Paris Olympics: ಒಲಿಂಪಿಕ್ಸ್​ನಲ್ಲಿ ನಾಳೆ ಭಾರತದ ಸ್ಪರ್ಧೆಗಳ ವೇಳಾಪಟ್ಟಿ ಹೀಗಿದೆ; 4 ಪದಕ ನಿರೀಕ್ಷೆ! - Vistara News

ಕ್ರೀಡೆ

Paris Olympics: ಒಲಿಂಪಿಕ್ಸ್​ನಲ್ಲಿ ನಾಳೆ ಭಾರತದ ಸ್ಪರ್ಧೆಗಳ ವೇಳಾಪಟ್ಟಿ ಹೀಗಿದೆ; 4 ಪದಕ ನಿರೀಕ್ಷೆ!

Paris Olympics: ಭಾರತ ನಾಳೆ ಒಟ್ಟು 6 ಸ್ಪರ್ಧೆಗಳಲ್ಲಿ ಸ್ಪಧಿಸಲಿದ್ದು ಈ ಪೈಕಿ ಅಥ್ಲೆಟಿಕ್ಸ್​ನಲ್ಲಿ ಪದಕಕ್ಕೆ ಹೋರಾಟ ನಡೆಸಲಿದೆ. ಮೂರು ಪುರುಷರು ಮತ್ತು ಏಕೈಕ ಮಹಿಳಾ ಓಟಗಾರ್ತಿ ಸೇರಿದ್ದಾರೆ. ಒಟ್ಟಾರೆ ನಾಲ್ಕು ಐತಿಹಾಸಿಕ ಪದಕ ನಿರೀಕ್ಷೆ ಮಾಡಲಾಗಿದೆ.

VISTARANEWS.COM


on

Paris Olympics
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್​: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics) ನಾಳೆಯಿಂದ(ಆಗಸ್ಟ್​ 1) ಅಥ್ಲೆಟಿಕ್ಸ್(Paris Olympics athletics)​ ಸ್ಪರ್ಧೆಗಳು ಆರಂಭಗೊಳ್ಳಲಿದೆ. ಪದಕ ಸ್ಪರ್ಧೆಯೂ ಒಳಗೊಂಡಿದೆ. ಈ ಬಾರಿ ಪ್ಯಾರಿಸ್​ಗೆ ಕಳುಹಿಸಿದ 117 ಕ್ರೀಡಾಪಟುಗಳ ಪಟ್ಟಿಯಲ್ಲಿ ಅಥ್ಲೆಟಿಕ್ಸ್​ ದೊಡ್ಡ ತಂಡವಾಗಿದೆ. ಒಟ್ಟು 29 ಸ್ಪರ್ಧಿಗಳು ಭಾರತವನ್ನು ಈ ವಿಭಾಗದಿಂದ ಪ್ರತಿನಿಧಿಸಲಿದ್ದಾರೆ. ಇವರಿಂದ ಹಲವು ಪದಕವನ್ನು ಕೂಡ ನಿರೀಕ್ಷೆ ಮಾಡಲಾಗಿದೆ. 18 ಪುರುಷರು ಹಾಗೂ 11 ಮಹಿಳೆಯರು ಸೇರಿದ್ದಾರೆ. ಭಾರತ ನಾಳೆ ನಡೆಯುವ ಯಾವೆಲ್ಲ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದೆ ಎನ್ನುವ ಮಾಹಿತಿ ಇಂತಿದೆ.

ಭಾರತ ನಾಳೆ ಒಟ್ಟು 6 ಸ್ಪರ್ಧೆಗಳಲ್ಲಿ ಸ್ಪಧಿಸಲಿದ್ದು ಈ ಪೈಕಿ ಅಥ್ಲೆಟಿಕ್ಸ್​ನಲ್ಲಿ ಪದಕಕ್ಕೆ ಹೋರಾಟ ನಡೆಸಲಿದೆ. ಮೂರು ಪುರುಷರು ಮತ್ತು ಏಕೈಕ ಮಹಿಳಾ ಓಟಗಾರ್ತಿ ಸೇರಿದ್ದಾರೆ. ಒಟ್ಟಾರೆ ನಾಲ್ಕು ಐತಿಹಾಸಿಕ ಪದಕ ನಿರೀಕ್ಷೆ ಮಾಡಲಾಗಿದೆ.

ವೇಳಾಪಟ್ಟಿ


ಅಥ್ಲೆಟಿಕ್ಸ್​

ಪುರುಷರ 20 ಕಿಮೀ ಓಟದ ನಡಿಗೆ, ಫೈನಲ್
ಅಕ್ಷದೀಪ್ ಸಿಂಗ್, ವಿಕಾಶ್ ಸಿಂಗ್ ,ಪರಮ್ಜೀತ್ ಸಿಂಗ್ ಬಿಷ್ತ್ (ಆರಂಭ; ಬೆಳಗ್ಗೆ 11 ಗಂಟೆ)

ಮಹಿಳೆಯರ 20 ಕಿಮೀ ಓಟದ ನಡಿಗೆ, ಫೈನಲ್
ಪ್ರಿಯಾಂಕಾ ಗೋಸ್ವಾಮಿ (ಆರಂಭ: ಮಧ್ಯಾಹ್ನ 12:50) 

ಆರ್ಚರಿ

ಪುರುಷರ ವೈಯಕ್ತಿಕ, 1/32 ಎಲಿಮಿನೇಷನ್ ಸುತ್ತು

ಪ್ರವೀಣ್ ರಮೇಶ್ ಜಾಧವ್ vs ಕೆಎಒ ವೆಂಚಾವ್(ಚೀನಾ). (ಆರಂಭ: ಮಧ್ಯಾಹ್ನ  2:31) 

ಸೈಲಿಂಗ್​ (ಹಾಯಿದೋಣಿ)


ಪುರುಷರ ಡಿಂಗಿ, ರೇಸ್​ 1

ವಿಷ್ಣು ಸರವಣನ್ (ಆರಂಭ: ಮಧ್ಯಾಹ್ನ  3:45) 

ಮಹಿಳೆಯರ ಡಿಂಗಿ, ರೇಸ್​ 1

ನೇತ್ರಾ ಕುಮನನ್‌

ಇದನ್ನೂ ಓದಿ Paris Olympics Archery: ಪ್ರೀ-ಕ್ವಾರ್ಟರ್‌ ಫೈನಲ್​ಗೇರಿದ ದೀಪಿಕಾ ಕುಮಾರಿ

ಗಾಲ್ಫ್​


ಪುರುಷರ ವೈಯಕ್ತಿಕ ಸ್ಟ್ರೋಕ್ ಗೇಮ್​, ಸುತ್ತು 1

ಶುಭಂಕರ್ ಶರ್ಮಾ, ಗಗನ್ಜೀತ್ ಭುಲ್ಲರ್. (ಆರಂಭ: ಮಧ್ಯಾಹ್ನ  12:30) 

ಹಾಕಿ


ಪುರುಷರ, ಗುಂಪು ಬಿ.

ಭಾರತ vs ಬೆಲ್ಜಿಯಂ (ಆರಂಭ: ಮಧ್ಯಾಹ್ನ, 1:30)

ಶೂಟಿಂಗ್​


ಮಹಿಳೆಯರು 50 ಮೀ ರೈಫಲ್ 3 ತ್ರೀ ಪೊಸಿಶನ್‌ ಅರ್ಹತಾ ಸುತ್ತು

ಅಂಜುಮ್ ಮೌದ್ಗಿಲ್, ಸಿಫ್ಟ್ ಕೌರ್ ಸಮ್ರಾ (ಆರಂಭ: ಮಧ್ಯಾಹ್ನ, 3:30)

ಬುಧವಾರ ಭಾರತಕ್ಕೆ ಉತ್ತಮ ಫಲಿತಾಂಶ


ಬುಧವಾರ ನಡೆದ ಹಲವು ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಗೆಲುವು ಸಾಧಿಸಿ ಫೈನಲ್​, ಕ್ವಾರ್ಟರ್​ ಫೈನಲ್​, ಪ್ರೀ ಕ್ವಾರ್ಟರ್​ ಫೈನಲ್​ ಪ್ರವೇಶಿಸುವ ಮೂಲಕ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ನಾಳೆಯೂ ಕೂಡ ಉತ್ತಮ ಫಲಿತಾಂಶ ಬರಲಿ ಎನ್ನುವುದು ಭಾರತೀಯ ಕ್ರೀಡಾಭಿಮಾನಿಗಳ ಹಾರೈಕೆ.​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rashid khan 600 wickets: ಟಿ20 ಕ್ರಿಕೆಟ್​ನಲ್ಲಿ 600 ವಿಕೆಟ್​ ಪೂರ್ತಿಗೊಳಿಸಿದ ರಶೀದ್​ ಖಾನ್​; ಮೊದಲ ಸ್ಪಿನ್ನರ್

Rashid khan 600 wickets: ಟಿ20 ವಿಕೆಟ್ ಸಾಧಕರ ಪಟ್ಟಿಯಲ್ಲಿ ಸದ್ಯ ಡ್ವೇನ್ ಬ್ರಾವೊ ಅವರೇ ಅಗ್ರಸ್ಥಾನ ಪಡೆದಿದ್ದಾರೆ. ಅವರು ಒಟ್ಟು 630 ವಿಕೆಟ್​ ಕಬಳಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ರಶೀದ್ ಖಾನ್​ಗೆ ಇನ್ನು 31 ವಿಕೆಟ್​ಗಳ ಅಗತ್ಯವಿದೆ.

VISTARANEWS.COM


on

Rashid khan 600 wickets
Koo

ದುಬೈ: ಅಫಘಾನಿಸ್ತಾನ ತಂಡದ ಸ್ಟಾರ್​ ಸ್ಪಿನ್ನರ್ ರಶೀದ್ ಖಾನ್ (Rashid Khan) ಅವರು ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ‘ದಿ ಹಂಡ್ರೆಡ್’ ಕ್ರಿಕೆಟ್​ ಲೀಗ್​ನಲ್ಲಿ 2 ವಿಕೆಟ್ ಕಬಳಿಸುವುದರೊಂದಿಗೆ ರಶೀದ್ ಖಾನ್ ಎಲ್ಲ ಮಾದರಿಯ ಟಿ20 ಕ್ರಿಕೆಟ್​ನಲ್ಲಿ 600 ವಿಕೆಟ್(Rashid khan 600 wickets)​ ಪೂರ್ತಿಗೊಳಿಸಿದ ವಿಶ್ವದ ಮೊದಲ ಸ್ಪಿನ್ನರ್ ಹಾಗೂ 2ನೇ ಬೌಲರ್​​ ಎನಿಸಿಕೊಂಡಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ 600 ವಿಕೆಟ್​ ಪೂರ್ತಿಗೊಳಿಸಿದ್ದ ವಿಶ್ವ ದಾಖಲೆಯನ್ನು ಮೊದಲ ನಿರ್ಮಿಸಿದ್ದು ವೆಸ್ಟ್ ಇಂಡೀಸ್​ನ ಮಾಜಿ ಆಟಗಾರ ಡ್ವೇನ್ ಬ್ರಾವೊ. ಇದೀಗ ರಶೀದ್​ ಖಾನ್​ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಅತೀ ವೇಗವಾಗಿ ಟಿ20 ಕ್ರಿಕೆಟ್​ನಲ್ಲಿ 600 ವಿಕೆಟ್ ಕಬಳಿಸಿದ ದಾಖಲೆ ರಶೀದ್ ಹೆಸರಿಗೆ ದಾಖಲಾಗಿದೆ. ಬ್ರಾವೊ 545 ಟಿ20 ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ್ದರೆ, ರಶೀದ್​ ಖಾನ್​ ಕೇವಲ 441 ಪಂದ್ಯಗಳನ್ನಾಡಿ ಈ ಮೈಲುಗಲ್ಲು ನಿರ್ಮಿಸಿದ್ದಾರೆ.

ಬ್ರಾವೊ ದಾಖಲೆ ಮುರಿಯಲು 31 ವಿಕೆಟ್​ ಅಗತ್ಯ


ಟಿ20 ವಿಕೆಟ್ ಸಾಧಕರ ಪಟ್ಟಿಯಲ್ಲಿ ಸದ್ಯ ಡ್ವೇನ್ ಬ್ರಾವೊ ಅವರೇ ಅಗ್ರಸ್ಥಾನ ಪಡೆದಿದ್ದಾರೆ. ಅವರು ಒಟ್ಟು 630 ವಿಕೆಟ್​ ಕಬಳಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ರಶೀದ್ ಖಾನ್​ಗೆ ಇನ್ನು 31 ವಿಕೆಟ್​ಗಳ ಅಗತ್ಯವಿದೆ. 25 ವರ್ಷದ ರಶೀದ್​ಗೆ ಈ ದಾಖಲೆ ಮುರಿಯುವು ಕಷ್ಟದ ಮಾತಲ್ಲ. ಬ್ರಾವೊ ಈಗಾಗಲೇ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ರಶೀದ್​ ಇನ್ನೂ ಕನಿಷ್ಠ 10 ವರ್ಷಗಳ ಕಾಲ ಕ್ರಿಕೆಟ್​ ಆಡುವುದರಲ್ಲಿ ಯಾವುದೇ ಅನುಮಾನ ಬೇಡ. ಉಳಿದಂತೆ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ 405 ಪಂದ್ಯಗಳಲ್ಲಿ 502 ವಿಕೆಟ್ ಪಡೆದರೆ, ಶಕೀಬ್ ಅಲ್ ಹಸನ್ 444 ಪಂದ್ಯಗಳಲ್ಲಿ 492 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ Rashid Khan: ರಶೀದ್ ಖಾನ್​ಗೆ ದಂಡ ವಿಧಿಸಿದ ಐಸಿಸಿ, ಅವರು ಮಾಡಿದ ತಪ್ಪೇನು?

ರಶೀದ್ ಖಾನ್ 93 ಅಂತಾರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ 14.14 ಸರಾಸರಿ ಮತ್ತು 6.08 ಎಕಾನಮಿ ರೇಟ್​ನಲ್ಲಿ 152 ವಿಕೆಟ್​ಗಳನ್ನು ಪಡೆದಿದ್ದಾರೆ. ಐಪಿಎಲ್​​ನಲ್ಲಿ 121 ಪಂದ್ಯಗಳಲ್ಲಿ 21.82ರ ಸರಾಸರಿಯಲ್ಲಿ 149 ವಿಕೆಟ್ ಪಡೆದಿದ್ದಾರೆ. ರಶೀದ್ 2017 ರಿಂದ 2021 ರವರೆಗೆ ಸನ್ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ಪರ ಆಡಿದ್ದರು. ನಂತರ ಗುಜರಾತ್​ ಟೈಟನ್ಸ್ ಸೇರಿಕೊಂಡಿದ್ದಾರೆ.

Continue Reading

ಕ್ರೀಡೆ

Virat Kohli: ಗಂಭೀರ್​ ಮಾರ್ಗದರ್ಶನದಂತೆ ಅತ್ಯಂತ ಜೋಶ್​ನಿಂದ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಕೊಹ್ಲಿ; ಫೋಟೊ ವೈರಲ್​

Virat Kohli: ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್​ ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

VISTARANEWS.COM


on

Virat Kohli
Koo

ಕೊಲಂಬೊ: ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದ ಜೋಶ್​ನಲ್ಲಿರುವ ಟೀಮ್​ ಇಂಡಿಯಾ ಇದೀಗ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಗಸ್ಟ್​ 2ರಂದು ನಡೆಯಲಿದೆ. ಈಗಾಗಲೇ ಲಂಕಾ ತಲುಪಿರುವ ಏಕದಿನ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಬುಧವಾರ ವಿರಾಟ್​ ಕೊಹ್ಲಿ(Virat Kohli) ಅವರು ನೂತನ ಕೋಚ್​ ಗೌತಮ್ ಗಂಭೀರ್(Head Coach Gambhir)​ ಜತೆ ಅತ್ಯಂತ ಆತ್ಮೀಯವಾಗಿ ಚರ್ಚಿಸುತ್ತಿರುವುದು ಕಂಡು ಬಂತು. ಈ ಫೋಟೊ(photo viral) ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿರಾಟ್​ ಕೊಹ್ಲಿ ಅವರು ಗಂಭೀರ್(Gautam Gambhir)​ ಜತೆ ಬ್ಯಾಟಿಂಗ್​ ಮಾರ್ಗದರ್ಶನ ಮತ್ತು ಆತ್ಮೀಯವಾಗಿ ಚರ್ಚಿಸುತ್ತಿರುವ ಫೋಟೊವನ್ನು ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಕಂಡ ಅನೇಕ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಗಂಭೀರ್​ ಕೋಚ್​ ಆಗುತ್ತಿದ್ದಂತೆಯೇ ಕೆಲ ನೆಟ್ಟಿಗರು ಗಂಭೀರ್​ ಮತ್ತು ಕೊಹ್ಲಿ ನಡುವಣ ಆನ್ ಫೀಲ್ಡ್ ಜಗಳ ಮತ್ತೆ ಶುರುವಾಗಿ ಇದು ತಂಡಕ್ಕೆ ಭಾದಿಸಲಿದೆ ಎಂದು ಹೇಳಿದ್ದರು. ನೆಟ್ಟಿಗರು ಈ ಮಾತು ಹೇಳಲು ಕೂಡ ಕಾರಣವಿತ್ತು. ಅದೇನೆಂದರೆ, ವಿರಾಟ್​ ಕೊಹ್ಲಿ ಮತ್ತು ಗಂಭೀರ್​ ಐಪಿಎಲ್​ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್​ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಕೂಡ ಗಂಭೀರ್ ಪ್ರದರ್ಶಿಸಿದ್ದರು. ಹೀಗಿರುವಾಗ ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಇಬರಿಬ್ಬರು ಎಲ್ಲ ಮುನಿಸು ಮರೆತು ಆತ್ಮೀಯವಾಗಿರುವಂತೆ ಕಾಣಿಸಿದೆ.

ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಕೊಹ್ಲಿ ಅವರು ಬಿಸಿಸಿಐ ಬಳಿ ತಾನು ಗಂಭೀರ್ ಜತೆಗೆ ನಡೆಸಿದ ಕಿತ್ತಾಟಗಳನ್ನು ಮರೆತು ಅವರೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ, ಗಂಭೀರ್​ ಕೂಡ ತಾನು ಕೊಹ್ಲಿ ಜತೆ ಉತ್ತಮ ಬಾಂಧವ್ಯದೊಂದಿಗೆ ಇರುವುದಾಗಿ ತಿಳಿಸಿದ್ದಾಗಿ ವರದಿಯಾಗಿತ್ತು.

ಇದನ್ನೂ ಓದಿ Virat Kohli: ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿ ಕೋಚ್​ ಗಂಭೀರ್​ ವಿಚಾರದಲ್ಲಿ ಕೊಹ್ಲಿ ಕೊಟ್ಟ ಆಶ್ವಾಸನೆ ಏನು?

ದಾಖಲೆ ಬರೆಯಲು ಕೊಹ್ಲಿ ಸಜ್ಜು

ವಿರಾಟ್​ ಕೊಹ್ಲಿಗೆ(Virat Kohli) ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಹೌದು, ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಸದ್ಯ 292* ಏಕದಿನ ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 13,848* ರನ್(virat kohli odi runs)​ ಬಾರಿಸಿದ್ದಾರೆ. ಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 152 ರನ್​ ಬಾರಿಸಿದರೆ 14 ಸಾವಿರ ರನ್​ ಮೈಲುಗಲ್ಲು ತಲುಪಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 14000ಕ್ಕೂ ಹೆಚ್ಚು ರನ್ ಗಳಿಸಿದ ಸಾರ್ವಕಾಲಿದ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಹೆಸರಿನಲ್ಲಿದೆ. ಸಚಿನ್ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದರೆ, ಕುಮಾರ ಸಂಗಕ್ಕಾರ 404 ಪಂದ್ಯಗಳನ್ನಾಡಿ 14,234 ರನ್ ಬಾರಿಸಿದ್ದಾರೆ. ಕೊಹ್ಲಿಗೆ ಸಂಗಕ್ಕಾರ ದಾಖಲೆ ಮುರಿಯುವ ಅವಕಾಶವಿದೆ. ಆದರೆ ಸಚಿನ್​ ದಾಖಲೆ ಮುರಿಯುವುದು ಕಷ್ಟ ಸಾಧ್ಯ.

Continue Reading

ಕ್ರೀಡೆ

Paris Olympics: ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಮುಗ್ಗರಿಸಿದ ಮಣಿಕಾ ಬಾತ್ರಾ

Paris Olympics: ಭಾರತದ ಅಗ್ರ ಶ್ರೇಯಾಂಕದ ಟೇಬಲ್‌ ಟೆನಿಸ್‌ ಆಟಗಾರ್ತಿ ಶ್ರೀಜಾ ಅಕುಲಾ ಮಾತ್ರ ಟೆನಿಸ್​ನಲ್ಲಿ ಭಾರತಕ್ಕೆ ಪದಕ ಭರವಸೆಯಾಗಿ ಉಳಿದುಕೊಂಡಿದ್ದಾರೆ. ಇಂದು(ಬುಧವಾರ) ನಡೆದ ಮಹಿಳೆಯರ ಸಿಂಗಲ್ಸ್‌ 32ರ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಝೆಂಗ್ ಜಿಯಾನ್ ಅವರನ್ನು 4-2 ಅಂತರದಿಂದ ಸೋಲಿಸಿ 16 ರ ರೌಂಡ್‌ಗೆ ಪ್ರವೇಶಿಸಿದ್ದಾರೆ.

VISTARANEWS.COM


on

Paris Olympics
Koo

ಪ್ಯಾರಿಸ್​: ಭಾರತದ ತಾರಾ ಟೇಬಲ್ ಟೆನಿಸ್ ಪಟು ಮಣಿಕಾ ಬಾತ್ರಾ(Manika Batra) ಅವರ ಪ್ಯಾರಿಸ್​ ಒಲಿಂಪಿಕ್ಸ್(Paris Olympics) ಅಭಿಯಾನ ಅಂತ್ಯ ಕಂಡಿದೆ. ಮಹಿಳಾ ಸಿಂಗಲ್ಸ್‌ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಸೆ ಎದುರಿಸಿದ್ದಾರೆ. ಒಲಿಂಪಿಕ್ ಇತಿಹಾಸದಲ್ಲೇ ಟೇಬಲ್ ಟೆನಿಸ್​ನಲ್ಲಿ ಪ್ರೀ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಭಾರತದ ಮೊದಲ ಟಿಟಿ ಪಟು ಎಂಬ ಖ್ಯಾತಿಗೆ ಪಾತ್ರರಾದದ್ದು ಮಾತ್ರ ಅವರ ಪಾಲಿನ ಸಾಧನೆಯಾಗಿದೆ.

29 ವರ್ಷದ ಮಣಿಕಾ ಬುಧವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ತನಗಿಂತ ಮೇಲಿನ ಶ್ರೇಯಾಂಕದ ಜಪಾನ್​ನ ಮಿಯು ಹಿರಾನೋ(Miu Hirano) ವಿರುದ್ಧ 4-1(11-6, 11-9, 12-14, 11-8, 11-6) ಅಂತರದಲ್ಲಿ ಸೋಲು ಕಂಡರು. ವಿಶ್ವ ಶ್ರೇಯಾಂಕದಲ್ಲಿ 28ನೇ ಸ್ಥಾನ ಹೊಂದಿರುವ ಮಣಿಕಾ ಅವರು 13 ಶ್ರೇಯಾಂಕದ ಮಿಯು ಹಿರಾನೋ ಅವರ ಬಲಿಷ್ಠ ಹೊಡೆತಗಳಿಗೆ ತಡೆಯೊಡ್ಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿ ಸೋಲು ಕಂಡರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ 2ನೇ ಸುತ್ತಿನಲ್ಲಿ ಮುಗ್ಗರಿಸಿದ್ದ ಮಣಿಕಾ ಈ ಬಾರಿ ಪ್ರೀ ಕ್ವಾರ್ಟರ್​ ಫೈನಲ್​ಗೇರುವಲ್ಲಿ ಸಫಲರಾದದ್ದು ಎಂಬುದಷ್ಟೇ ಅವರ ಪಾಲಿಗೆ ಸಮಾಧಾನಕರ ಸಂಗತಿ.

ಆರಂಭಿಕ ಗೇಮ್​ನಲ್ಲಿ ಸೋಲು ಕಂಡ ಮಣಿಕಾ, 2ನೇ ಗೇಮ್​ನಲ್ಲಿ ಆರಂಭಿಕ ಹಂತದಲ್ಲಿ ಮುನ್ನಡೆ ಸಾಧಿಸಿದರೂ ಕೂಡ ಕೆಲ ತಪ್ಪುಗಳಿಂದ ಈ ಗೇಮ್​ ಕೂಡ ಕಳೆದುಕೊಂಡರು. ಮೂರನೇ ಗೇಮ್​ನಲ್ಲಿ ತಿರುಗಿ ಬಿದ್ದ ಮಣಿಕಾ 14-12 ಅಂತರದಿಂದ ಈ ಗೇಮ್​ ಗೆದ್ದು ಪಂದ್ಯವನ್ನು ಜೀವಂತವಿರಿಸಿದರು. ಈ ಗೇಮ್​ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. 8-6 ಮುನ್ನಡೆ ಸಾಧಿಸಿದ್ದ ಮಣಿಕಾ ಇನ್ನೇನು ಗೆಲುವು ಸಾಧಿಸುತ್ತಾರೆ ಎನ್ನುವಷ್ಟರಲ್ಲಿ ಹಿರಾನೋ ಆಕ್ರಮಣಕಾರಿ ಆಟದ ಮೂಲಕ ಅಂಕ ಗಳಿಸಿ ತೀವ್ರ ಪೈಪೋಟಿ ನೀಡಿದರು. 2 ಬಾರಿ ಅಂಕಗಳು ಟೈಗೊಂಡಿತು. ಅಂತಿಮವಾಗಿ ಮಣಿಕಾ ಯಶಸ್ಸು ಸಾಧಿಸಿದರು.

ಇದನ್ನೂ ಓದಿ Paris Olympics: ಒಲಿಂಪಿಕ್ಸ್​ನಲ್ಲಿ ನಾಳೆ ಭಾರತದ ಸ್ಪರ್ಧೆಗಳ ವೇಳಾಪಟ್ಟಿ ಹೀಗಿದೆ; 4 ಪದಕ ನಿರೀಕ್ಷೆ!

ನಾಲ್ಕನೇ ಗೇಮ್​ ಕೂಡ ಅತ್ಯಂತ ರೋಚಕವಾಗಿ ಸಾಗಿತು. ಉಭಯ ಆಟಗಾರ್ತಿಯರು ಅಂಕ ಗಳಿಕೆಗಾಗಿ ಹಾವು ಏಣಿ ಆಟದಂತೆ ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಒಮ್ಮೆ ಮಣಿಕಾ ಮುನ್ನಡೆ ಸಾಧಿದರೆ, ಮತ್ತೊಮ್ಮೆ ಹಿರಾನೋ ಮುನ್ನಡೆ ಸಾಧಿಸುತ್ತಿದ್ದರು. ಅಂತಿಮವಾಗಿ ಜಪಾನ್​ ಆಟಗಾರ್ತಿಯ ಕೈ ಮೇಲಾಯಿತು. ಅಂತಿಮ 5ನೇ ಗೇಮ್​ನಲ್ಲಿಯೂ ಜಪಾನ್​ ಆಟಗಾರ್ತಿ ಪ್ರಾಬಲ್ಯ ಸಾಧಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದರು.

ಭಾರತದ ಅಗ್ರ ಶ್ರೇಯಾಂಕದ ಟೇಬಲ್‌ ಟೆನಿಸ್‌ ಆಟಗಾರ್ತಿ ಶ್ರೀಜಾ ಅಕುಲಾ ಮಾತ್ರ ಟೆನಿಸ್​ನಲ್ಲಿ ಭಾರತಕ್ಕೆ ಪದಕ ಭರವಸೆಯಾಗಿ ಉಳಿದುಕೊಂಡಿದ್ದಾರೆ. ಇಂದು(ಬುಧವಾರ) ನಡೆದ ಮಹಿಳೆಯರ ಸಿಂಗಲ್ಸ್‌ 32ರ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಝೆಂಗ್ ಜಿಯಾನ್ ಅವರನ್ನು 4-2 ಅಂತರದಿಂದ ಸೋಲಿಸಿ 16 ರ ರೌಂಡ್‌ಗೆ ಪ್ರವೇಶಿಸಿದ್ದಾರೆ. ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಈ ಪಂದ್ಯದಲ್ಲಿ ಶ್ರೀಜಾ ಅಕುಲಾ ಸಿಂಗಾಪುರದ ಜಿಯಾನ್ ಝೆಂಗ್ ಅವರನ್ನು 9-11, 12-10, 11-4, 11-5, 10-12, 12-10 ಅಂಕಗಳಿಂದ ಹಿಮ್ಮೆಟಿಸಿದರು.

ಸೋಲಿನ ಬಳಿಕ ಕಮ್​ಬ್ಯಾಕ್​


ಮೊದಲ ಸೆಟ್‌ನಲ್ಲಿ ಶ್ರೀಜಾ ಸೋಲು ಕಂಡರು. ಆದರೆ, ದ್ವಿತೀಯ ಸೆಟ್​ನಲ್ಲಿ ತೀವ್ರ ಪೈಪೋಟಿ ನಡೆಸಿ ಗೆಲುವಿನ ಕಮ್​ಬ್ಯಾಕ್​ ಮಾಡುವ ಮೂಲಕ 1-1 ಸಮಬಲ ಸಾಧಿಸಿದರು. ಗೆಲುವಿನ ಅಂತರ 12-10. ಮೂರನೇ ಸೆಟ್​ನಲ್ಲಿ ಮತ್ತು ನಾಲ್ಕನೇ ಸೆಟ್​ನಲ್ಲಿ ಅತ್ಯಂತ ಜೋಶ್​ನಿಂದ ಆಡಿದ ಶ್ರೀಜಾ ಬರ್ಜರಿ ಗೆಲುವು ಸಾಧಿಸಿ ಭಾರೀ ಮುನ್ನಡೆ ಸಾಧಿಸಿದರು. 5ನೇ ಸೆಟ್​ನಲ್ಲಿ ತೀವ್ರ ಹೋರಾಟ ನಡೆಸಿದರೂ ಸ್ವಲ್ಪ ಸಮಸ್ಯೆ ಎದುರಿಸಿ ಸಣ್ಣ ಅಂತರದಿಂದ ಮತ್ತೆ ಸೋಲು ಕಂಡರು. ಅಂತಿಮ ಹಾಗೂ ನಿರ್ಣಾಯಕ ಸೆಟ್​ನಲ್ಲಿ ಕಠಿಣ ಪೈಪೋಟಿ ಎದುರಾದರೂ ಕೂಡ ಇದನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿ ಗೆಲುವಿನ ನಗೆ ಬೀರಿದರು. ಗೆಲುವಿನ ಅಂತರ 9-11, 12-10, 11-4, 11-5, 10-12, 12-10.

Continue Reading

ಕ್ರೀಡೆ

Nino Salukvadze: ತಂದೆಯ ಆಸೆಯಂತೆ 10ನೇ ಒಲಿಂಪಿಕ್ಸ್ ಆಡಿ ದಾಖಲೆ ಬರೆದ ಜಾರ್ಜಿಯಾದ ಮಹಿಳಾ ಶೂಟರ್‌

Nino Salukvadze: 55 ವರ್ಷದ ಸಲುಕ್‌ವಾಡ್ಜೆ ಕಳೆದ ಟೋಕಿಯೋ ಒಲಿಂಪಿಕ್ಸ್​ನಲ್ಲಿಯೇ ತಮ್ಮ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು. ಆದರೆ, ತಂದೆ ನಿಧನರಾಗುವುದಕ್ಕೂ ಮುನ್ನ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಡುವಂತೆ ಪ್ರೇರಿಪಿಸಿದ್ದರು. ಹೀಗಾಗಿ ಅವರು ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಆಡಿದ್ದರು.

VISTARANEWS.COM


on

Nino Salukvadze
Koo

ಪ್ಯಾರಿಸ್‌: ಜಾರ್ಜಿಯಾದ ಶೂಟರ್‌ ನಿನೊ ಸಲುಕ್‌ವಾಡ್ಜೆ(Nino Salukvadze) ಅವರು ಒಲಿಂಪಿಕ್ಸ್​(Olympic Games) ಇತಿಹಾಸದಲ್ಲೇ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಬರೋಬ್ಬರಿ 10 ಒಲಿಂಪಿಕ್ಸ್‌ ಟೂರ್ನಿಗಳಲ್ಲಿ ಭಾಗವಹಿಸುವ ತಮ್ಮ ತಂದೆಯ ಆಸೆಯನ್ನು ಪೂರೈಸಿದ್ದಾರೆ. ತಮ್ಮ ಹತ್ತು ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ತಲಾ ಒಂದೊಂದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಚೊಚ್ಚಲ ಒಲಿಂಪಿಕ್ಸ್​ನಲ್ಲಿ ಅವಳಿ ಪದಕ


10 ಒಲಿಂಪಿಕ್ಸ್​ನಲ್ಲಿ ಪಾಲ್ಗೊಂಡ ಮೊದಲ ಮಹಿಳಾ ಕ್ರೀಡಾಪಟು ಎಂಬ ಕೀರ್ತಿಗೆ ಪಾತ್ರರಾಗಿರುವ ಸಲುಕ್‌ವಾಡ್ಜೆ, ತಮ್ಮ ಚೊಚ್ಚಲ ಒಲಿಂಪಿಕ್ಸ್​ ಪ್ರಯತ್ನದಲ್ಲೇ ಅವಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ದಕ್ಷಿಣ ಕೊರಿಯಾದಲ್ಲಿ 1988ರಲ್ಲಿ ನಡೆದ ಒಲಿಂಪಿಕ್ಸ್‌ ಟೂರ್ನಿಯಲ್ಲಿ 10 ಮೀಟರ್‌ ಹಾಗೂ 25 ಮೀಟರ್‌ ಶೂಟಿಂಗ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದಿದ್ದರು. ಇದಾಗಿ 20 ವರ್ಷಗಳ ಬಳಿಕ 2008ರಲ್ಲಿ ನಡೆದಿದ್ದ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಬಾರಿ ಪ್ಯಾರಿಸ್​ನಲ್ಲಿ 25 ಮೀಟರ್‌ ಶೂಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಅವರು ಫೈನಲ್‌ ತಲುಪುವಲ್ಲಿ ವಿಫಲರಾದರು. 1988ರಲ್ಲಿ ಅವರು ಪದಕ ಗೆದ್ದದ್ದು ಯುಎಸ್‌ಎಸ್‌ಆರ್‌ (ರಷ್ಯಾ ಒಕ್ಕೂಟ) ಪ್ರತಿನಿಧಿಯಾಗಿ. ಜಾರ್ಜಿಯಾ ದೇಶವನ್ನು ಪ್ರತಿನಿಧಿಸಿದ್ದು ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಹೀಗಾಗಿ ಚಿನ್ನ ಮತ್ತು ಬೆಳ್ಳಿ ರಷ್ಯಾ ಒಕ್ಕೂಟಕ್ಕೆ ಸೇರಿದರೆ, ಕಂಚು ಜಾರ್ಜಿಯಾಗೆ ಸೇರಿದ್ದಾಗಿದೆ.

ತಂದೆಯ ಆಸೆ ನೆರವೇರಿಸಲು ಸ್ಪರ್ಧೆ


55 ವರ್ಷದ ಸಲುಕ್‌ವಾಡ್ಜೆ ಕಳೆದ ಟೋಕಿಯೋ ಒಲಿಂಪಿಕ್ಸ್​ನಲ್ಲಿಯೇ ತಮ್ಮ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು. ಆದರೆ, ತಂದೆ ನಿಧನರಾಗುವುದಕ್ಕೂ ಮುನ್ನ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಡುವಂತೆ ಪ್ರೇರಿಪಿಸಿದ್ದರು. ಇದು ಅವರ ಕೊನೆಯ ಆಸೆಯಾಗಿತ್ತು. ಹೀಗಾಗಿ ಈ ಟೂರ್ನಿಯಲ್ಲಿ ಭಾಗವಹಿಸುವ ಮೂಲಕ ಅವರ ಆಸೆಯನ್ನು ಪೂರೈಸಿದೆ ಎಂದು ನಿನೊ ಸಲುಕ್‌ವಾಡ್ಜೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಕಳೆದ ಟೋಕಿಯೋದಲ್ಲಿಯೂ ಅವರಿಗೆ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅಚ್ಚರಿ ಎಂದರೆ, ನಿನೊ ಸಲುಕ್‌ವಾಡ್ಜೆ ಅವರಿಗೆ ತಮ್ಮ ತಂದೆಯೇ ಕೋಚ್‌ ಆಗಿದ್ದರು. ಈಕ್ವೆಸ್ಟೀಯನ್‌ ಆಟಗಾರ ಇಯಾನ್‌ ಮಿಲ್ಲರ್‌ 10 ಒಲಿಂಪಿಕ್ಸ್‌ ಟೂರ್ನಿಗಳಲ್ಲಿ ಭಾಗವಹಿಸಿದ್ದ ಮೊದಲ ಕ್ರೀಡಾಪಟು ಎನಿಸಿದ್ದರು. ಇದೀಗ ಈ ದಾಖಲೆಯನ್ನು ಸಲುಕ್‌ವಾಡ್ಜೆ ಸರಿಗಟ್ಟಿದ್ದಾರೆ.

ನಿವೃತ್ತಿ ಘೋಷಿಸಿದ ಶಟ್ಲರ್​ ಅಶ್ವಿನಿ ಪೊನ್ನಪ್ಪ


ಪ್ಯಾರಿಸ್: ಕನ್ನಡತಿ, ಭಾರತದ ಹಿರಿಯ ಬ್ಯಾಡ್ಮಿಂಟನ್(Indian Badminton Star Ashwini Ponnappa) ಆಟಗಾರ್ತಿ ಅಶ್ವಿನಿ ಪೊನ್ನಪ್ಪ(Ashwini Ponnappa) ಅವರು ಒಲಿಂಪಿಕ್ಸ್​ಗೆ ವಿದಾಯ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಪೊನ್ನಪ್ಪ, ‘ಇದು ನನ್ನ ಕೊನೆಯ ಒಲಿಂಪಿಕ್ಸ್‌’ ಎಂದು ಹೇಳಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಅವರೊಂದಿಗೆ ಡಬಲ್ಸ್‌ನಲ್ಲಿ ಮೂರು ಸತತ ಸೋಲು ಅನುಭವಿಸಿ ಪರಾಭವಗೊಂಡ ಬೆನ್ನಲ್ಲೇ ಅವರು ತಮ್ಮ ನಿವೃತ್ತಿ(Ashwini Ponnappa Announces Retirement) ಪ್ರಕಟಿಸಿದ್ದಾರೆ.

ಮಂಗಳವಾರ ನಡೆದಿದ್ದ ‘ಸಿ’ ಗುಂಪಿನ ಪಂದ್ಯದಲ್ಲಿ ಅಶ್ವಿನಿ ಹಾಗೂ ತನಿಶಾ ಜೋಡಿಯು ಆಸ್ಟ್ರೇಲಿಯಾದ ಸೆತ್ಯಾನಾ ಮಾಪಸಾ ಹಾಗೂ ಏಂಜೆಲಾ ಯು ಜೋಡಿ ವಿರುದ್ಧ 15-21, 10-21 ನೇರ ಸೇಟ್‌ನಲ್ಲಿ ಸೋಲು ಕಂಡು 2024ರ ಒಲಿಂಪಿಕ್ಸ್‌ನಿಂದ ಈ ಜೋಡಿ ಹೊರಬಿದ್ದಿತು. ಈ ಸೋಲಿನ ಬಳಿಕ 34 ವರ್ಷದ ಅಶ್ವಿನಿ ಪೊನ್ನಪ್ಪ 2028ರಲ್ಲಿ ಲಾಸ್‌ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

Continue Reading
Advertisement
Kabini Dam
ಕರ್ನಾಟಕ1 hour ago

ಮೈಸೂರು: ಕಬಿನಿ ಜಲಾಶಯದ ಬಲದಂಡೆ ನಾಲೆ ಬಳಿ ಭಾರಿ ಬಿರುಕು, ನಾಲೆ ಒಡೆಯುವ ಭೀತಿಯಲ್ಲಿ ಜನ

Shiradi Ghat
ಕರ್ನಾಟಕ1 hour ago

Shiradi Ghat: ಗುಡ್ಡ ಕುಸಿತ; ಶಿರಾಡಿ ಘಾಟ್‌ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್‌, ಬದಲಿ ಮಾರ್ಗ ಸೂಚನೆ

Road Rage
ದೇಶ2 hours ago

Road Rage: ಸ್ಕೂಟಿಗೆ ಬೈಕ್‌ ಟಚ್‌ ಆಗಿದ್ದಕ್ಕೆ ಜಗಳ; ಗುಂಡು ಹಾರಿಸಿ 2 ಮಕ್ಕಳ ತಾಯಿಯನ್ನು ಕೊಂದ ವ್ಯಕ್ತಿ

Rashid khan 600 wickets
ಕ್ರೀಡೆ2 hours ago

Rashid khan 600 wickets: ಟಿ20 ಕ್ರಿಕೆಟ್​ನಲ್ಲಿ 600 ವಿಕೆಟ್​ ಪೂರ್ತಿಗೊಳಿಸಿದ ರಶೀದ್​ ಖಾನ್​; ಮೊದಲ ಸ್ಪಿನ್ನರ್

Viral video
ವೈರಲ್ ನ್ಯೂಸ್2 hours ago

Viral Video: ಕೇಶ ವಿನ್ಯಾಸಕ್ಕೆ ಸಲಾಕೆ ಬಳಸಿದ ಕ್ಷೌರಿಕ!

Virat Kohli
ಕ್ರೀಡೆ3 hours ago

Virat Kohli: ಗಂಭೀರ್​ ಮಾರ್ಗದರ್ಶನದಂತೆ ಅತ್ಯಂತ ಜೋಶ್​ನಿಂದ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಕೊಹ್ಲಿ; ಫೋಟೊ ವೈರಲ್​

Infosys
ಕರ್ನಾಟಕ3 hours ago

Infosys: ಇನ್ಫೋಸಿಸ್‌ನಿಂದ 32 ಸಾವಿರ ಕೋಟಿ ರೂ. ತೆರಿಗೆ ವಂಚನೆ; ಜಿಎಸ್‌ಟಿ ನೋಟಿಸ್‌ ರವಾನೆ

Paris Olympics
ಕ್ರೀಡೆ3 hours ago

Paris Olympics: ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಮುಗ್ಗರಿಸಿದ ಮಣಿಕಾ ಬಾತ್ರಾ

Indians spend 15 billion hours waiting for customer service time in 2023 ServiceNow information
ದೇಶ4 hours ago

Servicenow: ಭಾರತೀಯರು ಗ್ರಾಹಕ ಸೇವೆ ಪಡೆಯಲು ವರ್ಷದಲ್ಲಿ 15 ಶತಕೋಟಿ ಗಂಟೆ ಕಳೆಯುತ್ತಾರೆ! ಅಧ್ಯಯನ ವರದಿ

Former MLA Rupali Nayka appeals to DC to resolve various issues under Karwara Ankola Assembly Constituency
ಉತ್ತರ ಕನ್ನಡ4 hours ago

Uttara Kannada News: ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕರಿಂದ ಡಿಸಿಗೆ ಮನವಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ4 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌