Cheating Case: ಅಮೆರಿಕದ ಮಹಿಳೆಗೆ ದಿಲ್ಲಿಯ ಯುವಕ 3.3 ಕೋಟಿ ರೂ. ಟೋಪಿ ಹಾಕಿದ್ದು ಹೇಗೆ ನೋಡಿ! - Vistara News

ಕ್ರೈಂ

Cheating Case: ಅಮೆರಿಕದ ಮಹಿಳೆಗೆ ದಿಲ್ಲಿಯ ಯುವಕ 3.3 ಕೋಟಿ ರೂ. ಟೋಪಿ ಹಾಕಿದ್ದು ಹೇಗೆ ನೋಡಿ!

ಕ್ರಿಪ್ಟೋಕರೆನ್ಸಿ ಮಾರಾಟ ಮಾಡುವ ದೆಹಲಿ ಮೂಲದ ಬುಕ್ಕಿಯೊಬ್ಬ (Cheating Case) ಅಮೆರಿಕದ ಮಹಿಳೆಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಹಿರಂಗವಾಗಿದೆ. ಆರೋಪಿಯನ್ನು ಈಗ ಬಂಧಿಸಲಾಗಿದೆ. ಆರೋಪಿಗಳು ಜನರನ್ನು ವಂಚಿಸಿ ಬೇರೆಬೇರೆಯವರ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದರು ಎನ್ನುವುದು ತನಿಖೆಯಿಂದ ಬಯಲಾಗಿದೆ.

VISTARANEWS.COM


on

Cheating Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಅಮೆರಿಕದ ಮಹಿಳೆಯೊಬ್ಬರಿಗೆ (US women) ದೆಹಲಿಯ (delhi) ವ್ಯಕ್ತಿಯೊಬ್ಬ ಬರೋಬ್ಬರಿ 4 ಲಕ್ಷ ಡಾಲರ್ ಅಂದರೆ 3.3 ಕೋಟಿ ರೂ.ಯನ್ನು ಹೈಟೆಕ್‌ ತಂತ್ರ ಬಳಸಿ ವಂಚಿಸಿದ (Cheating Case) ಘಟನೆ ಬೆಳಕಿಗೆ ಬಂದಿದೆ. ಲಿಸಾ ರೋತ್‌ ಎಂಬ ಮಹಿಳೆಗೆ ಮೈಕ್ರೋಸಾಫ್ಟ್‌ನ ಏಜೆಂಟ್ (agent of Microsoft) ಎಂದು ಸುಳ್ಳು ಹೇಳಿ, ಅವರಿಗೆ ಹೆಚ್ಚಿನ ಹಣದ ಆಮಿಷವೊಡ್ಡಿ ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್‌ನಲ್ಲಿ ಬಳಿಯ ನಿವಾಸಿ ಲಕ್ಷ್ಯ ವಿಜ್ ಎಂಬಾತ ವಂಚಿಸಿದ್ದ.

2023ರ ಜುಲೈ 4ರಂದು ಲಿಸಾ ರೋತ್‌ಗೆ ಲಕ್ಷ್ಯ ವಿಜ್ ಕರೆ ಮಾಡಿ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗೆ 4,00,000 ಡಾಲರ್‌ಗಳನ್ನು ವರ್ಗಾಯಿಸಲು ಕೇಳಿದ್ದಾನೆ ಎನ್ನಲಾಗಿದೆ. ಘಟನೆ ನಡೆದು ಒಂದು ವರ್ಷದ ಬಳಿಕ ಜಾರಿ ನಿರ್ದೇಶನಾಲಯವು ದೆಹಲಿ ಮೂಲದ ಬುಕ್ಕಿ ಮತ್ತು ಕ್ರಿಪ್ಟೋಕರೆನ್ಸಿ ಹ್ಯಾಂಡ್ಲರ್ ಅನ್ನು ಲಕ್ಷ್ಯ ವಿಜ್ ನನ್ನು ಬಂಧಿಸಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಗುಜರಾತ್ ಪೊಲೀಸರು ಪೂರ್ವ ದೆಹಲಿಯ ಕ್ರಾಸ್ ರಿವರ್ ಮಾಲ್‌ ನಲ್ಲಿ ಆತನನ್ನು ಬಂಧಿಸಿದಾಗ ಆತನ ಮಾಹಿತಿ ಬಹಿರಂಗವಾಗಿದೆ. ಬಳಿಕ ದೆಹಲಿ ಪೊಲೀಸ್‌ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಅವನನ್ನು ಬಿಡುಗಡೆ ಮಾಡಿದ್ದರು ಎನ್ನಲಾಗಿದೆ.

ವಂಚನೆ ಬೆಳಕಿಗೆ ಬಂದಿದ್ದು ಹೇಗೆ?

ರೋತ್ ವರ್ಗಾವಣೆ ಮಾಡಿದ ಹಣ ಪ್ರಫುಲ್ ಗುಪ್ತಾ ಮತ್ತು ಅವರ ತಾಯಿ ಸರಿತಾ ಗುಪ್ತಾ ಅವರ ವ್ಯಾಲೆಟ್‌ಗಳಿಗೆ ಹೋಗಿತ್ತು. ತನಿಖೆಯ ವೇಳೆ ಕರಣ್ ಚುಗ್ ಎಂಬ ವ್ಯಕ್ತಿ ಗುಪ್ತಾ ಅವರಿಂದ ಈ ಹಣವನ್ನು ಪಡೆದು ಬೇರೆ ಬೇರೆ ವ್ಯಾಲೆಟ್‌ಗಳಲ್ಲಿ ಠೇವಣಿ ಇಟ್ಟಿರುವುದು ಪತ್ತೆಯಾಯಿತು. ಇದರ ಅನಂತರ ಕ್ರಿಪ್ಟೋಕರೆನ್ಸಿಯನ್ನು ಮಾರಾಟ ಮಾಡುವ ಮೂಲಕ ಈ ಮೊತ್ತವನ್ನು ವಿವಿಧ ಭಾರತೀಯ ನಕಲಿ ಖಾತೆಗಳಿಗೆ ವರ್ಗಾಯಿಸಲಾಯಿತು. ಕರಣ್ ಮತ್ತು ಲಕ್ಷ್ಯ ಅವರ ಸೂಚನೆ ಮೇರೆಗೆ ಈ ಹಣವನ್ನು ವರ್ಗಾಯಿಸಲಾಯಿತು. ಅನಂತರ ಅವರು ಫೇರ್ ಪ್ಲೇ 24ನಂತಹ ಬೆಟ್ಟಿಂಗ್ ಅಪ್ಲಿಕೇಶನ್‌ಗಳಲ್ಲಿ ಜನರಿಂದ ಪಡೆದ ಹಣವನ್ನು ಬಳಸಿದರು. ತನಿಖಾ ಸಂಸ್ಥೆಯು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಕಳೆದ ತಿಂಗಳು ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ. ಅಪರಾಧದಲ್ಲಿ ಬಳಸಲಾದ ಕ್ರಿಪ್ಟೋ ವ್ಯಾಲೆಟ್‌ಗಳನ್ನು ಹೊಂದಿರುವವರ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ.

ಇದನ್ನೂ ಓದಿ: Bitcoin Scam: ಬಿಟ್‌‌ ಕಾಯಿನ್ ಹಗರಣ; ಆರೋಪಿಗಳಾದ ಶ್ರೀಕಿ, ಖಂಡೇಲ್ ವಾಲಾ ಜೈಲಿನಿಂದ ಬಿಡುಗಡೆ

ತನಿಖೆಯಲ್ಲಿ ಲಕ್ಷ್ಯ ಅವರ ಆದೇಶದ ಮೇರೆಗೆ ಎಲ್ಲಾ ವ್ಯಾಲೆಟ್‌ಗಳಿಗೆ ಹಣ ವರ್ಗಾವಣೆಯಾಗಿದ್ದು, ಈ ವಂಚನೆಯ ಮಾಸ್ಟರ್‌ಮೈಂಡ್‌ ಎಂದು ತಿಳಿದುಬಂದಿದೆ. ಪ್ರಮುಖ ಆರೋಪಿ ಲಕ್ಷ್ಯ ವಿಜ್ ನನ್ನು ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, 5 ದಿನಗಳ ಜಾರಿ ನಿರ್ದೇಶನಾಲಯದ ಬೇಡಿಕೆಯ ಮೇರೆಗೆ ಆತನನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Murder Case: ʼಸಾಫ್ಟ್ ಟಚ್ʼ ಸ್ಪಾಗೆ ಹೋಗಿದ್ದ ಕ್ರಿಮಿನಲ್‌ನನ್ನು ಪ್ರೇಯಸಿ ಎದುರೇ ತುಂಡು ತುಂಡಾಗಿ ಕತ್ತರಿಸಿದರು!

Murder Case: ಮುಂಬೈನ ವರ್ಲಿಯಲ್ಲಿ 50 ವರ್ಷದ ವ್ಯಕ್ತಿಯನ್ನು ಸ್ಪಾದಲ್ಲಿ ತುಂಡು ತುಂಡಾಗಿ ಕತ್ತರಿಸಿದ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿ ಗುರುಸಿದ್ದಪ್ಪ ವಾಘ್ಮೋರೆ ಅಲಿಯಾಸ್ ಚುಲ್ಬುಲ್ ಪಾಂಡೆ ಎನ್ನಲಾಗಿದೆ. ತನ್ನ ಗೆಳತಿಯೊಂದಿಗೆ ಸಿಯಾನ್ ರೈಲ್ವೆ ನಿಲ್ದಾಣದ ಬಳಿಯ ಅಪರ್ಣಾ ಬಾರ್ & ರೆಸ್ಟೋರೆಂಟ್ನಲ್ಲಿ ಡ್ರಿಂಕ್ಸ್ ಮಾಡಿದ ನಂತರ ವರ್ಲಿ ನಾಕಾ ಬಳಿಯ ಸಾಫ್ಟ್ ಟಚ್ ಸ್ಪಾಗೆ ಹೋಗಿದ್ದರು. ಆಗ ಮೂವರು ಅಪರಿಚಿತ ವ್ಯಕ್ತಿಗಳು ಬಾಗಿಲು ಮುರಿದು ಒಳಗೆ ಬಂದು ಈ ಕೃತ್ಯ ಎಸಗಿದ್ದಾರೆ.

VISTARANEWS.COM


on

Murder Case
Koo


ಮುಂಬೈ: ಇತ್ತೀಚಿನ ದಿನಗಳಲ್ಲಿ ಮನುಷ್ಯರು ತುಂಬಾ ಕ್ರೂರವಾಗಿ ವರ್ತಿಸುತ್ತಿದ್ದಾರೆ. ಪ್ರಾಣಿಗಳಂತೆ ಮನುಷ್ಯರನ್ನು ಕೂಡ ಜನರು ಪ್ರತಿಕಾರದಿಂದ ತುಂಡುತುಂಡಾಗಿ ಕ್ರೂರವಾಗಿ ಕೊಲೆ ಮಾಡುತ್ತಿದ್ದಾರೆ. ಇಂತಹದೊಂದು ಪ್ರಕರಣ ಇದೀಗ ಮುಂಬೈನ ವರ್ಲಿಯಲ್ಲಿ ನಡೆದಿದ್ದು, ಅಪರಾಧ ಹಿನ್ನೆಲೆಯನ್ನು ಹೊಂದಿರುವ 50 ವರ್ಷದ ವ್ಯಕ್ತಿಯನ್ನು ಸ್ಪಾದಲ್ಲಿ ತುಂಡು ತುಂಡಾಗಿ ಕತ್ತರಿಸಿದ (Murder Case) ಘಟನೆ ಜುಲೈ 24ರಂದು ಮುಂಜಾನೆ ನಡೆದಿದೆ.

ಪೊಲೀಸರ ಪ್ರಕಾರ, ಗುರುಸಿದ್ದಪ್ಪ ವಾಘ್ಮೋರೆ ಅಲಿಯಾಸ್ ಚುಲ್ಬುಲ್ ಪಾಂಡೆ ತನ್ನ ಗೆಳತಿಯೊಂದಿಗೆ ಸಿಯಾನ್ ರೈಲ್ವೆ ನಿಲ್ದಾಣದ ಬಳಿಯ ಅಪರ್ಣಾ ಬಾರ್ & ರೆಸ್ಟೋರೆಂಟ್‍ನಲ್ಲಿ ಡ್ರಿಂಕ್ಸ್ ಮಾಡಿದ ನಂತರ ವರ್ಲಿ ನಾಕಾ ಬಳಿಯ ಸಾಫ್ಟ್ ಟಚ್ ಸ್ಪಾಗೆ ಹೋಗಿದ್ದರು. ಚುಲ್ಬುಲ್ ಪಾಂಡೆ ಸ್ವಲ್ಪ ದಿನದಲ್ಲೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ ಎನ್ನಲಾಗಿದೆ.

ವರ್ಲಿ ನಾಕಾದ ಎಲ್.ಆರ್.ಪಾಪನ್ ಮಾರ್ಗದ ಮಂಜ್ರೇಕರ್ ಕಟ್ಟಡದ ನೆಲಮಹಡಿಯಲ್ಲಿರುವ ಸ್ಪಾಗೆ ಹೋಗಿದ್ದಾರೆ. ಆದರೆ ಕಳೆದ ಆರು ತಿಂಗಳಿನಿಂದ ಆ ಸ್ಪಾ ಮುಚ್ಚಲ್ಪಟ್ಟಿತ್ತು, ಆದರೆ ಅದರ ಮಾಲೀಕರಿಗೆ ಹತ್ತಿರವಾಗಿದ್ದ ಚುಲ್ಬುಲ್ ಪಾಂಡೆ ಸ್ನೇಹಿತೆಗೆ ಅದಕ್ಕೆ ಹೋಗಲು ಅವಕಾಶವಿತ್ತು. ಇವರಿಬ್ಬರು ಸ್ಪಾ ಒಳಗೆ ಇದ್ದಾಗ ಚಾಕು ಹೊಂದಿದ್ದ ಮೂವರು ಅಪರಿಚಿತ ವ್ಯಕ್ತಿಗಳು ಬಾಗಿಲು ಮುರಿದು ಒಳಗೆ ಬಂದು ಸೋಫಾದ ಮೇಲೆ ಮಲಗಿದ್ದ ವಾಘ್ಮೋರೆ ಮೇಲೆ ಚಾಕುವಿನಿಂದ ಹಲವಾರು ಬಾರಿ ಚುಚ್ಚಿದ್ದಾರೆ. ಈ ಬಗ್ಗೆ ವಿಲೆ ಪಾರ್ಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಹಾಗಾಗಿ ಸ್ಥಳಕ್ಕೆ ಬಂದ ವಿಲೆ ಪಾರ್ಲೆ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಯ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲು ಆರು ತಂಡಗಳನ್ನು ನಿಯೋಜಿಸಲಾಗಿದೆ. ಪ್ರಮುಖ ಸಾಕ್ಷಿಯಾಗಿರುವ ಮಹಿಳೆಯ ಜೊತೆ ಶವವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, “ಘಟನೆಯ ಬಗ್ಗೆ ನಮಗೆ ಮಧ್ಯಾಹ್ನ ಕರೆ ಬಂದಿದೆ. ನಾವು ಸ್ಥಳಕ್ಕೆ ಬಂದು ಹತ್ಯೆಗೊಳಗಾದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದೆವು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ದೇಹದಾದ್ಯಂತ ಗಾಯಗಳಿದ್ದವು. ಅದರ ಆಧಾರದ ಮೇಲೆ ನಾವು ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಆರೋಪಿಗಳನ್ನು ಬಂಧಿಸಲು ಹುಡುಕಾಟ ಪ್ರಾರಂಭಿಸಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಲು ವರ್ಲಿ ಪೊಲೀಸರು ಈಗ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕೊಲೆಯಾದ ವ್ಯಕ್ತಿ ಹಾಗೂ ಆತನ ಸ್ನೇಹಿತೆ ಮೇಲೆ ಯಾರೋ ಕಣ್ಣಿಟ್ಟಿದ್ದರು ಮತ್ತು ಅವರು ಸ್ಪಾಗೆ ಪ್ರವೇಶಿಸಿದಾಗ ಕೊಲೆಗಾರರಿಗೆ ಸುಳಿವು ನೀಡಿದ್ದಾರೆ. ಇದು ಪ್ಲ್ಯಾನ್ ಮಾಡಿ ಮಾಡಿದ ಕೊಲೆಯಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಯುವಕನಿಗೆ ಜಾಡಿಸಿ ಒದ್ದ ಜಿಮ್‌ ಮಾಲೀಕನನ್ನು ಮತ್ತೊಬ್ಬ ಯುವಕ ಇರಿದು ಕೊಂದ; ವಿಡಿಯೊ ಇದೆ

ಇದೇ ರೀತಿಯ ಘಟನೆ ಉತ್ತರ ಪ್ರದೇಶದ ಪ್ರತಾಪ್‌ಘಡದಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ತನ್ನ ಪತಿಯ ಜೊತೆ ಸೇರಿಕೊಂಡು ತನ್ನ ಪ್ರಿಯಕರನನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಈ ಪ್ರಕರಣವನ್ನು ಕಂಡು ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣದ ಪೊಲೀಸರು ಆಘಾತಕ್ಕೊಳಗಾಗಿದ್ದಾರೆ.

Continue Reading

ಬೆಂಗಳೂರು

Emission Testing Rate : ಸವಾರರ ಚೇಬಿಗೆ ಬೀಳುತ್ತೆ ಕತ್ತರಿ; ಸದ್ಯದಲ್ಲೇ ಎಮಿಷನ್ ಟೆಸ್ಟಿಂಗ್ ದರ ಹೆಚ್ಚಳ ಸಾಧ್ಯತೆ

Emission Testing Rate: ದರ ಏರಿಕೆಯಿಂದ ಕಂಗಲಾಗಿರುವ ಜನ ಸಾಮಾನ್ಯರಿಗೆ ಇದೀಗ ಮತ್ತೊಂದು ಬರೆ ಹೇಳಲಾಗುತ್ತಿದೆ. ತೈಲ ಬೆಲೆ ಏರಿಕೆಯಿಂದಲೇ ಸವಾರರು ತತ್ತರಿಸಿದ್ದಾರೆ. ಹೀಗಿರುವಾಗ ಸದ್ಯದಲ್ಲೇ ಎಮಿಷನ್‌ ಟೆಸ್ಟಿಂಗ್‌ ದರ ಏರಿಕೆ ಆಗುವ ಮುನ್ಸೂಚನೆ ಇದೆ.

VISTARANEWS.COM


on

By

Emission testing rates likely to be hiked soon
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದ ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್‌ವೊಂದಿದೆ. ಪೆಟ್ರೋಲ್‌-ಡಿಸೇಲ್‌ ಬೆಲೆಯಿಂದ ಕೈ ಸುಟ್ಟುಕೊಂಡಿದ್ದ ಸವಾರರಿಗೆ, ಇದೀಗ ವಾಹನಗಳ ಎಮಿಷನ್‌ ಟೆಸ್ಟಿಂಗ್‌ ದರ ಏರಿಕೆಗೆ (Emission Testing Rate) ಚಿಂತನೆ ನಡೆದಿದೆ. ಕಾರು, ಬೈಕ್‌, ಲಾರಿ ಹಾಗೂ ಬಸ್ಸು ಹೀಗೆ ಎಲ್ಲ ವಾಹನಗಳಿಗೂ ಪ್ರತಿ ಆರು ತಿಂಗಳಿಗೆ ಎಮಿಷನ್ ಟೆಸ್ಟ್ ಮಾಡಿಸಬೇಕು. ಸದ್ಯದಲ್ಲೇ ಎಮಿಷನ್ ಟೆಸ್ಟಿಂಗ್ ದರ ಹೆಚ್ಚಾಗಲಿದೆ.

ದರ ಏರಿಕೆ ಮಾಡುವಂತೆ ಸಾರಿಗೆ ಸಚಿವರಿಗೆ ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್ ಮನವಿ ಕೊಟ್ಟಿದೆ. ರಾಜ್ಯದಲ್ಲಿ ಮೂರು ಕೋಟಿಗೂ ಹೆಚ್ಚು ವಾಹನಗಳಿವೆ. ರಾಜಧಾನಿ ಬೆಂಗಳೂರಲ್ಲೇ ಒಂದು ಕೋಟಿ ಮೂವತ್ತು ಲಕ್ಷ ವಾಹನಗಳಿವೆ‌. ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲದಿದ್ದರೆ, ಟ್ರಾಫಿಕ್ ಪೋಲಿಸರು 500 ರಿಂದ 1000 ರೂಪಾಯಿವರೆಗೆ ದಂಡ ಹಾಕುತ್ತಾರೆ.

ಎಮಿಷನ್ ಸರ್ಟಿಫಿಕೇಟ್ ಇಲ್ಲದಿದ್ದರೆ ಆರ್‌ಟಿಓ ಅಧಿಕಾರಿಗಳು ವಾಹನಗಳಿಗೆ ಎಫ್ಸಿ ಮಾಡುವುದಿಲ್ಲ. ಈ ಹಿಂದೆ ಒಂದು ವಾಹನಕ್ಕೆ ಎಮಿಷನ್ ಟೆಸ್ಟ್ ಮಾಡಿದರೆ, ಎಮಿಷನ್ ಟೆಸ್ಟಿಂಗ್ ಸೆಂಟರ್‌ಗಳಿಂದ ಸರ್ಕಾರಕ್ಕೆ 3.25 ಪೈಸೆ ರೂ. ನೀಡಬೇಕಿತ್ತು ಆದರೆ ಇನ್ನು ಮುಂದೆ ಸರ್ಕಾರಕ್ಕೆ 13.80 ಪೈಸೆ ನೀಡಬೇಕಂತೆ. ಹಾಗಾಗಿ ಎಮಿಷನ್ ಟೆಸ್ಟಿಂಗ್ ಸೆಂಟರ್ ಮಾಲೀಕರು ದರ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ.

ದರ ಏರಿಕೆ ಪಟ್ಟಿ ಹೀಗಿದೆ.

ಸದ್ಯ ಒಂದು ಬೈಕ್ ಎಮಿಷನ್ ಮಾಡಲು – 65 ರೂ. ತೆಗೆದುಕೊಳ್ಳಲಾಗುತ್ತಿದೆ. ಮುಂದೆ 110ರೂ.ಗೆ ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ತ್ರಿಚಕ್ರ- ( ಆಟೋ, ಗೂಡ್ಸ್ ಆಟೋ ) ಸದ್ಯ 75 ರೂ ರಿಂದ 100 ರೂ, ನಾಲ್ಕು ಚಕ್ರದ ಪೆಟ್ರೋಲ್ ಕಾರುಗಳು- ಸದ್ಯ- 115 ರುಪಾಯಿ 200 ರುಪಾಯಿ ಏರಿಕೆ ಆಗಲಿದೆ. ಎಲ್ಲಾ ಮಾದರಿಯ ಡಿಸೇಲ್ ವಾಹನಗಳು ( ಲಾರಿ, ಬಸ್ ಹಾಗೂ ಟ್ರಕ್ ) ಸದ್ಯ – 160 ರುಪಾಯಿ 250 ಏರಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Road Accident : ಹಿಟ್‌ ಆ್ಯಂಡ್‌ ರನ್‌ಗೆ ಐಸಿಯು ಪಾಲಾದ ವೃದ್ಧ; ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದ ಡ್ರೈವರ್‌

ಜು.29ರಿಂದ ಪೀಣ್ಯ ಫ್ಲೈ ಓವರ್ ಮೇಲೆ ಎಲ್ಲಾ ವಾಹನಗಳ ಓಡಾಟಕ್ಕೆ ಅವಕಾಶ

ಬೆಂಗಳೂರು: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಜುಲೈ 29ರಿಂದ ಪೀಣ್ಯ ಫ್ಲೈ ಓವರ್ (Peenya flyover) ಮೇಲೆ ಭಾರಿ ವಾಹನ ಸೇರಿ ಎಲ್ಲಾ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದ್ದು, ಪ್ರತಿ ಶುಕ್ರವಾರ ಮಾತ್ರ ಭಾರಿ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ.

ಮೇಲ್ಸೇತುವೆ ವಿಶೇಷ ದುರಸ್ತಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿರುವುದರಿಂದ ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೂ ಭಾರಿ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಉಳಿದ ದಿನ ಎಲ್ಲಾ ವಾಹನಗಳು ಪ್ಲೈ ಓವರ್ ಮೇಲೆ ಓಡಾಟ ಮಾಡಬಹುದು. ಆದರೆ, ಭಾರಿ ವಾಹನಗಳು ಮಾತ್ರ ಮೇಲ್ಸೇತುವೆ ಎಡಪಥದಲ್ಲಿ ಗರಿಷ್ಠ 40 ಕಿ.ಮೀ ವೇಗ ಮಿತಿಯಲ್ಲಿ ಸಂಚರಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಸೂಚಿಸಿದೆ.

ನಗರದ ತುಮಕೂರು ರಸ್ತೆಯಲ್ಲಿರುವ 15 ಮೀಟರ್ ಅಗಲದ, 4.2 ಕಿಮೀ ಉದ್ದದ ಮೇಲ್ಸೇತುವೆಯಲ್ಲಿ 2021ರ ಡಿಸೆಂಬರ್‌ನಿಂದ ಬಸ್‌ಗಳು ಮತ್ತು ಟ್ರಕ್‌ಗಳಂತಹ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಫ್ಲೈಓವರ್‌ನಲ್ಲಿ ಪ್ರಿಸ್ಟ್ರೆಸ್ಡ್ ಕೇಬಲ್‌ಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ರಿಪೇರಿ ಮಾಡುವ ಅಗತ್ಯವಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 38.5 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕೇಬಲ್‌ಗಳ ಅಳವಡಿಕೆ ಕಾರ್ಯ ನಡೆದಿದೆ.

ಜನವರಿಯಲ್ಲಿ, 240 ಪ್ರಿಸ್ಟ್ರೆಸ್ಡ್ ಕೇಬಲ್‌ಗಳಲ್ಲಿ ಲೋಡ್ ಪರೀಕ್ಷೆಗಳನ್ನು ನಡೆಸಲು ಎನ್‌ಎಚ್‌ಎಐ 60 ಗಂಟೆಗಳ ಕಾಲ ಫ್ಲೈಓವರ್ ಮುಚ್ಚಿತ್ತು. ಸಮಿತಿಯ ಲೋಡ್ ಪರೀಕ್ಷೆಯ ಫಲಿತಾಂಶಗಳು ತೃಪ್ತಿಕರವಾಗಿದೆ ಎಂದು ತಜ್ಞರ ಸಮಿತಿಯ ಮುಖ್ಯಸ್ಥ, ಐಐಎಸ್‌ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಚಂದ್ರ ಕಿಶನ್ ಹೇಳಿದ್ದರು. ಮಾರ್ಚ್‌ನಲ್ಲಿ, ಎನ್‌ಎಚ್‌ಎಐ 1,243 ಪ್ರಿಸ್ಟ್ರೆಸ್ಡ್ ಕೇಬಲ್‌ಗಳನ್ನು ಬದಲಾಯಿಸಲು ಪ್ರಾರಂಭಿಸಿತ್ತು. ಸದ್ಯ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದರಿಂದ ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಪೀಣ್ಯದಲ್ಲಿರುವ ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಎನ್‌ಎಚ್‌ಎಐ ಗ್ರೀನ್ ಸಿಗ್ನಲ್ ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Mangalore Jail: ಮಂಗಳೂರು ಜೈಲಿನ ಮೇಲೆ ಪೊಲೀಸರ ದಾಳಿ; 25 ಮೊಬೈಲ್, ಡ್ರಗ್ಸ್‌ ವಶ

Mangalore Jail: ಮಂಗಳೂರು ನಗರ ಪೊಲೀಸರಿಂದ ಕಾರ್ಯಾಚರಣೆ ನಡೆದಿದ್ದು, ಏಕಕಾಲಕ್ಕೆ 150ಕ್ಕೂ ಅಧಿಕ ಪೊಲೀಸರು ಪರಿಶೀಲನೆ ನಡೆಸಿ, ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

Mangalore Jail
Koo

ಮಂಗಳೂರು: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಕಾರಾಗೃಹದ (Mangalore Jail) ಮೇಲೆ ಪೊಲೀಸರು ದಾಳಿ ನಡೆಸಿ, ಕೈದಿಗಳಿಂದ 25 ಮೊಬೈಲ್‌, ಗಾಂಜಾ, ಡ್ರಗ್ಸ್‌ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು ನಗರ ಪೊಲೀಸರಿಂದ ಕಾರ್ಯಾಚರಣೆ ನಡೆದಿದ್ದು, ಏಕಕಾಲಕ್ಕೆ 150ಕ್ಕೂ ಅಧಿಕ ಪೊಲೀಸರು ಪರಿಶೀಲನೆ ನಡೆಸಿ, ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ 25 ಮೊಬೈಲ್, 1 ಬ್ಲೂ ಟೂತ್ ಡಿವೈಸ್, 5 ಇಯರ್ ಪೋನ್, 1 ಪೆನ್ ಡ್ರೈವ್, 5 ಚಾರ್ಜರ್, 1 ಕತ್ತರಿ, 3 ಕೇಬಲ್, ಗಾಂಜಾ ಮತ್ತು ಡ್ರಗ್ಸ್ ಪ್ಯಾಕೆಟ್‌ ಸೇರಿವೆ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಇಬ್ಬರು ಡಿಸಿಪಿ, ಮೂವರು ಎಸಿಪಿ, 15 ಇನ್‌ಸ್ಪೆಕ್ಟರ್, 150ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ | Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ಹಾಡಹಗಲೇ ಬೆಂಗಳೂರಿನಲ್ಲಿ ಕಾಲೇಜು ಯುವತಿಯ ಅಪಹರಣ

kidnap Case
kidnap Case

ಬೆಂಗಳೂರು: ಹಾಡಹಗಲೇ ಬೆಂಗಳೂರಿನಲ್ಲಿ ಯುವತಿಯೊಬ್ಬಳ ಅಪಹರಣ (Kidnap case ) ಆಗಿತ್ತು. ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಬಸ್‌ಗಾಗಿ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ಅಪಹರಣಕೋರರು ಅಪಹರಿಸಿದ್ದಾರೆ.

ತುಮಕೂರಿನ ಕಾಲೇಜಿ ವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ಯಲಹಂಕದ ಮಾವನ ಮನೆಗೆ ಬಂದಿದ್ದಳು. ನಂತರ ಬೆಳಗ್ಗೆ ಕಾಲೇಜಿಗೆ ಹೋಗಲು ತನ್ನ ಮಾವನಿಂದ ಬಸ್ ಸ್ಟಾಪ್‌ವರೆಗೂ ಡ್ರಾಪ್ ಪಡೆದಿದ್ದಾಳೆ. ಜಾಲಹಳ್ಳಿ ಬಳಿ ತುಮಕೂರು ಬಸ್‌ಗಾಗಿ ಕಾಯುತ್ತಿದ್ದಾಗ, ವಿದ್ಯಾರ್ಥಿನಿ ಬಳಿ ಇಬ್ಬರು ಯುವತಿಯರು ಬಂದಿದ್ದಾರೆ.

ತಕ್ಷಣ ಯುವತಿಯ ಕೈ ಹಿಡಿದು ನಂತರ ಮುಖಕ್ಕೆ ಮಾಸ್ಕ್ ಹಿಡಿದಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬೆಳಗ್ಗೆ ಕಿಡ್ನ್ಯಾಪ್ ಆಗಿದ್ದ ವಿದ್ಯಾರ್ಥಿನಿಗೆ ಮಧ್ಯಾಹ್ನ 1 ಗಂಟೆಗೆ ಎಚ್ಚರವಾಗಿದೆ. ಈ ವೇಳೆ ಕಾರಿನಲ್ಲಿ ಇಬ್ಬರು ಯುವತಿಯರು ಸೇರಿ ನಾಲ್ವರು ಹುಡುಗರು ಇದ್ದರು ಎನ್ನಲಾಗಿದೆ.

ಇದನ್ನೂ ಓದಿ: Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ವಿದ್ಯಾರ್ಥಿನಿಗೆ ಎಚ್ಚರವಾದಾಗ ಆರೋಪಿಗಳು ಗಾಡಿ ನಿಲ್ಲಿಸಿ ಟೀ ಕುಡಿಯುತ್ತಿದ್ದರು. ತಕ್ಷಣ ಕಾರಿನ ಡೋರ್ ಓಪನ್ ಮಾಡಿ ವಿದ್ಯಾರ್ಥಿನಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾಳೆ. ಈ ವೇಳೆ ಆರೋಪಿಗಳು ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.

ಬಳಿಕ ಸ್ಥಳೀಯರ ಬಳಿ ಇದು ಯಾವ ಊರು ಎಂದು ಕೇಳಿದಾಗ ಅವರು, ಇದು ಮೈಸೂರು ಎಂದು ತಿಳಿಸಿದ್ದಾರೆ. ಬಳಿಕ ಅವರಿವರ ಸಹಾಯದಿಂದ ಮೈಸೂರು ಬಸ್ ಸ್ಟಾಪ್‌ಗೆ ಬಂದಿದ್ದಾಳೆ. ನಂತರ ವ್ಯಕ್ತಿಯೊಬ್ಬರ ಮೊಬೈಲ್ ಪಡೆದು ಮನೆಗೆ ಕರೆ ಮಾಡಿದ್ದಾಳೆ. ಕೂಡಲೇ ಕುಟುಂಬಸ್ಥರ ಸಹಾಯದಿಂದ ಮೈಸೂರು ಠಾಣೆಗೆ ದೂರು ದಾಖಲಾಗಿದೆ.

ದೂರಿನನ್ವಯ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದ್ದು, ವಿದ್ಯಾರ್ಥಿನಿ ಜಾಲಹಳ್ಳಿ ಕ್ರಾಸ್‌ನಿಂದ ಕಿಡ್ನಾಪ್ ಆದ ಕಾರಣಕ್ಕೆ ಪೀಣ್ಯ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಅಪಹರಣಕೋರರಿಂದ ವಿದ್ಯಾರ್ಥಿನಿ ತಪ್ಪಿಸಿಕೊಂಡು ಬಚಾವ್‌ ಆಗಿದ್ದಾಳೆ. ಸದ್ಯ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Actor Darshan: ನಟ ದರ್ಶನ್‌ಗೆ ಜೈಲೂಟ ಫಿಕ್ಸ್‌; ಕೋರ್ಟ್‌ ಮನೆಯೂಟದ ಅರ್ಜಿ ವಜಾಗೊಳಿಸಿದ್ದೇಕೆ?

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಇಂದೂ ನಿರಾಸೆ ಎದುರಾಗಿದೆ. ಮನೆ ಊಟ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ವಜಾ ಮಾಡಿ ಆದೇಶ ಹೊರಡಿಸಿದೆ. ಇದರಿಂದ ದರ್ಶನ್‌ಗೆ ಜೈಲೂಟವೇ ಫಿಕ್ಸ್‌ ಆಗಿದೆ.

VISTARANEWS.COM


on

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ (Actor Darshan) ಇಂದೂ ನಿರಾಸೆ ಎದುರಾಗಿದೆ. ಮನೆ ಊಟ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ವಜಾ ಮಾಡಿ ಆದೇಶ ಹೊರಡಿಸಿದೆ. ಇದರಿಂದ ದರ್ಶನ್‌ಗೆ ಜೈಲೂಟವೇ ಫಿಕ್ಸ್‌ ಆಗಿದೆ.

ದರ್ಶನ್ ಪರ ವಕೀಲರು ಹಾಗೂ ಸರ್ಕಾರಿ ಪರ ಎಸ್‌ಪಿಪಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿಶ್ವನಾಥ ಸಿ. ಗೌಡರ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಅದರಂತೆ ತೀರ್ಪು ಪ್ರಕಟಗೊಂಡಿದೆ.

ದರ್ಶನ್ ಮನೆ ಊಟದ ಅರ್ಜಿ ವಜಾ ಆಗಲು ಕಾರಣ ಇದು

ಕರ್ನಾಟಕ ಪ್ರಿಸನ್ಸ್ ಕರೆಕ್ಷನ್ ಮ್ಯಾನ್ಯುಲ್ 2021ರ ಸೆಕ್ಷನ್ 728ರ ಪ್ರಕಾರ ಕೊಲೆ ಆರೋಪಿಗೆ ಮನೆ ಊಟಕ್ಕೆ ಅವಕಾಶ ಇಲ್ಲ. ಅಲ್ಲದೆ ಜೈಲು ಅಧಿಕಾರಿಗಳು ನೀಡಿರುವ ವರದಿಯಲ್ಲಿ ಮನೆಯೂಟದ ಅವಶ್ಯಕತೆ ಕಾಣಿಸುತ್ತಿಲ್ಲ. ಜತೆಗೆ ಮನೆ ಊಟದ ಅವಶ್ಯಕತೆ ಸಂಬಂಧ ಪೂರಕವಾದ ವೈದ್ಯಕೀಯ ಪ್ರಮಾಣಪತ್ರಗಳು ಇಲ್ಲ-ಈ ಮೂರು ಅಂಶಗಳನ್ನಿಟ್ಟು ದರ್ಶನ್‌ ಅರ್ಜಿ ವಜಾಗೊಂಡಿದೆ.

ದರ್ಶನ್ ಪರ ವಕೀಲ ವಕೀಲರ ವಾದ ಏನಾಗಿತ್ತು?

ಜುಲೈ 22ರಂದು ದರ್ಶನ್ ಪರ ವಕೀಲ ವಕೀಲ ರಾಘವೇಂದ್ರ ವಾದ ಮಂಡಿಸಿ, ದರ್ಶನ್‌ಗೆ ಜೈಲು ಊಟ ಜೀರ್ಣವಾಗುತ್ತಿಲ್ಲ, ಅತಿಸಾರವಾಗುತ್ತಿದೆ. ಹೀಗಾಗಿ ಖಾಸಗಿ ಊಟ, ಹಾಸಿಗೆ ಕೆಳಲಾಗುತ್ತಿದೆ. ವಿಚಾರಣಾಧೀನ ಕೈದಿಗೆ ಮನೆಯೂಟ ಪಡೆಯಲು ಅವಕಾಶವಿದೆ. ತನಿಖೆ ಪೂರ್ಣವಾಗದ ಸಂಧರ್ಬದಲ್ಲಿ ಮನೆ ಊಟ ನೀಡಲು ಅವಕಾಶವಿದೆ. ಕರ್ನಾಟಕ ಕಾರಾಗೃಹ ಕಾಯ್ದೆ ಪ್ರಕಾರ ಸಿವಿಲ್ ಕೈದಿ ಹಾಗೂ ವಿಚಾರಣಾಧೀನ ಕೈದಿಗೆ ಸ್ವಂತ ಹಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಅಧಿಕಾರಿಗಳೇ ರೇಷನ್ ನೀಡಬೇಕು. ಸೆಂಟ್ರಲ್ ಕಿಚನ್‌ನಲ್ಲಿ ಅಡುಗೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಮನವಿ ಸಲ್ಲಿಸಿದ್ದರು.

ದರ್ಶನ್ ಒಬ್ಬ ಸೆಲೆಬ್ರಿಟಿ ಅಗಿರುವುದರಿಂದ ಪ್ರಚಾರ ಸಿಗುತ್ತದೆ. ಆಗಾಗಿಯೇ ಜೈಲು ಅಧಿಕಾರಿಗಳು ಮನೆ ಊಟಕ್ಕೆ ಅವಕಾಶ ನೀಡುತ್ತಿಲ್ಲ. ಆರೋಪ ಸಾಬೀತಾಗುವವರೆಗೂ ಮುಗ್ಧನೆಂದು ಪರಿಗಣಿಸಿ ಮನೆ ಊಟ, ಹಾಸಿಗೆ ಒದಗಿಸಬೇಕೆಂದು ಹೇಳಿದ್ದರು.

ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದ್ರೆ ಆಗಲ್ಲ

ಇದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಆರಂಭಿಸಿ, ಜೈಲು ಊಟ ಜೀರ್ಣವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮೆಡಿಕಲ್ ರಿಪೋರ್ಟ್ ಕೋರ್ಟ್‌ಗೆ ಸಲ್ಲಿಸಿದ್ದೇವೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸುವಾಗ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಅವರಿಗೆ ಆರ್ಥೋಪೆಡಿಕ್ ಸಮಸ್ಯೆ ಇದೆ. ಅದಕ್ಕೆ ಮೊದಲು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದನ್ನ ಮುಂದುವರಿಸಲು ಸೂಚನೆ ನೀಡಿದ್ದರು. ಈಗ ಡಯಟ್ ಪುಡ್ ಕೇಳಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಜೈಲು ಮ್ಯಾನ್ಯುವಲ್ ಪ್ರಕಾರ ಏನೇನು ನೀಡಬೇಕೋ ಅದನ್ನು ನೀಡುತ್ತಿದ್ದೇವೆ. ಜೈಲು ಕೈಪಿಡಿಯಲ್ಲಿ ಮನೆ ಊಟ ಎಂಬ ಪದವೇ ಇಲ್ಲ. ಹುಷಾರಿಲ್ಲದ ವೇಳೆ ಎಕ್ಟ್ರಾ ಡಯಟ್ 30 ದಿನ ನೀಡಬಹುದು. ವಾರದಲ್ಲಿ ಒಂದು ದಿನ ಮೊಟ್ಟೆ ಹಾಗೂ ಬಾಳೆ ಹಣ್ಣು ನೀಡಬಹುದು. ಜ್ವರ ಇದ್ದಾಗ ಬಿಸಿ ನೀರು ನೀಡುತ್ತಾರೆ. ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದ್ರೆ ನಿಯಮದಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದ್ದರು.

ಇದನ್ನೂ ಓದಿ: Actor Darshan: ದರ್ಶನ್‌ ಆರೋಪಮುಕ್ತನಾಗಿ ಶೀಘ್ರ ಹೊರ ಬರಲಿ; ಹಿರಿಯ ನಟಿ ಗಿರಿಜಾ ಲೋಕೇಶ್ ಹಾರೈಕೆ

ಸದ್ಯ ದರ್ಶನ್ ಮೆಡಿಕಲ್ ರಿಪೋರ್ಟ್‌ನಲ್ಲಿ ಬೆಡ್ ರೆಸ್ಟ್ ಬೇಕು ಎಂದಿದೆ. ಜೈಲು ವೈದ್ಯಾಧಿಕಾರಿಗಳು ಅಗತ್ಯವಿದ್ದರೆ ವಿಶೇಷ ಆಹಾರವನ್ನು ನೀಡಬಹುದು. ಜೈಲು ನಿಯಮ 728 ರಲ್ಲಿ ಬಟ್ಟೆ, ಹಾಸಿಗೆ ನೀಡುವ ನಿಯಮವಿದೆ. ಇದು ಕೊಲೆ ಆರೋಪಿಯನ್ನು ಹೊರತು ಪಡಿಸಿ ಬೇರೆ ಕೈದಿಗಳಿಗೆ ಅನ್ವಯವಾಗುತ್ತದೆ. ದರ್ಶನ್ ನಾನು ನಿತ್ಯ ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದೆ. ಹೀಗಾಗಿ ಜೈಲಿನಲ್ಲಿ ನೀಡುವ ಊಟದ ಜೊತೆಗೆ ಎಕ್ಟ್ರಾ ಪ್ರೋಟಿನ್ ನೀಡಬೇಕೆಂದು ಮಾನವಿ ಮಾಡಿದ್ದಾರೆ. ಪ್ರತಿ ಭಾರಿ ನಾನು ಮನೆಯಲ್ಲಿ ವ್ಯಾಯಾಮ ಮಾಡ್ತಿದ್ದೆ. ಪ್ರೋಟಿನ್ ಆಹಾರ ತಿನ್ನುತ್ತಿದ್ದೆ. ಹೀಗಾಗಿ ಮನೆ ಊಟ ಬೇಕು ಎಂದಿದ್ದಾರೆ. ದರ್ಶನ್ ಬಂಧನವಾಗೋವರೆಗೂ ವ್ಯಾಯಾಮ ಮಾಡಿಕೊಂಡಿದ್ದರು, ಈಗ ಬಂಧಿಯಾಗಿದ್ದಾರೆ. ಜೈಲಿನಲ್ಲಿದ್ದಾಗಲೂ ಎಲ್ಲ ಸೌಲಭ್ಯಗಳು ಬೇಕೆಂದರೆ ಹೇಗೆ ಎಂದು ಪ್ರಶ್ನಿಸಿದ್ದರು.

Continue Reading
Advertisement
NEET UG 2024
ದೇಶ3 hours ago

NEET UG 2024: ನೀಟ್‌ ಪ್ರಶ್ನೆಪತ್ರಿಕೆಯನ್ನು ಎಗರಿಸಿದ್ದು ಯಾವ ಕೇಂದ್ರದಿಂದ? ಸಿಬಿಐ ಸ್ಫೋಟಕ ಮಾಹಿತಿ ಬಯಲು

V Sumangala
ಕರ್ನಾಟಕ3 hours ago

V Sumangala: ಶಿಕ್ಷಣ ಇಲಾಖೆಯಲ್ಲಿ 1.62 ಕೋಟಿ ರೂ. ಅಕ್ರಮ; DSERT ನಿರ್ದೇಶಕಿ ಸುಮಂಗಲಾ ಅಮಾನತು!

Sri lanka Team
ಕ್ರೀಡೆ4 hours ago

Sri lanka Team: ಟಿ20 ಸರಣಿ ಆರಂಭಕ್ಕೂ ಮುನ್ನವೇ ಲಂಕಾಗೆ ಗಾಯದ ಬರೆ; ಇಬ್ಬರು ವೇಗಿಗಳು ಔಟ್​

HD Deve Gowda
ದೇಶ5 hours ago

HD Deve Gowda: ವ್ಹೀಲ್‌ಚೇರ್‌ನಲ್ಲೇ ತೆರಳಿ ಮೋದಿಯನ್ನು ಭೇಟಿಯಾದ ದೇವೇಗೌಡ; ಇಲ್ಲಿವೆ ಫೋಟೊಗಳು

Team India
ಕ್ರೀಡೆ5 hours ago

Team India: ಲಂಕಾ ಸರಣಿಗೂ ಮುನ್ನವೇ ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ

Atal Setu
ಪ್ರಮುಖ ಸುದ್ದಿ5 hours ago

Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?

Health Minister Dinesh Gundurao instructs to send a team of deputy directors to dengue hot spots
ಕರ್ನಾಟಕ6 hours ago

Dengue Fever: ಬೆಂಗಳೂರಿನಲ್ಲೇ ಶೇ.50ರಷ್ಟು ಡೆಂಗ್ಯೂ ಪ್ರಕರಣಗಳು; ಹಾಟ್‌ಸ್ಪಾಟ್‌ಗಳಿಗೆ ಅಧಿಕಾರಿಗಳ ತಂಡ

Media Connect Founder and ceo Dr Divya Rangenahalli honored at Chess Festival in bengaluru
ಬೆಂಗಳೂರು6 hours ago

Media Connect: ಚೆಸ್‌ ಹಬ್ಬದಲ್ಲಿ ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಡಾ. ದಿವ್ಯಾ ರಂಗೇನಹಳ್ಳಿಗೆ ಸನ್ಮಾನ

1200 farmers suicides in last 15 months in Karnataka says Minister Pralhad Joshi Minister Pralhad Joshi alleges
ಕರ್ನಾಟಕ6 hours ago

Pralhad Joshi: ಕರ್ನಾಟಕದಲ್ಲಿ ಕಳೆದ 15 ತಿಂಗಳಲ್ಲಿ 1200 ರೈತರ ಆತ್ಮಹತ್ಯೆ!

BJP Protest
ಕರ್ನಾಟಕ6 hours ago

BJP Protest: ದಾಖಲೆ ನೀಡದೆ ಹೇಡಿಯಂತೆ ಪಲಾಯನ; ಸಿಎಂ ರಾಜೀನಾಮೆ ಪಡೆಯಲು ರಾಜ್ಯಪಾಲರಿಗೆ ಆರ್‌.ಅಶೋಕ್‌ ಮನವಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ10 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್13 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ14 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ15 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ2 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ2 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌