Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್ - Vistara News

ಪ್ರಮುಖ ಸುದ್ದಿ

Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್

Novak Djokovic : ಆರಂಭಿಕ ಸೆಟ್ ನಲ್ಲಿ ಅಲ್ಕರಾಜ್ ಉತ್ತಮ ಆರಂಭವನ್ನು ಹೊಂದಿರಲಿಲ್ಲ. ಜೊಕೊವಿಕ್ ಮೂರು ಬ್ರೇಕ್ ಪಾಯಿಂಟ್ ಗಳನ್ನು ಗಳಿಸಿದ್ದರಿಂದ ಅವರು ಮತ್ತಷ್ಟು ಹಿನ್ನಡೆ ಅನುಭವಿಸಿದರು, ಆದರೆ ಸ್ಪೇನ್ ಆಟಗಾರ ಅವೆಲ್ಲವನ್ನೂ ಉಳಿಸಿ 2-2 ರಿಂದ ಸಮಬಲ ಸಾಧಿಸಿದರು. ಮತ್ತೆ ಅಲ್ಕರಾಜ್​ಗೆ ಜೊಕೊವಿಕ್ ಅವರ ಸರ್ವ್ ಮುರಿಯುವ ಅವಕಾಶವಿತ್ತು. ಆದರೆ ಸರ್ಬಿಯಾದ ಆಟಗಾರ ಯುವ ಆಟಗಾರನಿಗೆ ಅವಕಾಶವೇ ನೀಡಲಿಲ್ಲ.

VISTARANEWS.COM


on

Novak Djokovic
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್​: ಸರ್ಬಿಯಾದ ನೊವಾಕ್ ಜೊಕೊವಿಕ್ (Novak Djokovic) ಪ್ಯಾರಿಸ್ ಒಲಿಂಪಿಕ್ಸ್ 2024 ರ ಪುರುಷರ ಟೆನಿಸ್ ಸಿಂಗಲ್ಸ್​​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದು ಅವರ ಪಾಲಿಗೆ ಚೊಚ್ಚಲ ಒಲಿಂಪಿಕ್ಸ್​ ಚಿನ್ನ. ಭಾನುವಾರ ಫಿಲಿಪ್-ಚಾಟ್ರಿಯರ್​​ನಲ್ಲಿ ನಡೆದ ಚಿನ್ನದ ಪದಕದ ಪಂದ್ಯದಲ್ಲಿ 37 ವರ್ಷದ ಆಟಗಾರ ಸ್ಪೇನ್​​ ಕಾರ್ಲೋಸ್ ಅಲ್ಕರಾಜ್ ಅವರನ್ನು 7-6 (7-3), 7-6 (7-2) ಸೆಟ್​​ಗಳಿಂದ ಸೋಲಿಸಿದರು. ಈ ಮೂಲಕ ಒಲಿಂಪಿಕ್ಸ್​​​ ಟೆನಿಸ್​​ನ ಅತ್ಯಂತ ಹಿರಿಯ ಚಾಂಪಿಯನ್ ಎನಿಸಿಕೊಂಡರು. 21 ವರ್ಷದ ಅಲ್ಕರಾಜ್ ಗೆ ಅತ್ಯಂತ ಕಿರಿಯ ಒಲಿಂಪಿಕ್ ವಿಜೇತರಾಗುವ ಅವಕಾಶವಿತ್ತು. ಅದು ಸಾಧ್ಯವಾಗಲಿಲ್ಲ.

ಆರಂಭಿಕ ಸೆಟ್ ನಲ್ಲಿ ಅಲ್ಕರಾಜ್ ಉತ್ತಮ ಆರಂಭವನ್ನು ಹೊಂದಿರಲಿಲ್ಲ. ಜೊಕೊವಿಕ್ ಮೂರು ಬ್ರೇಕ್ ಪಾಯಿಂಟ್ ಗಳನ್ನು ಗಳಿಸಿದ್ದರಿಂದ ಅವರು ಮತ್ತಷ್ಟು ಹಿನ್ನಡೆ ಅನುಭವಿಸಿದರು, ಆದರೆ ಸ್ಪೇನ್ ಆಟಗಾರ ಅವೆಲ್ಲವನ್ನೂ ಉಳಿಸಿ 2-2 ರಿಂದ ಸಮಬಲ ಸಾಧಿಸಿದರು. ಮತ್ತೆ ಅಲ್ಕರಾಜ್​ಗೆ ಜೊಕೊವಿಕ್ ಅವರ ಸರ್ವ್ ಮುರಿಯುವ ಅವಕಾಶವಿತ್ತು. ಆದರೆ ಸರ್ಬಿಯಾದ ಆಟಗಾರ ಯುವ ಆಟಗಾರನಿಗೆ ಅವಕಾಶವೇ ನೀಡಲಿಲ್ಲ.

ಒಂಬತ್ತನೇ ಗೇಮ್ ಸಂಪೂರ್ಣ ಥ್ರಿಲ್ಲರ್ ಆಗಿ ಪರಿಣಮಿಸಿತು. ಜೊಕೊವಿಕ್ ಐದು ಬ್ರೇಕ್ ಪಾಯಿಂಟ್ ಗಳನ್ನು ಉಳಿಸಿ ಅಂತಿಮವಾಗಿ ತಮ್ಮ ಸರ್ವ್ ಹಿಡಿತದಲ್ಲಿಟ್ಟುಕೊಂಡು 5-4 ಕ್ಕೆ ಮುನ್ನಡೆದರು. ಹಲವಾರು ಬಾರಿ ನೋವಿನ ಸಮಸ್ಯೆ ಎದುರಿಸಿ ಅದರಿಂದ ಹೊರಕ್ಕೆ ಬಂದರು. ಟೈ-ಬ್ರೇಕರ್ನಲ್ಲಿಯೂ 3-3 ರಲ್ಲಿ ಸಮಬಲದ ಸಾಧನೆ ಬಂತು. ಆದರೆ ಜೊಕೊವಿಕ್ ಸತತ ನಾಲ್ಕು ಅಂಕಗಳನ್ನು ಪಡೆದರು. ಫೋರ್​ಹ್ಯಾಂಡ್​ ಬಲದೊಂದಿಗೆ ಒಂದು ಗಂಟೆ 34 ನಿಮಿಷಗಳಲ್ಲಿ ಆರಂಭಿಕ ಸೆಟ್ ಗೆದ್ದರು. ಅಲ್ಕರಾಜ್ ತನ್ನ ಎಂಟು ಬ್ರೇಕ್ ಪಾಯಿಂಟ್ ಅವಕಾಶಗಳಲ್ಲಿ ಒಂದನ್ನು ಸಹ ಪರಿವರ್ತಿಸಲು ವಿಫಲಗೊಂಡು ನಿರಾಸೆಗೆ ಒಳಗಾದರು.

ಎರಡನೇ ಸೆಟ್ ಇದೇ ರೀತಿ ಪ್ರಾರಂಭವಾಯಿತು. ಅಲ್ಲಿ ಅಲ್ಕರಾಜ್ ಮತ್ತು ಜೊಕೊವಿಕ್ ಇಬ್ಬರೂ ಪರಸ್ಪರ ಜಿದ್ದಿಗೆ ಬಿದ್ದರು. ಅಲ್ಕರಾಜ್ ಮೂರನೇ ಗೇಮ್ ನಲ್ಲಿ ಬ್ರೇಕ್ ಪಾಯಿಂಟ್ ಉಳಿಸಿ ಪಂದ್ಯವನ್ನು ಜೀವಂತವಾಗಿ ಉಳಿಸಿದರು. 3-3 ರಲ್ಲಿ ಮುಂದುವರಿಯಿತು.

ಇದನ್ನೂ ಓದಿ: Mohammed Siraj : ಲಂಕಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್​ ಸಿರಾಜ್​

ಅಲ್ಕರಾಜ್ 5-4 ರ ಮುನ್ನಡೆಯೊಂದಿಗೆ ಸೆಟ್ ಗೆಲ್ಲುವ ಅವಕಾಶ ಹೊಂದಿದ್ದರು. ಆದರೆ ಜೊಕೊವಿಕ್​ ಅವಕಾಶ ಕೊಡದೇ ಆ ಗೇಮ್ ಗೆದ್ದರು. ಹೀಗಾಗಿ ಮೊದಲ ಸೆಟ್​ನಂತೆಯೇ ಎರಡನೇಯದೂ ಟೈ-ಬ್ರೇಕರ್​ಗೆ ಹೋಯಿತು. ಅಲ್ಕರಾಜ್ ಜೊಕೊವಿಕ್ ಅವರ ಸರ್ವ್ ಅನ್ನು ಮುರಿಯಲು ವಿಫಲಗೊಂಡು ಸೋಲೊಪ್ಪಿಕೊಂಡರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Bengaluru:‌ ಬೆಂಗಳೂರಲ್ಲಿ ಸ್ತ್ರೀಯರಿಗಿಲ್ಲ ರಕ್ಷಣೆ; ವಾಕಿಂಗ್‌ ಮಾಡುತ್ತಿದ್ದ ಮಹಿಳೆಗೆ ಕಿಸ್‌ ಕೊಟ್ಟ ಕಾಮುಕ; Video ವೈರಲ್

Bengaluru: ಬೆಂಗಳೂರಿನ ಕೋಣನಕುಂಟೆ ಬಳಿಯ ಕೃಷ್ಣಾ ನಗರದಲ್ಲಿ ಮಹಿಳೆಯೊಬ್ಬರು ವಾಕಿಂಗ್‌ ಮಾಡುತ್ತಿದ್ದರು. ಇದೇ ವೇಳೆ ದುಷ್ಕರ್ಮಿಯೊಬ್ಬ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆಗೆ ಕಿಸ್‌ ಕೊಟ್ಟು ಆತ ಪರಾರಿಯಾಗಿದ್ದಾನೆ. ಈ ವಿಡಿಯೊ ಈಗ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

VISTARANEWS.COM


on

Bengaluru
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಮನೆ ಎದುರು ತಿರುಗಾಡುತ್ತಿರುವಾಗ ಚಿನ್ನದ ಸರ ಕಿತ್ತುಕೊಂಡು ಹೋಗುವುದು, ಅವರ ಮೇಲೆ ಹಲ್ಲೆ ನಡೆಸುವುದು, ಮೊಬೈಲ್‌, ಪರ್ಸ್‌ ಎಗರಿಸುವುದು ಸೇರಿ ಹಲವು ರೀತಿಯ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಕೋಣನಕುಂಟೆಯ (Konanakunte) ಕೃಷ್ಣಾ ನಗರದಲ್ಲಿ ಮನೆ ಬಳಿ ವಾಕಿಂಗ್‌ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.

ಹೌದು, ಮಹಿಳೆಯು ಮನೆಯ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಬಳಿ ಬಂದಿದ್ದಾನೆ. ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್‌ ಕೊಟ್ಟಿದ್ದಾನೆ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಕೂಗುತ್ತ ಮಹಿಳೆ ಓಡಿದ್ದಾರೆ. ಅವರ ಹಿಂದೆಯೇ ಓಡಿ ಬಂದ ದುರುಳನು, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದಾನೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಾಗೆಯೇ, ನಗರದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಜನ ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಸಿಸಿಟಿವಿ ದೃಶ್ಯಾವಳಿ

ಶುಕ್ರವಾರ (ಆಗಸ್ಟ್‌ 2) ಬೆಳಗಿನ ಜಾವ ಮಹಿಳೆಯು ಮನೆಯ ಬಳಿಯಲ್ಲೇ ವಾಕಿಂಗ್‌ ಮಾಡುವಾಗ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಹಿಳೆಯು ಉತ್ತರ ಭಾರತದವರಾಗಿದ್ದು, ಬೆಳಗ್ಗೆ ಕೆಲ ಹೆಣ್ಣುಮಕ್ಕಳು ಸೇರಿ ವಾಕಿಂಗ್‌ ಹೋಗುತ್ತಿದ್ದರು. ಪಕ್ಕದ ಮನೆಯವರು ಬರುವ ಕಾರಣ ಅವರು ರಸ್ತೆ ಬದಿ ಕಾಯುತ್ತಿದ್ದರು ಎಂದು ತಿಳಿದುಬಂದಿದೆ.

ವಿಡಿಯೊ ವೈರಲ್‌ ಆದ ಬಳಿಕ ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಕೂಡ ಭಯಪಡುವಂತಾಗಿದೆ. ಹೆಣ್ಣುಮಕ್ಕಳ ಆಭರಣ, ಮೊಬೈಲ್‌ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಂಡು ಹೋಗುವುದು ಸೇರಿ ಹಲವು ಕೃತ್ಯ ಎಸಗುತ್ತಿರುವ ಇಂತಹ ದುಷ್ಕರ್ಮಿಗಳನ್ನು ಪೊಲೀಸರು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಕೆಲವು ವಾರಗಳಿಂದ ಸಕ್ರಿಯವಾಗಿರುವ ಎಟಿಎಂ ಕಳ್ಳರ ಗ್ಯಾಂಗ್‌ಗಳು ಕೂಡ ಪೊಲೀಸರಿಗೆ ತಲೆನೋವಾಗಿವೆ. ಹರಿಯಾಣ ಮೂಲದ ಎರಡು ಗ್ಯಾಂಗ್‌ಗಳು ಸತತವಾಗಿ ಎಟಿಎಂಗಳಿಂದ ಹಣ ಎತ್ತುತ್ತಿವೆ. ಗುರುತೇ ಸಿಗದಂತೆ ದರೋಡೆ ಮಾಡುತ್ತಿರುವ ಈ ಗ್ಯಾಂಗ್‌ಗಳು ಪೊಲೀಸರಿಗೆ ತಲೆನೋವಾಗಿವೆ.

ಬೆಳ್ಳಂದೂರು ಠಾಣೆ ವ್ಯಾಪ್ತಿಯ ಎಕ್ಸಿಸ್ ಬ್ಯಾಂಕ್ ಎಟಿಎಂನಿಂದ ಕಳ್ಳತನ ಮಾಡಲಾಗಿದೆ. ಇಕೋ ಎರ್ಟಿಗಾ ಕಾರ್‌ನಲ್ಲಿ ಬಂದು ಕಳವು ಮಾಡಲಾಗಿದೆ. ಪರಿಶೀಲಿಸಿದಾಗ ಕಾರು ಕೂಡ ಕಳವು ಮಾಲು ಎಂಬುದು ಗೊತ್ತಾಗಿದೆ. ಆರೋಪಿಗಳು ಮೈಮೇಲೆ ಹೊದಿಕೆ ಹೊದ್ದುಕೊಂಡು ಎಟಿಎಂ ಒಳಗೆ ಹೋಗಿ ಕೃತ್ಯ ನಡೆಸುತ್ತಿದ್ದಾರೆ. ಹೀಗಾಗಿ ಇವರು ಗುರುತು ಕಾಣಿಸದಾಗಿದೆ.

ಇದನ್ನೂ ಓದಿ: Kangana Ranaut: ಮಲಗುವ ಕೋಣೆಗಳಲ್ಲಿ ಲೈಂಗಿಕತೆ ಏಕೆ ಉಳಿಯಬಾರದು?; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ

Continue Reading

ಕರ್ನಾಟಕ

NEET 2024: ಆಗಸ್ಟ್‌ 5ರಿಂದ ನೀಟ್‌ ರೋಲ್‌ ನಂಬರ್‌ ದಾಖಲಿಸಲು ಅವಕಾಶ, ಲಿಂಕ್‌ ಪಡೆಯಲು ಹೀಗೆ ಮಾಡಿ

NEET 2024: ಆಗಸ್ಟ್ 5ರ ಬೆಳಗ್ಗೆ 11ಕ್ಕೆ ಕೆಇಎ ವೆಬ್‌ಸೈಟ್‌ನಲ್ಲಿ ಯುಜಿ ನೀಟ್-2024 ಲಿಂಕ್ ಬಿಡುಗಡೆ ಮಾಡಲಾಗುತ್ತದೆ. ಆಗಸ್ಟ್ 7 ರಂದು ಬೆಳಗ್ಗೆ 11ರವರೆಗೆ ರೋಲ್ ನಂಬರ್ ದಾಖಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

VISTARANEWS.COM


on

NEET 2024
Koo

ಬೆಂಗಳೂರು: ಈಗಾಗಲೇ ಯುಜಿಸಿಇಟಿಗೆ ಅರ್ಜಿ ಸಲ್ಲಿಸಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ (NEET 2024) ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್‌ಅನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೋಮವಾರ ಲಿಂಕ್ ಬಿಡುಗಡೆ ಮಾಡಲಿದೆ. ಆಗಸ್ಟ್ 5ರ ಬೆಳಗ್ಗೆ 11ಕ್ಕೆ ಕೆಇಎ ವೆಬ್‌ಸೈಟ್‌ನಲ್ಲಿ (KEA Website) ಯುಜಿ ನೀಟ್-2024 ಲಿಂಕ್ ಬಿಡುಗಡೆ ಮಾಡಲಾಗುತ್ತದೆ. ಆಗಸ್ಟ್ 7 ರಂದು ಬೆಳಗ್ಗೆ 11ರವರೆಗೆ ರೋಲ್ ನಂಬರ್ ದಾಖಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಅಭ್ಯರ್ಥಿಗಳು ದಾಖಲಿಸುವ ರೋಲ್ ನಂಬರ್‌ಅನ್ನು ಎನ್‌ಟಿಎ ಡೇಟಾದೊಂದಿಗೆ ತಾಳೆ ಮಾಡಿ ಯುಜಿ ನೀಟ್ ಅರ್ಹತೆ ಪಡೆದಿದ್ದಲ್ಲಿ ಅರ್ಜಿ ನಮೂನೆ ಪ್ರತಿ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ನಂತರ ವೇರಿಫಿಕೇಷನ್ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಆ.7ರಿಂದ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ

ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವವರು ಇನ್ನೂ ಅರ್ಜಿ ಸಲ್ಲಿಸದೇ ಇದ್ದಲ್ಲಿ ಅಂತಹವರು ಆ.7ರಿಂದ 9ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್‌ಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜುಲೈ 26ರಂದು ನೀಟ್‌ ಯುಜಿ 2024 ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಿದೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗಾಗಿ ಮೇ 5ರಂದು ನಡೆದಿದ್ದ ನೀಟ್‌ ಯುಜಿ ಪರೀಕ್ಷೆಯ ಫಲಿತಾಂಶವು ಜೂನ್‌ 4ರಂದು ಪ್ರಕಟವಾಗಿತ್ತು. ಆದರೆ, ಇದಾದ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಹಲವು ಆರೋಪ ಕೇಳಿಬಂದ ಕಾರಣ ಸುಪ್ರೀಂ ಕೋರ್ಟ್‌ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿತ್ತು. ಕೊನೆಗೆ ಮರು ಪರೀಕ್ಷೆ ಬೇಡ ಎಂದಿದ್ದ ನ್ಯಾಯಾಲಯವು, ಪರಿಷ್ಕೃತ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತ್ತು.

ಇದನ್ನೂ ಓದಿ: KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

Continue Reading

ಪ್ರಮುಖ ಸುದ್ದಿ

IND vs SL ODI : ಎರಡನೇ ಏಕ ದಿನ ಪಂದ್ಯದಲ್ಲಿ ಭಾರತ ತಂಡಕ್ಕೆ32 ರನ್ ಸೋಲು, ಸರಣಿಯಲ್ಲಿ ಲಂಕಾಗೆ ಮುನ್ನಡೆ

IND vs SL ODI : ಲಂಕಾ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ಗೆ 240 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ.. ಓವರ್​ಗಳಲ್ಲಿ 42.2 ಓವರ್​ಗಳಲ್ಲಿ 208 ರನ್​ಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಜೆಫ್ರಿ ವಂಡರ್ಸೆ 6 ವಿಕೆಟ್​ ಹಾಗೂ ಚರಿತ್ ಅಸಲಂಕಾ 3 ವಿಕೆಟ್ ಉರುಳಿಸಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

VISTARANEWS.COM


on

IND vs SL
Koo

ಬೆಂಗಳೂರು : ಆತಿಥೇಯ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ (IND vs SL ODI ) ಎರಡನೇ ಪಂದ್ಯದಲ್ಲಿ ಭಾರತ ತಂಡ 32 ರನ್​ಗಳ ಸೋಲಿಗೆ ಒಳಗಾಗಿದೆ. ಲಂಕಾದ ಸ್ಪಿನ್ನರ್​ಗಳ ದಾಳಿಗೆ ನಲುಗಿದ ಭಾರತೀಯ ಬ್ಯಾಟರ್​ಗಳು ಸುಲಭವಾಗಿ ಶರಣಾದರು. ಪ್ರಮುಖವಾಗಿ ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿ ಬಂದವು. ಭಾರತ ಹಾಗೂ ಲಂಕಾ ನಡುವಿನ ಮೊದಲ ಪಂದ್ಯವು ಟೈ ಆಗಿತ್ತು. ಹೀಗಾಗಿ ಈ ಗೆಲುವಿನೊಂದಿಗೆ ಲಂಕಾ ತಂಡವು ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ ಭಾರತ ತಂಡದ ಮರ್ಯಾದೆ ಉಳಿಯಬಹುದು. ಇಲ್ಲವಾದರೆ ರೋಹಿತ್ ಶರ್ಮಾ ಬಳಗ ಮುಖಭಂಗ ಅನುಭವಿಸುವ ಎಲ್ಲ ಸಾಧ್ಯತೆಗಳಿವೆ.

ಕೊಲೊಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಲಂಕಾ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ಗೆ 240 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ.. ಓವರ್​ಗಳಲ್ಲಿ 42.2 ಓವರ್​ಗಳಲ್ಲಿ 208 ರನ್​ಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಜೆಫ್ರಿ ವಂಡರ್ಸೆ 6 ವಿಕೆಟ್​ ಹಾಗೂ ಚರಿತ್ ಅಸಲಂಕಾ 3 ವಿಕೆಟ್ ಉರುಳಿಸಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಲಂಕಾ ಸ್ಪಿನ್ನರ್​ಗಳ ದಾಳಿಗೆ ನಿಯಮಿತವಾಗಿ ವಿಕೆಟ್​ ಕಳೆದುಕೊಂಡು ನಿರಾಸೆಗೆ ಒಳಗಾಯಿತು.

ಸ್ಪಿನ್ ಪಿಚ್​ನಲ್ಲಿ ಸವಾಲಿನ ಮೊತ್ತವೇ ಅಗಿದ್ದ 241 ರನ್​ಗಳನ್ನು ಬೆನ್ನಟ್ಟಲು ಹೊರಟ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ರೋಹಿತ್ ಶರ್ಮಾ ಮತ್ತೊಂದು ಬಾರಿ ಅರ್ಧ ಶತಕ (64 ರನ್​, 44 ಎಸೆತ, 5 ಫೊರ್​, 4 ಸಿಕ್ಸರ್​) ಉತ್ತಮ ಆರಂಭ ತಂದುಕೊಟ್ಟರು. ಶುಭ್​​ ಮನ್​ ಗಿಲ್​ ಕೂಡ 35 ರನ್ ಬಾರಿಸಿ ಅವರಿಗೆ ನೆರವಾದರು. ರೋಹಿತ್ ತಮ್ಮ ವಿಕೆಟ್ ಒಪ್ಪಿಸುವ ಮೊದಲು ಭಾರತ 13.3 ಓವರ್​ಗಳಲ್ಲಿ 97 ರನ್ ಬಾರಿಸಿ ನಿಶ್ಚಿಂತೆಯಿಂದ ಇತ್ತು. ಆದರೆ, ಆ ಬಳಿಕ ಭಾರತದ ಬ್ಯಾಟರ್​ಗಳು ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಿರಾಟ್​ ಕೊಹ್ಲಿ 14 ರನ್​ಗೆ ಔಟಾದರೆ, ಬಡ್ತಿ ಪಡೆದುಕೊಂಡು ನಾಲ್ಕನೇ ಕ್ರಮಾಂಕದಲ್ಲಿ ಬಂದ ಶಿವಂ ದುಬೆ ಶೂನ್ಯಕ್ಕೆ ಔಟಾದರು.

ಅಕ್ಷರ್ ಪಟೇಲ್ ಆಧಾರ

ಮಧ್ಯಮ ಕ್ರಮಾಂಕದಲ್ಲಿ ಆಡಲು ಇಳಿದ ಅಕ್ಷರ್ ಪಟೇಲ್ ತಂಡಕ್ಕೆ ಸ್ವಲ್ಪ ಹೊತ್ತು ಆಧಾರವಾದರು. ಅವರು 44 ರನ್ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಆದರೆ, ಉಳಿದವರು ಕ್ರೀಸ್​ನಲ್ಲಿ ನಿಲ್ಲಲು ಮನಸ್ಸು ಮಾಡಿಲ್ಲ. ಶ್ರೇಯಸ್ ಅಯ್ಯರ್​ 7 ರನ್ ಬಾರಿಸಿದರೆ, ಕೆ. ಎಲ್​ ರಾಹುಲ್ ಬ್ಯಾಟಿಂಗ್​ನಲ್ಲಿ ವೈಫಲ್ಯ ಎದುರಿಸಿ ಶೂನ್ಯಕ್ಕೆ ಔಟಾದರು. ವಾಷಿಂಗ್ಟನ್ ಸುಂದರ್​ 15 ರನ್ ಬಾರಿಸಿದರೆ ಕುಲ್ದಿಪ್​ ಯಾದವ್​ 7 ರನ್​, ಕುಲ್ದೀಪ್​ ಯಾದವ್ 7 ರನ್​, ಮೊಹಮ್ಮದ್ ಶಮಿ 4 ರನ್​, ಅರ್ಶ್​ದೀಪ್​ ಸಿಂಗ್​ 3 ರನ್ ಬಾರಿಸಿದರು.

ಇದನ್ನೂ ಓದಿ: Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್

ಲಂಕಾದ ಲಯ ಬದ್ಧ ಬ್ಯಾಟಿಂಗ್​

ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಲಂಕಾ ಶೂನ್ಯಕ್ಕೆ ಮೊದಲ ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. ಆದರೆ, ನಂತರ ಪ್ರತಿಯೊಬ್ಬರೂ ಲಯಬದ್ಧ ಬ್ಯಾಟಿಂಗ್ ಮಾಡಿದರು. ಅವಿಷ್ಕಾ ಫರ್ನಾಂಡೊ 40 ರನ್ ಬಾರಿಸಿದರೆ, ಕುಸಾಲ್​ ಮೆಂಡಿಸ್​ 30 ರನ್ ಗಳಿಸಿದರು. ಚರಿತ್ ಅಸಲಂಕಾ 25 ರನ್​, ದುನಿಲ್​ ವೆಲ್ಲಾಲಗೆ 39 ರನ್​, ಕಮಿಂಡು ಮೆಂಡಿಸ್​ 40 ರನ್ ಬಾರಿಸಿ ಭಾರತಕ್ಕೆ ಸ್ಪರ್ಧಾತ್ಮಕ ಗುರಿಯನ್ನು ಒಡ್ಡಲು ತಮ್ಮ ತಂಡಕ್ಕೆ ನೆರವಾದರು.

Continue Reading

ದೇಶ

Bengal Minister: ಮಹಿಳಾ ಅಧಿಕಾರಿಗೆ ಬಂಗಾಳ ಸಚಿವ ಜೀವ ಬೆದರಿಕೆ; ದೀದಿ ಆದೇಶದ ಬಳಿಕ ರಾಜೀನಾಮೆ!

Bengal Minister: ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಭೂಮಿಯನ್ನು ಅತಿಕ್ರಮಣ ಮಾಡುವುದನ್ನು ತಡೆಯಲು ಜಿಲ್ಲಾ ಅರಣ್ಯಾಧಿಕಾರಿ ಮನಿಶಾ ಶೌ ತೆರಳಿದ್ದಾಗ ಸಚಿವ ಅಖಿಲ್‌ ಗಿರಿ ಬೆದರಿಕೆ ಹಾಕಿದ್ದರು. ನೀನು ಮತ್ತೆ ವಾಪಸ್‌ ಬರದಂತೆ ಮಾಡಿಬಿಡುತ್ತೇನೆ ಎಂದೆಲ್ಲ ಬೆದರಿಕೆ ಹಾಕಿದ್ದರು. ಜನಾಕ್ರೋಶ ವ್ಯಕ್ತವಾದ ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

VISTARANEWS.COM


on

Bengal Minister
Koo

ಕೋಲ್ಕೊತಾ: ಪಶ್ಚಿಮ ಬಂಗಾಳದ ಸಚಿವ (Bengal Minister) ಅಖಿಲ್‌ ಗಿರಿ (Akhil Giri) ಅವರು ಮಹಿಳಾ ಅರಣ್ಯಾಧಿಕಾರಿಗೆ ಬೆದರಿಕೆ ಹಾಕಿದ ವಿಡಿಯೊ ಭಾರಿ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಖಿಲ್‌ ಗಿರಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರತಿಪಕ್ಷಗಳಂತೂ ಬಂಧಿಸಬೇಕು ಎಂದು ಒತ್ತಾಯಿಸುತ್ತಿವೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೂಚನೆಯ ಮೇರೆಗೆ ಭಾನುವಾರ (ಆಗಸ್ಟ್‌ 4) ಅಖಿಲ್‌ ಗಿರಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ಅಧಿಕಾರಿಯ ಕ್ಷಮೆ ಕೇಳುವುದಿಲ್ಲ ಎಂದು ಹೇಳುವ ಮೂಲಕ ದಾರ್ಷ್ಟ್ಯ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ.

ಇಂಡಿಯಾ ಟುಡೇ ಜತೆ ಮಾತನಾಡಿದ ಅಖಿಲ್‌ ಗಿರಿ, “ನಾನು ಕ್ಷಮೆಯಾಚಿಸುವ ಪ್ರಶ್ನೆಯೇ ಬರುವುದಿಲ್ಲ. ನನ್ನ ಪಕ್ಷವು ನನಗೆ ರಾಜೀನಾಮೆ ನೀಡು ಎಂದು ಸೂಚಿಸಿದೆಯೇ ಹೊರತು, ಕ್ಷಮೆ ಕೇಳು ಎಂದು ಸೂಚನೆ ನೀಡಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡು ಎಂದು ಸೂಚಿಸಿದ್ದಾರೆ, ಅದರಂತೆ ರಾಜೀನಾಮೆ ನೀಡಿದ್ದೇನೆ. ನಾನು ಮಹಿಳಾ ಅಧಿಕಾರಿ ಜತೆ ತೋರಿದ ವರ್ತನೆಯು ದುರದೃಷ್ಟಕರವಾಗಿದೆ. ನನ್ನ ಬಾಯಿಯಿಂದ ಅಂತಹ ಮಾತುಗಳು ಬರಬಾರದಿತ್ತು. ಅದರ ಬಗ್ಗೆ ನನಗೆ ಬೇಸರವಿದೆ” ಎಂದಷ್ಟೇ ಹೇಳಿದ್ದಾರೆ.

ಬೆದರಿಕೆ ಹಾಕಿದ ವಿಡಿಯೊ

ಏನಿದು ಪ್ರಕರಣ?

ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಭೂಮಿಯನ್ನು ಅತಿಕ್ರಮಣ ಮಾಡುವುದನ್ನು ತಡೆಯಲು ಜಿಲ್ಲಾ ಅರಣ್ಯಾಧಿಕಾರಿ ಮನಿಶಾ ಶೌ ಅವರು ತೆರಳಿದ್ದರು. ಇದೇ ವೇಳೆ ಅಧಿಕಾರಿಯ ಕೆಲಸಕ್ಕೆ ಅಖಿಲ್‌ ಗಿರಿ ಅಡ್ಡಿಪಡಿಸಿದ್ದಲ್ಲದೆ, ಬೆದರಿಕೆ ಹಾಕಿದ್ದರು. “ನೀನು ಇಂತಹ ಅತಿಕ್ರಮಣ ವಿಚಾರಗಳಲ್ಲಿ ಮೂಗು ತೂರಿಸಿದರೆ, ನೀನು ವಾಪಸ್‌ ಬರದಂತೆಯೇ ಮಾಡಿಬಿಡುತ್ತೇನೆ” ಎಂದು ಜೋರಾಗಿ ಅಖಿಲ್‌ ಗಿರಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರು.

“ನನ್ನ ಜತೆ ಮಾತನಾಡುವಾಗ, ನೀನು ತಲೆ ತಗ್ಗಿಸಿ ಮಾತನಾಡಬೇಕು. ಇಲ್ಲದಿದ್ದರೆ ದೊಣ್ಣೆಗಳಿಂದ ನಿನ್ನನ್ನು ಬಡಿದುಬಿಡುತ್ತೇನೆ. ಇವರೆಲ್ಲರೂ ನೀನು ರಾತ್ರಿ ಮನೆಗೆ ಹೋಗದಂತೆ ಮಾಡುತ್ತಾರೆ” ಎಂದು ಹೇಳಿದ್ದರು. “ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ” ಎಂಬುದಾಗಿ ಮಹಿಳಾ ಅಧಿಕಾರಿ ಹೇಳಿದಾಗ, ಮತ್ತಷ್ಟು ಕುಪಿತಗೊಂಡ ಅಖಿಲ್‌ ಗಿರಿ, “ಒಂದು ವಾರದಲ್ಲಿ ಏನಾಗುತ್ತದೆ ಎಂಬುದನ್ನು ನೋಡುತ್ತಿರು” ಎಂದು ಗದರಿದ್ದರು.

ಅಖಿಲ್‌ ಗಿರಿ ಬೆದರಿಕೆ ಹಾಕಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಬಿಜೆಪಿ, ಆಕ್ರೋಶ ವ್ಯಕ್ತಪಡಿಸಿತ್ತು. ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರೂ ಆಕ್ರೋಶ ವ್ಯಕ್ತಪಡಿಸಿ, “ಇವರು ಏನು ಮಾತನಾಡುತ್ತಿದ್ದಾರೆ? ಮೊದಲು ಇವರನ್ನು ಬಂಧಿಸಬೇಕು” ಎಂದು ಹೇಳಿದ್ದರು.

ಇದನ್ನೂ ಓದಿ: Mamata Banerjee: ಮಾತನಾಡಲು 5 ನಿಮಿಷ ಮಾತ್ರ ಅವಕಾಶ ನೀಡಿದರು: ನೀತಿ ಆಯೋಗದ ಸಭೆಯಿಂದ ಹೊರ ಬಂದ ಮಮತಾ ಬ್ಯಾನರ್ಜಿ ಕಿಡಿ

Continue Reading
Advertisement
Bengaluru
ಕ್ರೈಂ2 hours ago

Bengaluru:‌ ಬೆಂಗಳೂರಲ್ಲಿ ಸ್ತ್ರೀಯರಿಗಿಲ್ಲ ರಕ್ಷಣೆ; ವಾಕಿಂಗ್‌ ಮಾಡುತ್ತಿದ್ದ ಮಹಿಳೆಗೆ ಕಿಸ್‌ ಕೊಟ್ಟ ಕಾಮುಕ; Video ವೈರಲ್

Wanindu Hasaranga
ಕ್ರೀಡೆ2 hours ago

Wanindu Hasaranga : ಭಾರತ ವಿರುದ್ಧದ ಏಕ ದಿನ ಸರಣಿಗೆ ಲಂಕಾದ ಆಲ್​ರೌಂಡರ್​ ಔಟ್

NEET 2024
ಕರ್ನಾಟಕ2 hours ago

NEET 2024: ಆಗಸ್ಟ್‌ 5ರಿಂದ ನೀಟ್‌ ರೋಲ್‌ ನಂಬರ್‌ ದಾಖಲಿಸಲು ಅವಕಾಶ, ಲಿಂಕ್‌ ಪಡೆಯಲು ಹೀಗೆ ಮಾಡಿ

virat kohli
ಕ್ರಿಕೆಟ್3 hours ago

Virat Kohli : ಲಂಕಾ ವಿರುದ್ಧದ ಪಂದ್ಯದ ನಡುವೆಯೇ ಬಿಹು ಡಾನ್ಸ್ ಮಾಡಿದ ವಿರಾಟ್ ಕೊಹ್ಲಿ, ಇಲ್ಲಿದೆ ವಿಡಿಯೊ

IND vs SL
ಪ್ರಮುಖ ಸುದ್ದಿ3 hours ago

IND vs SL ODI : ಎರಡನೇ ಏಕ ದಿನ ಪಂದ್ಯದಲ್ಲಿ ಭಾರತ ತಂಡಕ್ಕೆ32 ರನ್ ಸೋಲು, ಸರಣಿಯಲ್ಲಿ ಲಂಕಾಗೆ ಮುನ್ನಡೆ

Bengal Minister
ದೇಶ4 hours ago

Bengal Minister: ಮಹಿಳಾ ಅಧಿಕಾರಿಗೆ ಬಂಗಾಳ ಸಚಿವ ಜೀವ ಬೆದರಿಕೆ; ದೀದಿ ಆದೇಶದ ಬಳಿಕ ರಾಜೀನಾಮೆ!

BJP-JDS Padayatra
ಕರ್ನಾಟಕ5 hours ago

BJP-JDS Padayatra: ಬಿಜೆಪಿ-ಜೆಡಿಎಸ್‌ ಪಿತೂರಿಗೆ ಜಗ್ಗಲ್ಲ, ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ: ಕೆ.ಸಿ. ವೇಣುಗೋಪಾಲ್

Novak Djokovic
ಪ್ರಮುಖ ಸುದ್ದಿ5 hours ago

Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್

PSI Parashuram Case
ಕ್ರೈಂ5 hours ago

PSI Parashuram Case: ಪಿಎಸ್‌ಐ ಪರಶುರಾಮ ಸಾವು ಪ್ರಕರಣದ ಕಡತ ನಾಳೆ ಸಿಐಡಿಗೆ ಹಸ್ತಾಂತರ: ಎಸ್‌ಪಿ ಜಿ.ಸಂಗೀತಾ

Health Tips
ಆರೋಗ್ಯ5 hours ago

Health Tips: ಪಾದಗಳ ಊತ, ನೋವನ್ನು ಕಡಿಮೆ ಮಾಡಲು ಇಲ್ಲಿದೆ ಸರಳ ಉಪಾಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ12 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌