Fashion Show news: ವೈವಿಧ್ಯಮಯ ವಜ್ರಾಭರಣ ಧರಿಸಿ ಫ್ಯಾಷನ್‌ ಶೋನಲ್ಲಿ ಮಿಂಚಿದ ರೂಪದರ್ಶಿಯರು - Vistara News

ಫ್ಯಾಷನ್

Fashion Show news: ವೈವಿಧ್ಯಮಯ ವಜ್ರಾಭರಣ ಧರಿಸಿ ಫ್ಯಾಷನ್‌ ಶೋನಲ್ಲಿ ಮಿಂಚಿದ ರೂಪದರ್ಶಿಯರು

Fashion Show news: ಫ್ಯಾಷನ್‌ ಡೈರೆಕ್ಟರ್‌ ರಾಜೇಶ್‌ ಶೆಟ್ಟಿ ನೇತೃತ್ವದಲ್ಲಿ ನಡೆದ ಶ್ರಾವಣ ಮಾಸದ ಫೆಸ್ಟಿವ್‌ ಸೀಸನ್‌ನ ಫ್ಯಾಷನ್‌ ಶೋನಲ್ಲಿ ವೈವಿಧ್ಯಮಯ ಟ್ರೆಂಡಿ ವಜ್ರಾಭರಣಗಳನ್ನು ಧರಿಸಿದ ಪ್ರೊಫೆಷನಲ್‌ ಮಾಡೆಲ್‌ಗಳು ರ‍್ಯಾಂಪ್‌ ವಾಕ್‌ ಮಾಡಿ ಮಿಂಚಿದರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Fashion Show news
ಚಿತ್ರಗಳು: ವಜ್ರಾಭರಣಗಳನ್ನು ಧರಿಸಿ ವಾಕ್‌ ಮಾಡಿದ ಮಾಡೆಲ್‌ಗಳು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ (Fashion Show news) ವಜ್ರಾಭರಣಗಳನ್ನು ಧರಿಸಿದ ರೂಪದರ್ಶಿಯರು ಹೆಜ್ಜೆ ಇಟ್ಟು ರ‍್ಯಾಂಪ್‌ ವಾಕ್‌ ಮಾಡುತ್ತಿದ್ದರೇ ನೋಡುಗರ ಕಣ್ಣೆಲ್ಲವೂ ಅವರು ಧರಿಸಿದ ಜ್ಯುವೆಲರಿಗಳ ಮೇಲಿತ್ತು. ಅತ್ಯಾದ್ಭುತವಾದ ಮನಮೋಹಕ ಆಭರಣಗಳನ್ನು ಧರಿಸಿದ್ದ, ಮಾಡೆಲ್‌ಗಳು ವಾಕ್‌ ಮಾಡುತ್ತಿದ್ದರೇ ಥೇಟ್‌ ಧರೆಗಿಳಿದ ದೇವತೆಗಳಂತೆ ಕಾಣಿಸುತ್ತಿದ್ದರು.

ಪ್ರೊಫೆಷನಲ್‌ ಮಾಡೆಲ್‌ಗಳ ರ‍್ಯಾಂಪ್‌ ವಾಕ್‌

ಕೆಲವರು ರೇಷ್ಮೆ ಸೀರೆಯುಟ್ಟು, ಆಭರಣಗಳನ್ನು ಧರಿಸಿ ಅಲಂಕೃತಗೊಂಡಿದ್ದರೇ, ಇನ್ನು ಕೆಲವರು ಟ್ರೆಡಿಷನಲ್‌ ಗೌನ್‌ನಲ್ಲಿಯೇ ಕಂಟೆಂಪರರಿ ಜ್ಯುವೆಲರಿಗಳಲ್ಲಿ ಕಾಣಿಸಿಕೊಂಡರು. ವಾಕ್‌ ಮಾಡಿದ ಸುಮಾರು 15 ಪ್ರೊಫೆಷನಲ್‌ ಮಾಡೆಲ್‌ಗಳು, ರಂಭೆ-ಊರ್ವಶಿ ಮೇನಕೆಯರಂತೆ ಕಾಣಿಸುತ್ತಿದ್ದರು. ಭಾಗವಹಿಸಿದ್ದವರೆಲ್ಲರ ಮನ ಸೂರೆಗೊಂಡರು.
ಅಂದಹಾಗೆ, ಉದ್ಯಾನನಗರಿಯ ಡಿಕನ್‌ಸನ್‌ ರಸ್ತೆಯಲ್ಲಿರುವ ಭೀಮಾ ಜ್ಯುವೆಲರಿ ಶೋ ರೂಮ್‌ವೊಂದರ ಫ್ಯಾಷನ್‌ ಶೋವೊಂದರಲ್ಲಿ ಈ ರಮಣೀಯ ದೃಶ್ಯ ಕಂಡು ಬಂತು. ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ವೈವಿಧ್ಯಮಯ ವಜ್ರಾಭರಣಗಳನ್ನು ಪ್ರದರ್ಶಿಸಲಾಯಿತು.

Fashion Show news

ಫ್ಯಾಷನ್‌ ಶೋ ಡೈರೆಕ್ಟರ್‌ ರಾಜೇಶ್‌ ಶೆಟ್ಟಿ ಕೊರಿಯಾಗ್ರಫಿ

ಫ್ಯಾಷನ್‌ ಶೋ ಡೈರೆಕ್ಟರ್‌ ರಾಜೇಶ್‌ ಶೆಟ್ಟಿಯವರ ಕೊರಿಯಾಗ್ರಾಫಿಯಲ್ಲಿ ನಡೆದ ಈ ಫ್ಯಾಷನ್‌ ಶೋ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು. ಹಬ್ಬದ ಸೀಸನ್‌ನಲ್ಲಿ ಇಂತಹ ಫ್ಯಾಷನ್‌ ಶೋಗಳ ಅಗತ್ಯವಿದೆ. ಇದರಿಂದಾಗಿ ಮಹಿಳೆಯರಿಗೆ ಟ್ರೆಂಡ್‌ನಲ್ಲಿರುವ ವಜ್ರಾಭರಣಗಳ ಪರಿಚಯವಾಗುತ್ತದೆ. ಮಾಡೆಲ್‌ಗಳು ಧರಿಸಿರುವ ಜ್ಯುವೆಲರಿಗಳು ಕೂಡ ಈ ಸೀಸನ್‌ನಲ್ಲಿ ಸಖತ್‌ ಟ್ರೆಂಡಿಯಾಗಿವೆ. ಮಹಿಳೆಯರಿಗೆ ಟ್ರೆಂಡ್‌ ಫಾಲೋ ಮಾಡಲು ಇಂತಹ ಶೋಗಳು ಸಹಕರಿಸುತ್ತವೆ ಎಂದು ಶೋ ಡೈರೆಕ್ಟರ್‌ ರಾಜೇಶ್‌ ಶೆಟ್ಟಿ ಹೇಳಿದರು. ಇವರೊಂದಿಗೆ ಶೋ ನೇತೃತ್ವವಹಿಸಿದ್ದ ಆದಿತ್ಯಾ ಶ್ರೀ ವಾತ್ಸವ್‌ ಕೂಡ ಹಾಜರಿದ್ದರು.

ಟ್ರೆಂಡಿ ಆಭರಣಗಳ ಪ್ರದರ್ಶನ

ಕತ್ತಿಗೆ ಧರಿಸುವ ಚೋಕರ್‌, ಲೇಯರ್‌ ಆಭರಣಗಳಿಂದ ಹಿಡಿದು ಬಾಜುಬಂದ್‌, ಮಾಂಗ್‌ಟೀಕಾ, ಕಮರ್‌ಬಾಂದ್‌, ಕಡ, ಬಳೆ ಸೆಟ್‌, ಮೂಗುತಿ, ಕಿವಿಯ ಹ್ಯಾಂಗಿಂಗ್ಸ್ ಹೀಗೆ ನಾನಾ ಬಗೆಯ ಫೆಸ್ಟಿವ್‌ ಸೀಸನ್‌ ಆಭರಣಗಳು ಈ ಶೋನಲ್ಲಿ ಹೈಲೈಟಾದವು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Banaras Silk Saree Fashion: ಫೆಸ್ಟಿವ್‌ ಸೀಸನ್‌ನಲ್ಲಿ ಗ್ರ್ಯಾಂಡ್‌ ಬನಾರಸ್ ಸಿಲ್ಕ್ ಸೀರೆಗಳ ಹಂಗಾಮ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Banaras Silk Saree Fashion: ಫೆಸ್ಟಿವ್‌ ಸೀಸನ್‌ನಲ್ಲಿ ಗ್ರ್ಯಾಂಡ್‌ ಬನಾರಸ್ ಸಿಲ್ಕ್ ಸೀರೆಗಳ ಹಂಗಾಮ!

Banaras Silk Saree Fashion: ಈ ಬಾರಿಯ ಫೆಸ್ಟಿವ್‌ ಸೀಸನ್‌ನಲ್ಲಿ ಬಗೆಬಗೆಯ ಗ್ರ್ಯಾಂಡ್‌ ಬನಾರಸ್‌ ಸಿಲ್ಕ್ ಸೀರೆಗಳು ಹಂಗಾಮ ಎಬ್ಬಿಸಿವೆ. ಅದರಲ್ಲೂ ಹೆಂಗಸರಿಗಿಂತ ಹೆಚ್ಚಾಗಿ ಯುವತಿಯರನ್ನು ಬರ ಸೆಳೆದಿವೆ. ಯಾವ್ಯಾವ ಬಗೆಯವು ಹೆಚ್ಚು ಪ್ರಚಲಿತದಲ್ಲಿವೆ? ಆಯ್ಕೆ ಹೇಗೆ ಎಂಬುದರ ಬಗ್ಗೆ ಸೀರೆ ಪರಿಣತರು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Banaras silk saree fashion
ಚಿತ್ರಗಳು: ಮಾಡೆಲ್‌ ಭೂಮಿಕಾ ರೆಡ್ಡಿಯೊಂದಿಗೆ ಕುಸುಮಾ ಮತ್ತು ಸುಷ್ಮಿತಾ, ಫೋಟೋಗ್ರಫಿ: ಎಜಿ ಫೋಟೋಗ್ರಾಫಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಫೆಸ್ಟಿವ್‌ ಸೀಸನ್‌ನಲ್ಲಿ ವೈವಿಧ್ಯಮಯ (Banaras silk saree fashion) ಗ್ರ್ಯಾಂಡ್‌ ಬನಾರಸ್‌ ಸಿಲ್ಕ್ ಸೀರೆಗಳು ಹಂಗಾಮ ಎಬ್ಬಿಸಿವೆ. ಹೌದು, ಮೊದಲಿನಿಂದಲೂ ಬನಾರಸ್‌ ಸೀರೆಗಳು ಗ್ರ್ಯಾಂಡ್‌ ಸೀರೆಗಳ ಲಿಸ್ಟ್‌ನಲ್ಲಿವೆ. ಈ ಶೈಲಿಯ ಸೀರೆಗಳು ಮೂಲತಃ ಉತ್ತರ ಭಾರತದ ಬನರಾಸ್‌ನವಾದರೂ ದಕ್ಷಿಣ ಭಾರತದ ಮಹಿಳೆಯರನ್ನು ಮೊದಲಿನಿಂದಲೂ ಆಕರ್ಷಿಸಿವೆ. ಇತ್ತೀಚೆಗೆ ಇವುಗಳ ಹೊಸ ಪ್ರಿಂಟ್ಸ್ ಹಾಗೂ ನಯಾ ಪಾಸ್ಟೆಲ್‌ ಶೇಡ್ಸ್‌ಗಳ ಆಗಮನದಿಂದಾಗಿ ಮಹಿಳೆಯರಿಗೆ ಮಾತ್ರವಲ್ಲ, ಕಾಲೇಜು ಹುಡುಗಿಯರಿಗೂ ಈ ಸೀರೆಗಳು ಪ್ರಿಯವಾಗತೊಡಗಿವೆ. ಪರಿಣಾಮವಾಗಿ ಬನಾರಸ್‌ ಸಿಲ್ಕ್‌ ಸೀರೆಗಳು ಮೊದಲಿಗಿಂತ ಹೆಚ್ಚಾಗಿ ಈ ಜನರೇಷನ್‌ ಯುವತಿಯರನ್ನು ಬರಸೆಳೆದಿವೆ ಎನ್ನುತ್ತಾರೆ ಮಾಡೆಲ್‌ಗಳಾದ ಭೂಮಿಕಾ ರೆಡ್ಡಿ, ಕುಸುಮಾ, ಸುಷ್ಮಿತಾ.

Banaras silk saree fashion

ಬನಾರಸ್‌ ಸಿಲ್ಕ್‌ ಸೀರೆಗಳ ಜಾದೂ

ಪ್ರಮುಖವಾಗಿ 4 ಬಗೆಯ ಬನಾರಸ್‌ ಸೀರೆಗಳನ್ನು ಎವರ್‌ಗ್ರೀನ್‌ ಸೀರೆಗಳೆಂದು ಕರೆಯಲಾಗುತ್ತದೆ. ಅವುಗಳಲ್ಲಿ ಕತಾನ್‌, ಜರಿಯ ಕೋರಾ, ಜಾರ್ಜೆಟ್‌ನವು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ರೇಷ್ಮೆಯ ದಾರದಿಂದಲೇ ಸಿದ್ಧಪಡಿಸಲಾಗುವ ಬ್ರೋಕೆಡ್‌, ಗೋಲ್ಡ್ ಹಾಗೂ ಸಿಲ್ವರ್‌ ಲುಕ್‌ ನೀಡುವ ಬನಾರಸ್‌ ಸೀರೆಗಳಂತೂ ಈ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಿಡುಗಡೆಗೊಳ್ಳುತ್ತಿರುವುದು ಬೇಡಿಕೆ ಹೆಚ್ಚಿಸಿಕೊಳ್ಳಲು ಕಾರಣವಾಗಿದೆ.

Banaras silk saree fashion

ಯುವತಿಯರನ್ನು ಸೆಳೆದ ಬನಾರಸ್‌ ಸೀರೆಗಳು

ದಶಕಗಳ ಹಿಂದೆ ಬನಾರಸ್‌ ಸೀರೆಗಳು ಅತಿ ಹೆಚ್ಚು ಪ್ರಚಲಿತದಲ್ಲಿದ್ದವು. ಆದರೆ, ಹೆಚ್ಚು ವಿನ್ಯಾಸ ಲಭ್ಯವಿರಲಿಲ್ಲ. ಕೇವಲ ಮದುವೆ ಹಾಗೂ ಗ್ರ್ಯಾಂಡ್‌ ಸಮಾರಂಭಗಳಿಗೆ ಮಾತ್ರ ಈ ಸೀರೆಗಳನ್ನು ಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಇದೀಗ ಈ ಜನರೇಷನ್‌ ಯುವತಿಯರು ಇಂಡೋ-ವೆಸ್ಟರ್ನ್‌ ಶೈಲಿಯಲ್ಲಿ, ಇವನ್ನು ಉಡುವುದು ಆರಂಭವಾದ ನಂತರ ಇವುಗಳನ್ನು ಕೊಳ್ಳುವವರ ಸಂಖ್ಯೆಯಲ್ಲೂ ಹೆಚ್ಚಳ ಕಂಡಿತು ಎನ್ನುತ್ತಾರೆ ಸೀರೆ ಪ್ರೇಮಿ ಸುನೀತಾ ರೆಡ್ಡಿ.

Banaras silk saree fashion

ಬನಾರಸ್‌ ಸಿಲ್ಕ್‌ ಸೀರೆ ಆಯ್ಕೆ ಮಾಡುವುದು ಹೇಗೆ?

ಶುದ್ಧ ಬನಾರಸ್‌ ಸೀರೆಗಳನ್ನು ಆಯ್ಕೆ ಮಾಡುವಾಗ ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸಿಲ್ಕ್‌ ಮಾರ್ಕ್‌ನಿಂದಿಡಿದು ನಾನಾ ವಿಷಯಗಳನ್ನು ಗಮನಿಸಬೇಕಾಗುತ್ತದೆ ಎನ್ನುತ್ತಾರೆ ಸೀರೆ ಎಕ್ಸ್ಪರ್ಟ್ಸ್. ಇನ್ನು ಇದೀಗ ಕಡಿಮೆ ಬೆಲೆಯ ಬನಾರಸ್‌ ಸಿಲ್ಕ್‌ನ ರಿಪ್ಲಿಕಾ ಸೀರೆಗಳು ಮಾರುಕಟ್ಟೆಯಲ್ಲಿ ದೊರೆಯಲಾರಂಭಿಸಿವೆ. ಹಾಗಾಗಿ ಪರಿಶೀಲಿಸಿ ಖರೀದಿಸುವುದು ಉತ್ತಮ ಎನ್ನುತ್ತಾರೆ ಮಾಡೆಲ್‌ ಭೂಮಿಕಾ ರೆಡ್ಡಿ.

ಇದನ್ನೂ ಓದಿ: Celebrities Rakhi Celebration: ಫೆಸ್ಟಿವ್‌ ಸೀಸನ್‌ ವೇರ್ಸ್‌ನಲ್ಲಿ ಸೆಲೆಬ್ರೆಟಿಗಳ ರಾಖಿ ಸಂಭ್ರಮ

ಬನಾರಸ್‌ ಸೀರೆಗಳ ಇಂಡೋ-ವೆಸ್ಟರ್ನ್‌ ಸ್ಟೈಲಿಂಗ್‌

  • ಗ್ಲಾಮರಸ್‌ ಬ್ಲೌಸ್‌ ಆಯ್ಕೆ ಮಾಡುವುದರಿಂದ ಇಂಡೋ-ವೆಸ್ಟರ್ನ್‌ ಲುಕ್‌ ನಿಮ್ಮದಾಗುವುದು.
  • ಸೀರೆಯನ್ನು ಡಿಫರೆಂಟ್‌ ಡ್ರೇಪ್‌ ಮಾಡಿದಾಗಲೂ ವಿಭಿನ್ನವಾಗಿ ಕಾಣಿಸುವುದು.
  • ಕಂಟೆಂಪರರಿ ಹೇರ್‌ಸ್ಟೈಲ್‌ ಮ್ಯಾಚ್‌ ಮಾಡಿ ನೋಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Celebrities Rakhi Celebration: ಫೆಸ್ಟಿವ್‌ ಸೀಸನ್‌ ವೇರ್ಸ್‌ನಲ್ಲಿ ಸೆಲೆಬ್ರೆಟಿಗಳ ರಾಖಿ ಸಂಭ್ರಮ

Celebrities Rakhi Celebration: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸೆಲೆಬ್ರೆಟಿ ಸಹೋದರ-ಸಹೋದರಿಯರು ರಾಖಿ ಹಬ್ಬವನ್ನು ಸಂಭ್ರಮಿಸಿದರು. ಕೆಲವು ಸೆಲೆಬ್ರೆಟಿಗಳು ಕಂಪ್ಲೀಟ್‌ ಎಥ್ನಿಕ್‌ವೇರ್‌ನಲ್ಲಿ ಕಾಣಿಸಿಕೊಂಡರೇ, ಇನ್ನು ಕೆಲವರು ಸೆಮಿ ಎಥ್ನಿಕ್‌ ಹಾಗೂ ಸಾಮಾನ್ಯವಾದ ಕ್ಯಾಶುವಲ್‌ವೇರ್‌ನಲ್ಲೆ ಆಚರಿಸಿದರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Celebrities Rakhi Celebration
ಚಿತ್ರಗಳು: ಇನ್‌ಸ್ಟಾಗ್ರಾಮ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯೂ (Celebrities Rakhi Celebration) ಬಾಲಿವುಡ್‌, ಸ್ಯಾಂಡಲ್‌ವುಡ್‌ ಹಾಗೂ ಫ್ಯಾಷನ್‌ಕ್ಷೇತ್ರದ ಸೆಲೆಬ್ರೆಟಿ ಸಹೋದರ-ಸಹೋದರಿಯರು ರಾಖಿ ಹಬ್ಬವನ್ನು ಸಡಗರದಿಂದ ಸಂಭ್ರಮಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಿನಿಮಾ ಹಾಗೂ ಸಿನಿಮಾಯೇತರ ಸೆಲೆಬ್ರೆಟಿಗಳು ರಾಖಿ ಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸಿದರು. ಕೆಲವು ಸೆಲೆಬ್ರೆಟಿಗಳು ಸಂದರ್ಭಕ್ಕೆ ತಕ್ಕಂತೆ ಎಥ್ನಿಕ್‌ವೇರ್‌ನಲ್ಲಿ ಕಾಣಿಸಿಕೊಂಡರೇ, ಇನ್ನು ಕೆಲವರು ಸೆಮಿ ಎಥ್ನಿಕ್‌ವೇರ್‌ನಲ್ಲಿ ಆಚರಿಸಿದರು. ಮತ್ತೆ ಕೆಲವರು ನಾನಾ ಕಾರಣಗಳಿಂದಾಗಿ ಸಾಮಾನ್ಯವಾದ ಕ್ಯಾಶುವಲ್‌ವೇರ್‌ನಲ್ಲೆ ಕಾಣಿಸಿಕೊಂಡು ಸಂಭ್ರಮಿಸಿದರು. ಹಾಗಾದಲ್ಲಿ, ಇಲ್ಲಿಯವರೆಗೆ ಯಾರ್ಯಾರು ಹೇಗೆಲ್ಲಾ ಕಾಣಿಸಿಕೊಂಡರು ಎಂಬುದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

ಸ್ಯಾಂಡಲ್‌ವುಡ್‌ ತಾರೆಯರ ಸಂಭ್ರಮ

ಸ್ಯಾಂಡಲ್‌ವುಡ್‌ನಲ್ಲಿ ಮೊದಲಿನಿಂದಲೂ ಈ ಹಬ್ಬವನ್ನು ಆಚರಿಸುವವರು ಕೊಂಚ ಕಡಿಮೆಯೇ!
ಇನ್ನು, ಈ ಬಾರಿ ನಟ ಧನಂಜಯ ಅವರು ತಮ್ಮ ಸಹೋದರಿಯರೊಂದಿಗೆ ಆಚರಿಸಿದ್ದಾರೆ. ಸುಂದರವಾದ ಫೋಟೋವನ್ನು ಕೂಡ ಅಪ್‌ಲೋಡ್‌ ಮಾಡಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿ ಕಾರ್ತೀಕ್‌, ತಂಗಿಯ ಜೊತೆ ಕಾಣಿಸಿಕೊಂಡಿದ್ದಾರೆ. ನಟಿ ರಕ್ಷಿತಾ ಪ್ರೇಮ್‌ ತಮ್ಮ ಸಹೋದರನೊಂದಿಗೆ ಆಚರಿಸಿದ್ದನ್ನು ಹೇಳಿಕೊಂಡಿದ್ದಾರೆ. ಎಂದಿನಂತೆ ನಟ ಯಶ್‌ಗೆ ಸಹೋದರಿಯ ರಾಖಿ ಈಗಾಗಲೇ ತಲುಪಿದೆಯಂತೆ. ಹೀಗೆ ಸೆಲೆಬ್ರೆಟಿಗಳೆಲ್ಲರೂ ನಾನಾ ಬಗೆಯಲ್ಲಿ ಆಚರಿಸಿಕೊಂಡಿದ್ದಾರೆ.

ವೆರೈಟಿ ಔಟ್‌ಫಿಟ್ಸ್‌ನಲ್ಲಿ ಬಾಲಿವುಡ್‌ ಸೆಲೆಬ್ರೆಟಿಗಳ ಆಚರಣೆ

ರಾಖಿ ಹಬ್ಬವನ್ನು ಕರಾರುವಕ್ಕಾಗಿ ಆಚರಿಸುವ ಬಾಲಿವುಡ್‌ ಸೆಲೆಬ್ರೆಟಿಗಳಲ್ಲಿ ಬಹುತೇಕರು ಎಥ್ನಿಕ್‌ವೇರ್‌ಗಳಲ್ಲೆ ಮಿಂಚಿದ್ದಾರೆ. ನಟ ಅರ್ಜುನ್‌ ಕಪೂರ್‌ ತನ್ನ ಮೂವರು ಸಹೋದರಿಯರ ಕೈಗಳಲ್ಲೂ ರಾಖಿ ಕಟ್ಟಿಸಿಕೊಂಡರೇ, ನಟಿ ಸಾರಾ ಅಲಿ ಖಾನ್‌ ಸನ್‌ ಕಲರ್‌ನ ಸಲ್ವಾರ್‌ ಸೆಟ್‌ನಲ್ಲಿ ಕಾಣಿಸಿಕೊಂಡು, ತಮ್ಮ ಮೂವರು ಸಹೋದರರಿಗೆ ರಾಖಿ ಕಟ್ಟಿದ್ದಾರೆ. ಇನ್ನುಳಿದಂತೆ, ನಟ ಕಪಿಲ್‌ಶರ್ಮಾ, ಸಲ್ಮಾನ್‌ ಖಾನ್‌ ತಂಗಿ ಅರ್ಪಿತಾ, ರಣಬೀರ್‌ ಕಪೂರ್‌ ಸಹೋದರಿ ರಿದಿಮ್ಮಾ, ನಟಿ ಶನಾಯಾ ಕಪೂರ್‌, ನಟ ಕುನಾಲ್‌ ಕಪೂರ್‌ ಸೇರಿದಂತೆ ಈಗಾಗಲೇ ನಾನಾ ಸೆಲೆಬ್ರೆಟಿಗಳು ಫೆಸ್ಟಿವ್‌ ಸೀಸನ್‌ನ ಎಥ್ನಿಕ್‌ವೇರ್‌ ಧರಿಸಿ ಆಚರಿಸಿದ್ದಾರೆ. ಹಿರಿಯ ಕ್ರಿಕೆಟಿಗರಾದ ವೆಂಕಟೇಶ್‌ ಪ್ರಸಾದ್‌ ಕೂಡ ಟ್ರೆಡಿಷನಲ್‌ ಆಗಿ ರಾಖಿ ಹಬ್ಬ ಸಂಭ್ರಮಿಸಿದ್ದಾರೆ. ಇದಕ್ಕೆ ಅವರು ಅಪ್‌ಲೋಡ್‌ ಮಾಡಿರುವ ವಿಡಿಯೋ ಹಾಗೂ ಫೋಟೋಗಳೇ ಸಾಕ್ಷಿ. ಇದೇ ರೀತಿ ಫ್ಯಾಷನ್‌ ಲೋಕದ ಸೆಲೆಬ್ರೆಟಿಗಳು ಕೂಡ ತಮ್ಮ ಸಹೋದರ-ಸಹೋದರಿಯರೊಂದಿಗೆ ಟ್ರೆಂಡಿ ಡಿಸೈನರ್‌ವೇರ್‌ ಧರಿಸಿ ಆಚರಿಸಿದ್ದಾರೆ. ದೂರದ ಊರಿನಲ್ಲಿರುವವರು ಮಾತ್ರ ಹಳೆಯ ಫೋಟೋಗಳನ್ನು ಹಂಚಿಕೊಂಡು ನೆನಪಿಸಿಕೊಂಡಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Contrast Dupatta Fashion: ಶ್ರಾವಣ ಮಾಸದಲ್ಲಿ ಟ್ರೆಂಡಿಯಾದ ಕಾಂಟ್ರಾಸ್ಟ್ ದುಪಟ್ಟಾ ಫ್ಯಾಷನ್‌

Contrast dupatta fashion: ಈ ಶ್ರಾವಣ ಮಾಸದಲ್ಲಿ ಕಾಂಟ್ರಾಸ್ಟ್ ಕಲರ್‌ನ ದುಪಟ್ಟಾ ಧರಿಸುವ ಫ್ಯಾಷನ್‌ ಟ್ರೆಂಡಿಯಾಗಿದೆ. ಸಿಂಪಲ್‌ ಸಲ್ವಾರ್ ಕಮೀಜ್‌ಗೆ ಮಾತ್ರವಲ್ಲ, ಗ್ರ್ಯಾಂಡ್‌ ಲುಕ್‌ ನೀಡುವ ಕುರ್ತಾ-ಅನಾರ್ಕಲಿ ಚೂಡಿದಾರ್‌ ಸೆಟ್‌ಗಳಿಗೂ ಜೊತೆಯಾಗಿವೆ. ಕಾಂಟ್ರಾಸ್ಟ್ ದುಪಟ್ಟಾ ಸ್ಟೈಲಿಂಗ್‌ ಹೇಗೆ? ಆಯ್ಕೆ ಹೇಗೆ? ಈ ಕುರಿತಂತೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Contrast dupatta fashion
ಚಿತ್ರಗಳು: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಶ್ರಾವಣ ಮಾಸದಲ್ಲಿ (Contrast dupatta fashion) ಕಾಂಟ್ರಾಸ್ಟ್ ದುಪಟ್ಟಾ ಫ್ಯಾಷನ್‌ ಟ್ರೆಂಡಿಯಾಗಿದೆ. ಪ್ರತಿದಿನ ಧರಿಸುವ ಸಿಂಪಲ್‌ ಸಲ್ವಾರ್ ಕಮೀಜ್‌ಗೆ ಮಾತ್ರವಲ್ಲ, ಗ್ರ್ಯಾಂಡ್‌ ಲುಕ್‌ ನೀಡುವ ಕುರ್ತಾ-ಅನಾರ್ಕಲಿ ಚೂಡಿದಾರ್‌ ಸೆಟ್‌ಗಳೊಂದಿಗೂ ಇವು ಕಾಣಿಸಿಕೊಂಡಿವೆ.

Contrast dupatta fashion

ನ್ಯೂ ಕಾನ್ಸೆಪ್ಟ್‌ನಲ್ಲಿ ಕಾಂಟ್ರಾಸ್ಟ್ ಕಲರ್‌ನ ದುಪಟ್ಟಾ ಫ್ಯಾಷನ್‌

“ಕಾಂಟ್ರಾಸ್ಟ್ ಕಲರ್‌ ದುಪಟ್ಟಾ ಧರಿಸುವ ಫ್ಯಾಷನ್‌ ಇವತ್ತಿನದಲ್ಲ! ಬದಲಿಗೆ ಮೊದಲಿನಿಂದಲೂ ಇದೆ. ಆದರೆ, ಹೊಸ ಕಾನ್ಸೆಪ್ಟ್ ಫ್ಯಾಷನ್‌ ಬರುತ್ತಿದ್ದಂತೆ ಆಗಾಗ್ಗೆ ಈ ಕಾನ್ಸೆಪ್ಟ್ ಮರೆಯಾಗಿ ಮತ್ತೊಮ್ಮೆ ಹೊಸ ಥೀಮ್‌ ಅಥವಾ ಸ್ಟೈಲಿಂಗ್‌ನೊಂದಿಗೆ ಮರುಕಳಿಸುತ್ತವೆ. ಇದಕ್ಕೆ ಪೂರಕ ಎಂಬಂತೆ, ಈ ಸಾಲಿನಲ್ಲಿ, ಅದರಲ್ಲೂ ಫೆಸ್ಟಿವ್‌ ಸೀಸನ್‌ ಆದ ಶ್ರಾವಣ ಮಾಸದಲ್ಲಿ ಈ ಕಾನ್ಸೆಪ್ಟ್‌ ಮತ್ತೊಮ್ಮೆ ರೀ ಎಂಟ್ರಿ ನೀಡಿದೆ” ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ. ಅವರ ಪ್ರಕಾರ, ಕಾಂಟ್ರಾಸ್ಟ್ ದುಪಟ್ಟಾ, ಧರಿಸುವ ಉಡುಪನ್ನು ಹೈಲೈಟ್‌ ಮಾಡುತ್ತದೆ ಎನ್ನುತ್ತಾರೆ.

Contrast dupatta fashion

ಕಾಂಟ್ರಾಸ್ಟ್ ಕಲರ್‌ ದುಪಟ್ಟಾ ಫ್ಯಾಷನ್‌

ಕೆಲವು ಕಾಲ ಮಾನೋಕ್ರೋಮ್‌ ಅಥವಾ ಒಂದೇ ಶೇಡ್‌ನ ದುಪಟ್ಟಾ ಧರಿಸುವ ಕ್ರೇಝ್‌ ಹಾಗೂ ಫ್ಯಾಷನ್‌ ಸಖತ್‌ ಟ್ರೆಂಡಿಯಾಗಿತ್ತು. ಇದೀಗ ಇದಕ್ಕೆ ತದ್ವಿರುದ್ಧವೆಂಬಂತೆ, ಕಾಂಟ್ರಾಸ್ಟ್ ದುಪಟ್ಟಾ ಫ್ಯಾಷನ್‌ ಎಂಟ್ರಿ ನೀಡಿದೆ. ಧರಿಸುವ ಉಡುಪಿಗೂ ಹಾಗೂ ಡಿಸೈನರ್‌ವೇರ್‌ಗೂ ಯಾವುದೇ ಸಂಬಂದಂಧವಿಲ್ಲದ ಸ್ಟೈಲಿಂಗ್‌ ಈ ಕಾಂಟ್ರಾಸ್ಟ್ ದುಪಟ್ಟಾ ಧರಿಸುವ ಫ್ಯಾಷನ್‌ನಲ್ಲಿದೆ ಎನ್ನಬಹುದು. ಉದಾಹರಣೆಗೆ., ಕ್ರೀಮ್‌ ಶೇಡ್‌ನ ಸಲ್ವಾರ್‌ ಅಥವಾ ಚೂಡಿದಾರ್‌ ಸೆಟ್‌ಗೆ ಗ್ರ್ಯಾಂಡ್‌ ಲುಕ್‌ ನೀಡುವ ಪಿಂಕ್‌ ಡಿಸೈನರ್‌ ದುಪಟ್ಟಾ, ಬ್ಲ್ಯಾಕ್‌ ಸಲ್ವಾರ್‌ ಸೂಟ್‌ಗೆ ಕ್ರೀಮ್‌, ಬ್ಲ್ಯೂ ಚೂಡಿದಾರ್‌ ಸೆಟ್‌ಗೆ ರೆಡ್‌ ಶೇಡ್‌ ದುಪಟ್ಟಾ, ಮರೂನ್‌ ಉಡುಪಿಗೆ ಸನ್‌ ಕಲರ್‌ ಅಥವಾ ಹಳದಿ ದುಪಟ್ಟಾ ಹೀಗೆ ಡಿಸೈನರ್‌ವೇರ್‌ನ ವಿರುದ್ಧ ಕಲರ್‌ನ ದುಪಟ್ಟಾಗಳು ಜೊತೆಯಾಗಿವೆ. ರೀ ಎಂಟ್ರಿ ನೀಡಿ ಟ್ರೆಂಡಿಯಾಗಿವೆ ಎನ್ನುತ್ತಾರೆ ಡಿಸೈನರ್‌ ಜಾನ್‌ ಹಾಗೂ ಸಾಶಿ.

Contrast dupatta fashion

ಮಿಕ್ಸ್ ಮ್ಯಾಚ್‌ ಸ್ಟೈಲಿಂಗ್‌

ಕಾಂಟ್ರಾಸ್ಟ್ ಕಲರ್‌ನ ದುಪಟ್ಟಾಗಳೊಂದಿಗೆ ಇದೀಗ ಡಿಸೈನರ್‌ವೇರ್‌ಗಳು ಆಗಮಿಸುತ್ತಿವೆ. ಆದರೆ, ನಿಮ್ಮ ಬಳಿ ಇರುವ ಹಳೆಯ ಔಟ್‌ಫಿಟ್‌ಗಳಿಗೂ ಈ ಫ್ಯಾಷನ್‌ ಫಾಲೋ ಮಾಡಬಹುದು. ಇದಕ್ಕಾಗಿ ಮಿಕ್ಸ್ ಮ್ಯಾಚ್‌ ಸ್ಟೈಲಿಂಗ್‌ ಮಾಡಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ದಾಮಿನಿ.

ಇದನ್ನೂ ಓದಿ: Nail Extension Beauty Trend: ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾದ ನೇಲ್ ಎಕ್ಸ್‌ಟೆನ್ಷನ್ ಕಾನ್ಸೆಪ್ಟ್

ಕಾಂಟ್ರಾಸ್ಟ್ ಕಲರ್‌ ದುಪಟ್ಟಾ ಮಿಕ್ಸ್ ಮ್ಯಾಚ್‌ ಮಾಡುವುದು ಹೀಗೆ

  • ಎಲ್ಲದಕ್ಕೂ ಹೊಂದುವಂತಹ ಎದ್ದು ಕಾಣುವಂತಹ ಮಲ್ಟಿ ಶೇಡ್‌ನ ದುಪಟ್ಟಾ ಆಯ್ಕೆ ಮಾಡಿ ಖರೀದಿಸಿ.
  • ಲೈಟ್‌ ಕಲರ್‌ ಸಲ್ವಾರ್‌ ಸೂಟ್‌ಗಳಿಗೆ ಡಾರ್ಕ್‌ ಕಲರ್‌ನ ದುಪಟ್ಟಾ ಧರಿಸಿ.
  • ಮಾರುಕಟ್ಟೆಯಲ್ಲಿ ನಾನಾ ಬಗೆಯ ಮಿಕ್ಸ್ ಮ್ಯಾಚ್‌ ದುಪಟ್ಟಾ ದೊರೆಯುತ್ತದೆ. ಆರಿಸಿ, ಖರೀದಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Nail Extension Beauty Trend: ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾದ ನೇಲ್ ಎಕ್ಸ್‌ಟೆನ್ಷನ್ ಕಾನ್ಸೆಪ್ಟ್

ಮಹಿಳೆಯರ ಬ್ಯೂಟಿ ಟ್ರೆಂಡ್‌ನಲ್ಲಿ (Nail Extension Beauty Trend) ತೀರಾ ಅಪರೂಪವಾಗಿದ್ದ ನೇಲ್ ಎಕ್ಸ್‌ಟೆನ್ಷನ್ ಕಾನ್ಸೆಪ್ಟ್ ಇದೀಗ ತೀರಾ ಸಾಮಾನ್ಯವಾಗತೊಡಗಿದೆ. ಇದಕ್ಕೆ ಪೂರಕ ಎಂಬಂತೆ, ಹುಡುಗಿಯರು ಆಗಾಗ್ಗೆ ನೇಲ್ ಲುಕ್ ಬದಲಿಸುವುದು ಹೆಚ್ಚಾಗಿದೆ. ಇದೇನಿದು ನೇಲ್ ಎಕ್ಸ್‌ಟೆನ್ಷನ್? ಯಾಕೆ ಟ್ರೆಂಡಿಯಾಗಿದೆ ಎಂಬುದರ ಬಗ್ಗೆ ನೇಲ್ ಡಿಸೈನರ್ಸ್ ಸಿಂಪಲ್ಲಾಗಿ ವಿವರಿಸಿದ್ದಾರೆ.

VISTARANEWS.COM


on

ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಿಂದೆಲ್ಲಾ ಅಪರೂಪವಾಗಿದ್ದ ನೇಲ್ ಎಕ್ಸ್​ಟೆನ್ಷನ್ ಬ್ಯೂಟಿ (Nail Extension Beauty Trend) ಕಾನ್ಸೆಪ್ಟ್ ಇದೀಗ ಟ್ರೆಂಡಿಯಾಗಿದೆ. ಕೇವಲ ಎಂಟರ್‌ಟೈನ್​ಮೆಂಟ್ ಹಾಗೂ ಸೆಲೆಬ್ರೆಟಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ಬ್ಯೂಟಿ ಕಾನ್ಸೆಪ್ಟ್, ಇತ್ತೀಚಿನ ದಿನಗಳಲ್ಲಿ, ಕಾಲೇಜು ಹುಡುಗಿಯರಿಂದಿಡಿದು, ಎಲ್ಲಾ ವಯಸ್ಸಿನ ಮಹಿಳೆಯರನ್ನು ಆಕರ್ಷಿಸತೊಡಗಿದೆ. ಕೈಗಳಿಗೆ ಜೊತೆಯಾಗಿದೆ. ಸೌಂದರ್ಯ ಹೆಚ್ಚಿಸಿದೆ. ಅದರಲ್ಲೂ, ಫೋಟೋಶೂಟ್‌ಗಳಲ್ಲಿ ಅತ್ಯಾಕರ್ಷಕವಾಗಿ ತಮ್ಮ ಕೈಗಳನ್ನು ಬಿಂಬಿಸಲು, ಇಂದು ಮದುವೆಯಾಗುವ ಹೆಣ್ಣು ಮಕ್ಕಳು, ಅತಿ ಹೆಚ್ಚಾಗಿ ನೇಲ್ ಎಕ್ಸ್‌ಟೆನ್ಷನ್ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ನೇಲ್ ಡಿಸೈನರ್ಸ್.

Variety of nail extensions that are on trend

ಟ್ರೆಂಡ್‌ನಲ್ಲಿರುವ ವೆರೈಟಿ ನೇಲ್ ಎಕ್ಸ್‌ಟೆನ್ಷನ್ಸ್

ಅಕ್ರಾಲಿಕ್ ನೇಲ್ಸ್, ಜೆಲ್ ನೇಲ್ಸ್, ಡಿಪ್ ಪೌಡರ್ ನೇಲ್ಸ್ ಹಾಗೂ ನೇಲ್ ವ್ರಾಪ್ ಇದೀಗ ಅತಿ ಹೆಚ್ಚು ಟ್ರೆಂಡ್‌ನಲ್ಲಿರುವ ನೇಲ್ ಎಕ್ಸ್‌ಟೆನ್ಷನ್ಸ್ ಕೃತಕ ಉಗುರುಗಳು. ಅಂದಹಾಗೆ, ಇವು ಟ್ರೆಂಡಿಯಾಗಲು ಪ್ರಮುಖ ಕಾರಣ, ಕಡಿಮೆ ಬೆಲೆಯಲ್ಲಿ ದೊರಕುತ್ತಿರುವುದು. ಕೇವಲ 500ರೂ.ಗಳಿಂದ ಆರಂಭವಾಗುವ ನೇಲ್ ಎಕ್ಸ್‌ಟೆನ್ಷನ್ಸ್ ಮಾಡುವ ಉಗುರುಗಳು ಇದೀಗ ಫ್ಯಾನ್ಸಿ ಶಾಪ್‌ಗಳಲ್ಲಿ, ಬ್ಯೂಟಿ ಪಾಲರ್​ಗಳಲ್ಲೂ ದೊರಕುತ್ತವೆ. ಕೊಂಡಲ್ಲಿ, ಬ್ಯೂಟಿ ಎಕ್ಸ್‌ಪರ್ಟ್ಸ್‌ ಬಳಿ ಅಂಟಿಸಿಕೊಳ್ಳಬಹುದು ಎನ್ನುತ್ತಾರೆ ನೇಲ್ ಡಿಸೈನರ್. ಅವುಗಳ ಫಿನಿಶಿಂಗ್ ಚೆನ್ನಾಗಿ ಬೇಕು ಎನ್ನುವವರು ನೇಲ್ ಡಿಸೈನರ್​ಗಳ ಬಳಿ ತೆರಳಿ ಸಾವಧಾನದಿಂದ ಹಾಕಿಸಿಕೊಳ್ಳುತ್ತಾರೆ ಎನ್ನುತ್ತಾರೆ ಅವರು.

Extension on natural nail

ನ್ಯಾಚುರಲ್ ಉಗುರಿನ ಮೇಲೆ ಎಕ್ಸ್​ಟೆನ್ಷನ್

ನಿಮ್ಮ ಉಗುರು ಹೆಚ್ಚು ಬೆಳೆಯುತ್ತಿಲ್ಲವೇ ನೋಡಲು ಆಕರ್ಷಕವಾಗಿಲ್ಲವೇ! ಆಗಾಗ್ಗೆ ತುಂಡಾಗುತ್ತಿದೆಯೇ! ಇದಕ್ಕೆ ಯೋಚಿಸುವುದು ಬೇಡ! ಆರ್ಟಿಫಿಶಿಯಲ್ ವಿಧಾನದಿಂದ ನೇಲ್ ಎಕ್ಸ್‌ಟೆನ್ಷನ್ಸ್ ಮಾಡುವುದರಿಂದ ಸುಂದರವಾಗಿಸಬಹುದು. ಮೊದಲೇ ಡಿಸೈನ್ ಮಾಡಿದ ಕೃತಕ ಉಗುರುಗಳನ್ನು ನಾನಾ ಪ್ರಕಾರಗಳಿಂದ ನೈಜ ಉಗುರುಗಳ ಮೇಲೆ ಅಂಟಿಸುವುದೇ ನೇಲ್ ಎಕ್ಸ್‌ಟೆನ್ಷನ್‌ ಎಂದು ಸಿಂಪಲ್ಲಾಗಿ ವಿವರಿಸುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ರೀಟಾ. ಅವರ ಪ್ರಕಾರ, ಮೊದಲೆಲ್ಲಾ ಈ ವಿಧಾನ, ಕೇವಲ ಶ್ರೀಮಂತರಿಗೆ ಹಾಗೂ ಸೆಲೆಬ್ರೆಟಿಗಳಿಗೆ ಮಾತ್ರ ಎಂಬಂತಿತ್ತು. ಇದೀಗ ನಾಯಿಕೊಡೆಗಳಂತೆ ನೇಲ್ ಬಾರ್‌ಗಳು ಬ್ಯೂಟಿ ಪಾರ್ಲರ್‌ಗಳಲ್ಲೂ ಇವು ಲಭ್ಯವಿರುವುದರಿಂದ ಇದರ ಬೆಲೆ ಕಡಿಮೆಯಾಗಿದೆ. ಪರಿಣಾಮ, ಟ್ರೆಂಡಿಯಾಗಿದೆ.

Not permanent remember

ಪರ್ಮನೆಂಟ್ ಅಲ್ಲ! ನೆನಪಿರಲಿ

ಇದು ಪರ್ಮನೆಂಟ್ ಅಲ್ಲ ಎಂಬುದು ನೆನಪಿರಲಿ. ಉಗುರು ಬೆಳೆದಂತೆ ಅಂಟಿಸಿದ ಚಿತ್ತಾರವಿರುವ ಉಗುರು ಕೂಡ ಬಾಗುತ್ತದೆ. ಹೆಚ್ಚೆಂದರೇ ಏನೂ ಕೆಲಸ ಮಾಡದಿದ್ದಲ್ಲಿ ಒಂದೆರೆಡು ವಾರ ಉಳಿಯಬಹುದು ಎನ್ನುತ್ತಾರೆ ನೇಲ್ ಡಿಸೈನರ್ಸ್.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Eye Makeup Care: ಐ ಶ್ಯಾಡೋ ಹಚ್ಚುವ ಮುನ್ನ 5 ಸಂಗತಿ ತಿಳಿದಿರಲಿ

Continue Reading
Advertisement
puttur stabbing case
ಕ್ರೈಂ5 mins ago

Stabbing Case: ಪುತ್ತೂರು ನಗರ ಉದ್ವಿಗ್ನತೆಗೆ ಕಾರಣವಾದ ವಿದ್ಯಾರ್ಥಿನಿಗೆ ಬ್ಲೇಡ್‌ ಇರಿತ ಪ್ರಕರಣ; ನಿಜಕ್ಕೂ ನಡೆದದ್ದೇನು?

Cincinnati Open
ಕ್ರೀಡೆ35 mins ago

ATP Cincinnati Open: ಚೊಚ್ಚಲ ಪ್ರಶಸ್ತಿ ಗೆದ್ದ ಜಾನಿಕ್‌ ಸಿನ್ನರ್‌, ಅರಿನಾ ಸಬಲೆಂಕಾ

students death
ಕ್ರೈಂ43 mins ago

Students Death: ಇಬ್ಬರು ಮಕ್ಕಳ ಜೀವ ಕಸಿದ ಮೊಬೈಲ್;‌ ತಂದೆ- ತಾಯಿ ಫೋನ್ ಕೊಡದಿದ್ದುದಕ್ಕೆ ಆತ್ಮಹತ್ಯೆ

Agritech India 2024
ಬೆಂಗಳೂರು1 hour ago

Agritech India 2024: ಬೆಂಗಳೂರಿನಲ್ಲಿ ʼಅಗ್ರಿಟೆಕ್ ಇಂಡಿಯಾ 2024ʼಕ್ಕೆ ಆ. 22ರಂದು ಚಾಲನೆ

ajmer pocso case
ಕ್ರೈಂ1 hour ago

Ajmer Pocso Case: 32 ವರ್ಷ ಹಿಂದಿನ ಅಜ್ಮೀರ್‌ ಪೋಕ್ಸೋ ಕೇಸ್‌ನಲ್ಲಿ 6 ಮಂದಿಗೆ ಜೀವಾವಧಿ ಶಿಕ್ಷೆ

Imran Khan
ವಿದೇಶ1 hour ago

Imran Khan: ಆಕ್ಸ್‌ಫರ್ಡ್ ವಿವಿ ಕುಲಪತಿಯಾಗಲು ಅರ್ಜಿ ಸಲ್ಲಿಸಿದ ಪಾಕ್‌ ಮಾಜಿ ಪ್ರಧಾನಿ!

Reliance Jio
ಕರ್ನಾಟಕ2 hours ago

Reliance Jio: ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದೇ ಸಂಪರ್ಕದಲ್ಲಿ ನೋಡಿ ಎರಡು ಟಿವಿ!

Kannada New Movie
ಕರ್ನಾಟಕ2 hours ago

Kannada New Movie: ಟೀಸರ್‌ನಲ್ಲೇ ಕುತೂಹಲ ಮೂಡಿಸಿದೆ ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಚಿತ್ರ

EV charging
ಕರ್ನಾಟಕ2 hours ago

EV Charging: ಕರ್ನಾಟಕವೇ ಕಿಂಗ್;‌ ಅತಿ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ರಾಜ್ಯ!

What is Lateral Entry?
ದೇಶ2 hours ago

What is Lateral Entry?: ಏನಿದು ಲ್ಯಾಟರಲ್ ಎಂಟ್ರಿ ವಿವಾದ? ಕಾಂಗ್ರೆಸ್‌ ಆರೋಪವೇನು? ಬಿಜೆಪಿಯ ವಾದವೇನು?

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌