Independence Day 2024: ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಎದುರು ಸೋಲುವ ಭಯ; ಹಾಕಿ ತಂಡವನ್ನೇ ಒಲಿಂಪಿಕ್ಸ್‌ಗೆ ಕಳುಹಿಸಿರಲಿಲ್ಲ ಗ್ರೇಟ್‌ ಬ್ರಿಟನ್‌! - Vistara News

ಕ್ರೀಡೆ

Independence Day 2024: ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಎದುರು ಸೋಲುವ ಭಯ; ಹಾಕಿ ತಂಡವನ್ನೇ ಒಲಿಂಪಿಕ್ಸ್‌ಗೆ ಕಳುಹಿಸಿರಲಿಲ್ಲ ಗ್ರೇಟ್‌ ಬ್ರಿಟನ್‌!

Independence Day 2024: ಸ್ವಾತಂತ್ರ್ಯ ಪೂರ್ವದಲ್ಲಿ, ಹಾಲಿ ಹಾಕಿ ಚಾಂಪಿಯನ್‌ ಆಗಿದ್ದ ಗ್ರೇಟ್‌ ಬ್ರಿಟನ್‌ 1928, 1932 ಮತ್ತು 1936ರಲ್ಲಿ ಧ್ಯಾನ್‌ ಚಂದ್‌ ನೇತೃತ್ವದ ಭಾರತೀಯ ಹಾಕಿ ತಂಡದ ಎದುರು ಸೋತು ಅವಮಾನ ಅನುಭವಿಸುವ ಭಯದಿಂದ ತನ್ನ ತಂಡವನ್ನೇ ಒಲಿಂಪಿಕ್ಸ್‌ಗೆ ಕಳುಹಿಸಲಿಲ್ಲ! ತನ್ನ ವಸಾಹತು ದೇಶವಾದ ಭಾರತದ ಎದುರು ಸೋತರೆ ಪ್ರತಿಷ್ಠೆಗೆ ಧಕ್ಕೆ ಆಗುತ್ತದೆ ಎನ್ನುವುದು ಬ್ರಿಟಿಷರ ಲೆಕ್ಕಾಚಾರವಾಗಿತ್ತು. ಕೊನೆಗೆ 1948ರ ಒಲಿಂಪಿಕ್ಸ್‌ನಲ್ಲಿ ಸ್ವತಂತ್ರ ಭಾರತದ ಎದುರು ಬ್ರಿಟನ್‌ ತನ್ನ ತಂಡವನ್ನು ಕಳುಹಿಸಿತು. ಆದರೆ ಈ ಕೂಟದಲ್ಲಿ ಭಾರತೀಯ ತಂಡವು ಗ್ರೇಟ್‌ ಬ್ರಿಟನ್‌ ತಂಡವನ್ನು ಹೀನಾಯವಾಗಿ ಸೋಲಿಸಿ ಚಾಂಪಿಯನ್‌ ಆಯಿತು!

VISTARANEWS.COM


on

Independence Day 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್‌ನಲ್ಲಿ ಆರಂಭವಾಗಿರುವ ಒಲಿಂಪಿಕ್ಸ್‌ನಲ್ಲಿ (paris olympics 2024) ಸರಬ್ಜೋತ್‌ ಸಿಂಗ್‌ (Bronze Medalist Sarabjot Singh), ಮನು ಭಾಕರ್​ (Bronze Medalist Manu Bhaker) ಮತ್ತು ಸ್ವಪ್ನಿಲ್‌ ಈಗಾಗಲೇ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಹಾಗೆ ನೋಡಿದರೆ ಸ್ವಾತಂತ್ರ್ಯ ಪೂರ್ವವೇ ನಮ್ಮ ಕ್ರೀಡಾಪಟುಗಳು ಬಂಗಾರದ ಸಾಧನೆ ಮಾಡಿದ್ದರು. ಸ್ವತಂತ್ರ ಭಾರತದಲ್ಲಿ (Independence Day 2024) ನಮ್ಮ ಕ್ರೀಡಾಪಟುಗಳ ಸಾಧನೆಯೂ ಗಮನಾರ್ಹ. ಆದರೆ ತೀರಾ ಆಶಾದಾಯಕವೇನೂ ಅಲ್ಲ. ಭಾರತ ಒಲಿಂಪಿಕ್ ಇತಿಹಾಸದಲ್ಲಿ ಇದುವರೆಗೆ 10 ಚಿನ್ನದ ಪದಕಗಳು ಸೇರಿ ಒಟ್ಟು 35 ಪದಕಗಳನ್ನು ಗೆದ್ದಿದೆ. ಆ ಸುವರ್ಣ ಕ್ಷಣ ಯಾವುದು, ಹೇಗಿತ್ತು ಎನ್ನುವ ಕುರಿತು ಮಾಹಿತಿ ಇಲ್ಲಿದೆ. ವಿಶೇಷವೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ, ಹಾಲಿ ಹಾಕಿ ಚಾಂಪಿಯನ್‌ ಆಗಿದ್ದ ಗ್ರೇಟ್‌ ಬ್ರಿಟನ್‌ 1928, 1932 ಮತ್ತು 1936ರಲ್ಲಿ ಧ್ಯಾನ್‌ ಚಂದ್‌ ನೇತೃತ್ವದ ಭಾರತೀಯ ಹಾಕಿ ತಂಡದ ಎದುರು ಸೋತು ಅವಮಾನ ಅನುಭವಿಸುವ ಭಯದಿಂದ ತನ್ನ ತಂಡವನ್ನೇ ಒಲಿಂಪಿಕ್ಸ್‌ಗೆ ಕಳುಹಿಸಲಿಲ್ಲ! ತನ್ನ ವಸಾಹತು ದೇಶವಾದ ಭಾರತದ ಎದುರು ಸೋತರೆ ಪ್ರತಿಷ್ಠೆಗೆ ಧಕ್ಕೆ ಆಗುತ್ತದೆ ಎನ್ನುವುದು ಬ್ರಿಟಿಷರ ಲೆಕ್ಕಾಚಾರವಾಗಿತ್ತು. ಕೊನೆಗೆ 1948ರ ಒಲಿಂಪಿಕ್ಸ್‌ನಲ್ಲಿ ಸ್ವತಂತ್ರ ಭಾರತದ ಎದುರು ಬ್ರಿಟನ್‌ ತನ್ನ ತಂಡವನ್ನು ಕಳುಹಿಸಿತು. ಆದರೆ ಈ ಕೂಟದಲ್ಲಿ ಭಾರತೀಯ ತಂಡವು ಗ್ರೇಟ್‌ ಬ್ರಿಟನ್‌ ತಂಡವನ್ನು ಹೀನಾಯವಾಗಿ ಸೋಲಿಸಿ ಚಾಂಪಿಯನ್‌ ಆಯಿತು! 1928ರಲ್ಲಿ ಮೊದಲ ಬಾರಿ ಭಾರತೀಯ ಹಾಕಿ ತಂಡ ಮೊದಲ ಬಾರಿ ಒಲಿಂಪಿಕ್ಸ್‌ ಪ್ರವೇಶಿಸಿತ್ತು. ಗಮನಾರ್ಹ ಸಂಗತಿ ಎಂದರೆ ಈಗ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ‌‌ನಲ್ಲಿ ಭಾರತೀಯ ಹಾಕಿ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್‌‌ನನ್ನು ರೋಚಕವಾಗಿ ಸೋಲಿಸಿ ಸೆಮಿ ಫೈನಲ್‌‌ಗೆ ಲಗ್ಗೆ ಹಾಕಿದೆ.

ಜಾಗತಿಕ ಕ್ರೀಡಾಕೂಟವಾದ ಒಲಿಂಪಿಕ್ಸ್​ನಲ್ಲಿ ಭಾರತ ಇದುವರೆಗೂ ಹೆಚ್ಚಿನ ಪದಕ ಗೆದ್ದಿಲ್ಲ. ಆದರೆ ಪುರುಷರ ಹಾಕಿಯಲ್ಲಿ 8 ಬಾರಿ ಸ್ವರ್ಣ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆಯನ್ನು ಭಾರತ ತಂಡ ಇನ್ನೂ ಉಳಿಸಿಕೊಂಡಿದೆ.

Independence Day 2024
Independence Day 2024


1928ರಲ್ಲಿ ಮೊದಲ ಚಿನ್ನ

1928ರಲ್ಲಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಹಾಕಿ ಸ್ವರ್ಣ ಯುಗ ಆರಂಭವಾಯಿತು. ಮುಂದೆ ಮೂರು ದಶಕಗಳ ಕಾಲ ಇದು ಮುಂದುವರಿಯಿತು. ಹಾಲೆಂಡ್ ತಂಡವನ್ನು 6-0 ಅಂತರದಿಂದ ಸೋಲಿಸುವ ಮೂಲಕ ಭಾರತೀಯರು ಹಾಕಿಯಲ್ಲಿ ಚೊಚ್ಚಲ ಒಲಿಂಪಿಕ್ ಚಿನ್ನ ಗೆದ್ದರು. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಭಾರತ ಬಾರಿಸಿದ 29 ಗೋಲುಗಳಲ್ಲಿ 14 ಗೋಲುಗಳನ್ನು ಧ್ಯಾನ್ ಚಂದ್ ಅವರೇ ಹೊಡೆದಿದ್ದರು. ಈ ಒಲಿಂಪಿಕ್‌ಗೆ ಗ್ರೇಟ್ ಬ್ರಿಟನ್ ತನ್ನ ಹಾಕಿ ತಂಡವನ್ನು ಕಳುಹಿಸರಲಿಲ್ಲ. ಏಕೆಂದರೆ ಒಲಿಂಪಿಕ್ಸ್‌ಗೆ ಸ್ವಲ್ಪ ಮೊದಲು ಗ್ರೇಟ್ ಬ್ರಿಟನ್ ಭಾರತದ ಎದುರು 4-0 ಅಂತರದಿಂದ ಸೋಲಿಸಲ್ಪಟ್ಟಿತು. ಇದು ‘ವಸಾಹತುಶಾಹಿಗಳು’ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ‘ವಸಾಹತು’ವನ್ನು ಕಳೆದುಕೊಳ್ಳುವ ಭಯದಲ್ಲಿದೆ ಎಂಬ ಚರ್ಚೆ ಹುಟ್ಟು ಹಾಕಿತ್ತು. ಈ ಮುಜುಗರವೇ ಬೇಡ ಎಂದು ಗ್ರೇಟ್‌ ಬ್ರಿಟನ್‌ ಹಾಕಿ ತಂಡವನ್ನೇ ಕಳುಹಿಸಿರಲಿಲ್ಲ ಎನ್ನಲಾಗುತ್ತದೆ!

1932ರಲ್ಲಿ ಎರಡನೇ ಪದಕ

1928ರಲ್ಲಿ ಭಾರತ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಮಾತ್ರ ಲಾಸ್ ಏಂಜಲೀಸ್ ಕ್ರೀಡಾಕೂಟದಲ್ಲಿ ಹಾಕಿ ಗೌರವಕ್ಕಾಗಿ ಪ್ರವೇಶ ಪಡೆಯಿತು. ಇದರಲ್ಲಿ ಭಾರತೀಯರು ಜಪಾನ್ ಅನ್ನು 11- 1ರಿಂದ ಸೋಲಿಸಿ ಬಳಿಕ ಯುನೈಟೆಡ್ ಸ್ಟೇಟ್ ಅನ್ನು 24- 1ರಿಂದ ಪರಾಭವಗೊಳಿಸಿ ಮತ್ತೊಂದು ಚಿನ್ನದ ಪದಕವನ್ನು ಮಡಿಲಿಗೆ ಹಾಕಿಕೊಂಡಿತ್ತು.

Independence Day 2024
Independence Day 2024


1936ರಲ್ಲಿ ಗೋಲ್ಡನ್ ಹ್ಯಾಟ್ರಿಕ್

1928 ಮತ್ತು 1932ರಲ್ಲಿ ಹಾಕಿ ಜಗತ್ತನ್ನು ಭಾರತ ಸಮಗ್ರವಾಗಿ ಗೆದ್ದಿದ್ದರೂ, 1936ರಲ್ಲಿ ಬರ್ಲಿನ್ ಕ್ರೀಡಾಕೂಟ ವಿಶೇಷವಾಗಿತ್ತು. ಧ್ಯಾನ್ ಚಂದ್ ನೇತೃತ್ವದಲ್ಲಿ ಭಾರತೀಯರು ಆ ಬಾರಿಯೂ ಸವಾಲನ್ನು ಎದುರಿಸಿದರು. ಜರ್ಮನಿಯನ್ನು 8-1ರಿಂದ ಸೋಲಿಸಿ ಸತತ ಮೂರನೇ ಒಲಿಂಪಿಕ್ ಚಿನ್ನವನ್ನು ಗೆದ್ದರು.

Independence Day 2024
Independence Day 2024


1948ರಲ್ಲಿ ಸ್ವತಂತ್ರ ಭಾರತದ ಮೊದಲ ಚಿನ್ನ

ಭಾರತವು ವಸಾಹತುಶಾಹಿಯಾಗಿ ಉಳಿಯುವವರೆಗೂ ಒಲಿಂಪಿಕ್ ಹಾಕಿಯಿಂದ ದೂರ ಉಳಿದಿದ್ದ ಗ್ರೇಟ್ ಬ್ರಿಟನ್ ಸ್ವತಂತ್ರ ಭಾರತವನ್ನು ಎದುರಿಸಲು ಸಜ್ಜಾಯಿತು. ಈ ಸಂದರ್ಭದಲ್ಲೂ ಭಾರತವು ಬ್ರಿಟಿಷರನ್ನು 4-0 ಗೋಲುಗಳಿಂದ ಸೋಲಿಸಿ ಹಾಕಿ ಯುದ್ಧವನ್ನು ಗೆದ್ದಿತು. ಕೆಸರುಮಯವಾದ ಟರ್ಫ್ ಮತ್ತು ಹಗುರವಾದ ಮಳೆಯ ಕಾರಣದಿಂದ ಈ ಆಟ ಸಾಕಷ್ಟು ಕಠಿಣ ಸವಾಲನ್ನು ಒಡ್ಡಿತ್ತು. ಆದರೂ ಭಾರತೀಯರು ತಮ್ಮ ಅತ್ಯುತ್ತಮ ಚೆಂಡಿನ ನಿಯಂತ್ರಣ, ನಿಖರವಾದ ಪಾಸಿಂಗ್ ಮತ್ತು ಬುದ್ಧಿವಂತ ಆಟದಿಂದ ಬ್ರಿಟಿಷ್ ತಂಡವನ್ನು ಸೋಲಿಸಿ ಚಾರಿತ್ರಿಕ ಜಯ ದಾಖಲಿಸಿತು.

1952ರಲ್ಲಿ ಬಲ್ಬೀರ್ ಮ್ಯಾಜಿಕ್

ಹಾಲೆಂಡ್ ವಿರುದ್ಧದ 1952ರ ಹಾಕಿ ಫೈನಲ್ ಎರಡು ಕಾರಣಗಳಿಗಾಗಿ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಮೊದಲನೆಯದಾಗಿ ಮಳೆಯು ನೆಲವನ್ನು ತೇವಗೊಳಿಸಿದ್ದು ಮಾತ್ರವಲ್ಲ ಹೆಚ್ಚು ಜಾರುವಂತೆ ಮಾಡಿತ್ತು. ಪರಿಸ್ಥಿತಿಗಳು ಭಾರತೀಯರಿಗಿಂತ ಡಚ್ಚರಿಗೆ ಹೆಚ್ಚು ಅನುಕೂಲಕರವೆಂದು ನಿರೀಕ್ಷಿಸಲಾಗಿತ್ತು. ಎರಡನೆಯದಾಗಿ ಭಾರತೀಯರು ಬಲ್ಬೀರ್ ಸಿಂಗ್ ಸೀನಿಯರ್ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಆದರೆ ಭಾರತೀಯರು ಫೈನಲ್‌ನಲ್ಲಿ 3- 1ರಿಂದ ಹಾಲೆಂಡ್ ಅನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಬಲ್ಬೀರ್ ಸಿಂಗ್ ಸೀನಿಯರ್ ಮತ್ತೊಮ್ಮೆ ತಾರೆಯಾದರು. 13 ಭಾರತೀಯ ಗೋಲುಗಳಲ್ಲಿ 9 ಗೋಲುಗಳನ್ನು ಅವರೇ ಹೊಡೆದಿದ್ದರು.

ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯಕ್ತಿಕ ವಿಭಾಗದಲ್ಲಿ ಪದಕ ಜಯಿಸಿದ್ದು 1952ರಲ್ಲಿ. ಮಹಾರಾಷ್ಟ್ರದ ಖಾಸಾಬಾ ದಾದಾ ಸಾಹೆಬ್‌ ಜಾಧವ್‌ ಕುಸ್ತಿಯ ಫ್ರೀಸ್ಟೈಲ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯಕ್ತಿಕ ವಿಭಾಗದಲ್ಲಿ ಗೆದ್ದ ಮೊದಲ ಪದಕ ಇದಾಗಿತ್ತು.

Independence Day 2024
Independence Day 2024


1956ರಲ್ಲಿ ಐದನೇ ಚಿನ್ನ

ಮೆಲ್ಬೋರ್ನ್‌ನಲ್ಲಿ ನಡೆದ ಫೈನಲ್‌ ಪಂದ್ಯವು ಪಾಕಿಸ್ತಾನದ ವಿರುದ್ಧ ಒಲಿಂಪಿಕ್‌ ಹಂತದಲ್ಲಿ ಭಾರತದ ಮೊದಲ ಕೂಟವಾಗಿತ್ತು. ಎರಡೂ ತಂಡಗಳ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆಯ ತೂಗುಕತ್ತಿ ತೂಗುತ್ತಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ಬೆಳ್ಳಿ ಪದಕ ಗೆದ್ದು ಬೀಗಿದರೆ, ಭಾರತವು 1-0 ಗೋಲುಗಳ ಕಿರಿದಾದ ಅಂತರದಿಂದ ಚಿನ್ನವನ್ನು ಗೆದ್ದುಕೊಂಡಿತ್ತು.

1964ರಲ್ಲಿ ಮರಳಿ ಚಿನ್ನ

ಭಾರತವು ಪಾಕಿಸ್ತಾನವನ್ನು 1-0 ಗೋಲುಗಳಿಂದ ಸೋಲಿಸುವ ಮೂಲಕ ವಿಶ್ವ ಹಾಕಿಯಲ್ಲಿ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಿತು. ಎರಡು ಉತ್ತಮ ತಂಡಗಳು ಗೆಲ್ಲಲು ಸಾಕಷ್ಟು ಪರಿಶ್ರಮ ಪಟ್ಟಿತು. ಭಾರತವು ಅಂತಿಮವಾಗಿ ಕಡಿಮೆ ಅಂತರದಿಂದ ವಿಜಯಿಯಾಯಿತು.

Independence Day 2024
Independence Day 2024


1980ರಲ್ಲಿ ಕೊನೆಯ ಹಾಕಿ ಚಿನ್ನ

ಭಾರತ 16 ವರ್ಷಗಳ ಅನಂತರ ಮಾಸ್ಕೋದಲ್ಲಿ 4– 3 ಗೋಲುಗಳಿಂದ ಸ್ಪೇನ್ ಅನ್ನು ಸೋಲಿಸಿ ಚಿನ್ನವನ್ನು ಗೆದ್ದುಕೊಂಡಿತು. ಆದರೆ ಇದು ಒಲಂಪಿಕ್ ಹಾಕಿಯಲ್ಲಿ ಭಾರತದ ಕೊನೆಯ ಚಿನ್ನದ ಪದಕವಾಯಿತು.

1996ರಲ್ಲಿ ಟೆನಿಸ್​ನಲ್ಲಿ ಮೊದಲ ಪದಕ

1996ರಲ್ಲಿ ಅಮೆರಿಕದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ ಏಕೈಕ ಕಂಚಿನ ಪದಕ ಜಯಿಸಿತ್ತು. ಲಿಯಾಂಡರ್‌ ಪೇಸ್‌ ಟೆನಿಸ್‌ ಸಿಂಗಲ್ಸ್‌ ವಿಭಾಗದಲ್ಲಿ ಕಂಚು ಜಯಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ 44 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಪದಕ ಇದಾಗಿತ್ತು. ಇಲ್ಲಿ ಲಿಯಾಂಡರ್‌ ಪೇಸ್‌ ಬ್ರೆಜಿಲ್‌ನ ಫೆರ್ನಾಂಡೊ ಮೆಲಿಗಿನಿ ಅವರನ್ನು ಮಣಿಸಿ ಪದಕಕ್ಕೆ ಕೊರಳೊಡ್ಡಿದ್ದರು.

Independence Day 2024
Independence Day 2024


2000ರಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ

2000ದಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಆಂಧ್ರ ಪ್ರದೇಶ ಮೂಲದ ಕರ್ಣಂ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊಟ್ಟ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದರು. 69 ಕೆಜಿ ವಿಭಾಗದಲ್ಲಿ ಮಲ್ಲೇಶ್ವರಿ ಈ ಸಾಧನೆ ಮಾಡಿದ್ದರು.

2004ರಲ್ಲಿ ಒಂದು ಪದಕ

2004ರಲ್ಲಿ ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಏಕೈಕ ಪದಕ ಮಾತ್ರ ಲಭಿಸಿತು. ರಾಜಸ್ಥಾನದ ಶೂಟರ್‌ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಪುರುಷರ ಡಬಲ್‌ ಟ್ರಾಯಪ್‌ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಗುರಿ ಇರಿಸಿ ಈ ಪದಕ ತಂದುಕೊಟ್ಟಿದ್ದರು. ಈ ಸಾಧನೆಯೊಂದಿಗೆ ವೈಯಕ್ತಿಕ ವಿಭಾಗದಲ್ಲಿ ರಜತ ಗೆದ್ದ ಮೊದಲ ಭಾರತೀಯರೆನಿಸಿದರು.

Independence Day 2024
Independence Day 2024


2008ರಲ್ಲಿ ಮೊದಲ ವೈಯಕ್ತಿಕ ಚಿನ್ನ

ಖಾಸಾಬಾ ದಾದಾ ಸಾಹೇಬ್‌ ಜಾಧವ್‌ ಬಳಿಕ 2008ರ ಚೀನದ ಬೀಜಿಂಗ್ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ ವೈಯಕ್ತಿಕ ಚಿನ್ನದ ಕನಸು ನನಸು ಮಾಡಿದರು. ಬಿಂದ್ರಾ ಅವರ ಸಾಧನೆ ರಾತ್ರೋರಾತ್ರಿ ಅವರನ್ನು ದೇಶಾದ್ಯಂತ ಪ್ರಸಿದ್ಧರನ್ನಾಗಿ ಮಾಡಿತು.

ಒಲಿಂಪಿಕ್ಸ್‌ ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯ ಕೂಟ ಇದಾಗಿದೆ. ಸ್ವತಂತ್ರ ಭಾರತದಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ವರ್ಣ ಸಾಧನೆ ಮಾಡಿದ್ದು ಇದೇ ಕೂಟದಲ್ಲಿ. ಅಲ್ಲದೆ ಮೊಟ್ಟ ಮೊದಲ ಬಾರಿಗೆ ಒಂದೇ ಕೂಟದಲ್ಲಿ 3 ಪದಕಗಳು ಭಾರತದ ಪಾಲಾಗಿದ್ದವು.

ಅಭಿನವ್‌ ಬಿಂದ್ರ 10 ಮೀ. ಏರ್‌ ರೈಫ‌ಲ್‌ನಲ್ಲಿ ಸ್ವರ್ಣ ಗೆದ್ದು ಇತಿಹಾಸ ನಿರ್ಮಿಸಿದ್ದರು. ಕುಸ್ತಿಪಟು ಸುಸೀಲ್‌ ಕುಮಾರ್‌ ಪುರುಷರ ಕುಸ್ತಿಯ 75 ಕೆಜಿ ವಿಭಾಗದಲ್ಲಿ ಕಂಚು ಗೆದ್ದರೆಮ ಬಾಕ್ಸಿಂಗ್‌ನಲ್ಲಿ ವಿಜೇಂದರ್‌ ಸಿಂಗ್‌ 66 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದರು.

2012ರಲ್ಲಿ ಆರು ಪದಕ

ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಅಮೋಘ ಸಾಧನೆಯೊಂದನ್ನು ಮಾಡಿತು. ಶೂಟಿಂಗ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌, ಕ್ಷೇತ್ರಕ್ಕೆ ಹೊಸ ಆಯಾಮ ಸೃಷ್ಟಿಸಿದ ಕೂಟ ಇದಾಗಿತ್ತು. 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳು ಭಾರತದ ಪಾಲಾದವು. ಶೂಟಿಂಗ್‌ನಲ್ಲಿ ವಿಜಯ್‌ ಕುಮಾರ್‌ 25 ಮೀ. ರ್ಯಾಪಿಟ್‌ ಫೈರ್‌ ಪಿಸ್ತೂಲ್‌ನಲ್ಲಿ ಬೆಳ್ಳಿ ಗೆದ್ದರೆ, ಸುಶೀಲ್‌ ಕುಮಾರ್‌ ಪುರುಷರ 66 ಕೆಜಿ ಫ್ರೀ ಸ್ಟೈಲ್‌ನಲ್ಲಿ ರಜತ ಸಾಧನೆಯೊಂದಿಗೆ ಸತತ 2ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದರು. ಮತ್ತೊಬ್ಬ ಶೂಟರ್‌ ಗಗನ್‌ ನಾರಂಗ್‌ (10 ಮೀ ಏರ್‌ ರೈಫ‌ಲ್‌), ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಬಾಕ್ಸರ್‌ ಮೇರಿ ಕೋಮ್‌ ಹಾಗೂ ಮತ್ತೊಬ್ಬ ಕುಸ್ತಿಪಟು ಯೋಗೇಶ್ವರ್‌ ದತ್‌ ಕಂಚಿನ ಪದಕ ಜಯಿಸಿದರು.

2016ರಲ್ಲಿ ಬೆಳ್ಳಿ, ಕಂಚು

ಲಂಡನ್‌ನಲ್ಲಿ ಅರ್ಧ ಡಜನ್‌ ಪದಕ ಗೆದ್ದಿದ್ದ ಭಾರತದ ಕ್ರೀಡಾಪಟುಗಳ ಮೇಲೆ ರಿಯೋ ಒಲಿಂಪಿಕ್ಸ್‌ನಲ್ಲಿ ಅಪಾರ ಪದಕ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಎಲ್ಲ ನಿರೀಕ್ಷೆ ಹುಸಿಗೊಂಡಿತು.

ಭಾರತ ಕೇವಲ 2 ಪದಕಕ್ಕೆ ಮಾತ್ರ ಸೀಮಿತವಾಯಿತು. ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಕೊನೆಯ ಹಂತದಲ್ಲಿ ಎಡವಿ ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಆದರೆ, ಸಿಂಧು ಬ್ಯಾಡ್ಮಿಂಟನ್‌ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಶಟ್ಲರ್‌ ಎನಿಸಿಕೊಂಡರು. ಇತ್ತೀಚೆಗೆ ಕುಸ್ತಿಗೆ ನಿವೃತ್ತಿ ಹೇಳಿದ್ದ ಸಾಕ್ಷಿ ಮಲಿಕ್‌ ಕೂಡ ಈ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದರು.

Independence Day 2024
Independence Day 2024


2021ರಲ್ಲಿ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಚಿನ್ನ

ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ಹಲವು ಕಟ್ಟುಪಾಡುಗಳ ನಡುವೆ ಜಪಾನ್​ನ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಕ್ರೀಡಾ ಕೂಟದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. 

ಇದನ್ನೂ ಓದಿ: Manu Bhaker: ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್

ಪಿ ವಿ ಸಿಂಧು ಕಂಚಿನ ಪದಕ ಜಯಿಸಿ ಸತತವಾಗಿ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸಾಧನೆ ಮಾಡಿದರು. ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು 1980ರ ಬಳಿಕ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯಲ್ಲಿ ಪದಕ ಗೆದ್ದು ಸಂಭ್ರಮಿಸಿತ್ತು.

ಬಾಕ್ಸರ್​ ಲವ್ಲೀನಾ ಬೋರ್ಗೊಹೈನ್ ಕಂಚು ಗೆದ್ದರೆ, ಮೀರಾಬಾಯಿ ಚಾನು ಬೆಳ್ಳಿಯೊಂದಿಗೆ ಮಿನುಗಿದರು. ಕುಸ್ತಿಪಟು ರವಿ ದಹಿಯಾ ಬೆಳ್ಳಿ, ಬಜರಂಗ್ ಪೂನಿಯಾ ಕಂಚು ಗೆದ್ದರು.​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳು ಎಷ್ಟಿವೆ? ಇಲ್ಲಿದೆ ಎಲ್ಲ ವಿವರಗಳು

Paris Olympics 2024 : ಸರಣಿ ರಾಷ್ಟ್ರೀಯ ದಾಖಲೆ ಮುರಿದಿರುವ ಅವಿನಾಶ್ ಸಾಬ್ಲೆ ಪುರುಷರ ಸ್ಟೀಪಲ್ ಚೇಸ್ ಹೀಟ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಭರವಸೆಯಿದೆ. ಮಹಿಳೆಯರ 68 ಕೆ.ಜಿ ವಿಭಾಗದಲ್ಲಿ ಭಾರತದ ನಿಶಾ ದಹಿಯಾ ಪದಕ ಸುತ್ತುಗಳನ್ನು ಪ್ರವೇಶಿಸಲು ಹೋರಾಡುವುದರೊಂದಿಗೆ ಭಾರತದ ಕುಸ್ತಿ ವಿಭಾಗವು ಸೋಮವಾರ ಕಣಕ್ಕೆ ಇಳಿಯಲಿದೆ.

VISTARANEWS.COM


on

Koo

ನವ ದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನ (Paris Olympics 2024) ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಯುವ ಷಟ್ಲರ್​ ಲಕ್ಷ್ಯ ಸೇನ್ ಸೋತು ಫೈನಲ್​​ಗೆ ಪ್ರವೇಶಿಸಲು ವಿಫ;ರಾದರು. ಇದು ನೋವಿನ ವಿಚಾರವಾದರೂ ಅವರಿನ್ನೂ ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ 2024 ಅಭಿಯಾನ ಕೊನೆಗೊಳಿಸಬಹುದು. ಸೋಮವಾರ ನಡೆಯಲಿರುವ ಕಂಚಿನ ಪದಕದ ಪಂದ್ಯದಲ್ಲಿ ಅವರು ಮಲೇಷ್ಯಾದ ಲೀ ಜಿಯಾ ಜಿ ವಿರುದ್ಧ ಕಠಿಣ ಸವಾಲು ಎದುರಿಸಲಿದ್ದಾರೆ. ಅಲ್ಲಿ ಗೆದ್ದರೆ ಪದಕವೊಂದು ಖಚಿತ. ಸೋಮವಾರ ಭಾರತದ ಕ್ರೀಡಾಭಿಮಾನಿಗಳು ಅವರ ಬಗ್ಗೆ ಗಮನ ಇಟ್ಟಿದ್ದಾರೆ.

ಸರಣಿ ರಾಷ್ಟ್ರೀಯ ದಾಖಲೆ ಮುರಿದಿರುವ ಅವಿನಾಶ್ ಸಾಬ್ಲೆ ಪುರುಷರ ಸ್ಟೀಪಲ್ ಚೇಸ್ ಹೀಟ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಭರವಸೆಯಿದೆ. ಮಹಿಳೆಯರ 68 ಕೆ.ಜಿ ವಿಭಾಗದಲ್ಲಿ ಭಾರತದ ನಿಶಾ ದಹಿಯಾ ಪದಕ ಸುತ್ತುಗಳನ್ನು ಪ್ರವೇಶಿಸಲು ಹೋರಾಡುವುದರೊಂದಿಗೆ ಭಾರತದ ಕುಸ್ತಿ ವಿಭಾಗವು ಸೋಮವಾರ ಕಣಕ್ಕೆ ಇಳಿಯಲಿದೆ. ಭಾರತದ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿಯರು ಸೋಮವಾರ ತಮ್ಮ ತಂಡದ ಸ್ಪರ್ಧೆ ಪ್ರಾರಂಭಿಸಲಿದ್ದಾರೆ. ಹೀಗೆ ಸೋಮವಾರವೂ ಭಾರತಕ್ಕೆ ಹಲವಾರು ಆಶಾಭಾವಗಳಿವೆ. ಅವುಗಳ ಬಗ್ಗ ಗಮನ ಹರಿಸೋಣ.

ಆಗಸ್ಟ್ 5, ಸೋಮವಾರದ ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ

ಮಧ್ಯಾಹ್ನ 12:30: ಸ್ಕೀಟ್ ಮಿಶ್ರ ತಂಡ ಅರ್ಹತಾ ಸುತ್ತು. ಮಹೇಶ್ವರಿ ಚೌಹಾಣ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ.

ಮಧ್ಯಾಹ್ನ 1:30: ಟೇಬಲ್ ಟೆನಿಸ್ – 16 ನೇ ಸುತ್ತಿನ ಮಹಿಳಾ ತಂಡ ಸುತ್ತಿನಲ್ಲಿ ಭಾರತ ಮತ್ತು ರೊಮೇನಿಯಾ.

ಶ್ರೀಜಾ ಅಕುಲಾ, ಮಣಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್ ಅವರನ್ನೊಳಗೊಂಡ ಭಾರತ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.

ಇದನ್ನೂ ಓದಿ: Lovlina Borgohain : ಲವ್ಲಿನಾ ಬೊರ್ಗೊಹೈನ್​​ಗೆ ಸೋಲು; ಒಲಿಂಪಿಕ್ಸ್​​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯ

ಮಧ್ಯಾಹ್ನ 3:25: ಅಥ್ಲೆಟಿಕ್ಸ್ – ಮಹಿಳೆಯರ 400 ಮೀಟರ್ ಹೀಟ್ಸ್​ನಲ್ಲಿ ಕಿರಣ್ ಪಹಲ್.

ಮಧ್ಯಾಹ್ನ 3:45: ಸೇಯ್ಲಿಂಗ್​: ಮಹಿಳಾ ಡಿಂಗಿ ರೇಸ್ 9 ಮತ್ತು 10 ರಲ್ಲಿ ನೇತ್ರಾ ಕುಮನನ್.

ಸಂಜೆ 6: ಬ್ಯಾಡ್ಮಿಂಟನ್​ ಪುರುಷರ ಸಿಂಗಲ್ಸ್ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಲಕ್ಷ್ಯ ಸೇನ್ ಮತ್ತು ಮಲೇಷ್ಯಾದ ಲೀ ಜಿಯಾ ಝಿ ಹೋರಾಡಲಿದ್ದಾರೆ.

ಸಂಜೆ 6:10: ಸೇಯ್ಲಿಂಗ್​, ಪುರುಷರ ಡಿಂಗಿ ರೇಸ್ 9 ಮತ್ತು 10 ರಲ್ಲಿ ವಿಷ್ಣು ಸರವಣನ್.

ಸಂಜೆ 6:30: ಮಹಿಳೆಯರ 68 ಕೆ.ಜಿ ಫ್ರೀಸ್ಟೈಲ್ ಕುಸ್ತಿಯ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ನಿಶಾ ದಹಿಯಾ.

ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ಕೂಡ ಒಂದೇ ದಿನ ನಡೆಯಲಿವೆ.

ರಾತ್ರಿ 10:31: ಅಥ್ಲೆಟಿಕ್ಸ್ – ಪುರುಷರ 3000 ಮೀಟರ್ ಸ್ಟೀಪಲ್​ಚೇಸ್​ ಹೀಟ್ಸ್​​ನಲ್ಲಿ ಅವಿನಾಶ್ ಸಾಬ್ಲೆ.

Continue Reading

ಕ್ರೀಡೆ

Wanindu Hasaranga : ಭಾರತ ವಿರುದ್ಧದ ಏಕ ದಿನ ಸರಣಿಗೆ ಲಂಕಾದ ಆಲ್​ರೌಂಡರ್​ ಔಟ್

Wanindu Hasaranga : ಲಂಕಾ ಲಯನ್ಸ್ ತಂಡವು ಈಗಾಗಲೇ ದುಷ್ಮಂತ ಚಮೀರಾ, ಮಥೀಶಾ ಪತಿರಾನಾ, ದಿಲ್ಶಾನ್ ಮಧುಶಂಕಾ ಅವರ ಬೌಲಿಂಗ್ ವಿಭಾಗದಲ್ಲಿ ಇಲ್ಲದಿರುವುದರಿಂದ ಇದು ದೊಡ್ಡ ಹಿನ್ನಡೆ ಎದುರಿಸುತ್ತಿದೆ. ಗಾಯದಿಂದಾಗಿ ಈ ಮೂವರೂ 50 ಓವರ್​​ಗಳ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಅತ್ಯಂತ ಅನುಭವಿ ಬೌಲರ್ ಪ್ರಮುಖ ಸರಣಿಯಿಂದ ಹೊರಹಾಕಲ್ಪಟ್ಟಿದ್ದಾರೆ.

VISTARANEWS.COM


on

Wanindu Hasaranga
Koo

ಬೆಂಗಳೂರು: ಭಾರತ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ನಡುವೆ ಶ್ರೀಲಂಕಾ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಇತ್ತೀಚಿನ ಬೆಳವಣಿಗೆ ಪ್ರಕಾರ ಆ ತಂಡದ ಸ್ಟಾರ್ ಆಲ್​ರೌಂಡರ್​ ವನಿಂದು ಹಸರಂಗ (Wanindu Hasaranga) ಅವರನ್ನು ಸರಣಿಯ ಉಳಿದ ಪಂದ್ಯಗಳಿಂದ ಹೊರಗಿಡಲಾಗಿದೆ. ಆಗಸ್ಟ್ 02 ರ ಶುಕ್ರವಾರ ಕೊಲಂಬೊದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಸ್ನಾಯುಸೆಳೆತದ ಗಾಯದಿಂದಾಗಿ ಹಸರಂಗ ಹೊರಗುಳಿದಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲಿಯೂ ಅವರು ಆಡಿಲ್ಲ. ಅವರು ಮೂರನೇ ಪಂದ್ಯಕ್ಖೂ ಲಭ್ಯರಿರುವುದಿಲ್ಲ.

ಲಂಕಾ ಲಯನ್ಸ್ ತಂಡವು ಈಗಾಗಲೇ ದುಷ್ಮಂತ ಚಮೀರಾ, ಮಥೀಶಾ ಪತಿರಾನಾ, ದಿಲ್ಶಾನ್ ಮಧುಶಂಕಾ ಅವರ ಬೌಲಿಂಗ್ ವಿಭಾಗದಲ್ಲಿ ಇಲ್ಲದಿರುವುದರಿಂದ ಇದು ದೊಡ್ಡ ಹಿನ್ನಡೆ ಎದುರಿಸುತ್ತಿದೆ. ಗಾಯದಿಂದಾಗಿ ಈ ಮೂವರೂ 50 ಓವರ್​​ಗಳ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಅತ್ಯಂತ ಅನುಭವಿ ಬೌಲರ್ ಪ್ರಮುಖ ಸರಣಿಯಿಂದ ಹೊರಹಾಕಲ್ಪಟ್ಟಿದ್ದಾರೆ.

ಆತಿಥೇಯ ತಂಡಕ್ಕೆ ಹಸರಂಗ ಬದಲಿಗೆ ಜೆಫ್ರಿ ವಾಂಡರ್ಸೆ ಸೇರಿಕೊಂಡಿದ್ದಾರೆ. ಅವರು ಎರಡನೇ ಪಂದ್ಯದಲ್ಲಿ ಭಾರತದ 6 ವಿಕೆಟ್ ಉರುಳಿಸಿದ್ದಾರೆ. . ಬೌಲಿಂಗ್​ಗೆ ಸಂಬಂಧಿಸಿದಂತೆ ಹೇಳುವುದಾದರೆ ವಾಂಡರ್ಸೆ ಸ್ವತಃ ಲೆಗ್-ಸ್ಪಿನ್ನರ್ ಆಗಿರುವರ ಕಾರಣ ಹಸರಂಗ ಅವರಿಗೆ ಸೂಕ್ತ ಬದಲಿ ಆಟಗಾರರಾಗಿದ್ದಾರೆ. ಆದಾಗ್ಯೂ, ಅವರು ಬ್ಯಾಟಿಂಗ್​ನಲ್ಲಿ ವಿಶ್ವಾಸಾರ್ಹ ಸೇರ್ಪಡೆಯಾಗಿಲ್ಲ.

ಮೊದಲ ಪಂದ್ಯದಲ್ಲಿ ಹಸರಂಗ ಮೂರು ನಿರ್ಣಾಯಕ ವಿಕೆಟ್​ಗಳನ್ನು ಕಬಳಿಸುವ ಮೂಲಕ ಆತಿಥೇಯರ ಮೇಲೆ ಪ್ರಭಾವ ಬೀರಿದ್ದರು. ಆದಾಗ್ಯೂ, ಬ್ಯಾಟ್​​ಗನೊಂದಿಗೆ ಅವರ ಕೊಡುಗೆಗಳು ನಗಣ್ಯವಾಗಿದ್ದವು. ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ದ್ವೀಪ ರಾಷ್ಟ್ರವು ಸರಣಿಯ ಉಳಿದ ಭಾಗಕ್ಕೆ ಲೆಗ್-ಸ್ಪಿನ್ನರ್ ಸೇವೆಯನ್ನು ತೀವ್ರವಾಗಿ ಕಳೆದುಕೊಳ್ಳಲಿದೆ,

ಜೆಫ್ರಿ ವಾಂಡರ್ಸೆ

ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಅವರು ವನಿಂದು ಹಸರಂಗ ಬದಲಿಗೆ ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷದ ಜನವರಿಯಲ್ಲಿ ಜಿಂಬಾಬ್ವೆ ವಿರುದ್ಧದ ತವರು ಏಕದಿನ ಸರಣಿಯಲ್ಲಿ ವಾಂಡರ್ಸೆ ಕೊನೆಯ ಬಾರಿಗೆ ಶ್ರೀಲಂಕಾ ಪರ ಆಡಿದ್ದರು. 22 ಏಕದಿನ ಪಂದ್ಯಗಳನ್ನಾಡಿ 27 ವಿಕೆಟ್ ಕಬಳಿಸಿದ್ದಾರೆ. 34ರ ಹರೆಯದ ವಾಂಡರ್ಸೆ 1 ಟೆಸ್ಟ್ ಹಾಗೂ 14 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಭಾರತಕ್ಕೆ ಸೋಲು

ಬೆಂಗಳೂರು : ಆತಿಥೇಯ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ (IND vs SL ODI ) ಎರಡನೇ ಪಂದ್ಯದಲ್ಲಿ ಭಾರತ ತಂಡ 32 ರನ್​ಗಳ ಸೋಲಿಗೆ ಒಳಗಾಗಿದೆ. ಲಂಕಾದ ಸ್ಪಿನ್ನರ್​ಗಳ ದಾಳಿಗೆ ನಲುಗಿದ ಭಾರತೀಯ ಬ್ಯಾಟರ್​ಗಳು ಸುಲಭವಾಗಿ ಶರಣಾದರು. ಪ್ರಮುಖವಾಗಿ ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿ ಬಂದವು. ಭಾರತ ಹಾಗೂ ಲಂಕಾ ನಡುವಿನ ಮೊದಲ ಪಂದ್ಯವು ಟೈ ಆಗಿತ್ತು. ಹೀಗಾಗಿ ಈ ಗೆಲುವಿನೊಂದಿಗೆ ಲಂಕಾ ತಂಡವು ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ ಭಾರತ ತಂಡದ ಮರ್ಯಾದೆ ಉಳಿಯಬಹುದು. ಇಲ್ಲವಾದರೆ ರೋಹಿತ್ ಶರ್ಮಾ ಬಳಗ ಮುಖಭಂಗ ಅನುಭವಿಸುವ ಎಲ್ಲ ಸಾಧ್ಯತೆಗಳಿವೆ.

ಇದನ್ನೂ ಓದಿ: Paris Olympics 2024 : ಆ.​​​ 5ರಂದು ಭಾರತದ ಅಥ್ಲೀಟ್​ಗಳು ಒಲಿಂಪಿಕ್ಸ್​ನ ಯಾವ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ? ಇಲ್ಲಿದೆ ಎಲ್ಲ ಮಾಹಿತಿ

ಕೊಲೊಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಲಂಕಾ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ಗೆ 240 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ.. ಓವರ್​ಗಳಲ್ಲಿ 42.2 ಓವರ್​ಗಳಲ್ಲಿ 208 ರನ್​ಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಜೆಫ್ರಿ ವಂಡರ್ಸೆ 6 ವಿಕೆಟ್​ ಹಾಗೂ ಚರಿತ್ ಅಸಲಂಕಾ 3 ವಿಕೆಟ್ ಉರುಳಿಸಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಲಂಕಾ ಸ್ಪಿನ್ನರ್​ಗಳ ದಾಳಿಗೆ ನಿಯಮಿತವಾಗಿ ವಿಕೆಟ್​ ಕಳೆದುಕೊಂಡು ನಿರಾಸೆಗೆ ಒಳಗಾಯಿತು.

Continue Reading

ಕ್ರಿಕೆಟ್

Virat Kohli : ಲಂಕಾ ವಿರುದ್ಧದ ಪಂದ್ಯದ ನಡುವೆಯೇ ಬಿಹು ಡಾನ್ಸ್ ಮಾಡಿದ ವಿರಾಟ್ ಕೊಹ್ಲಿ, ಇಲ್ಲಿದೆ ವಿಡಿಯೊ

Virat Kohli: ಚೆಂಡನ್ನು ಹಿಡಿದ ನಂತರ, ಕೊಹ್ಲಿ ಅಸ್ಸಾಂನ ಜಾನಪದ ನೃತ್ಯವಾದ ಸಣ್ಣ ಸಂಭ್ರಮದ ಬಿಹು ಸ್ಟೆಪ್​ ಹಾಕಿದರು. ಈ ಸ್ವಯಂಪ್ರೇರಿತ ಡಾನ್ಸ್​ ಅವರ ಅಸ್ಸಾಂ ಮೂಲದ ಸಹ ಆಟಗಾರ ರಿಯಾನ್ ಪರಾಗ್ ಅವರ ಕಡೆಗಾಗಿತ್ತು. ಅವರು ಡಗೌಟ್​​ನಲ್ಲಿ ಕುಳಿತಿದ್ದರು. ಅವರಿನ್ನೂ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿಲ್ಲ. ಡ್ರೆಸ್ಸಿಂಗ್ ರೂಮ್ ಕಡೆಗೆ ಹೊಳೆಯುವ ನೋಡಿದ ನಂತರ ಕೊಹ್ಲಿ ಅಕ್ಷರ್ ಕಡೆಗೆ ಹೋದರು.

VISTARANEWS.COM


on

virat kohli
Koo

ಬೆಂಗಳೂರು: ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಮೈದಾನದಲ್ಲಿ ಇದ್ದರೆ ಬ್ಯಾಟ್ ಮೂಲಕ ಅಥವಾ ತಮ್ಮ ನಡವಳಿಕೆಯ ಮೂಲಕ ಮೈದಾನದಲ್ಲಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಾರೆ. ಅಂಥದ್ದೆ ಪ್ರಸಂಗ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆಯೂ ನಡುವೆಯೂ ನಡೆಯಿತು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಸದೀರಾ ಸಮರವಿಕ್ರಮ ಅವರನ್ನು 14 ರನ್​ಗಳಿಗೆ ಆಲ್​ಔಟ್ ಆದರು. ಅವರು ನೀಡಿದ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಪಡೆದರು. ಆದರೆ, ಕ್ಯಾಚ್ ಪಡೆದ ಖುಷಿಗೆ ಅವರ ಮಾಡಿದ ನೃತ್ಯ ಎಲ್ಲರ ಗಮನ ಸೆಳೆಯಿತು.

ಚೆಂಡನ್ನು ಹಿಡಿದ ನಂತರ, ಕೊಹ್ಲಿ ಅಸ್ಸಾಂನ ಜಾನಪದ ನೃತ್ಯವಾದ ಸಣ್ಣ ಸಂಭ್ರಮದ ಬಿಹು ಸ್ಟೆಪ್​ ಹಾಕಿದರು. ಈ ಸ್ವಯಂಪ್ರೇರಿತ ಡಾನ್ಸ್​ ಅವರ ಅಸ್ಸಾಂ ಮೂಲದ ಸಹ ಆಟಗಾರ ರಿಯಾನ್ ಪರಾಗ್ ಅವರ ಕಡೆಗಾಗಿತ್ತು. ಅವರು ಡಗೌಟ್​​ನಲ್ಲಿ ಕುಳಿತಿದ್ದರು. ಅವರಿನ್ನೂ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿಲ್ಲ. ಡ್ರೆಸ್ಸಿಂಗ್ ರೂಮ್ ಕಡೆಗೆ ಹೊಳೆಯುವ ನೋಡಿದ ನಂತರ ಕೊಹ್ಲಿ ಅಕ್ಷರ್ ಕಡೆಗೆ ಹೋದರು.

ಪಂದ್ಯದಲ್ಲಿ ಭಾರತಕ್ಕೆ ಸೋಲು

ಬೆಂಗಳೂರು : ಆತಿಥೇಯ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ (IND vs SL ODI ) ಎರಡನೇ ಪಂದ್ಯದಲ್ಲಿ ಭಾರತ ತಂಡ 32 ರನ್​ಗಳ ಸೋಲಿಗೆ ಒಳಗಾಗಿದೆ. ಲಂಕಾದ ಸ್ಪಿನ್ನರ್​ಗಳ ದಾಳಿಗೆ ನಲುಗಿದ ಭಾರತೀಯ ಬ್ಯಾಟರ್​ಗಳು ಸುಲಭವಾಗಿ ಶರಣಾದರು. ಪ್ರಮುಖವಾಗಿ ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿ ಬಂದವು. ಭಾರತ ಹಾಗೂ ಲಂಕಾ ನಡುವಿನ ಮೊದಲ ಪಂದ್ಯವು ಟೈ ಆಗಿತ್ತು. ಹೀಗಾಗಿ ಈ ಗೆಲುವಿನೊಂದಿಗೆ ಲಂಕಾ ತಂಡವು ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ ಭಾರತ ತಂಡದ ಮರ್ಯಾದೆ ಉಳಿಯಬಹುದು. ಇಲ್ಲವಾದರೆ ರೋಹಿತ್ ಶರ್ಮಾ ಬಳಗ ಮುಖಭಂಗ ಅನುಭವಿಸುವ ಎಲ್ಲ ಸಾಧ್ಯತೆಗಳಿವೆ.

ಇದನ್ನೂ ಓದಿ: Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್

ಕೊಲೊಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಲಂಕಾ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ಗೆ 240 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ.. ಓವರ್​ಗಳಲ್ಲಿ 42.2 ಓವರ್​ಗಳಲ್ಲಿ 208 ರನ್​ಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಜೆಫ್ರಿ ವಂಡರ್ಸೆ 6 ವಿಕೆಟ್​ ಹಾಗೂ ಚರಿತ್ ಅಸಲಂಕಾ 3 ವಿಕೆಟ್ ಉರುಳಿಸಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಲಂಕಾ ಸ್ಪಿನ್ನರ್​ಗಳ ದಾಳಿಗೆ ನಿಯಮಿತವಾಗಿ ವಿಕೆಟ್​ ಕಳೆದುಕೊಂಡು ನಿರಾಸೆಗೆ ಒಳಗಾಯಿತು.

Continue Reading

ಪ್ರಮುಖ ಸುದ್ದಿ

IND vs SL ODI : ಎರಡನೇ ಏಕ ದಿನ ಪಂದ್ಯದಲ್ಲಿ ಭಾರತ ತಂಡಕ್ಕೆ32 ರನ್ ಸೋಲು, ಸರಣಿಯಲ್ಲಿ ಲಂಕಾಗೆ ಮುನ್ನಡೆ

IND vs SL ODI : ಲಂಕಾ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ಗೆ 240 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ.. ಓವರ್​ಗಳಲ್ಲಿ 42.2 ಓವರ್​ಗಳಲ್ಲಿ 208 ರನ್​ಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಜೆಫ್ರಿ ವಂಡರ್ಸೆ 6 ವಿಕೆಟ್​ ಹಾಗೂ ಚರಿತ್ ಅಸಲಂಕಾ 3 ವಿಕೆಟ್ ಉರುಳಿಸಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

VISTARANEWS.COM


on

IND vs SL
Koo

ಬೆಂಗಳೂರು : ಆತಿಥೇಯ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ (IND vs SL ODI ) ಎರಡನೇ ಪಂದ್ಯದಲ್ಲಿ ಭಾರತ ತಂಡ 32 ರನ್​ಗಳ ಸೋಲಿಗೆ ಒಳಗಾಗಿದೆ. ಲಂಕಾದ ಸ್ಪಿನ್ನರ್​ಗಳ ದಾಳಿಗೆ ನಲುಗಿದ ಭಾರತೀಯ ಬ್ಯಾಟರ್​ಗಳು ಸುಲಭವಾಗಿ ಶರಣಾದರು. ಪ್ರಮುಖವಾಗಿ ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿ ಬಂದವು. ಭಾರತ ಹಾಗೂ ಲಂಕಾ ನಡುವಿನ ಮೊದಲ ಪಂದ್ಯವು ಟೈ ಆಗಿತ್ತು. ಹೀಗಾಗಿ ಈ ಗೆಲುವಿನೊಂದಿಗೆ ಲಂಕಾ ತಂಡವು ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ ಭಾರತ ತಂಡದ ಮರ್ಯಾದೆ ಉಳಿಯಬಹುದು. ಇಲ್ಲವಾದರೆ ರೋಹಿತ್ ಶರ್ಮಾ ಬಳಗ ಮುಖಭಂಗ ಅನುಭವಿಸುವ ಎಲ್ಲ ಸಾಧ್ಯತೆಗಳಿವೆ.

ಕೊಲೊಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಲಂಕಾ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ಗೆ 240 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ.. ಓವರ್​ಗಳಲ್ಲಿ 42.2 ಓವರ್​ಗಳಲ್ಲಿ 208 ರನ್​ಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಜೆಫ್ರಿ ವಂಡರ್ಸೆ 6 ವಿಕೆಟ್​ ಹಾಗೂ ಚರಿತ್ ಅಸಲಂಕಾ 3 ವಿಕೆಟ್ ಉರುಳಿಸಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಲಂಕಾ ಸ್ಪಿನ್ನರ್​ಗಳ ದಾಳಿಗೆ ನಿಯಮಿತವಾಗಿ ವಿಕೆಟ್​ ಕಳೆದುಕೊಂಡು ನಿರಾಸೆಗೆ ಒಳಗಾಯಿತು.

ಸ್ಪಿನ್ ಪಿಚ್​ನಲ್ಲಿ ಸವಾಲಿನ ಮೊತ್ತವೇ ಅಗಿದ್ದ 241 ರನ್​ಗಳನ್ನು ಬೆನ್ನಟ್ಟಲು ಹೊರಟ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ರೋಹಿತ್ ಶರ್ಮಾ ಮತ್ತೊಂದು ಬಾರಿ ಅರ್ಧ ಶತಕ (64 ರನ್​, 44 ಎಸೆತ, 5 ಫೊರ್​, 4 ಸಿಕ್ಸರ್​) ಉತ್ತಮ ಆರಂಭ ತಂದುಕೊಟ್ಟರು. ಶುಭ್​​ ಮನ್​ ಗಿಲ್​ ಕೂಡ 35 ರನ್ ಬಾರಿಸಿ ಅವರಿಗೆ ನೆರವಾದರು. ರೋಹಿತ್ ತಮ್ಮ ವಿಕೆಟ್ ಒಪ್ಪಿಸುವ ಮೊದಲು ಭಾರತ 13.3 ಓವರ್​ಗಳಲ್ಲಿ 97 ರನ್ ಬಾರಿಸಿ ನಿಶ್ಚಿಂತೆಯಿಂದ ಇತ್ತು. ಆದರೆ, ಆ ಬಳಿಕ ಭಾರತದ ಬ್ಯಾಟರ್​ಗಳು ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಿರಾಟ್​ ಕೊಹ್ಲಿ 14 ರನ್​ಗೆ ಔಟಾದರೆ, ಬಡ್ತಿ ಪಡೆದುಕೊಂಡು ನಾಲ್ಕನೇ ಕ್ರಮಾಂಕದಲ್ಲಿ ಬಂದ ಶಿವಂ ದುಬೆ ಶೂನ್ಯಕ್ಕೆ ಔಟಾದರು.

ಅಕ್ಷರ್ ಪಟೇಲ್ ಆಧಾರ

ಮಧ್ಯಮ ಕ್ರಮಾಂಕದಲ್ಲಿ ಆಡಲು ಇಳಿದ ಅಕ್ಷರ್ ಪಟೇಲ್ ತಂಡಕ್ಕೆ ಸ್ವಲ್ಪ ಹೊತ್ತು ಆಧಾರವಾದರು. ಅವರು 44 ರನ್ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಆದರೆ, ಉಳಿದವರು ಕ್ರೀಸ್​ನಲ್ಲಿ ನಿಲ್ಲಲು ಮನಸ್ಸು ಮಾಡಿಲ್ಲ. ಶ್ರೇಯಸ್ ಅಯ್ಯರ್​ 7 ರನ್ ಬಾರಿಸಿದರೆ, ಕೆ. ಎಲ್​ ರಾಹುಲ್ ಬ್ಯಾಟಿಂಗ್​ನಲ್ಲಿ ವೈಫಲ್ಯ ಎದುರಿಸಿ ಶೂನ್ಯಕ್ಕೆ ಔಟಾದರು. ವಾಷಿಂಗ್ಟನ್ ಸುಂದರ್​ 15 ರನ್ ಬಾರಿಸಿದರೆ ಕುಲ್ದಿಪ್​ ಯಾದವ್​ 7 ರನ್​, ಕುಲ್ದೀಪ್​ ಯಾದವ್ 7 ರನ್​, ಮೊಹಮ್ಮದ್ ಶಮಿ 4 ರನ್​, ಅರ್ಶ್​ದೀಪ್​ ಸಿಂಗ್​ 3 ರನ್ ಬಾರಿಸಿದರು.

ಇದನ್ನೂ ಓದಿ: Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್

ಲಂಕಾದ ಲಯ ಬದ್ಧ ಬ್ಯಾಟಿಂಗ್​

ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಲಂಕಾ ಶೂನ್ಯಕ್ಕೆ ಮೊದಲ ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. ಆದರೆ, ನಂತರ ಪ್ರತಿಯೊಬ್ಬರೂ ಲಯಬದ್ಧ ಬ್ಯಾಟಿಂಗ್ ಮಾಡಿದರು. ಅವಿಷ್ಕಾ ಫರ್ನಾಂಡೊ 40 ರನ್ ಬಾರಿಸಿದರೆ, ಕುಸಾಲ್​ ಮೆಂಡಿಸ್​ 30 ರನ್ ಗಳಿಸಿದರು. ಚರಿತ್ ಅಸಲಂಕಾ 25 ರನ್​, ದುನಿಲ್​ ವೆಲ್ಲಾಲಗೆ 39 ರನ್​, ಕಮಿಂಡು ಮೆಂಡಿಸ್​ 40 ರನ್ ಬಾರಿಸಿ ಭಾರತಕ್ಕೆ ಸ್ಪರ್ಧಾತ್ಮಕ ಗುರಿಯನ್ನು ಒಡ್ಡಲು ತಮ್ಮ ತಂಡಕ್ಕೆ ನೆರವಾದರು.

Continue Reading
Advertisement
Stock Market
ವಾಣಿಜ್ಯ14 mins ago

Stock Market: ಷೇರುಪೇಟೆಯಲ್ಲಿ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕಗಳಷ್ಟು ಕುಸಿತ

murder case
ಹಾಸನ20 mins ago

Murder Case : ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ; ಕೈ-ಕಾಲು ಬಿಗಿದು, ಕಲ್ಲು ಕಟ್ಟಿ ಕೆರೆಗೆ ಎಸೆದ ಹಂತಕರು

ಪ್ರಮುಖ ಸುದ್ದಿ39 mins ago

AAP VS Delhi LG: ಆಪ್‌ಗೆ ಹಿನ್ನಡೆ; ದಿಲ್ಲಿ ನಗರಸಭೆಗೆ ಸದಸ್ಯರನ್ನು ನೇಮಿಸುವ ಎಲ್‌ಜಿ ಅಧಿಕಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್

Drowned in water
ಚಿಕ್ಕೋಡಿ52 mins ago

Drowned in water : ಆಟವಾಡುತ್ತಾ ಕಾಲುವೆಗೆ ಕಾಲು ಜಾರಿ ಬಿದ್ದು 4 ವರ್ಷದ ಬಾಲಕ ಸಾವು

Gold Rate Today
ಚಿನ್ನದ ದರ1 hour ago

Gold Rate Today: ಸತತ ಎರಡನೆ ದಿನವೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

Actor Darshan wife Vijayalakshmi darshan temple run
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್‌ ಬಿಡುಗಡೆಗಾಗಿ ವಿಜಯಲಕ್ಷ್ಮಿ ಹಾಗೂ ಅಳಿಯ ಟೆಂಪಲ್ ರನ್‌

Road Accident
ಬೆಂಗಳೂರು1 hour ago

Road Accident: ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್ ಸಾವು; ಬೈಕ್‌ ಅಪಘಾತದಲ್ಲಿ ಸವಾರರಿಬ್ಬರು ಮೃತ್ಯು

Rahul Gandhi
ವೈರಲ್ ನ್ಯೂಸ್1 hour ago

Rahul Gandhi: ರಾಹುಲ್ ಗಾಂಧಿ ಅಲ್ಲ, ರಾಹುಲ್ ಖಾನ್! ಪಾಕಿಸ್ತಾನದ ಟಿವಿಯಲ್ಲಿ ಬಿಸಿಬಿಸಿ ಚರ್ಚೆ!

police inspector death thimmegowda
ಬೆಂಗಳೂರು2 hours ago

Inspector Death: ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ, ಎರಡು ತಿಂಗಳ ಹಿಂದೆ ಟ್ರಾನ್ಸ್‌ಫರ್‌ ಆಗಿದ್ದ ಸಿಸಿಬಿ ಎಸ್‌ಐ

Road Accident
ತುಮಕೂರು2 hours ago

Road Accident : ಬಲ ತಿರುವು ಪಡೆಯುವಾಗ ಬೈಕ್‌ ಸವಾರನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್‌; ಸಿಸಿ ಕ್ಯಾಮೆರಾದಲ್ಲಿ ಅಪಘಾತ ಸೆರೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ23 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌