Paris Olympic: ಐತಿಹಾಸಿಕ ಪದಕ ಗೆದ್ದ ಸ್ವಪ್ನಿಲ್‌ ಕುಸಾಲೆಗೆ ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ - Vistara News

ಕ್ರೀಡೆ

Paris Olympic: ಐತಿಹಾಸಿಕ ಪದಕ ಗೆದ್ದ ಸ್ವಪ್ನಿಲ್‌ ಕುಸಾಲೆಗೆ ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ

Paris Olympic: ಮಹಾರಾಷ್ಟ್ರದ ಕೊಲ್ಹಾಪುರದ ಕಂಬಳವಾಡಿ ಗ್ರಾಮದ 28 ವರ್ಷದ ಸ್ವಪ್ನಿಲ್ ಕುಶಲೆ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್​ ಅವರ ಅಪಟ್ಟ ಅಭಿಮಾನಿ

VISTARANEWS.COM


on

Paris Olympic
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್​: ಪ್ಯಾರಿಸ್​ ಒಲಿಂಪಿಕ್ಸ್(Paris Olympic)​ 50 ಮೀಟರ್‌ ರೈಫಲ್ 3 ಪೊಸಿಷನ್‌ನಲ್ಲಿ ಕಂಚಿನ ಪದಕ ಗೆದ್ದು ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎನ್ನುವ ಇತಿಹಾಸ ನಿರ್ಮಿಸಿದ ಶೂಟರ್​ ಸ್ವಪ್ನಿಲ್‌ ಕುಸಾಲೆ(Swapnil Kusale) ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi Murmu), ಪ್ರಧಾನಿ ನರೇಂದ್ರ ಮೋದಿ(Narendra Modi) ಸೇರಿ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಗುರುವಾರ ನಡೆದ 50 ಮೀ. ರೈಫ‌ಲ್‌ 3 ಪೊಸಿಶನ್‌ ಫೈನಲ್​ ಪಂದ್ಯದಲ್ಲಿ ಸ್ವಪ್ನಿಲ್ ಅವರು 451.4 ಅಂಕ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸ್ವಪ್ನಿಲ್‌ ಫೈನಲ್​ ಪಂದ್ಯದ ಪ್ರೋನ್‌ನಲ್ಲಿ 156.8, ನೀಲಿಂಗ್‌ನಲ್ಲಿ 153.3 ಮತ್ತು ಸ್ಟ್ಯಾಂಡಿಂಗ್‌ನಲ್ಲಿ 195 ಅಂಕಗಳಿಸಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ್ಕಕೆ ಕೊರಳೊಡ್ಡಿದರು. 463.6 ಅಂಕ ಗಳಿಸಿದ ಚೀನಾದ ಲಿಯು ಯುಕುನ್ ಚಿನ್ನ ಮತ್ತು ಉಕ್ರೇನ್​ನ ಕುಲಿಶ್ ಸೆರ್ಹಿ(461.3) ಬೆಳ್ಳಿ ಪದಕ ಗೆದ್ದರು.

“ಸ್ವಪ್ನಿಲ್ ಕುಸಾಲೆಯವರ ಅಸಾಧಾರಣ ಪ್ರದರ್ಶನ!. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಕಂಚಿನ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಅವರು ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಕೂಡ. ನಿಮ್ಮ ಈ ಸಾಧನೆ ಪ್ರತಿಯೊಬ್ಬ ಭಾರತೀಯನು ಸಂತೋಷಪಡುವಂತೆ ಮಾಡಿದೆ” ಎಂದು ಮೋದಿ ಟ್ವೀಟ್​ ಮೂಲಕ ಅಭಿನಂದಿಸಿದ್ದಾರೆ.

ಇದನ್ನೂ ಓದಿ Paris Olympics: ಒಲಿಂಪಿಕ್ಸ್​ ಅಭಿಯಾನ ಮುಗಿಸಿದ ಬಾಕ್ಸರ್​ ನಿಖತ್ ಜರೀನ್; ಪ್ರೀ ಕ್ವಾರ್ಟರ್​ನಲ್ಲಿ ಸೋಲು

“ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಸ್ವಪ್ನಿಲ್ ಕುಸಾಲೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!. ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಭಾರತ ಮೂರು ಪದಕ ಗೆದ್ದಿರುವುದು ಇದೇ ಮೊದಲು. ಇಡೀ ಶೂಟಿಂಗ್ ತಂಡ ಭಾರತಕ್ಕೆ ಹೆಮ್ಮೆ ತಂದಿದೆ. ಮುಂಬರುವ ಈವೆಂಟ್‌ಗಳಿಗಾಗಿ ನಾನು ನಮ್ಮ ಎಲ್ಲಾ ಆಟಗಾರರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಸ್ವಪ್ನಿಲ್ ಕುಸಾಲೆ ಅವರು ಭವಿಷ್ಯದಲ್ಲಿ ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲಲಿ ಎಂದು ಹಾರೈಸುತ್ತೇನೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್​ ಮಾಡಿದ್ದಾರೆ.

ರೈಲ್ವೆ ಟಿಕೆಟ್ ಕಲೆಕ್ಟರ್


ಮಹಾರಾಷ್ಟ್ರದ ಕೊಲ್ಹಾಪುರದ ಕಂಬಳವಾಡಿ ಗ್ರಾಮದ 28 ವರ್ಷದ ಸ್ವಪ್ನಿಲ್ ಕುಶಲೆ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್​ ಅವರ ಅಪಟ್ಟ ಅಭಿಮಾನಿ. ಜತೆಗೆ ಧೋನಿಯಂತೆಯೇ ಇವರು ಕೂಡ ರೇಲ್ವೆ ಟಿಕೆಟ್ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಧೋನಿಯವರ ಬಯೋಪಿಕ್ ಸಿನೆಮಾವನ್ನು ಪದೇ ಪದೇ ವೀಕ್ಷಿಸಿದ ಬಳಿಕ ಸ್ವಪ್ನಿಲ್ ಕೂಡ ಪೂರ್ಣಪ್ರಮಾಣದಲ್ಲಿ ಶೂಟಿಂಗ್‌ನಲ್ಲಿ ತೊಡಗಿಕೊಂಡರು. ಧೋನಿಯವರಂತೆ ಶಾಂತ ಸ್ವಾಭಾವದ ಈ ಶೂಟರ್​ ಇದೀಗ ಒಲಿಂಪಿಕ್ಸ್‌ ಪದಕವೊಂದನ್ನು ಗೆದ್ದು ಇತಿಹಾಸದ ಪುಟ ಸೇರಿದ್ದಾರೆ. 2015ರ ಕುವೈತ್​ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ ಜೂನಿಯರ್‌ ವಿಭಾಗದಲ್ಲಿ ಚಿನ್ನ, 59ನೇ ಹಾಗೂ 61ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics 2024 : ಭಾರತದವರೇ ಆದ ಎಚ್​ಎಸ್​ ಪ್ರಣಯ್​ ಸೋಲಿಸಿ ಕ್ವಾರ್ಟರ್​​ ಫೈನಲ್ಸ್​ಗೇರಿದ ಲಕ್ಷ್ಯ ಸೇನ್​

Paris Olympics 2024 : ಲಕ್ಷ್ಯ ಮತ್ತು ಎಚ್.ಎಸ್.ಪ್ರಣಯ್ ಇಬ್ಬರೂ ಪರಸ್ಪರ ತಮ್ಮ ಸಾಮರ್ಥ್ಯವನ್ನು ಪಣಕ್ಕೊಡುವ ಮೂಲಕ ಪಂದ್ಯವು ಪ್ರಾರಂಭವಾಯಿತು. ಆರಂಭಿಕ ಪಂದ್ಯದ ಮೊದಲಾರ್ಧದಲ್ಲಿ ಆಟಗಾರರು ರ್ಯಾಲಿಗೆ ಹೆಚ್ಚು ಒತ್ತುಕೊಟ್ಟರು. ಅವರಿಬ್ಬರ ಆಟದ ಒಂದು ರ್ಯಾಲಿ 47 ಶಾಟ್​ಗಳ ತನಕ ಮುಂದುವರಿಯಿತು. ಇನ್ನು ಪಂದ್ಯದ ಆರಂಭದಲ್ಲಿಯೇ ಪ್ರಣಯ್ 1-5 ಹಿನ್ನಡೆ ಅನುಭವಿಸಿದ್ದರು. ಅದರಿಂದ ಪಾರಾಗಲು ಅವರಿಗೆ ಸಾಧ್ಯವೇ ಆಗಲಿಲ್ಲ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನ (Paris Olympics 2024) ಪುರುಷರ ಸಿಂಗಲ್ಸ್​ನಲ್ಲಿ ಭಾರತದವರೇ ಆದ ಎಚ್​ಎಸ್​ ಪ್ರಣಯ್ ಅವರನ್ನು ಸೋಲಿಸಿರುವ 22ರ ಹರೆಯದ ಲಕ್ಷ್ಯ ಸೇನ್ ಕ್ವಾರ್ಟರ್​​ ಫೈನಲ್ಸ್​ಗೆ ಪ್ರವೇಶ ಪಡೆದಿದ್ದಾರೆ. ಲಾ ಚಾಪೆಲ್ ಅರೆನಾ ಕೋರ್ಟ್ 3ರಲ್ಲಿ ನಡೆದ ಪಂದ್ಯದಲ್ಲಿ ಲಕ್ಷ್ಯ 21-12, 21-6 ಅಂತರದಲ್ಲಿ ಪ್ರಣಯ್ ವಿರುದ್ಧ ಭರ್ಜರಿ ಜಯ ಸಾಧಿಸಿದರು.

ವಿಯೆಟ್ನಾಂನ ಲೆ ಡುಕ್ ಫಾಟ್ ವಿರುದ್ಧದ ನಿನ್ನೆಯ ಪಂದ್ಯದ ನಂತರ ದಣಿದಿದ್ದ ಪ್ರಣಯ್ ಅವರಿಂದ ಲಕ್ಷ್ಯ ಹೆಚ್ಚು ಪ್ರತಿಕ್ರಿಯೆ ಪಡೆಯಲಿಲ್ಲ. . ಪ್ರಣಯ್ ಅವರು ಫಾಟ್​​ ವಿರುದ್ಧ 3 ಗೇಮ್​ಗಳ ರೋಚಕ ಪಂದ್ಯವನ್ನು ಗೆದ್ದಿದ್ದರು. ಕಳೆದ ತಿಂಗಳ ಆರಂಭದಲ್ಲಿ ಚಿಕೂನ್ ಗುನ್ಯಾಕ್ಕೆ ಒಳಗಾಗಿದ್ದ ಅವರು ಬುಧವಾರದ ಆಟದಿಂದಾಗಿ ದಣಿದಿದ್ದರು. ಪ್ರಣಯ್ ಪಂದ್ಯದ ಎರಡನೇ ಗೇಮ್ ನ ಅರ್ಧದಲ್ಲೇ ಸುಸ್ತಾದರು. ಲಕ್ಷ್ಯ ಆಟದಲ್ಲಿ 11-3 ರಿಂದ ಮುನ್ನಡೆ ಸಾಧಿಸಿದಾಗಲೇ ಅವರು ನಿರಾಸೆ ಗೊಂಡಿದ್ದರು. ಅಂತಿಮವಾಗಿ 6-21 ರಿಂದ ಸೋತರು/ ಅವರ ಚೊಚ್ಚಲ ಮತ್ತು ಬಹುಶಃ ಅಂತಿಮ ಒಲಿಂಪಿಕ್ ಪ್ರದರ್ಶನ ಇದಾಗಿದೆ.

ಲಕ್ಷ್ಯ ಮತ್ತು ಎಚ್.ಎಸ್.ಪ್ರಣಯ್ ಇಬ್ಬರೂ ಪರಸ್ಪರ ತಮ್ಮ ಸಾಮರ್ಥ್ಯವನ್ನು ಪಣಕ್ಕೊಡುವ ಮೂಲಕ ಪಂದ್ಯವು ಪ್ರಾರಂಭವಾಯಿತು. ಆರಂಭಿಕ ಪಂದ್ಯದ ಮೊದಲಾರ್ಧದಲ್ಲಿ ಆಟಗಾರರು ರ್ಯಾಲಿಗೆ ಹೆಚ್ಚು ಒತ್ತುಕೊಟ್ಟರು. ಅವರಿಬ್ಬರ ಆಟದ ಒಂದು ರ್ಯಾಲಿ 47 ಶಾಟ್​ಗಳ ತನಕ ಮುಂದುವರಿಯಿತು. ಇನ್ನು ಪಂದ್ಯದ ಆರಂಭದಲ್ಲಿಯೇ ಪ್ರಣಯ್ 1-5 ಹಿನ್ನಡೆ ಅನುಭವಿಸಿದ್ದರು. ಅದರಿಂದ ಪಾರಾಗಲು ಅವರಿಗೆ ಸಾಧ್ಯವೇ ಆಗಲಿಲ್ಲ.

ಆರಂಭಿಕ ಗೇಮ್ ನ ವಿರಾಮದ ವೇಳೆಗೆ ಲಕ್ಷ್ಯ 11-6ರಲ್ಲಿ ಮುನ್ನಡೆ ಸಾಧಿಸಿದರು. ಪ್ರಣಯ್ 7-13 ಅಂತರದಲ್ಲಿ ಹಿನ್ನಡೆ ಅನುಭವಿಸಿದ ಹೊರತಾಗಿಯೂ ತಿರುಗೇಟು ನೀಡಲು ಯತ್ನಿಸಿದರು. ಅನುಭವಿ ಶಟ್ಲರ್ ತನ್ನ ಫೋರ್​ಹ್ಯಾಂಡ್​ ಮೂಲಕ ಕ್ರಾಸ್-ಕೋರ್ಟ್ ಸ್ಮ್ಯಾಶ್ ಹೊಡೆಯಲು ಮುಂದಾದರು. ಹೀಗಾಗಿ ಪ್ರಣಯ್ ಅವರಿಂದ ಲಕ್ಷ್ಯ ಒಂದೆರಡು ಬಾರಿ ತೊಂದರೆಗೀಡಾದರಯ, ಬಳಿಕ ಅವರು ತಮ್ಮ ದಾಳಿಯ ವೈಖರಿ ಬದಲಾಯಿಸಿದರು. ಲಕ್ಷ್ಯ ತಮ್ಮ ಡೌನ್-ದಿ-ಲೈನ್ ಸ್ಮ್ಯಾಶ್ ಆಡಲು ಆರಂಭಿಸಿದರು. ಇದು ಪ್ರಣಯ್​ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತು.

ಇದನ್ನೂ ಓದಿ: Diksha Dagar : ಗಾಲ್ಫರ್​ ದೀಕ್ಷಾ ದಾಗರ್​ ಪ್ರಯಾಣಿಸುತ್ತಿದ್ದ ಕಾರು ಪ್ಯಾರಿಸ್​​ನಲ್ಲಿ ಅಪಘಾತ

ಎರಡನೇ ಗೇಮ್ ನಲ್ಲಿ ಪ್ರಣಯ್ ವಿರುದ್ಧ ಲಕ್ಷ್ಯ ಭರ್ಜರಿ ಮುನ್ನಡೆ ಸಾಧಿಸಿದರು ಅನುಭವಿ ಆಟಗಾರನನ್ನು ಲಕ್ಷ್ಯ ಮೀರಿಸಿದರು, ಅವರು ತಮ್ಮ ಜೀವನದ ಅತ್ಯುತ್ತಮ ಫಾರ್ಮ್​ನಲ್ಲಿ ಇರುವುದನ್ನು ತೋರಿಸಿದರು. ಲಕ್ಷ್ಯ ಕ್ವಾರ್ಟರ್ ಫೈನಲ್​​ನಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಲಕ್ಷ್ಯ 34 ವರ್ಷದ ಅನುಭವಿ ಆಟಗಾರನನ್ನು ನಾಲ್ಕು ಬಾರಿ ಎದುರಿಸಿದ್ದಾರೆ. 1-3 ರ ದಾಖಲೆಯನ್ನು ಹೊಂದಿದ್ದಾರೆ. ಇವರಿಬ್ಬರು ಕೊನೆಯ ಬಾರಿಗೆ ಸಿಂಗಾಪುರ್ ಓಪನ್ 2023 ರಲ್ಲಿ ಮುಖಾಮುಖಿಯಾಗಿದ್ದರು. ಅಲ್ಲಿ ಲಕ್ಷ್ಯ 3 ಗೇಮ್ ಗಳ ಹೋರಾಟದಲ್ಲಿ ಚೌಗೆ ತಲೆಬಾಗಿದ್ದರು.

Continue Reading

ಕ್ರೀಡೆ

Diksha Dagar : ಗಾಲ್ಫರ್​ ದೀಕ್ಷಾ ದಾಗರ್​ ಪ್ರಯಾಣಿಸುತ್ತಿದ್ದ ಕಾರು ಪ್ಯಾರಿಸ್​​ನಲ್ಲಿ ಅಪಘಾತ

Diksha Dagar : ಮಂಗಳವಾರ ಸಂಜೆ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಆಕೆಯ ಪೋಷಕರು ಮತ್ತು ಸಹೋದರ ಕಾರಿನಲ್ಲಿದ್ದರು. ದೀಕ್ಷಾ ಮತ್ತು ಆಕೆಯ ತಂದೆ ಸ್ವಲ್ಪವೂ ಗಾಯಗಳು ಇಲ್ಲದೇ ಪಾರಾಗಿದ್ದಾರೆ. ಆದರೆ ತಾಯಿ ಬೆನ್ನುನೋವಿಗೆ ಒಳಗಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ಸಮಯದಲ್ಲಿ ದೀಕ್ಷಾ ಅವರ ಸಹೋದರನಿಗೆ ತರಚು ಗಾಯಗಳಾಗಿವೆ.

VISTARANEWS.COM


on

Diksha Daga
Koo

ಬೆಂಗಳೂರು: ಒಲಿಂಪಿಕ್ಸ್​ಗಾಗಿ (Paris Olympics 2024) ಫ್ರಾನ್ಸ್​ಗೆ ತೆರಳಿದ್ದ ಭಾರತೀಯ ಗಾಲ್ಫ್ ಆಟಗಾರ್ತಿ ದೀಕ್ಷಾ ದಾಗರ್ (Diksha Dagar) ಜುಲೈ 30 ರಂದು ರಾParis Olympics: ಕ್ವಾರ್ಟರ್‌ ಫೈನಲ್‌ನಲ್ಲಿ ಸಾತ್ವಿಕ್​-ಚಿರಾಗ್​ ಜೋಡಿಗೆ ಆಘಾತಕಾರಿ ಸೋಲುಜಧಾನಿ ಪ್ಯಾರಿಸ್​​ನಲ್ಲಿ ಕಾರು ಅಪಘಡಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್​ 23 ವರ್ಷದ ಗಾಲ್ಫ್ ಆಟಗಾರ್ತಿ ಗಾಯಗಳಿಂದ ಪಾರಾಗಿದ್ದಾರೆ. ಅಲ್ಲದೆ, ಪ್ಯಾರಿಸ್ ಒಲಿಂಪಿಕ್ಸ್​​ನ ಮಹಿಳಾ ವೈಯಕ್ತಿಕ ಗಾಲ್ಫ್ ಸ್ಪರ್ಧೆಗೆ ಇಳಿಯುವುದಾಗಿ ಹೇಳಿದ್ದಾರೆ. ದೀಕ್ಷಾ ಅವರ ಸ್ಪರ್ಧೆಯು ಆಗಸ್ಟ್ 7ರಂದು ಪ್ರಾರಂಭವಾಗಲಿದೆ.

ಮಂಗಳವಾರ ಸಂಜೆ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಆಕೆಯ ಪೋಷಕರು ಮತ್ತು ಸಹೋದರ ಕಾರಿನಲ್ಲಿದ್ದರು. ದೀಕ್ಷಾ ಮತ್ತು ಆಕೆಯ ತಂದೆ ಸ್ವಲ್ಪವೂ ಗಾಯಗಳು ಇಲ್ಲದೇ ಪಾರಾಗಿದ್ದಾರೆ. ಆದರೆ ತಾಯಿ ಬೆನ್ನುನೋವಿಗೆ ಒಳಗಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ಸಮಯದಲ್ಲಿ ದೀಕ್ಷಾ ಅವರ ಸಹೋದರನಿಗೆ ತರಚು ಗಾಯಗಳಾಗಿವೆ.

ಅದೃಷ್ಟದ ಅವಕಾಶ

ಕುತೂಹಲಕಾರಿ ಸಂಗತಿಯೆಂದರೆ, ದಕ್ಷಿಣ ಆಫ್ರಿಕಾದ ಗಾಲ್ಫ್ ಆಟಗಾರ್ತಿ ಪೌಲಾ ರೆಟೊ ಹಿಂದೆ ಸರಿದ ಕಾರಣ ಅವರಿಗೆ ಟೋಕಿಯೊ 2020ರಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ಅಲ್ಲಿ ದೀಕ್ಷಾ ಟಿ -50 ಅನ್ನು ಪೂರ್ಣಗೊಳಿಸಿದ್ದರು. ಇದೀಗ ಪ್ಯಾರಿಸ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದ್ದಾರೆ. ಕಿವುಡರ ಒಲಿಂಪಿಕ್ಸ್ ಎರಡರ ಭಾಗವಾಗಿದ್ದ ಏಕೈಕ ಗಾಲ್ಫ್ ಆಟಗಾರ್ತಿ ದೀಕ್ಷಾ. ಅವರು 2017 ರಲ್ಲಿ ಬೆಳ್ಳಿ ಮತ್ತು 2022 ರಲ್ಲಿ ಕಿವುಡರ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

ಇದನ್ನೂ ಓದಿ: Rohit Sharma : ಟಿ20 ನಿವೃತ್ತಿಯಲ್ಲ, ಅದು ವಿಶ್ರಾಂತಿ; ಕೌತುಕ ಮೂಡಿಸಿದ ರೋಹಿತ್ ಶರ್ಮಾ ಹೇಳಿಕೆ

ಇದೇ ವೇಳೆ ಶುಭಂಕರ್ ಶರ್ಮಾ ಮತ್ತು ಗಗನ್ಜೀತ್ ಭುಲ್ಲರ್ ಪುರುಷರ ವೈಯಕ್ತಿಕ ಸ್ಪರ್ಧೆಗೆ ಇಳಿಯಲಿದ್ದಾರೆ. ಭಾರತವು ಆಗಸ್ಟ್ 7 ರ ಗುರುವಾರ ಗಾಲ್ಫನ್​ನಲ್ಲಿ ತನ್ನ ಅಭಿಯಾನ ಪ್ರಾರಂಭಿಸಲಿದೆ. ಈ ಸವಾಲಿನ ಸಮಯದಲ್ಲಿ ದೀಕ್ಷಾ ಮತ್ತು ಅವರ ಕುಟುಂಬಕ್ಕೆ ಬೆಂಬಲವಾಗಿ ಭಾರತೀಯ ಕ್ರೀಡಾ ಸಮುದಾಯವು ಒಗ್ಗಟ್ಟಿನಿಂದ ನಿಂತಿದೆ.

Continue Reading

ಪ್ರಮುಖ ಸುದ್ದಿ

Rohit Sharma : ಟಿ20 ನಿವೃತ್ತಿಯಲ್ಲ, ಅದು ವಿಶ್ರಾಂತಿ; ಕೌತುಕ ಮೂಡಿಸಿದ ರೋಹಿತ್ ಶರ್ಮಾ ಹೇಳಿಕೆ

Rohit Sharma : ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸುವ ಮೂಲಕ ಮೆನ್ ಇನ್ ಬ್ಲೂ 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಿತು ಮತ್ತು ಎರಡನೇ ಟಿ 20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾರತವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ ನಂತರ, ನಾಯಕ ರೋಹಿತ್ ಶರ್ಮಾ ಅವರು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರೊಂದಿಗೆ ಟಿ 20 ಪಂದ್ಯಗಳಿಂದ ನಿವೃತ್ತಿ ಘೋಷಿಸಿದರು.

VISTARANEWS.COM


on

Rohit Sharma
Koo

ನವದೆಹಲಿ: ವಿಶ್ವ ಕಪ್ ಗೆಲುವಿನ ಬಳಿಕ ಟಿ20 ಮಾದರಿಗೆ ನಿವೃತ್ತಿ ಹೇಳಿರುವ ರೋಹಿತ್ ಶರ್ಮಾ (Rohit Sharma) ಇದೀಗ ಅದು ಕೇವಲ ವಿಶ್ರಾಂತಿ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ನಿವೃತ್ತಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ನಲ್ಲಿ ನಡೆದ 2024 ರ ಟಿ 20 ವಿಶ್ವಕಪ್ ಗೆಲುವಿನ ನಂತರ ರೋಹಿತ್ ಟಿ20 ಕ್ರಿಕೆಟ್​ನಿಂದ ನಿವೃತ್ತಿ ಹೇಳಿದ್ದರು. ಅದಕ್ಕೆ ಮೊದಲು ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ರೋಹಿತ್​ ಆ ರೀತಿ ಮಾಡಿದ್ದು ಯಾಕೆ ಎಂಬುದು ಗೊತ್ತಿಲ್ಲ.

ವಿಶ್ವ ಕಪ್​ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳಿಂದ ಸೋಲಿಸುವ ಮೂಲಕ ಮೆನ್ ಇನ್ ಬ್ಲೂ 11 ವರ್ಷಗಳ ಐಸಿಸಿ ಟ್ರೋಫಿ ಬರ ಕೊನೆಗೊಳಿಸಿತ್ತು. ಎರಡನೇ ಟಿ 20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಭಾರತವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ್ದರು.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಮುಂಚಿತವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್, ಅವರು ನಾನು ಇನ್ನೂ ನನ್ನು ನಿವೃತ್ತಿಗೆ ಹೊಂದಾಣಿಕೆಯಾಗಿಲ್ಲ. ದೊಡ್ಡ ಟಿ 20 ಅಂತಾರಾಷ್ಟ್ರೀಯ ಟೂರ್ನಿಗೆ ಮೊದಲು ತಂಡಕ್ಕೆ ಮತ್ತೆ ಸೇರಿಕೊಳ್ಳುತ್ತೇವೆ ಎಂದು ಅನಿಸುತ್ತದೆ ಎಂದು ಹೇಳಿದರು.

ಈ ಹಿಂದೆ ನಡೆದಂತೆ ನನಗೆ ಟಿ 20 ಯಿಂದ ವಿಶ್ರಾಂತಿ ನೀಡಲಾಗಿದೆ ಎಂದು ನಾನು ಭಾವಿಸುತ್ತೇನೆ. ದೊಡ್ಡ ಪಂದ್ಯಾವಳಿ ಮುಂದೆ ಬರಲಿದೆ ಮತ್ತು ನಾವು ಮತ್ತೆ ಟಿ 20 ಗಳಿಗೆ ಸಿದ್ಧರಾಗಬೇಕಾಗಿದೆ. ಆದ್ದರಿಂದ ನಾನು ಫಾರ್ಮಾಟ್​ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದೇನೆ ಎಂದು ನಾನು ಭಾವಿಸುವುದಿಲ್ಲ”ಎಂದು ಶರ್ಮಾ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಟಿ20 ವಿಶ್ವ ಕಪ್​ನಲ್ಲಿ ರೋಹಿತ್ ಶರ್ಮಾ ಭರ್ಜರಿ ಆಟ

2024 ರ ಟಿ 20 ವಿಶ್ವಕಪ್​​ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಭಾರತದ ಆರಂಭಿಕ ಆಟಗಾರ ತಮ್ಮ ಟಿ 20 ಐ ವೃತ್ತಿಜೀವನಕ್ಕೆ ಪರಿಪೂರ್ಣ ವಿದಾಯ ಹೇಳಿದ್ದರು. ಬಲಗೈ ಬ್ಯಾಟ್ಸ್ಮನ್ ಎಂಟು ಇನ್ನಿಂಗ್ಸ್​ಗಳಿಂದ 36.71 ಸರಾಸರಿಯಲ್ಲಿ 257 ರನ್ ಗಳಿಸಿದ್ದಾರೆ. ಮೂರು ಅರ್ಧಶತಕಗಳೊಂದಿಗೆ 156.70 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಇದನ್ನೂ ಓದಿ: MS Dhoni: ಆ ಒಂದು ರನ್​​ ಔಟ್ ನನ್ನ ​​ ಕ್ರಿಕೆಟ್​ ವೃತ್ತಿ ಜೀವನದ ಅತ್ಯಂತ ಕೆಟ್ಟ ಕ್ಷಣ; ವಿಶ್ವ ಕಪ್​ ಆಘಾತವನ್ನು ವಿವರಿಸಿದ ಧೋನಿ

151 ಇನ್ನಿಂಗ್ಸ್ಗಳಲ್ಲಿ 32.05ರ ಸರಾಸರಿಯಲ್ಲಿ 4231 ರನ್ ಗಳಿಸಿರುವ 37ರ ಹರೆಯದ ರೋಹಿತ್​​, ಜಂಟಿ ದಾಖಲೆಯ 5 ಶತಕ ಮತ್ತು 32 ಅರ್ಧಶತಕಗಳೊಂದಿಗೆ 140.89ರ ಸ್ಟ್ರೈಕ್ ರೇಟ್​​ನೊಂದಿಗೆ ಟಿ20ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

ನಾಗ್ಪುರ ಮೂಲದ ಕ್ರಿಕೆಟಿಗ 2023 ರ ಏಕದಿನ ವಿಶ್ವಕಪ್ ನಂತರ ಮೊದಲ ಬಾರಿಗೆ ಏಕದಿನ ಕ್ರಿಕೆಟ್​​ಗೆ ಮರಳಲಿದ್ದಾರೆ. ಭಾರತದ ನಾಯಕ 11 ಇನ್ನಿಂಗ್ಸ್​ಗಳಿಂದ 54.27 ಸರಾಸರಿಯಲ್ಲಿ 597 ರನ್ ಗಳಿಸುವ ಮೂಲಕ ಮತ್ತು 125.94 ಸ್ಟ್ರೈಕ್ ರೇಟ್ ಮೂಲಕ ಮಿಂಚಿದ್ದರು ಆಗಸ್ಟ್ 1 ರಿಂದ ಪ್ರಾರಂಭವಾಗಲಿರುವ ಮುಂಬರುವ ಸರಣಿಯಲ್ಲಿ ರೋಹಿತ್ ತಮ್ಮ ಫಾರ್ಮ್ ಅನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ.

Continue Reading

ಕ್ರೀಡೆ

Paris Olympics: ಕ್ವಾರ್ಟರ್‌ ಫೈನಲ್‌ನಲ್ಲಿ ಸಾತ್ವಿಕ್​-ಚಿರಾಗ್​ ಜೋಡಿಗೆ ಆಘಾತಕಾರಿ ಸೋಲು

Paris Olympics: ದಿನದ ಮತ್ತೊಂದು ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ  ‘ಆಲ್‌ ಇಂಡಿಯನ್‌’ ಹೋರಾಟವೊಂದಕ್ಕೆ ಅಣಿಯಾಗಿದೆ. ಲಕ್ಷ್ಯ ಸೇನ್‌(Lakshya Sen) ಮತ್ತು ಎಚ್.ಎಸ್.ಪ್ರಣಯ್(HS Prannoy) ಮುಖಾಮುಖಿಯಾಗಲಿದ್ದಾರೆ. ಉಭಯ ಆಟಗಾರರ ಮುಖಾಮುಖಿಯಾದ ಕಾರಣ ಪುರುಷರ ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಒಂದು ಪದಕ ನಿರೀಕ್ಷೆ ಹುಸಿಯಾಗಿದೆ.

VISTARANEWS.COM


on

Paris Olympics
Koo

ಪ್ಯಾರಿಸ್: ಪ್ಯಾರಿಸ್​ ಒಲಿಂಪಿಕ್ಸ್​(Paris Olympics) ಪುರುಷರ ಡಬಲ್ಸ್​ ಬ್ಯಾಡ್ಮಿಂಟನ್​ ವಿಭಾಗದಲ್ಲಿ ವಿಶ್ವ ನಂ. 3 ಭಾರತದ ತಾರಾ ಬ್ಯಾಡ್ಮಿಂಟನ್​ ಜೋಡಿ ಸಾತ್ವಿಕ್​-ಚಿರಾಗ್​ ಶೆಟ್ಟಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ತಮ್ಮ ಒಲಿಂಪಿಕ್ಸ್‌ ಅಭಿಯಾನ ಕೊನೆಗೊಳಿಸಿದ್ದಾರೆ.

ಗುರುವಾರ ನಡೆದ ಅತ್ಯಂತ ಜಿದ್ದಾಜಿದ್ದಿನ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸಾತ್ವಿಕ್(Satwiksairaj Rankireddy)​-ಚಿರಾಗ್(Chirag Shetty)​ ಜೋಡಿ ಮಲೇಷ್ಯಾದ ಆರನ್ ಚಿಯಾ-ವೂಯಿ ಯಿಕ್ ಸೊಹ್ ಜೋಡಿ ವಿರುದ್ಧ 13-21 21-14, 21-16 ಗೇಮ್‌ಗಳ ಅಂತರದಿಂದ ಸೋತು ನಿರಾಸೆ ಎದುರಿಸಿದರು.

ಮೊದಲ ಗೇಮ್​ನಲ್ಲಿ ಒಂದು ಹಂತದ ವರೆಗೂ ಭಾರತೀಯ ಜೋಡಿಗೆ ಮಲೇಷ್ಯಾದ ಜೋಡಿ ತೀವ್ರ ಪೈಪೋಟಿ ನೀದರೂ ಕೂಡ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. 13-21 ಗೇಮ್​ಗಳ ಅಂತರದಿಂದ ಸೋಲು ಕಂಡರು. 2ನೇ ಗಮ್​ನಲ್ಲಿ ತಿರುಗಿ ಬಿದ್ದ ​ಚಿಯಾ-ವೂಯಿ ಬಲಿಷ್ಠ ಹೊಡೆತಗಳ ಮೂಲಕ ಈ ಗೇಮ್​ ಅನ್ನು 21-14 ಅಂತರದಿಂದ ಗೆದ್ದು ಪಂದ್ಯವನ್ನು 1-1 ಸಮಬಲಕ್ಕೆ ತಂದರು. ಅಂತಿಮ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಭಾರತೀಯ ಜೋಡಿಗೆ ಗೆಲ್ಲುವ ಅವಕಾಶವಿದ್ದರೂ ಕೂಡ ಹಲವು ತಪ್ಪುಗಳನ್ನು ಮಾಡಿದ ಅಂತಿಮವಾಗಿ ಕಾರಣ ಸೋಲಿಗೆ ತುತ್ತಾದರು.

ದಿನದ ಮತ್ತೊಂದು ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ  ‘ಆಲ್‌ ಇಂಡಿಯನ್‌’ ಹೋರಾಟವೊಂದಕ್ಕೆ ಅಣಿಯಾಗಿದೆ. ಲಕ್ಷ್ಯ ಸೇನ್‌(Lakshya Sen) ಮತ್ತು ಎಚ್.ಎಸ್.ಪ್ರಣಯ್(HS Prannoy) ಮುಖಾಮುಖಿಯಾಗಲಿದ್ದಾರೆ. ಉಭಯ ಆಟಗಾರರ ಮುಖಾಮುಖಿಯಾದ ಕಾರಣ ಪುರುಷರ ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಒಂದು ಪದಕ ನಿರೀಕ್ಷೆ ಹುಸಿಯಾಗಿದೆ.

ಬುಧವಾರ ತಡರಾತ್ರಿ ನಡೆದಿದ್ದ ಗ್ರೂಪ್​ ‘ಕೆ’ ವಿಭಾಗದ ಅಂತಿಮ ಲೀಗ್​ ಪಂದ್ಯದಲ್ಲಿ ಪ್ರಣಯ್​ ಅವರು ವಿಯೆಟ್ನಾಂನ ಡ್ಯೂಕ್ ಫತ್ ಲೇ ಅವರನ್ನು ಮೂರು ಸೆಟ್​ಗಳ ತೀವ್ರ ಹೋರಾಟದಲ್ಲಿ 16-21, 21-11,21-12 ಅಂತರದಿಂದ ಮಣಿಸಿ 16ರ ಹಂತಕ್ಕೆ ಮುನ್ನಡೆದಿದ್ದರು. ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಜೋನಾಥನ್ ಕ್ರಿಸ್ಟಿ ವಿರುದ್ಧ ಗೆದ್ದು ಪ್ರೀ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು.

ಲಕ್ಷ್ಯ ಸೇನ್​ ಮತ್ತು ಎಚ್.ಎಸ್.ಪ್ರಣಯ್ ಅವರು ಇದುವರೆಗೆ ಒಟ್ಟು ಏಳು ಬಾರಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಸೇನ್​ 4 ಪಂದ್ಯ ಗೆದ್ದರೆ, ಪ್ರಣಯ್​ 3 ಪಂದ್ಯ ಗೆದ್ದಿದ್ದಾರೆ. ಕಳೆದ ವರ್ಷ(2023) ಜನವರಿಯಲ್ಲಿ ನಡೆದಿದ್ದ ಇಂಡಿಯಾ ಓಪನ್‌ನಲ್ಲಿ ಉಭಯ ಆಟಗಾರರು ಕೊನೆಯ ಬಾರಿಗೆ ಎದುರಾಗಿದ್ದರು. ಈ ಪಂದ್ಯದಲ್ಲಿ ಲಕ್ಷ್ಯ 21-14, 21-15 ನೇರ ಗೇಮ್​ಗಳ ಅಂತರದಿಂದ ಗೆದ್ದು ಬೀಗಿದ್ದರು.

Continue Reading
Advertisement
utthana vaarshika katha spardhe the last date for submission of the story is october 10
ಬೆಂಗಳೂರು10 mins ago

Utthana Katha Spardhe 2024: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ; ಕಥೆ ತಲುಪಿಸಲು ಅ.10 ಕೊನೆಯ ದಿನ

World Breastfeeding Week
ಆರೋಗ್ಯ25 mins ago

World Breastfeeding Week: ವಿಶ್ವ ಸ್ತನ್ಯಪಾನ ಸಪ್ತಾಹ; ಹಾಲುಣಿಸಿದರೆ ಮಗುವಿಗೆ ಮಾತ್ರವಲ್ಲ, ತಾಯಿಗೂ ಲಾಭ!

Saree Fashion
ಫ್ಯಾಷನ್31 mins ago

Saree Fashion: ಕಂಟೆಂಪರರಿ ಪ್ರಿಂಟೆಡ್‌ ವಿನ್ಯಾಸದಲ್ಲೂ ಬಂತು ಆರ್ಗನ್ಜಾ ಸೀರೆ!

kotak bank smart watch
ವಾಣಿಜ್ಯ34 mins ago

kotak bank smart watch: ಮೊಬೈಲ್‌ ಬೇಕಿಲ್ಲ, ವಾಚ್‌ನಲ್ಲೇ ಆನ್‌ಲೈನ್‌ ಪೇಮೆಂಟ್‌! ಬಂದಿದೆ ಕೋಟಕ್-ಜಿಓಕ್ಯೂಐಐ ಸ್ಮಾರ್ಟ್ ವಾಚ್!

Paris Olympics 2024
ಪ್ರಮುಖ ಸುದ್ದಿ39 mins ago

Paris Olympics 2024 : ಭಾರತದವರೇ ಆದ ಎಚ್​ಎಸ್​ ಪ್ರಣಯ್​ ಸೋಲಿಸಿ ಕ್ವಾರ್ಟರ್​​ ಫೈನಲ್ಸ್​ಗೇರಿದ ಲಕ್ಷ್ಯ ಸೇನ್​

Wayanad Landslide
ದೇಶ43 mins ago

Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ

Central government to distribute free food grains to 80 crore beneficiaries of the country says Pralhad Joshi
ದೇಶ46 mins ago

Pralhad Joshi: ಕೇಂದ್ರ ಸರ್ಕಾರದಿಂದ 80 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ; ಪ್ರಲ್ಹಾದ್‌ ಜೋಶಿ

ICW 2024
ಫ್ಯಾಷನ್2 hours ago

ICW 2024: ಟ್ರೆಂಡ್‌ ಲಿಸ್ಟ್‌ಗೆ ಸೇರಿದ ಇಂಡಿಯಾ ಕೌಚರ್‌ ವೀಕ್‌ನ ಡಿಸೈನರ್‌ ವೇರ್‌ಗಳಿವು!

Diksha Daga
ಕ್ರೀಡೆ2 hours ago

Diksha Dagar : ಗಾಲ್ಫರ್​ ದೀಕ್ಷಾ ದಾಗರ್​ ಪ್ರಯಾಣಿಸುತ್ತಿದ್ದ ಕಾರು ಪ್ಯಾರಿಸ್​​ನಲ್ಲಿ ಅಪಘಾತ

Puja Khedkar
ದೇಶ2 hours ago

Puja Khedkar: ಮಾಜಿ ಟ್ರೈನಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ಗೆ ಮತ್ತೊಂದು ಸಂಕಷ್ಟ; ಜಾಮೀನು ಅರ್ಜಿ ವಜಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ7 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ8 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ8 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌