Monsoon Fashion: ಮಾನ್ಸೂನ್‌ ಸೀಸನ್‌ಗೆ ರ‍್ಯಾಪರ್‌ ಇಶಾನಿಯ ಫ್ಯಾಷನ್‌ ಟಿಪ್ಸ್‌ ಹೀಗಿದೆ! - Vistara News

ಫ್ಯಾಷನ್

Monsoon Fashion: ಮಾನ್ಸೂನ್‌ ಸೀಸನ್‌ಗೆ ರ‍್ಯಾಪರ್‌ ಇಶಾನಿಯ ಫ್ಯಾಷನ್‌ ಟಿಪ್ಸ್‌ ಹೀಗಿದೆ!

Monsoon Fashion: ಮಾನ್ಸೂನ್‌ ಸೀಸನ್‌ನಲ್ಲಿ ಬಿಗ್‌ ಬಾಸ್‌ ಸ್ಪರ್ಧಿ, ಕನ್ನಡ ರ‍್ಯಾಪರ್‌ ಇಶಾನಿಗೆ ಕೋ-ಆರ್ಡ್ ಸೆಟ್‌ಗಳ ಮೇಲೆ ಲವ್‌ ಆಗಿದೆ. ನೀಲಿ ವರ್ಣದ ಕೋ ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡಿರುವ ಅವರು ಮಳೆಗಾಲದಲ್ಲಿ ಕೂಲ್‌ ಲುಕ್‌ ನನ್ನದು ಎನ್ನುತ್ತಾರೆ. ಮಳೆಗಾಲಕ್ಕೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.

VISTARANEWS.COM


on

Monsoon Fashion
ಚಿತ್ರಗಳು: ಇಶಾನಿ, ಕನ್ನಡ ರ‍್ಯಾಪರ್‌, ಬಿಗ್‌ಬಾಸ್‌ ಕಂಟೆಸ್ಟಂಟ್‌, ಫೋಟೋ: ಉಮೇಶ್‌ ಫೋಟೋಗ್ರಫಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಂದರ್ಶನ: ಶೀಲಾ ಸಿ. ಶೆಟ್ಟಿ
ಮಾನ್ಸೂನ್‌ ಸೀಸನ್‌ನಲ್ಲಿ (Monsoon Fashion) ರ‍್ಯಾಪರ್‌ ಇಶಾನಿಗೆ ಕೋ- ಆರ್ಡ್ ಸೆಟ್‌ ಔಟ್‌ಫಿಟ್ಸ್ ಮೇಲೆ ಲವ್‌ ಹೆಚ್ಚಾಗಿದೆ. ಹೌದು, ಬಿಗ್‌ ಬಾಸ್‌ ಸ್ಪರ್ಧಿ, ಕನ್ನಡ ರ‍್ಯಾಪರ್‌ ಇಶಾನಿ, ಕೋ -ಆರ್ಡ್ ಸೆಟ್‌ ಲವರ್‌. ಇದೀಗ ಈ ಸೀಸನ್‌ಗೆ ಹೊಂದುವಂತಹ ನೀಲಿ ವರ್ಣದ ಸ್ಪೋರ್ಟ್ಸ್ ಲುಕ್‌ ನೀಡುವ ಕೋ- ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಮಳೆಗಾಲದಲ್ಲೂ ಕೂಲ್‌ ಲುಕ್‌ ನನ್ನ ಚಾಯ್ಸ್ ಎನ್ನುತ್ತಾರೆ.

Monsoon Fashion

ಇಶಾನಿ ಮ್ಯೂಸಿಕ್‌ ಲವ್‌

ಕನ್ನಡದ ರ‍್ಯಾಪರ್‌ ಇಶಾನಿ, ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಇಲ್ಲಿನ ಜನತೆಗೆ ಹತ್ತಿರವಾದರು.ಅ ವರ ಆಂಗ್ಲ ಮಿಶ್ರಿತ ಕನ್ನಡ ಅವರನ್ನು ವಿಭಿನ್ನವಾಗಿಸಿದೆ. ಹೆಚ್ಚು ಸಮಯ ದುಬೈನಲ್ಲಿ ಕಳೆದಿದ್ದರೂ, ಇದೀಗ ಇಲ್ಲಿಯೇ ಬ್ಯುಸಿಯಾಗಿರುವ ಇಶಾನಿ, ಆಗಾಗ್ಗೆ ಕನ್ನಡ ರ‍್ಯಾಪ್‌ ಸಾಂಗ್‌ಗಳನ್ನು ಬಿಡುಗಡೆಗೊಳ್ಳಿಸುತ್ತಿರುತ್ತಾರೆ. ತಮ್ಮದೇ ಆದ ಅಭಿಮಾನಿ ವರ್ಗವನ್ನು ಗಳಿಸಿದ್ದಾರೆ. ವಿಸ್ತಾರನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಬದಲಾಗುವ ಮಾನ್ಸೂನ್‌ ಸೀಸನ್‌ ಲುಕ್‌ ಬಗ್ಗೆ ತಿಳಿಸಿದರು. ತಾವು ಕೋ ಆರ್ಡ್ ಸೆಟ್‌ ಔಟ್‌ಫಿಟ್ಸ್ ಹೆಚ್ಚು ಇಷ್ಟಪಡುವುದಾಗಿ ಹೇಳಿದರು. ಅಲ್ಲದೇ, ಜೆನ್‌ ಜಿ ಹುಡುಗಿಯರಿಗೆ ಒಂದಿಷ್ಟು ಮಾನ್ಸೂನ್‌ ಲುಕ್‌ ಟಿಪ್ಸ್ ಕೂಡ ನೀಡಿದರು. ಈ ಕುರಿತಂತೆ ಇಲ್ಲಿದೆ ವಿವರ.

Monsoon Fashion

ವಿಸ್ತಾರ ನ್ಯೂಸ್‌: ಕನ್ನಡ ರ‍್ಯಾಪರ್‌ ಇಶಾನಿ ಎಂದಾಗ ಸಂತಸವಾಗುತ್ತದೆಯೋ ಅಥವಾ ಬಿಗ್‌ಬಾಸ್‌ ಸ್ಪರ್ಧಿ ಎಂದಾಗ ಖುಷಿಯಾಗುತ್ತದೆಯೋ ?

ಇಶಾನಿ: ಎರಡೂ ಹೇಳಿದಾಗಲೂ ಖುಷಿಯಾಗುತ್ತದೆ. ಕನ್ನಡದ ರ‍್ಯಾಪರ್‌ ಎಂದಾಗ ಸಾಧಿಸಿದ ಖುಷಿ. ಇನ್ನು, ಬಿಗ್‌ಬಾಸ್‌ ಸ್ಪರ್ಧಿ ಎಂದು ಗುರುತಿಸಿದಾಗ ಇನ್ನೊಂದು ವಿಧದ ಸಂತಸ.

Monsoon Fashion

ವಿಸ್ತಾರ ನ್ಯೂಸ್‌ : ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಮಾನ್ಸೂನ್‌ಗೆ ಬದಲಾಗಿದೆಯೇ!

ಇಶಾನಿ: ಖಂಡಿತ. ಸೀಸನ್‌ಗೆ ತಕ್ಕಂತೆ ಬದಲಾಗುತ್ತದೆ. ಅಲ್ಲದೇ, ಆಗಾಗ್ಗೆ ನನಗಿಷ್ಟವಾದ ಕೋ ಆರ್ಡ್ ಸೆಟ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಎಲ್ಲಾ ಬಗೆಯ ಲೇಯರ್‌ ಲುಕ್‌ ಕೂಡ ನನಗಿಷ್ಟ.

Monsoon Fashion

ವಿಸ್ತಾರ ನ್ಯೂಸ್‌: ನಿಮ್ಮ ಮಾನ್ಸೂನ್‌ ಸೀಸನ್‌ ಫ್ಯಾಷನ್‌ ಬಗ್ಗೆ ಹೇಳಿ?

ಇಶಾನಿ: ನನ್ನದು ಸದಾ ಬಿಂದಾಸ್‌ ಫ್ಯಾಷನ್‌! ಸೀಸನ್‌ಗೆ ತಕ್ಕಂತೆ ಎನ್ನುವುದಕ್ಕಿಂತಲೂ ಮಾರ್ಡನ್‌ ಲುಕ್‌ ನನಗಿಷ್ಟ. ಬೆಚ್ಚಗಿಡುವ ಜಾಕೆಟ್ಸ್, ವೈವಿಧ್ಯಮಯ ಕೋ -ಆರ್ಡ್ ಸೆಟ್‌ನಂತಹ ಔಟ್‌ಫಿಟ್‌ಗಳಲ್ಲಿ, ಲೇಯರಿಂಗ್‌ ಡ್ರೆಸ್‌ಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತೇನೆ.

ಇದನ್ನೂ ಓದಿ: ICW 2024: ಇಂಡಿಯಾ ಕೌಚರ್‌ ವೀಕ್‌ನಲ್ಲಿ ಸೆಲೆಬ್ರಿಟಿಗಳ ಕಲರವ!

ವಿಸ್ತಾರ ನ್ಯೂಸ್‌: ನಿಮ್ಮ ಸ್ಟೈಲಿಂಗ್‌ ಜೆನ್‌ ಜಿ ಹುಡುಗಿಯರನ್ನು ಆಕರ್ಷಿಸಿದೆ. ನೀವು ಅವರಿಗೆ ನೀಡುವ 5 ಟಿಪ್ಸ್ ಏನು?

  1. ನಿಮ್ಮ ಬಾಡಿಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಔಟ್‌ಫಿಟ್‌ ಧರಿಸಿ.
  2. ಸೀಸನ್‌ಗೆ ನಿಮ್ಮ ಸ್ಟೈಲಿಂಗ್‌ ಮ್ಯಾಚ್‌ ಮಾಡಿ.
  3. ಮಾನ್ಸೂನ್‌ನಲ್ಲಿ ಲೇಯರ್‌ ಲುಕ್‌ಗೆ ಆದ್ಯತೆ ನೀಡಿ.
  4. ಬಿಂದಾಸ್‌ ಸ್ಟೈಲ್‌ಸ್ಟೇಟ್‌ಮೆಂಟ್‌ಗಾಗಿ ವೆಸ್ಟರ್ನ್‌ ವೇರ್ಸ್ ಧರಿಸಿ.
  5. ಟ್ರೆಂಡ್‌ಗೆ ತಕ್ಕಂತೆ ಬದಲಾಗುವ ಬದಲು,ನಿಮಗೇನು ಬೆಸ್ಟ್ ಎಂಬುದನ್ನು ಕಂಡುಕೊಳ್ಳಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

ICW 2024: ಇಂಡಿಯಾ ಕೌಚರ್‌ ವೀಕ್‌ನಲ್ಲಿ ಸೆಲೆಬ್ರಿಟಿಗಳ ಕಲರವ!

ICW 2024: ಫ್ಯಾಷನ್‌ ಡಿಸೈನ್‌ ಕೌನ್ಸಿಲ್‌ ಆಫ್‌ ಇಂಡಿಯಾ ಸಹಯೋಗದೊಂದಿಗೆ ನಡೆಯುತ್ತಿರುವ ಈ ಸಾಲಿನ ಪ್ರತಿಷ್ಠಿತ ಇಂಡಿಯಾ ಕೌಚರ್‌ ವೀಕ್‌ ( 2024 )ಈಗಾಗಲೇ ದಿಲ್ಲಿಯಲ್ಲಿ ಆರಂಭವಾಗಿದ್ದು, ಮುಂಬರುವ ಜುಲೈ 31ರವರೆಗೂ ಮುಂದುವರೆಯಲಿದೆ. ಹಾಗಾದಲ್ಲಿ, ಮೊದಲ ದಿನದ ಚಿತ್ರಣ ಹೇಗಿತ್ತು? ಯಾರೆಲ್ಲಾ ಭಾಗವಹಿಸಿದ್ದರು ಎಂಬುದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

ICW 2024
ಚಿತ್ರಗಳು: ಇಂಡಿಯಾ ಕೌಚರ್‌ ವೀಕ್‌ 2024 ಆರಂಭ ದಿನದ ರ್ಯಾಂಪ್‌ ದೃಶ್ಯಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್‌ ಡಿಸೈನ್‌ ಕೌನ್ಸಿಲ್‌ ಆಫ್‌ ಇಂಡಿಯಾ ಸಹಯೋಗದೊಂದಿಗೆ (ICW 2024) ನಡೆಯುತ್ತಿರುವ 2024 ರ ಇಂಡಿಯಾ ಕೌಚರ್‌ ವೀಕ್‌, ದಿಲ್ಲಿಯಲ್ಲಿ ಆರಂಭವಾಗಿದ್ದು, ಜುಲೈ 31 ರವರೆಗೂ ಮುಂದುವರಿಯಲಿದೆ.
ಖ್ಯಾತ ಸೆಲೆಬ್ರೆಟಿ ಡಿಸೈನರ್‌ ಅಬು ಜಾನಿ ಸಂದೀಪ್‌ ಕೋಸ್ಲಾ, ರ‍್ಯಾಂಪ್‌ ಸೆಲೆಬ್ರೆಟಿ ವಾಕ್‌ ಮಾಡುವ ಮೂಲಕ ಈ ಫ್ಯಾಷನ್‌ ವೀಕ್‌ಗೆ ಚಾಲನೆ ನೀಡಿದ್ದಾರೆ. ಮೊದಲ ದಿನವೇ ಖ್ಯಾತ ಡಿಸೈನರ್‌ಗಳು, ತಮ್ಮ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದ್ದಾರೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

ICW 2024

ರ‍್ಯಾಂಪ್‌ ಮೇಲೆ ಅಬುಜಾನಿ ಸಂದೀಪ್‌ ಕೋಸ್ಲಾ

ಅಂಬಾನಿ ಮದುವೆಯ ಬಹುತೇಕ ದುಬಾರಿ ಡಿಸೈನರ್‌ವೇರ್‌ಗಳನ್ನು ಡಿಸೈನ್‌ ಮಾಡಿದ ಕ್ರೆಡಿಟ್‌ ಪಡೆದುಕೊಂಡಿರುವ ಅಬುಜಾನಿ ಸಂದೀಪ್‌ ಕೋಸ್ಲಾ ಜೋಡಿ, ಈ ಬಾರಿಯ ಇಂಡಿಯಾ ಕೌಚರ್‌ವೀಕ್‌ನ ಮೊದಲ ದಿನವೇ ರ‍್ಯಾಂಪ್‌ ಮೇಲೆ, ಸೆಲೆಬ್ರೆಟಿ ಶೋ ಸ್ಟಾಪರ್‌ಗಳ ಜೊತೆ ವಾಕ್‌ ಮಾಡುವ ಮೂಲಕ ಗ್ರೀನ್‌ ಸಿಗ್ನಲ್‌ ನೀಡಿತು. ಬ್ಲ್ಯಾಕ್‌ ಶೇಡ್‌ನ ಸಿಂಪಲ್‌ ಡಿಸೈನ್‌ನ ಶೆರ್ವಾನಿಯಲ್ಲಿ ಕಾಣಿಸಿಕೊಂಡ, ಈ ಜೋಡಿ, ಭಾಗವಹಿಸುವ ಡಿಸೈನರ್‌ಗಳಿಗೆ ಪ್ರೋತ್ಸಾಹ ತುಂಬಿತು.

ICW 2024

ಮೊದಲ ಬಾರಿ ರ‍್ಯಾಂಪ್‌ ಏರಿದ ಕಾಮಿಡಿಯನ್‌ ಸುಮುಖಿ ಸುರೇಶ್‌

ಫ್ಯಾಷನ್‌ ಶೋಗಳಲ್ಲಿ ಹಾಗೂ ವೀಕ್‌ಗಳಲ್ಲಿ ಇದುವರೆಗೂ ಯಾವ ಕಾಮಿಡಿಯನ್‌ಗೂ ಅವಕಾಶ ನೀಡಿರಲಿಲ್ಲ! ಈದೇ ಮೊತ್ತ ಮೊದಲ ಬಾರಿಗೆ ಖ್ಯಾತ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಸುಮುಖಿ ಸುರೇಶ್‌ ಅವರನ್ನು ವಾಕ್‌ ಮಾಡಿಸುವ ಮೂಲಕ ಅಬುಜಾನಿ ಸಂದೀಪ್‌ ಕೋಸ್ಲಾ ಜೋಡಿಯ ಸಮ್ಮುಖದಲ್ಲಿ ಗೌರವ ನೀಡಲಾಯಿತು. ಅಲ್ಲದೇ, ಸೆಲೆಬ್ರೆಟಿಗಳೊಂದಿಗೆ ಸುಮುಖಿಯವರು ರ‍್ಯಾಂಪ್‌ ವಾಕ್‌ ಕೂಡ ಮಾಡಿದರು.

ಬ್ಲ್ಯಾಕ್‌ ಬ್ರಾಲೆಟ್‌ ಸೀರೆಯಲ್ಲಿ ಸುಮುಖಿ

ಮೊದಲ ಬಾರಿಗೆ ರ‍್ಯಾಂಪ್‌ ಮೇಲೆ ಕಾಣಿಸಿಕೊಂಡ ಕಾಮಿಡಿಯನ್‌ ಸುಮುಖಿ, ಬ್ಲ್ಯಾಕ್‌ ಬ್ರಾಲೆಟ್‌ ಜಗಮಗಿಸುವ ಸೀರೆಯಲ್ಲಿ ರ‍್ಯಾಂಪ್‌ ವಾಕ್‌ ಜೊತೆಗೆ ಕಾಮಿಡಿ ಕೂಡ ಮಾಡಿ, ನೆರೆದಿದ್ದವರನ್ನು ನಗೆಗಡಲಲ್ಲಿ ಮುಳುಗಿಸಿದರು.

ಇದನ್ನೂ ಓದಿ: Sandalwood Star Fashion: ಮಾನ್ಸೂನ್‌ನಲ್ಲಿ ಮಾಲಾಶ್ರೀ ಮಗಳ ಗ್ಲಾಮರಸ್‌ ಫ್ಯಾಷನ್‌!

ಸೆಲೆಬ್ರೆಟಿ ಶೋ ಸ್ಟಾಪರ್ಸ್

ರಾಣಿ ಮತ್ತು ರಾಜಕುಮಾರ ಕಾನ್ಸೆಪ್ಟ್‌ಗೆ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದ ವಾಮಿಕಾ ಹಾಗೂ ತಾಹಾ ಶಾ ಗ್ರ್ಯಾಂಡ್‌ ಎಥ್ನಿಕ್‌ವೇರ್‌ಗಳಲ್ಲಿ ಮಿಂಚಿದರು. ಇನ್ನು, ಒಂದು ವಾರಗಳ ಕಾಲ ನಡೆಯುವ ಈ ಶೋ, ಹೊಸ ಡಿಸೈನರ್‌ಗಳು ಸೇರಿದಂತೆ ಖ್ಯಾತ ಡಿಸೈನರ್‌ಗಳ ಡಿಸೈನರ್‌ವೇರ್‌ಗಳಿಗೆ ಸಾಕ್ಷಿಯಾಗಲಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Sandalwood Star Fashion: ಮಾನ್ಸೂನ್‌ನಲ್ಲಿ ಮಾಲಾಶ್ರೀ ಮಗಳ ಗ್ಲಾಮರಸ್‌ ಫ್ಯಾಷನ್‌!

Snadalwood Star Fashion: ಮಾಲಾಶ್ರೀ ಮಗಳಾದ ಆರಾಧನಾ ಮಾನ್ಸೂನ್‌ ಸೀಸನ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಲೇಯರ್‌ ಲುಕ್‌ ಜೊತೆಜೊತೆಗೆ ಹಾಟ್‌ ಆಗಿಯೂ ಕಾಣಿಸಿಕೊಂಡಿರುವ ಅವರ ಈ ಸ್ಟೈಲಿಂಗ್‌ನ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Sandalwood Star Fashion
ಚಿತ್ರಗಳು: ಆರಾಧನಾ, ಸ್ಯಾಂಡಲ್‌ವುಡ್‌ ನಟಿ, ಫೋಟೋಗ್ರಾಫಿ: ವೇಣು ಕ್ರಿಶ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ ನಟಿ ಆರಾಧನಾ (Sandalwood Star Fashion) ಮಾನ್ಸೂನ್‌ ಸೀಸನ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಇನ್ನೂ ಮಾಲಾಶ್ರೀ ಮಗಳೆಂದೇ ಟ್ಯಾಗ್‌ಲೈನ್‌ ಹೊಂದಿರುವ ನಟಿ ಆರಾಧನಾ ಮಾನ್ಸೂನ್‌ ಸೀಸನ್‌ನಲ್ಲಿ ಹೈ ಸ್ಟ್ರೀಟ್‌ ಫ್ಯಾಷನ್‌ ಲುಕ್‌ಗೆ ಸೇರುವ ಲೆದರ್‌ ಲೇಯರ್‌ ಜಾಕೆಟ್‌ ಸಹಿತ ಹಾಗೂ ರಹಿತವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಮಾನ್ಸೂನ್‌ ಲುಕ್‌ನ ಸ್ಟೈಲಿಂಗ್‌ನ ಬಗ್ಗೆ ಫ್ಯಾಷನ್‌ ವಿಮರ್ಶಕರು ರಿವ್ಯೂ ನೀಡಿರುವುದೇನು? ಇಲ್ಲಿದೆ ಡಿಟೇಲ್ಸ್.

Sandalwood Star Fashion

ಬದಲಾಗುತ್ತಿರುವ ಆರಾಧನಾ ಸ್ಟೈಲ್‌ ಸ್ಟೇಟ್‌ಮೆಂಟ್ಸ್

“ಕಳೆದ ವಾರವಷ್ಟೇ ಬಾಲಿವುಡ್‌ ಖ್ಯಾತ ಫೋಟೋಗ್ರಾಫರ್‌ ಡಬ್ಬೂ ರತ್ನಾನಿ ಜೊತೆಯಲ್ಲಿ ಉದ್ಯಾನನಗರಿಯಲ್ಲಿ ಆಭರಣ ಪ್ರದರ್ಶನದ ಜಾಹೀರಾತಿಗಾಗಿ ಅಮ್ಮನೊಂದಿಗೆ ಅತ್ಯುತ್ಸಾಹದಿಂದ ಆರಾಧನಾ ಫೋಟೋ ಶೂಟ್‌ ಮಾಡಿಸಿಕೊಂಡಿದ್ದರು. ಆದಾದ ನಂತರ, ಇದೀಗ ಮತ್ತೊಮ್ಮೆ ಸ್ಥಳೀಯ ಫೋಟೋಶೂಟ್‌ನಲ್ಲಿ ಭಾಗವಹಿಸಿ, ಥೇಟ್‌ ಬಾಲಿವುಡ್‌ ನಟಿಯಂತೆ ಕಾಣಿಸಿಕೊಂಡಿದ್ದಾರೆ. ಇದು ಅವರ ಬದಲಾಗುತ್ತಿರುವ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳನ್ನು ಹೈಲೈಟ್‌ ಮಾಡುತ್ತಿದೆ. ಇದೊಂದು ಉತ್ತಮ ಬೆಳವಣಿಗೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

Sandalwood Star Fashion

ಮಾನ್ಸೂನ್‌ನಲ್ಲಿ ಆರಾಧನಾ ಗ್ಲಾಮರಸ್‌ ಲುಕ್‌

ಇನ್ನು, ಮಾನ್ಸೂನ್‌ನಲ್ಲಿ ಬಹುತೇಕ ನಟಿಯರು ಲೇಯರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಇದಕ್ಕೆ ಪೂರಕ ಎಂಬಂತೆ, ಆರಾಧನಾ ಕೂಡ ತಮ್ಮದೇ ಆದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಇದಕ್ಕಾಗಿ ವಿಂಟೇಜ್‌ ಲೆದರ್‌ ಜಾಕೆಟ್‌, ಕ್ರಾಪ್‌ ಟ್ಯೂಬ್‌ ಟಾಪ್‌ ಹಾಗೂ ಮಿನಿ ಸ್ಕರ್ಟ್ ಧರಿಸಿದ್ದಾರೆ. ಇವರ ಈ ಲುಕ್‌ಗೆ ಬ್ಲ್ಯಾಕ್‌ ಸನ್‌ಗ್ಲಾಸ್‌ ಹಾಗೂ ಬೂಟ್ಸ್ ಸಾಥ್‌ ನೀಡಿದೆ. ಅವರು ಧರಿಸಿರುವ ಲೇಯರ್‌ ನೆಕ್‌ ಚೈನ್‌, ಈ ಜನರೇಷನ್‌ ಹುಡುಗಿಯರ ಜ್ಯುವೆಲರಿ ಕ್ರೇಝ್‌ಗೆ ಕನ್ನಡಿ ಹಿಡಿದಿದೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರಾಕಿ.

Sandalwood Star Fashion

ಗ್ಲಾಮರಸ್‌ ಲುಕ್‌ಗಾಗಿ ಲೆದರ್‌ ಸ್ಕರ್ಟ್

ಆದರೆ, ಎಲ್ಲಾ ಓಕೆ. ಆದರೆ ಮಾನ್ಸೂನ್‌ನಲ್ಲಿ ಲೆದರ್ ಜಾಕೆಟ್‌ ಪ್ರಿಫರ್‌ ಮಾಡಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ ಫ್ಯಾಷನ್‌ ವಿಮರ್ಶಕರು. ಯಾಕೆಂದರೆ, ಈ ಸೀಸನ್‌ನಲ್ಲಿ ವಾಟರ್‌ ಪ್ರೂಫ್‌ ಅಥವಾ ಇನ್ನಿತರೇ ಜಾಕೆಟ್‌ಗಳು ಚಾಲ್ತಿಯಲ್ಲಿವೆ. ಆದರೆ, ಲೆದರ್‌ನವು ಇನ್ನೂ ಎಂಟ್ರಿ ನೀಡಿಲ್ಲ! ಸದ್ಯಕ್ಕೆ ಇವು ಇನ್ನೂ ಚಳಿಗಾಲದ ಫ್ಯಾಷನ್‌ ಕೆಗಟರಿಯಲ್ಲಿವೆ. ಬಹುಶಃ ಗ್ಲಾಮರಸ್‌ ಲುಕ್‌ಗಾಗಿ ಇವನ್ನು ಬಳಸಿರಬಹುದು ಎಂದಿದ್ದಾರೆ ಫ್ಯಾಷನ್‌ ಎಕ್ಸ್‌ಫರ್ಟ್ಸ್.

ಇದನ್ನೂ ಓದಿ: Floral Dupatta Recreation: ಅಂಬಾನಿ ಸೊಸೆಯ ದುಂಡು ಮಲ್ಲಿಗೆ ದುಪಟ್ಟಾ ಕೇವಲ 2 ಸಾವಿರ ರೂ.ಯಲ್ಲಿ ಮರು ಸೃಷ್ಟಿ!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Floral Dupatta Recreation: ಅಂಬಾನಿ ಸೊಸೆಯ ದುಂಡು ಮಲ್ಲಿಗೆ ದುಪಟ್ಟಾ ಕೇವಲ 2 ಸಾವಿರ ರೂ.ಯಲ್ಲಿ ಮರು ಸೃಷ್ಟಿ!

Floral Dupatta Recreation: ಲಕ್ಷಗಟ್ಟಲೇ ಹಣ ಸುರಿದು ತಮ್ಮ ಅರಿಷಿಶಿನ ಶಾಸ್ತ್ರದಲ್ಲಿ ರಾಧಿಕಾ ಮರ್ಚೆಂಟ್‌ ಹೊದ್ದುಕೊಂಡಿದ್ದ ಡಿಸೈನರ್‌ ಪೂಲೋಂಕಾ ಚಾದರವನ್ನು ಕೇವಲ 2 ಸಾವಿರ ರೂ.ಗಳಿಗೂ ಕಡಿಮೆ ವೆಚ್ಚದಲ್ಲಿ ರೀ ಕ್ರಿಯೇಟ್‌ ಮಾಡಿರುವ ಫ್ಯಾಷನ್‌ ಇನ್‌ಫ್ಲೂಯೆನ್ಸರ್ ಅರುಶಿ ಬಗ್ಗೆ ಎಲ್ಲೆಡೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಈ ಕುರಿತಂತೆ ಫ್ಯಾಷನ್‌ ವಿಶ್ಲೇಷಕರು ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Floral Dupatta Recreation
ಚಿತ್ರಗಳು: ಅರುಶಿ ಪಾಹ್ವಾ, ಇನ್ಸ್‌ಟಾಗ್ರಾಮ್‌ ಖಾತೆ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಧಿಕಾ ಮರ್ಚೆಂಟ್‌ ತಮ್ಮ ಪ್ರಿ –ವೆಡ್ಡಿಂಗ್‌ನ ಅರಿಷಿಣ ಶಾಸ್ತ್ರದಲ್ಲಿ ಧರಿಸಿದ್ದ ದುಬಾರಿ ಫ್ಲೋರಲ್ ದುಪಟ್ಟಾ, ಇದೀಗ ಕೇವಲ 2 ಸಾವಿರ ರೂ.ಗಳಿಗೆ ಮರು ಸೃಷ್ಟಿಯಾಗಿದೆ. ಹೌದು. ದಿಲ್ಲಿ ಮೂಲದ ಫ್ಯಾಷನ್‌ ಇನ್‌ಫ್ಲೂಯೆನ್ಸರ್ ಅರುಶಿ ಪಾಹ್ವಾ ಎಂಬುವರು ಈ ಫ್ಲೋರಲ್‌ ದುಪಟ್ಟಾವನ್ನು ಮರು ಸೃಷ್ಟಿಸಿದ್ದು, ಫ್ಯಾಷನ್‌ ಲೋಕದಲ್ಲಿ ಇವರ ಈ ಕ್ರಿಯೇಟಿವಿಟಿಗೆ ಪ್ರಶಂಶೆಯ ಸುರಿಮಳೆಯಾಗಿದೆ.

Floral Dupatta Recreation

ಕೈಗೆಟಕುವ ಬೆಲೆಯಲ್ಲಿ ಫ್ಲೋರಲ್‌ ದುಪಟ್ಟಾ ರೀ ಕ್ರಿಯೇಷನ್‌

ಅಬ್ಬಬ್ಬಾ… ಕೆಲವು ಸೆಲೆಬ್ರೆಟಿಗಳ ಡಿಸೈನರ್‌ವೇರ್‌ಗಳನ್ನು ನೋಡಿದಾಗ, ದುಬಾರಿಯಾಗಿರುವ ಇಂಥವನ್ನು ಸಾಮಾನ್ಯ ಹೆಣ್ಣು ಮಕ್ಕಳು ಕೊಳ್ಳಲು ಅಥವಾ ಧರಿಸಲು ಸಾಧ್ಯವೇ ಇಲ್ಲ ಎಂಬುದನ್ನು ಸುಳ್ಳಾಗಿಸಿದ್ದಾರೆ ಫ್ಯಾಷನ್‌ ಇನ್‌ಫ್ಲೂಯೆನ್ಸರ್ ಅರುಶಿ. ಇದು ಸಾಕಷ್ಟು ಸ್ಥಳೀಯ ಹಾಗೂ ಭಾವಿ ಡಿಸೈನರ್‌ಗಳಿಗೆ ಮಾದರಿಯಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಿಯಾ.

Floral Dupatta Recreation

ದುಂಡು ಮಲ್ಲಿಗೆ ದುಪಟ್ಟಾ ರೀ ಕ್ರಿಯೇಟ್‌ ಮಾಡಿದ ಕಥೆ

ಅಂದಹಾಗೆ, ಅರುಶಿಯವರು, ರೀ ಕ್ರಿಯೇಟ್‌ ಮಾಡುವ ಮೊದಲು ಎಲ್ಲಾ ಹೂ ಮಾರಾಟಗಾರರು ಹಾಗೂ ಡಿಸೈನರ್‌ಗಳ ಬಳಿ ಹೋಗಿ ವಿಚಾರಿಸಿ ಕೇಳಿದರಂತೆ. ಕೆಲವರು ಕನಿಷ್ಟವೆಂದರೂ ಹದಿನೈದು ಸಾವಿರ ರೂ.ಗಳಾಗಬಹುದು ಎಂದರಂತೆ. ಇನ್ನು, ಕೆಲವರು ಅತಿ ಬೇಗ ಮುದುಡುವ ಹೂವಾದ್ದರಿಂದ ರೆಡಿ ಮಾಡಿಕೊಡಲು ಒಲ್ಲೆ ಎಂದರಂತೆ. ಆಗ ಅರುಶಿ, ತಾವೇ ಖುದ್ದು ರೀ ಕ್ರಿಯೇಟ್‌ ಮಾಡುವ ಕೆಲಸಕ್ಕೆ ಕೈ ಹಾಕಿದರಂತೆ. ಇದನ್ನು ಅವರು ತಮ್ಮ ಯೂ ಟ್ಯೂಬ್‌ನಲ್ಲಿನ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ, ತಾವು ಇದಕ್ಕಾಗಿ ಚಾಂದನಿ ಚೌಕ್‌ನಿಂದ ಮೋತಿ ನಗರ್‌ವರೆಗೂ ಹೂವಿನ ಮಾರ್ಕೆಟ್‌ನಲ್ಲಿ ಅಲೆದಲೆದು, ಕೊಂಡು ಮನೆಗೆ ತಂದು, ಅವುಗಳನ್ನು ತಾಳ್ಮೆಯಿಂದ ಹೆಣೆದು, ಪೊಣಿಸಿ, ಕೊನೆಗೂ ರಾಧಿಕಾ ಫ್ಲೋರಲ್‌ ದುಪಟ್ಟಾದಂತೆಯೇ ಕಾಣುವ ದುಪಟ್ಟಾ ಮರು ಸೃಷ್ಠಿಸಿದರಂತೆ. ಆಗಾಗ್ಗೆ ಹೂಗಳು ಬಾಡದಂತೆ ನೀರನ್ನು ಸಿಂಪಡಿಸಿ, ಕಾಪಾಡಿದರಂತೆ. ನಂತರ ಥೇಟ್‌ ರಾಧಿಕಾಳಂತೆ ಸಿಂಗರಿಸಿಕೊಂಡು ದುಪಟ್ಟಾ ಧರಿಸಿ ಸಂತಸ ಪಟ್ಟಿದ್ದನ್ನು ಅವರು ಮರೆಯಲಾಗುವುದಿಲ್ಲವಂತೆ.

ಅರುಶಿಯನ್ನು ಹಾಡಿ ಹೊಗಳಿದ ಫ್ಯಾಷನ್‌ ವಿಶ್ಲೇಷಕರು

ಸೆಲೆಬ್ರೆಟಿ ಡಿಸೈನರ್‌ ಅನಾಮಿಕಾ ಖನ್ನಾ ಅವರ ಡಿಸೈನ್‌ನಲ್ಲಿ ತಯಾರಾದ ರಾಧಿಕಾ ಫ್ಲೋರಲ್‌ ದುಪಟ್ಟಾದಂತೆಯೇ, ಅರುಶಿ ಅವರು ಸಿದ್ಧಪಡಿಸಿದ ಹೂವುಗಳ ದುಪಟ್ಟಾ ಫ್ಯಾಷನ್‌ ವಿನ್ಯಾಸಕರ ಮನಗೆದ್ದಿದೆ. ಅಲ್ಲದೇ, ಅತಿ ಕಡಿಮೆ ಬೆಲೆಯಲ್ಲಿ, ಸುಮಾರು 12 ಗಂಟೆಗಳ ಕಾಲ ಕಷ್ಟಪಟ್ಟು, ರೀ ಕ್ರೀಯೇಟ್‌ ಮಾಡಿರುವುದು ಫ್ಯಾಷನ್‌ ವಿಶ್ಲೇಷಕರ ಮನ ಗೆದ್ದಿದೆ. ಸಾಮಾನ್ಯ ಮಹಿಳೆಯು ಕೂಡ ಕಡಿಮೆ ಖರ್ಚಿನಲ್ಲಿ ಸೆಲೆಬ್ರೆಟಿ ಲುಕ್‌ ನೀಡುವ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಬಹುದಕ್ಕೆ ಮಾದರಿಯಾಗಿದೆ. ಇಂತಹವರನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ ಫ್ಯಾಷನಿಸ್ಟಾಗಳಾದ ವಿದ್ಯಾ ಹಾಗೂ ರಾಕಿ.

ಇದನ್ನೂ ಓದಿ: Monsoon Fashion: ಮಾನ್ಸೂನ್‌ಗೆ ಮರಳಿದೆ ಕಾರ್ಪೋರೇಟ್‌ ಯುವತಿಯರ ಬ್ಲೇಜರ್‌ ಜಾಕೆಟ್‌ ಫ್ಯಾಷನ್‌

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Monsoon Fashion: ಮಾನ್ಸೂನ್‌ಗೆ ಮರಳಿದೆ ಕಾರ್ಪೋರೇಟ್‌ ಯುವತಿಯರ ಬ್ಲೇಜರ್‌ ಜಾಕೆಟ್‌ ಫ್ಯಾಷನ್‌

Monsoon Fashion: ಕಾರ್ಪೋರೇಟ್‌ ಕ್ಷೇತ್ರದ ಯುವತಿಯರ ಬ್ಲೇಜರ್‌ ಜಾಕೆಟ್‌ ಫ್ಯಾಷನ್‌ ಈ ಮಾನ್ಸೂನ್‌ನಲ್ಲಿ ಮತ್ತೆ ಮರಳಿದೆ. ಇವುಗಳ ಡಿಫರೆಂಟ್‌ ಸ್ಟೈಲಿಂಗ್‌ನಿಂದ ಎಲ್ಲರನ್ನು ಸೆಳೆದಿದೆ. ಹಾಗಾದಲ್ಲಿ, ಸ್ಟೈಲಿಂಗ್‌ ಹೇಗೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

VISTARANEWS.COM


on

Monsoon Fashion
ಚಿತ್ರಗಳು: ನಮಿತಾ ಪ್ರಮೋದ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾರ್ಪೋರೇಟ್‌ ಕ್ಷೇತ್ರದ ಯುವತಿಯರ ಬ್ಲೇಜರ್‌ ಜಾಕೆಟ್‌ ಫ್ಯಾಷನ್‌ ಮಾನ್ಸೂನ್‌ ಸೀಸನ್‌ನಲ್ಲಿ (Monsoon Fashion) ಮತ್ತೆ ಮರಳಿದೆ. ಹೌದು, ಈ ಬಾರಿಯ ಮಾನ್ಸೂನ್‌ನಲ್ಲಿ ಕಾರ್ಪೋರೇಟ್‌ ಕ್ಷೇತ್ರದ ಯುವತಿಯರ ಫ್ಯಾಷನ್‌ನಲ್ಲಿ ನಾನಾ ಬಗೆಯ ಬ್ಲೇಝರ್‌ ಜಾಕೆಟ್‌ಗಳು, ನಯಾ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡಿವೆ.

Monsoon Fashion

ಬ್ಲೇಜರ್‌ ಜಾಕೆಟ್‌ನ ಕ್ಲಾಸಿ ಲುಕ್‌

“ಅಂದಹಾಗೆ ಬ್ಲೇಜರ್‌ ಜಾಕೆಟ್‌ ಫ್ಯಾಷನ್‌ ಹೊಸತೇನಲ್ಲ! ಆದರೆ, ಇದು ಇದುವರೆಗೂ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಇದೀಗ ಕಾರ್ಪೋರೇಟ್‌ ಕ್ಷೇತ್ರದ ಯುವತಿಯರನ್ನು ಮಾತ್ರವಲ್ಲ, ಇನ್ನಿತರೇ ಹುಡುಗಿಯರನ್ನು ಸೆಳೆದಿವೆ. ಇದಕ್ಕೆ ಕಾರಣ ಇವನ್ನು ಹೊಸ ಸ್ಟೈಲಿಂಗ್‌ ಮೂಲಕ ಧರಿಸಲಾರಂಭಿಸಿರುವುದು” ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಅವರ ಪ್ರಕಾರ, ಬ್ಲೇಜರ್‌ ಜಾಕೆಟ್‌ಗಳು, ಹೈ ಫ್ಯಾಷನ್‌ನಲ್ಲಿರುವಂತಹ ಕ್ಲಾಸಿ ಲುಕ್‌ ನೀಡುವ ಡ್ರೆಸ್‌ಕೋಡ್‌ ಎನ್ನುತ್ತಾರೆ.

Monsoon Fashion

ಮಳೆಗಾಲದಲ್ಲಿ ಬ್ಲೇಜರ್‌ ಜಾಕೆಟ್‌ ಪ್ರಭಾವ

ಮಳೆಗಾಲದಲ್ಲಿ ಬ್ಲೇಜರ್‌ ಜಾಕೆಟ್‌ಗಳು ಲೇಯರ್‌ ಲುಕ್‌ ನೀಡುತ್ತವೆ ಅಲ್ಲದೇ, ಕಾರ್ಪೋರೇಟ್‌ ಕ್ಷೇತ್ರದ ಯುವತಿಯರಿಗೆ ದಿನನಿತ್ಯದ ಮೀಟಿಂಗ್‌ ಹಾಗೂ ವರ್ಕ್‌ಶಾಪ್‌ಗಳಿಗೆ ಮ್ಯಾಚ್‌ ಆಗುತ್ತವೆ. ಅಲ್ಲದೇ, ಸದಾ ಎಸಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಇವು ಬೆಚ್ಚಗಿಡುತ್ತವೆ ಕೂಡ. ಇನ್ನು, ಹೈ ಫ್ಯಾಷನ್‌ ಲಿಸ್ಟ್ನಲ್ಲಿರುವ, ಇವು ಹೈ ಕ್ಲಾಸ್‌ ಲುಕ್‌ ನೀಡುವುದರೊಂದಿಗೆ ಧರಿಸುವ ಯುವತಿಯರ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

Monsoon Fashion

ಟ್ರೆಂಡಿಯಾಗಿರುವ ಬ್ಲೇಜರ್‌ ಜಾಕೆಟ್ಸ್

ವೂಲ್‌, ಚೆಕ್ಡ್, ಗಿಂಗ್ನಂ ಶೈಲಿಯ ಬ್ಲೇಜರ್‌ ಜಾಕೆಟ್‌ಗಳು ಈ ಜನರೇಷನ್‌ ಹುಡುಗಿಯರನ್ನು ಸೆಳೆದಿವೆ. ಅದರಲ್ಲೂ ಲೈಟ್‌ವೈಟ್‌ ಬ್ಲೇಜರ್‌ ಜಾಕೆಟ್‌ಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ. ನೋಡಲು ವೆಸ್ಟರ್ನ್‌ ಲುಕ್‌ ನೀಡಿದರೂ ಆಕರ್ಷಕವಾಗಿ ಕಾಣಿಸುವ ಈ ಜಾಕೆಟ್‌ ಲುಕ್‌ನ ಬ್ಲೇಜರ್‌ಗಳು ಸದ್ಯ ಕಾರ್ಪೋರೇಟ್‌ ಕ್ಷೇತ್ರದ ಯುವತಿಯರ ಫ್ಯಾಷನ್‌ನ ಟಾಪ್‌ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Monsoon Fashion

ಯುವತಿಯರ ಬ್ಲೇಜರ್‌ ಜಾಕೆಟ್ ಸ್ಟೈಲಿಂಗ್‌ಗೆ 5 ಟಿಪ್ಸ್

  • ಜೀನ್ಸ್ ಪ್ಯಾಂಟ್‌ ಮೇಲೆ ಕ್ಯಾಶುವಲ್‌ ಲುಕ್‌ಗಾಗಿ ಧರಿಸಬಹುದು.
  • ಕೊಂಚ ಮಾಡರ್ನ್‌ ಲುಕ್‌ ಬೇಕಿದ್ದಲ್ಲಿ, ಕ್ರಾಪ್‌ ಟಾಪ್‌ ಅಥವಾ ಕ್ರಾಪ್‌ ಬ್ಲೌಸ್‌ಗೂ ಧರಿಸಬಹುದು.
  • ಸ್ಕರ್ಟ್ ಜೊತೆಗೂ ಮ್ಯಾಚ್‌ ಮಾಡಬಹುದು.
  • ಬ್ಲೇಜರ್‌ ಜಾಕೆಟ್‌ ಧರಿಸಿದಾಗ ಆದಷ್ಟೂ ಶೂಗಳನ್ನು ಧರಿಸಲೇಬೇಕು.
  • ಆಕ್ಸೆಸರೀಸ್‌ ಮಿನಿಮಲ್‌ ಆಗಿರಬೇಕು.

ಇದನ್ನೂ ಓದಿ: Monsoon fashion: ಶರ್ಟ್ ಸ್ಟೈಲ್‌ ಜಾಕೆಟ್ಸ್; ಇವು ಯುವಕರ ಮಳೆಗಾಲದ ಫ್ಯಾಷನ್‌ ಟ್ರೆಂಡ್‌

( ಲೇಖಕಿ : ಫ್ಯಾಷನ್‌ ಪತ್ರಕರ್ತೆ )

Continue Reading
Advertisement
NEET UG 2024
ದೇಶ4 hours ago

NEET UG 2024: ನೀಟ್‌ ಪ್ರಶ್ನೆಪತ್ರಿಕೆಯನ್ನು ಎಗರಿಸಿದ್ದು ಯಾವ ಕೇಂದ್ರದಿಂದ? ಸಿಬಿಐ ಸ್ಫೋಟಕ ಮಾಹಿತಿ ಬಯಲು

V Sumangala
ಕರ್ನಾಟಕ4 hours ago

V Sumangala: ಶಿಕ್ಷಣ ಇಲಾಖೆಯಲ್ಲಿ 1.62 ಕೋಟಿ ರೂ. ಅಕ್ರಮ; DSERT ನಿರ್ದೇಶಕಿ ಸುಮಂಗಲಾ ಅಮಾನತು!

Sri lanka Team
ಕ್ರೀಡೆ5 hours ago

Sri lanka Team: ಟಿ20 ಸರಣಿ ಆರಂಭಕ್ಕೂ ಮುನ್ನವೇ ಲಂಕಾಗೆ ಗಾಯದ ಬರೆ; ಇಬ್ಬರು ವೇಗಿಗಳು ಔಟ್​

HD Deve Gowda
ದೇಶ6 hours ago

HD Deve Gowda: ವ್ಹೀಲ್‌ಚೇರ್‌ನಲ್ಲೇ ತೆರಳಿ ಮೋದಿಯನ್ನು ಭೇಟಿಯಾದ ದೇವೇಗೌಡ; ಇಲ್ಲಿವೆ ಫೋಟೊಗಳು

Team India
ಕ್ರೀಡೆ6 hours ago

Team India: ಲಂಕಾ ಸರಣಿಗೂ ಮುನ್ನವೇ ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ

Atal Setu
ಪ್ರಮುಖ ಸುದ್ದಿ6 hours ago

Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?

Health Minister Dinesh Gundurao instructs to send a team of deputy directors to dengue hot spots
ಕರ್ನಾಟಕ7 hours ago

Dengue Fever: ಬೆಂಗಳೂರಿನಲ್ಲೇ ಶೇ.50ರಷ್ಟು ಡೆಂಗ್ಯೂ ಪ್ರಕರಣಗಳು; ಹಾಟ್‌ಸ್ಪಾಟ್‌ಗಳಿಗೆ ಅಧಿಕಾರಿಗಳ ತಂಡ

Media Connect Founder and ceo Dr Divya Rangenahalli honored at Chess Festival in bengaluru
ಬೆಂಗಳೂರು7 hours ago

Media Connect: ಚೆಸ್‌ ಹಬ್ಬದಲ್ಲಿ ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಡಾ. ದಿವ್ಯಾ ರಂಗೇನಹಳ್ಳಿಗೆ ಸನ್ಮಾನ

1200 farmers suicides in last 15 months in Karnataka says Minister Pralhad Joshi Minister Pralhad Joshi alleges
ಕರ್ನಾಟಕ7 hours ago

Pralhad Joshi: ಕರ್ನಾಟಕದಲ್ಲಿ ಕಳೆದ 15 ತಿಂಗಳಲ್ಲಿ 1200 ರೈತರ ಆತ್ಮಹತ್ಯೆ!

BJP Protest
ಕರ್ನಾಟಕ7 hours ago

BJP Protest: ದಾಖಲೆ ನೀಡದೆ ಹೇಡಿಯಂತೆ ಪಲಾಯನ; ಸಿಎಂ ರಾಜೀನಾಮೆ ಪಡೆಯಲು ರಾಜ್ಯಪಾಲರಿಗೆ ಆರ್‌.ಅಶೋಕ್‌ ಮನವಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ11 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್14 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ15 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ16 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ2 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ2 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌