Rohit Sharma: ನಿಜಕ್ಕೂ ನಿರಾಸೆಗೊಂಡಿದ್ದೇನೆ ಎಂದ ರೋಹಿತ್​; ಕಾರಣವೇನು? - Vistara News

ಕ್ರೀಡೆ

Rohit Sharma: ನಿಜಕ್ಕೂ ನಿರಾಸೆಗೊಂಡಿದ್ದೇನೆ ಎಂದ ರೋಹಿತ್​; ಕಾರಣವೇನು?

Rohit Sharma: ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತ್ತು.

VISTARANEWS.COM


on

Rohit Sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಲಂಬೊ: ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ(Sri Lanka vs India 1st ODI) ಪಂದ್ಯದಲ್ಲಿ ಗೆಲ್ಲುವ ಅವಕಾಶವಿದ್ದರೂ ಕೂಡ ಇದನ್ನು ಸದುಪಯೋಗಪಡಿಸುವಲ್ಲಿ ಸಹ ಆಟಗಾರರು ಎಡವಿದ ಬಗ್ಗೆ ನಾಯಕ ರೋಹಿತ್​ ಶರ್ಮ(Rohit Sharma) ಬೇಸರ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಈ ಪಂದ್ಯದ ಬಳಿಕ ನಿರಾಸೆಗೊಂಡಿದ್ದೇನೆ ಎಂದು ಹೇಳಿದ್ದಾರೆ. ಪಂದ್ಯ ಟೈನಲ್ಲಿ ಅಂತ್ಯ ಕಂಡಿತ್ತು.

ಪಂದ್ಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್, 230 ರನ್​ಗಳನ್ನು ಸುಲಭವಾಗಿ ಚೇಸಿಂಗ್ ಮಾಡಬಹುದಾಗಿತ್ತು. ಆದರೆ ಕೊನೆಯಲ್ಲಿ ನಮ್ಮ ಆಟ ನಿರಾಶಾದಾಯಕವಾಗಿತ್ತು. 14 ಎಸೆತಗಳಲ್ಲಿ ಗೆಲುವಿಗೆ ಕೇವಲ 1 ರನ್​ ಬೇಕಿದ್ದರೂ ಕೂಡ ಇದನ್ನು ಗಳಿಸಲು ಸಾಧ್ಯವಾಗದೇ ಇರುವುದು ನೋವಿನ ಸಂಗತಿ. ಈ ಪಂದ್ಯ ನಮ್ಮ ಪಾಲಿಗೆ ನಿರಾಸೆ ತಂದಿದೆ. ಎಂದು ಹೇಳುವ ಮೂಲಕ ರೋಹಿತ್​ ಸಹ ಆಟಗಾರರ ಕಳಪೆ ಮತ್ತು ನಿರ್ಲಕ್ಷ್ಯದ ಬ್ಯಾಟಿಂಗ್​ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 47.5 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟಾಯಿತು. ಗೆಲುವಿಗೆ ಒಂದು ರನ್​ ಬೇಕಿದ್ದಾಗ ಶಿವಂ ದುಬೆ ಮತ್ತು ಅರ್ಶ್​ದೀಪ್​ ಸಿಂಗ್​ ಸತತವಾಗಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದು ವಿಕೆಟ್​ ಕೈಚೆಲ್ಲಿದರು. ಸೋಲುವ ಭೀತಿಯಲ್ಲಿದ್ದ ಲಂಕಾ ಅಸಾಮಾನ್ಯ ಪ್ರದರ್ಶನ ತೋರಿ ಪಂದ್ಯವನ್ನು ಟೈ ಗೊಳಿಸುವ ಮೂಲಕ ನಿಟ್ಟುಸಿರುಬಿಟ್ಟಿತು.

ಇದನ್ನೂ ಓದಿ Rohit Sharma: ಲಂಕಾ ವಿರುದ್ಧ ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್​ ಶರ್ಮ

ಭಾರತ ಪರ ಚೇಸಿಂಗ್​ನಲ್ಲಿ ನಾಯಕ ರೋಹಿತ್​ ಶರ್ಮ 47 ಎಸೆತಗಳಿಂದ 58 ರನ್​ ಬಾರಿಸಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಯಿತು. ಉಳಿದಂತೆ ಕೆ.ಎಲ್​ ರಾಹುಲ್​ 31, ಅಕ್ಷರ್​ ಪಟೇಲ್​ 33 ರನ್​ ಬಾರಿಸಿದರು.

ಮಾರ್ಗನ್​ ದಾಖಲೆ ಮುರಿದ ರೋಹಿತ್​


47 ಎಸೆತಗಳಿಂದ 58 ರನ್​ ಬಾರಿಸಿದ ರೋಹಿತ್​ ತಮ್ಮ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್​ ಬಾರಿಸಿದರು. ಈ ಮೂರು ಸಿಕ್ಸರ್​​ ಬಾರಿಸಿದ ವೇಳೆ ರೋಹಿತ್​ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್‌ ಮಾರ್ಗನ್​(233 ಸಿಕ್ಸರ್​) ಹೆಸರಿನಲ್ಲಿತ್ತು. ಇದೀಗ ರೋಹಿತ್(234 ಸಿಕ್ಸರ್​)​ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. 211 ಸಿಕ್ಸರ್​ ಬಾರಿಸಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.

ನಾಯಕನಾಗಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು


ರೋಹಿತ್​ ಶರ್ಮ-234 ಸಿಕ್ಸರ್​

ಇಯಾನ್​ ಮಾರ್ಗನ್​-233 ಸಿಕ್ಸರ್

ಮಹೇಂದ್ರ ಸಿಂಗ್​ ಧೋನಿ-211 ಸಿಕ್ಸರ್​

ರಿಕಿ ಪಾಂಟಿಂಗ್​-171 ಸಿಕ್ಸರ್​

ಬ್ರೆಂಡನ್​ ಮೆಕಲಮ್​-170 ಸಿಕ್ಸರ್​ 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics 2024 : ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಮದುವೆ ಪ್ರಪೋಸ್ ಮಾಡಿದ ಚೀನಾದ ಷಟ್ಲರ್​!

Paris Olympics 2024 : ಲಿಯು ಯುಚೆನ್ ತನ್ನ ಜೇಬಿನಿಂದ ಪೊಟ್ಟಣ ತೆಗೆದು ಮದುವೆಯ ಉಂಗುರವನ್ನು ತೊಡಿಸಿದರು. ಈ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಸಂಭ್ರಮದಿಂದ ಚಪ್ಪಾಳೆ ತಟ್ಟಿದರು. ಪ್ಯಾರಿಸ್​ನಲ್ಲಿ ನಡೆದ ಮಿಶ್ರ ಡಬಲ್ಸ್​ನಲ್ಲಿ ಅಗ್ರ ಶ್ರೇಯಾಂಕದ ಹುವಾಂಗ್ ಯಾಕಿಯಾಂಗ್ ಅವರು ಜೆಂಗ್ ಸಿ ವೀ ಅವರೊಂದಿಗೆ ಚಿನ್ನ ಗೆದ್ದಿದ್ದರು.

VISTARANEWS.COM


on

Paris Olympics 2024
Koo

ಬೆಂಗಳೂರು: ಚೀನಾದ ಮಹಿಳಾ ಬ್ಯಾಡ್ಮಿಂಟನ್ ತಾರೆ ಹುವಾಂಗ್ ಯಾಕಿಯಾಂಗ್, ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಚಿನ್ನದ ಪದಕದ ಜತೆಗೆ ಮದುವೆಯ ಉಂಗುರವನ್ನು ಕೂಡ ಪಡೆದುಕೊಂಡಿದ್ದಾರೆ! ಹೌದು, ಆಗಸ್ಟ್ 2ರ ಶುಕ್ರವಾರ ನಡೆದ ಪದಕ ವಿತರಣೆ ಸಮಾರಂಭದ ನಂತರ 30 ವರ್ಷದ ಶಟ್ಲರ್​ಗೆ ಅವರ ಗೆಳೆಯ ಸಹ ಶಟ್ಲರ್ ಲಿಯು ಯುಚೆನ್ ಮದುವೆ ಪ್ರಪೋಸಲ್​ ಸಲ್ಲಿಸಿದರು. ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಪಂದ್ಯಗಳನ್ನು ಆಯೋಜಿಸುವ ಲಾ ಚಾಪೆಲ್ ಅರೆನಾದಲ್ಲಿ ಲಿಯು ಮೊಣಕಾಲುಗಳ ಮೇಲೆ ನಿಂತು ಬ್ಯಾಡ್ಮಿಂಟನ್​ನಲ್ಲಿ ಚೀನಾಕ್ಕೆ ಮೊದಲ ಚಿನ್ನದ ಪದಕ ಗೆದ್ದು ಕೊಟ್ಟ ಹುವಾಂಗ್ ಅವರಿಗೆ ಮದುವೆ ಪ್ರಸ್ತಾಪ ಇಟ್ಟರು.

ಲಿಯು ಯುಚೆನ್ ತನ್ನ ಜೇಬಿನಿಂದ ಪೊಟ್ಟಣ ತೆಗೆದು ಮದುವೆಯ ಉಂಗುರವನ್ನು ತೊಡಿಸಿದರು. ಈ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಸಂಭ್ರಮದಿಂದ ಚಪ್ಪಾಳೆ ತಟ್ಟಿದರು. ಪ್ಯಾರಿಸ್​ನಲ್ಲಿ ನಡೆದ ಮಿಶ್ರ ಡಬಲ್ಸ್​ನಲ್ಲಿ ಅಗ್ರ ಶ್ರೇಯಾಂಕದ ಹುವಾಂಗ್ ಯಾಕಿಯಾಂಗ್ ಅವರು ಜೆಂಗ್ ಸಿ ವೀ ಅವರೊಂದಿಗೆ ಚಿನ್ನ ಗೆದ್ದಿದ್ದರು.

ಇದನ್ನೂ ಓದಿ: MS Dhoni : 2007 ವಿಶ್ವ ಕಪ್ ಹೀರೋ ಜೋಗಿಂದರ್​ ಶರ್ಮಾ ಭೇಟಿಯಾದ ಎಂ. ಎಸ್​ ಧೋನಿ

ಹುವಾಂಗ್ ಯಾಕಿಯಾಂಗ್ ಕೊರಳಲ್ಲಿ ಚಿನ್ನದ ಪದಕ ಧರಿಸಿದ್ದರು. ಪದಕ ಸಮಾರಂಭದ ನಂತರ ಅಖಾಡದಿಂದ ಹೊರಬರಲು ಕಾಯುತ್ತಿದ್ದಾಗ ಲಿಯು ಯುಚೆನ್ ಅಖಾಡಕ್ಕೆ ನಡೆದು ಶಟ್ಲರ್ ಅಚ್ಚರಿ ಒಟ್ಟರು. ಲಿಯು ಮೊಣಕಾಲುಗಳ ಮೇಲೆ ಕುಳಿತು ಅವಳನ್ನು ಮದುವೆಯಾಗುವ ಪ್ರಸ್ತಾಪ ಸಲ್ಲಿಸಿದಾಗ ಹುವಾಂಗ್ ಭಾವುಕರಾದರು. ಲಿಯು ಮತ್ತು ಸ್ಥಳದಲ್ಲಿ ಕಿಕ್ಕಿರಿದಿದ್ದ ಜನಸಮೂಹಕ್ಕೆ ಸಂತೋಷವಾಗುವಂತೆ, ಹುವಾಂಗ್ ‘ಒಪ್ಪಿಗೆ’ ಎಂದು ಹೇಳಿದರು.

ಉಂಗುರದಿಂದ ಆಶ್ಚರ್ಯವಾಯಿತು

ಆಶ್ಚರ್ಯಕರ ಮದುವೆ ಪ್ರಸ್ತಾಪ ಸ್ವೀಕರಿಸಿದ ನಂತರ ಮಾತನಾಡಿದ ಹುವಾಂಗ್ ಯಾಕಿಯಾಂಗ್, ಇದು ಅಚ್ಚರಿ. ನಿಶ್ಚಿತಾರ್ಥದ ಉಂಗುರದ ನಿರೀಕ್ಷೆ ಇರಲಿಲ್ಲ ಎಂದು ಹೇಳಿದರು. ನಾವಿಬ್ಬರೂ ಕ್ರೀಡಾಕೂಟಕ್ಕೆ ಮುಂಚಿತವಾಗಿ ಸಿದ್ಧತೆಯ ಬಗ್ಗೆ ಅವರು ಸಂಪೂರ್ಣವಾಗಿ ಗಮನ ಹರಿಸಿದ್ದೆವು ಎಂದು ಹೇಳಿದರು.

“ನಾನು ತುಂಬಾ ಸಂತೋಷವಾಗಿದ್ದೇನೆ, ಎಂದು ಹುವಾಂಗ್ ಹೇಳಿದ್ದಾರೆ. ಅವರು ಚಿನ್ನದ ಪದಕ ಪಡೆಯುವುದು ನಮ್ಮ ಪ್ರಯಾಣಕ್ಕೆ ದೊರೆತ ಮುನ್ನುಡಿಯಾಗಿದೆ. ನಿಶ್ಚಿತಾರ್ಥದ ಉಂಗುರದಿಂದ ನನಗೆ ಆಶ್ಚರ್ಯವಾಯಿತು. ನಾನು ಒಲಿಂಪಿಕ್ ಚಾಂಪಿಯನ್ ಆಗಲು ತರಬೇತಿಯತ್ತ ಗಮನ ಹರಿಸುತ್ತಿದ್ದೇನೆ. ನಾನು ಮದುವೆಯನ್ನು ನಿರೀಕ್ಷಿಸಿರಲಿಲ್ಲ” ಎಂದು ಅವರು ಹೇಳಿದರು.

ಲಿಯು ಯುಚೆನ್ ಮತ್ತು ಅವರ ಡಬಲ್ಸ್ ಪಾಲುದಾರ ಓ ಕ್ಸುವಾನ್ ಯಿ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಲಿಯು ಮತ್ತು ಕ್ಸುವಾನ್ ಯಿ ಇಲ್ಲಿ ಗುಂಪು ಹಂತದಿಂದಲೇ ಹೊರಕ್ಕೆ ಬಿದ್ದಿದ್ದರು.

ಹುವಾಂಗ್ ಯಾಕಿಯಾಂಗ್ ಮತ್ತು ಝೆನ್ ಸಿ ವೀ ಪ್ಯಾರಿಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್​​ನಲ್ಲಿ ಮೊದಲ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಚಿನ್ನದ ಪದಕದ ಪಂದ್ಯದಲ್ಲಿ ಅವರು ಕಿಮ್ ವೊನ್ ಹೋ ಮತ್ತು ಜಿಯೊಂಗ್ ನಾ ಯುನ್ ವಿರುದ್ಧ ಆರಂಭದಿಂದ ಅಂತ್ಯದವರೆಗೆ ಪ್ರಾಬಲ್ಯ ಸಾಧಿಸಿದರು. ಕೊರಿಯಾದ ಜೋಡಿಯನ್ನು 21-8, 21-11 ರಿಂದ ಸೋಲಿಸಿದ್ದರು. ಪಂದ್ಯ ಕೇವಲ 41 ನಿಮಿಷಗಳಲ್ಲಿ ಮುಕ್ತಾಯಗೊಂಡಿತ್ತು.

27ರ ಹರೆಯದ ಝೆಂಗ್, ಪ್ಯಾರಿಸ್ ಒಲಿಂಪಿಕ್ಸ್ ಒಲಿಂಪಿಕ್ಸ್​ನ್ಲ್ಲಿ ತನ್ನ ಕೊನೆಯ ಪ್ರದರ್ಶನ ಎಂದು ದೃಢಪಡಿಸಿದ್ದರು. ಜೆಂಗ್ ತನ್ನ ಕುಟುಂಬದೊಂದಿಗೆ ಒಲಿಂಪಿಕ್ಸ್ ಗೆ ಪ್ರಯಾಣಿಸಿ ಇದೀಗ ಚಿನ್ನ ಗೆದ್ದಿದ್ದಾರೆ.

Continue Reading

ಕ್ರೀಡೆ

MS Dhoni : 2007 ವಿಶ್ವ ಕಪ್ ಹೀರೋ ಜೋಗಿಂದರ್​ ಶರ್ಮಾ ಭೇಟಿಯಾದ ಎಂ. ಎಸ್​ ಧೋನಿ

MS Dhoni : ಅನನುಭವಿ ಜೋಗಿಂದರ್ ಶರ್ಮಾ ಅವರಿಗೆ ಧೋನಿ ಅಂತಿಮ ಓವರ್​ ಎಸೆಯಲು ಕೊಟ್ಟಿರುವುದು ದೊಡ್ಡ ವಿಶೇಷ. ಎಂಎಸ್ ಧೋನಿ ಅವರ ತಂತ್ರಗಾರಿಕೆಯಿಂದ ಎಲ್ಲವನ್ನೂ ನಿಭಾಯಿಸಿದ್ದರು. ಹೀಗಾಗಿ 2007 ರಲ್ಲಿ ಭಾರತ ಟಿ 20 ವಿಶ್ವಕಪ್ ಗೆದ್ದಿದ್ದರು. ಜೋಹಾನ್ಸ್​ಬರ್ಗ್​ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯವು ಎಂಎಸ್ ಧೋನಿ ಅವರ ತಂತ್ರಗಾರಿಕೆಯನ್ನು ಸಂಪೂರ್ಣವಾಗಿ ಪ್ರದರ್ಶಿಸಿತ್ತು. ಧೋನಿ ದಿಟ್ಟ ಮತ್ತು ಅಸಾಂಪ್ರದಾಯಿಕ ನಿರ್ಧಾರವನ್ನು ತೆಗೆದುಕೊಂಡರು, ಅದು ಕ್ರಿಕೆಟ್ ಇತಿಹಾಸದಲ್ಲಿ ದಂತಕಥೆಯಾಗಲಿದೆ.

VISTARANEWS.COM


on

MS Dhoni
Koo

ಬೆಂಗಳೂರು: ಭಾರತದ ಮಾಜಿ ನಾಯಕ ಎಂಎಸ್ ಧೋನಿ (MS Dhoni ) ಹಾಗೂ 2007 ರ ಟಿ 20 ವಿಶ್ವಕಪ್​​ ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಅಂತಿಮ ಓವರ್ ಎಸೆದ ಜೋಗಿಂದರ್ ಶರ್ಮಾ (Joginder Sharma) ಅವರು ಪರಸ್ಪರ ಭೇಟಿಯಾಗಿದ್ದಾರೆ. ಜೋಗಿಂದರ್ ಶರ್ಮಾ ತಮ್ಮ ಇನ್​ಸ್ಟಾಗ್ರಾಮ್​ ಮೂಲಕ ತಮ್ಮ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 12 ವರ್ಷಗಳ ನಂತರ ಧೋನಿಯನ್ನು ಭೇಟಿಯಾಗಿರುವುದು ನಿಜವಾಗಿಯೂ ಸಂತೋಷದ ಸಂಗತಿ ಎಂದು ಬರೆದುಕೊಂಡಿದ್ದಾರೆ. ಜೋಗಿಂದರ್ ಅವರು ‘ಏ ಯಾರ್ ಸುನ್ ಯಾರಿ ತೇರಿ’ ಎಂಬ ಹಳೆಯ ಹಿಂದಿ ಹಾಡನ್ನು ಕೂಡ ಅದಕ್ಕೆ ಹಿನ್ನೆಲೆಯಾಗಿ ಬಳಸಿಕೊಂಡಿದ್ದಾರೆ. “ಬಹಳ ಸಮಯದ ನಂತರ ಧೋನಿಯನ್ನು ಭೇಟಿಯಾಗಿರುವುದು ಸಂತೋಷ ತಂದಿದೆ. 12 ವರ್ಷಗಳ ನಂತರ ನಿಮ್ಮನ್ನು ಭೇಟಿಯಾಗುವ ಖುಷಿಯೇ ಇಂದು ವಿಭಿನ್ನ ಎಂದು ಬರೆದುಕೊಂಡಿದ್ದಾರೆ.

ಜೋಗಿಂದರ್ ಶರ್ಮಾ ಅವರೀಗ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಡಿಎಸ್​ಪಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ತಮ್ಮ ಉತ್ತಮ ಕಾರ್ಯಕಗಳ ಮೂಲಕ ಈ ಹಿಂದೆಯೂ ಸಾಕಷ್ಟು ಬಾರಿ ಜನ ಪರ ಕಾರ್ಯಗಳ ಮೂಲಕ ಖ್ಯಾತಿ ಪಡೆದುಕೊಂಡಿದ್ದರು.

ಅನನುಭವಿ ಜೋಗಿಂದರ್ ಶರ್ಮಾ ಅವರಿಗೆ ಧೋನಿ ಅಂತಿಮ ಓವರ್​ ಎಸೆಯಲು ಕೊಟ್ಟಿರುವುದು ದೊಡ್ಡ ವಿಶೇಷ. ಎಂಎಸ್ ಧೋನಿ ಅವರ ತಂತ್ರಗಾರಿಕೆಯಿಂದ ಎಲ್ಲವನ್ನೂ ನಿಭಾಯಿಸಿದ್ದರು. ಹೀಗಾಗಿ 2007 ರಲ್ಲಿ ಭಾರತ ಟಿ 20 ವಿಶ್ವಕಪ್ ಗೆದ್ದಿದ್ದರು. ಜೋಹಾನ್ಸ್​ಬರ್ಗ್​ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯವು ಎಂಎಸ್ ಧೋನಿ ಅವರ ತಂತ್ರಗಾರಿಕೆಯನ್ನು ಸಂಪೂರ್ಣವಾಗಿ ಪ್ರದರ್ಶಿಸಿತ್ತು. ಧೋನಿ ದಿಟ್ಟ ಮತ್ತು ಅಸಾಂಪ್ರದಾಯಿಕ ನಿರ್ಧಾರವನ್ನು ತೆಗೆದುಕೊಂಡರು, ಅದು ಕ್ರಿಕೆಟ್ ಇತಿಹಾಸದಲ್ಲಿ ದಂತಕಥೆಯಾಗಲಿದೆ.

ಜೋಗಿಂದರ್ ಬೌಲಿಂಗ್ ಮಾಡಲು ಧೋನಿಯ ಪ್ರತಿಭೆ

ಅನುಭವಿ ಬ್ಯಾಟರ್​​ ಮಿಸ್ಬಾ ಉಲ್ ಹಕ್ ಕ್ರೀಸ್​ನಲ್ಲಿದ್ದರು. ಪಾಕಿಸ್ತಾನಕ್ಕೆ ಗೆಲ್ಲಲು ಕೊನೆಯ ಓವರ್​ನಲ್ಲಿ 12 ರನ್​ಗಳ ಅವಶ್ಯಕತೆಯಿತ್ತು. ಅನುಭವಿ ಬೌಲರ್​ಗಳನ್ನು ಆಯ್ಕೆ ಮಾಡುವ ಬದಲು, ಧೋನಿ ಅನನುಭವಿ ಬೌಲರ್ ಜೋಗಿಂದರ್ ಶರ್ಮಾಗೆ ವಹಿಸಿದರು. ಈ ನಿರ್ಧಾರವು ಎಲ್ಲರವನ್ನೂ ಹುಬ್ಬೇರುವಂತೆ ಮಾಡಿತು. ಆದರೆ ಧೋನಿ ಅವರ ಕಾರ್ಯತಂತ್ರದ ಮೇಲಿನ ನಂಬಿಕೆ ಕುಸಿಯಲಿಲ್ಲ. ‘

ಇದನ್ನೂ ಓದಿ: Paris Oylmpics 2024 : ಹಳದಿ ಬಣ್ಣದ ಜೆರ್ಸಿಯವರನ್ನು ಸೋಲಿಸುವುದೆಂದರೆ ಖುಷಿ; ಹಾಕಿ ತಂಡದ ಗೆಲುವನ್ನು ಮುಂದಿಟ್ಟುಕೊಂಡು ಸಿಎಸ್​​ಕೆಯನ್ನು ಲೇವಡಿ ಮಾಡಿದ ಆರ್​ಸಿಬಿ

ಜೋಗಿಂದರ್ ಓವರ್ ವೈಡ್ ಹಾಕುವ ಮೂಲಕ ಪ್ರಾರಂಭಿಸಿದರು. ಇದು ಬೇಸರವನ್ನು ಮತ್ತಷ್ಟು ಹೆಚ್ಚಿಸಿತು. ಮುಂದಿನ ಎಸೆತದಲ್ಲಿ ಮಿಸ್ಬಾ ಸಿಡಿಸಿದ ಸಿಕ್ಸರ್ ಪಾಕಿಸ್ತಾನವನ್ನು ಗೆಲುವಿನ ಸನಿಹಕ್ಕೆ ತಂದಿತು. ನಾಲ್ಕು ಎಸೆತಗಳಲ್ಲಿ ಕೇವಲ ಆರು ರನ್​ಗಳ ಅವಶ್ಯಕತೆಯಿತ್ತು. ಒತ್ತಡವು ಹೆಚ್ಚಿತ್ತು. ಆದರೆ ಧೋನಿ ಶಾಂತವಾಗಿದ್ದರು, ಜೋಗಿಂದರ್ ಅವರಿಗೆ ಮತ್ತೊಂದು ಕಾರ್ಯಯೋಜನೆಯನ್ನು ವಿವರಿಸಿದರು.

ನಾಲ್ಕನೇ ಎಸೆತದಲ್ಲಿ ಮಿಸ್ಬಾ ಅಪಾಯಕಾರಿ ಹೊಡೆತ ಹೊಡೆಯಲು ಮುಂದಾದರು. ಸ್ಕೂಪ್ ಶಾಟ್ ಅದು. ಚೆಂಡು ಶಾರ್ಟ್​ ಲೆಗ್​ ಕಡೆಗೆ ಹಾರಿತು. ಅಲ್ಲಿ ನಿಂತಿದ್ದ ಶ್ರೀಶಾಂತ್ ಕ್ಯಾಚ್ ಪಡೆದರು. ಮಿಸ್ಬಾ ಔಟಾದರು ಮತ್ತು ಭಾರತವು ಉದ್ಘಾಟನಾ ಟಿ 20 ವಿಶ್ವಕಪ್ ಅನ್ನು ಐದು ರನ್​ಗಳಿಂದ ಗೆದ್ದಿತ್ತು.

ಅಂತಿಮ ಓವರ್​ನಲ್ಲಿ ಜೋಗಿಂದರ್ ಶರ್ಮಾ ಅವರನ್ನು ಬಳಸಿಕೊಳ್ಳುವ ಧೋನಿಯ ನಿರ್ಧಾರವು ಮಾಸ್ಟರ್ ಸ್ಟ್ರೋಕ್ ಆಗಿತ್ತು, ಇದು ಆಟ ಮತ್ತು ಅವರ ಆಟಗಾರರ ಬಗ್ಗೆ ಅವರ ಆಳವಾದ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಒತ್ತಡದಲ್ಲಿ ಸಂಯೋಜಿತರಾಗಿ ಉಳಿಯುವ ಮತ್ತು ದಿಟ್ಟ ಆಯ್ಕೆಗಳನ್ನು ಮಾಡುವ ಅವರ ಸಾಮರ್ಥ್ಯವು ಅವರ ನಾಯಕತ್ವವನ್ನು ವ್ಯಾಖ್ಯಾನಿಸಿದೆ. ಈ ಗೆಲುವು ಟಿ 20 ಕ್ರಿಕೆಟ್​​ನಲ್ಲಿ ಭಾರತದ ಶಕ್ತಿಯಾಗಿ ಹೊರಹೊಮ್ಮಿದ್ದು ಮಾತ್ರವಲ್ಲ, ಕ್ರೀಡೆಯಲ್ಲಿ ಅತ್ಯಂತ ಚತುರ ಧೋನಿ ಎಂಬ ಖ್ಯಾತಿ ತಂದಿತು.

ಆ ಮರೆಯಲಾಗದ ಪಂದ್ಯದಲ್ಲಿ, ಧೋನಿಯ ಶಾಂತ ಮತ್ತು ತಂಪಾದ ನಡವಳಿಕೆ ಮತ್ತು ಒತ್ತಡದಲ್ಲಿ ಜೋಗಿಂದರ್ ಶರ್ಮಾ ಅವರ ಧೈರ್ಯವು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳುವ ಮ್ಯಾಜಿಕ್ ಕ್ಷಣವನ್ನು ಸೃಷ್ಟಿಸಿತು

Continue Reading

ಕ್ರೀಡೆ

Paris Olympics: 40 ಎ.ಸಿ. ಕಳುಹಿಸಿದ ಕ್ರೀಡಾ ಸಚಿವಾಲಯಕ್ಕೆ ಧನ್ಯವಾದ ತಿಳಿಸಿದ ಅಥ್ಲೀಟ್​ಗಳು

Paris Olympics: ಒಲಿಂಪಿಕ್ಸ್ ಆರಂಭಕ್ಕೂ ಮೊದಲೇ ಬಹಳಷ್ಟು ದೇಶದ ಕ್ರೀಡಾಪಟುಗಳು ಪ್ಯಾರಿಸ್​ ತಾಪಮಾನದ ಕುರಿತು ಆತಂಕ ವ್ಯಕ್ತಪಡಿಸಿದ್ದರು

VISTARANEWS.COM


on

Koo

ಪ್ಯಾರಿಸ್: ಒಲಿಂಪಿಕ್ಸ್​ ನಡೆಯುತ್ತಿರುವ ಪ್ಯಾರಿಸ್‌ನಲ್ಲಿ(Paris Olympics) ವಿಪರೀತ ತಾಪಮಾನ(paris temperature) ಏರಿಕೆಯಾಗಿದ್ದು ಕ್ರೀಡಾಪಟುಗಳು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತೀಯ ಕ್ರೀಡಾ ಪಟುಗಳಿಗಾಗಿ ಕ್ರೀಡಾ ಸಚಿವಾಲಯ 40 ಎಸಿ ಯಂತ್ರಗಳನ್ನು ಪೂರೈಸಿದೆ. ತಂಪಾದ ಎಸಿಯ ಗಾಳಿ ಪಡೆಯುತ್ತಿರುವ ಫೋಟೊವನ್ನು ಭಾರತೀಯ ಅಥ್ಲೀಟ್​ಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಧನ್ಯವಾದ ತಿಳಿಸಿದ್ದಾರೆ.

ಭಾರತೀಯ ಒಲಿಂಪಿಕ್ ಸಮಿತಿ ಹಾಗೂ ಫ್ರೆಂಚ್ ರಾಯಭಾರ ಕಚೇರಿಯೊಂದಿಗಿನ ಚರ್ಚೆಯ ನಂತರ ಕ್ರೀಡಾ ಗ್ರಾಮಕ್ಕೆ ಸಚಿವಾಲಯವು ಈ ಹವಾನಿಯಂತ್ರಿತ ಸಾಧನವನ್ನು ರವಾನಿಸಿದೆ. ‘ಪ್ಯಾರಿಸ್‌ನಲ್ಲಿ ತಾಪಮಾನ ಸಹಿಸುವುದು ಕ್ರೀಡಾಪಟುಗಳಿಗೆ ಕಷ್ಟಸಾಧ್ಯವಾಗಿದೆ. ಒಲಿಂಪಿಕ್ಸ್‌ ನಡೆಯುತ್ತಿರುವ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಾಗಿದೆ’ ಎಂದು ಸಚಿವಾಲಯವು ಹೇಳಿದೆ.

ಒಲಿಂಪಿಕ್ಸ್ ಆರಂಭಕ್ಕೂ ಮೊದಲೇ ಬಹಳಷ್ಟು ದೇಶದ ಕ್ರೀಡಾಪಟುಗಳು ಪ್ಯಾರಿಸ್​ ತಾಪಮಾನದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಆದರೆ ಇಂಗಾಲದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಹವಾನಿಯಂತ್ರಿತ ಸಾಧವನ್ನು ತ್ಯಜಿಸಲಾಗಿದೆ ಎಂಬ ಮಾತುಗಳು ಆಯೋಜಕರಿಂದ ಕೇಳಿಬಂದಿದ್ದವು. ಸದ್ಯ ಭಾರತ ಒಲಿಂಪಿಕ್ಸ್​ನಲ್ಲಿ 3 ಕಂಚಿನ ಪದಕ ಗೆದ್ದಿದೆ. ಮನು ಭಾಕರ್​ ಅವರು 25 ಮೀ. ಪಿಸ್ತೂಲ್​ ಶೂಟಿಂಗ್​ ಫೈನಲ್​ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪದಕ ವಂಚಿತರಾದರು. ಒಂದೊಮ್ಮೆ ಗೆಲುವು ಸಾಧಿಸುತ್ತಿದ್ದರೆ ಭಾರತದ ಪದಕ ಸಂಖ್ಯೆ ನಾಲ್ಕಕ್ಕೇರುತ್ತಿತ್ತು. 

ಇದನ್ನೂ ಓದಿ Paris Olympics Archery: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ದೀಪಿಕಾ; ಭಜನ್ ಕೌರ್​ಗೆ ಸೋಲು

ಫೈನಲ್​ ಹಂತದ ಮೊದಲ ಸುತ್ತಿನಲ್ಲಿ 6 ಅಂಕ ಗಳಿಸಿ 4ನೇ ಸ್ಥಾನಿಯಾದ ಭಾಕರ್​ ಆ ಬಳಿಕದ ಸುತ್ತಿನಲ್ಲಿ ಪ್ರಗತಿ ಸಾಧಿಸಿ 2ನೇ ಸ್ಥಾನದೊಂದಿಗೆ ಈ ಸುತ್ತು ಮುಗಿಸಿದರು. 2ನೇ ಸುತ್ತಿನಲ್ಲಿ ಒಮ್ಮೆ 6ನೇ ಸ್ಥಾನಕ್ಕೆ ಕುಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ಮತ್ತೆ ಯಶಸ್ಸು ಸಾಧಿಸಿದರು. ಆದರೆ ಅಂತಿಮ ಹಂತದಲ್ಲಿ 28 ಅಂಕ ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೊರಿಯಾದ ಯಾಂಗ್ ಜಿನ್ ಚಿನ್ನದ ಪದಕ ಗೆದ್ದರು. ಆತಿಥೇಯ ದೇಶದ ಕ್ಯಾಮಿಲ್ಲೆ ಬೆಳ್ಳಿ, ಹಂಗೇರಿಯ ಕಂಚು ಗೆದ್ದರು.

ಪದಕ ನಿರೀಕ್ಷೆಯಲ್ಲಿ ದೀಪಿಕಾ ಕುಮಾರಿ

 ದೀಪಿಕಾ ಕುಮಾರಿ(Deepika Kumari) ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​(Paris Olympics)ನಲ್ಲಿ ಪದಕ ಗೆಲ್ಲುವ ಇರಾದೆಯಲ್ಲಿದ್ದಾರೆ. ಮಹಿಳಾ ಸಿಂಗಲ್ಸ್​ ಆರ್ಚರಿಯಲ್ಲಿ(Paris Olympics Archery) ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್​ನಲ್ಲಿ 2ನೇ ಬಾರಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿದರು. ಕ್ವಾರ್ಟರ್​ ಫೈನಲ್​ ಪಂದ್ಯ ಇಂದೇ ನಡೆಯಲಿದ್ದು ದಕ್ಷಿಣ ಕೊರಿಯಾದ ನಾಮ್ ಸು-ಹ್ಯೆನ್ ವಿರುದ್ಧ ಸೆಣಸಾಡಲಿದ್ದಾರೆ.

ಇಂದು(ಶನಿವಾರ) ನಡೆದ ಅತ್ಯಂತ ರೋಚಕ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ  ಜರ್ಮನಿಯ 13 ಶ್ರೇಯಾಂಕದ ಮೈಕಲ್‌ ಕ್ರೋಪೆನ್‌ ವಿರುದ್ಧ 6-4 ಅಂತರದಿಂದ ಗೆದ್ದು ಬೀಗಿದರು. ಆದರೆ, ಇದೇ ವಿಭಾಗದ ಮತ್ತೊಂದು ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ  18 ವರ್ಷದ ಭಜನ್ ಕೌರ್(Bhajan Kaur) ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ 5-6 ಕೂದಲೆಳೆ ಅಂತರದಲ್ಲಿ ಸೋಲು ಕಂಡರು.

Continue Reading

ಕ್ರೀಡೆ

Paris Olympics Archery: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ದೀಪಿಕಾ; ಭಜನ್ ಕೌರ್​ಗೆ ಸೋಲು

Paris Olympics Archery: ಮಹಿಳಾ ಸಿಂಗಲ್ಸ್​ ಆರ್ಚರಿಯಲ್ಲಿ  18 ವರ್ಷದ ಭಜನ್ ಕೌರ್(Bhajan Kaur) ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ 5-6 ಕೂದಲೆಳೆ ಅಂತರದಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.

VISTARANEWS.COM


on

Paris Olympics
Koo

ಪ್ಯಾರಿಸ್​: ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಿರಾಸೆ ಎದುರಿಸಿದ್ದ ದೀಪಿಕಾ ಕುಮಾರಿ(Deepika Kumari) ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​(Paris Olympics)ನಲ್ಲಿ ಪದಕ ಗೆಲ್ಲುವ ಇರಾದೆಯಲ್ಲಿದ್ದಾರೆ. ಮಹಿಳಾ ಸಿಂಗಲ್ಸ್​ ಆರ್ಚರಿಯಲ್ಲಿ(Paris Olympics Archery) ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್​ನಲ್ಲಿ 2ನೇ ಬಾರಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿದರು. ಇಂದು ಸಂಜೆ ನಡೆಯುವ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ನಾಮ್ ಸು-ಹ್ಯೆನ್ ವಿರುದ್ಧ ಸೆಣಸಾಡಲಿದ್ದಾರೆ.

ಇಂದು(ಶನಿವಾರ) ನಡೆದ ಅತ್ಯಂತ ರೋಚಕ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ  ಜರ್ಮನಿಯ 13 ಶ್ರೇಯಾಂಕದ ಮೈಕಲ್‌ ಕ್ರೋಪೆನ್‌ ವಿರುದ್ಧ 6-4 ಅಂತರದಿಂದ ಗೆದ್ದು ಬೀಗಿದರು. ಆದರೆ, ಇದೇ ವಿಭಾಗದ ಮತ್ತೊಂದು ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ  18 ವರ್ಷದ ಭಜನ್ ಕೌರ್(Bhajan Kaur) ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ 5-6 ಕೂದಲೆಳೆ ಅಂತರದಲ್ಲಿ ಸೋಲು ಕಂಡರು.

ಬುಧವಾರ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಎಸ್ಟೋನಿಯಾದ ರೀನಾ ಪರ್ನಾಟ್‌ ಮತ್ತು ನೆದರ್ಲ್ಯಾಂಡ್ಸ್​ನ ಕ್ವಿಂಟಿ ರೋಫೆನ್ ಅವರನ್ನು ಹಿಮ್ಮೆಟ್ಟಿಸಿ ಪ್ರೀ ಕ್ವಾರ್ಟರ್​ಗೆ ಪ್ರವೇಶ ಪಡೆದಿದ್ದರು. ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಗೆಲುವಿನ ನಗೆ ಬೀರಿದರು.

ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊರಿಯಾದ ಆಟಗಾರ್ತಿಯ ವಿರುದ್ಧ ದೀಪಿಕಾ ಸೋಲನುಭವಿಸಿ ನಿರಾಸೆ ಎದುರಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಮೊದಲ ಸುತ್ತಿನಲ್ಲಿ, ರಿಯೋ ಒಲಿಂಪಿಕ್ಸ್​ನಲ್ಲಿ ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ಮುಗ್ಗರಿಸಿದ್ದರು. ಇದೀಗ 2ನೇ ಬಾರಿ ಕ್ವಾರ್ಟರ್​ ಫೈನಲ್​ ತಲುಪಿರುವ ಅವರು ಪದಕ ಬರ ನೀಗಿಸುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ Paris Olympics: ಹ್ಯಾಟ್ರಿಕ್​ ಪದಕ ತಪ್ಪಿಸಿಕೊಂಡ ಮನು ಭಾಕರ್​; 4ನೇ ಸ್ಥಾನಕ್ಕೆ ತೃಪ್ತಿ

ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಯುವ ಬಿಲ್ಗಾರ್ತಿ ಭಜನ್ ಕೌರ್ ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ ಅಮೋಘ ಹೋರಾಟ ನಡೆಸಿ 5-5 ಸಮಬಲ ಸಾಧಿಸಿದರೂ ಕೂಡ ಅಂತಿಮ ಶೂಟ್​ನಲ್ಲಿ ಎಡವಿದರು. ಚೋರುನಿಸಾ 9 ಅಂಕಕ್ಕೆ ಗುರಿ ಇಟ್ಟರೆ, ಕೌರ್ 8 ಅಂಕ ಗಳಿಸಿ ಸೋಲು ಕಂಡರು. 10 ಅಂಕಕ್ಕೆ ಗುರಿ ಇಡುತ್ತಿದ್ದರೆ ಗೆದ್ದು ಕ್ವಾರ್ಟರ್​ ಫೈನಲ್​ ಪ್ರವೇಶಿಸುತ್ತಿದ್ದರು. ಸೋಲು ಕಂಡರೂ ಕೂಡ ತಮ್ಮ ಚೊಚ್ಚಲ ಒಲಿಂಪಿಕ್ಸ್​ನಲ್ಲಿ ಈ ಸಾಧನೆ ತೋರಿದ್ದು ಮೆಚ್ಚಾಲೇ ಬೇಕು.

4ನೇ ಸ್ಥಾನಕ್ಕೆ ತೃಪ್ತಿಪಟ್ಟ ಶೂಟರ್​ ಮನು ಭಾಕರ್​

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics) ಹ್ಯಾಟ್ರಿಕ್​ ಪದಕ ನಿರೀಕ್ಷೆಯಲ್ಲಿದ್ದ ಮನು ಭಾಕರ್​ಗೆ(manu bhaker) ನಿರಾಸೆಯಾಗಿದೆ. ಇಂದು(ಶನಿವಾರ) ನಡೆದ 25 ಮೀ. ಪಿಸ್ತೂಲ್​ ಶೂಟಿಂಗ್​ ಫೈನಲ್​ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಅವರು ಐತಿಹಾಸಿಕ ಪದಕ ಗೆಲ್ಲುವ ಅವಕಾಶವೊಂದನ್ನು ಕಳೆದುಕೊಂಡರು. ಪದಕ ಗೆಲ್ಲುತ್ತಿದ್ದರೆ ವೈಯಕ್ತಿಕವಾಗಿ ಒಂದೇ ಆವೃತ್ತಿಯಲ್ಲಿ ಹಾಗೂ ಒಟ್ಟಾರೆಯಾಗಿ 3 ಒಲಿಂಪಿಕ್ಸ್​ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಐತಿಹಾಸಿಕ ದಾಖಲೆ ಬರೆಯಬಹುದಿತ್ತು.

ಫೈನಲ್​ ಹಂತದ ಮೊದಲ ಸುತ್ತಿನಲ್ಲಿ 6 ಅಂಕ ಗಳಿಸಿ 4ನೇ ಸ್ಥಾನಿಯಾದ ಭಾಕರ್​ ಆ ಬಳಿಕದ ಸುತ್ತಿನಲ್ಲಿ ಪ್ರಗತಿ ಸಾಧಿಸಿ 2ನೇ ಸ್ಥಾನದೊಂದಿಗೆ ಈ ಸುತ್ತು ಮುಗಿಸಿದರು. 2ನೇ ಸುತ್ತಿನಲ್ಲಿ ಒಮ್ಮೆ 6ನೇ ಸ್ಥಾನಕ್ಕೆ ಕುಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ಮತ್ತೆ ಯಶಸ್ಸು ಸಾಧಿಸಿದರು. ಆದರೆ ಅಂತಿಮ ಹಂತದಲ್ಲಿ 28 ಅಂಕ ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೊರಿಯಾದ ಯಾಂಗ್ ಜಿನ್ ಚಿನ್ನದ ಪದಕ ಗೆದ್ದರು. ಆತಿಥೇಯ ದೇಶದ ಕ್ಯಾಮಿಲ್ಲೆ ಬೆಳ್ಳಿ, ಹಂಗೇರಿಯ ಕಂಚು ಗೆದ್ದರು.

Continue Reading
Advertisement
Paris Olympics 2024
ಪ್ರಮುಖ ಸುದ್ದಿ8 mins ago

Paris Olympics 2024 : ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಮದುವೆ ಪ್ರಪೋಸ್ ಮಾಡಿದ ಚೀನಾದ ಷಟ್ಲರ್​!

Cloudburst
ದೇಶ22 mins ago

Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಾಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

Union Minister Pralhad Joshi latest statement in Bengaluru
ಕರ್ನಾಟಕ30 mins ago

Pralhad Joshi: ವಯನಾಡ್ ದುರಂತದ ವಿಚಾರದಲ್ಲಿ ಕಾಂಗ್ರೆಸ್‌‌ನಿಂದ ರಾಜಕೀಯ; ಪ್ರಲ್ಹಾದ್‌ ಜೋಶಿ

Kannada New Movie Kann Kann Talking Kai Kai Touching Gopilola
ಸ್ಯಾಂಡಲ್ ವುಡ್34 mins ago

Kannada New Movie: ʻಗೋಪಿಲೋಲ’ನ ಜೊತೆ ಹೆಜ್ಜೆ ಹಾಕಿದ ಜಾಹ್ನವಿ!

ginger
ಆರೋಗ್ಯ51 mins ago

Ginger Benefits: ಮಳೆಗಾಲದ ಸೋಂಕುಗಳಿಗೆ ಬೇಕು ಶುಂಠಿಯೆಂಬ ಮದ್ದು!

Wayanad Landslide
ದೇಶ57 mins ago

Wayanad Landslide: ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ; ಅವರ ವಿವರಣೆ ಹೀಗಿದೆ!

Western Ghats
ದೇಶ1 hour ago

Western Ghats: ಪಶ್ಚಿಮ ಘಟ್ಟದ 57 ಸಾವಿರಕ್ಕೂ ಹೆಚ್ಚು ಚ.ಕಿಮೀ. ಪರಿಸರ ಸೂಕ್ಷ್ಮ ಪ್ರದೇಶ; ಕೇಂದ್ರದಿಂದ ಕರಡು ಅಧಿಸೂಚನೆ

MS Dhoni
ಕ್ರೀಡೆ1 hour ago

MS Dhoni : 2007 ವಿಶ್ವ ಕಪ್ ಹೀರೋ ಜೋಗಿಂದರ್​ ಶರ್ಮಾ ಭೇಟಿಯಾದ ಎಂ. ಎಸ್​ ಧೋನಿ

KAS Recruitment 2024
ಕರ್ನಾಟಕ1 hour ago

KAS Recruitment 2024: ಆ.25ರಂದೇ ನಡೆಯಲಿದೆ ಕೆಎಎಸ್‌ ಪೂರ್ವ ಭಾವಿ ಪರೀಕ್ಷೆ: ಕೆಪಿಎಸ್‌ಸಿ ಸ್ಪಷ್ಟನೆ

Wild Animals
ದಾವಣಗೆರೆ1 hour ago

Wild Animals : ರಸ್ತೆಗೆ ಅಡ್ಡಲಾಗಿ ಮಲಗಿಕೊಂಡ ಚಿರತೆ; ಕಾಡಿನಿಂದ ಹಸು ಜತೆಗೆ ಓಡೋಡಿ ಬಂದ ಜಿಂಕೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ4 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌