Paris Olympics: ಇಂದು ಲಕ್ಷ್ಯ ಸೇನ್‌-ಪ್ರಣಯ್ ಮಧ್ಯೆ ಪ್ರೀ ಕ್ವಾರ್ಟರ್​ ಮುಖಾಮುಖಿ; ಭಾರತಕ್ಕೆ ಒಂದು ಪದಕ ನಷ್ಟ - Vistara News

ಕ್ರೀಡೆ

Paris Olympics: ಇಂದು ಲಕ್ಷ್ಯ ಸೇನ್‌-ಪ್ರಣಯ್ ಮಧ್ಯೆ ಪ್ರೀ ಕ್ವಾರ್ಟರ್​ ಮುಖಾಮುಖಿ; ಭಾರತಕ್ಕೆ ಒಂದು ಪದಕ ನಷ್ಟ

Paris Olympics: ಲಕ್ಷ್ಯ ಸೇನ್​ ಮತ್ತು ಎಚ್.ಎಸ್.ಪ್ರಣಯ್ ಅವರು ಇದುವರೆಗೆ ಒಟ್ಟು ಏಳು ಬಾರಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಸೇನ್​ 4 ಪಂದ್ಯ ಗೆದ್ದರೆ, ಪ್ರಣಯ್​ 3 ಪಂದ್ಯ ಗೆದ್ದಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್​: ಒಲಿಂಪಿಕ್ಸ್ ಕೂಟದ(Paris Olympics) ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ‘ಆಲ್‌ ಇಂಡಿಯನ್‌’ ಹೋರಾಟವೊಂದಕ್ಕೆ ಅಣಿಯಾಗಿದೆ. ಇಂದು(ಗುರುವಾರ) ನಡೆಯುವ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಲಕ್ಷ್ಯ ಸೇನ್‌(Lakshya Sen) ಮತ್ತು ಎಚ್.ಎಸ್.ಪ್ರಣಯ್(HS Prannoy) ಮುಖಾಮುಖಿಯಾಗಲಿದ್ದಾರೆ. ಉಭಯ ಆಟಗಾರರ ಮುಖಾಮುಖಿಯಾದ ಕಾರಣ ಪುರುಷರ ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಒಂದು ಪದಕ ನಿರೀಕ್ಷೆ ಹುಸಿಯಾಗಿದೆ.

ಬುಧವಾರ ತಡರಾತ್ರಿ ನಡೆದಿದ್ದ ಗ್ರೂಪ್​ ‘ಕೆ’ ವಿಭಾಗದ ಅಂತಿಮ ಲೀಗ್​ ಪಂದ್ಯದಲ್ಲಿ ಪ್ರಣಯ್​ ಅವರು ವಿಯೆಟ್ನಾಂನ ಡ್ಯೂಕ್ ಫತ್ ಲೇ ಅವರನ್ನು ಮೂರು ಸೆಟ್​ಗಳ ತೀವ್ರ ಹೋರಾಟದಲ್ಲಿ 16-21, 21-11,21-12 ಅಂತರದಿಂದ ಮಣಿಸಿ 16ರ ಹಂತಕ್ಕೆ ಮುನ್ನಡೆದಿದ್ದರು. ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಜೋನಾಥನ್ ಕ್ರಿಸ್ಟಿ ವಿರುದ್ಧ ಗೆದ್ದು ಪ್ರೀ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು.

ಮುಖಾಮುಖಿ


ಲಕ್ಷ್ಯ ಸೇನ್​ ಮತ್ತು ಎಚ್.ಎಸ್.ಪ್ರಣಯ್ ಅವರು ಇದುವರೆಗೆ ಒಟ್ಟು ಏಳು ಬಾರಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಸೇನ್​ 4 ಪಂದ್ಯ ಗೆದ್ದರೆ, ಪ್ರಣಯ್​ 3 ಪಂದ್ಯ ಗೆದ್ದಿದ್ದಾರೆ. ಕಳೆದ ವರ್ಷ(2023) ಜನವರಿಯಲ್ಲಿ ನಡೆದಿದ್ದ ಇಂಡಿಯಾ ಓಪನ್‌ನಲ್ಲಿ ಉಭಯ ಆಟಗಾರರು ಕೊನೆಯ ಬಾರಿಗೆ ಎದುರಾಗಿದ್ದರು. ಈ ಪಂದ್ಯದಲ್ಲಿ ಲಕ್ಷ್ಯ 21-14, 21-15 ನೇರ ಗೇಮ್​ಗಳ ಅಂತರದಿಂದ ಗೆದ್ದು ಬೀಗಿದ್ದರು.

ಭಾರತದ ತಾರಾ ಪುರುಷರ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಕೂಡ ಇಂದು ನಡೆಯುವ ಡಬಲ್ಸ್​ ವಿಭಾಗದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮಲೇಷ್ಯಾದ ಆರನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಗೆದ್ದರೆ ಐತಿಹಾಸಿಕ ಪದಕವೊಂದು ಖಾತ್ರಿಯಾಗಲಿದೆ.

ಇದನ್ನೂ ಓದಿ Paris Olympics: ನೇರಳೆ ಟ್ರ್ಯಾಕ್​ನಲ್ಲಿ ಕಮಾಲ್​ ಮಾಡಲು ಸಜ್ಜಾದ ಅಥ್ಲೀಟ್​ಗಳು

ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಗೆಲುವು


ಭಾರತದ ಬಾಕ್ಸರ್‌ ನಿಶಾಂತ್‌ ದೇವ್‌(Nishant Dev) ಅವರು ಪ್ಯಾರಿಸ್‌ ಒಲಿಂಪಿಕ್ಸ್​ನಲ್ಲಿ(Paris Olympics Boxing) ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ. ಇನ್ನೊಂದು ಗೆಲುವು ಸಾಧಿಸಿದರೆ ಪದಕವೊಂದು ಖಾತ್ರಿಯಾಗಲಿದೆ. ಬುಧವಾರ ತಡರಾತ್ರಿ ನಡೆದ ಪ್ರೀ-ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟರು. ಮುಂದಿನ ಪಂದ್ಯದಲ್ಲಿ ನಿಶಾಂತ್‌, ಮೊಜಾಂಬಿಕ್‌ನ ಟಿ ಮುಕ್ಸಾಂಗಾ ಮತ್ತು ಮೆಕ್ಸಿಕೊದ ಎಂಎ ವರ್ಡೆ ಅಲ್ವಾರೆಜ್ ನಡುವಣ ವಿಜೇತರನ್ನು ಎದುರಿಸಲಿದೆ.

ತೀವ್ರ ಪೈಪೋಟಿಯಿಂದ ಸಾಗಿದ ಈ ಪಂದ್ಯದಲ್ಲು ಉಭಯ ಬಾಕ್ಸರ್​ಗಳು ಬಲಿಷ್ಠ ಪಂಚ್​ಗಳ ಮೂಲಕ ಗೆಲುವಿಗಾಗಿ ಹೋರಾಟ ನಡೆಸಿದರು. ಕೊನೆಗೂ ನಿಶಾಂತ್​ ದೇವ್​ 7ನೇ ಶ್ರೇಯಾಂಕದ ಆಟಗಾರರನ್ನು ಕೇವಲ 1(3-2) ಅಂಕದ ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದರು. ಸದ್ಯ ಬಾಕ್ಸಿಂಗ್​ನಲ್ಲಿ ಭಾರತ 2 ಪದಕ ನಿರೀಕ್ಷೆ ಮಾಡಿದೆ. ಇದಕ್ಕೂ ಮುನ್ನ ನಡೆದಿದ್ದ 75 ಕೆ.ಜಿ ಮಹಿಳಾ ವಿಭಾಗದ 16ರ ಸುತ್ತಿನ ಬಾಕ್ಸಿಂಗ್​ ಹೋರಾಟದಲ್ಲಿ ಟೋಕಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌(Lovlina Borgohain) ಅವರು ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್‌ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಲವ್ಲೀನಾ ಅವರು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympic: ಐತಿಹಾಸಿಕ ಪದಕ ಗೆದ್ದ ಸ್ವಪ್ನಿಲ್‌ ಕುಸಾಲೆಗೆ ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ

Paris Olympic: ಮಹಾರಾಷ್ಟ್ರದ ಕೊಲ್ಹಾಪುರದ ಕಂಬಳವಾಡಿ ಗ್ರಾಮದ 28 ವರ್ಷದ ಸ್ವಪ್ನಿಲ್ ಕುಶಲೆ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್​ ಅವರ ಅಪಟ್ಟ ಅಭಿಮಾನಿ

VISTARANEWS.COM


on

Paris Olympic
Koo

ಪ್ಯಾರಿಸ್​: ಪ್ಯಾರಿಸ್​ ಒಲಿಂಪಿಕ್ಸ್(Paris Olympic)​ 50 ಮೀಟರ್‌ ರೈಫಲ್ 3 ಪೊಸಿಷನ್‌ನಲ್ಲಿ ಕಂಚಿನ ಪದಕ ಗೆದ್ದು ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎನ್ನುವ ಇತಿಹಾಸ ನಿರ್ಮಿಸಿದ ಶೂಟರ್​ ಸ್ವಪ್ನಿಲ್‌ ಕುಸಾಲೆ(Swapnil Kusale) ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi Murmu), ಪ್ರಧಾನಿ ನರೇಂದ್ರ ಮೋದಿ(Narendra Modi) ಸೇರಿ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಗುರುವಾರ ನಡೆದ 50 ಮೀ. ರೈಫ‌ಲ್‌ 3 ಪೊಸಿಶನ್‌ ಫೈನಲ್​ ಪಂದ್ಯದಲ್ಲಿ ಸ್ವಪ್ನಿಲ್ ಅವರು 451.4 ಅಂಕ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸ್ವಪ್ನಿಲ್‌ ಫೈನಲ್​ ಪಂದ್ಯದ ಪ್ರೋನ್‌ನಲ್ಲಿ 156.8, ನೀಲಿಂಗ್‌ನಲ್ಲಿ 153.3 ಮತ್ತು ಸ್ಟ್ಯಾಂಡಿಂಗ್‌ನಲ್ಲಿ 195 ಅಂಕಗಳಿಸಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ್ಕಕೆ ಕೊರಳೊಡ್ಡಿದರು. 463.6 ಅಂಕ ಗಳಿಸಿದ ಚೀನಾದ ಲಿಯು ಯುಕುನ್ ಚಿನ್ನ ಮತ್ತು ಉಕ್ರೇನ್​ನ ಕುಲಿಶ್ ಸೆರ್ಹಿ(461.3) ಬೆಳ್ಳಿ ಪದಕ ಗೆದ್ದರು.

“ಸ್ವಪ್ನಿಲ್ ಕುಸಾಲೆಯವರ ಅಸಾಧಾರಣ ಪ್ರದರ್ಶನ!. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಕಂಚಿನ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಅವರು ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಕೂಡ. ನಿಮ್ಮ ಈ ಸಾಧನೆ ಪ್ರತಿಯೊಬ್ಬ ಭಾರತೀಯನು ಸಂತೋಷಪಡುವಂತೆ ಮಾಡಿದೆ” ಎಂದು ಮೋದಿ ಟ್ವೀಟ್​ ಮೂಲಕ ಅಭಿನಂದಿಸಿದ್ದಾರೆ.

ಇದನ್ನೂ ಓದಿ Paris Olympics: ಒಲಿಂಪಿಕ್ಸ್​ ಅಭಿಯಾನ ಮುಗಿಸಿದ ಬಾಕ್ಸರ್​ ನಿಖತ್ ಜರೀನ್; ಪ್ರೀ ಕ್ವಾರ್ಟರ್​ನಲ್ಲಿ ಸೋಲು

“ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಸ್ವಪ್ನಿಲ್ ಕುಸಾಲೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!. ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಭಾರತ ಮೂರು ಪದಕ ಗೆದ್ದಿರುವುದು ಇದೇ ಮೊದಲು. ಇಡೀ ಶೂಟಿಂಗ್ ತಂಡ ಭಾರತಕ್ಕೆ ಹೆಮ್ಮೆ ತಂದಿದೆ. ಮುಂಬರುವ ಈವೆಂಟ್‌ಗಳಿಗಾಗಿ ನಾನು ನಮ್ಮ ಎಲ್ಲಾ ಆಟಗಾರರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಸ್ವಪ್ನಿಲ್ ಕುಸಾಲೆ ಅವರು ಭವಿಷ್ಯದಲ್ಲಿ ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲಲಿ ಎಂದು ಹಾರೈಸುತ್ತೇನೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್​ ಮಾಡಿದ್ದಾರೆ.

ರೈಲ್ವೆ ಟಿಕೆಟ್ ಕಲೆಕ್ಟರ್


ಮಹಾರಾಷ್ಟ್ರದ ಕೊಲ್ಹಾಪುರದ ಕಂಬಳವಾಡಿ ಗ್ರಾಮದ 28 ವರ್ಷದ ಸ್ವಪ್ನಿಲ್ ಕುಶಲೆ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್​ ಅವರ ಅಪಟ್ಟ ಅಭಿಮಾನಿ. ಜತೆಗೆ ಧೋನಿಯಂತೆಯೇ ಇವರು ಕೂಡ ರೇಲ್ವೆ ಟಿಕೆಟ್ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಧೋನಿಯವರ ಬಯೋಪಿಕ್ ಸಿನೆಮಾವನ್ನು ಪದೇ ಪದೇ ವೀಕ್ಷಿಸಿದ ಬಳಿಕ ಸ್ವಪ್ನಿಲ್ ಕೂಡ ಪೂರ್ಣಪ್ರಮಾಣದಲ್ಲಿ ಶೂಟಿಂಗ್‌ನಲ್ಲಿ ತೊಡಗಿಕೊಂಡರು. ಧೋನಿಯವರಂತೆ ಶಾಂತ ಸ್ವಾಭಾವದ ಈ ಶೂಟರ್​ ಇದೀಗ ಒಲಿಂಪಿಕ್ಸ್‌ ಪದಕವೊಂದನ್ನು ಗೆದ್ದು ಇತಿಹಾಸದ ಪುಟ ಸೇರಿದ್ದಾರೆ. 2015ರ ಕುವೈತ್​ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ ಜೂನಿಯರ್‌ ವಿಭಾಗದಲ್ಲಿ ಚಿನ್ನ, 59ನೇ ಹಾಗೂ 61ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. 

Continue Reading

ಪ್ರಮುಖ ಸುದ್ದಿ

MS Dhoni : ಸಿಎಸ್​​ಕೆಗೆ ನ್ಯಾಯ ಸಲ್ಲಿಸುವೆ; ಐಪಿಎಲ್ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ ಎಂಎಸ್​ ಧೋನಿ

MS Dhoni :

VISTARANEWS.COM


on

MS Dhoni
Koo

ಬೆಂಗಳೂರು: ಭಾರತದ ಮಾಜಿ ನಾಯಕ ಮತ್ತು ಸಿಎಸ್ಕೆ ಸ್ಟಾರ್ ಎಂಎಸ್ ಧೋನಿ ಇತ್ತೀಚೆಗೆ ನಡೆದ ನಡೆದ ಕಾರ್ಯಕ್ರಮವೊಂದರಲ್ಲಿ ಐಪಿಎಲ್​ನಿಂದ​​ ನಿವೃತ್ತಿಯಾಗುವ ಕುರಿತು ಮಾಹಿತಿ ನೀಡಿದ್ದಾರೆ. ಅವರು ಹೇಳಿರುವ ಪ್ರಕಾರ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಸಂಭಾವ್ಯ ನಿವೃತ್ತಿಯ ಬಗ್ಗೆ ಇನ್ನೂ ಯೋಚಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ತಮ್ಮ ನಿವೃತ್ತಿ ನಿರ್ಧಾರವು ಅಂತಿಮವಾಗಿ ಸಿಎಸ್​ಕೆ ದೊಡ್ಡ ಪ್ರಯೋಜನಕಾರಿ ಎಂದು ಅವರು ಹೇಳಿದ್ದಾರೆ. ಸಿಎಸ್​ಕೆ ತಮ್ಮ ಪ್ರೀತಿಯ ಫ್ರಾಂಚೈಸಿ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿದ್ದಾರೆ. ಆದರೆ ಐಪಿಎಲ್​ನಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ನಿಯಮವು ಅವರನ್ನು ಫ್ರಾಂಚೈಸಿಯಲ್ಲಿ ಉಳಿಸಿಕೊಳ್ಳುವುದಕ್ಕೆ ಸಮಸ್ಯೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಅವರ ನಿವೃತ್ತಿ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿವೆ. ಧೋನಿ ಫ್ರಾಂಚೈಸಿಯ ಪ್ರಮುಖ ಭಾಗವಾಗಿದ್ದು ಮತ್ತು ಐದು ಐಪಿಎಲ್ ಪ್ರಶಸ್ತಿಗಳ ದಾಖಲೆಗೆ ತಂಡವನ್ನು ಮುನ್ನಡೆಸಿದ್ದಾರೆ.

ಐಪಿಎಲ್ 2024 ಕ್ಕೆ ಮುಂಚಿತವಾಗಿ ಸಿಎಸ್​ಕೆ ನಾಯಕತ್ವದಿಂದ ಕೆಳಗಿಳಿದು ಋತುರಾಜ್ ಗಾಯಕ್ವಾಡ್​ಗೆ ಹೊಣೆಗಾರಿಕೆ ಹಸ್ತಾಂತರಿಸಿದಾಗಿನಿಂದ ಧೋನಿ ಅವರ ನಿವೃತ್ತಿಯ ವಿಷಯವು ಚರ್ಚೆಯಲ್ಲಿದೆ. 2023 ರಲ್ಲಿ ಸಿಎಸ್​ಕೆ ತನ್ನ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ, ಭಾರತೀಯ ಕ್ರಿಕೆಟ್ ಅಭಿಮಾನಿಗಳು 2024 ರ ಋತುವು ಎಂಎಸ್ ಧೋನಿ ಅವರ ಕೊನೆಯ ಸೀಸನ್ ಎಂದು ನಿರೀಕ್ಷಿಸಿದ್ದರು. ಆದಾಗ್ಯೂ, ಧೋನಿ ತಮ್ಮ ಸಂಭಾವ್ಯ ನಿವೃತ್ತಿ ಬಗ್ಗೆ ಯಾವುದೇ ಸ್ಪಷ್ಟ ವಿವರಗಳನ್ನು ಬಹಿರಂಗಪಡಿಸಿಲ್ಲ. 2025ರಲ್ಲಿ ಮತ್ತೊಂದು ಬಾರಿ ಅವರು ಕಣಕ್ಕೆ ಇಳಿಯುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿವೆ.

“ಐಪಿಎಲ್ ತಂಡಗಳಲ್ಲಿ ಆಟಗಾರರನ್ನು ಉಳಿಸಿಕೊಳ್ಳುವಿಕೆ ನಿಯಮಗಳು ಪ್ರಕಟವಾಗಬೇಕಾಗಿದೆ. ಎಲ್ಲವನ್ನೂ ನಿರ್ಧರಿಸಲು ಫ್ರಾಂಚೈಸಿಗಳು ಮತ್ತು ಮ್ಯಾನೇಜ್ಮೆಂಟ್​ಗೆ ಸಾಕಷ್ಟು ಸಮಯ ಉಳಿದಿದೆ. ಆದ್ದರಿಂದ ವಿವರಗಳು ಸ್ಪಷ್ಟವಾದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸದ್ಯ ನಮ್ಮ ಅಂಗಳದಲ್ಲಿ ಚೆಂಡು ಇಲ್ಲ. ನಿಯಮಗಳನ್ನು ಆಧರಿಸಿ ಎಲ್ಲವೂ ನಡೆಯಲಿದೆ. ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಅಂತಿಮವಾಗಿ ಸಿಎಸ್​ಕೆ ಪರವಾಗಿ ಉತ್ತಮವಾದ ನಿರ್ಧಾರವನ್ನು ನಾನು ತೆಗೆದುಕೊಳ್ಳಬೇಕಾಗುತ್ತದೆ. ಅದುವೇ ಅಂತಿಮ ಗುರಿ” ಎಂದು ಧೋನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Swapnil Kusale : ರೈಲ್ವೆ ಟಿಕೆಟ್​ ಕಲೆಕ್ಟರ್​ ಈಗ ಒಲಿಂಪಿಕ್​ ಹೀರೊ; ಧೋನಿಯಂತೆಯೇ ಸಾಧನೆ ಮಾಡಿ ಕಂಚು ಗೆದ್ದ ಶೂಟರ್​ ಸ್ವಪ್ನಿಲ್ ಕುಸಾಲೆ

ರುತುರಾಜ್ ಅವರ ನಾಯಕತ್ವದಲ್ಲಿ, ಸಿಎಸ್ಕೆ ಐಪಿಎಲ್ 2024 ರ ಪ್ಲೇ-ಆಫ್ಗೆ ಅರ್ಹತೆ ಪಡೆಯಲು ವಿಫಲವಾಯಿತು. 27 ವರ್ಷದ ರುತುರಾಜ್ ಫ್ರಾಂಚೈಸಿಯ ಮೊದಲ ನಾಯಕತ್ವದ ಬಗ್ಗೆ ಯಾವುದೇ ರೀತಿಯ ಪ್ರಶಂಸೆಗಳನ್ನು ಪಡೆಯಲಿಲ್ಲ. . ಪಂದ್ಯಗಳ ಮಧ್ಯದಲ್ಲಿ ಧೋನಿ ರುತುರಾಜ್​ಗೆ ಮಾರ್ಗದರ್ಶನ ನೀಡಿದ ಹಲವಾರು ಸಂದರ್ಭಗಳಿವೆ. ಇದು ರುತುರಾಜ್ ಫ್ರಾಂಚೈಸಿಯ ದೀರ್ಘಕಾಲೀನ ನಾಯಕ ಎಂಬ ವಿವರವನ್ನು ಸ್ಪಷ್ಟವಾಗಿಸಿದೆ.

Continue Reading

ಕ್ರೀಡೆ

Paris Olympics: ಒಲಿಂಪಿಕ್ಸ್​ ಅಭಿಯಾನ ಮುಗಿಸಿದ ಬಾಕ್ಸರ್​ ನಿಖತ್ ಜರೀನ್; ಪ್ರೀ ಕ್ವಾರ್ಟರ್​ನಲ್ಲಿ ಸೋಲು

Paris Olympics: ಮಹಿಳೆಯರ 50 ಕೆಜಿ ಬಾಕ್ಸಿಂಗ್ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ನಿಖತ್ ಜರೀನ್ ಅವರು ಅಗ್ರ ಶ್ರೇಯಾಂಕದ, ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಚೀನಾದ ವು ಯು( Chinese Wu Yu) ವಿರುದ್ಧ 5-0 ಅಂತರದ ಹೀನಾಯ ಸೋಲು ಕಂಡರು.

VISTARANEWS.COM


on

Paris Olympics
Koo

ಪ್ಯಾರಿಸ್​: ಎರಡು ಬಾರಿಯ ವಿಶ್ವ ಚಾಂಪಿಯನ್, ಬಾಕ್ಸರ್​ ನಿಖತ್ ಜರೀನ್(Nikhat Zareen) ಅವರು ಪ್ಯಾರಿಸ್​ ಒಲಿಂಪಿಕ್ಸ್(​Paris Olympics) ಮಹಿಳೆಯರ 50 ಕೆಜಿ ಬಾಕ್ಸಿಂಗ್​(Paris Olympics boxing) ವಿಭಾಗದ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸೋಲು ಕಂಡು ತಮ್ಮ ಅಭಿಯಾನವನ್ನು ಮುಗಿಸಿದ್ದಾರೆ.

ಗುರುವಾರ ನಡೆದ ಮಹಿಳೆಯರ 50 ಕೆಜಿ ಬಾಕ್ಸಿಂಗ್ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ನಿಖತ್ ಜರೀನ್ ಅವರು ಅಗ್ರ ಶ್ರೇಯಾಂಕದ, ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಚೀನಾದ ವು ಯು( Chinese Wu Yu) ವಿರುದ್ಧ 5-0 ಅಂತರದ ಹೀನಾಯ ಸೋಲು ಕಂಡರು. 32ರ ಘಟ್ಟದ ಪಂದ್ಯದಲ್ಲಿ ಜರೀನ್​ ಜರ್ಮನಿಯ ಮ್ಯಾಕ್ಸಿ ಕ್ಯಾರಿನಾ ಕ್ಲೋಟ್ಜರ್ ಅವರನ್ನು 5-0 ಅಂತರದಿಂದ ಮಣಿಸಿ ಅಂತಿಮ 16ರ ಸುತ್ತಿಗೇರಿದ್ದರು. ಆದರೆ, ಈ ಸುತ್ತಿನಲ್ಲಿ ಇದೇ ಪ್ರಾಬಲ್ಯ ಮೆರೆಯುವಲ್ಲಿ ವಿಫಲರಾದರು. ಲವ್ಲಿನಾ ಮಾತ್ರ ಇನ್ನು ಭಾರತದ ಮಹಿಳಾ ಬಾಕ್ಸಿಂಗ್​ ಪದಕ ಭರವಸೆ ಆಗಿದ್ದಾರೆ.

ಬುಧವಾರ ನಡೆದಿದ್ದ 75 ಕೆ.ಜಿ ಮಹಿಳಾ ವಿಭಾಗದ 16ರ ಸುತ್ತಿನ ಬಾಕ್ಸಿಂಗ್​ ಹೋರಾಟದಲ್ಲಿ ಟೋಕಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌(Lovlina Borgohain) ಅವರು ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್‌ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಲವ್ಲೀನಾ ಅವರು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ.

ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ನಿಶಾಂತ್‌ ದೇವ್‌


ಭಾರತದ ಬಾಕ್ಸರ್‌ ನಿಶಾಂತ್‌ ದೇವ್‌(Nishant Dev) ಅವರು ಪ್ಯಾರಿಸ್‌ ಒಲಿಂಪಿಕ್ಸ್​ನಲ್ಲಿ(Paris Olympics Boxing) ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ. ಇನ್ನೊಂದು ಗೆಲುವು ಸಾಧಿಸಿದರೆ ಪದಕವೊಂದು ಖಾತ್ರಿಯಾಗಲಿದೆ. ಬುಧವಾರ ತಡರಾತ್ರಿ ನಡೆದ ಪ್ರೀ-ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟರು. ಮುಂದಿನ ಪಂದ್ಯದಲ್ಲಿ ನಿಶಾಂತ್‌, ಮೊಜಾಂಬಿಕ್‌ನ ಟಿ ಮುಕ್ಸಾಂಗಾ ಮತ್ತು ಮೆಕ್ಸಿಕೊದ ಎಂಎ ವರ್ಡೆ ಅಲ್ವಾರೆಜ್ ನಡುವಣ ವಿಜೇತರನ್ನು ಎದುರಿಸಲಿದೆ.

ಇದನ್ನೂ ಓದಿ Paris Olympics: ಕಂಚಿನ ಪದಕ ಗೆದ್ದ ರೈಲ್ವೆ ಟಿಕೆಟ್ ಕಲೆಕ್ಟರ್ ಸ್ವಪ್ನಿಲ್‌ ಕುಸಾಲೆ

ತೀವ್ರ ಪೈಪೋಟಿಯಿಂದ ಸಾಗಿದ ಈ ಪಂದ್ಯದಲ್ಲು ಉಭಯ ಬಾಕ್ಸರ್​ಗಳು ಬಲಿಷ್ಠ ಪಂಚ್​ಗಳ ಮೂಲಕ ಗೆಲುವಿಗಾಗಿ ಹೋರಾಟ ನಡೆಸಿದರು. ಕೊನೆಗೂ ನಿಶಾಂತ್​ ದೇವ್​ 7ನೇ ಶ್ರೇಯಾಂಕದ ಆಟಗಾರರನ್ನು ಕೇವಲ 1(3-2) ಅಂಕದ ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದರು.

ಕಂಚು ಗೆದ್ದ ಸ್ವಪ್ನಿಲ್‌ ಕುಸಾಲೆ


ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics) ಭಾರತ ಸ್ವಪ್ನಿಲ್‌ ಕುಸಾಲೆ ಪುರುಷರ 50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕ ಸಂಖ್ಯೆ ಮೂರಕ್ಕೇರಿದೆ. ಗುರುವಾರ ನಡೆದ 50 ಮೀ. ರೈಫ‌ಲ್‌ 3 ಪೊಸಿಶನ್‌ ಫೈನಲ್​ ಪಂದ್ಯದಲ್ಲಿ ಸ್ವಪ್ನಿಲ್ ಅವರು 451.4 ಅಂಕ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸ್ವಪ್ನಿಲ್‌ ಫೈನಲ್​ ಪಂದ್ಯದ ಪ್ರೋನ್‌ನಲ್ಲಿ 156.8, ನೀಲಿಂಗ್‌ನಲ್ಲಿ 153.3 ಮತ್ತು ಸ್ಟ್ಯಾಂಡಿಂಗ್‌ನಲ್ಲಿ 195 ಅಂಕಗಳಿಸಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ್ಕಕೆ ಕೊರಳೊಡ್ಡಿದರು. 463.6 ಅಂಕ ಗಳಿಸಿದ ಚೀನಾದ ಲಿಯು ಯುಕುನ್ ಚಿನ್ನ ಮತ್ತು ಉಕ್ರೇನ್​ನ ಕುಲಿಶ್ ಸೆರ್ಹಿ(461.3) ಬೆಳ್ಳಿ ಪದಕ ಗೆದ್ದರು.

Continue Reading

ಪ್ರಮುಖ ಸುದ್ದಿ

Swapnil Kusale : ರೈಲ್ವೆ ಟಿಕೆಟ್​ ಕಲೆಕ್ಟರ್​ ಈಗ ಒಲಿಂಪಿಕ್​ ಹೀರೊ; ಧೋನಿಯಂತೆಯೇ ಸಾಧನೆ ಮಾಡಿ ಕಂಚು ಗೆದ್ದ ಶೂಟರ್​ ಸ್ವಪ್ನಿಲ್ ಕುಸಾಲೆ

Swapnil Kusale :

VISTARANEWS.COM


on

Swapnil Kusale
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024) 50 ಮೀಟರ್ ರೈಫಲ್ಸ್​ ಶೂಟಿಂಗ್ 3 ಪೊಸಿಷನ್ ಸ್ಪರ್ಧೆಯಲ್ಲಿ ಭಾರತದ ಶೂಟರ್​ ಸ್ವಪ್ನಿಲ್ ಕುಸಾಲೆ (Swapnil Kusale ) ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಅವರು ಭಾರತದ ಪದಕಗಳ ಸಂಖ್ಯೆಯನ್ನು 3ಕ್ಕೆ ಏರಿಸಿದ್ದಾರೆ. ಭಾರತೀಯ ಶೂಟಿಂಗ್ ಕ್ಷೇತ್ರ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮೂರು ಶೂಟರ್​ಗಳು ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವುದು. ಸ್ವಪ್ನಿಲ್ ಈಗ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರೊಂದಿಗೆ ಸೇರಿ ಪ್ಯಾರಿಸ್ ಕ್ರೀಡಾಕೂಟದಲ್ಲಿ ತಮ್ಮ ಸಾಧನೆಯನ್ನು ಮಾಡಿದ್ದಾರೆ.

ಅಂದ ಹಾಗೆ ಪದಕ ಗೆದ್ದಿರುವ ಸ್ವಪ್ನಿಲ್​ ಕುಸಾಲೆ ಅವರ ಶೂಟಿಂಗ್​ ಪ್ರಯಾಣವು ಅತ್ಯಂತ ರೋಚಕ ಮತ್ತು ಆಸಕ್ತಿಕಾರಕ. ಹೇಗೆಂದರೆ ಅವರು ಭಾರತ ಕ್ರಿಕೆಟ್​​ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಯಂತೆಯೇ ರೈಲ್ವೆನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದವರು. ಅಲ್ಲಿಂದ ಅವರು ಶೂಟಿಂಗ್ ಕ್ರೀಡೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಇದೀಗ ಒಲಿಂಪಿಕ್ಸ್​ನಲ್ಲಿ ಸಾಧನೆ ಮಾಡಿದ್ದಾರೆ. 28 ವರ್ಷದ ಕುಸಾಲೆ ಅವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿಯಿಂದ ತಾನು ಸ್ಫೂರ್ತಿ ಪಡೆದುಕೊಂಡಿದ್ದೇನೆ ಎಂಬುದನ್ನು ಈ ಹಿಂದೆ ಬಹಿರಂಗಪಡಿಸಿದ್ದರು. ಹೀಗಾಗಿ ಧೋನಿ ಮತ್ತು ಸ್ವಪ್ನಿಲ್ ನಡುವೆ ಸಾಮ್ಯತೆ ಇರುವುದನ್ನು ಕ್ರೀಡಾಭಿಮಾನಿಗಳು ಗುರುತಿಸಿದ್ದಾರೆ.

ಶಾಂತವಾಗಿರುವುದು ಮತ್ತು ತಾಳ್ಮೆಯಿಂದಿರುವುದು ಶೂಟರ್​ಗೆ ಅತ್ಯಂತ ಅವಶ್ಯಕ ಸಂಗತಿ. ಆ ಎರಡು ಗುಣಲಕ್ಷಣಗಳು ಧೋನಿಯ ವ್ಯಕ್ತಿತ್ವದ ಹೆಗ್ಗುರುತು. ಅದನ್ನು ಸ್ವಪ್ನಿಲ್ ಕೂಡ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಕುಸಾಲೆ ಜೀವನವೂ ಧೋನಿಯ ಜೀವನ ಕಥೆಗೆ ಹತ್ತಿರವಾಗಿದೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಸ್ವಪ್ನಿಲ್ ಅವರು ಧೋನಿಯ ಜೀವನ ಕತೆಯಿಂದ ಪ್ರೇರಿತನಾಗಿರುವುದನ್ನು ಹೇಳಿಕೊಂಡಿದ್ದಾರೆ. ಹಿಂದೆ ಹಲವು ಬಾರಿ ಅವರ ಕತೆಯನ್ನು ಓದಿ ತಿಳಿಸುಕೊಂಡಿದ್ದಾರೆ.

ಧೋನಿ ಬ್ಯಾಟಿಂಗ್​ನಲ್ಲಿ ನಿಧಾನಗತಿಯ ಆರಂಭಕ್ಕೆ ಹೆಸರುವಾಸಿ. ಆದರೆ, ಒಂದು ಬಾರಿ ಕ್ರೀಸ್​ನಲ್ಲಿ ಗಟ್ಟಿಯಾಗಿ ತಳವೂರಿದರೆ ರನ್​ ಗಳಿಕೆ ವೇಗಗೊಳಿಸಿ ತಮ್ಮ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡುತ್ತಿದ್ದರು. ಧೋನಿಯಂತೆಯೇ ಕುಸಾಲೆ ಸ್ಪರ್ಧೆಯ ನಡುವೆ ತಮ್ಮ ಶಾಂತತೆಯನ್ನು ತೋರಿಸಿದ್ದಾರೆ. 6 ನೇ ಸ್ಥಾನದಲ್ಲಿದ್ದ ಅವರು ತಕ್ಷಣ ಸುಧಾರಿಸಿಕೊಂಡು 451.4 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತಲುಪಿ ಪದಕ ಗೆದ್ದಿದ್ದರು. ಈ ಮೂಲಕ ಅವರು ಧೋನಿಯಂತೆಯೇ ಸ್ಥಿರ ಪ್ರದರ್ಶನ ನೀಡಿದ್ದರು.

ಸ್ವಪ್ನಿಲ್ ಕುಸಾಲೆ ಎಂ.ಎಸ್.ಧೋನಿ ಸಾಮ್ಯತೆ

“ಶೂಟಿಂಗ್ ಜಗತ್ತಿನಲ್ಲಿ ನಾನು ಯಾರನ್ನೂ ನಿರ್ದಿಷ್ಟವಾಗಿ ಅನುಸರಿಸುವುದಿಲ್ಲ. ಅದರ ಹೊರಗೆ, ನಾನು ಧೋನಿಯನ ವ್ಯಕ್ತಿತ್ವನ್ನು ಮೆಚ್ಚುತ್ತೇನೆ. ನನ್ನ ಕ್ರೀಡೆಗೆ ನಾನು ಮೈದಾನದಲ್ಲಿ ಅವರಂತೆಯೇ ಶಾಂತ ಮತ್ತು ತಾಳ್ಮೆಯಿಂದಿರಬೇಕು. ನಾನು ಅವರಂತೆಯೇ ಟಿಕೆಟ್ ಕಲೆಕ್ಟರ್ ಆಗಿರುವುದರಿಂದ ಅವರ ಕಥೆಯೊಂದಿಗೆ ನಾನು ಸಂಬಂಧ ಹೊಂದಿದ್ದೇನೆ” ಎಂದು ಕುಸಾಲೆ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದ ನಂತರ ತಿಳಿಸಿದ್ದರು.

ಸೆಂಟ್ರಲ್​ ರೈಲ್ವೇಯ ಉದ್ಯೋಗಿ

ಕುಸಾಲೆ 2015 ರಿಂದ ಕೇಂದ್ರ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ಬಳಿಯ ಕಂಬಳ್ವಾಡಿ ಗ್ರಾಮದ 28 ವರ್ಷದ ಅವರು 2012 ರಿಂದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ, ಆದರೆ ಪ್ಯಾರಿಸ್ ಕ್ರೀಡಾಕೂಟದಲ್ಲಿ ಒಲಿಂಪಿಕ್ಸ್​​ನಲ್ಲಿ ಪಾದಾರ್ಪಣೆ ಮಾಡಿದ್ದರು. ಅದಕ್ಕಾಗಿ ಅವರು ಶೂಟಿಂಗ್ ಆರಂಭದಿಂದ 12 ವರ್ಷ ಕಾಯಬೇಕಾಯಿತು.

ಇದನ್ನೂ ಓದಿ: Rohit Sharma: ಸಚಿನ್​, ಕೊಹ್ಲಿ ಜತೆ ಎಲೈಟ್​ ಪಟ್ಟಿ ಸೇರುವ ನಿರೀಕ್ಷೆಯಲ್ಲಿ ರೋಹಿತ್​

ಸ್ವಪ್ನಿಲ್ ಕುಸಾಲೆ 1995 ರಲ್ಲಿ ಕೃಷಿ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ್ದರೆ. 2009ರಲ್ಲಿ, ಅವರ ತಂದೆ ಅವರನ್ನು ಮಹಾರಾಷ್ಟ್ರ ಸರ್ಕಾರದ ಕ್ರೀಡೆಗೆ ಮೀಸಲಾದ ಪ್ರಾಥಮಿಕ ಕಾರ್ಯಕ್ರಮವಾದ ಕ್ರಿಡಾ ಪ್ರಭೋದಿನಿಗೆ ದಾಖಲಿಸಿದ್ದರು. ಒಂದು ವರ್ಷದ ದೈಹಿಕ ತರಬೇತಿಯ ನಂತರ, ಅವರು ಒಂದು ಕ್ರೀಡೆಯನ್ನು ಆರಿಸಬೇಕಾಯಿತು. ಈ ವೇಳೆ ಅವರು ಶೂಟಿಂಗ್ ಅನ್ನು ಆರಿಸಿಕೊಂಡರು. 2013 ರಲ್ಲಿ, ಅವರು ಲಕ್ಷ್ಯ ಸ್ಪೋರ್ಟ್ಸ್​​ ಅವರಿಗೆ ಪ್ರಾಯೋಜಕತ್ವ ನೀಡಿತು.

Continue Reading
Advertisement
Paris Olympic
ಕ್ರೀಡೆ3 mins ago

Paris Olympic: ಐತಿಹಾಸಿಕ ಪದಕ ಗೆದ್ದ ಸ್ವಪ್ನಿಲ್‌ ಕುಸಾಲೆಗೆ ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ

MS Dhoni
ಪ್ರಮುಖ ಸುದ್ದಿ16 mins ago

MS Dhoni : ಸಿಎಸ್​​ಕೆಗೆ ನ್ಯಾಯ ಸಲ್ಲಿಸುವೆ; ಐಪಿಎಲ್ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ ಎಂಎಸ್​ ಧೋನಿ

karnataka rain
ಮಳೆ29 mins ago

Karnataka Rain : ಕೃಷ್ಣಾ ನದಿ ಪ್ರವಾಹದಲ್ಲಿ ಪಲ್ಟಿ ಹೊಡೆದ ಬೋಟ್‌; ಎತ್ತುಗಳ ಮೇಲೆ ಕುಸಿದು ಬಿದ್ದ ಗೋಡೆ

Job Alert
ಉದ್ಯೋಗ32 mins ago

Job Alert: ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಐಟಿಐ ಪಾಸಾದವರು ಅಪ್ಲೈ ಮಾಡಿ

Paris Olympics
ಕ್ರೀಡೆ46 mins ago

Paris Olympics: ಒಲಿಂಪಿಕ್ಸ್​ ಅಭಿಯಾನ ಮುಗಿಸಿದ ಬಾಕ್ಸರ್​ ನಿಖತ್ ಜರೀನ್; ಪ್ರೀ ಕ್ವಾರ್ಟರ್​ನಲ್ಲಿ ಸೋಲು

Swapnil Kusale
ಪ್ರಮುಖ ಸುದ್ದಿ48 mins ago

Swapnil Kusale : ರೈಲ್ವೆ ಟಿಕೆಟ್​ ಕಲೆಕ್ಟರ್​ ಈಗ ಒಲಿಂಪಿಕ್​ ಹೀರೊ; ಧೋನಿಯಂತೆಯೇ ಸಾಧನೆ ಮಾಡಿ ಕಂಚು ಗೆದ್ದ ಶೂಟರ್​ ಸ್ವಪ್ನಿಲ್ ಕುಸಾಲೆ

Students
ಶಿಕ್ಷಣ49 mins ago

ಪದವಿ, ಸ್ನಾತಕೋತ್ತರ ಪದವಿ ಸೀಟುಗಳು ಖಾಲಿ ಉಳಿದರೆ ಸಿಇಟಿ ನಡೆಸಲು ವಿವಿಗಳಿಗೆ ಯುಜಿಸಿ ಅನುಮತಿ!

Krishna Janmabhoomi
ದೇಶ51 mins ago

Mathura Krishna Janmabhoomi: ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿವಾದ; ಮುಸ್ಲಿಂ ಪರ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

Darshan Judicial Custody extended till 14th August
ಸ್ಯಾಂಡಲ್ ವುಡ್54 mins ago

Actor Darshan: ದರ್ಶನ್​ & ಗ್ಯಾಂಗ್​ಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ!

Kannada Serials TRP TOP 5 bhagyalakshmi puttakkana makkalu number 1
ಕಿರುತೆರೆ1 hour ago

Kannada Serials TRP: ಟಾಪ್‌ 5ನಲ್ಲಿ ‘ಭಾಗ್ಯಲಕ್ಷ್ಮೀ’; ‘ಪುಟ್ಟಕ್ಕನ ಮಕ್ಕಳು’ ನಂಬರ್‌ 1!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌