ISRO Mission : ಭೂ ಪರಿವೀಕ್ಷಣಾ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ - Vistara News

ಪ್ರಮುಖ ಸುದ್ದಿ

ISRO Mission : ಭೂ ಪರಿವೀಕ್ಷಣಾ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ

ISRO Mission : ಉಡಾವಣೆ ಭಾರತೀಯ ಕಾಲಮಾನ 09:17 ಕ್ಕೆ ಆರಂಭಗೊಂಡಿತು. ಉಡಾವಣೆಯಾದ ಸುಮಾರು 17 ನಿಮಿಷಗಳ ನಂತರ, ಇಒಎಸ್ -08 ಉಪಗ್ರಹವನ್ನು ಎಸ್ಆರ್ -0 ಡೆಮೊಸ್ಯಾಟ್ ಜೊತೆಗೆ 475 ಕಿ.ಮೀ ವೃತ್ತಾಕಾರದ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಯಿತು. ಉಪಗ್ರಹವು 175.5 ಕೆ.ಜಿ ತೂಕವನ್ನು ಹೊಂದಿದೆ. ಇದರಲ್ಲಿ ಹೊಸ ತಾಂತ್ರಿಕತೆ ಹಾಗೂ ಪೇಲೋಡ್​ಗಳಿವೆ.

VISTARANEWS.COM


on

ISRO Mission
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭೂಪರಿವೀಕ್ಷಣಾ ಉಪಗ್ರಹಗಳನ್ನು (EOS-08) ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO Mission) ಶುಕ್ರವಾರ ಯಶಸ್ವಿಯಾಗಿ ಭೂ ಕಕ್ಷೆಯಲ್ಲಿ ಸ್ಥಾಪಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್ಎಸ್ಎಲ್​ವಿ-ಡಿ 3) ಈ ಉಪಗ್ರಹಗಳನ್ನು ಹೊತ್ತೊಯ್ದಿತು. ಚೆನ್ನೈನಿಂದ ಪೂರ್ವಕ್ಕೆ 135 ಕಿ.ಮೀ ದೂರದಲ್ಲಿರುವ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್​ನಿಂದ ಬೆಳಿಗ್ಗೆ 9.17 ಕ್ಕೆ ಉಪಗ್ರಹಗಳನ್ನು ಹೊತ್ತಿದ್ದ ಎಸ್​​ಎಸ್​ಎಲ್​​ವಿ ಹಾರಾಟ ಆರಂಭಿಸಿತು.

ಮೈಕ್ರೋಸ್ಯಾಟ್​ಲೈಟ್​ ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು ಮತ್ತು ಮೈಕ್ರೋಸ್ಯಾಟ್​ಲೈಟ್​ ಬಸ್​ಗೆ ಹೊಂದಿಕೆಯಾಗುವ ಪೇಲೋಡ್ ಉಪಕರಣಗಳನ್ನು ರಚಿಸುವುದು ಎಸ್ಎಸ್ಎಸ್​ವಿ -ಡಿ3 ಮತ್ತು ಇಒಎಸ್ -08 ಯೋಜನೆಯ ಉದ್ದೇಶ ಎಂದು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ISRO) ತಿಳಿಸಿದೆ. ಎಸ್ಎಸ್ಎಲ್​​ವಿ -ಡಿ3 ಮಿಷನ್ ಮೊದಲಿಗೆ ಆಗಸ್ಟ್ 15 ರಂದು ನಿಗದಿಯಾಗಿತ್ತು. ಬಳಿಕ ಒಂದು ದಿನ ಮುಂದೂಡಲ್ಪಟ್ಟು 16ರಂದು ಉಡಾವಣೆಗೊಂಡಿತು. ಇದು ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದಲ್ಲಿ ಯಾನ ಮಾಡುವ ಇಸ್ರೋದ ಪ್ರಯತ್ನಗಳಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಉಡಾವಣೆ ಭಾರತೀಯ ಕಾಲಮಾನ 09:17 ಕ್ಕೆ ಆರಂಭಗೊಂಡಿತು. ಉಡಾವಣೆಯಾದ ಸುಮಾರು 17 ನಿಮಿಷಗಳ ನಂತರ, ಇಒಎಸ್ -08 ಉಪಗ್ರಹವನ್ನು ಎಸ್ಆರ್ -0 ಡೆಮೊಸ್ಯಾಟ್ ಜೊತೆಗೆ 475 ಕಿ.ಮೀ ವೃತ್ತಾಕಾರದ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಯಿತು. ಉಪಗ್ರಹವು 175.5 ಕೆ.ಜಿ ತೂಕವನ್ನು ಹೊಂದಿದೆ. ಇದರಲ್ಲಿ ಹೊಸ ತಾಂತ್ರಿಕತೆ ಹಾಗೂ ಪೇಲೋಡ್​ಗಳಿವೆ.

ಇದನ್ನೂ ಓದಿ:Rahul Gandhi : ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್​ ಬೆಂಚ್​; ಬಿಜೆಪಿ- ಕಾಂಗ್ರೆಸ್​ ಜಟಾಪಟಿ

ಕಾರ್ಯವೇನು?

ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರದ ಮೇಲ್ವಿಚಾರಣೆ, ಬೆಂಕಿ ಪತ್ತೆ, ಜ್ವಾಲಾಮುಖಿ ಚಟುವಟಿಕೆ ವೀಕ್ಷಣೆ ಮತ್ತು ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರಗಳ ವಿಪತ್ತು ಮೇಲ್ವಿಚಾರಣೆಗೆ ಈ ಉಪಗ್ರಹ ಬಳಕೆಯಾಗಲಿದೆ. ಹಗಲು ಮತ್ತು ರಾತ್ರಿ ಮಿಡ್-ವೇವ್ ಐಆರ್ (ಎಂಐಆರ್) ಮತ್ತು ಲಾಂಗ್-ವೇವ್ ಐಆರ್ (ಎಲ್ಡಬ್ಲ್ಯುಐಆರ್) ಬ್ಯಾಂಡ್​ಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ಇಒಐಆರ್ ಪೇಲೋಡ್ ಇದು ಹೊಂದಿದೆ

ಸಾಗರ ಮೇಲ್ಮೈ ಗಾಳಿ ವಿಶ್ಲೇಷಣೆ, ಮಣ್ಣಿನ ತೇವಾಂಶ ಮೌಲ್ಯಮಾಪನ, ಹಿಮಾಲಯ ಪ್ರದೇಶದ ಕ್ರಯೋಸ್ಪಿಯರ್ ಅಧ್ಯಯನಗಳು, ಪ್ರವಾಹ ಪತ್ತೆ ಮತ್ತು ಒಳನಾಡಿನ ಜಲಮೂಲದ ಪತ್ತೆಯಂತಹ ಕಾರ್ಯವನ್ನೂ ಇದು ಮಾಡಬಲ್ಲುದು.

ಎಸ್ಎಸ್ಎಲ್​ವಿ ಸಾಧನೆ

ಎಸ್ಎಸ್ಎಲ್​ವಿ ಡಿ 3 ಮಿಷನ್ ಉಪಗ್ರಹ ಮೇನ್​​ಫ್ರೇಮ್​ ವ್ಯವಸ್ಥೆಗಳಲ್ಲಿ ಗಮನಾರ್ಹ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಇದರಲ್ಲಿ ಇಂಟಿಗ್ರೇಟೆಡ್ ಏವಿಯಾನಿಕ್ಸ್ ಸಿಸ್ಟಮ್ ಕೂಡ ಸೇರಿದೆ. ಇದು ಅನೇಕ ಕಾರ್ಯಗಳನ್ನು ಒಂದೇ ಘಟಕದ ಮೂಲಕ ನಿಯಂತ್ರಿಸುತ್ತದೆ. 400 ಜಿಬಿ ಡೇಟಾ ಸಂಗ್ರಹಣೆ ಸಾಮರ್ಥ್ಯವೂ ಇದೆ. ಈ ಮಿಷನ್ ಸಣ್ಣ ಉಪಗ್ರಹ ಉಡಾವಣೆಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಹೊಂದಿಕೊಳ್ಳುವ ಇಸ್ರೋದ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಈ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರೊಂದಿಗೆ ಇಸ್ರೋ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸಿದೆ. ಮಿನಿ, ಮ್ರೈಕ್ರೊ ಮತ್ತು ನ್ಯಾನೊ ಉಪಗ್ರಹಗಳನ್ನು ಉಡಾವಣೆ ಮಾಡಲು ಸಜ್ಜಾಗಿದೆ. ಇಒಎಸ್ -08 ಮಿಷನ್ ಭಾರತದ ಬಾಹ್ಯಾಕಾಶ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಸಮುದಾಯದಲ್ಲಿ ಅದರ ಸ್ಥಾನ ಬಲಪಡಿಸುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

70th National Film Awards : ಕನ್ನಡಿಗರಿಗೆ ಹೆಮ್ಮೆ ತಂದ ರಿಷಭ್​ ಶೆಟ್ಟಿ, ಕೆಜಿಎಫ್​​; ಮಲಯಾಳಂನ ‘ಆಟಂ’ ಅತ್ಯುತ್ತಮ ಸಿನೆಮಾ; ಸಂಪೂರ್ಣ ಲಿಸ್ಟ್‌ ಇಲ್ಲಿದೆ

70th National Film Award : ‘ತಿರುಚಿತ್ರಾಂಬಲಂ’ ಚಿತ್ರದ ಅಭಿನಯಕ್ಕಾಗಿ ಬಹುಭಾಷಾ ನಟಿ ನಿತ್ಯಾ ಮೆನನ್ ಹಾಗೂ ಕಚ್ ಎಕ್ಸ್ ಪ್ರೆಸ್ ಚಿತ್ರದ ಅಭಿನಯಕ್ಕಾಗಿ ಮಾನಸಿ ಪರೇಖ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಉಂಚೈ’ ಚಿತ್ರದ ನಿರ್ದೇಶನಕ್ಕಾಗಿ ಸೂರಜ್ ಬರ್ಜಾತ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪೊನ್ನಿಯಿನ್ ಸೆಲ್ವನ್ 1, ಕೆಜಿಎಫ್ 2, ಬ್ರಹ್ಮಾಸ್ತ್ರ ಮತ್ತು ಅಪರಾಜಿತೋ ಚಿತ್ರಗಳು ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಗೆದ್ದ ಇತರ ಚಿತ್ರಗಳಾಗಿವೆ.

VISTARANEWS.COM


on

70th National Film Award
Koo

ಬೆಂಗಳೂರು: 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2024 ಶುಕ್ರವಾರ ಘೋಷಣೆಯಾಗಿದ್ದು (70th National Film Awards) ಮಲಯಾಳಂ ಚಿತ್ರ ‘ಆಟಂ ಅತ್ಯುತ್ತಮ ಚಲನಚಿತ್ರವಾಗಿ ಹೊರಹೊಮ್ಮಿದೆ. ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಅತ್ಯುತ್ತಮ ಸಿನಿಮಾಗಳು ಹಾಗೂ ನಟ, ನಟಿಯರ ಹೆಸರನ್ನು ಪ್ರಕಟಿಸಲಾಯಿತು. ‘ಕಾಂತಾರಾ’ ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವುದು ಕನ್ನಡಿಗರ ಹಾಗೂ ಸ್ಯಾಂಡಲ್​ವುಡ್​ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ. ಇದೇ ವೇಳೆ ಕೆಜಿಎಫ್​ ಚಾಪ್ಟರ್-2 ಕೂಡ ಅತ್ಯುತ್ತಮ ಆ್ಯಕ್ಷನ್​ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.

‘ತಿರುಚಿತ್ರಾಂಬಲಂ’ ಚಿತ್ರದ ಅಭಿನಯಕ್ಕಾಗಿ ಬಹುಭಾಷಾ ನಟಿ ನಿತ್ಯಾ ಮೆನನ್ ಹಾಗೂ ಕಚ್ ಎಕ್ಸ್ ಪ್ರೆಸ್ ಚಿತ್ರದ ಅಭಿನಯಕ್ಕಾಗಿ ಮಾನಸಿ ಪರೇಖ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಉಂಚೈ’ ಚಿತ್ರದ ನಿರ್ದೇಶನಕ್ಕಾಗಿ ಸೂರಜ್ ಬರ್ಜಾತ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ 1’, ‘ಕೆಜಿಎಫ್ 2’, ‘ಬ್ರಹ್ಮಾಸ್ತ್ರ ‘ಮತ್ತು ‘ಅಪರಾಜಿತೋ’ ಚಿತ್ರಗಳು ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಗೆದ್ದ ಇತರ ಚಿತ್ರಗಳಾಗಿವೆ.

ರಾಹುಲ್ ರಾವೈಲ್, ನೀಲಾ ಮಾಧವ್ ಪಾಂಡಾ ಹಾಗೂ ಗಂಗಾಧರ್ ಮೊದಲಿಯಾರ್​ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ.

1954 ರಲ್ಲಿ ಮೊದಲ ಬಾರಿಗೆ ನೀಡಲು ಅರಂಭಿಸಿದ ಈ ಪ್ರಶಸ್ತಿ 70ನೇ ಆವೃತ್ತಿ ಇದಾಗಿದೆ. ಆ ವರ್ಷಗಳಲ್ಲಿ, ವಿವಿಧ ಪ್ರಾದೇಶಿಕ ಭಾಷೆಗಳ ಅತ್ಯುತ್ತಮ ಚಲನಚಿತ್ರಗಳನ್ನು ಮಾತ್ರ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿತ್ತು. . ಚಲನಚಿತ್ರಗಳಲ್ಲಿ ಕೆಲಸ ಮಾಡುವ ನಟರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ಮೊದಲ ಬಾರಿಗೆ 1967 ರಲ್ಲಿ ನೀಡಲಾಯಿತು. ‘ರಾತ್ ಔರ್ ದಿನ್’ ಚಿತ್ರದಲ್ಲಿನ ಅಭಿನಯಕ್ಕಾಗಿ ನರ್ಗಿಸ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೊದಲ ನಟಿಯಾಗಿದ್ದಾರೆ. ಅದೇ ವರ್ಷ ‘ಆಂಟನಿ ಫೈರಿಂಗ್’ ಮತ್ತು ‘ಚಿರಿಯಾಖಾನಾ’ ಚಿತ್ರಗಳಿಗಾಗಿ ಉತ್ತಮ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: 70th National Film Awards: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಿಷಬ್‌ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್‌ 2 ಅತ್ಯುತ್ತಮ ಕನ್ನಡ ಚಿತ್ರ

2023 ರಲ್ಲಿ, ಪುಷ್ಪಾ: ದಿ ರೈಸ್ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರೆ, ‘ಗಂಗೂಬಾಯಿ ಕಾಥಿಯಾವಾಡಿ’ ಮತ್ತು ‘ಮಿಮಿ’ ಚಿತ್ರಕ್ಕಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು. ರಾಕೆಟ್ರಿ: ದಿ ನಂಬಿ ಎಫೆಕ್ಟ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

2024 ರ ರಾಷ್ಟ್ರೀಯ ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ

  • ಅತ್ಯುತ್ತಮ ಚಲನಚಿತ್ರ: ಆಟಂ (ಮಲಯಾಳಂ)
  • ಅತ್ಯುತ್ತಮ ಜನಪ್ರಿಯ ಚಿತ್ರ: ಕಾಂತಾರ (ಕನ್ನಡ)
  • ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರಾ)
  • ಅತ್ಯುತ್ತಮ ನಟಿ – ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್
  • ಅತ್ಯುತ್ತಮ ನಿರ್ದೇಶಕ – ಸೂರಜ್ ಬರ್ಜಾತ್ಯ
  • ಅತ್ಯುತ್ತಮ ಪೋಷಕ ನಟಿ – ನೀನಾ ಗುಪ್ತಾ
  • ಅತ್ಯುತ್ತಮ ಪೋಷಕ ನಟ – ಪವನ್ ಮಲ್ಹೋತ್ರಾ
  • ಅತ್ಯುತ್ತಮ ಚೊಚ್ಚಲ ಚಿತ್ರ- ಫೌಜಾ, ಪ್ರಮೋದ್ ಕುಮಾರ್
  • ಅತ್ಯುತ್ತಮ ತೆಲುಗು ಚಿತ್ರ – ಕಾರ್ತಿಕೇಯ 2
  • ಅತ್ಯುತ್ತಮ ತಮಿಳು ಚಿತ್ರ – ಪೊನ್ನಿಯಿನ್ ಸೆಲ್ವನ್ -ಭಾಗ 1
  • ಅತ್ಯುತ್ತಮ ಪಂಜಾಬಿ ಚಿತ್ರ – ಬಾಘಿ ದಿ ಧೀ
  • ಅತ್ಯುತ್ತಮ ಒಡಿಯಾ ಚಿತ್ರ – ದಮನ್
  • ಅತ್ಯುತ್ತಮ ಮಲಯಾಳಂ ಚಿತ್ರ – ಸೌದಿ ವೇಲಕ್ಕ ಸಿಸಿ.225/2009
  • ಅತ್ಯುತ್ತಮ ಮರಾಠಿ ಚಿತ್ರ – ವಾಲ್ವಿ
  • ಅತ್ಯುತ್ತಮ ಕನ್ನಡ ಚಿತ್ರ – ಕೆಜಿಎಫ್: ಚಾಪ್ಟರ್ 2
  • ಅತ್ಯುತ್ತಮ ಹಿಂದಿ ಚಿತ್ರ – ಗುಲ್​ಮೊಹರ್​
  • ವಿಶೇಷ ಪ್ರಶಸ್ತಿ ಗುಲ್ಮೋಹರ್ ನಲ್ಲಿ ಮನೋಜ್ ಬಾಜಪೇಯಿ ಮತ್ತು ಕಾಲಿಖಾನ್​​ನಲ್ಲಿ ಸಂಜೋಯ್ ಸಲಿಲ್ ಚೌಧರಿ
  • ಅತ್ಯುತ್ತಮ ಆಕ್ಷನ್ ನಿರ್ದೇಶನ – ಕೆಜಿಎಫ್: ಚಾಪ್ಟರ್ 2
  • ಅತ್ಯುತ್ತಮ ನೃತ್ಯ ಸಂಯೋಜನೆ – ತಿರುಚಿತ್ರಾಂಬಲಂ
  • ಅತ್ಯುತ್ತಮ ಸಾಹಿತ್ಯ – ಫೌಜಾ
  • ಅತ್ಯುತ್ತಮ ಸಂಗೀತ ನಿರ್ದೇಶಕ – ಪ್ರೀತಮ್ (ಹಾಡುಗಳು), ಎ.ಆರ್.ರೆಹಮಾನ್ (ಹಿನ್ನೆಲೆ ಸಂಗೀತ)
  • ಅತ್ಯುತ್ತಮ ಮೇಕಪ್ – ಅಪರಾಜಿತೋ
  • ಅತ್ಯುತ್ತಮ ಕಾಸ್ಟ್ಯೂಮ್ – ಕಛ್ ಎಕ್ಸ್ ಪ್ರೆಸ್
  • ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ – ಅಪರಾಜಿತೋ
  • ಅತ್ಯುತ್ತಮ ಸಂಕಲನ – ಆಟಂ
  • ಅತ್ಯುತ್ತಮ ಸೌಂಡ್ ಡಿಸೈನ್ – ಪೊನ್ನಿಯಿನ್ ಸೆಲ್ವನ್ -ಪಾರ್ಟ್ 1
  • ಅತ್ಯುತ್ತಮ ಚಿತ್ರಕಥೆ – ಆಟಂ
  • ಅತ್ಯುತ್ತಮ ಸಂಭಾಷಣೆ – ಗುಲ್​ಮೊಹರ್​
  • ಅತ್ಯುತ್ತಮ ಛಾಯಾಗ್ರಹಣ – ಪೊನ್ನಿಯಿನ್ ಸೆಲ್ವನ್ -ಭಾಗ 1
  • ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಸೌದಿ ವೇಲಕ್ಕ ಸಿಸಿ.225/2009
  • ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಬ್ರಹ್ಮಾಸ್ತ್ರ
Continue Reading

ಸ್ಯಾಂಡಲ್ ವುಡ್

70th National Film Awards: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಿಷಬ್‌ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್‌ 2 ಅತ್ಯುತ್ತಮ ಕನ್ನಡ ಚಿತ್ರ

70th National Film Awards : ‘ಕಾಂತಾರ’ ಸಿನಿಮಾಗಾಗಿ ರಿಷಬ್‌ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ಕೆಜಿಎಫ್‌ 2ಗೆ ಅತ್ತುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ. ಸಾಹಸ ವಿಭಾಗದಲ್ಲೂ ಕೆಜಿಎಫ್‌ 2ಗೆ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿಯೂ ಕಾಂತಾರ ಪ್ರಶಸ್ತಿ ಪಡೆದುಕೊಂಡಿದೆ.

VISTARANEWS.COM


on

70th National Film Awards Rishabh Shetty Best Actor, KGF 2 Best Kannada Movie
Koo

ಬೆಂಗಳೂರು: ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಎನಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ (70th National Film Awards) ಇಂದು (ಆಗಸ್ಟ್ 16) ಘೋಷಣೆ ಆಗಿದೆ. ‘ಕಾಂತಾರ’ ಸಿನಿಮಾಗಾಗಿ ರಿಷಬ್‌ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ಕೆಜಿಎಫ್‌ 2ಗೆ ಅತ್ತುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಸಾಹಸ ವಿಭಾಗದಲ್ಲೂ ಕೆಜಿಎಫ್‌ 2ಗೆ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಮನರಂಜನಾ ಪ್ರಶಸ್ತಿ ಕೂಡ ಕಾಂತಾರ ಪಡೆದುಕೊಂಡಿದೆ. ಈ ಮೂಲಕ ಕನ್ನಡ ಚಿತ್ರರಂಗ ಈ ಬಾರಿ ರಾಷ್ಟ್ರ ಮಟ್ಟದಲ್ಲಿ ಪಾರಮ್ಯ ಮೆರೆದಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2024 ವಿಜೇತ ಪಟ್ಟಿಯನ್ನು ಪ್ರಕಟಿಸಿದೆ. ಮಮ್ಮುಟ್ಟಿ ಮತ್ತು ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗಾಗಿ ರೇಸ್‌ನಲ್ಲಿದ್ದರು. 70ನೇ ರಾಷ್ಟ್ರೀಯ ಫಿಲ್ಮ್ ಅವಾರ್ಡ್ಸ್ 2024 ವಿಜೇತರ ಹೆಸರು ಪಟ್ಟಿಯನ್ನು ಘೋಷಿಸಲಾಗಿದೆ.  ವಿಶೇಷವಾಗಿ ಈ ಬಾರಿ ಅತ್ಯುತ್ತಮ ನಟ ಯಾರಾಗಬಹುದು ಎಂಬ ಕುತೂಹಲ ಹೆಚ್ಚಾಗಿತ್ತು.

ಪೃಥ್ವಿರಾಜ್ ಸುಕುಮಾರ್ ನಟನೆಯ ‘ಜನ ಗಣ ಮನ’, ಮಲಯಾಳಂ ನ ಇತರೆ ಕೆಲವು ಸಿನಿಮಾಗಳಾದ, ‘ರೊರಸಾಚ್’, ‘ಮುಕುಂದನ್ ಉನ್ನಿ ಅಸೋಸಿಯೇಟ್ಸ್’, ‘ಜಯ ಜಯ ಜಯ ಹೇ’, ‘ಪುಜು’, ‘ಅರಿಪ್ಪು’, ‘ಸಲ್ಯೂಟ್’ ಇನ್ನೂ ಕೆಲವು ಸಿನಿಮಾಗಳಿವೆ. ‘ಸೀತಾ ರಾಮಂ’ ಸಿನಿಮಾ 2022ರಲ್ಲಿ ಬಿಡುಗಡೆ ಆಗಿದ್ದು ಸ್ಪರ್ಧೆಯಲ್ಲಿತ್ತು.

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2024ಗಾಗಿ, ತೆಲುಗು ಚಿತ್ರ ಪುಷ್ಪ: ದಿ ರೈಸ್‌ಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದರು. ಮತ್ತು ಅತ್ಯುತ್ತಮ ನಟಿ ಗೌರವವನ್ನು ಆಲಿಯಾ ಮತ್ತು ಕೃತಿ ಗೆದ್ದಿದ್ದರು. ಮೂವರೂ ನಟರಿಗೆ ಇದು ಮೊದಲ ರಾಷ್ಟ್ರೀಯ ಪ್ರಶಸ್ತಿ.

ಇದನ್ನೂ ಓದಿ: 70th National Film Awards: 70ನೇ ರಾಷ್ಟ್ರೀಯ ಪ್ರಶಸ್ತಿ ಕ್ಷಣಗಣನೆ; ರಿಷಬ್‌ ಶೆಟ್ಟಿ ಮೇಲೆ ಸಿನಿಪ್ರಿಯರ ಕಣ್ಣು!

ರಿಷಬ್‌ ಶೆಟ್ಟಿ

2022ರಲ್ಲಿ ತೆರೆಕಂಡು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ, ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿದ ʼಕಾಂತಾರʼ ಚಿತ್ರ ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಅತ್ಯುತ್ತಮ ಚಿತ್ರದ ಜತೆಗೆ ನಟ, ನಿರ್ದೇಶಕ ವಿಭಾಗದಲ್ಲಿಯೂ ರಿಷಬ್‌ ಶೆಟ್ಟಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಗಮನವನ್ನೂ ಸೆಳೆದಿದ್ದಾರೆ. ʼಕಾಂತಾರʼ ಚಿತ್ರದ ಶಿವ ಪಾತ್ರದ ಮೂಲಕ ಅತ್ಯುತ್ತಮ ನಟ ವಿಭಾಗದಲ್ಲಿ ರಿಷಬ್‌ ಶೆಟ್ಟಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ತುಳುನಾಡಿನ ವಿಶಿಷ್ಟ ಭೂತಾರಾಧನೆಯ ಸಂಸ್ಕೃತಿಯನ್ನು ಜಗತ್ತಿಗೇ ಸಾರಿದ ಈ ಸಿನಿಮಾ ಮೇಕಿಂಗ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರಲ್ಲಿಯೂ ನಾಯಕನಾಗಿ ರಿಷಭ್‌ ಶೆಟ್ಟಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಕ್ಲೈಮಾಕ್ಸ್‌ನಲ್ಲಂತೂ ಅವರ ಅಭಿನಯ ಅಮೋಘ ಎಂದಿದ್ದ ಹಲವರು ಅಂದೇ ನ್ಯಾಷನಲ್‌ ಅವಾರ್ಡ್‌ ಬಗ್ಗೆ ಭವಿಷ್ಯ ನುಡಿದಿದ್ದರು.

2016ರಲ್ಲಿ ʼರಿಕ್ಕಿʼ ಚಿತ್ರ ನಿರ್ದೇಶಿಸುವ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಬಳಿಕ ತೆರೆಕಂಡ ʼಕಿರಿಕ್‌ ಪಾರ್ಟಿʼ ಮತ್ತು ʼಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುʼ ಸಿನಿಮಾದಿಂದ ಸ್ಯಾಂಡಲ್‌ವುಡ್‌ನ ಗಮನ ಸೆಳೆದರು. ಇನ್ನು 2022ರಲ್ಲಿ ತೆರೆಕಂಡ ʼಕಾಂತಾರʼ ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ರೂ.ಗಿಂತ ಹೆಚ್ಚು ಗಳಿಸಿ ಮೈಲಿಗಲ್ಲು ನೆಟ್ಟಿದೆ. ಈಗಾಗಲೇ ಫಿಲಂಫೇರ್‌ನಂತಹ ಪ್ರಶಸ್ತಿ ಮುಡುಗೇರಿಸಿಕೊಂಡಿದ್ದಾರೆ.

Continue Reading

ಪ್ರಮುಖ ಸುದ್ದಿ

Kolkata doctor rape case : ದುಡ್ಡು ಪಡೆದರೆ ಮೃತಪಟ್ಟ ಮಗಳಿಗೆ ಅವಮಾನ ಮಾಡಿದಂತೆ; ಪರಿಹಾರದ ಮೊತ್ತ ನಿರಾಕರಿಸಿದ ಕೋಲ್ಕೊತಾ ಅತ್ಯಾಚಾರ ಸಂತ್ರಸ್ತೆಯ ಅಪ್ಪ

Kolkata doctor rape case : ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಭರವಸೆ ಸಿಕ್ಕಿದೆ. ನಮ್ಮ ಹೇಳಿಕೆ ಆಧರಿಸಿ ಆಧಾರದ ಮೇಲೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸಿಬಿಐ ನಮಗೆ ಭರವಸೆ ನೀಡಿದೆ. ನಾನು ಪರಿಹಾರವನ್ನು ತಿರಸ್ಕರಿಸಿದ್ದೇನೆ. ನನ್ನ ಮಗಳ ಸಾವಿಗೆ ಪರಿಹಾರವಾಗಿ ನಾನು ಹಣವನ್ನು ಸ್ವೀಕರಿಸಿದರೆ ಅದು ನನ್ನ ಮಗಳಿಗೆ ನೋವುಂಟು ಮಾಡುತ್ತದೆ. ನನಗೆ ನ್ಯಾಯ ಬೇಕು” ಎಂದು ಅವರು ಹೇಳಿದ್ದಾರೆ.

VISTARANEWS.COM


on

Kolkata doctor rape case
Koo

ಬೆಂಗಳೂರು: ಕೋಲ್ಕತಾದ ಆರ್​ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸ್ನಾತಕೋತ್ತರ ತರಬೇತಿ ವೈದ್ಯೆಯ ತಂದೆ ಸರ್ಕಾರ ನೀಡಲು ಮುಂದಾಗಿರುವ ಪರಿಹಾರದ ಮೊತ್ತವನ್ನು ನಿರಾಕರಿಸಿದ್ದಾರೆ. ದುಡ್ಡು ಪಡೆದರೆ ಮೃತಪಟ್ಟ ಆಕೆಗೆ ಅಗೌರವ ಎಂದ ಅವರು ಹೇಳಿದ್ದಾರೆ. ಇದೇ ವೇಳೆ ಅವರು ಸಿಬಿಐ ಜೊತೆಗಿನ ಸಂಭಾಷಣೆಯ ಬಗ್ಗೆ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಲು ನಿರಾಕರಿಸಿದ್ದಾರೆ.

ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಭರವಸೆ ಸಿಕ್ಕಿದೆ. ನಮ್ಮ ಹೇಳಿಕೆ ಆಧರಿಸಿ ಆಧಾರದ ಮೇಲೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸಿಬಿಐ ನಮಗೆ ಭರವಸೆ ನೀಡಿದೆ. ನಾನು ಪರಿಹಾರವನ್ನು ತಿರಸ್ಕರಿಸಿದ್ದೇನೆ. ನನ್ನ ಮಗಳ ಸಾವಿಗೆ ಪರಿಹಾರವಾಗಿ ನಾನು ಹಣವನ್ನು ಸ್ವೀಕರಿಸಿದರೆ ಅದು ನನ್ನ ಮಗಳಿಗೆ ನೋವುಂಟು ಮಾಡುತ್ತದೆ. ನನಗೆ ನ್ಯಾಯ ಬೇಕು” ಎಂದು ಅವರು ಹೇಳಿದ್ದಾರೆ.

ಸಿಬಿಐ ಜೊತೆಗಿನ ನಮ್ಮ ಸಂಭಾಷಣೆಯ ವಿವರಗಳನ್ನು ಬಹಿರಂಗ ಮಾಡುವುದು ಕಾನೂನುಬದ್ಧವಾಗಿ ಸೂಕ್ತವಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ವಿಚಾರಣೆಯ ವಿವರಗಳನ್ನು ನಾನು ನಿಮಗೆ ನೀಡಲು ಸಾಧ್ಯವಿಲ್ಲ. ಅವರು ನಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ” ಎಂದು ಅವರು ತಿಳಿಸಿದ್ದಾರೆ.

ಎಲ್ಲರಿಗೂ ಆಭಾರಿ

ದೇಶ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ನಾನು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮೊಂದಿಗೆ ನಿಂತಿರುವ ಪ್ರತಿಯೊಬ್ಬರನ್ನೂ ನಾನು ನನ್ನ ಪುತ್ರರು ಮತ್ತು ಪುತ್ರಿಯರೆಂದು ಪರಿಗಣಿಸುತ್ತೇನೆ ಎಂದು ಆಕೆಯ ತಂದೆ ಹೇಳಿದ್ದಾರೆ.

ಇದನ್ನೂ ಓದಿ: Healthcare Workers : ಆರೋಗ್ಯ ಸೇವಕರ ಮೇಲೆ ದಾಳಿಯಾದರೆ 6 ಗಂಟೆಯೊಳಗೆ ಎಫ್​ಐಆರ್​ ದಾಖಲಿಸಿ; ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದ ನಿರ್ದೇಶನ

ಕೋಲ್ಕತಾದ ಆರ್​ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಲ್ ಹಾಲ್​​ನಲ್ಲಿ ಆಗಸ್ಟ್ 9 ರಂದು ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಕೋಲ್ಕತಾ ಅತ್ಯಾಚಾರ ಪ್ರಕರಣವು ವೈದ್ಯಕೀಯ ಸೇವೆಗಳನ್ನು ಅಡಚಣೆ ಉಂಟು ಮಾಡಿದೆ. ವಿದ್ಯಾರ್ಥಿಗಳು ಮತ್ತು ವೈದ್ಯರು ನಿವಾಸಿ ಪಿಜಿ ವೈದ್ಯರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ನಡುಎ ಆರ್​​ಜಿ ಕಾರ್ ಆಸ್ಪತ್ರೆಯ ತುರ್ತು ವಾರ್ಡ್​​ನಲ್ಲಿ ಡಜನ್​ಗಟ್ಟಲೆ ಜನರ ಗುಂಪು ನುಗ್ಗಿ ಕುರ್ಚಿಗಳನ್ನು ಧ್ವಂಸಗೊಳಿಸುತ್ತಿರುವುದನ್ನು ವೀಡಿಯೊಗಳು ವೈರಲ್ ಆಗಿವೆ. ಕೆಲವರು ಆಸ್ಪತ್ರೆಯನ್ನು ಧ್ವಂಸಗೊಳಿಸುತ್ತಿರುವುದು ಸಹ ಕಂಡುಬಂದಿದೆ. ಕೋಲ್ಕತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ತರಬೇತಿ ವೈದ್ಯರ ಸಾವಿನ ವಿರುದ್ಧ ಪ್ರತಿಭಟಿಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶುಕ್ರವಾರ ರಾಷ್ಟ್ರವ್ಯಾಪಿ 24 ಗಂಟೆಗಳ ಕಾಲ ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಿದೆ.

Continue Reading

ಪ್ರಮುಖ ಸುದ್ದಿ

Healthcare Workers : ಆರೋಗ್ಯ ಸೇವಕರ ಮೇಲೆ ದಾಳಿಯಾದರೆ 6 ಗಂಟೆಯೊಳಗೆ ಎಫ್​ಐಆರ್​ ದಾಖಲಿಸಿ; ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದ ನಿರ್ದೇಶನ

Healthcare Workers: :

VISTARANEWS.COM


on

Healthcare Workers:
Koo

ನವದೆಹಲಿ: ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಯಾಂಪಸ್​ನಲ್ಲಿ ಹಿಂಸಾಚಾರ ನಡೆದರೆ ಅಥವಾ ಆರೋಗ್ಯ ಸೇವಕರ ಮೇಲೆ ದಾಳಿ ನಡೆದರೆ (Healthcare Workers) ಆರು ಗಂಟೆಗಳ ಒಳಗೆ ಪೊಲೀಸ್ ದೂರುಗಳನ್ನು ದಾಖಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಆದೇಶಿಸಿದೆ. ನಿಗದಿತ ಸಮಯದೊಳಗೆ ಅಂತಹ ಯಾವುದೇ ದೂರು ನೀಡದಿದ್ದರೆ ಸಂಬಂಧಪಟ್ಟ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶುಕ್ರವಾರ ಹೊರಡಿಸಲಾದ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿಯ ವಿರುದ್ಧದ ದಾಳಿಗಳು ಸಾಮಾನ್ಯವಾಗಿದೆ. ಹಲವಾರು ಆರೋಗ್ಯ ಕಾರ್ಯಕರ್ತರು ತಮ್ಮ ಕರ್ತವ್ಯದ ಸಮಯದಲ್ಲಿ ದೈಹಿಕ ಹಿಂಸೆ ಅನುಭವಿಸಿದ್ದಾರೆ. ಅನೇಕರು ಬೆದರಿಕೆಗೆ ಒಳಗಾಗಿದ್ದಾರೆ. ಅಥವಾ ಮೌಖಿಕ ಆಕ್ರಮಣಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.

ಈ ದಾಳಿಯನ್ನು ಬಹುತೇಕ ಸಂದರ್ಭಗಳಲ್ಲಿ ರೋಗಿಗಳು ಅಥವಾ ರೋಗಿಗಳ ಸಂಬಂಧಿಕರು ಮಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯದಲ್ಲಿರುವಾಗ ಯಾವುದೇ ಆರೋಗ್ಯ ಕಾರ್ಯಕರ್ತರ ವಿರುದ್ಧ ಯಾವುದೇ ಹಿಂಸಾಚಾರ ನಡೆದರೆ ಸಂಸ್ಥೆಯ ಮುಖ್ಯಸ್ಥರು ಗರಿಷ್ಠ ಆರು ಗಂಟೆಗಳ ಒಳಗೆ ಎಫ್ಐಆರ್ ದಾಖಲಿಸಲು ಜವಾಬ್ದಾರರಾಗಿರುತ್ತಾರೆ ಎಂದು ನೋಟಿಸ್​ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Indian Economy : 2027ರ ವೇಳೆಗೆ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಐಎಂಎಫ್​ನ ಗೀತಾ ಗೋಪಿನಾಥ್

ಕೋಲ್ಕತಾದ ಆರ್​ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ರಾಷ್ಟ್ರವ್ಯಾಪಿ ತೀವ್ರ ಪ್ರತಿಭಟನೆಗಳ ಮಧ್ಯೆ ಈ ನೋಟಿಸ್ ಹೊರಡಿಸಲಾಗಿದೆ. ಘಟನೆಯ ಬಳಿಕ ದೇಶಾದ್ಯಂತ ವೈದ್ಯಕೀಯ ವೃತ್ತಿಪರರು ಉತ್ತಮ ರಕ್ಷಣೆ ಮತ್ತು ಸುರಕ್ಷಿತ ಕೆಲಸದ ವಾತಾವರಣಕ್ಕಾಗಿ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ.

ಈ ಹಿಂದೆ ಆಸ್ಪತ್ರೆಯ ಆಡಳಿತದ ಲೋಪಗಳ ಬಗ್ಗೆ ವೈದ್ಯರ ಪೋಷಕರು ಸೇರಿದಂತೆ ಈ ವಿಷಯದ ಬಗ್ಗೆ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಕಲ್ಕತ್ತಾ ಹೈಕೋರ್ಟ್ ಬಂಗಾಳ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಆಗಸ್ಟ್ 9 ರಂದು ಆರ್​ಜಿ ಕಾರ್ ಆಸ್ಪತ್ರೆಯ ಕ್ಯಾಂಪಸ್​​ನ ಸೆಮಿನಾರ್ ಕೋಣೆಯಲ್ಲಿ ವೈದ್ಯೆಯ ಶವ ಪತ್ತೆಯಾಗಿತ್ತು. ಶವಪರೀಕ್ಷೆಯು ಸಂತ್ರಸ್ತೆಯ ತೋಳುಗಳು ಮತ್ತು ಕಾಲುಗಳಿಂದ ಅವಳ ಜನನಾಂಗಗಳವರೆಗೆ ಅನೇಕ ಘೋರ ಗಾಯಗಳಾಗಿದ್ದವು. ಈ ಭೀಕರ ಹತ್ಯೆಯು ಕೋಲ್ಕತಾ ಮತ್ತು ಬಂಗಾಳದಾದ್ಯಂತ ಮತ್ತು ಭಾರತದಾದ್ಯಂತ ಆಸ್ಪತ್ರೆಯ ವೈದ್ಯರಿಂದ ಬೃಹತ್ ಆಂದೋಲನವನ್ನು ಹುಟ್ಟುಹಾಕಿತು. ಪ್ರತಿಭಟನೆಯ ನಂತರ ಆರ್ ಜಿ ಕಾರ್ ಆಸ್ಪತ್ರೆಯಲ್ಲಿ ವಿಧ್ವಂಸಕ ಕೃತ್ಯಗಳು ನಡೆದಿವೆ.

Continue Reading
Advertisement
Employee ID card
ಕರ್ನಾಟಕ9 mins ago

Employee ID card: ರಾಜ್ಯ ಸರ್ಕಾರಿ ನೌಕರರಿಗೆ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್‌ ಕಡ್ಡಾಯ

Rishab Shetty first reaction after kantara national award
ಸ್ಯಾಂಡಲ್ ವುಡ್14 mins ago

Rishab Shetty: ಈ ಪ್ರಶಸ್ತಿ ದೈವಕ್ಕೆ ಸಲ್ಲಬೇಕು ಎಂದ ರಿಷಬ್ ಶೆಟ್ಟಿ; ನಟನ ಫಸ್ಟ್‌ ರಿಯಾಕ್ಷನ್‌ ಹೀಗಿತ್ತು!

Kannada New Movie
ಬೆಂಗಳೂರು17 mins ago

Kannada New Movie: ತೆರೆಯ‌ ಮೇಲೆ‌ ಚಿತ್ರವಾಗಿ ಬರಲಿದೆ ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ; ಮೊದಲ ಹಾಡು ರಿಲೀಸ್‌

70th National Film Award
ಪ್ರಮುಖ ಸುದ್ದಿ24 mins ago

70th National Film Awards : ಕನ್ನಡಿಗರಿಗೆ ಹೆಮ್ಮೆ ತಂದ ರಿಷಭ್​ ಶೆಟ್ಟಿ, ಕೆಜಿಎಫ್​​; ಮಲಯಾಳಂನ ‘ಆಟಂ’ ಅತ್ಯುತ್ತಮ ಸಿನೆಮಾ; ಸಂಪೂರ್ಣ ಲಿಸ್ಟ್‌ ಇಲ್ಲಿದೆ

Rishab Shetty cinema Journey before Kantara
ಸ್ಯಾಂಡಲ್ ವುಡ್29 mins ago

Rishab Shetty: ಅಣ್ಣಾವ್ರ ಅಪ್ಪಟ ಅಭಿಮಾನಿ ರಿಷಬ್‌ ಶೆಟ್ಟಿ ಸಿನಿ ಜರ್ನಿ ಹೀಗಿತ್ತು! ನಾಡಿಗೆ ಕೀರ್ತಿ ತಂದ ಕುಂದಾಪುರದ ಹುಡುಗ!

Virat Kohli
ಕ್ರಿಕೆಟ್44 mins ago

Virat Kohli: ಲಂಡನ್​ನ ಸಿಗ್ನಲ್​ನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಿಂತ ಕೊಹ್ಲಿ; ವಿಡಿಯೊ ವೈರಲ್

Teachers Transfer
ಕರ್ನಾಟಕ53 mins ago

Teachers Transfer: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ

Bengaluru Power Cut
ಕರ್ನಾಟಕ1 hour ago

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.17ರಂದು ಪವರ್‌ ಕಟ್‌!

70th National Film Awards Rishabh Shetty Best Actor, KGF 2 Best Kannada Movie
ಸ್ಯಾಂಡಲ್ ವುಡ್1 hour ago

70th National Film Awards: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಿಷಬ್‌ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್‌ 2 ಅತ್ಯುತ್ತಮ ಕನ್ನಡ ಚಿತ್ರ

Kolkata doctor rape case
ಪ್ರಮುಖ ಸುದ್ದಿ1 hour ago

Kolkata doctor rape case : ದುಡ್ಡು ಪಡೆದರೆ ಮೃತಪಟ್ಟ ಮಗಳಿಗೆ ಅವಮಾನ ಮಾಡಿದಂತೆ; ಪರಿಹಾರದ ಮೊತ್ತ ನಿರಾಕರಿಸಿದ ಕೋಲ್ಕೊತಾ ಅತ್ಯಾಚಾರ ಸಂತ್ರಸ್ತೆಯ ಅಪ್ಪ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌