Paris Olympics 2024 : ಒಲಿಂಪಿಕ್ಸ್​ಗೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​ನ ರೈಲ್ವೆ ವ್ಯವಸ್ಥೆ ಮೇಲೆ ವಿಧ್ವಂಸಕ ದಾಳಿ - Vistara News

ಪ್ರಮುಖ ಸುದ್ದಿ

Paris Olympics 2024 : ಒಲಿಂಪಿಕ್ಸ್​ಗೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​ನ ರೈಲ್ವೆ ವ್ಯವಸ್ಥೆ ಮೇಲೆ ವಿಧ್ವಂಸಕ ದಾಳಿ

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024 ರ (Paris Olympics 2024) ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​​ನ ಹೈಸ್ಪೀಡ್ ಟಿಜಿವಿ ರೈಲು ಜಾಲದ ಮೇಲೆ ದುಷ್ಕರ್ಮಿಗಳ ದಾಳಿ ನಡೆದಿದೆ. ಶುಕ್ರವಾರ ರೈಲಿನ ತಾಂತ್ರಿಕ ನಿರ್ವಹಣಾ ಕೇಂದ್ರಗಳಿಗೆ ಬೆಂಕಿ ಹಚ್ಚವಲಾಗಿದೆ. ದುರುದ್ದೇಶದ ಕೃತ್ಯಗಳಿಂದಾಗಿ ರೈಲು ಸಂಪರ್ಕ ಜಾಲಕ್ಕೆ ಹಾನಿಯಾಗಿದೆ. ಇದು ದೇಶದ ಜನನಿಬಿಡ ರೈಲು ಮಾರ್ಗಗಳಿಗೆ ಅಡ್ಡಿಯಾಗಿದ್ದು, ಪ್ರಯಾಣಿಕರು ಅರ್ಧ ದಾರಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಕ್ರೀಡಾಕೂಟಕ್ಕೆ ಮುಂಚಿತವಾಗಿ ಪ್ರಯಾಣಕ್ಕೆ ಅಡ್ಡಿಪಡಿಸಲು ಈ ದಾಳಿ ನಡೆಸಲಾಗಿದ್ದು ಇದು ಸಂಘಟಿತ ವಿಧ್ವಂಸಕ ಕೃತ್ಯ ಎಂದು ಹೇಳಲಾಗಿದೆ.

ಪ್ಯಾರಿಸ್ ಅನ್ನು ಪಶ್ಚಿಮ, ಉತ್ತರ ಮತ್ತು ಪೂರ್ವ ಪ್ರದೇಶಗಳೊಂದಿಗೆ ಸಂಪರ್ಕಿಸುವ ಮಾರ್ಗಗಳಲ್ಲಿನ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಎಸ್ಎನ್​ಸಿಎಫ್ ತಿಳಿಸಿದೆ. ಇಂಗ್ಲಿಷ್ ಕಾಲುವೆಯ ಕೆಳಗಿರುವ ಲಂಡನ್ ಮತ್ತು ನೆರೆಯ ಬೆಲ್ಜಿಯಂಗೆ ಪ್ರಯಾಣದ ಮೇಲೂ ಇದು ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ.

ಅಲ್ಲಿ ರೈಲು ವಿಭಾಗ ಹಲವಾರು ರೈಲುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಯಿತು ಮತ್ತು ರದ್ದುಗೊಳಿಸಬೇಕಾಯಿತು ಎಂದು ಹೇಳಲಾಗಿದೆ. ದುರಸ್ತಿಯ ಮೇಲ್ವಿಚಾರಣೆಗಾಗಿ ಸುರಕ್ಷತಾ ತಂಡ ಸ್ಥಳದಲ್ಲಿದೆ ಎಂದು ಹೇಳಿದ್ದಾರೆ. ವಾರಾಂತ್ಯದಲ್ಲಿ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.

“ಅಟ್ಲಾಂಟಿಕ್, ಉತ್ತರ ಮತ್ತು ಪೂರ್ವ ಹೈಸ್ಪೀಡ್ ಮಾರ್ಗಗಳಲ್ಲಿ ಹಲವೆಡೆ ಬೆಂಕಿ ಹಚ್ಚಲಾಗಿದೆ. ನಮ್ಮ ರೈಲ್ವೆ ವ್ಯವಸ್ಥೆಗಳನ್ನು ಹಾನಿಗೊಳಿಸಲು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Nissan SUV X-TRAIL : ನಿಸ್ಸಾನ್ ನ ಹೊಚ್ಚ ಹೊಸ 4 ಜನರೇಷನ್ ಪ್ರೀಮಿಯಂ ಅರ್ಬನ್ ಎಸ್‌ಯುವಿ ಎಕ್ಸ್-ಟ್ರಯಲ್ ಬಿಡುಗಡೆ

ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ನಡೆದ ದಾಳಿಗಳನ್ನು ಸರ್ಕಾರಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ, ಈ ಘಟನೆಗಳಿಂದ ಕ್ರೀಡಾಕೂಟಗಳ ತಾಣಕ್ಕೆ ಯಾವುದೇ ಸಂಪರ್ಕ ಕಡಿತಗೊಂಡಿಲ್ಲ.

ಸಾರಿಗೆ ಸಚಿವ ಪ್ಯಾಟ್ರಿಸ್ ವೆರ್ಗ್ರೀಟ್ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ “ಕ್ರಿಮಿನಲ್ ಘಟನೆಗಳನ್ನು ಖಂಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ರೈಲ್ವೆ ಸಂಚಾರವನ್ನು ಪುನಃಸ್ಥಾಪಿಸಲು ಎಸ್ ಎನ್ ಸಿಎಫ್ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.ದುರಸ್ತಿ ಕಾರ್ಯಗಳು ನಡೆಯುತ್ತಿದೆ. ರೈಲುಗಳನ್ನು ತಮ್ಮ ನಿರ್ಗಮನ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಆದಾಗ್ಯೂ ತಮ್ಮ ಪ್ರಯಾಣವನ್ನು ಮುಂದೂಡುವಂತೆ ಪ್ರಯಾಣಿಕರಿಗೆ ಕೋಲಾಗಿದೆ.

ಇಷ್ಟು ದೊಡ್ಡ ಪ್ರಮಾಣದ ದಾಳಿಯು “ಟಿಜಿವಿ ನೆಟ್ವರ್ಕ್ ಅನ್ನು ನಿಷ್ಕ್ರಿಯಗೊಳಿಸುವ” ಗುರಿ ಹೊಂದಿತ್ತು ರೈಲ್ವೆ ಕಂಪನಿ ಹೇಳಿದೆ. ಸುಮಾರು 800,000 ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ ಎಂದು ಅದು ಹೇಳಿದೆ.

ವಿಧ್ವಂಸಕ ಕೃತ್ಯದಿಂದ ಲಂಡನ್ ಮತ್ತು ಪ್ಯಾರಿಸ್ ನಡುವಿನ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ICC Champions Trophy : ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!

ICC Champions Trophy: 2024-2026ರ ಅವಧಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಎಲ್ಲಾ ಸ್ವರೂಪಗಳಲ್ಲಿ 61 ಪಂದ್ಯಗಳನ್ನು ಆಡಲಿದೆ. 11 ಟೆಸ್ಟ್, 26 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಲಿದೆ. ಅಂತಾರಾಷ್ಟ್ರೀಯ ದೂರದರ್ಶನ ಹಕ್ಕುಗಳನ್ನು ಮಾರಾಟ ಮಾಡಲು ಮುಂದಾಗಿದೆ.

VISTARANEWS.COM


on

Pakistan Cricket Board
Koo

ಬೆಂಗಳೂರು: ಬಿಸಿಸಿಐ ಶಾಲಾ ಮಕ್ಕಳ ಕ್ರಿಕೆಟ್​ನ ಸಣ್ಣ ಟೂರ್ನಿಯನ್ನು ಆಯೋಜಿಸಿದರೂ ಮಾಧ್ಯಮಗಳು ಅದರ ಪ್ರಸಾರದ ಹಕ್ಕನ್ನು ಪಡೆಯಲು ಕ್ಯೂ ನಿಲ್ಲುತ್ತಾರೆ. ಕೊಟ್ಯಂತರ ರೂಪಾಯಿ ಸುರಿದು ಅದರ ಹಕ್ಕನ್ನು ಪಡೆಯಲು ಮುಂದಾಗುತ್ತಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು ಹಾಕಿದ ಅಂತಾರಾಷ್ಟ್ರೀಯ ಬಿಡ್​ ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಮಂಡಳಿ (PCB) ತನ್ನ ನಿರೀಕ್ಷೆಗಳನ್ನು ಪೂರೈಸದ ಕಾರಣ ಅಂತರರಾಷ್ಟ್ರೀಯ ಮಾಧ್ಯಮ ಹಕ್ಕುಗಳನ್ನು ಪಡೆಯುವಲ್ಲಿ ಮತ್ತೊಮ್ಮೆ ಹಿನ್ನಡೆಯನ್ನು ಎದುರಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy) ಮುನ್ನ ಇದು ದೊಡ್ಡ ಹಿನ್ನಡೆಯಾಗಿದೆ.

ಆಗಸ್ಟ್ 2024 ರಿಂದ ಡಿಸೆಂಬರ್ 2026 ರವರೆಗೆ ದೂರದರ್ಶನ, ಡಿಜಿಟಲ್, ಆಡಿಯೋ, ವೆಬ್ ಮತ್ತು ಮೊಬೈಲ್ ಪ್ಲಾಟ್​ಫಾರ್ಮ್​​ಗಳಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪ್ರಸಾರ ಮಾಡಲು ಪಿಸಿಬಿ ಇತ್ತೀಚೆಗೆ ಎಲ್ಲಾ ಜಾಗತಿಕ ಟೆಂಡರ್​ಗಳನ್ನು ಪ್ರಕಟಿಸಿತ್ತು. ಪಾಕಿಸ್ತಾನ ಕ್ರಿಕೆಟ್ ತಂಡದ ತವರು ಸರಣಿಯು ಆಗಸ್ಟ್ 21 ರಿಂದ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಪಾಕಿಸ್ತಾನವು ಅಕ್ಟೋಬರ್​ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಆತಿಥ್ಯ ವಹಿಸಲಿದೆ. ತಂಡದ ಫ್ಯೂಚರ್ ಟೂರ್ ಪ್ರೋಗ್ರಾಮ್ಸ್ (ಎಫ್​ಟಿಪಿ) ವೇಳಾಪಟ್ಟಿಯ ಪ್ರಕಾರ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿವೆ.

2024-2026ರ ಅವಧಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಎಲ್ಲಾ ಸ್ವರೂಪಗಳಲ್ಲಿ 61 ಪಂದ್ಯಗಳನ್ನು ಆಡಲಿದೆ. 11 ಟೆಸ್ಟ್, 26 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಲಿದೆ. ಅಂತಾರಾಷ್ಟ್ರೀಯ ದೂರದರ್ಶನ ಹಕ್ಕುಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಭಾರೀ ನಿರಾಸೆ

ಅಂತರರಾಷ್ಟ್ರೀಯ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡುವಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿರೀಕ್ಷೆಗಳನ್ನು ಪೂರೈಸಲಾಗಲಿಲ್ಲ. ಅವರಿಗೆ ಸಲ್ಲಿಕೆಯಾದ ಬಿಡ್​ ಮೂಲ ಮೌಲ್ಯದ ಅರ್ಧದಷ್ಟು ಮಾತ್ರ ಇತ್ತು. ಕ್ರಿಕೆಟ್ ಮಂಡಳಿಯು ಮೂರು ವರ್ಷಗಳ ಅಂತಾರರಾಷ್ಟ್ರೀಯ ಮಾಧ್ಯಮ ಹಕ್ಕುಗಳಿಗಾಗಿ ಸುಮಾರು 584 ಕೋಟಿ ರೂಪಾಯಿ (ಪಾಕಿಸ್ತಾನ) ನಿಗದಿ ಮಾಡಿತ್ತು. ಆದರೆ, ಪ್ರಸಾರಕು ಅದರ ಅರ್ಧದಷ್ಟು ಮೊತ್ತಕ್ಕೆ ಪ್ರಸ್ತಾಪ ಸಲ್ಲಿಸಿದೆ.

ಪಾಕ್ ಕಂಪನಿಯಿಂದ ಸಲ್ಲಿಕೆ

ಪಾಕಿಸ್ತಾನದ ಮಾಧ್ಯಮ ಸಮೂಹ ಮತ್ತು ಖಾಸಗಿ ಕಂಪನಿಯ ಒಕ್ಕೂಟವು ವಿದೇಶಿ ಬಿಡ್ದಾರರಾದ ವಿಲ್ಲೋ ಮತ್ತು ಸ್ಪೋರ್ಟ್ಸ್ ಫೈವ್ ಅವರೊಂದಿಗೆ ಹರಾಜಿನಲ್ಲಿ ಭಾಗವಹಿಸಿತು. ಈ ಪೈಕಿ ಸ್ಪೋರ್ಟ್ಸ್ ಫೈವ್ 218 ಡಾಲರ್​ಗೆ ಬಿಡ್ ಸಲ್ಲಿಸಿದೆ. ಪಾಕಿಸ್ತಾನದ ಕಂಪನಿಯು ಸುಮಾರು 114 ಕೋಟಿ ಪಾಕಿಸ್ತಾನ ರೂಪಾಯ ಬಿಡ್ ಮಾಡಿದರೆ, ವಿಲ್ಲೋ ಸಂಸ್ಥೆಯು 62 ಕೋಟಿ ರೂಪಾಯಿ ಬಿಡ್ ಮಾಡಿತು. ಮೀಸಲು ಬೆಲೆಯನ್ನು ತಲುಪದ ಕಾರಣ ಮಂಡಳಿಯು ಬಿಡ್ದಾರರಿಗೆ ಬೆಲೆಯನ್ನು ಹೆಚ್ಚಿಸಲು ಸೂಚಿಸಿದೆ.

ಇದನ್ನೂ ಓದಿ: Dinesh Karthik : ಇಷ್ಟದ ಐಪಿಎಲ್​ ತಂಡ ಯಾವುದೆಂದು ಬಹಿರಂಗಪಡಿಸಿದ ದಿನೇಶ್ ಕಾರ್ತಿಕ್​

ಎರಡನೇ ಸುತ್ತಿನಲ್ಲಿ, ಸ್ಪೋರ್ಟ್ಸ್ ಫೈವ್ ತಮ್ಮ ಬಿಡ್ ಅನ್ನು ಅದೇ ಮೊತ್ತ ಉಳಿಸಿಕೊಂಡರೆ, ಪಾಕಿಸ್ತಾನಿ ಕಂಪನಿಯು ತಮ್ಮ ಬಿಡ್ ಅನ್ನು ಸ್ವಲ್ಪ ಏರಿಸಿತು. ಆದಾಗ್ಯೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನೂ ಮೀಸಲು ಬೆಲೆಯನ್ನು ಪೂರೈಸದ ಕಾರಣ ಎರಡೂ ಪ್ರಸ್ತಾಪಗಳನ್ನು ತಿರಸ್ಕರಿಸಿದೆ.

ಹೊಸ ಟೆಂಡರ್​

ನ್ಯೂಜಿಲೆಂಡ್ ವಿರುದ್ಧದ ತವರು ಸರಣಿ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮಹಿಳಾ ಸರಣಿಗೆ ಹೊಸ ಟೆಂಡರ್ ನೀಡಲಾಗಿದೆ. ಈ ಸುತ್ತಿನಲ್ಲಿ, ಪಾಕಿಸ್ತಾನಿ ಕಂಪನಿಗಳು ಒಟ್ಟಾಗಿ 2.7 ಕೋಟಿ ಪಾಕಿಸ್ತಾನಿ ರೂಪಾಯಿಗಳು), ವಿಲ್ಲೋ 2 ಕೋಟಿ ರೂಪಾಟಿ ಮತ್ತು ಸ್ಪೋರ್ಟ್ಸ್ ಫೈವ್ 1.39 ಕೋಟಿ ರೂಪಾಯಿ ಬಿಡ್ ಮಾಡಿದವು.

Continue Reading

ಪ್ರಮುಖ ಸುದ್ದಿ

Viral News: ಜೈಲಿಂದ ಹೊರಬಂದ ಖುಷಿಗೆ ರೌಡಿಯ ಬೃಹತ್ ಮೆರವಣಿಗೆ; ಮತ್ತೆ ಜೈಲಿಗೇ ಕಳುಹಿಸಿದ ಪೊಲೀಸರು!

Viral News ಮಹಾರಾಷ್ಟ್ರ ಅಪಾಯಕಾರಿ ಚಟುವಟಿಕೆಗಳ ತಡೆ (ಎಂಪಿಡಿಎ) ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಿದ್ದ ನಾಸಿಕ್‌ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23 ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾದ ಹರ್ಷದ್ ಪಟಾಂಕರ್ ಅನ್ನು ಸ್ವಾಗತಿಸಲು ಆತನ ಬೆಂಬಲಿಗರು ಬೃಹತ್ ರ‍್ಯಾಲಿಯನ್ನು ಆಯೋಜಿಸಿದ್ದರು. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ರ‍್ಯಾಲಿ ನಡೆಸಿ ಮತ್ತೆ ಆತ ಜೈಲು ಪಾಲಾಗಿದ್ದಾನೆ ಎನ್ನಲಾಗಿದೆ.

VISTARANEWS.COM


on

Viral News
Koo

ಮಹಾರಾಷ್ಟ್ರ : ಮದುವೆ, ದೇವಸ್ಥಾನದ ಪ್ರತಿಷ್ಠಾಪನೆ ಸಮಾರಂಭದ ವೇಳೆ ಬೃಹತ್ ಮೆರವಣಿಗೆಯನ್ನು ಮಾಡಲಾಗುತ್ತದೆ. ಆದರೆ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಮಹಾರಾಷ್ಟ್ರದ ಕುಖ್ಯಾತ ರೌಡಿನೊಬ್ಬನನ್ನು ಸ್ವಾಗತಿಸಲು ಆತನ ಬೆಂಬಲಿಗರು ಬೃಹತ್‌ ರ‍್ಯಾಲಿಯನ್ನು  ಆಯೋಜಿಸಿದ್ದರು. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ. ಆದರೆ ಈ ರ‍್ಯಾಲಿ ನಡೆಸಿ ಮತ್ತೆ ಆತ ಜೈಲು ಪಾಲಾಗಿದ್ದಾನೆ ಎನ್ನಲಾಗಿದೆ.

ಮಹಾರಾಷ್ಟ್ರ ಅಪಾಯಕಾರಿ ಚಟುವಟಿಕೆಗಳ ತಡೆ (ಎಂಪಿಡಿಎ) ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಿದ್ದ ನಾಸಿಕ್‌ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23 ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಹಾಗಾಗಿ ಆ ದಿನ ಮಧ್ಯಾಹ್ನ 3:30 ಕ್ಕೆ ಸುಮಾರು 15 ದ್ವಿಚಕ್ರ ವಾಹನಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗಿದೆ. ಈ ಮೆರವಣಿಗೆ ಬೆತೆಲ್ ನಗರದಿಂದ ಪ್ರಾರಂಭವಾಗಿ ಅಂಬೇಡ್ಕರ್ ಚೌಕ್, ಸಾಧು ವಾಸ್ವಾನಿ ರಸ್ತೆ ಮತ್ತು ಶರಣಪುರ ರಸ್ತೆ ಮೂಲಕ ಸಾಗಿದೆ. ಕಾರಿನ ಸನ್ ರೂಫ್‌ನಿಂದ ಕೈ ಬೀಸುತ್ತಿದ್ದ ಪಟಾಂಕರ್ ಅವರೊಂದಿಗೆ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗುತ್ತಿದ್ದರು.

ವರದಿ ಪ್ರಕಾರ, ಪಟಾಂಕರ್ ಮಾತ್ರವಲ್ಲದೆ ಅವರ ಏಳು ಸಹಚರರ ವಿರುದ್ಧವೂ ಸರ್ಕಾರ್ವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಟಾಂಕರ್ ಅವರನ್ನು ಈ ಹಿಂದೆ ಕೊಲೆ ಯತ್ನ, ಕಳ್ಳತನ ಮತ್ತು ಹಿಂಸಾಚಾರ ಸೇರಿದಂತೆ ಹಲವಾರು ಅಪರಾಧಗಳಿಗಾಗಿ ಬಂಧಿಸಲಾಗಿತ್ತು ಮತ್ತು ಜೈಲಿಗೆ ಹಾಕಲಾಗಿತ್ತು.

ಇದನ್ನೂ ಓದಿ: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

ಒಂದು ವರ್ಷದ ಹಿಂದೆ ಎಂಪಿಡಿಎ ಕಾಯ್ದೆಯಡಿ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ಸಂಭ್ರಮಾಚರಣೆಯ ರ‍್ಯಾಲಿಯಿಂದಾಗಿ ಪೊಲೀಸ್ ಕ್ರಮಕೈಗೊಂಡು ಈಗ ಅವರನ್ನು ಮತ್ತೆ ಜೈಲಿಗೆ ತಳ್ಳಿದೆ ಎನ್ನಲಾಗಿದೆ. ಅವರ ಆರು ಸಹಚರರನ್ನು ಗೋಪಾಲ್ ನಾಗೋರ್ಕರ್, ವೇದಾಂತ್ ಚಾಲ್ಡೆ, ಶಾನ್ ಮೈಕೆಲ್, ಜಾಯ್ ಮೈಕೆಲ್, ರಾಬಿನ್ಸನ್ ಬ್ಯಾಟಿಸ್, ವೈಭವ್ ಖಂಡ್ರೆ ಮತ್ತು ವಿಕಾಸ್ ನೇಪಾಳಿ ಎಂದು ಗುರುತಿಸಲಾಗಿದೆ.

Continue Reading

ಕರ್ನಾಟಕ

Dog Meat: ಬೆಂಗಳೂರಿಗೆ ಬಂತು ಟನ್‌ಗಟ್ಟಲೇ ನಾಯಿ ಮಾಂಸ; ಅಬ್ದುಲ್ ರಜಾಕ್ ವಿರುದ್ಧ ಆರೋಪ!

Dog Meat: ಬೆಂಗಳೂರಿನಲ್ಲಿ ನಾಯಿ ಮಾಂಸದ ದಂಧೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಹೊರ ರಾಜ್ಯಗಳಿಂದ ಪ್ರತಿ ದಿನ ಬೆಂಗಳೂರಿಗೆ ನಾಯಿ ಮಾಂಸ ಬರುತ್ತಿದೆ ಎನ್ನಲಾಗಿದ್ದು, ಸಾವಿರಾರು ಕೆಜಿ ಶಂಕಿತ ನಾಯಿ ಮಾಂಸವನ್ನು ಮೆಜೆಸ್ಟಿಕ್‌ನಲ್ಲಿ ವಶಕ್ಕೆ ಪಡೆಯಲಾಗಿದೆ.

VISTARANEWS.COM


on

Dog meat
Koo

ಬೆಂಗಳೂರು: ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ನಗರದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಕೆಜಿ ಶಂಕಿತ ನಾಯಿ ಮಾಂಸವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರ ಜಾಗೃತಿ ಸಂಘಟನೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಲವು ಹಿಂದು ಕಾರ್ಯಕರ್ತರು ದಾಳಿ ನಡೆಸಿದ ವೇಳೆ ಮಾಂಸದ ಪಾರ್ಸೆಲ್‌ಗಳಲ್ಲಿ ನಾಯಿ ಮಾಂಸ (Dog Meat) ಕಂಡುಬಂದಿದೆ. ಇದರಿಂದ ಸ್ಥಳದಲ್ಲಿ‌ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ಮುಸ್ಲಿಂ ಮುಖಂಡ ಅಬ್ದುಲ್‌ ರಜಾಕ್‌ ಎಂಬುವವರಿಂದ ನಾಯಿ ಮಾಂಸ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪಗಳನ್ನು ಅಬ್ದುಲ್‌ ರಜಾಕ್‌ ಅಲ್ಲಗಳೆದಿದ್ದಾರೆ. ನಾಯಿ ಮಾಂಸದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದು ಸಂಘಟನೆಗಳು ದಾಳಿ ಮಾಡಿದ್ದು, ಈ ವೇಳೆ ಸಾವಿರಾರು ಕೆ.ಜಿ ಮಾಂಸ ಪತ್ತೆಯಾಗಿದೆ. ಆದರೆ, ಎರಡು ದಿನಕ್ಕೊಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ಇವತ್ತು ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಹನ್ನೆರಡು ವರ್ಷದಿಂದ ಈ ವ್ಯವಹಾರ ನಡೆಯುತ್ತಿದೆ. ಆಹಾರ ಇಲಾಖೆ ಅಧಿಕಾರಿಗಳು ಬೇಕಿದ್ದರೆ ಬಂದು ಚೆಕ್ ಮಾಡಲಿ ಎಂದು ಅಬ್ದುಲ್‌ ರಜಾಕ್‌ ಹೇಳಿದ್ದಾರೆ.

ಮಾಂಸದ ಪಾರ್ಸೆಲ್‌ಗಳಲ್ಲಿ ಪ್ರಾಣಿಯ ಬಾಲ ಉದ್ದವಾಗಿರೋದು ಕಂಡುಬಂದಿದ್ದರಿಂದ, ಕುರಿ ಬಾಲ ಈ ರೀತಿ ಇರುತ್ತದಾ ಎಂದು ಹಿಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಈ ವೇಳೆ ರಾಜಸ್ಥಾನ ಕುರಿಗಳಿಗೆ ಇದೇ ರೀತಿ ಬಾಲ ಉದ್ದವಾಗಿರುತ್ತೆ, ಅದನ್ನು ನಾಯಿ ಎನ್ನುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡ ಹೇಳಿದ್ದಾರೆ.

ಪುನೀತ್ ಕೆರೆಹಳ್ಳಿ ಹಣ ವಸೂಲಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ನಾಳೆ ಈ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತೇವೆ. ಅವರ ವಿರುದ್ಧ ದೂರು ನೀಡುತ್ತೇವೆ ಎಂದು ಅಬ್ದುಲ್‌ ರಜಾಕ್‌ ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಅಧಿಕಾರಿಗಳ ಪರಿಶೀಲನೆ

ಸ್ಥಳಕ್ಕೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. 5 ಬಾಕ್ಸ್‌ಗಳಲ್ಲಿ ಇದ್ದ ಕುರಿ ಮಾಂಸದ ಸ್ಯಾಂಪಲ್ ತೆಗೆದುಕೊಂಡಿದ್ದೇವೆ. ಮೇಲ್ನೋಟಕ್ಕೆ ಇದು ಕಳಪೆಯಾಗಿ ತೋರುತ್ತಿದೆ. ಇದನ್ನು ನಾವು ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತೇವೆ. 14 ದಿನದ ಬಳಿಕ ರಿಪೋರ್ಟ್ ಸಿಗುತ್ತದೆ ಎಂದು ಅಧಿಕಾರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಹೋಟೆಲ್‌ಗಳಿಗೆ 700-800 ರೂಪಾಯಿಗೆ ಮಾರಾಟ

ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಮೂಲಕ ನಾಯಿ ಮಾಂಸ, ನಗರದ ವಿವಿಧ ಹೋಟೆಲ್‌ಗಳಿಗೆ ಸರಬರಾಜು ಆಗುತ್ತಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಪ್ಲೈ ಆಗುತ್ತಿದೆ ಎನ್ನಲಾಗಿದೆ. ರಾಜಸ್ಥಾನದಿಂದ ಕುರಿ ಮಾಂಸ ಅಂತ ಹೇಳಿ ನಾಯಿ ಮಾಂಸವನ್ನು ತರಿಸಿ ಇಲ್ಲಿನ ಹೋಟೆಲ್‌ಗಳಿಗೆ 700-800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದು ಒಂದು ದೊಡ್ಡ ದಂಧೆ ಆಗಿದ್ದು, ಅಧಿಕಾರಿಗಳು, ಸಚಿವ ಜಮೀರ್ ಅಹ್ಮದ್ ಎಲ್ಲರೂ ಭಾಗಿ ಆಗಿದ್ದಾರೆ ಎಂದು ಪುನೀತ್‌ ಕೆರೆಹಳ್ಳಿ ಆರೋಪಿಸಿದ್ದಾರೆ.

ಮತ್ತೊಂದೆಡೆ ಕಳೆದೊಂದು ವರ್ಷದಿಂದ 700 ರೂ.ಗಳಿಗಿಂತ ಹೆಚ್ಚಿನ ದರಕ್ಕೆ ಕುರಿ ಹಾಗೂ ಮೇಕೆಯ ಮಟನ್ ಮಾಂಸ ಮಾರಾಟವಾಗುತ್ತಿದೆ. ಆದರೆ, ಬೆಂಗಳೂರಿನ ಶಿವಾಜಿನಗರ ಸೇರಿ ಕಡೆ ಕೆಲ ವ್ಯಾಪಾರಿಗಳು ಪ್ರತಿ ಕೆ.ಜಿ. ಮಾಂಸವನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟು ಕಡಿಮೆ ದರಕ್ಕೆ ಮಾಂಸ ಹೇಗೆ ಸಿಗುತ್ತೆ ಎಂದು ಅನುಮಾನಗೊಂಡ ಮುಸ್ಲಿಂ ವ್ಯಾಪಾರಿಗಳೇ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಕಡಿಮೆ ದರಕ್ಕೆ ನಾಯಿ ಮಾಂಸ ತರಿಸಿಕೊಂಡು ಹೆಚ್ಚಿನ ದರಕ್ಕೆ ಕುರಿ ಮಾಂಸವೆಂದು ಮಾರಾಟ ಮಾಡಲಾಗುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಫಿಶ್ ಎಂದು ಸ್ಟಿಕ್ಕರ್ ಹಾಕಿಕೊಂಡು ಏನು ಪ್ಯಾಕ್ ಮಾಡಿದ್ದಾರೋ ನೋಡಿ, ಕುರಿಯ ಬಾಲ ಇಷ್ಟು ಉದ್ದ ಇರುತ್ತಾ? ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ಎಲ್ಲ ಮಾಂಸ ಆಹಾರ ಗುಣಮಟ್ಟ ಚೆಕ್ ಮಾಡಬೇಕು ಎಂದು ಹಿಂದುಪರ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ವೇಳೆ ಪುನೀತ್‌ ಕೆರೆಹಳ್ಳಿ ಸೇರಿ ಹಲವು ಕಾರ್ಯಕರ್ತರನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿದ್ದಾರೆ.

Continue Reading

ದೇಶ

Rahul Gandhi: ಚಮ್ಮಾರನ ಅಂಗಡಿಗೆ ದಿಢೀರ್‌ ಭೇಟಿ ನೀಡಿ, ಚಪ್ಪಲಿ ಹೊಲಿದ ರಾಹುಲ್‌ ಗಾಂಧಿ; Video ಇಲ್ಲಿದೆ

Rahul Gandhi: ಉತ್ತರ ಪ್ರದೇಶದ ವಿಧಾಯಕ ನಗರದಲ್ಲಿರುವ ಚಮ್ಮಾರನ ಅಂಗಡಿಯೊಂದಕ್ಕೆ ರಾಹುಲ್‌ ಗಾಂಧಿ ಅವರು ಭೇಟಿ ನೀಡಿದರು. ಇದೇ ವೇಳೆ, ಚಮ್ಮಾರರ ಸಮಸ್ಯೆಗಳನ್ನು ಆಲಿಸಿದ ಅವರು, ಚಪ್ಪಲಿಯನ್ನೂ ಹೊಲಿದರು. ಚಪ್ಪಲಿ ಹೊಲಿಯುವುದು ಹೇಗೆ ಎಂಬುದನ್ನು ಅಂಗಡಿ ಮಾಲೀಕ ಹೇಳಿಕೊಟ್ಟರು.

VISTARANEWS.COM


on

Rahul Gandhi
Koo

ಲಖನೌ: ದೇಶಾದ್ಯಂತ ಸಂಚರಿಸುವ ಭಾರತ್‌ ಜೋಡೋ ಯಾತ್ರೆಯ (Bharat Jodo Yatra) ಹೊರತಾಗಿಯೂ ಕಾಂಗ್ರೆಸ್‌ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸಾಮಾನ್ಯ ಜನರೊಂದಿಗೆ ಬೆರೆಯುತ್ತಿದ್ದಾರೆ. ರೈತರು, ಕುಶಲಕರ್ಮಿಗಳು, ಯುವಕರೊಂದಿಗೆ ಬೆರೆಯುವ ಮೂಲಕ ಅವರ ಸಮಸ್ಯೆಗಳಿಗೆ ಕಿವಿಯಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ರಾಹುಲ್‌ ಗಾಂಧಿ ಅವರು ಶುಕ್ರವಾರ (ಜುಲೈ 26) ಉತ್ತರ ಪ್ರದೇಶದಲ್ಲಿ ಚಪ್ಪಲಿ ಅಂಗಡಿಯೊಂದಕ್ಕೆ (Cobbler Shop) ದಿಢೀರನೆ ಭೇಟಿ ನೀಡಿ, ಅಲ್ಲಿ ಚಪ್ಪಲಿ ಹೊಲಿಯುವ ಮೂಲಗ ಗಮನ ಸೆಳೆದಿದ್ದಾರೆ.

ರಾಹುಲ್‌ ಗಾಂಧಿ ಅವರು ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಸಂಸದರು ಮತ್ತು ಶಾಸಕರ ನ್ಯಾಯಾಲಯಕ್ಕೆ ಹಾಜರಾದರು. ಕೋರ್ಟ್‌ಗೆ ಹಾಜರಾದ ಬಳಿಕ ಲಖನೌಗೆ ವಾಪಸಾಗುವ ವೇಳೆ ವಿಧಾಯಕ ನಗರದಲ್ಲಿರುವ ಚಮ್ಮಾರನ ಅಂಗಡಿಗೆ ತೆರಳಿದ ಅವರು, ಮಾತುಕತೆ ನಡೆಸುವ ಜತೆಗೆ ಚಪ್ಪಲಿ ಹೊಲಿದರು. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

2023ರ ಸೆಪ್ಟೆಂಬರ್‌ನಲ್ಲಿ ರಾಹುಲ್‌ ಗಾಂಧಿ ಅವರು ದೆಹಲಿಯ ಕೀರ್ತಿ ನಗರ ಫರ್ನಿಚರ್‌ ಮಾರುಕಟ್ಟೆಗೆ ತೆರಳಿದ್ದರು. ಆಗ ಅವರು ಹಲವು ಮೇಜುಗಳನ್ನು ತಯಾರಿಸಿದ್ದರು. ಕಾರ್ಪೆಂಟರ್‌ಗಳ ಜತೆಗೂಡಿ ರಾಹುಲ್‌ ಗಾಂಧಿ ಅವರು ಮೇಜುಗಳನ್ನು ತಯಾರಿಸಿದ್ದರು. ಈ ಮೇಜುಗಳನ್ನು ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಅರವಿಂದರ್‌ ಸಿಂಗ್‌ ಲವ್ಲಿ ಹಾಗೂ ಕಾರ್ಪೆಂಟರ್‌ಗಳು ಜತೆಗೂಡಿ ಪ್ರಮೀಳಾ ಬಾಯಿ ಚವ್ಹಾಣ್ ಶಾಲೆಗೆ ದೇಣಿಗೆಯಾಗಿ ನೀಡಿದ್ದರು. ಕಾರ್ಕರ್‌ಡೂಮಾದಲ್ಲಿರುವ ಶಾಲೆಗೆ ಮೇಜುಗಳನ್ನು ದೇಣಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ಮಾಹಿತಿ ನೀಡಿತ್ತು.

ಬೈಕ್‌ ರಿಪೇರಿ ಮಾಡಿದ್ದ ರಾಹುಲ್‌ ಗಾಂಧಿ

2023ರ ಜೂನ್‌ನಲ್ಲಿ ರಾಹುಲ್‌ ಗಾಂಧಿ ಅವರು ದೆಹಲಿಯ ಕಾಜೋಲ್‌ಬಾಗ್‌ನಲ್ಲಿರುವ ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳಿ ಬೈಕ್‌ ರಿಪೇರಿ ಮಾಡಿದ್ದರು. “ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳಿ, ನಾನೂ ವ್ರೆಂಚ್‌ಗಳನ್ನು ತಿರುಗಿಸಿದೆ. ಅವರಿಂದ ಬೈಕ್‌ ರಿಪೇರಿ ಮಾಡುವುದನ್ನು ಕಲಿತೆ. ಬೈಕ್‌ ರಿಪೇರಿ ಮಾಡುವ ಇಂತಹ ಕೈಗಳೇ ಭಾರತವನ್ನು ನಿರ್ಮಿಸಿವೆ. ಇಲ್ಲಿಗೆ ಭೇಟಿ ನೀಡುವ ಮೂಲಕ ನಾನು ಮತ್ತೆ ಭಾರತ್‌ ಜೋಡೋ ಯಾತ್ರೆಯನ್ನು ಮುಂದುವರಿಸಿದ್ದೇನೆ” ಎಂದು ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ: Acharya Pramod Krishnam: ರಾಹುಲ್‌ ಗಾಂಧಿಯನ್ನು ‘ರಾಷ್ಟ್ರೀಯ ಸಮಸ್ಯೆ’ ಎಂದ ಆಚಾರ್ಯ ಪ್ರಮೋದ್‌ ಕೃಷ್ಣಂ!

Continue Reading
Advertisement
Pakistan Cricket Board
ಪ್ರಮುಖ ಸುದ್ದಿ1 hour ago

ICC Champions Trophy : ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!

assistance from Ramchandrapur Matha for Shiruru landslide victims
ಉತ್ತರ ಕನ್ನಡ1 hour ago

Uttara Kannada News: ಶಿರೂರು ಗುಡ್ಡಕುಸಿತ ಸಂತ್ರಸ್ತರಿಗೆ ರಾಮಚಂದ್ರಾಪುರ ಮಠದ ಸಹಾಯಹಸ್ತ

Inauguration of Kannada learning classes for Malayali speakers
ಕರ್ನಾಟಕ1 hour ago

Bengaluru News: ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನ ಆಯೋಜಿಸಿ: ಸ್ಪೀಕರ್‌ ಯು.ಟಿ.ಖಾದರ್‌ ಸೂಚನೆ

Viral News
ಪ್ರಮುಖ ಸುದ್ದಿ1 hour ago

Viral News: ಜೈಲಿಂದ ಹೊರಬಂದ ಖುಷಿಗೆ ರೌಡಿಯ ಬೃಹತ್ ಮೆರವಣಿಗೆ; ಮತ್ತೆ ಜೈಲಿಗೇ ಕಳುಹಿಸಿದ ಪೊಲೀಸರು!

Viral Video
Latest2 hours ago

Viral Video: ಕೈದಿಗೆ ಕೈಕೋಳ ಹಾಕಿ ತಾಜ್ ಮಹಲ್‌ ತೋರಿಸಲು ಹೋಗಿದ್ದ ಪೊಲೀಸರು! ವಿಡಿಯೊ ನೋಡಿ

Dog meat
ಕರ್ನಾಟಕ2 hours ago

Dog Meat: ಬೆಂಗಳೂರಿಗೆ ಬಂತು ಟನ್‌ಗಟ್ಟಲೇ ನಾಯಿ ಮಾಂಸ; ಅಬ್ದುಲ್ ರಜಾಕ್ ವಿರುದ್ಧ ಆರೋಪ!

Teacher Suspended
Latest2 hours ago

Teacher Suspended: ಮಹಿಳೆಯರು ಸಿಂಧೂರ, ಮಂಗಳಸೂತ್ರ ಧರಿಸಬಾರದು ಎಂದ ಶಿಕ್ಷಕಿ ಅಮಾನತು!

Rahul Gandhi
ದೇಶ2 hours ago

Rahul Gandhi: ಚಮ್ಮಾರನ ಅಂಗಡಿಗೆ ದಿಢೀರ್‌ ಭೇಟಿ ನೀಡಿ, ಚಪ್ಪಲಿ ಹೊಲಿದ ರಾಹುಲ್‌ ಗಾಂಧಿ; Video ಇಲ್ಲಿದೆ

Apollo International Public School introduced Sqay samara kale as part of the syllabus
ಬೆಂಗಳೂರು2 hours ago

Bengaluru News: ಸ್ಕಾಯ್ ಸಮರ ಕಲೆಯನ್ನು ಪಠ್ಯದ ಭಾಗವಾಗಿ ಪರಿಚಯಿಸಿದ ಅಪೋಲೋ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ

Ayodhya Ram Mandir
ರಾಮ ಮಂದಿರ2 hours ago

Ayodhya Ram Mandir: ರಾಮಮಂದಿರಕ್ಕೆ ಬರುವ ಚಿನ್ನ, ಬೆಳ್ಳಿ ಆಭರಣಗಳ ಕಾವಲಿಗೆ ಇಬ್ಬರು ಆರ್​​ಎಸ್​ಎಸ್​​ ಕಾರ್ಯಕರ್ತರ ನೇಮಕ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ4 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ6 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ6 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ8 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ1 day ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌