Viral Video: ಕಾಲೇಜು ಕ್ಯಾಂಪಸ್‌ನಲ್ಲೇ ಲಿಪ್‌ ಕಿಸ್‌; ಯುವ ಜೋಡಿಯ ಖುಲ್ಲಂ ಖುಲ್ಲಾ ರೊಮ್ಯಾನ್ಸ್‌ಗೆ ನೆಟ್ಟಿಗರು ಗರಂ - Vistara News

ವೈರಲ್ ನ್ಯೂಸ್

Viral Video: ಕಾಲೇಜು ಕ್ಯಾಂಪಸ್‌ನಲ್ಲೇ ಲಿಪ್‌ ಕಿಸ್‌; ಯುವ ಜೋಡಿಯ ಖುಲ್ಲಂ ಖುಲ್ಲಾ ರೊಮ್ಯಾನ್ಸ್‌ಗೆ ನೆಟ್ಟಿಗರು ಗರಂ

Viral Video: ಯುವಕ ಮತ್ತು ಯುವತಿ ಕಾಲೇಜು ಕ್ಯಾಂಪಸ್‌ನಲ್ಲಿ ಮೈ ಮರೆತು ಲಿಪ್‌ ಕಿಸ್‌ ಮಾಡುವುದರಲ್ಲಿ ಮಗ್ನವಾಗಿರುವ ವಿಡಿಯೊ ವೈರಲ್‌ ಆಗಿದೆ. ಜತೆಗೆ ಯುವಕ ಆಕೆಯ ಬಟ್ಟೆಯನ್ನು ಮೇಲೆ ಸರಿಸಿ ಎಲ್ಲೆಲ್ಲೋ ಸ್ಪರ್ಶಿಸುತ್ತಿರುವುದು ಕಂಡು ಬಂದಿದೆ. ಒಂದು ಹಂತದಲ್ಲಿ ಯುವತಿಯೇ ಮುಂದೆ ಹೋಗಿ ಯುವಕನ ತುಟಿಯನ್ನು ಚುಂಚಿಸುತ್ತಾ ಮೈಮರೆಯುತ್ತಾಳೆ. ಈ ದೃಶ್ಯವನ್ನು ಮರೆಯಲ್ಲಿ ನಿಂತು ನೋಡುತ್ತಿದ್ದ ಕೆಲವು ವಿದ್ಯಾರ್ಥಿಗಳು ಸೆರೆ ಹಿಡಿದ್ದಾರೆ. ಸದ್ಯ ವಿಡಿಯೊ ನೋಡಿದ ನೆಟ್ಟಿಗರು ವಿದ್ಯಾರ್ಥಿಗಳ ಉದ್ಧಟತನಕ್ಕೆ ಕಿಡಿ ಕಾರಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಕ್ನೋ: ಕೋಟ್ಯಂತರ ವಿದ್ಯಾರ್ಥಿಗಳ ಜೀವನವನ್ನು ಬೆಳಗುವ, ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಗಳನ್ನು ದೇಗುಲಕ್ಕೆ ಹೋಲಿಸಲಾಗುತ್ತದೆ. ಇದೇ ಕಾರಣಕ್ಕೆ ಶಾಲೆ, ಕಾಲೇಜುಗಳನ್ನು ಈಗಲೂ ಅನೇಕರು ಗೌರವಿಸುತ್ತಾರೆ. ಆದರೆ ಕೆಲವರು ತಾವು ಶಿಕ್ಷಣ ಪಡೆಯಲು ಬಂದಿದ್ದೇವೆ ಎನ್ನುವುದನ್ನೂ ಮರೆತು ಕಾಲೇಜಿನಲ್ಲೇ ರೊಮ್ಯಾನ್ಸ್‌ ಮಾಡಲು ಮುಂದಾಗುತ್ತಾರೆ. ಸದ್ಯ ಅಂತಹದ್ದೊಂದು ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ. ಯುವ ಜೋಡಿಯ ವರ್ತನೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ (Viral Video).

ಯುವಕ ಮತ್ತು ಯುವತಿ ಕಾಲೇಜು ಕ್ಯಾಂಪಸ್‌ನಲ್ಲಿ ಮೈ ಮರೆತು ಲಿಪ್‌ ಕಿಸ್‌ ಮಾಡುವುದರಲ್ಲಿ ಮಗ್ನವಾಗಿದೆ. ಜತೆಗೆ ಯುವಕ ಆಕೆಯ ಬಟ್ಟೆಯನ್ನು ಮೇಲೆ ಸರಿಸಿ ಎಲ್ಲೆಲ್ಲೋ ಸ್ಪರ್ಶಿಸುತ್ತಿರುವುದು ಕಂಡು ಬಂದಿದೆ. ಒಂದು ಹಂತದಲ್ಲಿ ಯುವತಿಯೇ ಮುಂದೆ ಹೋಗಿ ಯುವಕನ ತುಟಿಯನ್ನು ಚುಂಚಿಸುತ್ತಾ ಮೈಮರೆಯುತ್ತಾಳೆ. ಈ ದೃಶ್ಯವನ್ನು ಮರೆಯಲ್ಲಿ ನಿಂತು ನೋಡುತ್ತಿದ್ದ ಕೆಲವು ವಿದ್ಯಾರ್ಥಿಗಳು ಸೆರೆ ಹಿಡಿದ್ದಾರೆ.

ಹಾಡಹಗಲೇ ಈ ಜೋಡಿ ರೊಮ್ಯಾನ್ಸ್‌ ಮಾಡುತ್ತ ಮೈಮರೆತಿರುವ ಘಟನೆ ನಡೆದಿದ್ದು ಉತ್ತರ ಪ್ರದೇಶದ ನೋಯ್ಡಾದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ. ಕಳೆದ ವರ್ಷ ನಡೆದಿದೆ ಎನ್ನಲಾದ ಈ ವಿಡಿಯೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಜನಬ್‌ ಖಾನ್‌ ಎನ್ನುವವರು ಈ ವಿಡಿಯೊವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು ಈಗಾಗಲೇ 1.5 ಲಕ್ಕಕ್ಕಿಂತ ಅದಿಕ ಮಂದಿ ವೀಕ್ಷಿಸಿದ್ದಾರೆ. ʼʼವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ವರ್ತನೆ ಗಮನಿಸಿ. ವಿದ್ಯಾರ್ಥಿಗಳು ಕಲಿಕೆಯ ಬದಲು ಅಶ್ಲೀಲತೆಯಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿ. ಇದು ನೋಯ್ಡಾದ ಪ್ರತಿಷ್ಠಿತ ವಿಶ್ವವಿದ್ಯಾನಿಯಲವೊಂದರಲ್ಲಿ ಕಂಡು ಬಂದ ದೃಶ್ಯʼʼ ಎಂದು ಅವರು ಬರೆದುಕೊಂಡಿದ್ದಾರೆ.

1.33 ನಿಮಿಷಗಳ ಈ ವಿಡಿಯೊ ನೋಡಿ ಹಲವರು ಈ ವಿದ್ಯಾರ್ಥಿಗಳ ವರ್ತನೆಗೆ ಅಸಹ್ಯ ಪಟ್ಟುಕೊಂಡಿದ್ದಾರೆ. ಕೆಲವರಂತೂ ಛೀಮಾರಿ ಹಾಕಿದ್ದಾರೆ. ಬಹುತೇಕರು ಕಿಡಿ ಕಾರಿದ್ದಾರೆ. ತಮ್ಮಂತೆ ಮಕ್ಕಳು ಕಷ್ಟಪಡಬಾರದು ಎನ್ನುವ ಉದ್ದೇಶದಿಂದ ಬಹುತೇಕ ಪಾಲಕರು ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಅವರಿಗೆ ಉನ್ನತ ಶಿಕ್ಷಣ ನೀಡಲು ಮುಂದಾಗುತ್ತಾರೆ. ಕಾಲೇಜಿಗೆ ಕಳುಹಿಸುತ್ತಾರೆ. ಆದರೆ ಮಕ್ಕಳು ಕಾಲೇಜಿಗೆ ಬಂದು ಹೀಗೆ ವರ್ತಿಸುತ್ತಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ವಿದ್ಯಾರ್ಥಿಗಳಿಗೆ ಕಠಿಣ ಸಜೆ ನೀಡಬೇಕು ಎಂದು ಇನ್ನು ಕೆಲವರು ಆಗ್ರಹಿಸಿದ್ದಾರೆ. ಅಷ್ಟು ತೀಟೆ ಇದ್ದರೆ ಲಾಡ್ಜ್‌ಗೆ ಹೋಗಲಿ ಎಂದು ಒಂದಷ್ಟು ಮಂದಿ ಬೈದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಮತ್ತೊಮ್ಮೆ ಕಿಚ್ಚು ಹಚ್ಚಿದೆ.

ಇದನ್ನೂ ಓದಿ: Viral Video: ಯುವತಿ ಜತೆ ಡ್ಯಾನ್ಸ್ ಮಾಡ್ತಾ ಮಾಡ್ತಾ ಪ್ರಾಣಬಿಟ್ಟ ಯುವಕ; ಆಘಾತಕಾರಿ ವಿಡಿಯೊ

ವಾಕಿಂಗ್‌ ಮಾಡುತ್ತಿದ್ದ ಮಹಿಳೆಗೆ ಕಿಸ್‌ ಕೊಟ್ಟ ಕಾಮುಕ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಮನೆ ಎದುರು ತಿರುಗಾಡುತ್ತಿರುವಾಗ ಚಿನ್ನದ ಸರ ಕಿತ್ತುಕೊಂಡು ಹೋಗುವುದು, ಅವರ ಮೇಲೆ ಹಲ್ಲೆ ನಡೆಸುವುದು, ಮೊಬೈಲ್‌, ಪರ್ಸ್‌ ಎಗರಿಸುವುದು ಸೇರಿ ಹಲವು ರೀತಿಯ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಕೋಣನಕುಂಟೆಯ ಕೃಷ್ಣಾ ನಗರದಲ್ಲಿ ಮನೆ ಬಳಿ ವಾಕಿಂಗ್‌ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಹೌದು, ಮಹಿಳೆಯು ಮನೆಯ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಬಳಿ ಬಂದಿದ್ದಾನೆ. ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್‌ ಕೊಟ್ಟಿದ್ದಾನೆ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಕೂಗುತ್ತ ಮಹಿಳೆ ಓಡಿದ್ದಾರೆ. ಅವರ ಹಿಂದೆಯೇ ಓಡಿ ಬಂದ ದುರುಳನು, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದಾನೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಎಸ್ಕಲೇಟರ್ ಮೇಲೆ ಮಗುವನ್ನು ನಿಲ್ಲಿಸಲು ತಾಯಿಯ ಕಸತ್ತು; ಮುಂದೇನಾಯ್ತು ನೋಡಿ

Viral Video: ಇಬ್ಬರೂ ಮಹಿಳೆಯರು ಮಗುವಿನ ಕೈಗಳನ್ನು ಹಿಡಿದುಕೊಂಡು ಎಸ್ಕಲೇಟರ್ ಹತ್ತಿದ್ದಾರೆ. ಎಸ್ಕಲೇಟರ್ ಹತ್ತುವಾಗ ಅವರು ಮಗುವನ್ನು ಮೇಲಕ್ಕೆತ್ತಿದ ಪರಿಣಾಮ ಸಮತೋಲನವನ್ನು ಕಳೆದುಕೊಂಡು ಮಗುವಿನೊಂದಿಗೆ ಕೆಳಗೆ ಬಿದ್ದಿದ್ದಾರೆ. ಮೊದಲಿಗೆ ಅವರಿಗೆ ಸಹಾಯ ಮಾಡಲು ಯಾರೂ ಬರಲಿಲ್ಲ. ನಂತರ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದಿದ್ದಾನೆ. ಈ ವಿಡಿಯೊ ನೋಡಿ ಹಲವರು ಭಯಭೀತರಾಗಿದ್ದಾರೆ. ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral Video
Koo


ಇತ್ತೀಚಿನ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳು, ಮಾಲ್‍ಗಳು ಮತ್ತು ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರ್‌ಗಳು ಸಾಮಾನ್ಯ. ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಹೋಗಲು ಈ ಎಸ್ಕಲೇಟರ್‌ಗಳನ್ನು ಬಳಸಲಾಗುತ್ತದೆ. ಇದರಿಂದ ನಿಮ್ಮ ಕೆಲಸ ಸುಲಭವಾಗುತ್ತದೆ. ಆದರೆ ಇದನ್ನು ಎಲ್ಲರೂ ಬಳಸುವುದಿಲ್ಲ, ಯಾಕೆಂದರೆ ಇದನ್ನು ಬಳಸುವ ವಿಧಾನ ಕೆಲವರಿಗೆ ತಿಳಿದಿರುವುದಿಲ್ಲ. ಕೆಲವರಿಗೆ ಬೀಳುತ್ತೇವೆ ಎಂಬ ಭಯ. ಇದೀಗ ಈ ರೀತಿಯ ಎಸ್ಕಲೇಟರ್‌ಗಳನ್ನು ಬಳಸಿ ಮಗುವಿನ ಜೊತೆಗೆ ಮಹಿಳೆಯರಿಬ್ಬರು ಬಿದ್ದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿ ಆತಂಕ ಮೂಡಿಸುತ್ತಿದೆ.

ಈ ವೈರಲ್ ವಿಡಿಯೊದಲ್ಲಿ, ಇಬ್ಬರು ಮಹಿಳೆಯರು ಮಗುವಿನೊಂದಿಗೆ ಎಸ್ಕಲೇಟರ್ ಏರಲು ಪ್ರಯತ್ನಿಸುತ್ತಿದ್ದಾರೆ. ಬಳಿಕ ಇಬ್ಬರೂ ಮಹಿಳೆಯರು ಮಗುವಿನ ಕೈಗಳನ್ನು ಎತ್ತಿ ಹಿಡಿದು ಅದನ್ನು ಎಸ್ಕಲೇಟರ್‌ ಮೇಲೆ ನಿಲ್ಲಿಸಲು ಪ್ರಯತ್ನಿಸಿ ಹಿಡಿದುಕೊಂಡಿದ್ದಾರೆ. ಮಗುವನ್ನು ಮೇಲಕೆತ್ತಿದ ಪರಿಣಾಮ ತಮ್ಮ ಸಮತೋಲನವನ್ನು ಕಳೆದುಕೊಂಡು ಮಗುವಿನೊಂದಿಗೆ ಕೆಳಗೆ ಬಿದ್ದಿದ್ದಾರೆ. ಮೊದಲಿಗೆ ಅವರಿಗೆ ಸಹಾಯ ಮಾಡಲು ಯಾರೂ ಬರಲಿಲ್ಲ. ನಂತರ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಓಡಿ ಬಂದಿದ್ದಾನೆ. ಮಗುವಿನೊಂದಿಗೆ ಬಿದ್ದು ಅಪಾಯದಲ್ಲಿದ್ದರೂ ಈ ವೇಳೆ ಅವರಿಬ್ಬರು ನಗುತ್ತಿರುವುದು ಕಂಡು ಬಂದಿದೆ. ಆದರೆ ಈ ವಿಡಿಯೊ ನೋಡಿ ಹಲವರು ಭಯಬೀತರಾಗಿದ್ದಾರೆ. ಹಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಸಣ್ಣ ತಪ್ಪು ಜೀವಕ್ಕೆ ಅಪಾಯವಾಗಬಹುದು.

ಈ ವಿಡಿಯೊ ವೈರಲ್ ಆದ ಕೂಡಲೇ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಅನೇಕರು ಮಹಿಳೆಯರ ಈ ನಡೆಯನ್ನು ಪ್ರಶ್ನಿಸಿದ್ದಾರೆ. ಕೆಲವರು ಇದನ್ನು ತೀವ್ರ ಅಜಾಗರೂಕತೆಯ ಕೃತ್ಯ ಎಂದು ಕರೆದಿದ್ದಾರೆ. ಈ ವಿಡಿಯೊವನ್ನು ಆಗಸ್ಟ್ 3 ರಂದು ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ “ಘರ್ ಕೆ ಕಾಲೇಶ್” ಎಂಬ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ, ಇದು 1.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ಘಟನೆಯ ಬಗ್ಗೆ ನೆಟ್ಟಿಗರು ತಮ್ಮ ಹತಾಶೆ ಮತ್ತು ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಯುವತಿ ಜತೆ ಡ್ಯಾನ್ಸ್ ಮಾಡ್ತಾ ಮಾಡ್ತಾ ಪ್ರಾಣಬಿಟ್ಟ ಯುವಕ; ಆಘಾತಕಾರಿ ವಿಡಿಯೊ

ಈ ಹಿಂದೆ ಮಹಿಳೆಯೊಬ್ಬಳು ಎಸ್ಕಲೇಟರ್ ಮೇಲೆ ಜಿಗಿಯುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಮಹಿಳೆ ‘ಸ್ಟಂಟ್ ಲವರ್’ ಮಾಲ್‌ನಲ್ಲಿದ್ದಂತೆ ಕಾಣುತ್ತಿತ್ತು, ಆ ಎಸ್ಕಲೇಟರ್‌ನಲ್ಲಿ ಇನ್ನೂ ಕೆಲವು ಜನರಿದ್ದರು. ಇದರಿಂದ ಆ ಮಹಿಳೆ ಮಾಡಿದ ಕೆಲಸ ತುಂಬಾ ಅಪಾಯಕಾರಿ ಎನಿಸಿತು. ಈ ಕ್ಲಿಪ್ ವೈರಲ್ ಆದ ಕೂಡಲೇ, ಜನರು ಆಕೆ ‘ಸ್ಟಂಟ್’ ಮಾಡುತ್ತಿದ್ದಾಳೆ ಎಂದು ಭಾವಿಸಿ ಅದು ಎಷ್ಟು ಅಪಾಯಕಾರಿ ಎಂದು ಟೀಕೆ ಮಾಡಿದ್ದರು. ಆದರೆ ಕೆಲವರು ಆ ಮಹಿಳೆ ಎಸ್ಕಲೇಟರ್ ಒಳಗೆ ಕಾಲಿಡಲು ಹೆದರುತ್ತಿದ್ದಳು, ಆದ್ದರಿಂದ ಜಿಗಿದಿದ್ದಾಳೆ ಎಂದು ಸಮಾಧಾನಪಡಿಸಿದ್ದಾರೆ.

Continue Reading

ಕ್ರೀಡೆ

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಅವ್ಯವಸ್ಥೆ; ಬೀದಿ ಬದಿ ಮಲಗಿ ನಿದ್ದೆ ಮಾಡಿದ ಚಿನ್ನದ ಪದಕ ವಿಜೇತ ಈಜುಪಟು

Paris Olympics 2024 : ಸೌದಿ ಅರೇಬಿಯಾದ ರೋವರ್ ಹುಸೇನ್ ಅಲಿರೆಜಾ ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಸೆಕಾನ್ ಉದ್ಯಾನವನದಲ್ಲಿ ಮಲಗಿರುವುದು ಕಂಡುಬಂದಿದೆ. ಇಟಾಲಿಯನ್ ಈಜುಗಾರ ನೆಲದ ಮೇಲೆ ಟವೆಲ್ ಹಾಸಿ ಮಲಗಿದ್ದಾರೆ. ಪುರುಷರ 4×100 ಮೀಟರ್ ಮೆಡ್ಲೆ ರಿಲೇಯಲ್ಲಿ ಕಂಚಿನಪದಕ ಗೆಲ್ಲುವ ಮೊದಲಿನ ಚಿತ್ರವೇ ಎಂಬುದು ಖಾತರಿಯಾಗಿಲ್ಲ. ಒಂದು ವೇಳೆ ಚಿನ್ನದಿಂದ ಕಂಚಿಗೆ ಇಳಿದಿದ್ದರೆ ವ್ಯವಸ್ಥೆಯ ಬಗ್ಗೆ ಆಕ್ಷೇಪ ಉಂಟಾಗುವುದು ಖಾತರಿ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ (Paris Olympics 2024) ಚಿನ್ನದ ಪದಕ ವಿಜೇತ ಮತ್ತು ಇಟಾಲಿಯನ್ ಈಜುಗಾರ ಥಾಮಸ್ ಸೆಕಾನ್ ಸುದ್ದಿಯಲ್ಲಿದ್ದಾರೆ. ಚಿನ್ನ ಗೆದ್ದು ಸಂಭ್ರಮಿಸಿದ ಖ್ಯಾತಿ ಪಡೆದುಕೊಂಡಿರುವ ಅವರೀಗ ಅನಗತ್ಯ ಕಾರಣವೊಂದಕ್ಕೆ ಸುದ್ದಿಗೆ ಗ್ರಾಸವಾಗಿದ್ದಾರೆ. ಒಲಿಂಪಿಕ್ಸ್​ನ ಕ್ರೀಡಾಗ್ರಾಮದಲ್ಲಿನ ಅವ್ಯವಸ್ಥೆಯನ್ನು ವಿರೋಧಿಸಿ ಅವರು ಉದ್ಯಾನವನದಲ್ಲಿ ನೆಲದ ಮೇಲೆ ಮಲಗಿರುವುದು ಕಂಡುಬಂದಿದೆ. 100 ಮೀಟರ್ ಬ್ಯಾಕ್​ಸ್ಟ್ರೋಕ್​ ಸ್ಪರ್ಧೆಯಲ್ಲಿ ಚಿನ್ನ ಮತ್ತು ಪುರುಷರ 4×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಕಂಚು ಗೆಲ್ಲುವ ಮೂಲಕ ಸೆಕಾನ್ ಈ ವರ್ಷ ಕ್ರೀಡಾಕೂಟದಲ್ಲಿ 2 ಪದಕಗಳನ್ನು ಗೆದ್ದಿದ್ದರು. ಆದಾಗ್ಯೂ ಅವರಿಗೆ ಉಳಿದುಕೊಳ್ಳುವುದಕ್ಕೆ ಉತ್ತಮ ವ್ಯವಸ್ಥೆ ಸಿಗದೇ ಸಮಸ್ಯೆ ಎದುರಿಸಿದರು.

ಸೌದಿ ಅರೇಬಿಯಾದ ರೋವರ್ ಹುಸೇನ್ ಅಲಿರೆಜಾ ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಸೆಕಾನ್ ಉದ್ಯಾನವನದಲ್ಲಿ ಮಲಗಿರುವುದು ಕಂಡುಬಂದಿದೆ. ಇಟಾಲಿಯನ್ ಈಜುಗಾರ ನೆಲದ ಮೇಲೆ ಟವೆಲ್ ಹಾಸಿ ಮಲಗಿದ್ದಾರೆ. ಪುರುಷರ 4×100 ಮೀಟರ್ ಮೆಡ್ಲೆ ರಿಲೇಯಲ್ಲಿ ಕಂಚಿನಪದಕ ಗೆಲ್ಲುವ ಮೊದಲಿನ ಚಿತ್ರವೇ ಎಂಬುದು ಖಾತರಿಯಾಗಿಲ್ಲ. ಒಂದು ವೇಳೆ ಚಿನ್ನದಿಂದ ಕಂಚಿಗೆ ಇಳಿದಿದ್ದರೆ ವ್ಯವಸ್ಥೆಯ ಬಗ್ಗೆ ಆಕ್ಷೇಪ ಉಂಟಾಗುವುದು ಖಾತರಿ.

ಕ್ರೀಡಾ ಗ್ರಾಮದೊಳಗಿನ ಜೀವನ ಪರಿಸ್ಥಿತಿಗಳ ಬಗ್ಗೆ ಸೆಕಾನ್ ದೂರು ನೀಡಿದ್ದರು. ಅಲ್ಲಿ ಹವಾನಿಯಂತ್ರಣವಿಲ್ಲ ಮತ್ತು ಆಹಾರವು ಕೆಟ್ಟದಾಗಿದೆ ಎಂದು ಹೇಳಿದ್ದರು. ಈ ಕಾರಣಕ್ಕಾಗಿ ಅನೇಕ ಕ್ರೀಡಾಪಟುಗಳು ಒಲಿಂಪಿಕ್ಸ್ ಗ್ರಾಮದಿಂದ ಹೊರಹೋಗಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಶಾಖ ಮತ್ತು ಶಬ್ದದಿಂದಾಗಿ ಮಧ್ಯಾಹ್ನ ಕಿರು ನಿದ್ದೆ ಮಾಡಲು ಹೆಣಗಾಡುತ್ತಿದ್ದೇನೆ ಎಂದು ಸೆಕಾನ್ ಹೇಳಿದರು.

“ಗ್ರಾಮದಲ್ಲಿ ಹವಾನಿಯಂತ್ರಣ ವ್ಯವಸ್ಥೆಯಿಲ್ಲ , ಆ ಪ್ರದೇಶವಿಡೀ ಬಿಸಿಯಾಗಿದೆ, ಆಹಾರವು ಕೆಟ್ಟದಾಗಿದೆ.” ಎಂದು ಸೆಕಾನ್ ದೂರಿದ್ದರು. ಅನೇಕ ಕ್ರೀಡಾಪಟುಗಳು ಈ ಕಾರಣಕ್ಕಾಗಿ ಹೊರಗೆ ಹೋಗಿದ್ದಾರೆ. ಇದು ಒಂದು ನೆಪವಲ್ಲ, ಇದು ಬಹುಶಃ ಎಲ್ಲರಿಗೂ ತಿಳಿದಿಲ್ಲದ ವಾಸ್ತವವಾಗಿದೆ.” ಎಂದು ಸೆಕಾನ್ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ಪದಕದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿದ ಭಾರತದ ಶೂಟಿಂಗ್​ ಸ್ಕೀಟ್ ಮಿಶ್ರ ತಂಡ

“ನಾನು ಫೈನಲ್ ತಲುಪಲಿಲ್ಲ ಎಂದು ನನಗೆ ನಿರಾಶೆಯಾಗಿದೆ. ನಾನು ತುಂಬಾ ದಣಿದಿದ್ದೆ. ರಾತ್ರಿ ಮತ್ತು ಮಧ್ಯಾಹ್ನ ಮಲಗುವುದು ಕಷ್ಟ.” “ಸಾಮಾನ್ಯವಾಗಿ ನಾನು ಮನೆಯಲ್ಲಿದ್ದಾಗ, ನಾನು ಯಾವಾಗಲೂ ಮಧ್ಯಾಹ್ನ ಮಲಗುತ್ತೇನೆ. ಇಲ್ಲಿ ನಾನು ಶಾಖ ಮತ್ತು ಶಬ್ದ ಮಾಲಿನ್ಯದ ನಡುವೆ ನಿಜವಾಗಿಯೂ ಹೆಣಗಾಡುತ್ತೇನೆ” ಎಂದು ಸೆಕೂನ್ ಹೇಳಿದ್ದಾರೆ.

ಸೆಕಾನ್ ಹೊರತುಪಡಿಸಿ, ಕೊಕೊ ಗೌಫ್ ಕೂಡ ಒಲಿಂಪಿಕ್ ಗ್ರಾಮದೊಳಗಿನ ಪರಿಸ್ಥಿತಿಗಳ ಬಗ್ಗೆ ದೂರು ನೀಡಿದ್ದರು. ಗೌಫ್ ಹೊರತುಪಡಿಸಿ ಇಡೀ ಯುಎಸ್ ಟೆನಿಸ್ ತಂಡವು ಬೇರೆಡೆ ಪರ್ಯಾಯ ವಸತಿಗಾಗಿ ಗ್ರಾಮವನ್ನು ತೊರೆದಿತ್ತು. ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ವಿಲೇಜ್ನಲ್ಲಿ ಸ್ಪರ್ಧಿಸುತ್ತಿರುವ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಸಚಿವಾಲಯವು 40 ಪೋರ್ಟಬಲ್ ಹವಾನಿಯಂತ್ರಣಗಳನ್ನು ಕಳುಹಿಸಿದೆ.

Continue Reading

ವಿದೇಶ

‘ಭೂತಯ್ಯ’ನ ಮನೆಯಂತಾದ ಶೇಖ್‌ ಹಸೀನಾ ನಿವಾಸ; ಬಿರಿಯಾನಿ ತಿಂದು, ವಸ್ತುಗಳನ್ನು ಕದ್ದ ಪ್ರತಿಭಟನಾಕಾರರು, Videoಗಳು ಇವೆ

Bangladesh Protest: ಪ್ರಧಾನಿ ರಾಜೀನಾಮೆ ಬಳಿಕ ಅವರ ಭವ್ಯವಾದ ನಿವಾಸಕ್ಕೆ ಲಗ್ಗೆ ಇಟ್ಟಿದ್ದಾರೆ. ಶೇಖ್‌ ಹಸೀನಾ ಮನೆಯಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸಾಮೂಹಿಕವಾಗಿ ಈಜಾಡುವುದು, ಬೆಡ್‌ರೂಮ್‌ನಲ್ಲಿ ಮಲಗುವುದು, ಎಲ್ಲ ಐಷಾರಾಮಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಸೇರಿ ಹಲವು ಹುಚ್ಚಾಟ ಮಾಡಿದ್ದಾರೆ. ಈ ವಿಡಿಯೊಗಳು ಈಗ ಭಾರಿ ವೈರಲ್‌ ಆಗಿವೆ.

VISTARANEWS.COM


on

Bangladesh Protest
Koo

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ (Sheikh Hasina) ಅವರ ನಿವಾಸ ಈಗ ಕನ್ನಡದ ‘ಭೂತಯ್ಯನ ಮಗ ಅಯ್ಯು’ ಸಿನಿಮಾದ ಭೂತಯ್ಯನ ಮನೆಯಂತಾಗಿದೆ. ಹೌದು, ಶೇಖ್‌ ಹಸೀನಾ ರಾಜೀನಾಮೆ ನೀಡಿ, ಪಲಾಯನಗೈದ ಬಳಿಕ ಪ್ರತಿಭಟನಾಕಾರರು (Bangladesh Protest) ಅವರ ನಿವಾಸಕ್ಕೆ ನುಗ್ಗಿದ್ದಾರೆ. ಶೇಖ್‌ ಹಸೀನಾ ನಿವಾಸದಲ್ಲಿ ಪ್ರತಿಭಟನಾಕಾರರು ಬಿರಿಯಾನಿ ಸೇರಿ ಎಲ್ಲ ಆಹಾರವನ್ನು ಸೇವಿಸಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನು ಕದ್ದಿದ್ದಾರೆ. ಶೇಖ್‌ ಹಸೀನಾ ಮನೆಯಲ್ಲಿ ಪ್ರತಿಭಟನಾಕಾರರ ಹುಚ್ಚಾಟದ ವಿಡಿಯೊಗಳು ಈಗ ವೈರಲ್‌ ಆಗಿವೆ.

ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ಆರಂಭಿಸಿದ ಪ್ರತಿಭಟನಾಕಾರರು, ಪ್ರಧಾನಿ ರಾಜೀನಾಮೆ ಬಳಿಕ ಅವರ ಭವ್ಯವಾದ ನಿವಾಸಕ್ಕೆ ಲಗ್ಗೆ ಇಟ್ಟಿದ್ದಾರೆ. ಶೇಖ್‌ ಹಸೀನಾ ಮನೆಯಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸಾಮೂಹಿಕವಾಗಿ ಈಜಾಡುವುದು, ಬೆಡ್‌ರೂಮ್‌ನಲ್ಲಿ ಮಲಗುವುದು, ಎಲ್ಲ ಐಷಾರಾಮಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದು, ಭಕ್ಷ್ಯ ಭೋಜನ ಸವಿದು, ಕುಣಿದು ಕುಪ್ಪಳಿಸಿ ಮಜಾ ಉಡಾಯಿಸಿದ್ದಾರೆ. ಆ ಮೂಲಕ ಪ್ರಧಾನಿ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೊಗಳು ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.

ಬೆಡ್‌ರೂಮ್‌ನಲ್ಲಿ ಮಜಾ

ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಫೋಟೊಗಳಿಗೆ ಮಸಿ ಬಳಿಯಲಾಗಿದೆ. ಶೇಖ್‌ ಹಸೀನಾ ಅವರ ತಂದೆಯ ಮೂರ್ತಿಗಳನ್ನು ಉದ್ರಿಕ್ತರು ಒಡೆದು ಹಾಕಿದ್ದಾರೆ. ಕೆಲ ಸರ್ಕಾರಿ ಕಚೇರಿಗಳನ್ನೂ ಧ್ವಂಸಗೊಳಿಸಿದ್ದಾರೆ. ಸುಮಾರು 4 ಲಕ್ಷ ಜನ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಭರ್ಜರಿ ಭೋಜನ ಸವಿದ ಪ್ರತಿಭಟನಾಕಾರರು

ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಪಾಕಿಸ್ತಾನ ಕಾರಣ ಎಂದು ತಿಳಿದುಬಂದಿದೆ. ಬಾಂಗ್ಲಾದೇಶದಲ್ಲಿ ಜಮಾತ್‌-ಎ-ಇಸ್ಲಾಮಿ ಎಂಬ ನಿಷೇಧಿತ ಸಂಘಟನೆಯ ವಿದ್ಯಾರ್ಥಿ ಘಟಕವಾಗಿರುವ ಛತ್ರಾ ಶಿಬಿರ್‌ ಎಂಬ ಸಂಘಟನೆಗೆ ಪಾಕಿಸ್ತಾನದ ಐಎಸ್‌ಐ ಬೆಂಬಲ ಇದೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶ ವಿಮೋಚನೆ ಹೋರಾಟದ ವೇಳೆ ಭಾಗಿಯಾದವರ ಕುಟುಂಬಸ್ಥರಿಗೆ ನೀಡುವ ಮೀಸಲಾತಿಯನ್ನು ಶೇ.5ಕ್ಕೆ ಇಳಿಸಿದರೂ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯ ಹಿಂದಿರುವ ಪ್ರಮುಖ ವಿದ್ಯಾರ್ಥಿ ಸಂಘಟನೆಗಳಲ್ಲಿ ಛತ್ರಾ ಶಿಬಿರ್‌ ಎಂಬ ಸಂಘಟನೆಯ ಪಾತ್ರ ಪ್ರಮುಖವಾಗಿದೆ. ಇದಕ್ಕೆ ಪಾಕಿಸ್ತಾನವು ಹಣಕಾಸು ನೆರವು ಕೂಡ ನೀಡುತ್ತಿದೆ ಎಂದು ತಿಳಿದುಬಂದಿದೆ.

ಶೇಖ್‌ ಹಸೀನಾ ಅವರು ಕಳೆದ 15 ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅವರು ರಾಷ್ಟ್ರೀಯವಾದದಲ್ಲಿ ನಂಬಿಕೆ ಇರಿಸಿರುವುದರ ಜತೆಗೆ ಜನರ ಬೆಂಬಲ ಗಳಿಸಿದ್ದಾರೆ. ಬಡತನ ಪ್ರಮಾಣವನ್ನು ಶೇ.5ಕ್ಕೆ ಇಳಿಸಿದ್ದಾರೆ. ಇದರ ಜತೆಗೆ ಭಾರತದ ಜತೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಿದ್ದಾರೆ. ಮೇಲಾಗಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದನ್ನು ಸಹಿಸದ ಪಾಕಿಸ್ತಾನವು, ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿಯು ಅಧಿಕಾರಕ್ಕೆ ಬರಬೇಕು ಎಂಬುದು ಪಾಕಿಸ್ತಾನದ ಕುತಂತ್ರವಾಗಿದೆ. ಇದಕ್ಕಾಗಿ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Bangladesh Protests: ಬಾಂಗ್ಲಾ ಹಿಂಸಾಚಾರದ ಹಿಂದೆ ಪಾಕ್‌ ಕೈವಾಡ; ಭಾರತದ ಜತೆ ಹಸೀನಾ ಸ್ನೇಹ ಕಾರಣ?

Continue Reading

Latest

Viral Video: ಮಳೆಯಲಿ ಜೊತೆಯಲಿ… ಆನೆ-ಮಾವುತ ನಡುವಿನ ಮಾಂತ್ರಿಕ ಕ್ಷಣ! ಹೃದಯ ತಟ್ಟುವ ವಿಡಿಯೊ

Viral Video: ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಆನೆ ಮತ್ತು ಅದರ ಮಾವುತನ ನಡುವಿನ “ಮಾಂತ್ರಿಕ ಕ್ಷಣಗಳನ್ನು” ಸೆರೆಹಿಡಿದಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಮಿಳುನಾಡಿನ ಅಣ್ಣಾಮಲೈ ಹುಲಿ ಮೀಸಲು ಪ್ರದೇಶವಾದ ಕೋಝಿಕಮುತಿ ಆನೆ ಶಿಬಿರದಲ್ಲಿ ಆನೆ ತನ್ನ ಮಾವುತನ ಜೊತೆ ನಡೆಯುತ್ತಾ ಆ ಸುಂದರ ಕ್ಷಣವನ್ನು ಆನಂದಿಸುವುದನ್ನು ವನ್ಯಜೀವಿ ಛಾಯಾಗ್ರಾಹಕ ಧನು ಪರನ್ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

VISTARANEWS.COM


on

Viral Video
Koo


ಬೆಂಗಳೂರು: ದೇಶದ ಹಲವೆಡೆ ಮಳೆ ಧಾರಕಾರವಾಗಿ ಸುರಿಯುತ್ತಿದೆ. ಬಿಸಿಲಿನ ಬೇಗೆಯಿಂದ ದಣಿದು ಬಾಡಿದ ಭೂಮಿ, ಪ್ರಕೃತಿ, ಮನುಷ್ಯರು, ಪ್ರಾಣಿಪಕ್ಷಿಗಳಿಗೂ ಇದು ಆನಂದ ನೀಡಿದೆ. ಭೂಮಿ ತಂಪಾಗಿ, ಪ್ರಕೃತಿ ಹಚ್ಚ ಹಸಿರಾಗಿ ಕಂಗೊಳಿಸುತ್ತಿದೆ. ಈ ಪ್ರಕೃತಿಯ ಸೌಂದರ್ಯವನ್ನು ಕಂಡು ಪ್ರಾಣಿಪಕ್ಷಿಗಳು ಆನಂದಿಸುತ್ತಿವೆ. ಇದೀಗ ಈ ಹಚ್ಚ ಹಸಿರಾದ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸುತ್ತಾ ಆನೆಯೊಂದು ತನ್ನ ಮಾವುತನ ಜೊತೆಗೆ ಸಾಗುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಈ ವಿಡಿಯೊಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಆನೆ ಮತ್ತು ಅದರ ಮಾವುತನ ನಡುವಿನ “ಮಾಂತ್ರಿಕ ಕ್ಷಣಗಳನ್ನು” ಸೆರೆಹಿಡಿದಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಮಿಳುನಾಡಿನ ಅಣ್ಣಾಮಲೈ ಹುಲಿ ಮೀಸಲು ಪ್ರದೇಶವಾದ ಕೋಝಿಕಮುತಿ ಆನೆ ಶಿಬಿರದಲ್ಲಿ ಆನೆ ತನ್ನ ಮಾವುತನ ಜೊತೆ ನಡೆಯುತ್ತಾ ಆ ಸುಂದರ ಕ್ಷಣವನ್ನು ಆನಂದಿಸುವುದನ್ನು ವನ್ಯಜೀವಿ ಛಾಯಾಗ್ರಾಹಕ ಧನು ಪರನ್ ಅವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. 27 ಸೆಕೆಂಡುಗಳ ಈ ವಿಡಿಯೊ ಅನೇಕ ಜನರ ಮನಗೆದ್ದಿದೆ.

ಈ ವಿಡಿಯೊದಲ್ಲಿ ಮಳೆಗಾಲದ ಮಧ್ಯಾಹ್ನದ ವೇಳೆ ಮಾವುತನು ತನ್ನ ಒಂದು ಕೈಯಲ್ಲಿ ಛತ್ರಿಯನ್ನು ಹಿಡಿದು ಇನ್ನೊಂದು ಕೈಯಿಂದ ಆನೆಯ ಕಿವಿ, ದೇಹವನ್ನು ಮೃದುವಾಗಿ ಸವರುತ್ತಾ ನಡೆದು ಬರುತ್ತಿದ್ದಾನೆ. ಈ ವಿಡಿಯೊದಲ್ಲಿ ಆನೆ ಮತ್ತು ಮಾವುತನ ನಡುವಿನ ಬಾಂಧ್ಯವ್ಯ ಸ್ಪಷ್ಟವಾಗಿ ಕಾಣಿಸುತ್ತದೆ. ಮತ್ತು ಅವರ ನಡುವಿನ ಪ್ರೀತಿ ಮತ್ತು ಪರಸ್ಪರ ಗೌರವ ಎದ್ದು ಕಾಣುತ್ತದೆ.

“ತಮಿಳುನಾಡಿನ ಅಣ್ಣಾಮಲೈ ಹುಲಿ ಮೀಸಲು ಪ್ರದೇಶದ ಕೋಝಿಕಮುತಿ ಆನೆ ಶಿಬಿರದಲ್ಲಿ ಮಾನ್ಸೂನ್ ಮಳೆಯಲ್ಲಿ ಮಾವುತ ಮತ್ತು ಅವನ ಆನೆಯ ನಡುವಿನ ಮಾಂತ್ರಿಕ ಕ್ಷಣಗಳು” ಎಂದು ಸಾಹು ತನ್ನ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಹಲವರು ಕಾಮೆಂಟ್‍ಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಶಾಂತವಾದ ಈ ದೈವಿಕ ಕ್ಷಣವನ್ನು ಹಂಚಿಕೊಂಡಿದ್ದಕ್ಕಾಗಿ ಅನೇಕರು ಸುಪ್ರಿಯಾ ಸಾಹು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ:ಹಾವು ಹಿಡಿಯುವವನನ್ನು ಕಚ್ಚಿ ತಾನೇ ಜೀವ ಬಿಟ್ಟ ಕಾಳಿಂಗ ಸರ್ಪ! ಸಾವಿಗೆ ಕಾರಣ ಏನು?

ಬಳಕೆದಾರರು, “ಮಾವುತ ಮತ್ತು ಆನೆಯ ನಡುವಿನ ಬಂಧವು ನಂಬಲಾಗದ ಸಂಗತಿಯಾಗಿದೆ. ಇದನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.” ಎಂದು ತಿಳಿಸಿದ್ದಾರೆ. “ಇದು ತುಂಬಾ ಸುಂದರವಾಗಿದೆ.” ಎಂದು ಇನ್ನೊಬ್ಬರು ಬರೆದಿದ್ದಾರೆ. ಮತ್ತೊಬ್ಬರು “ಈ ವಿಡಿಯೊ ನೋಡಿ ನನ್ನ ಈ ದಿನ ಬಹಳ ಸುಂದರವೆನಿಸಿತು” ಎಂದು ಹೇಳಿದ್ದಾರೆ.

Continue Reading
Advertisement
Paris Olympics 2024
ಪ್ರಮುಖ ಸುದ್ದಿ7 mins ago

Paris Olympics 2024 : ಕಂಚು ಕಳೆದುಕೊಂಡ ಲಕ್ಷ್ಯ ಸೇನ್​​; 2008ರ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬ್ಯಾಡ್ಮಿಂಟನ್​ನಲ್ಲಿ ಪದಕವಿಲ್ಲ

shravan 2024
Latest37 mins ago

Shravan 2024: ಶ್ರಾವಣ ಮಾಸದಲ್ಲೇಕೆ ಮಾಂಸಾಹಾರ ಮಾಡಬಾರದು? ಇದಕ್ಕಿದೆ ವೈಜ್ಞಾನಿಕ ಕಾರಣ!

Paris Olympics 2024
ಪ್ರಮುಖ ಸುದ್ದಿ40 mins ago

Paris Olympics 2024 : ನೀರಜ್ ಚೋಪ್ರಾ ಜಾವೆಲಿನ್ ಎಸೆತ ಸೇರಿದಂತೆ ಆ.6ರಂದು ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತೀಯ ಸ್ಪರ್ಧಿಗಳು ಇವರು…

Viral Video
Latest43 mins ago

Viral Video: ಮಗನನ್ನೇ ಹೊಡೆದು ಕೊಂದು, ಸುಟ್ಟು ಹಾಕಿ ಕೊಳಕ್ಕೆ ಎಸೆದ ತಂದೆ-ತಾಯಿ; ಹೃದಯ ತಲ್ಲಣಿಸುವ ವಿಡಿಯೊ

Viral Video
Latest55 mins ago

Viral Video: ಎಸ್ಕಲೇಟರ್ ಮೇಲೆ ಮಗುವನ್ನು ನಿಲ್ಲಿಸಲು ತಾಯಿಯ ಕಸತ್ತು; ಮುಂದೇನಾಯ್ತು ನೋಡಿ

Martin Trailer
ಸಿನಿಮಾ59 mins ago

Martin Trailer: ಪ್ಯಾನ್‌ ವರ್ಲ್ಸ್‌ ಮಾರ್ಟಿನ್‌ ಸಿನಿಮಾ ಟ್ರೈಲರ್‌ ಔಟ್;‌ ಪಾಕ್‌ನಲ್ಲಿ ಧ್ರುವ ಸರ್ಜಾ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ!

A R Rahman
ಪ್ರಮುಖ ಸುದ್ದಿ1 hour ago

A R Rahman : ಒಲಿಂಪಿಕ್ಸ್ ನಡುವೆಯೇ ವೈರಲ್ ಆಯ್ತು ಎಆರ್​ ರೆಹಮಾನ್ ಸಂಗೀತದ’ ತಾಲ್​ ಸೆ ತಾಲ್​’ ಹಾಡು; ಪ್ರತಿಕ್ರಿಯೆ ನೀಡಿದ ಚಿತ್ರ ನಿರ್ದೇಶಕ

Rescue the injured national bird Peacock at gangavathi
ಕೊಪ್ಪಳ1 hour ago

Koppala News: ವಿದ್ಯುತ್‌ ತಂತಿಗೆ ತಗುಲಿ ಗಾಯಗೊಂಡಿದ್ದ ನವಿಲಿನ ರಕ್ಷಣೆ

Free eye checkup and surgery camp at Hagaribommanahalli
ವಿಜಯನಗರ1 hour ago

Vijayanagara News: ಹಗರಿಬೊಮ್ಮನಹಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

KAS prelims exam
ಕರ್ನಾಟಕ1 hour ago

KAS Prelims Exam: ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಮತ್ತೆ ಮುಂದೂಡಿಕೆ; ಆಗಸ್ಟ್‌ 27ಕ್ಕೆ ನಿಗದಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌