Viral Video: ಇಡೀ ಮನೆ ಹೊತ್ತಿ ಉರಿಯವಂತೆ ಮಾಡಿದ ಶ್ವಾನ! ಸಾಕು ಪ್ರಾಣಿ ಪ್ರಿಯರು ಈ ವಿಡಿಯೋ ನೋಡ್ಲೇಬೇಕು - Vistara News

ವೈರಲ್ ನ್ಯೂಸ್

Viral Video: ಇಡೀ ಮನೆ ಹೊತ್ತಿ ಉರಿಯವಂತೆ ಮಾಡಿದ ಶ್ವಾನ! ಸಾಕು ಪ್ರಾಣಿ ಪ್ರಿಯರು ಈ ವಿಡಿಯೋ ನೋಡ್ಲೇಬೇಕು

Viral Video: ತುಲ್ಸಾ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವೀಡಿಯೊದ ಆರಂಭದಲ್ಲಿ, ಎರಡು ಸಾಕು ನಾಯಿಗಳು ಮತ್ತು ಬೆಕ್ಕು ಲಿವಿಂಗ್ ರೂಮ್‌ನಲ್ಲಿ ಆಟವಾಡುತ್ತಿರುವುದು ಕಂಡುಬಂದಿದೆ. ಈ ಮಧ್ಯೆ, ನಾಯಿಯೊಂದು ಸೋಫಾದ ಮುಂಭಾಗದ ಹಾಸಿಗೆಯ ಮೇಲೆ ಇರಿಸಲಾದ ಲಿಥಿಯಂ ಬ್ಯಾಟರಿಯನ್ನು ಅಗಿಯಲು ಪ್ರಾರಂಭಿಸುತ್ತದೆ. ಇದಕ್ಕಿದ್ದಂತೆ ಬ್ಯಾಟರಿಯಿಂದ ಸ್ಪಾರ್ಕ್ ಉಂಟಾಗಿದ್ದು, ಕೆಲ ಕ್ಷಣದಲ್ಲಿ ಹಾಸಿಗೆ ಸೋಫಾ ಸುಟ್ಟು ಭಸ್ಮವಾಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್‌: ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುವುದು ಎಷ್ಟು ಅಪಾಯಕಾರಿಯೋ ಅಷ್ಟೇ ಸಾಕು ಪ್ರಾಣಿಗಳನ್ನು ಬಿಟ್ಟುಹೋಗುವುದು ಕೂಡ. ಸ್ವಲ್ಪ ನಿರ್ಲಕ್ಷ್ಯ ವಹಿಸದರೂ ದೊಡ್ಡ ಪ್ರಮಾಣದಲ್ಲಿ ಅಪಾಯ ಎದುರಿಸಬೇಕಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಆಘಾತಕಾರಿ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಆರಾಮಾಗಿ ಮಲಗಿದ್ದ ನಾಯಿಯೊಂದು ಸೋಫಾದ ಮೇಲೆ ಬಿದ್ದಿದ್ದ ಲಿಥಿಯಂ-ಐಯಾನ್​ ಬ್ಯಾಟರಿ(Lithium-Ion Battery)ಯನ್ನು ಜಗಿದಿದ್ದರಿಂದ ಬ್ಯಾಟರಿ ಸ್ಫೋಟಗೊಂಡು ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಅಮೆರಿಕ(America)ದ ಓಕ್ಲಾದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ

ಘಟನೆ ವಿವರ:

ತುಲ್ಸಾ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವೀಡಿಯೊದ ಆರಂಭದಲ್ಲಿ, ಎರಡು ಸಾಕು ನಾಯಿಗಳು ಮತ್ತು ಬೆಕ್ಕು ಲಿವಿಂಗ್ ರೂಮ್‌ನಲ್ಲಿ ಆಟವಾಡುತ್ತಿರುವುದು ಕಂಡುಬಂದಿದೆ. ಈ ಮಧ್ಯೆ, ನಾಯಿಯೊಂದು ಸೋಫಾದ ಮುಂಭಾಗದ ಹಾಸಿಗೆಯ ಮೇಲೆ ಇರಿಸಲಾದ ಲಿಥಿಯಂ ಬ್ಯಾಟರಿಯನ್ನು ಅಗಿಯಲು ಪ್ರಾರಂಭಿಸುತ್ತದೆ. ಇದಕ್ಕಿದ್ದಂತೆ ಬ್ಯಾಟರಿಯಿಂದ ಸ್ಪಾರ್ಕ್ ಉಂಟಾಗಿದ್ದು, ಕೆಲ ಕ್ಷಣದಲ್ಲಿ ಹಾಸಿಗೆ ಸೋಫಾ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ನಾಯಿ ಹಾಗೂ ಬೆಕ್ಕಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಸಣ್ಣ ಸ್ಪಾರ್ಕ್ ಸ್ಪೋಟಗೊಂಡು ಹಾಸಿದ್ದ ಬೆಡ್ ಮೇಲೆ ಬೆಂಕಿ ಹತ್ತುತ್ತದೆ.​ ತಕ್ಷಣ ಅಲ್ಲಿ ಕುಳಿತಿದ್ದ ಬೆಕ್ಕು ಓಡಿ ಹೋಗುತ್ತದೆ. ಆದರೆ 2 ನಾಯಿಗಳಿಗೆ ಮಾತ್ರ ಏನಾಗುತ್ತಿದೆ ಎಂಬುದೇ ತಿಳಿಯದೇ ಅದನ್ನೇ ನೋಡಿ ಬೊಗಳಲು ಶುರು ಮಾಡಿದೆ. ಸಣ್ಣ ಪುಟ್ಟ ಗಾಯಗಳಿಂದ ಭಯಭೀತರಾದ 2 ನಾಯಿಗಳು, ಬೆಕ್ಕು ಅವುಗಳಿಗೆಂದೇ ಇದ್ದ ಪೆಟ್ ಬಾಗಿಲಿಂದ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿವೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಇನ್ನು ವಿಡಿಯೋವನ್ನು ಟಲ್ಸಾ ಅಗ್ನಿಶಾಮಕ ದಳ 7 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಿಮ್ಮ ಕುಟುಂಬದ ಸುರಕ್ಷತೆಗಾಗಿ ವಿಡಿಯೋವನ್ನು ಎಲ್ಲರೂ ನೋಡುವಂತೆ ವಿನಂತಿಸಿದೆ. ನಿಮ್ಮ ಮನೆಯಲ್ಲಿ ಲಿಥಿಯಂ-ಐಯಾನ್​ ಬ್ಯಾಟರಿಗಳಿದ್ದರೆ, ಅವುಗಳ ಬಳಕೆ, ಚಾರ್ಜಿಂಗ್​ಗಳ ಬಗ್ಗೆ ಖಚಿತಪಡಿಸಿಕೊಳ್ಳಿ. ದೇಶದಾದ್ಯಂತ ಲಿಥಿಯಂ ಐಯಾನ್ ಬ್ಯಾಟರಿಗಳಿಂದಾಗುತ್ತಿರುವ ಅಗ್ನಿ ಅವಘಡಗಳನ್ನು ನೋಡಿದ್ದೇವೆ ಎಂದು ಟಲ್ಸಾ ಅಗ್ನಿಶಾಮಕ ದಳ ಹೇಳಿದೆ. ಇದೀಗ ಈ ವಿಡಿಯೋ ಒಂದೇ ದಿನದಲ್ಲಿ 1 ಕೋಟಿಯ 93ಲಕ್ಷ ​​​ ವೀಕ್ಷಣೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Viral Video: ಐದನೇ ಮಹಡಿಯಿಂದ ಬಾಲಕಿ ಮೇಲೆ ಬಿದ್ದ ಶ್ವಾನ; ಆಮೇಲೆ ಆಗಿದ್ದೇನು? ವಿಡಿಯೋ ಇದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಮಾಂಸದೂಟಕ್ಕಾಗಿ ಜಗಳ: ಮೆದುಳು ಹೊರಬರುವಂತೆ ಬಡಿದು ಪತಿಯನ್ನೇ ಕೊಂದ ಮಹಿಳೆ

Viral News: ಮಾಂಸದೂಟ ತಯಾರಿಸುವಂತೆ ಪದೇಪದೆ ಬೇಡಿಕೆ ಇಡುತ್ತಿದ್ದ ಪತಿಯ ಮೇಲೆ ಸಿಟ್ಟುಗೊಂಡ ಮಹಿಳೆ ಆತನ ತಲೆಗೆ ಇಟ್ಟಿಗೆಯಿಂದ ಹೊಡೆದ ಮೆದುಳಿನ ಮಾಂಸವನ್ನೇ ಬಗೆದು ಹೊರತೆಗೆದಿರುವ ಘಟನೆ ಉತ್ತರ ಪ್ರದೇಶದ ಶಹಾಜಹಾನ್‌ಪುರದಲ್ಲಿ ನಡೆದಿದೆ. ಪೊಲೀಸರು ಬಂದ ಮೇಲೆಯೂ ಮಹಿಳೆ ಗಂಡನಿಗೆ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಇದರ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

By

Viral news
Koo

ಉತ್ತರ ಪ್ರದೇಶ: ಮಾಂಸಾಹಾರ ಅಡುಗೆ (Non-Veg Food) ಮಾಡಲು ಹೇಳಿದ ಪತಿಯನ್ನು ಮಹಿಳೆಯೊಬ್ಬಳು ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ (Murder case) ಮಾಡಿರುವ ಭಯಾನಕ ಘಟನೆ ಉತ್ತರ ಪ್ರದೇಶದ (Uttar Pradesh) ಶಹಜಹಾನ್‌ಪುರದಲ್ಲಿ ನಡೆದಿದೆ. ಗುರುವಾರ ನಡೆದ ಘಟನೆಯ ವಿಡಿಯೋ ವೈರಲ್ (Viral News) ಆಗಿದ್ದು, ಇದರಲ್ಲಿ ಆರೋಪಿ ಮಹಿಳೆ ತನ್ನ ಮೃತ ಪತಿಯ ಶವದ ಮೇಲೆ ಕುಳಿತು ಆತನ ತಲೆಯಿಂದ ಮಾಂಸ ತೆಗೆಯುತ್ತಿರುವುದನ್ನು ತೋರಿಸುತ್ತದೆ.

ಗಂಡನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸುತ್ತಿದ್ದಂತೆ ಕುಪಿತಳಾದ ಪತ್ನಿ ‘ಇವತ್ತು ನಿನ್ನ ತಲೆ ಒಡೆದು ಹಾಕುತ್ತೇನೆ’ ಎಂದು ಕೂಗಾಡುತ್ತಲೇ ಇದ್ದಳು. ಮಧ್ಯೆ ಸಲ್ಪ ಅತ್ತ ಅವಳು ಬಳಿಕ ಪೊಲೀಸರ ಮುಂದೆಯೇ ಸತ್ತ ಗಂಡನ ಮೆದುಳಿನಿಂದ ಮಾಂಸವನ್ನು ಹೊರ ತೆಗೆಯುವುದನ್ನು ಮುಂದುವರಿಸಿದ್ದಾಳೆ.

ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಈ ಭೀಕರ ಕೃತ್ಯದ ಹಿಂದೆ ಪತಿ ಮಾಂಸಾಹಾರಿ ಆಹಾರವನ್ನು ತಯಾರಿಸಲು ಕೇಳಿದ್ದೇ ಕಾರಣ ಎನ್ನಲಾಗಿದೆ.

ಸತ್ಯಪಾಲ್ (40) ಮೃತ ವ್ಯಕ್ತಿ. ಗಾಯತ್ರಿ ದೇವಿ (39) ಆರೋಪಿ ಮಹಿಳೆ. ಇವರು ಇಬ್ಬರು ಮಕ್ಕಳೊಂದಿಗೆ ಹತೌಡಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಸತ್ಯಪಾಲ್ ಕ್ರೀಡಾಂಗಣದಲ್ಲಿ ಖಾಸಗಿ ಕೆಲಸದಲ್ಲಿ ಕೆಲಸ ಮಾಡುತ್ತಿದ್ದ. ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದ ಇವರ ಮಗಳು ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಮಗ 12ನೇ ತರಗತಿಯಲ್ಲಿ ಓದುತ್ತಿದ್ದಾನೆ.

ಮಾಂಸಾಹಾರಿ ಆಹಾರದ ಬೇಡಿಕೆ

ಗಾಯತ್ರಿ ಸಸ್ಯಾಹಾರಿಯಾಗಿದ್ದು, ಸತ್ಯಪಾಲ್ ಮಾಂಸಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಿದ್ದ. ಈ ವಿಚಾರದಲ್ಲಿ ಆಗಾಗ್ಗೆ ಮನೆಯಲ್ಲಿ ಜಗಳವಾಗುತ್ತಿತ್ತು. ಕೆಲವೊಮ್ಮೆ ಸತ್ಯಪಾಲ್ ಗಾಯತ್ರಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ. ಗುರುವಾರವೂ ಸತ್ಯಪಾಲ್ ಮತ್ತೆ ಮಾಂಸಾಹಾರಕ್ಕೆ ಬೇಡಿಕೆ ಇಟ್ಟಿದ್ದ. ಗಾಯತ್ರಿ ನಿರಾಕರಿಸಿದಾಗ ಆತ ಕೋಪಗೊಂಡಿದ್ದು, ಅವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಈ ಜಗಳದ ನಡುವೆ ಗಾಯತ್ರಿ ಇಟ್ಟಿಗೆ ಎತ್ತಿಕೊಂಡು ಗಂಡನ ಮೇಲೆ ಹಲ್ಲೆ ನಡೆಸಿದ್ದಾಳೆ. ಸತ್ಯಪಾಲ್ ಹೊರಗೆ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ ಗಾಯತ್ರಿ ಅವನನ್ನು ಹಿಂಬಾಲಿಸಿ ನೆಲಕ್ಕೆ ಕೆಡವಿ ಅನಂತರ ಅವನ ಎದೆಯ ಮೇಲೆ ಕುಳಿತು ಪಟ್ಟುಬಿಡದೆ ಇಟ್ಟಿಗೆಯಿಂದ ಅವನ ತಲೆಗೆ ಹೊಡೆದನು. ಅವಳ ಕೋಪವು ಎಷ್ಟು ತೀವ್ರವಾಗಿತ್ತು ಎಂದರೆ ಅವನ ಮೆದುಳು ಹೊರಗೆ ಬರುವವರೆಗೂ ರಕ್ತವು ಎಲ್ಲೆಡೆ ಹರಿಯುವವರೆಗೂ ಅವಳು ನಿಲ್ಲಿಸಲಿಲ್ಲ. ಈ ಭಯಾನಕ ಘಟನೆ ನೋಡಿದ ಸುತ್ತಮುತ್ತಲಿನವರು ಮಧ್ಯೆ ಹೋಗಲು ಭಯಪಟ್ಟರು.


ಪತಿ ತನ್ನನ್ನು ಆಗಾಗ್ಗೆ ಹೊಡೆಯುತ್ತಿದ್ದರು ಮತ್ತು ಯಾವಾಗಲೂ ಮಾಂಸಾಹಾರಿ ಆಹಾರವನ್ನು ಸೇವಿಸುವಂತೆ ಒತ್ತಾಯಿಸುತ್ತಿದ್ದರು. ಘಟನೆ ನಡೆದ ದಿನವೂ ಆತ ಮಾಂಸಾಹಾರ ಕೇಳಿದ್ದಾನೆ. ನನ್ನ ಬಳಿ ಖರೀದಿಸಲು ಹಣವಿಲ್ಲದ ಕಾರಣ ನಿರಾಕರಿಸಿದಳು. ಈ ನಿರಾಕರಣೆಯು ಜಗಳಕ್ಕೆ ತಿರುಗಿತು ಎಂದು ಗಾಯತ್ರಿ ಪೊಲೀಸರಿಗೆ ತಿಳಿಸಿದ್ದಾಳೆ.

ಇದನ್ನೂ ಓದಿ: Love Case : ಮದುವೆಗೆ ಪೋಷಕರ ವಿರೋಧ; ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ

ಮಾನಸಿಕ ಅಸ್ವಸ್ಥತೆ

ಗಾಯತ್ರಿ ಈ ಹಿಂದೆ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆದಿದ್ದಳು. ಆದರೆ ಬಳಿಕ ಚೇತರಿಸಿಕೊಂಡಿದ್ದಾಳೆ ಎಂದು ಸತ್ಯಪಾಲ್ ಅವರ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ.

ಮಹಿಳೆ ತನ್ನ ಗಂಡನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ ಕೊಂದಿದ್ದಾಳೆ ಎಂದು ನಗರ ಎಸ್ಪಿ ಸಂಜಯ್ ಕುಮಾರ್ ಖಚಿತಪಡಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದು ಗಾಯತ್ರಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಿಂದ ಮಹಿಳೆಯು ಇನ್ನೂ ಮಾನಸಿಕವಾಗಿ ಅಸ್ಥಿರವಾಗಿರಬಹುದು ಮತ್ತು ಆಕೆಯ ಚಿಕಿತ್ಸೆಯು ಮುಂದುವರಿದಿದೆ ಎಂಬುದು ತಿಳಿದು ಬಂದಿದೆ.

Continue Reading

ಕ್ರೀಡೆ

Vinesh Phogat: ಒಲಿಂಪಿಕ್ಸ್​ ಆರಂಭಕ್ಕೂ ಮುನ್ನವೇ ಪಿತೂರಿಯ ಬಗ್ಗೆ ಗಂಭೀರ ಆರೋಪ ಮಾಡಿದ್ದ ವಿನೇಶ್​; ವೈರಲ್​ ಟ್ವೀಟ್​ ಇಲ್ಲಿದೆ

Vinesh Phogat: ನಾಲ್ಕು ತಿಂಗಳ ಹಿಂದೆ ಅಂದರೆ ಎಪ್ರಿಲ್​ನಲ್ಲಿ ವಿನೇಶ್​ ಫೋಗಟ್​ ಅವರು ಭಾರತ ಕುಸ್ತಿ ಫೆಡರೇಷನ್ (WFI) ತನ್ನ ವಿರುದ್ಧ ಡೋಪಿಂಗ್ ಪಿತೂರಿ ಮಾಡುವ ಸಾಧ್ಯತೆಗಳಿವೆ ಎಂದು ಗಂಭೀರ ಆರೋಪ ಮಾಡಿ ಟ್ವೀಟ್​ ಮಾಡಿದ್ದರು.

VISTARANEWS.COM


on

Vinesh Phogat
Koo

ನವದೆಹಲಿ: ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್‌ ಪೋಗಟ್‌ ವಿಚಾರದಲ್ಲಿ ಕೆಲವು ರಾಜಕೀಯ ನಾಯಕರು ಪರ ಮತ್ತು ವಿರೋಧದ ಚರ್ಚೆಗಳನ್ನು ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ವಿನೇಶ್​ ಪೋಗಟ್(Vinesh Phogat)​ ಅವರು ಒಲಿಂಪಿಕ್ಸ್​ ಆರಂಭಕ್ಕೂ 4 ತಿಂಗಳ ಹಿಂದೆಯೇ ಟ್ವೀಟ್​ ಮೂಲಕ ಭಾರತ ಕುಸ್ತಿ ಫೆಡರೇಷನ್ ವಿರುದ್ಧ ಗಂಭೀರ ಆರೋಪ ಆಡಿದ್ದರು. ಈ ಟ್ವಿಟ್​ ಇದೀಗ ವೈರಲ್​ ಆಗಿದೆ.

ನಾಲ್ಕು ತಿಂಗಳ ಹಿಂದೆ ಅಂದರೆ ಎಪ್ರಿಲ್​ನಲ್ಲಿ ವಿನೇಶ್​ ಫೋಗಟ್​ ಅವರು ಭಾರತ ಕುಸ್ತಿ ಫೆಡರೇಷನ್ (WFI) ತನ್ನ ವಿರುದ್ಧ ಡೋಪಿಂಗ್ ಪಿತೂರಿ ಮಾಡುವ ಸಾಧ್ಯತೆಗಳಿವೆ ಎಂದು ಗಂಭೀರ ಆರೋಪ ಮಾಡಿದ್ದರು. ಆದರೆ, ಫೆಡರೇಷನ್ ಈ ಆರೋಪವನ್ನು ತಳ್ಳಿಹಾಕಿತ್ತು.

ವಿನೇಶ್​ ಮಾಡಿದ್ದ ಆರೋಪವೇನು?


“ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಲ್ಲಿ ನನ್ನ ಭಾಗವಹಿಸುವಿಕೆ ತಡೆಯಲು ಡಬ್ಲ್ಯುಎಫ್‌ಐ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಡೋಪಿಂಗ್ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಭಯವಿದೆ. ನಾನು ಅಭ್ಯಾಸದ ವೇಳೆ ಸೇವಿಸುವ ನೀರಿನಲ್ಲಿ ಡೋಪಿಂಗ್ ಅಂಶವುಳ್ಳ ಕೆಲ ರಾಸಾಯನಿಕವನ್ನು ಬೆರೆಸಿರುವ ಅನುಮಾನವಿದೆ” ಎಂದು ವಿನೇಶ್​ ಫೋಗಟ್‌ ಆರೋಪಿಸಿದ್ದರು.

ವಿನೇಶ್​ ಆರೋಪಕ್ಕೆ ಅಂದು ಪ್ರತಿಕ್ರಿಯೆ ನೀಡಿದ ಡಬ್ಲ್ಯುಎಫ್‌ಐ, ವಿನೇಶ್ ಅವರ ಕೋರಿಕೆಯ ಇ-ಮೇಲ್ ಮಾರ್ಚ್ 18 ರಂದು ಬಂದಿತ್ತು. ಆದರೆ ನೋಂದಣಿ ದಿನಾಂಕ ಮಾರ್ಚ್ 11 ಆಗಿದ್ದರಿಂದ ಅದಾಗಲೇ ಸ್ಪರ್ಧಿಗಳು, ತರಬೇತುದಾರರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರವೇಶಗಳನ್ನು ಯುಡಬ್ಲ್ಯುಡಬ್ಲ್ಯುಗೆ ಕಳುಹಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿ ಆರೋಪವನ್ನು ತಳ್ಳಿ ಹಾಕಿತ್ತು. ಇದೀಗ ಅಂದು ವಿನೇಶ್​ ಹೇಳಿದಂತೆ ಫೈನಲ್​ ಪಂದ್ಯಕ್ಕೂ ಮುನ್ನ ಅವರು ಸೇವಿಸಿದ ನೀರಿನಲ್ಲಿ ರಾಸಾಯನಿಕ ಬಳಿಸಿ ಅವರನ್ನು ಉದ್ದೇಶಪೂರ್ವಕವಾಗಿ ಅನರ್ಹಗೊಳ್ಳುವಂತೆ ಮಾಡಲಾಯಿತೇ ಎಂಬ ಹೊಸ ಚರ್ಚೆಗಳು ಹುಟ್ಟಿಕೊಂಡಿದೆ.

ಇದನ್ನೂ ಓದಿ Vinesh Phogat: ವಿನೇಶ್​ರನ್ನು ಪ.ಬಂಗಾಳ ಸಿಎಂ ಮಾಡಿ; ಭಾರತ ರತ್ನ ಕೊಡಿ ಎಂದ ಟಿಎಂಸಿ ನಾಯಕನಿಗೆ ಸವಾಲ್!

ಮಂಗಳವಾರ ನಡೆದ ಅರ್ಹತಾ ಸುತ್ತಿಗೂ ಮುನ್ನ ವಿನೇಶ್‌ ಅವರ ತೂಕವನ್ನು ಲೆಕ್ಕ ಮಾಡಲಾಗಿತ್ತು. ಈ ವೇಳೆ ಅವರು 49.9 ಕೆಜಿ ತೂಕವಿದ್ದರು. 3 ಬೌಟ್‌ಗಳು ಮುಗಿಯುವ ವೇಳೆಗೆ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ ಕಾರಣ ಅವರ ತೂಕ 2.8 ಕೆಜಿ ಹೆಚ್ಚಳವಾಗಿತ್ತು. ಈ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್‌ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್‌ ನಡೆಸಿ, ಸ್ಕಿಪ್ಪಿಂಗ್‌ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಆದರೂ 100 ಗ್ರಾಂ ಹೆಚ್ಚಿದ್ದ ಕಾರಣ ಅನರ್ಹಗೊಂಡರು.

ವಿನೇಶ್‌ ಫೋಗಟ್‌ ಅವರ ಸಹಾಯಕ ಸಿಬ್ಬಂದಿ ವಿರುದ್ಧ ತನಿಖೆ ನಡೆಸಬೇಕು ಎಂದು ಭಾರತೀಯ ಕುಸ್ತಿ ಪ್ರಾಧಿಕಾರದ ಅಧ್ಯಕ್ಷ ಸಂಜಯ್‌ ಸಿಂಗ್‌ ಈಗಾಗಲೇ ಆಗ್ರಹಿಸಿದ್ದಾರೆ. ಇದು ವಿನೇಶ್‌ ಅವರ ತಪ್ಪಾಗಿರಲು ಸಾಧ್ಯವಿಲ್ಲ. ಅವರು ಉತ್ತಮವಾಗಿ ಭಾಗಿಯಾಗಿದ್ದರು. ಅವರ ಕೋಚ್‌, ನ್ಯೂಟ್ರಿಶಿಯನ್‌ ಮತ್ತು ಬೆಂಬಲ ಸಿಬ್ಬಂದಿ ಇದರ ಜವಾಬ್ದಾರಿ ಹೊರಬೇಕು ಎಂದು ಅವರು ಹೇಳಿದ್ದರು. ವಿನೇಶ್‌ ತೂಕ ಹೆಚ್ಚಳ ವಾಗದಂತೆ ಅವರು ನೋಡಿಕೊಳ್ಳಬೇಕಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಭಾರತ ಸರಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.

ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಉನ್ನತ ಕುಸ್ತಿಪಟುಗಳು ಆರೋಪಿಸಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು. ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಕಳೆದ ವರ್ಷ ಜನವರಿಯಲ್ಲಿ ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದರು. ಈ ಪ್ರತಿಭಟನೆಯ ಪ್ರಮುಖ ರುವಾರಿ ಕೂಡ ವಿನೇಶ್​ ಅವರೇ ಆಗಿದ್ದರು. ಒಟ್ಟಾರೆ ಅಂದು ವಿನೇಶ್​ ಮಾಡಿದ ಆರೋಪ ಇದೀಗ ವಿಪಕ್ಷಗಳಿಗೆ ಆಹಾರವಾಗಿದೆ. ಇದೇ ವಿಚಾರವಾಗಿ ಸದನಲ್ಲಿ ಮತ್ತೆ ಕಿತ್ತಾಟ ನಡೆಯುವ ಸಾಧ್ಯತೆಯೊಂದು ಕಂಡು ಬಂದಿದೆ.

Continue Reading

ಕ್ರೀಡೆ

Vinesh Phogat: ವಿನೇಶ್​ರನ್ನು ಪ.ಬಂಗಾಳ ಸಿಎಂ ಮಾಡಿ; ಭಾರತ ರತ್ನ ಕೊಡಿ ಎಂದ ಟಿಎಂಸಿ ನಾಯಕನಿಗೆ ಸವಾಲ್!

Vinesh Phogat: ಒಲಿಂಪಿಕ್ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಅವರು ಸಲ್ಲಿದ್ದ ಮನವಿಯನ್ನು ಗುರುವಾರ (ಆಗಸ್ಟ್ 8) ಆರ್ಬಿಟ್ರೇಷನ್ ನ್ಯಾಯಾಲಯವು (CAS) ವಿನೇಶ್ ಮನವಿಯನ್ನು ಸ್ವೀಕರಿಸಿತ್ತು. ಇಂದು (ಶುಕ್ರವಾರ) ಬೆಳಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ) ವಿಚಾರಣೆಗೆ ವಕೀಲರನ್ನು ನೇಮಿಸುವಂತೆ ಕೇಳಿದೆ.

VISTARANEWS.COM


on

Vinesh Phogat
Koo

ನವದೆಹಲಿ: ನಿಗದಿತ ತೂಕಕ್ಕಿಂತ ಅಧಿಕ ತೂಕ ಹೊಂದಿದ್ದ ಕಾರಣದಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ( ಅನರ್ಹಗೊಂಡು ಪದಕ ಕಳೆದುಕೊಂಡ ಕುಸ್ತಿಪಟು ವಿನೇಶ್​ ಫೋಗಟ್(Vinesh Phogat) ಅವರಿಗೆ ‘ಭಾರತ ರತ್ನ’ ಅಥವಾ ರಾಷ್ಟ್ರಪತಿ ನಾಮನಿರ್ದೇಶಿತ ರಾಜ್ಯಸಭಾ ಸ್ಥಾನ ನೀಡಿ ಗೌರವಿಸುವಂತೆ ಒತ್ತಾಯಿಸಿದ್ದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ(Abhishek Banerjee) ಅವರಿಗೆ ನೆಟ್ಟಿಗರು ಸವಾಲೊಂದನ್ನು ಹಾಕಿದ್ದಾರೆ. ಭಾರತ ರತ್ನ ನೀಡುವ ಮುನ್ನ ವಿನೇಶ್ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದಾರೆ.

ಮಹಿಳೆಯರ 50 ಕೆ.ಜಿ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ವಿನೇಶ್​, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇನ್ನೇನು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದ ಅವರನ್ನು ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿರುವ ಕಾರಣ ಫೈನಲ್​ನಿಂದ ಅನರ್ಹಗೊಳಿಸಲಾಗಿತ್ತು. ಹೀಗಾಗಿ ಅವರು ಐತಿಹಾಸಿಕ ಪದಕವೊಂದನ್ನು ಗೆಲ್ಲುವ ಅವಕಾಶ ಕಳೆದುಕೊಂಡರು. ಪದಕ ಗೆಲ್ಲದಿದ್ದರೂ ಕೂಡ ವಿನೇಶ್​ ಸಾಧನೆಗೆ ಇಡೀ ದೇಶವಾಸಿಗಳು ಮೆಚ್ಚುಗೆ ಸೂಚಿಸಿದ್ದರು.

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ವಿನೇಶ್​ ಸಾಧನೆಯನ್ನು ಕೊಂಡಾಡಿದ್ದರು. ಜತೆಗೆ ವಿನೇಶ್​ ಅವರ ಅಸಾಮಾನ್ಯ ಪ್ರದರ್ಶನವನ್ನು ಗುರುತಿಸಿ ಅವರಿಗೆ ಭಾರತ ರತ್ನ ಅಥವಾ ರಾಷ್ಟ್ರಪತಿ ನಾಮನಿರ್ದೇಶಿತ ರಾಜ್ಯಸಭಾ ಸ್ಥಾನ ನೀಡಿ ಗೌರವಿಸಲು ಸರ್ಕಾರ ಹಾಗೂ ವಿಪಕ್ಷಗಳು ಒಮ್ಮತವನ್ನು ಕಂಡುಕೊಳ್ಳಬೇಕು. ಅವರು ಎದುರಿಸಿದ ಕಷ್ಟಗಳಿಗೆ ನಾವು ಕನಿಷ್ಠ ಪಕ್ಷ ಇಷ್ಟಾದರೂ ಮಾಡಬೇಕು ಎಂದು ಒತ್ತಾಯಿಸಿದ್ದರು.

ಅಭಿಷೇಕ್ ಬ್ಯಾನರ್ಜಿ ಅವರ ಈ ಹೇಳಿಕೆ ಕಂಡು ಅನೇಕ ನೆಟ್ಟಿಗರು ಅವರನ್ನು ಟ್ರೋಲ್​ ಮಾಡಿದ್ದಾರೆ. ಭಾರತ ರತ್ನವನ್ನು ಹೀಗೆ ಎಲ್ಲರಿಗೂ ನೀಡುತ್ತಾ ಹೋದರೆ ಆ ಪ್ರಶಸ್ತಿಗೆ ಯಾವುದೇ ಬೆಲೆ ಇರುವುದಿಲ್ಲ. ಅವರ ಸಾಧನೆ ಮೇಲೆ ನಿಮಗ ಅಪಾರ ಗೌರವ ಇದ್ದರೆ ನೀವು ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಾಡಿ ಎಂದು ಸವಾಲ್​ ಹಾಕಿದ್ದಾರೆ. ಇನ್ನು ಕೆಲವರು ನೋಬೆಲ್​ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಎಂದು ಹೇಳಿದ್ದಾರೆ. ಹೀಗೆ ನಾನಾ ರೀತಿಯ ಕಮೆಂಟ್​ ಮೂಲಕ ಅಭಿಷೇಕ್ ಬ್ಯಾನರ್ಜಿ ಅವರನ್ನು ರೋಸ್ಟ್​ ಮಾಡಿದ್ದಾರೆ.

ಒಲಿಂಪಿಕ್ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಅವರು ಸಲ್ಲಿದ್ದ ಮನವಿಯನ್ನು ಗುರುವಾರ (ಆಗಸ್ಟ್ 8) ಆರ್ಬಿಟ್ರೇಷನ್ ನ್ಯಾಯಾಲಯವು (CAS) ವಿನೇಶ್ ಮನವಿಯನ್ನು ಸ್ವೀಕರಿಸಿತ್ತು. ಇಂದು (ಶುಕ್ರವಾರ) ಬೆಳಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ) ವಿಚಾರಣೆಗೆ ವಕೀಲರನ್ನು ನೇಮಿಸುವಂತೆ ಕೇಳಿದೆ.

ವಿನೇಶ್‌ ಪೋಗಟ್‌ ಅವರನ್ನು ಪದಕ ಗೆದ್ದವರ ರೀತಿಯಲ್ಲಿ ಸಮ್ಮಾನಿಸಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರು ಹೇಳಿದ್ದಾರೆ. ಒಲಿಂಪಿಕ್‌ ಬೆಳ್ಳಿ ಗೆದ್ದವರಿಗೆ ನೀಡುವಷ್ಟು ಬಹುಮಾನವನ್ನು ವಿನೇಶ್‌ ಅವರಿಗೆ ನೀಡಲಾಗುವುದು. ಸರಕಾರದ ಕ್ರೀಡಾ ನೀತಿಯಂತೆ ಒಲಿಂಪಿಕ್‌ ಚಿನ್ನ ಗೆದ್ದವರಿಗೆ ಸರಕಾರ ಆರು ಕೋಟಿ ರೂ. ಬೆಳ್ಳಿಗೆ ನಾಲ್ಕು ಕೋಟಿ ರೂ. ಮತ್ತು ಕಂಚು ಪದಕ ವಿಜೇತರಿಗೆ 2.5 ಕೋಟಿ ರೂ. ನೀಡಲಿದೆ.

ನಮ್ಮ ಧೈರ್ಯಶಾಲಿ ಪುತ್ರಿ ವಿನೇಶ್‌ ಅದ್ಭುತ ನಿರ್ವಹಣೆ ನೀಡಿ ಫೈನಲಿಗೇರಿದ್ದರು. ಆದರೆ ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ಫೈನಲಿನಲ್ಲಿ ಸ್ಪರ್ದಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರು ನಮಗೆಲ್ಲ ಚಾಂಪಿಯನ್‌ ಕುಸ್ತಿಪಟು ಆಗಿದ್ದಾರೆ. ಈ ಕಾರಣಕ್ಕಾಗಿ ನಮ್ಮ ಸರಕಾರವು ಅವರನ್ನು ಪದಕ ಗೆದ್ದವರ ರೀತಿಯಲ್ಲಿ ಸ್ವಾಗತ ಮತ್ತು ಸಮ್ಮಾನಿಸಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

Continue Reading

ಪ್ರಮುಖ ಸುದ್ದಿ

Vinesh Phogat: ಪ್ರಕಾಶ್‌ ರೈ ವಿರುದ್ಧ ಅಹಿಂಸಾ ಚೇತನ್‌ ಕಿಡಿ; ಮೋದಿ ಪರ ಬ್ಯಾಟಿಂಗ್ ಮಾಡಿ ʼರೈ ಅಜ್ಞಾನಿʼ ಎಂದ ನಟ

Vinesh Phogat: ʼಪ್ರಕಾಶ್ ರೈ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರʼ ಎಂದು ಟ್ವೀಟ್‌ನಲ್ಲಿ ಚೇತನ್ ಬರೆದಿದ್ದಾರೆ. ಅವರ ಈ ಟ್ವೀಟ್‌ಗೆ ಕಾರಣವಾಗಿರುವುದು, ವಿನೇಶ್‌ ಫೋಗಟ್‌ ಅನರ್ಹತೆ ಕುರಿತು ಪ್ರಕಾಶ್‌ ರೈ ಮಾಡಿರುವ ಒಂದು ಪೋಸ್ಟ್.

VISTARANEWS.COM


on

vinesh phogat praksah raj ahimsa chetan
Koo

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿರುದ್ಧ ಯಾವಾಗಲೂ ಕಿಡಿ ಕಾರುತ್ತಿದ್ದ ನಟ ಚೇತನ್‌ ಅಹಿಂಸಾ (Chetan Ahimsa), ಇದೀಗ ಮೋದಿಯವರ ಪರ ಸೋಶಿಯಲ್‌ ಮೀಡಿಯಾ (Social Media) ಪೋಸ್ಟ್‌ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಜೊತೆಗೆ, ವಿನೇಶ್‌ ಫೋಗಟ್‌ (Vinesh Phogat) ಪ್ರಕರಣದಲ್ಲಿ ಸಹನಟ ಪ್ರಕಾಶ್‌ ರೈ (Prakash raj) ನಿಲುವಿನ ವಿರುದ್ಧ ಕಿಡಿ ಕಾರಿದ್ದಾರೆ.

50 ಕಿಲೋಗಿಂತ 100 ಗ್ರಾಂ ತೂಕ ಹೆಚ್ಚಳವಾದ ಹಿನ್ನೆಲೆ ಪ್ಯಾರಿಸ್ ಒಲಿಂಪಿಕ್ಸ್‌-2024ರ ಫೈನಲ್‌ ಕುಸ್ತಿ ಪಂದ್ಯದಿಂದ ಹೊರ ಬಿದ್ದ ವಿನೇಶ್‌ ಫೋಗಟ್ ಪರ, ಮೋದಿ ವಿರುದ್ಧ ಪೋಸ್ಟ್‌ ಹಾಕಿದ್ದ ಪ್ರಕಾಶ್‌ ರೈ ನಡೆಯನ್ನು ಚೇತನ್‌ ಟೀಕಿಸಿದ್ದಾರೆ. ಅದರಲ್ಲೂ ಮೋದಿ ಪರ ನಿಂತ ಅಹಿಂಸಾ ಚೇತನ್​ ನಿಲುವು ನೋಡಿ ತುಂಬಾ ಮಂದಿ ಅಚ್ಚರಿಪಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ಪ್ರಕಾಶ್​ ರಾಜ್​ ಕಾರ್ಟೂನ್​ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಕುಸ್ತಿಪಟು ವಿನೇಶ್​ ಫೋಗಟ್ ಅವರು ನಿಂತಿರುವ ತೂಕದ ಯಂತ್ರದ ಮೇಲೆ ನಿಂತಿದ್ದು, ಅವರ ಹಿಂಭಾಗದಲ್ಲಿ ಮತ್ತೊಬ್ಬರು ಕಾಲಿನ ಒಂದು ಬೆರಳನ್ನಿಟ್ಟು 100 ಗ್ರಾಮ್ ತೂಕ ಹೆಚ್ಚಾಗುವಂತೆ ಮಾಡಿದ್ದಾರೆ. ಹಿಂದಿರುವ ವ್ಯಕ್ತಿ ಪ್ರಧಾನಿ ಮೋದಿ ಎಂದು ಚಿತ್ರ ಸೂಚಿಸುವಂತಿದೆ. ಮೋದಿಯೇ ವಿನೇಶ್ ಫೋಗಟ್ ಕುಸ್ತಿ ಚಿನ್ನದ ಪದಕದಿಂದ ವಂಚಿತರಾಗಲು ಕಾರಣವಾಗಿದ್ದಾರೆ ಎಂದು ಅರ್ಥ ಬರುವಂತೆ ಈ ಟ್ವೀಟ್ ಶೇರ್ ಮಾಡಿದ್ದರು.

ಇದಕ್ಕೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್​ ಕಿಡಿಕಾರಿದ್ದಾರೆ. ʼವಿನೇಶ್ ಫೋಗಟ್ ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರೈ ಪೋಸ್ಟ್ ಸಜೆಸ್ಟ್ ಮಾಡುತ್ತದೆ. ಇದು ಸಣ್ಣತನ. ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರೈ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ. ಪ್ರಕಾಶ್ ರೈ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರʼ ಎಂದು ಟ್ವೀಟ್‌ನಲ್ಲಿ ಚೇತನ್ ಬರೆದಿದ್ದಾರೆ.

ಇಬ್ಬರು ನಟರ ಈ ಟ್ವೀಟ್ಟ್‌ಗಳು ಇದೀಗ ವೈರಲ್ ಆಗುತ್ತಿವೆ. ನೆಟ್ಟಿಗರು ಚೇತನ್ ಕಮೆಂಟ್​ಗೂ ಪರ-ವಿರೋಧ ಕಮೆಂಟ್ ಮಾಡುತ್ತಿದ್ದಾರೆ. ಪ್ರಕಾಶ್ ರಾಜ್​ ಕೆಟ್ಟ ಹೋರಾಟಗಾರ ಎನ್ನುವುದು ಸರಿಯಲ್ಲ ಎಂದಿದ್ದಾರೆ. ವಿನೇಶ್ ಫೋಗಟ್ ಅನರ್ಹತೆಗೆ ಪ್ರಕಾಶ್ ರಾಜ್ ಎಲ್ಲಿಯೂ ಮೋದಿ ಹೆಸರನ್ನು ಮೆನ್ಷನ್ ಮಾಡಿಲ್ಲ. ಆದರೆ ನೀವೇ ಮೋದಿ ಎಳೆದು ತಂದಿದ್ದೀರಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಕುಸ್ತಿ ಪಂದ್ಯಾಟದ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ 100 ಗ್ರಾಮ್‌ಗಳ ಹೆಚ್ಚುವರಿ ತೂಕದಿಂದಾಗಿ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್‌ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರು. ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ತಮ್ಮ ಅರ್ಧ ವರ್ಷದ ತರಬೇತಿಯನ್ನು ಕಳೆದುಕೊಂಡಿದ್ದ ವಿನೇಶ್, ತಮಗೆ ದೊರಕಿದ್ದ ಅತ್ಯಲ್ಪ ಸಮಯದಲ್ಲಿಯೇ ತರಬೇತಿ ಪಡೆದುಕೊಂಡು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಜೊತೆಗೆ ದೇಶಕ್ಕಾಗಿ ಪದಕ ಗೆಲ್ಲುವ ಮಹದಾಸೆ ಇರಿಸಿಕೊಂಡಿದ್ದರು.

ಇದನ್ನೂ ಓದಿ: Prakash Raj:‌ ವಿನೇಶ್‌ ಫೋಗಟ್‌ ಅನರ್ಹತೆಗೆ ಮೋದಿ ಕಾರಣ ಎಂಬಂತೆ ಪ್ರಕಾಶ್ ರಾಜ್‌ ಪೋಸ್ಟ್;‌ ಜನರಿಂದ ರೋಸ್ಟ್!

Continue Reading
Advertisement
Tarsem Singh
ದೇಶ44 mins ago

Tarsem Singh: ಎನ್‌ಐಎ ಪ್ರಮುಖ ಕಾರ್ಯಾಚರಣೆ; ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರ ತರ್ಸೇಮ್‌ ಸಿಂಗ್ ಬಂಧನ!

Vinesh Phogat
ಕ್ರೀಡೆ47 mins ago

Vinesh Phogat : ವಿನೇಶ್​​ಗೆ ಬೆಳ್ಳಿ ಪದಕ ಕೊಡಲು ಸಾಧ್ಯವಿಲ್ಲ; ಒಲಿಂಪಿಕ್ಸ್​​ ಸಂಸ್ಥೆ ಮುಖ್ಯಸ್ಥ ಥಾಮಸ್ ಬಾಕ್​ ಸ್ಪಷ್ಟನೆ

ಕರ್ನಾಟಕ1 hour ago

NEET UG 2024: ಯುಜಿ ನೀಟ್: ಆ.12, 13ಕ್ಕೆ ದಾಖಲಾತಿ ಪರಿಶೀಲನೆ

Paris Olympics 2024
ಕ್ರೀಡೆ1 hour ago

Paris Olympics 2024 : ಲೈಂಗಿಕ ಕಿರುಕುಳದ ಆರೋಪದ ಮೇಲೆ ಈಜಿಪ್ಟ್​​ ಮೊಹಮ್ಮದ್ ಎಲ್ಸಯೀದ್ ಅರೆಸ್ಟ್​​

Independence day 2024
ತಂತ್ರಜ್ಞಾನ1 hour ago

Independence Day 2024: ಹೊಗೆ ಬಂಡಿಯಿಂದ ವಂದೇ ಭಾರತ್‌‌ವರೆಗೆ; ಭಾರತೀಯ ರೈಲ್ವೆಯ ಅದ್ಭುತ ಪಯಣ!

CAA Rules
ದೇಶ1 hour ago

CAA Rules: ಪಾಕ್‌, ಬಾಂಗ್ಲಾ, ಆಘ್ಘನ್‌ ನಿರಾಶ್ರಿತರಿಗೆ ಸಿಹಿ ಸುದ್ದಿ; ಸಿಎಎ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ!

Bengaluru News
ಬೆಂಗಳೂರು1 hour ago

Bengaluru News: ಬೃಹತ್‌ ಜನಾಂದೋಲನಕ್ಕೆ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಬೆಂಬಲ

KCET Mock Allotment 2024
ಕರ್ನಾಟಕ2 hours ago

KCET Mock Allotment 2024: ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಮತ್ತೆ ಮುಂದೂಡಿಕೆ; ಯಾವಾಗ ಪ್ರಕಟ?

Neeraj Chopra
ಕ್ರೀಡೆ2 hours ago

Neeraj Chopra : ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿಯುವ ಅವಕಾಶ ಶ್ರೀಜೇಶ್​ಗೆ ಬಿಟ್ಟುಕೊಟ್ಟ ನೀರಜ್​ ಚೋಪ್ರಾ

Narendra Modi
ದೇಶ2 hours ago

Narendra Modi: ಮೋದಿ ಪ್ರೊಫೈಲ್‌ ಫೋಟೊ ಈಗ ತಿರಂಗಾ; ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಜನರಿಗೆ ಕರೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 day ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 day ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 day ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌