Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳು ಎಷ್ಟಿವೆ? ಇಲ್ಲಿದೆ ಎಲ್ಲ ವಿವರಗಳು - Vistara News

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳು ಎಷ್ಟಿವೆ? ಇಲ್ಲಿದೆ ಎಲ್ಲ ವಿವರಗಳು

Paris Olympics 2024 : ಸರಣಿ ರಾಷ್ಟ್ರೀಯ ದಾಖಲೆ ಮುರಿದಿರುವ ಅವಿನಾಶ್ ಸಾಬ್ಲೆ ಪುರುಷರ ಸ್ಟೀಪಲ್ ಚೇಸ್ ಹೀಟ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಭರವಸೆಯಿದೆ. ಮಹಿಳೆಯರ 68 ಕೆ.ಜಿ ವಿಭಾಗದಲ್ಲಿ ಭಾರತದ ನಿಶಾ ದಹಿಯಾ ಪದಕ ಸುತ್ತುಗಳನ್ನು ಪ್ರವೇಶಿಸಲು ಹೋರಾಡುವುದರೊಂದಿಗೆ ಭಾರತದ ಕುಸ್ತಿ ವಿಭಾಗವು ಸೋಮವಾರ ಕಣಕ್ಕೆ ಇಳಿಯಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನ (Paris Olympics 2024) ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಯುವ ಷಟ್ಲರ್​ ಲಕ್ಷ್ಯ ಸೇನ್ ಸೋತು ಫೈನಲ್​​ಗೆ ಪ್ರವೇಶಿಸಲು ವಿಫ;ರಾದರು. ಇದು ನೋವಿನ ವಿಚಾರವಾದರೂ ಅವರಿನ್ನೂ ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ 2024 ಅಭಿಯಾನ ಕೊನೆಗೊಳಿಸಬಹುದು. ಸೋಮವಾರ ನಡೆಯಲಿರುವ ಕಂಚಿನ ಪದಕದ ಪಂದ್ಯದಲ್ಲಿ ಅವರು ಮಲೇಷ್ಯಾದ ಲೀ ಜಿಯಾ ಜಿ ವಿರುದ್ಧ ಕಠಿಣ ಸವಾಲು ಎದುರಿಸಲಿದ್ದಾರೆ. ಅಲ್ಲಿ ಗೆದ್ದರೆ ಪದಕವೊಂದು ಖಚಿತ. ಸೋಮವಾರ ಭಾರತದ ಕ್ರೀಡಾಭಿಮಾನಿಗಳು ಅವರ ಬಗ್ಗೆ ಗಮನ ಇಟ್ಟಿದ್ದಾರೆ.

ಸರಣಿ ರಾಷ್ಟ್ರೀಯ ದಾಖಲೆ ಮುರಿದಿರುವ ಅವಿನಾಶ್ ಸಾಬ್ಲೆ ಪುರುಷರ ಸ್ಟೀಪಲ್ ಚೇಸ್ ಹೀಟ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಭರವಸೆಯಿದೆ. ಮಹಿಳೆಯರ 68 ಕೆ.ಜಿ ವಿಭಾಗದಲ್ಲಿ ಭಾರತದ ನಿಶಾ ದಹಿಯಾ ಪದಕ ಸುತ್ತುಗಳನ್ನು ಪ್ರವೇಶಿಸಲು ಹೋರಾಡುವುದರೊಂದಿಗೆ ಭಾರತದ ಕುಸ್ತಿ ವಿಭಾಗವು ಸೋಮವಾರ ಕಣಕ್ಕೆ ಇಳಿಯಲಿದೆ. ಭಾರತದ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿಯರು ಸೋಮವಾರ ತಮ್ಮ ತಂಡದ ಸ್ಪರ್ಧೆ ಪ್ರಾರಂಭಿಸಲಿದ್ದಾರೆ. ಹೀಗೆ ಸೋಮವಾರವೂ ಭಾರತಕ್ಕೆ ಹಲವಾರು ಆಶಾಭಾವಗಳಿವೆ. ಅವುಗಳ ಬಗ್ಗ ಗಮನ ಹರಿಸೋಣ.

ಆಗಸ್ಟ್ 5, ಸೋಮವಾರದ ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ

ಮಧ್ಯಾಹ್ನ 12:30: ಸ್ಕೀಟ್ ಮಿಶ್ರ ತಂಡ ಅರ್ಹತಾ ಸುತ್ತು. ಮಹೇಶ್ವರಿ ಚೌಹಾಣ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ.

ಮಧ್ಯಾಹ್ನ 1:30: ಟೇಬಲ್ ಟೆನಿಸ್ – 16 ನೇ ಸುತ್ತಿನ ಮಹಿಳಾ ತಂಡ ಸುತ್ತಿನಲ್ಲಿ ಭಾರತ ಮತ್ತು ರೊಮೇನಿಯಾ.

ಶ್ರೀಜಾ ಅಕುಲಾ, ಮಣಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್ ಅವರನ್ನೊಳಗೊಂಡ ಭಾರತ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.

ಇದನ್ನೂ ಓದಿ: Lovlina Borgohain : ಲವ್ಲಿನಾ ಬೊರ್ಗೊಹೈನ್​​ಗೆ ಸೋಲು; ಒಲಿಂಪಿಕ್ಸ್​​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯ

ಮಧ್ಯಾಹ್ನ 3:25: ಅಥ್ಲೆಟಿಕ್ಸ್ – ಮಹಿಳೆಯರ 400 ಮೀಟರ್ ಹೀಟ್ಸ್​ನಲ್ಲಿ ಕಿರಣ್ ಪಹಲ್.

ಮಧ್ಯಾಹ್ನ 3:45: ಸೇಯ್ಲಿಂಗ್​: ಮಹಿಳಾ ಡಿಂಗಿ ರೇಸ್ 9 ಮತ್ತು 10 ರಲ್ಲಿ ನೇತ್ರಾ ಕುಮನನ್.

ಸಂಜೆ 6: ಬ್ಯಾಡ್ಮಿಂಟನ್​ ಪುರುಷರ ಸಿಂಗಲ್ಸ್ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಲಕ್ಷ್ಯ ಸೇನ್ ಮತ್ತು ಮಲೇಷ್ಯಾದ ಲೀ ಜಿಯಾ ಝಿ ಹೋರಾಡಲಿದ್ದಾರೆ.

ಸಂಜೆ 6:10: ಸೇಯ್ಲಿಂಗ್​, ಪುರುಷರ ಡಿಂಗಿ ರೇಸ್ 9 ಮತ್ತು 10 ರಲ್ಲಿ ವಿಷ್ಣು ಸರವಣನ್.

ಸಂಜೆ 6:30: ಮಹಿಳೆಯರ 68 ಕೆ.ಜಿ ಫ್ರೀಸ್ಟೈಲ್ ಕುಸ್ತಿಯ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ನಿಶಾ ದಹಿಯಾ.

ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ಕೂಡ ಒಂದೇ ದಿನ ನಡೆಯಲಿವೆ.

ರಾತ್ರಿ 10:31: ಅಥ್ಲೆಟಿಕ್ಸ್ – ಪುರುಷರ 3000 ಮೀಟರ್ ಸ್ಟೀಪಲ್​ಚೇಸ್​ ಹೀಟ್ಸ್​​ನಲ್ಲಿ ಅವಿನಾಶ್ ಸಾಬ್ಲೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ರಾಜಮಾರ್ಗ ಅಂಕಣ: ಕೃತಜ್ಞತೆ ಎಂಬ ಮಹಾನ್ ಪ್ರವಾಹ

ರಾಜಮಾರ್ಗ ಅಂಕಣ: ನೀವು ಯಾರಿಗಾದರೂ ಬೆನ್ನು ತಟ್ಟಲು ಬಾಕಿ ಇದ್ದರೆ ಈಗಲೇ ತಟ್ಟಿ ಬಿಡಿ. ಯಾಕೆಂದರೆ ಮುಂದೆ ಒಂದು ದಿನ ಅವರಿಗೆ ನಿಮ್ಮ ಮೆಚ್ಚುಗೆಯು ಬೇಡವಾಗಿ ಹೋಗಬಹುದು!

VISTARANEWS.COM


on

gratitude ರಾಜಮಾರ್ಗ ಅಂಕಣ
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ನೀವು ಯಾರಿಗಾದರೂ ಧನ್ಯವಾದ (Thanks) ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ. ಯಾರಿಗೆ ಗೊತ್ತು ನಾಳೆ ಅವರು ಮಾಡಿದ ಒಳ್ಳೆಯ ಕೆಲಸವು ಅವರಿಗೇ ಮರೆತು ಹೋಗಿರಬಹುದು!

ನೀವು ಯಾರ ಮನಸ್ಸನ್ನಾದರೂ ನೋಯಿಸಿದ್ದರೆ ಇಂದೇ ಕ್ಷಮೆ ಕೇಳಿಬಿಡಿ. ಏಕೆಂದರೆ ಅವರು ನಿಮ್ಮ ಹಾಗೆ ಕಣ್ಣೀರು ಸುರಿಸುತ್ತಾ ದೂರದಲ್ಲಿ ಕುಳಿತಿರಬಹುದು!

ನೀವು ಯಾರಿಗಾದರೂ ಬೆನ್ನು ತಟ್ಟಲು ಬಾಕಿ ಇದ್ದರೆ ಈಗಲೇ ತಟ್ಟಿ ಬಿಡಿ. ಯಾಕೆಂದರೆ ಮುಂದೆ ಒಂದು ದಿನ ಅವರಿಗೆ ನಿಮ್ಮ ಮೆಚ್ಚುಗೆಯು ಬೇಡವಾಗಿ ಹೋಗಬಹುದು!

ನೀವು ಯಾರಿಗಾದರೂ ‘ ಆಲ್ ದ ಬೆಸ್ಟ್’ (All the Best) ಹೇಳಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದರೆ ಅವರು ಗೆದ್ದ ಮೇಲೆ ಅವರಿಗೆ ಸಾವಿರ ಜನ ಶಾಭಾಷ್ ಹೇಳಲು ಕಾಯುತ್ತಿರಬಹುದು!

ನೀವು ಯಾರಿಗಾದರೂ ನಿಮ್ಮ ಪ್ರೀತಿಪಾತ್ರರಿಗೆ ಗುಟ್ಟುಗಳನ್ನು ಶೇರ್ ಮಾಡಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದ್ರೆ ಮುಂದೆ ಅದು ಬೇರೆಯವರ ಮೂಲಕ ಗೊತ್ತಾದರೆ ಅವರಿಗೆ ತುಂಬ ನೋವಾಗಬಹುದು!

ನಿಮ್ಮ ತಲೆಯಲ್ಲಿ ಏನಾದರೂ ಹೊಸ ಐಡಿಯಾ ಫ್ಲಾಶ್ ಆದರೆ ಅದನ್ನು ಬರೆದಿಡಿ ಮತ್ತು ತಕ್ಷಣ ಅನುಷ್ಟಾನಿಸಿ. ಏಕೆಂದರೆ ನಿಮ್ಮ ಐಡಿಯಾಗಳಿಗೆ ಕಾಪಿ ರೈಟ್ ಇರುವುದಿಲ್ಲ!

ನಿಮಗೆ ಯಾರಿಗಾದರೂ ಸಾರಿ ಹೇಳಲು ಬಾಕಿ ಇದ್ದರೆ ಇಂದೆ ಹೇಳಿಬಿಡಿ, ಯಾಕೆಂದರೆ ಆ ನಾಳೆ ಬಾರದೆ ಹೋಗಬಹುದು. ಬಂದರೂ ಅವರು ನಿಮಗೆ ಸಿಗದೇ ಹೋಗಬಹುದು!

ನಿಮಗೆ ಯಾರ ಬಗ್ಗೆಯಾದರೂ ಪ್ರಾರ್ಥನೆ ಮಾಡಲು ಬಾಕಿ ಇದ್ದರೆ ಈಗಲೇ ಮಾಡಿಬಿಡಿ. ಏಕೆಂದರೆ ನಾಳೆ ನಿಮ್ಮ ಪ್ರಾರ್ಥನೆಯನ್ನು ಸ್ವೀಕಾರ ಮಾಡಲು ದೇವರಿಗೆ ಸಮಯ ದೊರೆಯದೆ ಹೋಗಬಹುದು!

ನೀವು ಯಾರಿಗಾದರೂ ಏನನ್ನಾದರೂ ಕೊಡಲು ಯೋಚನೆ ಮಾಡಿದರೆ ಈಗಲೇ ಕೊಟ್ಟುಬಿಡಿ. ಯಾಕೆಂದ್ರೆ ಭೂಮಿ ಗುಂಡಗೆ ಇದ್ದರೂ ಅವರು ನಿಮಗೆ ಮುಂದೆ ಸಿಗದೇ ಹೋಗಬಹುದು!

ನೀವು ಯಾರಿಗಾದರೂ ಕಣ್ಣೀರು ಒರೆಸಲು ಬಾಕಿ ಇದ್ದರೆ ಇಂದೆ ಒರೆಸಿಬಿಡಿ. ಏಕೆಂದರೆ ಮುಂದೆ ಅವರ ಕಣ್ಣೀರು ಒರೆಸಲು ಬಹಳ ಕೈಗಳು ದೊರೆಯಬಹುದು!

ನಿಮಗೆ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಏಕೆಂದರೆ ಆ ವಸ್ತುವಿನ ಮೇಲೆ ನಿಮಗೆ ನಾಳೆ ಮೋಹ ಹೆಚ್ಚಾಗಬಹುದು!

ಯಾರದಾದರೂ ಆಳುವ ಕಣ್ಣೀರಿಗೆ ನಿಮ್ಮ ಹೆಗಲು ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಯಾಕೆಂದರೆ ಮುಂದೆ ನಿಮ್ಮ ಕಣ್ಣೀರಿಗೆ ಯಾವುದೇ ಹೆಗಲು ದೊರೆಯದೆ ಹೋಗಬಹುದು!

ನೀವು ಯಾರಿಗಾದರೂ ಬೆಸ್ಟ್ ಫ್ರೆಂಡಗೆ ಸಾಲ ಕೊಡುವ ಪ್ರಸಂಗ ಬಂದರೆ ಸಾಲ ಎಂದು ಕೊಡಬೇಡಿ. ಹಾಗೆ ಕೊಟ್ಟುಬಿಡಿ. ಯಾಕೆಂದರೆ ಆ ದುಡ್ಡು ಹೇಗೂ ಹಿಂದೆ ಬರುವುದಿಲ್ಲ!

ನೀವು ಯಾರದೇ ತಪ್ಪನ್ನು ನೇರವಾಗಿ ಹೇಳುವ ಮೊದಲು ನೂರು ಬಾರಿ ಯೋಚನೆ ಮಾಡಿ. ಏಕೆಂದರೆ ಅದರಲ್ಲಿ ನಿಮ್ಮ ತಪ್ಪಿನ ಪಾಲು ಕೂಡ ಇರಬಹುದು!

ನೀವು ಯಾವುದೇ ಹುಡುಗಿಗೆ ಪ್ರೊಪೋಸ್ ಮಾಡುವ ಅವಕಾಶ ದೊರೆತಾಗ ತಕ್ಷಣ ಪ್ರೊಪೋಸ್ ಮಾಡಿಬಿಡಿ. ಏಕೆಂದರೆ ಅದೇ ಹುಡುಗಿಯು ಮುಂದೆ ಬೇರೆ ಯಾರನ್ನಾದರೂ ಮದುವೆಯಾಗಿ ನಿಮ್ಮ ನೆರೆಮನೆಗೆ ಬಾಡಿಗೆಗೆ ಬಂದು ‘ನೀನು ಯಾಕೋ ಪ್ರೊಪೋಸ್ ಮಾಡಿಲ್ಲ, ನಾನು ಕಾಯ್ತಾ ಇದ್ದೆ ಕಣೋ’ ಎಂದು ಹೇಳಬಹುದು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಬಾಲ್ಯದಲ್ಲಿ ಎರಡೂ ಕಾಲು ಪೋಲಿಯೋ ಪೀಡಿತಳಾದ ಹುಡುಗಿ ಮಹೋನ್ನತ ಕ್ರೀಡಾಪಟು ಆದ ಕಥೆ!

Continue Reading

ಕರ್ನಾಟಕ

Shravan 2024: ಇಂದಿನಿಂದ ಶ್ರಾವಣ ಶುಭಾರಂಭ; ಈ ತಿಂಗಳ ವಿಶೇಷ ಏನು?

Shravan 2024: ಶ್ರಾವಣ ಮಾಸ ಧಾರ್ಮಿಕ ಕಾರ್ಯಗಳಿಗೆ ಬಹಳ ಉತ್ತಮವಾದ ಮಾಸವಾಗಿದೆ. ಈ ಮಾಸವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜಪ-ತಪ, ವ್ರತ-ನಿಯಮ, ಪೂಜೆ-ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ-ಯಾಗ, ಹೋಮ-ಹವನ ಮುಂತಾದವುಗಳನ್ನು ಈ ಮಾಸದಲ್ಲಿಯೇ ಹೆಚ್ಚು ಮಾಡುತ್ತಾರೆ. ಅಲ್ಲದೇ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಈ ಮಾಸ ಬಹಳ ಪ್ರಶಸ್ತವಾಗಿದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Shravan 2024
Koo

ಬೆಂಗಳೂರು: ಹಿಂದೂ ಪಂಚಾಂಗದಲ್ಲಿ ಬರುವ 12 ಮಾಸಗಳಲ್ಲಿ ಶ್ರಾವಣ ಮಾಸ (Shravan 2024) ಐದನೇ ಮಾಸವಾಗಿದೆ. ಎಲ್ಲಾ ಮಾಸಗಳು ಹುಣ್ಣಿಮೆಯ ದಿನ ಪ್ರಾರಂಭವಾಗುತ್ತದೆ ಮತ್ತು ಆ ದಿನ ಬರುವ ನಕ್ಷತ್ರದ ಹೆಸರಿನಿಂದ ಆ ಮಾಸವನ್ನು ಕರೆಯಲಾಗುತ್ತದೆ. ಅದರಂತೆ ಈ ಮಾಸ ಪ್ರಾರಂಭವಾಗುವ ಹುಣ್ಣಿಮೆಯ ದಿನ ಶ್ರವಣ ನಕ್ಷತ್ರ ಬಂದ ಕಾರಣ ಈ ಮಾಸಕ್ಕೆ ಶ್ರಾವಣ ಮಾಸ ಎಂದು ಕರೆಯುತ್ತಾರೆ. ಈ ಮಾಸ ಹಿಂದೂಗಳಿಗೆ ಬಹಳ ಶ್ರೇಷ್ಠವಾದ ಹಾಗೂ ವಿಶೇಷವಾದ ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುತ್ತದೆ. ಹಾಗಾಗಿ ಈ ಮಾಸದಲ್ಲಿ ಶಿವ, ಪಾರ್ವತಿ, ಲಕ್ಷ್ಮಿ, ವಿಷ್ಣು ಸೇರಿದಂತೆ ಅನೇಕ ದೇವಾನುದೇವತೆಗಳ ಪೂಜೆ ಮಾಡುತ್ತಾರೆ. ಹಾಗೇ ಮದುವೆ, ಮುಂಜಿಯಂತಹ ಶುಭ ಕಾರ್ಯಗಳನ್ನು ಈ ಮಾಸದಲ್ಲಿ ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್‌ನಲ್ಲಿ 2024ರಲ್ಲಿ ಶ್ರಾವಣ ಮಾಸ ಆಗಸ್ಟ್ 5ರ ಸೋಮವಾರದಂದು ಪ್ರಾರಂಭವಾಗಿ ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಕೊನೆಗೊಳ್ಳುತ್ತದೆ. ಹಾಗಾಗಿ ಈ ಮಾಸದ ವಿಶೇಷತೆ ಏನು ಮತ್ತು ಶುಭ ಕಾರ್ಯಗಳನ್ನು ಮಾಡಲು ಈ ಮಾಸ ಸೂಕ್ತ ಏಕೆ ಎಂಬುದನ್ನು ತಿಳಿಯೋಣ.

Shravanmasa 2024
Shravanmasa 2024

ಶ್ರಾವಣ ಮಾಸದ ವಿಶೇಷತೆ:

ಶ್ರಾವಣ ಮಾಸ ಧಾರ್ಮಿಕ ಕಾರ್ಯಗಳಿಗೆ ಬಹಳ ಉತ್ತಮವಾದ ಮಾಸವಾಗಿದೆ. ಈ ಮಾಸವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜಪ-ತಪ, ವ್ರತ-ನಿಯಮ, ಪೂಜೆ-ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ-ಯಾಗ, ಹೋಮ-ಹವನ ಮುಂತಾದವುಗಳನ್ನು ಈ ಮಾಸದಲ್ಲಿಯೇ ಹೆಚ್ಚು ಮಾಡುತ್ತಾರೆ. ಅಲ್ಲದೇ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಈ ಮಾಸ ಬಹಳ ಪ್ರಶಸ್ತವಾಗಿದೆ.

ಶ್ರಾವಣ ಮಾಸದಲ್ಲಿ ಹಬ್ಬ ಹರಿದಿನಗಳು ಒಂದರ ನಂತರ ಒಂದು ಸಾಲು ಸಾಲಾಗಿ ಬರುತ್ತದೆ. ಶ್ರಾವಣ ಮಾಸದ ಪ್ರತಿದಿನವೂ ಹಬ್ಬವೇ ಇರುತ್ತದೆ. ಹಾಗಾಗಿ ಶ್ರಾವಣ ಮಾಸದ ಎಲ್ಲಾ ದಿನಗಳು ಬಹಳ ಶುಭವೇ ಆಗಿರುತ್ತದೆ. ಆದಕಾರಣ ಈ ಶುಭ ದಿನಗಳಲ್ಲಿ ಶುಭ ಕಾರ್ಯ ಮಾಡಿದರೆ ಅದಕ್ಕೆ ಬಹಳ ಉತ್ತಮವಾದ ಫಲ ಶೀಘ್ರದಲ್ಲಿಯೇ ಸಿಗುತ್ತದೆ ಎಂಬ ನಂಬಿಕೆ ಇದೆ.

ಅಲ್ಲದೇ ಈ ಮಾಸದಲ್ಲಿ ಪ್ರಕೃತಿಯಲ್ಲಿನ ಗಿಡಮರಗಳು ಚಿಗುರೊಡೆದು ಹಚ್ಚಹಸಿರಾಗಿ, ಹೂಗಳನ್ನು ಬಿಟ್ಟು ಬಣ್ಣಗಳಿಂದ ಕಂಗೊಳಿಸುತ್ತಾ ಸಂತಸದಿಂದ ಇರುತ್ತದೆಯಂತೆ. ಹಾಗೇ ಪ್ರಾಣಿ ಪಕ್ಷಿಗಳು ಕೂಡ ಉಲ್ಲಾಸದಿಂದ ಇರುತ್ತದೆಯಂತೆ. ಇದನ್ನು ಕಂಡು ದೈವಾನುದೇವತೆಗಳು ಕೂಡ ಸಂಭ್ರಮ ಪಡುತ್ತಾರಂತೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಿದರೂ ದೇವರು ಬಹಳ ಬೇಗನೇ ಪ್ರಸನ್ನರಾಗಿ ಅನುಗ್ರಹ ನೀಡುತ್ತಾರೆ ಎನ್ನಲಾಗುತ್ತದೆ.

Shravanmasa 2024
Shravanmasa 2024

ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು :

  • ಉಪಕರ್ಮ:
  • ಶ್ರಾವಣ ಮಾಸ ಹುಣ್ಣಿಮೆ ಜ್ಞಾನಕ್ಕೆ ಕಾರಣವಾಗಿದ್ದರಿಂದ ಈ ದಿನ ಜನೀವಾರ ಹಬ್ಬ ಅಥವಾ ಉಪಕರ್ಮ ಅಥವಾ ನೂಲು ಹುಣ್ಣಿಮೆಯನ್ನು ಆಚರಿಸುತ್ತಾರೆ.
  • ರಕ್ಷಾಬಂಧನ :
  • ಶ್ರಾವಣ ಹುಣ್ಣಿಮೆಯಂದು ಸಹೋದರ ಪ್ರೇಮಕ್ಕೆ ಹೆಚ್ಚು ಮಹತ್ವವಿರುವುದರಿಂದ ರಕ್ಷಾಬಂಧನವನ್ನು ಆಚರಿಸುವ ಮೂಲಕ ಸಹೋದರಿ ಸಹೋದರನಿಗೆ ರಾಖಿ ಕಟ್ಟುತ್ತಾರೆ.
  • ಹಯಗ್ರೀವ ಜಯಂತಿ :
  • ಮಕ್ಕಳಿಗೆ ವಿದ್ಯೆ ಬುದ್ಧಿ ಕರುಣಿಸಲಿ ಎಂದು ವಿದ್ಯೆಯನ್ನು ಅನುಗ್ರಹಿಸುವ ಹಯಗ್ರೀವನನ್ನು ಪೂಜಿಸಿ ಪ್ರಾರ್ಥಿಸುತ್ತಾರೆ.
  • ಸಂಕಷ್ಟ ಚತುರ್ಥಿ :
  • ಅಪಘಾತ, ಆರೋಗ್ಯ ಸಮಸ್ಯೆ, ಸಂಕಷ್ಟಗಳು ಜೀವನದಲ್ಲಿ ಬರಬಾರದೆಂದು ಸಂಕಷ್ಟಹರ ಚತುರ್ಥಿಯನ್ನು ಮಾಡುತ್ತಾರೆ.
  • ಕೃಷ್ಣಾಷ್ಟಮಿ :
  • ದುಷ್ಟ ಸಂಹಾರಕ್ಕಾಗಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಶ್ರೀಕೃಷ್ಣ ಜನ್ಮ ತಾಳಿದ ಕಾರಣ ಈ ಮಾಸದಲ್ಲಿ ಕೃಷ್ಣಾಷ್ಟಮಿಯನ್ನು ಆಚರಿಸುವ ಮೂಲಕ ಕೃಷ್ಣನನ್ನು ಪೂಜಿಸುತ್ತಾರೆ.
  • ಶ್ರಾವಣ ಸೋಮವಾರ:
  • ಶ್ರಾವಣ ಮಾಸದಲ್ಲಿ ಬರುವ ಪ್ರತಿ ಸೋಮವಾರದಂದು ಶಿವನ ಆರಾಧನೆ ಮಾಡಲಾಗುತ್ತದೆ. ಇದರಿಂದ ಶಿವನು ಬೇಗನೆ ಪ್ರಸನ್ನನಾಗಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ.
  • ಕಾಮನ ಏಕಾದಶಿ:
  • ನಿಮ್ಮ ಕೋರಿಕೆಗಳು ಈಡೇರಲು ಶ್ರಾವಣ ಮಾಸದಲ್ಲಿ ಕಾಮನ ಏಕಾದಶಿಯನ್ನು ಆಚರಿಸುವ ಮೂಲಕ ವಿಷ್ಣುವಿನ ಪೂಜೆ ಮಾಡಲಾಗುತ್ತದೆ.
  • ಪುತ್ರ ಏಕಾದಶಿ :
  • ಸಂತಾನ ಭಾಗ್ಯ ಬಯಸುವವರು ಶ್ರಾವಣ ಮಾಸದಲ್ಲಿ ಬರುವ ಪುತ್ರ ಏಕಾದಶಿಯನ್ನು ಆಚರಿಸುತ್ತಾರೆ.
  • ಶ್ರಾವಣ ಮಂಗಳವಾರ :
  • ಶ್ರಾವಣ ಮಾಸದಲ್ಲಿ ಬರುವ ಪ್ರತಿ ಮಂಗಳವಾರದಂದು ಮಂಗಳಗೌರಿ ವ್ರತವನ್ನು ಮಾಡಲಾಗುತ್ತದೆ. ಇದು ಮದುವೆಯಾದ ಹೆಣ್ಣುಮಕ್ಕಳು ಮಾಡಿದರೆ ಅವರ ವೈವಾಹಿಕ ಜೀವನ ಸುಖಕರವಾಗಿರುತ್ತದೆಯಂತೆ.
  • ವರಮಹಾಲಕ್ಷ್ಮಿ ವ್ರತ:
  • ಈ ದಿನ ಮಹಿಳೆಯರು ಲಕ್ಷ್ಮಿದೇವಿಯನ್ನು ಕಳಸದ ಮೇಲೆ ಪ್ರತಿಷ್ಠಾಪನೆ ಮಾಡಿ ಜರಿ ಸೀರೆ ಉಡಿಸಿ, ಧನ, ಚಿನ್ನದ ಆಭರಣಗಳಿಂದ ದೇವಿಯನ್ನು ಅಲಂಕರಿಸಿ ಪೂಜೆ ಮಾಡಿ ವರವನ್ನು ಬೇಡಿಕೊಳ್ಳುತ್ತಾರೆ.
  • ಶ್ರಾವಣ ಶುಕ್ರವಾರ :
  • ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶುಕ್ರವಾರದಂದು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯನ್ನು ಪೂಜಿಸುವ ಮೂಲಕ ಸಂಪತ್ ಗೌರಿ ವ್ರತವನ್ನು ಆಚರಿಸುತ್ತಾರೆ.
  • ನಾಗರಪಂಚಮಿ :
  • ಶ್ರಾವಣ ಮಾಸದ ಪ್ರಾರಂಭವಾದ 5ನೇ ದಿನದಂದು ಬರುವ ನಾಗರ ಪಂಚಮಿ ಹಬ್ಬದಂದು ಮಹಿಳೆಯರು ನಾಗ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
  • ದೂರ್ವಾ ಗಣಪತಿ ವ್ರತ :
  • ಶ್ರಾವಣ ಮಾಸದಲ್ಲಿ ಬರುವ ಈ ವ್ರತದಂದು ಗಣಪತಿಗೆ ಪ್ರಿಯವಾದ ದೂರ್ವಾ ಅಥವಾ ಗರಿಕೆಯನ್ನು ಅರ್ಪಿಸಿ ಪೂಜಿಸಲಾಗುತ್ತದೆ.
  • ಶ್ರಾವಣ ಶನಿವಾರ:
  • ಶ್ರಾವಣ ಮಾಸದ ಪ್ರತಿ ಶನಿವಾರ ಶ್ರಾವಣ ಶನಿವಾರವೆಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿ ಮತ್ತು ವೆಂಕಟೇಶ್ವರನನ್ನು ಆರಾಧಿಸುತ್ತಾರೆ. ಹಾಗೇ ಕೆಲವರು ಶ್ರಾವಣ ಶನಿವಾರದಂದು ಉಪವಾಸ ವ್ರತವನ್ನು ಆಚರಿಸುತ್ತಾರೆ. ಹಾಗೇ ಈ ದಿನ ಆಂಜನೇಯ ಸ್ವಾಮಿಯ ಪೂಜೆ ಹಾಗೂ ಶನಿ ಶಾಂತಿ ಪೂಜೆಗೆ ಬಹಳ ಉತ್ತಮ ಎನ್ನಲಾಗಿದೆ.

ಇದನ್ನೂ ಓದಿ:ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ!
ಒಟ್ಟಾರೆ ಈ ಎಲ್ಲಾ ಶುಭ ದಿನಗಳು ಮತ್ತು ಹಬ್ಬಗಳಿಂದ ಶ್ರಾವಣ ಮಾಸ ತುಂಬಾ ವಿಶೇಷವಾದ ಹಾಗೂ ಪವಿತ್ರವಾದ ಮಾಸವಾಗಿದೆ. ಹಾಗಾಗಿ ಇಂತಹ ಶುಭಕರವಾದ ಶ್ರಾವಣ ಮಾಸವನ್ನು ಎಲ್ಲರೂ ಸಂತೋಷದಿಂದ ಸ್ವಾಗತಿಸಿ. ಹಾಗೇ ಈ ಮಾಸದಲ್ಲಿ ಎಲ್ಲರೂ ಶ್ರದ್ಧೆ, ಭಕ್ತಿಯಿಂದ ದೇವರ ಆರಾಧನೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಿ.

ಇದನ್ನೂ ಓದಿ: Shravan 2024: ಶ್ರಾವಣ ಮಾಸದಲ್ಲಿ ಯಾವ ಹಬ್ಬ, ಯಾವ ದಿನ?

Continue Reading

EXPLAINER

Waqf Act: ವಕ್ಫ್‌ ಮಂಡಳಿ ಪರಮಾಧಿಕಾರಕ್ಕೆ ಮೋದಿ ಮೂಗುದಾರ; ಏನೆಲ್ಲ ತಿದ್ದುಪಡಿ? 9.4 ಲಕ್ಷ ಎಕರೆ ಯಾರ ಪಾಲು?

Waqf Act: ಏನಿದು ವಕ್ಫ್‌ ಮಂಡಳಿ? ಕಾಯ್ದೆ ಏನು ಹೇಳುತ್ತದೆ? ಯಾಕಾಗಿ ಕೇಂದ್ರ ಸರ್ಕಾರ ತಿದ್ದುಪಡಿ ತರುತ್ತಿದೆ? ಇದಕ್ಕೆ ವಿರೋಧ ಏಕೆ ವ್ಯಕ್ತವಾಗುತ್ತಿದೆ? ತಿದ್ದುಪಡಿ ತಂದರೆ ಏನೆಲ್ಲ ಬದಲಾವಣೆ ಆಗಲಿದೆ? ದೇಶದಲ್ಲಿ ವಕ್ಫ್‌ ಆಸ್ತಿ ಎಷ್ಟಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಹೀಗಿದೆ…

VISTARANEWS.COM


on

Waqf Act
Koo

ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ (Waqf Act) ತಿದ್ದುಪಡಿ ತರಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರವು (Central Government) ಸಂಸತ್‌ನಲ್ಲಿ ವಿಧೇಯಕ ಮಂಡಿಸಲಿದೆ, ಸುಮಾರು 40 ತಿದ್ದುಪಡಿ ತರಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಏನಿದು ವಕ್ಫ್‌ ಮಂಡಳಿ? ಕಾಯ್ದೆ ಏನು ಹೇಳುತ್ತದೆ? ಯಾಕಾಗಿ ಕೇಂದ್ರ ಸರ್ಕಾರ ತಿದ್ದುಪಡಿ ತರುತ್ತಿದೆ? ಇದಕ್ಕೆ ವಿರೋಧ ಏಕೆ ವ್ಯಕ್ತವಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ.

ಏನಿದು ಕಾಯ್ದೆ? ಏನದು ಪರಮಾಧಿಕಾರ?

ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಕಾರಣಕ್ಕಾಗಿ ದಾನವಾಗಿ ನೀಡಿದ ಭೂಮಿಯನ್ನು ನಿಯಂತ್ರಿಸುವ ದಿಸೆಯಲ್ಲಿ 1995ರಲ್ಲಿ ವಕ್ಫ್‌ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದಕ್ಕೆ ಮುಸ್ಲಿಂ ಕಾನೂನನ್ನು ಕೂಡ ಅನ್ವಯ ಮಾಡಲಾಗಿದೆ. ಧಾರ್ಮಿಕ ಕಾರಣಕ್ಕಾಗಿ ನೀಡಿದ ಆಸ್ತಿಯು ವಕ್ಫ್‌ ಮಂಡಳಿ ವ್ಯಾಪ್ತಿಗೆ ಬರುತ್ತದೆ. ಅಷ್ಟೇ ಅಲ್ಲ, ಯಾವುದೇ ಆಸ್ತಿಯನ್ನು ವಕ್ಫ್‌ ಮಂಡಳಿಯು ತನ್ನ ಆಸ್ತಿಯನ್ನು ಘೋಷಿಸುವ ಜತೆಗೆ ಅದನ್ನು ವಶಕ್ಕೆ ಪಡೆಯುವ ಪರಮಾಧಿಕಾರ ಹೊಂದಿದೆ. ಇದು ಜನರ ಅಸಮಾಧಾನಕ್ಕೂ ಕಾರಣವಾಗಿದೆ.

ವಕ್ಫ್‌ ಮಂಡಳಿ ಆಸ್ತಿ ಎಷ್ಟು? ತಿದ್ದುಪಡಿ ಏಕೆ?

ವರದಿಗಳ ಪ್ರಕಾರ, ದೇಶದಲ್ಲಿ ವಕ್ಫ್‌ ಮಂಡಳಿಯು ಸುಮಾರು 8.7 ಲಕ್ಷ ಆಸ್ತಿಗಳನ್ನು ಹೊಂದಿದೆ. ಇದರ ವ್ಯಾಪ್ತಿಯು ಸುಮಾರು 9.4 ಲಕ್ಷ ಎಕರೆ ಆಗಿದೆ. 2022ರಲ್ಲಿ ಹಿಂದುಗಳೇ ಬಹುಸಂಖ್ಯಾತರಾಗಿರುವ ತಮಿಳುನಾಡಿನ ತಿರುಚೆಂದುರೈ ಎಂಬ ಹಳ್ಳಿಯನ್ನು ವಕ್ಫ್‌ ಬೋರ್ಡ್‌ ತಮ್ಮದು ಎಂದು ಘೋಷಿಸಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇನ್ನು, ಕಳೆದ ವರ್ಷ, ದೆಹಲಿ ವಕ್ಫ್‌ ಬೋರ್ಡ್‌ ಮಂಡಳಿಯ ಅಧೀನದಲ್ಲಿರುವ 123 ಆಸ್ತಿಗಳ ಪರಿಶೀಲನೆಗೆ ದೆಹಲಿ ಹೈಕೋರ್ಟ್‌ ಆದೇಶಿಸಿತ್ತು. ವಕ್ಫ್‌ ಮಂಡಳಿಯು ಇಂತಹ ವಿವಾದಿತ ಆಸ್ತಿಗಳನ್ನೇ ತುಂಬ ಹೊಂದಿದೆ. ಇಸ್ಲಾಂನಲ್ಲಿರುವ ಕೆಲ ಉಪ ಪಂಗಡಗಳೇ ವಕ್ಫ್‌ ಮಂಡಳಿಯನ್ನು ವಿರೋಧಿಸುತ್ತಿವೆ.

ಕಾಯ್ದೆಗೆ ಏನೆಲ್ಲ ತಿದ್ದುಪಡಿ?

ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಮಂಡಳಿಗೆ ಸೇರಿಸಲು ಪಾರದರ್ಶಕ ನಿಯಮಗಳ ಪಾಲನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದರಲ್ಲೂ, ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಘೋಷಿಸುವ ಪರಮಾಧಿಕಾರ ತೆಗೆಯಲಿದೆ. ಇನ್ನು, ವಕ್ಫ್‌ ಆಸ್ತಿಗಳ ಮೇಲೆ ನಿಗಾ ಇರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಇದುವರೆಗೆ ವಕ್ಫ್‌ ಮಂಡಳಿಯಲ್ಲಿ ಹೆಣ್ಣುಮಕ್ಕಳ ಸಹಭಾಗಿತ್ವವೇ ಇರಲಿಲ್ಲ. ಹಾಗಾಗಿ, ಪ್ರತಿಯೊಂದು ರಾಜ್ಯಗಳ ವಕ್ಫ್‌ ಮಂಡಳಿಗಳಲ್ಲಿ ಹೆಣ್ಣುಮಕ್ಕಳಿಗೂ ಸ್ಥಾನ ನೀಡುವುದು. ರಾಜ್ಯಗಳ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸ್ಥಾನ ನೀಡುವುದು. ಕೇಂದ್ರ ಸಮಿತಿಗಳಲ್ಲೂ ಇಬ್ಬರೂ ಹೆಣ್ಣುಮಕ್ಕಳು ಇರಬೇಕು ಎಂಬ ನಿಯಮ ಜಾರಿಗೆ ತರುವುದು. ಮುಸ್ಲಿಮರು ಕೂಡ ವಕ್ಫ್‌ ಆಸ್ತಿಯನ್ನು ಸೃಷ್ಟಿಸಬಹುದು ಎಂಬ ನಿಯಮ ಜಾರಿಗೊಳಿಸುವುದು ಸೇರಿ ಹಲವು ತಿದ್ದುಪಡಿಗಳಿಗೆ ಪ್ರಸ್ತಾವನೆ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಸಾದುದ್ದೀನ್‌ ಓವೈಸಿ ವಿರೋಧ

ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ವಿರೋಧಿಸಿದ್ದಾರೆ. “ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮಂಡಳಿಯ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದೆ. ಅಷ್ಟೇ ಅಲ್ಲ, ಇದು ಧಾರ್ಮಿಕ ಸ್ವಾತಂತ್ರ್ಯದಲ್ಲಿ ಸರ್ಕಾರ ಮೂಗು ತೂರಿಸಿದಂತೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ವಕ್ಫ್‌ ಮಂಡಳಿ ವ್ಯಾಪ್ತಿಯ ಆಸ್ತಿಗಳು ವಿವಾದಿತ ಎನಿಸಿದ್ದರೆ, ನ್ಯಾಯಾಲಯವು ಅದನ್ನು ತೀರ್ಮಾನ ಮಾಡುತ್ತದೆ. ಅದರ ಬದಲು ರಾಜಕೀಯ ಪಕ್ಷ ನೇತೃತ್ವದ ಶಾಸಕಾಂಗವೊಂದು ಹೇಗೆ ಧಾರ್ಮಿಕ ವಿಚಾರದಲ್ಲಿ ಮೂಗು ತೂರಿಸುತ್ತದೆ? ಯಾವುದೇ ಕಾರಣಕ್ಕೂ ವಕ್ಫ್‌ ಆಸ್ತಿಯನ್ನು ಕಬಳಿಸಲು ಬಿಡುವುದಿಲ್ಲ” ಎಂದು ಅಸಾದುದ್ದೀನ್‌ ಓವೈಸಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Waqf Board: ಜಾಮಾ ಮಸೀದಿ ಸೇರಿ ವಕ್ಫ್‌ ಬೋರ್ಡ್‌ಗೆ ಕಾಂಗ್ರೆಸ್‌ ನೀಡಿದ 123 ಆಸ್ತಿ ಸ್ವಾಧೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ!

Continue Reading

ಭವಿಷ್ಯ

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ ಪಾಡ್ಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಸಿಂಹ ರಾಶಿಯಿಂದ ಸೋಮವಾರ ಸಂಜೆ 05:16ಕ್ಕೆ ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ ಸುದ್ದಿ ಸಿಗಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಮಿಥುನ ರಾಶಿಯವರು ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುವುದು ವೃಥಾ ಕಾಲಹರಣ. ಆರ್ಥಿಕವಾಗಿ ಸಹಾಯ ಮಾಡಿ ನೀವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕುವುದು ಬೇಡ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಸಿಂಹ ರಾಶಿಯವರು ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಕ್ಷೇತ್ರ ದರ್ಶನ ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಸಿಗಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (05-08-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಪಾಡ್ಯ 18:02 ವಾರ: ಸೋಮವಾರ
ನಕ್ಷತ್ರ: ಆಶ್ಲೇಷಾ 15:20 ಯೋಗ: ವ್ಯತಿಪಾತ 10:36
ಕರಣ: ಭವ 18:02 ಅಮೃತಕಾಲ: ಮಧ್ಯಾಹ್ನ 01:38 ರಿಂದ 03:21
ದಿನದ ವಿಶೇಷ: ಶ್ರಾವಣ ಮಾಸ ಪ್ರಾರಂಭ, ಚಂದ್ರ ದರ್ಶನ

ಸೂರ್ಯೋದಯ : 06:06   ಸೂರ್ಯಾಸ್ತ : 06:45

ರಾಹುಕಾಲ: ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಮಧ್ಯಾಹ್ನ 1.30 ರಿಂದ 3.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ ಸುದ್ದಿ ಸಿಗಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಸಂಗಾತಿಯ ಮಧುರ ಮಾತುಗಳು ಹಿತವೇನಿಸುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಕುಟುಂಬದ ಆಪ್ತರಿಂದ ಆರ್ಥಿಕ ಸಹಾಯದ ಬೇಡಿಕೆ ಬರಬಹುದು. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಮನೋಬಲ ಹೆಚ್ಚಿಸಿಕೊಳ್ಳುವುದು ಅವಶ್ಯಕ. ಧೈರ್ಯ ಕಾಡಬಹುದು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುವುದು ವೃಥಾ ಕಾಲಹರಣ. ಆರ್ಥಿಕವಾಗಿ ಸಹಾಯ ಮಾಡಿ ನೀವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕುವುದು ಬೇಡ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕುಟುಂಬದ ಸದಸ್ಯರಿಂದ ಆರ್ಥಿಕ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಶುಭಫಲ. ಹಣದ ಹರಿವು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆಪ್ತ ವ್ಯಕ್ತಿಗಳೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಕ್ಷೇತ್ರ ದರ್ಶನ ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ದೀರ್ಘಕಾಲದ ಕೆಲಸ ಕಾರ್ಯಗಳು ಇಂದು ಯಶಸ್ಸನ್ನು ತಂದು ಕೊಡಲಿದೆ. ಆದಾಯದ ಮೂಲ ಹೆಚ್ಚಾಗಲಿದೆ. ಆಪ್ತರೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ, ಕುಟುಂಬದ ವಾತಾವರಣ ಹದಗೆಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ:ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರಲಿದೆ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಹಣಕಾಸು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಕಾಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆರೋಗ್ಯದ ಕುರಿತು ಕಾಳಜಿ ಇರಲಿ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ವಿಜಯವನ್ನು ತಂದುಕೊಡುವ ಸಾಧ್ಯತೆ ಇದೆ. ಹಣಕಾಸು, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಹಾದಿ ಅತ್ಯವಶ್ಯಕವಿದೆ. ಹಣಕಾಸು ವಿಷಯದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಮಿಶ್ರಫಲ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

Horoscope Today

ಮಕರ: ಬುದ್ಧಿವಂತಿಕೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗುವುದು. ಶೀಘ್ರ ಕೋಪ ಅಪಾಯ ತರುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕ ಲಾಭ ಇರಲಿದೆ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ದುಂದು ವೆಚ್ಚವನ್ನು ತಪ್ಪಿಸಿ. ಬುದ್ದಿವಂತಿಕೆಯಿಂದ ಕೆಲಸಮಾಡಿ ವ್ಯರ್ಥ ಪ್ರಯತ್ನ ಮಾಡುವುದು ಬೇಡ. ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 9

Horoscope Today

ಮೀನ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಸಂಗಾತಿ ಇಂದು ನಿಮ್ಮೊಂದಿಗೆ ಮುಖ್ಯ ವಿಷಯದ ಕುರಿತು ಚರ್ಚಿಸಬಹುದು. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
teacher jobs alert
ಪ್ರಮುಖ ಸುದ್ದಿ1 second ago

Jobs Alert: ಪ್ರೌಢಶಾಲೆ, ಪಿಯು ಕಾಲೇಜುಗಳ ಬೋಧಕ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

udr case foreigner
ಕ್ರೈಂ15 mins ago

UDR Case: ವಿದೇಶಿ ಪ್ರಜೆಯ ಕೊಳೆತ ಶವ ಬೆಂಗಳೂರಿನಲ್ಲಿ ಪತ್ತೆ

gratitude ರಾಜಮಾರ್ಗ ಅಂಕಣ
ಅಂಕಣ44 mins ago

ರಾಜಮಾರ್ಗ ಅಂಕಣ: ಕೃತಜ್ಞತೆ ಎಂಬ ಮಹಾನ್ ಪ್ರವಾಹ

Shravan 2024
ಕರ್ನಾಟಕ2 hours ago

Shravan 2024: ಇಂದಿನಿಂದ ಶ್ರಾವಣ ಶುಭಾರಂಭ; ಈ ತಿಂಗಳ ವಿಶೇಷ ಏನು?

Waqf Act
EXPLAINER2 hours ago

Waqf Act: ವಕ್ಫ್‌ ಮಂಡಳಿ ಪರಮಾಧಿಕಾರಕ್ಕೆ ಮೋದಿ ಮೂಗುದಾರ; ಏನೆಲ್ಲ ತಿದ್ದುಪಡಿ? 9.4 ಲಕ್ಷ ಎಕರೆ ಯಾರ ಪಾಲು?

ಪ್ರಮುಖ ಸುದ್ದಿ2 hours ago

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳು ಎಷ್ಟಿವೆ? ಇಲ್ಲಿದೆ ಎಲ್ಲ ವಿವರಗಳು

karnataka Weather Forecast
ಮಳೆ2 hours ago

Karnataka weather : ಬೆಂಗಳೂರಿನಲ್ಲಿ ಚದುರಿದಂತೆ, ಕರಾವಳಿಯಲ್ಲಿ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Bengaluru
ಕ್ರೈಂ8 hours ago

Bengaluru:‌ ಬೆಂಗಳೂರಲ್ಲಿ ಸ್ತ್ರೀಯರಿಗಿಲ್ಲ ರಕ್ಷಣೆ; ವಾಕಿಂಗ್‌ ಮಾಡುತ್ತಿದ್ದ ಮಹಿಳೆಗೆ ಕಿಸ್‌ ಕೊಟ್ಟ ಕಾಮುಕ; Video ವೈರಲ್

Wanindu Hasaranga
ಕ್ರೀಡೆ8 hours ago

Wanindu Hasaranga : ಭಾರತ ವಿರುದ್ಧದ ಏಕ ದಿನ ಸರಣಿಗೆ ಲಂಕಾದ ಆಲ್​ರೌಂಡರ್​ ಔಟ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ18 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌