Detective Agency: ಡಿಟೆಕ್ಟಿವ್‌ ಏಜೆನ್ಸಿಗಳಿಗೆ ಅನಧಿಕೃತವಾಗಿ ಸಿಡಿಆರ್‌ ನೀಡುತ್ತಿದ್ದ ಕಾನ್ಸ್‌ಟೇಬಲ್‌ ಅರೆಸ್ಟ್‌ - Vistara News

ಬೆಂಗಳೂರು

Detective Agency: ಡಿಟೆಕ್ಟಿವ್‌ ಏಜೆನ್ಸಿಗಳಿಗೆ ಅನಧಿಕೃತವಾಗಿ ಸಿಡಿಆರ್‌ ನೀಡುತ್ತಿದ್ದ ಕಾನ್ಸ್‌ಟೇಬಲ್‌ ಅರೆಸ್ಟ್‌

Detective Agency: ಅನಧಿಕೃತವಾಗಿ ಸಿಡಿಆರ್ ನೀಡುತ್ತಿದ್ದ ಕಾನ್ಸ್‌ಟೇಬಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಕೆಲವು ಪೊಲೀಸ್ ಅಧಿಕಾರಿಗಳ ಪತ್ನಿಯರು ಕೂಡ ಸಿಡಿಆರ್ ಪಡೆದಿರುವುದು ಪತ್ತೆಯಾಗಿದೆ.

VISTARANEWS.COM


on

Detective Agency
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಡಿಟೆಕ್ಟಿವ್‌ ಏಜೆನ್ಸಿಗಳಿಗೆ (Detective Agency) ಅನಧಿಕೃತವಾಗಿ ಸಿಡಿಆರ್ ನೀಡುತ್ತಿದ್ದ ಕಾನ್ಸ್‌ಟೇಬಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುನಿರತ್ನ ಬಂಧಿತ ಪೊಲೀಸ್‌ ಸಿಬ್ಬಂದಿ.

ಸಿಸಿಬಿ ಪೊಲೀಸರು ಕಳೆದ ಮೇ ತಿಂಗಳಲ್ಲಿ ಡಿಟೆಕ್ಟಿವ್‌ ಏಜೆನ್ಸಿಗಳ ಮೇಲೆ ದಾಳಿ ಮಾಡಿ ಕೆಲವರನ್ನು ಬಂಧನ ಮಾಡಿದ್ದರು. ಈ ಸಂಬಂಧ ಮೂರು ಪ್ರಕರಣಗಳು ದಾಖಲಿಸಿದ್ದರು. ಇದರ ಸಂಬಂಧ ತನಿಖೆ ಮುಂದುವರೆಸಿದ್ದ ಸಿಸಿಬಿ ಪೊಲೀಸರು, ಸಿಐಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾನ್ಸಟೇಬಲ್ ಮುನಿರತ್ನ ಈ ಡಿಟೆಕ್ವಿವ್‌ ಏಜೆನ್ಸಿಗಳಿಗೆ ಸಿಡಿಆರ್‌ ನೀಡುತ್ತಿದ್ದ.

ಅಕ್ರಮ ಸಿಡಿಆರ್ ಪಡೆಯುತ್ತಿದ್ದ ನಾಗೇಶ್ವರ್ ರೆಡ್ಡಿ ಹಾಗೂ ಮಾಹಿತಿ ಸೋರಿಕೆ ಮಾಡುತ್ತಿದ್ದ ಮುನಿರತ್ನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮುನಿರತ್ನ ಅಧಿಕೃತ ಪ್ರಕರಣಗಳ ಜತೆ ಡಿಟೆಕ್ವಿವ್‌ ಏಜೆನ್ಸಿ ಅವರು ನೀಡುತ್ತಿದ್ದ ನಂಬರ್ ಸೇರಿಸಿ ಕೊಡುತ್ತಿದ್ದ.

Detective agence

ಮುನಿರತ್ನ ಸಿಐಡಿ ಟೆಕ್ನಿಕಲ್ ಸೆಲ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಕೆಲವು ಪೊಲೀಸ್ ಅಧಿಕಾರಿಗಳ ಪತ್ನಿಯರು ಸಿಡಿಆರ್ ಪಡೆದಿರುವುದು ಪತ್ತೆಯಾಗಿದೆ. ತಮ್ಮ ಪತಿಯ ಸಿಡಿಆರ್‌ ಅನ್ನು ಡಿಟೆಕ್ಟಿವ್‌ ಏಜೆನ್ಸಿಗಳ ಮೂಲಕ ಪಡೆದಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Assault Case : ಕಾರು ಚಾಲಕನ ಮುಖಕ್ಕೆ‌ ಉಗಿದು, ಗೂಂಡಾಗಿರಿ ಮಾಡಿದ ಆಟೋ ಡೈವರ್‌

ಸ್ಕೂಟರ್‌ನಲ್ಲಿ ಬರುತ್ತಿದ್ದ ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸ್‌ ಪೇದೆ!

ತುಮಕೂರು: ಜಿಲ್ಲೆಯ ಪೊಲೀಸ್‌ ಪೇದೆಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಸಿನೀಮಿಯ ಶೈಲಿಯಲ್ಲಿ ಕಳ್ಳನೊಬ್ಬನನ್ನು ಹಿಡಿದಿರುವ ಘಟನೆ (Police Raid) ನಡೆದಿದ್ದು, ಕಳ್ಳನನ್ನು ಹಿಡಿಯುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್ ಕಾನ್‌ಸ್ಟೇಬಲ್ ಕರ್ತವ್ಯ ನಿಷ್ಠೆಗೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮಂಜೇಶ್@420 ಮಂಜ @ಹೊಟ್ಟೆ ಮಂಜ ಪೊಲೀಸ್ ಕೈಗೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ. ಕೊರಟಗೆರೆ ಪೊಲೀಸ್ ಠಾಣೆಯ ಪೇದೆ ದೊಡ್ಡಲಿಂಗಯ್ಯ ಕಳ್ಳನನ್ನು ಹಿಡಿದವರು. ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ 420 ಮಂಜನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯ ಸಿಗ್ನಲ್ ಬಳಿ ಪೇದೆ ಸೆರೆ ಹಿಡಿದಿದ್ದಾರೆ.

ಕಳ್ಳ ಮಂಜ ಮತ್ತು ಪೊಲೀಸ್‌ ಪೇದೆ ದೊಡ್ಡಲಿಂಗಯ್ಯ

ಸಿಗ್ನಲ್‌ನಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಕಳ್ಳನನ್ನು ಪೇದೆ ಅಡ್ಡಗಟ್ಟಿದ್ದಾರೆ. ಆದರೂ ಅವರನ್ನು ಎಳೆದುಕೊಂಡು ಕಳ್ಳ ಮುಂದೆ ಸಾಗಿದ್ದಾನೆ. ಪಟ್ಟು ಬಿಡದ ಪೊಲೀಸ್‌, ಕಳ್ಳನನ್ನು ಬೆನ್ನಟ್ಟಿ ಕಾಲನ್ನು ಹಿಡಿದು ನೆಲಕ್ಕೆ ಬೀಳಿಸಿದ್ದಾರೆ. ಬಳಿಕ ಅಲ್ಲಿದ್ದ ಟ್ರಾಫಿಕ್‌ ಪೊಲೀಸರು ಕಳ್ಳನನ್ನು ಹಿಡಿಯಲು ನೆರವಾಗಿದ್ದಾರೆ. ನಂತರ ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿ ಕಳ್ಳನಿಗೆ ಹಿಗ್ಗಾಮುಗ್ಗಾ ಬಾರಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಖತರ್ನಾಕ್ ಕಳ್ಳನಿಗೆ ಚಿನ್ನದ ಸರ ಹಾಕಿರುವ ವೃದ್ಧೆಯರೇ ಟಾರ್ಗೆಟ್. ವೃದ್ಧೆಯರನ್ನೇ ಟಾರ್ಗೆಟ್ ಮಾಡಿ, ಪಿಂಚಣಿ, ಸರ್ಕಾರದ ಸವಲತ್ತು ಕೊಡಿಸುತ್ತೇನೆಂದು ನಂಬಿಸಿ, ಚಿನ್ನದ ಸರ ಕದ್ದು ಖತರ್ನಾಕ್ ಮಂಜ ಪರಾರಿಯಾಗುತ್ತಿದ್ದ. ಈತನ ವಿರುದ್ಧ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಹೆಬ್ಬೂರು ಪೊಲೀಸ್ ಠಾಣೆ ಸೇರಿ ಸುಮಾರು 10ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿದ್ದವು.

ಸುಮಾರು 1 ತಿಂಗಳಿಂದ ಪೊಲೀಸರ ಕೈಗೆ ಸಿಗದೇ ಕಣ್ತಪ್ಪಿಸಿ ಓಡಾಡುತ್ತಿದ್ದ 420 ಮಂಜ, ಬೆಂಗಳೂರಿನ ಮತ್ತಿಕೆರೆ ಕಡೆಯಿಂದ ಸದಾಶಿವನಗರ ಪೊಲೀಸ್ ಠಾಣೆ ಕಡೆಗೆ, ಬಿಳಿ ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ಬರುತ್ತಿರುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದರು. ಸದಾಶಿವನಗರ ಠಾಣೆ ಸಿಗ್ನಲ್ ಬಳಿ 420 ಮಂಜನನ್ನು ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ದೊಡ್ಡಲಿಂಗಯ್ಯ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಳ್ಳನನ್ನ ಹಿಡಿದಿದ್ದಾರೆ.

ಸದ್ಯ ಖತರ್ನಾಕ್ ಕಳ್ಳ 420 ಮಂಜನನ್ನು ಬಂಧಿಸಿ ಕೊರಟಗೆರೆ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

CM Siddaramaiah: ಮೋದಿ ಸರ್ಕಾರದ ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಸಿದ್ದರಾಮಯ್ಯ ವಿರೋಧ

CM Siddaramaiah: ವಕ್ಫ್ ಬೋರ್ಡ್ ಕಾನೂನು ಆ ಸಮುದಾಯದ ವೈಯಕ್ತಿಕ ಕಾನೂನಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವುದು ಸಂವಿಧಾನಬಾಹಿರ. ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟವು ಕೇಂದ್ರದ ಈ ನಿಲುವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಜೆಪಿ ಹಾಗೂ ಎನ್‌ಡಿಎಯವರಿಗೆ ಅಲ್ಪಸಂಖ್ಯಾತರ ಮೇಲೆ ಕೋಪವಿರುವಂತಿದೆ. ಬಿಜೆಪಿಯವರು ಎಂದಿಗೂ ಜಾತ್ಯತೀತತೆ, ಸಾಮಾಜಿಕ ನ್ಯಾಯದ ಪರವಾಗಿ ನಿಂತವರಲ್ಲ. ಬಿಜೆಪಿ ಮೊದಲಿನಿಂದಲೂ ಕೋಮುವಾದಿ ಪಕ್ಷವಾಗಿಯೇ ಗುರುತಿಸಿಕೊಂಡಿದ್ದು, ಜಾತ್ಯತೀತ ತತ್ವವನ್ನು ನಂಬುವುದಿಲ್ಲ ಎಂದರು.

VISTARANEWS.COM


on

CM Siddaramaiah
Koo

ಮೈಸೂರು: ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರದ ಕ್ರಮವನ್ನು ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಗುರುವಾರ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ತಿದ್ದುಪಡಿ ಬಿಲ್ ತರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಇದನ್ನೂ ಓದಿ: Lalbagh Flower Show: ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ದೊರೆಯಬೇಕು; ಸಿದ್ದರಾಮಯ್ಯ

ಬಿಜೆಪಿ ಹಾಗೂ ಎನ್‌ಡಿಎಯವರಿಗೆ ಅಲ್ಪಸಂಖ್ಯಾತರ ಮೇಲೆ ಕೋಪವಿರುವಂತಿದೆ. ಬಿಜೆಪಿಯವರು ಎಂದಿಗೂ ಜಾತ್ಯತೀತತೆ, ಸಾಮಾಜಿಕ ನ್ಯಾಯದ ಪರವಾಗಿ ನಿಂತವರಲ್ಲ. ಬಿಜೆಪಿ ಮೊದಲಿನಿಂದಲೂ ಕೋಮುವಾದಿ ಪಕ್ಷವಾಗಿಯೇ ಗುರುತಿಸಿಕೊಂಡಿದ್ದು, ಜಾತ್ಯತೀತ ತತ್ವವನ್ನು ನಂಬುವುದಿಲ್ಲ. ಮತಾಂತರ ನಿಷೇಧ ಕಾನೂನು, ಗೋಹತ್ಯೆ ತಿದ್ದುಪಡಿಗಳನ್ನು ಜಾರಿಗೆ ತಂದ ಬಿಜೆಪಿಯವರು ಇಂದು ವಕ್ಫ್‌ ಬೋರ್ಡ್ ತಿದ್ದುಪಡಿ ಪ್ರಯತ್ನಕ್ಕೂ ಕೈಹಾಕಿದ್ದಾರೆ. ವಕ್ಫ್ ಬೋರ್ಡ್ ಕಾನೂನು ಆ ಸಮುದಾಯದ ವೈಯಕ್ತಿಕ ಕಾನೂನಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವುದು ಸಂವಿಧಾನ ಬಾಹಿರ. ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟ, ಕೇಂದ್ರದ ಈ ನಿಲುವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದರು.

ಇದನ್ನೂ ಓದಿ: Thangalaan Movie: ಬಹುನಿರೀಕ್ಷಿತ ʼತಂಗಲಾನ್‍ʼ ಚಿತ್ರಕ್ಕೆ ʼಕಾಂತಾರʼ ಸ್ಫೂರ್ತಿ ಎಂದ ಚಿಯಾನ್‌ ವಿಕ್ರಮ್‌!

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಆರ್‌ಟಿಐ ಕಾರ್ಯಕರ್ತರು ಮುಖ್ಯಮಂತ್ರಿಗಳ ವಿರುದ್ದ ದೂರು ದಾಖಲಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಸುಳ್ಳು ಕೇಸುಗಳನ್ನು ದಾಖಲಿಸಿದರೆ, ಅವು ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Continue Reading

ನೋಟಿಸ್ ಬೋರ್ಡ್

KPSC Exam: ಆ.25ರಂದು 384 ಗೆಜೆಟೆಡ್‌ ಹುದ್ದೆಗಳ ನೇಮಕಾತಿಗಾಗಿ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

KPSC Exam: ಆಗಸ್ಟ್‌ 25ರಂದು ಕೆಪಿಎಸ್‌ಸಿಯ ಗೆಜೆಟೆಡ್‌ ಹುದ್ದೆಗಳ ನೇಮಕಾತಿಗಾಗಿ ನಡೆಯಬೇಕಿದ್ದ ಪರೀಕ್ಷೆಯನ್ನೂ ಮುಂದೂಡಲಾಗಿದೆ. ಐ.ಬಿ.ಪಿ.ಎಸ್. ಪರೀಕ್ಷೆ ನಿಗದಿಯಾಗಿರುವುದರಿಂದ 25ರ ಬದಲಿಗೆ 27ಕ್ಕೆ ಪರೀಕ್ಷೆ ನಡೆಸಲು ಆಯೋಗ ತೀರ್ಮಾನಿಸಿದೆ.

VISTARANEWS.COM


on

By

KPSC Exam
Koo

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC Exam) 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗಾಗಿ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್‌ 25ರಂದು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ಆ ದಿನದಂದು ಐ.ಬಿ.ಪಿ.ಎಸ್. ಪರೀಕ್ಷೆ ನಿಗದಿಯಾಗಿದೆ.

ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚಿಸಿದ್ದಾರೆ. ಪೂರ್ವಭಾವಿ ಪರೀಕ್ಷೆಗೆ ಆಯೋಗವು ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೀಗಾಗಿ ಹೆಚ್ಚಿನ ಕಾಲಾವಕಾಶ ನೀಡದೆ, ಬೇರೆ ಪರೀಕ್ಷೆಗಳೊಂದಿಗೆ Overlap ಆಗದಂತೆ ಅಲ್ಪಕಾಲ ಮುಂದೂಡಲು ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಆಗಸ್ಟ್‌ 25ರ ಬದಲು 27ರಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸಲು ಮರುನಿಗದಿಪಡಿಸಲು ಆಯೋಗವು ತೀರ್ಮಾನಿಸಿದೆ. ಅಭ್ಯರ್ಥಿಗಳು ಆಗಸ್ಟ್‌ 15ರ ನಂತರ ಪ್ರವೇಶ ಪತ್ರವನ್ನು ಆಯೋಗದ ಅಂತರ್ಜಾಲದಿಂದ ಡೌನ್‌ ಲೋಡ್ ಮಾಡಿಕೊಳ್ಳಬಹುದು. ಉಳಿದಂತೆ ಯಾವುದೇ ರೀತಿಯ ಬದಲಾವಣೆಗಳು ಇರುವುದಿಲ್ಲ ಎಂದು ಆಯೋಗ ತಿಳಿಸಿದೆ.

ಮುಂದುವರೆಸುತ್ತಾ, ದಿನಾಂಕ:27-08-2024 ಕಾರ್ಯ ನಿರ್ವಹಣಾ (working day) ದಿನವಾಗಿರುವುದರಿಂದ ಈಗಾಗಲೇ ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾದ ರಾಜ್ಯದ ಎಲ್ಲಾ ಜಿಲ್ಲೆಗಳ ಪರೀಕ್ಷಾ ಉಪಕೇಂದ್ರಗಳಿಗೆ ವಿಶೇಷ/ಸಾರ್ವತ್ರಿಕ ರಜೆಯನ್ನು ಘೋಷಿಸಲು ಹಾಗೂ ಸದರಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರದ ಸೇವಾನಿರತ ಅಭ್ಯರ್ಥಿಗಳಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: Job Vacancies: ಸಾವಿರ ಮಹಿಳಾ ಪೊಲೀಸ್ ಕಾನ್‌‌ಸ್ಟೇಬಲ್ ಹುದ್ದೆಗಳಿಗೆ ಲಕ್ಷಕ್ಕೂ ಹೆಚ್ಚು ಅರ್ಜಿ! ಫುಟ್‌‌ಪಾತ್‌‌ನಲ್ಲೇ ಮಲಗಿದ್ದ ಮಹಿಳಾ ಅಭ್ಯರ್ಥಿಗಳು

ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿದೆ 55 ಹುದ್ದೆ; ಹೀಗೆ ಅಪ್ಲೈ ಮಾಡಿ

ಬೆಂಗಳೂರು: ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಲಿಮಿಟೆಡ್‌ (Tehri Hydro Development Corporation Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್‌, ಅಸಿಸ್ಟಂಟ್‌ ಮ್ಯಾನೇಜರ್‌, ಡೆಪ್ಯುಟಿ ಮ್ಯಾನೇಜರ್‌, ಸೀನಿಯರ್‌ ಮ್ಯಾನೇಜರ್‌ ಮತ್ತು ಸೀನಿಯರ್‌ ಮೆಡಿಕಲ್‌ ಆಫೀಸರ್‌ ಸೇರಿ ಒಟ್ಟು 55 ಹುದ್ದೆಗಳಿವೆ (THDC Recruitment 2024). ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಆಗಸ್ಟ್‌ 16 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಮ್ಯಾನೇಜರ್ 25 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂ.ಟೆಕ್‌, ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಮ್ಯಾನೇಜರ್ 19 ಹುದ್ದೆ, ವಿದ್ಯಾರ್ಹತೆ: ಪದವಿ, ಬಿಇ ಅಥವಾ ಬಿ.ಟೆಕ್‌, ಎಂ.ಟೆಕ್‌
ಡೆಪ್ಯುಟಿ ಮ್ಯಾನೇಜರ್ 3 ಹುದ್ದೆ, ವಿದ್ಯಾರ್ಹತೆ: ಪದವಿ
ಸೀನಿಯರ್ ಮ್ಯಾನೇಜರ್ 3 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂ.ಟೆಕ್‌
ಹಿರಿಯ ವೈದ್ಯಾಧಿಕಾರಿ 5 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್

ಗರಿಷ್ಠ ವಯೋಮಿತಿ

ಮ್ಯಾನೇಜರ್ 45 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್ 32 ವರ್ಷ
ಡೆಪ್ಯುಟಿ ಮ್ಯಾನೇಜರ್ 40 ವರ್ಷ
ಸೀನಿಯರ್ ಮ್ಯಾನೇಜರ್ 48 ವರ್ಷ
ಹಿರಿಯ ವೈದ್ಯಾಧಿಕಾರಿ 34 ವರ್ಷ

ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ (ಸಾಮಾನ್ಯ / ಇಡಬ್ಲ್ಯುಎಸ್‌) ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಬಿಡಿ (ಎಸ್‌ಸಿ / ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ / ಮಾಜಿ ಸೈನಿಕರು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್‌ ಅಭ್ಯರ್ಥಿಗಳು ಅರ್ಜಿ ಸುಲ್ಕವಾಗಿ ಆನ್‌ಲೈನ್‌ನಲ್ಲಿ 600 ರೂ. ಪಾವತಿಸಬೇಕು. ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

THDC Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಇಮೇಲ್‌, ಮೊಬೈಲ್‌ ನಂಬರ್‌ ಬಳಸಿ ಹೆಸರು ನಮೂದಿಸಿ.
  • ಇಲ್ಲಿ ಕಂಡುಬರುವ ಅಪ್ಲಿಕೇಷನ್‌ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಹೆಚ್ಚಿನ ವಿವರಗಳಿಗೆ, ವೆಬ್‌ಸೈಟ್‌ ವಿಳಾಸ: thdc.co.inಕ್ಕೆ ಭೇಟಿ ನೀಡಿ ಅಥವಾ thdcrecruitment@thdc.co.in ಇಮೇಲ್‌ಗೆ ಸಂಪರ್ಕಿಸಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Bengaluru Power Cut: ಆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Bengaluru Power Cut: ಬೆಂಗಳೂರು ನಗರದ 66/11 ಕೆ.ವಿ ʼಸಿʼ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಆ.10ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

VISTARANEWS.COM


on

Bengaluru Power Cut
Koo

ಬೆಂಗಳೂರು: ನಗರದ 66/11 ಕೆ.ವಿ ʼಸಿʼ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಆ.10ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Lalbagh Flower Show: ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ದೊರೆಯಬೇಕು; ಸಿದ್ದರಾಮಯ್ಯ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಬ್ರಾಡ್ ವೇ ರಸ್ತೆ, ಕಾಕ್‌ಬರ್ನ್‌ ರಸ್ತೆ, ಸ್ಟೇಷನ್ ರಸ್ತೆ, ಕ್ವೀನ್ಸ್ ರಸ್ತೆ, ಟೌನ್, ತಿಮ್ಮಯ್ಯ ರಸ್ತೆ, ಮಿಲ್ಲರ್ಸ್‌ ರಸ್ತೆ, ಸ್ಲಾಟರ್ ಹೌಸ್ ಮತ್ತು ಸುತ್ತಲಿನ ಪ್ರದೇಶ. ಕನ್ನಿಂಗ್ಹ್ಯಾಂ ರಸ್ತೆ, ಆಲಿ ಆಸ್ಕರ್ ರಸ್ತೆ, ಆಲಿ ಆಸ್ಕರ್ ರಸ್ತೆ ಕ್ರಾಸ್, ಚಿಕ್ಕ ಬಜಾರ್ ರಸ್ತೆ, ವೆಂಕಟಪ್ಪ ರಸ್ತೆ, ಮುನಿಸ್ವಾಮಿ ರಸ್ತೆ, ಪಾಯಪ್ಪ ಗಾರ್ಡನ್, ಸಿಮೆಂಟ್ರಿ ರಸ್ತೆ, ಪಾರ್ಕ್ ರಸ್ತೆ, ನಳ ರಸ್ತೆ, ನೋಹ ಸ್ಟ್ರೀಟ್, ಚಾಂದನಿ ಚೌಕ್, ಮಿಲ್ಲರ್ ಟ್ಯಾಂಕ್‌ಬಂಡ್ ರಸ್ತೆ, ಜಸ್ಮಾಭವನ ರಸ್ತೆ, ಸುಲ್ತಾನ್‌ಜಿಗುಂಟ ರಸ್ತೆ, ಹೇನ್ಸ್ ರಸ್ತೆ, ಬಂಬೂಬಜಾರ್, ಧನಕೋಟಿ ಲೇನ್ ಮತ್ತು ಸುತ್ತಲಿನ ಪ್ರದೇಶ. ನೆಹರುಪುರಂ, ಮುತ್ಯಾಲಮ್ಮ ಕೋಯಿಲ್ ಸ್ಟ್ರೀಟ್, ಮಕಾನ್ ಕಾಂಪೌOಡ್ ರಸ್ತೆ, ಎನ್.ಪಿ. ಸ್ಟ್ರೀಟ್, ಸೆಪ್ಪಿಂಗ್ಸ್ ರಸ್ತೆ, ಬ್ರಾಡ್ ಶಾ ಸ್ಟ್ರೀಟ್, ಹೇನ್ಸ್ ರಸ್ತೆ, ಪ್ಯಾಲೇಸ್ ಟಾಕೀಸ್, ಇವನಿಂಗ್ ಬಜಾರ್,

ಹೊಸ ಮಾರ್ಕೆಟ್ ರಸ್ತೆ, ಓ.ಪಿ.ಎಚ್. ರಸ್ತೆ, ಆರ್.ನಂ.2ನೇ ಸ್ಟ್ರೀಟ್, ಜೈನ್ ದೇವಸ್ಥಾನದ ರಸ್ತೆ, ಫೀಡಿಂಗ್ ಟು ಎಚ್.ಟಿ ಇನ್ಸ್ಟಾಲೇಷನ್ ಆರ್.ಎಂ.ಜಡ್. ಮಿಲ್ಲೇನಿಯ, ಎಕ್ಸ್‌ಪ್ರೆಸ್ ಫೀಡರ್ ಫೀಡಿಂಗ್ ಟು ಬೌರಿಂಗ್ ಹಾಸ್ಪಿಟಲ್, ಕನ್ನಾಟ್ ರಸ್ತೆ, ಕ್ವೀನ್ಸ್ ರಸ್ತೆ, ಎಡ್ವರ್ಡ್ ರಸ್ತೆ, ಚಿಕ್ಕ ಬಜಾರ್ ರಸ್ತೆ, ಕನ್ನಿಂಗ್ಹ್ಯಾಮ್ ರಸ್ತೆ ಕ್ರಾಸ್, ಇನ್ಫೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್, ವಿಶ್ವೇಶ್ವರಯ್ಯ ಟವರ್, ಪೊಲೀಸ್ ಕಮೀಷನರ್ ಆಫೀಸ್ ಕೆ.ಎಸ್.ಎಫ್.ಸಿ ಬಿಲ್ಡಿಂಗ್, ಯು.ಎನ್.ಐ., ಮಿಲ್ಲರ್ಸ್‌ ಟ್ಯಾಂಕ್ ರಸ್ತೆ, ಹಳೇ ಬಾಗಲೂರು ಲೇಔಟ್, ವಿಲಿಯ್ಸಂ ಟೌನ್, ಬಿದರಹಳ್ಳಿ, ಪಾಟರಿ ಟೌನ್, ಕಾಕ್ಸ್ ಟೌನ್, ಹೊಯ್ಸಳ ಅಪಾರ್ಟ್‌ಮೆಂಟ್, ಆರ್.ಬಿ.ಐ. ಕ್ವಾಟ್ರಸ್, ಕಾಂಗ್ರೆಸ್ ಆಫೀಸ್, ಹೇನ್ಸ್ ರಸ್ತೆ, ಎಲ್.ಎಚ್., ಬಿ.ಎಸ್.ಎನ್.ಎಲ್ ಎಂ.ಎಸ್. ಬಿಲ್ಡಿಂಗ್, ಕಾರ್ಪೊರೇಟ್ ಆಫೀಸ್, ಕೆ.ಪಿ.ಎಸ್.ಸಿ, ಸಿ.ಓ.ಡಿ, ಚೀಫ್ ಜಸ್ಟೀಸ್ ಹೌಸ್, ಮಿಲ್ಲರ್ಸ್‌ ರಸ್ತೆ, ವಸಂತನಗರ, ದಾಬಸ್‌ಪೇಟೆ, ಕಲ್ಲಹಳ್ಳಿ ಎಲ್ಲಾ ಬಿ.ಡಿ.ಎ ಕ್ವಾಟ್ರಸ್, ಎಂ.ಇ.ಜಿ. ಸೆಂಟರ್, ಕೆನ್ಸಿಂಗ್‌ಟನ್ ರಸ್ತೆ. ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: Sunita Williams: 2025ರವರೆಗೂ ಬಾಹ್ಯಾಕಾಶದಲ್ಲೇ ಇರಲಿದ್ದಾರೆ ಸುನೀತಾ ವಿಲಿಯಮ್ಸ್‌; ನಾಸಾ ಘೋಷಣೆ

ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading

ಕರ್ನಾಟಕ

Kannada New Movie: ಜಯ್ ಶೆಟ್ಟಿ ಅಭಿನಯದ ʼಸತ್ವಿʼ ಸಿನೆಮಾ ಪೋಸ್ಟರ್ ರಿಲೀಸ್‌

Kannada New Movie: ʼಸಂಭವಾಮಿ ಯುಗೇಯುಗೇʼ ಚಿತ್ರದ ನಾಯಕ ಜಯ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಜಯ್ ಶೆಟ್ಟಿ ನಾಯಕನಾಗಿ‌ ನಟಿಸುತ್ತಿರುವ “ಸತ್ವಿ” ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಮೂಲಕ ನಾಯಕನಿಗೆ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

VISTARANEWS.COM


on

Kannada New Movie
Koo

ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡ “ಸಂಭವಾಮಿ ಯುಗೇಯುಗೇ” ಚಿತ್ರದ ನಾಯಕ ಜಯ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಜಯ್ ಶೆಟ್ಟಿ ನಾಯಕನಾಗಿ‌ ನಟಿಸುತ್ತಿರುವ “ಸತ್ವಿ” ಚಿತ್ರದ (Kannada New Movie) ಪೋಸ್ಟರ್ ಬಿಡುಗಡೆಯಾಗಿದೆ. ಈ ಮೂಲಕ ನಾಯಕನಿಗೆ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ಡೇವಿಡ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು “ಸಂಭವಾಮಿ ಯುಗೇಯುಗೇ” ಸೇರಿದಂತೆ ಕನ್ನಡದ ಅನೇಕ ಚಿತ್ರಗಳಿಗೆ ಹಾಗೂ ಹಲವು ಖಾಸಗಿ ವಾಹಿನಿಗಳಿಗೂ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುವ ರವೀಶ್ ಆತ್ಮಾರಾಮ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ‌. ಇದು ರವೀಶ್ ಅವರಿಗೆ ಮೊದಲ ನಿರ್ದೇಶನದ ಚಿತ್ರ.

ಇದನ್ನೂ ಓದಿ: Sunita Williams: 2025ರವರೆಗೂ ಬಾಹ್ಯಾಕಾಶದಲ್ಲೇ ಇರಲಿದ್ದಾರೆ ಸುನೀತಾ ವಿಲಿಯಮ್ಸ್‌; ನಾಸಾ ಘೋಷಣೆ

ಇದು 1935ರಿಂದ 2024ರವರೆಗಿನ ಕಾಲಘಟ್ಟದ ಕಥೆಯಾಗಿರುತ್ತದೆ‌. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ‌.

ಇದನ್ನೂ ಓದಿ: Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿದೆ 55 ಹುದ್ದೆ; ಹೀಗೆ ಅಪ್ಲೈ ಮಾಡಿ

ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಆದರೆ ಅಡ್ವೆಂಚರ್ಸ್‌ಗೆ ಹೆಚ್ಚು ಒತ್ತು ಕೊಡಲಾಗಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. “ಸಂಭಾವಮಿ ಯುಗೇಯುಗೇ” ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದ ಬಹುತೇಕ ತಂತ್ರಜ್ಞರು ಈ ಚಿತ್ರದಲ್ಲೂ ಇರುತ್ತಾರೆ.‌ ಜಯ್ ಶೆಟ್ಟಿ ಅವರಿಗೆ ನಾಯಕಿಯಾಗಿ ನಯನ ನಟಿಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ನಿರ್ದೇಶಕ ರವೀಶ್ ಆತ್ಮಾರಾಮ್ ತಿಳಿಸಿದ್ದಾರೆ‌.

Continue Reading
Advertisement
Waqf Act
ದೇಶ22 mins ago

Waqf Act: ಪುರಸಭೆ ಕಚೇರಿಯನ್ನೇ ನುಂಗಿದ ವಕ್ಫ್‌ ಮಂಡಳಿ; ಆಸ್ತಿ ಕಬಳಿಕೆ ಬಣ್ಣ ಬಯಲು ಮಾಡಿದ ಕೇಂದ್ರ ಸಚಿವ!

ಪ್ರಮುಖ ಸುದ್ದಿ36 mins ago

Paris Olympics 2024 : ಭಾರತ ಹಾಕಿ ತಂಡಕ್ಕೆ ಕಂಚಿನ ಪದಕ, ಸ್ಪೇನ್ ವಿರುದ್ಧ 2-1 ಗೋಲ್​ಗಳ ಗೆಲುವು

Viral Video
Latest60 mins ago

Viral Video: ಮೃಗಾಲಯಕ್ಕೆ ನುಗ್ಗಿ ಪ್ರಾಣಿಗಳನ್ನೂ ಹಿಂಸಿಸಿದ ಬಾಂಗ್ಲಾದ ದುಷ್ಟ ಪ್ರತಿಭಟನಾಕಾರರು!

CM Siddaramaiah
ಕರ್ನಾಟಕ1 hour ago

CM Siddaramaiah: ಮೋದಿ ಸರ್ಕಾರದ ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಸಿದ್ದರಾಮಯ್ಯ ವಿರೋಧ

KPSC Exam
ನೋಟಿಸ್ ಬೋರ್ಡ್1 hour ago

KPSC Exam: ಆ.25ರಂದು 384 ಗೆಜೆಟೆಡ್‌ ಹುದ್ದೆಗಳ ನೇಮಕಾತಿಗಾಗಿ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

Baby Death
Latest1 hour ago

Baby Death: ಪ್ರಣಯಕ್ಕೆ ಡಿಸ್ಟರ್ಬ್‌ ಆಯಿತೆಂದು ಕೋಪಗೊಂಡ ಪ್ರಿಯತಮ ಮಹಿಳೆಯ ಮಗುವನ್ನು ನೆಲಕ್ಕೆ ಬಡಿದು ಕೊಂದ!

Wayanad Landslide
ದೇಶ1 hour ago

Wayanad Landslide: ವಯನಾಡಿನಲ್ಲಿ ಸೈನಿಕರ ಕಾರ್ಯಾಚರಣೆ ಮುಕ್ತಾಯ; ಸೆಲ್ಯೂಟ್‌ ಹೊಡೆದು ಬೀಳ್ಕೊಟ್ಟ ಜನ, Video ಇದೆ

Manu Bhaker
ಪ್ರಮುಖ ಸುದ್ದಿ1 hour ago

Paris Olympics 2024 : ಅಥ್ಲೀಟ್​ಗಳಿಗೆ ಒಲಿಂಪಿಕ್ಸ್​ ಮಸ್ಕಾಟ್​ ಚಿತ್ರ ಇರುವ ಕಾಂಡೋಮ್ ಹಂಚಿದ ಆಯೋಜಕರು!

Viral Video
Latest2 hours ago

Viral Video: ಒಂಟೆಯ ಮುಂದಿನ ಕಾಲು ಕಟ್ಟಿ ಚೂರಿಯಿಂದ ಇರಿದ; ಒಂಟೆ ಜಾಡಿಸಿ ಒದ್ದ ಹೊಡೆತಕ್ಕೆ ಸತ್ತೇ ಹೋದ!

Bengaluru Power Cut
ಕರ್ನಾಟಕ2 hours ago

Bengaluru Power Cut: ಆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌