Viral News: 5 ಕೆಜಿ ಆಲೂಗಡ್ಡೆ ಲಂಚ ಕೇಳಿ ಅಮಾನತುಗೊಂಡ ಸಬ್‌ ಇನ್ಸ್‌ಪೆಕ್ಟರ್ ! - Vistara News

ವೈರಲ್ ನ್ಯೂಸ್

Viral News: 5 ಕೆಜಿ ಆಲೂಗಡ್ಡೆ ಲಂಚ ಕೇಳಿ ಅಮಾನತುಗೊಂಡ ಸಬ್‌ ಇನ್ಸ್‌ಪೆಕ್ಟರ್ !

Viral News: ಉತ್ತರ ಪ್ರದೇಶದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬ ರೈತರೊಬ್ಬರಿಂದ 5 ಕೆಜಿ ʼಆಲೂಗಡ್ಡೆʼಯನ್ನು ಲಂಚವಾಗಿ ಕೇಳಿ ಅಮಾನತುಗೊಂಡಿರುವ ಘಟನೆ ನಡೆದಿದೆ. ಕನೌಜ್‌ನ ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್ಪುರ್ ಚಪುನ್ನಾ ಚೌಕಿಯ ಸಬ್‌ ಇನ್ಸ್‌ಪೆಕ್ಟರ್‌ ರಾಮ್ ಕೃಪಾಲ್ ಸಿಂಗ್ ಆಲೂಗಡ್ಡೆಯನ್ನು ಲಂಚವಾಗಿ ಕೇಳಿ ಅಮಾನತುಗೊಂಡವನು. ಆತ ಲಂಚ ಕೇಳುತ್ತಿದ್ದಾನೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏನಿದು ಪ್ರಕರಣ? ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ: ಲಂಚ (Bribe) ಭಾರತಕ್ಕೆ ಅಂಟಿದ ಬಹುದೊಡ್ಡ ಕಳಂಕ. ಪ್ರತಿಯೊಂದು ಕಡೆ ಲಂಚ ನಾನಾ ರೂಪದಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತದೆ. ಸರ್ಕಾರಿ ಕಚೇರಿಗಳಲ್ಲಿನ ಕೆಲಸ ಆಗಬೇಕು ಎಂದರೆ ಅಲ್ಲಿನ ಸಿಬ್ಬಂದಿಯ ಜೇಬು ತುಂಬಿಸಬೇಕು ಎನ್ನುವ ಅನಿವಾರ್ಯತೆ ಎದುರಾಗಿದೆ. ಲಂಚ ಕೊಡದಿದ್ದರೆ ಅನೇಕ ಬಾರಿ ಸರ್ಕಾರಿ ಕಚೇರಿ ಹತ್ತಿ ಇಳಿಯಬೇಕು ಅನ್ನುವ ಕಾರಣಕ್ಕೆ ಬಹುತೇಕರು ಹಣ ಅಥವಾ ಇನ್ಯಾವುದೋ ಬೆಲೆ ಬಾಳುವ ವಸ್ತುವಿನ ರೂಪದಲ್ಲಿ ಲಂಚ ಕೊಡಲು ಮುಂದಾಗುತ್ತಾರೆ. ಈಗ ಇಷ್ಟೆಲ್ಲ ಪೀಠಿಕೆ ಹಾಕಲೂ ಕಾರಣವಿದೆ. ಉತ್ತರ ಪ್ರದೇಶದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬ ರೈತರೊಬ್ಬರಿಂದ 5 ಕೆಜಿ ʼಆಲೂಗಡ್ಡೆʼಯನ್ನು ಲಂಚವಾಗಿ ಕೇಳಿ ಅಮಾನತುಗೊಂಡಿದ್ದು, ಈ ವಿಚಾರ ಸದ್ಯ ವೈರಲ್‌ ಆಗಿದೆ. ಅರೆ! ಆಲೂಗಡ್ಡೆಗೆ ಅಷ್ಟೊಂದು ಬೇಡಿಕೆ ಇದ್ಯಾ? ಏನಿದು ಪ್ರಕರಣ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Viral News).

ಕನೌಜ್‌ನ ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್ಪುರ್ ಚಪುನ್ನಾ ಚೌಕಿಯ ಸಬ್‌ ಇನ್ಸ್‌ಪೆಕ್ಟರ್‌ ರಾಮ್ ಕೃಪಾಲ್ ಸಿಂಗ್ ಆಲೂಗಡ್ಡೆಯನ್ನು ಲಂಚವಾಗಿ ಕೇಳಿ ಅಮಾನತುಗೊಂಡವನು. ಆತ ಲಂಚ ಕೇಳುತ್ತಿದ್ದಾನೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಆಲೂಗಡ್ಡೆಗೆ ಏಕೆ ಇಷ್ಟೊಂದು ಬೇಡಿಕೆ?

ಅಲೂಗಡ್ಡೆ ಅಷ್ಟೊಂದು ದುಬಾರಿಯೇ? ನಿತ್ಯ ನಾವು ಅಡುಗೆಯಲ್ಲಿ ಬಳಸುವ ಈ ತರಕಾರಿಗೆ ಈ ಪರಿ ಬೇಡಿಕೆ ಸೃಷ್ಟಿಯಾಗಿದ್ದು ಹೇಗೆ? ಸಹಜವಾಗಿ ಈ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಮೂಲಗಳ ಪ್ರಕಾರ ಇಲ್ಲಿ ಆಲೂಗಡ್ಡೆ ಎನ್ನುವ ಪದವನ್ನು ಸಾಂಕಾತಿಕವಾಗಿ ಬಳಸಲಾಗಿದೆ. ಪ್ರಕರಣವೊಂದನ್ನು ಇತ್ಯರ್ಥಪಡಿಸಲು ರಾಮ್ ಕೃಪಾಲ್ ಸಿಂಗ್ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆದರೆ ಹಣ ಎನ್ನುವ ಪದದ ಬದಲಾಗಿ ಆಲೂಗಡ್ಡೆ ಎಂದು ಕೋಡ್‌ವರ್ಡ್‌ ಬಳಸಿದ್ದಾನೆ. ಸದ್ಯ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆನಂದ್ ಅವರು ರಾಮ್ ಕೃಪಾಲ್ ಸಿಂಗ್‌ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಬಗ್ಗೆ ಇಲಾಖಾ ತನಿಖೆಗೂ ಸೂಚಿಸಲಾಗಿದೆ.

ಪ್ರಕರಣದ ವಿವರ

ವೈರಲ್ ಆಡಿಯೋದಲ್ಲಿ ರಾಮ್ ಕೃಪಾಲ್ ಸಿಂಗ್‌ ರೈತರೊಬ್ಬರ ಬಳಿ 5 ಕೆಜಿ ʼಆಲೂಗಡ್ಡೆʼಗೆ ಬೇಡಿಕೆ ಇಟ್ಟಿರುವುದು ಕೇಳಿಸುತ್ತದೆ. ಬಡ ರೈತ ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ. ಬದಲಿಗೆ 2 ಕೆಜಿ ನೀಡುವುದಾಗಿ ಉತ್ತರಿಸುತ್ತಾರೆ. ನಂತರ ಅಂತಿಮವಾಗಿ ಒಪ್ಪಂದವನ್ನು 3 ಕೆಜಿಗೆ ಮಾಡಿಕೊಳ್ಳಲಾಯಿತು.

ಎಕ್ಸ್‌ ಮೂಲಕ ಮಾಹಿತಿ

ಕನೌಜ್ ಪೊಲೀಸ್‌ ಠಾಣೆಯ ಸಿಬ್ಬಂದಿ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಎಸ್ಐ ರಾಮ್‌ ಕೃಪಾಲ್‌ ಸಿಂಗ್‌ನನ್ನು ಕನೌಜ್‌ನ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ. ಈ ಸಂಬಂಧ ಇಲಾಖಾ ಪ್ರಕ್ರಿಯೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದಿದ್ದಾರೆ. ಸದ್ಯ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ವ್ಯಾಪಕ ಚರ್ಚೆ ಆರಂಭಿಸಿದ್ದಾರೆ. 5 ಲಕ್ಷ ರೂ. ಅನ್ನು 5 ಕೆಜಿ ಆಲೂಗಡ್ಡೆಗೆ ಹೋಲಿಸಲಾಗಿದೆ ಎಂದು ಹಲವರು ತಮ್ಮ ಸಂದೇಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: ದಂತ ಕಸಿ ಮಾಡಲು ಮೂಳೆಗಳಿಗಾಗಿ ಸಾವಿರಾರು ಶವಗಳನ್ನು ಕದ್ದ ಚೀನಾ ಕಂಪನಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಟಿಕೆಟ್ ಇಲ್ಲದೆ ಎಸಿ ಬೋಗಿಯಲ್ಲಿ ಪ್ರಯಾಣಿಸಿದ ಪೊಲೀಸರು; ಟಿಕೆಟ್‌ ಪರಿಶೀಲಕರಿಗೇ ಧಮಕಿ!

Viral Video: ಇಬ್ಬರು ಪೊಲೀಸರು ಟಿಕೆಟ್ ಇಲ್ಲದೆ ರೈಲಿನ 2ನೇ ಎಸಿ ಬೋಗಿಯಲ್ಲಿ ಅಕ್ರಮವಾಗಿ ಪ್ರಯಾಣಿಸಿದ್ದಾರೆ. ಟಿಟಿಇಯವರು ಬಂದು ಪೊಲೀಸರನ್ನು ಪ್ರಶ್ನಿಸಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ. ಅಲ್ಲಿ ವಾದವಿವಾದಗಳು ಶುರುವಾಗಿವೆ. ಆ ವೇಳೆ ಪೊಲೀಸರು ತಾವು ಅಧಿಕಾರಿಗಳೆಂಬ ದರ್ಪ ತೋರಿದ್ದಾರೆ. ಸಮವಸ್ತ್ರದಲ್ಲಿದ್ದ ಪೊಲೀಸರು ರೈಲ್ವೆ ನಿಯಮಗಳನ್ನು ಧಿಕ್ಕರಿಸಿ ಟಿಟಿಇಯೊಂದಿಗೆ ವಾದದಲ್ಲಿ ತೊಡಗಿ ಅಧಿಕಾರವನ್ನು ದುರಪಯೋಗಪಡಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Viral Video
Koo


ಸಾಮಾನ್ಯ ಜನರು ಕೆಲವೊಮ್ಮೆ ಟಿಕೆಟ್ ಇಲ್ಲದೆ ಬಸ್, ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಪೊಲೀಸ್ ಅಧಿಕಾರಿಗಳು ಇಂತಹ ಕೆಲಸ ಮಾಡಿದರೆ ಅದು ಅವರನ್ನು ಕೆಳಮಟ್ಟಕ್ಕೆ ಇಳಿಸುತ್ತದೆ. ಇದೀಗ ಪೊಲೀಸರು ಟಿಕೆಟ್ ಇಲ್ಲದೆ 2ನೇ ಎಸಿ ಬೋಗಿಯಲ್ಲಿ ಪ್ರಯಾಣ ಮಾಡಿ ತಮ್ಮ ಅಧಿಕಾರವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಸುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಈ ವಿಡಿಯೊದಲ್ಲಿ ಇಬ್ಬರು ಪೊಲೀಸರು ಟಿಕೆಟ್ ಇಲ್ಲದೆ ರೈಲಿನ 2ನೇ ಎಸಿ ಬೋಗಿಯಲ್ಲಿ ಅಕ್ರಮವಾಗಿ ಪ್ರಯಾಣಿಸುತ್ತಿದ್ದಾರೆ. ಟಿಟಿಇಯವರು ಬಂದು ಪೊಲೀಸರನ್ನು ಪ್ರಶ್ನಿಸಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ ಮತ್ತು ಅಲ್ಲಿ ವಾದವಿವಾದಗಳು ಶುರುವಾಗಿದೆ. ಆ ವೇಳೆ ಪೊಲೀಸರು ತಾವು ಅಧಿಕಾರಿಗಳೆಂಬ ದರ್ಪ ತೋರಿದ್ದಾರೆ. ಸಮವಸ್ತ್ರದಲ್ಲಿದ್ದ ಪೊಲೀಸರು ರೈಲ್ವೆ ನಿಯಮಗಳನ್ನು ಧಿಕ್ಕರಿಸಿ ಟಿಟಿಇಯೊಂದಿಗೆ ವಾದದಲ್ಲಿ ತೊಡಗಿ ಅಧಿಕಾರವನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಈ ವಿಡಿಯೊದಿಂದ ತಿಳಿಯುತ್ತದೆ. ಇವರ ನಡುವಿನ ಘರ್ಷಣೆ ಹೆಚ್ಚಾಗಿ, ಅವರು ಟಿಟಿಇಗೆ ಬೆದರಿಕೆ ಹಾಕಿದ್ದಾರೆ. ಇದು ಕರ್ತವ್ಯದಲ್ಲಿದ್ದ ಪೊಲೀಸರ ಅಶಿಸ್ತಿತನ್ನು ಸೂಚಿಸುತ್ತದೆ.

ವರದಿ ಪ್ರಕಾರ, ಪೊಲೀಸರ ಬಳಿ ಟಿಕೆಟ್ ಇಲ್ಲ ಎಂದು ತಿಳಿದ ಪ್ರಯಾಣಿಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಟಿಟಿಇ ಅವರ ಬಳಿ ಟಿಕೆಟ್ ತೋರಿಸಲು ಹೇಳಿದ್ದಾರೆ. ಪೊಲೀಸರ ಈ ದುರ್ನಡತೆಯು ಬೋಗಿಯಲ್ಲಿ ಕೋಲಾಹಲವನ್ನು ಹುಟ್ಟುಹಾಕಿತು. ಮತ್ತು ಕಾನೂನನ್ನು ನಿರ್ಲಕ್ಷಿಸುವ ಮತ್ತು ಇತರರನ್ನು ಗೌರವಿಸುವ ಬಗ್ಗೆ ಅಸಮಾಧಾನವನ್ನು ಉಂಟುಮಾಡಿದೆ ಎನ್ನಲಾಗಿದೆ.

ಈ ವಿಡಿಯೊವನ್ನು ‘ಘರ್ ಕೆ ಕಾಲೇಶ್’ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದು ವೈರಲ್ ಆಗಿ ಸಾಕಷ್ಟು ಟೀಕೆಗಳನ್ನು ಪಡೆದಿದೆ. ಇದು ಪೊಲೀಸರ ದರ್ಪವನ್ನು ತೋರಿಸುತ್ತದೆ. ಇದರಲ್ಲಿ ಸಮವಸ್ತ್ರದಲ್ಲಿರುವ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಮತ್ತು ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ನಿಯಮಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ.

ಇದನ್ನೂ ಓದಿ:ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!

ಸಮವಸ್ತ್ರದಲ್ಲಿರಲಿ ಅಥವಾ ಇಲ್ಲದಿರಲಿ, ಯಾವುದೇ ವ್ಯಕ್ತಿಯು ಕಾನೂನಿಗಿಂತ ಮೇಲಲ್ಲ. ಭಾರತೀಯ ರೈಲ್ವೆಯು ಟಿಕೆಟ್ ಇಲ್ಲದೆ ಪ್ರಯಾಣಿಸುವುದರ ವಿರುದ್ಧ ಕಠಿಣ ಕಾನೂನು ಮತ್ತು ನಿಬಂಧನೆಗಳನ್ನು ಹೊಂದಿದೆ, ಇದು ಎಲ್ಲರಿಗೂ ಅನ್ವಯಿಸುತ್ತದೆ. ಒಬ್ಬರ ಸ್ಥಾನ ಅಥವಾ ಅಧಿಕಾರವನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಕಾನೂನು ಮಾನದಂಡಗಳನ್ನು ಕಾಪಾಡಿಕೊಳ್ಳಬೇಕು ಮತ್ತು ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕು ಎಂಬ ಅಂಶವನ್ನು ಇದು ಎತ್ತಿ ಹಿಡಿಯುತ್ತದೆ.

Continue Reading

Latest

Viral News: ಬಸ್ ನಿಲ್ಲಿಸದಿದ್ದಕ್ಕೆ ಕೋಪಗೊಂಡು ಕಂಡಕ್ಟರ್‌ ಮೇಲೆ ನಾಗರಹಾವನ್ನು ಎಸೆದ ಮಹಿಳೆ!

Viral News: ಬಸ್ ನಿಲ್ಲಿಸಲಿಲ್ಲ ಎಂದು ಕೋಪಗೊಂಡ ಮಹಿಳೆಯೊಬ್ಬಳು ಬಸ್ಸಿನ ಹಿಂಭಾಗಕ್ಕೆ ಬಿಯರ್ ಬಾಟಲಿಯನ್ನು ಎಸೆದು ಹಾನಿ ಮಾಡಿದ್ದಾಳೆ. ಆಗ ಬಸ್‌ ನಿಲ್ಲಿಸಿ ಅವಳನ್ನು ತರಾಟೆಗೆ ತೆಗೆದುಕೊಂಡ ಮಹಿಳಾ ಕಂಡಕ್ಟರ್ ಮೇಲೆ ಮಹಿಳೆ ತನ್ನ ಚೀಲದಲ್ಲಿದ್ದ ನಾಗರಹಾವನ್ನು ಎಸೆದಿದ್ದಾಳೆ. ಮೈಮೇಲೆ ಹಾವು ಬಿದ್ದಾಗ ಕಂಡಕ್ಟರ್‌ ಕಕ್ಕಾಬಿಕ್ಕಿಯಾಗಿದ್ದಾರೆ. ಈ ವಿಚಿತ್ರ ಘಟನೆಯ ಸುದ್ದಿ ಇಲ್ಲಿದೆ.

VISTARANEWS.COM


on

Viral News
Koo


ಹೈದರಾಬಾದ್: ಸಾಮಾನ್ಯವಾಗಿ ಗಂಡಸರು ಕುಡಿದು ರಸ್ತೆಯಲ್ಲಿ ಅವಾಂತರಗಳನ್ನು ಸೃಷ್ಟಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ಕುಡಿದು ಅದರ ಮತ್ತಿನಲ್ಲಿ ಬಸ್ ಕಂಡಕ್ಟರ್ ಜೊತೆ ರೌಡಿ ಹಾಗೇ ವರ್ತಿಸಿದ್ದಾಳೆ. ಕುಡಿದ ಮತ್ತಿನಲ್ಲಿದ್ದ ಮಹಿಳೆ ಬಸ್ ನಿಲ್ಲಿಸದಿದ್ದಕ್ಕೆ ಕೋಪಗೊಂಡು ಬಸ್ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದ್ದಲ್ಲದೇ ಬಸ್ಸಿನ ಮಹಿಳಾ ಕಂಡಕ್ಟರ್‌ನ ಮೇಲೆ ಹಾವನ್ನು ಎಸೆದಿದ್ದಾಳೆ. ಈ ಘಟನೆ ವಿದ್ಯಾನಗರದಲ್ಲಿ ಗುರುವಾರ ಸಂಜೆ ನಡೆದಿದ್ದು ಇದು ಎಲ್ಲೆಡೆ ವೈರಲ್‌ (Viral News)ಆಗಿದೆ.

ಟಿಜಿಎಸ್‍ಆರ್‌ಟಿಸಿ ಬಸ್ ವಿದ್ಯಾನಗರದ ಮೂಲಕ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತಿದ್ದ 50 ವರ್ಷ ವಯಸ್ಸಿನ ಬೇಗಂ ಎಂಬ ಮಹಿಳೆ ಬಸ್ ಅನ್ನು ನಿಲ್ಲಿಸಲು ಹೇಳಿದ್ದಾಳೆ. ಆದರೆ ಕಂಡಕ್ಟರ್ ಹಾಗೂ ಡ್ರೈವರ್ ಬಸ್ ನಿಲ್ಲಿಸಲಿಲ್ಲ. ಇದರಿಂದ ಕೋಪಗೊಂಡ ಮಹಿಳೆ ಬಸ್ಸಿನ ಹಿಂಭಾಗಕ್ಕೆ ಬಿಯರ್ ಬಾಟಲಿಯನ್ನು ಎಸೆದು ಹಿಂಭಾಗದ ವಿಂಡ್ ಶೀಲ್ಡ್ ಗೆ ಹಾನಿಮಾಡಿದ್ದಾಳೆ. ಆಗ ಬಸ್ ನಿಲ್ಲಿಸಿ ಡ್ರೈವರ್, ಮಹಿಳಾ ಕಂಡೆಕ್ಟರ್ ಹಾಗೂ ಪ್ರಯಾಣಿಕರು ಅವಳನ್ನು ಹಿಡಿದು ತರಾಟೆಗೆ ತೆಗೆದುಕೊಂಡಾಗ ಮಹಿಳೆ ತನ್ನ ಚೀಲದಲ್ಲಿದ್ದ ನಾಗರಹಾವನ್ನು ಮಹಿಳಾ ಕಂಡಕ್ಟರ್ ಮೈಮೇಲೆ ಎಸೆದಿದ್ದಾಳೆ. ಆಗ ಕಂಡಕ್ಟರ್ ಮೈಮೇಲೆ ಬಿದ್ದ ಹಾವು ಅವರಿಗೆ ಯಾವುದೇ ಹಾನಿ ಮಾಡದೆ ಪಕ್ಕಕ್ಕೆ ಸರಿದುಕೊಂಡು ಹೋಗಿದೆ. ಇದರಿಂದ ಕಂಡಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಟಿಜಿಎಸ್‍ಆರ್‌ಟಿಸಿ ಎಂಡಿ ವಿಸಿ ಸಜ್ಜನರ್, ಇಂತಹ ಘಟನೆಗಳನ್ನು ನೋಡುವುದು ದುಃಖಕರವಾಗಿದೆ ಎಂದು ತಿಳಿಸಿ ಆರ್‌ಟಿಸಿ ನೌಕರರು ಮತ್ತು ಬಸ್‍ಗಳ ಮೇಲೆ ಇಂತಹ ದಾಳಿಗಳನ್ನು ಮಾಡದಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ. ಮತ್ತು ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಮತ್ತು ಪೊಲೀಸರ ಸಹಾಯದಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಜ್ಜನರ್ ಹೇಳಿದ್ದಾರೆ.

ಇದನ್ನೂ ಓದಿ: ತನ್ನ ಹಸ್ತಮೈಥುನದ ವಿಡಿಯೊ ಕಳುಹಿಸಿ ವಿದ್ಯಾರ್ಥಿಯನ್ನು ಕಾಮದ ಬಲೆಗೆ ಸಿಲುಕಿಸಿದ್ದ ಶಿಕ್ಷಕಿಯ ಬಂಧನ!

ಈ ಬಗ್ಗೆ ಮಾತನಾಡಿದ ಮಹಿಳಾ ಕಂಡಕ್ಟರ್, “ನಾನು ಅವಳನ್ನು ಹಿಡಿದು ಅವಳೊಂದಿಗೆ ಮಾತನಾಡುತ್ತಿದ್ದೆ, ಅವಳ ಬಳಿ ಬಸ್ ಮೇಲೆ ಏಕೆ ದಾಳಿ ಮಾಡಿದೆ ಎಂದು ಕೇಳುತ್ತಿದ್ದೆ, ಆಗ ಅವಳು ಇದ್ದಕ್ಕಿದ್ದಂತೆ ತನ್ನ ಚೀಲದಿಂದ ಹಾವನ್ನು ಹೊರತೆಗೆದು ನನ್ನ ಮೇಲೆ ಎಸೆದಳು. ಅಲ್ಲಿದ್ದ ಎಲ್ಲರೂ ಓಡಿಹೋದರು” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮಹಿಳೆಯನ್ನು ವಿಚಾರಣೆ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Continue Reading

Latest

Viral News: ದಂತ ಕಸಿ ಮಾಡಲು ಮೂಳೆಗಳಿಗಾಗಿ ಸಾವಿರಾರು ಶವಗಳನ್ನು ಕದ್ದ ಚೀನಾ ಕಂಪನಿ!

Viral News: ಚೀನಾದ ಕಂಪನಿಯೊಂದು ದಂತ ಕಸಿ ಮಾಡಲು ಸ್ಮಶಾನಗಳು ಮತ್ತು ವೈದ್ಯಕೀಯ ಪ್ರಯೋಗಾಲಯಗಳಿಂದ 4,000ಕ್ಕೂ ಹೆಚ್ಚು ಶವಗಳನ್ನು ಕದ್ದಿದೆ ಎಂದು ಆರೋಪಿಸಲಾಗಿದೆ. ಅಲೋಜೆನಿಕ್ ಮೂಳೆ ಕಸಿಗಳನ್ನು ಉತ್ಪಾದಿಸಲು ಮೂಳೆಗಳನ್ನು ಬಳಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಉತ್ತರ ಪ್ರಾಂತ್ಯದ ಶಾಂಕ್ಸಿಯ ರಾಜಧಾನಿ ತೈಯುವಾನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬೀಜಿಂಗ್ ಬ್ರೇವ್ ವಕೀಲರ ಸಂಘದ ಅಧ್ಯಕ್ಷ ಯಿ ಶೆಂಗ್ಹುವಾ ಹೇಳಿದ್ದಾರೆ.

VISTARANEWS.COM


on

Viral News
Koo


ಚೀನಾದ ಕಂಪನಿಯೊಂದು ದಂತ ಕಸಿ ಮಾಡಲು ಸ್ಮಶಾನಗಳು ಮತ್ತು ವೈದ್ಯಕೀಯ ಪ್ರಯೋಗಾಲಯಗಳಿಂದ 4,000 ಕ್ಕೂ ಹೆಚ್ಚು ಶವಗಳನ್ನು ಕದ್ದಿದೆ ಎಂದು ಆರೋಪಿಸಲಾಗಿದೆ. ಪ್ರಸಿದ್ಧ ಕ್ರಿಮಿನಲ್ ವಕೀಲರು ಗುರುವಾರ ಈ ಪ್ರಕರಣಕ್ಕೆ ಸಂಬಂಧಪಟ್ಟ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral News) ಆಗಿದೆ.

ಬೀಜಿಂಗ್ ಬ್ರೇವ್ ವಕೀಲರ ಸಂಘದ ಅಧ್ಯಕ್ಷ ಯಿ ಶೆಂಗ್ಹುವಾ, ಉತ್ತರ ಪ್ರಾಂತ್ಯದ ಶಾಂಕ್ಸಿಯ ರಾಜಧಾನಿ ತೈಯುವಾನ್‍ನ ಪೊಲೀಸರು ಅಲೋಜೆನಿಕ್ ಮೂಳೆ ಕಸಿಗಳನ್ನು ಉತ್ಪಾದಿಸಲು ಮೂಳೆಗಳನ್ನು ಬಳಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಶಾಂಕ್ಸಿ ಅರೋಯಿ ಬಯೋಮೆಟೀರಿಯಲ್ಸ್ ಎಂಬ ಕಂಪನಿಯು ಸಿಚುವಾನ್, ಗುವಾಂಗ್ಕ್ಸಿ ಮತ್ತು ಶಾಂಡೊಂಗ್ ಪ್ರಾಂತ್ಯಗಳಿಂದ ಶವಗಳು ಮತ್ತು ಶವದ ಕೈಕಾಲುಗಳನ್ನು ಅಕ್ರಮವಾಗಿ ಖರೀದಿಸಿ ಮೂಳೆ ಕಸಿಗಳನ್ನು ತಯಾರಿಸಲು ಬಳಸುತ್ತಿದೆ ಎಂದು ಶಂಕಿಸಲಾಗಿದೆ ಎಂದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ತಿಳಿಸಲಾಗಿದೆ.

ಇದರಿಂದ ಕಂಪನಿಯು 380 ಮಿಲಿಯನ್ ಯುವಾನ್ (ಯುಎಸ್ $ 53 ಮಿಲಿಯನ್) ಗಳಿಸಿದೆ. ಅದರಲ್ಲೂ ದಂತ ಕಸಿಗಾಗಿ ಮೂಳೆಗಳನ್ನು ಮಾರಾಟ ಮಾಡುವುದರಿಂದ ಹೆಚ್ಚು ಆದಾಯ ಗಳಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ರೋಗಿಗಳಲ್ಲಿ ಕಸಿಗಳಿಗೆ ಸಾಕಷ್ಟು ಮೂಳೆ ಸಾಂದ್ರತೆ ಇಲ್ಲದಿದ್ದಾಗ ಅಲೋಜೆನಿಕ್ ಕಸಿಗಳನ್ನು ಬಳಸಲಾಗುತ್ತದೆ, ಆದರೆ ಮೂಳೆಯನ್ನು ಸಾಮಾನ್ಯವಾಗಿ ಸೊಂಟದ ಬದಲಿಯಂತಹ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವ ರೋಗಿಗಳಿಂದ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.

ಪೊಲೀಸರು 18 ಟನ್ ಮೂಳೆಗಳು ಮತ್ತು 34,000 ಕ್ಕೂ ಹೆಚ್ಚು ಈಗಾಗಲೇ ಸಿದ್ಧಪಡಿಸಿದ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಯಿ ಪ್ರಕಟಿಸಿದ ದಾಖಲೆಗಳು ತಿಳಿಸಿವೆ. ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ ಸು ಎಂಬ ಶಂಕಿತನು ಯುನ್ನಾನ್, ಚಾಂಗ್ಕಿಂಗ್, ಗುಯಿಝೌ ಮತ್ತು ಸಿಚುವಾನ್ ನ ಸ್ಮಶಾನಗಳಿಂದ 4,000 ಕ್ಕೂ ಹೆಚ್ಚು ಮಾನವ ದೇಹಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು. ಯುನ್ನಾನ್ ಪ್ರಾಂತ್ಯದ ಶುಯಿಫು, ಚಾಂಗ್ಕಿಂಗ್ ನ ಬನಾನ್ ಜಿಲ್ಲೆ, ಗುಯಿಝೌನ ಶಿಕಿಯಾನ್ ಕೌಂಟಿ ಮತ್ತು ಸಿಚುವಾನ್‍ನ ಡೇಯಿಂಗ್ ಕೌಂಟಿಯ ಚಿತಾಗಾರದ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಹೆಚ್ಚಿನ ಸಂಸ್ಕರಣೆಗಾಗಿ ಸು ಅವರ ಕಂಪನಿಗೆ ಸಾಗಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ವೇಗವಾಗಿ ಬಂದು ಅಪ್ಪಳಿಸಿದ ಸ್ಕಾರ್ಪಿಯೋ; ಒಂದೇ ಕುಟುಂಬದ ಮೂವರು ಪಾರಾಗಿದ್ದೇ ಅಚ್ಚರಿ!

ಅಲ್ಲದೇ ತನಿಖೆಯ ಸಮಯದಲ್ಲಿ ಇನ್ನೂ75 ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಚಿತಾಗಾರಗಳಲ್ಲಿನ ಕಾರ್ಮಿಕರು ಮೂಳೆಗಳನ್ನು ಸುಗೆ ಮಾರಾಟ ಮಾಡಲು ಶವಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿದ್ದಾರೆ ಎಂದು ಶಂಕಿಸಲಾಗಿದೆ. ಶಾಂಡೊಂಗ್‌ನ ಕಿಂಗ್ಡಾವೊ ಯೂನಿವರ್ಸಿಟಿ ಆಸ್ಪತ್ರೆಯ ಲಿವರ್ ಸೆಂಟರ್ ಅಕ್ರಮವಾಗಿ ಶವಗಳನ್ನು ಕಂಪನಿಗೆ ಮಾರಾಟ ಮಾಡಿದೆ ಎಂಬ ಹೇಳಿಕೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಹಾಗೇ ವೈದ್ಯಕೀಯ ವಿಜ್ಞಾನಕ್ಕೆ ಉತ್ತಮ ಕೊಡುಗೆ ನೀಡಿದ ಲಿವರ್ ಸೆಂಟರ್ ನ ನಿರ್ದೇಶಕ ಲಿ ಬಾಕ್ಸಿಂಗ್ ಅವರು ಈ ಪ್ರಕರಣದಲ್ಲಿ ಕೈಜೋಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

Continue Reading

Latest

Viral Video: ವೇಗವಾಗಿ ಬಂದು ಅಪ್ಪಳಿಸಿದ ಸ್ಕಾರ್ಪಿಯೋ; ಒಂದೇ ಕುಟುಂಬದ ಮೂವರು ಪಾರಾಗಿದ್ದೇ ಅಚ್ಚರಿ!

Viral Video ಆಂಧ್ರಪ್ರದೇಶದ ನರಸಪುರಂನಲ್ಲಿ ಬುಧವಾರ ಸ್ಕಾರ್ಪಿಯೋ ವಾಹನವೊಂದು ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಯಲ್ಲಿ ನಿಂತಿದ್ದ ಹಲವಾರು ಜನರ ಮೇಲೆ ಹರಿದ ಪರಿಣಾಮ ಒಬ್ಬ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾಯಿಯೊಬ್ಬಳು ತನ್ನ ಮಗನೊಂದಿಗೆ ಬೈಕಿನಲ್ಲಿ ಕುಳಿತುಕೊಳ್ಳಲು ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಆದರೆ ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

VISTARANEWS.COM


on

Viral Video
Koo


ಅತಿ ವೇಗ ಅಪಘಾತಕ್ಕೆ ಕಾರಣ ಎಂದು ತಿಳಿದರೂ ಕೂಡ ಜನರು ವೇಗವಾಗಿ ವಾಹನಗಳನ್ನು ಚಲಾಯಿಸುವುದನ್ನು ಬಿಡುತ್ತಿಲ್ಲ. ಇದರಿಂದ ಅನೇಕ ಸಾವು-ನೋವುಗಳಾಗಿವೆ. ಇದೀಗ ಆಂಧ್ರಪ್ರದೇಶದ ನರಸಪುರಂನಲ್ಲಿ ಬುಧವಾರ ಸ್ಕಾರ್ಪಿಯೋ ವಾಹನವೊಂದು ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಯಲ್ಲಿ ನಿಂತಿದ್ದ ಹಲವಾರು ಜನರ ಮೇಲೆ ಹರಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಈ ಘೋರ ದೃಶ್ಯ ಅಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಕಾರು ಜನರಿಗೆ ಡಿಕ್ಕಿ ಹೊಡೆದ ಘೋರ ದೃಶ್ಯ ಸೆರೆಯಾಗಿದೆ. ಈ ವಿಡಿಯೊದಲ್ಲಿ ತೋರಿಸುವಂತೆ, ತಾಯಿಯೊಬ್ಬಳು ತನ್ನ ಮಗುವಿನೊಂದಿಗೆ ಬೈಕಿನಲ್ಲಿ ಕುಳಿತುಕೊಳ್ಳಲು ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಆದರೆ ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಒಬ್ಬ ವ್ಯಕ್ತಿ ಕಾರಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಬಿದ್ದಿದ್ದಾನೆ. ವರದಿಗಳ ಪ್ರಕಾರ, ಸೀತಾರಾಮಪುರಂನಿಂದ ನರಸಪುರಂಗೆ ಬರುತ್ತಿದ್ದ ಕಾರು ಆಂಜನೇಯಸ್ವಾಮಿ ದೇವಾಲಯದ ಬಳಿ ನಿಯಂತ್ರಣ ಕಳೆದುಕೊಂಡಾಗ ಈ ಘಟನೆ ಸಂಭವಿಸಿದೆ ಎಂಬುದಾಗಿ ತಿಳಿದುಬಂದಿದೆ.

ಮಂಗಳಗುಂಟಪಲೇನಿಯ ಗೋರಿಂಕಲಾ ವಾಲಿವಾರ್ ಎಂಬುವವರು ತನ್ನ ಚಿಕ್ಕಮ್ಮ ಮೇಕಲಾ ಮೇರಿಬಾಯಿ (58) ಅವರನ್ನು ಸ್ಕೂಟರ್‌ನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ಕಾರು ಡಿಕ್ಕಿ ಹೊಡೆದಿದೆ. ಮೇರಿಬಾಯಿ ಸ್ಥಳದಲ್ಲೇ ಮೃತಪಟ್ಟರೆ, ವಾಲಿವರ್ ಗಂಭೀರವಾಗಿ ಗಾಯಗೊಂಡರು. ಇದಲ್ಲದೆ, ನಂತರ ಅದೇ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಪೆದ್ದಿರೆಡ್ಡಿ ಅರುಣಾ, ಅವರ ಪತಿ ಏಸು ಮತ್ತು ಅವರ 13 ವರ್ಷದ ಮಗ ಸಾಯಿಮಣಿಕಂಠಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕೂಡ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ವಾಲಿವರ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೆ, ಗಾಯಗೊಂಡ ಇತರ ಮೂವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.

ಇದನ್ನೂ ಓದಿ: ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!

ಈ ಅಪಘಾತದಲ್ಲಿ ಆರು ದ್ವಿಚಕ್ರ ವಾಹನಗಳು ಸಹ ಹಾನಿಯಾಗಿವೆ ಎಂಬುದಾಗಿ ತಿಳಿದುಬಂದಿದೆ. ವಾಲಿವಾರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ನರಸಪುರಂ ಪಟ್ಟಣ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಯಲಕ್ಷ್ಮಿ ಖಚಿತಪಡಿಸಿದ್ದಾರೆ. ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ.

Continue Reading
Advertisement
Paris Olympics 2024
ಪ್ರಮುಖ ಸುದ್ದಿ8 mins ago

Paris Olympics 2024 : ವಿನೇಶ್ ಫೋಗಟ್​ ಬೆಳ್ಳಿ ಪದಕದ ಮನವಿ ತೀರ್ಪು ಭಾನುವಾರಕ್ಕೆ ಮುಂದೂಡಿಕೆ

BJP-JDS Padayatra
ಕರ್ನಾಟಕ29 mins ago

BJP-JDS Padayatra: ಪರಿಶಿಷ್ಟ, ಒಬಿಸಿಯವರಿಗೆ ಕಾಂಗ್ರೆಸ್‌ನಿಂದ ಸದಾ ಅಪಮಾನ; ಪ್ರಲ್ಹಾದ್‌ ಜೋಶಿ

Independence Day 2024
ದೇಶ33 mins ago

Independence day 2024: ಮೊದಲ ಸ್ವಾತಂತ್ರ್ಯೋತ್ಸವದಲ್ಲಿ ಗಾಂಧೀಜಿಯೇ ಭಾಗವಹಿಸಲಿಲ್ಲ! ಇಲ್ಲಿವೆ ಸ್ವಾತಂತ್ರ್ಯ ದಿನಾಚರಣೆಯ ಕುತೂಹಲಕರ ಸಂಗತಿಗಳು

Shira News
ತುಮಕೂರು42 mins ago

Shira News: ಶ್ರಾವಣದ ಮೊದಲ ಶನಿವಾರ; ಶಿರಾ ತಾಲೂಕಿನಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ

Jitesh Sharma
ಕ್ರೀಡೆ52 mins ago

Jitesh Sharma : ಟೆಕಿ ಜತೆ ಎಂಗೇಜ್ಮೆಂಟ್​ ಮಾಡಿಕೊಂಡ ಜಿತೇಶ್ ಶರ್ಮಾ

Trainee Doctor
ಪ್ರಮುಖ ಸುದ್ದಿ1 hour ago

Trainee Doctor: ವೈದ್ಯೆಯ ಕೊಂದ ಆರೋಪಿಯನ್ನು ಹಿಡಿದುಕೊಟ್ಟ ಬ್ಲ್ಯೂಟೂತ್‌ ಹೆಡ್‌ಫೋನ್; ಹೇಗಂತೀರಾ?

Actor Chetan Ahimsa
ಕರ್ನಾಟಕ2 hours ago

Actor Chetan Ahimsa: ಸ್ವಂತ ಮನೆಯಿಲ್ಲ ಎಂದ ಸಿಎಂ ಸಿದ್ದರಾಮಯ್ಯ ವಿರುದ್ಧ ನಟ ಚೇತನ್‌ ಅಹಿಂಸಾ ಕಿಡಿ

Hindu Population
ದೇಶ2 hours ago

Hindu Population: ಅಸ್ಸಾಂನಲ್ಲಿ ಹಿಂದುಗಳ ಸಂಖ್ಯೆ ಶೇ.10ರಷ್ಟು ಕುಸಿತ; ಲೆಕ್ಕ ಕೊಟ್ಟ ಹಿಮಂತ ಬಿಸ್ವಾ ಶರ್ಮಾ!

Kashmir Encounter
ದೇಶ3 hours ago

Kashmir Encounter: ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ; ಇಬ್ಬರು ಯೋಧರು ಹುತಾತ್ಮ

Parsis Olympics 2024
ಕ್ರೀಡೆ3 hours ago

Paris Olympics 2024 : ನಾಳೆ ಪ್ಯಾರಿಸ್​ ಒಲಿಂಪಿಕ್ಸ್​ ಸಮಾರೋಪ; ಎಲ್ಲಿ ಕಾರ್ಯಕ್ರಮ? ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಎಲ್ಲ ವಿವರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌