IPT 12: ಎನ್ 1 ಕ್ರಿಕೆಟ್ ಅಕಾಡೆಮಿಯ ವತಿಯಿಂದ ʻIPT 12ʼ ಕ್ರಿಕೆಟ್ ಟ್ರೋಫಿ, ಜೆರ್ಸಿ ಅನಾವರಣ - Vistara News

ಕ್ರಿಕೆಟ್

IPT 12: ಎನ್ 1 ಕ್ರಿಕೆಟ್ ಅಕಾಡೆಮಿಯ ವತಿಯಿಂದ ʻIPT 12ʼ ಕ್ರಿಕೆಟ್ ಟ್ರೋಫಿ, ಜೆರ್ಸಿ ಅನಾವರಣ

IPT 12: ಈಗಾಗಲೇ ಯಶಸ್ವಿಯಾಗಿ ಮೂರು TPL ಸೀಸನ್ ಮುಗಿಸಿರುವ ಎನ್ 1 ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ. ಆರ್ ಅವರು ಈಗ IPT12 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ಕೊಟ್ಟಿದ್ದಾರೆ.

VISTARANEWS.COM


on

Unveiling of IPT 12 Cricket Trophy, Jersey by N1 Cricket Academy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಿರುತೆರೆ ಕಲಾವಿದರಿಗಾಗಿ TPL-ಟೆಲಿವಿಷನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನಮೆಂಟ್ ನಡೆಸಿಕೊಂಡು ಬರುತ್ತಿರುವ ‘ಎನ್ 1’ ಕ್ರಿಕೆಟ್ ಅಕಾಡೆಮಿಯು ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ಯಶಸ್ವಿಯಾಗಿ ಮೂರು TPL ಸೀಸನ್ ಮುಗಿಸಿರುವ ಎನ್ 1 ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ. ಆರ್ ಅವರು ಈಗ IPT12 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ಕೊಟ್ಟಿದ್ದಾರೆ.

ಡಾಕ್ಟರ್ಸ್, ಲಾಯರ್ಸ್, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು, ಫ್ಯಾಷನ್ ಡಿಸೈನರ್ ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್ IPT12 ಇದಾಗಿದೆ. ಈ ಪಂದ್ಯಾವಳಿಯ ಟ್ರೋಫಿ ಹಾಗೂ ಜೆರ್ಸಿ ಬಿಡುಗಡೆ ಮಾಡಲಾಯಿತು,. ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಪ್ರಣಮ್ ದೇವರಾಜ್, ಶರಣ್ಯ ಶೆಟ್ಟಿ ಸೇರಿದಂತೆ ಚಿತ್ರರಂಗದ ಕಲಾವಿದರು, ಎಲ್ಲಾ ತಂಡದ ನಾಯಕರು ಮತ್ತು ಬ್ರ್ಯಾಂಡ್ ಅಂಬಾಸಿಡರ್ ಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಬಳಿಕ ಮಾತನಾಡಿದ ನಟ ಪ್ರಣಂ ದೇವರಾಜ್ ಮಾತನಾಡಿ, ʻʻಸುನಿಲ್ ಅವರು ಪ್ರತಿ ವರ್ಷ ಈ ರೀತಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ನಾವು ಮಾಧ್ಯಮದರು ಒಟ್ಟಿಗೆ ಕ್ರಿಕೆಟ್ ಆಡುವ ಅವಕಾಶ ಮಾಡಿಕೊಟ್ಟಿದ್ದಾರೆ. ಸಾಕಷ್ಟು ತಂಡಗಳು ಆಡುತ್ತಿದ್ದಾರೆ. ನಮ್ಮ ದೇಶದಲ್ಲಿ ಜನರನ್ನು ಒಂದು ಮಾಡಲು ಕ್ರಿಕೆಟ್ ಹಾಗು ಸಿನಿಮಾದಿಂದ ಮಾತ್ರ ಸಾಧ್ಯ. ಕ್ರಿಕೆಟ್ ನಿಂದ ಸುನಿಲ್ ನಮ್ಮನ್ನೆಲ್ಲಾ ಒಂದು ಮಾಡುತ್ತಿದ್ದಾರೆʼ ಎಂದು ತಿಳಿಸಿದರು.

ಇದನ್ನೂ ಓದಿ: ICC Champions Trophy : ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!

ಎನ್ 1 ಕ್ರಿಕೆಟ್ ಅಕಾಡೆಮಿ ಸಂಸ್ಥಾಪಕ ಸುನಿಲ್ ಕುಮಾರ್ ಬಿ ಆರ್ , ಎಲ್ಲಾ ತಂಡಗಳಿಗೂ ಆಲ್ ದಿ ಬೆಸ್ಟ್ ತಿಳಿಸಿದರು.

ಯಾವ ಯಾವ ತಂಡಗಳಿವೆ?
1.GLR ವಾರಿಯರ್ಸ್
ಲೂಸ್ ಮಾದ ಯೋಗಿ -ನಾಯಕ
ರಾಜೇಶ್.ಎಲ್-ಮಾಲೀಕರು

  1. ಅಶ್ವಸೂರ್ಯ ರೈಡರ್ಸ್
    ಹರ್ಷ ಸಿಎಂ ಗೌಡ – ನಾಯಕ
    ರಂಜಿತ್ ಕುಮಾರ್ ಎಸ್ – ಮಾಲೀಕರು

3.ದಿ ಬುಲ್ ಸ್ಕ್ವಾಡ್
ಶರತ್ ಪದ್ಮನಾಭ್- ನಾಯಕ
ಮೋನಿಶ್- ಮಾಲೀಕರು

4.ಬಯೋಟಾಪ್ ಲೈಫ್ ಸೆವಿಯರ್ಸ್
ಅಬ್ರಾರ್ ಮೊಹಮ್ಮದ್-ನಾಯಕ
ಪ್ರಸನ್ನ ವಿ, ಡಾ.ವಿಶ್ವನಾಥ್,
ವಿನು ಜೋಸ್ -ಮಾಲೀಕರು

5.ಶ್ರೀಲಂಕಾ ಲಾಯರ್ಸ್ ಕ್ರಿಕೆಟ್
ಕುಸನ್-ನಾಯಕ
ಮನೀಶ್ ಅಧ್ಯಕ್ಷರು
ಬುವನೇಕ ಉಪಾಧ್ಯಕ್ಷ

  1. S/ o ಮುತ್ತಣ್ಣ ಮಿಡಿಯಾ ಟೀಮ್
    ಸದಾಶಿವ ಶೆಣೈ-ನಾಯಕ
    ಪುರಾತನ‌‌ ಫಿಲ್ಮಂಸ್-ಮಾಲೀಕರು
  2. ಭಾರತೀಯ ವಕೀಲರ ತಂಡ
    ಅರವಿಂದ್ ವೆಂಕಟೇಶ್ ರೆಡ್ಡಿ-ನಾಯಕ
    ಶಿಲೇಶ್ ಕುಮಾರ್ -ಮಾಲೀಕರು

8.ಫ್ಯಾಶನ್ ಮೇವರಿಕ್ಸ್
ಫಹೀಮ್ ರಾಜ-ನಾಯಕ
ಪ್ರಶಾಂತ್ ಕೆ ಎಂ-ಮಾಲೀಕರು

ಎವಿಆರ್ ಗ್ರೂಪ್ಸ್ ವತಿಯಿಂದ ಎಚ್ ವೆಂಕಟೇಶ್ ರೆಡ್ಡಿರವರು IPT12 ಕ್ರಿಕೆಟ್ ಟೂರ್ನಮೆಂಟ್ಗೆ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ. ಸದ್ಯ ಜೆರ್ಸಿ ಹಾಗೂ ಟ್ರೋಫಿ ಅನಾವರಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಪ್ರಾಕ್ಟಿಸ್ ಗಾಗಿ ತಂಡಗಳು ಬ್ಯಾಟ್ ಬಾಲು ಹಿಡಿದು ಅಖಾಡಕ್ಕೆ ಇಳಿಯಲಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Womens Asia Cup : ಭಾರತದ ಮಹಿಳೆಯರನ್ನು ಸೋಲಿಸಿ ಚೊಚ್ಚಲ ಏಷ್ಯಾ ಕಪ್​ ಗೆದ್ದ ಶ್ರೀಲಂಕಾ ತಂಡ

Womens Asia Cup : ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟಿ್​ ಮಾಡಿದ ಲಂಕಾ 18.4 ಓವರ್​ಗಳಲ್ಲೇ 2 ವಿಕೆಟ್​ ನಷ್ಟಕ್ಕೆ 167 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

VISTARANEWS.COM


on

Women's Asia Cup
Koo

ಪಲ್ಲೆಕೆಲೆ: ಫೈನಲ್ ಪಂದ್ಯದಲ್ಲಿ ವೈಫಲ್ಯ ಕಂಡ ಭಾರತ ಮಹಿಳೆಯರ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ 8 ವಿಕೆಟ್​ಗಳ ಸೋಲು ಕಂಡಿದ್ದು, ಮಹಿಳೆಯರ ಏಷ್ಯಾ ಕಪ್​ (Womens Asia Cup) ಟ್ರೋಫಿ ಉಳಿಸಲು ವಿಫಲಗೊಂಡಿದೆ. ಕಳೆದ ಬಾರಿ ಭಾರತ ಚಾಂಪೊಯನ್ ಆಗಿತ್ತು, ಅಲ್ಲದೆ, ಈ ಬಾರಿಯೂ ತಂಡ ಉತ್ತಮವಾಗಿತ್ತು. ಆದರೆ, ಕಪ್ ಗೆಲ್ಲುವಲ್ಲಿ ಕೊನೇ ಕ್ಷಣದಲ್ಲಿ ಎಡವಿತು. ಇದೇ ವೇಳೆ ಚಾಮರಿ ಅಟ್ಟಪಟ್ಟು ನೇತೃತ್ವದ ಲಂಕಾ ವನಿತೆಯರು ಮೊದಲ ಬಾರಿಗೆ ಏಷ್ಯಾ ಕಪ್​ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಫೈನಲ್​ ಪಂದ್ಯದಲ್ಲಿ ಸಂಪೂರ್ಣವಾಗಿ ಪಾರಮ್ಯ ಮೆರೆದ ಲಂಕಾ ತಂಡ ಟ್ರೋಫಿ ಗೆದ್ದು ಸಂಭ್ರಮಿಸಿತು.

ಭಾರತ ತಂಡ ಹಾಲಿ ಆವೃತ್ತಿಯಲ್ಲೂ ಬಲಾಢ್ಯ ತಂಡವಾಗಿತ್ತು. ಈ ಹಿಂದಿನ ಎಂಟು ಆವೃತ್ತಿಗಳಲ್ಲಿ 7 ಟ್ರೋಫಿ ಗೆದ್ದಿತ್ತು. ಅಂತೆಯೇ 8ನೇ ಕಪ್​ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ಅದಕ್ಕೆ ಲಂಕಾ ವನಿತೆಯರು ಅವಕಾಶ ಕೊಡಲಿಲ್ಲ. ಕಳೆದ 8 ಆವೃತ್ತಿಗಳಲ್ಲಿ 5 ಬಾರಿ ಫೈನಲ್​​ನಲ್ಲಿ ಪ್ರವೇಶಿಸಿದ್ದ ದ್ವೀಪರಾಷ್ಟ್ರ, ಕೊನೆಗೂ 6ನೇ ಪ್ರಯತ್ನದಲ್ಲಿ ಗೆಲುವಿನ ಕನಸು ನನಸಾಗಿಸಿಕೊಂಡಿದೆ.

ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟಿ್​ ಮಾಡಿದ ಲಂಕಾ 18.4 ಓವರ್​ಗಳಲ್ಲೇ 2 ವಿಕೆಟ್​ ನಷ್ಟಕ್ಕೆ 167 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ 7 ರನ್ ಗಳಿಸಿ ಮೊದಲ ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಬಿತ್ತು. ಆರಂಭಿಕ ಹಿನ್ನಡೆ ಮಧ್ಯೆಯೂ ನಾಯಕಿ ಚಾಮರಿ ಅಟ್ಟಪಟ್ಟು ಭಾರತೀಯ ಬೌಲರ್​ಗಳನ್ನು ಹಿಮ್ಮೆಟ್ಟಿಸಿದರು. ಅವರಿಗೆ ಹರ್ಷಿತಾ ಸಮರವಿಕ್ರಮ ಬೆಂಬಲವಾಗಿನಿಂತರು. ಹೀಗಾಗಿ ಎರಡನೇ ವಿಕೆಟ್​ಗೆ ಲಂಕಾ ತಂಡ 87 ರನ್ ಗಳಿಸಿತು. ಇದೇ ವೇಳೆ ಚಾಮರಿ ಅರ್ಧ ಶತಕ ಬಾರಿಸಿದರು.
43 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ ಸಹಿತ 61 ರನ್ ಗಳಿಸಿದ್ದ ಚಾಮರಿ ಔಟಾದರೂ ಹರ್ಷಿತಾ ಗೆಲುವಿನ ಕಡೆಗೆ ಮುನ್ನುಗ್ಗಿದರು. ಹರ್ಮನ್ ಪಡೆಯ ವಿರುದ್ಧ ಸವಾರಿ ಮಾಡಿ ಗೆಲುವಿನತ್ತ ಮುನ್ನಡೆಸಿದರು. ಹಾಗೆಯೇ ಅರ್ಧಶತಕ ಪೂರೈಸಿದರು.

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

ಮಂಧಾನ ಏಕಾಂಗಿ ಹೋರಾಟ

ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 44 ರನ್ ಬಂದರೂ ಶಫಾಲಿ ವರ್ಮಾ 16 ರನ್​ಗಳಿಗೆ ಆಟ ಮುಗಿಸಿದರು. ಫೈನಲ್​ಗೆ ಎಂಟ್ರಿ ಪಡೆದ ಉಮಾ ಚೆಟ್ರಿ 9 ರನ್​ಗೆ ನಿರ್ಗಮಿಸಿದರು. ಹರ್ಮನ್​ಪ್ರೀತ್​ ಕೌರ್​ (11) ಬೇಗನೆ ಔಟಾದ ಕಾರಣ ದೊಡ್ಡ ಮೊತ್ತ ಪೇರಿಸುವ ಕನಸಿಗೆ ಬ್ರೇಕ್ ಬಿತ್ತು. ಸತತ ವಿಕೆಟ್​ ಪತನದ ಮಧ್ಯೆಯೂ ಮಂಧಾನ ಅರ್ಧಶತಕ ಸಿಡಿಸಿ ಆಸರೆಯಾದರು.

ಮಂಧಾನ 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್ ಗಳಿಸಿ ತಂಡವನ್ನು 150ರ ಗಡಿ ದಾಟಿಸಲು ನೆರವಾದರು. ಜೆಮಿಮಾ ರೊಡ್ರಿಗಸ್ 29 ರನ್ ಗಳಿಸಿದರು. ಕೊನೆಯಲ್ಲಿ ರಿಚಾ ಘೋಷ್ ಅಬ್ಬರದ 30 ರನ್ ಕಲೆ ಹಾಕಿದರು. ಪೂಜಾ ವಸ್ತ್ರಾಕರ್ 5, ರಾಧಾ ಯಾದವ್ 1 ರನ್ ಗಳಿಸಿದರು.

Continue Reading

ಪ್ರಮುಖ ಸುದ್ದಿ

Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Manu Bhaker : ಇದೊಂದು ಐತಿಹಾಸಿಕ ಪದಕ. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತಕ್ಕಾಗಿ ಮೊದಲ ಪದಕ ಗೆದ್ದಿದ್ದಕ್ಕೆ ಅಭಿನಂದನೆಗಳು. ಕಂಚಿನ ಪದಕಕ್ಕೆ ಶುಭಾಶಯಗಳು. ಈ ಯಶಸ್ಸು ಇನ್ನೂ ವಿಶೇಷವಾಗಿದೆ. ಏಕೆಂದರೆ ಅವರು ಭಾರತಕ್ಕಾಗಿ ಶೂಟಿಂಗ್​​​ನಲ್ಲಿ ಪದಕ ಗೆದ್ದ ಮೊದಲ ಮಹಿಳೆಯಾಗಿದ್ದಾರೆ ಎಂಬುದು ನಂಬಲಾಗದ ಸಾಧನೆ ” ಎಂದು ಪಿಎಂ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

VISTARANEWS.COM


on

Manu Bhaker
Koo

ನವದೆಹಲಿ: 2024 ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತದ ಮೆಡಲ್​ಗಳ ಖಾತೆ ತೆರೆದ ಹರಿಯಾಣದ ಮನು ಭಾಕರ್ (Manu Bhaker) ಅವರನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಭಿನಂದಿಸಿದ್ದಾರೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ 22 ವರ್ಷದ ಮನು ಭಾಕರ್ ಪಾತ್ರರಾಗಿದ್ದಾರೆ. ಅಭಿನವ್ ಬಿಂದ್ರಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ ನಂತರ ಶೂಟಿಂಗ್​​ನಲ್ಲಿ ಒಲಿಂಪಿಕ್ ಪದಕ ಗೆದ್ದ ಐದನೇ ಶೂಟರ್ ಅವರಾಗಿದ್ದಾರೆ.

ಇದೊಂದು ಐತಿಹಾಸಿಕ ಪದಕ. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತಕ್ಕಾಗಿ ಮೊದಲ ಪದಕ ಗೆದ್ದಿದ್ದಕ್ಕೆ ಅಭಿನಂದನೆಗಳು. ಕಂಚಿನ ಪದಕಕ್ಕೆ ಶುಭಾಶಯಗಳು. ಈ ಯಶಸ್ಸು ಇನ್ನೂ ವಿಶೇಷವಾಗಿದೆ. ಏಕೆಂದರೆ ಅವರು ಭಾರತಕ್ಕಾಗಿ ಶೂಟಿಂಗ್​​​ನಲ್ಲಿ ಪದಕ ಗೆದ್ದ ಮೊದಲ ಮಹಿಳೆಯಾಗಿದ್ದಾರೆ ಎಂಬುದು ನಂಬಲಾಗದ ಸಾಧನೆ ” ಎಂದು ಪಿಎಂ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕೂಡ ಹರಿಯಾಣದ ಮಗಳಿಂದ ಇಡೀ ದೇಶ ನಿರೀಕ್ಷಿಸುತ್ತಿದ್ದ ಪದಕದ ಭರವಸೆ ಈಡೇರಿದೆ ಎಂದು ಹೇಳಿದ್ದಾರೆ.

ದೇಶದ ಹೆಮ್ಮೆಯ ಮಹಿಳಾ ಶೂಟರ್ ಮನು ಭಾಕರ್ ಪ್ಯಾರಿಸ್​ನಲ್ಲಿ ತಮ್ಮ ಶಕ್ತಿ ತೋರಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ದೇಶಕ್ಕೆ ಕಂಚಿನ ಪದಕ ಗೆದ್ದಿದ್ದಾರೆ ಎಂದು ಸೈನಿ ಪೋಸ್ಟ್ ಮಾಡಿದ್ದಾರೆ.

ಇಂದು, 22 ವರ್ಷದ ಮನು ಭಾಕರ್ ಇಡೀ ದೇಶ ಮತ್ತು ಹರಿಯಾಣ ರಾಜ್ಯವು ಹೆಮ್ಮೆಪಡುವಂತಹ ಸಾಧನೆಯನ್ನು ಮಾಡಿದ್ದಾರೆ. ಪ್ರತಿಯೊಬ್ಬ ಹರ್ಯಾಣ ಜನ ಎದೆ ಉಬ್ಬಿಸಿಕೊಂಡು ನಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಎಕ್ಸ್ ಗೆ ತೆರಳಿ ಮಹಿಳಾ ಅಥ್ಲೀಟ್ ಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

“ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೂಟಿಂಗ್​​ನಲ್ಲಿ 12 ವರ್ಷಗಳ ಪದಕಗಳ ಬರವನ್ನು ಕೊನೆಗೊಳಿಸಿದ್ದಾರೆ. ಈ ಸಾಧನೆಯೊಂದಿಗೆ ಮನು ಭಾಕರ್​ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Paris Olympics Boxing: 16ರ ಸುತ್ತಿಗೇರಿದ​ ಬಾಕ್ಸರ್​​ ನಿಖತ್ ಜರೀನ್; ಮುಂದಿನ ಪಂದ್ಯದಲ್ಲಿ ಕಠಿಣ ಸವಾಲು

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಮನು ಭಾಕರ್ ಅವರನ್ನು ಅಭಿನಂದಿಸಿದ್ದಾರೆ ಮತ್ತು “ಭಾರತಕ್ಕೆ ಮೊದಲ ಪದಕ ಪಡೆದ ಮನು ಭಾಕರ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

Continue Reading

ಕ್ರೀಡೆ

Paris Olympics Shooting: ಭಾರತಕ್ಕೆ​ ಒಲಿಯಿತು ಮೊದಲ ಪದಕ; ಕಂಚು ಗೆದ್ದ ಶೂಟರ್​ ಮನು ಭಾಕರ್

Paris Olympics Shooting: 2004ರಲ್ಲಿ ಅಥೆನ್ಸ್‌ನಲ್ಲಿ ನಡೆದ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಸುಮಾ ಶಿರೂರ್‌ ಕೊನೆಯ ಬಾರಿಗೆ ಫೈನಲ್‌ ತಲುಪಿದ್ದರು. ಆದರೆ ಅವರಿಂದ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅವರು 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

VISTARANEWS.COM


on

Paris Olympics Shooting
Koo

ಪ್ಯಾರಿಸ್​: ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪಿಸ್ತೂಲ್​ ದೋಷದಿಂದ ಹಿನ್ನಡೆ ಅನುಭವಿಸಿದ್ದ ಶೂಟರ್​ ಮನು ಭಾಕರ್(Manu Bhaker)​ ಇದೀಗ ಪ್ಯಾರಿಸ್(Paris Olympics Shooting)​ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಪದಕವೊಂದನ್ನು ಗೆದ್ದು ಸಂಭ್ರಮಿಸಿದ್ದಾರೆ. 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಫೈನಲ್​ ಪಂದ್ಯದಲ್ಲಿ 221.7 ಅಂಕ ಗಳಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ. ಕೊರಿಯಾದ ಶೂಟರ್​ಗಳಾದ ಓಹ್ ಯೇ ಜಿನ್(243.2), ಕಿಮ್​ ಯೆಜಿ(241.3) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.

2004ರಲ್ಲಿ ಅಥೆನ್ಸ್‌ನಲ್ಲಿ ನಡೆದ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಸುಮಾ ಶಿರೂರ್‌ ಕೊನೆಯ ಬಾರಿಗೆ ಫೈನಲ್‌ ತಲುಪಿದ್ದರು. ಆದರೆ ಅವರಿಂದ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅವರು 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೀಗ ಮನು ಭಾಕರ್​ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶೂಟಿಂಗ್​ನಲ್ಲಿ ಭಾರತಕ್ಕೆ ಪದಕ ಗೆದ್ದ ಮೊದಲ ಮಹಿಳಾ ಶೂಟರ್​ ಎನ್ನುವ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದರು.

ಅಂದು ನಿರಾಸೆ… ಇಂದು ಖುಷಿ

ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್​ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್​ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಇದು ಅವರ ಪದಾರ್ಪಣ ಒಲಿಂಪಿಕ್ಸ್​ ಕೂಟವಾಗಿತ್ತು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಅಂದಿನ ನಿರಾಸೆಯನ್ನು ಈಗ ಪ್ಯಾರಿಸ್​ನಲ್ಲಿ ಪದಕ ಗೆಲ್ಲುವ ಮೂಲಕ ನೀಗಿಸಿಕೊಂಡರು.

ನಿರೀಕ್ಷೆಯಂತೆ ಪದಕ ಗೆದ್ದ ಮನು


ಹರಿಯಾಣದ 22 ವರ್ಷದ ಮನು ಭಾಕರ್​ ಕಳೆದ ಅರ್ಹತಾ ಸುತ್ತಿನಲ್ಲಿ ಒಟ್ಟು 580 ಅಂಕ ಕಲೆ ಹಾಕಿ 3ನೇ ಸ್ಥಾನದೊಂದಿಗೆ ಫೈನಲ್​ಗೆ ಪ್ರವೇಶಿಸಿದ್ದರು. ಈ ಬಾರಿಯ ಒಲಿಂಪಿಕ್ಸ್​ ಪದಕ ನಿರೀಕ್ಷೆಯ ಕ್ರೀಡಾಪಟುಗಳಲ್ಲಿ ಮನು ಭಾಕರ್​ ಕೂಡ ಕಾಣಿಸಿಕೊಂಡಿದ್ದರು. ಭಾರತೀಯರು ನಿರೀಕ್ಷೆ ಮಾಡಿದಂತೆ ಅವರು ಪದಕ ಗೆದ್ದು ಅವರ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

Continue Reading

ಕ್ರೀಡೆ

Paris 2024 Olympics: ಭಾರತೀಯ ಕ್ರೀಡಾಪಟುಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದ ತರುಣ್‌ ವಿರುದ್ಧ ಟೀಕೆಗಳ ಸುರಿಮಳೆ

Paris 2024 Olympics: ನೆಟ್ಟಿಗರು ಭಾರತೀಯರ ಸಮವಸ್ತ್ರದ ವಿನ್ಯಾಸ ಕಳಪೆ ಗುಣಮಟ್ಟದ್ದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಸಮವಸ್ತ್ರ ವಿನ್ಯಾಸಗೊಳಿಸಿದ ತರುಣ್‌ ತಹಿಲಿಯಾನಿಯ ಅವರನ್ನು ಟ್ರೋಲ್​ ಮಾಡಿದ್ದಾರೆ.

VISTARANEWS.COM


on

Paris 2024 Olympics
Koo

ಪ್ಯಾರಿಸ್‌: ಜಗತ್ತಿನ ಅತಿದೊಡ್ಡ ಕ್ರೀಡಾಕೂಟವಾದ ಪ್ಯಾರಿಸ್​ನಲ್ಲಿ(Paris 2024 Olympics) ನಡೆಯುತ್ತಿರುವ ಒಲಿಂಪಿಕ್ಸ್​ ಉದ್ಘಾಟನ ಸಮಾರಂಭದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ವಸ್ತ್ರ ವಿನ್ಯಾಸ(Team India’s Olympic Outfits) ಮಾಡಿದ್ದ ವಿನ್ಯಾಸಕಾರ ತರುಣ್‌ ತಹಿಲಿಯಾನಿಗೆ(Tarun Tahiliani) ನೆಟ್ಟಿಗರು ಹಿಗ್ಗಾಮುಗ್ಗಾ ಬೈದಿದ್ದಾರೆ. ಅಂಬಾನಿ ಮಗನ ಮದುವೆ ವಿಚಾರ ಬಂದಾಗ ನೀವು ಮಾಸ್ಟರ್‌ಪೀಸ್‌ ಆದ ಡ್ರೆಸ್‌ಗಳನ್ನು ವಿನ್ಯಾಸ ಮಾಡುತ್ತೀರಿ. ದೇಶದ ವಿಚಾರ ಬಂದಾಗ ಇಂಥ ಕೆಟ್ಟ ವಿನ್ಯಾಸದ ಡ್ರೆಸ್‌ ಮಾಡುತ್ತೀರಿ. ಭಾರತದ ಕ್ರೀಡಾಪಟುಗಳು ಧರಿಸಿದ್ದ ಸಮವಸ್ತ್ರಗಳು ಕಳೆಪೆ ಗುಣಮಟ್ಟದ್ದಾಗಿತ್ತು, ದೇಶಕ್ಕೆ ಅವಮಾನ ಮಾಡುವ ರೀತಿಯತ್ತು ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.

ಪಥಸಂಚಲನಕ್ಕೂ ಮುನ್ನ ಧ್ವಜಧಾರಿಗಳಾದ ಪಿವಿ.ವಿ ಸಿಂಧು ಮತ್ತು ಶರತ್‌ ಕಮಲ್‌ ಸೇರಿದಂತೆ ಹಲವು ಭಾರತೀಯ ಕ್ರೀಡಾಪಟುಗಳು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ವಿನ್ಯಾಸ ಮಾಡಲಾಗಿದ್ದ ಸಮವಸ್ತ್ರ ಧರಿಸಿದ್ದ ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಫೋಟೊ ಕಂಡ ನೆಟ್ಟಿಗರು ಭಾರತೀಯರ ಸಮವಸ್ತ್ರದ ವಿನ್ಯಾಸ ಕಳಪೆ ಗುಣಮಟ್ಟದ್ದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಸಮವಸ್ತ್ರ ವಿನ್ಯಾಸಗೊಳಿಸಿದ ತರುಣ್‌ ತಹಿಲಿಯಾನಿಯ ಅವರನ್ನು ಟ್ರೋಲ್​ ಮಾಡಿದ್ದಾರೆ.

ಇದನ್ನೂ ಓದಿ Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

“ಡಾ. ನಂದಿತಾ ಅಯ್ಯರ್​ ಎನ್ನುವ ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ, ‘ಹಲೋ ತರುಣ್‌ ತಹಲಿಯಾನಿ, ಇದಕ್ಕಿಂತ ಉತ್ತಮವಾದ ಸೀರೆಗಳನ್ನು ನಾನು ಮುಂಬೈನ ಬೀದಿಗಳಲ್ಲಿ ಬರೀ 200 ರೂಪಾಯಿಗೆ ನೋಡಿದ್ದೇನೆ. ಆದರೆ, ನೀವು ಡಿಸೈನ್‌ ಮಾಡಿದ್ದು ಸಮಾರಂಭಕ್ಕೆ ಧರಿಸುವ ಸೀರೆಗಳಾಗಿರಲಿಲ್ಲ. ಅತ್ಯಂತ ಕಳಪೆ ಮಟ್ಟದಿಂದ ಕೂಡಿದ ವಿನ್ಯಾಸ ಇದಾಗಿತ್ತು. ಇದನ್ನು ನೋಡುವಾಗ ಡೆಡ್‌ಲೈನ್‌ಗೆ ಮೂರು ನಿಮಿಷ ಬಾಕಿ ಇರುವಾಗ ತರಾತುರಿಯಲ್ಲಿ ಪ್ರಿಂಟ್​ ಮಾಡಿದ ಡಿಸೈನ್​ನಂತೆ ತೋರುತ್ತಿದೆ. ದೇಶದಲ್ಲಿರುವ ಶ್ರೀಮಂತ ಜವಳಿ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ನೀವು ಮಾಡಿದ ಅವಮಾನ ಇದಾಗಿದೆ” ಎಂದು ಬರೆದುಕೊಂಡು ಟೀಕಿಸಿದ್ದಾರೆ.

ಇಂದು ಭಾರತದ ಸ್ಪರ್ಧೆಗಳ ವಿವರ

ಬ್ಯಾಡ್ಮಿಂಟನ್‌ (ಆರಂಭ: ಮಧ್ಯಾಹ್ನ 12.45)

ಪುರುಷರ ಸಿಂಗಲ್ಸ್‌ ಗ್ರೂಪ್‌ ಹಂತ: ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌.

ಮಹಿಳಾ ಸಿಂಗಲ್ಸ್‌ ಗ್ರೂಪ್‌ ಹಂತ: ಪಿ.ವಿ. ಸಿಂಧು.

ಪುರುಷರ ಡಬಲ್ಸ್‌ ಗ್ರೂಪ್‌ ಹಂತ: ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌.

ಮಹಿಳಾ ಡಬಲ್ಸ್‌ ಗ್ರೂಪ್‌ ಹಂತ: ತನಿಷಾ ಕ್ರಾಸ್ಟೊ-ಅಶ್ವಿ‌ನಿ ಪೊನ್ನಪ್ಪ.

ಶೂಟಿಂಗ್‌ (ಮಧ್ಯಾಹ್ನ12.45)

ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ಅರ್ಹತಾ ಸುತ್ತು: ಇಳವೆನಿಲ್‌ ವಲರಿವನ್‌, ರಮಿತಾ ಜಿಂದಲ್‌.

ಪುರುಷರ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌
ಪುರುಷರ 10 ಮೀ. ಏರ್‌ ರೈಫ‌ಲ್‌ ಅರ್ಹತಾ ಸುತ್ತು:
 ಸಂದೀಪ್‌ ಸಿಂಗ್‌, ಅರ್ಜುನ್‌ ಬಬುಟ.(ಮಧ್ಯಾಹ್ನ 2.45)

ವನಿತೆಯರ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌: ಮನು ಭಾಕರ್‌ (ಮಧ್ಯಾಹ್ನ, 3.30)

ಆರ್ಚರಿ

ಮಹಿಳೆಯರ ತಂಡ ಸ್ಪರ್ಧೆ, 16ರ ಸುತ್ತು: ದೀಪಿಕಾ ಕುಮಾರಿ, ಅಂಕಿತಾ ಭಕತ್‌, ಭಜನ್‌ ಕೌರ್‌. (ಮಧ್ಯಾಹ್ನ 1.00)

ಮಹಿಳಾ ತಂಡದ ಕಂಚಿನ ಸ್ಪರ್ಧೆ.(ರಾತ್ರಿ 8.18)

ಮಹಿಳಾ ತಂಡದ ಚಿನ್ನದ ಸ್ಪರ್ಧೆ.(ರಾತ್ರಿ 8.41)

ರೋಯಿಂಗ್​


ಪುರುಷರ ಸಿಂಗಲ್‌ ಸ್ಕಲ್ಸ್‌ ರೆಪಿಶಾಜ್‌ ಸುತ್ತು: ಬಲ್ರಾಜ್‌ ಪನ್ವರ್‌.(ಮಧ್ಯಾಹ್ನ 1.06)

ಟೇಬಲ್‌ ಟೆನಿಸ್

ಪುರುಷರ ಸಿಂಗಲ್ಸ್‌: ಶರತ್‌ ಕಮಲ್‌, ಹರ್ಮೀತ್‌ ದೇಸಾಯಿ.

ಮಹಿಳಾ ಸಿಂಗಲ್ಸ್‌: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ.(ಮಧ್ಯಾಹ್ನ 1.30)

ಬಾಕ್ಸಿಂಗ್‌


ಪುರುಷರ 51 ಕೆಜಿ, 32ರ ಸುತ್ತು: ಅಮಿತ್‌ ಪಂಘಲ್‌.(ಮಧ್ಯಾಹ್ನ 2.30)

ಪುರುಷರ 71 ಕೆಜಿ, 32ರ ಸುತ್ತು: ನಿಶಾಂತ್‌ ದೇವ್‌.(ಮಧ್ಯಾಹ್ನ 3.02)

ಮಹಿಳೆಯರ 50 ಕೆಜಿ, 32ರ ಸುತ್ತು: ನಿಖತ್‌ ಜರೀನ್‌ (ಸಂಜೆ 4.06)

ಈಜು


ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಹೀಟ್ಸ್‌: ಶ್ರಿಹರಿ ನಟರಾಜ್‌.

ವನಿತೆಯರ 200 ಮೀ. ಫ್ರೀಸ್ಟೈಲ್‌ ಹೀಟ್ಸ್‌: ಧಿನಿಧಿ ದೇಸಿಂಗೂ. (ಮಧ್ಯಾಹ್ನ 2.30)

ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಸೆಮಿಫೈನಲ್‌. (ತಡರಾತ್ರಿ 1.02)

ಮಹಿಳೆಯರ 200 ಮೀ. ಫ್ರೀಸ್ಟೈಲ್‌ ಸೆಮಿಫೈನಲ್‌.(ತಡರಾತ್ರಿ 1.20.)

ಟೆನಿಸ್‌

ಪುರುಷರ ಸಿಂಗಲ್ಸ್‌ ಮೊದಲ ಸುತ್ತು: ಸುಮಿತ್‌ ನಾಗಲ್‌.

ಪುರುಷರ ಡಬಲ್ಸ್‌: ರೋಹನ್‌ ಬೋಪಣ್ಣ-ಶ್ರೀರಾಮ್‌ ಬಾಲಾಜಿ(ಮಧ್ಯಾಹ್ನ 3.30)

Continue Reading
Advertisement
Shirur landslide
ಕ್ರೈಂ17 mins ago

Shirur landslide: ಶಿರೂರು ಭೂಕುಸಿತ; ಇನ್ನೂ ಪತ್ತೆಯಾಗದವರ ಶೋಧ ಕಾರ್ಯಾಚರಣೆ ಕೈಬಿಟ್ಟ ಜಿಲ್ಲಾಡಳಿತ

CUET UG Result 2024
ಪ್ರಮುಖ ಸುದ್ದಿ44 mins ago

CUET UG Result 2024: ಸಿಯುಇಟಿ ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

BJP-JDS Padayatra
ಕರ್ನಾಟಕ1 hour ago

BJP-JDS Padayatra: ರಾಜ್ಯ ಸರ್ಕಾರದ ವಿರುದ್ಧ ಆ.3ರಿಂದ ಬೆಂಗಳೂರು-ಮೈಸೂರು ಪಾದಯಾತ್ರೆ: ಬಿ.ವೈ.ವಿಜಯೇಂದ್ರ

Manu Bhaker
ಪ್ರಮುಖ ಸುದ್ದಿ1 hour ago

Manu Bhaker: ಭಾರತದ ಹೆಮ್ಮೆಯ ಪುತ್ರಿ ; ಮನು ಭಾಕರ್​ಗೆ ಪದಕ ಗೆಲ್ಲಲು ಭಗವದ್ಗೀತೆಯೇ ಪ್ರೇರಣೆ

Women's Asia Cup
ಪ್ರಮುಖ ಸುದ್ದಿ2 hours ago

Womens Asia Cup : ಭಾರತದ ಮಹಿಳೆಯರನ್ನು ಸೋಲಿಸಿ ಚೊಚ್ಚಲ ಏಷ್ಯಾ ಕಪ್​ ಗೆದ್ದ ಶ್ರೀಲಂಕಾ ತಂಡ

karnataka weather Forecast
ಮಳೆ2 hours ago

Karnataka Weather : ಕೂಲ್‌ ಆದ ಬೆಂಗಳೂರು; ನಾಳೆಗೆ ಉತ್ತರ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರ

HD Kumaraswamy
ಪ್ರಮುಖ ಸುದ್ದಿ2 hours ago

HD Kumaraswamy: ಸುದ್ದಿಗೋಷ್ಠಿ ನಡೆಸುವಾಗಲೇ ಎಚ್‌.ಡಿ. ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ; ಆಸ್ಪತ್ರೆಗೆ ದಾಖಲು

Tungabhadra Dam
ಕೊಪ್ಪಳ3 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Decline of Vultures
ಆರೋಗ್ಯ3 hours ago

Indian Vultures : ಹದ್ದುಗಳೇ ಜೀವರಕ್ಷಕ; ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಕುಸಿತದಿಂದ 5 ಲಕ್ಷ ಮಂದಿ ಸಾವು ಎಂದಿದೆ ಅಧ್ಯಯನ ವರದಿ

KRS Dam
ಕರ್ನಾಟಕ3 hours ago

KRS Dam: ಕೆಆರ್‌ಎಸ್, ಕಬಿನಿ ಜಲಾಶಯ ಭರ್ತಿ ಹಿನ್ನೆಲೆ ನಾಳೆ ಸಿಎಂ ಬಾಗಿನ ಅರ್ಪಣೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ3 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ5 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ7 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ8 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ1 day ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌