Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ ಮುಕ್ತಾಯ; ಅಮೆರಿಕಕ್ಕೆ ಅಗ್ರಸ್ಥಾನ; ಚೀನಾಕ್ಕೆ ಎರಡನೇ ಸ್ಥಾನ - Vistara News

ಕ್ರೀಡೆ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ ಮುಕ್ತಾಯ; ಅಮೆರಿಕಕ್ಕೆ ಅಗ್ರಸ್ಥಾನ; ಚೀನಾಕ್ಕೆ ಎರಡನೇ ಸ್ಥಾನ

Paris Olympic 2024 : ಫ್ರಾನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಅಮೆರಿಕ 67-66 ಅಂಕಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿತು. ಅಮೆರಿಕ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚಿನ ಪದಕಗಳು ಸೇರಿದಂತೆ 126 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಚೀನಾ 40 ಚಿನ್ನದ ಪದಕಗಳು ಸೇರಿದಂತೆ 91 ಪದಕಗಳೊಂದಿಗೆ ಕ್ರೀಡಾಕೂಟವನ್ನು ಕೊನೆಗೊಳಿಸಿತು. 2008ರಲ್ಲಿ ಬೀಜಿಂಗ್​​ನಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಚೀನಾ 48 ಚಿನ್ನದ ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತ್ತು.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್​​ 2024ರ (Paris Olympics 2024) ಸ್ಪರ್ಧೆಗಳು ಭಾನುವಾರ ಸಂಜೆಯ ವೇಳೆಗೆ ಮುಕ್ತಾಯಗೊಂಡಿದ್ದು ಅಮೆರಿಕ ಅಮೆರಿಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಕೂದಲೆಳೆಯ ಅಂತರದಿಂದ ಹಿಂದಿಕ್ಕಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್ ನಡುವಿನ ಮಹಿಳಾ ಬ್ಯಾಸ್ಕೆಟ್​​ಬಾಲ್​ ಒಲಿಂಪಿಕ್ಸ್​ನ ಕೊನೇ ಸ್ಪರ್ಧೆಯಾಗಿತ್ತು. ಅಲ್ಲಿ ಅಮೆರಿಕ ಚಿನ್ನ ಗೆದ್ದುಕೊಂಡಿತ್ತು. ಅಲ್ಲಿ ತನಕ ಚೀನಾ 40 ಚಿನ್ನದೊಂದಿಗೆ ಮೊದಲ ಸ್ಥಾನದಲ್ಲಿತ್ತು.. ಅಮೆರಿಕ ಬಾಸ್ಕೆಟ್​ಬಾಲ್​ ಗೆಲ್ಲುವುದರೊಂದಿಗೆ ಅಮೆರಿಕ 40 ಚಿನ್ನ ಗೆದ್ದುಕೊಂಡಿತು. ಜತೆಗೆ ಪದಕ ಪಟ್ಟಿಯಲ್ಲಿ ಬೆಳ್ಳಿ ಹಾಗೂ ಕಂಚಿನ ಸಹಾಯದಿಂದ ಅಗ್ರಸ್ಥಾನಕ್ಕೆ ಏರಿತು. ಈ ಮೂಲಕ ಅಮೆರಿಕನ್ನರು ಸತತ ನಾಲ್ಕನೇ ಬಾರಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು.

ಫ್ರಾನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಅಮೆರಿಕ 67-66 ಅಂಕಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿತು. ಅಮೆರಿಕ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚಿನ ಪದಕಗಳು ಸೇರಿದಂತೆ 126 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಚೀನಾ 40 ಚಿನ್ನದ ಪದಕಗಳು ಸೇರಿದಂತೆ 91 ಪದಕಗಳೊಂದಿಗೆ ಕ್ರೀಡಾಕೂಟವನ್ನು ಕೊನೆಗೊಳಿಸಿತು. 2008ರಲ್ಲಿ ಬೀಜಿಂಗ್​​ನಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಚೀನಾ 48 ಚಿನ್ನದ ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತ್ತು.

ಡೈವಿಂಗ್, ಕಲಾತ್ಮಕ ಈಜು ಮತ್ತು ಟೇಬಲ್ ಟೆನಿಸ್ ಮತ್ತು ವೇಟ್ ಲಿಫ್ಟಿಂಗ್ ಸೇರಿದಂತೆ ಪೂಲ್ ಸ್ಪರ್ಧೆಗಳಲ್ಲಿ ಚೀನಾ ಪ್ರಾಬಲ್ಯ ಸಾಧಿಸಿದರೆ, ಯುಎಸ್ಎ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ 14 ಚಿನ್ನದ ಪದಕಗಳು, 11 ಬೆಳ್ಳಿ ಪದಕಗಳು ಮತ್ತು 9 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿತು. ಇಲ್ಲಿ ಅಮೆರಿಕನ್ನರು ಎಂಟು ಚಿನ್ನದ ಪದಕಗಳು ಸೇರಿದಂತೆ ಒಟ್ಟು 28 ಪದಕಗಳನ್ನು ಗೆದ್ದರು.

ಭಾರತಕ್ಕೆ 71ನೇ ಸ್ಥಾನ

ಭಾರತ 5 ಕಂಚು, 1 ಬೆಳ್ಳಿ ಸೇರಿದಂತೆ ಒಟ್ಟು 6 ಪದಕಗಳೊಂದಿಗೆ 71ನೇ ಸ್ಥಾನದಲ್ಲಿದೆ. ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್ ತಲುಪಿದ ವಿನೇಶ್ ಫೋಗಟ್ ತನ್ನ ಅನರ್ಹತೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (ಸಿಎಎಸ್) ಪ್ರಶ್ನಿಸಿದ್ದರಿಂದ ಭಾರತಕ್ಕೆ ನಿರ್ಧಾರ ಪೂರಕವಾಗಿ ಬಂದರೆ ತನ್ನ ಪಟ್ಟಿಗೆ ಇನ್ನೂ ಒಂದು ಪದಕ ಸೇರಿಸಬಹುದು. ಫೈನಲ್ ಪಂದ್ಯದ ವೇಳೆ 100 ಗ್ರಾಂ ತೂಕ ಹೊಂದಿದ್ದಕ್ಕಾಗಿ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಪಾಕಿಸ್ತಾನ 44 ವರ್ಷಗಳ ಬಳಿಕ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದು 62ನೇ ಸ್ಥಾನದಲ್ಲಿದೆ. ಪುರುಷರ ಜಾವೆಲಿನ್ ಫೈನಲ್​​ನಲ್ಲಿ ಅರ್ಷದ್ ನದೀಮ್ ಮೊದಲ ಸ್ಥಾನ ಪಡೆದರು.

ಇದನ್ನೂ ಓದಿ: Paris Olympics 2024 : ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಐಫೆಲ್​ ಟವರ್​ ಏರಿ ಕುಳಿತ ಆಗಂತುಕ!

ಜಪಾನ್ 20 ಚಿನ್ನ ಸೇರಿದಂತೆ 45 ಪದಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಜಪಾನ್ 27 ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನ ಪಡೆದಿತ್ತು.

ವಿಶ್ವದಾದ್ಯಂತದ ಕ್ರೀಡಾ ಲೀಗ್​ಗಳಲ್ಲಿ ಅಂಕಿ ಅಂಶ ವಿಶ್ಲೇಷಣೆ ಮಾಡುವ ಪೋರ್ಟಲ್ ನೀಲ್ಸನ್​ನ ಗ್ರೇಸ್ನೋಟ್ ಸ್ಪೋರ್ಟ್ಸ್, ಗ್ರೇಟ್ ಬ್ರಿಟನ್ ಅಗ್ರ ಮೂರರಲ್ಲಿ ಸ್ಥಾನ ಪಡೆಯುತ್ತದೆ ಮತ್ತು ಜಪಾನ್ ಮೂರು ವರ್ಷಗಳ ಹಿಂದೆ ಸ್ವದೇಶದಲ್ಲಿ ಗೆದ್ದ ಚಿನ್ನದ ಪದಕಗಳಲ್ಲಿ ಅರ್ಧದಷ್ಟು ಮಾತ್ರ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿತ್ತು. ಅದು ಸುಳ್ಳಾಗಿದೆ.

ಗ್ರೇಟ್ ಬ್ರಿಟನ್ 14 ಚಿನ್ನದ ಪದಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 18 ಚಿನ್ನದ ಪದಕಗಳನ್ನು ಗೆದ್ದು ಅಗ್ರ ನಾಲ್ಕು ಸ್ಥಾನಗಳನ್ನು ಗಳಿಸಿದೆ. ಆತಿಥೇಯ ಫ್ರಾನ್ಸ್ 16 ಚಿನ್ನದ ಪದಕಗಳೊಂದಿಗೆ ಅಗ್ರ 5ನೇ ಸ್ಥಾನ ಪಡೆದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ಗೆ ತೆರೆ; ಅದ್ಧೂರಿ ಸಮಾರೋಪದಲ್ಲಿ ಮನು ಭಾಕರ್​, ಶ್ರೀಜೇಶ್​ ಭಾಗಿ

Paris Olympics 2024 :ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಅಭಿಯಾನವು 6 ಪದಕಗಳನ್ನು ಗೆಲ್ಲುವ ಮೂಲಕ ಕೊನೆಗೊಂಡಿತು. ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆದ್ದರೆ, ಸರಬ್ಜೋತ್ ಸಿಂಗ್, ಸ್ವಪ್ನಿಲ್ ಕುಸಲೆ, ಅಮನ್ ಸೆಹ್ರಾವತ್ ಮತ್ತು ಭಾರತೀಯ ಹಾಕಿ ತಂಡವು ತಲಾ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿತು. ಜಾವೆಲಿನ್ ಸ್ಟಾರ್​ ನೀರಜ್ ಚೋಪ್ರಾ ಪ್ಯಾರಿಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

VISTARANEWS.COM


on

Koo

ಬೆಂಗಳೂರು : ಪ್ಯಾರಿಸ್​ ಒಲಿಂಪಿಕ್ಸ್​​ನ ಕ್ರೀಡಾಕೂಟ (Paris Olympics 2024) ಭಾನುವಾರ ಮುಕ್ತಾಯಗೊಂಡಿತು. ಅಮೆರಿಕ ಮತ್ತು ಫ್ರಾನ್ಸ್​ನಡುವಿನ ಮಹಿಳೆಯರ ತಂಡಗಳ ಬಾಸ್ಕೆಟ್​ಬಾಲ್​ ಚಿನ್ನದ ಪದಕದ ಪಂದ್ಯ ಕೂಟದ ಕೊನೇ ಹಣಾಹಣಿಯಾಗಿತ್ತು. ಆ ಬಳಿಕ ಅದ್ಧೂರಿ ಸಮಾರಂಭ ನಡೆಯಿತು. ಭಾರತದ ಕಂಚಿನ ಪದಕಗಳ ಹೀರೋಗಳಾದ ಮನು ಭಾಕರ್ ಹಾಗೂ ಹಾಕಿ ಆಟಗಾರ ಶ್ರೀಜೇಶ್ ತ್ರಿವರ್ಣ ಧ್ವಜಧಾರಿಗಳಾಗಿ ಸಮಾರೋಪ ಸಮಾರಂಭದ ಪರೇಡ್​ನಲ್ಲಿ ಪಾಲ್ಗೊಂಡರು. ಬೃಹತ್ ಸಂಖ್ಯೆಯ ಕ್ರೀಡಾಭಿಮಾನಿಗಳು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪರೇಡ್​ನಲ್ಲಿ ಭಾರತೀಯ ತಾರೆಗಳು ಪಾಲ್ಗೊಂಡರು. ಆ ಬಳಿಕ ವರ್ಣರಂಜಿತ ಕಾರ್ಯಕ್ರಮಗಳು ನಡೆದವು.

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಅಭಿಯಾನವು 6 ಪದಕಗಳನ್ನು ಗೆಲ್ಲುವ ಮೂಲಕ ಕೊನೆಗೊಂಡಿತು. ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆದ್ದರೆ, ಸರಬ್ಜೋತ್ ಸಿಂಗ್, ಸ್ವಪ್ನಿಲ್ ಕುಸಲೆ, ಅಮನ್ ಸೆಹ್ರಾವತ್ ಮತ್ತು ಭಾರತೀಯ ಹಾಕಿ ತಂಡವು ತಲಾ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿತು. ಜಾವೆಲಿನ್ ಸ್ಟಾರ್​ ನೀರಜ್ ಚೋಪ್ರಾ ಪ್ಯಾರಿಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಅಮೆರಿಕ ಅಮೆರಿಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಕೂದಲೆಳೆಯ ಅಂತರದಿಂದ ಹಿಂದಿಕ್ಕಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್ ನಡುವಿನ ಮಹಿಳಾ ಬ್ಯಾಸ್ಕೆಟ್​​ಬಾಲ್​ ಒಲಿಂಪಿಕ್ಸ್​ನ ಕೊನೇ ಸ್ಪರ್ಧೆಯಾಗಿತ್ತು. ಅಲ್ಲಿ ಅಮೆರಿಕ ಚಿನ್ನ ಗೆದ್ದುಕೊಂಡಿತ್ತು. ಅಲ್ಲಿ ತನಕ ಚೀನಾ 40 ಚಿನ್ನದೊಂದಿಗೆ ಮೊದಲ ಸ್ಥಾನದಲ್ಲಿತ್ತು.. ಅಮೆರಿಕ ಬಾಸ್ಕೆಟ್​ಬಾಲ್​ ಗೆಲ್ಲುವುದರೊಂದಿಗೆ ಅಮೆರಿಕ 40 ಚಿನ್ನ ಗೆದ್ದುಕೊಂಡಿತು. ಜತೆಗೆ ಪದಕ ಪಟ್ಟಿಯಲ್ಲಿ ಬೆಳ್ಳಿ ಹಾಗೂ ಕಂಚಿನ ಸಹಾಯದಿಂದ ಅಗ್ರಸ್ಥಾನಕ್ಕೆ ಏರಿತು. ಈ ಮೂಲಕ ಅಮೆರಿಕನ್ನರು ಸತತ ನಾಲ್ಕನೇ ಬಾರಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು.

ಫ್ರಾನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಅಮೆರಿಕ 67-66 ಅಂಕಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿತು. ಅಮೆರಿಕ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚಿನ ಪದಕಗಳು ಸೇರಿದಂತೆ 126 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಚೀನಾ 40 ಚಿನ್ನದ ಪದಕಗಳು ಸೇರಿದಂತೆ 91 ಪದಕಗಳೊಂದಿಗೆ ಕ್ರೀಡಾಕೂಟವನ್ನು ಕೊನೆಗೊಳಿಸಿತು. 2008ರಲ್ಲಿ ಬೀಜಿಂಗ್​​ನಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಚೀನಾ 48 ಚಿನ್ನದ ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತ್ತು.

ಇದನ್ನೂ ಓದಿ: PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

ಡೈವಿಂಗ್, ಕಲಾತ್ಮಕ ಈಜು ಮತ್ತು ಟೇಬಲ್ ಟೆನಿಸ್ ಮತ್ತು ವೇಟ್ ಲಿಫ್ಟಿಂಗ್ ಸೇರಿದಂತೆ ಪೂಲ್ ಸ್ಪರ್ಧೆಗಳಲ್ಲಿ ಚೀನಾ ಪ್ರಾಬಲ್ಯ ಸಾಧಿಸಿದರೆ, ಯುಎಸ್ಎ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ 14 ಚಿನ್ನದ ಪದಕಗಳು, 11 ಬೆಳ್ಳಿ ಪದಕಗಳು ಮತ್ತು 9 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿತು. ಇಲ್ಲಿ ಅಮೆರಿಕನ್ನರು ಎಂಟು ಚಿನ್ನದ ಪದಕಗಳು ಸೇರಿದಂತೆ ಒಟ್ಟು 28 ಪದಕಗಳನ್ನು ಗೆದ್ದರು.

ಭಾರತಕ್ಕೆ 71ನೇ ಸ್ಥಾನ

ಭಾರತ 5 ಕಂಚು, 1 ಬೆಳ್ಳಿ ಸೇರಿದಂತೆ ಒಟ್ಟು 6 ಪದಕಗಳೊಂದಿಗೆ 71ನೇ ಸ್ಥಾನದಲ್ಲಿದೆ. ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್ ತಲುಪಿದ ವಿನೇಶ್ ಫೋಗಟ್ ತನ್ನ ಅನರ್ಹತೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (ಸಿಎಎಸ್) ಪ್ರಶ್ನಿಸಿದ್ದರಿಂದ ಭಾರತಕ್ಕೆ ನಿರ್ಧಾರ ಪೂರಕವಾಗಿ ಬಂದರೆ ತನ್ನ ಪಟ್ಟಿಗೆ ಇನ್ನೂ ಒಂದು ಪದಕ ಸೇರಿಸಬಹುದು. ಫೈನಲ್ ಪಂದ್ಯದ ವೇಳೆ 100 ಗ್ರಾಂ ತೂಕ ಹೊಂದಿದ್ದಕ್ಕಾಗಿ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಪಾಕಿಸ್ತಾನ 44 ವರ್ಷಗಳ ಬಳಿಕ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದರು.

ಜಪಾನ್ 20 ಚಿನ್ನ ಸೇರಿದಂತೆ 45 ಪದಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಜಪಾನ್ 27 ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನ ಪಡೆದಿತ್ತು.

ವಿಶ್ವದಾದ್ಯಂತದ ಕ್ರೀಡಾ ಲೀಗ್​ಗಳಲ್ಲಿ ಅಂಕಿ ಅಂಶ ವಿಶ್ಲೇಷಣೆ ಮಾಡುವ ಪೋರ್ಟಲ್ ನೀಲ್ಸನ್​ನ ಗ್ರೇಸ್ನೋಟ್ ಸ್ಪೋರ್ಟ್ಸ್, ಗ್ರೇಟ್ ಬ್ರಿಟನ್ ಅಗ್ರ ಮೂರರಲ್ಲಿ ಸ್ಥಾನ ಪಡೆಯುತ್ತದೆ ಮತ್ತು ಜಪಾನ್ ಮೂರು ವರ್ಷಗಳ ಹಿಂದೆ ಸ್ವದೇಶದಲ್ಲಿ ಗೆದ್ದ ಚಿನ್ನದ ಪದಕಗಳಲ್ಲಿ ಅರ್ಧದಷ್ಟು ಮಾತ್ರ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿತ್ತು. ಅದು ಸುಳ್ಳಾಗಿದೆ.

ಗ್ರೇಟ್ ಬ್ರಿಟನ್ 14 ಚಿನ್ನದ ಪದಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 18 ಚಿನ್ನದ ಪದಕಗಳನ್ನು ಗೆದ್ದು ಅಗ್ರ ನಾಲ್ಕು ಸ್ಥಾನಗಳನ್ನು ಗಳಿಸಿದೆ. ಆತಿಥೇಯ ಫ್ರಾನ್ಸ್ 16 ಚಿನ್ನದ ಪದಕಗಳೊಂದಿಗೆ ಅಗ್ರ 5ನೇ ಸ್ಥಾನ ಪಡೆದಿದೆ

Continue Reading

ಕ್ರೀಡೆ

Paris Olympics 2024 : ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಐಫೆಲ್​ ಟವರ್​ ಏರಿ ಕುಳಿತ ಆಗಂತುಕ!

Paris Olympics 2024: ವಿವರಗಳ ಪ್ರಕಾರ, ಅಂಗಿ ಧರಿಸದೇ ಕೇವಲ ಶಾರ್ಟ್​​ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬ ಮಧ್ಯಾಹ್ನ 330 ಮೀಟರ್ ಎತ್ತರದ ಗೋಪುರ ಏರುತ್ತಿರುವುದು ಕಂಡುಬಂದಿದೆ. ಆತ ಯಾವಾಗ ಮತ್ತು ಎಲ್ಲಿಂದ ತಮ್ಮ ಏರಲು ಪ್ರಾರಂಭಿಸಿದ್ದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟವರ್​ ಮೇಲೆ ಅಳವಡಿಸಲಾಗಿದ್ದ ರಿಂಗ್​ ಮೇಲೆ ಆತನ ಚಹರೆ ಕಂಡುಬಂದಾಗ ಅಧಿಕಾರಿಗಳು ಆತನನ್ನು ಸ್ಥಳಾಂತರ ಮಾಡಿದರು. ಐಫೆಲ್ ಟವರ್​ನ ಮೇಲೆ ವ್ಯಕ್ತಿಯನ್ನು ಗುರುತಿಸಿದ ನಂತರ, ಪೊಲೀಸರು ಈ ಪ್ರದೇಶವನ್ನು ಸುತ್ತುವರಿದರು.

VISTARANEWS.COM


on

Paris Olympics 2024
Koo

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics 2024) ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು, ವ್ಯಕ್ತಿಯೊಬ್ಬರು ಪ್ಯಾರಿಸ್​​ನ ಐತಿಹಾಸಿಕ ಐಫೆಲ್ ಟವರ್ (Eiffel Tower) ಏರಿ ಆತಂಕ ಸೃಷ್ಟಿಸಿದ್ದಾನೆ. ವ್ಯಕ್ತಿಯೊಬ್ಬ ಏರುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ ತಕ್ಷಣವೇ ಜಾಗೃತರಾಗಿದ್ದು, ಆತನನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ.

ವಿವರಗಳ ಪ್ರಕಾರ, ಅಂಗಿ ಧರಿಸದೇ ಕೇವಲ ಶಾರ್ಟ್​​ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬ ಮಧ್ಯಾಹ್ನ 330 ಮೀಟರ್ ಎತ್ತರದ ಗೋಪುರ ಏರುತ್ತಿರುವುದು ಕಂಡುಬಂದಿದೆ. ಆತ ಯಾವಾಗ ಮತ್ತು ಎಲ್ಲಿಂದ ತಮ್ಮ ಏರಲು ಪ್ರಾರಂಭಿಸಿದ್ದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟವರ್​ ಮೇಲೆ ಅಳವಡಿಸಲಾಗಿದ್ದ ರಿಂಗ್​ ಮೇಲೆ ಆತನ ಚಹರೆ ಕಂಡುಬಂದಾಗ ಅಧಿಕಾರಿಗಳು ಆತನನ್ನು ಸ್ಥಳಾಂತರ ಮಾಡಿದರು. ಐಫೆಲ್ ಟವರ್​ನ ಮೇಲೆ ವ್ಯಕ್ತಿಯನ್ನು ಗುರುತಿಸಿದ ನಂತರ, ಪೊಲೀಸರು ಈ ಪ್ರದೇಶವನ್ನು ಸುತ್ತುವರಿದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಟವರ್​ ಏರುತ್ತಿದ್ದ ಪ್ರವಾಸಿಗರನ್ನು ತಡೆಯಲಾಯಿತು. ಎರಡನೇ ಮಹಡಿಯಲ್ಲಿ ಸ್ವಲ್ಪ ಸಮಯದವರೆಗೆ ಪ್ರವಾಸಿಗರು ಹಾಗೆಯೇ ನಿಲ್ಲುಂತಾಯಿತು. ಇನ್ನೂ ಕೆಲವರಿಗೆ ಸುಮಾರು 30 ನಿಮಿಷಗಳ ನಂತರ ನಿರ್ಗಮಿಸಲು ಅವಕಾಶ ನೀಡಲಾಯಿತು.

ಪ್ಯಾರಿಸ್​​ನ ಹೃದಯಭಾಗದಲ್ಲಿರುವ ಐತಿಹಾಸಿಕ ಗೋಪುರವು ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ ಸಮಾರಂಭದ ಕೇಂದ್ರಬಿಂದುವಾಗಿತ್ತು. ಆದಾಗ್ಯೂ, ಇದು ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಾರೋಪ ಸಮಾರಂಭ ಅದರ ಸಮೀಪ ನಡೆಯುವುದಿಲ್ಲ. 2024ರ ಒಲಿಂಪಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕಾಗಿ ಪ್ಯಾರಿಸ್​ನಲ್ಲಿ 30,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಒಲಿಂಪಿಕ್ಸ್​​ನ ಕೊನೆಯ ದಿನದಂದು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾರಿಸ್ ಮತ್ತು ಸೇಂಟ್-ಡೆನಿಸ್ ಪ್ರದೇಶದಲ್ಲಿ 20,000 ಪೊಲೀಸ್ ಪಡೆಗಳು ಮತ್ತು ಇತರ ಭದ್ರತಾ ಸಿಬ್ಬಂದಿಯನ್ನು ಭಾನುವಾರ ತಡರಾತ್ರಿಯವರೆಗೆ ಸಜ್ಜುಗೊಳಿಸಲಾಗುವುದು ಎಂದು ಫ್ರಾನ್ಸ್​​ನ ಆಂತರಿಕ ಸಚಿವ ಜೆರಾಲ್ಡ್ ಡಾರ್ಮಾನಿನ್ ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಾರೋಪ ಸಮಾರಂಭವು ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ (ಭಾರತೀಯ ಕಾಲಮಾನ ಆಗಸ್ಟ್ 12 ರಂದು ಬೆಳಿಗ್ಗೆ 12.30) ಐಫೆಲ್ ಟವರ್​ನಲ್ಲಿ ನಡೆಯಲಿದೆ. ಸೇಂಟ್-ಡೆನಿಸ್ ಪ್ರದೇಶದ ಸ್ಟೇಡ್ ಡಿ ಫ್ರಾನ್ಸ್ನಲ್ಲಿ ಪ್ರಾರಂಭವಾಗಲಿದೆ.

ಇದನ್ನೂ ಓದಿ: PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

76 ಕೆ.ಜಿ ಮಹಿಳಾ ಕುಸ್ತಿಯಿಂದ ಭಾರತದ ರಿತಿಕಾ ಹೂಡಾ ನಿರ್ಗಮಿಸಿದ ನಂತರ, ಪದಕಗಳ ರೇಸ್​ನಲ್ಲಿ ಯಾವುದೇ ಭಾರತೀಯರು ಉಳಿದಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭದಲ್ಲಿ ಭಾರತದ ಪರ ಅನುಭವಿ ಹಾಕಿ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಮತ್ತು ಶೂಟರ್ ಮನು ಭಾಕರ್ ಧ್ವಜಧಾರಿಗಳಾಗಿದ್ದಾರೆ.

Continue Reading

ಕ್ರೀಡೆ

PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

PR Sreejesh : ಪಂದ್ಯಾವಳಿಯ ನಂತರ ಶ್ರೀಜೇಶ್ ಕ್ರೀಡೆಯಿಂದ ನಿವೃತ್ತರಾಗಿದ್ದಾರೆ. ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಪ್ಯಾರಿಸ್​​ನಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಭಾರತದ ಜಂಟಿ ಧ್ವಜಧಾರಿಯಾಗಿ ನಡೆಯಲಿದ್ದಾರೆ. ಆದಾಗ್ಯೂ, ಅದಕ್ಕೂ ಮೊದಲು, ಅವರು ಸಾಂಪ್ರದಾಯಿಕ ಮುಂಡು ಧರಿಸಿ ಐಫೆಲ್ ಟವರ್ ಮುಂದೆ ಪೋಸ್ ನೀಡಿದರು. ಈ ವೇಳೆ ಸೂಪರ್​ಹಿಟ್ ಮಲಯಾಳಂ ಚಲನಚಿತ್ರ ಆವೇಶಮ್ ನ ಪ್ರಸಿದ್ಧ ಹೇಳಿಕೆ ‘ಎಡಾ ಮೋನೆ’ ಯನ್ನೂ ಹೇಳಿದರು.

VISTARANEWS.COM


on

PR Sreejesh
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ (Paris Olympics 2024) ಕಂಚಿನ ಪದಕ ವಿಜೇತ ಭಾರತ ಹಾಕಿ ತಂಡದ ಗೋಲ್​ಕೀಪರ್​​ ಪಿ.ಆರ್.ಶ್ರೀಜೇಶ್ (PR Sreejesh) ಅವರು ಆಗಸ್ಟ್ 11 ರಂದು ಕೇರಳದ ಸಾಂಪ್ರದಾಯಿಕ ದಿರಸು ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಪೋಟೋ ತೆಗಿಸಿಕೊಂಡಿದ್ದಾರೆ. 1972ರ ಬಳಿಕ ಇದೇ ಮೊದಲ ಬಾರಿಗೆ ಸತತ ಎರಡನೇ ಬಾರಿಗೆ ಒಲಿಂಪಿಕ್ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡದ ಪಾಲಿಗೆ ಗೋಲ್​ಕೀಪರ್​​ ಶ್ರೀಜೇಶ್ ಸ್ಟಾರ್ ಎನಿಸಿದ್ದರು. ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್ ಮತ್ತು ಸ್ಪೇನ್ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ 36 ವರ್ಷದ ಆಟಗಾರ ಎದುರಾಳಿಗಳ ಹಲವಾರು ಗೋಲ್​ ಪ್ರಯತ್ನಗಳನ್ನು ತಡೆದಿದ್ದರು. ಹೀಗಾಗಿ ಭಾರತಕ್ಕೆ ದೊಡ್ಡ ಯಶಸ್ಸು ಸಿಕ್ಕಿತ್ತು.

ಪಂದ್ಯಾವಳಿಯ ನಂತರ ಶ್ರೀಜೇಶ್ ಕ್ರೀಡೆಯಿಂದ ನಿವೃತ್ತರಾಗಿದ್ದಾರೆ. ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಪ್ಯಾರಿಸ್​​ನಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಭಾರತದ ಜಂಟಿ ಧ್ವಜಧಾರಿಯಾಗಿ ನಡೆಯಲಿದ್ದಾರೆ. ಆದಾಗ್ಯೂ, ಅದಕ್ಕೂ ಮೊದಲು, ಅವರು ಸಾಂಪ್ರದಾಯಿಕ ಮುಂಡು ಧರಿಸಿ ಐಫೆಲ್ ಟವರ್ ಮುಂದೆ ಪೋಸ್ ನೀಡಿದರು. ಈ ವೇಳೆ ಸೂಪರ್​ಹಿಟ್ ಮಲಯಾಳಂ ಚಲನಚಿತ್ರ ಆವೇಶಮ್ ನ ಪ್ರಸಿದ್ಧ ಹೇಳಿಕೆ ‘ಎಡಾ ಮೋನೆ’ ಯನ್ನೂ ಹೇಳಿದರು.

ನಿವೃತ್ತಿಯ ಕುರಿತು ಶ್ರೀಜೇಶ್ ಹೇಳಿದ್ದೇನು?

ನಿವೃತ್ತಿಯ ಬಗ್ಗೆ ಮಾತನಾಡಿದ ಶ್ರೀಜೇಶ್, ಆಟದ ಅಗ್ರಸ್ಥಾನಕ್ಕೆ ಹೋಗಲು ಬಯಸುತ್ತೇನೆ ಮತ್ತು ನಾನು ಆಟವನ್ನು ಏಕೆ ತೊರೆಯುತ್ತಿದ್ದಾರೆ ಎಂದು ಜನರನ್ನು ಕೇಳುವಂತೆ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಗೆಲುವಿನ ನಂತರ, ನಾನು ನಿವೃತ್ತರಾಗಬೇಕೆಂದು ಯಾರೂ ಬಯಸಲಿಲ್ಲ ಎಂದು ನನಗೆ ತಿಳಿದಿದೆ. ಆದರೆ ನಾನು ಮೊದಲೇ ಹೇಳಿದಂತೆ ನನ್ನ ತರಬೇತುದಾರ ಹೇಳಿದಂತೆ ಮಾಡಿದ್ದೇನೆ. ನಾನು ಉತ್ತಮ ಫಾರ್ಮ್​ನಲ್ಲಿ ಇರುವಾಗಲೇ ನಿವೃತ್ತಿ ಪಡೆದರೆ ಯಾಕೆ ತೆಗೆದುಕೊಂಡೆ ಎಂದು ಜನರು ಕೇಳುತ್ತಾರೆ. ಇದು ಪರಿಪೂರ್ಣ ಮಾರ್ಗ ಎಂದು ನಾನು ಭಾವಿಸುತ್ತೇನೆ. ಆದರೆ, ನನ್ನ ತಂಡವು ನನಗೆ ಅತ್ಯುತ್ತಮ ವಿದಾಯವನ್ನು ನೀಡಿದೆ ಎಂದು ನಾನು ಭಾವಿಸುತ್ತೇನೆ” ಎಂದು ಕಂಚಿನ ಪದಕ ಗೆದ್ದ ನಂತರ ಪಿಆರ್ ಶ್ರೀಜೇಶ್ ಹೇಳಿದ್ದಾರೆ.

ಇದನ್ನೂ ಓದಿ: Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

ತಂಡದಲ್ಲಿ ಯಾರಾದರೂ ತಮ್ಮ ಸ್ಥಾನ ತುಂಬುತ್ತಾರೆ ಎಂಬ ವಿಶ್ವಾಸವನ್ನು ಶ್ರೀಜೇಶ್ ಹೊಂದಿದ್ದಾರೆ. “ನನ್ನ ಜಾಗವನ್ನು ಖಂಡಿತವಾಗಿಯೂ ತುಂಬುತ್ತಾರೆ. ಎಲ್ಲಾ ಕ್ರೀಡೆಗಳಲ್ಲಿಯೂ ಹಾಗೆಯೇ, ಹಿಂದೆ ಸಚಿನ್ ತೆಂಡೂಲ್ಕರ್ ಇದ್ದರು ಮತ್ತು ಈಗ ವಿರಾಟ್ ಕೊಹ್ಲಿ ಇದ್ದಾರೆ, ಆದರೆ ನಾಳೆ ಯಾರಾದರೂ ಅವರ ಸ್ಥಾನ ತುಂಬುತ್ತಾರೆ. ಆದ್ದರಿಂದ, ಶ್ರೀಜೇಶ್ ನಿನ್ನೆ ಅಲ್ಲಿದ್ದರು, ಆದರೆ ನಾಳೆ ಅವರ ಸ್ಥಾನವನ್ನು ಯಾರಾದರೂ ತೆಗೆದುಕೊಳ್ಳುತ್ತಾರೆ” ಎಂದು ಶ್ರೀಜೇಶ್ ಹೇಳಿದ್ದಾರೆ.

ಸ್ವದೇಶಕ್ಕೆ ಮರಳಿದ ನಂತರ ಶ್ರೀಜೇಶ್ ಕೋಚ್ ಆಗಿ ತಮ್ಮ ಹೊಸ ಪಾತ್ರ ವಹಿಸಿಕೊಳ್ಳುವ ನಿರೀಕ್ಷೆಯಿದೆ.

Continue Reading

ಕ್ರೀಡೆ

Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

VISTARANEWS.COM


on

Vinesh Phogat
Koo

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್​​ನ ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್ ಸ್ಪರ್ಧೆಯಿಂದ ವಿನೇಶ್ ಫೋಗಟ್ (Vinesh Phogat) ಅವರನ್ನು ಅನರ್ಹಗೊಳಿಸಿರುವ ಬಗ್ಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದ್ದು, ಅವರಿಗೆ ಬೆಳ್ಳಿ ಪದಕ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ ಫೈನಲ್​ನಿಂದ ಅನರ್ಹಗೊಂಡ ನಂತರ ಫೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು. ಕಳೆದ ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್​​ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಫೋಗಟ್ ಚಿನ್ನದ ಪದಕದ ಹೋರಾಟಕ್ಕೆ ಪ್ರವೇಶಿಸಿದ್ದರು. ಅವರು ಚಿನ್ನದ ಪದಕಕ್ಕಾಗಿ ಯುನೈಟೆಡ್ ಸ್ಟೇಟ್ಸ್​​​ನ ಸಾರಾ ಆನ್ ಹಿಲ್ಡೆಬ್ರಾಂಟ್ ವಿರುದ್ಧ ಸ್ಪರ್ಧಿಸಲು ಸಜ್ಜಾಗಿದ್ದರು ಆದರೆ ತೂಕದ ಮಿತಿ ಉಲ್ಲಂಘಿಸಿದ್ದಕ್ಕಾಗಿ ಬುಧವಾರ ಅನರ್ಹಗೊಂಡರು. ಅನರ್ಹತೆಯ ನಂತರ, ಫೋಗಟ್ ತನಗೆ ಬೆಳ್ಳಿ ಪದಕವನ್ನು ನೀಡುವಂತೆ ಸಿಎಎಸ್​ಗೆ ವಿನಂತಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸೌರವ್​ ಗಂಗೂಲಿ, ತನಗೆ ಸರಿಯಾಗಿ ಕುಸ್ತಿಯ ನಿಯಮಗಳು ತಿಳಿದಿಲ್ಲ ಆದರೆ ಅವರು ಬೆಳ್ಳಿ ಪದಕಕ್ಕೆ ಅರ್ಹರು ಎಂದು ಹೇಳಿದ್ದಾರೆ.

ನಿಖರವಾದ ನಿಯಮ ಏನು ಎಂದು ನನಗೆ ತಿಳಿದಿಲ್ಲ, ಆದರೆ ವಿನೇಶ್​​ ಫೈನಲ್​ಗೆ ಹೋಗುವ ತನಕ ಸರಿಯಾಗಿ ಅರ್ಹತೆ ಪಡೆದಿದ್ದಾರೆ ಎಂದು ನನಗೆ ಖಾತ್ರಿಯಿದೆ. ಆದ್ದರಿಂದ ಫೈನಲ್ ಗೆ ಹೋದ ಮೇಲೆ ಬೆಳ್ಳಿ ಅಥವಾ ಚಿನ್ನದ ಪದಕಕ್ಕೆ ಅರ್ಹರು. ಹೀಗಾಗಿ ಅವರನ್ನು ತಪ್ಪಾಗಿ ಅನರ್ಹಗೊಳಿಸಲಾಗಿದೆ. ಹೀಗಾಗಿ ಅವರು ಕನಿಷ್ಠ ಬೆಳ್ಳಿಗೆ ಅರ್ಹರು,” ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ನಮ್ಮ ರಾಜಕಾರಣಿಗಳು ಕ್ರೀಡಾಕ್ಷೇತ್ರದಲ್ಲೂ ರಾಜಕೀಯ ಮಾಡ್ತಾರೆ; ಉಕ್ರೇನ್​ ಸಂಸದ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ!

ಪ್ಯಾರಿಸ್ ಒಲಿಂಪಿಕ್ಸ್​​ನಿಂದ ಅನರ್ಹಗೊಂಡ ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ನೀಡಬೇಕೇ ಎಂಬ ಬಗ್ಗೆ ತೀರ್ಪು ನೀಡುವ ಗಡುವನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಆಗಸ್ಟ್ 13 ರವರೆಗೆ ವಿಸ್ತರಿಸಿದೆ.

“ವಿನೇಶ್ ಫೋಗಟ್ ವರ್ಸಸ್ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ವಿಷಯದಲ್ಲಿ ಏಕಮಾತ್ರ ಮಧ್ಯಸ್ಥಿಕೆದಾರ ಡಾ.ಅನ್ನಾಬೆಲ್ಲೆ ಬೆನೆಟ್ ಅವರಿಗೆ ಆಗಸ್ಟ್ 13, 2024 ರಂದು ಸಂಜೆ 6-00 ಗಂಟೆಯವರೆಗೆ ನಿರ್ಧಾರ ತೆಗೆದುಕೊಳ್ಳಲು ಸಿಎಎಸ್​ನ ತಾತ್ಕಾಲಿಕ ವಿಭಾಗವು ಸಮಯವನ್ನು ವಿಸ್ತರಿಸಿದೆ” ಎಂದು ಐಒಎ ಶನಿವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್ ಫೈನಲ್​​ನಿಂದ ಅನರ್ಹಗೊಂಡ ನಂತರ ವಿನೇಶ್ ಫೋಗಟ್ ಎಕ್ಸ್​ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ನನ್ನ ವಿರುದ್ಧ ಕುಸ್ತಿ ಗೆದ್ದಿತು, ನಾನು ಸೋತೆ. ನನ್ನನ್ನು ಕ್ಷಮಿಸಿ, ಕನಸು ಮತ್ತು ನನ್ನ ಧೈರ್ಯ ಮುರಿದಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರ ಕ್ಷಮೆಗಾಗಿ ನಾನು ಯಾವಾಗಲೂ ಋಣಿಯಾಗಿದ್ದೇನೆ ಎಂದು ಬರೆದುಕೊಂಡಿದ್ದರು.

Continue Reading
Advertisement
Dina bhavishya
ಭವಿಷ್ಯ14 seconds ago

Dina Bhavishya : ಈ ದಿನ ಹತಾಶೆ ಹಾಗೂ ಆತುರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಬೇಡ

ಪ್ರಮುಖ ಸುದ್ದಿ4 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ಗೆ ತೆರೆ; ಅದ್ಧೂರಿ ಸಮಾರೋಪದಲ್ಲಿ ಮನು ಭಾಕರ್​, ಶ್ರೀಜೇಶ್​ ಭಾಗಿ

Paris Olympics 2024
ಕ್ರೀಡೆ5 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ ಮುಕ್ತಾಯ; ಅಮೆರಿಕಕ್ಕೆ ಅಗ್ರಸ್ಥಾನ; ಚೀನಾಕ್ಕೆ ಎರಡನೇ ಸ್ಥಾನ

Farooq Abdullah
ಪ್ರಮುಖ ಸುದ್ದಿ6 hours ago

Farooq Abdullah : ಗಡಿಯಲ್ಲಿನ ಭಯೋತ್ಪಾದನಾ ಕೃತ್ಯಗಳಲ್ಲಿ ಉಗ್ರರು, ಸೇನೆ ಶಾಮೀಲು; ವಿವಾದದ ಕಿಡಿ ಹೊತ್ತಿಸಿದ ಫಾರೂಕ್ ಅಬ್ದುಲ್ಲಾ

Hindenburg Report
ದೇಶ6 hours ago

Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

Hindenburg report
ಪ್ರಮುಖ ಸುದ್ದಿ7 hours ago

Hindenburg Report : ಹುರುಳಿಲ್ಲದ ಆರೋಪ; ಹಿಂಡೆನ್​ಬರ್ಗ್​ ವರದಿ ಬಗ್ಗೆ ಸೆಬಿ ಸ್ಪಷ್ಟನೆ

Paris Olympics 2024
ಕ್ರೀಡೆ8 hours ago

Paris Olympics 2024 : ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಐಫೆಲ್​ ಟವರ್​ ಏರಿ ಕುಳಿತ ಆಗಂತುಕ!

Self Harming
ಕರ್ನಾಟಕ8 hours ago

Self Harming: ಡೆತ್‌ ನೋಟ್‌ ಬರೆದಿಟ್ಟು ಜಮ್ಮು-ಕಾಶ್ಮೀರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

PR Sreejesh
ಕ್ರೀಡೆ8 hours ago

PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

Vinesh Phogat
ಕ್ರೀಡೆ9 hours ago

Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ3 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌