IND vs ENG Test Series 2025: ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಸರಣಿ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ - Vistara News

ಕ್ರೀಡೆ

IND vs ENG Test Series 2025: ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಸರಣಿ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

IND vs ENG Test Series 2025:5 ಪಂದ್ಯಗಳ ಟೆಸ್ಟ್​ ಸರಣಿ ಲೀಡ್ಸ್‌, ಬರ್ಮಿಂಗ್ಹ್ಯಾಮ್‌, ಲಾರ್ಡ್ಸ್, ಮ್ಯಾಂಚೆಸ್ಟರ್ ಮತ್ತು ಓವಲ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಪ್ರಕಟಿಸಿದೆ.

VISTARANEWS.COM


on

IND vs ENG Test Series 2025
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಪುರುಷರ ಕ್ರಿಕೆಟ್ ತಂಡವು ಐದು ಪಂದ್ಯಗಳ ಟೆಸ್ಟ್(IND vs ENG Test Series 2025) ಸರಣಿಗಾಗಿ ಮುಂದಿನ ವರ್ಷ ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. ಸರಣಿಯ ಮೊದಲ ಪಂದ್ಯ ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಪ್ರಾರಂಭವಾಗಲಿದೆ. ಜೂನ್​ನಲ್ಲಿ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಬಳಿಕ ಈ ಸರಣಿ ಆರಂಭವಾಗಲಿದೆ. ಇತ್ತಂಡಗಳಿಗೂ ಇದು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್​ ಚಾಂಪಿನ್​ಶಿಪ್​ ಋತುವಿನ(2025-27) ಮೊದಲ ಸರಣಿಯಾಗಲಿದೆ.

5 ಪಂದ್ಯಗಳ ಟೆಸ್ಟ್​ ಸರಣಿ ಲೀಡ್ಸ್‌, ಬರ್ಮಿಂಗ್ಹ್ಯಾಮ್‌, ಲಾರ್ಡ್ಸ್, ಮ್ಯಾಂಚೆಸ್ಟರ್ ಮತ್ತು ಓವಲ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಪ್ರಕಟಿಸಿದೆ. ಬರೋಬ್ಬರಿ ಒಂದು ತಿಂಗಳ ಕಾಲ ಈ ಸರಣಿ ನಡೆಯಲಿದೆ.


2007 ರಲ್ಲಿ ಪಟೌಡಿ ಟ್ರೋಫಿಯಲ್ಲಿ ಮೈಕೆಲ್ ವಾನ್ ನೇತೃತ್ವದ ತಂಡವನ್ನು ಭಾರತ ಸೋಲಿಸಿದ ಬಳಿಕ ಇಂಗ್ಲೆಂಡ್‌ನಲ್ಲಿ ಇದುವರೆಗೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆ ಪ್ರವಾಸದ ಸಮಯದಲ್ಲಿ, ರಾಹುಲ್ ದ್ರಾವಿಡ್ ನೇತೃತ್ವದ ಭಾರತವು ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಸರಣಿ ಗೆದ್ದುಕೊಂಡಿತ್ತು. ಒಟ್ಟು ಮೂರು ಪಂದ್ಯಗಳ ಸರಣಿ ಇದಾಗಿತ್ತು. 2 ಪಂದ್ಯಗಳು ಡ್ರಾ ಆಗಿದ್ದವು.

ಇದನ್ನೂ ಓದಿ IND vs ENG Semi Final: ಇಂಗ್ಲೆಂಡ್​ ಮಣಿಸಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

2021-22ರ ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತ ತಂಡ ಲಾರ್ಡ್ಸ್ ಮತ್ತು ಓವಲ್‌ನಲ್ಲಿ ಆಡಿದ ಎರಡನೇ ಮತ್ತು ನಾಲ್ಕನೇ ಟೆಸ್ಟ್ ಗೆಲುವು ಸಾಧಿಸಿದ್ದರೂ, ಲೀಡ್ಸ್ ಮತ್ತು ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಸೋಲು ಕಂಡ ಕಾರಣ ಸರಣಿ 2-2 ಅಂತರದಿಂದ ಸಮಬಲಗೊಂಡಿತು. ಒಂದು ಪಂದ್ಯ ಡ್ರಾ ಗೊಂಡಿತ್ತು.

ಭಾರತವು ಇಲ್ಲಿಯವರೆಗೆ ಆಡಿರುವ 2 ಆವೃತ್ತಿಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ಪ್ರವೇಶಿಸಿತ್ತು. ಲಂಡನ್​ನಲ್ಲಿ ನಡೆದಿದ್ದ ಈ 2 ಫೈನಲ್​ನಲ್ಲಿಯೂ​ ಭಾರತ ಕ್ರಮವಾಗಿ ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಸದ್ಯ ಮೂರನೇ ಆವೃತ್ತಿಯಲ್ಲಿ ಭಾರತ ಫೈನಲ್​ ಪ್ರವೇಶಿಸಬೇಕಿದ್ದರೆ, ಭಾರತ 10 ಟೆಸ್ಟ್​ ಪಂದ್ಯಗಳ ಪೈಕಿ ಕನಿಷ್ಠ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ನೇರವಾಗಿ ಫೈನಲ್​ ಪ್ರವೇಶಿಸಲಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದ ಸಾಧನೆ ಮಾಡಲಿದೆ.

ವೇಳಾಪಟ್ಟಿ ಹೀಗಿದೆ

ಪಂದ್ಯಗಳುದಿನಾಂಕತಾಣ
ಮೊದಲ ಟೆಸ್ಟ್​ಜೂನ್​ 20-24ಹೆಡಿಂಗ್ಲಿ, ಲೀಡ್ಸ್
ದ್ವಿತೀಯ ಟೆಸ್ಟ್​ಜುಲೈ 2-6ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್
ಮೂರನೇ ಟೆಸ್ಟ್​ಜುಲೈ 10-14ಲಾರ್ಡ್ಸ್, ಲಂಡನ್
ನಾಲ್ಕನೇ ಟೆಸ್ಟ್ಜುಲೈ 23-27ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
ಐದನೇ ಟೆಸ್ಟ್​July 31-August 4ಓವಲ್, ಲಂಡನ್
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Archana Kamath: 24ನೇ ವಯಸ್ಸಿಗೆ ಟೇಬಲ್ ಟೆನಿಸ್​ಗೆ ವಿದಾಯ ಹೇಳಿದ ಕನ್ನಡತಿ, ಒಲಿಂಪಿಯನ್​ ಅರ್ಚನಾ ಕಾಮತ್

Archana Kamath:ಒಟ್ಟಾರೆ 129 ಪದಕ ಗೆದ್ದ ಸಾಧನೆ ಮಾಡಿದ ಅರ್ಚನಾ 22 ಅಂತಾರಾಷ್ಟ್ರೀಯ, 14 ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿ ಮಿಂಚಿದ್ದರು. 2015ರಲ್ಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಂದ ಪದಕವನ್ನು ಪಡೆದಿದ್ದಾರೆ.

VISTARANEWS.COM


on

Archana Kamath
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅಮೋಘ ಪ್ರದರ್ಶನ ತೋರಿದ್ದ ಭಾರತೀಯ ಮಹಿಳಾ ಟೇಬಲ್‌ ಟೆನಿಸ್‌(Table Tennis) ಆಟಗಾರ್ತಿ, ಕರ್ನಾಟಕದ ಅರ್ಚನಾ ಕಾಮತ್‌(Archana Kamath) ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಟೇಬಲ್​ ಟೆನಿಸ್​​ಗೆ ವಿದಾಯ ಹೇಳಿದ್ದಾರೆ(Archana Kamath retirement). 24ರ ಹರೆಯದ ಅರ್ಚನಾ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುತ್ತಿದ್ದು ಇದೇ ಕಾರಣಿದಿಂದ ಅವರು ಟೇಬಲ್​ ಟೆನಿಸ್​​ಗೆ ನಿವೃತ್ತಿ ಘೋಷಿಸಿದ್ದಾರೆ.

ಮಂಗಳೂರು ಮೂಲದ ವೈದ್ಯ ದಂಪತಿ ಪುತ್ರಿ ಅರ್ಚನಾ ಕಾಮತ್‌ ಅವರು ಭಾರತೀಯ ಮಹಿಳಾ ಟೇಬಲ್‌ ಟೆನಿಸ್​ನ ಉದಯೋನ್ಮುಖ ಪ್ರತಿಭೆಯಾಗಿ ಕಾಣಿಸಿಕೊಂಡಿದ್ದರು. ಆದರೆ, ವಿದ್ಯಾಭ್ಯಾಸದಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಟೇಬಲ್​ ಟೆನಿಸ್​​ಗೆ ವಿದಾಯ ಹೇಳಿದ್ದಾರೆ. ಅವರು ಈಗ ಇಂಟರ್‌ನ್ಯಾಶನಲ್‌ ರಿಲೇಶನ್ಸ್‌, ಸೆಕ್ಯೂರಿಟಿ ಆ್ಯಂಡ್‌ ಸ್ಟ್ರಾಟೆಜಿ ವಿಷಯದಲ್ಲಿ ಎಂ.ಎ. ಅಂತಿಮ ಸೆಮಿಸ್ಟರ್‌ ಓದುತ್ತಿದ್ದಾರೆ.

ಅರ್ಚನಾ ಅವರು ಕ್ರೀಡೆಯ ಜತೆಗೆ ಶೈಕ್ಷಣಿಕ ಜೀವನದಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.98.72 ಅಂಕದೊಂದಿಗೆ ರಾಜ್ಯಕ್ಕೆ 9ನೇ ರ್‍ಯಾಂಕ್‌ ಪಡೆದಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕ ಪಡೆದಿದ್ದ ಅವರು ಅರ್ಥಶಾಸ್ತ್ರದಲ್ಲಿ ಬಿ.ಎ. ಹಾನರ್ಸ್‌ ಪೂರೈಸಿದ್ದಾರೆ. ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತ ಮಹಿಳಾ ತಂಡ ಕ್ವಾರ್ಟರ್​ ಫೈನಲ್​ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕ್ವಾರ್ಟರ್​ ಫೈನಲ್​ ಅರ್ಚನಾ ಮಾತ್ರ ಭಾರತದ ಪರ ಗೆಲುವು ಸಾಧಿಸಿದ್ದರು. ಅವರು ಕ್ಸಿಯೋನಾ ಶಾನ್‌ಗೆ 11-6, 11-7, 11-7ರಿಂದ ಆಘಾತವಿಕ್ಕಿದ್ದರು. ಆದರೆ ತಂಡದ ಉಳಿದ ಆಟಗಾರ್ತಿಯರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಾರದ ಕಾರಣ ಅರ್ಚನಾ ಗೆಲುವು ವ್ಯರ್ಥವಾಗಿತ್ತು.

ಇದನ್ನೂ ಓದಿ Virat Kohli: ಐಪಿಎಲ್​ನ ನೆಚ್ಚಿನ ಎದುರಾಳಿ ತಂಡವನ್ನು ಹೆಸರಿಸಿದ ವಿರಾಟ್​ ಕೊಹ್ಲಿ

ಬಾರ್ಬಡೋಸ್‌ನಲ್ಲಿ 2014ರಲ್ಲಿ ನಡೆದಿದ್ದ ಐಟಿಟಿಎಫ್ ವರ್ಲ್ಡ್ ಕೆಡೆಟ್‌ ಚಾಲೇಂಜ್‌ನಲ್ಲಿ ಏಷ್ಯಾವನ್ನು ಪ್ರತಿನಿಧಿಸಿದ್ದ ಅರ್ಚನಾ ಅವರ ತಂಡ ಬೆಳ್ಳಿ ಪದಕ ಗೆದ್ದಿತ್ತು. 2016ರಲ್ಲಿ ಮೊರೊಕ್ಕೋದಲ್ಲಿ ನಡೆದ ಐಟಿಟಿಎಫ್ ಜೂನಿಯರ್‌ ಸರ್ಕ್ನೂಟ್‌ನಲ್ಲಿ ಅರ್ಚನಾ ಅವರು ಸಿಂಗಲ್ಸ್‌, ಡಬಲ್ಸ್‌ ಮತ್ತು ತಂಡವಾಗಿ ಆಡಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಒಟ್ಟಾರೆ 129 ಪದಕ ಗೆದ್ದ ಸಾಧನೆ ಮಾಡಿದ ಅರ್ಚನಾ 22 ಅಂತಾರಾಷ್ಟ್ರೀಯ, 14 ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿ ಮಿಂಚಿದ್ದರು. 2015ರಲ್ಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಂದ ಪದಕವನ್ನು ಪಡೆದಿದ್ದಾರೆ.

ಅರ್ಚನಾ ಕಾಮತ್​ ಅವರ ಕೋಚ್ ಅನ್ಶುಲ್ ಗಾರ್ಗ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾಲ್ಕು ವರ್ಷಗಳ ನಂತರ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವುದು ತುಂಬಾ ಕಷ್ಟದ ಕೆಲಸ. ಏಕೆಂದರೆ ಆಕೆ ಟಾಪ್-100 ರ‍್ಯಾಂಕ್ ಪಟ್ಟಿಯಲ್ಲಿಲ್ಲ. ಕಳೆದೆರಡು ತಿಂಗಳಿಂದ ಕಷ್ಟಪಟ್ಟು ದುಡಿಯುತ್ತಿದ್ದರೂ ವೃತ್ತಿಪರವಾಗಿ ಬೆಳೆಯಲು ಶ್ರಮಿಸಬೇಕಾಗಿದೆ. ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದ್ದಾಳೆ ಎಂದು ಹೇಳಿದರು.

Continue Reading

ಕ್ರೀಡೆ

UR Cristiano: ಯೂಟ್ಯೂಬ್​ ಚಾನೆಲ್ ಆರಂಭಿಸಿ ಕೆಲವೇ ಗಂಟೆಗಳಲ್ಲಿ ವಿಶ್ವ ದಾಖಲೆ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ

UR Cristiano: ಕ್ರಿಸ್ಟಿಯಾನೋ ರೊನಾಲ್ಡೊ ‘UR Cristiano’ ಎಂಬ ಯೂಟ್ಯೂಬ್ ಚಾನೆಲ್ ತೆರೆದಿದ್ದು, ತಮ್ಮ ಕುರಿತ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.

VISTARANEWS.COM


on

UR Cristiano
Koo

ದುಬೈ: ವಿಶ್ವಶ್ರೇಷ್ಠ ಫುಟ್ಬಾಲಿಗ, ಪೋರ್ಚುಗಲ್‌ ತಂಡದ ಫಾರ್ವರ್ಡ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಇದೀಗ ಪುಟ್ಬಾಲ್​ನಿಂದ ಹೊರತಾಗಿ ಬೇರೊಂದು ಕ್ಷೇತ್ರದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ರೊನಾಲ್ಡೊ ಯೂಟ್ಯೂಬ್​ ಚಾನೆಲ್​ ಒಂದನ್ನು ಆರಂಭಿಸಿದ್ದು, ಇದು ತೆರೆ ಕಂಡ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ 15 ಮಿಲಿಯನ್ ಗೂ ಅಧಿಕ ಸಬ್ ಸ್ಕ್ರೈಬ್​ಗಳನ್ನು (subscribers) ಹೊಂದುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಕ್ರಿಸ್ಟಿಯಾನೋ ರೊನಾಲ್ಡೊ ‘UR Cristiano’ ಎಂಬ ಯೂಟ್ಯೂಬ್ ಚಾನೆಲ್ ತೆರೆದಿದ್ದು, ತಮ್ಮ ಕುರಿತ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ಟ್ವಿಟರ್​ ಎಕ್ಸ್​ನಲ್ಲಿ ರೊನಾಲ್ಡೊ ಇದನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ, 15 ಮಿಲಿಯನ್ ಅಭಿಮಾನಿಗಳು ಯೂಟ್ಯೂಬ್‌ ಚಾನಲ್‌ಗೆ ಸಬ್‌ಸ್ಕ್ರೈಬ್‌ ಮಾಡಿದ್ದಾರೆ. ರೊನಾಲ್ಡೊ ಕಿರು ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದು, ಗೆಳತಿ ಮತ್ತು ಮಕ್ಕಳೊಂದಿಗೆ ವಿಡಿಯೋ ಮಾಡಿ ಪೋಸ್ಟ್‌ ಮಾಡಿದ್ದಾರೆ.

ಯೂಟ್ಯೂಬ್ ಚಾನೆಲ್​ ಆರಂಭಿಸಿದ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಮೊದಲ ಎರಡು ಗಂಟೆಗಳಲ್ಲೇ ರೊನಾಲ್ಡೊ ವಿಶ್ವ ದಾಖಲೆ ಬರೆದಿದ್ದು, ಯೂಟ್ಯೂಬ್​ನ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 1 ಮಿಲಿಯನ್ ಚಂದಾದಾರರನ್ನು ಗಳಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತ್ಯಂತ ವೇಗವಾಗಿ 1 ಮಿಲಿಯನ್ ಚಂದಾದಾರರನ್ನು ಗಳಿಸಿದ್ದು ಮಾತ್ರವಲ್ಲ, 24 ಗಂಟೆಗಳಲ್ಲಿ ರೊನಾಲ್ಡೊ ಅವರ ಯೂಟ್ಯೂಬ್ ಖಾತೆಯ ಚಂದಾದಾರರ ಸಂಖ್ಯೆ 10 ಮಿಲಿಯನ್‌ಗೆ ತಲುಪಿದೆ, ಇದು ಮತ್ತೊಂದು ವಿಶ್ವ ದಾಖಲೆಯಾಗಿದೆ. ಎಲ್ಲ ಗೋಲ್ಡನ್​, ಡೇಮಂಡ್​ ಮತ್ತು ಸಿಲ್ವರ್​ ಬಟನ್​ಗಳನ್ನು ಕೆಲವೇ ಗಂಟೆಗಳಲ್ಲಿ ಪಡೆದುಕೊಂಡಿದ್ದಾರೆ.

ಯೂಟ್ಯೂಬ್‌ನಲ್ಲಿ ವೇಗವಾಗಿ 10 ಮಿಲಿಯನ್ ಚಂದಾದಾರರನ್ನು ಪಡೆದ ದಾಖಲೆಯನ್ನು ಈ ಹಿಂದೆ ಹ್ಯಾಮ್ಸ್ಟರ್ ಕಾಂಬ್ಯಾಟ್ ಹೊಂದಿತ್ತು. ಈ ಮೈಲಿಗಲ್ಲನ್ನು ತಲುಪಲು ಈ ಚಾನಲ್ 7 ದಿನಗಳನ್ನು ತೆಗೆದುಕೊಂಡಿತ್ತು. ಆದರೆ ರೊನಾಲ್ಡೊ ಅವರ ಚಾನಲ್ ಕೆಲವೇ ಗಂಟೆಗಳಲ್ಲಿ ಈ ದಾಖಲೆಯನ್ನು ಪುಟಿಗಡ್ಡಿದೆ.

ಇದನ್ನೂ ಓದಿ Cristiano Ronaldo: ಕಿಂಗ್ಸ್ ಕಪ್ ಫೈನಲ್​ನಲ್ಲಿ ಸೋಲು; ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ಟಿಯಾನೊ ರೊನಾಲ್ಡೊ

ರೊನಾಲ್ಡೊ ಚಾನೆಲ್‌ ಆರಂಭಿಸಿದ ದಿನವೇ ಅವರ ಪಾರ್ಟ್ನರ್​ ಜಾರ್ಜಿನಾ ರೊಡ್ರಿಗಸ್ ಅವರೊಂದಿಗಿನ ರಸಪ್ರಶ್ನೆ ಗೇಮ್​ ಸೇರಿಂತೆ ಹಲವು ವೀಡಿಯೊಗಳನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೋಗಳು ಕೂಡ ಮಿಲಿಯನ್ಸ್​ಗಟ್ಟಲೆ ವೀಕ್ಷಣೆ ಕಾಣುತ್ತಿವೆ. ರೊನಾಲ್ಡೊ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ನೆಚ್ಚಿನ ಫುಟ್‌ಬಾಲ್ ಬಗ್ಗೆ ನಿರಂತರವಾಗಿ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರೊನಾಲ್ಡೊ ಅವರ ನೆಚ್ಚಿನ ವಿಷಯಗಳು, ಕುಟುಂಬ, ಆರೋಗ್ಯ, ಪೋಷಣೆ, ಶಿಕ್ಷಣ ಮತ್ತು ವೃತ್ತಿಜೀವನದ ಬಗ್ಗೆಯೂ ಮಾತನಾಡಲಿದ್ದಾರೆ ಎನ್ನಲಾಗಿದೆ.

Continue Reading

ಕ್ರಿಕೆಟ್

Neeraj Chopra: ಬ್ರ್ಯಾಂಡ್ ಮೌಲ್ಯದಲ್ಲಿ ಹಾರ್ದಿಕ್​ ಪಾಂಡ್ಯ ಹಿಂದಿಕ್ಕಿದ ನೀರಜ್​ ಚೋಪ್ರಾ

Neeraj Chopra: ಎಕನಾಮಿಕ್ ಟೈಮ್ಸ್ ಪ್ರಕಾರ, ಹಣಕಾಸು ಸಲಹಾ ಸಂಸ್ಥೆ ಕ್ರೋಲ್‌ನ ಅಂಕಿ ಅಂಶಗಳ ವರದಿಯ ಪ್ರಕಾರ ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಮೌಲ್ಯ 29.6 ದಶಲಕ್ಷ ಡಾಲರ್ ನಿಂದ 40 ದಶಲಕ್ಷ ಡಾಲರ್​ಗೆ ಏರಿಕೆಯಾಗಿದೆ.

VISTARANEWS.COM


on

Neeraj Chopra
Koo

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಜಾವೆಲಿನ್ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರ ಬ್ರಾಂಡ್ ಮೌಲ್ಯ ಬರೋಬ್ಬರಿ 330 ಕೋಟಿ ರೂ.ಗೆ ಜಿಗಿತ ಕಂಡಿದೆ. ಜತೆಗೆ ಶೂಟಿಂಗ್​ನಲ್ಲಿ ಅವಳಿ ಪದಕ ಗೆದ್ದ ಮನು ಭಾಕರ್(Manu Bhaker) ಮೌಲ್ಯ ಕೂಡ ಕೋಟಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಎಕನಾಮಿಕ್ ಟೈಮ್ಸ್ ಪ್ರಕಾರ, ಹಣಕಾಸು ಸಲಹಾ ಸಂಸ್ಥೆ ಕ್ರೋಲ್‌ನ ಅಂಕಿಅಂಶಗಳ ವರದಿಯ ಪ್ರಕಾರ ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಮೌಲ್ಯ 29.6 ದಶಲಕ್ಷ ಡಾಲರ್ ನಿಂದ 40 ದಶಲಕ್ಷ ಡಾಲರ್​ಗೆ ಏರಿಕೆಯಾಗಿದೆ. ಅಂದರೆ ಭಾರತೀಯ ರೂಪಾಯಿ ಪ್ರಕಾರ ಅವರ ಬ್ರ್ಯಾಂಡ್ ಮೌಲ್ಯ 330 ಕೋಟಿ ರೂ. ಆಗಿದೆ. ಇದು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ(hardik pandya) ಬ್ರ್ಯಾಂಡ್ ಮೌಲ್ಯಕ್ಕಿಂತ ಹೆಚ್ಚಾಗಿದೆ. ನೀರಜ್ ಭಾರತೀಯ ಕ್ರೀಡಾಪಟುಗಳಲ್ಲಿ ಅತ್ಯುನ್ನತ ಮೌಲ್ಯಯುತ ಕ್ರಿಕೆಟಿಗರಲ್ಲದ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ನೀರಜ್ ಪ್ರಸ್ತುತ 24 ವಿವಿಧ ವರ್ಗಗಳಲ್ಲಿ 21 ಬ್ರ್ಯಾಂಡ್‌ಗಳನ್ನು ಅನುಮೋದಿಸಿದ್ದಾರೆ. ಮನಿ ಕಂಟ್ರೋಲ್ ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ 20 ಬ್ರಾಂಡ್‌ಗಳನ್ನು ಮಾತ್ರ ಹೊಂದಿದ್ದಾರೆ ಎನ್ನಲಾಗಿದೆ. ಪಾಂಡ್ಯಗಿಂತ ಶೇ.50ರಷ್ಟು ಬ್ರ್ಯಾಂಡ್‌ ಮೌಲ್ಯ ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

ಹಿಂದೆ ಭಾರತದಲ್ಲಿ ಕ್ರಿಕೆಟಿಗರು ಮಾತ್ರ ಬ್ರಾಂಡ್ ಮೌಲ್ಯ ಹೊಂದಿದ್ದರು. ಇದೀಗ ಇತರ ಕ್ರೀಡೆಗಳಲ್ಲಿಯೂ ಕ್ರೀಡಾಪಟುಗಳು ಬ್ರಾಂಡ್ ಮೌಲ್ಯ ಗಳಿಸುವಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ. ಅಲ್ಲದೆ ಕ್ರಿಕೆಟಿಗರನ್ನು ಹಿಂದಿಕ್ಕಿ ಮುಂದಕ್ಕೆ ಸಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಟೊಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದ ನೀರಜ್ ಚೋಪ್ರಾ ಈ ಬಾರಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು.

ಇದನ್ನೂ ಓದಿ Neeraj Chopra: ಲಾಸಾನ್ನೆ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ; ಆಗಸ್ಟ್​ 22ಕ್ಕೆ ಟೂರ್ನಿ

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 2 ಕಂಚಿನ ಪದಕ ಗೆದ್ದು ಇತಿಹಾಸ ಬರೆದ 22 ವರ್ಷದ ಮನು ಭಾಕರ್ ಬ್ರ್ಯಾಂಡ್ ಮೌಲ್ಯ 1.5 ಕೋಟಿ ರೂ.ಗೆ ಏರಿಕೆಯಾಗಿದೆ. ಮನು ಬಾಕರ್ ಥಂಬ್ಸಪ್ ಕಂಪನಿಯ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್​ಗೂ ಮುನ್ನ ಮನು ಬಾಕರ್ ಬ್ರ್ಯಾಂಡ್ ಮೌಲ್ಯ 25 ಲಕ್ಷ ರೂ. ಆಗಿತ್ತು. ಇದೀಗ ಅವರ ಜಾಹಿರಾತುಗಳಲ್ಲಿ ಪಡೆಯುವ ಸಂಭಾವನೆ ಮೊತ್ತ ಕೋಟಿಗೆ ಏರಿಕೆಯಾಗಿದೆ.

 ಮನು ಅವರ ಬ್ರ್ಯಾಂಡ್​ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್​ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್​ ಕೇರ್​, ನ್ಯೂಟ್ರೀಷಿಯನ್​ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ.

ನಿಗದಿತ ತೂಕಕ್ಕಿಂದ ಅಧಿಕ ತೂಕ ಹೊಂದಿದ್ದ ಕಾರಣ ಕುಸ್ತಿ ಫೈನಲ್​ನಿಂದ ಅನರ್ಹಗೊಂಡ ವಿನೇಶ್​ ಫೋಗಟ್​ ಅವರ ಬ್ರ್ಯಾಂಡ್ ಮೌಲ್ಯ ಕೂಡ ಅಚ್ಚರಿ ಎಂಬಂತೆ ಹೆಚ್ಚಳವಾಗಿದೆ. ಕ್ರೀಡಾಕೂಟಕ್ಕೂ ಮುನ್ನ ಅವರ ಬ್ರ್ಯಾಂಡ್ ಮೌಲ್ಯ 25 ಲಕ್ಷ ರೂ. ಆಗಿದ್ದು, ಇದೀಗ 1 ಕೋಟಿ ರೂ.ಗೆ ಏರಿಕೆಯಾಗಿದೆ.

Continue Reading

ಕ್ರೀಡೆ

Kolkata Doctor Murder Case: ‘ಖಾಸಗಿ ಅಂಗಕ್ಕೆ ಹೊಡೆದು ಗಲ್ಲಿಗೇರಿಸಿ’; ವೈದ್ಯೆಯ ಅತ್ಯಾಚಾರ, ಕೊಲೆ ಖಂಡಿಸಿ ಕ್ರಿಕೆಟಿಗ ಚಹಲ್​ ಪೋಸ್ಟ್​

Kolkata Doctor Murder Case: ಭಾರತ ತಂಡದ ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಕೂಡ ವೈದ್ಯೆಯ ಅತ್ಯಾಚಾರ, ಕೊಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು.

VISTARANEWS.COM


on

Kolkata Doctor Murder Case
Koo

ಕೊಲ್ಕತ್ತಾ: ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ(Kolkata Doctor Murder Case) ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಈಗಾಗಲೇ ಹಲವು ಕ್ರಿಕೆಟಿಗರು ಮತ್ತು ಸಿನಿಮಾ ನಟ-ನಟಿಯರು ಒತ್ತಾಯಿಸಿದ್ದಾರೆ. ಇದೀಗ ಟೀಮ್​ ಇಂಡಿಯಾದ ಹಿರಿಯ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal)​ ಕೂಡ ಈ ಪ್ರಕರಣದ ವಿರುದ್ಧ ಧ್ವನಿ ಎತ್ತಿದ್ದಾರೆ.

ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿರುವ ಚಹಲ್​, ‘ಈ ಪ್ರಕರಣದ ಆರೋಪಿಯ ಕಾಲನ್ನು 90 ಡಿಗ್ರಿಗಳಲ್ಲಿ ಮುರಿಯಬೇಕು. ಖಾಸಗಿ ಭಾಗಗಳಿಗೆ ಗಾಯ ಮಾಡಿ. ಎಲ್ಲಾ ಭಯಾನಕ ಚಿತ್ರಹಿಂಸೆಗಳನ್ನು ಅನುಭವಿಸುವಂತೆ ಮಾಡಬೇಕು. ಬಳಿಕ ಗಲ್ಲಿಗೇರಿಸಿ’ ಎಂದು ಬರೆದುಕೊಂಡಿದ್ದರು. ಆಕ್ರೋಶಭರಿತ ಪೋಸ್ಟ್​ನಿಂದ ಪ್ರತಿಭಟನಾಕಾರರು ಹಿಂಸಾತ್ಮಕ ಕೃತ್ಯಗಳನ್ನು ಮಾಡುವ ಸಾಧ್ಯತೆ ಇದೆ ಎಂಬ ಭಯದಿಂದ ಚಹಲ್​ ತಾವು ಪೋಸ್ಟ್​ ಮಾಡಿದ ಒಂದು ಗಂಟೆ ಬಳಿಕ ಈ ಪೋಸ್ಟ್​ ಡಿಲೀಟ್​ ಮಾಡಿದ್ದಾರೆ. ಆದರೂ ಕೆಲ ನೆಟ್ಟಿಗರು ಈ ಪೋಸ್ಟ್​ನ ಸ್ಕ್ರೀನ್ ಶಾಟ್ ತೆಗೆದಿದ್ದಾರೆ. ಈ ಪೋಸ್ಟ್​ ಇದೀಗ ವೈರಲ್​ ಆಗುತ್ತಿದೆ. ಚಹಲ್ ಅವರ ಈ ಪೋಸ್ಟ್​ಗೆ ಹಲವರು ಬೆಂಬಲ ಸೂಚಿಸಿದ್ದಾರೆ.


ಭಾರತ ತಂಡದ ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಕೂಡ ವೈದ್ಯೆಯ ಅತ್ಯಾಚಾರ, ಕೊಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಬುಧವಾರ ಗಂಗೂಲಿ ಅವರ ಪತ್ನಿ ಡೊನ್ನಾ ಅವರ ನೃತ್ಯ ಶಾಲೆ ದೀಕ್ಷಾ ಮಂಜರಿಯಿಂದ ಪ್ರತಿಭಟನಾ ರ್ಯಾಲಿ ಆಯೋಜಿಸಿತ್ತು. ಇದರಲ್ಲಿ ಗಂಗೂಲಿ ಕೂಡ ಪಾಲ್ಗೊಂಡಿದ್ದರು.

ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, “ದೇಶದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಬದಲಾವಣೆಯಾಗಲು ಮತ್ತೊಂದು ಅತ್ಯಾಚಾರ ಪ್ರಕರಣಕ್ಕಾಗಿ ದೇಶ ಕಾಯಲು ಸಾಧ್ಯವಿಲ್ಲ” ಎಂದು ಕಟುವಾಗಿ ಹೇಳಿದ್ದರು. ಅಸ್ತಿತ್ವದಲ್ಲಿರುವ ಕಾಯ್ದೆಗಳು ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸಾಂಸ್ಥಿಕ ಸುರಕ್ಷತಾ ಮಾನದಂಡಗಳನ್ನು ಖಾತರಿಪಡಿಸುವುದಿಲ್ಲ. ಪುರುಷಪ್ರಭುತ್ವದಿಂದಾಗಿ ಮಹಿಳಾ ವೈದ್ಯರೇ ಹೆಚ್ಚು ಗುರಿಯಾಗುತ್ತಿದ್ದಾರೆ ಎಂದು ಸಿಜೆಐ ಚಂದ್ರಚೂಡ್ ಗಮನಿಸಿದ್ದರು.

ಇದನ್ನೂ ಓದಿ Sourav Ganguly : ಕೊಲೆಗಡುಕರಿಗೆ ಈ ರೀತಿ ಮಾಡಿ; ಕೋಲ್ಕೊತಾ ವೈದ್ಯೆಯ ಅತ್ಯಾಚಾರ, ಕೊಲೆ ಬಗ್ಗೆ ಸೌರವ್​ ಗಂಗೂಲಿ ಅಭಿಪ್ರಾಯ ಹೀಗಿತ್ತು

ಪ್ರತಿಭಟಿಸುವ ವೈದ್ಯರ ಮೇಲೆ ನಿಮ್ಮ ಅಧಿಕಾರವನ್ನು ಪ್ರದರ್ಶಿಸಬೇಡಿ ಎಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೇಳಿದೆ. ಕೋರ್ಟ್‌ ವೈದ್ಯರಿಗೆ ಕೆಲಸವನ್ನು ಪುನರಾರಂಭಿಸಲು ಕೇಳಿದೆ. ವೈದ್ಯರ ಕಳವಳವನ್ನು ಅತ್ಯಂತ ಪ್ರಾಮುಖ್ಯತೆಯೊಂದಿಗೆ ಸ್ವೀಕರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದ್ದು, ಕಾರ್ಯಪಡೆಯು ತನ್ನ ಮಧ್ಯಂತರ ವರದಿಯನ್ನು ಮೂರು ವಾರಗಳಲ್ಲಿ ಮತ್ತು ಅಂತಿಮ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸಲಿದೆ ಎಂದು ಹೇಳಿದೆ.

ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲರು ಸೇರಿದಂತೆ ಶಂಕಿತರನ್ನು ಸಿಬಿಐ ತನಿಖೆಗೊಳಪಡಿಸಿದೆ. ನಿನ್ನೆ ಮುಂಜಾನೆ ಪ್ರಕರಣದ ಹಲವಾರು ಶಂಕಿತರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಯಿಂದ ಸರಣಿ ತನಿಖೆಗೆ ಒಳಗಾದರು. ಸುಪ್ರೀಂ ಕೋರ್ಟ್ ಪ್ರಕರಣವನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದು, ಆಗಸ್ಟ್ 22ರೊಳಗೆ ತನಿಖೆಯ ಸ್ಥಿತಿಗತಿಯ ವರದಿಯನ್ನು ಸಲ್ಲಿಸುವಂತೆ ಏಜೆನ್ಸಿಯನ್ನು ಕೇಳಿದೆ.

Continue Reading
Advertisement
CM Siddaramaiah
ಕರ್ನಾಟಕ23 mins ago

CM Siddaramaiah: ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಸಿದ್ದರಾಮಯ್ಯ ಸೂಚನೆ

Fixed Deposits
ಮನಿ-ಗೈಡ್25 mins ago

Fixed Deposits: ಪೋಸ್ಟ್ ಆಫೀಸ್ ಎಫ್‌ಡಿ; ಬಡ್ಡಿ ದರ ಎಷ್ಟು, ಏನೆಲ್ಲ ಲಾಭ?

Water Price hike
ಬೆಂಗಳೂರು34 mins ago

Water Price Hike: ಎಷ್ಟೇ ವಿರೋಧ ಬಂದರೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಖಚಿತ; ಡಿ.ಕೆ.ಶಿವಕುಮಾರ್

DK Shivakumar
ಬೆಂಗಳೂರು38 mins ago

DK Shivakumar: ನನಗೆ ಸಿಬಿಐಗಿಂತ ಲೋಕಾಯುಕ್ತದಿಂದಲೇ ಹೆಚ್ಚಿನ ಹಿಂಸೆ; ಡಿ.ಕೆ.ಶಿವಕುಮಾರ್ ಆರೋಪ!

kolkata Doctor murder case
ದೇಶ38 mins ago

Kolkata Doctor Murder Case: ಬರೋಬ್ಬರಿ 11ದಿನಗಳ ಬಳಿಕ ಮುಷ್ಕರ ಹಿಂಪಡೆದ ವೈದ್ಯರು

CLP Meeting
ಬೆಂಗಳೂರು1 hour ago

CLP Meeting: ಮುಡಾ ಹಗರಣ; ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಪರ ನಿಂತ ಶಾಸಕರು

Actor Darshan
ಕರ್ನಾಟಕ1 hour ago

Actor Darshan: ಅವರ ಋಣ ನಮ್ಮ ಕುಟುಂಬದ ಮೇಲಿದೆ… ದರ್ಶನ್‌ ಭೇಟಿ ಬಳಿಕ ರಚಿತಾ ರಾಮ್‌ ಕಣ್ಣೀರು

PM Modi Poland Visit
ವಿದೇಶ2 hours ago

PM Modi Poland Visit: ಯುದ್ಧಭೂಮಿಯಲ್ಲಿ ಯಾವ ಸಮಸ್ಯೆಯೂ ಬಗೆಹರಿಯಲ್ಲ; ರಷ್ಯಾ-ಉಕ್ರೇನ್‌ ಸಂಘರ್ಷದ ಬಗ್ಗೆ ಪ್ರಧಾನಿ ಮೋದಿ ರಿಯಾಕ್ಟ್‌

Viral Video
Latest2 hours ago

Viral Video: ಸೈಕಲ್‌ ಮೇಲೆ ಶಾಲೆಗೆ ಹೋಗುತ್ತಿದ್ದ ಮಕ್ಕಳಿಬ್ಬರಿಗೆ ವಿದ್ಯುತ್‌ ಶಾಕ್‌; ಕ್ಯಾಮೆರಾದಲ್ಲಿ ಸೆರೆಯಾಯ್ತು ಘೋರ ದೃಶ್ಯ

Viral Video
ಸಿನಿಮಾ2 hours ago

Viral Video: ‘ಶೀಲಾ ಕಿ ಜವಾನಿ’ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿದ ಬೆಡಗಿ! ವಿಡಿಯೊ ನೋಡಿ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌