Side Effects Of Dry Fruits: ಆರೋಗ್ಯಕ್ಕೆ ಒಳ್ಳೆಯದೆಂದು ಒಣಬೀಜಗಳನ್ನು ಅತಿಯಾಗಿ ತಿನ್ನುತ್ತೀರಾ? ಎಚ್ಚರ! - Vistara News

ಆರೋಗ್ಯ

Side Effects Of Dry Fruits: ಆರೋಗ್ಯಕ್ಕೆ ಒಳ್ಳೆಯದೆಂದು ಒಣಬೀಜಗಳನ್ನು ಅತಿಯಾಗಿ ತಿನ್ನುತ್ತೀರಾ? ಎಚ್ಚರ!

Side Effects Of Dry Fruits: ದೇಹಕ್ಕೆ ಸಿಗಬೇಕಾದ ಎಲ್ಲ ಬಗೆಯ ಪೋಷಕಾಂಶಗಳನ್ನೂ ಒದಗಿಸುವ ಸುಲಭವಾದ ನೈಸರ್ಗಿಕ ವಿಧಾನವಿದು. ಆದರೆ, ನೆನಪಿಡಿ. ಅತಿಯಾದರೆ ಅಮೃತವೂ ವಿಷವೇ ಅಲ್ಲವೇ? ಪೋಷಕಾಂಶಗಳ ಪವರ್‌ ಹೌಸ್‌ ಆಗಿದ್ದರೂ ಬೀಜಗಳ ಅತಿಯಾದ ಸೇವನೆಯಿಂದ ಕೆಲವೊಮ್ಮೆ ಇದು ತೊಂದರೆಯನ್ನೂ ತರಬಹುದು. ಆರೋಗ್ಯ ಹೆಚ್ಚಿಸಲು ಹೊರಟು ಅನಾರೋಗ್ಯದ ಕಡೆಗೆ ಮುಖ ಮಾಡಬೇಕಾಗಬಹುದು.

VISTARANEWS.COM


on

Side Effects Of Dry Fruits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಒಣ ಬೀಜಗಳನ್ನು ತಿನ್ನುವುದು ಒಳ್ಳೆಯದು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಪೋಷಕಾಂಶಗಳ ಪವರ್‌ ಹೌಸ್‌ ಆಗಿರುವ ಈ ಬೀಜಗಳನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿಗೆ. ದೇಹಕ್ಕೆ ಸಿಗಬೇಕಾದ ಎಲ್ಲ ಬಗೆಯ ಪೋಷಕಾಂಶಗಳನ್ನೂ ಒದಗಿಸುವ ಸುಲಭವಾದ ನೈಸರ್ಗಿಕ ವಿಧಾನವಿದು. ಆದರೆ, ನೆನಪಿಡಿ. ಅತಿಯಾದರೆ ಅಮೃತವೂ ವಿಷವೇ ಅಲ್ಲವೇ? ಪೋಷಕಾಂಶಗಳ ಪವರ್‌ ಹೌಸ್‌ ಆಗಿದ್ದರೂ ಬೀಜಗಳ ಅತಿಯಾದ ಸೇವನೆಯಿಂದ ಕೆಲವೊಮ್ಮೆ ಇದು ತೊಂದರೆಯನ್ನೂ ತರಬಹುದು. ಆರೋಗ್ಯ ಹೆಚ್ಚಿಸಲು ಹೊರಟು ಅನಾರೋಗ್ಯದ ಕಡೆಗೆ ಮುಖ ಮಾಡಬೇಖಾಗಬಹುದು. ಬನ್ನಿ, ಅತಿಯಾಗಿ ಬೀಜಗಳನ್ನು ಸೇವಿಸುವುದರಿಂದ ಐವ ಸಮಸ್ಯೆಗಳು ಉದ್ಭವಿಸಬಹುದು (Side Effects Of Dry Fruits) ಎಂಬುದನ್ನು ನೋಡೋಣ.

Weight gain

ತೂಕ ಏರಿಕೆ

ಬೀಜಗಳಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳಿವೆ. ವಿಟಮಿನ್‌ಗಳು, ಖನಿಜಾಂಶಗಳು, ನಾರಿನಂಶ, ಒಳ್ಳೆಯ ಕೊಬ್ಬು, ಸೇರಿದಂತೆ ಎಲ್ಲವೂ ಇದರಿಂದ ಪಡೆಯಬಹುದು. ಆದರೆ ಇವುಗಳ ಸೇವನೆ ಅತಿಯಾದರೆ, ತೂಕದಲ್ಲಿ ದಿಡೀರ್‌ ಏರಿಕೆಯಾಗಬಹುದು. ಬೊಜ್ಜು ಬರಬಹುದು. ಇದರಿಂದ ಸಿಗುವ ಲಾಭಗಳು ನಷ್ಟವಾಗಿ ಪರಿಣಮಿಸಬಹುದು. ಯಾಕೆಂದರೆ, ಹೆಚ್ಚಿನ ಕ್ಯಾಲರಿ ಇರುವ ಬೀಜಗಳನ್ನು ಅತಿಯಾಗಿ ತಿಂದರೆ, ಖಂಡಿತವಾಗಿಯೂ ತೂಕ ಏರಿಕೆಯಾಗಬಹುದು.

Improves Digestion Karela Benefits

ಜೀರ್ಣಕ್ರಿಯೆ ಸಮಸ್ಯೆ

ಜೀರ್ಣಕ್ರಿಯೆಯ ಸಮಸ್ಯೆಗಳೂ ಹಲವರಲ್ಲಿ ಬರುವ ಸಾಧ್ಯತೆಗಳಿವೆ. ಹೊಟ್ಟೆಯುಬ್ಬರ, ಗ್ಯಾಸ್‌, ಬೇದಿ ಇತ್ಯಾದಿಗಳಿಗೂ ಕಾರಣವಾಗಬಹುದು. ಮುಖ್ಯವಾಗಿ ಮೊದಲೇ ಜೀರ್ಣಕ್ರಿಯೆಯ ಸಮಸ್ಯೆ ಇರುವ ಮಂದಿಗೆ, ಸೂಕ್ಷ್ಮವಾದ ಜೀರ್ಣಕ್ರಿಯೆಯನ್ನು ಹೊಂದಿದ ಮಂದಿಯಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ಬಾದಾಮಿ, ಗೋಡಂಬಿಯಂತಹ ಬೀಜಗಳಲ್ಲಿ ಆಕ್ಸಲೇಟ್‌ ಹಾಗೂ ಫೈಟೇಟ್‌ಗಳಿದ್ದು ಇವು ಖನಿಜಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಕಡಿಮೆ ಮಾಡುವ ಕಾರಣ ಬಹಳ ಸಾರಿ, ಕಿಡ್ನಿ ಕಲ್ಲಿನಂತಹ ಸಮಸ್ಯೆಯನ್ನು ಹುಟ್ಟುಹಾಕಬಹುದು.
ಅಷ್ಟೇ ಅಲ್ಲ, ಬೀಜಗಳಲ್ಲಿ ಕೊಬ್ಬಿನಂಶ ಹೇರಳವಾಗಿ ಇರುವುದರಿಂದ ಇವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತೆ. ಇದರಿಂದ ಹೊಟ್ಟೆ ತುಂಬಿರುವ ಅನುಭವವೇ ಹೆಚ್ಚಿರುತ್ತದೆ. ಹೆಚ್ಚು ಬೀಜಗಳನ್ನು ತಿಂದಾಗ ಈ ಭಾವ ಹೆಚ್ಚಿರುವುದರಿಂದ ಹಾಗೂ ಬಹುಬೇಗನೆ ಜೀರ್ಣವಾಗದೆ, ಹೊಟ್ಟೆ ಭಾರವಾದ ಅನುಭವ ನೀರುತ್ತದೆ. ಬೀಜಗಳಲ್ಲಿರುವ ಆಕ್ಸಲೇಟ್‌ ಹಾಗೂ ಫೈಟೇಟ್‌ಗಳು ಪೋಷಕಾಂಶಗಳ ಹೀರಿಕೆಯ ವಿಚಾರದಲ್ಲಿ ಕೆಲವೊಮ್ಮೆ ಅಡ್ಡಿಯನ್ನು ಉಂಟು ಮಾಡುವ ಗುಂವನ್ನೂ ಹೊಂದಿದೆ. ಇದು ಜೀರ್ಣನಾಳಗಳ ಒಳಮೈಗೆ ಕಿರಿಕಿರಿನ್ನು ಉಂಟು ಮಾಡುತ್ತದೆ. ಆಗಾಗ ಬೀಜಗಳನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡವರು ಖಂಡಿತ ತಮ್ಮ ಅಭ್ಯಾಸದ ಬಗ್ಗೆ ಗಮನ ಹರಿಸುವುದು ಸೂಕ್ತ. ಯಾಕೆಂದರೆ ಈ ಅತಿಯಾದ ಬೀಜಗಳ ಸೇವನೆ ಅಭ್ಯಾಸ ಕೊಲೆಸ್ಟೆರಾಲ್‌ ಹಾಗೂ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಒಳ್ಳೆಯ ಕೊಬ್ಬು ಒಳ್ಳೆಯದಾಗಿಯೇ ವರ್ತಿಸಬೇಕೆಂದರೆ, ಇವುಗಳ ಸೇವನೆ ಹಿತಮಿತವಾಗಿರಬೇಕು.

ಮಿತವಾಗಿ ತಿನ್ನಬೇಕು

ತಜ್ಞರು ಹೇಳುವಂತೆ, ಬೀಜಗಳ ಅತ್ಯುನ್ನತ ಲಾಭಗಳನ್ನು ನಾವು ಪಡೆಯಬೇಕೆಂದರೆ ಅವನ್ನು ಮಿತವಾಗಿ ತಿನ್ನಬೇಕು. ಯಾವುದೂ ಅತಿಯಾಗಬಾರದು. ಬೀಜಗಳಲ್ಲಿ ಆರೋಗ್ಯಕರ ಕೊಬ್ಬು, ನಾರಿನಂಶ, ಪ್ರೊಟೀನ್‌, ವಿಟಮಿನ್‌ ಬಿ ಹಾಗೂ ಇಯಂತಹ ಪೋಷಕ ತತ್ವಗಳಿದ್ದು, ಮೆಗ್ನೀಷಿಯಂ, ಪೊಟಾಶಿಯಂ, ಝಿಂಕ್‌ನಂತಹ ಖನಿಜಾಂಶಗಳಿದ್ದು ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳೂ ಇವೆ. ಇವನ್ನು ಹಿತಮಿತವಾಗಿ ಸೇವಿಸಿದರೆ ಹೆಚ್ಚು ಲಾಭ ಪಡೆಯಬಹುದು.

ಇದನ್ನೂ ಓದಿ: Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?

ಎಷ್ಟು ತಿನ್ನಬಹುದು

ಹಾಗಾದರೆ ದಿನಕ್ಕೆ ಎಷ್ಟು ತಿನ್ನಬಹುದು ಎಂಬ ಗೊಂದಲ ನಿಮ್ಮನ್ನು ಕಾಡುವುದು ಸಹಜವೇ. ತಜ್ಞರ ಪ್ರಕಾರ, ನಿಮ್ಮ ಮುಷ್ಟಿಯೊಳಗೆ ಹಿಡಿಯುವಷ್ಟು ಬೀಜಗಳನ್ನು ನೀವು ದಿನವೊಂದಕ್ಕೆ ಸೇವಿಸಬಹುದು. ಎಲ್ಲ ಬೀಜಗಳೂ ಸೇರಿ ಅದು ನಿಮ್ಮ ಮುಷ್ಠಿ ಗಾತ್ರಕ್ಕಿಂತ ಹೆಚ್ಚಾಗುವುದು ಬೇಡ. ಅಂದರೆ ಸುಮಾರು ೨೮ ಗ್ರಾಂನಷ್ಟು ಬೀಜಗಳ ಸೇವನೆಯನ್ನು ನೀವು ಮಾಡಬಹುದು. ಈ ಮುಷ್ಠಿಯಲ್ಲಿ ಎಲ್ಲ ಬಗೆಯ ಬೀಜಗಳೂ ಸೇರಿರಲಿ, ಕುಂಬಳಕಾಯಿ ಬೀಜ, ಬಾದಾಮಿ, ವಾಲ್ನಟ್‌, ಗೋಡಂಬಿ, ಕಡಲೆಕಾಯಿ, ಸೂರ್ಯಕಾಂತಿ ಬೀಜ ಇತ್ಯಾದಿಗಳೆಲ್ಲ ನಿಮ್ಮ ಮುಷ್ಠಿ ಗಾತ್ರದಿಂದ ಹೊರಚೆಲ್ಲದಿರಲಿ. ಹೀಗೆ ಮಾಡುವುದರಿಂದ ಈ ಬೀಜಗಳ ಎಲ್ಲ ಬಗೆಯ ಪೋಷಕಾಂಶಗಳ ಲಾಭವನ್ನೂ ನೀವು ಪಡೆಯುವಂತಾಗುತ್ತೀರಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿದರೆ ಗೋಲ್ಡನ್ ಮೆಮೊರಿ ನಿಮ್ಮದು!

ರಾಜಮಾರ್ಗ ಅಂಕಣ: ಗೋಲ್ಡನ್ ಮೆಮೊರಿ (Golden Memory) ನಿಮ್ಮದಾಗಿದ್ದರೆ ಅದು ನಿಮ್ಮ ಯಶಸ್ಸಿನ ಮೊದಲ ಮೆಟ್ಟಿಲು ಆಗಬಲ್ಲದು. ಈ ಗೋಲ್ಡನ್ ಮೆಮೊರಿಯನ್ನು ನಿಮ್ಮದಾಗಿಸಲು ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿ.

VISTARANEWS.COM


on

golden memory ರಾಜಮಾರ್ಗ ಅಂಕಣ
Koo

ಮೆಮೊರಿ ಒಂದು ಮಿರಾಕಲ್

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ನೆನಪು (Memory) ಒಂದು ವಿಸ್ಮಯಕಾರಿ ಆದ ವಿದ್ಯಮಾನ. ಒಳ್ಳೆಯ ಮೆಮೊರಿ ಪವರ್ (memory Power) ಇದ್ದವರು ಜಗತ್ತನ್ನು ಗೆಲ್ಲಬಹುದು. ಪರೀಕ್ಷೆಗಳಲ್ಲಿ ಟಾಪರ್ (Exam Topper) ಆಗಲು, ಉದ್ಯೋಗವನ್ನು ಚೆನ್ನಾಗಿ ಮಾಡಲು, ವ್ಯಕ್ತಿಗಳನ್ನು ಸರಿಯಾಗಿ ಗುರುತಿಸಲು, ಹಣಕಾಸಿನ ವ್ಯವಹಾರ ಚಂದವಾಗಿ ಮಾಡಲು, ಸಂಬಂಧಗಳನ್ನು ಸರಿಯಾಗಿ ನಿಭಾಯಿಸಲು, ಒಳ್ಳೆಯ ಲೇಖಕರಾಗಲು, ಉತ್ತಮ ಭಾಷಣಕಾರರಾಗಲು ಎಲ್ಲದಕ್ಕೂ ಮೆಮೊರಿ ಬೇಕು. ಗೋಲ್ಡನ್ ಮೆಮೊರಿ (Golden Memory) ನಿಮ್ಮದಾಗಿದ್ದರೆ ಅದು ನಿಮ್ಮ ಯಶಸ್ಸಿನ ಮೊದಲ ಮೆಟ್ಟಿಲು ಆಗಬಲ್ಲದು. ಈ ಗೋಲ್ಡನ್ ಮೆಮೊರಿಯನ್ನು ನಿಮ್ಮದಾಗಿಸಲು ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿ.

1) ಅರ್ಥ ಮಾಡಿಕೊಂಡು ಕಲಿಯಿರಿ. ಬಾಯಿಪಾಠವು ಲಾಂಗ್ ರೇಂಜಿನಲ್ಲಿ ಸೋಲುತ್ತದೆ.

2) ಯಾಕೆ ಓದಬೇಕು? ಎನ್ನುವುದು ಮೂಲಭೂತವಾದ ಪ್ರಶ್ನೆ. ಅದು ಕಲಿಕೆಯ ಉದ್ದೇಶ (PURPOSE). ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಉದಾಹರಣೆಗೆ ನಾನು ಜ್ಞಾನಕ್ಕಾಗಿ ಓದುತ್ತೇನೆ. ಇನ್ನೂ ಕೆಲವರು ಖುಷಿಗಾಗಿ ಓದುತ್ತಾರೆ. ಮತ್ತೂ ಕೆಲವರು ಓದಿದ ಅಂಶಗಳನ್ನು ಬೇರೆಯವರಿಗೆ ಹಂಚಲು ಓದುತ್ತಾರೆ. ವಿದ್ಯಾರ್ಥಿಗಳು ಉತ್ತಮ ಮಾರ್ಕ್ ಪಡೆಯಲು ಓದುತ್ತಾರೆ ಇತ್ಯಾದಿ.

3) ಕಲಿಯಬೇಕಾದ ವಿಷಯಗಳನ್ನು ವ್ಯವಸ್ಥಿತವಾಗಿ ಜೋಡಿಸಿ. ಅಂದರೆ ಸುಲಭವಾದ ವಿಷಯಗಳನ್ನು ಮೊದಲು ಕಲಿಯುವುದು, ಕಷ್ಟವಾದ ವಿಷಯಗಳನ್ನು ನಂತರ ಕಲಿಯುವುದು ಇತ್ಯಾದಿ.

4) ಶಬ್ದಗಳು ಬೇಗನೇ ಮರೆತು ಹೋಗುತ್ತವೆ. ಆದರೆ ಚಿತ್ರಗಳು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತವೆ. ದೀರ್ಘಕಾಲದ ಮೆಮೊರಿಗೆ ಚಿತ್ರಗಳ ನೆರವು ಪಡೆಯಿರಿ.

5) ನಾನು ನೆನಪು ಇಡಬಲ್ಲೆ ಎಂಬ ಆತ್ಮವಿಶ್ವಾಸವು ನಿಮ್ಮನ್ನು ಗೆಲ್ಲಿಸುತ್ತದೆ. ಆತ್ಮವಿಶ್ವಾಸವು ನಿಮ್ಮ ಅಷ್ಟೂ ಧನಾತ್ಮಕ ಯೋಚನೆಗಳ (POSSITIVE THINKING) ಉತ್ಪನ್ನ ಆಗಿರುತ್ತದೆ.

6) ಬಹುಮಾಧ್ಯಮ ಕಲಿಕೆಯು ನಿಮ್ಮ ಮೆಮೊರಿ ಪವರನ್ನು ಹೆಚ್ಚು ಮಾಡುತ್ತದೆ. ಅಂದರೆ ಬಣ್ಣದ ಚಿತ್ರಗಳ ಮೂಲಕ ಕಲಿಕೆ, ವಿಡಿಯೋಗಳ ಮೂಲಕ ಕಲಿಕೆ, ಮ್ಯೂಸಿಕ್ ಬಳಸಿಕೊಂಡು ಕಲಿಕೆ, ಆಡಿಯೋ ಬಳಸಿಕೊಂಡು ಕಲಿಕೆ ಇತ್ಯಾದಿ.

7) ಒತ್ತಡ ಇಲ್ಲದೆ ಕಲಿಯುವುದು ತುಂಬಾ ಮುಖ್ಯ. ಈ ಒತ್ತಡವು ನಿಮ್ಮ ಕಲಿಯುವ ಸಾಮರ್ಥ್ಯವನ್ನು ಮತ್ತು ಮೆಮೊರಿ ಪವರನ್ನು ಇಂಚಿಂಚು ಸಾಯಿಸುತ್ತದೆ.

8) ಭಾವನಾತ್ಮಕ ಕಲಿಕೆ ನಿಮ್ಮ ಮೆಮೊರಿ ಪವರನ್ನು ಹಲವು ಪಟ್ಟು ವೃದ್ಧಿಸುತ್ತದೆ. ಅಂದರೆ ನಾವು ಕಲಿಯುವ ವಿಷಯವನ್ನು ಪ್ರೀತಿ ಮಾಡುತ್ತಾ ಕಲಿಯುವುದು ಎಂದರ್ಥ. ಅದು ಹೇಗೆ ಎಂದು ಯೋಚಿಸಿ.

9) ಸಣ್ಣ ತರಗತಿಗಳಲ್ಲಿ ಗಟ್ಟಿಯಾಗಿ ಓದುವುದು (Loud Reading) ಹೆಚ್ಚು ಅನುಕೂಲಕರ. ಆದರೆ ಪ್ರೌಢಶಾಲೆಯ ಹಂತಕ್ಕೆ ಬಂದಾಗ ಮೌನ ಓದು (Silent Reading) ನಿಮಗೆ ಹೆಚ್ಚು ಫಲಿತಾಂಶ ನೀಡುತ್ತದೆ.

10) ಪ್ಯಾಸಿವ್ ರೀಡಿಂಗ್ (PASSIVE READING) ಮಾಡುವುದಕ್ಕಿಂತ ಕ್ರಿಯೇಟಿವ್ ರೀಡಿಂಗ್ ಹೆಚ್ಚು ಮೆಮೊರಿಯನ್ನು ಖಾತ್ರಿ ಪಡಿಸುತ್ತದೆ. ಅಂದರೆ ಹೊಸ ಹೊಸ ರೀತಿಯಿಂದ ಕಲಿಯಲು ತೊಡಗುವುದು.

11) ಹೆಚ್ಚು ಏಕಾಗ್ರತೆಯಿಂದ ಓದುವುದು ತುಂಬಾ ಮುಖ್ಯ. ಪ್ರಶಾಂತವಾದ ಮನಸ್ಸು ಹೆಚ್ಚು ಮೆಮೊರಿಯನ್ನು ಉತ್ತೇಜನ ಮಾಡುತ್ತದೆ.

reading hobby
golden memory

13) ನಮ್ಮ ಮೆದುಳಿನಲ್ಲಿ ಮೆಮೊರಿಯನ್ನು ಉತ್ತೇಜನ ಮಾಡುವ SEROTONIN ಎಂಬ ಹಾರ್ಮೋನ್ ಉತ್ಪತ್ತಿ ಆಗ್ತಾ ಇರುತ್ತದೆ. ಮೆದುಳಿಗೆ ಸರಿಯಾದ ವಿಶ್ರಾಂತಿ ಕೊಟ್ಟಾಗ, ದಿನಕ್ಕೆ ಕನಿಷ್ಟ 6-8 ಘಂಟೆ ನಿದ್ರೆ ಮಾಡಿದಾಗ, ಮೆದುಳಿಗೆ ಹೆಚ್ಚು ಖುಷಿ ಕೊಡುವ ಚಟುವಟಿಕೆಗಳನ್ನು ಕೊಟ್ಟಾಗ, ಉತ್ತಮ ಹವ್ಯಾಸಗಳನ್ನು ರೂಡಿ ಮಾಡಿದಾಗ ಆ ಹಾರ್ಮೋನ್ ಮಿರಾಕಲಸ್ ಮೆಮೊರಿ ಕ್ರಿಯೇಟ್ ಮಾಡುತ್ತದೆ.

14) ಮುಖ್ಯಾಂಶಗಳನ್ನು ಬರೆಯುವ ಅಭ್ಯಾಸವು ತುಂಬಾ ಒಳ್ಳೆಯದು. ಚೆಂದವಾಗಿ ಬರೆಯುವುದರಿಂದ ನಿಮ್ಮ ಬಲ ಮೆದುಳು (ರೈಟ್ ಬ್ರೈನ್) ಹೆಚ್ಚು ಚುರುಕು ಆಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಹಾಗೆಯೇ ಪ್ರತೀ ದಿನವೂ ದಿನಚರಿ (ಡೈರಿ) ಬರೆಯುವುದು ಕೂಡ ನಿಮ್ಮ ಮೆಮೊರಿಗೆ ಪೂರಕ.

15) ಯೋಗಾಸನ, ಪ್ರಾಣಾಯಾಮ , ಧ್ಯಾನ, ಪೌಷ್ಟಿಕ ಆಹಾರದ ಸೇವನೆ, ಮೌನವಾದ ವಾಕಿಂಗ್ ನಿಮ್ಮ ಮೆಮೊರಿ ಪವರನ್ನು ಹೆಚ್ಚು ಮಾಡುವ ಚಟುವಟಿಕೆಗಳು. ಮೆದುಳಿಗೆ ಹೆಚ್ಚು ರಕ್ತ ಸರಬರಾಜು ಆಗುವ ಆಸನಗಳನ್ನು ಒಳ್ಳೆಯ ಗುರುಗಳ ಮೂಲಕ ಕಲಿಯಲು ಪ್ರಯತ್ನಿಸಿ.

16) ಓದಲು ಆರಂಭಿಸುವ ಮೊದಲು 10-15 ನಿಮಿಷ ಕ್ಲಾಸಿಕಲ್ ಸಂಗೀತ ಅಥವಾ INSTRUMENTAL MUSIC (ಸಿತಾರ್, ವೀಣೆ, ವಯಲಿನ್ ಇತ್ಯಾದಿ) ಕೇಳುವುದರಿಂದ ನಿಮ್ಮ ಓದುವ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ಮೆಮೊರಿ ಪವರ್ ಕೂಡ ಹೆಚ್ಚುತ್ತದೆ.

golden memory
golden memory

17) ನೀವು ಓದಿದ್ದನ್ನು ಇನ್ನೊಬ್ಬರಿಗೆ ವಿವರಿಸುವಾಗ ಅದು ನಿಮ್ಮ ಮೆಮೊರಿ ಪವರನ್ನು ಉತ್ತೇಜನ ಮಾಡುತ್ತದೆ. ಆದ್ದರಿಂದ ಗ್ರೂಪ್ ಸ್ಟಡಿಯು ಮೆಮೊರಿ ಜಾಸ್ತಿ ಮಾಡಲು ಅತ್ಯುತ್ತಮ ವಿಧಾನ ಎಂದು ಮಾನ್ಯತೆ ಪಡೆದಿದೆ.

18) ಮೆಮೊರಿ ಹೆಚ್ಚು ಮಾಡಲು ಪುನರ್ ಮನನ (Recalling) ಅತ್ಯುತ್ತಮ ವಿಧಾನ. ರಾತ್ರಿ ಮಲಗುವ ಮೊದಲು ಒಂದು ಹತ್ತು ನಿಮಿಷ ಬಿಡುವು ಮಾಡಿಕೊಂಡು ಇಂದು ನಾನು ಯಾವುದನ್ನು ಯಾವ ಅನುಕ್ರಮದಲ್ಲಿ ಕಲಿತೆ? ಯಾರನ್ನು ಇಂದು ಭೇಟಿ ಮಾಡಿದೆ? ಯಾವ ಹೊಸ ಅನುಭವ ಪಡೆದುಕೊಂಡೆ? ಇತ್ಯಾದಿ ರಿಕಾಲ್ ಮಾಡುತ್ತಾ ಹೋದಾಗ ನಿಮ್ಮ ಮೆಮೊರಿ ನೂರು ಪಟ್ಟು ವೃದ್ಧಿ ಆಗುತ್ತದೆ. ಹಾಗೆಯೇ ಪ್ರತೀ ಒಂದು ಘಂಟೆಯ ಓದಿನ ನಂತರ 5-10 ನಿಮಿಷ ರಿಕಾಲ್ ಮಾಡುತ್ತಾ ಹೋದರೆ ಮೆಮೊರಿ ಗೆಲ್ಲುತ್ತದೆ.

19) ನಿಮ್ಮ ಮೆದುಳಿನಲ್ಲಿ ಜಂಕ್ (ತಂಗಳು) ಸಂಗತಿಗಳು ಹೆಚ್ಚು ಪ್ರವೇಶ ಮಾಡದ ಹಾಗೆ ಪ್ಲಾನ್ ಮಾಡಿಕೊಳ್ಳಿ. ಉದಾಹರಣೆಗೆ ಅನಗತ್ಯವಾದ ಇಸವಿಗಳು, ಉದ್ದುದ್ದವಾದ ಮೊಬೈಲ್ ನಂಬರು ಅನಗತ್ಯವಾದ ಕ್ರಿಕೆಟ್ ದಾಖಲೆಗಳು, ನೋವು ಕೊಡುವ ಸಂಗತಿಗಳು ಇತ್ಯಾದಿ.

20) ಮೆಮೊರಿ ಹೇಗೆ ಸಹಜವೋ ಮರೆಯುವುದು (Forgetting) ಕೂಡಾ ಅಷ್ಟೇ ಸಹಜ! ಯಾವ ಮೆಮೊರಿ ನಿಮಗೆ ಮುಂದೆ ಅಗತ್ಯ ಬೀಳುವುದಿಲ್ಲವೋ ಅವುಗಳನ್ನು ನಿಮ್ಮ ಮೆದುಳು ಚಂದವಾಗಿ ಒರೆಸುತ್ತಾ (Erasing) ಮುಂದೆ ಹೋಗುತ್ತದೆ. ಆದ್ದರಿಂದ ಏನಾದರೂ ಸಣ್ಣ ಪುಟ್ಟ ಮರೆವು ಉಂಟಾದರೆ ಆತಂಕ ಮಾಡದೇ ಮುಂದೆ ಹೋಗುವುದೇ ಒಳ್ಳೇದು.

ಅದ್ಭುತವಾದ ಗೋಲ್ಡನ್ ಮೆಮೊರಿ ನಿಮ್ಮದಾಗಲಿ ಎಂಬುದು ನಮ್ಮ ಹಾರೈಕೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಕೇಶ್ ಅಂದರೆ ಹಾಂಟಿಂಗ್ ಮೆಲಡಿ, ನೋವಿನಲ್ಲಿ ಅದ್ದಿ ತೆಗೆದ ದನಿ!

Continue Reading

ಆರೋಗ್ಯ

Vitamin D Deficiency: ನೀವು ಸಂತೋಷವಾಗಿಲ್ಲವೇ? ವಿಟಮಿನ್‌ ಡಿ ಕೊರತೆಯೂ ಇದಕ್ಕೆ ಕಾರಣವಿರಬಹುದು!

Vitamin D deficiency: ಸಂಧಿವಾತ, ಎಲುಬಿನಲ್ಲಿ ಸವೆತ, ಎಲುಬಿನಲ್ಲಿ ಸಾಂದ್ರತೆ ಕಡಿಮೆಯಾಗುವುದು ಇತ್ಯಾದಿ ಸಮಸ್ಯೆಗಳು ಕಾಡದೆ ಇರಬೇಕೆಂದರೆ ನಮ್ಮ ದೇಹಕ್ಕೆ ಸರಿಯಾಗಿ ವಿಟಮಿನ್‌ ಡಿ ಪೂರೈಕೆಯಾಗುತ್ತಲೂ ಇರಬೇಕು. ಕೇವಲ ಎಲುಬಿನ ಆರೋಗ್ಯವೊಂದೇ ವಿಟಮಿನ್‌ ಡಿಯ ಮೇಲೆ ನಿಂತಿಲ್ಲ. ದೇಹ ಎಲ್ಲ ರೀತಿಯಲ್ಲೂ ಸೌಖ್ಯವಾಗಬೇಕಾಗಿದ್ದರೆ ವಿಟಮಿನ್‌ ಡಿ ಅವಶ್ಯಕವಾಗಿ ಬೇಕು. ನಮ್ಮ ನಿತ್ಯದ ಸಂತೋಷದ ಹಿಂದೆಯೂ ವಿಟಮಿನ್‌ ಡಿ ಕೈಚಳಕವಿದೆ.

VISTARANEWS.COM


on

Vitamin D Deficiency
Koo

ನಮಗೆ ವಿಟಮಿನ್‌ ಡಿ (Vitamin D deficiency) ಯಾಕೆ ಬೇಕು ಎಂದರೆ ನಾವು ಮೊದಲು ಕೊಡುವ ಉತ್ತರ ಎಲುಬಿನ ಆರೋಗ್ಯಕ್ಕೆ. ಸಂಧಿವಾತ, ಎಲುಬಿನಲ್ಲಿ ಸವೆತ, ಎಲುಬಿನಲ್ಲಿ ಸಾಂದ್ರತೆ ಕಡಿಮೆಯಾಗುವುದು ಇತ್ಯಾದಿ ಸಮಸ್ಯೆಗಳು ಕಾಡದೆ ಇರಬೇಕೆಂದರೆ ನಮ್ಮ ದೇಹಕ್ಕೆ ಸರಿಯಾಗಿ ವಿಟಮಿನ್‌ ಡಿ ಪೂರೈಕೆಯಾಗುತ್ತಲೂ ಇರಬೇಕು. ಕೇವಲ ಎಲುಬಿನ ಆರೋಗ್ಯವೊಂದೇ ವಿಟಮಿನ್‌ ಡಿಯ ಮೇಲೆ ನಿಂತಿಲ್ಲ. ದೇಹ ಎಲ್ಲ ರೀತಿಯಲ್ಲೂ ಸೌಖ್ಯವಾಗಬೇಕಾಗಿದ್ದರೆ ವಿಟಮಿನ್‌ ಡಿ ಅವಶ್ಯಕವಾಗಿ ಬೇಕು. ನಮ್ಮ ನಿತ್ಯದ ಸಂತೋಷದ ಹಿಂದೆಯೂ ವಿಟಮಿನ್‌ ಡಿಯ ಕೈಚಳಕವಿದೆ. ವಿಟಮಿನ್‌ ಡಿ ಕೊರತೆಯಿಂದ ಖಿನ್ನತೆಯೂ ಬರುವ ಸಾಧ್ಯತೆಗಳಿವೆ ಎಂದು ಇತ್ತೀಚೆಗಿನ ಸಂಶೋಧನೆಗಳು ಬಹಿರಂಗಪಡಿಸಿವೆ. ವಿಟಮಿನ್‌ ಡಿ ಕೊರತೆಯಾದರೆ (Vitamin D deficiency) ಈ ಕೆಲವು ಲಕ್ಷಣಗಳು ಸಾಮಾನ್ಯ. ಆಗಾಗ ಇನ್‌ಫೆಕ್ಷನ್‌ಗಳಾಗುವುದು, ರೋಗ ನಿರೋಧಕತೆ ಕಡಿಮೆಯಾಗುವುದು, ಆಗಾಗ ನೆಗಡಿ, ಶೀತ ಬರುವುದು ಇತ್ಯಾದಿಗಳೂ ವಿಟಮಿನ್‌ ಡಿಯ ಕೊರತೆಯ ಲಕ್ಷಣಗಳು. ಮೂಳೆಯಲ್ಲಿ ಶಕ್ತಿ ಇಲ್ಲದಂತಾಗುವುದು ಕೂಡಾ ಇದರ ಪ್ರಮುಖ ಲಕ್ಷಣ. ಖಿನ್ನತೆಯೂ ಕೂಡಾ ವಿಟಮಿನ್‌ ಡಿಯ ಕೊರತೆಯಿಂದ ಬರುವ ಸಂಭವವಿದೆ. ವಿಟಮಿನ್‌ ಡಿ (Vitamin D) ನಮ್ಮ ಆಹಾರದಲ್ಲಿರುವ ಕ್ಯಾಲ್ಶಿಯಂ ಅನ್ನು ದೇಹಕ್ಕೆ ಸರಿಯಾಗಿ ಒದಗಿಸುವ ಕೆಲಸವನ್ನು ಮಾಡುವುದರಿಂದ ಕ್ಯಾಲ್ಶಿಯಂ ದೇಹಕ್ಕೆ ಸೇರುವ ಪ್ರಕ್ರಿಯೆ ನಿಂತುಹೋಗುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಸಿಗದೇ, ಮೂಳೆಗಳು ದುರ್ಬಲವಾಗುತ್ತದೆ.

Summer sun is the best source of vitamin D.
Summer sun is the best source of vitamin D.

ಸೂರ್ಯನ ಬೆಳಕು ಅತ್ಯಂತ ಮುಖ್ಯ

ವಿಟಮಿನ್‌ ಡಿ ಪಡೆಯಲು ಸೂರ್ಯನ ಬೆಳಕು ಅತ್ಯಂತ ಮುಖ್ಯವಾದ ಮೂಲ. ಇದಲ್ಲದೆ, ಅನೇಕ ಆಹಾರಗಳ ಮೂಲಕವೂ ವಿಟಮಿನ್‌ ಡಿ ಲಭ್ಯವಾದರೂ ಇದು ಅತ್ಯಂತ ಕಡಿಮೆ ಪ್ರಮಾಣದ್ದು. ಸೂರ್ಯನ ಬಿಸಿಲಿನಲ್ಲಿ 15ರಿಂದ 0 ನಿಮಿಷಗಳು ಇರುವುದರಿಂದಲೂ ದಿನಕ್ಕೆ ಅಗತ್ಯವಾದ ವಿಟಮಿನ್‌ ಡಿ ಲಭ್ಯವಾಗುತ್ತದೆ. ಹೀಗಾಗಿ. ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು ಅತ್ಯಂತ ಮುಖ್ಯವಾಗುತ್ತದೆ. ಇವೆಲ್ಲಕ್ಕಿಂತಲೂ, ಸೂರ್ಯನ ಬಿಸಿಲಿಗೆ ಬೆಳಗ್ಗೆಯೇ ದೇಹವನ್ನು ಒಡ್ಡುವುದರಿಂದ ಮೈಮನಸ್ಸು ಚುರುಕಾಗಿ ಸಂತಸ ಇಮ್ಮಡಿಸುತ್ತದೆ. ಕೆಲಸಕ್ಕೆ ಚುರುಕುತನ ಬರುತ್ತದೆ. ಸಂತೋಷದ ಹಾರ್ಮೋನು ಸೆರಟೋನಿನ್‌ ಬಿಡುಗಡೆಯಾಗಿ ಖನ್ನತೆಯ ಲಕ್ಷಣಗಳನ್ನು ದೂರ ಸರಿಸುತ್ತದೆ. ಮಾನಸಿಕವಾಗಿ ಉಲ್ಲಾಸವನ್ನೂ ತರುತ್ತದೆ. ಮನೆಯ ಒಳಗೇ ಸೂರ್ಯನ ಬೆಳಕಿನಿಂದ ದೂರ ಇರುವ ಮಂದಿಗೆ ಉದಾಸೀನತೆ, ಬೇಸರ ಇತ್ಯಾದಿಗಳೂ ಆವರಿಸಿಕೊಳ್ಳುತ್ತದೆ. ಸೂರ್ಯನ ಬೆಳಕು ಚುರುಕುತನದೊಂದಿಗೆ ಮಾನಸಿಕ ಪ್ರಫುಲ್ಲತೆಯನು ನೀಡಿ, ಉದ್ವೇಗದಂತಹ ಸಮಸ್ಯೆಯನ್ನೂ ದೂರವಿಟ್ಟು ಶಾಂತಿ ಸಮಾಧಾನ ನೆಮ್ಮದಿಯನ್ನು ತರುತ್ತದೆ.
ಹಾಗಾಗಿ ವಿಟಮಿನ್‌ ಡಿ ಕೇವಲ ಮೂಳೆ ಸಂಬಂಧೀ ಮಾತ್ರವಲ್ಲ, ನಮ್ಮ ಇಡಿಯ ಆರೋಗ್ಯದ ಕೀಲಿಕೈ. ಮಿದುಳನು ಚುರುಕಾಗಿಡುವ ಪೋಷಕಾಂಶವೂ ಹೌದು. ವಿಟಮಿನ್‌ ಡಿ ಕೊರತೆಯಿದ್ದರೆ, ಈ ಪೋಷಕಾಂಶವನ್ನು ವೈದ್ಯರ ಮಾರ್ಗದರ್ಶನದ ಮೇರೆಗೆ ತೆಗೆದುಕೊಳ್ಳುವುದು ಒಳ್ಳೆಯದು. ಖಿನ್ನತೆಯ ಸಮಸ್ಯೆ ಇರುವ ಮಂದಿಯೂ ವಿಟಮಿನ್‌ ಡಿ ಸಪ್ಲಿಮೆಂಟ್‌ ಸೇವನೆಯಿಂದ ಈ ಸಮಸ್ಯೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದಾರೆ.

ಇದನ್ನೂ ಓದಿ: Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

ಆರೋಗ್ಯಕರ ಜೀವನಶೈಲಿ

ಖಿನ್ನತೆ ಎಂಬುದು ಇತ್ತೀಚೆಗಿನ ಧಾವಂತದ ಜೀವನಕ್ರಮದಲ್ಲಿ ಸಾಮಾನ್ಯ. ಆರೋಗ್ಯಕರ ಜೀವನಶೈಲಿ ಅತ್ಯಂತ ಮುಖ್ಯವಾದುದು. ನಮ್ಮ ಕೆಲಸಗಳು ನಮ್ಮನ್ನು ಹೊರಜಗತ್ತಿನಿಂದ, ಚಟುವಟಿಕೆಗಳಿಂದ ದೂರ ಮಾಡುತ್ತಿರುವುದರಿಂದ ಮಾನಸಿಕವಾಗಿ ದುರ್ಬಲರಾಗುತ್ತಿದ್ದೇವೆ. ಒತ್ತಡಗಳು ಮನಸ್ಸನ್ನು ಹೈರಾಣಾಗಿಸುತ್ತವೆ. ನಿತ್ಯವೂ ನಡಿಗೆ, ವ್ಯಾಯಾಮ, ಯೋಗ, ಧ್ಯಾನದಂತಹ ಚಟುವಟಿಕೆಗಳನ್ನೂ ರೂಢಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಸರಿಯಾಗಿಟ್ಟುಕೊಳ್ಳಬಹುದು. ಆರೋಗ್ಯ ಚೆನ್ನಾಗಿದ್ದರೆ ಸಂತೋಷ ಇಮ್ಮಡಿಸುತ್ತದೆ.

Continue Reading

ಆರೋಗ್ಯ

Sadhguru Jaggi Vasudev: ನಮ್ಮ ಹೃದಯವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಹೇಗೆ? ಸದ್ಗುರು ಸಲಹೆ ಇಲ್ಲಿದೆ ಕೇಳಿ

ಆರೋಗ್ಯಕರ ಅಪಧಮನಿಗಳ ರಹಸ್ಯವು ಸಾಧಾರಣ ಮತ್ತು ಶಕ್ತಿಯುತವಾದ ಸೂಪರ್‌ಫುಡ್‌ನಲ್ಲಿ ಇದೆ. ಕರಿ ಮೆಣಸು ಕೂಡ ಇದರಲ್ಲೊಂದು. ಇದು ರಕ್ತಪರಿಚಲನೆಯನ್ನು ಸುಧಾರಿಸುವ, ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ಸಹಾಯ ಮಾಡುವ ಮತ್ತು ಆರೋಗ್ಯವನ್ನು ಹೆಚ್ಚು ವರ್ಧಿಸುವ ಆಹಾರವಾಗಿದೆ ಎಂದು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ (Sadhguru  Jaggi Vasudev) ಹೇಳಿದ್ದಾರೆ.

VISTARANEWS.COM


on

By

Sadhguru  Jaggi Vasudev
Koo

ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು (heart attack case) ಹೆಚ್ಚಾಗುತ್ತಿದೆ. ಹೀಗಾಗಿ ಇಂದು ಹೃದಯದ ಕಾಳಜಿ ಕೊಂಚ ಹೆಚ್ಚು ವಹಿಸುವುದು ಬಹುಮುಖ್ಯವಾಗಿದೆ. ಇದಕ್ಕಾಗಿ ಸುಪ್ರಸಿದ್ಧ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಸೂಪರ್ ಫುಡ್ ಗಳ ಬಗ್ಗೆ ಹೇಳಿದ್ದಾರೆ. ಇದರ ಮಾಹಿತಿ ಇಲ್ಲಿದೆ.

ಆರೋಗ್ಯಕರ ಹೃದಯಕ್ಕಾಗಿ (healthy heart) ಅದರ ದಾರಿಯನ್ನು ಅನಿರ್ಬಂಧಿಸುವುದು ಕೂಡ ಅಷ್ಟೇ ಅಗತ್ಯ. ಆರೋಗ್ಯಕರ ಅಪಧಮನಿಗಳು ಮತ್ತು ಬಲವಾದ ಹೃದಯರಕ್ತನಾಳದ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ ವಿಧಾನವನ್ನು ಸದ್ಗುರು ಹೇಳಿದ್ದಾರೆ.

ಆರೋಗ್ಯಕರ ಅಪಧಮನಿಗಳ ರಹಸ್ಯವು ಸಾಧಾರಣ ಮತ್ತು ಶಕ್ತಿಯುತವಾದ ಸೂಪರ್‌ಫುಡ್‌ನಲ್ಲಿ ಇದೆ. ಇದು ರಕ್ತಪರಿಚಲನೆಯನ್ನು ಸುಧಾರಿಸುವ, ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ಸಹಾಯ ಮಾಡುವ ಮತ್ತು ಆರೋಗ್ಯವನ್ನು ಹೆಚ್ಚು ವರ್ಧಿಸುವ ಆಹಾರವಾಗಿದೆ. ನಾನು ಹೇಳುವ ಸಲಹೆಯನ್ನು ಪಾಲಿಸಿ ಮತ್ತು ಆರೋಗ್ಯವನ್ನು ಸುಧಾರಿಸಲು ಸಿದ್ಧರಾಗಿ ಎಂದು ಸದ್ಗುರು ತಿಳಿಸಿದ್ದಾರೆ.ಸದ್ಗುರು ತಮ್ಮ ಜೀವನವನ್ನು ಆರೋಗ್ಯಕರವಾಗಿ ರೂಪಿಸಿಕೊಂಡಿದ್ದಾರೆ. ಜೀವನದಲ್ಲಿ ಒಳ್ಳೆಯದನ್ನು ಸಾಧಿಸಲು ಎಲ್ಲರಿಗೂ ಸಹಾಯ ಮಾಡುವ ಅವರು, ತಮ್ಮ ಭಕ್ತರಿಗೆ ಆಗಾಗ್ಗೆ ಸಲಹೆಗಳನ್ನು ನೀಡುತ್ತಿರುತ್ತಾರೆ.


ಇತ್ತೀಚೆಗೆ ಅವರು ಅಪಧಮನಿಗಳನ್ನು ಉತ್ತಮಗೊಳಿಸಲು ಸಲಹೆಗಳನ್ನು ಹಂಚಿಕೊಂಡಿದ್ದು, ಇದು ಖಂಡಿತಾ ಪ್ರಯೋಜನಕಾರಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Curry Leaves: ಇದರ ಮಹತ್ವ ತಿಳಿದರೆ ನೀವು ಇನ್ನೆಂದೂ ಕರಿ ಬೇವಿನ ಎಲೆಯನ್ನು ಪಕ್ಕಕ್ಕೆ ಎತ್ತಿಡುವುದಿಲ್ಲ!

ಕಪ್ಪು ಬಂಗಾರ ಎಂದೇ ಕರೆಯಲ್ಪಡುವ ಕರಿ ಮೆಣಸನ್ನು ದೀರ್ಘಕಾಲದವರೆಗೆ ಸಂಗ್ರಹಿಸಿ ಇಡಬಹುದು. ಆಹಾರದಲ್ಲಿ ಕರಿಮೆಣಸು ಅಥವಾ ಕಾಳುಮೆಣಸನ್ನು ಬಳಸುವುದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

ಅಪಧಮನಿಗಳನ್ನು ಸ್ವಚ್ಛವಾಗಿಡುವಲ್ಲಿ ಮಹತ್ತರವಾದ ಪಾತ್ರ ವಹಿಸುವ ಕರಿಮೆಣಸು ಬಹಳ ದೊಡ್ಡ ಪ್ರಮಾಣದಲ್ಲಿ ಬಳಸಿದರೆ ಅದು ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಅದನ್ನು ಸಣ್ಣ ಪ್ರಮಾಣದಲ್ಲಿ ನಿತ್ಯವೂ ಆಹಾರದಲ್ಲಿ ಸೇವಿಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಸದ್ಗುರು.

Continue Reading

ಆರೋಗ್ಯ

Dengue Fever: ಡೆಂಗ್ಯೂ ಜ್ವರ ಕಡಿಮೆ ಆದ ಮೇಲೆ ಎಚ್ಚರ ತಪ್ಪಿದರೆ ಪ್ರಾಣಾಪಾಯ!

Dengue Fever: ರಾಜ್ಯದಲ್ಲಿ ಬಿಟ್ಟೂ ಬಿಡದಂತೆ ಕಾಡುತ್ತಿರುವ ಡೆಂಗ್ಯೂ ತನ್ನ ರೌದ್ರತೆಯನ್ನು ಹೆಚ್ಚಿಸುತ್ತಲೇ ಹೋಗುತ್ತಿದೆ. ಡೆಂಗ್ಯೂ ಬಂದು, ವಾಸಿಯಾದ ಬಳಿಕವೇ ಆ ವ್ಯಕ್ತಿಯನ್ನು ಇನ್ನಷ್ಟು ನಲುಗಿಸುತ್ತಿದೆ. ಡೆಂಗ್ಯು ವಾಸಿಯಾದ ಬಳಿಕ ದೇಹದಲ್ಲಿ ಬಿಳಿರಕ್ತ ಕಣ (ಪ್ಲೇಟ್‌ಲೆಟ್ಸ್‌)ಗಳನ್ನು ಕಾಪಾಡಿಕೊಳ್ಳುವುದು ಹಾಗೂ ಡೆಂಗ್ಯೂ ಚಿಕಿತ್ಸೆಯ ಬಗ್ಗೆ ಆರೋಗ್ಯ ಪರಿಣತರು ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

VISTARANEWS.COM


on

Dengue Fever
Koo

-ಡಾ ವಿಕಾಸ್ ನಾಯಕ್, ಸಲಹೆಗಾರ, ನ್ಯೂರೋಸರ್ಜರಿ, ಫೋರ್ಟಿಸ್ ಆಸ್ಪತ್ರೆ, ರಾಜಾಜಿ ನಗರ, ಬೆಂಗಳೂರು
ಎಲ್ಲರಿಗೂ ತಿಳಿದಿರುವಂತೆ ಡೆಂಗ್ಯೂ ಸೊಳ್ಳೆಯಿಂದ ಹರಡುವ ಸೋಂಕು. ಜ್ವರ, ತಲೆನೋವು ಮತ್ತು ದೇಹದ ನೋವುಗಳಂತಹ ಸೌಮ್ಯ ಲಕ್ಷಣಗಳಿಂದ ಉಂಟಾಗುವ ಡೆಂಗ್ಯೂ (Dengue Fever) ಪ್ರಾರಂಭದಲ್ಲಿ ಸಾಮಾನ್ಯ ಜ್ವರದಂತೆಯೇ ಭಾಸವಾಗುತ್ತದೆ. ಸಾಮಾನ್ಯವಾಗಿ ಜ್ವರ ಪ್ರಾರಂಭವಾದ 3-7 ದಿನಗಳ ನಂತರ ಕಾಣಿಸಿಕೊಳ್ಳುತ್ತವೆ ಜ್ವರವೆಂದು ನಿರ್ಲಕ್ಷಿಸಿ ಕೇವಲ ಜ್ವರ, ಮೈ-ಕೈ ನೋವಿನ ಮಾತ್ರೆ ತೆಗೆದುಕೊಂಡು ಸುಮ್ಮನಾದರೆ ಸಾಲದು. ನಾಲ್ಕೈದು ದಿನವಾದರೂ ದೇಹದಲ್ಲಿ ನಿಶ್ಶಕ್ತಿ, ನಿರಂತರ ವಾಂತಿ, ತೀವ್ರವಾದ ಹೊಟ್ಟೆ ನೋವು, ಉಸಿರಾಟದ ತೊಂದರೆ, ಒಸಡುಗಳಲ್ಲಿ ರಕ್ತಸ್ರಾವ, ಮೂಗಿನ ರಕ್ತಸ್ರಾವ ಅಥವಾ ವಾಂತಿ ಅಥವಾ ಮಲದಲ್ಲಿನ ರಕ್ತದ ರೋಗಲಕ್ಷಣಗಳಿದ್ದರೆ ತಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆಯಿರಿ.

man have a fever

ಪ್ಲೇಟ್‌ಲೆಟ್ಸ್‌ಗಳ ಬಗ್ಗೆ ಅರಿವಿರಲಿ

ಸಾಕಷ್ಟು ಜನರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಬಿಳಿ ರಕ್ತಕಣಗಳ ಬಗ್ಗೆ ಅಷ್ಟಾಗಿ ಅರಿವಿರುವುದಿಲ್ಲ. ಆದರೆ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಬಿಳಿರಕ್ತ ಕಣಗಳ ಪಾತ್ರ ದೊಡ್ಡದು. ಇದರ ಪ್ರಮಾಣ ಕುಸಿದರೆ ಜೀವವೇ ಹೋಗಬಹುದು. ಡೆಂಗ್ಯೂ ಬಂದ ವಾಸಿಯಾದ ಬಳಿಕ ಬಿಳಿರಕ್ತಕಣಗಳು, ಸಣ್ಣ ರಕ್ತ ಕಣ್ಣಗಳು ಕುಸಿತದ ಜೊತೆಗೆ ರಕ್ತವು ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೂಡಲೇ ದೇಹದಲ್ಲಿ ಪ್ಲೇಟ್‌ಲೇಟ್ಸ್‌ಗಳನ್ನು ಹೆಚ್ಚಿಸುವ ಚಿಕಿತ್ಸೆ ಪಡೆಯುವುದು ಅತಿ ಅವಶ್ಯಕ.

ಆಂತರಿಕ ರಕ್ತಸ್ರಾವವೂ ಆಗಬಹುದು

ಕೇವಲ ಪ್ಲೇಟ್‌ಲೇಟ್ಸ್‌ಗಳು ಕಡಿಮೆಯಾಗುವುದಷ್ಟೇ ಅಲ್ಲದೆ, ದೇಹದ ಒಳಗಡೆ ರಕ್ತಸ್ರಾವವಾಗುವ ಸಾಧ್ಯತೆಯೂ ಹೆಚ್ಚು. ಹೊಟ್ಟೆ, ಕರುಳು, ಯಕೃತ್‌, ಮೆದುಳು ಸೇರಿದಂತ ವಿವಿಧ ಅಂಗಗಳಲ್ಲಿ ಈ ಆಂತರಿಕ ರಕ್ತಸ್ತ್ರಾವವಾಗಬಹುದು. ಆಂತರಿಕ ರಕ್ತಸ್ರಾವದ ಲಕ್ಷಣಗಳು ಪ್ರಾರಂಭದಲ್ಲಿ ಸೂಕ್ಷ್ಮವಾಗಿದ್ದರೂ, ನಂತರದಲ್ಲಿ ವೇಗವಾಗಿ ಪ್ರಗತಿ ಹೊಂದಬಹುದು. ನಿರಂತರ ವಾಂತಿ, ಕಪ್ಪು ಮಲ, ಮೂತ್ರದಲ್ಲಿ ರಕ್ತ, ತೀವ್ರವಾದ ಹೊಟ್ಟೆ ನೋವು ಇದು ಆಂತರಿಕ ರಕ್ತಸ್ತ್ರಾವದ ಲಕ್ಷಣಗಳು.

doctor and patient

ಚಿಕಿತ್ಸೆ ಏನು?

ಡೆಂಗ್ಯುಗೆ ಇಂಥದ್ದೇ ನಿಖರ ಚಿಕಿತ್ಸೆಗಳಿಲ್ಲ. ಹೆಚ್ಚು ಜ್ವರವಿದ್ದರೆ, ಅದರ ನಿಯಂತ್ರಣಕ್ಕೆ ವೈದ್ಯರು ಔಷಧಿ ನೀಡಲಿದ್ದಾರೆ. ಒಂದು ವೇಳೆ ಪ್ಲೇಟ್‌ಲೆಟ್ಸ್‌ಗಳ ಕುಸಿತ ಕಂಡು ಬಂದರೆ ಕೂಡಲೇ ಅವರಿಗೆ ಆಸ್ಪತ್ರೆಯಲ್ಲಿ ತುರ್ತು ಮೇಲ್ವಿಚಾರಣೆಯ ಅಗತ್ಯವಿರುತ್ತದೆ. ಪ್ಲೇಟ್‌ಲೇಟ್‌ಗಳ ಸಂಖ್ಯೆ ಕುಸಿಯುತ್ತಲೇ ಇದ್ದರೆ, ವೈದ್ಯರು ಪ್ಲೇಟ್‌ಲೇಟ್‌ಗಳನ್ನು ದೇಹಕ್ಕೆ ಡ್ರಿಪ್ಸ್‌ ಮೂಲಕ ಹಾಕಲಾಗುತ್ತದೆ.

ಇದನ್ನೂ ಓದಿ: Nonstick Pans: ನಾನ್‌ಸ್ಟಿಕ್‌ ಪಾತ್ರೆಗಳ ತಪ್ಪು ಬಳಕೆಯಿಂದಲೂ ಜ್ವರ ಬಾಧಿಸುತ್ತದೆ!

ನಿಯಂತ್ರಣ ಹೇಗೆ?

ಮೊದಲಿಗೆ ನಿಮ್ಮ ಸುತ್ತಲಿನ ಪ್ರದೇಶವನ್ನು ಸೊಳ್ಳೆ ಮುಕ್ತಗೊಳಿಸಿಕೊಳ್ಳಿ. ಎಲ್ಲಿಯೂ ನೀರು ನಿಲ್ಲದಂತೆ ನಿಗಾ ವಹಿಸಿ. ದೇಹವನ್ನು ಸಂಪೂರ್ಣ ಮುಚ್ಚುವ ಉಡುಪು ಧರಿಸಿ, ಬೆಳಗ್ಗೆ ಹಾಗೂ ಸಂಜೆ ಸಂದರ್ಭದಲ್ಲಿ ಪಾರ್ಕ್‌ಗಳಲ್ಲಿ ವಾಕ್‌ಗೆ ಹೋಗುವುದನ್ನು ನಿಯಂತ್ರಿಸಿ, ಬೇರೆ ಸಂದರ್ಭದಲ್ಲಿ ವಾಕ್‌ಗೆ ತೆರಳುವುದು ಉತ್ತಮ.

Continue Reading
Advertisement
Liquor Price Karnataka
ಪ್ರಮುಖ ಸುದ್ದಿ8 mins ago

Liquor Price Karnataka: ನೊರೆ ನೊರೆ ಬಿಯರ್‌ ಮದ್ಯಪ್ರಿಯರ ಜೇಬಿಗೆ ಇನ್ನಷ್ಟು ಹೊರೆ

Parliament Session
ರಾಜಕೀಯ11 mins ago

Parliament Session: ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜು; Live ಇಲ್ಲಿ ವೀಕ್ಷಿಸಿ

Kerala Landslide
ದೇಶ18 mins ago

Kerala Landslide: ಕೇರಳದಲ್ಲಿ ಭೀಕರ ಭೂ ಕುಸಿತ; ಸಾವಿನ ಸಂಖ್ಯೆ 20ಕ್ಕೆ ಏರಿಕೆ, ಮತ್ತಷ್ಟು ಮಂದಿ ಸಿಲುಕಿರುವ ಭೀತಿ

ದೇಶ22 mins ago

Jio Games: ಜಿಯೋಗೇಮ್ಸ್‌ನಲ್ಲಿ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್ಸ್‌ ಲಭ್ಯ

Rebel star Prabhas starrer The Rajasaab short glimpse released
ದೇಶ34 mins ago

The RajaSaab Movie: ‘ದಿ ರಾಜಾಸಾಬ್’; ಎಲ್ಲರ ಗಮನ ಸೆಳೆಯುತ್ತಿದೆ ರೆಬೆಲ್‌ ಸ್ಟಾರ್‌ ಪ್ರಭಾಸ್‌ ಡ್ಯಾಶಿಂಗ್‌ ಲುಕ್‌!

IPL 2025
ಕ್ರೀಡೆ46 mins ago

IPL 2025: ಆರ್​ಸಿಬಿ ಇನ್​ಸ್ಟಾಗ್ರಾಮ್​ ಖಾತೆ ಅನ್​ಫಾಲೋ ಮಾಡಿದ ಮ್ಯಾಕ್ಸ್​ವೆಲ್; ಕಾರಣವೇನು?

ಪ್ರಮುಖ ಸುದ್ದಿ48 mins ago

Uttara Kannada Landslide: ನೀರಿನಡಿ ಇನ್ನೂ 9 ದೇಹಗಳಿವೆ ಎಂದ ಸ್ವಾಮೀಜಿ! ಬರಲಿದೆ ಕೇರಳದಿಂದ ಬಾರ್ಜ್‌ ಮೌಂಟೆಡ್‌ ಹಿಟಾಚಿ

Mahila Samman Savings Certificate
ಮನಿ-ಗೈಡ್51 mins ago

Mahila Samman Savings Certificate: ಮಹಿಳಾ ಸಮ್ಮಾನ್‌‌ನಲ್ಲಿ ಹೂಡಿಕೆಯಿಂದ ಏನು ಲಾಭ?

Kerala Landslide
ದೇಶ59 mins ago

Kerala Landslide: ಕೇರಳದಲ್ಲಿ ವರುಣನ ರೌದ್ರ ನರ್ತನ ಶುರು; ಭಾರೀ ಭೂಕುಸಿತಕ್ಕೆ ಐವರು ಬಲಿ

Yogi Adithyanath
ದೇಶ1 hour ago

Yogi Adityanath: ಲವ್‌ ಜಿಹಾದ್‌ ಮಟ್ಟ ಹಾಕಲು ಯೋಗಿ ಆದಿತ್ಯನಾಥ್‌ ಪಣ; ಅಪರಾಧ ಸಾಬೀತಾದರೆ ಜೀವಾವಧಿ ಶಿಕ್ಷೆಯ ಪ್ರಸ್ತಾವ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ17 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ20 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ3 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ3 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ3 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌