Shira News: ಉದ್ಯೋಗ ಕೌಶಲಕ್ಕಾಗಿ ಶಿರಾದಲ್ಲಿ ಸ್ಕಿಲ್ ಯುನಿವರ್ಸಿಟಿ ಸ್ಥಾಪನೆ; ಟಿ.ಬಿ. ಜಯಚಂದ್ರ - Vistara News

ತುಮಕೂರು

Shira News: ಉದ್ಯೋಗ ಕೌಶಲಕ್ಕಾಗಿ ಶಿರಾದಲ್ಲಿ ಸ್ಕಿಲ್ ಯುನಿವರ್ಸಿಟಿ ಸ್ಥಾಪನೆ; ಟಿ.ಬಿ. ಜಯಚಂದ್ರ

Shira News: ಶಿರಾದಲ್ಲಿ ಸ್ಕಿಲ್ ಯುನಿವರ್ಸಿಟಿ ಸ್ಥಾಪಿಸಲು ಉದ್ದೇಶಿಸಿದ್ದು, ತರಬೇತಿ ನೀಡಲು ಮುಂಬೈನ ಒಂದು ಯುನಿವರ್ಸಿಟಿ ಮುಂದೆ ಬಂದಿದೆ. ಅದಕ್ಕಾಗಿ 20 ಎಕರೆ ಜಮೀನು ಕೇಳಿದ್ದಾರೆ. ಶೀಘ್ರ ಈ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಾ ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

VISTARANEWS.COM


on

Shira News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿರಾ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಸೇರಿದಂತೆ ಇತರೆ ವಿದ್ಯಾಭ್ಯಾಸ ಮಾಡಿದ ಯುವಕ-ಯುವತಿಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯ ತರಬೇತಿ ಪಡೆಯಲು ಶಿರಾದಲ್ಲಿ (Shira News) ಸ್ಕಿಲ್ ಯುನಿವರ್ಸಿಟಿ ಸ್ಥಾಪಿಸಲು ಉದ್ದೇಶಿಸಿದ್ದು, ತರಬೇತಿ ನೀಡಲು ಮುಂಬೈನ ಒಂದು ಯುನಿವರ್ಸಿಟಿ ಮುಂದೆ ಬಂದಿದೆ. ಅದಕ್ಕಾಗಿ 20 ಎಕರೆ ಜಮೀನು ಕೇಳಿದ್ದಾರೆ. ಶೀಘ್ರ ಈ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಾ ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ತಿಳಿಸಿದರು.

ನಗರದ ಮಿನಿ ವಿಧಾನ ಸೌಧದಲ್ಲಿ ಮಂಗಳವಾರ ನಡೆದ ಶಿರಾ ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಕಾರ್ಖಾನೆ ಮಾಲೀಕರು, ಮುಖ್ಯಸ್ಥರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Album Song: ಅನಿವಾಸಿ ಕನ್ನಡಿಗರ ‘ಹನಿ ಹನಿ’ ಆಲ್ಬಂ ಸಾಂಗ್ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

ತಾಲೂಕಿನ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ಇತರೆಡೆ ಹೋಗದೆ ಸ್ಥಳೀಯವಾಗಿಯೇ ಉದ್ಯೋಗ ಪಡೆಯಲಿ ಎನ್ನುವ ಉದ್ದೇಶ ಈಡೇರಬೇಕು. ಆದ್ದರಿಂದ ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡಲಾಗಿದೆ. ಸ್ಥಳೀಯವಾಗಿ ಪ್ರತಿಭಾವಂತರಿದ್ದಾರೆ, ಅವರಿಗೆ ಸರಿಯಾದ ತಾಂತ್ರಿಕ ತರಬೇತಿ ನೀಡಿ ಉದ್ಯೋಗಾವಕಾಶ ನೀಡಿ ಎಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ ಕೆಐಎಡಿಬಿ ಅಧಿಕಾರಿಗಳು ಕೈಗಾರಿಕಾ ವಸಹತುಗಳ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ನಾಲ್ಕು ಕೊಳವೆ ಬಾವಿ ಕೊರೆಸಲಾಗಿದೆ ಆದರೂ ನೀರಿನ ಕೊರತೆ ಉಂಟಾಗುತ್ತಿದೆ ಆದ್ದರಿಂದ ಹೇಮಾವತಿ ನೀರನ್ನು ಕೈಗಾರಿಕಾ ವಸಹತು ಪ್ರದೇಶಕ್ಕೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಕೈಗಾರಿಕಾ ವಸಹತು ಪ್ರದೇಶಕ್ಕೆ ಹತ್ತಿರವಿರುವ ಗುಮ್ಮನಹಳ್ಳಿ ಕೆರೆಯಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ

ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಶೀಘ್ರವಾಗಿ ಶಿರಾದಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದರು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ʼಸಾರ್ಕೋಮಾ ಕ್ಯಾನ್ಸರ್‌ʼ ಜಾಗೃತಿಗಾಗಿ ಎಚ್‌ಸಿಜಿಯಿಂದ 5ಕೆ ವಾಕಥಾನ್

ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ದತ್ತಾತ್ರೆಯ ಜೆ. ಗಾದಾ, ತಾ.ಪಂ. ಇಒ ಹರೀಶ್, ಪೌರಾಯುಕ್ತ ರುದ್ರೇಶ್, ಕೆಐಎಡಿಬಿ ಅಧಿಕಾರಿಗಳು ಹಾಗೂ ವಿವಿಧ ಕಾರ್ಖಾನೆ ಮಾಲೀಕರು, ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ರಾಜ್ಯದ ಹಲವೆಡೆ ಅಬ್ಬರಿಸಲಿದೆ ಗುಡುಗು ಸಹಿತ ಮಳೆ

Rain News : ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನೈರುತ್ಯ ಮುಂಗಾರು ಒಳನಾಡಿನಲ್ಲಿ ಸಾಮಾನ್ಯವಾಗಿದ್ದು, ಕರಾವಳಿ ಭಾಗದಲ್ಲಿ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ತಿಳಿಸಿದೆ. ಈ ದಿನ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದ ಸುತ್ತಮುತ್ತಲೂ ಮಧ್ಯಮ ಮಳೆಯಾಗಲಿದೆ.

ದಕ್ಷಿಣ ಒಳನಾಡಿನ ರಾಮನಗರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಕೋಲಾರ, ವಿಜಯನಗರದ ಒಂದೆರಡು ಕಡಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಉತ್ತರ ಒಳನಾಡಿನ ಕೊಪ್ಪಳ, ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಉಳಿದಂತೆ ಬಾಗಲಕೋಟೆ, ಬೆಳಗಾವಿ, ಬೀದರ್‌, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರಿನಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿಯಂದು ಸಾಧಾರಣದೊಂದಿಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಕೆಲವೊಮ್ಮೆ ಬಿಸಿಲ ಧಗೆಯು ಹೆಚ್ಚಿರಲಿದೆ.

ಇದನ್ನೂ ಓದಿ: Physical Abuse : ಅಪ್ರಾಪ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೊ ಹರಿಬಿಟ್ಟ ಯುವಕ!

ಹುಡುಗಿಯರ ಮಾನ್ಸೂನ್‌ ಡ್ರೆಸ್‌ ಹೇಗಿರಬೇಕು? ಹೇಗಿರಬಾರದು?

ಮಾನ್ಸೂನ್‌ನಲ್ಲಿ ಹುಡುಗಿಯರು ಧರಿಸುವ (Monsoon Fashion do’s & don’ts) ಉಡುಪುಗಳು ನೋಡಲು ಆಕರ್ಷಕವಾಗಿದ್ದರಷ್ಟೇ ಸಾಲದು, ಧರಿಸಿದಾಗ ಕಂಫರ್ಟಬಲ್‌ ಆಗಿರಬೇಕು, ಎಲ್ಲದಕ್ಕಿಂತ ಹೆಚ್ಚಾಗಿ ಸೀಸನ್‌ಗೆ ತಕ್ಕಂತಿರಬೇಕು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಸಮೀಕ್ಷೆಯೊಂದರ ಪ್ರಕಾರ, ಸಾಕಷ್ಟು ಹುಡುಗಿಯರು ಸ್ಟೈಲಿಶ್‌ ಆಗಿ ಕಾಣಿಸಲು ಮಾನ್ಸೂನ್‌ನಲ್ಲೂ ಸಮ್ಮರ್‌ ಫ್ಯಾಷನ್‌ವೇರ್‌ಗಳನ್ನು ಧರಿಸುತ್ತಾರಂತೆ. ಇನ್ನು, ಕೆಲವು ಯುವತಿಯರು ಮಾನ್ಸೂನ್‌ ಸೀಸನ್‌ನಲ್ಲಿ ಹೊದ್ದುಕೊಂಡಂತಿರುವ ಉಡುಪುಗಳನ್ನು ಧರಿಸುತ್ತಾರಂತೆ. ಆದರೆ, ಫ್ಯಾಷನಿಸ್ಟ್‌ಗಳ ಪ್ರಕಾರ, ಆಯಾ ವರ್ಗದ ಅನುಗುಣವಾಗಿ ಹುಡುಗಿಯರು ಧರಿಸುವ ಉಡುಪುಗಳು ಬದಲಾಗುತ್ತವಂತೆ. ಅದರಲ್ಲೂ, ಜೆನ್‌ ಜಿ ಹುಡುಗಿಯರು, ಯಾವುದೇ ಸೀಸನ್‌ ಟ್ರೆಂಡ್‌ ಫಾಲೋ ಮಾಡುವುದಿಲ್ಲ, ಬದಲಾಗಿ ತಮ್ಮದೇ ಆದ ಸ್ಟೈಲಿಶ್‌ ಮಾರ್ಗವನ್ನು ಹಿಡಿಯುತ್ತಾರಂತೆ. ಅಂದ ಹಾಗೆ, ಇದೆಲ್ಲಾ ಓಕೆ, ಹಾಗೆಂದು ಸೀಸನ್‌ಗೆ ವಿರುದ್ಧವಾಗಿ ಕಾಣಿಸುವುದು ದಿನಚರಿಯಾಗಬಾರದು! ಇದು ಆರೋಗ್ಯಕ್ಕೂ ಮಾರಕ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹಾಗಾದಲ್ಲಿ, ಈ ಸೀಸನ್‌ನಲ್ಲಿ ಯಾವ ರೀತಿಯ ಡ್ರೆಸ್‌ಗಳು ಬೆಸ್ಟ್? ಯಾವುದು ನಾಟ್‌ ಓಕೆ ! ಎಂಬುದನ್ನು ಫ್ಯಾಷನಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

Monsoon Fashion

ಮಾನ್ಸೂನ್‌ ಡ್ರೆಸ್‌ಗಳು

ಮಳೆಗಾಲದಲ್ಲಿ ಟ್ರೆಂಡಿಯಾಗುವ ಜಾಕೆಟ್‌ ಡ್ರೆಸ್‌, ಕೋಟ್‌ ಡ್ರೆಸ್‌-ಫ್ರಾಕ್ಸ್, ಸ್ಕೆಟರ್‌ ಡ್ರೆಸ್, ಮಿಡಿ ಡ್ರೆಸ್‌, ಹೈ ವೇಸ್ಟ್ ಶಾಟ್ಸ್ ಆಯ್ಕೆ ಮಾಡಬಹುದು. ಇವು ಸ್ಟೈಲಿಶ್‌ ಆಗಿ ಕಾಣಿಸುವುದರ ಜೊತೆಗೆ ಟ್ರೆಂಡಿಯಾಗಿಯೂ ಬಿಂಬಿಸುತ್ತವೆ.

Monsoon Fashion

ಗಿಡ್ಡ ಪ್ಯಾಂಟ್‌ಗೆ ಓಕೆ ಹೇಳಿ

ಆಂಕೆಲ್‌ ಲೆಂಥ್‌, ಕ್ರಾಪ್ಡ್ ಪ್ಯಾಂಟ್‌, ಲೆಗ್ಗಿಂಗ್ಸ್, ಜೆಗ್ಗಿಂಗ್ಸ್, ಪುಶ್‌ ಬ್ಯಾಕ್‌ನಂತಹ ಪ್ಯಾಂಟ್‌ಗಳನ್ನು ಧರಿಸಬಹುದು. ಆದರೆ, ಯಾವುದೇ ಕಾರಣಕ್ಕೂ ಪಲ್ಹಾಜೋ, ಪ್ಯಾರಲಲ್‌, ಬೂಟ್‌ ಕಟ್‌, ಶರರಾ, ಘರಾರದಂತಹ ಅಗಲವಾದ ನೆಲಹಾಸುವಂತಹ ಪ್ಯಾಂಟ್‌ಗಳನ್ನು ಧರಿಸಬೇಡಿ.

Monsoon Fashion

ನೆಲ ಮುಟ್ಟುವ ಗೌನ್‌ಗಳನ್ನು ದೂರವಿಡಿ

ನಡೆಯುವಾಗ ನೆಲವನ್ನು ಮುಟ್ಟುವಂತಹ ಉದ್ದುದ್ದ ಮ್ಯಾಕ್ಸಿ, ಗೌನ್‌ಗಳಿಗೆ ಸದ್ಯಕ್ಕೆ ಬೈ ಹೇಳಿ. ಇವು ನೋಡಲು ಮಾತ್ರ ಆಕರ್ಷಕವಾಗಿ ಕಾಣಿಸುತ್ತವೆ. ಇವನ್ನು ನಿರ್ವಹಣೆ ಮಾಡುವುದು ಕಷ್ಟ.

Monsoon Fashion

ಭಾರವಿಲ್ಲದ ಲೈಟ್‌ವೈಟ್‌ ಉಡುಗೆ ಧರಿಸಿ

ಲೇಯರಿಂಗ್‌ ಹೆಸರಲ್ಲಿ ದಪ್ಪನೆಯ ಫ್ಯಾಬ್ರಿಕ್‌ನ ಉಡುಗೆಗಳು ಉಸಿರುಕಟ್ಟಿಸಬಹುದು. ಮಳೆಯಲ್ಲಿ ಒದ್ದೆಯಾದರಂತೂ ಕಿರಿಕಿರಿ ಎನಿಸಬಹುದು. ಇದನ್ನು ಅವಾಯ್ಡ್ ಮಾಡಲು, ಬೇಗನೇ ಒಣಗುವ ಲೈಟ್‌ವೈಟ್‌ ಡ್ರೆಸ್‌ಗಳಿಗೆ ಸೈ ಎನ್ನಿ.

ಹೆವಿ ಎಥ್ನಿಕ್‌ ಡಿಸೈನರ್‌ವೇರ್‌ ಅವಾಯ್ಡ್ ಮಾಡಿ

ಹೆವಿ ಎಥ್ನಿಕ್‌ವೇರ್‌ಗಳನ್ನು ಆವಾಯ್ಡ್ ಮಾಡಿ. ಎಥ್ನಿಕ್‌ವೇರ್‌ ಧರಿಸಲೇ ಬೇಕಿದ್ದಲ್ಲಿ ಆದಷ್ಟೂ ಆಂಕೆಲ್‌ ಲೆಂಥ್‌ ಡಿಸೈನರ್‌ವೇರ್ಸ್ ಸೆಲೆಕ್ಟ್ ಮಾಡಿ ಶಾರ್ಟ್ ಕುರ್ತಾ, ಆಂಕೆಲ್‌ ಲೆಂಥ್‌ ಚೂಡಿದಾರ್‌, ಸಲ್ವಾರ್‌ಗಳನ್ನು ಧರಿಸಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ಕಡೆ ಮುಖ ಮಾಡಿದ ಮಳೆರಾಯ

Karnataka Weather Forecast : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ (Rain News) ರೈತರು ಕಂಗಲಾಗಿದ್ದಾರೆ. ಮಳೆಯ ಆರ್ಭಟಕ್ಕೆ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು ಜಮೀನುಗಳು ನೀರುಪಾಲಾಗಿವೆ.

VISTARANEWS.COM


on

By

karnataka Weather Forecast
Koo

ಹಾಸನ: ಮಳೆರಾಯ ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ಕಡೆ ಮುಖ ಮಾಡಿದ್ದಾನೆ. ಮುಂದಿನ ಒಂದು ವಾರದಲ್ಲಿ ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

ಹಾಸನದ ವಿವಿಧೆಡೆ ಕಳೆದ ರಾತ್ರಿಯಿಂದ ಧಾರಾಕಾರ ಮಳೆ ಸುರಿದಿದೆ. ಭಾರಿ ಮಳೆಗೆ ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿ ಹೋಗಿವೆ. ಹಾಸನದ ಆಲೂರು ತಾಲೂಕಿನ ಬೆಂಬಳೂರು ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಹಳ್ಳಕೊಳ್ಳಗಳು ಉಕ್ಕಿ ಹರಿದಿದೆ. ಭತ್ತದ ಗದ್ದೆಗಳಿಗೆ ಬಾರಿ ಪ್ರಮಾಣದ ನೀರು ನುಗ್ಗಿದೆ.

ನೀರಿನ‌ ರಭಸಕ್ಕೆ ಗದ್ದೆಯ ಬದುಗಳು ಕೊಚ್ಚಿ ಹೋಗಿವೆ. ನಾಟಿ ಮಾಡಲು ಸಿದ್ಧತೆ ನಡೆಸಿದ್ದ ರೈತರ ಆಸೆಗೆ ಮಳೆರಾಯ ತಣ್ಣೀರು ಎರಚಿದ್ದಾನೆ. ಐವತ್ತಕ್ಕೂ ಹೆಚ್ಚು ಎಕರೆ ಪ್ರದೇಶದ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. ಧಾರಾಕಾರ ಮಳೆಯಿಂದ ಕಂಗಾಲಾದ ರೈತರು ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: CM Siddaramaiah: ತುಂಗಭದ್ರಾ ಜಲಾಶಯ ಮತ್ತೆ ತುಂಬುವ ನಿರೀಕ್ಷೆ, ರೈತರಿಗೆ ತೊಂದರೆಯಾಗದಂತೆ ಕ್ರಮ: ಸಿಎಂ

ಸರ್ಕಾರಿ ಶಾಲೆ ಜಲಾವೃತ, ರಸ್ತೆಗಳೆಲ್ಲವೂ ಗುಂಡಿ ಮಯ

ನಿನ್ನೆ ಸುರಿದ ಮಳೆಗೆ ಸರ್ಕಾರಿ ಶಾಲೆಯೊಂದು ಜಲಾವೃತಗೊಂಡಿದೆ. ಬೆಂಗಳೂರಿನ ವರ್ತೂರಿನ ಸಿದ್ದಾಪುರ ಸರ್ಕಾರಿ ಶಾಲೆಯ ಆವರಣದ ಸುತ್ತಲೂ ಮಳೆ ನೀರು ನಿಂತಿತ್ತು. ಬೆಳಗ್ಗೆ ಶಾಲೆಗೆ ಬಂದ ಮಕ್ಕಳು, ಎರಡು ಗಂಟೆಗಳ‌ ಕಾಲ ಶಾಲಾ ಕೊಠಡಿಗಳು ಸ್ವಚ್ಚತೆ ಮಾಡಿದರು.

ಇತ್ತ ಮಳೆ ನಿಂತು ಹೋದಮೇಲೆ ಗುಂಡಿಗಳು ಬಿದ್ದಿವೆ. ಎರಡು ದಿನದಿಂದ ಸುರಿದ ಮಳೆಗೆ ಬೆಂಗಳೂರಿನ ಟೌನ್ ಹಾಲ್ ಎದುರೇ 50ಕ್ಕೂ ಹೆಚ್ಚು ರಸ್ತೆ ಗುಂಡಿ ಬಿದ್ದಿವೆ. ಬಿಬಿಎಂಪಿಯಿಂದ 500 ಮೀಟರ್ ದೂರದಲ್ಲಿರುವ ಟೌನ್ ಹಾಲ್‌ ಸುತ್ತಮುತ್ತ ಇರುವ ಗುಂಡಿಗಳು ಬೈಕ್ ಸವಾರರ ಪಾಲಿಗೆ ಮೃತ್ಯುಕೂಪವಾಗಿದೆ.

ಕ್ಯಾರೆ ಎನ್ನದ ಬಿಬಿಎಂಪಿ

ಗುಂಡಿ ಫೋಟೋ ತೆಗೆದು ಕಳಿಸಿ ಅಂದರೆ ಬಿಬಿಎಂಪಿ ಕೆಲಸ ಮುಗಿತಾ? ಕೇವಲ ಆ್ಯಪ್ ಮಾಡಿ ಕೈತೊಳೆದು ಕೊಳ್ಳುತ್ತಿದೆ. ಮೊಣಕಾಲು ಉದ್ದ ಗುಂಡಿ ಇದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಬೆಂಗಳೂರಿನ ಸಿಂಗಯ್ಯನಪಾಳ್ಯ ರಸ್ತೆಯ ಮಧ್ಯದಲ್ಲಿ ಯಮ ಸ್ವರೂಪಿ ಗುಂಡಿ ಬಿದ್ದಿದೆ. ಸ್ವಲ್ಪ ಎಚ್ಚರ ತಪ್ಪಿದ್ದರೂ, ಜೀವಕ್ಕೆ ಅಪಾಯ ಗ್ಯಾರಂಟಿ. ಇನ್‌ಸ್ಟಾಗ್ರಾಂ‌ಮ್‌ನಲ್ಲಿ ಪೋಸ್ಟ್ ಹಾಕಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Tungabhadra Dam: ಗೇಟ್‌ ರಿಪೇರಿಗಾಗಿ 60 ಟಿಎಂಸಿ ನೀರು ಖಾಲಿ, 8 ಜಿಲ್ಲೆಗಳ ರೈತರಿಗೆ ನೀರಿಲ್ಲ!

ನಾಳೆ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ರಾಮನಗರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಚದುರಿದಂತೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲೂ ಮಳೆಯು ಅಬ್ಬರಿಸಲಿದೆ. ಇತ್ತ ಕೊಪ್ಪಳ, ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಗುಡುಗು ಸಾಥ್‌ ನೀಡಲಿದೆ.

ಬೆಂಗಳೂರಲ್ಲಿ ಗುಡುಗು ಸಹಿತ ಮಳೆ

ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Fraud Case: ಅಸಲಿ ಮದುವೆ, ನಕಲಿ ಹೆಣ್ಣು! 3 ವರ್ಷದಲ್ಲಿ 5 ಮದುವೆಯಾಗಿ ವಂಚನೆ; ಮದುಮಗಳು ಮತ್ತು ಗ್ಯಾಂಗ್‌ ಆರೆಸ್ಟ್

fraud case tumkur: ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಹಲವರನ್ನು ಯಾಮಾರಿಸಿದ್ದ ತಂಡ ಅಂದರ್ ಆಗಿದೆ. 3 ವರ್ಷದಲ್ಲಿ ಐದು ಮದುವೆ ಮಾಡಿಕೊಂಡಿದ್ದ ಐನಾತಿ ಮದುಮಗಳು ಕೂಡ ಆರೆಸ್ಟ್ ಆಗಿದ್ದಾಳೆ.

VISTARANEWS.COM


on

fraud case tumkur
Koo

ತುಮಕೂರು: ಇದು ಮದುವೆ ಆಲೋಚನೆಯಲ್ಲಿರುವ ಅವಿವಾಹಿತರು ನೋಡಲೇಬೇಕಾದ ಸ್ಟೋರಿ. ಸಿಕ್ಕಿದ್ದೇ ಸೀರುಂಡೆ ಅಂತ ಕಣ್ಮುಚ್ಚಿಕೊಂಡು ಹೆಣ್ಣು ಒಪ್ಪಿಕೊಳ್ಳುವುದಕ್ಕೆ ಮುನ್ನ ಹುಷಾರಾಗಿರಿ. ವಯಸ್ಸು ಮೀರಿ ಹೋಗ್ತಿದೆ ಅಂತ ಆತುರಪಟ್ಟರೆ ಡಿಸೈನ್‌ ಡಿಸೈನ್‌ ಮಕ್ಮಲ್‌ ಟೋಪಿ ಹಾಕಿಸಿಕೊಳ್ಳುವುದು ಗ್ಯಾರಂಟಿ. ಇದು ಅಸಲಿ ಮದುವೆಯಾಗಿ ವಂಚಿಸುವ ನಕಲಿ ಹೆಣ್ಣು ಹಾಗೂ ಗ್ಯಾಂಗ್‌ನ ಕಥೆ.

ಇಲ್ಲಿ ಎಂಟು ಜನ ಹುಡುಗಿ ಕಡೆಯವರು ಬರುತ್ತಾರೆ. ಹೆಣ್ಣು ತೋರಿಸುತ್ತಾರೆ. ಮದುವೆಯನ್ನೂ ಮಾಡಿಸುತ್ತಾರೆ. ಮದುವೆಯಾದ ನಾಲ್ಕೇ ದಿನಕ್ಕೆ ಮದುಮಗಳು ವರನ ಮನೆಯಲ್ಲಿದ್ದ ಹಣ, ಒಡವೆಯನ್ನೆಲ್ಲ ಎತ್ತಿಕೊಂಡು ಪರಾರಿಯಾಗ್ತಾಳೆ. ತುಮಕೂರಿನಲ್ಲಿ ಇಂಥ ದೋಖಾ ಮ್ಯಾರೇಜ್ ಕಂಪನಿ ಪತ್ತೆಯಾಗಿದೆ. ಮದುವೆ ವಯಸ್ಸು ಮೀರಿದ ಯುವಕರೇ ಈ ದೋಖಾ ಗ್ಯಾಂಗಿನ ಟಾರ್ಗೆಟ್ ಆಗಿದ್ದು, ಮದುವೆ ಹೆಸರಲ್ಲಿ ವಂಚನೆ ಮಾಡುತ್ತಿದ್ದ ತಂಡವನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಹಲವರನ್ನು ಯಾಮಾರಿಸಿದ್ದ ತಂಡ ಅಂದರ್ ಆಗಿದೆ. 3 ವರ್ಷದಲ್ಲಿ ಐದು ಮದುವೆ ಮಾಡಿಕೊಂಡಿದ್ದ ಐನಾತಿ ಮದುಮಗಳು ಕೂಡ ಆರೆಸ್ಟ್ ಆಗಿದ್ದಾಳೆ.

ಏನಿದು ಪ್ರಕರಣ?

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಇಂಥದೊಂದು ವಂಚನೆಯ ಮದುವೆ ನಡೆದಿತ್ತು. ಗ್ರಾಮದ ಪಾಲಾಕ್ಷಯ್ಯ ಎಂಬವರು ತಮ್ಮ ಮಗ ದಯಾನಂದಮೂರ್ತಿಗೆ 37 ವರ್ಷ ದಾಟಿದರೂ ಹೆಣ್ಣು ಸಿಗದೇ ನೊಂದಿದ್ದರು. ಕುಷ್ಟಗಿ ಮೂಲದ ಬಸವರಾಜು ಎಂಬಾತನ ಮೂಲಕ ಹುಬ್ಬಳ್ಳಿಯ ಲಕ್ಷ್ಮಿ ಎಂಬಾಕೆಯ ಪರಿಚಯವಾಗಿತ್ತು. ಮದುವೆ ಬ್ರೋಕರ್‌ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಬಳಿ ಮಗನಿಗೆ ಹೆಣ್ಣು ತೋರಿಸುವಂತೆ ಪಾಲಾಕ್ಷಯ್ಯ ಕೇಳಿಕೊಂಡಿದ್ದರು.

ಇವರ ಪರಿಸ್ಥಿತಿ ನೋಡಿ ಮೋಸ ಮಾಡುವ ತೀರ್ಮಾನ ಮಾಡಿದ ಲಕ್ಷ್ಮೀ, ಹುಬ್ಬಳ್ಳಿಯಲ್ಲಿ ಒಬ್ಬಳು ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ. ನೀವೇ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಳು. ಕೋಮಲಾ ಎಂಬ ಹೆಸರಿನಲ್ಲಿ ಹುಡುಗಿಯ ಫೋಟೋ ಕಳುಹಿಸಿದ್ದಳು. ಬಳಿಕ ಹುಡುಗಿಯನ್ನು ಗಂಡಿನ ಮನೆಗೆ ಕರೆದುಕೊಂಡು ಬಂದಿದ್ದಳು. ಆಕೆಯ ಸಂಬಂಧಿಕರು ಎಂದು ಇನ್ನೂ ಐದಾರು ಜನರನ್ನು ಕರೆತಂದಿದ್ದಳು.

ಕಳೆದ ವರ್ಷ ನವೆಂಬರ್‌ 11ರಂದು ಅತ್ತಿಗಟ್ಟೆಗೆ ಬಂದಿದ್ದ ನಕಲಿ ಕುಟುಂಬ ಅಂದೇ ಮದುವೆ ಮಾತುಕತೆ ನಡೆಸಿತ್ತು. ಮರುದಿನ ಮುಂಜಾನೆಯೇ ಮದುವೆಯನ್ನೂ ಮಾಡಿ ಮುಗಿಸಿದ್ದರು. ಮಗನಿಗೆ ಹೆಣ್ಣು ಸಿಗದೇ ಹೈರಾಣಾಗಿದ್ದ ದಯಾನಂದಮೂರ್ತಿ ಕುಟುಂಬ ದಿಢೀರ್‌ ಮದುವೆಗೆ ಒಪ್ಪಿಕೊಂಡು ಗ್ರಾಮದಲ್ಲಿ ಮದುವೆ ಮಾಡಿದ್ದರು. ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದೆಮುಂದೆ ಯೋಚಿಸದೆ ಮದುವೆ ಮಾಡಿಸಿದ್ದರು. ಮದುವೆಗೆ ಸುಮಾರು 200ಕ್ಕೂ ಹೆಚ್ಚು ಜನ ಸೇರಿದ್ದು, ಹೆಣ್ಣಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ನೀಡಿದ್ದರು.

ವಧುವಿಗೆ 25 ಗ್ರಾಂ ಚಿನ್ನಾಭರಣ ಹಾಕಲಾಗಿತ್ತು. ಹೆಣ್ಣು ತೋರಿಸಿದ ಬ್ರೋಕರ್‌ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು. ಹೆಣ್ಣಿನ ಕಡೆಯವರು ಅಂತ 8 ಜನರನ್ನು ಬ್ರೋಕರ್‌ ಲಕ್ಷ್ಮಿ ಕರೆ ತಂದಿದ್ದಳು. ಮದುವೆ ಮುಗಿದ ಎರಡು ದಿನದ ನಂತರ ಸಂಪ್ರದಾಯದ ನೆಪ ಹೇಳಿ ಹಣ-ಚಿನ್ನದ ಒಡವೆ ಸಹಿತ ಮದುಮಗಳನ್ನ ಕರೆದುಕೊಂಡು ಹೋಗಿದ್ದರು. ವಾರ ಕಳೆದರೂ ಸೊಸೆ ವಾಪಸ್‌ ಬಂದಿರಲಿಲ್ಲ.

ಆತಂಕಗೊಂಡ ಪಾಲಾಕ್ಷಯ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ, ನಡೆದದ್ದು ನಕಲಿ ಮದುವೆ, ಬಂದವರು ದೋಖಾ ಗಿರಾಕಿಗಳು ಎಂಬ ಸತ್ಯ ಬಯಲಾಗಿದೆ. ವಾಪಸ್‌ ಗುಬ್ಬಿಗೆ ಬಂದ ಪಾಲಾಕ್ಷಯ್ಯ ಎಲ್ಲರ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ತನಿಖೆ ನಡೆಸಿದ್ದರು. ಒಂದು ವರ್ಷದಿಂದ ದೋಖಾ ಕುಟುಂಬ ತಲೆ ಮರೆಸಿಕೊಂಡಿತ್ತು. ಮಹಾರಾಷ್ಟ್ರ, ಹುಬ್ಬಳ್ಳಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮದುಮಗಳು ಕೋಮಲಾ @ ಲಕ್ಷ್ಮೀ ಬಾಳಸಾಬ್ ಜನಕರ, ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರಧಾರಿ ಲಕ್ಷ್ಮೀಬಾಯಿ, ಬ್ರೋಕರ್ ಲಕ್ಷ್ಮಿ ಬಂಧಿತರು.

ಮದುವೆ ಹೆಸರಲ್ಲಿ ವಂಚಿಸಲು ನಕಲಿ ಆಧಾರ್‌ ಕಾರ್ಡ್‌ ಅನ್ನೂ ಈ ತಂಡ ಸೃಷ್ಟಿ ಮಾಡಿಕೊಂಡಿತ್ತು. ಮದುವೆ ಹೆಸರಲ್ಲಿ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ತಂಡ, ಆಧಾರ್ ಕಾರ್ಡ್ ತೋರಿಸಿ ಗಂಡಿನ‌ ಮನೆಯವರನ್ನ ನಂಬಿಸುತ್ತಿದ್ದರು. ಮೂರು ವರ್ಷದಲ್ಲಿ ನಾಲ್ಕು ಮಂದಿ ಪುರುಷರಿಗೆ ಮದುವೆ ಹೆಸರಿನಲ್ಲಿ ಹೀಗೆ ವಂಚಿಸಿದೆ. ಸಂಪ್ರದಾಯದಂತೆ ಮದುವೆ ಮಾಡಿಸಿ, ನಂಬಿಸಿ ಮೋಸ ಮಾಡುವ ಈ ಪ್ರಕರಣದಲ್ಲಿ ಬ್ರೋಕರ್‌ ಲಕ್ಷ್ಮೀ ಇಡೀ ಪ್ರಕರಣದ ಸೂತ್ರಧಾರಿ. ಮದುಮಗಳಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಚಿಕ್ಕಪ್ಪ-ಚಿಕ್ಕಮ್ಮನ ಹೆಸರಿನಲ್ಲಿ ಬಂದಿದ್ದವರು ಕೂಡ ನಕಲಿಗಳು. ಸದ್ಯ ನಾಲ್ವರನ್ನೂ ಬಂಧಿಸಿ ಗುಬ್ಬಿ ಪೊಲೀಸರು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: Raichur News: ಶಿಕ್ಷಕಿಗೆ ಅಶ್ಲೀಲ ಮೆಸೇಜ್‌ ಕಳಿಸಿದ ಪ್ರಭಾರಿ ಪ್ರಾಚಾರ್ಯನಿಗೆ ಧರ್ಮದೇಟು

Continue Reading

ಮಳೆ

Karnataka Weather : ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಈ ನಾಲ್ಕು ಜಿಲ್ಲೆಗಳಿಗೆ ಎಚ್ಚರಿಕೆ

Rain News: ಕರಾವಳಿ, ಮಲೆನಾಡು ಭಾಗದಲ್ಲಿ ವರುಣ ಸೈಲೆಂಟ್‌ ಆಗಿದ್ದು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯು ವೈಲೆಂಟ್‌ ಆಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka weather Forecast) ನೀಡಿದೆ.

VISTARANEWS.COM


on

By

karnataka weather forecast
Koo

ಬೆಂಗಳೂರು: ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ (Karnataka Weather Forecast) ಸಾಧ್ಯತೆಯಿದ್ದು, ಪ್ರತ್ಯೇಕವಾಗಿ ಭಾರಿ ಮಳೆಯಾಗುವ (Rain News) ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಮಧ್ಯಮ ಮಳೆಯಾದರೆ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸಾಧಾರಣದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದೆಡೆ ಮಧ್ಯಮದಿಂದ ಕೂಡಿದ ಮಳೆಯಾಗುವ ಸಂಭವವಿದೆ.

ಉತ್ತರ ಒಳನಾಡಿನಲ್ಲಿ ರಾಯಚೂರು, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Karnataka Rain : ಧಾರಾಕಾರ ಮಳೆಗೆ ಕೆರೆಯಂತಾದ ಬೆಂಗಳೂರು-ಹೊಸೂರು ಹೈವೆ; ಡ್ಯಾಡಿಸ್ ಗಾರ್ಡನ್ ಲೇಔಟ್‌ಗೆ ಜಲದಿಗ್ಬಂದನ

ಬೆಂಗಳೂರಲ್ಲಿ ವ್ಯಾಪಕ ಮಳೆ ಎಚ್ಚರಿಕೆ

ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣದಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಯೆಲ್ಲೋ ಅಲರ್ಟ್‌

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿ ವೇಗವು 30-40 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Gallantry awards
ಪ್ರಮುಖ ಸುದ್ದಿ2 hours ago

Gallantry Awards: 103 ಶೌರ್ಯ ಪ್ರಶಸ್ತಿ ಪಟ್ಟಿ ಪ್ರಕಟ; ಪಟ್ಟಿಯಲ್ಲಿವೆ 4 ಕೀರ್ತಿ ಚಕ್ರಗಳು

Vinesh Phogat
ಪ್ರಮುಖ ಸುದ್ದಿ3 hours ago

Vinesh Phogat: ವಿನೇಶ್‌ ಪೋಗಟ್‌ಗೆ ಭಾರೀ ಹಿನ್ನಡೆ; ಬೆಳ್ಳಿ ಪದಕ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

duleep trophy
ಕ್ರೀಡೆ3 hours ago

Duleep Trophy: ದುಲೀಪ್‌ ಟ್ರೋಫಿ ತಂಡ ಪ್ರಕಟ; ಪಟ್ಟಿಯಲ್ಲಿಲ್ಲ ಕೊಹ್ಲಿ, ಶರ್ಮಾ ಹೆಸರು- ನಾಲ್ಕು ಟೀಮ್‌ಗಳ ನಾಯಕರು ಇವರೇ!

Reliance Foundation
ದೇಶ3 hours ago

Reliance Foundation: ಡಿಗ್ರಿ, ಪಿಜಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ರಿಲಯನ್ಸ್ ಫೌಂಡೇಷನ್‌ನಿಂದ ವಿದ್ಯಾರ್ಥಿ ವೇತನ

Bank FD Rates
ಮನಿ-ಗೈಡ್3 hours ago

Bank FD Rates: ಪರಿಷ್ಕೃತ ಲೆಕ್ಕಾಚಾರದ ಪ್ರಕಾರ ಎಫ್‌ಡಿ ಬಡ್ಡಿ ದರ ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ?

Banking Recruitment 2024
ಉದ್ಯೋಗ4 hours ago

Banking Recruitment 2024: 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 4455 ಹುದ್ದೆ; ಐಬಿಪಿಎಸ್‌ನಿಂದ ಮತ್ತೆ ನೇಮಕ; complete details

Necklace Mangalya Fashion
ಫ್ಯಾಷನ್4 hours ago

Necklace Mangalya Fashion: ವಿವಾಹಿತರ ಮಾಂಗಲ್ಯಕ್ಕೂ ಸಿಕ್ತು ವೈವಿಧ್ಯಮಯ ನೆಕ್ಲೇಸ್‌ ರೂಪ!

Arun Yogiraj
ಬೆಂಗಳೂರು4 hours ago

Arun Yogiraj: ʼವಿಶ್ವ ಶ್ರೇಷ್ಠ ಕನ್ನಡಿಗ 2024ʼ ಪ್ರಶಸ್ತಿಗೆ ಶ್ರೀರಾಮ ವಿಗ್ರಹದ ರೂವಾರಿ ಅರುಣ್ ಯೋಗಿರಾಜ್‌ ಆಯ್ಕೆ

Shira News
ತುಮಕೂರು4 hours ago

Shira News: ಉದ್ಯೋಗ ಕೌಶಲಕ್ಕಾಗಿ ಶಿರಾದಲ್ಲಿ ಸ್ಕಿಲ್ ಯುನಿವರ್ಸಿಟಿ ಸ್ಥಾಪನೆ; ಟಿ.ಬಿ. ಜಯಚಂದ್ರ

Murder Case
ಕರ್ನಾಟಕ4 hours ago

Murder Case: ಪತ್ನಿಯನ್ನು ಸ್ಮಶಾನಕ್ಕೆ ಕರೆದೊಯ್ದು ಕೊಲೆಗೈದ ಪತಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌