Gautam Gambhir : ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ 2027ರ ವಿಶ್ವ ಕಪ್​ ತನಕ ಆಡುತ್ತಾರೆ ಎಂದ ಗಂಭೀರ್​ - Vistara News

ಪ್ರಮುಖ ಸುದ್ದಿ

Gautam Gambhir : ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ 2027ರ ವಿಶ್ವ ಕಪ್​ ತನಕ ಆಡುತ್ತಾರೆ ಎಂದ ಗಂಭೀರ್​

Gautam Gambhir : ಇದು ಅತ್ಯಂತ ವೈಯಕ್ತಿಕ ನಿರ್ಧಾರ. ಅವರಲ್ಲಿ ಎಷ್ಟು ಪ್ರಮಾನದ ಕ್ರಿಕೆಟ್ ಸಾಮರ್ಥ್ಯ ಉಳಿದಿದೆ ಎಂದು ನಾನು ಹೇಳಲಾರೆ. ಅಂತಿಮವಾಗಿ, ಅದು ಅವರಿಗೆ ಬಿಟ್ಟದ್ದು. ತಂಡದ ಯಶಸ್ಸಿಗೆ ಅವರು ಎಷ್ಟು ಕೊಡುಗೆ ನೀಡಬಹುದು ಎಂಬುದನ್ನು ನಿರ್ಧರಿಸುವುದು ಆಟಗಾರರಿಗೆ ಬಿಟ್ಟದ್ದು. ಅಂತಿಮವಾಗಿ, ತಂಡವೇ ಮುಖ್ಯ. ವಿರಾಟ್ ಮತ್ತು ರೋಹಿತ್ ಏನು ನೀಡಬಲ್ಲರು ಎಂಬುದನ್ನು ಎಲ್ಲರೂ ನೋಡಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

VISTARANEWS.COM


on

Gautam Gambhir
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ, : ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾರತ ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ರೋಹಿತ್ ಮತ್ತು ಕೊಹ್ಲಿ ತಮ್ಮ ಎಲ್ಲ ಸಿದ್ಧತೆಗಳನ್ನು ನಡೆಸಲಿದ್ದಾರೆ, ಅದೇ ರೀತಿ 2025 ರ ಋತುವಿನ ನಂತರವೂ ಭಾರತ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ಮುಂಚಿತವಾಗಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಗಂಭೀರ್, ಟಿ20 ವಿಶ್ವಕಪ್ ಅಥವಾ 50 ಓವರ್​ಗಳ ವಿಶ್ವಕಪ್ ಆಗಿರಲಿ, ದೊಡ್ಡ ವೇದಿಕೆಯಲ್ಲಿ ಯಾವ ಸಾಧನೆ ಮಾಡಬಹುದು ಎಂಬುದನ್ನು ಅವರು ತೋರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾನು ಸ್ಪಷ್ಟವಾಗಿ ಹೇಳಬಹುದಾದ ಒಂದು ವಿಷಯವೆಂದರೆ ಆ ಇಬ್ಬರಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ. ಅದಕ್ಕಿಂತ ಮುಖ್ಯವಾಗಿ ಕೆಲವೇ ತಿಂಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಬರುತ್ತಿದೆ. ಆಸ್ಟ್ರೇಲಿಯಾದ ದೊಡ್ಡ ಪ್ರವಾಸವೂ ಮುಂದಿದೆ. ಅವರು ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಸಾಧ್ಯವಾದರೆ 2027 ರ ಏಕದಿನ ವಿಶ್ವಕಪ್​​ಗೂ ಇರುತ್ತಾರೆ ಎಂದು ಭಯಸುವೆ ” ಎಂದು ಹೇಳಿದ್ದಾರೆ.

ಇದು ಅತ್ಯಂತ ವೈಯಕ್ತಿಕ ನಿರ್ಧಾರ. ಅವರಲ್ಲಿ ಎಷ್ಟು ಪ್ರಮಾನದ ಕ್ರಿಕೆಟ್ ಸಾಮರ್ಥ್ಯ ಉಳಿದಿದೆ ಎಂದು ನಾನು ಹೇಳಲಾರೆ. ಅಂತಿಮವಾಗಿ, ಅದು ಅವರಿಗೆ ಬಿಟ್ಟದ್ದು. ತಂಡದ ಯಶಸ್ಸಿಗೆ ಅವರು ಎಷ್ಟು ಕೊಡುಗೆ ನೀಡಬಹುದು ಎಂಬುದನ್ನು ನಿರ್ಧರಿಸುವುದು ಆಟಗಾರರಿಗೆ ಬಿಟ್ಟದ್ದು. ಅಂತಿಮವಾಗಿ, ತಂಡವೇ ಮುಖ್ಯ. ವಿರಾಟ್ ಮತ್ತು ರೋಹಿತ್ ಏನು ನೀಡಬಲ್ಲರು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಅವರು ವಿಶ್ವ ದರ್ಜೆಯ ಆಟಗಾರರು. ತಂಡ ಸಾಧ್ಯವಾದಷ್ಟು ಕಾಲ ಅವರಿಬ್ಬರನ್ನು ಬಯಸುತ್ತದೆ ಎಂದು ಗಂಭೀರ್​ ಹೇಳಿದರು.

ಕಳೆದ ತಿಂಗಳು ಬಾರ್ಬಡೋಸ್​​ನಲ್ಲಿ ನಡೆದ ಟಿ 20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ 20 ಐ ಕ್ರಿಕೆಟ್​ನಿಂದ ನಿವೃತ್ತರಾದರು. ಇಬ್ಬರೂ ಆಟಗಾರರು ಏಕದಿನ ಮತ್ತು ಟೆಸ್ಟ್ ತಂಡದ ಭಾಗವಾಗಿ ಮುಂದುವರಿಯಲಿದ್ದಾರೆ.

ಟೆಸ್ಟ್​ನಲ್ಲಿ ಪಾರಮ್ಯ

ಕೊಹ್ಲಿ ಮತ್ತು ರೋಹಿತ್ ಇಲ್ಲಿಂದ ಏಕದಿನ ಮತ್ತು ಟೆಸ್ಟ್​​ನಲ್ಲಿ ಭಾರತದ ಪಂದ್ಯಗಳನ್ನು ಆಡುತ್ತಾರೆ ಎಂದು ಗಂಭೀರ್ ಹೇಳಿದರು. ಅವರು ಉನ್ನತ ಮಟ್ಟದಲ್ಲಿ ಕೇವಲ ಎರಡು ಸ್ವರೂಪಗಳನ್ನು ಆಡುತ್ತಿರುವುದರಿಂದ ಅವರು ತಮ್ಮ ಕೆಲಸದ ಹೊರೆಯನ್ನು ನಿರ್ವಹಿಸಬಹುದು ಎಂದು ಹೇಳಿದರು. 2027ರ ಏಕದಿನ ವಿಶ್ವಕಪ್ ವೇಳೆ 37ರ ಹರೆಯದ ರೋಹಿತ್ಗೆ 41 ವರ್ಷ ವಯಸ್ಸಾಗಲಿದ್ದು ಕೊಹ್ಲಿಗೆ 38 ವರ್ಷವಾಗಲಿದೆ.

ಭಾರತ ಏಕದಿನ ಮತ್ತು ಟೆಸ್ಟ್ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಉಳಿಸಿಕೊಂಡಿದ್ದರೆ, ಸೂರ್ಯಕುಮಾರ್ ಯಾದವ್ ಅವರನ್ನು ಟಿ 20 ಐ ನಾಯಕರನ್ನಾಗಿ ಕಳೆದ ವಾರ ಹೆಸರಿಸಲಾಗಿದೆ.

ಇದನ್ನೂ ಓದಿ: Gautam Gambhir : ನನ್ನ ಎಲ್ಲ ಬೇಡಿಕೆಗಳಿಗೆ ಬಿಸಿಸಿಐ ಸಮ್ಮತಿಸಿದೆ; ಗೌತಮ್ ಗಂಭೀರ್​

ಬುಮ್ರಾ ನಿರ್ವಹಣೆ ಮುಖ್ಯ

ಜಸ್ಪ್ರೀತ್ ಬುಮ್ರಾ ಅವರಂತಹವರಿಗೆ ಕೆಲಸದ ಹೊರೆ ನಿರ್ವಹಣೆ ಮುಖ್ಯ. ರೋಹಿತ್ ಮತ್ತು ವಿರಾಟ್ ಟಿ 20 ಪಂದ್ಯಗಳನ್ನು ಆಡುತ್ತಿಲ್ಲ. ಆದ್ದರಿಂದ ಅವರು ಪ್ರಮುಖ ಪಂದ್ಯಗಳಿಗೆ ಲಭ್ಯವಿರಬೇಕು. ಅವರು ಉತ್ತಮ ಕ್ರಿಕೆಟ್ ಆಡಲು ಮತ್ತು ಉತ್ತಮ ಫಾರ್ಮ್​ನಲ್ಲಿರಬೇಕು. ಬುಮ್ರಾಗೆ ಮಾತ್ರವಲ್ಲ, ಹೆಚ್ಚಿನ ಬೌಲರ್​ಗಳಿಗೆ ಕೆಲಸದ ಹೊರೆ ನಿರ್ವಹಣೆ ಮುಖ್ಯವಾಗಿದೆ ಎಂದು ಗಂಭೀರ್​ ಹೇಳಿದರು.

ಆಗಸ್ಟ್​ನಲ್ಲಿ ಶ್ರೀಲಂಕಾದಲ್ಲಿ ಪ್ರಾರಂಭವಾಗುವ 3 ಪಂದ್ಯಗಳ ಏಕದಿನ ಸರಣಿಗೆ ರೋಹಿತ್ ಮತ್ತು ಕೊಹ್ಲಿ ಇಬ್ಬರನ್ನೂ ಆಯ್ಕೆ ಮಾಡಲಾಗಿದೆ. ಗಂಭೀರ್ ಅವರ ಕೋರಿಕೆಯ ಮೇರೆಗೆ ಇಬ್ಬರು ಬ್ಯಾಟರ್​ಗಳು ಪ್ರವಾಸಿ ತಂಡದ ಭಾಗವಾಗಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. 3ಟಿ 20 ಮತ್ತು ಅಷ್ಟೇ ಏಕದಿನ ಪಂದ್ಯಗಳನ್ನು ಹೊಂದಿರುವ ಮುಂಬರುವ ಶ್ರೀಲಂಕಾ ಪ್ರವಾಸವು ತಂಡದ ಮುಖ್ಯ ಕೋಚ್ ಆಗಿ ಗಂಭೀರ್ ಅವರ ಮೊದಲ ನೇಮಕವಾಗಿದೆ.

ಅಭಿಷೇಕ್ ನಾಯರ್ ಮತ್ತು ರಯಾನ್ ಟೆನ್ ಡೊಸ್ಚಾಟೆ ಸಹಾಯಕ ತರಬೇತುದಾರರಾಗಿ ಅವರೊಂದಿಗೆ ಸೇರಲಿದ್ದಾರೆ ಎಂದು ಗಂಭೀರ್ ಸೋಮವಾರ ಖಚಿತಪಡಿಸಿದ್ದಾರೆ. ಟಿ ದಿಲೀಪ್ ಮತ್ತು ಸಾಯಿರಾಜ್ ಬಹುತುಲೆ ಕೂಡ ಶ್ರೀಲಂಕಾ ಪ್ರವಾಸಕ್ಕಾಗಿ ಅವರ ಕೋಚಿಂಗ್ ಸಿಬ್ಬಂದಿಯ ಭಾಗವಾಗಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Parashuram D : ವಿಸ್ತಾರ ಮೀಡಿಯಾದ ನೂತನ ಜಿ.ಎಮ್ ಆಗಿ ಪರಶುರಾಮ ಡಿ

Parashuram D: ವಿಸ್ತಾರ ಮೀಡಿಯಾದಲ್ಲಿ ಸಿಒಒ (ಚೀಫ್‌ ಆಪರೇಷನಲ್‌ ಆಫೀಸರ್‌) ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪರಶುರಾಮ್‌ ಡಿ ಅವರಿಗೆ ಜಿ.ಎಮ್‌ ಆಗಿ ಪದೋನ್ನತಿ ನೀಡಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ಅನುಭವ ಹೊಂದಿರುವ ಪರಶುರಾಮ್ ಡಿ ಅವರು ನುರಿತ ತಂತ್ರಜ್ಞರ ತಂಡದ ಮುಖ್ಯಸ್ಥರಾಗಿ ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಈ ಮೂಲಕ ಮಾಧ್ಯಮ ರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ನಾಡಿನಾದ್ಯಂತ ಪ್ರಸಿದ್ಧಿ ಪಡೆಯುತ್ತಿರುವ ʼವಿಸ್ತಾರ ನ್ಯೂಸ್‌ʼ ಚಾನೆಲ್ ಆರಂಭಿಕ ಕಾರ್ಯದಿಂದ ಹಿಡಿದು ಇಲ್ಲಿಯವರೆಗೆ ಪ್ರತಿ ಹೆಜ್ಜೆಯಲ್ಲಿಯೂ ಪರಿಶ್ರಮ ವಹಿಸಿದ್ದಾರೆ.

VISTARANEWS.COM


on

Parashuram D
Koo

ಬೆಂಗಳೂರು: ವಿಸ್ತಾರ ಮೀಡಿಯಾದ ನೂತನ ಜಿ ಎಮ್‌ (ಆಪರೇಷನ್‌) ಆಗಿ ಪರಶುರಾಮ್ ಡಿ (Parashuram D) ಅವರನ್ನು ನೇಮಕ ಮಾಡಲಾಗಿದೆ. ಪರಶುರಾಮ್‌ ಅವರು ಈಗ ವಿಸ್ತಾರ ಮೀಡಿಯಾದಲ್ಲಿ ಸಿಒಒ (ಚೀಫ್‌ ಆಪರೇಷನಲ್‌ ಆಫೀಸರ್‌) ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ಅನುಭವ ಹೊಂದಿರುವ ಪರಶುರಾಮ್ ಡಿ ಅವರು ನುರಿತ ತಂತ್ರಜ್ಞರ ತಂಡದ ಮುಖ್ಯಸ್ಥರಾಗಿ ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಈ ಮೂಲಕ ಮಾಧ್ಯಮ ರಂಗದಲ್ಲಿ ಹೆಸರುವಾಸಿಯಾಗಿದ್ದಾರೆ.

ಟೆಲಿವಿಷನ್ ಲೋಕದಲ್ಲಿನ ಎಲ್ಲಾ ಬಗೆಯ ವಿಡಿಯೊ – ಆಡಿಯೊ ಪ್ರೊಡಕ್ಷನ್ ಮತ್ತು ಬ್ರಾಡ್ಕಾಸ್ಟ್ ವಿಭಾಗದಲ್ಲಿ ಭಾರತದಲ್ಲಿಯೇ ಅತ್ಯುತ್ತಮ ತಂತ್ರಜ್ಞರೆಂದು ಗುರುತಿಸಲ್ಪಡುವ ಕೆಲವೇ ಕೆಲವು ಮಂದಿಯಲ್ಲಿ ಪರಶುರಾಮ್ ಅವರೂ ಒಬ್ಬರು ಎಂಬುದು ಹೆಮ್ಮೆಯ ಸಂಗತಿ. ಅವರ ಕಾರ್ಯವ್ಯಾಪ್ತಿ ಅಷ್ಟಕ್ಕೇ ನಿಲ್ಲದೇ ಇನ್ನೂ ಮುಂದಕ್ಕೆ ಹೋಗಿ, ಟಿವಿ ಮಾಧ್ಯಮ ಸಂಸ್ಥೆಗಳನ್ನು ಕಟ್ಟುವಲ್ಲಿಯೂ ಮುಂದುವರಿದಿದೆ. ಆರಂಭದ ಕಾರ್ಯಯೋಜನೆ ರೂಪಿಸುವ ಹಂತದಿಂದ ಹಿಡಿದು, ನಿರ್ಮಾಣ ಕಾರ್ಯ, ಲೋಕಾರ್ಪಣೆವರೆಗಿನ ಎಲ್ಲಾ ಹಂತದಲ್ಲೂ ದಕ್ಷತೆಯಿಂದ ಕಾರ್ಯನಿರ್ವಹಿಸಿ ಅದಕ್ಕೆ ಬೇಕಾಗಿರುವ ನುರಿತ ತಂತ್ರಜ್ಞರ ತಂಡವನ್ನು ಕಟ್ಟಿ ಮುನ್ನಡೆಸುವ ಅದಮ್ಯ ಸಾಮರ್ಥ್ಯವನ್ನು ಇವರು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ʼವಿಸ್ತಾರ ನ್ಯೂಸ್‌ʼ ಕನ್ನಡ ವಾಹಿನಿ.

‘ಈ ಟಿವಿ’ಯಿಂದ ಬಿಗ್‌ ಬಾಸ್‌ವರೆಗೆ

ಪರಶುರಾಮ್‌ ಅವರು ಕನ್ನಡದ ಹೆಸರಾಂತ ಚಾನೆಲ್ ಎನಿಸಿಕೊಂಡ ʼಈ ಟಿವಿʼ ಕನ್ನಡ ವಾಹಿನಿಯ ತಾಂತ್ರಿಕ ವಿಭಾಗದಲ್ಲಿ ಕೆಲಸವನ್ನು ಪ್ರಾರಂಭಿಸಿದ್ದರು. ಕಿರುತೆರೆಯ ಮಾಧ್ಯಮ ಲೋಕದಲ್ಲಿ ಹೊಸ ಹೊಸ ಜವಾಬ್ದಾರಿಯನ್ನು, ಸಾಹಸವನ್ನು ಕೈಗೊಳ್ಳುತ್ತಾ ಟೆಕ್ನಿಕಲ್ ವಿಚಾರದಲ್ಲಿ ಹೆಚ್ಚು ಆಳವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಮುಂದೆ ʼಸಮಯʼ ಮತ್ತು ʼಜನಶ್ರೀʼ ನ್ಯೂಸ್ ಚಾನೆಲ್‌ನಲ್ಲಿ ತಮ್ಮ ಕ್ರಿಯೇಟಿವಿಟಿಯಿಂದ ಮಾಧ್ಯಮ ಲೋಕದಲ್ಲಿ ಸಾಕಷ್ಟು ಹೆಸರನ್ನು ಸಂಪಾದಿಸಿದರು. ಇಂದು ನಾಡಿನಾದ್ಯಂತ ಮನೆ ಮಾತಾಗಿರುವ ರಿಯಾಲಿಟಿ ಶೋ ʼಬಿಗ್ ಬಾಸ್ʼ ಕನ್ನಡದ ಆನ್ ಲೈನ್ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ‘ಎಂಡಮೋಲ್’ ಕಂಪನಿಯಿಂದ ವಿಶೇಷ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈಗಿನ ʼರಿಪಬ್ಲಿಕ್ ಕನ್ನಡʼ ಚಾನೆಲ್ ಆಗಿ ಪರಿವರ್ತನೆಯಾಗಿರುವ ಅಂದಿನ ʼದಿಗ್ವಿಜಯ ನ್ಯೂಸ್ʼ ಚಾನೆಲ್‌ನಲ್ಲಿ “ಪ್ರೊಡಕ್ಷನ್ ಹೆಡ್” ಆಗಿ ತಮ್ಮದೇ ಆದ ಕ್ರಿಯಾಶೀಲ ತಂಡವನ್ನು ರಚಿಸಿಕೊಂಡು ದಿಗ್ವಿಜಯ ಚಾನೆಲ್ ಅನ್ನು ಕ್ರಿಯೇಟಿವ್ ಆಗಿ ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಅಡ್ವರ್ಟೈಸಿಂಗ್ ಮತ್ತು ಬ್ರಾಂಡಿಂಗ್ ಛಾಪು

ತಮ್ಮದೇ ಆದ “ಅಧಿತಿ ಲಿಂಕ್ ಮೀಡಿಯಾ” ಎಂಬ ಸಂಸ್ಥೆಯ ಮೂಲಕ ಅಡ್ವರ್ಟೈಸಿಂಗ್ ಮತ್ತು ಬ್ರಾಂಡಿಂಗ್ ಲೋಕದಲ್ಲಿ ಹೊಸ ಛಾಪನ್ನೇ ಇವರು ಮೂಡಿಸಿ ಅಮೆಜಾನ್ ಪ್ರೈಮ್ ಮತ್ತು ಸ್ಪೈಸ್ ಕಂಪನಿಯೊಂದಿಗೆ ಚಲನಚಿತ್ರಗಳ ಪ್ರಮೋಷನ್ ವಿಭಾಗದಲ್ಲಿ ಹಾಗೂ ಮೈತ್ರಿ ಮೂವೀಸ್, ಗೀತಾ ಪಿಕ್ಚರ್ಸ್‌ನಂತಹ ತೆಲುಗಿನ ದೊಡ್ಡ, ದೊಡ್ಡ ಸಂಸ್ಥೆಯೊಂದಿಗೆ ಪ್ರಚಾರ ವಿಭಾಗದಲ್ಲಿ ಪಾಲುದಾರರಾಗಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಟೈಮ್ಸ್ ಗ್ರೂಪ್‌ನ ಇವೆಂಟ್ಸ್‌ಗಳನ್ನು ಸಮರ್ಥವಾಗಿ ತಮ್ಮ ಅಧಿತಿ ಲಿಂಕ್ ಮೀಡಿಯಾದ ಮೂಲಕ ನಿಭಾಯಿಸಿದ್ದಾರೆ. ತಮ್ಮದೇ ಆದ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿ ಆಡಳಿತಾತ್ಮಕ ವಿಚಾರದಲ್ಲಿ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ.

ವಿಸ್ತಾರ ನ್ಯೂಸ್​​ನಲ್ಲಿ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ʼವಿಸ್ತಾರ ನ್ಯೂಸ್‌ʼ ಹಿಂದಿನ ಶಕ್ತಿ

ನಾಡಿನಾದ್ಯಂತ ಪ್ರಸಿದ್ಧಿ ಪಡೆಯುತ್ತಿರುವ ʼವಿಸ್ತಾರ ನ್ಯೂಸ್‌ʼ ಚಾನೆಲ್ ಆರಂಭದ ಮೊದಲ ಸದಸ್ಯರಾಗಿ, ಚಾನೆಲ್ ಪ್ರಾರಂಭಿಸಬೇಕೆಂಬ ಮೊದಲ ಹೆಜ್ಜೆಯಿಂದ ಹಿಡಿದು ಇಲ್ಲಿಯವರೆಗೆ ಪ್ರತಿ ಹೆಜ್ಜೆಯಲ್ಲಿಯೂ ಪರಿಶ್ರಮ ವಹಿಸಿದ್ದಾರೆ. ಪೂರ್ವ ತಯಾರಿಯಿಂದ ಹಿಡಿದು ಚಾನೆಲ್ ಲೋಕಾರ್ಪಣೆಯವರೆಗೆ ಆಡಳಿತ ಮಂಡಳಿ ಹಾಗೂ ಸಹೋದ್ಯೋಗಿಗಳ ಜೊತೆಗಿದ್ದು ಅವರು ಪಟ್ಟ ಕಠಿಣ ಪರಿಶ್ರಮ ಹಾಗೂ ಅವರ ನಿಷ್ಠೆ, ಪ್ರಾಮಾಣಿಕತೆ, ಬದ್ಧತೆಯ ಫಲವಾಗಿ ಈಗ ಸಂಸ್ಥೆಯ ಉನ್ನತವಾದ ಜವಾಬ್ದಾರಿಯನ್ನು ನಿರ್ವಹಿಸುವ ಹಂತಕ್ಕೆ ತಲುಪಿದ್ದಾರೆ.

ಶುಭ ಹಾರೈಕೆ

ಮಾಧ್ಯಮ ಲೋಕದಲ್ಲಿನ ಎಲ್ಲಾ ಹಂತದ ಅವರ ಒಟ್ಟೂ ಅನುಭವಕ್ಕೆ ವಿಸ್ತಾರ ಮೀಡಿಯಾ ಸಂಸ್ಥೆಯನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ಇದೆ. ಅವರ ಹಾಗೂ ಇಡೀ ವಿಸ್ತಾರ ತಂಡದ ಪರಿಶ್ರಮ ಜೊತೆಗೂಡಿ ವಿಸ್ತಾರ ಮೀಡಿಯಾ ಸಂಸ್ಥೆ ದೇಶದಲ್ಲಿಯೇ ಗುರುತಿಸಿಕೊಳ್ಳುವಂತಹ ಹೆಮ್ಮೆಯ ಸಂಸ್ಥೆಯಾಗಿ ರೂಪುಗೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ. ಪರಶುರಾಮ್‌ ಡಿ ಅವರಿಗೆ ಶುಭ ಹಾರೈಸುತ್ತೇವೆ ಎಂದು ವಿಸ್ತಾರ ಮೀಡಿಯಾ ಪ್ರೈ. ಲಿ.ನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಉದ್ಯೋಗ

Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡುವ ವಿಧಾನ ಇಲ್ಲಿದೆ

Job Alert: ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಲಿಮಿಟೆಡ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್‌, ಅಸಿಸ್ಟಂಟ್‌ ಮ್ಯಾನೇಜರ್‌, ಡೆಪ್ಯುಟಿ ಮ್ಯಾನೇಜರ್‌, ಸೀನಿಯರ್‌ ಮ್ಯಾನೇಜರ್‌ ಮತ್ತು ಸೀನಿಯರ್‌ ಮೆಡಿಕಲ್‌ ಆಫೀಸರ್‌ ಸೇರಿ ಒಟ್ಟು 55 ಹುದ್ದೆಗಳಿವೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಆಗಸ್ಟ್‌ 16.

VISTARANEWS.COM


on

Job Alert
Koo

ಬೆಂಗಳೂರು: ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಲಿಮಿಟೆಡ್‌ (Tehri Hydro Development Corporation Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್‌, ಅಸಿಸ್ಟಂಟ್‌ ಮ್ಯಾನೇಜರ್‌, ಡೆಪ್ಯುಟಿ ಮ್ಯಾನೇಜರ್‌, ಸೀನಿಯರ್‌ ಮ್ಯಾನೇಜರ್‌ ಮತ್ತು ಸೀನಿಯರ್‌ ಮೆಡಿಕಲ್‌ ಆಫೀಸರ್‌ ಸೇರಿ ಒಟ್ಟು 55 ಹುದ್ದೆಗಳಿವೆ (THDC Recruitment 2024). ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಆಗಸ್ಟ್‌ 16 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಮ್ಯಾನೇಜರ್ 25 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂ.ಟೆಕ್‌, ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಮ್ಯಾನೇಜರ್ 19 ಹುದ್ದೆ, ವಿದ್ಯಾರ್ಹತೆ: ಪದವಿ, ಬಿಇ ಅಥವಾ ಬಿ.ಟೆಕ್‌, ಎಂ.ಟೆಕ್‌
ಡೆಪ್ಯುಟಿ ಮ್ಯಾನೇಜರ್ 3 ಹುದ್ದೆ, ವಿದ್ಯಾರ್ಹತೆ: ಪದವಿ
ಸೀನಿಯರ್ ಮ್ಯಾನೇಜರ್ 3 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂ.ಟೆಕ್‌
ಹಿರಿಯ ವೈದ್ಯಾಧಿಕಾರಿ 5 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್

ಗರಿಷ್ಠ ವಯೋಮಿತಿ

ಮ್ಯಾನೇಜರ್ 45 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್ 32 ವರ್ಷ
ಡೆಪ್ಯುಟಿ ಮ್ಯಾನೇಜರ್ 40 ವರ್ಷ
ಸೀನಿಯರ್ ಮ್ಯಾನೇಜರ್ 48 ವರ್ಷ
ಹಿರಿಯ ವೈದ್ಯಾಧಿಕಾರಿ 34 ವರ್ಷ

ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ (ಸಾಮಾನ್ಯ / ಇಡಬ್ಲ್ಯುಎಸ್‌) ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಬಿಡಿ (ಎಸ್‌ಸಿ / ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ / ಮಾಜಿ ಸೈನಿಕರು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್‌ ಅಭ್ಯರ್ಥಿಗಳು ಅರ್ಜಿ ಸುಲ್ಕವಾಗಿ ಆನ್‌ಲೈನ್‌ನಲ್ಲಿ 600 ರೂ. ಪಾವತಿಸಬೇಕು. ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

THDC Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಇಮೇಲ್‌, ಮೊಬೈಲ್‌ ನಂಬರ್‌ ಬಳಸಿ ಹೆಸರು ನಮೂದಿಸಿ.
  • ಇಲ್ಲಿ ಕಂಡುಬರುವ ಅಪ್ಲಿಕೇಷನ್‌ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಹೆಚ್ಚಿನ ವಿವರಗಳಿಗೆ, ವೆಬ್‌ಸೈಟ್‌ ವಿಳಾಸ: thdc.co.inಕ್ಕೆ ಭೇಟಿ ನೀಡಿ ಅಥವಾ thdcrecruitment@thdc.co.in ಇಮೇಲ್‌ಗೆ ಸಂಪರ್ಕಿಸಿ.

ಇದನ್ನೂ ಓದಿ: Sbi Recruitment: ಎಸ್‌ಬಿಐನಲ್ಲಿ 1,040 ಎಸ್‌ಸಿಒ ಹುದ್ದೆಗಳಿಗೆ ಅರ್ಜಿ ಅಹ್ವಾನ

Continue Reading

ದೇಶ

Nipah Virus: ಕೇರಳದಲ್ಲಿ ನಿಫಾ ಭೀತಿ; ಬಾಲಕ ಸಾವಿನ ಬೆನ್ನಲ್ಲೇ ಮತ್ತೆ 6 ಮಂದಿಯಲ್ಲಿ ಸೋಂಕು ಪತ್ತೆ

Nipah Virus: ನಿನ್ನೆಯಷ್ಟೇ ಮಣಪ್ಪುರಂನಲ್ಲಿ ನಿಫಾ ಸೋಂಕು ತಗುಲಿದ್ದ 14ವರ್ಷ ಬಾಲಕ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ. ಈಗಾಗಲೇ ಆರೋಗ್ಯ ಇಲಾಖೆ ಒಟ್ಟು 350ಸಂಪರ್ಕಿತರ ಪಟ್ಟಿ ತಯಾರು ಮಾಡಿದೆ. ಅವರಲ್ಲಿ 101 ಜನರನ್ನು ಗಂಭೀರ ಎಂದು ಪರಿಗಣಿಸಲಾಗಿದೆ. ಈ ಪಟ್ಟಿಯಲ್ಲಿ 68 ಆರೋಗ್ಯ ಸಿಬ್ಬಂದಿಗಳೂ ಇದ್ದಾರೆ. ಬಾಲಕ ಸೋಂಕಿಗೆ ತುತ್ತಾದ ಬಳಿಕ ಖಾಸಗಿ ಬಸ್‌ನಲ್ಲಿ ಪ್ರಯಾಣಿಸಿದ್ದ ಎನ್ನಲಾಗಿದೆ.

VISTARANEWS.COM


on

Nipah Virus
Koo

ತಿರುವನಂತಪುರಂ: ಕೇರಳದಲ್ಲಿ ನಿಫಾ ಸೋಂಕು(Nipah Virus) ತಗುಲಿದ್ದ 14ವರ್ಷದ ಬಾಲಕ ಹೃದಯಾಘಾತ(Cardiac Arrest)ದಿಂದ ಸಾವನ್ನಪ್ಪಿರುವ ಬೆನ್ನಲ್ಲೇ ವಿವಿಧ ಜಿಲ್ಲೆಗಳಲ್ಲಿ ಒಟ್ಟು ಆರು ಜನರಲ್ಲಿ ನಿಫಾ ವೈರಸ್‌ ಕಂಡುಬಂದಿದೆ. ಇನ್ನು ರಾಜ್ಯದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ. ನಿನ್ನೆ ಮೃತಪಟ್ಟ ಬಾಲಕ ಜೊತೆ ನೇರ ಸಂಪರ್ಕ ಹೊಂದಿದ್ದ 13ಮಂದಿಯ ವೈದ್ಯಕೀಯ ಪರೀಕ್ಷೆಯ ವರದಿ ಬರಬೇಕಾಗಿದೆ.

ನಿನ್ನೆಯಷ್ಟೇ ಮಣಪ್ಪುರಂನಲ್ಲಿ ನಿಫಾ ಸೋಂಕು ತಗುಲಿದ್ದ 14ವರ್ಷ ಬಾಲಕ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ. ಈಗಾಗಲೇ ಆರೋಗ್ಯ ಇಲಾಖೆ ಒಟ್ಟು 350ಸಂಪರ್ಕಿತರ ಪಟ್ಟಿ ತಯಾರು ಮಾಡಿದೆ. ಅವರಲ್ಲಿ 101 ಜನರನ್ನು ಗಂಭೀರ ಎಂದು ಪರಿಗಣಿಸಲಾಗಿದೆ. ಈ ಪಟ್ಟಿಯಲ್ಲಿ 68 ಆರೋಗ್ಯ ಸಿಬ್ಬಂದಿಗಳೂ ಇದ್ದಾರೆ. ಬಾಲಕ ಸೋಂಕಿಗೆ ತುತ್ತಾದ ಬಳಿಕ ಖಾಸಗಿ ಬಸ್‌ನಲ್ಲಿ ಪ್ರಯಾಣಿಸಿದ್ದ ಎನ್ನಲಾಗಿದೆ.

ಇನ್ನು ಸೋಂಕು ದೃಢಪಟ್ಟಿರುವ ಒಟ್ಟು ಆರು ಮಂದಿ ಪಾಲಕ್ಕಾಡ್‌ ಮತ್ತು ತಿರುವನಂತಪುರಂ ಜಿಲ್ಲೆಯವರಾಗಿದ್ದಾರೆ. ಇಬ್ಬರು ಪಾಲಕ್ಕಾಡು ಸರ್ಕಾರಿ ಆಸ್ಪತ್ರೆಯಲ ಸಿಬ್ಬಂದಿಗಳಾಗಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗಿತ್ತು. ಇನ್ನು ಸರ್ಕಾರ ಜನರಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ.

ಎನ್‌ಐವಿ-ಪುಣೆ ಶನಿವಾರ ಬಾಲಕನಿಗೆ ನಿಪಾ ವೈರಸ್ ಇರುವುದು ದೃಢಪಡಿಸಿದ ನಂತರ, ಖಾಸಗಿ ಆಸ್ಪತ್ರೆಯಿಂದ ಕೋಝಿಕ್ಕೋಡ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆತನನ್ನು ವೆಂಟಿಲೇಟರ್‌ನಲ್ಲಿಡಲಾಗಿತ್ತು. ಇಂದು ಬೆಳಗ್ಗೆ ಮೂತ್ರದ ಪ್ರಮಾಣ ಕಡಿಮೆಯಾಗಿದ್ದು, ಭಾರೀ ಹೃದಯಾಘಾತದಿಂದಾಗಿ ಆತ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ. ಅಂತರಾಷ್ಟ್ರೀಯ ಪ್ರೋಟೋಕಾಲ್ ಪ್ರಕಾರ ಆತನ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿಗಳು ಬಾಲಕನ ಪೋಷಕರು ಮತ್ತು ಕುಟುಂಬದೊಂದಿಗೆ ಚರ್ಚೆ ನಡೆಸಿದ ನಂತರವೇ ಅಂತ್ಯಕ್ರಿಯೆಯ ಕುರಿತು ಹೆಚ್ಚಿನ ನಿರ್ಧರಿಸಲಾಗುತ್ತದೆ ಎಂದು ಜಾರ್ಜ್ ಹೇಳಿದರು. ಇನ್ನು ಬಾಲಕನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪ್ರಸ್ತುತ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಐಸೋಲೇಶನ್‌ನಲ್ಲಿಡಲಾಗಿದೆ.

ಸೋಂಕಿತ ಬಾಲಕನ ಸಂಪರ್ಕದಲ್ಲಿದ್ದವರ ಪಟ್ಟಿ ಸಿದ್ಧಪಡಿಸಲಾಗಿದೆ. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿರುವ ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಕ್ರಮವಹಿಸಲಾಗಿದೆ. ಬಾಲಕನಿಗೆ ಸೋಂಕು ತಗುಲಿದ ಪ್ರದೇಶದ 3 ಕಿಮೀ ವ್ಯಾಪ್ತಿಯಲ್ಲಿ ನಿರ್ಬಂಧ ವಿಧಿಸಬೇಕೆ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಸಚಿವೆ ವೀಣಾ ಜಾರ್ಜ್ ಅವರು ಮಲಪ್ಪುರಂಗೆ ತೆರಳಿದ್ದಾರೆ. ವೈರಸ್ ನಿಯಂತ್ರಣಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಸರ್ಕಾರವು ಸಮಿತಿಗಳನ್ನು ರಚಿಸಿದೆ.

ಇದನ್ನೂ ಓದಿ: Kanwar Yatra: ಕನ್ವರ್‌ ಯಾತ್ರೆ ವೇಳೆ ಅಂಗಡಿಗಳಿಗೆ ನಾಮ ಫಲಕ ಕಡ್ಡಾಯ ಆದೇಶಕ್ಕೆ ಸುಪ್ರೀಂ ತಡೆ

Continue Reading

ಕರ್ನಾಟಕ

LKG UKG in Anganwadis: ಬೆಂಗಳೂರಿನ ಅಂಗನವಾಡಿಯಲ್ಲಿ ಎಲ್‌ಕೆಜಿ, ಯುಕೆಜಿಗೆ ಚಾಲನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

LKG UKG in Anganwadis: ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಪಟ್ಟೇಗಾರ ಪಾಳ್ಯದ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ ನೀಡಿದರು.

VISTARANEWS.COM


on

LKG UKG in Anganwadis
Koo

ಬೆಂಗಳೂರು: ಇಡೀ ದೇಶದಲ್ಲೆ ಪ್ರಪ್ರಥಮ ಬಾರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಯೋಜನೆಯಡಿ ಆರಂಭಿಸಲಾಗಿರುವ ಸರ್ಕಾರಿ ಮಾಂಟೆಸ್ಸರಿ (L.K.G, UKG) ತರಗತಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೋಮವಾರ ಚಾಲನೆ ನೀಡಿದರು. ಬೆಂಗಳೂರಿನ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಟ್ಟೇಗಾರ ಪಾಳ್ಯದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಚಾಲನೆ ನೀಡಿದರು.

LKG UKG in Anganwadis

ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಅಂಗನವಾಡಿ ಕೇಂದ್ರಗಳ ಉನ್ನತೀಕರಣದ ಮೊದಲ ಭಾಗವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಪೂರ್ವ ಪ್ರಾಥಮಿಕ ಶಾಲೆಗಳಿಗೆ ಚಾಲನೆ ನೀಡಿದ್ದು, ಇನ್ಮುಂದೆ ನಮ್ಮ ಪುಟಾಣಿಗಳು ಅಂಗನವಾಡಿ ಕೇಂದ್ರಗಳಲ್ಲೇ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲಿದ್ದಾರೆ. ಇಂದು ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಹಾಗೂ ರಾಜ್ಯಾದ್ಯಂತ 500 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ಆರಂಭಗೊಳ್ಳಲಿವೆ ಎಂದು ತಿಳಿಸಿದರು.

ಈ ವೇಳೆ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ಇಲಾಖೆಯ ನಿರ್ದೇಶಕರಾದ ಎನ್.ಸಿದ್ದೇಶ್ವರ್, ವಿಕಲಾಂಗ ಇಲಾಖೆಯ ಆಯುಕ್ತರಾದ ದಾಸ್ ಸೂರ್ಯವಂಶಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್, ಸೇರಿದಂತೆ ಇಲಾಖೆಯ ಅಧಿಕಾರಿಗಳು, ಕಾವೇರಿಪುರ ವಾರ್ಡ್ ನ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ | Economic Survey 2023-24: ದೇಶದ ಆರ್ಥಿಕತೆ ಸುಭದ್ರ, ಜಿಡಿಪಿ 7% ಬೆಳವಣಿಗೆ; ಆರ್ಥಿಕ ಸಮೀಕ್ಷೆ ಪ್ರಕಟ

ಸರ್ಕಾರದಿಂದಲೇ ಬ್ಯಾಗ್, ಪುಸ್ತಕ, ಸಮವಸ್ತ್ರ ಉಚಿತ

ಇಡೀ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕದ ಅಂಗನವಾಡಿ ಕೇಂದ್ರಗಳ ಉನ್ನತೀಕರಣದ (LKG UKG in Anganwadis) ಮೊದಲ ಭಾಗವಾಗಿ ಜುಲೈ 22ರಂದು ರಾಜ್ಯದ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿಗಳನ್ನು ಸಾಂಕೇತಿಕವಾಗಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇತ್ತೀಚೆಗೆ ತಿಳಿಸಿದ್ದರು.

ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಇಲಾಖೆ ವತಿಯಿಂದಲೇ ಬ್ಯಾಗ್, ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಗುವುದು. ಮೊದಲ ಹಂತದಲ್ಲಿ 15 ರಿಂದ 20 ಸಾವಿರ ಶಾಲೆಗಳಲ್ಲಿ ಗವರ್ನಮೆಂಟ್ ಮಾಂಟೆಸ್ಸರಿ ಆರಂಭಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣ ಮಾಡುವುದೇ ಇಲಾಖೆಯ ಉದ್ದೇಶ. ಈಗಾಗಲೇ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಗುಣಮಟ್ಟದ ಆಹಾರ, ಶಿಕ್ಷಕಿಯರಿಗೆ ಸೀರೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅಂಗನವಾಡಿ ಶಿಕ್ಷಕಿಯರನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.

30 ವರ್ಷಕ್ಕಿಂತ ಮೇಲ್ಪಟ್ಟ ಅಂಗನವಾಡಿ ಕೇಂದ್ರಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು. ನನ್ನ ಅಧಿಕಾರ ಅವಧಿಯಲ್ಲಿ ಇಲಾಖೆಗೆ ಕೈಲಾದಷ್ಟು ಉತ್ತಮ ಕೆಲಸ ಮಾಡುವೆ. ಕಾರ್ಯಕರ್ತೆಯರ ಹೋರಾಟದ ಶಕ್ತಿಯೇ ಅಂಗನವಾಡಿ ಉನ್ನತೀಕರಣಕ್ಕೆ ಕಾರಣ ಎಂದು ಹೇಳಿದ್ದರು.

ಇದನ್ನೂ ಓದಿ | NEET UG 2024: ಅಧಿವೇಶನದಲ್ಲಿ ‘ನೀಟ್‌’ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ; ಪ್ರತ್ಯುತ್ತರ ಕೊಟ್ಟ ಕೇಂದ್ರ ಸಚಿವ

ಈ ಮೊದಲು ಪ್ರಾಥಮಿಕ ಶಾಲೆಗಳಲ್ಲೇ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ವಿರೋಧ ವ್ಯಕ್ತಪಡಿಸಿದ್ದರು. ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿದರೆ ಅಂಗನವಾಡಿ ಕೇಂದ್ರಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು ಎಂದು ಒತ್ತಾಯ ಕೇಳಿಬಂದಿತ್ತು. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು ರಾಜ್ಯ ಸರ್ಕಾರ ಆರಂಭಿಸಿದೆ.

Continue Reading
Advertisement
Valmiki Corporation Scam
ಕರ್ನಾಟಕ5 mins ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Tata Curvv
ಆಟೋಮೊಬೈಲ್5 mins ago

Tata Curvv : ಎಸ್​ಯುವಿ ವಿಭಾಗದಲ್ಲಿ ವಿಭಿನ್ನ ವಿನ್ಯಾಸದ ಕಾರನ್ನು ಪರಿಚಯಿಸಿದ ಮಾಡಿದ ಟಾಟಾ

Kempambudi lake encroachment cleared soon says DCM DK Shivakumar
ಕರ್ನಾಟಕ13 mins ago

Assembly Session 2024: ಕೆಂಪಾಂಬುದಿ ಕೆರೆ ಒತ್ತುವರಿ ಶೀಘ್ರ ತೆರವು; ಡಿ.ಕೆ.ಶಿವಕುಮಾರ್

Viral Video
ವೈರಲ್ ನ್ಯೂಸ್31 mins ago

Viral Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 10 ಅಡಿ ಮೇಲಕ್ಕೆ ಹಾರಿ ಬಿದ್ದ ತಾಯಿ, ಮಗ

TA Sharavana questioned about the continuous variation in the service of 108 Ambulance even after 7 years there is no new tender
ಬೆಂಗಳೂರು35 mins ago

TA Sharavana: 108 ಆಂಬ್ಯುಲೆನ್ಸ್‌ಗೆ 7 ವರ್ಷ ಕಳೆದರೂ ಹೊಸ ಟೆಂಡರ್‌ ಇಲ್ಲ ಯಾಕೆ? ಟಿ. ಎ. ಶರವಣ ಪ್ರಶ್ನೆ

INS Brahmaputra
ದೇಶ53 mins ago

INS Brahmaputra: ನೌಕಾಪಡೆಯ ಐಎನ್‌ಎಸ್‌ ಯುದ್ಧನೌಕೆಯಲ್ಲಿ ಭೀಕರ ಅಗ್ನಿ ದುರಂತ; ನಾವಿಕ ನಾಪತ್ತೆ

Chamari Athapaththu
ಕ್ರೀಡೆ58 mins ago

Chamari Athapaththu : ಏಷ್ಯಾ ಕಪ್​ನಲ್ಲಿ ಶತಕ ಬಾರಿಸಿ ವಿಶ್ವ ದಾಖಲೆ ಬರೆದ ಲಂಕಾದ ಮಹಿಳಾ ಕ್ರಿಕೆಟರ್​​

Monsoon fashion
ಫ್ಯಾಷನ್1 hour ago

Monsoon fashion: ಶರ್ಟ್ ಸ್ಟೈಲ್‌ ಜಾಕೆಟ್ಸ್; ಇವು ಯುವಕರ ಮಳೆಗಾಲದ ಫ್ಯಾಷನ್‌ ಟ್ರೆಂಡ್‌

Raghu Dixit
ಕ್ರೀಡೆ1 hour ago

Raghu Dixit : ಪ್ಯಾರಿಸ್​ ಒಲಿಂಪಿಕ್ಸ್​ಗೆ ಕನ್ನಡ ಹಾಡುಗಳ ಮೆರುಗು ; ರಘು ದೀಕ್ಷಿತ್ ತಂಡದಿಂದ ವಿಶೇಷ ಕಾರ್ಯಕ್ರಮ

Union Budget 2024
ದೇಶ2 hours ago

Union Budget 2024: ನಾಳೆ ಕೇಂದ್ರ ಬಜೆಟ್;‌ ಎಷ್ಟು ಗಂಟೆಗೆ ಮಂಡನೆ? ಲೈವ್‌ ವೀಕ್ಷಣೆ ಎಲ್ಲಿ? ಇಲ್ಲಿದೆ ಮಾಹಿತಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ2 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌