ಡಿವೈನ್ ನಂತರ ಮಹಿಳಾ ಟಿ 20 ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಟ್ಟಪಟ್ಟು ಏಳನೇ ಸ್ಥಾನದಲ್ಲಿದ್ದಾರೆ.

Continue Reading

ಕ್ರೀಡೆ

Raghu Dixit : ಪ್ಯಾರಿಸ್​ ಒಲಿಂಪಿಕ್ಸ್​ಗೆ ಕನ್ನಡ ಹಾಡುಗಳ ಮೆರುಗು ; ರಘು ದೀಕ್ಷಿತ್ ತಂಡದಿಂದ ವಿಶೇಷ ಕಾರ್ಯಕ್ರಮ

Raghu Dixit : ನಮ್ಮ ತಮ್ಮ ಸಂಗೀತ ಕಚೇರಿಗಳಲ್ಲಿ ಯಾವಾಗಲೂ ಉತ್ಸಾಹ ತುಂಬಿರುತ್ತದೆ ಎಂದು ಹೇಳುತ್ತಾರೆ ರಘು ದೀಕ್ಷಿತ್​. ಸಂಗೀತ ಕಚೇರಿಗಳಲ್ಲಿ, ಎಲ್ಲರೂ ನೃತ್ಯ ಮಾಡಬೇಕು. ಅದು ನಾವು ಅನುಸರಿಸುವ ನಿಯಮ. ಪ್ರೇಕ್ಷಕರಲ್ಲಿ ಯಾರು ಇದ್ದಾರೆ ಎಂಬುದು ಮುಖ್ಯವಲ್ಲ. ಪ್ರತಿಯೊಬ್ಬರೂ ಖುಷಿ ಪಡಬೇಕು ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ಜತೆ ಮಾತನಾಡುತ್ತಾ ಹೇಳಿದ್ದಾರೆ.

VISTARANEWS.COM


on

Raghu Dixit
Koo

ಬೆಂಗಳೂರು: ಜುಲೈ 26ರಂದು ನಡೆಯಲಿರುವ ಪ್ಯಾರಿಸ್​ ಒಲಿಂಪಿಕ್ಸ್ (Paris Olympics) ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡದ ಕಂಪು ಮೊಳಗಲಿದೆ. ಹೇಗೆಂದರೆ ಗಾಯಕ ರಘು ದೀಕ್ಷಿತ್ (Raghu Dixit) ಅವರ ಸಂಗೀತ ಬ್ಯಾಂಡ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದೆ. ಅವರ ಹಾಡುಗಳು ವಿಶೇಷವಾಗಿ ಜಾನಪದ ಹಿನ್ನೆಲೆಯವು. ಇಂಥ ಹಾಡುಗಳು ರಘು ದೀಕ್ಷಿತ್ ಪ್ರಾಜೆಕ್ಟ್ ಮೂಲಕ ಒಲಿಂಪಿಕ್ಸ್ ತಾಣದಲ್ಲಿ ಮೊಳಗಲಿದೆ. ಜುಲೈ 29 ಮತ್ತು 30 ರಂದು ಪಾರ್ಕ್ ಡಿ ಲಾ ವಿಲ್ಲೆಟ್ ನಲ್ಲಿರುವ ಒಲಿಂಪಿಕ್ ಹೌಸ್ ಆಫ್ ಇಂಡಿಯಾದಲ್ಲಿ ಬ್ಯಾಂಡ್ ಪ್ರದರ್ಶನ ನೀಡಲಿದೆ.

ಈ ಹಿಂದೆ ಅನೇಕ ಬಾರಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿರುವ ದೀಕ್ಷಿತ್, ದೇಶವನ್ನು ಪ್ರತಿನಿಧಿಸುವ ಖುಷಿ ಅದಮ್ಯ ಎಂದು ಹೇಳಿದ್ದಾರೆ. “ಭಾರತವನ್ನು ಪ್ರತಿನಿಧಿಸುವುದು ಯಾವಾಗಲೂ ಗೌರವದ ಸಂಕೇತ . ಈ ಹಿಂದೆಯೂ ಪ್ಯಾರಿಸ್​ನಲ್ಲಿ ಪ್ರದರ್ಶನ ನೀಡಿದ್ದೆವು ಎಂದು ಅವರು ಹೇಳಿದ್ದಾರೆ. ಅವರು ಸದ್ಯಕ್ಕೆ ಯುರೂಪ್​ನಲ್ಲಿದ್ದು ಹೊಸ ಆಲ್ಬಂ ಶಕ್ಕರ್​ ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಬ್ಯಾಂಡ್​ ಪ್ರದರ್ಶನದ ವಿಶೇಷ ಏನೆಂದರೆ . ಪ್ರದರ್ಶನವು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ವಿಶೇಷ ಅತಿಥಿಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಹೇಳಿದ್ದಾರೆ.

ನಮ್ಮ ತಮ್ಮ ಸಂಗೀತ ಕಚೇರಿಗಳಲ್ಲಿ ಯಾವಾಗಲೂ ಉತ್ಸಾಹ ತುಂಬಿರುತ್ತದೆ ಎಂದು ಹೇಳುತ್ತಾರೆ ರಘು ದೀಕ್ಷಿತ್​. ಸಂಗೀತ ಕಚೇರಿಗಳಲ್ಲಿ, ಎಲ್ಲರೂ ನೃತ್ಯ ಮಾಡಬೇಕು. ಅದು ನಾವು ಅನುಸರಿಸುವ ನಿಯಮ. ಪ್ರೇಕ್ಷಕರಲ್ಲಿ ಯಾರು ಇದ್ದಾರೆ ಎಂಬುದು ಮುಖ್ಯವಲ್ಲ. ಪ್ರತಿಯೊಬ್ಬರೂ ಖುಷಿ ಪಡಬೇಕು ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಇದನ್ನೂ ಓದಿ: Gautam Gambhir : ನನ್ನ ಮತ್ತು ಕೊಹ್ಲಿಯ ನಡುವೆ ಗೌರವಯುತ ಸಂಬಂಧವಿದೆ; ಗೌತಮ್ ಗಂಭೀರ್​

19 ನೇ ಶತಮಾನದ ಕವಿ ಶಿಶುನಾಳ ಶರೀಫ್ ಅವರ ತತ್ವಪದಗಳೇ ನಮ್ಮ ಹಾಡಿನ ಸಾರವಾಗಿದೆ. ಸಂತ ಕಬೀರ ಮತ್ತು ಕನ್ನಡ ಕವಿ ದ.ರಾ.ಬೇಂದ್ರೆ ಅವರ ಕೆಲವು ಕವಿತೆಗಳೂ ನಮ್ಮಲ್ಲಿವೆ. ಕಾರ್ಯಕ್ರಮದಲ್ಲಿ ನೀವು ಸಾಕಷ್ಟು ಫ್ಯೂಷನ್ ಸಂಗೀತ ನಿರೀಕ್ಷಿಸಬಹುದು ಎಂದು ದೀಕ್ಷಿತ್ ಬಹಿರಂಗಪಡಿಸಿದ್ದಾರೆ.

ಭಾರತೀಯ ತತ್ವಶಾಸ್ತ್ರವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿವುದು ಸಂಗೀತ ಶ್ರೇಣಿಯ ಹಿಂದಿನ ಆಲೋಚನೆಯಾಗಿದೆ. ಪ್ರೇಕ್ಷಕರು ಮತ್ತು ಕ್ರೀಡಾಪಟುಗಳು ತಮ್ಮ ಮಿತಿಗಳನ್ನು ಮೀರಿ ಈ ಹಾಡುಗಳನ್ನು ಅನುಭವಿಸಬಹುದು ಎಂದು ಹೇಳಿದ್ದಾರೆ.

ಕೇವಲ ಸಂಗೀತವಲ್ಲ; ತಮ್ಮ ಸಾಂಪ್ರದಾಯಿಕ ಉಡುಗೆಯ ಮೂಲಕವೂ ರಘು ದೀಕ್ಷಿತ್​ ಹೆಸರುವಾಸಿ. ಅವರು ತಮ್ಮ ಪ್ರದರ್ಶನಕ್ಕೆ ಹೊಸ ನೋಟವನ್ನು ಭರವಸೆ ನೀಡದ್ದಾರೆ. “ನಾವು ಪ್ರಸ್ತುತ ಆಲ್ಬಂನೊಂದಿಗೆ ಬ್ಯುಸಿಯಾಗಿದ್ದೇವೆ. ಈ ಬಗ್ಗೆ ಹೊಸ ನೋಟವನ್ನು ಹೊಂದಿದ್ದೇವೆ. ಬೆಂಗಳೂರಿನ ಡಿಸೈನರ್ ಗಳಾದ ಸಂಜಯ್ ಮತ್ತು ಸೀಮಾ ಅದಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಹೇಳೀದ್ದಾರೆ. ರಘು ದೀಕ್ಷಿತ್ ಯೋಜನೆಯಲ್ಲಿ ಭಾರತೀಯ ಮೂಲದ ಕಲಾವಿದರಾದ ಶಾನ್, ಪೆನ್ ಮಸಾಲಾ ಮತ್ತು ಟಾಮಿ ಖೋಸ್ಲಾ ಮತ್ತು ಜವಾರಿ ಕೂಡ ಪಾಲ್ಗೊಳ್ಳಲಿದ್ದಾರೆ.

Continue Reading

ಕ್ರೀಡೆ

Gautam Gambhir : ನನ್ನ ಮತ್ತು ಕೊಹ್ಲಿಯ ನಡುವೆ ಗೌರವಯುತ ಸಂಬಂಧವಿದೆ; ಗೌತಮ್ ಗಂಭೀರ್​

Gautam Gambhir: ಕೊಹ್ಲಿ ಅವರೊಂದಿಗಿನ ನನ್ನ ಸಂಬಂಧವು ಮಾಧ್ಯಮಗಳ ಟಿಆರ್​ಪಿಗಾಗಿ ಅಲ್ಲ ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ. ನಾಣು ಕೊಹ್ಲಿಯೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದೇನೆ. ಭಾರತದ ಮಾಜಿ ನಾಯಕ ಸಂಪೂರ್ಣ ವೃತ್ತಿಪರ ಮತ್ತು ವಿಶ್ವ ದರ್ಜೆಯ ಕ್ರೀಡಾಪಟು. ಅವರು ತಂಡದ ಪ್ರಮುಖ ಭಾಗವಾಗಿರುವುದರಿಂದ ಉತ್ತಮ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

VISTARANEWS.COM


on

Gautam Gambhir
Koo

ಬೆಂಗಳೂರು: ಟೀಮ್ ಇಂಡಿಯಾದ ನೂತನ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ (Gautam Gambhir) ನೇಮಕವಾದ ದಿನದಿಂದಲೂ ವಿರಾಟ್ ಕೊಹ್ಲಿ ಮತ್ತು ಅವರ ನಡುವಿನ ಸಂಬಂಧ ಚರ್ಚೆಯ ವಿಚಾರವಾಗಿದೆ. ಕೆಕೆಆರ್ ನಾಯಕನಾಗಿದ್ದಾಗ ಗಂಭೀರ್​, ಕೊಹ್ಲಿ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರು. , ಐಪಿಎಲ್ 2023 ರಲ್ಲಿ ಇಬ್ಬರು ಕ್ರಿಕೆಟಿಗರ ನಡುವಿನ ಜಗಳ ಉಂಟಾಗಿತ್ತು. ಹೀಗಾಗಿ ಕೊಹ್ಲಿಗೆ ಕೋಚ್ ಆದ ಮೇಲೆ ಅವರಿಬ್ಬರ ಜಗಳ ಮುಂದುವರಿಯಬಹುದು ಎಂದು ಹೇಳಲಾಗಿತ್ತು

ಐಪಿಎಲ್ 2024 ರಲ್ಲಿಯೇ ಸನ್ನಿವೇಶವು ಬದಲಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಪಂದ್ಯದ ವೇಳೆ ಕೊಹ್ಲಿ ಮತ್ತು ಗಂಭೀರ್ ಇಬ್ಬರೂ ಪರಸ್ಪರ ತಬ್ಬಿಕೊಂಡಿದ್ದರು. ಆದಾಗ್ಯೂ ಭಾರತೀಯ ಕ್ರಿಕೆಟ್​​ನ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಬಹುದೇ ಎಂಬುದು ದೊಡ್ಡ ಪ್ರಶ್ನೆಯೇ ಆಗಿತ್ತು. ಸೋಮವಾರ ಶ್ರೀಲಂಕಾ ಪ್ರವಾಸಕ್ಕೆ ಹೊರಡುವ ಮೊದಲು ಪತ್ರಿಕಾಗೋಷ್ಠಿ ನಡೆಸಿದ ಗಂಭೀರ್​ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳಿದ್ದಾರೆ.

ಇದನ್ನೂ ಓದಿ: Gautam Gambhir : ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ 2027ರ ವಿಶ್ವ ಕಪ್​ ತನಕ ಆಡುತ್ತಾರೆ ಎಂದ ಗಂಭೀರ್​

ಕೊಹ್ಲಿ ಅವರೊಂದಿಗಿನ ನನ್ನ ಸಂಬಂಧವು ಮಾಧ್ಯಮಗಳ ಟಿಆರ್​ಪಿಗಾಗಿ ಅಲ್ಲ ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ. ನಾಣು ಕೊಹ್ಲಿಯೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದೇನೆ. ಭಾರತದ ಮಾಜಿ ನಾಯಕ ಸಂಪೂರ್ಣ ವೃತ್ತಿಪರ ಮತ್ತು ವಿಶ್ವ ದರ್ಜೆಯ ಕ್ರೀಡಾಪಟು. ಅವರು ತಂಡದ ಪ್ರಮುಖ ಭಾಗವಾಗಿರುವುದರಿಂದ ಉತ್ತಮ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ವಿರಾಟ್ ಕೊಹ್ಲಿ ಅವರೊಂದಿಗೆ ಯಾವ ರೀತಿಯ ಸಂಬಂಧವಿದೆ ಎಂಬುದು ಟಿಆರ್​ಪಿ ವಿಷಯವಲ್ಲ. ನಮ್ಮಬ್ಬರ ಸಂಬಂಧ ವಿಷಯ ಬಹಿರಂಗವೂ ಅಲ್ಲ. ಇದು ಇಬ್ಬರು ಪ್ರಬುದ್ಧ ವ್ಯಕ್ತಿಗಳ ನಡುವಿನ ಸಂಬಂಧ. ಮೈದಾನದಲ್ಲಿ, ನಾವು ಒಂದೇ ರೀತಿಯಾಗಿ ಇರಬೇಕು ಎಂದು ನನಗೆ ಖಾತ್ರಿಯಿದೆ. ನಾನು ಅವರೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಳ್ಳುತ್ತೇನೆ. ನಾನು ಅವರೊಂದಿಗೆ ಸಾಕಷ್ಟು ಚಾಟ್ ಮಾಡಿದ್ದೇನೆ. ಕೆಲವೊಮ್ಮೆ. ನಾವು ಸಂದೇಶಗಳನ್ನು ಹಂಚಿಕೊಂಡಿದ್ದೇವೆ. ನಾವಿಬ್ಬರು ಏನು ಚರ್ಚಿಸಿದ್ದೇವೆ ಎಂಬುದು ಮುಖ್ಯವಲ್ಲ” ಎಂದು ಗಂಭೀರ್ ಹೇಳಿದ್ದಾರೆ.

“ಏಕೆಂದರೆ ನಮಗೆ ಫಲಿತಾಂಶ ಬೇಕು. ಅವರು ಸಂಪೂರ್ಣ ವೃತ್ತಿಪರರು. ಅವರು ವಿಶ್ವ ದರ್ಜೆಯ ಆಟಗಾರ. ನಾವು ನಿಜವಾಗಿಯೂ ಒಟ್ಟಿಗೆ ಕೆಲಸ ಮಾಡಬಹುದು ಎಂದು ಆಶಿಸುತ್ತೇವೆ. ಒಟ್ಟಾಗಿ ದೇಶವನ್ನು ಹೆಮ್ಮೆಪಡುವಂತೆ ಮಾಡುವುದು ನಮ್ಮ ಕೆಲಸ. ನಾವು ಒಂದು ಶತಕೋಟಿ ಜನರನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಜುಲೈ 22 ರಂದು ಭಾರತ ತಂಡ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದೆ. ಮೂರು ಪಂದ್ಯಗಳ ಟಿ 20 ಐ ಸರಣಿಯನ್ನು ಮೊದಲು ಆಡಲಿದೆ.

Continue Reading

ಪ್ರಮುಖ ಸುದ್ದಿ

Gautam Gambhir : ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ 2027ರ ವಿಶ್ವ ಕಪ್​ ತನಕ ಆಡುತ್ತಾರೆ ಎಂದ ಗಂಭೀರ್​

Gautam Gambhir : ಇದು ಅತ್ಯಂತ ವೈಯಕ್ತಿಕ ನಿರ್ಧಾರ. ಅವರಲ್ಲಿ ಎಷ್ಟು ಪ್ರಮಾನದ ಕ್ರಿಕೆಟ್ ಸಾಮರ್ಥ್ಯ ಉಳಿದಿದೆ ಎಂದು ನಾನು ಹೇಳಲಾರೆ. ಅಂತಿಮವಾಗಿ, ಅದು ಅವರಿಗೆ ಬಿಟ್ಟದ್ದು. ತಂಡದ ಯಶಸ್ಸಿಗೆ ಅವರು ಎಷ್ಟು ಕೊಡುಗೆ ನೀಡಬಹುದು ಎಂಬುದನ್ನು ನಿರ್ಧರಿಸುವುದು ಆಟಗಾರರಿಗೆ ಬಿಟ್ಟದ್ದು. ಅಂತಿಮವಾಗಿ, ತಂಡವೇ ಮುಖ್ಯ. ವಿರಾಟ್ ಮತ್ತು ರೋಹಿತ್ ಏನು ನೀಡಬಲ್ಲರು ಎಂಬುದನ್ನು ಎಲ್ಲರೂ ನೋಡಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

VISTARANEWS.COM


on

Gautam Gambhir
Koo

ಹೊಸದಿಲ್ಲಿ, : ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾರತ ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ರೋಹಿತ್ ಮತ್ತು ಕೊಹ್ಲಿ ತಮ್ಮ ಎಲ್ಲ ಸಿದ್ಧತೆಗಳನ್ನು ನಡೆಸಲಿದ್ದಾರೆ, ಅದೇ ರೀತಿ 2025 ರ ಋತುವಿನ ನಂತರವೂ ಭಾರತ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ಮುಂಚಿತವಾಗಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಗಂಭೀರ್, ಟಿ20 ವಿಶ್ವಕಪ್ ಅಥವಾ 50 ಓವರ್​ಗಳ ವಿಶ್ವಕಪ್ ಆಗಿರಲಿ, ದೊಡ್ಡ ವೇದಿಕೆಯಲ್ಲಿ ಯಾವ ಸಾಧನೆ ಮಾಡಬಹುದು ಎಂಬುದನ್ನು ಅವರು ತೋರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾನು ಸ್ಪಷ್ಟವಾಗಿ ಹೇಳಬಹುದಾದ ಒಂದು ವಿಷಯವೆಂದರೆ ಆ ಇಬ್ಬರಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ. ಅದಕ್ಕಿಂತ ಮುಖ್ಯವಾಗಿ ಕೆಲವೇ ತಿಂಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಬರುತ್ತಿದೆ. ಆಸ್ಟ್ರೇಲಿಯಾದ ದೊಡ್ಡ ಪ್ರವಾಸವೂ ಮುಂದಿದೆ. ಅವರು ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಸಾಧ್ಯವಾದರೆ 2027 ರ ಏಕದಿನ ವಿಶ್ವಕಪ್​​ಗೂ ಇರುತ್ತಾರೆ ಎಂದು ಭಯಸುವೆ ” ಎಂದು ಹೇಳಿದ್ದಾರೆ.

ಇದು ಅತ್ಯಂತ ವೈಯಕ್ತಿಕ ನಿರ್ಧಾರ. ಅವರಲ್ಲಿ ಎಷ್ಟು ಪ್ರಮಾನದ ಕ್ರಿಕೆಟ್ ಸಾಮರ್ಥ್ಯ ಉಳಿದಿದೆ ಎಂದು ನಾನು ಹೇಳಲಾರೆ. ಅಂತಿಮವಾಗಿ, ಅದು ಅವರಿಗೆ ಬಿಟ್ಟದ್ದು. ತಂಡದ ಯಶಸ್ಸಿಗೆ ಅವರು ಎಷ್ಟು ಕೊಡುಗೆ ನೀಡಬಹುದು ಎಂಬುದನ್ನು ನಿರ್ಧರಿಸುವುದು ಆಟಗಾರರಿಗೆ ಬಿಟ್ಟದ್ದು. ಅಂತಿಮವಾಗಿ, ತಂಡವೇ ಮುಖ್ಯ. ವಿರಾಟ್ ಮತ್ತು ರೋಹಿತ್ ಏನು ನೀಡಬಲ್ಲರು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಅವರು ವಿಶ್ವ ದರ್ಜೆಯ ಆಟಗಾರರು. ತಂಡ ಸಾಧ್ಯವಾದಷ್ಟು ಕಾಲ ಅವರಿಬ್ಬರನ್ನು ಬಯಸುತ್ತದೆ ಎಂದು ಗಂಭೀರ್​ ಹೇಳಿದರು.

ಕಳೆದ ತಿಂಗಳು ಬಾರ್ಬಡೋಸ್​​ನಲ್ಲಿ ನಡೆದ ಟಿ 20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ 20 ಐ ಕ್ರಿಕೆಟ್​ನಿಂದ ನಿವೃತ್ತರಾದರು. ಇಬ್ಬರೂ ಆಟಗಾರರು ಏಕದಿನ ಮತ್ತು ಟೆಸ್ಟ್ ತಂಡದ ಭಾಗವಾಗಿ ಮುಂದುವರಿಯಲಿದ್ದಾರೆ.

ಟೆಸ್ಟ್​ನಲ್ಲಿ ಪಾರಮ್ಯ

ಕೊಹ್ಲಿ ಮತ್ತು ರೋಹಿತ್ ಇಲ್ಲಿಂದ ಏಕದಿನ ಮತ್ತು ಟೆಸ್ಟ್​​ನಲ್ಲಿ ಭಾರತದ ಪಂದ್ಯಗಳನ್ನು ಆಡುತ್ತಾರೆ ಎಂದು ಗಂಭೀರ್ ಹೇಳಿದರು. ಅವರು ಉನ್ನತ ಮಟ್ಟದಲ್ಲಿ ಕೇವಲ ಎರಡು ಸ್ವರೂಪಗಳನ್ನು ಆಡುತ್ತಿರುವುದರಿಂದ ಅವರು ತಮ್ಮ ಕೆಲಸದ ಹೊರೆಯನ್ನು ನಿರ್ವಹಿಸಬಹುದು ಎಂದು ಹೇಳಿದರು. 2027ರ ಏಕದಿನ ವಿಶ್ವಕಪ್ ವೇಳೆ 37ರ ಹರೆಯದ ರೋಹಿತ್ಗೆ 41 ವರ್ಷ ವಯಸ್ಸಾಗಲಿದ್ದು ಕೊಹ್ಲಿಗೆ 38 ವರ್ಷವಾಗಲಿದೆ.

ಭಾರತ ಏಕದಿನ ಮತ್ತು ಟೆಸ್ಟ್ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಉಳಿಸಿಕೊಂಡಿದ್ದರೆ, ಸೂರ್ಯಕುಮಾರ್ ಯಾದವ್ ಅವರನ್ನು ಟಿ 20 ಐ ನಾಯಕರನ್ನಾಗಿ ಕಳೆದ ವಾರ ಹೆಸರಿಸಲಾಗಿದೆ.

ಇದನ್ನೂ ಓದಿ: Gautam Gambhir : ನನ್ನ ಎಲ್ಲ ಬೇಡಿಕೆಗಳಿಗೆ ಬಿಸಿಸಿಐ ಸಮ್ಮತಿಸಿದೆ; ಗೌತಮ್ ಗಂಭೀರ್​

ಬುಮ್ರಾ ನಿರ್ವಹಣೆ ಮುಖ್ಯ

ಜಸ್ಪ್ರೀತ್ ಬುಮ್ರಾ ಅವರಂತಹವರಿಗೆ ಕೆಲಸದ ಹೊರೆ ನಿರ್ವಹಣೆ ಮುಖ್ಯ. ರೋಹಿತ್ ಮತ್ತು ವಿರಾಟ್ ಟಿ 20 ಪಂದ್ಯಗಳನ್ನು ಆಡುತ್ತಿಲ್ಲ. ಆದ್ದರಿಂದ ಅವರು ಪ್ರಮುಖ ಪಂದ್ಯಗಳಿಗೆ ಲಭ್ಯವಿರಬೇಕು. ಅವರು ಉತ್ತಮ ಕ್ರಿಕೆಟ್ ಆಡಲು ಮತ್ತು ಉತ್ತಮ ಫಾರ್ಮ್​ನಲ್ಲಿರಬೇಕು. ಬುಮ್ರಾಗೆ ಮಾತ್ರವಲ್ಲ, ಹೆಚ್ಚಿನ ಬೌಲರ್​ಗಳಿಗೆ ಕೆಲಸದ ಹೊರೆ ನಿರ್ವಹಣೆ ಮುಖ್ಯವಾಗಿದೆ ಎಂದು ಗಂಭೀರ್​ ಹೇಳಿದರು.

ಆಗಸ್ಟ್​ನಲ್ಲಿ ಶ್ರೀಲಂಕಾದಲ್ಲಿ ಪ್ರಾರಂಭವಾಗುವ 3 ಪಂದ್ಯಗಳ ಏಕದಿನ ಸರಣಿಗೆ ರೋಹಿತ್ ಮತ್ತು ಕೊಹ್ಲಿ ಇಬ್ಬರನ್ನೂ ಆಯ್ಕೆ ಮಾಡಲಾಗಿದೆ. ಗಂಭೀರ್ ಅವರ ಕೋರಿಕೆಯ ಮೇರೆಗೆ ಇಬ್ಬರು ಬ್ಯಾಟರ್​ಗಳು ಪ್ರವಾಸಿ ತಂಡದ ಭಾಗವಾಗಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. 3ಟಿ 20 ಮತ್ತು ಅಷ್ಟೇ ಏಕದಿನ ಪಂದ್ಯಗಳನ್ನು ಹೊಂದಿರುವ ಮುಂಬರುವ ಶ್ರೀಲಂಕಾ ಪ್ರವಾಸವು ತಂಡದ ಮುಖ್ಯ ಕೋಚ್ ಆಗಿ ಗಂಭೀರ್ ಅವರ ಮೊದಲ ನೇಮಕವಾಗಿದೆ.

ಅಭಿಷೇಕ್ ನಾಯರ್ ಮತ್ತು ರಯಾನ್ ಟೆನ್ ಡೊಸ್ಚಾಟೆ ಸಹಾಯಕ ತರಬೇತುದಾರರಾಗಿ ಅವರೊಂದಿಗೆ ಸೇರಲಿದ್ದಾರೆ ಎಂದು ಗಂಭೀರ್ ಸೋಮವಾರ ಖಚಿತಪಡಿಸಿದ್ದಾರೆ. ಟಿ ದಿಲೀಪ್ ಮತ್ತು ಸಾಯಿರಾಜ್ ಬಹುತುಲೆ ಕೂಡ ಶ್ರೀಲಂಕಾ ಪ್ರವಾಸಕ್ಕಾಗಿ ಅವರ ಕೋಚಿಂಗ್ ಸಿಬ್ಬಂದಿಯ ಭಾಗವಾಗಲಿದ್ದಾರೆ.

Continue Reading
Advertisement
Chaluvadi Narayanaswamy
ಕರ್ನಾಟಕ45 mins ago

Chaluvadi Narayanaswamy : ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್​​ನ ಪ್ರತಿಪಕ್ಷದ ನಾಯಕ

NEET
ಕರ್ನಾಟಕ59 mins ago

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

DK Shivakumar
ಕರ್ನಾಟಕ1 hour ago

DK Shivakumar: ರೈತನಿಗೆ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ಶೀಘ್ರ ವಸ್ತ್ರ ಸಂಹಿತೆ ಜಾರಿ ಎಂದ ಡಿಕೆಶಿ

Veerabaswanthreddy Mudnal
ಶ್ರದ್ಧಾಂಜಲಿ2 hours ago

Veerabaswanthreddy Mudnal: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅನಾರೋಗ್ಯದಿಂದ ನಿಧನ

Rahat Fateh Ali Khan
ವಿದೇಶ2 hours ago

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Valmiki Corporation Scam
ಕರ್ನಾಟಕ2 hours ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Tata Curvv
ಆಟೋಮೊಬೈಲ್2 hours ago

Tata Curvv : ಎಸ್​ಯುವಿ ವಿಭಾಗದಲ್ಲಿ ವಿಭಿನ್ನ ವಿನ್ಯಾಸದ ಕಾರನ್ನು ಪರಿಚಯಿಸಿದ ಮಾಡಿದ ಟಾಟಾ

Kempambudi lake encroachment cleared soon says DCM DK Shivakumar
ಕರ್ನಾಟಕ2 hours ago

Assembly Session 2024: ಕೆಂಪಾಂಬುದಿ ಕೆರೆ ಒತ್ತುವರಿ ಶೀಘ್ರ ತೆರವು; ಡಿ.ಕೆ.ಶಿವಕುಮಾರ್

Viral Video
ವೈರಲ್ ನ್ಯೂಸ್2 hours ago

Viral Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 10 ಅಡಿ ಮೇಲಕ್ಕೆ ಹಾರಿ ಬಿದ್ದ ತಾಯಿ, ಮಗ

TA Sharavana questioned about the continuous variation in the service of 108 Ambulance even after 7 years there is no new tender
ಬೆಂಗಳೂರು2 hours ago

TA Sharavana: 108 ಆಂಬ್ಯುಲೆನ್ಸ್‌ಗೆ 7 ವರ್ಷ ಕಳೆದರೂ ಹೊಸ ಟೆಂಡರ್‌ ಇಲ್ಲ ಯಾಕೆ? ಟಿ. ಎ. ಶರವಣ ಪ್ರಶ್ನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ2 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌