Chiyaan Vikram: ವೇದಿಕೆಯಲ್ಲೇ ನಿರೂಪಕಿ ಸುಮಾಗೆ ಕಿಸ್ ಕೊಟ್ಟ ಖ್ಯಾತ ನಟ! - Vistara News

ಕಾಲಿವುಡ್

Chiyaan Vikram: ವೇದಿಕೆಯಲ್ಲೇ ನಿರೂಪಕಿ ಸುಮಾಗೆ ಕಿಸ್ ಕೊಟ್ಟ ಖ್ಯಾತ ನಟ!

Chiyaan Vikram: ಏಕಾಏಕಿ ನಟ ನಿರೂಪಕಿ ಕೈಗೆ ಮುತ್ತು ಕೊಟ್ಟಾಗ ಸುಮಾ ಆತನಿಗೆ ಒಂದಷ್ಟು ತೆಲುಗು ಸಾಲುಗಳನ್ನು ಹೇಳಿಕೊಟ್ಟರು, ಅದನ್ನು ಹೇಳಿ ಡೇನಿಯಲ್ ಚಪ್ಪಾಳೆ ಗಿಟ್ಟಿಸಿದರು. ಈ ವೇಳೆ ಸುಮಾ ಶೇಕ್ ಹ್ಯಾಂಡ್ ಮಾಡಿ ಆತನನ್ನು ಬೀಳ್ಕೊಡಲು ಹೊರಟರು.

VISTARANEWS.COM


on

Chiyaan Vikram danie caltagirone kissed hand on stage
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು:  ಕಾಲಿವುಡ್‌ ನಟ ಚಿಯಾನ್ ವಿಕ್ರಮ್ (Chiyaan Vikram) ನಟನೆಯ ʻʻತಂಗಲಾನ್‌ʼʼ ಚಿತ್ರ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ನಿರ್ದೇಶಕ ಪಾ ರಂಜಿತ್, ‘ತಾಂಗಾಲನ್’ ಸಿನಿಮಾ ನಿರ್ದೇಶನ ಮಾಡಿದ್ದು ಪ್ರತಿಭಾವಂತ ನಟ ಚಿಯಾನ್ ವಿಕ್ರಂ, ‘ತಂಗಾಲನ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನಿಜವಾದ ‘ಕೆಜಿಎಫ್’ ಕತೆ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರ ಆಗಸ್ಟ್‌ 15ರಂದು ತೆರೆಗೆ ಬರಲಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸಿನಿಮಾ ಪ್ರಿ ರಿಲೀಸ್ ಈವೆಂಟ್ ನಡೆಯಿತು.

ಚಿತ್ರದಲ್ಲಿ ಹಾಲಿವುಡ್ ನಟ ಡೇನಿಯಲ್ ಕ್ಯಾಲ್ಟಗಿರೋನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ತಂಗಲಾನ್’ ವೇದಿಕೆಯಲ್ಲಿ ಹಾಲಿವುಡ್ ನಟ ಡೇನಿಯಲ್ ಕ್ಯಾಲ್ಟಗಿರೋನ್ ಇದ್ದಕ್ಕಿದಂತೆ ಸುಮಾ ಕೈಗೆ ಮುತ್ತಿಟ್ಟಿದ್ದಾರೆ. ಇದರಿಂದ ಒಂದು ಕ್ಷಣ ಶಾಕ್ ಆಗಿದ್ದ ಸುಮಾ ಬಳಿಕ ತಮಾಷೆಯಾಗಿ ಅದನ್ನು ತಿಳಿಗೊಳಿಸಿದ್ದಾರೆ.

ಏಕಾಏಕಿ ನಟ ನಿರೂಪಕಿ ಕೈಗೆ ಮುತ್ತು ಕೊಟ್ಟಾಗ ಸುಮಾ ಆತನಿಗೆ ಒಂದಷ್ಟು ತೆಲುಗು ಸಾಲುಗಳನ್ನು ಹೇಳಿಕೊಟ್ಟರು, ಅದನ್ನು ಹೇಳಿ ಡೇನಿಯಲ್ ಚಪ್ಪಾಳೆ ಗಿಟ್ಟಿಸಿದರು. ಈ ವೇಳೆ ಸುಮಾ ಶೇಕ್ ಹ್ಯಾಂಡ್ ಮಾಡಿ ಆತನನ್ನು ಬೀಳ್ಕೊಡಲು ಹೊರಟರು.

ಡೇನಿಯಲ್ ಆಕೆಯ ಕೈಗೆ ಮುತ್ತು ಕೊಟ್ಟಿದ್ದಾರೆ. ರಾಜಾ ನಮ್ಮ ಸಹೋದರ ಇವರು. ರಾಖಿ ಹಬ್ಬ ಬರುತ್ತಿದೆ. ‘ಅಣ್ಣಯ್ಯ’ ಎಂದು ಹಾಡು ಹಾಡಿ ತಮಾಷೆಯಾಗಿ ಹೇಳಿದರು. ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: Duniya Vijay- Ganesh: ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್ ಸಿನಿಮಾ ಬರೋದು ಪಕ್ಕಾ; ʻಭೀಮʼನದ್ದೇ ಆ್ಯಕ್ಷನ್‌ ಕಟ್‌!

ಕೋಲಾರದ ಚಿನ್ನದ ಗಣಿ ಕಾರ್ಮಿಕರ ಜೀವನದ ಸುತ್ತ ಸುತ್ತುವ ನೈಜ ಘಟನೆಗಳಿಂದ ಪ್ರೇರಿತವಾದ ʻʻತಂಗಲಾನ್‌ʼʼನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಚಿಯಾನ್‌ ವಿಕ್ರಮ್‌. ಪಾ ರಂಜಿತ್ ನಿರ್ದೇಶನದ ಚಿತ್ರದಲ್ಲಿ ವಿಕ್ರಮ್‌ ಬುಡಕಟ್ಟಿನ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ತಂಗಲಾನ್‌ನಲ್ಲಿನ ಈ ಪಾತ್ರಕ್ಕಾಗಿಯೇ ವಿಕ್ರಮ್ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಬ್ರಿಟಿಷರು ಹಾಗೂ ಬುಡಕಟ್ಟು ಸಮಾಜದ ನಡುವೆ ನಡೆಯುವ ಸಂಘರ್ಷವನ್ನು ʻತಂಗಲಾನ್‌ʼʼ ಹೇಳುತ್ತಿದೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ನಟ ಚಿಯಾನ್ ವಿಕ್ರಮ್ ಜತೆ ಪಾರ್ವತಿ ಮೆನನ್‌, ಮಾಳವಿಕಾ ಮೋಹನ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕೆಜಿಎಫ್‌ ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್‌ ನೀಲ್‌ ಕಾಲ್ಪನಿಕ ಕಥೆಯನ್ನು ಕಟ್ಟಿಕೊಟ್ಟರೆ, ಕೆಜಿಎಫ್‌ನ ನಿಜವಾದ ಕಥೆಯನ್ನು ನಿರ್ದೇಶಕ ಪಾ. ರಂಜಿತ್‌ ಹೇಳಲು ಹೊರಟ್ಟಿದ್ದಾರೆ ಎಂದು ಈ ಮುಂಚೆ ಸುದ್ದಿಯಾಗಿತ್ತು. ಇದೀಗ ಈ ಚಿತ್ರದ ಮೂಲಕ ಹೊಸ ಕಥೆಯನ್ನು ಹೇಳಲು ಹೊರಟ್ಟಿದ್ದಾರೆ ರಂಜಿತ್‌.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ತಂಗಲಾನ್’ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್, ಪಶುಪತಿ, ಡೇನಿಯಲ್ ಕಾಲ್ಟಗಿರೋನ್ ಮತ್ತು ಇನ್ನೂ ಅನೇಕರು ಇದ್ದಾರೆ. ಜಿವಿ ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತವನ್ನು ರಚಿಸಿದ್ದಾರೆ.

ಅಣ್ಣಿಯಾನ್ ನಟ ಚಿತ್ರನಿರ್ಮಾಪಕ ಎಸ್‌ಯು ಅರುಣ್ ಕುಮಾರ್ ಅವರೊಂದಿಗೆ ತಾತ್ಕಾಲಿಕವಾಗಿ ʻಚಿಯಾನ್ 62ʼ ಎಂಬ ಯೋಜನೆಯಲ್ಲಿ ಕೆಲಸ ಮಾಡಲಿದ್ದಾರೆ. ಚಿತ್ರದಲ್ಲಿ ಎಸ್ ಜೆ ಸೂರ್ಯ ಮತ್ತು ಸೂರಜ್ ವೆಂಜರಮೂಡು ಪ್ರಮುಖ ಭಾಗಗಳಲ್ಲಿದ್ದಾರೆ.

ಈ ಚಿತ್ರವನ್ನು HR ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್‌ನಡಿಯಲ್ಲಿ ಶಿಬು ಥಮೀನ್ಸ್ ಮತ್ತು ರಿಯಾ ಶಿಬು ನಿರ್ಮಿಸಿಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಒಟಿಟಿ

Indian 2 Ott: ಇಂಡಿಯನ್ 2 ಒಟಿಟಿ ಸ್ಟ್ರೀಮಿಂಗ್ ಡೇಟ್ ಅನೌನ್ಸ್!

Indian 2 Ott: ಇಂಡಿಯನ್ 2 ಚಿತ್ರವೂ ಜುಲೈ ತಿಂಗಳಲ್ಲಿ ವಿಶ್ವದಾದ್ಯಂತ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಆದರೆ ಹೆಚ್ಚಾಗಿ ನಕಾರಾತ್ಮಕ ವಿಮರ್ಶೆಗಳೇ ಕೇಳಿ ಬಂದಿವೆ. ಬರವಣಿಗೆ, ಅತಿಯಾದ ಉದ್ದ, ಭವ್ಯತೆಗೆ ಹೆಚ್ಚಿನ ಒತ್ತು ಧ್ವನಿಮುದ್ರಿಕೆ ಕುರಿತು ಆಕ್ಷೇಪ ಕೇಳಿ ಬಂದಿದ್ದರೂ ಕಮಲ್ ಹಾಸನ್ ಅಭಿನಯಕ್ಕೆ ಮಾತ್ರ ಭಾರಿ ಮೆಚ್ಚುಗೆ ಗಳಿಸಿದೆ.

VISTARANEWS.COM


on

Indian 2 Ott release official date announced
Koo

ಬೆಂಗಳೂರು: ಇಂಡಿಯನ್ 2 (Indian 2 OTT Release) ಜುಲೈ 12 ಚಿತ್ರಮಂದಿರಗಳಲ್ಲಿ (movie theater) ಬಿಡುಗಡೆಯಾಗಿತ್ತು. ಕಮಲ್ ಹಾಸನ್ (kamal hasan), ಸಿದ್ಧಾರ್ಥ್, ಎಸ್.ಜೆ. ಸೂರ್ಯ ಮತ್ತು ರಾಕುಲ್ ಪ್ರೀತ್ ಸಿಂಗ್ ನಟಿಸಿರುವ ಈ ಚಿತ್ರವು ವಿಮರ್ಶಕರು, ಅಭಿಮಾನಿಗಳಿಂದ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಚಿತ್ರವು ಜುಲೈ 12 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.ಈ ಚಿತ್ರವು ಈಗ ಆಗಸ್ಟ್ 9 ರಂದು ಜನಪ್ರಿಯ OTT ಕಂಪನಿ ನೆಟ್‌ಫ್ಲಿಕ್ಸ್ ಮೂಲಕ ಪ್ರೇಕ್ಷಕರನ್ನು ತಲುಪಲಿದೆ. ಭಾರತೀಯಾಡು 2 ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಮನರಂಜನೆ ನೀಡಲಿದೆ.

ಇಂಡಿಯನ್ 2 ಚಿತ್ರವೂ ಜುಲೈ ತಿಂಗಳಲ್ಲಿ ವಿಶ್ವದಾದ್ಯಂತ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಆದರೆ ಹೆಚ್ಚಾಗಿ ನಕಾರಾತ್ಮಕ ವಿಮರ್ಶೆಗಳೇ ಕೇಳಿ ಬಂದಿವೆ. ಬರವಣಿಗೆ, ಅತಿಯಾದ ಉದ್ದ, ಭವ್ಯತೆಗೆ ಹೆಚ್ಚಿನ ಒತ್ತು ಧ್ವನಿಮುದ್ರಿಕೆ ಕುರಿತು ಆಕ್ಷೇಪ ಕೇಳಿ ಬಂದಿದ್ದರೂ ಕಮಲ್ ಹಾಸನ್ ಅಭಿನಯಕ್ಕೆ ಮಾತ್ರ ಭಾರಿ ಮೆಚ್ಚುಗೆ ಗಳಿಸಿದೆ.

ಆರು ಗಂಟೆಗಳಿಗೂ ಹೆಚ್ಚು ಅವಧಿಯ ಚಲನಚಿತ್ರ ಇದಾಗಿದ್ದು, ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಇಂಡಿಯನ್ 2ನ ಮುಂದುವರಿದ ಭಾಗ ಇಂಡಿಯನ್ 3 ಚಿತ್ರವನ್ನು 2025ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: Krishnam Pranaya Sakhi: ಕೃಷ್ಣಂ ಪ್ರಣಯ ಸಖಿ ಸಿನಿಮಾದ 4ನೇ ಹಾಡು ಔಟ್;‌ ರೊಮ್ಯಾಂಟಿಕ್‌ ಸಾಂಗ್ ಇಲ್ಲಿ ಕೇಳಿ!

ಇಂಡಿಯನ್ 2 ಸಿನಿಮಾ ಕಮಲ್ ಹಾಸನ್ ಅವರ ಕೊನೆಯ ಚಿತ್ರ ʻವಿಕ್ರಮ್ʼ ಕ್ಕಿಂತ ಕಡಿಮೆ ಗಳಿಕೆ ಕಂಡಿದೆ. 2022 ರಲ್ಲಿ ವಿಕ್ರಮ್‌ ಸಿನಿಮಾ ತನ್ನ ಆರಂಭಿಕ ದಿನದಂದು 28 ಕೋಟಿ ರೂ. ಗಳಿಕೆ ಕಂಡಿತ್ತು. ವಿಕ್ರಮ್ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿತ್ತು. ವಿಶ್ವಾದ್ಯಂತ 430 ಕೋಟಿ ರೂ. ಗಳಿಕೆ ಕಂಡಿತ್ತು. ಅದಕ್ಕೂ ಮೊದಲು, ಕಮಲ್ ಹಾಸನ್ ಕೊನೆಯದಾಗಿ 2018 ರ ವಿಶ್ವರೂಪಂ ಚಿತ್ರದಲ್ಲಿ ನಟಿಸಿದ್ದರು. ಇಂಡಿಯನ್ 2’ ಸಿನಿಮಾಗೆ ಮೊದಲ ದಿನ ಕೇವಲ 26 ಕೋಟಿ ರೂಪಾಯಿ ಗಳಿಕೆ ಆಗಿದೆ. ಕಮಲ್ ಹಾಸನ್ ಅವರಂಥ ಸಿನಿಮಾಗೆ ಇದು ತುಂಬಾನೇ ಸಣ್ಣ ಮೊತ್ತ.

ಕೆಲವೊಮ್ಮೆ ಸಿನಿಮಾ ಉತ್ತಮವಾಗಿ ಇರದೇ ಇದ್ದರೂ ಹೀರೋಗಳ ಪಾತ್ರದಿಂದ ಸಿನಿಮಾ ಇಷ್ಟ ಆಗುತ್ತದೆ. ಆದರೆ, ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್ ವಿವಿಧ ಗೆಟಪ್​ನಲ್ಲಿ ಬರೋದಷ್ಟೇ ಹೊರತು ಮತ್ತಿನ್ನೇನೂ ಇಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮನೀಶಾ ಕೊಯಿರಾಲಾ ಕೂಡ ನಟಿಸಿದ್ದಾರೆ.

ಸ್ಯಾಕ್‌ನಿಲ್ಕ್ ಪ್ರಕಾರ, ಇಂಡಿಯನ್ 2 ತಮಿಳು ಆವೃತ್ತಿಗೆ ಒಟ್ಟಾರೆ 55% ಆಕ್ಯುಪೆನ್ಸಿಯನ್ನು ಹೊಂದಿತ್ತು, ಹೆಚ್ಚು ರಾತ್ರಿ ಪ್ರದರ್ಶನಗಳಿಂದ ಬಂದಿದೆ. ಚೆನ್ನೈ ಶೇ 68ರಷ್ಟು , ಹಿಂದಿ ಶೇ 11 ರಷ್ಟು ಆಕ್ಯುಪೆನ್ಸಿ , ಮುಂಬೈ ಮತ್ತು ದೆಹಲಿ-ಎನ್‌ಸಿಆರ್ ಕ್ರಮವಾಗಿ ಶೇ. 12.5ರಷ್ಟು ​​ಮತ್ತು ಶೇ. 8ರಷ್ಟು ಆಕ್ಯುಪೆನ್ಸಿ ಇತ್ತು. ಚಿತ್ರದ ತೆಲುಗು ಆವೃತ್ತಿಯು ಉತ್ತಮ ಪ್ರದರ್ಶನ ನೀಡಿದೆ. ಶೇ. 58ರಷ್ಟು ಆಕ್ಯುಪೆನ್ಸಿ ಇತ್ತು ಎನ್ನಲಾಗಿದೆ. ಕಮಲ್ ಹಾಸನ್ ಇತ್ತೀಚೆಗೆ ಕಲ್ಕಿ 2898 ಎಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇದು ಜಾಗತಿಕವಾಗಿ 1000 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕನಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಜಾಕಿರ್ ಹುಸೇನ್, ಗುರು ಸೋಮಸುಂದರಾಮ್, ದೆಹಲಿ, ಗುರು ಸೋಮಸುಂದರಾಮ್ ಮಿಶ್ರಾ, , ಜಯಪ್ರಕಾಶ್, ಮನೋಬಾಲಾ, ಮತ್ತು ಅಶ್ವಿನಿ ತಂಗರಾಜ್ ಇದ್ದಾರೆ.

Continue Reading

South Cinema

Filmfare South 2024: ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್; ತೆಲುಗು, ತಮಿಳು ಹಾಗೂ ಮಲಯಾಳಂ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Filmfare South 2024: 2023ರಲ್ಲಿ ತೆರೆಕಂಡ ದಕ್ಷಿಣ ಭಾರತದ ಸಿನಿಮಾಗಳಿಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕೆಲವು ಸಿನಿಮಾಗಳು ದಕ್ಷಿಣ ಭಾರತದಲ್ಲಿ ಸಿನಿಪ್ರಿಯರ ಮನಗೆದ್ದಿದೆ. ಅಂತಹ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

VISTARANEWS.COM


on

Filmfare South 2024 mollywood tollywood 69th Filmfare Awards
Koo

ಬೆಂಗಳೂರು: 2023ರಲ್ಲಿ ತೆರೆಕಂಡು ಜನಪ್ರಿಯತೆ ಗಳಿಸಿದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. 2023ರಲ್ಲಿ ತೆರೆಕಂಡ ದಕ್ಷಿಣ ಭಾರತದ ಸಿನಿಮಾಗಳಿಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕೆಲವು ಸಿನಿಮಾಗಳು ದಕ್ಷಿಣ ಭಾರತದಲ್ಲಿ ಸಿನಿಪ್ರಿಯರ ಮನಗೆದ್ದಿದೆ. ಅಂತಹ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಫಿಲ್ಮ್‌ಫೇರ್ ತೆಲುಗು ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಸಿನಿಮಾ – ಬಳಗಂ
ಅತ್ಯುತ್ತಮ ನಿರ್ದೇಶಕ – ವೇಣು ಎಲ್ದಂಡಿ ( ಬಳಗಂ)
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ಬೇಬಿ ( ಸಾಯಿ ರಾಜೇಶ್)
ಅತ್ಯುತ್ತಮ ನಟ – ನಾನಿ ( ದಸರಾ)
ಅತ್ಯುತ್ತಮ ನಟ (ಕ್ರಿಟಿಕ್ಸ್) – ಪ್ರಕಾಶ್ ರಾಜ್ (ರಂಗ ಮಾರ್ತಾಂಡ)
ನವೀನ್ ಪೋಲಿಶೆಟ್ಟಿ ( ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ)
ಅತ್ಯುತ್ತಮ ನಟಿ – ಕೀರ್ತಿ ಸುರೇಶ್ ( ದಸರಾ)
ಅತ್ಯುತ್ತಮ ನಟಿ (ಕ್ರಿಟಿಕ್ಸ್) – ವೈಷ್ಣವಿ ಚೈತನ್ಯ (ಬೇಬಿ)
ಅತ್ಯುತ್ತಮ ಹೊಸ ಪ್ರತಿಭೆ (Male) – ಸಂಗೀತ್ ಶೋಭನ್ (ಮ್ಯಾಡ್)
ಅತ್ಯುತ್ತಮ ಪೋಷಕ ನಟ – ಬ್ರಹ್ಮಾನಂದಂ ( ರಂಗ ಮಾರ್ತಾಂಡ), ರವಿ ತೇಜಾ ( ವಾಲ್ತೇರು ವೀರಯ್ಯ)
ಅತ್ಯುತ್ತಮ ಪೋಷಕ ನಟಿ – ರೂಪಾ ಲಕ್ಷ್ಮಿ (ಬಳಗಂ)
ಅತ್ಯುತ್ತಮ ಸಂಗೀತ ನಿರ್ದೇಶಕ – ವಿಜಯ್ ಬಲ್ಗನಿನ್ (ಬೇಬಿ)
ಅತ್ಯುತ್ತಮ ಸಾಹಿತ್ಯ – ಅನಂತ ಶ್ರೀರಾಮ್ ( ಓ ರೆಂಡು ಪ್ರೇಮ, ಬೇಬಿ)
ಅತ್ಯುತ್ತಮ ಗಾಯಕ – ಶ್ರೀರಾಮ ಚಂದ್ರ (ಬೇಬಿ)
ಅತ್ಯುತ್ತಮ ಗಾಯಕಿ – ಶ್ವೇತಾ ಮೋಹನ್ ( ಸರ್)

ಇದನ್ನೂ ಓದಿ: Workshop: ಬೆಂಗಳೂರಿನಲ್ಲಿ ಆ.10ರಂದು ಸಿನಿಮಾಸಕ್ತರಿಗೆ ಕಾರ್ಯಾಗಾರ

ಫಿಲ್ಮ್‌ಫೇರ್ ತಮಿಳು ಪ್ರಶಸ್ತಿ ಗೆದ್ದವರ ಪಟ್ಟಿ

ಅತ್ಯುತ್ತಮ ಸಿನಿಮಾ – ಚಿತ್ತಾ
ಅತ್ಯುತ್ತಮ ನಿರ್ದೇಶಕ – ಎಸ್‌ ಯು ಅರುಣ್ ಕುಮಾರ್ (ಚಿತ್ತಾ)
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ವಿದುತಲೈ 1,
ವೆಟ್ರಿ ಮಾರನ್ ಅತ್ಯುತ್ತಮ ನಟ – ವಿಕ್ರಮ್ (ಪೊನ್ನಿಯನ್ ಸೆಲ್ವನ್ 2)
ಅತ್ಯುತ್ತಮ ನಟ (ಕ್ರಿಟಿಕ್ಸ್) – ಸಿದ್ಧಾರ್ಥ್ (ಚಿತ್ತಾ)
ಅತ್ಯುತ್ತಮ ನಟಿ – ನಿಮಿಷಾ ಸಂಜಯನ್ (ಚಿತ್ತಾ)
ಅತ್ಯುತ್ತಮ ನಟಿ (ಕ್ರಿಟಿಕ್ಸ್) – ಐಶ್ವರ್ಯಾ ರಾಜೇಶ್‌, ಅಪರ್ಣ ದಾಸ್
ಅತ್ಯುತ್ತಮ ಪೋಷಕ ನಟ – ಫಹಾದ್ ಫಾಸಿಲ್ (ಮಾಮಣ್ಣನ್)
ಅತ್ಯುತ್ತಮ ಪೋಷಕ ನಟಿ – ಅಂಜಲಿ ನಾಯರ್ (ಚಿತ್ತಾ)
ಅತ್ಯುತ್ತಮ ಸಂಗೀತ ನಿರ್ದೇಶಕ – ಧಿಬು ನಿನನ್ ಥಾಮಸ್, ಸಂತೋಷ್ ನಾರಾಯಣನ್ (ಚಿತ್ತಾ)
ಅತ್ಯುತ್ತಮ ಸಾಹಿತ್ಯ – ಇಳಂಗೊ ಕೃಷ್ಣನ್ ( ಪೊನ್ನಿಯನ್ ಸೆಲ್ವನ್ 2)
ಅತ್ಯುತ್ತಮ ಗಾಯಕ – ಹರಿಚರಣ್ ( ಪೊನ್ನಿಯನ್ ಸೆಲ್ವನ್ 2)
ಅತ್ಯುತ್ತಮ ಗಾಯಕಿ – ಕಾರ್ತಿಕಾ ವೈದ್ಯನಾಥನ್ (ಚಿತ್ತಾ)

ಫಿಲ್ಮ್‌ಫೇರ್ ಮಲಯಾಳಂ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಸಿನಿಮಾ – 2018
ಅತ್ಯುತ್ತಮ ನಿರ್ದೇಶಕ – ಜೂಡ್ ಆಂಥನಿ ಜೋಸೆಫ್ (2018)
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ಕಾಥಲ್ ದಿ ಕೋರ್
ಅತ್ಯುತ್ತಮ ನಟ – ಮಮ್ಮುಟ್ಟಿ (ನನ್ಪಕಲ್ ನೆರತು ಮಾಯಕ್ಕಂ)
ಅತ್ಯುತ್ತಮ ನಟ (ಕ್ರಿಟಿಕ್ಸ್) – ಜೋಜು ಜಾರ್ಜ್ಅ
ತ್ಯುತ್ತಮ ನಟಿ – ವಿನ್ಸಿ ಅಲೋಶಿಯಸ್ಅತ್ಯುತ್ತಮ ನಟಿ (ಕ್ರಿಟಿಕ್ಸ್) – ಜ್ಯೋತಿಕಾ
ಅತ್ಯುತ್ತಮ ಪೋಷಕ ನಟ – ಜಗದೀಶ್
ಅತ್ಯುತ್ತಮ ಪೋಷಕ ನಟಿ – ಪೂರ್ಣಿಮಾ ಇಂದ್ರಜಿತ್
ಅತ್ಯುತ್ತಮ ಸಂಗೀತ ನಿರ್ದೇಶಕ – ಸ್ಯಾಮ್ ಸಿಎಸ್
ಅತ್ಯುತ್ತಮ ಸಾಹಿತ್ಯ – ಅನ್ವರ್ ಅಲಿ
ಅತ್ಯುತ್ತಮ ಗಾಯಕ – ಕಪಿಲಾ ಕಪಿಲನ್
ಅತ್ಯುತ್ತಮ ಗಾಯಕಿ – ಕೆ. ಎಸ್. ಚಿತ್ರಾ

Continue Reading

ಕಾಲಿವುಡ್

Raayan Movie: ಎಂಟೇ ದಿನಕ್ಕೆ ‘100 ಕೋಟಿ ಕ್ಲಬ್‌’ ಸೇರಿದ ಧನುಷ್ ನಟನೆಯ’ರಾಯನ್‌’ ಸಿನಿಮಾ!

Raayan Movie: ಜುಲೈ 26 ರಂದು ರಾಯನ್ ಬಿಡುಗಡೆಯಾಯಿತು. ವಾರಾಂತ್ಯದಲ್ಲಿ 75 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಚಿತ್ರವನ್ನು ನಿರ್ಮಿಸಿರುವ ಸನ್ ಪಿಕ್ಚರ್ಸ್ ಈ ಚಿತ್ರವನ್ನು ‘ಬ್ಲಾಕ್ ಬಸ್ಟರ್’ ಎಂದು ಘೋಷಿಸಿದೆ. ರಾಯನ್ ಚಿತ್ರವನ್ನು ಧನುಷ್ ನಿರ್ದೇಶಿಸಿದ್ದಾರೆ. ಅವರು ನಾಯಕನಾಗಿ ನಟಿಸಿರುವ ಈ ಚಿತ್ರ ಧನುಷ್ ಅವರ 50 ನೇ ಚಿತ್ರವಾಗಿದೆ.

VISTARANEWS.COM


on

Raayan Movie crosses Rs 100 crore
Koo

ಬೆಂಗಳೂರು: ಧನುಷ್ ಅವರ ‘ರಾಯನ್‌’ ಸಿನಿಮಾ ಎಂಟು ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 100 ಕೋ ರೂ. ಗಳಿಕೆ ಕಂಡಿದೆ. ‘ಮಹಾರಾಜ’ ಮತ್ತು ‘ಇಂಡಿಯನ್ 2’ ನಂತರ ಜಾಗತಿಕವಾಗಿ ಒಳ್ಳೆಯ ಕಲೆಕ್ಷನ್‌ ಮಾಡಿದ ವರ್ಷದ ಮೂರನೇ ತಮಿಳು ಚಿತ್ರವಾಗಿದೆ.

ತಮಿಳು ಮಾರುಕಟ್ಟೆಯಲ್ಲಿ ಚಿತ್ರಕ್ಕೆ ಯಾವುದೇ ಸ್ಪರ್ಧೆಯಿಲ್ಲ. ಚಿತ್ರವುಭಾರತದಲ್ಲಿ ಸುಮಾರು ರೂ 72.75 ಕೋಟಿ ಗಳಿಕೆ ಮಾಡಿದೆ. ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ ಸಿನಿಮಾದ ಕಲೆಕ್ಷನ್‌ವನ್ನು ವಿಶ್ವದಾದ್ಯಂತ ಮೀರಿಸಲಿದೆ ಎಂದು ವರದಿಯಾಗಿದೆ. ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಸಿನಿಮಾ 145.53 ಕೋಟಿ ರೂ. ಗಳಿಸಿದೆ.

‘ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 50 ಕೋಟಿ ರೂ.ಗಳ ಗಡಿ ದಾಟುವ ಹಂತದಲ್ಲಿದೆ. ಆಗಸ್ಟ್ 3ರ ಎರಡನೇ ಶನಿವಾರದ ಅಂತ್ಯದ ವೇಳೆಗೆ ಚಿತ್ರ ಈ ಸಾಧನೆ ಮಾಡಲಿದೆ. ‘ತಿರುಚಿತ್ರಂಬಲಂ’ ಮತ್ತು ‘ವಾತಿ’ ನಂತರ ‘ರಾಯನ್‌’ ಧನುಷ್ ಅವರ 100 ಕೋಟಿ ರೂ. ಗಳಿಕೆ ಕಂಡ ಸಿನಿಮಾವಿದು.

ಜುಲೈ 26 ರಂದು ರಾಯನ್ ಬಿಡುಗಡೆಯಾಯಿತು. ವಾರಾಂತ್ಯದಲ್ಲಿ 75 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಚಿತ್ರವನ್ನು ನಿರ್ಮಿಸಿರುವ ಸನ್ ಪಿಕ್ಚರ್ಸ್ ಈ ಚಿತ್ರವನ್ನು ‘ಬ್ಲಾಕ್ ಬಸ್ಟರ್’ ಎಂದು ಘೋಷಿಸಿದೆ. ರಾಯನ್ ಚಿತ್ರವನ್ನು ಧನುಷ್ ನಿರ್ದೇಶಿಸಿದ್ದಾರೆ. ಅವರು ನಾಯಕನಾಗಿ ನಟಿಸಿರುವ ಈ ಚಿತ್ರ ಧನುಷ್ ಅವರ 50 ನೇ ಚಿತ್ರವಾಗಿದೆ.

ಎಸ್.ಜೆ.ಸೂರ್ಯ, ಪ್ರಕಾಶ್ ರಾಜ್, ಸೆಲ್ವರಾಘವನ್, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್, ದುಶಾರ ವಿಜಯನ್, ಅಪರ್ಣಾ ಬಾಲಮುರಳಿ, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಸರವಣನ್ ಕೂಡ ಇದ್ದಾರೆ. ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಇದು ವರ್ಷದ ಬಹು ನಿರೀಕ್ಷಿತ ತಮಿಳು ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನಿಂದ A ಸರ್ಟಿಫಿಕೇಟ್‌ ಪಡೆದುಕೊಂಡಿದೆ.

ಇದನ್ನೂ ಓದಿ: Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌; ಸೋನು ಗೌಡ ನಾಯಕಿ!

ಧನುಷ್ (Actor Dhanush) ಬರೆದು ನಿರ್ದೇಶಿಸಿರುವ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ʻರಾಯನ್ʼ ಸಿನಿಮಾವನ್ನು ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ರಿಲೀಸ್‌ ಆಗಿ ಭಾರತದಲ್ಲಿ 50 ಕೋಟಿ ರೂ, ಕಲೆಕ್ಷನ್‌ ಮಾಡಿದೆ.ಬಿಡುಗಡೆಯಾದ ಕೇವಲ ಮೂರೇ ದಿನಕ್ಕೆ ಸಿನಿಮಾ ಭರ್ಜರಿ ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಸಿನಿಮಾ ರಿಲೀಸ್‌ ಆದ ಬಳಿಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸದ್ಯ ‘ಕುಬೇರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಸೂಟಿಂಗ್‌ ಮುಕ್ತಾಯವಾಗುವ ನಿರೀಕ್ಷೆಯಿದೆ. ‘ಕುಬೇರ’ ತ್ರಿಭಾಷಾ ಚಿತ್ರವಾಗಿದ್ದು, ಏಕಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಣವಾಗುತ್ತಿದೆ.ʻಕುಬೇರ’ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ, ಇದನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ.

Continue Reading

ಕಾಲಿವುಡ್

Charuhasan Srinivasan: ಕಮಲ್ ಹಾಸನ್ ಸಹೋದರ, ನಟಿ ಸುಹಾಸಿನಿ ತಂದೆ ಆಸ್ಪತ್ರೆಗೆ ದಾಖಲು

Charuhasan Srinivasan: ನಟಿ, ನಿರ್ದೇಶಕಿ, ನಿರ್ಮಾಪಕ ಮತ್ತು ಲೇಖಕಿ ಸುಹಾಸಿನಿ ಮಣಿರತ್ನಂ ಅವರು ತಮ್ಮ ತಂದೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಸುಹಾಸಿನಿ ತನ್ನ ತಂದೆಯನ್ನು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ಚಾರುಹಾಸನ್ ಶ್ರೀನಿವಾಸನ್ ಅವರು ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದಾರೆ.

VISTARANEWS.COM


on

Charuhasan Srinivasan Hospitalised, Daughter Suhasini Shares Emotional Post
Koo

ಬೆಂಗಳೂರು: ಹಿರಿಯ ನಟ ಕಮಲ್ ಹಾಸನ್ (Kamal Haasan) ಅವರ ಹಿರಿಯ ಸಹೋದರ, ಚಾರುಹಾಸನ್ ಶ್ರೀನಿವಾಸನ್ (Charuhasan Srinivasan) ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಹಿರಿಯ ಮಗಳು, ನಟಿ, ನಿರ್ದೇಶಕಿ, ನಿರ್ಮಾಪಕ ಮತ್ತು ಲೇಖಕಿ ಸುಹಾಸಿನಿ ಮಣಿರತ್ನಂ ಅವರು ತಮ್ಮ ತಂದೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಸುಹಾಸಿನಿ ತನ್ನ ತಂದೆಯನ್ನು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ಚಾರುಹಾಸನ್ ಶ್ರೀನಿವಾಸನ್ ಅವರು ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದಾರೆ.

ಫೋಟೋವನ್ನು ಹಂಚಿಕೊಂಡ ನಟಿ ಹೀಗೆ ಬರೆದಿದ್ದಾರೆ, “ ನೀವು ಇದನ್ನು ನನ್ನ ತಂದೆಗೆ ವೈದ್ಯಕೀಯ ವಾಸ್ತವ್ಯ ಎಂದು ಕರೆಯುತ್ತೀರಾ? ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು, ದಾದಿಯರು ಮತ್ತು ಹೆಣ್ಣುಮಕ್ಕಳಿಂದ ಪ್ರೀತಿ ಮತ್ತು ಕಾಳಜಿಯೊಂದಿಗೆʼಎಂದು ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. ಪೋಸ್ಟ್ ನೋಡಿದ ಅಭಿಮಾನಿಗಳು ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?

ಚಾರುಹಾಸನ್ ಶ್ರೀನಿವಾಸನ್ ನಟ, ನಿರ್ದೇಶಕ ಮತ್ತು ನಿವೃತ್ತ ವಕೀಲರು. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಲನಚಿತ್ರ ತಬರನ ಕಥೆ (1987) ಗಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮತ್ತು ಅತ್ಯುತ್ತಮ ನಟ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.

ಕುಬಿ ಮತ್ತು ಇಯಾಲ, ರಘುವಿಂತೆ ಸ್ವಂತ ರಜಿಯಾ, ಮೀಂದುಂ ಒರು ಕಾತಲ್ ಕಥೈ, ನೇತಿ ಸಿದ್ಧಾರ್ಥ, ಮತ್ತು ಡಿಯರ್ ಕಾಮ್ರೇಡ್ ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಪುದಿಯ ಸಂಗಮಮ್ (1982) ಮತ್ತು ಐಪಿಸಿ 215 (2003) ಎಂಬ ಎರಡು ಚಲನಚಿತ್ರಗಳನ್ನು ನಿರ್ದೇಶಿಸಿದರು.

ಸಿನಿಮಾ ಜತೆಗೆ, ಥಿಂಕಿಂಗ್ ಆನ್ ಮೈ ಫೀಟ್: ಚಾರುಹಾಸನ್ ಆಟೋಬಯೋಗ್ರಫಿ, ನವದೆಹಲಿಯ ಲಿಫೈ ಪಬ್ಲಿಕೇಷನ್ಸ್, ಬಯೋಗ್ ಎಂಬ ಪುಸ್ತಕಗಳು ಪ್ರಕಟವಾಗಿದೆ, ಇದು 2015 ರಲ್ಲಿ ನವದೆಹಲಿ ವಿಶ್ವ ಪುಸ್ತಕ ಮೇಳದಲ್ಲಿ ಬಿಡುಗಡೆಯಾಯಿತು.

ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಚಾರುಹಾಸನ್ ಜನವರಿ 5, 1931 ರಂದು ವಕೀಲ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಡಿ. ಶ್ರೀನಿವಾಸನ್ ಮತ್ತು ರಾಜಲಕ್ಷ್ಮಿ ದಂಪತಿಗೆ ಜನಿಸಿದರು. ಚಾರುಹಾಸನ್ ಹಿರಿಯ ಮಗ ಮತ್ತು ಕಮಲ್ ಹಾಸನ್ ಕಿರಿಯ ಸಹೋದರ.

ಚಾರುಹಾಸನ್ ಕೋಮಲಂ ಅವರನ್ನು ವಿವಾಹವಾಗಿದ್ದಾರೆ. ನಂದಿನಿ, ಸುಹಾಸಿನಿ ಮತ್ತು ಸುಭಾಸಿನಿ ಎಂಬ ಮೂವರು ಪುತ್ರಿಯರನ್ನು ಹೊಂದಿದ್ದಾರೆ. ಸುಹಾಸಿನಿ ನಟಿ.

Continue Reading
Advertisement
CM Siddaramaiah instructs to provide immediate relief to those affected by heavy rains
ಕರ್ನಾಟಕ32 mins ago

CM Siddaramaiah: ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ತಕ್ಷಣ ಪರಿಹಾರ; ಸಿದ್ದರಾಮಯ್ಯ ಸೂಚನೆ

ಪ್ರಮುಖ ಸುದ್ದಿ37 mins ago

Vinod Kambli : ಹದಗೆಟ್ಟಿದೆ ಮಾಜಿ ಕ್ರಿಕೆಟರ್​ ವಿನೋದ್ ಕಾಂಬ್ಳಿ ಆರೋಗ್ಯ ; ಸಚಿನ್ ಜತೆಗಾರನಿಗೆ ಈಗ ಕೈ ಹಿಡಿದುಕೊಂಡು ನಡೆಯುವ ಪರಿಸ್ಥಿತಿ!

Urban local bodies
ಪ್ರಮುಖ ಸುದ್ದಿ43 mins ago

Urban local bodies: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಿದ ಸರ್ಕಾರ; ಇಲ್ಲಿದೆ ಪಟ್ಟಿ

ವಿಸ್ತಾರ ಗ್ರಾಮ ದನಿ
ಪರಿಸರ48 mins ago

ವಿಸ್ತಾರ ಗ್ರಾಮ ದನಿ: ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ; ನಮ್ಮ ಶಾಸಕರು, ಸಂಸದರು, ಸಚಿವರು, ಅಧಿಕಾರಿಗಳು ಕೃಷಿಕರಿಗಾಗಿ ಏನು ಮಾಡಬಹುದು?

Taslima Nasrin
ವಿದೇಶ52 mins ago

Taslima Nasrin: ಇಸ್ಲಾಮಿಸ್ಟ್‌ಗಳನ್ನು ಬೆಳೆಯಲು ಬಿಟ್ಟಿದ್ದೇ ಬಾಂಗ್ಲಾ ದುಸ್ಥಿತಿಗೆ ಕಾರಣ; ತಸ್ಲೀಮಾ ನಸ್ರಿನ್‌ ಆಕ್ರೋಶ

Tollywood actor Junior NTR starrer Devara movie second song release
ಕರ್ನಾಟಕ58 mins ago

Devara Movie: ಬಂದಿದೆ ʼದೇವರʼ ಸೆಕೆಂಡ್‌ ಸಾಂಗ್‌; ಕನ್ನಡದಲ್ಲೂ ಇದೆ ʼಸ್ವಾತಿಮುತ್ತೇ ಸಿಕ್ಕಂಗೈತೆʼ ರೊಮ್ಯಾಂಟಿಕ್‌ ಹಾಡು!

Paris Olympics 2024
ಪ್ರಮುಖ ಸುದ್ದಿ1 hour ago

Paris Olympics 2024 : ಕಂಚು ಕಳೆದುಕೊಂಡ ಲಕ್ಷ್ಯ ಸೇನ್​​; 2008ರ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬ್ಯಾಡ್ಮಿಂಟನ್​ನಲ್ಲಿ ಪದಕವಿಲ್ಲ

shravan 2024
Latest2 hours ago

Shravan 2024: ಶ್ರಾವಣ ಮಾಸದಲ್ಲೇಕೆ ಮಾಂಸಾಹಾರ ಮಾಡಬಾರದು? ಇದಕ್ಕಿದೆ ವೈಜ್ಞಾನಿಕ ಕಾರಣ!

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ನೀರಜ್ ಚೋಪ್ರಾ ಜಾವೆಲಿನ್ ಎಸೆತ ಸೇರಿದಂತೆ ಆ.6ರಂದು ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತೀಯ ಸ್ಪರ್ಧಿಗಳು ಇವರು…

Viral Video
Latest2 hours ago

Viral Video: ಮಗನನ್ನೇ ಹೊಡೆದು ಕೊಂದು, ಸುಟ್ಟು ಹಾಕಿ ಕೊಳಕ್ಕೆ ಎಸೆದ ತಂದೆ-ತಾಯಿ; ಹೃದಯ ತಲ್ಲಣಿಸುವ ವಿಡಿಯೊ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌