K M Shivalinge Gowda: ಭಾಷಣದ ಭರದಲ್ಲಿ ಕಾಂಗ್ರೆಸ್‌ಗೇ ಬೈದ ಶಾಸಕ ಶಿವಲಿಂಗೇಗೌಡ! ವಿಡಿಯೊ ಇದೆ - Vistara News

ಕರ್ನಾಟಕ

K M Shivalinge Gowda: ಭಾಷಣದ ಭರದಲ್ಲಿ ಕಾಂಗ್ರೆಸ್‌ಗೇ ಬೈದ ಶಾಸಕ ಶಿವಲಿಂಗೇಗೌಡ! ವಿಡಿಯೊ ಇದೆ

K M Shivalinge Gowda: ಜೆಡಿಎಸ್- ಬಿಜೆಪಿ ಪಕ್ಷದವರಿಗೆ ತಿರುಗೇಟು ನೀಡಲು ಕಾಂಗ್ರೆಸ್‌ನಿಂದ ಚನ್ನಪಟ್ಟಣದಲ್ಲಿ ಜನಾಂದೋಲನ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಕೈ ಶಾಸಕ ಶಿವಲಿಂಗೇಗೌಡ, ಕಾಂಗ್ರೆಸ್‌ನವರಿಗೆ ಮಾನ ಮರ್ಯಾದೆ, ತಾಕತ್ತು ಇದ್ರೆ, ನಾವು ಕೇಳೋ ಪ್ರಶ್ನೆಗೆ ಉತ್ತರ ಕೊಡಿ ಎಂದು ಬೈದಿದ್ದಾರೆ. ಬಳಿಕ ಬಾಯ್ತಪ್ಪಿ ಹೇಳಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ.

VISTARANEWS.COM


on

K M Shivalinge Gowda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಮನಗರ: ಭಾಷಣದ ಭರದಲ್ಲಿ ಕಾಂಗ್ರೆಸ್ ವಿರುದ್ಧವೇ ಸ್ವಪಕ್ಷ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಿಡಿಕಾರಿರುವ ಪ್ರಸಂಗ ಕಾರ್ಯಕ್ರಮವೊಂದರಲ್ಲಿ ನಡೆದಿದೆ. ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಜನಾಂದೋಲನ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ (K M Shivalinge Gowda) ಅವರು, ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ವಿರುದ್ಧ ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಪಕ್ಷವನ್ನೇ ಬೈದ್ದಿದ್ದಾರೆ. ಸದ್ಯ ಈ ವಿಡಿಯೊ ಎಲ್ಲೆಡೆ ವೈರಲ್‌ ಆಗಿದೆ.

ಜೆಡಿಎಸ್- ಬಿಜೆಪಿ ಪಕ್ಷದವರಿಗೆ ತಿರುಗೇಟು ನೀಡಲು ಕಾಂಗ್ರೆಸ್‌ನಿಂದ ಚನ್ನಪಟ್ಟಣದಲ್ಲಿ ಜನಾಂದೋಲನ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಬಿಜೆಪಿ ಹಾಗೂ ಕಾಂಗ್ರೆಸ್‌ನವರಿಗೆ ಮಾನ ಮರ್ಯಾದೆ, ತಾಕತ್ತು ಇದ್ರೆ, ನಾವು ಕೇಳೋ ಪ್ರಶ್ನೆಗೆ ಉತ್ತರ ಕೊಡಿ ಎಂದರು. ಬಾಯ್ತಪ್ಪಿ ಕಾಂಗ್ರೆಸ್‌ಗೆ ಬೈದಿರುವುದು ಗೊತ್ತಾದ ಮೇಲೆ, ಕ್ಷಮಿಸಿ ಜೆಡಿಎಸ್ – ಬಿಜೆಪಿಗೆ ಮಾನ ಮರ್ಯಾದೆ ಇದ್ಯಾ ಎಂದಿದ್ದಾರೆ.

ಪಾದಯಾತ್ರೆ ಮೂಲಕ ರಾಜ್ಯದ ಜನರಿಗೆ ಸುಳ್ಳು ಹೇಳಲು ಬಿಜೆಪಿಯವರು ಹೊರಟಿದ್ದಾರೆ‌. ಜೆಡಿಎಸ್- ಬಿಜೆಪಿ ಅಪವಿತ್ರ ಮೈತ್ರಿ ಮಾಡಿಕೊಂಡು ಕೆಟ್ಟ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ. ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಮರೆತು ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಬಿಜೆಪಿ ಅವರ ಪಾದದಡಿಯಲ್ಲಿ ಜೆಡಿಎಸ್‌ನವರು ಸೇರಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಕಳಂಕ ತರಬೇಕು ಅಂತ ಪಾದಯಾತ್ರೆ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಸ್ವಚ್ಛತೆ, ಪ್ರಾಮಾಣಿಕತೆ ಇಟ್ಟುಕೊಂಡು ಇಷ್ಟು ವರ್ಷ ಸಿದ್ದರಾಮಯ್ಯ ರಾಜಕೀಯ ಮಾಡಿದ್ದಾರೆ. ಮೈಸೂರಿಗೆ ಹೋಗೊ ವರೆಗೂ ಇದೇ ರೀತಿ ಸಮಾವೇಶ ಮಾಡುತ್ತೇವೆ ಎಂದರು. ಈ ವೇಳೇ ಬಾಯ್ತಪ್ಪಿ ಬಿಜೆಪಿ ಹಾಗೂ ಕಾಂಗ್ರೆಸ್‌ನವರಿಗೆ ಮಾನ ಮರ್ಯಾದೆ, ತಾಕತ್ತು ಇದ್ರೆ, ನಾವು ಕೇಳೊ ಪ್ರಶ್ನೆಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು. ನಂತರ ಕ್ಷಮಿಸಿ, ಜೆಡಿಎಸ್ – ಬಿಜೆಪಿಗೆ ಮಾನ ಮರ್ಯಾದೆ ಇದ್ಯಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೇಲೆ ಒಂದೇ ಒಂದು ಆಪಾದನೆ ಏನಾದರೂ ಇದ್ದರೆ ನೀವು ಸಾಬೀತು ಮಾಡಿ. ಈ ವೇದಿಕೆ ಮೂಲಕ ನಾನು ಬಹಿರಂಗ ಸವಾಲು ಹಾಕುತ್ತೇನೆ ಎಂದು ಚರ್ಚೆಗೆ ಬರುವಂತೆ ಟಿ.ಜೆ. ಅಬ್ರಹಾಂಗೆ ಆಹ್ವಾನ ನೀಡಿದರು. ಮುಂದುವರಿದು ಜೆಡಿಎಸ್- ಬಿಜೆಪಿ ಶಾಸಕರಿಗೆ ನಾನು ಕರೆ ಕೊಡುತ್ತೇನೆ. ಮುಡಾ ಹಗರಣದಲ್ಲಿ ಸಿಎಂ ಭಾಗಿಯಾಗಿದ್ದಾರೆ ಎಂದರೆ ಸಾಕ್ಷಿ ಕೊಡಿ, ನೀವು ಹೇಳಿದ ಶಿಕ್ಷೆಯನ್ನು ನಾನು ಅನುಭವಿಸುತ್ತೇನೆ. ಸರ್ಕಾರದ ವಿರುದ್ಧ ಕೆಟ್ಟ ಅಭಿಪ್ರಾಯ ಬರಲು ಪಾದಯಾತ್ರೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ನಿಮ್ಮ ಬೊಮ್ಮಾಯಿ ಅವರ 4 ವರ್ಷದ ಆಡಳಿತದಲ್ಲಿ 18 ಪ್ರಕರಣಗಳಲ್ಲಿ ನಿಮ್ಮ ಮೇಲೆ ಆಪಾದನೆ ಇದೆ. ನಾನು ವಿಧಾನಸಭೆಯಲ್ಲಿ ಚರ್ಚೆ ಮಾಡೋಕೆ ಕಾದರೂ ನೀವು ಸಮಯ ಕೊಡಲಿಲ್ಲ. ವಿಜಯೇಂದ್ರ ಚೆಕ್ ಮುಖಾಂತರ ಲಂಚ ಪಡೆದುಕೊಂಡು ಕಿಕ್ ಬ್ಯಾಕ್ ಪಡೆದುಕೊಂಡಿದ್ದೀರಿ. ನೀವು ಭ್ರಷ್ಟಾಚಾರದ ಬಗ್ಗೆ ಮಾತಾಡ್ತೀರಾ? ಅಂದಿನ ಬಿಜೆಪಿ ಸರ್ಕಾರದಲ್ಲಿ ಆಗಿದ್ದ ಹಗರಣಗಳ ಬಗ್ಗೆ ನಿಮಗೆ ಗೊತ್ತಿಲ್ಲವೇ? ಬಿಜೆಪಿಯ ಕಾಲದಲ್ಲಿನ ಹಗರಣಗಳನ್ನು ಎಲ್ಲವನ್ನೂ ತನಿಖೆ‌ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ | Sheikh Hasina: ರಾಜೀನಾಮೆ ನೀಡಿ ಶೇಖ್‌ ಹಸೀನಾ ವಿದೇಶಕ್ಕೆ ಪಲಾಯನ; ಸುರಕ್ಷತೆಗಾಗಿ ಭಾರತಕ್ಕೆ ಆಗಮನ?

ಹೇ ಅಬ್ರಹಾಂ ನೀನು ಜೋಕರ್ ಕೆಲಸ, ಮಾನಗೆಟ್ಟ ಕೆಲಸ ಮಾಡಬೇಡ. ಮರ್ಯಾದಸ್ಥರನ್ನು ಬೀದಿಗೆ ಎಳಿಬೇಡ.
ನೀನು ತಲೆಹಿಡಿಯೋ ಕೆಲಸ ಮಾಡಬೇಡ. ಬಾ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Martin Trailer: ಪ್ಯಾನ್‌ ವರ್ಲ್ಸ್‌ ಮಾರ್ಟಿನ್‌ ಸಿನಿಮಾ ಟ್ರೈಲರ್‌ ಔಟ್;‌ ಪಾಕ್‌ನಲ್ಲಿ ಧ್ರುವ ಸರ್ಜಾ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ!

Martin Trailer: ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಇದೀಗ ಹಲವು ಭಾಷೆಗಳಲ್ಲಿ, ಮಾರ್ಟಿನ್‌ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಧ್ರುವ ಸರ್ಜಾ ಆ್ಯಕ್ಷನ್‌ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

VISTARANEWS.COM


on

Martin Trailer
Koo

ಮುಂಬೈ: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ನಟನೆಯ ಬಹುನಿರೀಕ್ಷಿತ, ಪ್ಯಾನ್‌ ವರ್ಲ್ಡ್‌ ಸಿನಿಮಾ ಎಂದೇ ಖ್ಯಾತಿಯಾಗಿರುವ ಮಾರ್ಟಿನ್‌ ಸಿನಿಮಾದ ಟ್ರೈಲರ್‌ (Martin Trailer) ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಸುದ್ದಿಗೋಷ್ಠಿಯಲ್ಲಿ, ದೇಶ-ವಿದೇಶಗಳ ಪತ್ರಕರ್ತರ ಸಮ್ಮುಖದಲ್ಲಿ ಮಾರ್ಟಿನ್‌ ಟ್ರೈಲರ್‌ ಔಟ್‌ ಆಗಿದೆ. ಪಾಕಿಸ್ತಾನದ ನೆಲದಲ್ಲಿ ಧ್ರುವ ಸರ್ಜಾ ಪ್ರದರ್ಶಿಸುವ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿ ಭಾರತದ ಹಲವು ರಾಜ್ಯಗಳು ಹಾಗೂ ಜಗತ್ತಿನ 22 ದೇಶಗಳ ಪತ್ರಕರ್ತರು, ಗಣ್ಯರ ಸಮ್ಮುಖದಲ್ಲಿ ಟ್ರೈಲರ್‌ಅನ್ನು ಲಾಂಚ್‌ ಮಾಡಲಾಗಿದೆ. ನಿರ್ದೇಶಕ ಎ.ಪಿ.ಅರ್ಜುನ್‌, ನಟ ಅರ್ಜುನ್‌ ಸರ್ಜಾ, ನಿರ್ಮಾಪಕ ಉದಯ್‌ ಮೆಹ್ತಾ ಸೇರಿ ಚಿತ್ರತಂಡದ ಹಲವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕನ್ನಡ, ಹಿಂದಿ, ಮಲಯಾಳಂ, ತಮಿಳು ಸೇರಿ ಒಟ್ಟು 13 ಭಾಷೆಗಳಲ್ಲಿ ಮಾರ್ಟಿನ್‌ ಟ್ರೈಲರ್‌ ರಿಲೀಸ್‌ ಆಗಿದೆ. ಟ್ರೈಲರ್‌ ವೀಕ್ಷಿಸಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಭರಪೂರ ಆ್ಯಕ್ಷನ್‌ ದೃಶ್ಯಗಳು, ಭರ್ಜರಿ ಡೈಲಾಗ್‌, ಅಬ್ಬರದ ಫೈಟಿಂಗ್‌ಅನ್ನು ಸಿನಿಮಾ ಹೊಂದಿದೆ ಎಂಬ ದೊಡ್ಡ ಸಂದೇಶವನ್ನು ಸಿನಿಮಾ ತಂಡವು ಟ್ರೈಲರ್‌ ಮೂಲಕ ರವಾನಿಸಿದೆ. ಅಭಿಮಾನಿಗಳ ಆಸೆಯಂತೆ ಪೋಲಿಂಗ್ ಮೂಲಕ ಟ್ರೈಲರ್ ಆಯ್ಕೆ ಮಾಡಲಾಯಿತು. ಮುಂಬೈನ ಅಂಧೇರಿಯ ಪಿವಿಆರ್ ಸಿಟಿ‌ ಮಾಲ್‌ನಲ್ಲಿ ಮಾರ್ಟಿನ್ ಇಂಟರ್ ನ್ಯಾಷನಲ್ ಪ್ರೆಸ್‌ ಮೀಟ್‌ ನಡೆಯಿತು. ಜಪಾನ್‌, ಚೀನಾ, ಅಮೆರಿಕ, ದುಬೈ, ರಷ್ಯಾ, ಬ್ರಿಟನ್‌ ಸೇರಿ ಹಲವು ದೇಶಗಳ ಪತ್ರಕರ್ತರು ಭಾಗವಹಿಸಿದ್ದರು. ಅಕ್ಟೋಬರ್‌ 11ರಂದು ಸಿನಿಮಾ ಬಿಡುಗಡೆಯಾಗಲಿದೆ.

ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಈಗ ಹಲವು ಭಾಷೆಗಳಲ್ಲಿ, ಮಾರ್ಟಿನ್‌ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Dhruva Sarja:  ಧ್ರುವ ಸರ್ಜಾ ಕಂಡು ʻಡಿ ಬಾಸ್’ ಎಂದು ಕೂಗಿದ ದರ್ಶನ್ ಫ್ಯಾನ್ಸ್; ಭರದಿಂದ ಸಾಗಿದೆ ‘ಮಾರ್ಟಿನ್’ ಪ್ರಚಾರ!

Continue Reading

ಕೊಪ್ಪಳ

Koppala News: ವಿದ್ಯುತ್‌ ತಂತಿಗೆ ತಗುಲಿ ಗಾಯಗೊಂಡಿದ್ದ ನವಿಲಿನ ರಕ್ಷಣೆ

Koppala News: ಹಾರುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ತಗುಲಿ ರೆಕ್ಕೆ ಹಾಗೂ ಕಾಲಿಗೆ ಗಾಯ ಮಾಡಿಕೊಂಡು ಹಾರಲಾಗದ ಸ್ಥಿತಿಯಲ್ಲಿದ್ದ ನವಿಲೊಂದನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿರುವ ಘಟನೆ ಗಂಗಾವತಿ ನಗರದ ಜಯನಗರದಲ್ಲಿ ನಡೆದಿದೆ.

VISTARANEWS.COM


on

Rescue the injured national bird Peacock at gangavathi
Koo

ಗಂಗಾವತಿ: ಹಾರುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ತಗುಲಿ ರೆಕ್ಕೆ ಹಾಗೂ ಕಾಲಿಗೆ ಗಾಯಮಾಡಿಕೊಂಡು ಹಾರಲಾಗದ ಸ್ಥಿತಿಯಲ್ಲಿದ್ದ ನವಿಲೊಂದನ್ನು (Peacock) ಸ್ಥಳೀಯ ಜಯನಗರದ ಯುವಕರು (Koppala News) ರಕ್ಷಣೆ ಮಾಡಿ, ಮಾನವೀಯತೆ ಮೆರೆದಿದ್ದಾರೆ.

ಇಲ್ಲಿನ ಜಯನಗರದ ಮೊದಲ ಹಂತದಲ್ಲಿರುವ ಸತ್ಯನಾರಾಯಣ ಪೇಟೆ ಮೊದಲ ಹಂತದಲ್ಲಿ ಈ ಘಟನೆ ಭಾನುವಾರ ನಡೆದಿದ್ದು, ಗಾಯಗೊಂಡಿದ್ದ ನವಿಲಿನ ಮೇಲೆ ನಾಯಿಗಳು ದಾಳಿ ಮಾಡುತ್ತಿರುವುದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿದ್ದಾರೆ. ಹಾರಾಡಲಾಗದ ಸ್ಥಿತಿಯಲ್ಲಿದ್ದ ನವಿಲನ್ನು ಸ್ಥಳೀಯ ಜಯನಗರ ವ್ಯಾಪ್ತಿಯ ವಾಲ್ಮೀಕಿ ನಗರದ ರಾಮು, ಲಕ್ಷ್ಮಣ, ಫಕೀರಪ್ಪ ಎಂಬ ಯುವಕರು ರಕ್ಷಣೆ ಮಾಡಿ, ಆರೈಕೆ ಮಾಡಿದ್ದಾರೆ.

ಇದನ್ನೂ ಓದಿ: Karnataka Weather : ಬೆಂಗಳೂರಲ್ಲಿ ಸಂಜೆಗೆ ದಿಢೀರ್‌ ಗುಡುಗು ಸಹಿತ ಮಳೆ; ನೇತ್ರಾವತಿ, ಪಲ್ಗುಣಿ ನದಿ ತೀರ ಪ್ರದೇಶದಲ್ಲಿ ನೆರೆ

ಬಳಿಕ ಅರಣ್ಯ ಇಲಾಖೆಯ ಗಂಗಾವತಿ ನಗರದ ಡಿಆರ್‌ಎಫ್‌ಒ ಶ್ರೀನಿವಾಸ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಗಂಗಾವತಿ ನಗರ ವ್ಯಾಪ್ತಿಯ ಬೀಟ್ ಫಾರೆಸ್ಟರ್ ಶಿವಾನಂದ ಹಾಗೂ ವಾಚರ್ ಬೂದೇಶ್ವರ ಅವರಿಗೆ, ಗಾಯಗೊಂಡಿದ್ದ ನವಿಲಿಗೆ ಚಿಕಿತ್ಸೆ ಕೊಡಿಸಿ, ಸಂರಕ್ಷಣೆ ಮಾಡಿ ಎಂದು ಮನವಿ ಮಾಡಿದ ಯುವಕರು, ಹಿರಿಯ ಯಮನಪ್ಪ ನಾಯಕ್ ನೇತೃತ್ವದಲ್ಲಿ ನವಿಲನ್ನು ಹಸ್ತಾಂತರ ಮಾಡಿದರು.

Continue Reading

ವಿಜಯನಗರ

Vijayanagara News: ಹಗರಿಬೊಮ್ಮನಹಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

Vijayanagara News: ಹಗರಿಬೊಮ್ಮನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಸಿ.ಆರ್. ಫೌಂಡೇಷನ್, ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ಸಂಬಂಧಿತ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

VISTARANEWS.COM


on

Free eye checkup and surgery camp at Hagaribommanahalli
Koo

ಹಗರಿಬೊಮ್ಮನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಸಿ.ಆರ್. ಫೌಂಡೇಷನ್, ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ಸಂಬಂಧಿತ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು (Vijayanagara News)ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್‌ನ ಗೌರವಾಧ್ಯಕ್ಷ ಎ.ವೀರಣ್ಣ ಮಾತನಾಡಿ, ಟ್ರಸ್ಟ್ ಮತ್ತು ಫೌಂಡೇಷನ್‌ಗಳ ಸಹಯೋಗದೊಂದಿಗೆ ತಾಲೂಕು ಸೇರಿದಂತೆ ಹರಪನಹಳ್ಳಿ, ಹೊಸಪೇಟೆ ಹಾಗೂ ಹಡಗಲಿ ತಾಲೂಕುಗಳಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದೇವೆ. ಮುಂದೆ ಕೂಡ ಇಂತಹ ಜನಪರ ಕೆಲಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಸತತ ಎರಡನೆ ದಿನವೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

ಈ ವೇಳೆ ಒಟ್ಟು 209 ಜನರು ತಪಾಸಣೆಗೊಳಗಾದರು. ಅದರಲ್ಲಿ 94 ಜನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಬಳಿಕ 15ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಟ್ರಸ್ಟ್‌ನ ಪದಾಧಿಕಾರಿಗಳು ಗೌರವಿಸಿ, ಸನ್ಮಾನಿಸಿದರು.

ಶಿಬಿರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ಮೇಲ್ವಿಚಾರಕ ಕೃಷ್ಣ, ವೈದ್ಯರಾದ ಡಾ. ವಿನಯ್, ಡಾ. ದೀಪ, ತ್ಯಾಗರಾಜ್‌ ನಾಯ್ಕ್, ಇಲ್ಲಿಯ ಸರ್ಕಾರಿ ವೈದ್ಯ ಡಾ. ಶರತ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್‌ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು

ಟ್ರಸ್ಟ್‌ನ ತಾಲೂಕು ಅಧ್ಯಕ್ಷ ಭದ್ರವಾಡಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುಧಾಕರ ಪಾಟೀಲ್, ಕೆ. ಪ್ರಭಾಕರ, ನರೆಗಲ್ ಮಲ್ಲಿಕಾರ್ಜುನ, ದಿವಾಕರಗೌಡ, ಕರಿಬಸವರಾಜ್, ನಾಗರಾಜ್, ಗಜಾಪುರ ಮಂಜುನಾಥ, ಕರಿಯಪ್ಪ ಗುಜನೂರು, ಪೂಜಾರ್ ಮಲ್ಲಿಕಾರ್ಜುನ, ಕುಂಟೂರು ನಿಂಗಣ್ಣ, ಇಟ್ಟಿಗಿ ಗುರುಬಸವರಾಜ್, ಮಲ್ಲಯ್ಯ, ಕಡಬಾಳು ಮಂಜಣ್ಣ, ಎಲಿಗಾರ್ ಮಂಜುನಾಥ, ಭದ್ರವಾಡಿ ಸುರೇಶ, ಹನಸಿ ವೀರೇಶ, ಆನಂದ, ವಿಜಯ್, ಕುಮಾರಸ್ವಾಮಿ, ನೆಲ್ಕುದ್ರಿ ಕುಮಾರ್, ಐನಳ್ಳಿ ಶೇಖರ್, ಬಾಬುವಲಿ, ಸಾಲ್ಮನಿ ನಾಗರಾಜ್ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಎಚ್.ಎಂ. ನಾಗರಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.

Continue Reading

ಕರ್ನಾಟಕ

KAS Prelims Exam: ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಮತ್ತೆ ಮುಂದೂಡಿಕೆ; ಆಗಸ್ಟ್‌ 27ಕ್ಕೆ ನಿಗದಿ

KAS Prelims Exam: ಲೋಕಸಭಾ ಚುನಾವಣೆ ಸೇರಿ ವಿವಿಧ ಕಾರಣಗಳಿಂದ ಹಲವು ಬಾರಿ ಮುಂದೂಡಿಕೆಯಾಗಿದ್ದ ಕೆಎಎಸ್‌ ಪೂರ್ವ ಭಾವಿ ಪರೀಕ್ಷೆಯನ್ನು(KAS Recruitment 2024) ಆ.25ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಇದೀಗ ಮತ್ತೆ ಎರಡು ದಿನಗಳ ಕಾಲ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮುಂದೂಡಿದೆ.

VISTARANEWS.COM


on

KAS prelims exam
Koo

ಬೆಂಗಳೂರು: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್‌ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಆ.25ರಂದು ನಿಗದಿಯಾಗಿದ್ದ ಪೂರ್ವಭಾವಿ ಪರೀಕ್ಷೆ (KAS Prelims Exam) ಮತ್ತೆ ಮುಂದೂಡಿಕೆಯಾಗಿದೆ. ಒಂದೇ ದಿನ ಬ್ಯಾಂಕಿಂಗ್‌ ಪರೀಕ್ಷೆ ಹಾಗೂ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ನಿಗದಿಯಾಗಿದ್ದರಿಂದ ಅಭ್ಯರ್ಥಿಗಳಿಗೆ ಸಮಸ್ಯೆಯಾಗಿತ್ತು. ಹೀಗಾಗಿ ಪರೀಕ್ಷಾ ದಿನಾಂಕ ಮುಂದೂಡುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದರು. ಇದರಿಂದ ಎರಡು ದಿನಗಳ ಕಾಲ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯನ್ನು ಕೆಪಿಎಸ್‌ಸಿ ಮುಂದೂಡಿದೆ.

ಕೆಎಎಸ್‌ ಪೂರ್ವಭಾವಿ ಪರೀಕ್ಷೆಗೆ ಈಗಾಗಲೇ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರುವ ಕಾರಣದಿಂದ ಹಾಗೂ ಮುಖ್ಯ ಮಂತ್ರಿಗಳು ಕರ್ನಾಟಕ ಲೋಕಸೇವಾ ಆಯೋಗದೊಂದಿಗೆ ಸಮಾಲೋಚಿಸಿ ಅಲ್ಪಕಾಲ ಗೆಜೆಟೆಡ್ ಪ್ರೊಬೇಷನರ್ಸ್‌ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲು ಸೂಚಿಸಿರುವುದರಿಂದ ಆ. 27ರ ಮಂಗಳವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆಪಿಎಸ್‌ಸಿ ತಿಳಿಸಿದೆ.

ಆ.25ರಂದು ಕೆಎಎಸ್‌ ಪೂರ್ವಭಾವಿ ಪರೀಕ್ಷೆ ನಡೆಸಲು ಈಗಾಗಲೇ ಒಟ್ಟು 564 ಪರೀಕ್ಷಾ ಉಪಕೇಂದ್ರಗಳಿಂದ ಒಪ್ಪಿಗೆ ಪತ್ರಗಳನ್ನು ಪಡೆದು ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಅಂದು ಐ.ಬಿ.ಪಿ.ಎಸ್. ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಸಿಎಂ ಅವರೊಂದಿಗೆ ಚರ್ಚಿಸಿ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯನ್ನು ಆ.27ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಪತ್ರ

ಆ.27 ಕಾರ್ಯ ನಿರ್ವಹಣಾ (working day) ದಿನವಾಗಿರುವುದರಿಂದ ಈಗಾಗಲೇ ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾದ 564 ಪರೀಕ್ಷಾ ಉಪಕೇಂದ್ರಗಳಿಗೆ ಒಂದು ದಿವಸದ ವಿಶೇಷ/ಸಾರ್ವತ್ರಿಕ ರಜೆಯನ್ನು ಘೋಷಿಸಿ, ಕೆಎಎಸ್‌ ಪೂರ್ವಭಾವಿ ಪರೀಕ್ಷೆಯನ್ನು ನಡೆಸುವಂತೆ ಅನುವು ಮಾಡಿಕೊಡಬೇಕು ಹಾಗೂ ಹುದ್ದೆಗೆ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರದ ಸೇವಾನಿರತ ಅಭ್ಯರ್ಥಿಗಳಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬೇಕು ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ರಾಕೇಶ್‌ ಕುಮಾರ್‌ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಸರ್ಕಾರದ ಕಾರ್ಯದರ್ಶಿ ರಣದೀಪ್‌ ಡಿ. ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ | Government Job: ಅಂತಾರಾಷ್ಟ್ರೀಯ ಕ್ರೀಡಾಕೂಟ ಪದಕ ಗೆದ್ದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ

Jobs Alert: ಪ್ರೌಢಶಾಲೆ, ಪಿಯು ಕಾಲೇಜುಗಳ ಬೋಧಕ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

teacher jobs alert
teacher jobs alert

ಬೆಂಗಳೂರು: ಖಾಸಗಿ ಅನುದಾನಿತ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ (Teacher) ಹುದ್ದೆಗಳನ್ನು ಭರ್ತಿ ಮಾಡಲು (Jobs Alert) ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಶಿಕ್ಷಕ, ಉಪನ್ಯಾಸಕ ಹುದ್ದೆಗಳ ಶೋಧದಲ್ಲಿರುವವರಿಗೆ ಇದು ಗುಡ್ ನ್ಯೂಸ್ (Good news) ಆಗಿದೆ.

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. 1987ರಿಂದ 1994-95ರ ಶೈಕ್ಷಣಿಕ ಅವಧಿಯಲ್ಲಿ ಪ್ರಾರಂಭಗೊಂಡು ಈಗಾಗಲೇ ವೇತನಾನುದಾನಕ್ಕೆ ಒಳಪಟ್ಟ ಖಾಸಗಿ ಅನುದಾನಿತ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಹಾಗೂ ಪದವಿ ಕಾಲೇಜುಗಳಲ್ಲಿ ದಿನಾಂಕ:01-01-2016ರಿಂದ ದಿನಾಂಕ:31-12-2020ರವರೆಗೆ ನಿವೃತ್ತಿ, ನಿಧನ, ರಾಜೀನಾಮೆ ಹಾಗೂ ಮತ್ತಿತರ ಕಾರಣಗಳಿಂದ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಭರ್ತಿಮಾಡಿಕೊಳ್ಳಲು ಆರ್ಥಿಕ ಇಲಾಖೆಯು ಸಹಮತಿಸಿದೆ.

ಷರತ್ತುಗಳು:

ಹುದ್ದೆಗಳನ್ನು ಭರ್ತಿ ಮಾಡಿಕೊಂಡ ನಂತರ ನೇಮಕಾತಿ ಅನುಮೋದನೆಗಾಗಿ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ:ಆಇ 384 ವೆಚ್ಚ-8/2013, ದಿನಾಂಕ:09-04- 2013ರಲ್ಲಿನ ಚೆಕ್‌ಲಿಸ್ಟ್ ಅನುಬಂಧ-3ರನ್ವಯ ಸಂಪೂರ್ಣ ಮಾಹಿತಿ/ದಾಖಲೆಗಳೊಂದಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದು. ಮೇಲ್ಕಂಡಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಜಾರಿಯಲ್ಲಿರುವ ಅನುದಾನ ಸಂಹಿತೆ ಮತ್ತು ಸರ್ಕಾರದ ಆದೇಶ ಮತ್ತು ಸುತ್ತೋಲೆಗಳ ನಿಯಮಗಳನ್ನು ಪಾಲಿಸಿರುವುದನ್ನು ಖಚಿತಪಡಿಸಿಕೊಳ್ಳುವುದು.

ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಾಗ ನಿಯಮಾನುಸಾರ ರೋಸ್ಟರ್ ಬಿಂದು ಮತ್ತು ಕಲ್ಯಾಣ ಕರ್ನಾಟಕದ ಮೀಸಲಾತಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. 2016-2017 ರಿಂದ 2023-24ನೇ ಸಾಲಿನವರೆಗೆ ವಿದ್ಯಾರ್ಥಿಗಳ ದಾಖಲಾತಿ, ಪರೀಕ್ಷಾ ಫಲಿತಾಂಶ ಮತ್ತು ಖಚಿತಪಡಿಸಿಕೊಳ್ಳುವುದು. ಮೂಲಭೂತ ಸೌಕರ್ಯಗಳು ಉತ್ತಮವಾಗಿರುವುದನ್ನು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಶಾಲಾ/ಕಾಲೇಜುಗಳು ಪ್ರಾರಂಭವಾದಾಗಿನಿಂದ ಅವಿಚ್ಛಿನ್ನವಾಗಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಅನುದಾನಿತ ಶಾಲೆಗಳು ಮತ್ತು ಕಾಲೇಜುಗಳು ಆನ್‌ಲೈನ್ ಮೂಲಕ ವಿವರಗಳು ಮತ್ತು ದಾಖಲೆಗಳನ್ನು ಸಲ್ಲಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸುವುದು. ಈ ತಂತ್ರಾಂಶದ ಮೂಲಕ ಪ್ರಸ್ತಾವನೆಗಳನ್ನು ವ್ಯವಹರಿಸುವುದು. ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿನ ಹುದ್ದೆಗಳನ್ನು ಅನುಮೋದಿಸಲು ಪ್ರತ್ಯಾಯೋಜಿಸಲಾದ ಆದೇಶ ಸಂಖ್ಯೆ: ಇಡಿ 16 ಟಿಪಿಯು 2011. ದಿನಾಂಕ:30-09-2011 ಅನ್ನು ಹಿಂಪಡೆದು, ಹುದ್ದೆಗಳ ಅನುಮೋದನೆಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸುವುದು.

Continue Reading
Advertisement
Paris Olympics 2024
ಪ್ರಮುಖ ಸುದ್ದಿ9 mins ago

Paris Olympics 2024 : ಕಂಚು ಕಳೆದುಕೊಂಡ ಲಕ್ಷ್ಯ ಸೇನ್​​; 2008ರ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬ್ಯಾಡ್ಮಿಂಟನ್​ನಲ್ಲಿ ಪದಕವಿಲ್ಲ

shravan 2024
Latest40 mins ago

Shravan 2024: ಶ್ರಾವಣ ಮಾಸದಲ್ಲೇಕೆ ಮಾಂಸಾಹಾರ ಮಾಡಬಾರದು? ಇದಕ್ಕಿದೆ ವೈಜ್ಞಾನಿಕ ಕಾರಣ!

Paris Olympics 2024
ಪ್ರಮುಖ ಸುದ್ದಿ43 mins ago

Paris Olympics 2024 : ನೀರಜ್ ಚೋಪ್ರಾ ಜಾವೆಲಿನ್ ಎಸೆತ ಸೇರಿದಂತೆ ಆ.6ರಂದು ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತೀಯ ಸ್ಪರ್ಧಿಗಳು ಇವರು…

Viral Video
Latest45 mins ago

Viral Video: ಮಗನನ್ನೇ ಹೊಡೆದು ಕೊಂದು, ಸುಟ್ಟು ಹಾಕಿ ಕೊಳಕ್ಕೆ ಎಸೆದ ತಂದೆ-ತಾಯಿ; ಹೃದಯ ತಲ್ಲಣಿಸುವ ವಿಡಿಯೊ

Viral Video
Latest57 mins ago

Viral Video: ಎಸ್ಕಲೇಟರ್ ಮೇಲೆ ಮಗುವನ್ನು ನಿಲ್ಲಿಸಲು ತಾಯಿಯ ಕಸತ್ತು; ಮುಂದೇನಾಯ್ತು ನೋಡಿ

Martin Trailer
ಸಿನಿಮಾ1 hour ago

Martin Trailer: ಪ್ಯಾನ್‌ ವರ್ಲ್ಸ್‌ ಮಾರ್ಟಿನ್‌ ಸಿನಿಮಾ ಟ್ರೈಲರ್‌ ಔಟ್;‌ ಪಾಕ್‌ನಲ್ಲಿ ಧ್ರುವ ಸರ್ಜಾ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ!

A R Rahman
ಪ್ರಮುಖ ಸುದ್ದಿ1 hour ago

A R Rahman : ಒಲಿಂಪಿಕ್ಸ್ ನಡುವೆಯೇ ವೈರಲ್ ಆಯ್ತು ಎಆರ್​ ರೆಹಮಾನ್ ಸಂಗೀತದ’ ತಾಲ್​ ಸೆ ತಾಲ್​’ ಹಾಡು; ಪ್ರತಿಕ್ರಿಯೆ ನೀಡಿದ ಚಿತ್ರ ನಿರ್ದೇಶಕ

Rescue the injured national bird Peacock at gangavathi
ಕೊಪ್ಪಳ1 hour ago

Koppala News: ವಿದ್ಯುತ್‌ ತಂತಿಗೆ ತಗುಲಿ ಗಾಯಗೊಂಡಿದ್ದ ನವಿಲಿನ ರಕ್ಷಣೆ

Free eye checkup and surgery camp at Hagaribommanahalli
ವಿಜಯನಗರ1 hour ago

Vijayanagara News: ಹಗರಿಬೊಮ್ಮನಹಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

KAS prelims exam
ಕರ್ನಾಟಕ1 hour ago

KAS Prelims Exam: ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಮತ್ತೆ ಮುಂದೂಡಿಕೆ; ಆಗಸ್ಟ್‌ 27ಕ್ಕೆ ನಿಗದಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌