Sanju Samson: ಬಾಸ್ಕೆಟ್‌ ಬಾಲ್‌ ಕೋರ್ಟ್​ನಲ್ಲಿ ಫುಟ್ಬಾಲ್​ ಆಡಿದ ಸಂಜು ಸ್ಯಾಮ್ಸನ್​; ವಿಡಿಯೊ ವೈರಲ್​ - Vistara News

ಕ್ರೀಡೆ

Sanju Samson: ಬಾಸ್ಕೆಟ್‌ ಬಾಲ್‌ ಕೋರ್ಟ್​ನಲ್ಲಿ ಫುಟ್ಬಾಲ್​ ಆಡಿದ ಸಂಜು ಸ್ಯಾಮ್ಸನ್​; ವಿಡಿಯೊ ವೈರಲ್​

Sanju Samson: ಸಂಜು ಇದುವರೆಗೆ ಭಾರತ ಪರ 16 ಏಕದಿನ ಕ್ರಿಕೆಟ್​ ಪಂದ್ಯಗಳನ್ನಾಡಿ 510 ರನ್​ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 3 ಅರ್ಧಶತಕ ಬಾರಿಸಿದ್ದಾರೆ. 30 ಟಿ20 ಪಂದ್ಯ ಆಡಿ 444 ರನ್​ ಗಳಿಸಿದ್ದಾರೆ. 2 ಅರ್ಧಶತಕ ಒಳಗೊಂಡಿದೆ.

VISTARANEWS.COM


on

Sanju Samson
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ಟೀಮ್​ ಇಂಡಿಯಾದ(Team India) ಕ್ರಿಕೆಟಿಗ, ಕೇರಳ ಮೂಲದ ಸ್ಟಂಪರ್​ ಸಂಜು ಸ್ಯಾಮ್ಸನ್(Sanju Samson)​ ಅವರು ತಮ್ಮ ತವರಿನಲ್ಲಿ ಸ್ಥಳೀಯರೊಂದಿಗೆ ಬಾಸ್ಕೆಟ್​​ ಬಾಲ್​ ಕೋರ್ಟ್​ನಲ್ಲಿ ಫುಟ್​ಬಾಲ್​ ಆಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸಂಜು ಟೀಮ್​ ಇಂಡಿಯಾದ ಅಭ್ಯಾಸದ ಜೆರ್ಸಿಯನ್ನು ತೊಟ್ಟು ತನ್ನ ಸ್ನೇಹಿತರೊಂದಿಗೆ ಬಾಸ್ಕೆಟ್​​​ ಬಾಲ್​ ಕೋರ್ಟ್​ನಲ್ಲಿ ಫುಟ್​ಬಾಲ್​ ಆಡುತ್ತಿರುವ ದೃಶ್ಯವನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಪರ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್​ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರಿಗೆ ಏಕದಿನ ಸರಣಿಯಿಂದ ಕೈಬಿಡಲಾಗಿತ್ತು. ಟಿ20 ವಿಶ್ವಕಪ್​ ತಂಡದ ಸದ್ಯರಾಗಿದ್ದರೂ ಕೂಡ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಸಂಜು ಅವರು ಬಾಸ್ಕೆಟ್​​ ಬಾಲ್ ಕೋರ್ಟ್​ನಲ್ಲಿ ಫುಟ್​ಬಾಲ್​ ಆಡಿರುವ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಬಡ ಮಕ್ಕಳಿಗೆ ನೆರವು


ವಿಶ್ವದ ಕ್ಯಾಶ್​ ರಿಚ್​ ಲೀಗ್​ಗಳಲ್ಲಿ ಒಂದಾದ ಐಪಿಎಲ್​ನಲ್ಲಿ ರಾಜಸ್ಥಾನ್​ ರಾಯಲ್ಸ್​(rajasthan royals) ಪರ ಆಡುತ್ತಿರುವ ಸಂಜು ಸ್ಯಾಮ್ಸನ್​ ಅವರು ಸದ್ಯ ಗಳಿಸುತ್ತಿರುವ 15 ಕೋಟಿ ವೇತನದಲ್ಲಿ ಯುವ ಮತ್ತು ಪ್ರತಿಭಾವಂತ ಕ್ರಿಕೆಟಿಗರಿಗೆ 2 ಕೋಟಿ ನೆರವಿನ ಹಸ್ತ ಚಾಚುತ್ತಿದ್ದಾರೆ. ಈ ಮೂಲಕ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಂತ ಕೆಲಸವನ್ನು ಮಾಡುತ್ತಿದ್ದಾರೆ. ಟೀಮ್​ ಇಂಡಿಯಾದಲ್ಲಿ ತಮಗೆ ಸರಿಯಾದ ಅವಕಾಶ ಸಿಗದಿದ್ದರೂ ಯುವ ಆಟಗಾರರು ಬೆಳಕಿಗೆ ಬರುವಲ್ಲಿ ಶ್ರಮಿಸುತ್ತಿರುವ ಅವರ ಗುಣವನ್ನು ನಿಜಕ್ಕೂ ಮೆಚ್ಚಲೇ ಬೇಕು.

ಸಂಜು ಇದುವರೆಗೆ ಭಾರತ ಪರ 16 ಏಕದಿನ ಕ್ರಿಕೆಟ್​ ಪಂದ್ಯಗಳನ್ನಾಡಿ 510 ರನ್​ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 3 ಅರ್ಧಶತಕ ಬಾರಿಸಿದ್ದಾರೆ. 30 ಟಿ20 ಪಂದ್ಯ ಆಡಿ 444 ರನ್​ ಗಳಿಸಿದ್ದಾರೆ. 2 ಅರ್ಧಶತಕ ಒಳಗೊಂಡಿದೆ. ಟೆಸ್ಟ್​ ಇದುವರೆಗೂ ಆಡಿಲ್ಲ. ಹೆಚ್ಚಾಗಿ ಐಪಿಎಲ್​ನಲ್ಲಿಯೇ ಆಡಿದ್ದಾರೆ. 167 ಪಂದ್ಯಗಳಿಂದ 3 ಶತಕ, 25 ಅರ್ಧಶತಕ ಒಳಗೊಂಡಂತೆ 4419 ರನ್​ ಬಾರಿಸಿದ್ದಾರೆ.

ಇದನ್ನೂ ಓದಿ MS Dhoni: ಅಭಿಮಾನಿಯ ಬೈಕ್​ ಮೇಲೆ ಆಟೋಗ್ರಾಫ್​ ಹಾಕಿದ ಧೋನಿ; ಫೋಟೊ ವೈರಲ್​

ಬೌಲಿಂಗ್​ ನಡೆಸಿದ ಪಂತ್​


ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ರಿಷಭ್​ ಪಂತ್(Rishabh Pant)​ ಅವರು ದೆಹಲಿ ಪ್ರೀಮಿಯರ್ ಲೀಗ್ 2024 ರ(Delhi Premier League T20 2024) ಉದ್ಘಾಟನಾ ಆವೃತ್ತಿಯ ಪಂದ್ಯದಲ್ಲಿ ಬೌಲಿಂಗ್(rishabh pant bowling)​ ನಡೆಸುವ ಮೂಲಕ ಗಮನಸೆಳೆದಿದ್ದಾರೆ. ಪಂತ್​ ಬೌಲಿಂಗ್​ ನಡೆಸುವ ವಿಡಿಯೊ ವೈರಲ್(viral video)​ ಆಗಿದ್ದು, ಇದು ನೂತನ ಕೋಚ್​ ಗೌತಮ್​ ಗಂಭೀರ್(gautam gambhir)​ ಪ್ರಭಾವ ಎಂದು ನಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಪಂತ್ ಪಂದ್ಯದ ಅಂತಿಮ ಓವರ್​ ಬೌಲಿಂಗ್​ ನಡೆಸಿದರು. ಎದುರಾಳಿ ಸೌತ್​ ಡೆಲ್ಲಿ ತಂಡಕ್ಕೆ 6 ಎಸೆತಗಳಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಪಂತ್​ ಸ್ಪಿನ್​ ಬೌಲಿಂಗ್​ ನಡೆಸಿದರು. ಈ ಪಂದ್ಯದಲ್ಲಿ ಪಂತ್​ ತಂಡ 3 ವಿಕೆಟ್​ ಅಂತರದ ಸೋಲು ಕಂಡಿತು. ಮೊದಲು ಬ್ಯಾಟಿಂಗ್​ ನಡೆಸಿದ ಪಂತ್​ ಸಾರಥ್ಯದ ಪುರಾಣಿ ದಿಲ್ಲಿ ಸಿಕ್ಸ್​ ತಂಡ 197 ರನ್​ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಸೌತ್​ ಡೆಲ್ಲಿ ತಂಡ 7 ವಿಕೆಟ್​ಗೆ 198 ರನ್​ ಬಾರಿಸಿ ಗೆಲುವು ಸಾಧಿಸಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

U-19 Women’s T20 World Cup; ಅಂಡರ್-19 ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ವಿಂಡೀಸ್​ ಮೊದಲ ಎದುರಾಳಿ

U-19 Women’s T20 World Cup: ಪಂದ್ಯ ಟೈ ಆದರೆ ಸೂಪರ್‌ ಓವರ್‌ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಸೂಪರ್‌ ಓವರ್‌ ಕೂಡ ಟೈ ಆದರೆ ಇನ್ನೊಂದು ಸೂಪರ್‌ ಓವರ್‌ ಇರಲಿದೆ. ಹೀಗೆ ಸ್ಪಷ್ಟ ಫಲಿತಾಂಶ ಲಭಿಸುವ ತನಕ ಸೂಪರ್‌ ಓವರ್‌ ಜಾರಿಯಲ್ಲಿರುತ್ತದೆ

VISTARANEWS.COM


on

U19 Women’s T20 World Cup
Koo

ದುಬೈ: 2ನೇ ಆವೃತ್ತಿಯ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ(U-19 Women’s T20 World Cup) ವೇದೀಕೆ ಸಿದ್ಧಗೊಂಡಿದೆ. ಮುಂದಿನ ವರ್ಷ ನಡೆಯುವ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಐಸಿಸಿ ಭಾನುವಾರ ಪ್ರಕಟಿಸಿದೆ. ಒಟ್ಟು 16 ತಂಡಗಳು ಭಾಗವಹಿಸಲಿವೆ. ಟೂರ್ನಿ ಜನವರಿ 18 ರಿಂದ ಫೆಬ್ರವರಿ 2 ರವರೆಗೆ ನಡೆಯಲಿದೆ. ಈ ಟೂರ್ನಿಗೆ ಮಲೇಷ್ಯಾ ಆತಿಥ್ಯ ವಹಿಸಿದೆ. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್​ ಪಟ್ಟ ಅಲಂಕರಿಸಿ ಹಾಲಿ ಎನಿಸಿರುವ ಭಾರತ ಮಹಿಳಾ ತಂಡ ಜನವರಿ 19 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

4 ಗುಂಪುಗಳು


ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ 16 ತಂಡಗಳನ್ನು 4 ತಂಡಗಳ 4 ಗ್ರೂಪ್‌ಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಪ್ರತಿಯೊಂದು ತಂಡ ಎದುರಾಳಿ ವಿರುದ್ಧ ಒಂದು ಪಂದ್ಯವಾಡಲಿದೆ. ಅಂದರೆ, ಗ್ರೂಪ್‌ ವಿಭಾಗದಲ್ಲಿ ತಂಡವೊಂದಕ್ಕೆ 3 ಪಂದ್ಯಗಳ ಅವಕಾಶ ಲಭಿಸಲಿದೆ. ಪ್ರತೀ ವಿಭಾಗದ 2 ಅಗ್ರ ತಂಡಗಳು ಸೂಪರ್‌ 6 ಹಂತಕ್ಕೆ ಪ್ರವೇಶಿಸುತ್ತವೆ. ಇಲ್ಲಿ ಮತ್ತೆ 6 ತಂಡಗಳ 2 ಗ್ರೂಪ್‌ ಇರುತ್ತದೆ. ಪ್ರತೀ ಗ್ರೂಪ್‌ನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳಿಗೆ ಸೆಮಿಫೈನಲ್‌ ಅರ್ಹತೆ ಲಭಿಸಲಿದೆ. ಬಳಿಕ ಫೈನಲ್​ ಪಂದ್ಯ ನಡೆಯಲಿದೆ.

ತಂಡಗಳು ಮತ್ತು ವಿಭಾಗ


ಗ್ರೂಪ್​ ‘ಎ’:
ಭಾರತ, ವೆಸ್ಟ್ ಇಂಡೀಸ್, ಶ್ರೀಲಂಕಾ, ಮಲೇಷ್ಯಾ

ಗ್ರೂಪ್​ ‘ಬಿ’: ಇಂಗ್ಲೆಂಡ್, ಪಾಕಿಸ್ತಾನ, ಐರ್ಲೆಂಡ್, ಯುಎಸ್ಎ

ಗ್ರೂಪ್​ ‘ಸಿ’: ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ, ಆಫ್ರಿಕಾ ಕ್ವಾಲಿಫೈಯರ್, ಸಮೋವಾ

ಗ್ರೂಪ್​ ‘ಡಿ’: ಆಸ್ಟ್ರೇಲಿಯಾ, ಬಾಂಗ್ಲಾದೇಶ, ಏಷ್ಯಾ ಕ್ವಾಲಿಫೈಯರ್, ಸ್ಕಾಟ್ಲೆಂಡ್

ಟೈ ಆದರೆ ಸೂಪರ್‌ ಓವರ್‌


ಪಂದ್ಯ ಟೈ ಆದರೆ ಸೂಪರ್‌ ಓವರ್‌ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಸೂಪರ್‌ ಓವರ್‌ ಕೂಡ ಟೈ ಆದರೆ ಇನ್ನೊಂದು ಸೂಪರ್‌ ಓವರ್‌ ಇರಲಿದೆ. ಹೀಗೆ ಸ್ಪಷ್ಟ ಫಲಿತಾಂಶ ಲಭಿಸುವ ತನಕ ಸೂಪರ್‌ ಓವರ್‌ ಜಾರಿಯಲ್ಲಿರುತ್ತದೆ.

ಇದನ್ನೂ ಓದಿ Women’s T20 World Cup: ವಿಶ್ವಕಪ್​ ನಡೆಸಲು ಸೇನೆಯ ನೆರವು ಕೇಳಿದ ಬಾಂಗ್ಲಾ ಕ್ರಿಕೆಟ್​ ಮಂಡಳಿ

ಮಳೆ ಬಂದರೆ


ಮಳೆ ಹಾಗೂ ಇನ್ನಿತರ ಪ್ರತಿಕೂಲ ಹವಾಮಾನದಿಂದ ಪಂದ್ಯಕ್ಕೆ ಅಡಚಣೆಯಾದರೆ ಗ್ರೂಪ್‌ ಹಾಗೂ ಸೂಪರ್‌-6 ಹಂತದಲ್ಲಿ ಕನಿಷ್ಠ 5 ಓವರ್‌ಗಳ ಪಂದ್ಯದ ಮೂಲಕ ಫಲಿತಾಂಶ ನಿರ್ಧರಿಸಲಾಗುವುದು. ಸೆಮಿಫೈನಲ್ಸ್‌ ಮತ್ತು ಫೈನಲ್‌ನಲ್ಲಿ ಸ್ಪಷ್ಟ ಫಲಿತಾಂಶಕ್ಕೆ ಕನಿಷ್ಠ 10 ಓವರ್‌ನ ಪಂದ್ಯ ಆಡಿಸಲಾಗುವುದು.

ವೇಳಾಪಟ್ಟಿ


8-01-2025: ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್

18-01-2025: ಇಂಗ್ಲೆಂಡ್ vs ಐರ್ಲೆಂಡ್

18-01-2025: ಸಮೋವಾ vs ಆಫ್ರಿಕಾ ಕ್ವಾಲಿಫೈಯರ್

18-01-2025: ಬಾಂಗ್ಲಾದೇಶ vs ಏಷ್ಯಾ ಕ್ವಾಲಿಫೈಯರ್

18-01-2025: ಪಾಕಿಸ್ತಾನ vs ಯುಎಸ್ಎ

18-01-2025: ನ್ಯೂಜಿಲ್ಯಾಂಡ್​ vs ದಕ್ಷಿಣ ಆಫ್ರಿಕಾ

19-01-2025: ಶ್ರೀಲಂಕಾ vs ಮಲೇಷ್ಯಾ

19-01-2025: ಭಾರತ vs ವೆಸ್ಟ್ ಇಂಡೀಸ್

20-01-2025: ಆಸ್ಟ್ರೇಲಿಯಾ vs ಬಾಂಗ್ಲಾದೇಶ

20-01-2025: ಐರ್ಲೆಂಡ್ vs ಯುಎಸ್ಎ

20-01-2025: ನ್ಯೂಜಿಲ್ಯಾಂಡ್​ vs ಆಫ್ರಿಕಾ ಕ್ವಾಲಿಫೈಯರ್

20-01-2025: ಸ್ಕಾಟ್ಲೆಂಡ್ vs ಏಷ್ಯಾ ಕ್ವಾಲಿಫೈಯರ್

20-01-2025: ಇಂಗ್ಲೆಂಡ್ vs ಪಾಕಿಸ್ತಾನ

20-01-2025: ದಕ್ಷಿಣ ಆಫ್ರಿಕಾ vs ಸಮೋವಾ

21-01-2025: ವೆಸ್ಟ್ ಇಂಡೀಸ್ vs ಶ್ರೀಲಂಕಾ

21-01-2025: ಭಾರತ vs ಮಲೇಷ್ಯಾ

22-01-2025: ಬಾಂಗ್ಲಾದೇಶ vs ಸ್ಕಾಟ್ಲೆಂಡ್

22-01-2025: ಇಂಗ್ಲೆಂಡ್ vs ಅಮೆರಿಕ

22-01-2025: ನ್ಯೂಜಿಲ್ಯಾಂಡ್ vs ಸಮೋವಾ

22-01-2025: ಆಸ್ಟ್ರೇಲಿಯಾ vs ಏಷ್ಯಾ ಕ್ವಾಲಿಫೈಯರ್

22-01-2025: ಪಾಕಿಸ್ತಾನ vs ಐರ್ಲೆಂಡ್

22-01-2025: ದಕ್ಷಿಣ ಆಫ್ರಿಕಾ vs ಆಫ್ರಿಕಾ ಕ್ವಾಲಿಫೈಯರ್

23-01-2025: ಮಲೇಷ್ಯಾ vs ವೆಸ್ಟ್ ಇಂಡೀಸ್

23-01-2025: ಭಾರತ vs ಶ್ರೀಲಂಕಾ

ಸೂಪರ್ ಸಿಕ್ಸ್ ಸುತ್ತು


24-01-2025: ‘ಬಿ’ ಗುಂಪಿನ 4ನೇ ತಂಡ vs ‘ಸಿ’ ಗುಂಪಿನ 3ನೇ ತಂಡ

24-01-2025: ‘ಎ’ ಗುಂಪಿನ 4ನೇ ತಂಡ vs ‘ಡಿ’ ಗುಂಪಿನ 4ನೇ ತಂಡ

25-01-2025: ಬಿ ಗುಂಪಿನ 1ನೇ ತಂಡ vs ಸಿ ಗುಂಪಿನ 2ನೇ ತಂಡ

25-01-2025: ‘ಎ’ ಗುಂಪಿನ 3ನೇ ತಂಡ vs ‘ಡಿ’ ಗುಂಪಿನ 1ನೇ ತಂಡ

25-01-2025: ‘ಸಿ’ ಗುಂಪಿನ 1 ನೇ ತಂಡ vs ‘ಬಿ’ ಗುಂಪಿನ 3ನೇ ತಂಡ

26-01-2025: ‘ಎ’ ಗುಂಪಿನ 2ನೇ ತಂಡ vs ‘ಡಿ’ ಗುಂಪಿನ 3ನೇ ತಂಡ

26-01-2025: ‘ಎ’ ಗುಂಪಿನ 1ನೇ ತಂಡ vs ‘ಡಿ’ ಗುಂಪಿನ 2ನೇ ತಂಡ

27-01-2025: ‘ಬಿ’ ಗುಂಪಿನ 1ನೇ ತಂಡ vs ‘ಸಿ’ ಗುಂಪಿನ 3ನೇ ತಂಡ

28-01-2025: ‘ಎ’ ಗುಂಪಿನ 3ನೇ ತಂಡ vs ‘ಡಿ’ ಗುಂಪಿನ 2ನೇ ತಂಡ

28-01-2025: ‘ಸಿ’ ಗುಂಪಿನ 1ನೇ ತಂಡ vs ‘ಬಿ’ ಗುಂಪಿನ 2ನೇ ತಂಡ

28-01-2025: ‘ಎ’ ಗುಂಪಿನ 1 ನೇ ತಂಡ vs ‘ಡಿ’ ಗುಂಪಿನ 3ನೇ ತಂಡ

29-01-2025: ‘ಸಿ’ ಗುಂಪಿನ 2ನೇ ತಂಡ vs ‘ಬಿ’ ಗುಂಪಿನ 3ನೇ ತಂಡ

29-01-2025: ‘ಎ’ ಗುಂಪಿನ 2ನೇ ತಂಡ vs ‘ಡಿ’ ಗುಂಪಿನ 1ನೇ ತಂಡ

31-01-2025: ಮೊದಲ ಸೆಮಿಫೈನಲ್

31-01-2025: ಎರಡನೇ ಸೆಮಿಫೈನಲ್

2-02-2025: ಫೈನಲ್

Continue Reading

ಕ್ರಿಕೆಟ್

Viral Photo: ಕ್ರಿಕೆಟ್​ ಬಿಟ್ಟು ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಆರಂಭಿಸಿದರೇ ಪೃಥ್ವಿ ಶಾ?

Viral Photo: 2018ರಲ್ಲಿ ಟೀಮ್​ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಅವರು ಆರಂಭಿಕ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಭವಿಷ್ಯದ ಸಚಿನ್​ ತೆಂಡೂಲ್ಕರ್​ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಸತತ ಗಾಯದ ಸಮಸ್ಯೆಗೆ ಸಿಲುಕಿ ತಂಡದಲ್ಲಿ ಸರಿಯಾಗಿ ಅವಕಾಶ ಪಡೆಯಲೇ ಇಲ್ಲ.

VISTARANEWS.COM


on

Viral Photo
Koo

ಲಂಡನ್​: ಟೀಮ್​ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ಪೃಥ್ವಿ ಶಾ(Prithvi Shaw) ಮತ್ತು ಯಜುವೇಂದ್ರ ಚಹಲ್(Yuzvendra Chahal)​ ಲಂಡನ್​ನಲ್ಲಿ ನಡೆಯುತ್ತಿರುವ ಏಕದಿನ ಕಪ್​ ಕ್ರಿಕೆಟ್​ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಬಿಡುವಿನ ವೇಳೆ ಇವರಿಬ್ಬರು ಲಂಡನ್​ ಪ್ರಾವಾಸಿ ತಾಣವೊಂದಕ್ಕೆ ಕಾರ್​ನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಪೆಟ್ರೋಲ್​ ಬಂಕ್​ನಲ್ಲಿ ಕಾರಿಗೆ ಪೆಟ್ರೋಲ್​ ಹಾಕುತ್ತಿರುವ ಮತ್ತು ಕಾರಿನಲ್ಲಿ ಹಾಯಾಗಿ ನಿದ್ರಿಸುತ್ತಿರುವ ಚಹಲ್​ ಫೋಟೊವೊಂದು ಇದೀಗ ವೈರಲ್(Viral Photo)​ ಆಗಿದೆ.

ಪೃಥ್ವಿ ಶಾ ಕಾರಿಗೆ ಪೆಟ್ರೋಲ್​ ಹಾಕುತ್ತಿರುವ ಫೋಟೊ ಕಂಡ ಅನೇಕ ನೆಟ್ಟಿಗರು ಕ್ರಿಕೆಟ್​ ಬಿಟ್ಟು ಈ ಕೆಲಸ ಆರಂಭಿಸಿದರೇ? ಎಂದು ಹಾಸ್ಯಾಸ್ಪದವಾಗಿ ಕಮೆಂಟ್​ ಮಾಡುವ ಮೂಲಕ ಕಾಲೆಳೆದಿದ್ದಾರೆ. ಈ ಫೋಟೊವನ್ನು ಚಹಲ್​ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಾಕಿದ್ದಾರೆ. ಅತ್ತ ಪೃಥ್ವಿ ಶಾ ಅವರು ಚಹಲ್​ ನಿದ್ರಿಸುತ್ತಿರುವ ಫೋಟೊವನ್ನು ಹಾಕಿ, ನನ್ನ ಡ್ರೈವಿಂಗ್​ ಮೇಲೆ ಚಹಲ್​ಗೆ ಶೇ.100 ನಂಬಿಕೆ ಇದೆ. ಹೀಗಾಗಿ ಯಾವುದೇ ಚಿಂತೆ ಇಲ್ಲದೆ ನಿದ್ರಿಸುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.


ಟೀಮ್‌ ಇಂಡಿಯಾದಿಂದ ದೂರ

2018ರಲ್ಲಿ ಟೀಮ್​ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಅವರು ಆರಂಭಿಕ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಭವಿಷ್ಯದ ಸಚಿನ್​ ತೆಂಡೂಲ್ಕರ್​ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಸತತ ಗಾಯದ ಸಮಸ್ಯೆಗೆ ಸಿಲುಕಿ ತಂಡದಲ್ಲಿ ಸರಿಯಾಗಿ ಅವಕಾಶ ಪಡೆಯಲೇ ಇಲ್ಲ. ಕಳೆದ ಎರಡು ವರ್ಷಗಳಿಂದ ಭಾರತ ತಂಡದಿಂದ ದೂರವುಳಿದಿರುವ ಅವರು 2021ರ ಜುಲೈನಲ್ಲಿ ಶ್ರೀಲಂಕಾ ಪರ ಕೊನೆಯ ಪಂದ್ಯ ಆಡಿದ್ದರು.

ಸಪ್ನಾ ಗಿಲ್​​ಗೆ ಕಿರುಕುಳ ಪ್ರಕರಣದಲ್ಲಿ ನಿರಾಳ

ಇದೇ ವರ್ಷಾರಂಭದಲ್ಲಿ ಮುಂಬಯಿಯ ಉಪನಗರ ಹೋಟೆಲ್​​ನಲ್ಲಿ ಸೆಲ್ಫಿ ಕ್ಲಿಕ್ಕಿಸುವ ವಿಚಾರವಾಗಿ ಸೋಶಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​​ ಸಪ್ನಾ ಗಿಲ್(Sapna Gill) ಮತ್ತು ಅವರ ಸ್ನೇಹಿತರು ಪೃಥ್ವಿ ಶಾ ಕಾರಿನ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸಪ್ನಾ ಗಿಲ್ ಅವರ ಬಂಧನವಾಗಿತ್ತು. ಜಾಮೀನು ಪಡೆದ ನಂತರ ಗಿಲ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಶಾ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಪೊಲೀಸರು ಕ್ರಿಕೆಟಿಗನ ವಿರುದ್ಧ ಪ್ರಕರಣ ದಾಖಲಿಸದ ಕಾರಣ ಅವಳು ನಂತರ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ದೂರು ಸುಳ್ಳು ಮತ್ತು ಆಧಾರರಹಿತ ಎಂದು ಮುಂಬಯಿ ಪೊಲೀಸರು (Mumbai Police) ನ್ಯಾಯಾಲಯಕ್ಕೆ ತಿಳಿಸಿದ ಕಾರಣ ಶಾ ನಿರಾಳರಾಗಿದ್ದರು.

ಇದನ್ನೂ ಓದಿ Sanju Samson: ಬಾಸ್ಕೆಟ್‌ ಬಾಲ್‌ ಕೋರ್ಟ್​ನಲ್ಲಿ ಫುಟ್ಬಾಲ್​ ಆಡಿದ ಸಂಜು ಸ್ಯಾಮ್ಸನ್​; ವಿಡಿಯೊ ವೈರಲ್​

ಸದ್ಯ ಪೃಥ್ವಿ ಶಾ ಒಡಿಐ ಕಪ್​ನಲ್ಲಿ ಎಂಟು ಇನ್ನಿಂಗ್ಸ್​ಗಳಲ್ಲಿ 42.87 ಸರಾಸರಿಯಲ್ಲಿ 343 ರನ್ ಗಳಿಸಿದ್ದಾರೆ. ಚಹಲ್​ ಕೂಡ ತಮ್ಮ ಸ್ಪಿನ್​ ಮೂಡಿಯ ಮೂಲಕ ವಿಕೆಟ್​ ಕೀಳುತ್ತಿದ್ದಾರೆ. ಭಾರತ ತಂಡದ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಕೂಡ ಇದೇ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ ಅವರು ಸತತ 4 ಅರ್ಧಶತಕಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹ್ಯಾಂಪ್‌ಶೈರ್ ವಿರುದ್ಧ 70 ರನ್ ಸಿಡಿಸುವ ಮೂಲಕ ರಹಾನೆ ಲೀಸೆಸ್ಟರ್‌ಶೈರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Continue Reading

ಕ್ರೀಡೆ

Vinesh Phogat: ಸನ್ಮಾನ ಸಮಾರಂಭದಲ್ಲಿ ದಿಢೀರ್​ ಪ್ರಜ್ಞೆ ತಪ್ಪಿ ಬಿದ್ದ ವಿನೇಶ್​ ಪೋಗಟ್​

Vinesh Phogat: ತವರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿನೇಶ್ ಫೋಗಟ್​​ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿದ ಘಟನೆಯ ವಿಡಿಯೊ ಇದೀಗ ವೈರಲ್​ ಆಗಿದೆ.

VISTARANEWS.COM


on

Vinesh Phogat
Koo

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅನರ್ಹಗೊಂಡು ಪದಕ ವಂಚಿತರಾಗಿದ್ದ ವಿನೇಶ್​ ಫೋಗಟ್(Vinesh Phogat)​ ಶನಿವಾರ ಭಾರತಕ್ಕೆ ಆಗಮಿಸಿದ್ದರು. ನವದೆಹಲಿಗೆ ಬಂದಿಳಿದಿದ್ದ ವಿನೇಶ್​ಗೆ ಭರ್ಜರಿ ಸ್ವಾಗತ ಕೋರಲಾಗಿತ್ತು. ಕಾಂಗ್ರೆಸ್​ ನಾಯಕ ದೀಪೇಂದರ್​ ಹೂಡಾ, ರೈತನಾಯಕರು, ಬಜರಂಗ್​ ಪೂನಿಯ, ಸಾಕ್ಷಿ ಮಲಿಕ್​ ಸೇರಿ ಸೇರಿ ನೂರಾರು ಮಂದಿ ನೆರೆದಿದ್ದರು. ವಿಮಾನ ನಿಲ್ದಾಣದಿಂದ ವಿನೇಶ್​ ತವರಾದ ಹರ್ಯಾಣದ ಬಲಾಲಿಗೆ ಕಾರ್​ನಲ್ಲಿ ಮೆರವಣಿ ಮಾಡುವ ಮೂಲಕ ಕರೆದೊಯ್ಯಲಾಗಿತ್ತು. ಇದೀಗ ತವರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿನೇಶ್​ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಈ ವಿಡಿಯೊ ಇದೀಗ ವೈರಲ್​ ಆಗಿದೆ.

ವೈರಲ್​​ ಆಗಿರುವ ವಿಡಿಯೊದಲ್ಲಿ ವೇದಿಕೆಯಲ್ಲಿ ಆಸೀನರಾಗಿದ್ದ ವಿನೇಶ್​ ಏಕಾಏಕಿ ಮೂರ್ಛೆ ಹೋಗಿ ತಾವು ಕುಳಿತಿದ್ದ ಕುರ್ಚಿಗೆ ಒರಗಿಕೊಂಡು ಮಲಗಿರುವುದನ್ನು ಕಾಣಬಹುದಾಗಿದೆ. ಪಕ್ಕದಲ್ಲೇ ಇದ್ದ ಭಜರಂಗ್​ ಪೂನಿಯಾ ವಿನೇಶ್​ಗೆ ನೀರು ಕೊಟ್ಟು ಉಪಚರಿಸಿದ್ದಾರೆ. ಅವರು ಶೀಘ್ರದಲಲ್ಲೇ ಚೇತರಿಕೆ ಕಾಣಲಿ ಎಂದು ಜನರು ಆಶಿಸಿದ್ದಾರೆ.

ಫೈನಲ್​ ಪಂದ್ಯಕ್ಕೂ ಮುನ್ನ ಹೆಚ್ಚಳವಾಗಿದ್ದ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್‌ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್‌ ನಡೆಸಿ, ಸ್ಕಿಪ್ಪಿಂಗ್‌ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ, ದೇಹದಿಂದ ರಕ್ತವನ್ನು ಕೂಡ ತೆಗಿದಿದ್ದರು. ರಕ್ತ ತೆಗೆದ ಪರಿಣಾಮ ಅಸ್ವಸ್ಥರಾಗಿ ಆಸ್ಪತ್ರೆ ಕೂಡ ಸೇರಿದ್ದರು. ಈ ಅಸ್ವಸ್ಥದಿಂದ ಅವರು ಇನ್ನೂ ಸರಿಯಾಗಿ ಚೇತರಿಕೊಂಡಂತೆ ಕಾಣುತ್ತಿಲ್ಲ. ಭಾರತಕ್ಕೆ ಬಂದ ವೇಳೆ ಅವರು ಬಿಡುವಿಲ್ಲದೆ ಸರಿ ಸುಮಾರು 20 ಗಂಟೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಮೂರ್ಛೆ ಹೋದಂತೆ ಕಾಣುತ್ತಿದೆ. ಕೆಲ ದಿನಗಳು ವಿಶ್ರಾಂತಿ ಪಡೆದು ಆ ಬಳಿಕ ಸನ್ಮಾನ ಸಮಾರಂಭಕ್ಕೆ ಹೋದರೆ ಉತ್ತಮ ಎಂದು ಕೆಲ ನೆಟ್ಟಿಗರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ Vinesh Phogat: ತವರಿಗೆ ಮರಳಿದ ವಿನೇಶ್​​​ ಫೋಗಟ್​ಗೆ ಭರ್ಜರಿ ಸ್ವಾಗತ; ಅಭಿಮಾನಿಗಳನ್ನು ಕಂಡು ಕಣ್ಣೀರು

ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಿ ತವರಿಗೆ ಮರಳಿರುವ ಭಾರತದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ್ದರು. ಈ ವೇಳೆ ವಿನೇಶ್ ಫೋಗಟ್ ಸಾಧನೆ ಕುರಿತು ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. “ವಿನೇಶ್​ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದು ನಮ್ಮ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಅನರ್ಹಗೊಂಡ ಬೇಸರದಲ್ಲೇ ವಿನೇಶ್​ ಕುಸ್ತಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ವಿನೇಶ್ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿ (ಸಿಎಎಸ್) ತಿರಸ್ಕರಿಸಿತ್ತು. ಹೋಗಾಗಿ ಕೊನೆಯ ಆಸೆ ಕೂಡ ಕಮರಿಹೋಗಿದೆ. ಕಳೆದ ವರ್ಷ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಕುಸ್ತಿಪಟುಗಳು ನಡೆಸಿದ್ದ ಮುಷ್ಕರದಲ್ಲಿ ವಿನೇಶ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.

Continue Reading

ಕ್ರೀಡೆ

MS Dhoni: ಅಭಿಮಾನಿಯ ಬೈಕ್​ ಮೇಲೆ ಆಟೋಗ್ರಾಫ್​ ಹಾಕಿದ ಧೋನಿ; ಫೋಟೊ ವೈರಲ್​

MS Dhoni: ನಿವೃತ್ತಿ ಜೀವನವನ್ನು ಎಂಜಾಯ್‌ ಮಾಡುತ್ತಿರುವ ಧೋನಿ(MS Dhoni) ತಮ್ಮ ತವರಾದ ರಾಂಚಿಯಲ್ಲಿ ಆಗಾಗ ಕಾರು ಮತ್ತು ಬೈಕ್‌ಗಳ ಮೂಲಕ ಸವಾರಿ ಮಾಡುತ್ತಿರುತ್ತಾರೆ.

VISTARANEWS.COM


on

MS Dhoni
Koo

ರಾಂಚಿ: ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿ ಕೆಲವು ವರ್ಷಗಳು ಕಳೆದರೂ ಅಭಿಮಾನಿಗಳಿಗೆ ಅವರ ಮೇಲಿರುವ ಕ್ರೇಜ್​ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಧೋನಿಯ ಒಂದು ಆಟೋಗ್ರಾಫ್​ಗಾಗಿ ಈಗಲೂ ಅಭಿಮಾನಿಗಳು ಕಾದು ಕುಳಿತಿರುತ್ತಾರೆ.

ನಿವೃತ್ತಿ ಜೀವನವನ್ನು ಎಂಜಾಯ್‌ ಮಾಡುತ್ತಿರುವ ಧೋನಿ(MS Dhoni) ತಮ್ಮ ತವರಾದ ರಾಂಚಿಯಲ್ಲಿ ಆಗಾಗ ಕಾರು ಮತ್ತು ಬೈಕ್‌ಗಳ ಮೂಲಕ ಸವಾರಿ ಮಾಡುತ್ತಿರುತ್ತಾರೆ. ಹೀಗೆ ಜಾಲಿ ರೈಡ್‌ ಹೋಗುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬರ ಬಯಕೆಯಂತೆ ಅವರ ಬೈಕ್​ನ(Dhoni signs bike for a fan) ಹೈಡ್​ ಲೈಟ್​ ಬಳಿ ಧೋನಿ ತಮ್ಮ ಸಹಿ ಹಾಕಿ ಆಟೋಗ್ರಾಫ್‌ ನೀಡಿದ್ದಾರೆ. ಈ ಫೋಟೊ ವೈರಲ್‌(viral Photo) ಆಗಿದೆ. ಈ ಫೋಟೊ ಕಂಡ ನೆಟ್ಟಿಗರು ನೀವು ಅದೃಷ್ಟಶಾಲಿ ಎಂದು ಕಮೆಂಟ್‌ ಮಾಡಿದ್ದಾರೆ.

ಮೋಟಾಸೈಕಲ್​​ಗಳು ಹಾಗೂ ಕಾರುಗಳ ಬಗ್ಗೆ ಎಂಎಸ್ ಧೋನಿ ಅವರ ಕ್ರೇಜ್​ ಎಲ್ಲರಿಗೂ ತಿಳಿದಿದೆ. ಅವರು ತಮ್ಮ ಗ್ಯಾರೇಜ್​ನಲ್ಲಿ ಹಲವಾರು ಆಕರ್ಷಕ ವಾಹನಗಳ ಸಂಗ್ರಹವನ್ನು ಹೊಂದಿದ್ದಾರೆ. ಬಿಡುವಿನ ವೇಳೆಯಲ್ಲಿ ಧೋನಿ ತಮಗಿಷ್ಟವಾದ ಕಾರು ಮತ್ತು ಬೈಕ್​ಗಳನ್ನು ಓಡಿಸುವ ಹಲವು ವಿಡಿಯೊಗಳು ವೈರಲ್ ಆಗುತ್ತಿರುತ್ತದೆ. ಅವರ ಅಭಿಮಾನಿಗಳು ಈ ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಕೆಲವು ತಿಂಗಳ ಹಿಂದೆ ಧೋನಿ ಅವರು ಅಭಿಮಾನಿಯ ಬೈಕ್​ ಒಂದಕ್ಕೆ ಆಟೋಗ್ರಾಫ್ ಹಾಕುವ ಮೊದಲು ಬೈಕಿನ ಮುಂಭಾಗದ ಪ್ರದೇಶವನ್ನು ತಮ್ಮ ಟಿಶರ್ಟ್​ನಿಂದ ಒರೆಸಿ ಆ ಬಳಿಕ ಸಹಿ ಹಾಕಿದ್ದರು. ಬಳಿಕ ಧೋನಿ ಈ ಬೈಕ್​ ರೈಡ್​ ಮಾಡಿದ್ದರು.

ಮುಂದಿನ ಆವೃತ್ತಿ ಐಪಿಎಲ್​ನಲ್ಲಿ ಧೋನಿ ಅನ್​ಕ್ಯಾಪ್ಡ್​ ಆಟಗಾರ?


ವರದಿಯೊಂದರ ಪ್ರಕಾರ ಬಿಸಿಸಿಐ(BCCI) ಕನಿಷ್ಠ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ವಿಭಾಗದಲ್ಲಿ ಇರಿಸುವ ನಿಯಮವನ್ನು ಮರಳಿ ತರಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಧೋನಿ ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ Rohit Sharma : ಧೋನಿಯ ನಾಯಕತ್ವದ ದಾಖಲೆಯೊಂದನ್ನು ಮುರಿದ ರೋಹಿತ್ ಶರ್ಮಾ

ಅನ್‌ಕ್ಯಾಪ್ಡ್ ಆಟಗಾರನಿಗೆ ಫ್ರಾಂಚೈಸಿ ಕೇವಲ 4 ಕೋಟಿ ರೂ. ನೀಡಲಿದೆ. ಈ ನಿಯಮ ಜಾರಿಗೆ ಬಂದರೆ ಧೋನಿ ಇದೇ ಮೊತ್ತದಲ್ಲಿ ಚೆನ್ನೈಗಾಗಿ ಆಡುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇದೇ ಮೊತ್ತಕ್ಕೆ ಚೆನ್ನೈ ತಂಡ ಧೋನಿಯನ್ನು ಮತ್ತೆ ರೀಟೈನ್​ ಮಾಡಿಕೊಳ್ಳಬಹುದು. 

ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

Continue Reading
Advertisement
Kolkata Doctor Murder Case
ದೇಶ25 mins ago

Kolkata Doctor murder case: ಟ್ರೈನಿ ವೈದ್ಯೆ ಕೊಲೆ ಪ್ರಕರಣ; ಸ್ವಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌

Karnataka weather Forecast
ಮಳೆ40 mins ago

Karnataka Weather : ಭಾರಿ ಮಳೆ ಎಫೆಕ್ಟ್‌; ಹಳ್ಳ ದಾಟಲು ಹೋಗಿ ಕೊಚ್ಚಿ ಹೋದ 20ಕ್ಕೂ ಹೆಚ್ಚು ಕುರಿಗಳು

U19 Women’s T20 World Cup
ಕ್ರೀಡೆ43 mins ago

U-19 Women’s T20 World Cup; ಅಂಡರ್-19 ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ವಿಂಡೀಸ್​ ಮೊದಲ ಎದುರಾಳಿ

Prabhas-Hanu Iman Esmail Trending
ಟಾಲಿವುಡ್1 hour ago

Actor Prabhas: ಪ್ರಭಾಸ್ ಜತೆ ರೀಲ್ಸ್ ರಾಣಿ ಇಮಾನ್ ಇಸ್ಮಾಯಿಲ್ ರೊಮ್ಯಾನ್ಸ್‌!

Indian origin family killed
ವಿದೇಶ1 hour ago

Indian origin family killed: ಟೆಕ್ಸಾಸ್‌ನಲ್ಲಿ ಭೀಕರ ಅಪಘಾತ; ಭಾರತೀಯ ಮೂಲದ ದಂಪತಿ, ಮಗಳು ದುರ್ಮರಣ

CM Siddaramaiah
ಕರ್ನಾಟಕ1 hour ago

CM Siddaramaiah: ಪ್ರಾಸಿಕ್ಯೂಷನ್‌ ಸಂಕಷ್ಟ; ಸಿಎಂ ನಾಳಿನ ಬಳ್ಳಾರಿ, ಮಂತ್ರಾಲಯ ಪ್ರವಾಸ ರದ್ದು

Use of ORS be prepared at home for dehydration
ಆರೋಗ್ಯ2 hours ago

Use of ORS: ಡಿಹೈಡ್ರೇಶನ್‌ ಆದಾಗ ಬಳಸುವ ಒಆರ್‌ಎಸ್‌ ಮನೆಯಲ್ಲೇ ಸಿದ್ಧಪಡಿಸಿಕೊಳ್ಳಬಹುದಾ?

Gas Authority of India Limited
ಉದ್ಯೋಗ2 hours ago

Job Alert: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿದೆ ಉದ್ಯೋಗಾವಕಾಶ; 391 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

Manipur Bomb Blast
ದೇಶ2 hours ago

Manipur Bomb Blast: ಮಾಜಿ ಶಾಸಕನ ಮನೆಯಲ್ಲಿ ಬಾಂಬ್‌ ಬ್ಲಾಸ್ಟ್‌; ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ

Viral Photo
ಕ್ರಿಕೆಟ್2 hours ago

Viral Photo: ಕ್ರಿಕೆಟ್​ ಬಿಟ್ಟು ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಆರಂಭಿಸಿದರೇ ಪೃಥ್ವಿ ಶಾ?

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌