No Makeup For Kids: ನಿಮ್ಮ ಮಕ್ಕಳ ಮೇಕಪ್‌ ಕ್ರೇಜ್‌ಗೆ NO ಹೇಳಿ! - Vistara News

ಲೈಫ್‌ಸ್ಟೈಲ್

No Makeup For Kids: ನಿಮ್ಮ ಮಕ್ಕಳ ಮೇಕಪ್‌ ಕ್ರೇಜ್‌ಗೆ NO ಹೇಳಿ!

No Makeup For Kids: ನಿಮ್ಮ ಮಕ್ಕಳಿಗೆ ಮೇಕಪ್‌ ಅಂದ್ರೆ ಇಷ್ಟಾನಾ? ಕನ್ನಡಿ ಮುಂದೆ ನಿಂತುಕೊಂಡು ಮೇಕಪ್‌ ಹಚ್ಚಿಕೊಳ್ಳುವ ಅಭ್ಯಾಸವಿದೆಯಾ? ಅಪರೂಪಕ್ಕಾದಲ್ಲಿ ಓಕೆ. ಆದರೆ, ಸದಾ ಇದನ್ನೇ ರೂಢಿಸಿಕೊಂಡಲ್ಲಿ ತಕ್ಷಣ ನೀವು ಇದಕ್ಕೆ ನೋ ಹೇಳಿ ಎನ್ನುತ್ತಾರೆ ಸ್ಕಿನ್‌ ಸ್ಪೆಷಲಿಸ್ಟ್‌ಗಳು. ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ಸಿಂಪಲ್ಲಾಗಿ ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

No Makeup For Kids
ಚಿತ್ರಕೃಪೆ: ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಕ್ಕಳ ಮೇಕಪ್‌ಗೆ ನೋ ಹೇಳಿ! ಹೌದು, ನಿಮ್ಮ ಮಕ್ಕಳಿಗೆ ಮೇಕಪ್‌ ಅಂದ್ರೆ ತುಂಬಾ ಇಷ್ಟಾನಾ? (No Makeup For Kids) ಮಕ್ಕಳು ಸದಾ ನಿಮ್ಮ ಮೇಕಪ್‌ ಕಿಟ್‌ ತೆಗೆದುಕೊಂಡು ಹಚ್ಚಿಕೊಳ್ಳುತ್ತಾರೆಯೇ? ಲಿಪ್‌ಸ್ಟಿಕ್‌, ಐ ಲೈನರ್‌, ಬ್ಲಷರ್‌, ಐ ಮೇಕಪ್‌, ಫೌಂಡೇಶನ್‌, ಕನ್ಸಿಲರ್‌ ಹೀಗೆ ನಾನಾ ಬಗೆಯ ಮೇಕಪ್‌ ಪ್ರಾಡಕ್ಟ್‌ಗಳನ್ನು ಆಗಾಗ ಬಳಸುತ್ತಾರೆಯೇ? ಹಾಗಾದಲ್ಲಿ, ಖಂಡಿತ ಅವರ ಕೈಗಳಿಗೆ ಇವು ಸಿಗದಂತೆ ನೋಡಿಕೊಳ್ಳಿ. ಪದೇಪದೇ ಮಕ್ಕಳು ಮೇಕಪ್‌ ಮಾಡಿಕೊಳ್ಳುತ್ತಿದ್ದಲ್ಲಿ ಅಥವಾ ಬಳಸುತ್ತಿದ್ದಲ್ಲಿ ಮಕ್ಕಳ ಸೂಕ್ಷ್ಮ ತ್ವಚೆಯ ಆರೋಗ್ಯಕ್ಕೆ ಧಕ್ಕೆಯಾಗಬಹುದು, ಮಕ್ಕಳ ಸುಕೋಮಲ ಚರ್ಮ ಅತಿ ಚಿಕ್ಕ ವಯಸ್ಸಿನಲ್ಲಿಯೇ ಹಾಳಾಗಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್‌.

No Makeup For Kids

ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಯ್ತು ಕಿಡ್ಸ್ ಮೇಕಪ್‌ ಡೆಮೋ

ಇತ್ತೀಚೆಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಬ್ಯೂಟಿ ಪಾಠಕ್ಕೆ ಅಥವಾ ಡೆಮೋಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಮಕ್ಕಳ ಅತಿ ಕೋಮಲವಾದ ತ್ವಚೆಗೆ ಮೇಕಪ್‌ ಮಾಡುವುದು ಅಥವಾ ಅವರನ್ನು ನಾನಾ ಬಗೆಯ ಮೇಕಪ್‌ನಲ್ಲಿ ತೋರಿಸುವುದು ಹೆಚ್ಚಾಗಿದೆ. ಇದು ಕೆಲವು ಬ್ಯೂಟಿ ಟ್ರೈನಿಂಗ್‌ ಪಡೆಯುವಂತವರು ಇಲ್ಲವೇ ಬ್ಯೂಟಿ ಎಕ್ಸ್‌ಫರ್ಟ್‌ಗಳು ಪ್ರಮೋಷನ್‌ಗಾಗಿ ಮಾಡುತ್ತಾರೆ. ಆದರೆ, ಇದನ್ನು ನೋಡುವ ಮಕ್ಕಳು ಕೂಡ ಇವನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಇದು ತಪ್ಪು ಎನ್ನುತ್ತಾರೆ ಸ್ಕಿನ್‌ ಸ್ಪೆಷಲಿಸ್ಟ್‌ಗಳು. ಅವರ ಪ್ರಕಾರ, ಇಂತಹ ಪ್ರಯೋಗಗಳು ಮಕ್ಕಳ ತ್ವಚೆಯ ಮೇಲೆ ಮಾಡಬಾರದು. ಅಪರೂಪಕ್ಕೆ ಓಕೆ. ಆದರೆ, ಇದು ಪ್ರತಿದಿನದ ಚಟವಾಗಬಾರದು ಎಂದು ಸಲಹೆ ನೀಡುತ್ತಾರೆ.

ಮಕ್ಕಳ ಸುಕೋಮಲ ತ್ವಚೆಗೆ ಹಾನಿ

ಸ್ಕಿನ್‌ ಸ್ಪೆಷಲಿಸ್ಟ್ ಜಯಶ್ರೀ ಅವರ ಪ್ರಕಾರ, ಮಕ್ಕಳ ತ್ವಚೆ ತೀರಾ ಸೂಕ್ಷ್ಮವಾಗಿರುತ್ತದೆ. ಪದೇ ಪದೇ ಮೇಕಪ್‌ ಹಚ್ಚಿದಾಗ ಅವರ ಚರ್ಮ ದ ಆರೋಗ್ಯ ಹದಗೆಡುತ್ತದೆ. ತ್ವಚೆಯ ಮೇಲೆ ಕೆಮಿಕಲ್‌ ಸಹಿತವಾಗಿರುವ ಮೇಕಪ್‌ ಪ್ರಾಡಕ್ಟ್‌ಗಳು ಒರಟಾಗುವಂತೆ ಮಾಡುತ್ತವೆ. ಕೆಲವಂತೂ ಚರ್ಮದ ಒಳಗೆ ಇಳಿದು ರ‍್ಯಾಶಸ್‌, ಕೆಂಪಾಗುವುದು, ಗುಳ್ಳೆಗಳು ಮೂಡುವುದು ಆರಂಭವಾಗುತ್ತದೆ. ಹದಿ ಹರೆಯದ ವಯಸ್ಸಿಗಿಂತ ಮುಂಚೆಯೇ ತ್ವಚೆಯ ಸಮಸ್ಯೆ ಆರಂಭವಾಗುವ ಲಕ್ಷಣಗಳು ಕಂಡು ಬರುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Monsoon Fashion: ಮಾನ್ಸೂನ್‌ಗೆ ಮರಳಿದೆ ಕಾರ್ಪೋರೇಟ್‌ ಯುವತಿಯರ ಬ್ಲೇಜರ್‌ ಜಾಕೆಟ್‌ ಫ್ಯಾಷನ್‌

  • ದೊಡ್ಡವರಿಗಿಂತ ಅತಿ ಹೆಚ್ಚು ಬೇಗ ಮಕ್ಕಳಲ್ಲಿ ಮೇಕಪ್‌ನಲ್ಲಿರುವ ಟಾಕ್ಸಿಕ್‌ ಅಂಶವನ್ನು ಹೀರಿಕೊಳ್ಳುವುದು ಕಂಡು ಬರುತ್ತದೆ.
  • ಮೇಕಪ್‌ ಬಳಸಿದಾಗ ಮಕ್ಕಳ ತ್ವಚೆಯು ಅತಿ ಬೇಗ ಮಾಯಿಶ್ಚರೈಸರ್‌ ಅಂಶವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
  • ತೀರಾ ಬಳಸಬೇಕಾದ ಸಂದರ್ಭ ಎದುರಾದಲ್ಲಿ ಅರ್ಗಾನಿಕ್‌ ಬ್ಯೂಟಿ ಪ್ರಾಡಕ್ಟ್ ಬಳಸಿ.
  • ಸ್ಕಿನ್‌ ರ‍್ಯಾಶಸ್‌ ಆದಲ್ಲಿ ಯಾವುದೇ ಕಾರಣಕ್ಕೂ ಬಳಸಬೇಡಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips Kannada: ನಿಂತ ಮಳೆ ನೀರಿನಿಂದ ಈ 7 ರೋಗಗಳು ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?

Health Tips Kannada: ಮಳೆ ಬಂದಾಗೊಮ್ಮೆ ರಸ್ತೆಯ ಆಚೀಚೆಯಲ್ಲಿ ನೀರು ಹರಿದು, ಮಳೆ ನಿಂತ ಒಂದೆರಡು ತಾಸಿನೊಳಗೆ ಎಲ್ಲವೂ ಸರಿ ಹೋದರೆ ಅವೆಲ್ಲ ಸಮಸ್ಯೆಯೇ ಅಲ್ಲ. ಆದರೆ ದೊಡ್ಡ ಮಳೆ ನಿಂತು ಒಂದೆರಡು ದಿನಗಳಾದರೂ ನೀರು ಹರಿದು ಖಾಲಿಯಾಗದಿದ್ದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಏನು ಸಮಸ್ಯೆಗಳವು?

VISTARANEWS.COM


on

Health Tips Kannada
Koo

ಮಳೆಗಾಲದಲ್ಲಿ ಎಲ್ಲೆಂದರಲ್ಲಿ (Health Tips Kannada) ಮಳೆ ನೀರು ನಿಲ್ಲುವುದು ಹೊಸದೇನಲ್ಲ. ಅದರಲ್ಲೂ ನಗರಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಕೆಟ್ಟಿದ್ದರೆ ಅಥವಾ ನೀರು ಹರಿಯುವ ದಾರಿ ಕಟ್ಟಿದ್ದರೆ ಊರೆಲ್ಲ ನೀರು ತುಂಬಿರುವ ದೃಶ್ಯಗಳೇ ಕಾಣುತ್ತವೆ. ಮಳೆ ಬಂದಾಗೊಮ್ಮೆ ರಸ್ತೆಯ ಆಚೀಚೆಯಲ್ಲಿ ನೀರು ಹರಿದು, ಮಳೆ ನಿಂತ ಒಂದೆರಡು ತಾಸಿನೊಳಗೆ ಎಲ್ಲವೂ ಸರಿ ಹೋದರೆ- ಅವೆಲ್ಲ ಸಮಸ್ಯೆಯೇ ಅಲ್ಲ. ಆದರೆ ದೊಡ್ಡ ಮಳೆ ನಿಂತು ಒಂದೆರಡು ದಿನಗಳಾದರೂ ನೀರು ಹರಿದು ಖಾಲಿಯಾಗದೆ ನಿಂತರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಎಂಥಾ ಆರೋಗ್ಯ ಸಮಸ್ಯೆಗಳನ್ನು ತರುತ್ತವೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಲೆಪ್ಟೊಸ್ಪಿರೋಸಿಸ್

ಇದೊಂದು ಬ್ಯಾಕ್ಟೀರಿಯ ಸೋಂಕು. ಈ ಸೋಂಕನ್ನು ಹೊತ್ತ ಪ್ರಾಣಿಗಳ ಮೂತ್ರ ಸೇರಿದ ನೀರಿನ ಮೂಲಕ ಇವು ಮಾನವರಿಗೆ ಹರಡುತ್ತವೆ. ಅದರಲ್ಲೂ ಇಲಿ, ಹೆಗ್ಗಣಗಳಿಂದ ಹರಡುವುದು ಹೆಚ್ಚು. ಮಳೆನೀರು ಇಂಥ ಸೋಂಕುಗಳಿಗೆ ಮೂಲವಾಗಬಲ್ಲದು. ಕೈಕಾಲುಗಳ ಮೇಲಿನ ಗಾಯಗಳು ಮಳೆ ನೀರು ಅದ್ದಿದಾಗ ಈ ಬ್ಯಾಕ್ಟೀರಿಯಗಳು ದೇಹದೊಳಗೆ ಪ್ರವೇಶಿಸುತ್ತವೆ. ಈ ಸೋಂಕಿನ ಲಕ್ಷಣಗಳ ಬಗ್ಗೆ ಹೇಳುವುದಾದರೆ, ತೀವ್ರ ಜ್ವರ, ನಡುಕ, ಅತೀವ ತಲೆನೋವು, ಸ್ನಾಯುಗಳಲ್ಲಿ ನೋವು, ಕಣ್ಣು ಕೆಂಪಾಗುವುದು ಮತ್ತು ಕಾಮಾಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸೋಂಕು ಮುಂದುವರಿದು ತೀವ್ರವಾದಲ್ಲಿ, ಕಿಡ್ನಿ, ಯಕೃತ್‌, ಪುಪ್ಪುಸಗಳಿಗೆ ಹಾನಿ ಮಾಡುತ್ತದೆ. ಹಾಗಾಗಿ ನಿಂತ ಮಳೆನೀರು ಸೋಕದಂತೆ ಎಚ್ಚರ ವಹಿಸಿ.

Malaria

ಮಲೇರಿಯಾ

ಅನಾಫಿಲಿಸ್‌ ಹೆಣ್ಣು ಸೊಳ್ಳೆಯು ಕಚ್ಚಿದಾಗ ದೇಹ ಸೇರುವ ಪ್ಮಾಸ್ಮೋಡಿಯಂ ಎಂಬ ಏಕಕೋಶ ಜೀವಿಯಿಂದ ಬರುವ ಕಾಯಿಲೆಯಿದು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಇದು ಪ್ರಾಣಘಾತುಕವೂ ಆಗಬಲ್ಲದು. ಮುನ್ನೆಚ್ಚರಿಕೆಯಿಂದ ಇದನ್ನು ತಡೆಯುವುದು ಸಾಧ್ಯವಿದ್ದರೂ, ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಲಕ್ಷಗಟ್ಟಲೆ ಜೀವಗಳು ಈ ರೋಗಕ್ಕೆ ಬಲಿಯಾಗುತ್ತಿವೆ. ವಿಪರೀತ ಜ್ವರ, ಮೈಕೈ ನೋವು, ಚಳಿಯಾಗಿ ನಡುಕ, ಜ್ವರ ಕಡಿಮೆಯಾದರೆ ಸಿಕ್ಕಾಪಟ್ಟೆ ಬೆವರುವುದು, ತಲೆನೋವು, ವಾಂತಿ, ಡಯರಿಯದಂಥ ಚಿಹ್ನೆಗಳು ಕಂಡುಬರುತ್ತವೆ. ಈ ಯಾವುದೇ ಲಕ್ಷಣಗಳು ಕಂಡರೂ ವೈದ್ಯರೊಂದಿಗೆ ಸಮಾಲೋಚನೆ ಅಗತ್ಯ.

ಡೆಂಗ್ಯೂ

ಏಡಿಸ್‌ ಹೆಣ್ಣು ಸೊಳ್ಳೆಯಿಂದ ಹರಡುವ ವೈರಸ್‌ ಸೋಂಕಿದು. ಸೊಳ್ಳೆ ಕಚ್ಚಿದ ನಾಲ್ಕಾರು ದಿನಗಳ ನಂತರ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಫ್ಲೂ ಮಾದರಿಯಲ್ಲಿ ಇರುವ ಈ ಕಾಯಿಲೆಯಲ್ಲಿ ಕೆಲವೊಮ್ಮೆ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳು ಕುಸಿದು ಜೀವಕ್ಕೆ ಎರವಾಗುವ ಸಾಧ್ಯತೆಯಿದೆ. ಜ್ವರ, ತೀವ್ರವಾದ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಕೀಲು ಮತ್ತು ಸ್ನಾಯುಗಳಲ್ಲಿ ನೋವು, ಮೈಮೇಲೆ ದದ್ದುಗಳು, ವಾಂತಿ- ಜ್ವರದೊಂದಿಗೆ ಈ ಪೈಕಿ ಯಾವುದೇ ಎರಡು ಲಕ್ಷಣಗಳನ್ನು ಕಂಡರೂ ವೈದ್ಯರನ್ನು ಸಂಪರ್ಕಿಸಬೇಕು.

Chikungunya

ಚಿಕೂನ್‌ಗುನ್ಯಾ

ಸೊಳ್ಳೆ ಕಚ್ಚುವುದರಿಂದ ಹರಡುವ ಚಿಕೂನ್‌ಗುನ್ಯಾ ವೈರಸ್‌ನಿಂದಲೇ ಬರುವ ರೋಗವಿದು. ಜ್ವರದೊಂದಿಗೆ ತೀವ್ರವಾದ ಕೀಲುನೋವು ಇದರ ಪ್ರಮುಖ ಲಕ್ಷಣಗಳು. ಸೋಂಕಿತ ಸೊಳ್ಳೆ ಕಚ್ಚಿದ 4-8 ದಿನಗಳ ಅಂತರದಲ್ಲಿ ರೋಗಚಿಹ್ನೆಗಳು ಕಂಡುಬರುತ್ತವೆ. ಈ ಸೊಳ್ಳೆಗಳು ರಾತ್ರಿಯಲ್ಲಿ ಮಾತ್ರವೇ ಅಲ್ಲ, ಹಗಲಿನಲ್ಲೂ ಕಚ್ಚುತ್ತವೆ. ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಮುಖ್ಯವಾಗಿ ಈ ಕಾಯಿಲೆ ಸದ್ದು ಮಾಡುತ್ತಿದೆ.

ಟೈಫಾಯ್ಡ್

ಸಾಲ್ಮೊನೆಲ್ಲಾ ಟೈಫಿ ಎಂಬ ರೋಗಾಣುವಿನಿಂದ ಬರುವ ಇದು ಮಾರಣಾಂತಿಕ ರೋಗ. ಕಲುಷಿತವಾದ ಆಹಾರ ಮತ್ತು ನೀರಿನಿಂದಲೇ ಇದು ದೇಹ ಸೇರುತ್ತದೆ. ದೀರ್ಘ ಕಾಲದವರೆಗೆ ಜ್ವರ, ಸುಸ್ತು, ತಲೆನೋವು, ವಾಂತಿ, ಕಿಬ್ಬೊಟ್ಟೆಯಲ್ಲಿ ನೋವು, ಡಯರಿಯಾದಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ವೈದ್ಯರ ಶುಶ್ರೂಷೆಯ ಜೊತೆಗೆ ಸರಿಯಾದ ಆಹಾರವನ್ನೂ ತೆಗೆದುಕೊಳ್ಳಬೇಕು. ಆಹಾರದ ಸ್ವಚ್ಛತೆ ಕಡೆಗೆ ಗಮನ ನೀಡಲೇಬೇಕು. ಇದಕ್ಕೆ ಲಸಿಕೆ ಲಭ್ಯವಿದೆ.

ಕಾಲರಾ

ವಿಬ್ರಿಯೊ ಕಾಲೆರೆ ಎಂಬ ಬ್ಯಾಕ್ಟೀರಿಯಾದಿಂದ ಕಲುಷಿತ ನೀರು ಮತ್ತು ಆಹಾರದ ಮೂಲಕ ಇದು ಮಾನವರಿಗೆ ಹರಡುತ್ತದೆ. ತೀವ್ರವಾದ ಅತಿಸಾರ ಭೇದಿ ಇದರ ಪ್ರಮುಖ ಲಕ್ಷಣ. ಉಳಿದಂತೆ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ ಈ ರೋಗ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಕಟ್ಟಿಟ್ಟಿದ್ದು. ಕಾಲರಾ, ಟೈಫಾಯ್ಡ್‌ನಂಥ ರೋಗಗಳಿಗೆ ನೀರನ್ನು ಕುದಿಸಿಯೇ ಕುಡಿಯುವುದು ಉತ್ತಮ ಉಪಾಯ.

ಇದನ್ನೂ ಓದಿ: Mouthwash Benefits: ಮೌತ್‌ವಾಷ್‌ ದಿನವೂ ಬಳಸಬಹುದೇ? ಏನು ಉಪಯೋಗ ಇದರಿಂದ?

ಹೆಪಟೈಟಿಸ್‌ ಎ, ಇ

ಕಲುಷಿತ ನೀರು ಮತ್ತು ಆಹಾರದಿಂದಲೇ ಬರುವ ವೈರಲ್‌ ಸೋಂಕಿದು. ಇವೆರಡೂ ವೈರಸ್‌ಗಳು ಪಿತ್ತಕೋಶಕ್ಕೆ ಹಾನಿ ಮಾಡುತ್ತವೆ. ಜ್ವರ, ಆಯಾಸ, ಹಸಿವಿಲ್ಲದಿರುವುದು, ಹೊಟ್ಟೆ ತೊಳೆಸುವುದು, ವಾಂತಿ, ಕಿಬ್ಬೊಟ್ಟೆಯಲ್ಲಿ ನೋವು ಮತ್ತು ಕಾಮಾಲೆಯ ಲಕ್ಷಣಗಳು ಇದರಲ್ಲಿ ಕಾಣಿಸಿಕೊಳ್ಳುತ್ತವೆ. ನೀರು, ಆಹಾರ ಶುದ್ಧವಾಗಿ ಇರುವಂತೆ ನೋಡಿಕೊಳ್ಳಬೇಕು. ಹೆಪಟೈಟಿಸ್‌ ಎ ಸೋಂಕಿಗೆ ಲಸಿಕೆ ಲಭ್ಯವಿದೆ.

Continue Reading

ಫ್ಯಾಷನ್

Sandalwood Star Fashion: ಮಾನ್ಸೂನ್‌ನಲ್ಲಿ ಮಾಲಾಶ್ರೀ ಮಗಳ ಗ್ಲಾಮರಸ್‌ ಫ್ಯಾಷನ್‌!

Snadalwood Star Fashion: ಮಾಲಾಶ್ರೀ ಮಗಳಾದ ಆರಾಧನಾ ಮಾನ್ಸೂನ್‌ ಸೀಸನ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಲೇಯರ್‌ ಲುಕ್‌ ಜೊತೆಜೊತೆಗೆ ಹಾಟ್‌ ಆಗಿಯೂ ಕಾಣಿಸಿಕೊಂಡಿರುವ ಅವರ ಈ ಸ್ಟೈಲಿಂಗ್‌ನ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Sandalwood Star Fashion
ಚಿತ್ರಗಳು: ಆರಾಧನಾ, ಸ್ಯಾಂಡಲ್‌ವುಡ್‌ ನಟಿ, ಫೋಟೋಗ್ರಾಫಿ: ವೇಣು ಕ್ರಿಶ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ ನಟಿ ಆರಾಧನಾ (Sandalwood Star Fashion) ಮಾನ್ಸೂನ್‌ ಸೀಸನ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಇನ್ನೂ ಮಾಲಾಶ್ರೀ ಮಗಳೆಂದೇ ಟ್ಯಾಗ್‌ಲೈನ್‌ ಹೊಂದಿರುವ ನಟಿ ಆರಾಧನಾ ಮಾನ್ಸೂನ್‌ ಸೀಸನ್‌ನಲ್ಲಿ ಹೈ ಸ್ಟ್ರೀಟ್‌ ಫ್ಯಾಷನ್‌ ಲುಕ್‌ಗೆ ಸೇರುವ ಲೆದರ್‌ ಲೇಯರ್‌ ಜಾಕೆಟ್‌ ಸಹಿತ ಹಾಗೂ ರಹಿತವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಮಾನ್ಸೂನ್‌ ಲುಕ್‌ನ ಸ್ಟೈಲಿಂಗ್‌ನ ಬಗ್ಗೆ ಫ್ಯಾಷನ್‌ ವಿಮರ್ಶಕರು ರಿವ್ಯೂ ನೀಡಿರುವುದೇನು? ಇಲ್ಲಿದೆ ಡಿಟೇಲ್ಸ್.

Sandalwood Star Fashion

ಬದಲಾಗುತ್ತಿರುವ ಆರಾಧನಾ ಸ್ಟೈಲ್‌ ಸ್ಟೇಟ್‌ಮೆಂಟ್ಸ್

“ಕಳೆದ ವಾರವಷ್ಟೇ ಬಾಲಿವುಡ್‌ ಖ್ಯಾತ ಫೋಟೋಗ್ರಾಫರ್‌ ಡಬ್ಬೂ ರತ್ನಾನಿ ಜೊತೆಯಲ್ಲಿ ಉದ್ಯಾನನಗರಿಯಲ್ಲಿ ಆಭರಣ ಪ್ರದರ್ಶನದ ಜಾಹೀರಾತಿಗಾಗಿ ಅಮ್ಮನೊಂದಿಗೆ ಅತ್ಯುತ್ಸಾಹದಿಂದ ಆರಾಧನಾ ಫೋಟೋ ಶೂಟ್‌ ಮಾಡಿಸಿಕೊಂಡಿದ್ದರು. ಆದಾದ ನಂತರ, ಇದೀಗ ಮತ್ತೊಮ್ಮೆ ಸ್ಥಳೀಯ ಫೋಟೋಶೂಟ್‌ನಲ್ಲಿ ಭಾಗವಹಿಸಿ, ಥೇಟ್‌ ಬಾಲಿವುಡ್‌ ನಟಿಯಂತೆ ಕಾಣಿಸಿಕೊಂಡಿದ್ದಾರೆ. ಇದು ಅವರ ಬದಲಾಗುತ್ತಿರುವ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳನ್ನು ಹೈಲೈಟ್‌ ಮಾಡುತ್ತಿದೆ. ಇದೊಂದು ಉತ್ತಮ ಬೆಳವಣಿಗೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

Sandalwood Star Fashion

ಮಾನ್ಸೂನ್‌ನಲ್ಲಿ ಆರಾಧನಾ ಗ್ಲಾಮರಸ್‌ ಲುಕ್‌

ಇನ್ನು, ಮಾನ್ಸೂನ್‌ನಲ್ಲಿ ಬಹುತೇಕ ನಟಿಯರು ಲೇಯರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಇದಕ್ಕೆ ಪೂರಕ ಎಂಬಂತೆ, ಆರಾಧನಾ ಕೂಡ ತಮ್ಮದೇ ಆದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಇದಕ್ಕಾಗಿ ವಿಂಟೇಜ್‌ ಲೆದರ್‌ ಜಾಕೆಟ್‌, ಕ್ರಾಪ್‌ ಟ್ಯೂಬ್‌ ಟಾಪ್‌ ಹಾಗೂ ಮಿನಿ ಸ್ಕರ್ಟ್ ಧರಿಸಿದ್ದಾರೆ. ಇವರ ಈ ಲುಕ್‌ಗೆ ಬ್ಲ್ಯಾಕ್‌ ಸನ್‌ಗ್ಲಾಸ್‌ ಹಾಗೂ ಬೂಟ್ಸ್ ಸಾಥ್‌ ನೀಡಿದೆ. ಅವರು ಧರಿಸಿರುವ ಲೇಯರ್‌ ನೆಕ್‌ ಚೈನ್‌, ಈ ಜನರೇಷನ್‌ ಹುಡುಗಿಯರ ಜ್ಯುವೆಲರಿ ಕ್ರೇಝ್‌ಗೆ ಕನ್ನಡಿ ಹಿಡಿದಿದೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರಾಕಿ.

Sandalwood Star Fashion

ಗ್ಲಾಮರಸ್‌ ಲುಕ್‌ಗಾಗಿ ಲೆದರ್‌ ಸ್ಕರ್ಟ್

ಆದರೆ, ಎಲ್ಲಾ ಓಕೆ. ಆದರೆ ಮಾನ್ಸೂನ್‌ನಲ್ಲಿ ಲೆದರ್ ಜಾಕೆಟ್‌ ಪ್ರಿಫರ್‌ ಮಾಡಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ ಫ್ಯಾಷನ್‌ ವಿಮರ್ಶಕರು. ಯಾಕೆಂದರೆ, ಈ ಸೀಸನ್‌ನಲ್ಲಿ ವಾಟರ್‌ ಪ್ರೂಫ್‌ ಅಥವಾ ಇನ್ನಿತರೇ ಜಾಕೆಟ್‌ಗಳು ಚಾಲ್ತಿಯಲ್ಲಿವೆ. ಆದರೆ, ಲೆದರ್‌ನವು ಇನ್ನೂ ಎಂಟ್ರಿ ನೀಡಿಲ್ಲ! ಸದ್ಯಕ್ಕೆ ಇವು ಇನ್ನೂ ಚಳಿಗಾಲದ ಫ್ಯಾಷನ್‌ ಕೆಗಟರಿಯಲ್ಲಿವೆ. ಬಹುಶಃ ಗ್ಲಾಮರಸ್‌ ಲುಕ್‌ಗಾಗಿ ಇವನ್ನು ಬಳಸಿರಬಹುದು ಎಂದಿದ್ದಾರೆ ಫ್ಯಾಷನ್‌ ಎಕ್ಸ್‌ಫರ್ಟ್ಸ್.

ಇದನ್ನೂ ಓದಿ: Floral Dupatta Recreation: ಅಂಬಾನಿ ಸೊಸೆಯ ದುಂಡು ಮಲ್ಲಿಗೆ ದುಪಟ್ಟಾ ಕೇವಲ 2 ಸಾವಿರ ರೂ.ಯಲ್ಲಿ ಮರು ಸೃಷ್ಟಿ!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಆರೋಗ್ಯ

Brain Eating Amoeba: ಮೆದುಳು ತಿನ್ನುವ ಅಮೀಬಾದಿಂದ ನಮಗೂ ಅಪಾಯ ಇದೆಯೆ?

Brain Eating Amoeba: ಮೆದುಳು ಮೆಲ್ಲುವ ಅಮೀಬಾ ಎಂದೇ ಕುಖ್ಯಾತವಾಗಿರುವ ಏಕಕೋಶ ಜೀವಿಯಿಂದ ಬರುವ ಸೋಂಕಿಗೆ ಈವರೆಗೆ ಹಲವರು ಬಲಿಯಾಗಿದ್ದಾರೆ. ನೀರಿನಲ್ಲಿ ಕಂಡುಬರುವ ಇವು ಮೂಗು ಪ್ರವೇಶಿಸಿದಾಗ ಬರುವಂಥ ಸೋಂಕಿದು. ಈ ಅಪಾಯಕಾರಿ ಅಮೀಬಾದಿಂದ ಪಾರಾಗುವುದು ಹೇಗೆ? ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

VISTARANEWS.COM


on

Amoeba
Koo

ಭಾರತದಲ್ಲಿ ಈವರೆಗೆ (Brain Eating Amoeba) ಅಷ್ಟಾಗಿ ಸುದ್ದಿ ಮಾಡದ ʻಮೆದುಳು ಮೆಲ್ಲುವ ಅಮೀಬಾʼ ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಸುದ್ದಿ ಮಾಡುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ಈ ಅಮೀಬಾಕ್ಕೆ ಹಲವರು ಬಲಿಯಾಗಿದ್ದಾರೆ. ನೀರಿನಲ್ಲಿರುವ ಇದು ಮೂಗಿನ ಮೂಲಕ ದೇಹ ಪ್ರವೇಶಿಸಿದರೆ 97ರಷ್ಟು ಪ್ರತಿಶತ ಉಳಿಯುವ ಸಾಧ್ಯತೆಯಿಲ್ಲ ಎನ್ನುವುದು ತೀವ್ರ ಕಳವಳದ ಸಂಗತಿ. ಇಂಥ ಅಪಾಯಕಾರಿ ಸೂಕ್ಷ್ಮಾಣುವಿನ ಬಗ್ಗೆ, ಅದು ಹರಡುವ ರೀತಿ ಮತ್ತು ಪ್ರತಿಬಂಧಕ ಕ್ರಮಗಳ ಬಗ್ಗೆ ಇಲ್ಲಿದೆ ವಿವರಗಳು. ಅಮೀಬಿಕ್‌ ಮೆನಿಂಜೈಟಿಸ್ ಎಂದೂ ಕರೆಯಲಾಗುವ ಈ ಸ್ಥಿತಿಗೆ ಮುಖ್ಯ ಕಾರಣ ನಗ್ಲೇರಿಯ ಫೌಲೇರಿ ಎಂಬ ಏಕಕೋಶ ಜೀವಿ. ಕಲುಷಿತ ನೀರಿನಲ್ಲಿ ವಾಸಿಸುವ ಈ ಸೂಕ್ಷ್ಮಾಣು ನದಿ, ಹೊಳೆ, ಕೊಳ, ಬಾವಿ, ಕೆರೆಯಂಥ ಯಾವುದೇ ರೀತಿಯ ನೀರಿನಲ್ಲಿ ಇರಬಹುದು. ಒದ್ದೆ ಮಣ್ಣು ಮತ್ತು ನೀರಿನ ಪೈಪುಗಳಲ್ಲಿದ್ದರೂ ಅಚ್ಚರಿಯಿಲ್ಲ. ಇದಕ್ಕೆ ಬದುಕುವುದಕ್ಕೆ ಯಾವುದೇ ನಿಶ್ಚಿತವಾದ ಆಶ್ರಯ ಬೇಕಿಲ್ಲ, ವಾತಾವರಣದಲ್ಲಿ ಹಲವೆಡೆ ಕಾಣಬಹುದು.

Brain Eating Amoeba

ಯಾವಾಗ ಇದು ಚುರುಕಾಗುತ್ತದೆ?

ವಾತಾವರಣ ಬೆಚ್ಚಗಿದ್ದಾಗ, ನೀರು ಸಹ ಬೆಚ್ಚಗಿದ್ದಾಗ ಈ ಅಮೀಬಾ ಚುರುಕಾಗುತ್ತವೆ. ಇವು ಸಾಮಾನ್ಯವಾಗಿ ನದೀತಳದ ಮಣ್ಣಿನಲ್ಲಿ ಹುದುಗಿರುತ್ತವೆ. ಡೈವಿಂಗ್‌, ಈಜು ಅಥವಾ ನೀರನ್ನು ಕದಡುವ ಯಾವುದಾದರೂ ಚಟುವಟಿಕೆಯಿಂದ ಇವು ಮೇಲ್ಮೈಗೆ ತಲುಪುತ್ತವೆ. ಅಲ್ಲಿಂದ ಮೂಗಿನ ಮೂಲಕ ದೇಹ ಪ್ರವೇಶಿಸಿ, ಮೆದುಳಿಗೆ ಲಗ್ಗೆ ಇಡುತ್ತವೆ. ಬಿಸಿ ನೀರಿನಲ್ಲೂ ಇವು ಇರಬಲ್ಲವು. ಆದರೆ ಅಂಥ ಕಲುಷಿತ ನೀರನ್ನು ನುಂಗಿದರೆ ಈ ಸಮಸ್ಯೆ ಆಗಲಿಕ್ಕಿಲ್ಲ, ಮೂಗಿಗೆ ಹೋದರೆ ಮಾತ್ರ ಉಳಿಗಾಲವಿಲ್ಲ. ವಯಸ್ಕರಿಗಿಂತಲೂ ಮಕ್ಕಳಿಗೆ ಈ ಸೋಂಕು ಬಲುಬೇಗ ತಾಗುತ್ತಿದೆ. ಹಾಗೆನ್ನುತ್ತಿದ್ದಂತೆ ನೀರು ಮುಟ್ಟುವುದಿಲ್ಲ ಎಂದು ಶಪಥ ಮಾಡುವ ಅಗತ್ಯವಿಲ್ಲ. ಕಾರಣ, ಒಂದು ದಶಲಕ್ಷ ಮಂದಿಯಲ್ಲಿ ಒಬ್ಬರಿಗೆ ಈ ಸೋಂಕು ಬರುತ್ತದೆನ್ನುವಷ್ಟು ಅಪರೂಪವಿದು.

ಲಕ್ಷಣಗಳೇನು?

ತೀವ್ರ ಜ್ವರ, ಅತೀವ ತಲೆನೋವು, ವಾಂತಿ ಅಥವಾ ಹೊಟ್ಟೆ ತೊಳೆಸುವುದು, ನಡುಕ, ಕುತ್ತಿಗೆ ಗಡುಸಾಗುವುದು, ಬೆಳಕು ನೋಡಲು ಕಷ್ಟ, ಗೊಂದಲ, ಕೋಮಾ… ಒಮ್ಮೆ ಈ ಅಮೀಬಾ ಮೂಗು ಪ್ರವೇಶಿಸಿದ ಮೇಲೆ, ಲಕ್ಷಣಗಳು ಕಾಣುವುದಕ್ಕೆ 2-15 ದಿನಗಳವರೆಗೆ ತೆಗೆದುಕೊಳ್ಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿದ ದಾಖಲೆಯೂ ಇಲ್ಲ. ಇದು ಮೂಗಿನ ಮೂಲಕವೇ ಪ್ರವೇಶಿಸಬೇಕು. ಒಮ್ಮೆ ಲಕ್ಷಣಗಳು ಕಾಣಿಸಿದ ಮೇಲೆ 7-10 ದಿನಗಳ ಒಳಗೆ ಸೋಂಕಿತರು ಮರಣಿಸಿದ ಪ್ರಕರಣಗಳೇ ಹೆಚ್ಚು. ಇದರಿಂದ ಚೇತರಿಸಿಕೊಂಡವರು ಅತಿ ವಿರಳ.

ಇದನ್ನೂ ಓದಿ: Kidney Stones: ಈ ಅಭ್ಯಾಸ ನಿಮಗಿದ್ದರೆ ಕಿಡ್ನಿಯಲ್ಲಿ ಕಲ್ಲಾಗುವ ಅಪಾಯ ಹೆಚ್ಚು!

ತಡೆಗಟ್ಟಬಹುದೇ?

ಒಮ್ಮೆ ಸೋಂಕು ಬಂದ ಮೇಲೆ ಹೆಚ್ಚೇನೂ ಮಾಡಲಾಗದು. ಇದಕ್ಕೆ ಲಸಿಕೆಯೂ ಲಭ್ಯವಿಲ್ಲ. ಆದರೆ ಬಾರದಂತೆ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು-

  • ನೀರಿನಲ್ಲಿ ಈಜುವಾಗ ಎಚ್ಚರಿಕೆ ವಹಿಸಿ. ಈಜುಕೊಳಕ್ಕೆ ಹೋಗುವುದಾದರೆ, ಸರಿಯಾಗಿ ಕ್ಲೋರಿನ್‌ ಹಾಕಿ ನೀರನ್ನು ಸೋಂಕು ರಹಿತ ಮಾಡಿದ ಕೊಳಗಳನ್ನೇ ಉಪಯೋಗಿಸಿ. ನೀರು ಬೆಚ್ಚಗಿದ್ದಷ್ಟೂ ಈ ರೋಗಾಣು ಸಕ್ರಿಯವಾಗಿರುತ್ತದೆ.
  • ಕೆರೆ ನದಿಗಳಲ್ಲಿ ಈಜುವಾಗ ತಳಭಾಗದ ಮಣ್ಣು ಕದಡದಿರಿ. ರಾಡಿ ನೀರು ಮೇಲೆ ಬಂದಂತೆ ಇಂಥ ಅಪಾಯಗಳು ಹೆಚ್ಚುತ್ತವೆ.
  • ನೈಸರ್ಗಿಕ ನೀರಿನ ತಾಣಗಳಲ್ಲಿ ಮೇಲಿಂದ ಡೈವ್‌ ಮಾಡಬೇಡಿ. ಇದರಿಂದಲೂ ಸಮಸ್ಯೆಗಳು ಕಾಡಬಹುದು.
  • ನೇತಿಯಂಥ ಕ್ರಿಯೆಗಳನ್ನು ಮಾಡುವಾಗ ಮಾಮೂಲಿ ನಲ್ಲಿ ನೀರನ್ನು ಮೂಗಿಗೆ ಹಾಕದಿರಿ. ಇದಕ್ಕಾಗಿ ಶುದ್ಧೀಕರಿಸಿದ ಸ್ವಚ್ಛ ನೀರನ್ನೇ ಬಳಸಿ. ಕುದಿಸಿ ಆರಿಸಿದ ನೀರು ಬಳಸುವುದು ಕ್ಷೇಮ.
Continue Reading

ಪ್ರವಾಸ

Khajjiar Tour: ಖಜ್ಜಿಯಾರ್! ಇದು ಹಿಮಾಲಯದ ತಪ್ಪಲಿನಲ್ಲಿರುವ ಮಿನಿ ಸ್ವಿಟ್ಜರ್ಲೆಂಡ್!

ಏಕಾಂಗಿಯಾಗಿ ಪ್ರವಾಸ ಮಾಡಲು ಬಯಸುವವರು ಖಜ್ಜಿಯಾರ್‌ಗೆ (Khajjiar Tour) ಭೇಟಿ ನೀಡಬಹುದು. ಆದರೆ ಪ್ರವಾಸಕ್ಕಾಗಿ ಎಚ್ಚರಿಕೆಯ ಯೋಜನೆಗಳನ್ನು ಮಾಡುವ ಮೂಲಕ, ಸ್ಥಳೀಯ ಅಭ್ಯಾಸಗಳಿಂದ ಕಲಿಯುವ ಮೂಲಕ ಮತ್ತು ಆ ಸ್ಥಳದ ಸಂಸ್ಕೃತಿಯೊಂದಿಗೆ ಬೆರೆಯುವ ಮೂಲಕ ಪ್ರವಾಸವನ್ನು ಸ್ಮರಣೀಯಗೊಳಿಸಬಹುದು. ಇಲ್ಲಿನ ಬೆಟ್ಟಗಳ ಮಾಂತ್ರಿಕ ಸೌಂದರ್ಯ, ಏಕಾಂತ ಅನುಭವ ಕೊಡುವ ಸುರಕ್ಷಿತ ಮತ್ತು ಆನಂದದಾಯಕ ತಾಣಗಳಲ್ಲಿ ಸುತ್ತಾಡಲು ಮರೆಯದಿರಿ.

VISTARANEWS.COM


on

By

Khajjiar Tour
Koo

ಈ ಗಿರಿಧಾಮವು ಹಸಿರು ಹುಲ್ಲುಗಾವಲುಗಳು, ದಟ್ಟವಾದ ಪೈನ್ ಕಾಡುಗಳು ಮತ್ತು ಶಾಂತವಾದ ಸರೋವರದಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಏಕಾಂಗಿಯಾಗಿ ಪ್ರಕೃತಿಯ ಮಡಿಲಲ್ಲಿ ಅನ್ವೇಷಿಸಲು ಬಯಸುವ ಪ್ರವಾಸ ಪ್ರಿಯರಿಗೆ ಇದು ಆಯ್ಕೆ ಮಾಡಿಕೊಳ್ಳಬಹುದಾದ ಸೂಕ್ತವಾದ ತಾಣವಾಗಿದೆ.

ಹಿಮಾಲಯದ ತಪ್ಪಲಿನಲ್ಲಿರುವ ಖಜ್ಜಿಯಾರ್ (Khajjiar Tour) ಹಿಮಾಚಲ ಪ್ರದೇಶದಲ್ಲಿರುವ (himachal pradesh  hill station) ಅತ್ಯಾಕರ್ಷಕ ಗಿರಿಧಾಮವಾಗಿದೆ. ಇದನ್ನು ಸಾಮಾನ್ಯವಾಗಿ “ಮಿನಿ ಸ್ವಿಟ್ಜರ್ಲೆಂಡ್ ಆಫ್ ಇಂಡಿಯಾ” (Mini Switzerland of India) ಎಂದು ಕರೆಯಲಾಗುತ್ತದೆ. ನೆಮ್ಮದಿ ಮತ್ತು ಸಾಹಸವನ್ನು ಬಯಸುವ ಪ್ರವಾಸಿಗಳಿಗೆ ಇದು ಸೂಕ್ತ ತಾಣವಾಗಿದೆ.

ಖಜ್ಜಿಯಾರ್‌ಗೆ ಒಂಟಿಯಾಗಿ ಪ್ರವಾಸ ಮಾಡಬೇಕು ಎಂದು ಬಯಸುವವರು ಮೊದಲು ಸರಿಯಾದ ಸಿದ್ಧತೆ, ಸ್ಥಳದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಇದರಿಂದ ಪ್ರವಾಸವನ್ನು ಸುರಕ್ಷಿತವಾಗಿ ಮತ್ತು ಹೆಚ್ಚು ಆನಂದದಾಯಕವಾಗಿ ಕಳೆಯಬಹುದು.

Khajjiar Tour
Khajjiar Tour


ಸರಿಯಾದ ಯೋಜನೆ ಹಾಕಿಕೊಳ್ಳಿ

ಖಜ್ಜಿಯಾರ್‌ಗೆ ಪ್ರವಾಸ ಹೊರಡುವ ಮೊದಲು ಪ್ರವಾಸವನ್ನು ಹೆಚ್ಚು ಆನಂದದಾಯಕವಾಗಿಸಲು ತಯಾರಿಯನ್ನು ಮುಂಚಿತವಾಗಿಯೇ ಮಾಡಿಕೊಳ್ಳಬೇಕು. ಅದರಲ್ಲಿ ಮುಖ್ಯವಾಗಿ ಋತುವಿನ ಆಯ್ಕೆ. ಖಜ್ಜಿಯಾರ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಾರ್ಚ್‌ನಿಂದ ಜೂನ್‌ವರೆಗಿನ ಬೇಸಿಗೆಕಾಲ ಅಥವಾ ಸೆಪ್ಟೆಂಬರ್ ಮತ್ತು ನವೆಂಬರ್ ನಡುವಿನ ಶರತ್ಕಾಲದ ಆರಂಭ ಹೆಚ್ಚು ಸೂಕ್ತವಾಗಿದೆ. ಈ ಸಂದರ್ಭದಲ್ಲಿ ಇಲ್ಲಿ ಹೆಚ್ಚು ಬಿಸಿಯಾಗಿರುವುದಿಲ್ಲ ಅಥವಾ ತಂಪಾಗಿರುವುದಿಲ್ಲ ಆದರೆ ಸ್ಪಷ್ಟವಾದ ಆಕಾಶದ ಜೊತೆಗೆ ಆರಾಮದಾಯಕವಾದ ತಾಪಮಾನ ಸುಂದರ ಪ್ರವಾಸದ ಅನುಭವವನ್ನು ಕೊಡುತ್ತದೆ.

ವಸತಿ ವ್ಯವಸ್ಥೆ ಮೊದಲೇ ಮಾಡಿಕೊಳ್ಳಿ. ಖಜ್ಜಿಯಾರ್‌ನಲ್ಲಿ ಸಾಕಷ್ಟು ಹೊಟೇಲ್ , ರೆಸಾರ್ಟ್‌ ಅಥವಾ ಹೋಮ್ ಸ್ಟೇಗಳಿವೆ. ಕೆಲವು ಕಾರಣಗಳಿಗಾಗಿ ಏಕಾಂಗಿ ಪ್ರಯಾಣಿಕರು ಹೋಮ್‌ಸ್ಟೇಗಳನ್ನೇ ಇಷ್ಟಪಡುತ್ತಾರೆ. ಪೀಕ್ ಸೀಸನ್‌ಗಳಲ್ಲಿ ಈ ಸ್ಥಳದಲ್ಲಿ ವಾಸ್ತವ್ಯವನ್ನು ಆನಂದಿಸಲು ಬಯಸಿದರೆ ಸಾಕಷ್ಟು ಮುಂಚಿತವಾಗಿ ಬುಕ್ ಮಾಡಲು ಮರೆಯದಿರಿ.

ಸಾರಿಗೆ ವಿಧಾನ ಆಯ್ಕೆ ಮೊದಲೇ ಮಾಡಿಕೊಳ್ಳಿ. ಖಜ್ಜಿಯಾರ್‌ನಿಂದ ಸುಮಾರು 24 ಕಿಲೋಮೀಟರ್ ದೂರದಲ್ಲಿರುವ ಡಾಲ್‌ಹೌಸಿಯು ಅತ್ಯಂತ ಹತ್ತಿರದ ಮಹತ್ವದ ನಗರವಾಗಿದೆ. ಟ್ಯಾಕ್ಸಿ ಅಥವಾ ಸ್ಥಳೀಯ ಬಸ್ಸು ಮೂಲಕ ಡಾಲ್ ಹೌಸಿಯಿಂದ ಖಜ್ಜಿಯಾರ್‌ಗೆ ತಲುಪಬಹುದು. ಏಕಾಂಗಿಯಾಗಿ ಖಜ್ಜಿಯಾರ್ ಗೆ ಪ್ರಯಾಣಿಸುತ್ತಿದ್ದರೆ, ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಿರುತ್ತವೆ. ಇದು ಸುತ್ತಮುತ್ತಲಿನ ಇತರ ಆಸಕ್ತಿದಾಯಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಸುಲಭಗೊಳಿಸುತ್ತದೆ.

Khajjiar Tour
Khajjiar Tour


ವಿವಿಧ ಚಟುವಟಿಕೆಯನ್ನು ಆನಂದಿಸಿ

ಖಜ್ಜಿಯಾರ್ ಅದ್ಭುತವಾದ ಪ್ರಶಾಂತತೆಯನ್ನು ಹೊಂದಿದ್ದು, ಇಲ್ಲಿ ಏಕಾಂಗಿ ಪ್ರವಾಸ ಮಾಡುವವರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.

ಹಸಿರು ಹುಲ್ಲುಗಾವಲು ಮತ್ತು ದೇವದಾರು ಮರಗಳ ನಡುವೆ ನೆಲೆಗೊಂಡಿರುವ ಖಜ್ಜಿಯಾರ್ ಸರೋವರಕ್ಕೆ ಭೇಟಿ ನೀಡುವ ಮೂಲಕ ಇಲ್ಲಿ ಪ್ರಯಾಣವನ್ನು ಪ್ರಾರಂಭಿಸಬಹುದು. ಸರೋವರದ ಸುತ್ತಲೂ ಕಾಲ್ನಡಿಗೆಯಲ್ಲಿ ಅಥವಾ ಅದರ ದಡದಲ್ಲಿ ಪ್ಯಾಡಲ್ ಬೋಟ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುವ ಮೂಲಕ ಇಲ್ಲಿ ಮಾಡಬಹುದಾದ ಕೆಲವು ಚಟುವಟಿಕೆಗಳು ಅಥವಾ ಸುಮ್ಮನೆ ಕುಳಿತು ಪ್ರಶಾಂತತೆಯನ್ನು ಆನಂದಿಸಬಹುದು.

ಐತಿಹಾಸಿಕ ಖಜ್ಜಿಯಾರ್ ನಾಗ್ ದೇವಾಲಯದಲ್ಲಿ ಹಾವಿಗೆ ಪೂಜೆ ಸಲ್ಲಿಸಲಾಗುತ್ತದೆ. ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದರೆ ಇದು ಸೂಕ್ತ ಪ್ರವಾಸ ಸ್ಥಳವಾಗಿದೆ. ಪ್ರಕೃತಿ ಪ್ರಿಯರು ಕಲಾಟಾಪ್ ವನ್ಯಜೀವಿ ಅಭಯಾರಣ್ಯದಲ್ಲಿ ಪಾದಯಾತ್ರೆಯನ್ನು ನಡೆಸಬಹುದು. ಹಿಮಾಲಯನ್ ಕಪ್ಪು ಕರಡಿಗಳು ಮತ್ತು ಹಲವಾರು ಪಕ್ಷಿಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿ ಮತ್ತು ಸಸ್ಯಗಳನ್ನು ಇಲ್ಲಿ ಕಾಣಬಹುದು. ಏಕಾಂಗಿಯಾಗಿ ಪ್ರವಾಸ ಮಾಡಲು ಬಯಸುವವರು ನೆಮ್ಮದಿಯನ್ನು ಹುಡುಕುತ್ತಿದ್ದರೆ ಇಲ್ಲಿ ಅದನ್ನು ಪಡೆಯಬಹುದು.

ಖಜ್ಜಿಯಾರ್‌ನಲ್ಲಿ ಸಾಹಸವನ್ನು ಹುಡುಕುವವರಿಗೆ ಇಲ್ಲಿ ಝೋರ್ಬಿಂಗ್ ಮತ್ತು ಪ್ಯಾರಾಗ್ಲೈಡಿಂಗ್‌ಗೆ ಅವಕಾಶಗಳಿವೆ. ಸುತ್ತಲಿನ ಕಣಿವೆಗಳು ಮತ್ತು ಬೆಟ್ಟಗಳ ನಡುವೆ ರೋಮಾಂಚಕ ಅನುಭವವನ್ನು ಪಡೆಯಬಹುದು.

Khajjiar Tour
Khajjiar Tour


ಸುರಕ್ಷತೆಯ ಕಡೆ ಗಮನವಿರಲಿ

ಏಕಾಂಗಿ ಪ್ರಯಾಣಿಕರು ಖಜ್ಜಿಯಾರ್‌ಗೆ ಭೇಟಿ ನೀಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಏಕಾಂಗಿಯಾಗಿ ಹೊರಗೆ ಹೋಗುವವರು, ಹಿಂತಿರುಗುವ ಬಗ್ಗೆ ವಸತಿ ಒದಗಿಸುವವರು ಅಥವಾ ನಂಬಲರ್ಹ ವ್ಯಕ್ತಿಗೆ ತಿಳಿಸಿ ಹೋಗಬೇಕು.

ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಡ್ರೆಸ್ಸಿಂಗ್ ಮಾಡುವಂತಹ ಸ್ಥಳೀಯ ಪದ್ಧತಿ ಮತ್ತು ಸಂಪ್ರದಾಯಗಳನ್ನು ಗಮನಿಸಿ. ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ ಸ್ಥಳೀಯ ಅಧಿಕಾರಿಗಳು ಅಥವಾ ದೇಶದ ರಾಯಭಾರ ಕಚೇರಿ/ದೂತಾವಾಸ ಕಚೇರಿಗಳು ಸೇರಿದಂತೆ ತುರ್ತು ಸಂಪರ್ಕ ಸಂಖ್ಯೆಗಳನ್ನು ನೆನಪಿಡಿ. ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ.ನೀರು, ಅಗತ್ಯವಿರುವ ಔಷಧಗಳು ಜೊತೆಯಲ್ಲಿ ಇರಲಿ.

ಇದನ್ನೂ ಓದಿ: Varanasi Tour: ವಾರಣಾಸಿಗೆ ಹೋದಾಗ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

Khajjiar Tour
Khajjiar Tour


ಸ್ಥಳೀಯ ಸಂಸ್ಕೃತಿಯನ್ನು ಆನಂದಿಸಿ

ಹಿಮಾಚಲ ಪ್ರದೇಶದ ಸ್ಥಳೀಯ ಆಹಾರ ಮತ್ತು ಅದರ ಸರಳತೆ ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಹೀಗಾಗಿ ಇಲ್ಲಿನ ವಿವಿಧ ಭಕ್ಷ್ಯಗಳನ್ನು ಪ್ರಯತ್ನಿಸಿ. ಸ್ಥಳೀಯರೊಂದಿಗೆ ಸಂವಹನ ನಡೆಸಿ ಅವರ ಜೀವನ, ಪದ್ಧತಿಗಳು ಮತ್ತು ಜಾನಪದದ ಬಗ್ಗೆ ತಿಳಿದುಕೊಳ್ಳಿ. ಇದು ಖಜ್ಜಿಯಾರ್‌ಗೆ ಸಂಬಂಧಿಸಿದ ಒಳನೋಟಗಳನ್ನು ನೀಡುತ್ತದೆ. ಕೈಯಿಂದ ಮಾಡಿದ ಉಣ್ಣೆಬಟ್ಟೆಗಳು, ಕರಕುಶಲ ವಸ್ತುಗಳು ಅಥವಾ ಸ್ಮಾರಕಗಳ ಸ್ಥಳೀಯ ಮಾರುಕಟ್ಟೆಗಳು ಇಲ್ಲಿ ಸಾಕಷ್ಟು ನೆನಪುಗಳನ್ನು ಕಟ್ಟಿಕೊಡುತ್ತದೆ.

Continue Reading
Advertisement
Nitish Kumar
ದೇಶ26 mins ago

Nitish Kumar: ನೀನೂ ಹೆಣ್ಣು; ವಿಧಾನಸಭೆಯಲ್ಲೇ ಆರ್‌ಜೆಡಿ ಶಾಸಕಿಗೆ ನಿತೀಶ್‌ ಕುಮಾರ್‌ ಗದರಿದ್ದೇಕೆ?

Paris Olympics
ಕ್ರೀಡೆ41 mins ago

Paris Olympics: ಕೊಕೊ ಗಾಫ್ ಅಮೆರಿಕದ ಧ್ವಜಧಾರಿ; ಈ ಗೌರವ ಪಡೆದ ಅತಿ ಕಿರಿಯ ಕ್ರೀಡಾಪಟು

Anekal
ಕ್ರೈಂ2 hours ago

ಆನೇಕಲ್‌ನಲ್ಲಿ ಪುರಸಭೆ ಸದಸ್ಯನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ

Hardik Pandya
ಕ್ರೀಡೆ2 hours ago

Hardik Pandya: ವಿಚ್ಛೇದನ ನೀಡಿ ಒಂದು ವಾರ ಕಳೆಯುವ ಮುನ್ನವೇ ಮಾಜಿ ಪತ್ನಿಯ ಪೋಸ್ಟ್​ಗೆ ಲೈಕ್ಸ್​, ಕಮೆಂಟ್​ ಮಾಡಿದ ಹಾರ್ದಿಕ್​ ಪಾಂಡ್ಯ

King Chopper
ದೇಶ2 hours ago

Sea King Chopper: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಮಾನವೀಯತೆಗೆ ಮೆಚ್ಚುಗೆ

ahoratri dharani until the guilts are punished says Opposition party Leader R Ashok
ಕರ್ನಾಟಕ2 hours ago

R Ashok: ಹಗರಣಕೋರರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ; ಆರ್. ಅಶೋಕ್‌ ಘೋಷಣೆ

Traffic Restrictions
ಬೆಂಗಳೂರು2 hours ago

Traffic Restrictions: ವೈಟ್ ಟಾಪಿಂಗ್ ಕಾಮಗಾರಿ; ನಾಳೆಯಿಂದ ರಾಜಾಜಿನಗರದ ಈ ಮಾರ್ಗದಲ್ಲಿ ಸಂಚಾರ ನಿಷೇಧ

Mohammed Shami
ಕ್ರೀಡೆ3 hours ago

Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು?

KP Poorchandra Tejaswi samagra kruthi Jagattu 14 samputagalu Lokarpane On July 29 in Bengaluru
ಬೆಂಗಳೂರು3 hours ago

Book Release: ಜು.29ರಂದು ಬೆಂಗಳೂರಿನಲ್ಲಿ 14 ಸಂಪುಟಗಳ ಪೂರ್ಣಚಂದ್ರ ತೇಜಸ್ವಿ ಕೃತಿ ಲೋಕಾರ್ಪಣೆ

Asteria Aerospace has introduced a SkyDeck platform that helps in various fields including agriculture
ದೇಶ3 hours ago

SkyDeck: ಕೃಷಿ ಮತ್ತಿತರ ಕ್ಷೇತ್ರಗಳಿಗೆ ನೆರವಾಗುವ ʼಸ್ಕೈಡೆಕ್ʼ ಪ್ಲಾಟ್‌ಫಾರ್ಮ್! ಏನಿದು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ1 day ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ1 day ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ1 day ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌