Road Accident : ತುಮಕೂರಿನಲ್ಲಿ ಕಾರು-ಬೈಕ್‌ ಅಪಘಾತ; ಮಗಳು, ಮೊಮ್ಮಗಳ ಕಣ್ಣೇದುರೇ ಪ್ರಾಣಬಿಟ್ಟ ತಂದೆ - Vistara News

ತುಮಕೂರು

Road Accident : ತುಮಕೂರಿನಲ್ಲಿ ಕಾರು-ಬೈಕ್‌ ಅಪಘಾತ; ಮಗಳು, ಮೊಮ್ಮಗಳ ಕಣ್ಣೇದುರೇ ಪ್ರಾಣಬಿಟ್ಟ ತಂದೆ

Road Accident : ತುಮಕೂರಿನಲ್ಲಿ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವೃದ್ಧರೊಬ್ಬರು ದಾರುಣವಾಗಿ ಮೃತಪಟ್ಟರೆ, ಇತ್ತ ಚಲಿಸುತ್ತಿದ್ದ ಬಸ್‌ನಿಂದ ಬಿದ್ದಿದ್ದ ವಿದ್ಯಾರ್ಥಿ ಅಸುನೀಗಿದ್ದಾನೆ. ಬಳ್ಳಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಗುಂಡಿಗಿಳಿದರೆ, ಚಾಮರಾಜನಗರದಲ್ಲಿ ಗೂಡ್ಸ್‌ ಆಟೋ ಪಲ್ಟಿಯಾಗಿದೆ.

VISTARANEWS.COM


on

Road Accident
ಚಾಮರಾಜನಗರದಲ್ಲಿ ಗೂಡ್ಸ್‌ ಆಟೋ ಪಲ್ಟಿ, ತುಮಕೂರಿನಲ್ಲಿ ಮೃತಪಟ್ಟ ಬೈಕ್‌ ಸವಾರ ನಾಗೇಶ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುಮಕೂರು: ಇಂಡಿಕಾ ಕಾರು ಹಾಗೂ ಬೈಕ್ ನಡುವೆ ಅಪಘಾತ (Road Accident) ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟರೆ, ಒಂದು ವರ್ಷದ ಮಗು ಹಾಗೂ ತಾಯಿಗೆ ಗಂಭೀರ ಗಾಯಗೊಂಡಿದ್ದಾರೆ. ನಾಗೇಶ್ (60) ಮೃತ ದುರ್ದೈವಿ. ತುಮಕೂರು ಹೊರವಲಯದ ಮಲ್ಲಸಂದ್ರ ಬಳಿಯ ಕೆಎಂಎಫ್ ಡೈರಿ ಸಮೀಪ ಅಪಘಾತ ನಡೆದಿದೆ.

ಚನ್ನರಾಯನಪಟ್ಟಣ ತಾಲೂಕಿನ ಅಣತಿಕೋಡಿಹಳ್ಳಿ ನಿವಾಸಿಯಾಗಿದ್ದ ನಾಗೇಶ್, ಮಂಗಳವಾರ ಬೆಳಗ್ಗೆ ಮಲ್ಲಸಂದ್ರದಲ್ಲಿದ್ದ ಮಗಳ ಮನೆಗೆ ಬಂದಿದ್ದರು. ಕಾಗ್ಗೇರೆ ಬಳಿಯಿರುವ ದೇವಸ್ಥಾನದ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಹಿಂತಿರುವಾಗ ಅಪಘಾತ ನಡೆದಿದೆ.

ಇಂಡಿಕಾ ಕಾರು ಡಿಕ್ಕಿ ಹೊಡೆದು ಬೈಕ್‌ನಿಂದ ಕೆಳಗೆ ಬಿದ್ದ ನಾಗೇಶ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ನಾಗೇಶ್‌ ಅವರ ಮಗಳು ಸ್ವಾತಿ ಹಾಗೂ ಒಂದು ವರ್ಷದ ಮಗುವಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುವಿಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇತ್ತ ಅಪಘಾತದ ಬಳಿಕ ಕಾರು ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ: Viral Video: ಕಾರಿನಲ್ಲೇ ಸೆಕ್ಸ್‌.. ಡಿವೈಡರ್‌ಗೆ ಡಿಕ್ಕಿ; ನಗ್ನ ಸ್ಥಿತಿಯಲ್ಲಿದ್ದ ಇಬ್ಬರು ಯುವಕರು, ಯುವತಿಯನ್ನು ಕಂಡು ಜನ ಶಾಕ್‌-ವಿಡಿಯೋ ಇದೆ

Road Accident
Road Accident

ಬಳ್ಳಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗಿಳಿದ ಬಸ್‌

ಚಾಲಕನ ನಿಯಂತ್ರಣ ತಪ್ಪಿದ ಬಸ್‌ವೊಂದು ರಸ್ತೆ ಬದಿಯ ಗುಂಡಿಗಿಳಿದಿದೆ. ಕೂದಲೆಳೆ ಅಂತರದಲ್ಲಿ ವಿದ್ಯಾರ್ಥಿಗಳು ಪಾರಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಅಂಕಮನಾಳ ಗ್ರಾಮ ಬಳಿ ಅಪಘಾತ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಜನ ಪ್ರಯಾಣಿಕರು ಸಂಡೂರಿನಿಂದ ಅಂಕಮನಾಳ ಗ್ರಾಮಕ್ಕೆ ತೆರಳುತ್ತಿದ್ದರು. ಬಸ್ಸಿಗೆ ಅದಿರು ತುಂಬಿದ ಲಾರಿ ಎದುರಿಗೆ ಬಂದಿದ್ದು, ಲಾರಿ ತಪ್ಪಿಸಲು ಹೋಗಿ‌ ಬಸ್‌ ಗುಂಡಿಗಳಿದಿದೆ. ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಗುಂಡಿಯಿಂದ ಹೊರ ಬಾರದೆ ಬಸ್‌ ಲಾಕ್‌ ಆಗಿತ್ತು.

Road Accident
Road Accident

ಚಾಮರಾಜನಗರದಲ್ಲಿ ಗೂಡ್ಸ್‌ ಆಟೋ ಪಲ್ಟಿ

ಚಾಮರಾಜನಗರದ ಹೊನ್ನಳ್ಳಿ ಗ್ರಾಮದ ಸಮೀಪ ಗೂಡ್ಸ್ ಆಟೋ ಪಲ್ಟಿಯಾಗಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಹಿಳೆಯರು ಕೂಲಿ ಕೆಲಸಕ್ಕೆಂದು ಅಮಚವಾಡಿ ಗ್ರಾಮದಿಂದ ನಿಜಲಿಂಗನಪುರಕ್ಕೆ ಗೂಡ್ಸ್ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ ಹೊಡೆದಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಗಾಯಾಳುಗಳಿಗೆ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Road Accident
Road Accident

ದಾವಣಗೆರೆಯಲ್ಲಿ ಬೈಕ್ ಹಾಗೂ ಕೆಎಸ್ಆರ್‌ಟಿಸ್‌ ನಡುವೆ ಅಪಘಾತ

ದಾವಣಗೆರೆ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಬಸ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬೈಕ್ ಸವಾರ ರಸ್ತೆ ದಾಟುವಾಗ ಏಕಾಏಕಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಕೆಎಸ್ಆರ್ಟಿಸಿ ಬಸ್ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ಬಸ್‌ನಿಂದ ಬಿದ್ದಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಸಾವು

ನಿನ್ನೆ ಸೋಮವಾರ ಚಲಿಸುತ್ತಿದ್ದ ಬಸ್‌ನಿಂದ ಬಿದ್ದ ವಿದ್ಯಾರ್ಥಿ ಹಿಂಬದಿ ಚಕ್ರಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ. ಇದೀಗ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾನೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನಿಹಟ್ಟಿ ಪಿ ಎ ಗ್ರಾಮದಲ್ಲಿ ಘಟನೆ ನಡೆದಿದೆ. ಸರ್ಕಾರಿ ಬಸ್ ಮೂಲಕ ಶಾಲೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿತ್ತು.

ಸಿಂದಗಿ ಪಟ್ಟಣದ ಎಚ್‌ಜಿ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಸಂದೀಪ ಶಿವಪ್ಪ ಗಿಡ್ಡನಗೋಳ ಮೃತ ದುರ್ದೈವಿ. ಗಂಭೀರ ಗಾಯಗೊಂಡಿದ್ದ ಸಂದೀಪ್‌ನನ್ನು ಸಿಂದಗಿ ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಮೃತಪಟ್ಟಿದ್ದಾನೆ. ಇತ್ತ ಈ ಘಟನೆ ಖಂಡಿಸಿ ಬನ್ನಿಹಟ್ಟಿ ಪಿ ಎ ಹಾಗೂ ಸಿಂದಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು. ವಿದ್ಯಾರ್ಥಿ ಸಾವಿನಿಂದ ಬನ್ನಿಹಟ್ಟಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Karnataka Rain : ಕೆಲವೆಡೆ ಬಿಡುವು ನೀಡಿದ್ದ ಮಳೆಯು ಮತ್ತೆ ಅಬ್ಬರಿಸುತ್ತಿದೆ. ಚಿಕ್ಕಮಗಳೂರಿನಲ್ಲಿ ಮಳೆಗೆ ಅವಾಂತರವೇ ಸೃಷ್ಟಿಯಾಗಿದೆ. ಚಿಕ್ಕೋಡಿಯಲ್ಲಿ ಹೆಸ್ಕಾಂ ಸಿಬ್ಬಂದಿ ನೀರಿಗೆ ಜಿಗಿದು ವಿದ್ಯುತ್‌ ಸರಿಪಡಿಸಿದ್ದಾರೆ. ಹಾಸನದಲ್ಲಿ ಶಾಲೆ ಜಲಾವೃತಗೊಂಡಿದೆ.

VISTARANEWS.COM


on

By

Karnataka Rain
Koo

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲೂ ಮಳೆಯ ( Karnataka Rain) ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ದೋಬಿ ಹಳ್ಳ ಪ್ರವಾಹಕ್ಕೆ ತಗ್ಗು ಪ್ರದೇಶದ ಮನೆಗಳು ಮುಳುಗಡೆಯಾಗಿವೆ. ಮನೆಯಿಂದ ಹೊರಬರಲು ಆಗದೆ ಸಣ್ಣ ಬೋಟ್ ಬಳಸಿ ನೆರೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ. ಶಾಲೆ, ಮದರಸ, ಸಂತೆ ಮಾರುಕಟ್ಟೆ, ಮನೆಗಳು ಜಲಾವೃತಗೊಂಡಿದೆ. ಸದ್ಯ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಬೋಟ್ ಬಳಕೆ ಮಾಡುವಂತಾಗಿದೆ.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹೇರೂರು ಸಮೀಪದ ದೇವಗೋಡು ಗ್ರಾಮದಲ್ಲಿ ಸುಮಾರು ಎರಡು ಎಕರೆ ವಿಸ್ತೀರ್ಣದ ಕೆರೆಯು ಕೋಡಿ ಹೊಡೆದಿದೆ. ಪರಿಣಾಮ ಭತ್ತ ನಾಟಿ ಮಾಡಿದ್ದ ಜಮೀನು ಜಲಾವೃತಗೊಂಡಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದಲ್ಲಿ ಭೂ ಕುಸಿದಿದೆ. ಮಲ್ಲೇಶ್ವರ ಗುಡ್ಡದಲ್ಲಿ ಭಾರಿ ಪ್ರಮಾಣದ ಧರೆ ಕುಸಿದು, ರಸ್ತೆಯ ಅರ್ಧ ಭಾಗಕ್ಕೆ ಗುಡ್ಡದ ಮಣ್ಣು ಬಂದಿದೆ. 2019ರಲ್ಲಿ ಕುಸಿತ ಕಂಡಿದ್ದ ಸ್ಥಳದ ಸಮೀಪವೇ ಧರೆ ಕುಸಿದಿದೆ. ಬಾಳೆಹೊಳೆ, ಚನ್ನಹಡ್ಲು, ಬಾಳೆಹೊನ್ನೂರು ರಸ್ತೆಯಲ್ಲಿ ಘಟನೆ ನಡೆದಿದೆ.

ತುಂಗಾ ನದಿಯ ಅಬ್ಬರ ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಜಲಾವೃತವಾಗಿದ್ದು, ಅಂಗಡಿ ಮಳಿಗಗಳು, ಭಾರತಿ ತೀರ್ಥ ರಸ್ತೆಯೂ ಮುಳುಗಡೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿಯತ್ತ ಜನರ ಓಡಾಟಕ್ಕೆ ನಿಷೇಧ ಹೇರಲಾಗಿದೆ. ತಾತ್ಕಾಲಿಕವಾಗಿ ಸುಮಾರು 20ಕ್ಕೂ ಹೆಚ್ಚು ಅಂಗಡಿ ಮಳಿಗೆಗಳು ಕ್ಲೋಸ್ ಆಗಿವೆ. ಇನ್ನೂ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವೆ ಮುಳುಗಡೆಯಾಗಿದ್ದು, ಬಾಳೆಹೊನ್ನೂರು-ಕಳಸ ಮಾರ್ಗ ಸಂಪೂರ್ಣ ಬಂದ್ ಆಗಿದೆ.

ಚಿಕ್ಕಮಗಳೂರಿನಲ್ಲಿ ಭಾರಿ ಮಳೆಗೆ ಅವಾಂತರವೇ ಸೃಷ್ಟಿಯಾಗಿದೆ. ರಾ.ಹೆ.173ರ ಚಾರ್ಮಾಡಿ ಘಾಟಿಯಲ್ಲಿ ಬೃಹತ್ ಮರವೊಂದು ರಸ್ತೆಗುರುಳಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಚಿಕ್ಕಮಗಳೂರು-ಮಂಗಳೂರು ಮಾರ್ಗ ಸಂಪೂರ್ಣ ಬಂದ್ ಆಗಿದ್ದರಿಂದ ಕೊಟ್ಟಿಗೆಹಾರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

ಕಳೆದ ಮೂರು ದಿನದಿಂದ ಸಂಪೂರ್ಣ ಬಿಡುವು ನೀಡಿದ್ದ ವರುಣ ಸೋಮವಾರ ರಾತ್ರಿಯಿಡೀ ಭಾರೀ ಮಳೆಗೆ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ಶೃಂಗೇರಿಯ ನೆಮ್ಮಾರು ಬಳಿ ರಸ್ತೆ ಮೇಲೆ ಹರಿಯುತ್ತಿರೋ ನೀರಿನಿಂದಾಗಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಜಲಾವೃತವಾಗಿದೆ. ಟಿಪ್ಪರ್ ಲಾರಿ ಚಾಲಕ ಸೇತುವೆ ಮೇಲೆ ಸಂಚರಿಸಲು ಹೋಗಿ ಭಯಗೊಂಡು ವಾಪಾಸ್‌ ಆಗಿದ್ದಾರೆ. ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.

karnataka Rain
karnataka Rain

ಇದನ್ನೂ ಓದಿ: Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ನೀರಿಗೆ ಜಿಗಿದು ವಿದ್ಯುತ್‌ ಸರಿಪಡಿಸಿದ ಹೆಸ್ಕಾಂ ಸಿಬ್ಬಂದಿ

ಮಹಾರಾಷ್ಟ್ರದಲ್ಲಿ ಮಳೆ ಅಬ್ಬರಕ್ಕೆ ಚಿಕ್ಕೋಡಿ ಉಪವಿಭಾಗದ ನದಿಗಳು ಸಮುದ್ರದಂತಾಗಿದೆ. ಪ್ರವಾಹ ಸಮಯದಲ್ಲಿ ಹೆಸ್ಕಾಂ ಸಿಬ್ಬಂದಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗುಳ ಗ್ರಾಮದಲ್ಲಿ ನೀರಿನಲ್ಲಿ ಧುಮುಕಿ ವಿದ್ಯುತ್ ಸರಿಪಡಿಸಿದ್ದಾರೆ. ಆನಂದ ಹೆರವಾಡಿ ಹೆಸ್ಕಾಂ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಬಳಿ ಇರುವ ಸೇತುವೆ ಜಲಾವೃತಗೊಂಡಿದೆ. ಅಥಣಿ ಗೋಕಾಕ್ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಕೃಷ್ಣಾ ನದಿ ದಂಡೆಯ 20 ಗ್ರಾಮಗಳಿಗೆ ನದಿ ನೀರು ಕಂಟಕ ಎದುರಾಗಿದೆ.

ಹಾಸನದಲ್ಲಿ ಶಾಲೆ ಜಲಾವೃತ

ಹಾಸನದಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಅರಕಲಗೂಡು ತಾಲೂಕಿನ ಯಗಟಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯು ಸಂಪೂರ್ಣ ಜಲಾವೃತಗೊಂಡಿತ್ತು. ಭಾರಿ ಮಳೆಗೆ ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದಲ್ಲಿ ಘಟನೆ ನಡೆದಿದೆ. ಮಠಸಾಗದ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತ ಗೊಂಡಿರುವುದರಿಂದ ಜನರು ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಮಠಸಾಗರ-ಕೃಷ್ಣಾಪುರ-ಸಕಲೇಶಪುರ ರಸ್ತೆ ಮುಳುಗಡೆಯಿಂದಾಗಿ ರಸ್ತೆ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು, ಗ್ರಾಮಸ್ಥರ ಪರದಾಡಿದರು.

ಬೇಲೂರು ತಾಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ಭಾರಿ ಮಳೆಗೆ ರಸ್ತೆಯು ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುಳ್ಳಕ್ಕಿ-ಮೈಲಹಳ್ಳಿ-ಆಲೂರು-ಬೇಲೂರು-ಕೋನೇರ್ಲು ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಟ್ ಆಗಿದೆ. ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿದೆ.

ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಬೆಟ್ಟಿಗೇರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರೆ ಜರಿದು ಕಾಂಕ್ರೀಟ್ ರಸ್ತೆ ಕುಸಿದು ಬೀಳುವ ಹಂತದಲ್ಲಿದೆ. ಶ್ರೀರಾಮ ಮತ್ತು ಶ್ರೀದೇವಿ ದೇವಸ್ಥಾನದ ರಸ್ತೆಯ ಸಮೀಪ ಬರೆ ಕುಸಿದು ಮಣ್ಣೆಲ್ಲ ಕೆಳಭಾಗದ ಗದ್ದೆಗೆ ಬಂದು ನಿಂತಿದೆ. ನಾಟಿಗೆ ತಯಾರಾಗಿದ್ದ ಭತ್ತದ ಗದ್ದೆಗೆ ಮಣ್ಣು, ನೀರು ನುಗ್ಗಿ ಅಪಾರ ಹಾನಿಯಾಗಿದೆ. 30 ಮನೆಗಳಿರುವ ಗ್ರಾಮಕ್ಕೆ ತೆರಳುವ ರಸ್ತೆ ಇದೀಗ ಅಪಾಯದಲ್ಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ತುಮಕೂರು

Murder Case : ಇನ್‌ಸ್ಟಾಗ್ರಾಮ್‌ ಗೆಳೆಯನಿಗಾಗಿ ಗಂಡನನ್ನೇ ಕೊಲೆ ಮಾಡಿಸಿದ ಐನಾತಿ ಹೆಂಡತಿ

Murder Case : ತುಮಕೂರಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ವಾಪಸ್‌ ಸಿಕ್ಕ ಮಾಜಿ ಪ್ರಿಯತಮನ ಮೋಹಕ್ಕೆ ಸಿಲುಕಿದ ಮಹಿಳೆಯೊಬ್ಬಳು, ಪತಿಯನ್ನೇ ಕೊಲೆ ಮಾಡಿಸಿದ್ದಾಳೆ. ಚಿತ್ರದುರ್ಗದಲ್ಲಿ ಹಳೆ ದ್ವೇಷಕ್ಕೆ ವ್ಯಕ್ತಿಯೊಬ್ಬ ಬಲಿಯಾದರೆ, ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ.

VISTARANEWS.COM


on

By

murder case
ಕೊಲೆಯಾದ ಪ್ರಕಾಶ್‌ ಹಾಗೂ ಆರೋಪಿ ಹರ್ಷಿತಾ
Koo

ತುಮಕೂರು: ಪರಪುರುಷನ ಮೋಹಕ್ಕೆ ಸಿಲುಕಿದಾಕೆ ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಪತಿಯನ್ನೇ ಕೊಂದು (Murder case) ಮುಗಿಸಿದ್ದಾಳೆ. ಇನ್‌ಸ್ಟಾಗ್ರಾಮ್‌ ಪ್ರಿಯತಮನಿಗಾಗಿ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಕೊಲೆ ಮಾಡಿಸಿದ್ದಾಳೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೆಕಾವು ಗ್ರಾಮದ ಬಳಿ ಘಟನೆ ನಡೆದಿದೆ.

ಪ್ರಕಾಶ್ (30) ಮೃತ ದುರ್ದೈವಿ. ಹರ್ಷಿತಾ (28) ಪತಿಯನ್ನು ಕೊಲೆ ಮಾಡಿಸಿದವಳು. ಕಲಬುರಗಿ ಜಿಲ್ಲೆಯ ಚಿಂಚುಲಿ ಮೂಲದ ಪ್ರಕಾಶ್‌ಗೆ ಇದೇ ಇನ್‌ಸ್ಟಾಗ್ರಾಮ್‌ನಿಂದ ಮೂರು ವರ್ಷದ ಹಿಂದೆ ಈ ಹರ್ಷಿತಾಳ ಪರಿಚಯವಾಗಿತ್ತು. ಬಳಿಕ ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು.

ಮದುವೆಯಾದ್ಮೇಲೆ ಪ್ರಕಾಶ್‌ ಪತ್ನಿಯ ತವರಿನಲ್ಲೇ ವಾಸವಿದ್ದ. ಈ ದಂಪತಿಗೆ ಒಂದೂವರೆ ವರ್ಷದ ಮಗುವೂ ಇತ್ತು. ಆದರೆ ಇತ್ತೀಚೆಗೆ ಹರ್ಷಿತಾಳಿಗೆ ಇನ್‌ಸ್ಟಾಗ್ರಾಂನಲ್ಲಿ ಮಾಜಿ ಪ್ರಿಯತಮ ಗುಂಡ ಎಂಬಾತ ಸಂಪರ್ಕಕ್ಕೆ ಸಿಕ್ಕಿದ್ದ. ಗುಂಡನ ಮೋಹಕ್ಕೆ ಸಿಲುಕಿದ ಹರ್ಷಿತಾ, ಪ್ರಕಾಶ್‌ನನ್ನು ಕಡೆಗಣಿಸಿದ್ದಳು. ಹರ್ಷಿತಾ ಮತ್ತು ಗುಂಡ ಇಬ್ಬರಿಗೂ ಮರುಪ್ರೇಮಾಂಕುರವಾಗಿತ್ತು.

ಮಾತ್ರವಲ್ಲ, ಮಗು- ಗಂಡನನ್ನು ಬಿಟ್ಟು ಕಳೆದ 2 ತಿಂಗಳ ಹಿಂದೆ ಪ್ರಿಯತಮ ಗುಂಡನ ಜತೆಗೆ ಮನೆ ಬಿಟ್ಟು ಪರಾರಿಯಾಗಿದ್ದಳು. ಈ ವೇಳೆ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಬಳಿಕ ಹರ್ಷಿತಾ ಮನೆಗೆ ವಾಪಾಸ್ಸಾಗಿದ್ದಳಿ. ಆದರೆ ಒಳಗೊಳಗೆ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಳು. ಪತಿಯ ಕೊಲೆಗಾಗಿ ಸಹೋದರ ಸೋಮಶೇಖರ್ ಹಾಗೂ ಪ್ರಿಯತಮ ಗುಂಡನಿಗೆ ಸುಪಾರಿ ನೀಡಿದ್ದಳು.

ಪ್ರಕಾಶ್‌ನನ್ನು ಏನೇನೋ ಹೇಳಿ ಪುಸಲಾಯಿಸಿ ಸೋಮಶೇಖರ್‌ ಕರೆಸಿಕೊಂಡಿದ್ದ. ಗುಂಡ ಮತ್ತು ಆತನ ಸ್ನೇಹಿತ ರಂಗಸ್ವಾಮಯ್ಯ, ಪ್ರಕಾಶ್ ಬರುತ್ತಿದ್ದಂತೆ ಆತನ ಮೇಲೆ ಹಲ್ಲೆ ನಡೆಸಿದ್ದರು. ಡ್ರ್ಯಾಗರ್‌ನಿಂದ ಎದೆಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದರು. ಬಳಿಕ ಅಪಘಾತದ ರೀತಿಯಲ್ಲಿ ಬಿಂಬಿಸಲು ಹೊರಟಿದ್ದರು. ಆದರೆ ಎದೆಭಾಗಕ್ಕೆ ಚುಚ್ಚಿದ ಗಾಯದ ಗುರುತು ಪತ್ತೆ ಮಾಡಿದ ಪೊಲೀಸರು ಇದು ಅಪಘಾತವಲ್ಲ ಬದಲಿಗೆ ಕೊಲೆ ಎಂದು ಖಚಿತ ಪಡಿಸಿಕೊಂಡಿದ್ದರು.

ವಿಚಾರಣೆ ವೇಳೆ ಪತ್ನಿ ಹರ್ಷಿತಾಳ ಮಾಸ್ಟ್‌ರ್‌ ಪ್ಲ್ಯಾನ್‌ಗೆ ಪೊಲೀಸರೇ ದಂಗಾಗಿದ್ದಾರೆ. ಸದ್ಯ ಕೊರಟಗೆರೆ ಪೊಲೀಸರಿಂದ ಹರ್ಷಿತಾ, ಸೋಮಶೇಖರ್, ರಂಗಸ್ವಾಮಯ್ಯನನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿ ಗುಂಡನಿಗಾಗಿ ಬಲೆ ಬೀಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Brutal Murder: ಎದೆ, ಗುಪ್ತಾಂಗಕ್ಕೆ ಚಾಕು ಇರಿದು ಹತ್ಯೆ; ಬೀದಿಯಲ್ಲಿ ಬಿದ್ದಿದ್ದ ಯುವತಿಯ ಶವವನ್ನುಕಚ್ಚಿ ಎಳೆದಾಡಿದ ಶ್ವಾನಗಳು; ಕರ್ನಾಟಕ ಮೂಲದ ದಾವೂದ್‌ ಎಸ್ಕೇಪ್‌

ಚಿತ್ರದುರ್ಗದಲ್ಲಿ ಹಳೇ ದ್ವೇಷಕ್ಕೆ ಬಿತ್ತು ಹೆಣ

ಹಳೆ ದ್ವೇಷ, ವೈಷಮ್ಯಕ್ಕೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದಿಂಡಾವರ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಕೊಲೆಯಾಗಿದೆ. ಜಯ್ಯಣ್ಣ (60) ಕೊಲೆಯಾದವರು. ಗಂಗಾಧರ್ (27) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಗ್ರಾಮದಲ್ಲಿ ಹಬ್ಬ ನಡೆಯುವ ವೇಳೆ ಹಳೆ ದ್ವೇಷಕ್ಕೆ ಜಗಳ ನಡೆದಿದೆ. ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಬೆಂಗಳೂರಲ್ಲಿ ಅಪರಿಚಿತ ಶವ ಪತ್ತೆ

ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸದ್ಯ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಇದು ಆತ್ಮಹತ್ಯೆಯೋ ಇಲ್ಲ‌ ಕೊಲೆಯೊ ಎಂಬುದರ ಬಗ್ಗೆ ಅನುಮಾನ ಮಾಡಿದ್ದು, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : 8 ಜಿಲ್ಲೆಗಳಿಗೆ ವ್ಯಾಪಕ ಮಳೆ ಎಚ್ಚರಿಕೆ, ಬಿರುಗಾಳಿ ಸಾಥ್‌

Karnataka Weather Forecast : ರಾಜ್ಯಾದ್ಯಂತ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. 8 ಜಿಲ್ಲೆಗಳಿಗೆ ಆರೆಂಜ್‌ ಹಾಗೂ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು (Karnataka Weather Forecast) ಸಾಮಾನ್ಯವಾಗಿತ್ತು. ಕರಾವಳಿ ಬಹುತೇಕ ಕಡೆಗಳಲ್ಲಿ ಹಾಗು ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆ (Rain News) ಮುಂದುವರಿದಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಯಲ್ಲಿ ಚದುರಿದಂತೆ ವ್ಯಾಪಕವಾಗಿ ಹರಡಿದ್ದು, ಹಗುರದಿಂದ ಮಧ್ಯಮ ಮಳೆಯಾಗಲಿದೆ. ಜತೆಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ (Heavy Rain Alert) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather forecast) ನೀಡಿದೆ.

ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಹಗುರದಿಂದ ಮಳೆಯಾಗಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ಧಾರವಾಡ ಮತ್ತು ಹಾವೇರಿ, ವಿಜಯಪುರ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬಾಗಲಕೋಟೆಯಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

ಆರೆಂಜ್‌ ಅಲರ್ಟ್‌

ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇತ್ತ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಹಾಸನ ಜಿಲ್ಲೆಗಳಲ್ಲಿ ಗಾಳಿ ವೇಗವು 50 ಕಿ.ಮೀ ವೇಗದಲ್ಲಿ ಬೀಸಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

ಮಳೆಗಾಲದಲ್ಲಿ ಸೊಪ್ಪಿನ ಅಡುಗೆ ಮಾಡುವ ಮುನ್ನ ಈ ಎಚ್ಚರಿಕೆಗಳನ್ನು ವಹಿಸಿ

ಮಳೆಗಾಲ (Monsoon) ಜೋರಾಗಿದೆ. ಹಾಗಾಗಿ ವೈರಸ್‌, ಬ್ಯಾಕ್ಟೀರಿಯಾಗಳ ಸದ್ದೂ ಜೋರಾಗಿದೆ. ಎಲ್ಲೆಲ್ಲೂ ವೈರಲ್‌ ಜ್ವರಗಳು, ಇನ್‌ಫೆಕ್ಷನ್‌ ಸಮಸ್ಯೆಗಳು, ಮಳೆಗಾಲದಲ್ಲಿ ಕಾಡುವ ಶೀತ, ನೆಗಡಿ, ಕೆಮ್ಮು, ಕಫಗಳೂ ಹೆಚ್ಚಾಗಿವೆ. ಮಳೆಗಾಲದ ಸಂಭ್ರಮದ ಜೊತೆ ಈ ಎಲ್ಲ ಸಮಸ್ಯೆಗಳೂ ನಮ್ಮನ್ನು ಒಮ್ಮೆಯಾದರೂ ಕಾಡದೆ ಹೋಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಕೆಲವು ಆಹಾರಗಳನ್ನು ನಾವು ಕಡಿಮೆ ಮಾಡಬಹುದು. ಅವುಗಳಲ್ಲಿ ಮುಖ್ಯವಾದುದು ಹಸಿರು ಸೊಪ್ಪು. ಸೊಪ್ಪಿನ ಅಡುಗೆ ಮಾಡುವ ಮುನ್ನ ಮಳೆಗಾಲದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹಾಗಂತ ಮಳೆಗಾಲದಲ್ಲಿ ಇವನ್ನು ತಿನ್ನಲೇಬಾರದು ಎಂದಲ್ಲ. ಎಚ್ಚರಿಕೆ ಖಂಡಿತ ಬೇಕು. ಮಳೆಗಾಲದಲ್ಲಿ ಸೊಪ್ಪಿನ ಮೇಲೆ ಸಾಕಷ್ಟು ಬ್ಯಾಕ್ಟೀರಿಯಾ, ವೈರಸ್‌ ದಾಳಿಯಾಗಿರುತ್ತದೆ. ಹುಳು ಹುಪ್ಪಟೆಗಳೂ ಸಾಮಾನ್ಯ. ಆದ್ದರಿಂದ ಇವುಗಳು ನಮ್ಮ ದೇಹಕ್ಕೆ ಪ್ರವೇಶಿಸುವ ಮಾರ್ಗ ಸುಲಭವಾಗಿ ಬಿಡುತ್ತದೆ. ನಾವು ಅವುಗಳನ್ನು ಸರಿಯಾಗಿ ತೊಳೆದು ಬಳಸದಿದ್ದರೆ ಹೊಟ್ಟೆ ಕೆಡುವ ಸಮಸ್ಯೆ, ಬೇದಿ, ವಾಂತಿ ಇತ್ಯಾದಿಗಳೂ ಬರಬಹುದು. ಹಾಗಾಗಿ, ಮಳೆಗಾಲದಲ್ಲಿ ಸೊಪ್ಪು ಸದೆಗಳನ್ನು ಅಡುಗೆ ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಿ ಎನ್ನುತ್ತಾರೆ ತಜ್ಞರು. ಬನ್ನಿ, ಸೊಪ್ಪು ಸೇವಿಸುವ ಮುನ್ನ ಯಾವ ಎಚ್ಚರಿಕೆಗಳು (Monsoon Healthy Cooking Tips) ಮುಖ್ಯ ಎಂಬುದನ್ನು ನೋಡೋಣ. ಮಳೆಗಾಲದಲ್ಲಿ, ಸಹಜವಾಗಿ ಕೆಲವು ಸೊಪ್ಪುಗಳು ತರಕಾರಿ ಮಾರುಕಟ್ಟೆಯಲ್ಲಿ ಕಾಣೆಯಾಗುತ್ತದೆ. ಬಹಳ ಸೂಕ್ಷ್ಮವಾಗಿರುವ ಪಾಲಕ್‌ನಂತಹ ಸೊಪ್ಪುಗಳು ಮಳೆಗಾಲದಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕಿ ಹರಿದು ಛಿದ್ರವಾಗುವುದರಿಂದ ಮಾರುಕಟ್ಟೆಗೆ ಬರುವುದೇ ಇಲ್ಲ. ಮೆಂತ್ಯ ಸೊಪ್ಪೂ ಕೂಡಾ ಅಷ್ಟೇ, ಮಳೆಗಾಲದಲ್ಲಿ ಮಾರುಕಟ್ಟೆಯಲ್ಲಿರುವುದಿಲ್ಲ. ಕೆಲವು ಸೊಪ್ಪುಗಳು ಮಳೆಗಾಲಕ್ಕೆ ಸರಿಯಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಆದರೆ, ಮಳೆಗಾಲವಾದ್ದರಿಂದ ಸೊಪ್ಪು ಹರದಿರುವುದು, ಬೇರುಗಳೆಲ್ಲ ಕೆಸರಾಗಿರುವುದು, ಹುಳು ಹುಪ್ಪಟೆಗಳು ಎಲೆಯನ್ನು ಕಚ್ಚಿ ಹರಿದಿರುವುದು, ಎಲೆಯ ಅಡುಭಾಗದಲ್ಲಿ ಹುಳಗಳು ಹರಿದುಹೋಗಿರುವ ಗುರುತು ಇವೆಲ್ಲವೂ ಸಾಮಾನ್ಯವಾಗಿರುತ್ತದೆ. ಹಾಗಾಗಿಯೇ ಸೊಪ್ಪಿನ ಅಡುಗೆ ಮಾಡುವಾಗ ಎಚ್ಚರಿಕೆ ಬಹಳ ಅಗತ್ಯ.

Healthy Cooking Tips

ಸೊಪ್ಪಿನ ಅಡುಗೆ ಮಳೆಗಾಲದಲ್ಲಿ ಮಾಡುವ ಮೊದಲು ಸೊಪ್ಪನ್ನು ಮೊದಲು ಬಿಡಿಸಿ. ನೀರಲ್ಲಿ ಹಾಕಿಟ್ಟು ತೊಳೆಯಿರಿ. ಹುಳ ಹುಪ್ಪಟೆಗಳಿರುವ ಎಲೆಗಳನ್ನು ಬಳಸದಿರಿ. ಸರಿಯಾಗಿರುವ, ಆರೋಗ್ಯವಾಗಿ ಕಾಣುವ ಎಲೆಗಳನ್ನು ಆರಿಸಿಕೊಂಡು ಪ್ರತ್ಯೇಕವಾಗಿಟ್ಟು, ಉಳಿದವನ್ನು ಎಸೆಯಿರಿ. ಪ್ರತಿಯೊಂದು ಎಲೆಯನ್ನೂ ಸೂಕ್ಷ್ಮವಾಗಿ ಗಮನಿಸಿ. ಸರಿಯಾಗಿರುವ ಎಲೆಯನ್ನು ಮಾತ್ರ ಚೆನ್ನಾಗಿ ಎರಡೆರಡು ಬಾರಿ ತೊಳೆದುಕೊಂಡು ಅದರ ಕಾಂಡಗಳನ್ನು ಕತ್ತರಿಸಿ ಎಸೆಯಿರಿ.

ಹರಿಯುವ ನೀರಿಗೆ ಹಿಡಿದು ತೊಳೆಯಿರಿ. ಮಾರುಕಟ್ಟೆಯಿಂದ ತಂದ ಕೃತಕ ತೊಳೆಯುವ ಲಿಕ್ವಿಡ್‌ಗಳಲ್ಲಿ ಹಾಕಿಟ್ಟು ತೊಳೆಯುವುದರಿಂದ ಎಲೆ ಮತ್ತಷ್ಟು ಹಾಳಾಗಬಹುದು. ಅದಕ್ಕಾಗಿ, ನಳ್ಳಿಯ ಅಡಿಯಲ್ಲಿ ಹಿಡಿದು ಹರಿಯುವ ನೀರಿನಲ್ಲಿ ತೊಳೆಯಿರಿ.

Hand Washing Leafy Greens

ತೊಳೆದ ಎಲೆಗಳನ್ನು ಆರಲು ಬಿಡುವುದು ಬಹಳ ಮುಖ್ಯ. ಒಣ ಟವೆಲ್‌ ಮೇಲೆ ತೊಳೆದ ಎಲೆಗಳನ್ನು ಹರವಿಟ್ಟು ಮೃದುವಾಗಿ ಒರೆಸಬಹುದು. ಅಥವಾ ಹಾಗೆಯೇ ಸ್ವಲ್ಪ ಹೊತ್ತು ಬಿಟ್ಟು ಹೆಚ್ಚಿನ ನೀರಿನಂಶ ಆರಲು ಬಿಡಬಹುದು.

ಎಲೆಗಳನ್ನು ತೊಳೆದುಕೊಂಡ ಮೇಳೆ ಒಂದೆರಡು ನಿಮಿಷಗಳ ಕಾಲ ಐಸ್‌ ನೀರಿನಲ್ಲಿ ಹಾಕಿಟ್ಟುಕೊಂಡು ನಂತರ ತೆಗೆಯಬಹುದು. ಹೀಗೆ ಮಾಡುವುದರಿಂದ ಎಲೆಯ ತಾಜಾತನ ಹಾಗೆಯೇ ಉಳಿದುಕೊಳ್ಳುತ್ತದೆ. ಹಸಿ ಎಲೆಗಳಿಂದ ಮಾಡುವ ಅಡುಗೆಯನ್ನು ಮಳೆಗಾಲದಲ್ಲಿ ಮಾಡಬೇಡಿ. ಬಾಣಲೆಯಲ್ಲಿ ಎಲೆಯನ್ನು ಬಾಡಿಸಿಕೊಂಡು, ಬಿಸಿ ಮಾಡುವ ಮೂಲಕ ಮಾಡುವ ಅಡುಗೆಯನ್ನೇ ಮಾಡಿ. ಮಳೆಗಾಲದಲ್ಲಿ ಹಸಿ ಸೊಪ್ಪು ತರಕಾರಿಗಳನ್ನು ಹಾಗೆಯೇ ಹಸಿಯಾಗಿ ಬಳಸಬೇಡಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Karnataka Rain: ಸೋಮವಾರ ಜೋರಾಗಿ ಸುರಿದ ಗಾಳಿ ಮಳೆಗೆ ಮನೆಗಳ ಚಾವಣಿ ಹಾರಿಹೋದರೆ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ವಿದ್ಯುತ್‌ ಸರಿಪಡಿಸಲು ಹೆಸ್ಕಾಂ ಸಿಬ್ಬಂದಿಗೆ ರಿವರ್‌ ರ‍್ಯಾಫ್ಟಿಂಗ್‌ ತಂಡ ಸಾಥ್‌ ಕೊಟ್ಟಿದ್ದಾರೆ.

VISTARANEWS.COM


on

By

karnataka Rain
Koo

ಕಾರವಾರ: ಕರಾವಳಿಯಲ್ಲಿ ವರುಣನ ಅಬ್ಬರ (Karnataka Rain) ಮತ್ತಷ್ಟು ಹೆಚ್ಚಿದೆ. ಭಾರೀ ಗಾಳಿಗೆ 20ಕ್ಕೂ ಅಧಿಕ ಮನೆಗಳ ಚಾವಣಿ ಹಾರಿಹೋಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಾರವಾಡ ಸೀಬರ್ಡ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಸುಧಾ ಹರಿಕಾಂತ, ನಿರ್ಮಲಾ ದುರ್ಗೇಕರ್, ಶೋಭಾ ದುರ್ಗೇಕರ್ ಸೇರಿ 20ಕ್ಕೂ ಅಧಿಕ ನಿವಾಸಿಗಳ ಮನೆಗಳ ಚಾವಣಿಗೆ ಹಾನಿಯಾಗಿದೆ. ತಡರಾತ್ರಿ ಬೀಸಿದ ಭಾರೀ ಗಾಳಿಗೆ ತಗಡಿನ ಶೀಟ್‌ಗಳು ಹಾರಿಹೋಗಿದೆ. ಕೆಲವರ ಹೆಂಚಿನ ಮನೆಗಳಿಗೂ ಹಾನಿಯಾಗಿದೆ. ಕೆಲವರು ಹೆಂಚಿನ ತುಂಡು ತಲೆಗೆ ಬಿದ್ದು ಗಾಯಗೊಂಡಿದ್ದಾರೆ. ಚಾವಣಿ ಹಾರಿಹೋದ ಪರಿಣಾಮ ಮಳೆ ನೀರು ಬಿದ್ದು ಮನೆಯ ವಸ್ತುಗಳಿಗೂ ಹಾನಿಯಾಗಿದೆ.

ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಹಾಸನದ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಮತ್ತೆ ಭೂಕುಸಿತ ಉಂಟಾಗಿದೆ. ಶಿರಾಡಿಘಾಟ್ ರಸ್ತೆ 75 ರಲ್ಲಿ ಭೂಕುಸಿತದಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಕಾಂಕ್ರಿಟ್ ರಸ್ತೆ ಗುತ್ತಿಗೆ ಪಡೆದಿರುವ ಕಂಪನಿಯ ಸಿಬ್ಬಂದಿ ಮಣ್ಣು ತೆರವುಗೊಳಿಸುತ್ತಿದ್ದಾರೆ. ಗುತ್ತಿಗೆದಾರ ಹಾಗೂ ಸರ್ಕಾರದ ವಿರುದ್ಧ ಸವಾರರು ಕಿಡಿಕಾರಿದ್ದಾರೆ. ಮಣ್ಣು ತೆರವು ಮಾಡುತ್ತಿರುವುದು ವಿಳಂಬವಾಗುತ್ತಿದೆ, ಬೇಸಿಗೆ ಕಾಲದಲ್ಲಿ ಕೆಲಸ ಮಾಡುವುದು ಬಿಟ್ಟು ಮಳೆಗಾಲದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹೆಸ್ಕಾಂ ಸಿಬ್ಬಂದಿಗೆ ಸಾಥ್‌ ಕೊಟ್ಟ ರಿವರ್‌ ರ‍್ಯಾಫ್ಟಿಂಗ್‌ ತಂಡ

ಭಾರಿ ಮಳೆಗೆ ಹಲವಡೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಕರೆಂಟ್‌ ಇಲ್ಲದೇ ಜನರು ಕಂಗಲಾಗಿದ್ದಾರೆ. ಹೀಗಾಗಿ ವಿದ್ಯುತ್ ಸಂಪರ್ಕ ನೀಡಲು ಹೆಸ್ಕಾಂ ಸಿಬ್ಬಂದಿಗೆ ರಿವರ್ ರ‍್ಯಾಫ್ಟಿಂಗ್ ತಂಡ ನೆರವಾಗಿದೆ. ಉತ್ತರ ಕನ್ನಡದ ಜೋಯಿಡಾದ ಅಸು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾಂದೇವಾಡಿ ಗ್ರಾಮದಲ್ಲಿ ವಿದ್ಯುತ್ ತಂತಿ ಮೇಲೆ ಭಾರೀ ಗಾತ್ರದ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಬಜಾರಕುಣಂಗ್, ಕ್ಯಾಸಲ್‌ರಾಕ್, ಅಸು, ಅಕೇತಿ ಪಂಚಾಯತ್ ವ್ಯಾಪ್ತಿಯ ಹತ್ತಾರು ಗ್ರಾಮಗಳು ಕತ್ತಲೇಯಲ್ಲೇ ಕಾಲ ಕಳೆಯುತ್ತಿದ್ದವು.

ಚಾಂದೇವಾಡಿ ಗ್ರಾಮವು ಭಾರೀ ಮಳೆಯಿಂದ ಪಾಂಡ್ರಿ ನದಿ ಉಕ್ಕಿ ಸಂಪರ್ಕ ಕಡಿದುಕೊಂಡಿತ್ತು. ಇತ್ತ ವಿದ್ಯುತ್ ಸಂಪರ್ಕ ಸರಿಪಡಿಸಲು ಮುಂದಾಗಿದ್ದ ಹೆಸ್ಕಾಂ, ಕೆಪಿಟಿಸಿಎಲ್‌ (KPTCL) ಸಿಬ್ಬಂದಿ ನದಿ ಹರಿವು ಹೆಚ್ಚಿದ್ದರಿಂದ ಗ್ರಾಮಕ್ಕೆ ತೆರಳಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದರು. ಗ್ರಾಮಸ್ಥರು, ರಿವರ್ ರ‍್ಯಾಫ್ಟಿಂಗ್ ಸಹಾಯದಿಂದ ಚಾಂದೇವಾಡಿ ಗ್ರಾಮಕ್ಕೆ ತಲುಪಿದ್ದಾರೆ. 13 ಮಂದಿ ಹೆಸ್ಕಾಂ ಸಿಬ್ಬಂದಿ, 6 ಮಂದಿ ರ‍್ಯಾಫ್ಟಿಂಗ್ ತಂಡದ ಸದಸ್ಯರಿಂದ ಕಾರ್ಯಾಚರಣೆ ನಡೆಸಿ ಸುಮಾರು 600 ಮೀಟರ್ ಬೋಟ್‌ನಲ್ಲಿ ತೆರಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡಿದ್ದಾರೆ. ದಾಂಡೇಲಿ ವಿಭಾಗದ ಸೂಪಾ-ಅನಮೋಡ್ 110 ಕೆವಿ ವಿದ್ಯುತ್ ಮಾರ್ಗ ಸರಿಪಡಿದ್ದಾರೆ. ಹೆಸ್ಕಾಂ, ಕೆಪಿಟಿಸಿಎಲ್ ಸಿಬ್ಬಂದಿ ಕಾರ್ಯವೈಖರಿಗೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಇದನ್ನೂ ಓದಿ: Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಕೃಷ್ಣಾ ನದಿಯ ಆರ್ಭಟಕ್ಕೆ ಜನರು ತತ್ತರ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ನದಿ ತೀರದ ಪ್ರದೇಶಗಳಿಗೆ ಕೃಷ್ಣಾ ನದಿ ನೀರು ನುಗ್ಗಿದೆ. ಗ್ರಾಮದ ಬಸ್ ನಿಲ್ದಾಣ, ಬಸ್ ನಿಲ್ದಾಣ ಸಮೀಪದ 15 ಕ್ಕೂ ಹೆಚ್ಚು ಅಂಗಡಿಗಳು, ಪ್ರೌಢ ಶಾಲೆ ಆವರಣ ಜಲಾವೃತಗೊಂಡಿದೆ.

ಇನ್ನೂ ಹಾವೇರಿ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರಕ್ಕೆ ಕುಮದ್ವತಿ ನದಿ ಉಕ್ಕಿ ಹರಿಯುತ್ತಿದೆ. ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಬಾಂದಾರ ಕೊಚ್ಚಿ ಹೋಗಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕುಡಪಲಿ- ಬಡಸಂಗಾಪುರ ಗ್ರಾಮದ ಬಳಿ ಕಟ್ಟಿದ್ದ ಬಾಂದರ್ ಕಾಣದಂತಾಗಿದೆ. ಸ್ಥಳಕ್ಕೆ ಹಿರೇಕೆರೂರ ಶಾಸಕ ಯುಬಿ ಬಣಕಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈತರಿಗೆ ಹಾವುಗಳ ಕಾಟ

ನಿರಂತರ ಮಳೆಯಿಂದಾಗಿ ನದಿಗಳ ಮಟ್ಟ ಏರಿಕೆ ಹಿನ್ನೆಲೆ ನದಿ ಪಾತ್ರದ ರೈತರು ಮೋಟಾರ್, ಪಂಪ್‌ಸೆಟ್‌ ಹಾಗೂ ವಿದ್ಯುತ್ ಸರಬರಾಜಿನ ಡಬ್ಬಿಗಳನ್ನು ಸ್ಥಳಾಂತರಿಸುತ್ತಿದ್ದಾರೆ. ಈ ನಡುವೆ ರೈತರಿಗೆ ಹಾವುಗಳ ಕಾಟ ಪ್ರಾರಂಭವಾಗಿದೆ. ರೈತರೊಬ್ಬರು ವಿದ್ಯುತ್ ಡಬ್ಬಿ ಸ್ಥಳಾಂತರಿಸುವಾಗ ಹಾವು ಪ್ರತ್ಯಕ್ಷಗೊಂಡಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಬಳಿ ಘಟನೆ ನಡೆದಿದೆ. ಯಕ್ಸಂಬಾ ಗ್ರಾಮದ ಹೊರವಲಯದ ದೂದ್‌ಗಂಗಾ ನದಿಯ ದಂಡೆಯ ಮೇಲೆ ಅಲ್ಲಲ್ಲಿ ಹಾವುಗಳ ಪ್ರತ್ಯಕ್ಷಗೊಳ್ಳುತ್ತಿರುವುದರಿಂದ ರೈತರು ಭಯಭೀತರಾಗಿದ್ದಾರೆ.

ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ

ಬಾಗಲಕೋಟೆ ಜಮಖಂಡಿ ತಾಲ್ಲೂಕಿನ ಆಲಗೂರ ಗ್ರಾಮದಲ್ಲಿ ಕೃಷ್ಣಾ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ರೈತ ಸಿದ್ದಪ್ಪ ಅಡಹಳ್ಳಿ(60) ಶವವಾಗಿ ಪತ್ತೆಯಾಗಿದ್ದಾರೆ. ಕೊಚ್ಚಿ ಹೋದ ಸಿದ್ದಪ್ಪನಿಗಾಗಿ ಶೋಧ ಕಾರ್ಯ ನಡೆದಿತ್ತು. ಸೋಮವಾರ ಬಬಲೇಶ್ವರ ತಾಲೂಕಿನ ಶಿರಗೂರ ಗ್ರಾಮದ ಬಳಿ ಶವ ಪತ್ತೆಯಾಗಿದೆ. ಶವ ಇದ್ದ ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೇವು ಮಾಡಿಕೊಂಡು ಮರಳಿ‌ ಬರುವಾಗ ಆಲಗೂರ ಗ್ರಾಮದ ಸಿದ್ದಪ್ಪ ಅಡಹಳ್ಳಿ 3 ದಿನದ ಹಿಂದೆ ನದಿ ಪಾಲಾಗಿದ್ದರು.

ಕಾವೇರಿ ನದಿಗೆ ಹಾರಿದ ನೌಕರನ ಮೃತದೇಹ ಪತ್ತೆ

ಕೊಡಗಿನ ಕುಶಾಲನಗರದಲ್ಲಿ ಸರಕಾರಿ ನೌಕರನೊಬ್ಬ ಕಾವೇರಿ‌ ನದಿಗೆ ಹಾರಿದ್ದ. 5 ದಿನಗಳ ಬಳಿಕ‌ ಸೋಮವಾರ ಮೃತದೇಹ ಪತ್ತೆಯಾಗಿದೆ. ಎಸಿ ಕಚೇರಿ ಪ್ರಥಮ ದರ್ಜೆ ನೌಕರ ಅರುಣ್(52) ಮೃತ ದುರ್ದೈವಿ. ಕೊಪ್ಪ ಸೇತುವೆಯಿಂದ ಕಾವೇರಿ ನದಿಗೆ ಹಾರಿದ್ದ ಅರುಣ್, ಸೇತುವೆಯಿಂದ 5 ಕಿ.ಮೀ ದೂರದಲ್ಲಿ ಶವ ಪತ್ತೆಯಾಗಿದೆ. ಮೃತದೇಹಕ್ಕಾಗಿ ರ‍್ಯಾಫ್ಟಿಂಗ್ ತಂಡ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸ್ಥಳಕ್ಕೆ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ ಎಚ್ಚರಿಕೆ

ಕರಾವಳಿಯ ಉತ್ತರ ಕನ್ನಡ, ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಬೆಳಗಾಗಿ, ಕೊಡಗು ಸುತ್ತಮುತ್ತ ವಿಪರೀತ ಮಳೆಯಾಗಲಿದ್ದು, ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಕೂಡಿದ ಮಳೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Viral Video
Latest8 mins ago

Viral Video: ಹಾವನ್ನೇ ಮಣಿಸಿ ʼಸ್ನೇಹಿತʼನ ಜೀವ ಉಳಿಸಿದ ಹಲ್ಲಿ! ಅದ್ಭುತ ವಿಡಿಯೊ; ತಪ್ಪದೇ ನೋಡಿ!

Double Ismart
ಸಿನಿಮಾ12 mins ago

Double Ismart: ‘ಡಬಲ್ ಇಸ್ಮಾರ್ಟ್’ ಚಿತ್ರದ ಮೂರನೇ ಹಾಡು ರಿಲೀಸ್; ರೋಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ ರಾಮ್ ಪೋತಿನೇನಿ-ಕಾವ್ಯಾ ಥಾಪರ್

Olympics 2024
ಕ್ರೀಡೆ22 mins ago

Olympics 2024: ಕಂಚು ಗೆದ್ದ ಮನು-ಸರಬ್ಜೋತ್​ ಜೋಡಿಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಐಒಸಿ ಸದಸ್ಯೆ ನೀತಾ ಅಂಬಾನಿ ಅಭಿನಂದನೆ

Viral News
Latest24 mins ago

Street Girlfriends: 115 ರೂ.ಗೆ ಚುಂಬನ, 11 ರೂ.ಗೆ ಬಿಸಿ ಅಪ್ಪುಗೆಯ ಸುಖ; ಸ್ಟ್ರೀಟ್‌ ಗರ್ಲ್‌ಫ್ರೆಂಡ್ ಟ್ರೆಂಡ್‌!

Pavel Durov
ವಿದೇಶ29 mins ago

Pavel Durov: ಮದುವೆಯಾಗದೆ 100 ಮಕ್ಕಳಿಗೆ ತಂದೆಯಾದ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್! ಈತ ರಿಯಲ್‌ ಲೈಫ್‌ ‘ವಿಕ್ಕಿ ಡೋನರ್’

UGCET 2024
ಬೆಂಗಳೂರು31 mins ago

UGCET 2024 : ಯುಜಿಸಿಇಟಿ ಆಪ್ಶನ್ ದಾಖಲಿಸಲು ಮತ್ತಷ್ಟು ದಿನ ಅವಕಾಶ

Viral Video
Latest32 mins ago

Viral Video: ಪ್ರೇಮಿಯೊಂದಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳೆ; ಗ್ರಾಮಸ್ಥರು ನೀಡಿದರು ಅಮಾನುಷ ಶಿಕ್ಷೆ

Murder Attempt
ಕ್ರೈಂ42 mins ago

Murder Attempt: ದಟ್ಟ ಅರಣ್ಯದಲ್ಲಿ ಮಹಿಳೆಯನ್ನು ಸರಪಳಿಯಿಂದ ಕಟ್ಟಿ ಪರಾರಿಯಾದ ಮಾಜಿ ಪತಿ!

Viral Video
ವೈರಲ್ ನ್ಯೂಸ್48 mins ago

Viral Video: ಯೋಗಿ ಆದಿತ್ಯನಾಥ್‌ ಕಾಲಿಗೆ ಎರಗಿದ ರಾಜಾ ಭಯ್ಯಾ; ಉತ್ತರ ಪ್ರದೇಶ ರಾಜಕೀಯದಲ್ಲಿ ಹೊಸ ಅಧ್ಯಾಯ ಎಂದ ನೆಟ್ಟಿಗರು

Viral Video
Latest52 mins ago

Viral Video: ಸಿಬ್ಬಂದಿಗೆ ಗನ್ ತೋರಿಸಿ ಆಭರಣ ಅಂಗಡಿ ದರೋಡೆ ಮಾಡಿದ ಹೆಲ್ಮೆಟ್‌ಧಾರಿಗಳು; ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ22 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ23 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ1 day ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ3 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌