NEET PG Exam 2024: ನೀಟ್‌ ಪಿಜಿ ಪರೀಕ್ಷೆ ಮುಂದೂಡಲು ಸುಪ್ರೀಂ ಕೋರ್ಟ್‌ ನಕಾರ; ಆಗಸ್ಟ್‌ 11ಕ್ಕೇ ಎಕ್ಸಾಂ! - Vistara News

ಪ್ರಮುಖ ಸುದ್ದಿ

NEET PG Exam 2024: ನೀಟ್‌ ಪಿಜಿ ಪರೀಕ್ಷೆ ಮುಂದೂಡಲು ಸುಪ್ರೀಂ ಕೋರ್ಟ್‌ ನಕಾರ; ಆಗಸ್ಟ್‌ 11ಕ್ಕೇ ಎಕ್ಸಾಂ!

NEET PG Exam 2024: ನೀಟ್‌ ಪರೀಕ್ಷೆ ನಡೆಯುವ ನಗರಗಳ ಪಟ್ಟಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜುಲೈ 31ರಂದು ಪ್ರಕಟಿಸಿದೆ. ಆಗಸ್ಟ್‌ 8ರಂದು ಪರೀಕ್ಷೆ ನಡೆಯುವ ಕೇಂದ್ರಗಳ ಮಾಹಿತಿ ನೀಡಲಾಗಿದೆ. ಇದರಿಂದಾಗಿ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ತಲುಪುವುದು ಕಷ್ಟವಾಗುತ್ತದೆ. ಹಾಗಾಗಿ, ಪರೀಕ್ಷೆಯನ್ನು ಮುಂದೂಡಬೇಕು ಎಂಬುದಾಗಿ ಅರ್ಜಿ ಸಲ್ಲಿಸಲಾಗಿತ್ತು. ಈಗ ನ್ಯಾಯಾಲಯವು ಅರ್ಜಿಯನ್ನು ನಿರಾಕರಿಸಿದೆ.

VISTARANEWS.COM


on

NEET PG Exam 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET PG Exam 2024) ದಿನಾಂಕವನ್ನು ಮುಂದೂಡಬೇಕು ಎಂಬುದಾಗಿ ಐವರು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ನಿರಾಕರಿಸಿದೆ. ಆಗಸ್ಟ್‌ 11ರಂದು ನಡೆಯಬೇಕಿರುವ ನೀಟ್‌ ಪಿಜಿ ಪರೀಕ್ಷೆಯನ್ನು ರದ್ದುಗಳಿಸಲು ಸಾಧ್ಯವಿಲ್ಲ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ತಿಳಿಸಿದೆ.

ನೀಟ್‌ ಪರೀಕ್ಷೆ ನಡೆಯುವ ನಗರಗಳ ಪಟ್ಟಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜುಲೈ 31ರಂದು ಪ್ರಕಟಿಸಿದೆ. ಆಗಸ್ಟ್‌ 8ರಂದು ಪರೀಕ್ಷೆ ನಡೆಯುವ ಕೇಂದ್ರಗಳ ಮಾಹಿತಿ ನೀಡಲಾಗಿದೆ. ಇದರಿಂದಾಗಿ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ತಲುಪುವುದು ಕಷ್ಟವಾಗುತ್ತದೆ. ಹಾಗಾಗಿ, ಪರೀಕ್ಷೆಯನ್ನು ಮುಂದೂಡಬೇಕು, ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಬೇಕು. ನೀಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬುದಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

“ದೇಶದಲ್ಲಿ ಈಗಾಗಲೇ ತುಂಬ ಸಮಸ್ಯೆಗಳಿವೆ. ಈಗ ನೀಟ್‌ ಪಿಜಿ ಪರೀಕ್ಷೆಯನ್ನೂ ಮತ್ತೆ ಮುಂದೂಡಬೇಕಾ” ಎಂದು ಅರ್ಜಿದಾರರ ಪರ ವಕೀಲರಿಗೆ ಕೋರ್ಟ್‌ ಪ್ರಶ್ನಿಸಿತು. ಆಗ ಅರ್ಜಿದಾರರ ಪರ ವಕೀಲ ಸಂಜಯ್‌ ಹೆಗ್ಡೆ, “ಇದುವರೆಗೆ ಒಮ್ಮೆ ಮಾತ್ರ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ” ಎಂದು ತಿಳಿಸಿದರು. ಆಗ ನ್ಯಾಯಪೀಠವು, “ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್‌ ಪಿಜಿ ಬರೆಯಲು ಸಜ್ಜಾಗಿದ್ದಾರೆ. ಆದರೆ, 2 ಲಕ್ಷ ಅಭ್ಯರ್ಥಿಗಳಲ್ಲಿ ಐವರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆಯ ದಿನಾಂಕ ಮುಂದೂಡಲು ಆಗುವುದಿಲ್ಲ. ಅಷ್ಟಕ್ಕೂ, ಶೈಕ್ಷಣಿಕ ನೀತಿಯನ್ನು ನಾವು ಬದಲಿಸಲು ಸಾಧ್ಯವಿಲ್ಲ. ಇದು ಪರಿಪೂರ್ಣ ಜಗತ್ತು ಕೂಡ ಅಲ್ಲʼ ಎಂದು ಸ್ಪಷ್ಟಪಡಿಸಿತು.

ನೀಟ್‌ ಪಿಜಿ ಪರೀಕ್ಷೆಯನ್ನು ಇದಕ್ಕೂ ಮೊದಲು ಜೂನ್‌ 23ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ನೀಟ್‌ ಯುಜಿ, ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೊಪ ಕೇಳಿಬಂದ ಹಿನ್ನೆಲೆಯಲ್ಲಿ ನೀಟ್‌ ಪಿಜಿ ಪರೀಕ್ಷೆಯನ್ನು ಆಗಸ್ಟ್‌ 11ಕ್ಕೆ ಮುಂದೂಡಲಾಗಿತ್ತು. ನೀಟ್‌ ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಇದು ಕೋರ್ಟ್‌ ಮೆಟ್ಟಿಲು ಕೂಡ ಏರಿತ್ತು. ಆದರೆ, ನ್ಯಾಯಾಲಯವು ನೀಟ್‌ ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿದೆ.

ಇದನ್ನೂ ಓದಿ: NEET PG : ನೀಟ್​ ಪಿಜಿ ಪರೀಕ್ಷೆಯ ಗೌಪ್ಯ ಮಾಹಿತಿಗಳು ಸೋರಿಕೆ, ಅಭ್ಯರ್ಥಿಗಳಿಗೆ ಆತಂಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Tarsem Singh: ಎನ್‌ಐಎ ಪ್ರಮುಖ ಕಾರ್ಯಾಚರಣೆ; ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರ ತರ್ಸೇಮ್‌ ಸಿಂಗ್ ಬಂಧನ!

Tarsem Singh: ಪಂಜಾಬ್‌ನವನಾದ ತರ್ಸೇಮ್‌ ಸಿಂಗ್‌, ಉಗ್ರ ಲಖಬೀರ್‌ ಲಾಂಡಾನ ಸಹೋದರನಾಗಿದ್ದಾನೆ. ಈತನು ಮತ್ತೊಬ್ಬ ಉಗ್ರ ಹರ್ವಿಂದರ್‌ ಸಿಂಗ್‌ ರಿಂಡಾನ ಆಪ್ತನೂ ಆಗಿದ್ದಾನೆ. ಈತನು ಬಬ್ಬರ್‌ ಖಲಿಸ್ತಾನ ಇಂಟರ್‌ನ್ಯಾಷನಲ್‌ (BKI) ಉಗ್ರ ಸಂಘಟನೆಯ ಸದಸ್ಯನೂ ಆಗಿದ್ದಾನೆ. ಈತನನ್ನು ಎನ್‌ಐಎ ಅಧಿಕಾರಿಗಳು ಯುಎಇಯಲ್ಲಿ ಬಂಧಿಸಿದ್ದಾರೆ.

VISTARANEWS.COM


on

Tarsem Singh
Koo

ನವದೆಹಲಿ: ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ವಿದೇಶದಲ್ಲೂ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಯಶಸ್ವಿಯಾಗಿದೆ. ಖಲಿಸ್ತಾನಿ ಉಗ್ರ (Khalistan Terrorist) ತರ್ಸೇಮ್‌ ಸಿಂಗ್‌ನನ್ನು (Tarsem Singh) ಎನ್‌ಐಎ ಅಧಿಕಾರಿಗಳು ಯುಎಇಯ ಅಬುಧಾಬಿಯಲ್ಲಿ ಬಂಧಿಸಿದ್ದು, ಭಾರತಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ತರ್ಸೇಮ್‌ ಸಿಂಗ್‌ ವಿರುದ್ಧ ಎನ್‌ಐಎ ಅಧಿಕಾರಿಗಳು ಇದಕ್ಕೂ ಮೊದಲೇ ಜಾಮೀನು ರಹಿತ ವಾರಂಟ್‌ ಹೊರಡಿಸಿದ್ದರು. ಅದರಂತೆ, ಯುಎಇ ಅಧಿಕಾರಿಗಳು, ಇಂಟರ್‌ಪೋಲ್‌ ಜತೆ ಸಂಪರ್ಕ ಸಾಧಿಸಿ, ಹಸ್ತಾಂತರ ಪ್ರಕ್ರಿಯೆ ಮುಗಿಸಿ, ತರ್ಸೇಮ್‌ ಸಿಂಗ್‌ನನ್ನು ಅಬುಧಾಬಿಯಲ್ಲಿ ಬಂಧಿಸಿದ್ದಾರೆ.

ಪಂಜಾಬ್‌ನವನಾದ ತರ್ಸೇಮ್‌ ಸಿಂಗ್‌, ಉಗ್ರ ಲಖಬೀರ್‌ ಲಾಂಡಾನ ಸಹೋದರನಾಗಿದ್ದಾನೆ. ಈತನು ಮತ್ತೊಬ್ಬ ಉಗ್ರ ಹರ್ವಿಂದರ್‌ ಸಿಂಗ್‌ ರಿಂಡಾನ ಆಪ್ತನೂ ಆಗಿದ್ದಾನೆ. ಈತನು ಬಬ್ಬರ್‌ ಖಲಿಸ್ತಾನ ಇಂಟರ್‌ನ್ಯಾಷನಲ್‌ (BKI) ಉಗ್ರ ಸಂಘಟನೆಯ ಸದಸ್ಯನೂ ಆಗಿದ್ದಾನೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. 2023ರ ನವೆಂಬರ್‌ನಲ್ಲಿ ಅಬುಧಾಬಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಎನ್‌ಐಎ ವಿಶೇಷ ನ್ಯಾಯಾಲಯವು ವಾರಂಟ್‌ ಹೊರಡಿಸಿದ ಬಳಿಕ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿತ್ತು.

ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿದ ಬಳಿಕ 2023ರಲ್ಲಿ ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರನನ್ನು ವಶಪಡಿಸಿಕೊಳ್ಳಲಾಗಿತ್ತು ಇದಾದ ಬಳಿಕ ಎನ್‌ಐಎ ಅಧಿಕಾರಿಗಳು ಯುಎಇ, ಇಂಟರ್‌ಪೋಲ್‌ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಸಮರ್ಪಕ ದಾಖಲೆಗಳನ್ನು ಒದಗಿಸಿ, ಯುಎಇಗೆ ತೆರಳಿ, ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ತರ್ಸೇಮ್‌ ಸಿಂಗ್‌ನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಎನ್‌ಐಎ ಅಧಿಕಾರಿಗಳು ಆತನನ್ನು ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಉಗ್ರ ಚಟುವಟಿಕೆಗಳ ಹಿನ್ನೆಲೆಯಲ್ಲಿ ತರ್ಸೇಮ್‌ ಸಿಂಗ್‌ ವಿರುದ್ಧ ಎನ್‌ಐಎ 2022ರ ಆಗಸ್ಟ್‌ನಲ್ಲಿ ಸುಮೋಟೊ (ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದು) ಕೇಸ್‌ ದಾಖಲಿಸಿಕೊಂಡಿತ್ತು. ಖಲಿಸ್ತಾನ ಲಿಬರೇಷನ್‌ ಫೊರ್ಸ್‌, ಬಿಕೆಐ, ಇಂಟರ್‌ನ್ಯಾಷನಲ್‌ ಸಿಖ್‌ ಯೂತ್‌ ಫೆಡರೇಷನ್‌ ಸೇರಿ ಹಲವು ಉಗ್ರ ಸಂಘಟನೆಗಳು ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುಮೋಟೊ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ತರ್ಸೇಮ್‌ ಸಿಂಗ್‌ ಕೃತ್ಯಗಳು ಬಯಲಾಗಿವೆ. ಇದಾದ ಬಳಿಕ ಎನ್‌ಐಎ ತನಿಖೆ ಚುರುಕುಗೊಳಿಸಿದೆ.

ಇದನ್ನೂ ಓದಿ: Khalistani Terrorist: ಖಲಿಸ್ತಾನಿ ಭಯೋತ್ಪಾದಕ ಲಾಂಡಾನ ಪ್ರಮುಖ ಸಹಾಯಕ ಬಲ್ಜೀತ್ ಸಿಂಗ್ ಬಂಧನ

Continue Reading

ಕರ್ನಾಟಕ

NEET UG 2024: ಯುಜಿ ನೀಟ್: ಆ.12, 13ಕ್ಕೆ ದಾಖಲಾತಿ ಪರಿಶೀಲನೆ

NEET UG 2024: ಹೊಸದಾಗಿ ನೋಂದಣಿ ಮಾಡಿರುವ ಅಭ್ಯರ್ಥಿಗಳು ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

VISTARANEWS.COM


on

Koo

ಬೆಂಗಳೂರು: ಯುಜಿನೀಟ್-2024ಕ್ಕೆ (NEET UG 2024) ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ಎ ಮತ್ತು ಕ್ಲಾಸ್ ವೈ ಅಭ್ಯರ್ಥಿಗಳಿಗೆ ಪರಿಶೀಲನಾ ಪತ್ರವನ್ನು (ವೆರಿಫಿಕೇಶನ್ ಸ್ಲಿಪ್) ಪ್ರಾಧಿಕಾರದ ವೆಬ್‌ಸೈಟಿನ ಸೂಕ್ತ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರ ಸೂಚಿಸಿದೆ.

ಒಂದು ವೇಳೆ ಎ ಮತ್ತು ಕ್ಲಾಸ್ ವೈ ಅಭ್ಯರ್ಥಿಗಳು ಯುಜಿ ನೀಟ್- 24ಕ್ಕೆ ಹೊಸದಾಗಿ ನೋಂದಣಿ ಮಾಡಿಸಿಕೊಂಡಿದ್ದು, ಎನ್ ಆರ್ ಐ-ವಾರ್ಡ್ ಎಂದು ಕ್ಲೇಮ್ ಮಾಡಿದ್ದಲ್ಲಿ ಅಥವಾ ಪ್ರವರ್ಗ 2ರಿಂದ ಪ್ರವರ್ಗ 8ರ ಅಡಿಯಲ್ಲಿ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕ್ಲೇಮ್ ಮಾಡಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುಜಿ ನೀಟ್-2024ಕ್ಕೆ ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಒ ಅಭ್ಯರ್ಥಿಗಳು ಹಾಗೂ ಒಸಿಐ/ ಪಿಐಒ / ಎನ್ ಆರ್ ಐ / ವಿದೇಶ ಪ್ರಜೆ ಅಭ್ಯರ್ಥಿಗಳು ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ದಾಖಲೆಗಳ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳ ಬಗ್ಗೆ ತಿಳಿಯಲು ಯುಜಿ ನೀಟ್-2024 ಮಾಹಿತಿ ಪುಸ್ತಕ ನೋಡಬಹುದು ಎಂದು ಹೇಳಲಾಗಿದೆ. ಆ.7ರಿಂದ 9ರವರೆಗೆ ನಡೆದ ದಾಖಲಾತಿ ಪರಿಶೀಲನೆಗೆ ಹಾಜರಾಗದಿದ್ದವರು ಕೂಡ ಈ ಮೇಲಿನ ದಿನಗಳಂದು ಭೇಟಿ ಕೊಡಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ | Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿದೆ 55 ಹುದ್ದೆ; ಹೀಗೆ ಅಪ್ಲೈ ಮಾಡಿ

ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಮತ್ತೆ ಮುಂದೂಡಿಕೆ; ಯಾವಾಗ ಪ್ರಕಟ?

KCET Mock Allotment 2024
KCET Mock Allotment 2024

ಬೆಂಗಳೂರು: ಯುಜಿಸಿಇಟಿ 2024ರ (UGCET 2024) ಮೊದಲ ಅಣಕು ಸೀಟು ಹಂಚಿಕೆಯ ಫಲಿತಾಂಶ ಬಿಡುಗಡೆ ಮತ್ತೆ ಮುಂದೂಡಿಕೆಯಾಗಿದೆ. ಆಗಸ್ಟ್ 9ರ ಸಂಜೆ ಫಲಿತಾಂಶ (KCET Mock Allotment 2024) ಬಿಡುಗಡೆ ಮಾಡುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿತ್ತು. ಆದರೆ, ಇದೀಗ ಮತ್ತೆ ಒಂದು ದಿನ ಮುಂದೂಡಲಾಗಿದೆ. ಈ ಕುರಿತು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.

ಎಂಜಿನಿಯರಿಂಗ್ (Engineering) ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ (UGCET 2024) ಪ್ರವೇಶಕ್ಕೆ ತಮ್ಮ ಆಸಕ್ತಿಗನುಗುಣವಾಗಿ ಆಪ್ಷನ್ ದಾಖಲಿಸಿರುವ ಸಿಇಟಿ ರ‍್ಯಾಂಕಿಂಗ್ (CET Ranking) ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಆ.10ರಂದು ಸಂಜೆ 6 ಗಂಟೆಗೊಳಗೆ ಕೆಇಎ (KEA) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.

ಅಭ್ಯರ್ಥಿಗಳಿಗೆ ತಮ್ಮ ಆಪ್ಷನ್ ದಾಖಲಿಸಲು ಆಗಸ್ಟ್ 4 ಕೊನೆಯ ದಿನವಾಗಿತ್ತು. ಎಂಜಿನಿಯರಿಂಗ್, ಯೋಗ, ನ್ಯಾಚುರೋಪಥಿ, ಪಶುವೈದ್ಯ, ನರ್ಸಿಂಗ್, ಕೃಷಿ ವಿಜ್ಞಾನ, ಬಿ -ಫಾರ್ಮಾ ಮತ್ತು ಡಿ-ಫಾರ್ಮಾ ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆ ಆಪ್ಷನ್‌ ಮೂಲಕ ನಡೆದಿದೆ. ಇಂದು ಅಣಕು ಸೀಟು ಹಂಚಿಕೆ ಬಳಿಕ ನೈಜ ಸೀಟು ಹಂಚಿಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ | Job Vacancies: ಸಾವಿರ ಮಹಿಳಾ ಪೊಲೀಸ್ ಕಾನ್‌‌ಸ್ಟೇಬಲ್ ಹುದ್ದೆಗಳಿಗೆ ಲಕ್ಷಕ್ಕೂ ಹೆಚ್ಚು ಅರ್ಜಿ! ಫುಟ್‌‌ಪಾತ್‌‌ನಲ್ಲೇ ಮಲಗಿದ್ದ ಮಹಿಳಾ ಅಭ್ಯರ್ಥಿಗಳು

ಈ ಮೊದಲು ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಏಳು ದಿನ ಅವಕಾಶ ನೀಡಲಾಗಿತ್ತು. ಜು.30ರಂದು ಕೊನೆಯಾಗಲಿದ್ದ ಅದನ್ನು ಅಭ್ಯರ್ಥಿಗಳ ಮನವಿ ಮೇರೆಗೆ ಮತ್ತೂ ವಿಸ್ತರಿಸಲಾಗಿತ್ತು. ಯೋಗ ಮತ್ತು ನ್ಯಾಚುರೋಪತಿ ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅದಕ್ಕೂ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿತ್ತು. ರಾಷ್ಟ್ರೀಯ ವೈದ್ಯಕೀಯ ಮಂಡಳಿ, ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು / ಅಧಿಸೂಚನೆಗಳ ಅನ್ವಯ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.

Continue Reading

ದೇಶ

CAA Rules: ಪಾಕ್‌, ಬಾಂಗ್ಲಾ, ಆಘ್ಘನ್‌ ನಿರಾಶ್ರಿತರಿಗೆ ಸಿಹಿ ಸುದ್ದಿ; ಸಿಎಎ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ!

CAA Rules: ಭಾರತದ ಪೌರತ್ವ ಪಡೆಯಲು ನಿರಾಶ್ರಿತ ಅಲ್ಪಸಂಖ್ಯಾತರು ಇನ್ನು ಮುಂದೆ ಸುಲಭವಾಗಿ ಪೌರತ್ವ ಪಡೆಯುವ ರೀತಿಯಲ್ಲಿ ಸಿಎಎ ಕಾಯ್ದೆಯ ಪರಿಚ್ಛೇದ 1 ಎ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಿಸಿದೆ. ದಾಖಲೆ ಸಲ್ಲಿಕೆಯಲ್ಲಿ ನಿರಾಶ್ರಿತರಿಗೆ ವಿಳಂಬ, ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಸಿಎಎ ನಿಯಮಗಳನ್ನು ಬದಲಾಯಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

VISTARANEWS.COM


on

CAA Rules
Koo

ನವದೆಹಲಿ: ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದ್ದು, ಹಿಂದುಗಳ ಮೇಲೆ ಹಲ್ಲೆ, ಹತ್ಯೆ, ದೇವಾಲಯಗಳ ಮೇಲೆ ದಾಳಿಗಳು ನಡೆಯುತ್ತಿವೆ. ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಬಾಂಗ್ಲಾದೇಶದಲ್ಲಿ ಹಿಂದುಗಳು ಸೇರಿ ಹಲವು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯ (CAA) ನಿಯಮಗಳನ್ನು ಬದಲಿಸಿದೆ.

ಹೌದು, ಭಾರತದ ಪೌರತ್ವ ಪಡೆಯಲು ನಿರಾಶ್ರಿತ ಅಲ್ಪಸಂಖ್ಯಾತರು ಇನ್ನು ಮುಂದೆ ಸುಲಭವಾಗಿ ಪೌರತ್ವ ಪಡೆಯುವ ರೀತಿಯಲ್ಲಿ ಸಿಎಎ ಕಾಯ್ದೆಯ ಪರಿಚ್ಛೇದ 1 ಎ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಿಸಿದೆ. ಅದರಂತೆ, ನಿರಾಶ್ರಿತರು ಕೇಂದ್ರ ಸರ್ಕಾರ, ಯಾವುದೇ ರಾಜ್ಯ ಸರ್ಕಾರ ಅಥವಾ ನ್ಯಾಯಾಂಗ ನೀಡುವ ದಾಖಲೆ, ಭೂಮಿಯ ದಾಖಲೆ ನೀಡಿದರೂ ಸಾಕು, ಭಾರತದ ಪೌರತ್ವವನ್ನು ಪಡೆಯಬಹುದಾಗಿದೆ. ಇದರ ಜತೆಗೆ ನಿರಾಶ್ರಿತರ ಅಜ್ಜ-ಅಜ್ಜಿ, ಮುತ್ತಜ್ಜ-ಮುತ್ತಜ್ಜಿಯು ಬಾಂಗ್ಲಾ, ಪಾಕ್‌ ಹಾಗೂ ಅಫಘಾನಿಸ್ತಾನದ ನಿವಾಸಿಗಳು ಎಂಬುದರ ಯಾವುದೇ ದಾಖಲೆ ನೀಡಿದರೂ ಭಾರತದ ಪೌರತ್ವ ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019 ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ. ಈಗಾಗಲೇ ಹಲವು ನಿರಾಶ್ರಿತರಿಗೆ ಕೇಂದ್ರ ಸರ್ಕಾರವು ಪೌರತ್ವ ನೀಡಿದೆ.

ಇದನ್ನೂ ಓದಿ: CAA: ಸಿಎಎ ಕಾಯ್ದೆಯಡಿ 14 ವಲಸಿಗರಿಗೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

Continue Reading

ಕರ್ನಾಟಕ

KCET Mock Allotment 2024: ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಮತ್ತೆ ಮುಂದೂಡಿಕೆ; ಯಾವಾಗ ಪ್ರಕಟ?

KCET Mock Allotment 2024: ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ತಮ್ಮ ಆಸಕ್ತಿಗನುಗುಣವಾಗಿ ಆಪ್ಷನ್ ದಾಖಲಿಸಿರುವ ಸಿಇಟಿ ರ‍್ಯಾಂಕಿಂಗ್ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಫಲಿತಾಂಶ ಬಿಡುಗಡೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದೆ.

VISTARANEWS.COM


on

KCET Mock Allotment 2024
Koo

ಬೆಂಗಳೂರು: ಯುಜಿಸಿಇಟಿ 2024ರ (UGCET 2024) ಮೊದಲ ಅಣಕು ಸೀಟು ಹಂಚಿಕೆಯ ಫಲಿತಾಂಶ ಬಿಡುಗಡೆ ಮತ್ತೆ ಮುಂದೂಡಿಕೆಯಾಗಿದೆ. ಆಗಸ್ಟ್ 9ರ ಸಂಜೆ ಫಲಿತಾಂಶ (KCET Mock Allotment 2024) ಬಿಡುಗಡೆ ಮಾಡುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿತ್ತು. ಆದರೆ, ಇದೀಗ ಮತ್ತೆ ಒಂದು ದಿನ ಮುಂದೂಡಲಾಗಿದೆ. ಈ ಕುರಿತು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.

ಎಂಜಿನಿಯರಿಂಗ್ (Engineering) ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ (UGCET 2024) ಪ್ರವೇಶಕ್ಕೆ ತಮ್ಮ ಆಸಕ್ತಿಗನುಗುಣವಾಗಿ ಆಪ್ಷನ್ ದಾಖಲಿಸಿರುವ ಸಿಇಟಿ ರ‍್ಯಾಂಕಿಂಗ್ (CET Ranking) ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಆ.10ರಂದು ಸಂಜೆ 6 ಗಂಟೆಗೊಳಗೆ ಕೆಇಎ (KEA) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.

ಅಭ್ಯರ್ಥಿಗಳಿಗೆ ತಮ್ಮ ಆಪ್ಷನ್ ದಾಖಲಿಸಲು ಆಗಸ್ಟ್ 4 ಕೊನೆಯ ದಿನವಾಗಿತ್ತು. ಎಂಜಿನಿಯರಿಂಗ್, ಯೋಗ, ನ್ಯಾಚುರೋಪಥಿ, ಪಶುವೈದ್ಯ, ನರ್ಸಿಂಗ್, ಕೃಷಿ ವಿಜ್ಞಾನ, ಬಿ -ಫಾರ್ಮಾ ಮತ್ತು ಡಿ-ಫಾರ್ಮಾ ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆ ಆಪ್ಷನ್‌ ಮೂಲಕ ನಡೆದಿದೆ. ಇಂದು ಅಣಕು ಸೀಟು ಹಂಚಿಕೆ ಬಳಿಕ ನೈಜ ಸೀಟು ಹಂಚಿಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಈ ಮೊದಲು ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಏಳು ದಿನ ಅವಕಾಶ ನೀಡಲಾಗಿತ್ತು. ಜು.30ರಂದು ಕೊನೆಯಾಗಲಿದ್ದ ಅದನ್ನು ಅಭ್ಯರ್ಥಿಗಳ ಮನವಿ ಮೇರೆಗೆ ಮತ್ತೂ ವಿಸ್ತರಿಸಲಾಗಿತ್ತು. ಯೋಗ ಮತ್ತು ನ್ಯಾಚುರೋಪತಿ ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅದಕ್ಕೂ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿತ್ತು. ರಾಷ್ಟ್ರೀಯ ವೈದ್ಯಕೀಯ ಮಂಡಳಿ, ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು / ಅಧಿಸೂಚನೆಗಳ ಅನ್ವಯ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.

ಇದನ್ನೂ ಓದಿ: Karnataka Weather : ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರ

ವಿವಿಧ ಕಂಡಿಕೆಗಳಡಿ ಕ್ಲೇಮ್ ಮಾಡಿದವರಿಗೆ ಆ.9ರವರೆಗೆ ದಾಖಲೆ ಪರಿಶೀಲನೆ

ಅರ್ಹತಾ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಂ, ಎನ್- ಕ್ಲೇಮ್ ಮಾಡಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ನಿಗದಿತ ದಿನಾಂಕಗಳಂದು ದಾಖಲೆಗಳ ಪರಿಶೀಲನೆಗೆ ಹಾಜರಾಗದೇ ಇದ್ದರೆ ಅಂತಹವರು ಆಗಸ್ಟ್ 9ರವರೆಗೆ ಕೆಇಎ ಕಚೇರಿಗೆ ಖುದ್ದು ಹಾಜರಾಗಿ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದೇ ಇದ್ದಲ್ಲಿ ಅಂತಹವರು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರಾಗುವುದಿಲ್ಲ.

ಸಿಇಟಿ ಪರಿಶೀಲನಾ ಅರ್ಜಿಯೇ ಸಾಕು

ಈ ಮೇಲ್ಕಂಡ ಕಂಡಿಕೆಗಳಲ್ಲಿ ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಆಯಾ ದಿನವೇ ಪರಿಶೀಲನಾ ಪತ್ರ (ವೆರಿಫಿಕೇಷನ್ ಸ್ಲಿಪ್) ನೀಡಿದ್ದು, ಅದನ್ನೇ ಯುಜಿನೀಟ್ ಪ್ರವೇಶಕ್ಕೂ ಬಳಸಬಹುದು. ಯುಜಿಸಿಇಟಿ ಅರ್ಜಿಗೆ ಯುಜಿನೀಟ್ ರೋಲ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಮತ್ತು ಅರ್ಜಿ ಪ್ರತಿಯನ್ನು ಮುದ್ರಣ ಮಾಡಿಕೊಳ್ಳಬೇಕು. ಅಂತಹವರು ಯುಜಿನೀಟ್ ವೆರಿಫಿಕೇಷನ್ ಸ್ಲಿಪ್ ಡೌನ್ ಲೋಡ್ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುಜಿಸಿಇಟಿ ವೆರಿಫಿಕೇಷನ್ ಸ್ಲಿಪ್ ನಲ್ಲಿ ಮುದ್ರಿತವಾಗಿರುವ ಸೀಕ್ರೆಟ್ ಕೀ ಮತ್ತು ಅರ್ಜಿ ಸಂಖ್ಯೆಯನ್ನೇ ನಮೂದಿಸಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳಿಗೆ ಇಚ್ಛೆಗಳನ್ನು (ಆಪ್ಷನ್) ದಾಖಲಿಸಬಹುದು. ಇದಕ್ಕೆ ಸದ್ಯದಲ್ಲೇ ಪೋರ್ಟಲ್ ಅನ್ನು ತೆರೆಯಲಾಗುವುದು. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್ ಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Tarsem Singh
ದೇಶ46 mins ago

Tarsem Singh: ಎನ್‌ಐಎ ಪ್ರಮುಖ ಕಾರ್ಯಾಚರಣೆ; ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರ ತರ್ಸೇಮ್‌ ಸಿಂಗ್ ಬಂಧನ!

Vinesh Phogat
ಕ್ರೀಡೆ48 mins ago

Vinesh Phogat : ವಿನೇಶ್​​ಗೆ ಬೆಳ್ಳಿ ಪದಕ ಕೊಡಲು ಸಾಧ್ಯವಿಲ್ಲ; ಒಲಿಂಪಿಕ್ಸ್​​ ಸಂಸ್ಥೆ ಮುಖ್ಯಸ್ಥ ಥಾಮಸ್ ಬಾಕ್​ ಸ್ಪಷ್ಟನೆ

ಕರ್ನಾಟಕ1 hour ago

NEET UG 2024: ಯುಜಿ ನೀಟ್: ಆ.12, 13ಕ್ಕೆ ದಾಖಲಾತಿ ಪರಿಶೀಲನೆ

Paris Olympics 2024
ಕ್ರೀಡೆ1 hour ago

Paris Olympics 2024 : ಲೈಂಗಿಕ ಕಿರುಕುಳದ ಆರೋಪದ ಮೇಲೆ ಈಜಿಪ್ಟ್​​ ಮೊಹಮ್ಮದ್ ಎಲ್ಸಯೀದ್ ಅರೆಸ್ಟ್​​

Independence day 2024
ತಂತ್ರಜ್ಞಾನ1 hour ago

Independence Day 2024: ಹೊಗೆ ಬಂಡಿಯಿಂದ ವಂದೇ ಭಾರತ್‌‌ವರೆಗೆ; ಭಾರತೀಯ ರೈಲ್ವೆಯ ಅದ್ಭುತ ಪಯಣ!

CAA Rules
ದೇಶ1 hour ago

CAA Rules: ಪಾಕ್‌, ಬಾಂಗ್ಲಾ, ಆಘ್ಘನ್‌ ನಿರಾಶ್ರಿತರಿಗೆ ಸಿಹಿ ಸುದ್ದಿ; ಸಿಎಎ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ!

Bengaluru News
ಬೆಂಗಳೂರು1 hour ago

Bengaluru News: ಬೃಹತ್‌ ಜನಾಂದೋಲನಕ್ಕೆ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಬೆಂಬಲ

KCET Mock Allotment 2024
ಕರ್ನಾಟಕ2 hours ago

KCET Mock Allotment 2024: ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಮತ್ತೆ ಮುಂದೂಡಿಕೆ; ಯಾವಾಗ ಪ್ರಕಟ?

Neeraj Chopra
ಕ್ರೀಡೆ2 hours ago

Neeraj Chopra : ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿಯುವ ಅವಕಾಶ ಶ್ರೀಜೇಶ್​ಗೆ ಬಿಟ್ಟುಕೊಟ್ಟ ನೀರಜ್​ ಚೋಪ್ರಾ

Narendra Modi
ದೇಶ2 hours ago

Narendra Modi: ಮೋದಿ ಪ್ರೊಫೈಲ್‌ ಫೋಟೊ ಈಗ ತಿರಂಗಾ; ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಜನರಿಗೆ ಕರೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 day ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 day ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 day ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌