World Brain Day: ಮೆದುಳನ್ನು ಸದಾ ಚುರುಕಾಗಿಡಲು ಈ ಪೇಯಗಳನ್ನು ಕುಡಿಯುತ್ತಿರಿ! - Vistara News

ಆರೋಗ್ಯ

World Brain Day: ಮೆದುಳನ್ನು ಸದಾ ಚುರುಕಾಗಿಡಲು ಈ ಪೇಯಗಳನ್ನು ಕುಡಿಯುತ್ತಿರಿ!

World Brain Day: ಮೆದುಳಿನ ಕಾಳಜಿ ಮಾಡುವುದು ಕಷ್ಟವಲ್ಲ. ಆರೋಗ್ಯಕರ ಆಹಾರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಅರ್ಧ ಸಮಸ್ಯೆ ಅಲ್ಲೇ ಪರಿಹಾರವಾದಂತೆ. ಇನ್ನೂ ಮುಂದುವರಿದು, ಕೆಲವು ಸರಳವಾದ ಜ್ಯೂಸ್‌ಗಳ ಮೂಲಕವೂ ಮೆದುಳಿನ ಯೋಗಕ್ಷೇಮ ನೋಡಿಕೊಳ್ಳಬಹುದು. ಈ ಕುರಿತು ಇಲ್ಲಿದೆ ಉಪಯುಕ್ತ ವಿವರ.

VISTARANEWS.COM


on

World Brain Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ವಿಶ್ವ ಮೆದುಳು ದಿನ (World Brain Day). ಮಡಿಕೆಗಳಲ್ಲಿ ಹುದುಗಿ ಕುಳಿತ ಮೆದುಳೆಂಬ ಅಂಗದ ಕಾಳಜಿ ಮಾಡುವುದನ್ನು ಮರೆಯಬಾರದು ನಾವು. ಮೆದುಳಿನ ಕಾಳಜಿ ಮಾಡುವುದೆಂದರೆ ಹೇಗೆ? ತ್ವಚೆ, ಕೂದಲು ಮುಂತಾದವುಗಳ ಕಾಳಜಿಯಾದರೆ ನಮಗೆ ಸುಲಭ. ಆದರೆ ಮೆದುಳಿಗೆ ಹಾಗಲ್ಲವಲ್ಲ. ಜೀವನಶೈಲಿ ಮತ್ತು ಆಹಾರದ ಮೂಲಕವೇ ನಮ್ಮ ಮಸ್ತಿಷ್ಕದ ದೇಖರೇಖಿ ಮಾಡಬೇಕು. ಒತ್ತಡ ಮುಕ್ತವಾದ ಜೀವನ ಈ ನಿಟ್ಟಿನಲ್ಲಿ ಮಹತ್ವದ್ದು. ಅಷ್ಟೇ ಪ್ರಮುಖವಾದ ಇನ್ನೊಂದು ವಿಷಯವೆಂದರೆ ನಮ್ಮ ಆಹಾರ. ಮೆದುಳಿನ ಯೋಗಕ್ಷೇಮದ ರಕ್ಷಣೆ ಮಾಡುವಂಥ ಒಂದಿಷ್ಟು ಆಹಾರಗಳು ʻಬ್ರೈನ್‌ ಫುಡ್ಸ್‌ʼ ಎಂದೇ ಕರೆಸಿಕೊಳ್ಳುತ್ತವೆ. ಮೆದುಳಿನ ಕ್ಷಮತೆಯನ್ನು ಹೆಚ್ಚಿಸಿ, ಬದುಕಿನ ಗುಣಮಟ್ಟವನ್ನು ವೃದ್ಧಿಸುವಂಥ ಕೆಲವು ಪೇಯಗಳ ವಿವರಗಳು ಇಲ್ಲಿವೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಸಕ್ಕರೆ ಭರಿತ ಜ್ಯೂಸ್‌ಗಳ ಬದಲು, ಈ ಹಣ್ಣು-ತರಕಾರಿಗಳಿಂದ ನೀವೇ ಮಾಡಿಕೊಂಡರೆ, ದೇಹದ ಆರೋಗ್ಯಕ್ಕೂ ಒಳ್ಳೆಯದು.

active brain

ಮೆದುಳಿಗೆ ಗ್ರಾಸ…?

ಮೆದುಳಿಗೆಂದೇ ಪ್ರತ್ಯೇಕ ಆಹಾರಗಳಿಗೆ ಎಂದು ಹೇಳುತ್ತಿಲ್ಲ. ಆದರೆ ಕೆಲವು ಆಹಾರಗಳು ಮೆದುಳಿಗೆ ಹೆಚ್ಚಿನ ಗ್ರಾಸವನ್ನು ಒದಗಿಸುತ್ತವೆ. ಉದಾ, ಯಾವುದೇ ರೀತಿಯ ಕೊಬ್ಬಿನ ಮೀನುಗಳು ಮೆದುಳಿಗೆ ಅತಿ ಹೆಚ್ಚಿನ ಪೋಷಣೆಯನ್ನು ಒದಗಿಸುತ್ತವೆ. ಬ್ಲೂಬೆರಿಯಂಥ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ನೆನಪಿನ ಶಕ್ತಿ ವೃದ್ಧಿಸಲು ಸಹಕಾರಿ. ಅರಿಶಿನದಲ್ಲಿರುವ ಕರ್ಕುಮಿನ್‌ ಅಂಶವು ಮೆದುಳಿನ ಕೋಶಗಳ ಸಂರಕ್ಷಣೆಯಲ್ಲಿ ನೆರವಾಗುತ್ತದೆ. ಕುಂಬಳಕಾಯಿ ಬೀಜದಲ್ಲಿರುವ ಮೆಗ್ನೀಶಿಯಂ, ಜಿಂಕ್‌ ಮುಂತಾದ ಅಗತ್ಯ ಖನಿಜಗಳು ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ. ಫ್ಲೆವನಾಯ್ಡ್‌ ಇರುವ ಡಾರ್ಕ್‌ ಚಾಕಲೇಟ್‌ ಸೇವನೆಯಿಂದ ಮೆದುಳನ್ನು ಚುರುಕಾಗಿಡುತ್ತದೆ. ಈ ನಿಟ್ಟಿನಲ್ಲಿ ಕೆಲವು ರುಚಿಕರ ಪೇಯಗಳನ್ನು ಸವಿಯುವ ಮೂಲಕ ಮೆದುಳನ್ನು ಆರೋಗ್ಯಪೂರ್ಣವಾಗಿ ಮತ್ತು ಚುರುಕಾಗಿ ಇರಿಸಿಕೊಳ್ಳಬಹುದು.

Blueberry juice

ಬ್ಲೂಬೆರಿ ರಸ

ಆಂಥೋಸಯನಿನ್‌ಗಳೆಂಬ ಫ್ಲೆವನಾಯ್ಡ್‌ಗಳು ಬ್ಲೂಬೆರಿ ಹಣ್ಣುಗಳಲ್ಲಿ ಭರಪೂರ ಇವೆ. ಹಾಗಾಗಿ ನಿಯಮಿತವಾಗಿ ಬ್ಲೂಬೆರಿ ರಸ ಕುಡಿಯುವುದರಿಂದ ಮೆದುಳಿನ ಕ್ಷಮತೆಯನ್ನು, ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.

Pomegranate juice

ದಾಳಿಂಬೆ ರಸ

ದಾಳಿಂಬೆಯಲ್ಲಿರುವ ಪಾಲಿಫೆನಾಲ್‌ಗಳು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ. ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಹೆಚ್ಚಿನ ಕಲಿಕೆಗೆ ನೆರವಾಗುತ್ತದೆ.

Beetroot juice

ಬೀಟ್ರೂಟ್‌ ರಸ

ಈ ಗಡ್ಡೆಯಲ್ಲಿರುವ ನೈಟ್ರೇಟ್‌ ಅಂಶಕ್ಕೆ ಹಲವು ಸಾಧ್ಯತೆಗಳಿವೆ. ರಕ್ತ ನಾಳಗಳನ್ನು ಹಿಗ್ಗಿಸಿ, ಮೆದುಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಹರಿಯುವಂತೆ ಮಾಡುತ್ತದೆ. ಈ ಮೂಲಕ ಮಸ್ತಿಷ್ಕದ ಕಾರ್ಯಭಾರವನ್ನು ವೃದ್ಧಿಸುತ್ತದೆ.

Spinach

ಪಾಲಕ್‌

ಇದಲ್ಲಿರುವ ಲೂಟಿನ್‌ ಎಂಬ ಉತ್ಕರ್ಷಣ ನಿರೋಧಕವು ಮೆದುಳಿಗೆ ವಯಸ್ಸಾಗುವುದನ್ನು ನಿಧಾನ ಮಾಡುತ್ತದೆ. ಅಂದರೆ ದೇಹಲ್ಲಿರುವ ಟಾಕ್ಸಿನ್‌ಗಳನ್ನು ಹೊರಹಾಕಿ ಶುದ್ಧೀಕರಿಸುವ ಮೂಲಕ ಈ ಕೆಲಸ ಮಾಡುತ್ತದೆ.

orange juice

ಕಿತ್ತಳೆ ರಸ

ಇದರಲ್ಲಿ ತುಂಬಿಕೊಂಡಿರುವ ವಿಟಮಿನ್‌ ಸಿ ಅಂಶವು, ಸ್ಪಷ್ಟ ಆಲೋಚನೆಗಳನ್ನು ಮಾಡುವಲ್ಲಿ ಸಹಕಾರಿ. ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ವಿಟಮಿನ್‌ ಸಿ ನೆರವಾಗುತ್ತದೆ.

Carrot juice

ಕ್ಯಾರೆಟ್‌ ರಸ

ಲುಟೋಲಿನ್‌ ಎಂಬ ಉತ್ಕರ್ಷಣ ನಿರೋಧಕವನ್ನು ಗಜ್ಜರಿಗಳು ಹೊಂದಿವೆ. ಇವು ಮೆದುಳಿನ ರಕ್ಷಣೆಗೆ ಬೇಕಾದಂಥ ಅಂಶಗಳು. ಇದನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಲಾಭದಾಯಕ.

grape juice

ದ್ರಾಕ್ಷಿಯ ರಸ

ನೆನಪಿನ ಶಕ್ತಿಯನ್ನು ಹೆಚ್ಚಿಸುವಂಥ ಪಾಲಿಫೆನಾಲ್‌ಗಳನ್ನು ದ್ರಾಕ್ಷಿ ಹೊಂದಿದೆ. ಹಾಗಾಗಿ ದ್ರಾಕ್ಷಿಯನ್ನು ಅಥವಾ ಅದರ ರಸವನ್ನು ಸೇವಿಸುವುದರಿಂದ ಮೆದುಳನ್ನು ಚುರುಕಾಗಿಸಬಹುದು.

Tomato juice

ಟೊಮೇಟೊ ರಸ

ಲೈಕೋಪೇನ್‌ ಎಂಬ ಉತ್ಕರ್ಷಣ ನಿರೋಧಕ ತುಂಬಿರುವ ಟೊಮೇಟೊ ರಸವನ್ನು ಸೇವಿಸುವುದು ಮೆದುಳಿನ ಆರೋಗ್ಯಕ್ಕೆ ಪೂರಕ. ಇದು ಮೆದುಳಿನ ಕೋಶಗಳಿಗೆ ಹಾನಿಯಾಗದಂತೆ ಕಾಪಾಡುತ್ತದೆ.

apple juice

ಸೇಬು ರಸ

ಬುದ್ಧಿ ಶಕ್ತಿ ಕೈಕೊಡದಂತೆ ಕಾಪಾಡುವಂಥ ಉತ್ಕರ್ಷಣ ನಿರೋಧಕಗಳು ಸೇಬು ಹಣ್ಣಿನಲ್ಲಿವೆ. ದಿನವೂ ನಿಯಮಿತವಾಗಿ ಇದರ ರಸವನ್ನು ಸೇವಿಸುವುದರಿಂದ ಮೆದುಳಿನ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Nipah Virus: ಡೇಂಜರಸ್‌ ನಿಫಾ ವೈರಸ್‌; ಇದರ ಲಕ್ಷಣಗಳೇನು? ನಮಗೆ ಅಪಾಯ ಇದೆಯೆ?

Nipah Virus: ನೆರೆಯ ರಾಜ್ಯ ಕೇರಳದಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿದ್ದು, ಬಾಲಕನೊಬ್ಬ ಬಲಿಯಾಗಿದ್ದಾನೆ. ಈ ರೋಗದ ಲಕ್ಷಣಗಳೇನು ಮತ್ತು ಯಾರಿಗೆಲ್ಲ ಇದರ ಅಪಾಯ ಹೆಚ್ಚು? ಇದರ ಪ್ರಸರಣ ಹೇಗೆ ಎಂಬ ಕುರಿತ ಹಲವು ಮಾಹಿತಿಗಳು ಈ ಲೇಖನದಲ್ಲಿವೆ.

VISTARANEWS.COM


on

Nipah Virus
Koo

ಡೆಂಗ್ಯೂ ಮತ್ತು ಜಿಕಾ ಸೋಂಕುಗಳ (Nipah Virus) ಭೀತಿಯಲ್ಲಿ ನರಳುತ್ತಿರುವ ದಿನಗಳಲ್ಲೇ ನಿಫಾ ವೈರಸ್‌ ಸಹ ಸುದ್ದಿ ಮಾಡುತ್ತಿದೆ. ಅದರಲ್ಲೂ ನೆರೆಯ ರಾಜ್ಯ ಕೇರಳದ ಕೋಯಿಕ್ಕೋಡ್‌ನಲ್ಲಿ ಹದಿಹರೆಯದ ಬಾಲಕನೊಬ್ಬ ಈ ವೈರಸ್‌ಗೆ ಮೃತಪಟ್ಟಿರುವುದು ಆತಂಕ ಮೂಡಿಸಿದೆ. 2018ರಲ್ಲಿ ಕೇರಳ ಇದೇ ಪ್ರದೇಶಗಳಲ್ಲಿ ನಿಫಾ ವೈರಸ್‌ ಕಾಣಿಸಿಕೊಂಡಿದ್ದು, 17 ಮಂದಿ ಮೃತಪಟ್ಟಿದ್ದರು. 1999ರಲ್ಲಿ ಮಲೇಷ್ಯಾದಲ್ಲಿ ಮೊದಲ ಬಾರಿಗೆ ಈ ವೈರಸ್‌ ಪತ್ತೆಯಾಗಿತ್ತು. ಬಾವಲಿಗಳಿಂದ ಉಳಿದ ಜೀವಿಗಳಿಗೆ ಹರಡುವ ಈ ವೈರಸ್‌ಗೆ ಯಾವುದೇ ಲಸಿಕೆಗಳಾಗಲಿ ಅಥವಾ ನಿಗದಿತ ಚಿಕಿತ್ಸೆಯಾಗಲೀ ಇಲ್ಲ. ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರನ್ನು ಪ್ರತ್ಯೇಕ ಇರಿಸಿಯೇ ಚಿಕಿತ್ಸೆ ನೀಡಬೇಕಾಗುತ್ತದೆ.

Chandipura Virus

ಲಕ್ಷಣಗಳೇನು?

ಈ ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾದರೆ ರೋಗಿಗಳನ್ನು ಪ್ರಾಣಾಪಾಯದಿಂದ ರಕ್ಷಿಸಬಹುದು. ಯಾವುದೇ ಸೋಂಕುಗಳಲ್ಲೂ ಮೊದಲಿಗೆ ಜ್ವರ ಕಾಣಬಹುದು. ನಿಫಾ ವೈರಸ್‌ ಸೋಂಕು ತಾಗಿದರೂ ಮೊದಲಿಗೆ ತೀವ್ರ ಸುಡುವ ಜ್ವರ ಕಾಣುತ್ತದೆ. ಇದರ ಬೆನ್ನಿಗೆ ಉಳಿದ ಲಕ್ಷಣಗಳು ಕಂಡುಬರುತ್ತವೆ. ತೀವ್ರ ಪ್ರಮಾಣದ ತಲೆನೋವು ಸಹ ಈ ಸೋಂಕಿನಲ್ಲಿ ಸಾಮಾನ್ಯ. ಸಿಕ್ಕಾಪಟ್ಟೆ ಮೈ-ಕೈ ನೋವು, ಸುಸ್ತು ಸಹ ಉಳಿದೆಲ್ಲ ಸೋಂಕುಗಳಲ್ಲಿ ಇರುವಂತೆಯೆ ಇರಬಹುದು. ಜೊತೆಗೆ, ಕೆಮ್ಮು, ಗಂಟಲಲ್ಲಿ ಉರಿ, ಉಸಿರಾಟದ ತೊಂದರೆಗಳು ಕಾಣಬಹುದು. ಇದಿಷ್ಟು ಲಕ್ಷಣಗಳು ಕಾಣುವಾಗಲೇ ವೈದ್ಯಕೀಯ ನೆರವು ಕೋರುವುದು ಅಗತ್ಯ. ಸೋಂಕು ಮುಂದುವರಿದಂತೆ ತಲೆ ಸುತ್ತುವುದು, ಮಾನಸಿಕ ಗೊಂದಲ ಕಾಣುವುದು ಮಹತ್ವದ್ದು. ಇದರರ್ಥ ಕೇಂದ್ರ ನರಮಂಡಲವನ್ನು ಸೋಂಕು ವ್ಯಾಪಿಸುತ್ತಿದ್ದು, ತುರ್ತಾಗಿ ವೈದ್ಯಕೀಯ ನೆರವು ರೋಗಿಗೆ ಬೇಕಾಗಿದೆ. ಎನ್ಸೆಫಲೈಟಿಸ್‌ ರೀತಿಯಲ್ಲಿ ಮೆದುಳಿನಲ್ಲಿ ಊತ ಉಂಟಾಗುತ್ತಿರುವ ಲಕ್ಷಣವಿದು. ಈ ಹಂತವನ್ನು ಪ್ರವೇಶಿಸುವ ಮುನ್ನವೇ ಚಿಕಿತ್ಸೆ ಆರಂಭವಾಗಿದ್ದರೆ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಕಡಿಮೆ. ಒಮ್ಮೆ ಈ ಲಕ್ಷಣಗಳು ಕಾಣತೊಡಗಿದರೆ, ರೋಗಿಗೆ ಅಪಸ್ಮಾರ ಆರಂಭವಾಗಿ, ಕೋಮಾಗೆ ಹೋಗಿ, ಜೀವಕ್ಕೆ ಎರವಾಗುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ವೈರಸ್‌ ಸೋಂಕಿನ ಲಕ್ಷಣಗಳು ಆರಂಭ ಆಗುತ್ತಿದ್ದಂತೆಯೇ ಹೆಚ್ಚಿನ ಜಾಗ್ರತೆ ವಹಿಸಬೇಕು. ಅದರಲ್ಲೂ ನಿಫಾ ಸೋಂಕು ಇರುವಂಥ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ್ದರೆ, ಜ್ವರ ಬರುತ್ತಿದ್ದಂತೆ ವೈದ್ಯರಲ್ಲಿ ವಿಷಯ ತಿಳಿಸುವುದು ಸೂಕ್ತ.

ಯಾರಿಗೆಲ್ಲ ಅಪಾಯ ಹೆಚ್ಚು?

ನಿಫಾ ವೈರಸ್‌ ಸೋಂಕು ಯಾರಿಗೂ ಬರಬಹುದು. ಆದರೂ, ಕೆಲವರಿಗೆ ಇದರ ಅಪಾಯ ಹೆಚ್ಚು. ಯಾರಾರಿಗೆ ಇದರ ಅಪಾಯ ಹೆಚ್ಚು ಮತ್ತು ಅಧಿಕ ಜಾಗ್ರತೆಯನ್ನು ವಹಿಸಬೇಕು ಎಂಬುದನ್ನು ಈಗ ನೋಡೋಣ.

ಪಶುಸಂಗೋಪನೆ

ರೈತರು ಮತ್ತು ಪಶುಸಂಗೋಪನೆಯಲ್ಲಿ ಇರುವವರು ಹೆಚ್ಚಿನ ಜಾಗ್ರತೆ ವಹಿಸಬೇಕು. ಅದರಲ್ಲೂ ಹಂದಿ ಸಾಕಣಿಕೆ ಮಾಡುವವರು, ಬಾವಲಿಗಳು ಹೆಚ್ಚಿರುವಂಥ ಜಾಗಗಳಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಿ. ಬಾವಲಿಗಳೇ ನಿಫಾ ವೈರಸ್‌ನ ಕೇಂದ್ರಸ್ಥಳ. ಹಂದಿಗಳು ಸಹ ಈ ವೈರಸ್‌ಗಳನ್ನು ಮಧ್ಯಂತರವಾಗಿ ದಾಟಿಸುತ್ತಿರುವುದು ಖಾತ್ರಿಯಾಗಿದೆ. ಹಾಗಾಗಿ ಪ್ರಾಣಿಗಳೊಂದಿಗೆ ನೇರ ಸಂಪರ್ಕಕ್ಕೆ ಬರುವವರು, ಸೋಂಕಿನ ಲಕ್ಷಣಗಳನ್ನು ಉದಾಸೀನ ಮಾಡಬೇಡಿ.

ಆರೋಗ್ಯ ಕಾರ್ಯಕರ್ತರು

ಸೋಂಕಿತರೊಂದಿಗೆ ಸಂಪರ್ಕಕ್ಕೆ ಬರುವ ಆರೋಗ್ಯ ಕಾರ್ಯಕರ್ತರು ಅಪಾಯಕ್ಕೆ ಸಿಲುಕಬಹುದು. ಕಾರಣ ಬಹಳಷ್ಟು ಸೋಂಕುಗಳ ಆರಂಭಿಕ ಲಕ್ಷಣಗಳಲ್ಲಿ ಜ್ವರ, ಮೈ-ಕೈ ನೋವು, ತಲೆನೋವು ಇತ್ಯಾದಿಗಳು ಕಾಣುತ್ತವೆ. ಹಾಗಾಗಿ ನಿಫಾ ಸೋಂಕು ಎಂಬುದು ಗೊತ್ತಿಲ್ಲದೆಯೇ ರೋಗಿಯ ಸಂಪರ್ಕಕ್ಕೆ ಕಾರ್ಯಕರ್ತರು ಬಂದಿರಬಹುದು.

shadow

ಕುಟುಂಬದವರು

ಇದಲ್ಲದೆ, ರೋಗಿಯ ಕುಟುಂಬದವರು ಮತ್ತು ಅವರ ನೇರ ಸಂಪರ್ಕಕ್ಕೆ ಬಂದ ಯಾರೇ ಆದರೂ ಸೋಂಕು ಪತ್ತೆಗಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಕಚೇರಿಯಲ್ಲಿ ಜೊತೆಗೇ ಇರುವವರೂ ತಪಾಸಣೆಗೆ ಒಳಗಾಗುವುದು ಸೂಕ್ತ. ಕಾರಣ, ಎಂಜಲು ಸೇರಿದಂತೆ ದೇಹದ ಯಾವುದೇ ದ್ರವ, ಸ್ರಾವದ ಮೂಲಕವೂ ಈ ವೈರಸ್‌ ಪ್ರಸರಣವಾಗುತ್ತದೆ.

ಇದನ್ನೂ ಓದಿ: World Brain Day: ಮೆದುಳನ್ನು ಸದಾ ಚುರುಕಾಗಿಡಲು ಈ ಪೇಯಗಳನ್ನು ಕುಡಿಯುತ್ತಿರಿ!

ಪ್ರಯಾಣದ ಹಿನ್ನೆಲೆಯವರು

ಕೆಲವು ಭೌಗೋಳಿಕ ಪ್ರದೇಶದಲ್ಲಿ ನಿಫಾ ಸೋಂಕು ಇದೆ, ಆ ವೈರಸ್‌ ಸಕ್ರಿಯವಾಗಿದೆ ಎಂಬುದನ್ನು ತಿಳಿಯದೆಯೇ ಅಲ್ಲಿಗೆ ಪ್ರಯಾಣ ಮಾಡಿರಬಹುದು. ಭಾರತದಲ್ಲೇ ಕೆಲವು ಜಾಗಗಳು, ಬಾಂಗ್ಲಾದೇಶದ ಕೆಲವೆಡೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ತಿಳಿದೊ/ ತಿಳಿಯದೆಯೊ ಸೋಂಕು ಅಂಟಬಹುದು. ಪ್ರಯಾಣದ ನಂತರ ಯಾವುದೇ ಜ್ವರದ ಲಕ್ಷಣಗಳು ಕಂಡರೂ ಮೊದಲು ವೈದ್ಯಕೀಯ ನೆರವು ಪಡೆಯಿರಿ. ಎಲ್ಲಿಗೆ ಪ್ರಯಾಣ ಮಾಡಿದ್ದಿರಿ ಎಂಬುದನ್ನೂ ವೈದ್ಯರಿಗೆ ತಿಳಿಸಿ.

Continue Reading

ಆರೋಗ್ಯ

Potato Diet: ಆಲೂಗಡ್ಡೆ ಆರೋಗ್ಯಕರ! ತೂಕ ಇಳಿಸಲು ಯತ್ನಿಸುತ್ತಿರುವವರೂ ಇದನ್ನು ತಿನ್ನಬಹುದು!

Potato Diet: ಆಲೂಗಡ್ಡೆ ತೂಕ ಏರಿಸುವ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಸ್ಥಾನ ಪಡೆಯುವ ಕಾರಣ, ಜೊತೆಗೆ ಇದಕ್ಕೆ ಹಲವು ಆರೋಗ್ಯ ಸಮಸ್ಯೆಗಳೂ ಸಂಬಂಧವಿರುವುದರಿಂದ ಇದನ್ನು ದೂರವಿಡಬೇಕಾದ ಅನಿವಾರ್ಯತೆ ಸಹಜವೇ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯದ ಸಮಸ್ಯೆ ಇತ್ಯಾದಿ ಇರುವ ಮಂದಿಗೆ ಇದು ಒಳ್ಳೆಯದಲ್ಲ. ವೈದ್ಯರೂ ಇದನ್ನೇ ಹೇಳುತ್ತಾರೆ ನಿಜ. ಆದರೆ ಆಲೂಗಡ್ಡೆಯನ್ನು ಸರಿಯಾದ ಕ್ರಮದಲ್ಲಿ ಅಡುಗೆ ಮಾಡುವಿದರಿಂದ ಇದನ್ನು ತಿಂದೂ ಆರೋಗ್ಯದಿಂದಿರಬಹುದು. ತೂಕವನ್ನೂ ಇಳಿಸಬಹುದು!

VISTARANEWS.COM


on

Potato Diet
Koo

ಆಲೂಗಡ್ಡೆ (Potato Diet) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮನೆಯಲ್ಲಿ ತರಕಾರಿ ಖಾಲಿಯಾದಾಗ ಸದಾ ಆಪದ್ಬಾಂಧವನಂತೆ ನಮ್ಮ ಕೈಹಿಡಿದು ಸಲಹುವ ಆಲೂಗಡ್ಡೆಯಿಂದ ಏನು ಮಾಡಿದರೂ ರುಚಿಯೇ. ಮಳೆ ಬಂದಾಗ ಮಾಡಬಹುದಾದ ಪಕೋಡಾ, ಬಜ್ಜಿ, ಬೋಂಡಾ, ಫ್ರೆಂಚ್‌ ಫ್ರೈಸ್‌ ಸೇರಿದಂತೆ ರುಚಿರುಚಿಯಾದ ಬಿಸಿಬಿಸಿಯಾದ ತಿನಿಸುಗಳನ್ನು ಮಾಡಲು ಆಲೂಗಡ್ಡೆ ಬೇಕೇಬೇಕು. ಆದರೆ, ತೂಕ ಇಳಿಸುವ ಮಂದಿಗೆ ಆಲೂಗಡ್ಡೆ ಎಂದರೆ ದೂರವಿಡಲೇಬೇಕಾದ ಪರಿಸ್ಥಿತಿ. ಎಷ್ಟೇ ಇಷ್ಟವಿರಲಿ, ಆಲೂಗಡ್ಡೆ ತೂಕ ಏರಿಸುವ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಸ್ಥಾನ ಪಡೆಯುವ ಕಾರಣ, ಜೊತೆಗೆ ಇದಕ್ಕೆ ಹಲವು ಆರೋಗ್ಯ ಸಮಸ್ಯೆಗಳೂ ಸಂಬಂಧವಿರುವುದರಿಂದ ಇದನ್ನು ದೂರವಿಡಬೇಕಾದ ಅನಿವಾರ್ಯತೆ ಸಹಜವೇ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯದ ಸಮಸ್ಯೆ ಇತ್ಯಾದಿ ಇರುವ ಮಂದಿಗೆ ಇದು ಒಳ್ಳೆಯದಲ್ಲ. ವೈದ್ಯರೂ ಇದನ್ನೇ ಹೇಳುತ್ತಾರೆ ನಿಜ. ಹಾಗಂತ ನಿಮ್ಮ ಪ್ರೀತಿಪಾತ್ರವಾದ ಆಲೂಗಡ್ಡೆಯನ್ನು ಸಂಪೂರ್ಣ ತ್ಯಜಿಸಬೇಕಾದ ಅನಿವಾರ್ಯತೆ ಇಲ್ಲ. ಆಲೂಗಡ್ಡೆಯನ್ನು ಸರಿಯಾದ ಕ್ರಮದಲ್ಲಿ ಅಡುಗೆ ಮಾಡುವಿದರಿಂದ ಹಿತಮಿತವಾಗಿ ತಿಂದುಂಡು ಆರೋಗ್ಯದಿಂದಿರಬಹುದು. ತೂಕವನ್ನೂ ಇಳಿಸಬಹುದು.
ಹೌದು. ನಿಮಗೆ ಆಶ್ಚರ್ಯವೆನಿಸಿದರೂ ಸತ್ಯ. ಆಲೂಗಡ್ಡೆಯನ್ನು ತಿನ್ನುವ ಮೂಲಕ ತೂಕವನ್ನು ಇಳಿಸಬಹುದು. ಯಾಕೆಂದರೆ ಇದರಲ್ಲಿ ಅನೇಕ ಪೋಷಕ ತತ್ವಗಳಿವೆ.

Nutrient-Rich Potato Benefits

ನಾರಿನಂಶ

ಆಲೂಗಡ್ಡೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶವಿದೆ. ನಾರಿನಂಶ ಉತ್ತಮ ಜೀರ್ಣಕ್ರಿಯೆಗೆ ಬೇಕೇಬೇಕು. ಅಷ್ಟೇ ಅಲ್ಲ, ನಾರಿನಂಶ ಸಮೃದ್ಧವಾಗಿದ್ದರೆ ಬಹಳ ಹೊತ್ತಿನವರೆಗೆ ಹೊಟ್ಟೆ ಫುಲ್‌ ಇದ್ದ ಅನುಭವವಾಗುತ್ತದೆ. ಹೀಗಾಗಿ ಆಗಾಗ ಮತ್ತೆ ತಿನ್ನಬೇಕೆನಿಸುವುದಿಲ್ಲ. ಒಂದು ಸಾಮಾನ್ಯ ಗಾತ್ರದ ಆಲೂಗಡ್ಡೆಯಲ್ಲಿ ಅಂದರೆ ನೂರು ಗ್ರಾಂ ಆಲೂಗಡ್ಡೆಯಲ್ಲಿ ೮೦ ಕ್ಯಾಲರಿಯಿದೆ.

Blood Pressure

ಪೋಷಕಾಂಶಗಳು

ವಿಟಮಿನ್‌ ಸಿ ಯೂ ಸೇರಿದಂತೆ ಪೊಟಾಶಿಯಂ, ವಿಟಮಿನ್‌ ಬಿ6 ಇತ್ಯಾದಿಗಳೆಲ್ಲ ಇರುವ ಆಲೂಗಡ್ಡೆಯಲ್ಲಿಯೂ ಸಾಕಷ್ಟು ಪೋಷಕಾಂಶಗಳಿವೆ. ಇದರಲ್ಲಿರುವ ವಿಟಮಿನ್‌ ಸಿ ದೇಹದ ಬೆಳವಣಿಗೆ, ರೋಗನಿರೋಧಕತೆಗೆ, ಅಂಗಾಂಶಗಳ ಮರುರಚನೆಗೆ ಸಹಾಯ ಮಾಡಿದರೆ, ಪೊಟಾಶಿಯಂ ಮಾಂಸಖಂಡಗಳ ಹಿಗ್ಗು ಕುಗ್ಗುವಿಕೆಗೆ, ದೇಹದಲ್ಲಿರುವ ನೀರಿನಂಶವನ್ನು ಹಾಗೆಯೇ ಸಮತೋಲನದಲ್ಲಿ ಕಾಪಾಡಲು, ವಿಟಮಿನ್‌ ಬಿ೬ ಮಿದುಳಿನ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿವೆ.

Potato beetroot Perishable Foods

ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು

ಶಕ್ತಿಯ ಉತ್ಪಾದನೆಗೆ ಕಾರ್ಬೋಹೈಡ್ರೇಟ್‌ ಬೇಕೇ ಬೇಕು. ಆಲೂಗಡ್ಡೆಯಲ್ಲಿ ಇಂತಹ ಕಾರ್ಬೋಹೈಡ್ರೇಟ್‌ ಇದ್ದು ಇದು ಬಹಳ ಹೊತ್ತಿಗೆ ನಮಗೆ ಬೇಕಾದ ಶಕ್ತಿ, ಚೈತನ್ಯ ನೀಡುತ್ತದೆ.

ಇದನ್ನೂ ಓದಿ: Monsoon Skincare: ಮಳೆಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು?

ಕಡಿಮೆ ಕ್ಯಾಲರಿ

ಇದನ್ನು ಕೇಳಿದರೆ ನಿಮಗೆ ಶಾಕ್‌ ಆಗಬಹುದು. ಆದರೆ, ಸತ್ಯ. ಆಲೂಗಡ್ಡೆಯಲ್ಲಿ ಕಡಿಮೆ ಕ್ಯಾಲರಿ ಇದೆ. ಅಂದಾಜು 100 ಗ್ರಾಂ ಆಲೂಗಡ್ಡೆಯಲ್ಲಿ 77 ಕ್ಯಾಲರಿ ಇರುತ್ತದೆ. ಇದರಲ್ಲಿ ಎರಡು ಗ್ರಾಂ ಪ್ರೊಟೀನ್‌ ಹಾಗೂ 2 ಗ್ರಾಂನಷ್ಟು ನಾರಿನಂಶ ಇದೆ. ಹಾಗಾದರೆ ಆಲೂಗಡ್ಡೆಯನ್ನು ಎಷ್ಟು ತಿನ್ನಬಹುದು ಎಂಬುದು ನಿಮ್ಮ ಮುಂದಿನ ಪ್ರಶ್ನೆಯಲ್ಲವೇ. ಅದಕ್ಕೂ ಉತ್ತರ ಇಲ್ಲಿದೆ. ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಫ್ರೈ ಮಾಡುವುದರಿಂದ ಖಂಡಿತ ತೂಕ ಹೆಚ್ಚಬಹುದು. ಆದರೆ, ಬೇಯಿಸಿ ತಿಂದರೆ ಈ ಪರಿಣಾಮ ಆಗದು. ಅಡುಗೆ ಮಾಡುವ ಮುನ್ನ 6-7 ಗಂಟೆಗಳ ಮೊದಲೇ ಆಲೂಗಡ್ಡೆತನ್ನು ಬೇಯಿಸಿ ತಣಿಯಲು ಬಿಡಿ. ತೂಕ ಇಳಿಸುವ ಮಂದಿ ನೀವಗಿದ್ದರೆ ಹೀಗೆ ಮಾಡಿ. ಅಷ್ಟೇ ಅಲ್ಲ, ಸ್ನ್ಯಾಕ್‌ ಸಮಯದಲ್ಲಿ ಆಲೂಗಡ್ಡೆಯನ್ನು ಬೇಯಿಸಿ ಮಾಡಿದ ಅಡುಗೆಯನ್ನು ಸೇವಿಸಬಹುದು. ಅಥವಾ ಅನ್ನ, ಚಪಾತಿ, ಬ್ರೆಡ್‌ ಇತ್ಯಾದಿಗಳ ಜೊತೆ ಸೇರಿಸಿ ಆಲೂಗಡ್ಡೆ ತಿನ್ನಬಹುದು. ಹಾಗಾಗಿ, ಎಲ್ಲ ತರಕಾರಿಗಳಂತೆ ಆಲೂಗಡ್ಡೆಯನ್ನೂ ಆಗಾಗ ಹಿತಮಿತಾಗಿ ತಿನ್ನಬಹುದು. ತಿನ್ನಬೇಕು ಕೂಡಾ. ಆದರೆ, ಆಲೂಗಡ್ಡೆಯಿಂದ ತಯಾರಿಸಿದ ಹೆಚ್ಚು ಸಂಸ್ಕರಿಸಿದ ಪದಾರ್ಥಗಳಿಂದ ದೂರುವಿರಿ. ಎಣ್ಣೆಯಲ್ಲಿ ಫ್ರೈ ಮಾಡಿ ತಿನ್ನುವುದರಿಂದ ದೂರವಿರಿ. ತಿನ್ನಲು ಆಸೆಯಾದರೆ, ಎಣ್ಣೆಯಲ್ಲಿ ಕರಿಯುವ ಬದಲು ಏರ್‌ ಫ್ರೈ ಮಾಡಿ ಅಥವಾ ಬೇಕ್‌ ಮಾಡಿ ತಿನ್ನಬಹುದು.

Continue Reading

ಆರೋಗ್ಯ

Fatty Liver Problem: ಫ್ಯಾಟಿ ಲಿವರ್‌ ಸಮಸ್ಯೆ ಎದುರಿಸುತ್ತಿದ್ದೀರಾ? ಈ ಮೂರು ಪೇಯಗಳಿಂದ ಎಂದೆಂದಿಗೂ ದೂರವಿರಿ

Fatty Liver Problem: ಬದಲಾದ ಆಹಾರ ಕ್ರಮ ಇತ್ಯಾದಿ ಇತ್ಯಾದಿಗಳ ಕಾರಣದಿಂದಾಗಿ ಇಂದು ಫ್ಯಾಟಿ ಲಿವರ್‌ ಬಹುತೇಕರ ಬದುಕಿನಲ್ಲಿ ಸಾಮಾನ್ಯವಾಗಿದೆ. ಸರಿಯಾದ ಆಹಾರಕ್ರಮ, ಶಿಸ್ತಿನ ಜೀವನ ಹಾಗೂ, ನಿಯಮಿಯ ಯೋಗ ವ್ಯಾಯಾಮಗಳಿಂದ ಫ್ಯಾಟಿ ಲಿವರ್‌ ಸಮಸ್ಯೆಯನ್ನು ಯಾವ ಔಷಧಿಯೂ ಇಲ್ಲದೆ ಮತ್ತೆ ಸರಿಪಡಿಸಿಕೊಳ್ಳಬಹುದು. ಜೊತೆಗೆ ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸಲು ಕಾರಣವಾಗುವ ಆಹಾರಗಳನ್ನು ದೂರವಿಡುವುದೂ ಕೂಡಾ ಬಹಳ ಮುಖ್ಯವಾಗುತ್ತದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Fatty liver disease
Koo

ಫ್ಯಾಟಿ ಲಿವರ್‌ ಎಂಬ ಸಮಸ್ಯೆ (Fatty Liver Problem) ಇಂದು ಬಹಳ ಸಾಮಾನ್ಯವಾಗಿದೆ. ಜೀವನಕ್ರಮ, ಆಲ್ಕೋಹಾಲ್‌ ಸೇವನೆ, ಬದಲಾದ ಆಹಾರ ಕ್ರಮ ಇತ್ಯಾದಿ ಇತ್ಯಾದಿಗಳ ಕಾರಣದಿಂದಾಗಿ ಇಂದು ಫ್ಯಾಟಿ ಲಿವರ್‌ ಬಹುತೇಕರ ಬದುಕಿನಲ್ಲಿ ಸಾಮಾನ್ಯವಾಗಿದೆ. ಸರಿಯಾದ ಆಹಾರಕ್ರಮ, ಶಿಸ್ತಿನ ಜೀವನ ಹಾಗೂ, ನಿಯಮಿಯ ಯೋಗ ವ್ಯಾಯಾಮಗಳಿಂದ ಫ್ಯಾಟಿ ಲಿವರ್‌ ಸಮಸ್ಯೆಯನ್ನು ಯಾವ ಔಷಧಿಯೂ ಇಲ್ಲದೆ ಮತ್ತೆ ಸರಿಪಡಿಸಿಕೊಳ್ಳಬಹುದು. ಜೊತೆಗೆ ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸಲು ಕಾರಣವಾಗುವ ಆಹಾರಗಳನ್ನು ದೂರವಿಡುವುದೂ ಕೂಡಾ ಬಹಳ ಮುಖ್ಯವಾಗುತ್ತದೆ. ಲಿವರ್‌ ಅಥವಾ ಪಿತ್ತಕೋಶದಲ್ಲಿ ಕೊಬ್ಬು ಸಂಗ್ರಹಣೆಗೊಂಡು ಪಿತ್ತಕೋಶದ ಆರೋಗ್ಯವನ್ನು ಹಾಳು ಮಾಡುವ ಮೂಲಕ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗುವ ಈ ಸಮಸ್ಯೆಯನ್ನು ಆರಂಭದಲ್ಲೇ ಸರಿಪಡಿಸಿಕೊಂಡು ಶಿಸ್ತಿನ ಜೀವನ ಹಾಗೂ ಆಹಾರಕ್ರಮಗಳನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ವೈದ್ಯರು. ಬನ್ನಿ, ಫ್ಯಾಟಿ ಲಿವರ್‌ ಸಮಸ್ಯೆಯನ್ನು ನೀವು ಹೊಂದಿದ್ದರೆ, ಈ ಮೂರು ಪೇಯಗಳನ್ನು ಸೇವಿಸುವ ಮೊದಲು ಎಚ್ಚರಿಕೆ ವಹಿಸಿ. ಯಾಕೆಂದರೆ ಇದು ನಿಮ್ಮ ಶತ್ರುವಾಗಬಹುದು. ಈ ಕೆಳಗಿನ ಮೂರು ಬಗೆಯ ಪೇಯಗಳನ್ನು ನಿಮ್ಮ ಹತ್ತಿರಕ್ಕೂ ಸುಳಿಯದಂತೆ ಸದಾ ಕಾಲ ಎಚ್ಚರ ವಹಿಸಿದರೆ, ನಿಮ್ಮ ಪಿತ್ತಕೋಶ ಆರೋಗ್ಯವಾಗಿದ್ದೀತು.

Baking Soda Benefits

ಸೋಡಾಗಳು

ಬಹಳಷ್ಟು ಮಂದಿಗೆ ಸೋಡಾ ಹಾಗೂ ಕಾರ್ಬೋನೇಟೆಡ್‌ ಡ್ರಿಂಕ್‌ಗಳ ಸೇವನೆ ರೂಢಿಯಾಗಿಬಿಟ್ಟಿರುತ್ತದೆ. ಇನ್ನೂ ಕೆಲವರು ಆಲ್ಕೋಹಾಲ್‌ ಸೇವನೆಯನ್ನು ಬಿಟ್ಟು ಅದಕ್ಕೆ ಪರ್ಯಾಯವಾಗಿ ಪಾರ್ಟಿಗಳಲ್ಲಿ ಸೋಡಾ ಅಥವಾ ಸೋಡಾ ಹಾಕಿದ ಸಾಫ್ಟ್‌ ಡ್ರಿಂಕ್‌ಗಳೆಡೆಗೆ ಹೊರಳುತ್ತಾರೆ. ಆದರೆ, ಸೋಡಾ ಕೂಡಾ ಫ್ಯಾಟಿ ಲಿವರ್‌ಗೆ ಒಳ್ಳೆಯದಲ್ಲ. ಸೋಡಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆಯಿದ್ದು, ಇದು ಫ್ಯಾಟಿ ಲಿವರ್‌ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಇಂತಹ ಪೆಯಗಳನ್ನು ನಿತ್ಯವೂ ಐದಾರು ವರ್ಷಗಳ ಕಾಲ ಸೇವನೆ ಮಾಡಿದರೆ ಖಂಡಿತವಾಗಿಯೂ ಫ್ಯಾಟಿ ಲಿವರ್‌ ಸಮಸ್ಯೆಯನ್ನು ತಂದೊಡ್ಡುತ್ತದೆ.

Drunk Man Drinking Alcohol and Smoking Cigarette Stomach Bloating Relief

ಆಲ್ಕೋಹಾಲ್‌

ಪಿತ್ತಕೋಶ/ಲಿವರ್‌ಗೆ ಮದ್ಯಾಪಾನ ಒಳ್ಳೆಯದಲ್ಲ. ಮದ್ಯಪಾನ ಮಾಡುವುದರಿಂದ ಪಿತ್ತಕೋಶದ ಹದ ತಪ್ಪುತ್ತದೆ. ಫ್ಯಾಟಿ ಲಿವರ್‌ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಯಮಿತವಾಗಿ ಮದ್ಯಪಾನ ಮಾಡುವುದರಿಂದ ದೀರ್ಘಕಾಲಿಕ ಪಿತ್ತಕೋಶದ ಸಮಸ್ಯೆಗಳು ಬಾಧೀಸಬಹುದು. ಆಗಾಗ ಆರೋಗ್ಯ ಹದಗೆಡುವುದು, ಜಾಂಡೀಸ್‌, ಗಂಟುಗಳಲ್ಲಿ ಬಾವು- ಸೆಳೆತ, ರ್ಕತವಾಂತಿ ಇತ್ಯಾದಿ ಸಮಸ್ಯೆಗಳೂ ಉಲ್ಬಣಿಸಬಹುದು.

ಇದನ್ನೂ ಓದಿ: Kidney Stones: ಈ ಅಭ್ಯಾಸ ನಿಮಗಿದ್ದರೆ ಕಿಡ್ನಿಯಲ್ಲಿ ಕಲ್ಲಾಗುವ ಅಪಾಯ ಹೆಚ್ಚು!

ಸ್ಪೋರ್ಟ್ಸ್‌ ಹಾಗೂ ಎನರ್ಜಿ ಡ್ರಿಂಕ್‌ಗಳು

ಸ್ಪೋರ್ಟ್ಸ್‌ ಹಾಗೂ ಎನರ್ಜಿ ಡ್ರಿಂಕ್‌ಗಳೆಂಬ ಶಕ್ತಿವರ್ಧಕ ಪೇಯಗಳಲ್ಲಿ ಅತಿಯಾದ ಸಕ್ಕರೆ ಇರುವುದರಿಂದ ಇದು ಖಂಡಿತವಾಗಿಯೂ ಫ್ಯಾಟಿ ಲಿವರ್‌ ಸಮಸ್ಯೆಗೆ ಅಪಾಯಕಾರಿ. ಇತ್ತೀಚೆಗೆ ಯುವಕರು ಹೆಚ್ಚು ಹೆಚ್ಚು ಇಂತಹ ಡ್ರಿಂಕ್‌ಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿರುವುದು ಹಾಗೂ ಅದನ್ನು ಕುಡಿಯುವುದನ್ನು ಫ್ಯಾಷನ್‌ ಎಂಬುದಾಗಿ ಅಂದುಕೊಂಡಿರುವುದೇ ಸಮಸ್ಯೆಯನ್ನು ತರಬಹುದು. ಫ್ಯಾಟಿ ಲಿವರ್‌ ಸಮಸ್ಯೆ ಇರಲಿ, ಇಲ್ಲದಿರಲಿ, ಇಂತಹ ಪೇಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಒಡನೆಯೇ ಶಕ್ತಿವರ್ಧಿಸಲು ಅಗತ್ಯದ ಸಂದರ್ಭಗಳಲ್ಲಿ ಸಹಾಯಕ್ಕೆ ಬರಬಹುದಾದರೂ ನಿತ್ಯ ಸೇವನೆಯಂತೂ ಕಡ್ಡಾಯವಾಗಿ ಸಲ್ಲದು ಎಂಬುದನ್ನು ನೆನಪಿಡಿ. ಇದರ ಬದಲಾಗಿ, ಕಾಫಿಯನ್ನು ಕುಡಿಯಬಹುದು. ಫ್ಯಾಟಿ ಲಿವರ್‌ಗೆ ಹಾಲು ಹಾಕದ ಬ್ಲ್ಯಾಕ್‌ ಕಾಫಿ ಸೇವನೆ ಒಳ್ಳೆಯದು. ಆದರೆ, ಅತುಯಾದ ಕಾಫಿ ಸೇವನೆಯೂ ಒಳ್ಳೆಯದಲ್ಲ. ದಿನಕ್ಕೊಮ್ಮೆ ಅಥವಾ ಎರಡು ಬಾರಿ ಹೀಗೆ ಬ್ಲ್ಯಾಕ್‌ ಕಾಫಿ ಸೇವನೆ ಮಾಡಬಹುದು. ಇದು ಫ್ಯಾಟಿ ಲಿವರ್‌ ಸಮಸ್ಯೆಯನ್ನು ತಗ್ಗಿಸುವಲ್ಲಿ ನೆರವಾಗುತ್ತದೆ.

Continue Reading

ದೇಶ

Nipah Virus: ಕೇರಳದಲ್ಲಿ ನಿಫಾ ವೈರಸ್‌ ತಗುಲಿದ್ದ ಬಾಲಕ ಸಾವು

Nipah Virus: ಎನ್‌ಐವಿ-ಪುಣೆ ಶನಿವಾರ ಬಾಲಕನಿಗೆ ನಿಪಾ ವೈರಸ್ ಇರುವುದು ದೃಢಪಡಿಸಿದ ನಂತರ, ಖಾಸಗಿ ಆಸ್ಪತ್ರೆಯಿಂದ ಕೋಝಿಕ್ಕೋಡ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆತನನ್ನು ವೆಂಟಿಲೇಟರ್‌ನಲ್ಲಿಡಲಾಗಿತ್ತು. ಇಂದು ಬೆಳಗ್ಗೆ ಮೂತ್ರದ ಪ್ರಮಾಣ ಕಡಿಮೆಯಾಗಿದ್ದು, ಭಾರೀ ಹೃದಯಾಘಾತದಿಂದಾಗಿ ಆತನ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ. ಅಂತರಾಷ್ಟ್ರೀಯ ಪ್ರೋಟೋಕಾಲ್ ಪ್ರಕಾರ ಆತನ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ.

VISTARANEWS.COM


on

nipah virus
Koo

ತಿರುವನಂತಪುರಂ: ಕೇರಳದಲ್ಲಿ ನಿಫಾ ಸೋಂಕು(Nipah Virus) ತಗುಲಿದ್ದ 14ವರ್ಷದ ಬಾಲಕ ಹೃದಯಾಘಾತ(Cardiac Arrest)ದಿಂದ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಮಾಹಿತಿ ನೀಡಿದ್ದು, ನಿಫಾ ಸೋಂಕು ತಗುಲಿದ್ದ ಪಾಲಕ್ಕಾಡು ಮಲಪ್ಪುರಂ ಜಿಲ್ಲೆಯ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಇಂದು ಬೆಳಗ್ಗೆ 10:50 ಚಿಕಿತ್ಸೆ ಫಲಕಾರಿಗದೇ ಕೊನೆಯುಸಿರೆಳೆದಿದ್ದಾನೆ ಎಂದಿದ್ದಾರೆ.

ಎನ್‌ಐವಿ-ಪುಣೆ ಶನಿವಾರ ಬಾಲಕನಿಗೆ ನಿಪಾ ವೈರಸ್ ಇರುವುದು ದೃಢಪಡಿಸಿದ ನಂತರ, ಖಾಸಗಿ ಆಸ್ಪತ್ರೆಯಿಂದ ಕೋಝಿಕ್ಕೋಡ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆತನನ್ನು ವೆಂಟಿಲೇಟರ್‌ನಲ್ಲಿಡಲಾಗಿತ್ತು. ಇಂದು ಬೆಳಗ್ಗೆ ಮೂತ್ರದ ಪ್ರಮಾಣ ಕಡಿಮೆಯಾಗಿದ್ದು, ಭಾರೀ ಹೃದಯಾಘಾತದಿಂದಾಗಿ ಆತನ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ. ಅಂತರಾಷ್ಟ್ರೀಯ ಪ್ರೋಟೋಕಾಲ್ ಪ್ರಕಾರ ಆತನ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ.

ಜಿಲ್ಲಾಧಿಕಾರಿಗಳು ಬಾಲಕನ ಪೋಷಕರು ಮತ್ತು ಕುಟುಂಬದೊಂದಿಗೆ ಚರ್ಚೆ ನಡೆಸಿದ ನಂತರವೇ ಅಂತ್ಯಕ್ರಿಯೆಯ ಕುರಿತು ಹೆಚ್ಚಿನ ನಿರ್ಧರಿಸಲಾಗುತ್ತದೆ ಎಂದು ಜಾರ್ಜ್ ಹೇಳಿದರು. ಇನ್ನು ಬಾಲಕನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪ್ರಸ್ತುತ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಐಸೋಲೇಶನ್‌ನಲ್ಲಿಡಲಾಗಿದೆ.

ಸೋಂಕಿತ ಬಾಲಕನ ಸಂಪರ್ಕದಲ್ಲಿದ್ದವರ ಪಟ್ಟಿ ಸಿದ್ಧಪಡಿಸಲಾಗಿದೆ. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿರುವ ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಕ್ರಮವಹಿಸಲಾಗಿದೆ. ಬಾಲಕನಿಗೆ ಸೋಂಕು ತಗುಲಿದ ಪ್ರದೇಶದ 3 ಕಿಮೀ ವ್ಯಾಪ್ತಿಯಲ್ಲಿ ನಿರ್ಬಂಧ ವಿಧಿಸಬೇಕೆ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಸಚಿವೆ ವೀಣಾ ಜಾರ್ಜ್ ಅವರು ಮಲಪ್ಪುರಂಗೆ ತೆರಳಿದ್ದಾರೆ. ವೈರಸ್ ನಿಯಂತ್ರಣಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಸರ್ಕಾರವು ಸಮಿತಿಗಳನ್ನು ರಚಿಸಿದೆ.

ಬಾಲಕನ ಮಾದರಿಗಳನ್ನು ಪುಣೆ ಎನ್‌ಐವಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಇದೀಗ ವರದಿ ಬಂದಿದ್ದು, ನಿಫಾ ವೈರಸ್ ದೃಢಪಟ್ಟಿದೆ. ನಿಫಾ ವೈರಸ್ ಖಚಿತವಾಗುತ್ತಿದ್ದಂತ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಬಾಲಕನನ್ನು ಇದೀಗ ಕೋಝಿಕೋಡ್ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಇದೀಗ ಬಾಲಕನ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಪೋಷಕರು ಸೇರಿದಂತೆ ಮೊದಲ ಸಂಪರ್ಕಿತರನ್ನು ಈಗಾಗಲೇ ಐಸೋಲೇಶನ್ ಮಾಡಲಾಗಿದೆ. ಇವರ ಮಾದರಿಗಳನ್ನು ಸಂಗ್ರಹಿಸಿ ಪುಣೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: HD Kumaraswamy: ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಹಾಸನಕ್ಕೆ ಎಚ್‌ಡಿಕೆ ಭೇಟಿ; ಮಳೆಯಿಂದ ಹಾನಿಯಾದ ಪ್ರದೇಶಗಳ ಪರಿಶೀಲನೆ

Continue Reading
Advertisement
News
ದೇಶ54 mins ago

‘ಐಎಎಸ್‌’ ಗಂಡನ ಬಿಟ್ಟು, ಗ್ಯಾಂಗ್‌ಸ್ಟರ್‌ ಜತೆ ಓಡಿಹೋಗಿದ್ದ ಮಹಿಳೆ ಬಾಳು ಅಂತ್ಯ; ಪತಿ ಮನೆಗೆ ವಾಪಸಾಗಿ ಆತ್ಮಹತ್ಯೆ!

Mumbai Indians
ಕ್ರಿಕೆಟ್57 mins ago

Mumbai Indians : ಮುಂದಿನ ಐಪಿಎಲ್​ಗೆ ಮುಂಬೈ ತೊರೆಯಲಿದ್ದಾರೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್​

Abhinav Bindra
ಕ್ರೀಡೆ1 hour ago

Abhinav Bindra : ಭಾರತದ ಶೂಟರ್ ಅಭಿನವ್ ಬಿಂದ್ರಾಗೆ ‘ಒಲಿಂಪಿಕ್​ ಆರ್ಡರ್’ ಗೌರವ​

BJP strongly condemns MLA Shivaram Hebbar statement about MP Vishweshwar Hegde Kageri says hariprakash konemane
ಕರ್ನಾಟಕ2 hours ago

Uttara Kannada News: ಸಂಸದ ಕಾಗೇರಿ ಬಗ್ಗೆ ಶಾಸಕ ಹೆಬ್ಬಾರ್‌ ಕೀಳುಮಟ್ಟದ ಹೇಳಿಕೆಗೆ ಬಿಜೆಪಿ ತೀವ್ರ ಖಂಡನೆ

Chaluvadi Narayanaswamy
ಕರ್ನಾಟಕ3 hours ago

Chaluvadi Narayanaswamy : ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್​​ನ ಪ್ರತಿಪಕ್ಷದ ನಾಯಕ

NEET
ಕರ್ನಾಟಕ3 hours ago

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

DK Shivakumar
ಕರ್ನಾಟಕ3 hours ago

DK Shivakumar: ರೈತನಿಗೆ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ಶೀಘ್ರ ವಸ್ತ್ರ ಸಂಹಿತೆ ಜಾರಿ ಎಂದ ಡಿಕೆಶಿ

Veerabaswanthreddy Mudnal
ಶ್ರದ್ಧಾಂಜಲಿ4 hours ago

Veerabaswanthreddy Mudnal: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅನಾರೋಗ್ಯದಿಂದ ನಿಧನ

Rahat Fateh Ali Khan
ವಿದೇಶ4 hours ago

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Valmiki Corporation Scam
ಕರ್ನಾಟಕ4 hours ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ3 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ4 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌