Physical Abuse : ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ನರ್ಸ್​ ಮೇಲೆ ಅತ್ಯಾಚಾರ ನಡೆಸಿ ಕೊಲೆ - Vistara News

ಪ್ರಮುಖ ಸುದ್ದಿ

Physical Abuse : ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ನರ್ಸ್​ ಮೇಲೆ ಅತ್ಯಾಚಾರ ನಡೆಸಿ ಕೊಲೆ

Physical Abuse: ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದರಿ ಕಾಣೆಯಾದ ದೂರು ದಾಖಲಿಸಿದರು. ಎಂಟು ದಿನಗಳ ನಂತರ, ಆಗಸ್ಟ್ 8 ರಂದು, ಉತ್ತರ ಪ್ರದೇಶ ಪೊಲೀಸರು ಡಿಬ್ಡಿಬಾ ಗ್ರಾಮದಲ್ಲಿರುವ ಅವರ ಮನೆಯಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ಖಾಲಿ ಜಾಗದಲ್ಲಿ ಆಕೆಯ ಶವವನ್ನು ಪತ್ತೆ ಹಚ್ಚಿದ್ದರು. ಈ ವೇಳೆ ಅದ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿತ್ತು.

VISTARANEWS.COM


on

Physical Abuse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಉತ್ತರಾಖಂಡದ ಖಾಸಗಿ ಆಸ್ಪತ್ರೆಯಿಂದ ಉತ್ತರ ಪ್ರದೇಶದ ಗಡಿಯಲ್ಲಿರುವ ತನ್ನ ಮನೆಗೆ ಹಿಂದಿರುಗುತ್ತಿದ್ದ ನರ್ಸ್ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ವೃತ್ತಿ ತರಬೇತಿ ಪಡೆಯುತ್ತಿದ್ದ ವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿಕೊಂಡ ಕೊಲೆ ಮಾಡಿದ ಪ್ರಕರಣದ ಬಗ್ಗೆ ಗಂಭೀರ ಚರ್ಚೆ ಹಾಗೂ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಅದೇ ಮಾದರಿಯ ಘಟನೆಯೊಂದು ಉತ್ತರಾಖಂಡಲ್ಲಿ ವರದಿಯಾಗಿದೆ. ಜುಲೈ 30 ರ ಸಂಜೆ ಆಸ್ಪತ್ರೆಯಿಂದ ಹೊರಟ ಅವರು ರುದ್ರಪುರದ ಇಂದ್ರ ಚೌಕ್​ನಿಂದ ಇ-ರಿಕ್ಷಾದಲ್ಲಿ ಪ್ರಯಾಣಿಸಿದ್ದರು. ಆದರೆ ಉತ್ತರ ಪ್ರದೇಶದ ಬಿಲಾಸ್ಪುರದ ಕಾಶಿಪುರ ರಸ್ತೆಯಲ್ಲಿರುವ ಬಾಡಿಗೆ ಮನೆಗೆ ತಲುಪಲಿಲ್ಲ. ವಿವಾಹಿತ ಮಹಿಳೆಗೆ 11 ವರ್ಷದ ಮಗಳಿದ್ದು ಆಕೆಯೊಂದು ವಾಸವಾಗಿದ್ದರು. ಆಕೆಯನ್ನು ಕೊಲೆ ಮಾಡಿರುವ ದಿನಗೂಲಿ ಕಾರ್ಮಿಕನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದರಿ ಕಾಣೆಯಾದ ದೂರು ದಾಖಲಿಸಿದರು. ಎಂಟು ದಿನಗಳ ನಂತರ, ಆಗಸ್ಟ್ 8 ರಂದು, ಉತ್ತರ ಪ್ರದೇಶ ಪೊಲೀಸರು ಡಿಬ್ಡಿಬಾ ಗ್ರಾಮದಲ್ಲಿರುವ ಅವರ ಮನೆಯಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ಖಾಲಿ ಜಾಗದಲ್ಲಿ ಆಕೆಯ ಶವವನ್ನು ಪತ್ತೆ ಹಚ್ಚಿದ್ದರು. ಈ ವೇಳೆ ಅದ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿತ್ತು.

ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ಆರೋಪಿಗಳನ್ನು ಹುಡುಕಲು ಪೊಲೀಸ್ ತಂಡವನ್ನು ರಚಿಸಿದ್ದರು. ಪೊಲೀಸರು ಸಂತ್ರಸ್ತೆಯ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿ ಅದರ ಮೂಲಕ ವಿವರಗಳನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಆರೋಪಿ ಧರ್ಮೇಂದ್ರ ಬಳಿಗೆ ಸಿಕ್ಕಿ ಬಿದ್ದಿದ್ದಾನೆ. ಉತ್ತರ ಪ್ರದೇಶದ ಬರೇಲಿಯ ದಿನಗೂಲಿ ಕಾರ್ಮಿಕನಾದ ಆರೋಪಿಯನ್ನು ರಾಜಸ್ಥಾನದಲ್ಲಿ ಬುಧವಾರ ಬಂಧಿಸಲಾಗಿದೆ.

ಇದನ್ನೂ ಓದಿ: Rahul Gandhi : ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್​ ಬೆಂಚ್​; ಬಿಜೆಪಿ- ಕಾಂಗ್ರೆಸ್​ ಜಟಾಪಟಿ

ಕುಡಿದ ಮತ್ತಿನಲ್ಲಿದ್ದ ಧರ್ಮೇಂದ್ರ, ನರ್ಸ್​ ಹಿಂಬಾಲಿಸಿ ಹಿಂಬಾಲಿಸಿ ಅಪಾರ್ಟ್​ಮೆಂಟ್​ ಕಟ್ಟಡಕ್ಕೆ ಪ್ರವೇಶಿಸುತ್ತಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಆಕೆಯನ್ನು ಹತ್ತಿರದ ಪೊದೆಗಳಿಗೆ ಎಳೆದೊಯ್ದನು. ಸ್ಕಾರ್ಫ್ ಬಳಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಉಧಮ್ ಸಿಂಗ್ ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಟಿ.ಸಿ ಹೇಳಿದ್ದಾರೆ.

ಆರೋಪಿಯು ಆಕೆ ಮೃತಪಟ್ಟ ಮೇಲೆ ಫೋನ್ ಮತ್ತು ಪರ್ಸ್ ನಿಂದ 3,000 ರೂ.ಗಳನ್ನು ಸಹ ಕದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದ ಸಮಯದಲ್ಲಿ ಮಹಿಳಾ ತರಬೇತಿ ವೈದ್ಯರ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ಮಧ್ಯೆ ಈ ಬೆಳವಣಿಗೆ ನಡೆದಿದೆ. ಕಳೆದ ವಾರ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್​​ನಲ್ಲಿ 31 ವರ್ಷದ ಮಹಿಳೆಯ ಅರೆಬೆತ್ತಲೆ ಶವ ಪತ್ತೆಯಾಗಿತ್ತು.

ಈ ಕ್ರೂರ ಘಟನೆಯು ವೈದ್ಯರ ಕೆಲಸದ ಸ್ಥಳಗಳಲ್ಲಿ ಉತ್ತಮ ಸುರಕ್ಷತೆಯ ಕಾಳಜಿಯ ಬಗ್ಗೆ ಚರ್ಚೆಗಳು ಎದ್ದಿವೆ. ವೈದ್ಯಕೀಯ ಸಿಬ್ಬಂದಿಯ ಮೇಲಿನ ದಾಳಿಯನ್ನು ತಡೆಯಲು ಕೇಂದ್ರ ಆರೋಗ್ಯ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ದೇಶಾದ್ಯಂತ ನಿವಾಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಏನು? ಹೆಚ್ಚಿನ ಫಲ ಪಡೆಯಲು ಪೂಜೆ ಹೇಗೆ ಮಾಡಬೇಕು?

VISTARANEWS.COM


on

Varamahalakshmi Festival 2024
Koo

ವಿವಾಹಿತ ಮಹಿಳೆಯರು ವಿಶೇಷವಾಗಿ ಮಾಡುವ ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi Festival 2024) ಆಗಸ್ಟ್ 16ರಂದು ಶುಕ್ರವಾರ ಆಚರಿಸಲಾಗುತ್ತಿದೆ. ವರಲಕ್ಷ್ಮಿ ವ್ರತವು (varalakshmi vrata) ಮಹಿಳೆಯರೆಲ್ಲ ಸೇರಿ ಭಕ್ತಿ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಈ ದಿನ ಮಹಿಳೆಯರು ಉಪವಾಸ (fasting) ವ್ರತ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸಿ ತಮ್ಮ ಪತಿ, ಮಕ್ಕಳು ಮತ್ತು ಇಡೀ ಕುಟುಂಬಕ್ಕೆ ಆಶೀರ್ವಾದವನ್ನು ಕೋರುತ್ತಾರೆ.

ಪಾರ್ವತಿ ದೇವಿಯು ಶಿವನಲ್ಲಿ ಒಮ್ಮೆ ಭೂಮಿಯಲ್ಲಿ ಮಹಿಳೆಯರ ಕಷ್ಟಗಳನ್ನು ದೂರ ಮಾಡಬಹುದಾದ ವ್ರತ ಯಾವುದು ಎಂಬುದಾಗಿ ಪ್ರಶ್ನಿಸುತ್ತಾಳೆ. ಅದಕ್ಕೆ ಶಿವನು ಒಂದು ಕಥೆ ಹೇಳುತ್ತಾನೆ. ಅದರ ಪ್ರಕಾರ ಕುಂಡಿನಿ ಎಂಬ ಪಟ್ಟಣದಲ್ಲಿ ಚಾರುಮತಿ ಎಂಬ ಬ್ರಾಹ್ಮಣ ಪತಿವ್ರತಾ ಸ್ತ್ರೀ ನಿರ್ಮಲ ಮನಸ್ಸಿನವಳಾಗಿದ್ದಳು. ಒಂದು ದಿನ ಲಕ್ಷ್ಮಿ ದೇವಿಯು ಆಕೆಯ ಕನಸಿನಲ್ಲಿ ಬಂದು ವರಲಕ್ಷ್ಮಿ ವ್ರತ ಮಾಡಿದರೆ ನಿನ್ನ ಇಷ್ಟಾರ್ಥವನ್ನು ನೆರವೇರಿಸುವುದಾಗಿ ಹೇಳುತ್ತಾಳೆ. ಬಳಿಕ ಆಕೆ ನೆರೆಹೊರೆಯ ಮಹಿಳೆಯರನ್ನು ಸೇರಿಸಿ ವರಮಹಾಲಕ್ಷ್ಮಿ ವ್ರತವನ್ನು ಮಾಡಿ, ಲಕ್ಷ್ಮಿ ದೇವಿಗೆ ಪೂಜೆಯನ್ನು ಸಲ್ಲಿಸುತ್ತಾಳೆ. ಬಳಿಕ ಅವಳ ಕಷ್ಟಗಳಲ್ಲೇ ಒಂದೊಂದಾಗಿ ಪರಿಹಾರವಾಗುತ್ತದೆ. ಆ ಬಳಿಕ ವರಮಹಾಲಕ್ಷ್ಮಿ ವ್ರತವು ಮಹಿಳೆಯರು ಮಾಡಬಹುದಾದ ಶ್ರೇಷ್ಠ ವ್ರತವಾಯಿತು ಎಂದು ಶಿವ ಪಾರ್ವತಿಗೆ ಹೇಳಿದನು ಎಂಬುದು ಈ ವ್ರತದ ಐತಿಹ್ಯ.

ವರಲಕ್ಷ್ಮಿ ವ್ರತವನ್ನು ಮಾಡುವ ಸಿದ್ಧತೆಯಲ್ಲಿ ಇರುವವರು ಈ ಬಾರಿ ಪೂಜೆಯ ಮನೆ, ದೇವಿಯ ಅಲಂಕಾರದಲ್ಲಿ ವಿಶೇಷತೆಯನ್ನು ತೋರಬಹುದು. ಈ ಮೂಲಕ ಹಬ್ಬವನ್ನು ಅರ್ಥಪೂರ್ಣಗೊಳಿಸಬಹುದು. ಅಲಂಕಾರದಲ್ಲಿ ಕುಟುಂಬದ ಸಂಪ್ರದಾಯ ಮತ್ತು ಶೈಲಿಯನ್ನು ಪ್ರತಿಬಿಂಬಿಸುವ ಅಂಶಗಳನ್ನು ಸೇರಿಸಲು ಮರೆಯದಿರಿ. ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತುಗಳನ್ನು ಅಲಂಕಾರಕ್ಕೆ ಬಳಸಿ.

ವರಮಹಾಲಕ್ಷ್ಮಿ ಪೂಜೆಯ ಅಲಂಕಾರಕ್ಕೆ ಬೇಕಾಗುವ ಸಾಮಗ್ರಿಗಳ ವಿವರ ಇಂತಿದೆ.


1. ಕುಂಕುಮ

ಹಣೆಯ ಮೇಲಿನ ಪವಿತ್ರ ಗುರುತಾಗಿ ಮತ್ತು ಪೂಜಾ ವಿಧಿಗಳಲ್ಲಿ ಕುಂಕುಮವನ್ನು ಬಳಸಿ. ಪೂಜಾ ಜಾಗಕ್ಕೆ ಸಾಂಪ್ರದಾಯಿಕ ಕೆಂಪು ಬಣ್ಣದ ಸ್ಪರ್ಶವನ್ನು ನೀಡಿ.

2. ಅರಶಿನ

ಹಬ್ಬದ ಆಚರಣೆ ಮತ್ತು ಅಲಂಕಾರಗಳಲ್ಲಿ ಅರಶಿನ ಅತ್ಯಗತ್ಯ. ಇದನ್ನು ಮಂಗಳಕರ ಮತ್ತು ಶುದ್ಧೀಕರಿಸುವ ಗುಣಗಳಿಗಾಗಿ ಬಳಸಲಾಗುತ್ತದೆ.

3. ಕಲಶ

ನೀರು, ತೆಂಗಿನಕಾಯಿ ಮತ್ತು ಮಾವಿನ ಎಲೆಗಳಿಂದ ತುಂಬಿದ ಕಲಶವನ್ನು ಅಲಂಕರಿಸಿ. ಇದು ಸಮೃದ್ಧಿಯನ್ನು ಸಂಕೇತಿಸುತ್ತದೆ ಮತ್ತು ಪೂಜಾದಲ್ಲಿ ಇದು ಕೇಂದ್ರ ಭಾಗವಾಗಿದೆ.

4. ಮಾವಿನ ಎಲೆಗಳು

ತಾಜಾ ಮಾವಿನ ಎಲೆಗಳನ್ನು ಪ್ರವೇಶದ್ವಾರದಲ್ಲಿ ಮತ್ತು ಪೂಜಾ ಪ್ರದೇಶದ ಸುತ್ತಲೂ ನೇತುಹಾಕಿ. ಅವರು ಶುದ್ಧತೆಯನ್ನು ಸೂಚಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ.

5. ಬಾಳೆಹಣ್ಣು

ಪೂಜೆಯಲ್ಲಿ ಬಾಳೆ ಹಣ್ಣು ಅತ್ಯಂತ ಪ್ರಮುಖ ವಸ್ತು. ಇದನ್ನು ದೇವರಿಗೆ ನೈವೇದ್ಯವಾಗಿ ಸಮರ್ಪಿಸಲು, ಉಪವಾಸ ಮಾಡುತ್ತಿರುವ ಬಂದ ಅತಿಥಿಗಳಿಗೆ ನೀಡಲು ಬಳಸಬಹುದು.

Varamahalakshmi Festival 2024
Varamahalakshmi Festival 2024


6. ಲಕ್ಷ್ಮಿ ಮುಖ ಅಲಂಕಾರ

ಲಕ್ಷ್ಮಿ ದೇವಿಯ ಉಪಸ್ಥಿತಿ ಮತ್ತು ಆಶೀರ್ವಾದವನ್ನು ಸಂಕೇತಿಸಲು ಪೂಜಾ ಪ್ರದೇಶದ ಮಧ್ಯದಲ್ಲಿ ಲಕ್ಷ್ಮಿ ದೇವಿಯನ್ನು ಸುಂದರವಾಗಿ ಅಲಂಕರಿಸಿದ ಮುಖವನ್ನು ಇರಿಸಿ.

7. ಹೂವುಗಳು

ಚೆಂಡು ಹೂವು, ಸೇವಂತಿಗೆ, ಗುಲಾಬಿ ಮತ್ತು ಮಲ್ಲಿಗೆಯಂತಹ ಹೂವುಗಳನ್ನು ಪೂಜಾ ಸ್ಥಳವನ್ನು ಅಲಂಕರಿಸಲು ಬಳಸಬಹುದು. ಇದು ಪರಿಮಳಯುಕ್ತ ಮತ್ತು ವರ್ಣರಂಜಿತ ವಾತಾವರಣವನ್ನು ಸೃಷ್ಟಿಸುತ್ತದೆ.

8. ಹಣ್ಣುಗಳು

ಪೂಜಾ ಸ್ಥಳದ ಸುತ್ತಲೂ ತಾಜಾ ಹಣ್ಣುಗಳನ್ನು ನೈವೇದ್ಯವಾಗಿ ಜೋಡಿಸಿ. ಇದರಿಂದ ಪೂಜೆ ಸ್ಥಳದಲ್ಲಿ ನೈಸರ್ಗಿಕ ಸೌಂದರ್ಯದ ಅಲಂಕಾರ ಮಾಡಿದಂತಾಗುತ್ತದೆ. ಇದು ಸಮೃದ್ಧಿಯನ್ನು ಸೂಚಿಸುತ್ತದೆ.

9. ಚಂದನ

ಪವಿತ್ರ ಗುಣಲಕ್ಷಣ ಇರುವ ಶ್ರೀಗಂಧವನ್ನು ಪೇಸ್ಟ್ ಮಾಡಿ ಪೂಜಾ ಸ್ಥಳದಲ್ಲಿ ಇರಿಸಿ. ಇದನ್ನು ಪೂಜೆಯಲ್ಲಿ ಭಾಗವಹಿಸುವವರ ಹಣೆಗೆ ಹಚ್ಚಿ.

10. ಡ್ರೈ ಫ್ರೂಟ್ಸ್ ಮತ್ತು ಗಿಫ್ಟ್ ಹ್ಯಾಂಪರ್ಸ್

ಬಂದ ಅತಿಥಿಗಳಿಗೆ ನೀಡಲು ಒಣ ಹಣ್ಣು, ಉಡುಗೊರೆ ಹ್ಯಾಂಪರ್‌ಗಳನ್ನು ಮೊದಲೇ ಸಿದ್ದಪಡಿಸಿ ಅಲಂಕಾರದ ರೂಪದಲ್ಲಿ ಜೋಡಿಸಿ.


11. ಲಕ್ಷ್ಮಿ ದೇವಿಯ ವಿಗ್ರಹ

ಪೂಜಾ ಪ್ರದೇಶದ ಮಧ್ಯದಲ್ಲಿ ಸುಂದರವಾಗಿ ಅಲಂಕರಿಸಿದ ಲಕ್ಷ್ಮಿ ದೇವಿಯ ವಿಗ್ರಹವನ್ನು ಇರಿಸಿ. ಸುತ್ತಲೂ ಹೂವು ಮತ್ತು ಅಗತ್ಯ ವಸ್ತುಗಳನ್ನು ಜೋಡಿಸಿ.


12. ಧೂಪದ್ರವ್ಯದ ತುಂಡು

ಗಾಳಿಯನ್ನು ಶುದ್ಧೀಕರಿಸಲು ಮತ್ತು ಪೂಜಾ ಸ್ಥಳದ ಆಧ್ಯಾತ್ಮಿಕ ವಾತಾವರಣವನ್ನು ಹೆಚ್ಚಿಸಲು ಅಲಂಕಾರಿಕ ಸ್ಟ್ಯಾಂಡ್‌ನಲ್ಲಿ ಧೂಪದ್ರವ್ಯವನ್ನು ಬೆಳಗಿಸಿ.


ಇದನ್ನೂ ಓದಿ: Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ದಿನ ಸುಲಭವಾಗಿ ಮಾಡಬಹುದಾದ ರುಚಿಕರ ಖಾದ್ಯಗಳಿವು; ವಿಡಿಯೊಗಳಿವೆ

13. ಲಕ್ಷ್ಮೀ ಪೂಜಾ ತಾಳಿ

ಕುಂಕುಮ, ಅರಶಿನ, ಅಕ್ಕಿ, ವೀಳ್ಯದೆಲೆ ಮತ್ತು ಅಡಿಕೆಯಂತಹ ಎಲ್ಲಾ ಅಗತ್ಯ ವಸ್ತುಗಳೊಂದಿಗೆ ಅಲಂಕರಿಸಿದ ಲಕ್ಷ್ಮಿ ಪೂಜಾ ತಾಳಿಯನ್ನು ಸಿದ್ಧಪಡಿಸಿ.

14. ಹೊಸ ರವಿಕೆ ಕಣ

ಪೂಜೆಯ ಭಾಗವಾಗಿ ಹೊಸ ರವಿಕೆ ತುಂಡುಗಳನ್ನು ದೇವರಿಗೆ ಅರ್ಪಿಸಿ. ಇದು ಗೌರವ ಮತ್ತು ಕೃತಜ್ಞತೆಯನ್ನು ಸಂಕೇತಿಸುವ ಸಾಂಪ್ರದಾಯಿಕ ಕೊಡುಗೆಯಾಗಿದೆ. ಇದನ್ನು ಬಂದಿರುವ ಮಹಿಳೆಯರಿಗೆ ನೀಡಿ.

Continue Reading

ಭವಿಷ್ಯ

Dina Bhavishya :ಪ್ರಭಾವಿ ವ್ಯಕ್ತಿಗಳ ಬೆಂಬಲ ಪಡೆದು ಕಾರ್ಯದಲ್ಲಿ ಯಶಸ್ಸು ಪಡೆಯುವಿರಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ ಏಕಾದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina bhavishya
Koo

ಚಂದ್ರನು ಶುಕ್ರವಾರ ಮಕರ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ಮಿಥುನ, ಕಟಕ, ತುಲಾ, ಧನಸ್ಸು, ಕುಂಭ, ಮೀನ ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ನಿಮ್ಮ ವರ್ತನೆ ಇತರರಿಗೆ ಒತ್ತಡ ಉಂಟು ಮಾಡುವ ಸಾಧ್ಯತೆ ಇದೆ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಧಾರ್ಮಿಕ ವ್ಯಕ್ತಿಗಳ ಭೇಟಿ ಮಾಡುವಿರಿ, ಕ್ಷೇತ್ರ ದರ್ಶನ ಮಾಡುವಿರಿ. ವೃಷಭ ರಾಶಿಯವರು ದ್ವೇಷದ ಭಾವನೆ ನಿಮ್ಮ ಮನಸ್ಸಿಗೆ ಅಸಮಾಧಾನ ತರುವುದರೊಂದಿಗೆ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರೊಂದಿಗೆ ಸಮಾಧಾನದಿಂದ ವರ್ತಿಸಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (16-08-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಏಕಾದಶಿ 09:39 ವಾರ: ಶುಕ್ರವಾರ
ನಕ್ಷತ್ರ: ಮೂಲಾ 12:42 ಯೋಗ: ವಿಷ್ಕಂಭ 13:10
ಕರಣ: ವಿಷ್ಟಿ (ಭದ್ರ) 09:39 ಅಮೃತಕಾಲ: ಬೆಳಗ್ಗೆ 06:22ರಿಂದ 07:57
ದಿನದ ವಿಶೇಷ: ವರಮಹಾಲಕ್ಷ್ಮೀ ವ್ರತ, ವೈಷ್ಣವ ಏಕಾದಶಿ

ಸೂರ್ಯೋದಯ : 06:08   ಸೂರ್ಯಾಸ್ತ : 06:40

ರಾಹುಕಾಲ: ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ:ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ನಿಮ್ಮ ವರ್ತನೆ ಇತರರಿಗೆ ಒತ್ತಡ ಉಂಟು ಮಾಡುವ ಸಾಧ್ಯತೆ ಇದೆ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಧಾರ್ಮಿಕ ವ್ಯಕ್ತಿಗಳ ಭೇಟಿ ಮಾಡುವಿರಿ, ಕ್ಷೇತ್ರ ದರ್ಶನ ಮಾಡುವಿರಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ದ್ವೇಷದ ಭಾವನೆ ನಿಮ್ಮ ಮನಸ್ಸಿಗೆ ಅಸಮಾಧಾನ ತರುವುದರೊಂದಿಗೆ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರೊಂದಿಗೆ ಸಮಾಧಾನದಿಂದ ವರ್ತಿಸಿ. ಮೌನದಿಂದ ಇರುವುದು ಒಳಿತು. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 7

Horoscope Today

ಮಿಥುನ: ಮಹತ್ವಾಕಾಂಕ್ಷೆಯ ಯೋಜನೆಗಳು ಸಫಲವಾಗಲಿದೆ. ಮಕ್ಕಳಿಗಾಗಿ ಖರ್ಚು ಮಾಡುವ ಅನಿವಾರ್ಯತೆ ಇದೆ. ಅನವಶ್ಯಕವಾಗಿ ಒತ್ತಡ ತೆಗೆದುಕೊಂಡು ಜೀವನದ ಮಹತ್ವದ ವಿಷಯಗಳ ಬಗ್ಗೆ ಆಲಸ್ಯ ಮಾಡುವುದು ಬೇಡ. ಆರ್ಥಿಕವಾಗಿ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಕಟಕ: ಬಿಡುವಿಲ್ಲದ ಕೆಲಸದಿಂದ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಮನಸ್ಸಿಗೆ ನೋವುಂಟು ಮಾಡಬಹುದು. ಆಪ್ತರೊಂದಿಗೆ ಭಾವನೆ ಹಂಚಿಕೊಳ್ಳುವಿರಿ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ಸಿಂಹ: ಸಾಮಾಜಿಕವಾಗಿ ಮನ್ನಣೆ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ ಪಡೆದು ಕಾರ್ಯದಲ್ಲಿ ಯಶಸ್ಸು ಪಡೆಯುವಿರಿ. ಬಹುದಿನಗಳ ಕನಸು ನನಸಾಗುವ ಸಮಯವಿದು. ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕನ್ಯಾ: ಸಂತೋಷದಿಂದ ಇದ್ದು, ಇತರರಿಗೆ ಸಂತಸ ಹಂಚಿಕೊಳ್ಳಲು ಹವಣಿಸುವಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆತುರದ ಭರದಲ್ಲಿ ಇತರರನ್ನು ಟೀಕೆ ಮಾಡುವುದು ಬೇಡ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ನಿಮ್ಮ ಹರಿತವಾದ ಮಾತುಗಳಿಂದ ಇತರರ ಮನಸ್ಸು ನೋವುಗುವುದು ಬೇಡ, ಆಲೋಚಿಸಿ ಮಾತನಾಡಿ. ಕುಟುಂಬದ ಪ್ರತಿಯೊಂದು ವಿಷಯದಲ್ಲೂ ತಪ್ಪು ಹುಡುಕುವುದು ಬೇಡ, ಇದರಿಂದ ಮನಸ್ಸು ಘಾಸಿಯಾಗುವುದು. ಆಧ್ಯಾತ್ಮದ ಹಾದಿ ದಾರಿ ತೋರಿತು.ಗುರು ದತ್ತಾತ್ರೇಯನನ್ನು ಆರಾಧಿಸಿ. ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುಲು ಸಮಯ ನೀಡುವಿರಿ. ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವಿರಿ. ಭೂಮಿ, ಆಸ್ತಿ ಖರೀದಿಗಾಗಿ ಆಲೋಚನೆ ಮಾಡುವಿರಿ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ದೀರ್ಘಕಾಲದ ಪ್ರಯಾಣ ಮಾಡುವಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಹೊಸ ಕೆಲಸಗಳಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಕರ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಿಂದೆ ಮಾಡಿದ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವುದು. ಮುಂಗೋಪದಿಂದ ನಷ್ಟ ಸಾಧ್ಯತೆ ಇದೆ. ಸ್ನೇಹಿತರ ಸಲಹೆ ಸಹಕಾರ ಸಿಗುವುದು. ಅದೃಷ್ಟ ಸಂಖ್ಯೆ: 6

Horoscope Today

ಕುಂಭ: ಆಲಸ್ಯದಿಂದ ಕಾರ್ಯ ಹಾನಿಯಾಗಲಿದೆ. ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಸೃಜನಾತ್ಮಕವಾಗಿ ಕೆಲಸ ಮಾಡಿ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಮೀನ: ಹೊಸ ಅವಕಾಶಗಳು ಗರಿಗೆದರಲಿವೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ನಿಮ್ಮ ಹಿಂದೆ ಟೀಕೆಗಳನ್ನು ಮಾಡುವ ಜನರಿಂದ ದೂರ ಇರಿ. ದಿನ ಮಟ್ಟಿಗೆ ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಆಗುವ ಸಾಧ್ಯತೆ ಇದೆ. ಸಂಗಾತಿಯ ಸ್ವಾರ್ಥದಿಂದ ಕುಟುಂಬದ ವಾತಾವರಣದಲ್ಲಿ ವ್ಯತ್ಯಾಸವಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

VVS Laxman : ಹಣ ತಂದುಕೊಡುವ ಐಪಿಎಲ್​ ಬಿಟ್ಟು ಬೇರೆ ಹಳೇ ಹುದ್ದೆಯನ್ನೇ ಅಪ್ಪಿಕೊಂಡ ವಿವಿಎಸ್​ ಲಕ್ಷ್ಮಣ್​

VVS Laxman :

VISTARANEWS.COM


on

VVS Laxman
Koo

ಬೆಂಗಳೂರು : ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥರಾಗಿ ತಮ್ಮ ಅಧಿಕಾರಾವಧಿಯನ್ನು ಕನಿಷ್ಠ ಒಂದು ವರ್ಷ ವಿಸ್ತರಿಸಲು ಸಜ್ಜಾಗಿದ್ದಾರೆ ಎಂದು ಇಎಸ್​ಪಿಎನ್​ ಕ್ರಿಕ್ಇನ್ಫೋ ವರದಿ ಮಾಡಿದೆ. ಲಕ್ಷ್ಮಣ್ 2021 ರ ಡಿಸೆಂಬರ್​ನಲ್ಲಿ ಮೂರು ವರ್ಷಗಳ ಅವಧಿಗೆ ಎನ್ಸಿಎ ಮುಖ್ಯಸ್ಥರಾದರು. ಅವರ ಒಪ್ಪಂದವು ಈ ವರ್ಷದ ಸೆಪ್ಟೆಂಬರ್ ನಲ್ಲಿ ಕೊನೆಗೊಳ್ಳಬೇಕಿತ್ತು. ಇಎಸ್ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಲಕ್ಷ್ಮಣ್ ಅವರ ಸೇವೆಗಳನ್ನು ಪಡೆಯಲು ಎದುರು ನೋಡುತ್ತಿತ್ತು, ಆದರೆ ಎನ್​ಸಿಎ ಮುಖ್ಯಸ್ಥರಾಗಿ ಅವರು ಮಾಡಬೇಕಾಗಿರುವ ಕರ್ತವ್ಯಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಅವರು ಅಲ್ಲೇ ಮುಂದುವರಿಯಲು ಸಜ್ಜಾಗಿದ್ದಾರೆ.

ಶಿತಾಂಶು ಕೋಟಕ್, ಸಾಯಿರಾಜ್ ಬಹುತುಲೆ ಮತ್ತು ಹೃಷಿಕೇಶ್ ಕಾನಿಟ್ಕರ್ ಸೇರಿದಂತೆ ಭಾರತದ ಪ್ರಮುಖ ದೇಶೀಯ ಆಟಗಾರರು ಲಕ್ಷ್ಮಣ್ ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಉದ್ಘಾಟನೆಗೂ ಮುನ್ನ ಲಕ್ಷ್ಮಣ್ ಅವರ ಅವಧಿ ವಿಸ್ತರಣೆಯಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಲಕ್ಷ್ಮಣ್ ಅವರು ಫೆಬ್ರವರಿ 2022 ರಲ್ಲಿ ಹೊಸ ಎನ್​ಸಿಎ ಸೌಲಭ್ಯಕ್ಕೆ ಅಡಿಪಾಯ ಹಾಕಿದ್ದರು. ಕರ್ನಾಟಕದ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿರುವ ಎನ್​ಸಿಎ ಪ್ರಸ್ತುತ ಕ್ಯಾಂಪಸ್ ಅನ್ನು ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸಂಭಾವ್ಯ ಸದಸ್ಯರಾಗಿ ಗುರುತಿಸಲ್ಪಟ್ಟ ಯುವ ಕ್ರಿಕೆಟಿಗರಿಗೆ ತರಬೇತಿ ನೀಡಲು ಬಿಸಿಸಿಐನ ಕ್ರಿಕೆಟ್ ಸೌಲಭ್ಯವಾಗಿ 2000 ರಲ್ಲಿ ಸ್ಥಾಪಿಸಲಾಗಿತ್ತು.

ಆಟಗಾರರು ಗಾಯಕ್ಕೆ ಒಳಗಾದಾಗ ಇದನ್ನು ಪುನಶ್ಚೇತನಕ್ಕಾಗಿಯೂ ಬಳಸಲಾಗುತ್ತದೆ. ವಿವಿಎಸ್ ಲಕ್ಷ್ಮಣ್ ಪ್ರಸ್ತುತ ಎನ್ಸಿಎ ಮುಖ್ಯಸ್ಥರಾಗಿದ್ದಾರೆ. ಎನ್ಸಿಎ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ, ಲಕ್ಷ್ಮಣ್ ತಮ್ಮ ಹಿಂದಿನ ರಾಹುಲ್ ದ್ರಾವಿಡ್ ರೂಪಿಸಿದ ವಿವಿಧ ಪ್ರಕ್ರಿಯೆಗಳನ್ನು ಮುಂದುವರಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಕ್ರಮೇಣ ಕಡಿಮೆಯಾಗಿರುವ ಭಾರತ ಎ ಪ್ರವಾಸ ಕಾರ್ಯಕ್ರಮದ ಸರಣಿಯನ್ನು ಮರುಸ್ಥಾಪಿಸುವುದು ಅವರಿಗೆ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ದ್ರಾವಿಡ್ ಅವರ ಆಡಳಿತದಲ್ಲಿ, ಭಾರತ ಎ ತಂಡದ ತವರು ಮತ್ತು ವಿದೇಶ ಪ್ರವಾಸಗಳು ಆಗಾಗ್ಗೆ ನಡೆಯುತ್ತಿದ್ದವು. ಇದು ರಾಷ್ಟ್ರೀಯ ತಂಡಕ್ಕೆ ಹೊಸ ಆಟಗಾರರನ್ನು ತಂದುಕೊಡುತ್ತಿತ್ತು.

ಇದನ್ನೂ ಓದಿ: Pro Kabaddi League : ತೆಲುಗು ಟೈಟನ್ಸ್ ತಂಡ ಸೇರಿಕೊಂಡ ಪವನ್ ಸೆಹ್ರಾವತ್​​; ಶಾಡ್ಲೋಯಿಗೆ 2.07 ಕೋಟಿ ರೂ.

ಲಕ್ಷ್ಮಣ್ 134 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. 225 ಇನ್ನಿಂಗ್ಸ್ಗಳಲ್ಲಿ 45.97 ಸರಾಸರಿಯಲ್ಲಿ 8,781 ರನ್ ಗಳಿಸಿದ್ದಾರೆ. ಅವರು ತಮ್ಮ ಬ್ಯಾಟ್​​ನಿಂದ ದ 17 ಶತಕಗಳು ಮತ್ತು 56 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಟೆಸ್ಟ್​​ ಸ್ವರೂಪದಲ್ಲಿ ಅವರ ಅತ್ಯುತ್ತಮ ಸ್ಕೋರ್ 281. 86 ಏಕದಿನ ಪಂದ್ಯಗಳನ್ನು ಆಡಿರುವ ಅವರು 30.76 ಸರಾಸರಿಯಲ್ಲಿ 2,338 ರನ್ ಗಳಿಸಿದ್ದಾರೆ. ಅವರು ಈ ಸ್ವರೂಪದಲ್ಲಿ ಆರು ಶತಕಗಳು ಮತ್ತು ಹತ್ತು ಅರ್ಧಶತಕಗಳನ್ನು ಗಳಿಸಿದ್ದಾರೆ. 131 ಅವರ ಅತ್ಯುತ್ತಮ ಸ್ಕೋರ್​.

Continue Reading

ಪ್ರಮುಖ ಸುದ್ದಿ

Rahul Gandhi : ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್​ ಬೆಂಚ್​; ಬಿಜೆಪಿ- ಕಾಂಗ್ರೆಸ್​ ಜಟಾಪಟಿ

Rahul Gandhi : ಕ್ಯಾಬಿನೆಟ್ ದರ್ಜೆಯನ್ನು ಹೊಂದಿರುವ ವಿರೋಧ ಪಕ್ಷದ ನಾಯಕ ಔಪಚಾರಿಕ ಕಾರ್ಯಕ್ರಮಗಳಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರೋಟೋಕಾಲ್ ಹೇಳುತ್ತದೆ. ಈ ವರ್ಷ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಅಮಿತ್ ಶಾ ಮತ್ತು ಎಸ್.ಜೈಶಂಕರ್ ಈ ಸಾಲಿನಲ್ಲಿದ್ದರು. ಆದರೆ, ರಾಹುಲ್ ಗಾಂಧಿಗೆ ಭಾರತೀಯ ಒಲಿಂಪಿಕ್ ಪದಕ ವಿಜೇತರ ಹಿಂದಿನ ಸೀಟು ನಿಗದಿ ಮಾಡಿದ್ದರು.

VISTARANEWS.COM


on

Rahul Gandhi
Koo

ಬೆಂಗಳೂರು: ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಲೋಕ ಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಎರಡನೇ ಕೊನೆಯ ಸಾಲಿನಲ್ಲಿ ಆಸನವನ್ನು ನಿಗದಿಪಡಿಸಿದ್ದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಹೊಸ ಜಟಾಪಟಿ ಶುರುವಾಗಿದೆ. ಬೆಳಿಗ್ಗೆಯ ಸಮಾರಂಭ ಮುಗಿಯುವ ಮೊದಲು, ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರಿಂದ ಆಕ್ರೋಶದ ಪ್ರತಿಭಟನೆಗಳಿಂದ ಸಾಮಾಜಿಕ ಮಾಧ್ಯಮಗಳು ತುಂಬಿದವು. ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ ರಕ್ಷಣಾ ಸಚಿವಾಲಯವು ಕೊನೆಗೆ ಸ್ಪಷ್ಟೀಕರಣವನ್ನು ನೀಡಿತು. ಆದರೆ ಟೀಕೆಗಳು ಮುಂದುವರಿದವು.

ಕ್ಯಾಬಿನೆಟ್ ದರ್ಜೆಯನ್ನು ಹೊಂದಿರುವ ವಿರೋಧ ಪಕ್ಷದ ನಾಯಕ ಔಪಚಾರಿಕ ಕಾರ್ಯಕ್ರಮಗಳಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರೋಟೋಕಾಲ್ ಹೇಳುತ್ತದೆ. ಈ ವರ್ಷ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಅಮಿತ್ ಶಾ ಮತ್ತು ಎಸ್.ಜೈಶಂಕರ್ ಈ ಸಾಲಿನಲ್ಲಿದ್ದರು. ಆದರೆ, ರಾಹುಲ್ ಗಾಂಧಿಗೆ ಭಾರತೀಯ ಒಲಿಂಪಿಕ್ ಪದಕ ವಿಜೇತರ ಹಿಂದಿನ ಸೀಟು ನಿಗದಿ ಮಾಡಿದ್ದರು. ಭಾರತದ ಸ್ಟಾರ್ ಶೂಟರ್ ಗಳಾದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್, ಭಾರತ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಸೇರಿದಂತೆ ಹಾಕಿ ಆಟಗಾರರು ಅವರಿಗಿಂತ ಮುಂದೆ ಕುಳಿತಿದ್ದರು.

ಕಾರ್ಯಕ್ರಮಗಳಲ್ಲಿ ಆಸನ ವ್ಯವಸ್ಥೆ ಆದ್ಯತೆಯ ನಿಯಮ ಅನ್ನು ಅನುಸರಿಸುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. “ಈ ವರ್ಷ, ಒಲಿಂಪಿಕ್ ಕ್ರೀಡಾಕೂಟದ ಪದಕ ವಿಜೇತರನ್ನು ಗೌರವಿಸಲು ನಿರ್ಧರಿಸಲಾಯಿತು. ಒಲಿಂಪಿಕ್ ಕ್ರೀಡಾಕೂಟದ ಪದಕ ವಿಜೇತರ ಹಿಂದೆ ಕೆಲವು ಕೇಂದ್ರ ಸಚಿವರು ಸಹ ಕುಳಿತಿದ್ದರು ಎಂಬುದನ್ನು ಗಮನಿಸಬಹುದು” ಎಂಬುದಾಗಿ ಬಿಜೆಪಿ ಸಮರ್ಥಿಸಿಕೊಂಡಿದೆ.

“ಒಲಿಂಪಿಯನ್​ಗಳ ಮೇಲಿನ ಗೌರವದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ರಕ್ಷಣಾ ಸಚಿವಾಲಯದ ದುರ್ಬಲ ವಿವರಣೆಯು ಸರಿಯಾಗಿಲ್ಲ. . ಒಲಿಂಪಿಯನ್​ಗಳು ಪ್ರತಿಯೊಂದು ಗೌರವಕ್ಕೂ ಅರ್ಹರಾಗಿದ್ದರೂ, ಅಮಿತ್ ಶಾ ಅಥವಾ ನಿರ್ಮಲಾ ಸೀತಾರಾಮನ್ ಅವರಂತಹ ಕ್ಯಾಬಿನೆಟ್ ಮಂತ್ರಿಗಳು ಅವರಿಗಿಂತ ಮುಂದೆ ಮುಂದಿನ ಸಾಲಿನ ಆಸನಗಳನ್ನು ಹೇಗೆ ಪಡೆಯುತ್ತಾರೆ” ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.

ಪ್ರೋಟೋಕಾಲ್ ಪ್ರಕಾರ, ಉಭಯ ಸದನಗಳ ಪ್ರತಿಪಕ್ಷ ನಾಯಕರು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು. ರಾಹುಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಸನಗಳು 5 ನೇ ಸಾಲಿನಲ್ಲಿದ್ದವು. ಇದು ಹುದ್ದೆಗೆ ಮಾಡಿದ ಅವಮಾನ . ಇದು ಸಂಸತ್ತಿನಲ್ಲಿ ರಾಹುಲ್ ಜಿ ಪ್ರತಿನಿಧಿಸುವ ಭಾರತದ ಜನರಿಗೆ ಮಾಡಿದ ಅವಮಾನ ಎಂದು ವೇಣುಗೋಪಾಲ್ ಹೇಳಿದರು.

‘ನಾವು ಒಲಿಂಪಿಯನ್ ಗಳನ್ನು ಗೌರವಿಸಲು ಬಯಸಿದ್ದರಿಂದ ಈ ರೀತಿ ಮಾಡಲಾಗಿದೆ’ ಎಂದು ರಕ್ಷಣಾ ಸಚಿವಾಲಯದಿಂದ ತಪ್ಪು ಹೇಳಿಕೆ ಬಂದಿದೆ. ಅವರನ್ನು ಗೌರವಿಸಬೇಕು. ಆದರೆ ಅಮಿತ್ ಶಾ, ಜೆಪಿ ನಡ್ಡಾ, ಎಸ್ ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ಅವರ ಮೇಲೆ ಗೌರವ ಇಲ್ಲವೇ ” ಎಂದು ಕಾಂಗ್ರೆಸ್​ ವಕ್ತಾರೆ ಸುಪ್ರಿಯಾ ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರವು ಆಗಿನ ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮುಂದಿನ ಸಾಲಿನಲ್ಲಿ ಆಸನವನ್ನು ನಿಗದಿಪಡಿಸಿತ್ತು.

Continue Reading
Advertisement
Varamahalakshmi Festival 2024
ಪ್ರಮುಖ ಸುದ್ದಿ22 mins ago

Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಏನು? ಹೆಚ್ಚಿನ ಫಲ ಪಡೆಯಲು ಪೂಜೆ ಹೇಗೆ ಮಾಡಬೇಕು?

karnataka weather Forecast
ಮಳೆ22 mins ago

Karnataka Weather : ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ; ಆರೆಂಜ್‌ ಅಲರ್ಟ್‌ ಘೋಷಣೆ

Dina bhavishya
ಭವಿಷ್ಯ52 mins ago

Dina Bhavishya :ಪ್ರಭಾವಿ ವ್ಯಕ್ತಿಗಳ ಬೆಂಬಲ ಪಡೆದು ಕಾರ್ಯದಲ್ಲಿ ಯಶಸ್ಸು ಪಡೆಯುವಿರಿ

Physical Abuse
ಪ್ರಮುಖ ಸುದ್ದಿ6 hours ago

Physical Abuse : ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ನರ್ಸ್​ ಮೇಲೆ ಅತ್ಯಾಚಾರ ನಡೆಸಿ ಕೊಲೆ

VVS Laxman
ಪ್ರಮುಖ ಸುದ್ದಿ6 hours ago

VVS Laxman : ಹಣ ತಂದುಕೊಡುವ ಐಪಿಎಲ್​ ಬಿಟ್ಟು ಬೇರೆ ಹಳೇ ಹುದ್ದೆಯನ್ನೇ ಅಪ್ಪಿಕೊಂಡ ವಿವಿಎಸ್​ ಲಕ್ಷ್ಮಣ್​

Independence Day 2024
ಬೆಂಗಳೂರು8 hours ago

Independence Day 2024: ಬಲಿಷ್ಠ ಭಾರತೀಯ ಸೇನೆ ಎದುರು ಯಾವ ಶತ್ರುವೂ ನಿಲ್ಲಲಾರ: ಕರ್ನಲ್‌ ವೆಂಕಟೇಶ್‌ ನಾಯಕ್

Independence Day 2024
ಬೆಂಗಳೂರು8 hours ago

Independence Day 2024: ಬೆಂಗಳೂರಿನಲ್ಲಿ ಎನ್‌ಸಿಸಿ ತಂಡದಿಂದ ತಿರಂಗಾ ರ‍್ಯಾಲಿ

Rahul Gandhi
ಪ್ರಮುಖ ಸುದ್ದಿ8 hours ago

Rahul Gandhi : ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್​ ಬೆಂಚ್​; ಬಿಜೆಪಿ- ಕಾಂಗ್ರೆಸ್​ ಜಟಾಪಟಿ

Pro Kabaddi League
ಕ್ರೀಡೆ8 hours ago

Pro Kabaddi League : ತೆಲುಗು ಟೈಟನ್ಸ್ ತಂಡ ಸೇರಿಕೊಂಡ ಪವನ್ ಸೆಹ್ರಾವತ್​​; ಶಾಡ್ಲೋಯಿಗೆ 2.07 ಕೋಟಿ ರೂ.

Electric Shock
ಕರ್ನಾಟಕ9 hours ago

Electric Shock: ದಾವಣಗೆರೆ ಬಳಿ ವಿದ್ಯುತ್ ತಗುಲಿ ದಂಪತಿ ದುರ್ಮರಣ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌