Mary Kom: ಒಂದೇ ತಾಸಿನಲ್ಲಿ 2 ಕೆಜಿ ತೂಕ ಇಳಿಸಿ ಚಿನ್ನ ಗೆದ್ದಿದ್ದ ಬಾಕ್ಸರ್​ ಮೇರಿ ಕೋಮ್ - Vistara News

ಕ್ರೀಡೆ

Mary Kom: ಒಂದೇ ತಾಸಿನಲ್ಲಿ 2 ಕೆಜಿ ತೂಕ ಇಳಿಸಿ ಚಿನ್ನ ಗೆದ್ದಿದ್ದ ಬಾಕ್ಸರ್​ ಮೇರಿ ಕೋಮ್

Mary Kom: ಅಚ್ಚರಿ ಎಂದರೆ ಕೋಮ್​ ಒಂದು ಗಂಟೆಯ ಅವಧಿಯಲ್ಲಿ 2 ಕೆಜಿ ತೂಕ ಇಳಿಸಿ ಫೈನಲ್​ನಲ್ಲಿ ಚಿನ್ನದ ಪದಕ ಜಯಿಸಿದ್ದರು. ತೂಕ ಇಳಿಸುವ ಸಲುವಾಗಿ ಸತತ 1 ಗಂಟೆಗಳ ಕಾಲ ಅವರು ಸ್ಕಿಪ್ಪಿಂಗ್ ನಡೆಸಿದ್ದಾಗಿ ​ ಹೇಳಿಕೊಂಡಿದ್ದಾರೆ.

VISTARANEWS.COM


on

Mary Kom
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಹತೂಕ ಕಾಪಾಡಿಕೊಳ್ಳಲು ವಿಫಲವಾದ ಹಿನ್ನಲೆಯಲ್ಲಿ ಒಲಿಂಪಿಕ್ಸ್ ಕೂಟದಿಂದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(vinesh phogat) ಅನರ್ಹಗೊಂಡಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಅಗತ್ಯಕ್ಕಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದ ಕಾರಣ ಅವರನ್ನು ಫೈನಲ್ ಸ್ಪರ್ಧೆಯಲ್ಲಿ ಆಡದಂತೆ ಅನರ್ಹಗೊಳಿಸಲಾಗಿತ್ತು. ಆರು ಬಾರಿಯ ವಿಶ್ವ ಚಾಂಪಿಯನ್ ಮತ್ತು 2012 ರ ಒಲಿಂಪಿಕ್ ಕಂಚಿನ ಪದಕ ವಿಜೇತೆ, ಭಾರತದ ಖ್ಯಾತ ಬಾಕ್ಸಿಂಗ್​ ತಾರೆ ಮೇರಿ ಕೋಮ್(Mary Kom) ಕೂಡ ಹಿಂದೊಮ್ಮೆ ತೂಕದ ಸಮಸ್ಯೆಯಿಂದ ಅನರ್ಹಗೊಳ್ಳುವ ಭೀತಿಯನ್ನು ಎದುರಿಸಿದ್ದರಂತೆ. ಈ ವಿಚಾರವನ್ನು ಅವರೇ ಈಗ ಬಹಿರಂಗಪಡಿಸಿದ್ದಾರೆ.

ವಿನೇಶ್ ಫೋಗಟ್ ಘಟನೆಯ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಖ್ಯಾತ ಮಹಿಳಾ ಬಾಕ್ಸರ್ ಮೇರಿ ಕೋಮ್, 2018ರಲ್ಲಿ ಪೊಲೆಂಡ್‌ನ ಗ್ಲಿವೈಸ್‌ನಲ್ಲಿ ನಡೆದಿದ್ದ ಮಹಿಳೆಯರ 13ನೇ ಸಿಲೆಸಿಯನ್ ಓಪನ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ನನಗೆ ತೂಕದ ಸಮಸ್ಯೆ ಎದುರಾಗಿತ್ತು. ನಾನು ಸ್ಪರ್ಧಿಸುವ ವಿಭಾಗದಲ್ಲಿ 48 ಕೆಜಿ ತೂಕದ ಮಿತಿ ಇತ್ತು. ಅದಕ್ಕಿಂತ ಒಂದೆರಡು ಕಿಲೋಗ್ರಾಂಗಳಷ್ಟು ಹೆಚ್ಚಿನ ತೂಕ ಹೊಂದಿದ್ದೆ. ಹೀಗಾಗಿ ಅನರ್ಹದ ಭೀತಿ ಎದುರಿಸಿದ್ದೆ. ಆದರೆ, ನಾನು ಸತತವಾಗಿ ಒಂದು ಗಂಟೆ ಸ್ಕಿಪ್ಪಿಂಗ್ ಮಾಡಿದ ನಂತರ ತೂಕವನ್ನು ಇಳಿಸಲು ಸಾಧ್ಯವಾಯಿತು” ಎಂದು ಮೇರಿ ಕೋಮ್‌ ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ Paris Olympics: ಶ್ರೀಜೇಶ್​ಗೆ ಸಿಗಲಿ ಗೆಲುವಿನ ವಿದಾಯ; ಇಂದು ಭಾರತ-ಸ್ಪೇನ್​ ಕಂಚಿನ ಕಾದಾಟ

ಚಿನ್ನ ಗೆದ್ದಿದ್ದ ಕೋಮ್​


ಅಚ್ಚರಿ ಎಂದರೆ ಕೋಮ್​ ಒಂದು ಗಂಟೆಯ ಅವಧಿಯಲ್ಲಿ 2 ಕೆಜಿ ತೂಕ ಇಳಿಸಿ ಫೈನಲ್​ನಲ್ಲಿ ಚಿನ್ನದ ಪದಕ ಜಯಿಸಿದ್ದರು. ತೂಕ ಇಳಿಸುವ ಸಲುವಾಗಿ ಸತತ 1 ಗಂಟೆಗಳ ಕಾಲ ಅವರು ಸ್ಕಿಪ್ಪಿಂಗ್ ನಡೆಸಿದ್ದಾಗಿ ​ ಹೇಳಿಕೊಂಡಿದ್ದಾರೆ.

ಬೆಳ್ಳಿ ಪದಕ್ಕಕೆ ಮನವಿ ಮಾಡಿದ ವಿನೇಶ್​


ವಿನೇಶ್ ಫೋಗಟ್ ತಮ್ಮನ್ನು ಅನರ್ಹ ಮಾಡಿದ ನಿರ್ಧಾರದ ವಿರುದ್ಧ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ (ಸಿಎಎಸ್)ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಜಂಟಿ ಬಳ್ಳಿಪದಕವನ್ನು ನೀಡುವಂತೆ ಕೋರಿದ್ದಾರೆ. ಗುರುವಾರ ಈ ಮೇಲ್ಮನವಿ ಬಗ್ಗೆ ಮಧ್ಯಂತರ ತೀರ್ಪು ನೀಡುವ ನಿರೀಕ್ಷೆ ಇದ್ದು, ಮೂಲ ನಿರ್ಧಾರವನ್ನು ಬದಲಿಸುವ ಸಾಧ್ಯತೆಯೂ ಇದೆ. ಒಲಿಂಪಿಕ್ ಕೂಟದ ಕಟ್ಟುನಿಟ್ಟಿನ ಸಂರಚನೆ ಕಾರಣದಿಂದಾಗಿ ಚಿನ್ನದ ಪದಕಕ್ಕೆ ಸ್ಪರ್ಧಿಸುವ ಅವಕಾಶವನ್ನು ನೀಡುವ ಸಾಧ್ಯತೆ ಕಡಿಮೆ. ಏಕೆಂದರೆ ಚಿನ್ನದ ಪದಕಕ್ಕಾಗಿ ಇರುವ ಸ್ಪರ್ಧೆಯ ಮರು ವೇಳಾಪಟ್ಟಿ ಸಿದ್ಧಪಡಿಸುವುದು ಸವಾಲುದಾಯಕ. ಆದರೆ ಅಧಿಕೃತ ಪ್ರಸಾರಸಂಸ್ಥೆಯಾಗಿರುವ ಜಿಯೊಸಿನಿಮಾ ಪ್ರಕಾರ, ವಿನೇಶ್ ಜಂಟಿ ಬೆಳ್ಳಿಪದಕಕ್ಕಾಗಿ ಮನವಿ ಸಲ್ಲಿಸಿದ್ದಾರೆ.

ಸಿಎಎಸ್ ಎನ್ನುವುದು 1984ರಲ್ಲಿ ಸ್ಥಾಪಿತವಾದ ಸ್ವತಂತ್ರ ಸಂಸ್ಥೆಯಾಗಿದ್ದು, ಕ್ರೀಡಾಸಂಬಂಧಿ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸುತ್ತದೆ. ಸ್ವಿಡ್ಜರ್ಲೆಂಡ್ ನ ಲೌಸನ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿಎಎಸ್, ನ್ಯೂಯಾರ್ಕ್ ಹಾಗೂ ಸಿಡ್ನಿಯಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಹೊಂದಿದ್ದು, ಒಲಿಂಪಿಕ್ ಆತಿಥ್ಯ ವಹಿಸುವ ದೇಶಗಳಲ್ಲಿ ತಾತ್ಕಾಲಿಕ ಕೋರ್ಟ್ ಗಳನ್ನು ಹೊಂದಿರುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics: ಭರ್ಜರಿ ಗೆಲುವಿನೊಂದಿಗೆ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಅಮನ್ ಸೆಹ್ರಾವತ್

Paris Olympics: ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಅಮನ್ ಸೆಹ್ರಾವತ್(Aman Sehrawat) ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆ ಜೀವಂತವಿರಿಸಿದ್ದಾರೆ.

VISTARANEWS.COM


on

Paris Olympics
Koo

ಪ್ಯಾರಿಸ್​: ಪ್ಯಾರಿಸ್ ಒಲಿಂಪಿಕ್ಸ್(Paris Olympics) ಪುರುಷರ 57 ಕೆ.ಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ಅಮನ್ ಸೆಹ್ರಾವತ್(Aman Sehrawat) ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆ ಜೀವಂತವಿರಿಸಿದ್ದಾರೆ. ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ 21 ವರ್ಷದ ಅಮನ್ ನಾರ್ತ್ ಮ್ಯಾಸೆಡೋನಿಯಾದ ವ್ಲಾಡಿಮಿರ್ ಎಗೊರೊವ್ ವಿರುದ್ಧ 10-0 ಅಂತರದ ಭರ್ಜರಿ ಗೆಲುವು ದಾಖಲಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಇಂದೇ ನಡೆಯುವ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಲ್ಬೆನಿಯಾದ ಝೆಲಿಮ್ಖಾನ್ ಅಬಕರೋವ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಮಹಿಳಾ ವಿಭಾಗದ 57 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅಂಶು ಮಲಿಕ್​ ಸೋತು ನಿರಾಸೆ ಮೂಡಿಸಿದ್ದಾರೆ.

ಮಹಿಳೆಯರ 100 ಮೀ. ಹರ್ಡಲ್ಸ್‌ನ ರೆಪೆಷಾಜ್ ಸುತ್ತಿನಲ್ಲಿ ಜ್ಯೋತಿ ಯರ್ರಾಜಿ ವಿಫಲರಾಗಿದ್ದಾರೆ. 13.17 ಸೆಕೆಂಡುಗಳಲ್ಲಿ ನಾಲ್ಕನೇಯವರಾಗಿ ಜ್ಯೋತಿ ಗುರಿ ಮುಟ್ಟಿದರು. ಆ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.

ಇದನ್ನೂ ಓದಿ Paris Olympics: ಒಲಿಂಪಿಕ್ಸ್​ನಲ್ಲಿಯೂ ಸದ್ದು ಮಾಡಿದ ‘​ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು; ವಿಡಿಯೊ ವೈರಲ್​

ಕೆಲವೇ ಗಂಟೆಗಳಲ್ಲಿ ಹಾಕಿ ಪಂದ್ಯ

44 ವರ್ಷಗಳ ಬಳಿಕ ಒಲಿಂಪಿಕ್ಸ್(Paris Olympics)​ ಹಾಕಿಯಲ್ಲಿ ಫೈನಲ್​ ಪ್ರವೇಶಿಸುವ ಅವಕಾಶ ಕಳೆದುಕೊಂಡ ಭಾರತ ಪುರುಷರ ಹಾಕಿ ತಂಡ ಇಂದು ನಡೆಯುವ ಕಂಚಿನ ಪದಕದ ಸ್ಪರ್ಧೆಯಲ್ಲಿ ಸ್ಪೇನ್(india vs spain)​ ವಿರುದ್ಧ ಸೆಣಸಾಡಲಿದೆ. ಪಂದ್ಯ ಸಂಜೆ 5.30ಕ್ಕೆ ಆರಂಭಗೊಳ್ಳಲಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ ಕಂಚಿನ ಪದಕ ಗೆದ್ದು 41 ವರ್ಷಗಳ ಬಳಿಕ ಪದಕದ ಬರ ನೀಗಿಸಿತ್ತು. ಈ ಬಾರಿಯೂ ಕಂಚಿಗೆ ತೃಪ್ತಿಪಡಬೇಕಾದ ಸ್ಥಿತಿ ಎದುರಾಗಿದೆ. ಅದು ಕೂಡ ಇಂದು ಗೆದ್ದರೆ ಮಾತ್ರ.

ಈ ಬಾರಿಯ ಕೂಟದಲ್ಲಿ ಭಾರತ ಕ್ವಾರ್ಟರ್​ ಫೈನಲ್​ ತನಕ ತೋರಿದ್ದ ಪ್ರದರ್ಶನವನ್ನು ಕಂಡಾಗ ಭಾರತ ನಿಶ್ಚಿತವಾಗಿ ಚಿನ್ನ ಗೆಲ್ಲಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅಲ್ಲದೆ ಕಳೆದ ಬಾರಿಯ ಚಾಂಪಿಯನ್​ ಮತ್ತು ರನ್ನರ್​ ಅಪ್​ಗಳು ಕೂಡ ಕ್ವಾರ್ಟರ್​ ಫೈನಲ್​ನಲ್ಲಿಯೇ ಮುಗ್ಗರಿಸಿತ್ತು. ಹೀಗಾಗಿ ಭಾರತಕ್ಕೆ ಚಿನ್ನ ಗೆಲ್ಲುವ ಉತ್ತಮ ಅವಕಾಶ ಕೂಡ ಇತ್ತು. ಆದರೆ, ಸೆಮಿಫೈನಲ್​ನಲ್ಲಿ ತನಗಿಂತ ಬಲಿಷ್ಟವಲ್ಲದ ಜರ್ಮನಿ ವಿರುದ್ಧ ಹಲವು ತಪ್ಪುಗಳನ್ನು ಮಾಡಿದ ಕಾರಣ 3-2 ಗೋಲುಗಳ ಅಂತರದಿಂದ ಆಘಾತಕಾರಿ ಸೋಲು ಕಂಡು ಫೈನಲ್​ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು.

Continue Reading

ಕ್ರೀಡೆ

Gautam Gambhir: 27 ವರ್ಷದ ಬಳಿಕ ಲಂಕಾ ವಿರುದ್ಧ ಸೋಲು; ಗಂಭೀರ್​ ಫುಲ್​ ಟ್ರೋಲ್​

Gautam Gambhir: ಭಾರತ ತಂಡಕ್ಕೆ ಕಠಿಣವಾದ ವಿದೇಶಿ ಕ್ರಿಕೆಟ್​ ಸರಣಿ ಯಾವದು ಎಂದು ಪ್ರಶ್ನೆ ಮಾಡಿದರೆ, ಗಂಭೀರ್​ ಮಾತ್ರ ಶ್ರೀಲಂಕಾ ಪ್ರವಾಸ ಎನ್ನುತ್ತಾರೆ ಎಂದು ಗಂಭೀರ್​ ಅವರನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

VISTARANEWS.COM


on

Gautam Gambhir
Koo

ಮುಂಬಯಿ: ಗೌತಮ್ ಗಂಭಿರ್(Gautam Gambhir)​ ಅವರು ಭಾರತ ತಂಡದ ಕೋಚ್​ ಆಗುತ್ತಿದ್ದಂತೆ ಅವರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ, ಅವರ ಕೋಚಿಂಗ್​ನಲ್ಲಿ ಭಾರತ ತಂಡ ಆಡಿದ ಮೊದಲ ಏಕದಿನ ಸರಣಿಯಲ್ಲೇ ದುರ್ಬಲ ಲಂಕಾ ವಿರುದ್ಧ ಹೀನಾಯವಾಗಿ ಸೋಲು ಕಂಡಿದೆ. ಜತೆಗೆ 27 ವರ್ಷಗಳ ಬಳಿಕ ಭಾರತ ತಂಡ ಲಂಕಾ ವಿರುದ್ಧ ಸರಣಿ ಸೋಲು ಕಂಡ ಅಪಮಾನಕ್ಕೂ ಒಳಗಾಗಿದೆ. ಇದೇ ಕಾರಣದಿಂದ ನೆಟ್ಟಿಗರು ಗಂಭೀರ್​ ಅವರನ್ನು ಮೀಮ್ಸ್​ಗಳ ಮೂಲಕ ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ.

‘ಭಾರತ ತಂಡಕ್ಕೆ ಕಠಿಣವಾದ ವಿದೇಶಿ ಕ್ರಿಕೆಟ್​ ಸರಣಿ ಯಾವದು ಎಂದು ಪ್ರಶ್ನೆ ಮಾಡಿದರೆ ಆಟಗಾರರು, ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ? ಎಂದು ಹೇಳುತ್ತಾರೆ. ಆದರೆ, ಗಂಭೀರ್​ ಮಾತ್ರ ಶ್ರೀಲಂಕಾ ಪ್ರವಾಸ ಕಠಿಣ ಎನ್ನುತ್ತಾರೆ ಎಂದು ನೆಟ್ಟಿಗರೊಬ್ಬರು ಟ್ರೋಲ್​ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗ ಬಿಸಿಸಿಐ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಆಟಗಾರರು ಆಡದೇ ಇದ್ದರೆ ಕೋಚ್​ ಏನು ಮಾಡಲು ಸಾಧ್ಯ ಎಂದು ಗಂಭೀರ್​ ಪರ ಬ್ಯಾಟ್​ ಬೀಸಿದ್ದಾರೆ.

ಇದನ್ನೂ ಓದಿ Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

ಬುಧವಾರ ಕೊಲೊಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡ 249 ರನ್‌ ಬಾರಿಸಿ ಸವಾಲೊಡ್ಡಿತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 110 ರನ್‌ಗಳಿಂದ ಸೋಲನುಭವಿಸಿತು. ಭಾರತದ ಪರ ರೋಹಿತ್‌ ಶರ್ಮ (35), ವಾಷಿಂಗ್ಟನ್‌ ಸುಂದರ್‌ (30) ರನ್​ ಗಳಿಸಿದರು. ಉಳಿದ ಯಾವ ಬ್ಯಾಟರ್‌ಗಳೂ ರನ್‌ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಪಂದ್ಯ ಸೋತಿತು. ಸತತ ಮೂರು ಪಂದ್ಯಗಳಲ್ಲೂ ಶ್ರೀಲಂಕಾ ತಂಡವು ಸ್ಪಿನ್‌ ದಾಳಿ ನಡೆಸುವ ಮೂಲಕ ಭಾರತ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಸ್ಪಿನ್​ಗೆ ಹೆಚ್ಚಾಗಿ ಉತ್ತಮ ಬ್ಯಾಟ್​ ಬೀಸುತ್ತಿದ್ದ ಭಾರತ ಲಂಕಾದಲ್ಲಿ ಪರದಾಟ ನಡೆಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

​ಪಂದ್ಯದ ಸೋಲಿಗೆ ಸಹ ಆಟಗಾರರ ಬ್ಯಾಟಿಂಗ್​ ವೈಫಲ್ಯವೇ ಕಾರಣ ಎಂದು ರೋಹಿತ್​ ನೇರ ಆರೋಪವನ್ನು ಕೂಡ ಮಾಡಿದ್ದಾರೆ. ನಾನು ತಂಡದ ಗೆಲುವಿಗಾಗಿ ಪ್ರಯತ್ನಪಟ್ಟಿದ್ದೇನೆ. ಆದರೆ, ಉಳಿದ ಆಟಗಾರರು ಬ್ಯಾಟಿಂಗ್​ ವೈಫಲ್ಯ ಕಂಡರು. ಒಬ್ಬರೇ ಆಡಿ ಪಂದ್ಯವನ್ನು ಗೆಲ್ಲಿಸುವುದು ಕಷ್ಟ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಸಹ ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್​, “ದೇಶೀಯ ಕ್ರಿಕೆಟ್ ಆಡುವುದು ಬಹಳ ಮುಖ್ಯ. ನಾವು ಮುಖ್ಯವಾಗಿ ಟೆಸ್ಟ್ ಮತ್ತು ಏಕದಿನ ಸರಣಿಗೆ ದೇಶೀಯ ಕ್ರಿಕೆಟ್​ ಪ್ರದರ್ಶನ ನೋಡಿ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ದೇಶೀಯ ಕ್ರಿಕೆಟ್, ಭಾರತೀಯ ಕ್ರಿಕೇಟ್‌ನ ಬೆನ್ನೆಲುಬು” ಎಂದು ಹೇಳಿದ್ದಾರೆ.

Continue Reading

ದೇಶ

Vinesh Phogat: ವಿನೇಶ್‌ ಪೋಗಟ್‌ ಅನರ್ಹತೆ ಬಗ್ಗೆ ಹಗುರವಾಗಿ ಮಾತ್ನಾಡಿದ್ರಾ ಸುಧಾ ಮೂರ್ತಿ?

Paris Olympics 2024: ದೇಶದ ಗಮನ ಸೆಳೆದಿರುವ ವಿನೇಶ್‌ ಪೋಗಟ್‌ ಅನರ್ಹತೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಧಾ, ಇಂತಹದ್ದ ವಿಚಾರಗಳು ನಡೆಯುತ್ತಿರುತ್ತವೆ. ಏನು ಮಾಡೋಕೆ ಆಗುತ್ತದೆ? ಇದು ಆಟದ ಒಂದು ಭಾಗ. ಈ ಬಗ್ಗೆ ಬೇಸರವಿದೆ. ಅಷ್ಟು ಮಾತ್ರ ಹೇಳಲು ಸಾಧ್ಯ ಎಂದು ಹೇಳಿದ್ದಾರೆ. ಸುಧಾಮೂರ್ತಿಯವರ ಈ ಪ್ರತಿಕ್ರಿಯೆ ಬಗ್ಗೆ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಸುಧಾ ಮೂರ್ತಿಯವರು ಇಷ್ಟು ದೊಡ್ಡ ವಿಚಾರದ ಬಗ್ಗೆ ಹಗುರವಾಗಿ ಪ್ರತಿಕ್ರಿಯಿಸಿರುವುದು ಸರಿಯಲ್ಲ ಎಂದು ಕೆಲವರು ಟೀಕಿಸಿದ್ದಾರೆ.

VISTARANEWS.COM


on

vinesh phogat
Koo

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌(Paris Olympics 2024)ನ 50 ಕಿಲೋ ತೂಕದ ಮಹಿಳೆಯರ ಕುಸ್ತಿ ವಿಭಾಗದಲ್ಲಿ 100 ಗ್ರಾಂ ಹೆಚ್ಚಿನ ತೂಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಬಗ್ಗೆ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ(Sudha Murthy) ನೀಡಿರುವ ಪ್ರತಿಕ್ರಿಯೆ ಇದೀಗ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ.

ದೇಶದ ಗಮನ ಸೆಳೆದಿರುವ ವಿನೇಶ್‌ ಪೋಗಟ್‌ ಅನರ್ಹತೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಧಾ, ಇಂತಹದ್ದ ವಿಚಾರಗಳು ನಡೆಯುತ್ತಿರುತ್ತವೆ. ಏನು ಮಾಡೋಕೆ ಆಗುತ್ತದೆ? ಇದು ಆಟದ ಒಂದು ಭಾಗ. ಈ ಬಗ್ಗೆ ಬೇಸರವಿದೆ. ಅಷ್ಟು ಮಾತ್ರ ಹೇಳಲು ಸಾಧ್ಯ ಎಂದು ಹೇಳಿದ್ದಾರೆ. ಸುಧಾಮೂರ್ತಿಯವರ ಈ ಪ್ರತಿಕ್ರಿಯೆ ಬಗ್ಗೆ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಸುಧಾ ಮೂರ್ತಿಯವರು ಇಷ್ಟು ದೊಡ್ಡ ವಿಚಾರದ ಬಗ್ಗೆ ಹಗುರವಾಗಿ ಪ್ರತಿಕ್ರಿಯಿಸಿರುವುದು ಸರಿಯಲ್ಲ ಎಂದು ಕೆಲವರು ಟೀಕಿಸಿದ್ದಾರೆ.

ಸರಳತೆಯ ಪರಮಾವಧಿ ಇದು ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದು, ವಿನೇಶ್‌ ಅನರ್ಹತೆ ವಿಚಾರ ತಿಳಿದು ಕೋಟ್ಯಂತರ ಭಾರತೀಯರ ಹೃದಯ ಒಡೆದು ನುಚ್ಚುನೂರಾಗಿದೆ. ಇದೀಗ ಸುಧಾ ಮೂರ್ತಿಯವರು ಆ ಗಾಯ ಮೇಲೆ ಉಪ್ಪು ಸವರುತ್ತಿದ್ದಾರೆ ಎಂದು ಮತ್ತೊರ್ವ ಕಿಡಿಕಾರಿದ್ದಾನೆ. ಸುಧಾ ಮೂರ್ತಿಯವರ ಹೇಳಿಕೆ ಸರಿಯಾಗಿದೆ. ಬಹಳ ಪ್ರ್ಯಾಕ್ಟಿಕಲ್‌ ರೀತಿಯಲ್ಲಿ ಸತ್ಯ ಹೇಳುತ್ತಿದ್ದಾರೆ ಎಂದು ಇನ್ನೊರ್ವ ನೆಟ್ಟಿಗ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನ 50 ಕಿಲೋ ತೂಕದ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್‌ಗೂ ಮುನ್ನ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಬುಧವಾರ ಸಂಜೆ ನಡೆಯಲಿದ್ದ ಫೈನಲ್‌ ಪಂದ್ಯಕ್ಕೂ ಮುನ್ನ ಬೆಳಿಗ್ಗೆ 100 ಗ್ರಾಂ ಹೆಚ್ಚಿನ ತೂಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಯಿತು.ಪ್ಯಾರಿಸ್ ಒಲಿಂಪಿಕ್ಸ್‌ನ 50 ಕಿಲೋ ತೂಕದ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್‌ಗೂ ಮುನ್ನ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಬುಧವಾರ ಸಂಜೆ ನಡೆಯಲಿದ್ದ ಫೈನಲ್‌ ಪಂದ್ಯಕ್ಕೂ ಮುನ್ನ ಬೆಳಿಗ್ಗೆ 100 ಗ್ರಾಂ ಹೆಚ್ಚಿನ ತೂಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಯಿತು.

ಒಲಿಂಪಿಕ್ಸ್‌ನಲ್ಲಿ 50 ಕಿಲೋ ತೂಕದ ವಿಭಾಗದಲ್ಲಿ ಸ್ಪರ್ಧಿಸಲು ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಪಟು ವಿನೇಶ್‌ ಫೋಗಟ್‌ ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಗುರುವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯ ಮ ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ಅವರು ಕುಸ್ತಿಯಿಂದ ನಿವೃತ್ತಿ (retirement) ಘೋಷಿಸಿದರು. “ಕುಸ್ತಿ ನನ್ನ ವಿರುದ್ಧ ಪಂದ್ಯವನ್ನು ಗೆದ್ದಿದೆ. ನಾನು ಸೋತೆ.. ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಛಿದ್ರವಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರಿಗೂ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ. ಕ್ಷಮಿಸಿ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:Vinesh Phogat: ವಿನೇಶ್​ಗೆ 1.5 ಕೋಟಿ ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ

Continue Reading

ಕ್ರೀಡೆ

Swapnil Kusale: ತವರಿಗೆ ಮರಳಿದ ಸ್ವಪ್ನಿಲ್​ ಕುಸಾಲೆ; ಮುಂಬೈಯಲ್ಲಿ ಭರ್ಜರಿ ಸ್ವಾಗತ

Swapnil Kusale: 28 ವರ್ಷದ ಸ್ವಪ್ನಿಲ್ ಕುಸಾಲೆ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್​ ಅವರ ಅಪಟ್ಟ ಅಭಿಮಾನಿ. ಜತೆಗೆ ಧೋನಿಯಂತೆಯೇ ಇವರು ಕೂಡ ರೇಲ್ವೆ ಟಿಕೆಟ್ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು.

VISTARANEWS.COM


on

Swapnil Kusale
Koo

ಮುಂಬಯಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(paris olympics 2024) ಪುರುಷರ 50 ಮೀ. ರೈಫಲ್​ 3 ಪೊಸಿಷನ್​ ಶೂಟಿಂಗ್​ನಲ್ಲಿ ಕಂಚಿನ ಪದಕ ಗೆದ್ದ ಮಹಾರಾಷ್ಟ್ರದ 28 ವರ್ಷದ ಸ್ವಪ್ನಿಲ್​ ಕುಸಾಲೆ(Swapnil Kusale) ಅವರು ಇಂದು(ಗುರುವಾರ) ತವರಿಗೆ ಮರಳಿದ್ದಾರೆ. ಮುಂಬಯಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಹಾರ ಮತ್ತು ಗುಲಾಬಿ ದಳಗಳ ಅಭಿಷೇಕದೊಂದಿಗೆ ಕ್ರೀಡಾಪ್ರೇಮಿಗಳು ಭರ್ಜರಿಯಾಗಿ ಸ್ವಾಗತ ಕೋರಿದರು. ತೆರೆದ ಕಾರಿನ ಮೂಲಕ ಮೆರವಣಿಗೆ ಮಾಡಿ ಸಂಭ್ರಮಿಸಲಾಯಿತು. ಹಲವು ಕ್ರೀಡಾಭಿಮಾನಿಗಳು ಸೆಲ್ಫಿ ತೆಗೆಯಲು ನೂಕು ನುಗ್ಗಲು ಮಾಡುತ್ತಿರುವುದು ಕೂಡ ಕಂಡು ಬಂತು.

ಕೊಲ್ಹಾಪುರ ಜಿಲ್ಲೆಯ ಕಂಬಲ ವಾಡಿಯವರಾದ ಸ್ವಪ್ನಿಲ್​ಗೆ ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ(Eknath Shinde) 1 ಕೋಟಿ ಬಹುಮಾನ ಪ್ರಕಟಿಸಿದ್ದಾರೆ. 2009ರಲ್ಲಿ ಮಹಾರಾಷ್ಟ್ರದ ಕ್ರೀಡಾ ಪ್ರಭೋದಿನಿ ಯೋಜನೆಯಡಿ ಕ್ರೀಡಾ ತರಬೇತಿಗೆ ಆಯ್ಕೆಯಾಗಿದ್ದರು.

ಕಂಚಿನ ಪದಕ ಗೆಲ್ಲುವ ಮೂಲಕ ಸ್ವಪ್ನಿಲ್ ಒಲಿಂಪಿಕ್ಸ್​ನಲ್ಲಿ ಪುರುಷರ 50 ಮೀ. ರೈಫಲ್​ 3 ಪೊಸಿಷನ್​ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಹಾಗೂ 3ನೇ ರೈಫಲ್​ ಶೂಟರ್​ ಎಂಬ ಇತಿಹಾಸ ನಿರ್ಮಿಸಿದ್ದರು. ಫೈನಲ್​ ಸ್ಪರ್ಧೆಯಲ್ಲಿ ಅವರು ಒಟ್ಟು 451.4 ಅಂಕ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಸ್ವಪ್ನಿಲ್​ ಕುಸಾಲೆಗೆ ಮಹರಾಷ್ಟ್ರ ಸರ್ಕಾರದ ಬಹುಮಾನ ಮೊತ್ತದ ಹೊರತಾಗಿಯೂ ಕೇಂದ್ರ ಸರ್ಕಾರದಿಂದ 30 ಲಕ್ಷ ರೂ. ಮತ್ತು ಭಾರತೀಯ ಒಲಿಂಪಿಕ್ಸ್​ ಸಂಸ್ಥೆಯಿಂದ 50 ಲಕ್ಷ ರೂ. ಬಹುಮಾನ ಸಿಗಲಿದೆ.

ಇದನ್ನೂ ಓದಿ Paris Olympics: ಒಲಿಂಪಿಕ್ಸ್​ನಲ್ಲಿಯೂ ಸದ್ದು ಮಾಡಿದ ‘​ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು; ವಿಡಿಯೊ ವೈರಲ್​

28 ವರ್ಷದ ಸ್ವಪ್ನಿಲ್ ಕುಸಾಲೆ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್​ ಅವರ ಅಪಟ್ಟ ಅಭಿಮಾನಿ. ಜತೆಗೆ ಧೋನಿಯಂತೆಯೇ ಇವರು ಕೂಡ ರೇಲ್ವೆ ಟಿಕೆಟ್ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಧೋನಿಯವರ ಬಯೋಪಿಕ್ ಸಿನೆಮಾವನ್ನು ಪದೇ ಪದೇ ವೀಕ್ಷಿಸಿದ ಬಳಿಕ ಸ್ವಪ್ನಿಲ್ ಕೂಡ ಪೂರ್ಣಪ್ರಮಾಣದಲ್ಲಿ ಶೂಟಿಂಗ್‌ನಲ್ಲಿ ತೊಡಗಿಕೊಂಡರು. ಧೋನಿಯವರಂತೆ ಶಾಂತ ಸ್ವಾಭಾವದ ಈ ಶೂಟರ್​ ಇದೀಗ ಒಲಿಂಪಿಕ್ಸ್‌ ಪದಕವೊಂದನ್ನು ಗೆದ್ದು ಇತಿಹಾಸದ ಪುಟ ಸೇರಿದ್ದಾರೆ. 2015ರ ಕುವೈತ್​ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ ಜೂನಿಯರ್‌ ವಿಭಾಗದಲ್ಲಿ ಚಿನ್ನ, 59ನೇ ಹಾಗೂ 61ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. 

ಬುಧವಾರವಷ್ಟೇ ಪ್ಯಾರಿಸ್​ ಒಲಿಂಪಿಕ್ಸ್(paris olympics)​ ಅವಳಿ ಕಂಚಿನ ಪದಕ ವಿಜೇತೆ, ಶೂಟರ್​ ಮನು ಭಾಕರ್(Manu Bhaker)​ ತವರಿಗೆ ಮರಳಿದ್ದರು. ನವದೆಹಲಿಗೆ ಬಂದಿಳಿದಿದ್ದ ಅವರಿಗೂ ಭರ್ಜರಿ ಸ್ವಾಗತ ಕೋರಲಾಗಿತ್ತು. 22 ವರ್ಷದ ಮನು ಭಾಕರ್ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತು ಸರಬ್ಜೋತ್ ಸಿಂಗ್ ಜತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲೂ ಕಂಚಿನ ಪದಕ ಜಯಿಸಿದ್ದರು.

Continue Reading
Advertisement
Paris Olympics
ಕ್ರೀಡೆ29 seconds ago

Paris Olympics: ಭರ್ಜರಿ ಗೆಲುವಿನೊಂದಿಗೆ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಅಮನ್ ಸೆಹ್ರಾವತ್

Shobha Karandlaje
ದೇಶ13 mins ago

Shobha Karandlaje: ತಮಿಳಿಗರಿಗೆ ಅವಮಾನ- ಕ್ಷಮೆಯಾಚಿಸಿದರೆ ಕೇಸ್‌ ರದ್ದು; ಹೈಕೋರ್ಟ್‌ನಲ್ಲಿ ಎಜಿ ಮಾಹಿತಿ

Dog bite
ಬೆಂಗಳೂರು15 mins ago

Dog Bite : ಬೀದಿ ನಾಯಿಗಳ ಕಾಟಕ್ಕೆ ಮನೆ ಮಾರಾಟಕ್ಕೆ ಮುಂದಾದ ಜನ್ರು!

International Cat Day
ಪರಿಸರ31 mins ago

International Cat Day: ಇಂದು ಬೆಕ್ಕಿನ ದಿನ; ಇದರ ಆಯುಷ್ಯ, ನಿದ್ದೆ, ಶೃಂಗಾರ ಇತ್ಯಾದಿ ಸಂಗತಿಗಳು ಕುತೂಹಲಕರ!

Gautam Gambhir
ಕ್ರೀಡೆ42 mins ago

Gautam Gambhir: 27 ವರ್ಷದ ಬಳಿಕ ಲಂಕಾ ವಿರುದ್ಧ ಸೋಲು; ಗಂಭೀರ್​ ಫುಲ್​ ಟ್ರೋಲ್​

rave party telugu actress hema
ಕ್ರೈಂ47 mins ago

Rave Party: ರೇವ್‌ ಪಾರ್ಟಿಯಲ್ಲಿ ಭಾಗವಹಿಸಿದ 85 ಜನರ ಮೇಲೆ ಚಾರ್ಜ್‌ಶೀಟ್, ಸುಳ್ಳು ಹೇಳಿದ ನಟಿ ಹೇಮಾ ಮೇಲೂ ಚಾರ್ಜ್

Divorce Case
Latest51 mins ago

Divorce Case: ಪ್ರತಿ ಬಾರಿ ʼಸರಸʼ ಆಡಿದಾಗಲೂ ಕಾಸು ಕೊಡಲೇಬೇಕು! ಹೆಂಡತಿಯ ಡಿಮ್ಯಾಂಡ್‌ ಕೇಳಿ ಡಿವೋರ್ಸ್‌ ಪಡೆದ ಗಂಡ!

Maravoor bridge in danger Vehicular traffic suspended
ದಕ್ಷಿಣ ಕನ್ನಡ56 mins ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Naga Chaitanya Sobhita Love Story REVEALED age gap
ಟಾಲಿವುಡ್1 hour ago

Naga Chaitanya: ನಾಗ ಚೈತನ್ಯ- ಶೋಭಿತಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ಇಬ್ಬರ ನಡುವಿನ ಏಜ್ ಗ್ಯಾಪ್ ಎಷ್ಟು?

Murder Case
Latest1 hour ago

Murder Case: ಒಂದೇ ಹುಡುಗಿಯನ್ನು ಪ್ರೀತಿಸಿದ ಸಹೋದರರು; ಈ ತ್ರಿಕೋನ ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌